Tag: rampur

  • ಮಗನಿಗೆ ನಿಶ್ಚಯವಾಗಿದ್ದ ಹೆಣ್ಣಿನ ಜೊತೆ 6 ಮಕ್ಕಳ ತಂದೆ ಚಕ್ಕಂದ – ಮದುವೆ ಬೇಡ ಎಂದಿದ್ದಕ್ಕೆ ಪತ್ನಿ ಮೇಲೆ ಹಲ್ಲೆ

    ಮಗನಿಗೆ ನಿಶ್ಚಯವಾಗಿದ್ದ ಹೆಣ್ಣಿನ ಜೊತೆ 6 ಮಕ್ಕಳ ತಂದೆ ಚಕ್ಕಂದ – ಮದುವೆ ಬೇಡ ಎಂದಿದ್ದಕ್ಕೆ ಪತ್ನಿ ಮೇಲೆ ಹಲ್ಲೆ

    – ಭಾವಿ ಸೊಸೆ ಜೊತೆ ಏಕಾಂತದಲ್ಲಿ ಇದ್ದಾಗಲೇ ಪತ್ನಿಗೆ ಸಿಕ್ಕಿಬಿದ್ದ ಶಕೀಲ್‌

    ಲಕ್ನೋ: ಉತ್ತರ ಪ್ರದೇಶದ (Uttar Pradesh) ರಾಂಪುರದಲ್ಲಿ ವ್ಯಕ್ತಿಯೊಬ್ಬ ತನ್ನ ಮಗನಿಗೆ ನಿಶ್ಚಯಿಸಿದ್ದ ಹುಡುಗಿಯನ್ನೇ ಪ್ರೀತಿಸಿ ಮದುವೆಯಾಗಿರುವ ಘಟನೆ ನಡೆದಿದೆ.

    ಶಕೀಲ್‌ ಎಂಬ ವ್ಯಕ್ತಿ ತನ್ನ ಮಗನ ಮದುವೆಗೆ ಹೆಣ್ಣನ್ನು ನಿಶ್ಚಯ ಮಾಡಿದ್ದ. ಬಳಿಕ ಆಕೆಯೊಂದಿಗೆ ಫೋನ್‌ನಲ್ಲಿ ಮಾತನಾಡಿ ಸಲುಗೆ ಬೆಳೆಸಿಕೊಂಡ. ಆಕೆಯನ್ನು ಬಲೆಗೆ ಬೀಳಿಸಿ ಸಂಬಂಧ ಬೆಳೆಸಿದ್ದ. ಇದನ್ನೂ ಓದಿ: ಆಸ್ತಿಯ ದುರಾಸೆ, ರೋಗಿಯೊಂದಿಗೇ ಚಕ್ಕಂದ – ʻಪಾರಿತೋಷʼನ ಪ್ರೇಮಕ್ಕೆ ಪತಿಯನ್ನೇ ಕೊಂದ ಫಿಸಿಯೋಥೆರಪಿಸ್ಟ್‌ ಪತ್ನಿ

    ಮಗನಿಗೆ ನಿಶ್ಚಯಿಸಿದ್ದ ಹೆಣ್ಣಿನ ಜೊತೆ ಏಕಾಂತದಲ್ಲಿದ್ದಾಗ ಶಕೀಲ್‌ ತನ್ನ ಪತ್ನಿ ಹಾಗೂ ಮಗನಿಗೆ ಸಿಕ್ಕಿಬಿದ್ದಿದ್ದ. ಪರಿಣಾಮ ಕುಟುಂಬದಲ್ಲಿ ಗಲಾಟೆ ನಡೆದಿತ್ತು. ಕೊನೆಗೆ ಆಕೆಯನ್ನು ತನ್ನ ಮಗನಿಗೆ ಕೊಟ್ಟು ಮದುವೆ ಮಾಡಲು ಶಕೀಲ್‌ ಪತ್ನಿ ಶಬಾನಾ ನಿರಾಕರಿಸಿದಳು. ಇದರಿಂದ ಕೋಪಗೊಂಡು ಆರೋಪಿ ಶಕೀಲ್‌ ತನ್ನ ಪತ್ನಿ ಮೇಲೆ ಹಲ್ಲೆ ನಡೆಸಿದ್ದಾನೆ.

    ಶಕೀಲ್‌ಗೆ ಆರು ಮಕ್ಕಳಿದ್ದಾರೆ. ಮಗನಿಗೆ ನಿಶ್ಚಯಿಸಿದ್ದ ಹೆಣ್ಣಿನ ಜೊತೆ ಶಕೀಲ್‌ ಅಕ್ರಮ ಸಂಬಂಧ ಹೊಂದಿರುವ ಬಗ್ಗೆ ಆತನ ಪತ್ನಿ ಶಬಾಬಾಗೆ ಗುಮಾನಿ ಇತ್ತು. ತನ್ನ ಪತಿ ಹಾಗೂ ಮಗನಿಗೆ ನಿಶ್ಚಯಿಸಿದ್ದ ಹೆಣ್ಣು ಒಟ್ಟಿಗೆ ಇದ್ದಾಗ ಸಾಕ್ಷಿ ಸಮೇತ ಶಬಾನಾ ಹಿಡಿದಿದ್ದರು. ಇದನ್ನೂ ಓದಿ: ಪಾಕಿಸ್ತಾನಕ್ಕೆ 5ನೇ ತಲೆಮಾರಿನ 40 ಸ್ಟೆಲ್ತ್ ಫೈಟರ್ ಜೆಟ್‌ ಪೂರೈಸಲು ಚೀನಾ ಮೆಗಾ ಡೀಲ್‌

    ನನ್ನ ಪತಿ ಆಕೆಗೆ ಇಡೀ ದಿನ ಫೋನ್‌ ಕರೆ ಮಾಡಿ ಮಾತನಾಡುತ್ತಾನೆ. ಮೊದಲಿಗೆ ಯಾರೂ ನನ್ನ ಮಾತನ್ನು ನಂಬಲಿಲ್ಲ. ನಂತರ ನನ್ನ ಮಗ ಮತ್ತು ನಾನು ಅವರ ವಿರುದ್ಧ ಸಾಕ್ಷ್ಯಗಳನ್ನು ಸಂಗ್ರಹಿಸಿದೆವು. ತನ್ನ ತಂದೆಯ ಅಕ್ರಮ ಸಂಬಂಧದ ಬಗ್ಗೆ ತಿಳಿದ ನಂತರ ಆಕೆಯನ್ನು ಮದುವೆಯಾಗಲು ನನ್ನ ಮಗ ನಿರಾಕರಿಸಿದ್ದಾನೆ. ಅವನ ಅಜ್ಜ-ಅಜ್ಜಿಯರಿಗೂ ಅವರಿಬ್ಬರ ನಡುವಿನ ಸಂಬಂಧದ ಬಗ್ಗೆ ತಿಳಿದಿತ್ತು. ಶಕೀಲ್ 2 ಲಕ್ಷ ರೂಪಾಯಿ ನಗದು ಮತ್ತು ಸುಮಾರು 17 ಗ್ರಾಂ ಚಿನ್ನಾಭರಣವನ್ನು ತೆಗೆದುಕೊಂಡು ಹೋಗಿ ಆಕೆಯನ್ನು ಮದುವೆಯಾಗಿದ್ದಾನೆಂದು ಪತ್ನಿ ಆರೋಪಿಸಿದ್ದಾರೆ.

    ಏಪ್ರಿಲ್‌ನಲ್ಲಿ ಉತ್ತರ ಪ್ರದೇಶದ ಮಹಿಳೆಯೊಬ್ಬರು ತನ್ನ ಭಾವಿ ಅಳಿಯನೊಂದಿಗೆ ಓಡಿಹೋಗಿದ್ದರು. ಅಲಿಗಢದ ವಧು ಶಿವಾನಿ ಅವರ ತಾಯಿ ಅನಿತಾ ಮನೆಯಲ್ಲಿದ್ದ 3.5 ಲಕ್ಷ ರೂ.ಗಳಿಗೂ ಹೆಚ್ಚು ನಗದು ಮತ್ತು 5 ಲಕ್ಷ ರೂ.ಗಳಿಗೂ ಹೆಚ್ಚು ಮೌಲ್ಯದ ಆಭರಣಗಳನ್ನು ಸಹ ತೆಗೆದುಕೊಂಡು ಹೋಗಿದ್ದರು ಎಂದು ಆರೋಪಿಸಿದ್ದರು. ಇದೇ ಮಾದರಿಯ ಮತ್ತೊಂದು ಪ್ರಕರಣ ಈಗ ವರದಿಯಾಗಿದೆ.

  • ಕಿವಿ ಕೇಳದ, ಮಾತು ಬಾರದ 11ರ ಬಾಲಕಿ ಮೇಲೆ ರೇಪ್‌ – ಖಾಸಗಿ ಭಾಗಗಳಿಗೆ ಸಿಗರೇಟ್‌ನಿಂದ ಸುಟ್ಟು ವಿಕೃತಿ

    ಕಿವಿ ಕೇಳದ, ಮಾತು ಬಾರದ 11ರ ಬಾಲಕಿ ಮೇಲೆ ರೇಪ್‌ – ಖಾಸಗಿ ಭಾಗಗಳಿಗೆ ಸಿಗರೇಟ್‌ನಿಂದ ಸುಟ್ಟು ವಿಕೃತಿ

    • ಓರ್ವ ಶಂಕಿತ ಅರೆಸ್ಟ್‌

    ಲಕ್ನೋ: ಕಿವಿ ಕೇಳಿಸದ, ಮಾತು ಸಹ ಬಾರದ 11ರ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಖಾಸಗಿ ಭಾಗಗಳಿಗೆ ಸಿಗರೇಟ್‌ನಿಂದ ಸುಟ್ಟು ವಿಕೃತಿ ಮೆರೆದಿರುವ ಘಟನೆ ಉತ್ತರ ಪ್ರದೇಶದ (Uttar Pradesh) ರಾಂಪುರ್‌ನಲ್ಲಿ ನಡೆದಿದೆ. ಒಂದಕ್ಕಿಂತ ಹೆಚ್ಚು ಆರೋಪಿಗಳಿಂದ ಕೃತ್ಯ ನಡೆದಿದೆ ಎಂದು ಪ್ರಾಥಮಿಕ ಮಾಹಿತಿಗಳಿಂದ ತಿಳಿದುಬಂದಿದೆ.

    ವೈದ್ಯಕೀಯ ಪರೀಕ್ಷೆ (Medical Examination) ನಡೆಸಿದ ಬಳಿಕ ದೇಹದ ವಿವಿಧ ಭಾಗಗಳಲ್ಲಿ ಕಚ್ಚಿದ ಹಾಗೂ ಖಾಸಗಿ ಭಾಗಗಳಿಗೆ ಸಿಗರೇಟ್‌ನಿಂದ ಸುಟ್ಟ ಗುರತುಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ಓರ್ವ ಶಂಕಿತನನ್ನ ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ. ಇದನ್ನೂ ಓದಿ: ನಾನು ಅವನನ್ನೇ ಮದ್ವೆಯಾಗ್ತೀನಿ – ಭಾವಿ ಅಳಿಯನೊಂದಿಗೆ ಓಡಿಹೋಗಿದ್ದ ಯುಪಿ ಮಹಿಳೆ ಪಟ್ಟು

    ವೈದ್ಯಕೀಯ ಪರೀಕ್ಷೆ ನಡೆಸಿದ ಡಾ. ಅಂಜು ಸಿಂಗ್ ಅವರು, ಇದು ಒಂದಕ್ಕಿಂತ ಹೆಚ್ಚಿನ ವ್ಯಕ್ತಿಗಳು ನಡೆಸಿದ ಕೃತ್ಯ ಎಂಬುದು ಸ್ಪಷ್ಟವಾಗಿದೆ. ಖಾಸಗಿ ಭಾಗಗಳಲ್ಲಿ ಗಾಯದ ಗುರುತುಗಳಿವೆ, ಆಕೆಯ ಮುಖಕ್ಕೆ ಬಲವಾಗಿ ಹೊಡೆದಿರುವುದರಿಂದ ಮುಖ ಊದಿಕೊಂಡಿದೆ, ಅಲ್ಲದೇ ದೇಹದ ವಿವಿಧ ಭಾಗಗಳಲ್ಲಿ ಕಚ್ಚಿರುವ ಗುರುತುಗಳಿವೆ. ಅಷ್ಟಲ್ಲದೇ ಹುಡುಗಿಯ ಬಟ್ಟೆ ಪೂರ್ತಿ ರಕ್ತದ ಕಲೆಗಳಿಂದ ಕೂಡಿತ್ತು ಎಂದು ವಿವರಿಸಿದ್ದಾರೆ.

    ಸದ್ಯ ವೈದ್ಯಕೀಯ ಪರೀಕ್ಷೆ ಪೂರ್ಣಗೊಳಿಸಲಾಗಿದೆ. ಬಾಲಕಿ ಭಯಭೀತಳಾಗಿದ್ದರಿಂದ ಆಕೆಯನ್ನ ಪುನರ್ವಸತಿ ಕೇಂದ್ರಕ್ಕೆ ಕಳಿಸಲಾಗಿದೆ. ಕೃತ್ಯ ನಡೆದಾಗಿನಿಂದ ಬಾಲಕಿಗೆ ಆತಂಕಗೊಂಡಾಗಲೆಲ್ಲ ಫಿಟ್ಸ್‌ ಬರುತ್ತಿದೆ ಎಂದು ಆಕೆಯ ತಾಯಿ ಅಳಲು ತೋಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಗುಂಡು ಹಾರಿಸಿ ಪತ್ನಿ ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ರಿಯಲ್‌ ಎಸ್ಟೇಟ್‌ ಉದ್ಯಮಿ

    ಘಟನೆ ನಡೆದಿದ್ದು ಹೇಗೆ?
    ಮೂಲಗಳ ಪ್ರಕಾರ, ರಾಂಪುರ್‌ ಜಿಲ್ಲೆಯ ಹಳ್ಳಿಯೊಂದರಲ್ಲಿ ರೈತನ ಮಗಳಾಗಿರುವ ಸಂತ್ರಸ್ತೆ ಮಂಗಳವಾರ ಸಂಜೆ ಹೊಲಕ್ಕೆ ಹೋಗಿದ್ದಳು. ಈ ವೇಳೆ ನಾಪತ್ತೆಯಾಗಿದ್ದಳು. ಮರುದಿನ ಅದೇ ಹೊಲದ 500 ಮೀ ದೂರದಲ್ಲಿ ಆಕೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ಗ್ರಾಮ್‌ ವ್ಯಕ್ತಿಯೊಬ್ಬರು ಗಮನಿಸಿದ್ದಾರೆ. ಮುಖ ಊದಿಕೊಂಡು, ಬಾಲಕಿ ಅರೆಬೆತ್ತಲೆ ಸ್ಥಿತಿಯಲ್ಲಿ ಬಿದ್ದಿರುವುದನ್ನು ಕಂಡು ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಬಾಲಕಿ ತಂದೆ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

    ತನಿಖೆ ಪ್ರಾರಂಭಿಸಿರುವ ಪೊಲೀಸರು ಆರೋಪಿಗಳನ್ನು ಬಂಧಿಸಲು ಮೂರು ತಂಡಗಳನ್ನ ರಚನೆ ಮಾಡಿದ್ದಾರೆ. ಓರ್ವ ಶಂಕಿತನನ್ನು ಬಂಧಿಸಿದ್ದು, ಉಳಿದವರಿಗಾಗಿ ಶೋಧ ಮುಂದುವರಿಸಿದ್ದಾರೆ. ಇದನ್ನೂ ಓದಿ: ಖಾಸಗಿ ಶಾಲೆಗಳ ದಾಖಲಾತಿಗೆ ಸರ್ಕಾರದಿಂದ ರೂಲ್ಸ್ – ಪೋಷಕರ ಸಂದರ್ಶನ, ಮನಸೋ ಇಚ್ಛೆ ಫೀಸ್‌ಗೆ ಬ್ರೇಕ್ 

  • ತಾಯಿ ಮಾಡಿದ ಕೃಷಿ ಸಾಲಕ್ಕೆ ಮನನೊಂದು ಮಗ ಆತ್ಮಹತ್ಯೆ

    ತಾಯಿ ಮಾಡಿದ ಕೃಷಿ ಸಾಲಕ್ಕೆ ಮನನೊಂದು ಮಗ ಆತ್ಮಹತ್ಯೆ

    ಬೀದರ್: ಕೃಷಿಗಾಗಿ ತಾಯಿ ಮಾಡಿದ ಸಾಲದಿಂದ ಮನನೊಂದು ಮಗ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೀದರ್ (Bidar) ಜಿಲ್ಲೆಯ ಚಿಟಗುಪ್ಪ ತಾಲೂಕಿನ ರಾಂಪೂರ್ ಗ್ರಾಮದಲ್ಲಿ ನಡೆದಿದೆ.

    ಮೃತನನ್ನು ಗಣೇಶ್ (26) ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ‘ಬಿಗ್ ಬಾಸ್’ ಕಾರ್ತಿಕ್ ಮಹೇಶ್ ಹೊಸ ಸಿನಿಮಾಗೆ ಸಿಂಪಲ್ ಸುನಿ ಆ್ಯಕ್ಷನ್ ಕಟ್

    ಮೃತ ಗಣೇಶ್ ತಾಯಿ ಕೃಷಿಗಾಗಿ ಬ್ಯಾಂಕ್‌ನಲ್ಲಿ ಐದು ಲಕ್ಷ ಸಾಲ ಮಾಡಿದ್ದರು. ಇನ್ನೂ ಗಣೇಶ್ ಕೃಷಿಯನ್ನು ತಾವೇ ನೋಡಿಕೊಳ್ಳುತ್ತಿದ್ದರು. ಬಂದ ಸಾಲದಿಂದ ತೊಗರಿ ಬಿತ್ತನೆ ಮಾಡಿದ್ದರು. ಆದರೆ ಬೆಳೆ ಫಲವತ್ತಾಗಿ ಬರದೇ ಹಾಳಾಗಿ ಹೋಗಿತ್ತು. ಹೀಗಾಗಿ ಸಾಲ ಮರುಪಾವತಿಸಲು ಸಾಧ್ಯವಾಗದೇ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಈ ಕುರಿತು ಚಿಟ್ಟಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ಕರ್ನಾಟಕಕ್ಕೆ ನಿರ್ಮಲಾ ಸೀತಾರಾಮನ್ ಕೊಡುಗೆ ಏನು – ಪರಮೇಶ್ವರ್ ಪ್ರಶ್ನೆ

  • 45 ವರ್ಷಗಳಲ್ಲಿಯೇ ಮೊದಲ ಬಾರಿಗೆ ರಾಮ್‌ಪುರ ಚುನಾವಣೆಯಿಂದ ದೂರ ಉಳಿದ ಅಜಂ ಖಾನ್ ಕುಟುಂಬ

    45 ವರ್ಷಗಳಲ್ಲಿಯೇ ಮೊದಲ ಬಾರಿಗೆ ರಾಮ್‌ಪುರ ಚುನಾವಣೆಯಿಂದ ದೂರ ಉಳಿದ ಅಜಂ ಖಾನ್ ಕುಟುಂಬ

    ಲಕ್ನೋ: 1977ರ ನಂತರ 45 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ, ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ (Samajwadi Party leader Azam Khan) ಮತ್ತು ಅವರ ಕುಟುಂಬಸ್ಥರು ರಾಮ್‌ಪುರ (Rampur) ವಿಧಾನಸಭಾ ಸ್ಥಾನ  (Assembly seat) ಚುನಾವಣೆಗೆ ಸ್ಪರ್ಧಿಸುತ್ತಿಲ್ಲ.

    ದ್ವೇಷ ಭಾಷಣ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಅಜಂ ಖಾನ್ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ ಬಳಿಕ ತೆರವಾದ ಸ್ಥಾನಕ್ಕೆ ಡಿಸೆಂಬರ್ 5 ರಂದು ಉಪಚುನಾವಣೆ ನಡೆಯಲಿದೆ. ಸಮಾಜವಾದಿ ಪಕ್ಷವು ಅಜಂ ಖಾನ್ ಅವರ ಪತ್ನಿ ತಂಜೀನ್ ಫಾತಿಮಾ (Tanzeen Fatima) ಅಥವಾ ಅವರ ಸೊಸೆಯನ್ನು ಕಣಕ್ಕಿಳಿಸುತ್ತಿಲ್ಲ. ಬದಲಾಗಿ ಅಸೀಮ್ ರಜಾಗೆ (Asim Raza) ಟಿಕೆಟ್ ನೀಡಿದೆ. ಅಜಂ ಖಾನ್ ಅಥವಾ ಅವರ ಕುಟುಂಬಸ್ಥರು 1977 ರಿಂದ ಈ ಕ್ಷೇತ್ರದಿಂದ ನಿರಂತರವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ.

    ಅಜಂ ಖಾನ್ ಅವರು 1977 ರಿಂದ 2022 ರವರೆಗೆ 12 ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಅದರಲ್ಲಿ ಹತ್ತು ಬಾರಿ ಗೆದ್ದಿದ್ದಾರೆ ಮತ್ತು ಎರಡು ಬಾರಿ ಸೋತಿದ್ದಾರೆ. 2019ರಲ್ಲಿ ಅಜಂ ಖಾನ್ ಸಂಸತ್ ಸದಸ್ಯರಾದ ಬಳಿಕ ನಡೆದ ಉಪಚುನಾವಣೆಯಲ್ಲಿ ಅವರ ಪತ್ನಿ ತಜೀನ್ ಫಾತ್ಮಾ ಸ್ಪರ್ಧಿಸಿ ಗೆದ್ದಿದ್ದರು. ಇದೀಗ ಅಸೀಂ ರಾಜಾ ಉಪಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಇದನ್ನೂ ಓದಿ: ಇರಾನ್‍ನಲ್ಲಿ ಹೆಚುತ್ತಿರುವ ಹಿಜಬ್ ವಿರೋಧಿ ಪ್ರತಿಭಟನೆ- ಮೆಟ್ರೋದಲ್ಲಿ ಮಹಿಳೆಯರನ್ನು ಥಳಿಸಿದ ಪೊಲೀಸರು

    ಎಪ್ಪತ್ತು ಮತ್ತು ಎಂಬತ್ತರ ದಶಕದಲ್ಲಿ ಕಾಂಗ್ರೆಸ್ (Congress) ಪ್ರಬಲ ಶಕ್ತಿ ಹೊಂದಿದ್ದ ಪಕ್ಷವಾಗಿತ್ತು. 1980 ಮತ್ತು 1993ರ ನಡುವೆ, ಅಜಂ ಖಾನ್ ಐದು ಬಾರಿ ವಿಧಾನಸಭಾ ಚುನಾವಣೆಗಳಲ್ಲಿ ಸತತವಾಗಿ ಗೆದ್ದರು. ಆದರೆ 1996ರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‍ನ ಅಫ್ರೋಜ್ ಅಲಿ ಖಾನ್ ವಿರುದ್ಧ ಸೋತರು. ಅಜಂ ಖಾನ್ ಅವರನ್ನು ರಾಜ್ಯಸಭೆಗೆ ಕಳುಹಿಸಲಾಯಿತು. ನಂತರ ಅವರು 2002 ಮತ್ತು 2022ರ ನಡುವೆ ಮತ್ತೆ ಸತತವಾಗಿ ಐದು ಬಾರಿ ಚುನಾವಣೆಯಲ್ಲಿ ಗೆದ್ದರು. ಇದನ್ನೂ ಓದಿ: ಡೇಟಿಂಗ್ ಆ್ಯಪ್, ಲೀವ್ ಇನ್ ಟುಗೆದರ್ ಹಾವಳಿ- ಕಾಲೇಜುಗಳಲ್ಲಿ ಮಹಿಳಾ ಆಯೋಗದಿಂದ ಸ್ಪೆಷಲ್ ಕ್ಲಾಸ್

    ಅಜಂ ಖಾನ್ ಮತ್ತು ಅವರ ಕುಟುಂಬ ಕಾನೂನು ಮೊಕದ್ದಮೆಗಳನ್ನು ಎದುರಿಸಿದೆ. 2014ರಲ್ಲಿ ಅಖಿಲೇಶ್ ಯಾದವ್ (Akhilesh Yadav) ಸರ್ಕಾರದಲ್ಲಿ ಸಚಿವರಾಗಿದ್ದಾಗ ಸರ್ಕಾರಿ ಭೂಮಿಯನ್ನು ಕಬಳಿಸಲು ಸಂಚು ರೂಪಿಸಿದ್ದ ಆರೋಪದಡಿ ಅಜಂ ಖಾನ್ ಅವರ ಪತ್ನಿ ಮತ್ತು ಪುತ್ರನ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿತ್ತು.

    ನಂತರ ದ್ವೇಷ ಭಾಷಣ ಮಾಡಿದ ಪ್ರಕರಣದಲ್ಲಿ ಸ್ಥಳೀಯ ನ್ಯಾಯಾಲಾಯವು ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿದ ನಂತರ ಅಜಂ ಖಾನ್ ಅವರನ್ನು ಅಸೆಂಬ್ಲಿ ಸ್ಥಾನದಿಂದ ಅನರ್ಹಗೊಳಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ನಿಮ್ಮ ಮಾತುಗಳಿಗೆ ನಾನು ಅಂಜಲ್ಲ, ಈ ವ್ಯಕ್ತಿಯನ್ನು ಚುನಾವಣೆಯಿಂದ ಬ್ಯಾನ್ ಮಾಡಿ – ಅಜಮ್ ಖಾನ್ ವಿರುದ್ಧ ಜಯಪ್ರದಾ ಕಿಡಿ

    ನಿಮ್ಮ ಮಾತುಗಳಿಗೆ ನಾನು ಅಂಜಲ್ಲ, ಈ ವ್ಯಕ್ತಿಯನ್ನು ಚುನಾವಣೆಯಿಂದ ಬ್ಯಾನ್ ಮಾಡಿ – ಅಜಮ್ ಖಾನ್ ವಿರುದ್ಧ ಜಯಪ್ರದಾ ಕಿಡಿ

    ನವದೆಹಲಿ: ನಾನು ನಿಮ್ಮ ಕೀಳಾದ ಟೀಕೆಗಳಿಗೆ ಅಂಜಲ್ಲ, ರಾಮ್‍ಪುರ ಬಿಟ್ಟು ಹೋಗುವುದೂ ಇಲ್ಲ ಎಂದು ಸಮಾಜವಾದಿ ಪಕ್ಷದ ನಾಯಕ ಅಜಮ್ ಖಾನ್ ಅವರ ಕೀಳು ಹೇಳಿಕೆಗೆ ಬಿಜೆಪಿ ಅಭ್ಯರ್ಥಿ ಜಯಪ್ರದಾ ತಿರುಗೇಟು ನೀಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾವು ಎಲ್ಲಿಗೆ ಹೋಗಬೇಕು? ನಾನು ಸಾಯಬೇಕೇ? ಆಗ ನಿಮಗೆ ಸಮಧಾನವಾಗುತ್ತಾ? ನಿಮ್ಮ ಈ ಕೀಳು ಹೇಳಿಕೆಗಳಿಗೆ, ಟೀಕೆಗೆ ಹೆದರಿ ನಾನು ರಾಮ್‍ಪುರ ಬಿಟ್ಟು ಹೋಗುತ್ತೇನೆ ಅಂದುಕೊಂಡಿದ್ದೀರಾ? ನಾನು ನಿಮ್ಮ ಮಾತುಗಳಿಗೆ ಅಂಜಲ್ಲ, ಇಲ್ಲಿಂದ ಹೋಗುವುದೂ ಇಲ್ಲವೆಂದು ಖಡಕ್ ಆಗಿ ಉತ್ತರ ನೀಡಿದ್ದಾರೆ. ಇದನ್ನೂ ಓದಿ:ಜಯಪ್ರದಾ ಒಳ ಉಡುಪು ಬಗ್ಗೆ ಎಸ್‍ಪಿ ನಾಯಕ ಅಜಮ್ ಖಾನ್ ಕೀಳು ಹೇಳಿಕೆ

    ಹೆಣ್ಣಿನ ಬಗ್ಗೆ ಇಷ್ಟು ಕೀಳಾಗಿ ಮಾತನಾಡುವ ವ್ಯಕ್ತಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಡಿ. ಒಂದುವೇಳೆ ಈ ವ್ಯಕ್ತಿ ಗೆದ್ದರೆ ಪ್ರಜಾಪ್ರಭುತ್ವದ ಗತಿ ಏನಾಗುತ್ತೆ? ಸಾಮಾಜದಲ್ಲಿ ಮಹಿಳೆಯರಿಗೆ ಸ್ಥಾನಮಾನ ಸಿಗುವುದಿಲ್ಲ. ಆದರಿಂದ ಅಜಮ್ ಖಾನ್‍ರನ್ನು ಚುನಾವಣೆಯಿಂದ ಬ್ಯಾನ್ ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಅಜಮ್ ಖಾನ್ ಹೇಳಿದ್ದೇನು?
    ಭಾನುವಾರದಂದು ರಾಮ್‍ಪುರದಲ್ಲಿ ಚುನಾವಣಾ ರ್ಯಾಲಿಯಲ್ಲಿ ಭಾಗಿಯಾಗಿದ್ದ ಅಜಮ್ ಖಾನ್ ಅವರು, ಅವರನ್ನು(ಜಯಪ್ರದಾ) ರಾಮ್‍ಪುರಕ್ಕೆ ಕರೆತಂದಿದ್ದು ನಾನು. ಆಗ ನಾನು ಅವರನ್ನು ಯಾರಿಗೂ ಮುಟ್ಟಲು ಬಿಟ್ಟಿರಲಿಲ್ಲ. ಅದಕ್ಕೆ ನೀವೇ ಸಾಕ್ಷಿ. ನಿಮಗೆ ಅವರ ನಿಜವಾದ ಮುಖ ಗೊತ್ತಾಗಲು 17 ವರ್ಷ ಬೇಕಾಯ್ತು. ಆದ್ರೆ ನನಗೆ ಕೇವಲ 17 ದಿನಗಳಲ್ಲಿ ಅವರು ಖಾಕಿ ಬಣ್ಣದ ಒಳ ಉಡುಪು ಹಾಕುತ್ತಾರೆ ಅನ್ನೋದು ಗೊತ್ತಾಯ್ತು ಎಂದು ಉತ್ತರ ಪ್ರದೇಶದ ಸಿಎಂ ಅಖಿಲೇಶ್ ಯಾದವ್ ಹಾಗೂ ಇನ್ನಿತರ ನಾಯಕರ ಮುಂದೆಯೇ ಬಿಜೆಪಿ ನಾಯಕಿಯ ವಿರುದ್ಧ ಅಸಂಬದ್ಧವಾಗಿ ಮಾತನಾಡಿದ್ದಾರೆ.

    ಅಜಮ್ ಖಾನ್ ಅವರು ಸದ್ಯ ಲೋಕಸಭಾ ಚುನಾವಣೆಗೆ ರಾಮ್‍ಪುರದಿಂದ ಎಸ್‍ಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಬಿಜೆಪಿ ನಾಯಕಿ ಬಗ್ಗೆ ಅಸಂಬದ್ಧವಾಗಿ ಹೇಳಿಕೆ ನೀಡಿರುವುದಕ್ಕೆ ಅಜಮ್ ಖಾನ್ ವಿರುದ್ಧ ಎಫ್‍ಐಆರ್ ಕೂಡ ದಾಖಲಿಸಲಾಗಿದೆ.

    ಅಜಮ್ ಖಾನ್ ಹಾಗೂ ಜಯಪ್ರದಾ ಅವರು ರಾಮ್‍ಪುರ ಕ್ಷೇತ್ರದಲ್ಲಿ ಬದ್ಧ ರಾಜಕೀಯ ವೈರಿಗಳು. ಅಲ್ಲದೆ ಎಸ್‍ಪಿ ನಾಯಕ ಬಿಜೆಪಿ ನಾಯಕಿ ವಿರುದ್ಧ ಕೊಟ್ಟಿರುವ ವಿವಾದಾತ್ಮಕ ಹೇಳಿಕೆ ಉಭಯ ಪಕ್ಷಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೆ ರಾಜಕೀಯವಾಗಿ ಹಾಗೂ ವೈಯಕ್ತಿಕವಾಗಿ ಅಜಮ್ ಖಾನ್ ಒಂದು ಮಹಿಳಾ ನಾಯಕಿಯನ್ನು ಕೀಳಾಗಿ ಟೀಕಿಸಿದ್ದಕ್ಕೆ ಅವರ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.

  • ಜಯಪ್ರದಾ ಒಳ ಉಡುಪು ಬಗ್ಗೆ ಎಸ್‍ಪಿ ನಾಯಕ ಅಜಮ್ ಖಾನ್ ಕೀಳು ಹೇಳಿಕೆ

    ಜಯಪ್ರದಾ ಒಳ ಉಡುಪು ಬಗ್ಗೆ ಎಸ್‍ಪಿ ನಾಯಕ ಅಜಮ್ ಖಾನ್ ಕೀಳು ಹೇಳಿಕೆ

    ಲಕ್ನೋ: ನಟಿ ಹಾಗೂ ರಾಮ್‍ಪುರದ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಯಪ್ರದಾ ಅವರು ಖಾಕಿ ಬಣ್ಣದ ಒಳ ಉಡುಪು ಧರಿಸುತ್ತಾರೆ ಎಂದು ಸಮಾಜವಾದಿ ಪಕ್ಷದ(ಎಸ್‍ಪಿ) ನಾಯಕ ಅಜಮ್ ಖಾನ್ ಕೀಳುಮಟ್ಟದ ಹೇಳಿಕೆ ನೀಡಿದ್ದಾರೆ.

    ಭಾನುವಾರದಂದು ರಾಮ್‍ಪುರದಲ್ಲಿ ಚುನಾವಣಾ ರ‍್ಯಾಲಿಯಲ್ಲಿ ಭಾಗಿಯಾಗಿದ್ದ ಅಜಮ್ ಖಾನ್ ಅವರು, ಅವರನ್ನು(ಜಯಪ್ರದಾ) ರಾಮ್‍ಪುರಕ್ಕೆ ಕರೆತಂದಿದ್ದು ನಾನು. ಆಗ ನಾನು ಅವರನ್ನು ಯಾರಿಗೂ ಮುಟ್ಟಲು ಬಿಟ್ಟಿರಲಿಲ್ಲ. ಅದಕ್ಕೆ ನೀವೇ ಸಾಕ್ಷಿ. ನಿಮಗೆ ಅವರ ನಿಜವಾದ ಮುಖ ಗೊತ್ತಾಗಲು 17 ವರ್ಷ ಬೇಕಾಯ್ತು. ಆದ್ರೆ ನನಗೆ ಕೇವಲ 17 ದಿನಗಳಲ್ಲಿ ಅವರು ಖಾಕಿ ಬಣ್ಣದ ಒಳ ಉಡುಪು ಹಾಕುತ್ತಾರೆ ಅನ್ನೋದು ಗೊತ್ತಾಯ್ತು ಎಂದು ಉತ್ತರ ಪ್ರದೇಶದ ಸಿಎಂ ಅಖಿಲೇಶ್ ಯಾದವ್ ಹಾಗೂ ಇನ್ನಿತರ ನಾಯಕರ ಮುಂದೆಯೇ ಬಿಜೆಪಿ ನಾಯಕಿಯ ವಿರುದ್ಧ ಅಸಂಬದ್ಧವಾಗಿ ಮಾತನಾಡಿದ್ದಾರೆ.

    ಅಜಮ್ ಖಾನ್ ಅವರು ಸದ್ಯ ಲೋಕಸಭಾ ಚುನಾವಣೆಗೆ ರಾಮ್‍ಪುರದಿಂದ ಎಸ್‍ಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಬಿಜೆಪಿ ನಾಯಕಿ ಬಗ್ಗೆ ಅಸಂಬದ್ಧವಾಗಿ ಹೇಳಿಕೆ ನೀಡಿರುವುದಕ್ಕೆ ಅಜಮ್ ಖಾನ್ ವಿರುದ್ಧ ಎಫ್‍ಐಆರ್ ಕೂಡ ದಾಖಲಿಸಲಾಗಿದೆ.

    ಈ ಬಗ್ಗೆ ಇಂದು ಪ್ರತಿಕ್ರಿಯಿಸಿರುವ ಅಜಮ್ ಖಾನ್ ಅವರು, ನಾನು ಬಿಜೆಪಿ ಅಭ್ಯರ್ಥಿ ವಿರುದ್ಧ ಯಾವುದೇ ವಿವಾದಾತ್ಮಕ ಹೇಳಿಕೆ ನೀಡಿಲ್ಲ. ಒಂದು ವೇಳೆ ನಾನು ಮಾತನಾಡಿರುವುದು ತಪ್ಪು ಎಂದು ಸಾಬೀತಾದರೆ, ನಾನು ಚುನಾವಣೆಯಿಂದ ಹಿಂದಕ್ಕೆ ಸರಿಯುತ್ತೇನೆ ಎಂದು ತಿಳಿಸಿದರು.

    ಜನರ ನಿಜ ಮುಖವನ್ನು ತಿಳಿಯಲು ವರ್ಷಗಟ್ಟಲೇ ಸಮಯ ಬೇಕು ಅನ್ನುವ ಅರ್ಥದಲ್ಲಿ ನಾನು ಮಾತನಾಡಿದ್ದು, ಹಿಂದೊಮ್ಮೆ ಒಬ್ಬ ವ್ಯಕ್ತಿ 150 ಬಂದೂಕನ್ನು ತಂದು ನನ್ನನ್ನು ಕಂಡರೆ ಸಾಯಿಸುತ್ತಾನೆ ಅಂತ ಹೇಳಿದ್ದನು. ಆದ್ರೆ ಬಳಿಕ ಆ ವ್ಯಕ್ತಿ ಆರ್ ಎಸ್‍ಎಸ್ ಪ್ಯಾಂಟ್ ಹಾಕಿದ್ದ. ಅದಕ್ಕೆ ಆ ರೀತಿ ಹೇಳಿದ್ದ ಅನ್ನೊದು ಗೊತ್ತಾಯ್ತು ಎಂದು ಒಂದು ಕಥೆಯನ್ನು ಹೇಳಿ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

    ನಾನು 9 ಬಾರಿ ರಾಮ್‍ಪುರ ಕ್ಷೇತ್ರದಿಂದ ಎಂಎಲ್‍ಎ ಆಗಿದ್ದೇನೆ. ಮಂತ್ರಿ ಕೂಡ ಆಗಿದ್ದೇನೆ. ಏನು ಹೇಳಬೇಕು ಅನ್ನೋದು ನನಗೆ ಗೊತ್ತಿದೆ. ನಾನು ಯಾರ ಹೆಸರನ್ನು ಹೇಳಿಲ್ಲ. ಹೆಸರು ಹೇಳಿ ಯಾರಿಗೂ ಅವಮಾನ ಮಾಡಿಲ್ಲ. ಒಂದು ವೇಳೆ ನನ್ನ ಹೇಳಿಕೆ ತಪ್ಪೆಂದು ಸಾಬೀತಾದರೆ ನಾನು ಚುನಾವಣೆಯಿಂದ ಹಿಂದಕ್ಕೆ ಸರಿಯುತ್ತೇನೆ ಎಂದರು.

    ನನಗೆ ಬೇಸರವಾಗಿದೆ. ಮಾಧ್ಯಮಗಳು ನನ್ನನ್ನು ಇಷ್ಟಪಡಲ್ಲ. ಹಾಗೆಯೇ ನಾನು ಕೂಡ ಮಾಧ್ಯಮಗಳನ್ನು ಇಷ್ಟಪಡಲ್ಲ. ಯಾಕೆಂದರೆ ಮಾಧ್ಯಮಗಳಿಂದ ದೇಶಕ್ಕೆ ಹಾನಿಯಾಗುತ್ತದೆ ಎಂದು ಹೇಳಿ ಪತ್ರಕರ್ತರ ವಿರುದ್ಧವೂ ಕಿಡಿಕಾರಿದರು.

  • ಜಯಪ್ರದಾ ಬಿಜೆಪಿಗೆ ಸೇರ್ಪಡೆ – ರಾಮ್‍ಪುರದಲ್ಲಿ ಅಜಮ್ ಖಾನ್ ವಿರುದ್ಧ ಸ್ಪರ್ಧೆ

    ಜಯಪ್ರದಾ ಬಿಜೆಪಿಗೆ ಸೇರ್ಪಡೆ – ರಾಮ್‍ಪುರದಲ್ಲಿ ಅಜಮ್ ಖಾನ್ ವಿರುದ್ಧ ಸ್ಪರ್ಧೆ

    ನವದೆಹಲಿ: ಬಹುಭಾಷಾ ನಟಿ ಹಾಗೂ ಮಾಜಿ ಸಂಸದೆ ಜಯಪ್ರದಾ ಅವರು ಇಂದು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದು, ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಲೋಕಸಭೆ ಚುನಾವಣೆಯಲ್ಲಿ ಕಣಕ್ಕಿಳಿದಿದ್ದಾರೆ.

    ಈ ಬಾರಿ ಲೋಕಸಭೆ ಚುನಾವಣೆಗೆ ಉತ್ತರ ಪ್ರದೇಶದ ರಾಮ್‍ಪುರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಜಯಪ್ರದಾ ಸ್ಪರ್ಧಿಸಲಿದ್ದಾರೆ. 2014ರ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಬಿಜೆಪಿಯ ಡಾ.ನೇಪಾಳ್ ಸಿಂಗ್ ಗೆಲುವು ಸಾಧಿಸಿದ್ದರು. ಈ ಬಾರಿ ಬಿಎಸ್ಪಿ-ಎಸ್ಪಿ ಮೈತ್ರಿಕೂಟದ ಅಭ್ಯರ್ಥಿಯಾಗಿ ಇಲ್ಲಿ ಸಮಾಜವಾದಿ ಪಕ್ಷದ ಅಜಮ್ ಖಾನ್ ಸ್ಪರ್ಧಿಸಲಿದ್ದಾರೆ. ಆದರಿಂದ ಜಯಪ್ರದಾ ಹಾಗೂ ಅಜಮ್ ಖಾನ್ ನಡುವೆ ಭಾರಿ ಸ್ಪರ್ಧೆ ನಡೆಯುವ ಸಾಧ್ಯತೆಯಿದೆ.

    ಮೂಲತಃ ಆಂಧ್ರಪ್ರದೇಶದ ರಾಜಮುಂಡ್ರಿಯವರಾದ ಜಯಪ್ರದಾ ಅವರು 1994ರಲ್ಲಿ ತೆಲುಗು ದೇಶಂ ಪಾರ್ಟಿ ಮೂಲಕ ರಾಜಕೀಯಕ್ಕೆ ಕಾಲಿಟ್ಟಿದ್ದರು. ಬಳಿಕ 1996ರಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿದ್ದ ಅವರು ಟಿಡಿಪಿಯ ಮಹಿಳಾ ಘಟಕದ ಅಧ್ಯಕ್ಷೆ ಆಗಿಯೂ ಸೇವೆ ಸಲ್ಲಿಸಿದ್ದರು. ನಂತರ 2004ರಲ್ಲಿ ತೆಲುಗು ದೇಶಂ ಪಾರ್ಟಿ ಬಿಟ್ಟು ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಹಾಗೆಯೇ ಉತ್ತರ ಪ್ರದೇಶದ ರಾಮ್‍ಪುರ ಲೋಕಸಭಾ ಕ್ಷೇತ್ರದಿಂದ 2004 ಹಾಗೂ 2009ರ ಚುನಾವಣೆಯಲ್ಲಿ ಗೆಲುವನ್ನು ಸಾಧಿಸಿದ್ದರು. ತದನಂತರ 2014ರ ಲೋಕಸಭೆ ಚುನಾವಣೆ ವೇಳೆ ಅಮರ್ ಸಿಂಗ್ ಜತೆ ಆರ್‍ಎಲ್‍ಡಿ ಪಕ್ಷ ಸೇರಿ, ಬಿಜ್ನೂರ್ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು.

    ಜಯಪ್ರದಾ ಹಾಗೂ ಅಜಮ್ ಖಾನ್ ಇಬ್ಬರು ರಾಜಕೀಯ ವೈರಿಗಳು. ಜಯಪ್ರದಾ ಅವರು ಸಮಾಜವಾದಿ ಪಕ್ಷ ಬಿಟ್ಟು ಅಮರ್ ಸಿಂಗ್ ಅವರೊಂದಿಗೆ ಹೋದಾಗಿನಿಂದ ಅಜಮ್ ಖಾನ್ ಹಾಗೂ ಅವರ ನಡುವೆ ವೈರತ್ವ ಹೆಚ್ಚಾಗಿತ್ತು. ಅಲ್ಲದೆ 2009ರಲ್ಲಿ ಜಯಪ್ರದಾ ವಿರುದ್ಧ ಅಜಮ್ ಖಾನ್ ಬೆಂಬಲಿಗರು ಬಹಿರಂಗ ಪ್ರಚಾರವನ್ನು ಕೂಡ ಮಾಡಿದ್ದರು. ಅಲ್ಲದೆ ಅಶ್ಲೀಲ ಚಿತ್ರಗಳಿಗೆ ಜಯಪ್ರದಾ ಅವರ ಫೋಟೋ ಅಂಟಿಸಿ ಬಾರಿ ವಿವಾದವನ್ನು ಕೂಡ ಸೃಷ್ಟಿಸಿದ್ದರು. 2009ರಲ್ಲಿ ರಾಮ್‍ಪುರ ಕ್ಷೇತ್ರದಲ್ಲಿ ಜಯಪ್ರದಾ ಅವರು ಗೆದ್ದಿದ್ದರು. ಆದ್ರೆ ಅಜಮ್ ಖಾನ್ ಬೆಂಬಲಿಗರ ದುಷ್ಕೃತ್ಯದಿಂದ 30 ಸಾವಿರದಷ್ಟು ಮತಗಳು ಅವರ ಕೈತಪ್ಪಿತ್ತು.

  • ಸೈನಿಕರು ಪ್ರತಿದಿನ ಸಾಯ್ತಾರೆ, ಸೈನಿಕರು ಸಾಯದಿರೋ ದೇಶ ಇದ್ಯಾ?: ಬಿಜೆಪಿ ಸಂಸದ

    ಸೈನಿಕರು ಪ್ರತಿದಿನ ಸಾಯ್ತಾರೆ, ಸೈನಿಕರು ಸಾಯದಿರೋ ದೇಶ ಇದ್ಯಾ?: ಬಿಜೆಪಿ ಸಂಸದ

    ಲಕ್ನೋ: ಇತ್ತೀಚೆಗೆ ಸಿಆರ್‍ಪಿಎಫ್ ತರಬೇತಿ ಕೇಂದ್ರದ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ ಐವರು ಯೋಧರು ಹುತಾತ್ಮರಾಗಿದ್ದು, ಈ ಬಗ್ಗೆ ಉತ್ತರ ಪ್ರದೇಶ ರಾಜ್ಯದ ರಾಮ್‍ಪುರ ಕ್ಷೇತ್ರದ ಬಿಜೆಪಿ ಸಂಸದ ನೇಪಾಳ ಸಿಂಗ್ ಪ್ರತಿಕ್ರಿಯಿಸುವ ವೇಳೆ ಭಾರತೀಯ ಸೈನಿಕರಿಗೆ ಅವಮಾನಿಸುವಂತಹ ಹೇಳಿಕೆಯನ್ನು ನೀಡಿದ್ದಾರೆ.

    ಸೈನಿಕರು ಪ್ರತಿದಿನ ಸಾಯ್ತಾರೆ. ಎಲ್ಲಿಯಾದ್ರೂ ಯುದ್ಧದಲ್ಲಿ ಸೈನಿಕರು ಸಾಯದೇ ಇರುವ ದೇಶವಿದ್ಯಾ? ಗ್ರಾಮಗಳಲ್ಲಿ ಗಲಾಟೆ ಆದಾಗ ಯಾರಿಗಾದ್ರೂ ಗಾಯ ಆಗೇ ಆಗುತ್ತದೆ. ಜೀವವನ್ನು ಉಳಿಸಬಲ್ಲ ಸಾಧನ ಏನಾದ್ರೂ ಇದ್ರೆ ಹೇಳಿ. ಬುಲೆಟ್ ವಿಫಲಗೊಳಿಸುವ ಯಾವುದಾದ್ರೂ ಸಾಧನ ಇದ್ರೆ ಹೇಳಿ. ಅದನ್ನ ಜಾರಿಗೆ ತರೋಣ ಎಂದು ಹೇಳಿದ್ದಾರೆ.

    ಇತ್ತ ಸಂಸದರ ಹೇಳಿಕೆಗೆ ಆಕ್ರೋಶ ವ್ಯಕ್ತವಾದ ಕೂಡಲೇ ನಾನು ಸೇನೆಗೆ ಅವಮಾನಿಸುವಂತಹ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಒಂದು ವೇಳೆ ನನ್ನ ಮಾತುಗಳಿಂದ ಯಾರಿಗಾದ್ರೂ ದುಃಖವಾದ್ರೆ ನಾನು ಎಲ್ಲರಲ್ಲಿಯೂ ಕ್ಷಮೆ ಕೇಳುತ್ತೇನೆ ಅಂತಾ ನೇಪಾಳ ಸಿಂಗ್ ಪ್ರತಿಕ್ರಿಯಿಸಿದ್ದಾರೆ.

  • ಬೇಡ ಬೇಡ ಅಂದ್ರೂ, ಯುವತಿಯನ್ನು ಎಳೆದಾಡಿ ಎತ್ತಿ ಕಿರುಕುಳ ನೀಡಿದ್ರು

    ಬೇಡ ಬೇಡ ಅಂದ್ರೂ, ಯುವತಿಯನ್ನು ಎಳೆದಾಡಿ ಎತ್ತಿ ಕಿರುಕುಳ ನೀಡಿದ್ರು

    ಲಕ್ನೋ: ಉತ್ತರಪ್ರದೇಶದ ರಾಮ್‍ಪುರ್ ಎಂಬಲ್ಲಿ 12 ಮಂದಿ ಯುವಕರು ರಸ್ತೆಯಲ್ಲಿ ತೆರಳುತ್ತಿದ್ದ ಯುವತಿಯನ್ನು ಎಳೆದಾಡಿ ಲೈಂಗಿಕ ಕಿರುಕುಳ ನಡೆಸಿದ್ದಾರೆ.

    ಅರಣ್ಯ ಪ್ರದೇಶವೊಂದರಲ್ಲಿ ಇಬ್ಬರು ಯುವತಿಯರು ತೆರಳುತ್ತಿದ್ದರು. ಈ ವೇಳೆ ಅಲ್ಲಿದ್ದ ಯುವಕರು ಲೈಂಗಿಕ ಕಿರುಕುಳ ನೀಡಿದ್ದಾರೆ. ಈ ವೇಳೆ ಯುವತಿಯರು ಪರಿಪರಿಯಾಗಿ ವಿನಂತಿಸಿದರೂ ಕಾಮುಕರು ಕಿರುಕುಳ ನೀಡುವುದನ್ನು ಮುಂದುವರಿಸಿದ್ದಾರೆ.

    ಕಾಮುಕರ ಪೈಕಿ ಒಬ್ಬತ ಈ ಕೃತ್ಯವನ್ನು ವಿಡಿಯೋ ಮಾಡಿ ಸಾಮಾಜಿಕ ತಾಣದಲ್ಲಿ ಹರಿಯಬಿಟ್ಟಿದ್ದಾನೆ. ಒಬ್ಬಾತ ಯುವತಿಯನ್ನು ಎತ್ತಿ ಕಿರುಕುಳ ನೀಡುತ್ತಿದ್ದರೆ, ಉಳಿದವರು ವಿಕೃತವಾಗಿ ಸಂತೋಷ ವ್ಯಕ್ತಪಡಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

    ವಿಡಿಯೋ ಬೆಳಕಿಗೆ ಬಂದ ನಂತರ ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿದ್ದು ಉಳಿದವರಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.

    https://www.youtube.com/watch?v=_OeVTkDmcM4