ರಾಮನಗರ: ನಗರದ (Ramnagar) ದಯಾನಂದ ಸಾಗರ ಆಸ್ಪತ್ರೆಯ (Hospital) ಶೌಚಗುಂಡಿಯಲ್ಲಿ ನವಜಾತ ಶಿಶುವಿನ (Baby) ಶವ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೇಪಾಳ (Nepal) ಮೂಲದ ಇಬ್ಬರು ಆರೋಪಿಗಳನ್ನು ಹಾರೋಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಅಮೃತ ಕುಮಾರಿ (21) ಹಾಗೂ ಸುರೇಂದ್ರ ಮೆಹ್ರಾ (22) ಎಂದು ಗುರುತಿಸಲಾಗಿದೆ. ನ.24ರಂದು ದಯಾನಂದ ಸಾಗರ ಆಸ್ಪತ್ರೆಯ ಶೌಚಗುಂಡಿಯಲ್ಲಿ ನವಜಾತ ಶಿಶುವಿನ ಶವ ಪತ್ತೆಯಾಗಿತ್ತು. ಆಗ ತಾನೆ ಹುಟ್ಟಿದ ಮಗುವನ್ನ ಟಾಯ್ಲೆಟ್ ಕಮೋಡ್‍ಗೆ ಹಾಕಿ ಆರೋಪಿಗಳು ಫ್ಲಶ್ ಮಾಡಿದ್ದರು. ಬಳಿಕ ಅಲ್ಲಿಂದ ಪರಾರಿಯಾಗಿದ್ದರು.
ಶೌಚಾಲಯ ಬ್ಲಾಕ್ ಆಗಿದ್ದ ಪರಿಣಾಮ ಆಸ್ಪತ್ರೆ ಸಿಬ್ಬಂದಿ ಪರಿಶೀಲನೆ ನಡೆಸಿದಾಗ ಶೌಚಗುಂಡಿಯಲ್ಲಿ ಮಗು ಪತ್ತೆಯಾಗಿತ್ತು. ಈ ಸಂಬಂಧ ಹಾರೋಹಳ್ಳಿ ಪೊಲೀಸ್ ಠಾಣೆಗೆ ದಯಾನಂದ ಸಾಗರ ಆಸ್ಪತ್ರೆ ವೈದ್ಯರು ದೂರು ದಾಖಲಿಸಿದ್ದರು. ಪ್ರಕರಣ ತನಿಖೆ ನಡೆಸಿದ್ದ ಪೊಲೀಸರು ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹಾರೋಹಳ್ಳಿ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡ್ತಿದ್ದ ಯುವಕ ಹಾಗೂ ಯುವತಿ ಕಳೆದ ಎರಡು ವರ್ಷಗಳಿಂದ ಮದುವೆ ಆಗದೇ ಜೊತೆಯಲ್ಲಿ ವಾಸವಾಗಿದ್ದರು. ಗರ್ಭಿಣಿ ಆಗಿದ್ದ ಯುವತಿಗೆ ಹೊಟ್ಟೆನೋವು ಕಾಣಿಸಿಕೊಂಡ ಹಿನ್ನೆಲೆ ಆಸ್ಪತ್ರೆಗೆ ಬಂದಿದ್ದರು. ಈ ವೇಳೆ ಟಾಯ್ಲೆಟ್‍ನಲ್ಲಿ ಮಗು ಜನಿಸಿದೆ. ಬಳಿಕ ಇಬ್ಬರೂ ಸೇರಿ ಯಾರಿಗೂ ತಿಳಿಯದಂತೆ ಟಾಯ್ಲೆಟ್ ಕಮೋಡ್‍ಗೆ ಮಗು ಹಾಕಿ ಫ್ಲಶ್ ಮಾಡಿ ಎಸ್ಕೇಪ್ ಆಗಿದ್ದರು.
ಪೋಲೀಸರು ಸಿಸಿಟಿವಿ ವಿಡಿಯೋ ಆಧರಿಸಿ ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
– ಕಾಂಗ್ರೆಸ್ ಭ್ರಷ್ಟಾಚಾರದ ಕಸ ಕ್ಲೀನ್ ಮಾಡಲು ಹೊರಟಿದ್ದೇವೆ
ರಾಮನಗರ: ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ಹಾಗೂ ಬಿಜೆಪಿ (BJP- JDS) ಅಶ್ವಮೇಧ ಆರಂಭಿಸಿದ್ದು, ಈ ಸರ್ಕಾರದ ಅಂತಿಮ ಕಾಲ ಹತ್ತಿರದಲ್ಲಿಯೇ ಇದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಭವಿಷ್ಯ ನುಡಿದಿದ್ದಾರೆ.
ರಾಮನಗರದಲ್ಲಿ (Ramnagar) ಮೈಸೂರು ಚಲೋ (Mysuru Chalo) ಪಾದಯಾತ್ರೆಯಲ್ಲಿ ಮಾತನಾಡಿದ ಅವರು, ಪ್ರತಿಯೊಂದಕ್ಕೂ ಲೆಕ್ಕ ಕೊಡುತ್ತೇವೆ. ನಿಮ್ಮ ಲೆಕ್ಕ ಚುಕ್ತಾ ಮಾಡುತ್ತೇವೆ. ಅಶ್ವಮೇಧಕ್ಕೆ ಚಾಲನೆ ಕೊಟ್ಟಿದ್ದೇವೆ. ನಿಮ್ಮನ್ನು ಮುಗಿಸುವ ಕಾಲ ಹತ್ತಿರ ಬಂದಿದೆ. ಈ ಸರ್ಕಾರ ಯಡಿಯೂರಪ್ಪ ಅವರ ವಿಷಯದಲ್ಲಿ ಅಮಾನುಷವಾಗಿ ವರ್ಸಿಸಿದೆ. ಅವರ ಮನಸ್ಸಿಗೆ ನೋವು ಕೊಟ್ಟಿದೆ. ನಿಮ್ಮ ಪಾಪದ ಕೊಡ ತುಂಬಿ, ನಿಮ್ಮ ಅಂತಿಮ ಕಾಲ ಹತ್ತಿರಕ್ಕೆ ಬಂದಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಬಿಜೆಪಿ-ಜೆಡಿಎಸ್ ಶವಯಾತ್ರೆ ನಡೆಯುತ್ತಿದೆ ಎಂದು ಹೇಳುತ್ತಿದ್ದಾರೆ. ಕಲಬುರ್ಗಿಯಲ್ಲಿ ಒಬ್ಬ ಪೊಲೀಸ್ ಅಧಿಕಾರಿಯ ಶವಯಾತ್ರೆ ಮಾಡಿಸಿದ್ದಾರಲ್ಲ, ಆ ಅಧಿಕಾರಿಯನ್ನು ಬಲಿ ತೆಗೆದುಕೊಂಡು ಆ ಕುಟುಂಬವನ್ನು ಬೀದಿಪಾಲು ಮಾಡಿದ್ದೀರಲ್ಲ. ನಿಮ್ಮ ಪ್ರಾಮಾಣಿಕತೆ ಎಂದರೆ ಇದೇನಾ? ಪೊಲೀಸ್ ಅಧಿಕಾರಿಗಳೇ ನೀವು ಜನರಿಗೆ, ಕರ್ತವ್ಯಕ್ಕೆ ನಿಷ್ಠರಾಗಿ ಕೆಲಸ ಮಾಡಿ. ನಮ್ಮ ಕಾರ್ಯಕರ್ತರ ಮೇಲೆ ಸಿಕ್ಕ ಸಿಕ್ಕವರಿಗೆಲ್ಲ ಕೇಸ್ ಹಾಕುತ್ತಿದ್ದೀರಿ. ಜಿಲ್ಲೆಯಲ್ಲಿ ಏನು ನಡೆಯುತ್ತಿದೆ ಎನ್ನುವುದು ನನ್ನ ಗಮನಕ್ಕೂ ಬರುತ್ತಿದೆ. ಪರಮೇಶ್ವರ್ ಅವರೇ, ಇಲಾಖೆಯಲ್ಲಿ ಏನು ನಡೆಯುತ್ತಿದೆ ಎಂದು ಗಮನಿಸಿ. ಒಬ್ಬ ಪೊಲೀಸ್ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತನ ಮಡದಿಯ ಪರಿಸ್ಥಿತಿ ಏನು? ಈಗಲಾದರೂ ಪೊಲೀಸರು ಈ ಸರ್ಕಾರದ ವರ್ತನೆಯ ಬಗ್ಗೆ ಎಚ್ಚೆತ್ತುಕೊಳ್ಳಬೇಕು ಎಂದು ಅವರು ಹರಿಹಾಯ್ದಿದ್ದಾರೆ.
ನಾಡಿನ ಬಡ ಜನತೆ ಬೆವರು ಸುರಿಸಿ, ತೆರಿಗೆ ರೂಪದಲ್ಲಿ ಕಟ್ಟಿದ ಹಣ ಲೂಟಿ ಆಗುತ್ತಿದೆ. ಪರಿಶಿಷ್ಟರ ಹಣ ಲೂಟಿ ಮಾಡಿರುವ ಈ ಸರ್ಕಾರ ಇರಬೇಕೋ, ಬೇಡವೋ ಎನ್ನುವ ಕಾರ್ಯಕ್ರಮ ಇದು. ರಾಜ್ಯದಲ್ಲಿ ಭ್ರಷ್ಟಾಚಾರ ನಿಲ್ಲಿಸುತ್ತೇವೆ ಎಂದು ಹೇಳಿ ಅಧಿಕಾರಕ್ಕೆ ಬಂದಿದ್ದೀರಿ. ಮಾತೆತ್ತಿದರೆ 136 ಸೀಟು ಗೆದ್ದಿದ್ದೇವೆ ಎನ್ನುತ್ತೀರಿ. ಶೀಘ್ರದಲ್ಲೇ ನೀವು 16 ಸೀಟಿಗೆ ಬಂದು ನಿಲ್ಲುವ ದಿನ ದೂರವಿಲ್ಲ ಎಂದು ಅವರು ಕುಟುಕಿದ್ದಾರೆ.
ನನ್ನ ಬಗ್ಗೆ, ವಿಜಯೇಂದ್ರ ಬಗ್ಗೆ ಸಿಡಿ ಶಿವು ಅವರು ಅತ್ಯಂತ ಲಘುವಾಗಿ ಮಾತಾಡಿದ್ದಾರೆ. ನನ್ನ ಬಗ್ಗೆ, ನನ್ನ ವೃತ್ತಿಯ ಬಗ್ಗೆ ಮಾತನಾಡಿದ್ದಾರೆ. ಹೌದು. ಬೆಂಗಳೂರಿನಲ್ಲಿ ಕಸ ತೆಗೆಯುವ ಕೆಲಸ ಮಾಡುತ್ತಿದ್ದೆ. ಜಯನಗರ, ವಿಲ್ಸನ್ ಗಾರ್ಡನ್, ಸುಧಾಮನಗರ ವಾರ್ಡುಗಳಲ್ಲಿ ಕಸ ವಿಲೇವಾರಿ ಮಾಡುವ ಗುತ್ತಿಗೆ ತೆಗೆದುಕೊಂಡಿದ್ದೆ. ಯಾರೋ ಹಿರಿಯರು ನನಗೆ ರಾಜಕೀಯಕ್ಕೆ ಬರಲು ಹೇಳಿ, ನೀನು ಕಸ ತೆಗೆಯುವ ಜಾಗ ಬೇರೆ ಇದೆ. ಅಲ್ಲಿ ಹೋಗಿ ಕೆಲಸ ಮಾಡು ಎಂದು ಹೇಳಿದರು. ಅದಕ್ಕೆ ರಾಜಕೀಯಕ್ಕೆ ಬಂದೆ. ನಾನು ಮತ್ತು ಬಿಜೆಪಿಯವರು ಕಾಂಗ್ರೆಸ್ ಭ್ರಷ್ಟಾಚಾರದ ಕಸ ಕ್ಲೀನ್ ಮಾಡಲು ಹೊರಟಿದ್ದೇವೆ. ಕರ್ನಾಟಕ ರಾಜ್ಯದ ಉದ್ದಗಲಕ್ಕೂ ವ್ಯವಸ್ಥೆಯನ್ನು ಹಾಳು ಮಾಡಿದ್ದೀರಿ. ಅದನ್ನೇ ಸ್ವಚ್ಛ ಮಾಡುವ ಕೆಲಸವನ್ನು ನಾವು ಮಾಡುತ್ತಿದ್ದೇವೆ ಎಂದು ಡಿಸಿಎಂಗೆ ತಿರುಗೇಟು ಕೊಟ್ಟಿದ್ದಾರೆ.
– ಚುನಾವಣಾಧಿಕಾರಿ ಮೇಲೆ ಕಾರು ಹತ್ತಿಸಲು ಯತ್ನಿಸಿ ಜೈಲು ಸೇರಿದ್ದ ಆರೋಪಿಗಳು
ರಾಮನಗರ: ಡೈರಿ ಚುನಾವಣೆ ವಿಚಾರದಲ್ಲಿ ಚುನಾವಣಾಧಿಕಾರಿ ಮೇಲೆ ಕಾರು ಹತ್ತಿಸಲು ಯತ್ನಿಸಿದ್ದ ಪ್ರಕರಣದ ಆರೋಪಿಗಳು ಜೈಲಿನಿಂದ ಹೊರಬಂದು ಮತ್ತೆ ಗ್ರಾಮದಲ್ಲಿ ದಾಂಧಲೆ ನಡೆಸಿದ ಆರೋಪ ಕೇಳಿಬಂದಿದೆ.
ನಾಲ್ಕು ತಿಂಗಳ ಬಳಿಕ ಬೇಲ್ ಮೇಲೆ ಜೈಲಿನಿಂದ ಬಿಡುಗಡೆಯಾಗಿ ಗ್ರಾಮಕ್ಕೆ ಬಂದಿರುವ ಶ್ರೀನಿವಾಸ್ ಮತ್ತು ಹೇಮಂತ್, ದೂರು ಕೊಟ್ಟ ಗ್ರಾಮಸ್ಥರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಸಂಬಂಧ ಕುದೂರು ಪೊಲೀಸ್ (Police) ಠಾಣೆ ವ್ಯಾಪ್ತಿಯಲ್ಲಿ ಗ್ರಾಮಸ್ಥರು ದೂರು ದಾಖಲಿಸಿದ್ದಾರೆ. ತಮಗೆ ರಕ್ಷಣೆ ಕೊಡುವಂತೆ ಪೊಲೀಸರ ಬಳಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಚುನಾವಣಾಧಿಕಾರಿಗಳ ಮೇಲೆ ಹಲ್ಲೆ ನಡೆಸಿ ಬ್ಯಾಲೆಟ್ ಪೇಪರ್ ದೋಚಿದ ಕಿಡಿಗೇಡಿಗಳು
ಮಾಗಡಿ ತಾಲೂಕಿನ ಹುಳ್ಳೇನಹಳ್ಳಿ ಗ್ರಾಮದಲ್ಲಿ ಕಳೆದ ಸೆ.27 ರಂದು ಗ್ರಾಮದ ಡೈರಿ ಚುನಾವಣೆ ತಡೆಯಲು ಕೆಲ ಕಿಡಿಗೇಡಿಗಳು ಚುನಾವಣಾಧಿಕಾರಿಗಳ ಮೇಲೆ ಕಾರು ಹತ್ತಿಸಲು ಯತ್ನಿಸಿದ್ದರು. ಪ್ರಕರಣ ಸಂಬಂಧ ಮೂರ್ನಾಲ್ಕು ಮಂದಿಯನ್ನ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದರು. ಇದನ್ನೂ ಓದಿ: ಪೊಲೀಸ್ ಕಸ್ಟಡಿಯಿಂದ ಕಳ್ಳ ಎಸ್ಕೇಪ್ – ಪಿಎಸ್‌ಐ ಸೇರಿ ಐವರು ಪೊಲೀಸರು ಸಸ್ಪೆಂಡ್
ರಾಮನಗರ: ಕಳೆದ ಕೆಲ ದಿನಗಳಿಂದ ನಾಪತ್ತೆಯಾಗಿರುವ (Missing) ಮಾಜಿ ಸಚಿವ ಸಿಪಿ ಯೋಗೇಶ್ವರ್ (CP Yogeshwara) ಅವರ ಬಾವ ಮಹದೇವಯ್ಯ (Mahadevaiah) ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಅವರ ಕಾರು (Car) ರಾಮಾಪುರದಲ್ಲಿ ಪತ್ತೆಯಾಗಿದೆ. ಕಾರಿನ ಹಿಂಭಾಗದಲ್ಲಿ ರಕ್ತದ ಮಾದರಿಯ ಕಲೆ ಕಾಣಿಸಿಕೊಂಡಿದ್ದು, ಮಹದೇವಯ್ಯ ಕಿಡ್ನ್ಯಾಪ್ ಮಾಡಿರುವ ಶಂಕೆಗೆ ಇನ್ನಷ್ಟು ಪುಷ್ಠಿ ದೊರೆತಿದೆ.
ಡಿಸೆಂಬರ್ 1 ಶುಕ್ರವಾರ ತಡರಾತ್ರಿಯಿಂದ ಮಹದೇವಯ್ಯ ನಾಪತ್ತೆಯಾಗಿದ್ದಾರೆ. ಅವರ ಬ್ರೀಜ್ಜಾ ಕಾರು ಕೂಡಾ ಅಂದು ನಾಪತ್ತೆ ಆಗಿತ್ತು. ಇದೀಗ ಕಾರು ಪತ್ತೆಯಾಗಿದ್ದು, ಮಹದೇವಯ್ಯ ಸುಳಿವು ಮಾತ್ರ ದೊರೆತಿಲ್ಲ. ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ ಮಹದೇವಯ್ಯ ಕೋರ್ಟ್‌ನಲ್ಲಿ ಹಲವು ಜಮೀನು ವ್ಯಾಜ್ಯ ನಡೆಸುತ್ತಿದ್ದರು. ಮಹದೇವಯ್ಯ ನಾಪತ್ತೆ ಹಿಂದೆ ಹಲವು ಅನುಮಾನ ಹುಟ್ಟಿಕೊಂಡಿದೆ. ಜಮೀನಿನ ವಿಚಾರಕ್ಕೆ ಮಹದೇವಯ್ಯ ಕಿಡ್ನಾಪ್ ಆಗಿರುವ ಶಂಕೆಯಿದೆ.
ಇದೀಗ ರಾಮಾಪುರದಲ್ಲಿ ಪತ್ತೆಯಾಗಿರುವ ಕಾರನ್ನು ಫಾರೆನ್ಸಿಕ್ ಟೀಂ ಪರಿಶೀಲನೆ ನಡೆಸಿದೆ. ರಾಮನಗರದ ಪೊಲೀಸ್ ತನಿಖಾ ಟೀಂನಿಂದಲೂ ಕಾರಿನ ಪರಿಶೀಲನೆ ನಡೆದಿದೆ. ಸದ್ಯ ರಾಮಾಪುರ ಪೊಲೀಸ್ ಠಾಣೆಯಲ್ಲಿ ಕಾರನ್ನು ಇರಿಸಲಾಗಿದೆ. ತನಿಖಾ ತಂಡ ನಿನ್ನೆ ತಡರಾತ್ರಿ ಭೇಟಿ ಕೊಟ್ಟು ಪರಿಶೀಲನೆ ನಡೆಸಿದೆ. ಇದನ್ನೂ ಓದಿ: Mizoram Election Results: ZPMಗೆ ಮುನ್ನಡೆ – ಮಿಜೋರಾಂನಲ್ಲೂ ಕಾಂಗ್ರೆಸ್‌ಗೆ ಹಿನ್ನಡೆ
ಕಾರು ಹನೂರು ತಾಲೂಕಿನ ರಾಮಾಪುರಕ್ಕೆ ಬಂದಿದ್ದು ಹೇಗೆ ಎನ್ನುವ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ. ಕಾರು ಬಂದಿರುವ ಮಾರ್ಗದ ಬಗ್ಗೆ ಸಿಸಿಟಿವಿ ಪರಿಶೀಲನೆ ನಡೆಸುತ್ತಿದ್ದಾರೆ. ಕಾರಿನ ಹಿಂಭಾಗದಲ್ಲಿ ರಕ್ತದ ಮಾದರಿ ಗುರುತು ಪತ್ತೆಯಾಗಿದ್ದು, ಕಾರನ್ನು ನಿಲ್ಲಿಸುವಾಗ ಕಂಪ್ಲೀಟ್ ಲಾಕ್ ಮಾಡಿ ನಿಲ್ಲಿಸಿದ್ದಾರೆ.
ಮಹದೇವಯ್ಯ ಅನುಮಾನಾಸ್ಪದ ನಾಪತ್ತೆ ಪ್ರಕರಣ ಪೊಲೀಸರಿಗೆ ತಲೆನೋವೆನಿಸಿಕೊಂಡಿದೆ. 4 ವಿಶೇಷ ತಂಡಗಳಿಂದ ಮಹದೇವಯ್ಯಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ. ಮೊನ್ನೆ ಅನಾಮಿಕ ವ್ಯಕ್ತಿಯಿಂದ ಮಹದೇವಯ್ಯ ಫೋನ್ ರಿಸೀವ್ ಆಗಿತ್ತು. ಇದೀಗ ಅವರ ಫೋನ್ ಕಂಪ್ಲೀಟ್ ಸ್ವಿಚ್ ಆಫ್ ಆಗಿದೆ. ಇದನ್ನೂ ಓದಿ: ಪೊಲೀಸರ ಸರ್ಪಗಾವಲಿನಲ್ಲಿ ಬೆಳಗಾವಿ ಅಧಿವೇಶನ – ಭದ್ರತೆಗೆ 5,000 ಸಿಬ್ಬಂದಿ ನಿಯೋಜನೆ
ರಾಮನಗರ: ಟ್ರಕ್ (Truck) ಒಂದು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ದಾಟಿ ಪಕ್ಕದ ರಸ್ತೆಗಳಲ್ಲಿ ಚಲಿಸಿದ ಘಟನೆ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ (Mysuru Bengaluru Expressway) ನಡೆದಿದೆ.
ಮೈಸೂರು ಕಡೆಯಿಂದ ಬೆಂಗಳೂರಿನತ್ತ ವೇಗವಾಗಿ ಲಾರಿ ಚಲಿಸುತ್ತಿತ್ತು. ಈ ವೇಳೆ ಚನ್ನಪಟ್ಟಣ ತಾಲೂಕಿನ ಸಂಕಲಗೆರೆ ಗೇಟ್ ಸಮೀಪ ಡಿವೈಡರ್ ದಾಟಿ ಪಕ್ಕದ ರಸ್ತೆಗೆ ನುಗ್ಗಿದೆ. ಈ ಸಮಯದಲ್ಲಿ ಹೆದ್ದಾರಿಯಲ್ಲಿ ಯಾವುದೇ ವಾಹನ ಸಂಚರಿಸದ ಪರಿಣಾಮ ಯಾವುದೇ ಅಪಘಾತ ಸಂಭವಿಸಿಲ್ಲ. ಇದರಿಂದ ಭೀಕರ ಅಪಘಾತವೊಂದು ತಪ್ಪಿದಂತಾಗಿದೆ. ಟ್ರಕ್ ನಿಯಂತ್ರಣ ಕಳೆದುಕೊಂಡು ರಸ್ತೆಗೆ ನುಗ್ಗಿದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಧರ್ಮಕ್ಕಾಗಿಯೇ ನನ್ನ ಗಂಡನ ಕೊಲೆ ಆಗಿದೆ: ಯುವಬ್ರಿಗೇಡ್ ಕಾರ್ಯಕರ್ತನ ಪತ್ನಿ ಆರೋಪ
ಮೈಸೂರು – ಬೆಂಗಳೂರು ಹೆದ್ದಾರಿಯಲ್ಲಿ 6 ತಿಂಗಳಲ್ಲಿ 512 ಅಪಘಾತಗಳಾಗಿವೆ. ಅದರಲ್ಲಿ ಇಲ್ಲಿಯ ವರೆಗೂ 123 ಜನ ಮೃತಪಟ್ಟಿದ್ದಾರೆ. 575 ಜನರಿಗೆ ತೀವ್ರ ಗಾಯಗಳಾಗಿವೆ. ಹೆದ್ದಾರಿಯಲ್ಲಿ ಅಪಘಾತಗಳನ್ನು ತಡೆಯಲು ಪೊಲೀಸರು ವಾಹನಗಳ ವೇಗಕ್ಕೆ ಮಿತಿ ನಿಗದಿ ಪಡಿಸಿದ್ದಾರೆ. ಅಲ್ಲದೇ ವಿವಿಧ ಕ್ರಮಗಳನ್ನು ಕೈಗೊಂಡು ಅಪಘಾತಗಳ ನಿಯಂತ್ರಣಕ್ಕೆ ಮುಂದಾಗಿದ್ದಾರೆ. ಇದನ್ನೂ ಓದಿ: 15 ದಿನದಲ್ಲಿ 30 ಜನರು ಸಸ್ಪೆಂಡ್: ಮುನಿರತ್ನ
ರಾಮನಗರ: ರಾಜ್ಯದ ರಾಜಧಾನಿ ಮತ್ತು ಸಾಂಸ್ಕೃತಿಕ ನಗರಿಯ ನಡುವಿನ ಸಂಚಾರದ ಸಮಯ ತಗ್ಗಿಸುವ ಮಹತ್ವಾಕಾಂಕ್ಷೆಯೊಂದಿಗೆ ಆರಂಭಗೊಂಡ ಬೆಂಗಳೂರು – ಮೈಸೂರು ದಶಪಥ ಹೆದ್ದಾರಿಯಲ್ಲಿ (Bengaluru – Mysuru Expressway) 100ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.
4 ತಾಸುಗಳ ಬೆಂಗಳೂರು-ಮೈಸೂರು ನಡುವಿನ ಪ್ರಯಾಣ ಸಮಯದಲ್ಲಿ 75 ನಿಮಿಷಗಳಿಗೆ ಕಡಿಮೆ ಮಾಡುವ ಉದ್ದೇಶದೊಂದಿಗೆ ಆರಂಭಗೊಂಡ ಎಕ್ಸ್‌ಪ್ರೆಸ್ ವೇಯಲ್ಲಿ ನಿರಂತರ ಅಪಘಾತಗಳು ಸಂಭವಿಸುತ್ತಿವೆ. ಇದನ್ನೂ ಓದಿ: ಅಪಾರ್ಟ್‍ಮೆಂಟ್ ಮೇಲಿಂದ ಬಿದ್ದು ಮಹಿಳೆ ಸಾವು
2022ರ ಸೆಪ್ಟೆಂಬರ್ ಮೊದಲ ವಾರದಿಂದ ಹೆದ್ದಾರಿಯಲ್ಲಿ ಸಂಚಾರ ಆರಂಭಿಸಲಾಗಿತ್ತು. ಅಂದಿನಿಂದ ಇಲ್ಲಿಯವರೆಗೆ 849 ರಸ್ತೆ ಅಪಘಾತಗಳು ಸಂಭವಿಸಿ 155 ಮಂದಿ ಸಾವಿಗೀಡಾಗಿದ್ದು, 213 ಮಂದಿ ತೀವ್ರ ಗಾಯಗೊಂಡಿದ್ದಾರೆ. ರಾಮನಗರ (Ramnagar) ಜಿಲ್ಲಾ ವ್ಯಾಪ್ತಿಯಲ್ಲಿ ಇದುವರೆಗೆ 279 ಅಪಘಾತಗಳು ಸಂಭವಿಸಿದ್ದು, 100 ಮಂದಿ ಸಾವಿಗೀಡಾಗಿದ್ದರೆ.
ಅಪಘಾತಕ್ಕೆ ಕಾರಣ ಏನು?
ರಾಮನಗರ ಹಾಗೂ ಚನ್ನಪಟ್ಟಣ (Channapatana) ನಡುವೆ 55.50 ಕಿ.ಮೀನಷ್ಟಿರುವ ಬೈಪಾಸ್ ರಸ್ತೆ ಅಪಘಾತಗಳ ಹಾಟ್‍ಸ್ಪಾಟ್ ಆಗಿದೆ. ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ಅಪಘಾತಗಳಲ್ಲಿ ಹೆಚ್ಚಿನ ಪ್ರಕರಣ ಈ ಬೈಪಾಸ್ ರಸ್ತೆಯಲ್ಲೇ ಸಂಭವಿಸಿದೆ. ಎಕ್ಸ್‌ಪ್ರೆಸ್ ವೇನಲ್ಲಿ ವೇಗಮಿತಿ ಇಲ್ಲದಿರುವುದು, ವಾಹನಗಳು ಲೈನ್ ನಿಯಮವನ್ನು ಪಾಲಿಸದೇ ಇರುವುದು, ಪದೇ ಪದೆ ವಾಹನಗಳು ಲೈನ್‍ಕ್ರಾಸ್ ಮಾಡುವುದು ಅಪಘಾತಕ್ಕೆ ಮುಖ್ಯ ಕಾರಣವಾಗಿದೆ. ಅಲ್ಲದೇ ಬೈಪಾಸ್ ರಸ್ತೆಗಳಲ್ಲಿ ಪ್ರಯಾಣಿಕರಿಗೆ ಸೂಚನಾ ಫಲಕ ಇಲ್ಲದಿರುವುದು. ತುರ್ತು ಸಂದರ್ಭದಲ್ಲಿ ಅಂಬುಲೆನ್ಸ್ ಸೇವೆ, ತುರ್ತು ಚಿಕಿತ್ಸಾ ವ್ಯವಸ್ಥೆ ಲಭ್ಯವಿಲ್ಲದಿರೋದು ಸಾವಿನ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ.
ದಶಪಥ ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗಿರುವ ಬಗ್ಗೆ ಪೊಲೀಸ್ ಇಲಾಖೆ ಕೂಡಾ ಹಲವು ಮುಂಜಾಗ್ರತಾ ಕ್ರಮವಹಿಸಿದೆ. ಈಗಾಗಲೇ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜೊತೆ ಹೈವೆ ಪರಿಶೀಲನೆ ನಡೆಸಿ ಹಲವು ಬ್ಲಾಕ್ ಸ್ಪಾಟ್‍ಗಳನ್ನ ಗುರುತು ಮಾಡಿದೆ. ಅಲ್ಲದೇ ಕೆಲವೆಡೆ ಅವೈಜ್ಞಾನಿಕ ಕಾಮಗಾರಿ ಇರುವುದನ್ನ ಸರಿಪಡಿಸಲು ಹೆದ್ದಾರಿ ಪ್ರಾಧಿಕಾರಕ್ಕೆ ಸೂಚಿಸಿದೆ. ಅಲ್ಲದೇ ಸೂಚನಾ ಫಲಕ, ಸ್ಪೀಡ್ ಲಿಮಿಟ್ ಸೆನ್ಸರ್‌ಗಳ ಅಳವಡಿಕೆ ಸೇರಿ ಹಲವು ನ್ಯೂನತೆ ಸರಿಪಡಿಸುವಂತೆ ತಿಳಿಸಲಾಗಿದೆ. ಅಲ್ಲದೇ ಹೆದ್ದಾರಿಯಲ್ಲಿ ವಾಹನ ಸವಾರರಿಗೆ ರೋಡ್ ಸೇಫ್ಟಿ ಬಗ್ಗೆಯೂ ಅರಿವು ಮೂಡಿಸಲು ಪೊಲೀಸ್ ಇಲಾಖೆ ಮುಂದಾಗಿದೆ. ಇದನ್ನೂ ಓದಿ: ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಬಂದಿದ್ದ ಗ್ರಾಮ ಪಂಚಾಯ್ತಿ ಸದಸ್ಯೆಯರ ಕಿಡ್ನಾಪ್!
ರಾಮನಗರ: ಕುಮಾರಸ್ವಾಮಿ ಅವರಿಗೆ ನೆಲೆ ನೀಡಿದ್ದ ರಾಮನಗರ ಜಿಲ್ಲೆಯಲ್ಲಿ ಜೆಡಿಎಸ್‍ಗೆ (JDS) ಕಾಂಗ್ರೆಸ್ (Congress) ಶಾಕ್ ನೀಡಿದೆ. ಜಿಲ್ಲೆಯಲ್ಲಿ ಮೂರು ಕ್ಷೇತ್ರಗಳನ್ನು ಕಾಂಗ್ರೆಸ್ ಗೆದ್ದುಕೊಂಡು, ಒಂದು ಕ್ಷೇತ್ರವನ್ನು ಜೆಡಿಎಸ್ ಗೆದ್ದುಕೊಂಡಿದೆ.
ರಾಮನಗರ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಹುಸೇನ್ 87,690 ಮತಗಳಿಂದ ಗೆಲುವು ಸಾಧಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ 76,975 ಸೋಲು ಕಂಡಿದ್ದಾರೆ. ಬಿಜೆಪಿ (BJP) ಅಭ್ಯರ್ಥಿ ಗೌತಮ್ ಗೌಡ 12,912 ಪಡೆದು ಸೋತಿದ್ದಾರೆ. ಕೈ ಅಭ್ಯರ್ಥಿಯ ಗೆಲುವಿನ ಅಂತರ 10,715 ಮತಗಳಾಗಿದೆ. ಇದನ್ನೂ ಓದಿ: ಹಾಸನದಲ್ಲಿ ಪ್ರೀತಂ ಗೌಡಗೆ ಸೋಲು – ಜಿಲ್ಲೆಯಲ್ಲಿ 2 ಸ್ಥಾನ ಗೆದ್ದ ಬಿಜೆಪಿ
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಹೆಚ್.ಡಿ.ಕುಮಾರಸ್ವಾಮಿ 96,5922 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಗಂಗಾಧರ್ 15,374 ಸೋಲು ಕಂಡಿದ್ದಾರೆ. ಬಿಜೆಪಿ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ 80,677 ಮತ ಪಡೆದಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ಗೆಲುವಿನ ಅಂತರ 15,915 ಮತಗಳಾಗಿದೆ.
ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಶಿವಕುಮಾರ್ 1,43,023 ಗೆಲುವು ಸಾಧಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ನಾಗರಾಜು 20,631 ಸೋಲು ಕಂಡಿದ್ದಾರೆ. ಬಿಜೆಪಿ ಆರ್.ಅಶೋಕ್ 19,753 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ. ಡಿಕೆಶಿ 1,22,392 ಮತಗಳಿಂದ ಭರ್ಜರಿ ಜಯಗಳಿಸಿದ್ದಾರೆ.
ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಸಿ.ಬಾಲಕೃಷ್ಣ 94,650 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ಎ.ಮಂಜುನಾಥ್ 82,811 ಮತಗಳನ್ನು ಪಡೆದಿದ್ದಾರೆ. ಬಿಜೆಪಿ ಅಭ್ಯರ್ಥಿ ಪ್ರಸಾದ್ ಗೌಡ ಅವರು 20,197 ಮತಗಳನ್ನು ಪಡೆದು ಸೋತಿದ್ದಾರೆ. ಹೆಚ್.ಸಿ.ಬಾಲಕೃಷ್ಣ ಅವರು 11,839 ಮತಗಳನ್ನು ಪಡೆದು ಗೆದ್ದಿದ್ದಾರೆ. ಇದನ್ನೂ ಓದಿ: ಮೈಸೂರು ಜಿಲ್ಲೆಯ ಕ್ಷೇತ್ರಗಳ ಚುನಾವಣಾ ಫಲಿತಾಂಶ
ರಾಮನಗರ: ಕೆಲಸ ಮಾಡುವವರನ್ನು ಗಮನದಲ್ಲಿಟ್ಟುಕೊಂಡು ಮೊದಲ ಹಂತದ ಟಿಕೆಟ್ ಘೋಷಣೆಯಾಗಿದೆ. ಕಾಂಗ್ರೆಸ್‍ನಲ್ಲಿ (Congress) ಪ್ರಾಮಾಣಿಕರಿಗೆ ಮಾತ್ರ ಅವಕಾಶ. ಆತುರ ಇದ್ದರೆ ಏನೂ ಮಾಡಲಾಗುವುದಿಲ್ಲ. ಪ್ರಸನ್ನ ಗೌಡ ಜೆಡಿಎಸ್ (JDS) ಸೇರ್ಪಡೆ ಆಗಿರೋದು ಆಶ್ಚರ್ಯ ಏನಿಲ್ಲ. ಇದು ನಿರೀಕ್ಷಿತ ಬೆಳವಣಿಗೆ ಎಂದು ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ (D.K.Suresh) ರಾಮನಗರದಲ್ಲಿ (Ramnagar) ಪ್ರಸನ್ನ ಗೌಡ ವಿರುದ್ಧ ಚಾಟಿ ಬೀಸಿದ್ದಾರೆ.
ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ (C.P. Yogeshwar) ಕಾಂಗ್ರೆಸ್ ಸೇರ್ಪಡೆ ಕುರಿತಾದ ವರದಿಗಾರರ ಪ್ರಶ್ನೆಗೆ, ಈ ಬಗ್ಗೆ ನನಗೆ ಗೊತ್ತಿಲ್ಲ. ವರಿಷ್ಠರ ಬಳಿ ಕೇಳಬೇಕು. ಇಲ್ಲವೇ ಯೋಗೇಶ್ವರ್ ಅವರನ್ನೇ ಕೇಳಬೇಕು. ನಾವು ಎಲ್ಲರನ್ನೂ ಮುಕ್ತವಾಗಿ ಆಹ್ವಾನ ಮಾಡಿದ್ದೇವೆ. ನಮ್ಮ ಪಕ್ಷದ ತತ್ವ ಸಿದ್ಧಾಂತ ಮೆಚ್ಚಿ ಯಾರು ಬೇಕಾದರೂ ಪಕ್ಷಕ್ಕೆ ಬರಬಹುದು. ಸಿ.ಪಿ ಯೋಗೇಶ್ವರ್ ಅವರ ಜೊತೆ ಮಾತಾನಾಡಲು ಅವರಷ್ಟು ದೊಡ್ಡವನಲ್ಲ ಎಂದು ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ಸಾರಸ್ ಕೊಕ್ಕರೆಯನ್ನು ಸಾಕಿದ್ದ ವ್ಯಕ್ತಿಗೆ ಅರಣ್ಯ ಇಲಾಖೆ ನೋಟಿಸ್
ಚನ್ನಪಟ್ಟಣದಲ್ಲಿ (Channapatna) ಅಭ್ಯರ್ಥಿಗಳ ಕೊರತೆ ಇಲ್ಲ. 6 ರಿಂದ 7 ಜನ ಆಕಾಂಕ್ಷಿಗಳು ನಮ್ಮಲ್ಲಿದ್ದಾರೆ. ಈ ಬಗ್ಗೆ ಕಾರ್ಯಕರ್ತರು, ಮುಖಂಡರ ಜೊತೆ ಸಭೆ ನಡೆಸಿ ಬಳಿಕ ಸೂಕ್ತ ಅಭ್ಯರ್ಥಿ ಆಯ್ಕೆ ಮಾಡುತ್ತೇವೆ ಎಂದಿದ್ದಾರೆ.
ರಾಮನಗರದಲ್ಲಿ ಸೋಮವಾರ ನಡೆಯಲಿರುವ ರಾಜೀವ್ ಗಾಂಧಿ (Rajeevgandi) ಆರೋಗ್ಯ ವಿವಿಯ ಶಂಕುಸ್ಥಾಪನೆ ಕಾರ್ಯಕ್ರಮದ ಆಹ್ವಾನದ ಬಗ್ಗೆ ಪ್ರತಿಕ್ರಿಯಿಸಿ, ಬೆಳಗ್ಗೆ ಯಾರೋ ಆಹ್ವಾನ ಪತ್ರ ನೀಡಿದ್ದಾರೆ. ರಾಜೀವ್ ಗಾಂಧಿ ವಿವಿಗೆ ಈಗಾಗಲೇ ಹಲವು ಬಾರಿ ಶಂಕುಸ್ಥಾಪನೆ ಆಗಿದೆ. ಈಗ ಬಿಜೆಪಿಯವರು ಮಾಡುತ್ತಿದ್ದಾರೆ. ಮುಂದೆ ಹೊಸ ಸರ್ಕಾರ ಬಂದ ಮೇಲೆ ಯಾರು ಪೂರ್ಣಗೊಳಿಸುತ್ತಾರೆ ಎಂಬುದನ್ನು ನೋಡೋಣ ಎಂದು ಹೇಳಿದ್ದಾರೆ. ಇದನ್ನೂ ಓದಿ: ಒಬ್ಬ ವ್ಯಕ್ತಿಯ ಅಂಗಾಂಗ ದಾನದಿಂದ 8 ಮಂದಿಗೆ ಜೀವದಾನ ಸಾಧ್ಯ – ಮನ್ ಕಿ ಬಾತ್‌ನಲ್ಲಿ ಮೋದಿ ಕರೆ
ರಾಮನಗರ: ಸಚಿವ ಆರ್. ಅಶೋಕ್ (R Ashok) ಜೊತೆಯಲ್ಲಿ ಇರುವವರೆಲ್ಲ ಕುಂಟ್ಕೊಂಡೆ ಓಡಾಡುತ್ತಾರೆ ಎಂದು ಸಂಸದ ಡಿ.ಕೆ ಸುರೇಶ್ (DK Suresh) ತಿರುಗೇಟು ನೀಡಿದರು.
ಡಿಕೆಶಿ ಹಾಗೂ ಹೆಚ್‌ಡಿಕೆ ಈಗ ಜೋಡೆತ್ತಲ್ಲಾ, ಕುಂಟೆತ್ತು ಎಂಬ ಕಂದಾಯ ಸಚಿವ ಆರ್.ಅಶೋಕ್ ಹೇಳಿಕೆಗೆ ತಿರುಗೇಟು ನೀಡಿ, ಇಂದು ರಾಮನಗರದಲ್ಲಿ (Ramnagar) ಮಾಧ್ಯಮದವರೊಂದಿಗೆ ಮಾತನಾಡಿದರು. ಅಶೋಕ್ ಜೊತೆಯಲ್ಲಿ ಇರುವವರೆಲ್ಲ ಕುಂಟುಕೊಂಡೇ ಓಡಾಡುತ್ತಾರೆ. ಬಿಜೆಪಿ (BJP) ಎಲ್ಲಾ ವಿಚಾರದಲ್ಲೂ ಕುಂಟುಕೊಂಡು ಬಂದಿದೆ. ಮಾಧ್ಯಮದಲ್ಲಿ ತೋರಿಸಿದ್ದೀರಾ ಯಾರ ಯಾರ ಸಿಡಿ ಬಂತು ಅಂತಾ. ಯಾರು ಲಂಚದಲ್ಲಿ ಸಿಕ್ಕಿಹಾಕಿಕೊಂಡು ರಾಜೀನಾಮೆ ಕೊಟ್ಟರು. ಬಿಜೆಪಿ ಕಾರ್ಯಕರ್ತರ ಆತ್ಮಹತ್ಯೆಗೆ ಯಾರು ಕಾರಣ? ಸುಮಾರು ಎಂಟು ಕೋಟಿ ಹಣ ವಿಚಾರದಲ್ಲಿ ಅವರೇ ಕುಂಟೆತ್ತು ಎಂದು ಕಿಡಿಕಾರಿದರು.
ಜಿಲ್ಲೆಯ ಅಭಿವೃದ್ಧಿ ಮಾಡದ ಇವರು ಜಗಳಕ್ಕೆ ಮಾತ್ರ ಸೀಮಿತ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಆರ್. ಅಶೋಕ್ ಅವರಿಗೆ ಅಭಿವೃದ್ಧಿ ಅಂದ್ರೆ ಗೊತ್ತಿದ್ಯಾ ಕೇಳಿ. ತಾಲೂಕು ಕಚೇರಿ, ಸರ್ವೇ, ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನಡೆಯುತ್ತಿರುವ ಲಂಚವನ್ನು ತಡೆಯಲು ಹೇಳಿ. ಆ ಮೇಲೆ ಅಭಿವೃದ್ಧಿ ಬಗ್ಗೆ ಅಶೋಕ್ ಮಾತಾಡಲಿ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಪ್ರಧಾನಿ ಮೋದಿಗೆ ಪತ್ರ ಬರೆದ 8 ಪಕ್ಷಗಳು – ಏನಿದೆ ಅದರಲ್ಲಿ? – ಪತ್ರ ಬರೆದವರಿಂದ ದೂರ ಉಳಿದ ಕಾಂಗ್ರೆಸ್
ಡಿ.ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಿರುದ್ಯೋಗಿಗಳಾಗಿದ್ದಾರೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ಟಾಂಗ್ ನೀಡಿದ ಅವರು, ಬಿಜೆಪಿ ಅವರಿಗೆ ಭಯ ಇದೆ. ದೇಶದ ಹಾಗೂ ರಾಜ್ಯದ ಜನರನ್ನು ನಿರುದ್ಯೋಗಿಗಳಾಗಿ ಮಾಡಿದ್ದೇವೆ. ಯುವಕರು ಬುದ್ಧಿವಂತರಾಗಿದ್ದಾರೆ. ನೀವು ಹಾಕಿದ ನಿರುದ್ಯೋಗ ಟೋಪಿಯನ್ನು ಯುವಕರು ನಿಮಗೆ ಹಾಕುತ್ತಾರೆ ಎಂದರು. ಇದನ್ನೂ ಓದಿ: ಇಮ್ರಾನ್ ಖಾನ್ ಅರೆಸ್ಟ್ ಮಾಡಲು ಮನೆಗೆ ಹೋದ ಪೊಲೀಸರು – ಎಷ್ಟು ಹುಡುಕಿದ್ರೂ ಪತ್ತೆಯಾಗ್ಲಿಲ್ಲ ಪಾಕ್ ಮಾಜಿ ಪಿಎಂ
ಉತ್ತರ ಕನ್ನಡ: ಹೆಂಡತಿಯನ್ನು ಕೊಲೆ (Murder) ಮಾಡಿ ನೀರಿನ ಬ್ಯಾರಲ್‍ನಲ್ಲಿ ಮುಚ್ಚಿಟ್ಟಿದ್ದ ಆರೋಪಿಯನ್ನು ಹಳಿಯಾಳ (Haliyal) ಹಾಗೂ ರಾಮನಗರ (Ramnagar) ಠಾಣೆಯ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ತುಕಾರಾಮ್ ತನಗಿಂತ ಹತ್ತು ವರ್ಷ ದೊಡ್ಡವಳಾದ ಶಾಂತಕುಮಾರಿಯನ್ನು ಮದುವೆಯಾಗಿದ್ದ. ಈ ವಿಚಾರವಾಗಿ ಅವರಿಬ್ಬರ ನಡುವೆ ಮನಸ್ತಾಪಗಳಿದ್ದವು ಎನ್ನಲಾಗಿದೆ. ಇದಲ್ಲದೆ ಆರೋಪಿ ಬೇರೆ ಹುಡುಗಿಯರೊಂದಿಗೆ ಮಾತನಾಡುತ್ತಾನೆ ಎಂದು ಶಾಂತಕುಮಾರಿ ಸಂಶಯ ವ್ಯಕ್ತಪಡಿಸಿ ಗಲಾಟೆ ಮಾಡಿದ್ದಾಳೆ. ಗಲಾಟೆಯ ಅಂತ್ಯ ಕೊಲೆಯಲ್ಲಿ ಮುಕ್ತಾಯವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕೊಲೆಯನ್ನು ಮುಚ್ಚಿಹಾಕುವ ಉದ್ದೇಶದಿಂದ ಆರೋಪಿ, ಪತ್ನಿಯ ಮೃತದೇಹವನ್ನು ನೀರಿನ ಬ್ಯಾರಲ್‍ನಲ್ಲಿ ಹಾಕಿ ಮುಚ್ಚಿಟ್ಟಿದ್ದ. ಬಳಿಕ ಪಕ್ಕದ ಮನೆಯ ಖಾನಾಪುರ (Kanapur) ಮೂಲದ ರಿಜ್ವಾನ್ ಕುಂಬಾರಿ ಎಂಬವರ ವಾಹನವನ್ನು ಬಾಡಿಗೆ ಪಡೆದು, ಸ್ನೇಹಿತ ಸಮೀರ್ ಪಂತೋಜಿ ಹಾಗೂ ಚಾಲಕ ರಿಜ್ವಾನ್ ಜೊತೆ ಸೇರಿ ಮೃತದೇಹವನ್ನು ರಾಮನಗರ ಸಮೀಪದ ಕಾಡಿಗೆ ಎಸೆಯಲು ತೆರಳಿದ್ದಾಗ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಸಫಾರಿ ತೆರಳುತ್ತಿದ್ದ ವೇಳೆ ಘೇಂಡಾಮೃಗಗಳ ದಾಳಿ – 7 ಮಂದಿ ಪ್ರವಾಸಿಗರಿಗೆ ಗಾಯ