Tag: Ramnath Rai

  • ಹುಲಿ ವೇಷಧಾರಿಗಳ ಜೊತೆ ಸ್ಟೆಪ್ ಹಾಕಿದ ಸಚಿವ ರೈ

    ಹುಲಿ ವೇಷಧಾರಿಗಳ ಜೊತೆ ಸ್ಟೆಪ್ ಹಾಕಿದ ಸಚಿವ ರೈ

    ಬೆಂಗಳೂರು: 63ನೇ ರಾಷ್ಟ್ರೀಯ ವನ್ಯಜೀವಿ ಸಪ್ತಾಹಕ್ಕೆ ಇಂದು ಅರಣ್ಯ ಸಚಿವ ರಮಾನಾಥ ರೈ, ನಟ ಪುನೀತ್ ರಾಜ್ ಕುಮಾರ್, ಪ್ರಕಾಶ್ ರೈ ಚಾಲನೆ ನೀಡಿದರು.

    ದೇಶದಲ್ಲಿ ವನ್ಯ ಸಂಪತ್ತು ಕ್ರಮೇಣವಾಗಿ ಕ್ಷೀಣಿಸುತ್ತಿದೆ. ಪರಿಣಾಮವಾಗಿ ವನ್ಯಜೀವಿಗಳು ತನ್ನ ನೆಲೆಯನ್ನು ಕಳೆದುಕೊಳ್ಳತ್ತಿವೆ. ಹಾಗಾಗಿ ಜನರಲ್ಲಿ ವನ್ಯಜೀವಿಗಳ ಬಗ್ಗೆ ಅರಿವು ಮೂಡಿಸಲು ಸೋಮವಾರ ಕಬ್ಬನ್ ಪಾರ್ಕ್ ನಿಂದ ಲಾಲ್‍ಬಾಗ್ ವರೆಗೂ ವಾಕಥಾನ್ ಆಯೋಜಿಸಲಾಗಿತ್ತು.

    ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದ ಪ್ರಾಣಿ ಪ್ರಿಯರು, ವನ್ಯ ಸಂರಕ್ಷಕರು ಸಾಂಸ್ಕೃತಿಕ ಕಲಾ ತಂಡದೊಂದಿಗೆ ಕುಣಿದು ಕುಪ್ಪಳಿಸಿದ್ರು. ಜೊತೆಗೆ ಸಚಿವ ರಮಾನಾಥ ರೈ ಸಹ ಹುಲಿ ವೇಷಧಾರಿಗಳ ಜೊತೆ ಫುಲ್ ಜೋಶ್‍ನಲ್ಲಿ ಸ್ಟೆಪ್ ಹಾಕಿದ್ರು.

    http://youtube.com/watch?v=23igDB12Xc0