Tag: Ramp Walk

  • ಸೌಂದರ್ಯ ಸ್ಪರ್ಧೆಯಲ್ಲಿ ರ‍್ಯಾಂಪ್ ವಾಕ್ – ಐವರು ಪೊಲೀಸರ ವರ್ಗಾವಣೆ

    ಸೌಂದರ್ಯ ಸ್ಪರ್ಧೆಯಲ್ಲಿ ರ‍್ಯಾಂಪ್ ವಾಕ್ – ಐವರು ಪೊಲೀಸರ ವರ್ಗಾವಣೆ

    ಚೆನ್ನೈ: ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದಕ್ಕೆ ವಿಶೇಷ ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ಸೇರಿದಂತೆ ಐವರು ಪೊಲೀಸ್ ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗಿದೆ.

    ಸೌಂದರ್ಯ ಸ್ಪರ್ಧೆಯಲ್ಲಿ ಪೊಲೀಸ್ ಸಿಬ್ಬಂದಿ ರ‍್ಯಾಂಪ್ ವಾಕ್ ಮಾಡಿದ ಹಿನ್ನೆಲೆ ನಾಗಪಟ್ಟಣಂ ಪೊಲೀಸ್ ವರಿಷ್ಠಾಧಿಕಾರಿ ವರ್ಗಾವಣೆ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಅಮೃತ ಮಹೋತ್ಸವಕ್ಕೆ 750 ಗ್ರಾಮೀಣ ಹೆಣ್ಣುಮಕ್ಕಳೇ ತಯಾರಿಸಿದ ಆಜಾದಿ ಉಪಗ್ರಹ ಉಡಾವಣೆ – ಏನಿದರ ವಿಶೇಷತೆ?

    ಕಳೆದ ಭಾನುವಾರ ಮೈಲಾಡುತುರೈ ಜಿಲ್ಲೆಯ ಸೆಂಬನಾರ್ಕೋವಿಲ್‍ನಲ್ಲಿ ಖಾಸಗಿ ಸಂಸ್ಥೆಯೊಂದು ಸೌಂದರ್ಯ ಸ್ಪರ್ಧೆಯನ್ನು ಏರ್ಪಡಿಸಿತ್ತು. ಇದರಲ್ಲಿ ನಟಿ ಯಶಿಕಾ ಆನಂದ್ ವಿಶೇಷ ಅಥಿತಿಯಾಗಿ ಭಾಗವಹಿಸಿ, ಸ್ಪರ್ಧೆಯನ್ನು ಉದ್ಘಾಟಿಸಿದರು. ಈ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ವೈರಲ್ ಆಗಿತ್ತು. ಇದನ್ನೂ ಓದಿ: ರಾಜಕುಮಾರ್ ಟಾಕಳೆ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಜಾ

    ನಾಗಪಟ್ಟಣಂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜವಗರ್ ಅವರು, ಪ್ರಸ್ತುತ ಸೆಂಬನಾರ್ಕೋವಿಲ್ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಶೇಷ ಸಹಾಯಕ ಇನ್ಸ್‌ಪೆಕ್ಟರ್ ಸುಬ್ರಮಣಿಯನ್ ಸೇರಿದಂತೆ ರೇಣುಕಾ, ಅಶ್ವಿನಿ, ನಿತ್ಯಶೀಲಾ ಮತ್ತು ಶಿವನೇಸನ್ ಅನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರ್‍ಯಾಂಪ್‌ ಮೇಲೆ ಹೆಜ್ಜೆ ಹಾಕಿದ ಶಾಸಕಿ ಸೌಮ್ಯರೆಡ್ಡಿ 

    ರ್‍ಯಾಂಪ್‌ ಮೇಲೆ ಹೆಜ್ಜೆ ಹಾಕಿದ ಶಾಸಕಿ ಸೌಮ್ಯರೆಡ್ಡಿ 

    ಬೆಂಗಳೂರು: ಜಯನಗರದ ಕಾಂಗ್ರೆಸ್ ಶಾಸಕಿ ಸೌಮ್ಯ ರ್‍ಯಾಂಪ್  ಮೇಲೆ ಹೆಜ್ಜೆ ಹಾಕಿದ್ದಾರೆ.

    ಇಂದಿನಿಂದ ಮೂರು ದಿನಗಳ ಕಾಲ [ಶುಕ್ರವಾರದಿಂದ ಭಾನುವಾರದವರೆಗೆ] ಬೆಂಗಳೂರಿನ ಅಶೋಕ್ ಲಲಿತ್ ನಲ್ಲಿ ಪುರಾತನ, ಪಾರಂಪರಿಕ ಆಭರಣಗಳ ಮಾರಾಟ, ಪ್ರದರ್ಶನವನ್ನು ಆಯೋಜಿಸಲಾಗಿದೆ.

    ಕೋವಿಡ್ 19 ಸಾಂಕ್ರಮಿಕ ರೋಗ ನಗರದಲ್ಲಿ ಕಾಣಿಸಿಕೊಂಡ ಹಿನ್ನೆಲೆ ಎಲ್ಲ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿತ್ತು. ಆದರೆ ಇದೀಗ ಸೋಂಕು ಕಡಿಮೆಯಾಗಿರುವುದರಿಂದ ಮತ್ತೆ ಬೆಂಗಳೂರಲ್ಲಿ ಏರ್ಪಡಿಸಿತ್ತಿರುವ ಅತೀ ದೊಡ್ಡ ಆಭರಣ ಮೇಳ ಕಾರ್ಯಕ್ರಮವಾಗಿದೆ. ದೇಶದ ನೂರಕ್ಕೂ ಹೆಚ್ಚು ಪ್ರಮುಖ ಆಭರಣ ಸಂಸ್ಥೆಗಳು ಒಂದೇ ವೇದಿಕೆಯಲ್ಲಿ ವಿಶಿಷ್ಟ ಆಭರಣಗಳನ್ನು ಪ್ರದರ್ಶಿಸುತ್ತಿದ್ದಾರೆ.

    ಈ ವೇಳೆ ಸಮಾರಂಭಕ್ಕೆ ಆಗಮಿಸಿದ ಬಿಜೆಪಿ ಶಾಸಕಿ ಸೌಮ್ಯ ರೆಡ್ಡಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಪುರಾತನ ಆಭರಣಗಳನ್ನು ತೊಟ್ಟು ರ್‍ಯಾಂಪ್  ಮೇಲೆ ಹೆಜ್ಜೆ ಹಾಕಿದರು. ಜೊತೆಗೆ ಟ್ರೆಂಡಿ ಜುವೆಲರ್ಸ್‍ಗಳನ್ನು ಜವ್ವನೆಯರು ಧರಿಸಿ ರ್‍ಯಾಂಪ್ ವಾಕ್‌ ಮಾಡುವ ಮೂಲಕ ಪ್ರದರ್ಶಿಸಿದರು. ಅಂದಹಾಗೇ ಈ ಪಾರಂಪರಿಕ, ವೈಶಿಷ್ಟ್ಯಪೂರ್ಣ, ವಿನೂತನ ಆಭರಣ ಮೇಳಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ.

  • ಕ್ಯಾಟ್ ವಾಕ್ ಮಾಡಿ ಕೈ ಬೀಸಿದ ರಾನು: ವಿಡಿಯೋ ವೈರಲ್

    ಕ್ಯಾಟ್ ವಾಕ್ ಮಾಡಿ ಕೈ ಬೀಸಿದ ರಾನು: ವಿಡಿಯೋ ವೈರಲ್

    ಮುಂಬೈ: ಇಂಟೆರ್‌ನೆಟ್ ಸ್ಟಾರ್ ರಾನು ಮೊಂಡಲ್ ಅವರ ಮೇಕಪ್ ಫೋಟೋವೊಂದು ವೈರಲ್ ಆದ ಬೆನ್ನಲ್ಲೇ ಇದೀಗ ಅವರು ಕ್ಯಾಟ್ ವಾಕ್ ಮಾಡಿ ಅಭಿಮಾನಿಗಳತ್ತ ಕೈ ಬೀಸಿದ ವಿಡಿಯೋ ವೈರಲ್ ಆಗುತ್ತಿದೆ.

    ವಿಡಿಯೋದಲ್ಲಿ ರಾನು ಮೊಂಡಲ್ ಅವರು ನಟಿ ಪ್ರಿಯಾಂಕಾ ಚೋಪ್ರಾ ಅವರ ‘ಫ್ಯಾಶನ್’ ಚಿತ್ರದ ಹಾಡಿಗೆ ಮೊದಲ ಬಾರಿಗೆ ರ‍್ಯಾಂಪ್‌ ವಾಕ್‌ ಮಾಡಿದ್ದಾರೆ. ವಿಡಿಯೋದಲ್ಲಿ ರಾನು ವಿಶ್ವಾಸದಿಂದ ಕಾಣುತ್ತಿದ್ದು, ಅಭಿಮಾನಿಗಳಿಗೆ ಕೈ ಬೀಸಿದ್ದಾರೆ. ರಾನು ಅವರ ಈ ವಿಡಿಯೋ ಈಗ ಸಾಕಷ್ಟು ಚರ್ಚೆಯಾಗುತ್ತಿದೆ. ಇದ್ದನ್ನೂ ಓದಿ: ರಾನು ಮೊಂಡಲ್ ಮೇಕಪ್ ಫೋಟೋ ವೈರಲ್ – ನೆಟ್ಟಿಗರಿಂದ ಸಿಕ್ಕಾಪಟ್ಟೆ ಟ್ರೋಲ್

    ರಾನು ಈ ವಿಡಿಯೋದಲ್ಲಿ ಡಿಸೈನರ್ ಜೊತೆ ರ‍್ಯಾಂಪ್‌ ವಾಕ್‌ ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ರಾನು ಪೀಚ್ ಬಣ್ಣದ ಲೆಹೆಂಗಾ ಧರಿಸಿ ಜೊತೆಗೆ ಹೆಚ್ಚು ಗಾತ್ರದ ಆಭರಣಗಳನ್ನು ಧರಿಸಿದ್ದಾರೆ. ರಾನು ತಮ್ಮ ಮೇಕಪ್‍ನಿಂದಾಗಿ ಹೆಚ್ಚು ಟ್ರೋಲ್ ಆಗುತ್ತಿದ್ದು, ಅವರ ಮೇಲೆ ಮಿಮ್ಸಿ ಕೂಡ ಮಾಡಲಾಗುತ್ತಿದೆ. ಇದ್ದನ್ನೂ ಓದಿ: ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಬಂದ ಅಭಿಮಾನಿಗೆ ‘ಡೋಂಟ್ ಟಚ್ ಮಿ’ ಎಂದ ರಾನು: ವಿಡಿಯೋ

    ಉತ್ತರ ಪ್ರದೇಶದ ಖಾನ್‍ಪುರದ ಬ್ಯೂಟಿ ಪಾರ್ಲರ್ ಕಾರ್ಯಕ್ರಮಕ್ಕೆ ರಾನು ಆಗಮಿಸಿದ್ದರು. ಈ ವೇಳೆ ಸ್ವತಃ ಮೇಕಪ್ ಆರ್ಟಿಸ್ಟ್ ಅವರಿಗೆ ಮೇಕಪ್ ಮಾಡಿದ್ದಾರೆ. ಆದರೆ ಇದು ಅಭಿಮಾನಿಗಳಿಗೆ ಇಷ್ಟವಾಗಲಿಲ್ಲ. ಹಾಗಾಗಿ ರಾನು ಅವರನ್ನು ಟ್ರೋಲ್ ಮಾಡಲು ಶುರು ಮಾಡಿದ್ದಾರೆ. ಇದ್ದನ್ನೂ ಓದಿ: ಮತ್ತೆ ರಾನು ವರ್ತನೆ ನೋಡಿ ನೆಟ್ಟಿಗರು ಗರಂ: ವಿಡಿಯೋ ವೈರಲ್

    https://www.instagram.com/p/B48c95hlnKx/?utm_source=ig_embed&utm_campaign=loading

  • ಹೊಸ ವರ್ಷದಂದು ಟ್ರೆಡಿಷನಲ್ ಡೇ ಆಚರಿಸಿದ ಕೊಪ್ಪಳದ ಮಕ್ಕಳು

    ಹೊಸ ವರ್ಷದಂದು ಟ್ರೆಡಿಷನಲ್ ಡೇ ಆಚರಿಸಿದ ಕೊಪ್ಪಳದ ಮಕ್ಕಳು

    ಕೊಪ್ಪಳ: ದೇಶದಲ್ಲೆಡೆ ಜನರು ಹೊಸ ವರ್ಷವನ್ನು ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ. ಬಹುತೇಕ ಶಾಲಾ ಕಾಲೇಜುಗಳಲ್ಲಿ ಕೇಕ್ ಕಟ್ ಮಾಡಿ ಹೊಸ ವರ್ಷಾಚರಣೆ ಮಾಡಲಾಗುತ್ತದೆ. ಆದರೆ ನಗರದ ಖಾಸಗಿ ಶಾಲೆಯೊಂದು ಟ್ರೆಡಿಷನಲ್ ಡೇ ಆಚರಿಸುವ ಮೂಲಕ ವಿಭಿನ್ನವಾಗಿ ಹೊಸ ವರ್ಷ ಆಚರಣೆ ಮಾಡಿದೆ.

    ಕೊಪ್ಪಳದ ಖಾಸಗಿ ಶಾಲೆಯಲ್ಲಿ ಮಂಗಳವಾರ ಹೊಸ ವರ್ಷವನ್ನು ವಿಭಿನ್ನವಾಗಿ ಆಚರಣೆ ಮಾಡಲಾಯಿತು. ಶಾಲೆಯ ಮಕ್ಕಳೆಲ್ಲ ಸಂಪ್ರದಾಯಿಕ ಉಡುಗೆ ತೊಟ್ಟು ಹೊಸ ವರ್ಷ ಆಚರಣೆ ಮಾಡಿದರು. ಬಹುತೇಕ ಶಾಲೆಗಳಲ್ಲಿ ಕೇಕ್ ಕಟ್ ಮಾಡಿ ಹೊಸ ವರ್ಷ ಆಚರಣೆ ಮಾಡಿದರೆ, ಇಲ್ಲಿನ ವಿದ್ಯಾರ್ಥಿಗಳು ಹೊಸ ವರ್ಷವನ್ನು ಟ್ರೆಡಿಷನಲ್ ಡೇ ಯನ್ನಾಗಿ ಆಚರಣೆ ಮಾಡಿದರು. ಅದರಲ್ಲೂ ಟ್ರೆಡಿಷನಲ್ ಡೇಯೊಂದಿಗೆ ಸಂದೇಶ ಸಾರುವ ಭಿತ್ತಿ ಪತ್ರಗಳನ್ನು ಹಿಡಿದುಕೊಂಡು ರ‍್ಯಾಂಪ್‌ ವಾಕ್ ಮಾಡಿದ್ದಾರೆ.

    ಇಂಗ್ಲಿಷ್ ಮಾಧ್ಯಮ ಶಾಲೆಯಾದರೂ ಭಾರತದ ಸಂಸ್ಕೃತಿಯನ್ನು ಮರೆಯಬಾರದು ಎನ್ನುವ ಉದ್ದೇಶದಿಂದ ಶಿಕ್ಷಕರು ಹೊಸ ವರ್ಷದಂದು ಟ್ರೆಡಿಶನಲ್ ಡೇ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಕರ್ನಾಟಕದ ನಾನಾ ಭಾಗದ ಸಂಪ್ರದಾಯಕ ಉಡುಗೆಯನ್ನ ಹಾಕಿಕೊಂಡು ಮಕ್ಕಳು ಹೊಸ ವರ್ಷವನ್ನು ಆಚರಣೆ ಮಾಡಿದರು. ಶಿಕ್ಷಕ ಸಿಬ್ಬಂದಿ ಕೂಡ ಹಳ್ಳಿ ಸ್ಟೈಲ್ ಸೀರೆಯನ್ನು ಧರಿಸಿ ಮಕ್ಕಳ ಜೊತೆ ಸಂಭ್ರಮಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹಾಟ್ ಗೌನ್ ಮೂಲಕ ಮತ್ತೆ ಪಡ್ಡೆ ಹುಡುಗರ ನಿದ್ದೆಗೆಡಿಸಿದ ಮಾಜಿ ವಿಶ್ವಸುಂದರಿ!

    ಹಾಟ್ ಗೌನ್ ಮೂಲಕ ಮತ್ತೆ ಪಡ್ಡೆ ಹುಡುಗರ ನಿದ್ದೆಗೆಡಿಸಿದ ಮಾಜಿ ವಿಶ್ವಸುಂದರಿ!

    ಮುಂಬೈ: ಮಾಜಿ ವಿಶ್ವ ಸುಂದರಿ ಹಾಗೂ ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ತಮ್ಮ 44 ನೇ ವಯಸ್ಸಿನಲ್ಲಿ ಹಾಟ್ ಗೌನ್ ಧರಿಸುವ ಮೂಲಕ ಮತ್ತೊಮ್ಮೆ ಪಡ್ಡೆ ಹುಡುಗರ ನಿದ್ದೆ ಗೆಡಿಸುವಂತೆ ಮಾಡಿದ್ದಾರೆ.

    ಹೌದು, ಕತಾರ್ ನ ದೋಹದಲ್ಲಿ ನಡೆದ ಡಿಸೈನರ್ ಮನೀಶ್ ಮಲ್ಹೋತ್ರ ಅವರ ಫ್ಯಾಷನ್ ವೀಕೆಂಡ್ ಇಂಟರ್ ನ್ಯಾಷನಲ್ 2018 ಕಾರ್ಯಕ್ರಮದಲ್ಲಿ ಐಶ್ವರ್ಯ ಭಾಗಿಯಾಗಿದ್ದರು. ಈ ವೇಳೆ ಮುತ್ತಿನ ಬಿಳಿ ಹಾಗೂ ಕೆಂಪು ಬಣ್ಣ ಮಿಶ್ರಿತ ಗೌನ್ ಧರಿಸಿ ರ‌್ಯಾಂಪ್‌ ಮೇಲೆ ಹೆಜ್ಜೆ ಹಾಕುವ ಮೂಲಕ ಎಲ್ಲರ ಎದೆ ಬಡಿತ ಹೆಚ್ಚಾಗುವಂತೆ ಮಾಡಿದ್ದಾರೆ.

    https://www.instagram.com/p/BokYSPjFTVR/?utm_source=ig_embed

    ಇದಲ್ಲದೇ ತನ್ನ ನೆಚ್ಚಿನ ಮೇಕಪ್ ಕಲಾವಿದ ಮಿಕಿ ಕಾನ್ ಟ್ರಾಕ್ಟರ್ ರವರು ಮಾಡಿದ್ದ ಸ್ಮೋಕಿ ಮೇಕಪ್‍ನಿಂದ ಅವರ ನೀಲಿ ಕಂಗಳು ಮತ್ತಷ್ಟು ಅಂದಗೊಳಿಸುವಂತೆ ಮಾಡಿತ್ತು. ಇದರ ಜೊತೆ ನೀಲಿ ಹೂವಿನ ರಿಬ್ಬನ್‍ನಿಂದ ಮಾಡಿದ ಕೇಶವಿನ್ಯಾಸ ಎಲ್ಲರನ್ನೂ ಬೆರಗುಗೊಳಿಸುವಂತೆ ಮಾಡಿತ್ತು.

    ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಫೋಟೋಗಳನ್ನು ಹಂಚಿಕೊಂಡಿರುವ ಐಶ್ವರ್ಯ ರೈ ತಮ್ಮ ಸಂತಸ ಅನುಭವಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಅಲ್ಲದೇ ತಮ್ಮ ಮಗಳಿಗೂ ಅದೇ ರೀತಿಯ ಉಡುಗೆ ತೊಡಿಸಿ ಹಾಕಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತಮ್ಮ 44ನೇ ವಯಸ್ಸಿನಲ್ಲಿಯೂ ಗ್ಲಾಮರಸ್ ಆಗಿ ರ‌್ಯಾಂಪ್‌ ವಾಕ್ ಮಾಡುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ.

    https://www.instagram.com/p/Boj9qZSnulY/?utm_source=ig_embed

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.instagram.com/p/Bokg1CyFbtr/?utm_source=ig_embed

    https://www.instagram.com/p/BolCU8eHljV/?utm_source=ig_embed

    https://www.instagram.com/p/Bolc3cYFvu0/

  • ಜಾನಪದ ಕಲೆ, ಆಧುನಿಕತೆಯ ಸೊಗಡಿನಲ್ಲಿ ವಿದ್ಯಾರ್ಥಿಗಳ ರ‍್ಯಾಂಪ್ ವಾಕ್

    ಜಾನಪದ ಕಲೆ, ಆಧುನಿಕತೆಯ ಸೊಗಡಿನಲ್ಲಿ ವಿದ್ಯಾರ್ಥಿಗಳ ರ‍್ಯಾಂಪ್ ವಾಕ್

    ಮಂಗಳೂರು: ವೇದಿಕೆಯ ಮೇಲೆ ಬಿರುಸಿನ ಹೆಜ್ಜೆಗಳನ್ನು ಹಾಕುತ್ತಿದ್ದ ಯುವತಿಯರು ತಾವು ಅಬಲೆಯರಲ್ಲ, ಸಬಲೆಯರು ಎಂದು ತೋರಿಸಿದ್ದರು. ಜಾನಪದ ಕಲೆ, ಆಧುನಿಕತೆಯ ಸೊಗಡಿನೊಂದಿಗೆ ಬೆರೆಯುವುದಲ್ಲದೇ ಫ್ಯಾಶನ್ ಲೋಕದಲ್ಲೂ ತಮ್ಮ ಛಾಪು ಮೂಡಿಸಲು ತಾವೆಷ್ಟು ಸಮರ್ಥರು ಎಂದು ಸಾಬೀತುಪಡಿಸಿದ್ದರು.

    ಹೌದು. ಮಂಗಳೂರಿನ ಕೊಟ್ಟಾರದಲ್ಲಿರುವ ಕರಾವಳಿ ಕಾಲೇಜಿನಲ್ಲಿ ಫ್ಯಾಶನ್ ಡಿಸೈನಿಂಗ್ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ರಾಷ್ಟ್ರಮಟ್ಟದ ಫ್ಯಾಶನ್ ಫಿಯೆಸ್ಟಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ತಮ್ಮ ಪ್ರತಿಭೆಯನ್ನು ಓರೆಗೆ ಹಚ್ಚಿ ಅದ್ಭುತ ಲೋಕವನ್ನೇ ಸೃಷ್ಟಿಸಿದ್ದರು. ವಿದ್ಯಾರ್ಥಿಗಳೇ ಸಿದ್ಧಪಡಿಸಿದ ಡ್ರೆಸ್‍ನಲ್ಲೇ ಶೋ ನಡೆದದ್ದು ವಿಶೇಷವಾಗಿತ್ತು.

    ಕುಳಿತವರ ಕಾಲನ್ನೂ ಹೆಜ್ಜೆ ಹಾಕಿಸುವಂತೆ ಮಾಡುತ್ತಿದ್ದ ಆ ಮ್ಯೂಸಿಕ್‍ಗೆ ವಿವಿಧ ರೀತಿಯ ಬಟ್ಟೆಗಳನ್ನು ತೊಟ್ಟ ಯುವತಿಯರು ವೇದಿಕೆಯ ಮೇಲೆ ಹೆಜ್ಜೆ ಹಾಕುತ್ತಿದ್ದರು. ಅವರ ಮುಖದಲ್ಲಿ ಗಂಭೀರತೆ, ಆತ್ಮವಿಶ್ವಾಸ ಹಾಗೂ ಗೆಲುವಿನ ಛಲವಿತ್ತು. ಆ ವೇದಿಕೆಯ ಮೇಲೆ ಮಂದಹಾಸದೊಂದಿಗೆ ಹೆಜ್ಜೆ ಹಾಕುತ್ತಿರುವುದನ್ನು ನೋಡಿದರೆ ಅವರ ಸಾಮಥ್ರ್ಯ ಏನು ಎಂಬುದು ವ್ಯಕ್ತವಾಗುತ್ತಿತ್ತು. ಅವರ ಪ್ರತಿಭೆ ಕಂಡು ನೋಡುಗರು ಹುಬ್ಬೇರಿಸಿದ್ದರು.

    ಈ ಡಿಸೈನ್ ಫೆಸ್ಟಿವಲ್ ನಲ್ಲಿ ಗೋವಾ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಮಣಿಪುರ, ಕರ್ನಾಟಕ ಸೇರಿದಂತೆ ದೇಶದ ನೂರಕ್ಕೂ ಅಧಿಕ ವಿದ್ಯಾರ್ಥಿಗಳ ತಂಡ ಭಾಗವಹಿಸಿತ್ತು. ಅಲ್ಲದೇ ವಿದ್ಯಾರ್ಥಿಗಳೇ ರ‍್ಯಾಂಪ್ ವಾಕ್ ನಡೆಸುವ ಮೂಲಕ ವಿವಿಧ ನೂತನ ಡಿಸೈನ್‍ಗಳನ್ನು ಪ್ರದರ್ಶಿಸಿದರು. ಆದರೆ ತೀರ್ಪುಗಾರರ ಮೆಚ್ಚುಗೆ ಗಳಿಸಿದ ಡಿಸೈನ್‍ಗಳು ಬಹುಮಾನಗಳನ್ನು ಬಾಚಿಕೊಂಡವು.

    ಕೇವಲ ಫ್ಯಾಶನ್ ಶೋ ಮಾತ್ರವಲ್ಲದೇ ಜಾನಪದ ನೃತ್ಯಗಳನ್ನು ಕೂಡಾ ವಿದ್ಯಾರ್ಥಿನಿಯರು ಪ್ರದರ್ಶಿಸಿದ್ದರು. ನೃತ್ಯದ ವಿವಿಧ ಹೆಜ್ಜೆಗಳು, ಆಕರ್ಷಕ ಸ್ಟಂಟ್ ಗಳು ನೋಡುಗರನ್ನು ಹುಬ್ಬೇರಿಸುವಂತೆ ಮಾಡಿತ್ತು. ಹೂಗಳ ಡೆಕೋರೇಷನ್ ನಡೆಸುವ ಮೂಲಕ ತಮ್ಮ ಕಲಾಸಕ್ತಿಯನ್ನು ಕೂಡಾ ವಿದ್ಯಾರ್ಥಿನಿಯರು ತೋರಿಸಿದ್ದರು.

    ಒಟ್ಟಿನಲ್ಲಿ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಭಾವ ಮೂಡಿಸುವುದರ ಜೊತೆಗೆ ವಿಭಿನ್ನ ಅಭಿರುಚಿ ಮೂಡಲು ಕರಾವಳಿ ಕಾಲೇಜು ವರ್ಷ ಪ್ರತಿ ಫ್ಯಾಷನ್ ಶೋ ಹಾಗೂ ವಿವಿಧ ಸ್ಪರ್ಧಾ ಕಾರ್ಯಕ್ರಮ ಆಯೋಜಿಸುತ್ತಿದ್ದು, ವಿದ್ಯಾರ್ಥಿಗಳ ಪ್ರತಿಭೆ ಗುರುತಿಸಲು ಸಹಾಯಕವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬರೋಬ್ಬರಿ 30 ಕೆ.ಜಿ ತೂಕದ ಗೋಲ್ಡನ್ ಲೆಹೆಂಗಾ ಧರಿಸಿ ಕರೀನಾ ಮಿಂಚಿಂಗ್!

    ಬರೋಬ್ಬರಿ 30 ಕೆ.ಜಿ ತೂಕದ ಗೋಲ್ಡನ್ ಲೆಹೆಂಗಾ ಧರಿಸಿ ಕರೀನಾ ಮಿಂಚಿಂಗ್!

    ಮುಂಬೈ: ಬಾಲಿವುಡ್ ಬೆಡಗಿ ಕರೀನಾ ಕಪೂರ್ ಖಾನ್ ಕಾರ್ಯಕ್ರಮವೊಂದರಲ್ಲಿ ಬರೋಬ್ಬರಿ 30 ಕೆ.ಜಿ ತೂಕದ ಲೆಹೆಂಗಾ ಧರಿಸಿ ಎಲ್ಲರ ಗಮನ ಸೆಳೆದಿದ್ದಾರೆ.

    ದೆಹಲಿಯಲ್ಲಿ ನಡೆಯುತ್ತಿರುವ ಫಾಲ್ಗುನಿ ಹಾಗೂ ಶೇನ್ ಪೀಕಾಕ್ ಅವರ ಇಂಡಿಯಾ ಕೌಚುರ್ ವೀಕ್ 2018ರ ಕಾರ್ಯಕ್ರಮದಲ್ಲಿ ಡಿಸೈನರ್ ತಾವು ಡಿಸೈನ್ ಮಾಡಿದ ಉಡುಪುಗಳನ್ನು ಪ್ರರ್ದಶಿಸುತ್ತಿದ್ದರು. ಈ ವೇಳೆ ನಟಿ ಕರೀನಾ ಕಪೂರ್ ಗೋಲ್ಡನ್ ಬಣ್ಣದ ಲೆಹೆಂಗಾ ಧರಿಸಿ ಶೋ ಸ್ಟಾಪರ್ ಆಗಿದ್ದಾರೆ.

    ಈ ಕಾರ್ಯಕ್ರಮದಲ್ಲಿ ಡಿಸೈನರ್ ಡಿಸೈನ್ ಮಾಡಿದ ಉಡುಪುಗಳನ್ನು ಪ್ರರ್ದಶಿಸಲಾಗುತ್ತಿತ್ತು. ಮಾಡೆಲ್‍ಗಳು ರ‍್ಯಾಂಪ್ ವಾಕ್ ಮಾಡಿದ ಮೇಲೆ ಕರೀನಾ ಕಪೂರ್ ರನ್ ವೇ ಮೇಲೆ ರ‍್ಯಾಂಪ್ ವಾಕ್ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.

    ಕರೀನಾ ರ‍್ಯಾಂಪ್ ವಾಕ್ ಮಾಡುವಾಗ ಗೋಲ್ಡನ್ ಲೆಹೆಂಗಾ ಧರಿಸಿದ್ದರು. ಈ ಲೆಹೆಂಗಾ ಬರೋಬ್ಬರಿ 30 ಕೆ.ಜಿ ತೂಕವಿದೆ. ಈ ಲೆಹೆಂಗಾಗೆ ಕರೀನಾ ಫುಲ್ ಸ್ಲೀವ್ಸ್ ಬ್ಲೌಸ್ ಧರಿಸಿ ನ್ಯೂಡ್ ಗ್ಲಿಟರಿಂಗ್ ದುಪಟ್ಟಾ ಧರಿಸಿದ್ದರು. ಈ ಲೆಹೆಂಗಾ ಧರಿಸಿ ಕರೀನಾ ತಮ್ಮ ಕೂದಲನ್ನು ಕರ್ಲ್ ಮಾಡಿಕೊಂಡಿದ್ದರು.

    ಈ ಲೆಹೆಂಗಾ ಧರಿಸಿ ನಾನು ಶೈನಿಂಗ್ ಸ್ಟಾರ್ ತರಹ ಕಾಣಿಸುತ್ತಿದ್ದೇನೆ. ಇದು ಪಾಲ್ಗುನಿ ಹಾಗೂ ಶಾನ್ ಪೀಕಾಕ್ ಅವರ ಕಾರ್ಯಕ್ರಮವಿಲ್ಲದಿದ್ದರೆ ನಾನು ಇಷ್ಟು ತೂಕವಿರುವ ಲೆಹೆಂಗಾವನ್ನು ಧರಿಸುತ್ತಿರಲಿಲ್ಲ. ನಾನು 10 ವರ್ಷಗಳಿಂದ ರ‍್ಯಾಂಪ್ ವಾಕ್ ಮಾಡುತ್ತಿದ್ದು, ಆದರೆ ಇದೇ ಮೊದಲ ಬಾರಿಗೆ ನಾನು 30 ಕೆ.ಜಿ ತೂಕದ ಉಡುಪು ಧರಿಸಿದ್ದೇನೆ ಎಂದು ಕರೀನಾ ಕಪೂರ್ ತಿಳಿಸಿದ್ದಾರೆ.