Tag: Rammandir

  • ಭವ್ಯ ಮಂದಿರದ ಮುಂದೆ ನಿಂತಾಗ ಕಣ್ಣೀರು ತುಂಬಿ ಬಂತು- ಸಿ.ಟಿ.ರವಿ ದಂಪತಿಯಿಂದ ಬಾಲರಾಮನ ದರ್ಶನ

    ಭವ್ಯ ಮಂದಿರದ ಮುಂದೆ ನಿಂತಾಗ ಕಣ್ಣೀರು ತುಂಬಿ ಬಂತು- ಸಿ.ಟಿ.ರವಿ ದಂಪತಿಯಿಂದ ಬಾಲರಾಮನ ದರ್ಶನ

    ಬೆಂಗಳೂರು: ಮಾಜಿ ಸಚಿವ ಸಿ.ಟಿ.ರವಿ (C.T.Ravi) ದಂಪತಿ ಅಯೋಧ್ಯೆಗೆ ತೆರಳಿ ಬಾಲರಾಮನ (BalaRama) ದರ್ಶನವನ್ನು ಪಡೆದಿದ್ದಾರೆ.

    ಪ್ರಭು ಶ್ರೀರಾಮನ ದರ್ಶನ ಪಡೆದ ರವಿ ಅವರು ಫೋಟೋದೊಂದಿಗೆ ಬಾಲರಾಮನ ದರ್ಶನದ ಅನುಭವವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ  (Social Media) ಪೋಸ್ಟ್ ಮಾಡಿದ್ದಾರೆ. ಭವ್ಯ ಮಂದಿರದ ಮುಂದೆ ನಿಂತುಕೊಂಡವನಿಗೆ ಮೈಯೆಲ್ಲಾ ರೋಮಾಂಚನ, ಜೀವನ ಪಾವನವಾದ ಭಾವ ಎಂದು ಬರೆದುಕೊಂಡಿದ್ದಾರೆ.  ಇದನ್ನೂ ಓದಿ:  ಈಗ ಪರ್ಸಂಟೇಜ್ ಕಡಿಮೆ ಆಗಿದೆ, ಆದ್ರೆ ಎಷ್ಟಾಗಿದೆ ಗೊತ್ತಿಲ್ಲ- ಉಲ್ಟಾ ಹೊಡೆದ ಕೆಂಪಣ್ಣ

    ಅಯೋಧ್ಯಾ ರಾಮ ಜನ್ಮ ಭೂಮಿಯಲ್ಲಿ ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀರಾಮ ಚಂದ್ರನ ಮಂದಿರ ನಿರ್ಮಾಣಕ್ಕಾಗಿ 500 ವರ್ಷಗಳ ಹೋರಾಟದ ನೆನಪಾಗಿ ಕಣ್ಣಲ್ಲಿ ನೀರು ತುಂಬಿ ಬಂತು. ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗಿರುವ ಸಂತೋಷಕ್ಕೋ ಅಥವಾ ಮಂದಿರ ನಿರ್ಮಾಣಕ್ಕೆ ತ್ಯಾಗ ಬಲಿದಾನ ಮಾಡಿದ ಲಕ್ಷಾಂತರ ಜನರಿಗಾಗಿ ಮೂಡಿದ ಅಶ್ರುತರ್ಪಣವೋ? ನಾನರಿಯೆ ಎಂದು ಅವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸರ್ಕಾರ ಏನು ಮನೆ-ಮನೆ ಬೆಡ್‌ರೂಮ್‌ಗೆ ಹೋಗುತ್ತಾ? – ಲಿವ್‌ಇನ್‌ ರಿಲೇಷನ್‌ ನೋಂದಣಿ ಕಡ್ಡಾಯಕ್ಕೆ ಮಹಿಳಾ ಹೋರಾಟಗಾರ್ತಿ ವಿರೋಧ

    ಸರಯೂ ತೀರದಲ್ಲಿ ಗುಲಾಮಗಿರಿಯ ಪ್ರತೀಕವಾಗಿ ನಿಂತಿದ್ದ ವಿವಾದಿತ ಕಟ್ಟಡವನ್ನು ಕೆಡವಲು, ರಾಷ್ಟ್ರ ಪುರುಷ ರಾಮನಿಗೆ ಭವ್ಯ ರಾಷ್ಟ್ರ  ಮಂದಿರವನ್ನು ಕಟ್ಟಲು ನಡೆಸಿದ ಕರಸೇವೆ, ಜೊತೆಗಿದ್ದ ಕರಸೇವಕರು, ಸರಯೂ ನದಿಯಿಂದ ತಂದ ಮರಳಿನ ರಾಶಿ, ಮೈ ಮೇಲಿದ್ದ ಲಾಠಿಯೇಟಿನ ಬಾಸುಂಡೆಗಳು, ಗುಮ್ಮಟ ಪತನ, ತಾತ್ಕಾಲಿಕ ಮಂದಿರ ನಿರ್ಮಾಣಕ್ಕೆ ಇಟ್ಟಿಗೆ ಹೊತ್ತದ್ದು, ಹುತಾತ್ಮ ಕರಸೇವಕರ ದೇಹಗಳು, ನೋವಿನಿಂದ ನರಳುತ್ತಿದ್ದ ಕರಸೇವಕರು, ಕರಸೇವಕರನ್ನು ಮಕ್ಕಳ ಹಾಗೆ ನೋಡಿಕೊಂಡ ದೇಶದ ಮಾತೆಯರು, ಇವರೆಲ್ಲರೂ ನನ್ನ ಸ್ಮೃತಿ ಪಟಲದಲ್ಲಿ ಹಾದು ಹೋದರು. ಇಂದು ಪತ್ನಿಯೊಂದಿಗೆ ಅಯೋಧ್ಯೆಯ ಭವ್ಯ ಮಂದಿರದಲ್ಲಿ ಪ್ರಭು ಶ್ರೀರಾಮ ಚಂದ್ರನ ದರ್ಶನ ಮಾಡುವಂತಾಗಿದ್ದು ನನ್ನ ಪಾಲಿನ ಸೌಭಾಗ್ಯ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಹೆಲ್ಮೆಟ್‌ ಹಾಕಿಲ್ಲವೆಂದು ತಡೆದಿದ್ದಕ್ಕೆ ಟ್ರಾಫಿಕ್‌ ಪೊಲೀಸ್‌ ಕೈ ಬೆರಳನ್ನೇ ಕಚ್ಚಿದ ಭೂಪ!

  • ತುಮಕೂರಿನಿಂದ ಅಯೋಧ್ಯಾಧಾಮ್‌ಗೆ ಹೊರಟ ವಿಶೇಷ ರೈಲು

    ತುಮಕೂರಿನಿಂದ ಅಯೋಧ್ಯಾಧಾಮ್‌ಗೆ ಹೊರಟ ವಿಶೇಷ ರೈಲು

    ತುಮಕೂರು: ನಗರದಿಂದ ಅಯೋಧ್ಯೆಗೆ (Ayodhya) ವಿಶೇಷ ರೈಲು ಇಂದು ಬೆಳಗಿನ ಜಾವ 5:50ಕ್ಕೆ ಹೊರಟಿದೆ.

    ನಗರದಲ್ಲಿ ಇಂದು ತುಮಕೂರು to  ಅಯೋಧ್ಯೆ ಎಂಬ ನಾಮಫಲಕ ಹೊತ್ತ ರೈಲು (Train ) ಅಯೋಧ್ಯೆಗೆ ಹೊರಟಿದೆ. ಈ ರೈಲಿನಲ್ಲಿ ತುಮಕೂರಿನಿಂದ ಸುಮಾರು 250 ರಾಮಭಕ್ತರು ಅಯೋಧ್ಯೆಗೆ ಪ್ರಯಾಣಿಸುತ್ತಿದ್ದಾರೆ. ಇದನ್ನೂ ಓದಿ: ಕಲಬುರಗಿಯಲ್ಲಿ ದೇಗುಲ ದಂಗಲ್ – ಬಹುಮನಿ ಕೋಟೆಯಲ್ಲಿ ಸೋಮೇಶ್ವರ ದೇವಸ್ಥಾನ ನಿರ್ಮಾಣಕ್ಕೆ ಆಗ್ರಹ

    ರೈಲ್ವೆ ನಿಲ್ದಾಣದಲ್ಲಿ ಹಿಂದೂ ಕಾರ್ಯಕರ್ತರು (Hindu Activists)  ರಾಮಲಲ್ಲಾಗೆ  ಪೂಜೆ ಮಾಡಿ, ಭಜನೆ ಹಾಡಿ, ಯಾತ್ರೆಗೆ ಹೊರಟ ರಾಮಭಕ್ತರಿಗೆ ಆರತಿ ಬೆಳಗಿಸಿ ಬೀಳ್ಕೊಟ್ಟಿದ್ದಾರೆ. ಫೆ.9ರಂದು ಈ ರೈಲು ಅಯೋಧ್ಯೆಗೆ ತಲುಪಲಿದೆ. ಇದನ್ನೂ ಓದಿ: ಕಾಸ್ಮೆಟಿಕ್ ಸರ್ಜರಿಗೆ ಬಂದವಳಿಂದ ಲೂಟಿ – ವೈದ್ಯನಿಗೆ 6 ಕೋಟಿ ಪಂಗನಾಮ

  • 33,258 ಹಣತೆಗಳಲ್ಲಿ ಬೆಳಗಿದ `ಸಿಯಾವರ್ ರಾಮಚಂದ್ರ ಕೀ ಜೈ’ ಘೋಷ!

    33,258 ಹಣತೆಗಳಲ್ಲಿ ಬೆಳಗಿದ `ಸಿಯಾವರ್ ರಾಮಚಂದ್ರ ಕೀ ಜೈ’ ಘೋಷ!

    ಮುಂಬೈ: ಇಲ್ಲಿನ ಚಂದ್ರಾಪುರದಲ್ಲಿ ಅಯೋಧ್ಯೆಯ (Ayodhya) ಬಾಲರಾಮನ ಪ್ರಾಣಪ್ರತಿಷ್ಠಾಪನಾ (Pran Pratishtha) ಸಮಾರಂಭವನ್ನು ರಾಮಭಕ್ತರು ವಿಶೇಷವಾಗಿ ಆಚರಿಸಿದ್ದಾರೆ. ಸುಮಾರು 33,258 ಮಣ್ಣಿನ ಹಣತೆಗಳನ್ನು ಬೆಳಗಿಸಿ `ಸಿಯಾವರ್ ರಾಮಚಂದ್ರ ಕೀ ಜೈ’ ಎಂದು ಬರೆದಿದ್ದಾರೆ.

    ರಾಮಭಕ್ತರ ಈ ವಿಶೇಷ ಸಾಧನೆ ಗಿನ್ನಿಸ್ ದಾಖಲೆ ಸೇರಿದೆ. ಶನಿವಾರ ರಾತ್ರಿ ಇಲ್ಲಿನ ಚಂದಾ ಕ್ಲಬ್ ಮೈದಾನದಲ್ಲಿ ರಾಜ್ಯ ಸಚಿವ ಸುಧೀರ್ ಮುಂಗಂತಿವಾರ್ ಅವರ ಸಮ್ಮುಖದಲ್ಲಿ ರಾಮಭಕ್ತರು ಈ ಕಾರ್ಯಕ್ರಮ ನಡೆಸಿದ್ದಾರೆ. ಈ ಮೂಲಕ ಚಂದ್ರಾಪುರದ ಜನ ವಿಶೇಷ ಸಾಧನೆಗೈದಿದ್ದಾರೆ. ಈ ವಿಶೇಷ ಕಾರ್ಯಕ್ರಮವನ್ನು ಸಾವಿರಾರು ಜನ ಕಣ್ತುಂಬಿಕೊಂಡಿದ್ದಾರೆ. ಇದನ್ನೂ ಓದಿ: 9,999 ವಜ್ರಗಳಿಂದ ರಾಮಮಂದಿರದ ಕಲಾಕೃತಿ ರಚಿಸಿದ ಕಲಾವಿದ!

    ಗಿನ್ನೆಸ್ ವಿಶ್ವ ದಾಖಲೆಯ ಮಿಲಿಂದ್ ವರ್ಲೆಕರ್ ಮತ್ತು ಪ್ರಸಾದ್ ಕುಲಕರ್ಣಿ ಅವರು ಈ ಸಾಧನೆಯನ್ನು ಪ್ರಮಾಣೀಕರಿಸುವ ದಾಖಲೆಯನ್ನು ಭಾನುವಾರ ಬೆಳಗ್ಗೆ ಮುಂಗಂತಿವಾರ್ ಅವರಿಗೆ ಹಸ್ತಾಂತರಿಸಿದ್ದಾರೆ.

    ಸೋಮವಾರ (ಜ.22) ನಡೆಯಲಿರುವ ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಅಯೋಧ್ಯೆ ಸಂಪೂರ್ಣವಾಗಿ ಸಿಂಗಾರಗೊಂಡಿದೆ. ಈ ಸಮಾರಂಭದಿಂದ ದೇಶದೆಲ್ಲೆಡೆ ಹಬ್ಬದ ವಾತಾವರಣ ಮನೆಮಾಡಿದೆ. ಜನ ತಮ್ಮ ಸುತ್ತಮುತ್ತಲಿನ ದೇವಾಲಯಗಳು ಸೇರಿದಂತೆ, ಮನೆಯಲ್ಲೂ ಈ ಸಮಾರಂಭವನ್ನು ದೀಪಾವಳಿಯಂತೆ ಆಚರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶ-ವಿದೇಶಗಳ ಗಣ್ಯರು ಬಾಲರಾಮನ ಪ್ರಾಣಪ್ರತಿಷ್ಠಾಪನೆಯಲ್ಲಿ ಪಾಲ್ಗೊಳ್ಳಲಿದ್ದು, ಅಯೋಧ್ಯೆಯಲ್ಲಿ ಭಾರೀ ಭದ್ರತೆ ಕೈಗೊಳ್ಳಲಾಗಿದೆ. ಇದನ್ನೂ ಓದಿ:ಅಯೋಧ್ಯೆ ರಾಮಮಂದಿರದ ಸ್ಯಾಟಲೈಟ್ ಚಿತ್ರ ಬಿಡುಗಡೆ ಮಾಡಿದ ಇಸ್ರೋ

  • ಅಯೋಧ್ಯೆಗೆ ಹೋಗುವ ಯಾರಿಗೂ ತೊಂದರೆ ಆಗಬಾರದು: ಪರಮೇಶ್ವರ್

    ಅಯೋಧ್ಯೆಗೆ ಹೋಗುವ ಯಾರಿಗೂ ತೊಂದರೆ ಆಗಬಾರದು: ಪರಮೇಶ್ವರ್

    ಬೆಂಗಳೂರು: ಅಯೋಧ್ಯೆಯಲ್ಲಿ (Ayodhya) ರಾಮನ ಪ್ರಾಣಪ್ರತಿಷ್ಠಾಪನೆಗೆ (Prana Pratishtha) ರಾಜ್ಯದಿಂದ ಹೋಗುವ ಜನರಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರವಹಿಸಬೇಕು. ಅಲ್ಲದೇ ಯಾವುದೇ ಅಹಿತಕರ ಘಟನೆ ನಡೆಯದಂತೆ ಗೃಹಸಚಿವ ಜಿ. ಪರಮೇಶ್ವರ್ (G. Parameshwar) ಎಲ್ಲಾ ಎಸ್‍ಪಿಗಳಿಗೂ ಸೂಚನೆ ನೀಡಿದ್ದಾರೆ.

    ರಾಜ್ಯದಿಂದ ಜನವರಿ 22 ರಂದು ಅಯೋಧ್ಯೆಯ ರಾಮಲಲ್ಲಾ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ರಾಜ್ಯದಿಂದ ಸಾಕಷ್ಟು ಜನ ಹೋಗುತ್ತಾರೆ. ರಾಮ ಭಕ್ತರಿಗೆ ಯಾವುದೇ ತೊಂದರೆಯಾಗಬಾರದು. ಯಾವುದೇ ಅಹಿತಕರ ಘಟನೆಗಳು ನಡೆಯಬಾರದು. ಹೀಗಾಗಿ ಕಟ್ಟೆಚ್ಚರ ವಹಿಸುವಂತೆ ಎಲ್ಲಾ ಎಸ್‍ಪಿಗಳಿಗೆ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠಾಪನೆ- ಹುಬ್ಬಳ್ಳಿಯ ಕರಸೇವಕರ ಸಂಭ್ರಮ

    ರಾಮಭಕ್ತರು ಅಯೋಧ್ಯೆಗೆ ಹೋಗುವ ವೇಳೆ ಹಾಗೂ ಈ ಕಾರ್ಯಕ್ರಮದ ಸಂದರ್ಭದಲ್ಲಿ ರಾಜ್ಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಿ. ಎಲ್ಲರೂ ಅಲರ್ಟ್ ಆಗಿ ಇರಬೇಕು ಎಂದು ಅವರು ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠೆ ಅನ್ನೋದು ನಾಯಕರ ಕೆಲಸವಲ್ಲ: ಮೋದಿ ವಿರುದ್ಧ ದೀದಿ ವಾಗ್ದಾಳಿ

  • ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠಾಪನೆ- ಹುಬ್ಬಳ್ಳಿಯ ಕರಸೇವಕರ ಸಂಭ್ರಮ

    ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠಾಪನೆ- ಹುಬ್ಬಳ್ಳಿಯ ಕರಸೇವಕರ ಸಂಭ್ರಮ

    ಹುಬ್ಬಳ್ಳಿ: ಅಯೋಧ್ಯೆಯ (Ayodhya) ರಾಮಮಂದಿರದಲ್ಲಿ (RamMandir) ಪ್ರಾಣಪ್ರತಿಷ್ಠೆ (Prana Pratishtha) ಸಮೀಪಿಸುತ್ತಿದ್ದಂತೆ ದೇಶದೆಲ್ಲೆಡೆ ಕೋಟ್ಯಂತರ ಹಿಂದೂಗಳ ಮನೆ-ಮನದಲ್ಲಿ ಸಂಭ್ರಮ ಮನೆಮಾಡಿದೆ. ಈ 500 ವರ್ಷಗಳ ಕನಸು ನನಸಾಗುವ ಹೊತ್ತಿನಲ್ಲಿ, ಈ ಹಿಂದೆ ಮಂದಿರಕ್ಕಾಗಿ ಹೋರಾಟ ನಡೆಸಿದ್ದ ಹುಬ್ಬಳ್ಳಿಯ ಕರಸೇವಕರು (Karasevak) ಸಂಭ್ರಮ ಆಚರಿಸಿದ್ದಾರೆ.

    ಇಡೀ ದೇಶವೇ ಶ್ರೀರಾಮಮಯವಾಗಿದೆ. ನೂರಾರು ಕೋಟಿ ಹಿಂದೂಗಳ ಶತಮಾನಗಳ ಕನಸು ಸಾಕಾರಗೊಳುವ ಸಮಯ ಸಮೀಪಿಸುತ್ತಿದೆ. ಈ ಮಂದಿರ ಲಕ್ಷಾಂತರ ಮಂದಿ ಕರಸೇವಕರ ತ್ಯಾಗ ಹಾಗೂ ಹೋರಾಟದ ಫಲವಾಗಿದೆ. ಅದರಲ್ಲಿ ರಾಮಮಂದಿರಕ್ಕೆ ಅಡಿಪಾಯ ಹಾಕಲು ಅಂದು ತೆರಳಿದ್ದ ಹುಬ್ಬಳ್ಳಿಯ ಕರಸೇವಕರ ಪಾತ್ರವೂ ಪ್ರಮುಖವಾಗಿದೆ. ಇದನ್ನೂ ಓದಿ: ಬಾಲರಾಮನಿಗೆ ಅರ್ಪಿಸಲು ಹಲ್ವಾ ತಯಾರಿಸುವ ಕಡಾಯಿ ರೆಡಿ- ಏನಿದರ ವಿಶೇಷ?

    ಹುಬ್ಬಳ್ಳಿ ಗುರುಸಿದ್ದಪ್ಪ ಎಂಬ ಕರಸೇವಕರು ತಮ್ಮ 27ನೇ ವಯಸ್ಸಿನಲ್ಲಿ ಅಯೋಧ್ಯೆಗೆ ತೆರಳಿ ಈ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಇದೀಗ ಕರಸೇವೆ ಮಾಡಿ ತಾವು ಜೀವಂತವಾಗಿರುವಾಗಲೇ ಮಂದಿರ ನಿರ್ಮಾಣವಾಗುವುದನ್ನು ಕಣ್ತುಂಬಿಕೊಳ್ಳಲು ತಮ್ಮ ಇಳಿವಯಸ್ಸಿನಲ್ಲಿ ಕಾದು ಕುಳಿತಿದ್ದಾರೆ.

    ರೇಣುಕಾ ನಗರದ ಪ್ರಸನ್ನವೆಂಕಟ ಕಟ್ಟಿಯವರು ಸಹ ಒಬ್ಬರು. ಅವರು ಯುವಕರಾಗಿದ್ದಾಗ ಬಾಗಲಕೋಟೆಯಿಂದ ಅಯೋಧ್ಯೆಗೆ ತೆರಳಿದ್ದರು. ಅಲ್ಲದೇ ಅಂದು ಹಮ್ಮಿಕೊಂಡಿದ್ದ ರಾಮಪಾದುಕೆ ಅಭಿಯಾನದ ಪ್ರಮುಖ ರೂವಾರಿ ಸಹ ಆಗಿದ್ದರು. ಕಳೆದ ಮೂವತ್ತು ವರ್ಷಗಳ ಹಿಂದೆ ಅಯೋಧ್ಯೆಯಿಂದ ಪೂಜೆ ಮಾಡಿಸಿ ತಂದ ರಾಮನ ಪಾದುಕೆಗೆ ಇಂದಿಗೂ ಅವರು ನಿತ್ಯ ಪೂಜೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಭಕ್ತರು ಚಳಿಯಿಂದ ರಕ್ಷಿಸಿಕೊಳ್ಳಲು ಅಯೋಧ್ಯೆಯಲ್ಲಿ ಮಾಡಲಾಗಿದೆ ವಿಶೇಷ ವ್ಯವಸ್ಥೆ

  • ರಾಮೋತ್ಸವಕ್ಕೆ ರಾಜ್ಯದಿಂದ ಅಯೋಧ್ಯೆಗೆ ಹೆಚ್ಚುವರಿ ರೈಲು – ಇಲಾಖೆಯಿಂದ ಚಿಂತನೆ

    ರಾಮೋತ್ಸವಕ್ಕೆ ರಾಜ್ಯದಿಂದ ಅಯೋಧ್ಯೆಗೆ ಹೆಚ್ಚುವರಿ ರೈಲು – ಇಲಾಖೆಯಿಂದ ಚಿಂತನೆ

    ಬೆಂಗಳೂರು: ರಾಮಮಂದಿರ (RamMandir) ಉದ್ಘಾಟನೆ ದಿನ ಸಮೀಪವಾಗುತ್ತಿರುವ ಬೆನ್ನಲ್ಲೇ ರಾಜ್ಯದಿಂದ ಅಯೋಧ್ಯೆಗೆ (Ayodhya) ಹೊರಡಲು ತಯಾರಾದ ರಾಮನ ಭಕ್ತರಿಗೆ ರೈಲ್ವೇ ಇಲಾಖೆ ಗುಡ್ ನ್ಯೂಸ್ ನೀಡಿದೆ. ರಾಜ್ಯದ ಹಲವು ಭಾಗಗಳಿಂದ ಅಯೋಧ್ಯೆಗೆ ಹೆಚ್ಚುವರಿ ರೈಲುಗಳನ್ನು ಬಿಡಲು ಇಲಾಖೆ (Indian Railways) ಚಿಂತನೆ ನಡೆಸುತ್ತಿದೆ.

    ಅಯೋಧ್ಯೆ ರಾಮಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆಯನ್ನು ಕಣ್ತುಂಬಿಕೊಳ್ಳಲು ಇಡೀ ಹಿಂದೂ ಸಮುದಾಯ ತುದಿಗಾಲಲ್ಲಿ ನಿಂತಿದೆ. ಇದಕ್ಕಾಗಿ ರಾಜ್ಯದಿಂದ ಅಯೋಧ್ಯೆಗೆ ತೆರಳಲು ಹಲವಾರು ಜನ ಸಿದ್ಧತೆ ನಡೆಸಿದ್ದಾರೆ. ಅಯೋಧ್ಯೆಗೆ ಹೊರಟ ರಾಮನ ಭಕ್ತರಿಗಾಗಿ ನೈರುತ್ಯ ರೈಲ್ವೆ ಇಲಾಖೆ ರಾಜ್ಯದಿಂದ ಹೆಚ್ಚುವರಿ ರೈಲನ್ನು ಬಿಡಲು ತಯಾರಿ ನಡೆಸುತ್ತಿದೆ. ಇದನ್ನೂ ಓದಿ: ಜೀವನದಲ್ಲಿ ಮೊದಲ ಬಾರಿಗೆ ಭಾವುಕನಾಗಿದ್ದೇನೆ – 11 ದಿನಗಳ ವ್ರತ ಆರಂಭಿಸಿದ ಮೋದಿ

    ರಾಜ್ಯದಿಂದ ಅಯೋಧ್ಯೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಹೋಗುವ ನಿರೀಕ್ಷೆ ಇದೆ. ಈ ಹಿಂದೆಯೇ ಬೇರೆ ಬೇರೆ ರಾಜ್ಯಗಳಿಂದ ಅಯೋಧ್ಯೆಗೆ ರೈಲುಗಳನ್ನು ಬಿಡುವುದಾಗಿ ಕೇಂದ್ರ ಇಲಾಖೆ ಹೇಳಿತ್ತು. ಅದೇ ರೀತಿ ರಾಜ್ಯದಿಂದಲೂ ಹೆಚ್ಚಿನ ಜನ ರಾಮಭಕ್ತರು ಅಯೋಧ್ಯೆಗೆ ತೆರಳುವ ಸಾಧ್ಯತೆ ಇದೆ. ಈ ಹಿನ್ನಲೆ ರಾಜ್ಯದಿಂದ ಹೆಚ್ಚುವರಿ ರೈಲುಗಳ ಸಂಚಾರಕ್ಕೆ ನೈರುತ್ಯ ರೈಲ್ವೆ ವಲಯ ಪ್ಲ್ಯಾನ್ ಮಾಡ್ತಿದೆ. ಈ ಸಂಬಂಧ ಈಗಾಗಲೇ ಕೇಂದ್ರ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿರುವ ನೈರುತ್ಯ ರೈಲ್ವೆ ವಲಯ, ಕೇಂದ್ರದ ಒಪ್ಪಿಗೆಗಾಗಿ ಕಾಯುತ್ತಿದೆ. ಮುಂದಿನ ಮೂರ್ನಾಲ್ಕು ದಿನದ ಒಳಗೆ ಈ ಸಂಬಂಧ ಕೇಂದ್ರ ವಲಯ ಸೂಚನೆ ನೀಡುವ ಸಾಧ್ಯತೆ ಇದ್ದು, ಈ ಹಿನ್ನೆಲೆ ನೈರುತ್ಯ ವಲಯ ಕೂಡ ತಯಾರಿ ಆರಂಭಿಸಿದೆ.

    ಅಯ್ಯೋಧ್ಯೆಗೆ ಹೆಚ್ಚುವರಿ ರೈಲನ್ನು ರಾಜ್ಯದ ಯಾವ ನಗರದ ಮಾರ್ಗದಿಂದ ಬಿಡಬೇಕು? ಯಾವ ಯಾವ ಸಮಯಕ್ಕೆ ಬಿಡಬೇಕು? ರಾಜ್ಯದಲ್ಲಿನ ಯಾವ ಯಾವ ಪ್ರಮುಖ ರೈಲ್ವೆ ನಿಲ್ದಾಣಗಳಿಂದ ಹೆಚ್ಚುವರಿ ರೈಲನ್ನು ಅಯ್ಯೋಧ್ಯೆಗೆ ಬಿಡಬಹುದು ಎಂಬ ಯೋಜನೆ ರೂಪಿಸಲಾಗುತ್ತಿದೆ. ಅಯ್ಯೋದ್ಯೆ ರೈಲ್ವೆ ನಿಲ್ದಾಣ ಹೊರತುಪಡಿಸಿ ರಾಮಮಂದಿರಕ್ಕೆ ಹತ್ತಿರ ಇರುವ ಬೇರೆ ಯಾವ ನಿಲ್ದಾಣಗಳಿಗೆ ಹೆಚ್ಚುವರಿ ರೈಲನ್ನು ಬಿಡಬಹುದು. ಪ್ರಮುಖವಾಗಿ ರಾಜ್ಯದ ಬೆಂಗಳೂರು (Bengaluru) -ಮಂಗಳೂರು ಕಲಬುರಗಿ-ಹುಬ್ಬಳ್ಳಿ, ಮೈಸೂರು ನಗರಗಳಿಂದ ರೈಲಿನ ಸಂಪರ್ಕಕ್ಕೆ ಚಿಂತನೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಗುಜರಾತ್‌ನಿಂದ ಅಯೋಧ್ಯೆಗೆ ಆಗಮಿಸಿದೆ 500 ಕೆಜಿಯ ಬೃಹತ್ ನಗಾರಿ

  • ಜ.22ರ ಬೆಳಗ್ಗೆ ಕರುನಾಡಿನ ಎಲ್ಲಾ ದೇಗುಲಗಳಲ್ಲಿ ಸತ್ಸಂಗ, ಭಜನೆ, ಶ್ರೀರಾಮನ ಪಠಣೆ!

    ಜ.22ರ ಬೆಳಗ್ಗೆ ಕರುನಾಡಿನ ಎಲ್ಲಾ ದೇಗುಲಗಳಲ್ಲಿ ಸತ್ಸಂಗ, ಭಜನೆ, ಶ್ರೀರಾಮನ ಪಠಣೆ!

    ಬೆಂಗಳೂರು: ಇಡೀ ಹಿಂದೂ ಸಮಾಜ ಜನವರಿ 22ರ ದಿನಕ್ಕೆ ಕಾದು ಕುಳಿತಿದೆ. ಶ್ರೀರಾಮನೂರಿನಲ್ಲಿ ಶ್ರೀರಾಮಮಂದಿರದ (Ayodhya RamMandir) ಲೋಕಾರ್ಪಣೆಯನ್ನು ಕಣ್ತುಂಬಿಕೊಳ್ಳಲು ಕೋಟಿ ಕೋಟಿ ಕಂಗಳು ಕಾಯ್ತಿವೆ. ಈಗಾಗಲೇ ಈ ಕಾರ್ಯಕ್ರಮಕ್ಕೆ ದೇಶದೆಲ್ಲೆಡೆ ಸಿದ್ಧತೆಗಳು ಆರಂಭವಾಗಿವೆ. ಅದರಂತೆ ಕರ್ನಾಟಕದಲ್ಲಿ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಹಾಗೂ ವಿಶ್ವ ಹಿಂದೂ ಪರಿಷತ್ ನಿಂದ ಸಿದ್ಧತೆಗಳು ಆರಂಭವಾಗಿವೆ.

    ಜನವರಿ 22 ರಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆಯ ಹಿನ್ನೆಲೆ ಜನವರಿ 1 ರಿಂದ 15 ರವರೆಗೆ ಸಂಪರ್ಕ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ 15 ದಿನದಲ್ಲಿ ರಾಜ್ಯದ 29,500 ಗ್ರಾಮಗಳಿಗೂ ಆಯೋಧ್ಯೆಯಿಂದ ಬಂದ ಮಂತ್ರಾಕ್ಷತೆ, ರಾಮಮಂದಿರದ ಭಾವಚಿತ್ರ ಹಾಗೂ ನಿವೇದನಾ ಪತ್ರಗಳನ್ನು ತಲುಪುವ ಯೋಜನೆ ರೂಪಿಸಿದ್ದಾರೆ. ಈ ಅಭಿಯಾನದ ಪ್ರಮುಖ ಉದ್ದೇಶವೆಂದರೆ ಶ್ರೀ ರಾಮನ ಹೋರಾಟ, ಇತಿಹಾಸ ತಿಳಿಸುವುದಾಗಿದೆ ಎಂದು ಆರ್‍ಎಸ್‍ಎಸ್‍ನ ಕ್ಷೇತ್ರಿಯ ಕಾರ್ಯನಿರ್ವಾಹಕ ತಿಪ್ಪೇಸ್ವಾಮಿ ಹೇಳಿದ್ದಾರೆ.

    ಜನವರಿ 22 ರಂದು ಪ್ರತಿ ಗ್ರಾಮದ ಪ್ರಮುಖ ದೇವಸ್ಥಾನಗಳಲ್ಲಿ ಬೆಳಗ್ಗೆ ಸತ್ಸಂಗ, ಪೂಜೆ, ಶ್ರೀ ರಾಮ,ಜೈರಾಮ ಅಂತಾ 108 ಬಾರಿ ಪಠಣೆಯಿದೆ. ಜೊತೆಗೆ ದೇವಾಲಯದಲ್ಲಿ ಎಲ್ ಇಡಿ ಸ್ಕ್ರೀನ್ ಅಳವಡಿಸಿ, ದೇವಸ್ಥಾನದ ಪ್ರಾಣ ಪ್ರತಿಷ್ಟಾಪನೆ ನೋಡುವ ವ್ಯವಸ್ಥೆ ಮಾಡಲಾಗುತ್ತಿದೆ. ಇನ್ನೂ ಆವತ್ತಿನ ದಿನ ಸಂಜೆ ಅಯೋಧ್ಯೆ ಮುಖವಾಗಿಟ್ಟು ಪ್ರತಿ ಮನೆಯಲ್ಲೂ ಐದು ದೀಪಗಳನ್ನು ಬೆಳಗುವವಂತೆ ಕರೆ ಕೊಡಲಾಗಿದೆ. ಈ ಸಲದ ಸಂಪರ್ಕ ಅಭಿಯಾನದಲ್ಲಿ ಸುಮಾರು 1.5 ಲಕ್ಷ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಅಂತಾ ಅಂದಾಜಿಸಲಾಗಿದೆ. ಜನವರಿ 7 ಮಹಾಸಂಪರ್ಕ ಅಭಿಯಾನಯಿದೆ.ರಾಮ ಪ್ರತಿಷ್ಟಾಪನೆಯ ಸಮಯ ಬೆಳಿಗ್ಗೆ 11 ಘಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಟ್ರಸ್ಟ್ ನವರು ನಿಗದಿ ಮಾಡಿದ್ದಾರೆ.3 ದಿನ ಮೊದಲೇ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗ್ತಿವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಯೋಧ್ಯೆ ರೈಲ್ವೇ ನಿಲ್ದಾಣಕ್ಕೆ `ಅಯೋಧ್ಯಾ ಧಾಮ್’ ಎಂದು ಮರುನಾಮಕರಣ- ವಿಶೇಷತೆ ಏನು?

    ಫೆಬ್ರುವರಿ 19 ರಂದು ಕರ್ನಾಟಕ ದಕ್ಷಿಣ ಪ್ರಾಂತದ 2000 ಜನರಿಗೆ ಹಾಗೂ ಉತ್ತರ ಪ್ರಾಂತದ 1500 ಜನರಿಗೆ ರಾಮನ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.ಫೆಬ್ರವರಿ 17 ರಂದು ಬೆಂಗಳೂರಿನಿಂದ,ಬೆಳಗಾವಿ,ಉಡುಪಿಯಿಂದ ವಿಶೇಷ ಟ್ರೇನ್ ವ್ಯವಸ್ಥೆ ಮಾಡಲಾಗಿದೆ.ಈ ಭಕ್ತಾದಿಗಳ ಊಟ,ವಸತಿ ಎಲ್ಲವನ್ನೂ ಟ್ರಸ್ಟ್ ನೋಡಿಕೊಳ್ಳಲಿದೆ. ಒಟ್ಟಿನಲ್ಲಿ ಈ ಶ್ರೀರಾಮೋತ್ಸವ ಸಂಭ್ರಮ ಕರುನಾಡಲ್ಲಿ ಈಗೀನಿಂದಲೇ ಕಳೆಗಟ್ಟಿದೆ.

  • ಶುದ್ಧ ಹಿಂದೂಗಳು ರಾಮಮಂದಿರಕ್ಕೆ ವಿರೋಧ ಮಾಡಲ್ಲ – ಸಿ.ಟಿ ರವಿ

    ಶುದ್ಧ ಹಿಂದೂಗಳು ರಾಮಮಂದಿರಕ್ಕೆ ವಿರೋಧ ಮಾಡಲ್ಲ – ಸಿ.ಟಿ ರವಿ

    ರಾಮನಗರ: ಶುದ್ಧ ಹಿಂದೂಗಳು (Hindu) ಯಾರೂ ರಾಮಮಂದಿರಕ್ಕೆ ವಿರೋಧ ಮಾಡಲ್ಲ. ಆದರೆ ಕೆಲವರು ವಿರೋಧ ಯಾಕೆ ಮಾಡ್ತಿದ್ದಾರೋ ಗೊತ್ತಿಲ್ಲ ಎಂದು ಬಿಜೆಪಿ (BJP) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (CT Ravi) ಹೇಳಿದ್ದಾರೆ.

    ರಾಮನಗರದ (Ramanagara) ಅಚಲು ಗ್ರಾಮದಲ್ಲಿ ವಿಜಯ ಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, `ರಾಮದೇವರ ಬೆಟ್ಟ (Ramadevara Betta) ಅಭಿವೃದ್ಧಿ ಕೇವಲ ಚುನಾವಣಾ ಗಿಮಿಕ್’ ಎಂದಿದ್ದ ಜೆಡಿಎಸ್ (JDS) ನಾಯಕರಿಗೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಶ್ರೀರಾಮನ ಹೆಸರು ಕೇಳಿದ್ರೆ ಕೆಲವರಿಗೆ ನಡುಕ ಶುರುವಾಗುತ್ತೆ: ಅಶ್ವಥ್ ನಾರಾಯಣ

    ಅಯೋಧ್ಯೆ ಮಾದರಿಯಲ್ಲಿ ರಾಮದೇವರ ಬೆಟ್ಟ ಅಭಿವೃದ್ಧಿ - ಸಿಎಂಗೆ ಅಶ್ವಥ್ ನಾರಾಯಣ ಪತ್ರ

    ಶುದ್ಧ ಹಿಂದೂಗಳು ರಾಮಮಂದಿರಕ್ಕೆ ವಿರೋಧ ಮಾಡಲ್ಲ. ಇಲ್ಲಿಯವರೆಗೆ ರಾಮಮಂದಿರ (Rammandir) ಕಟ್ಟಬೇಡಿ ಅಂತಾ ಯಾರನ್ನಾದರೂ ಕಟ್ಟಿಹಾಕಿದ್ರಾ? ಇಲ್ಲಿ ಅಧಿಕಾರದಲ್ಲಿದ್ದವರು ರಾಮದೇವರ ಬೆಟ್ಟ ಅಭಿವೃದ್ಧಿ ಮಾಡಿ ತೋರಿಸಬೇಕಿತ್ತು. ನಾವೂ ಹಿಂದೂ ಅಂತಾ ಹೇಳಿಕೊಳ್ಳುವವರು ಇಷ್ಟು ದಿನ ಏನ್ಮಾಡ್ತಿದ್ರು ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಜೆಡಿಎಸ್ ಭದ್ರಕೋಟೆಯಲ್ಲಿ ಸಿದ್ದರಾಮಯ್ಯ ಹವಾ – ಬೃಹತ್ ಬೈಕ್ ರ್‍ಯಾಲಿ

    ಸಿದ್ದರಾಮಯ್ಯಗೆ ಜಿಲೆಬಿ ಕಂಡ್ರೆ ಆಗಲ್ಲ: `ಕೋಮು ಸಂಘರ್ಷಕ್ಕೆ ಬಿಜೆಪಿ ಕಾರಣ’ ಎಂಬ ಸಿದ್ದರಾಮಯ್ಯ (Siddaramaiah) ಹೇಳಿಕೆಗೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯಗೆ ಸುಳ್ಳು ಹೇಳುವುದು ಹುಟ್ಟು ಗುಣ, ಹಳೇ ಕಾಯಿಲೆ. ಅಧಿಕಾರಕ್ಕಾಗಿ ಅಹಿಂದ ರಾಜಕಾರಣ ಮಾಡಿದರು, ನಂತರ ದೂಡಿದರು. ಅವರು ಅಧಿಕಾರದಲ್ಲಿದ್ದಾಗ ಅವರಿಗೆ ಜಿಲೆಬಿ ಕಂಡರೆ ಆಗಲ್ಲ ಎಂಬ ಆರೋಪ ಇತ್ತು. ಅಂದರೆ ತಿನ್ನುವ ಜಿಲೆಬಿ ಅಲ್ಲ. ಗೌಡ, ಲಿಂಗಾಯತ, ಬ್ರಾಹ್ಮಣ ಅಂತಾ. ಆ ರಾಜಕಾರಣವನ್ನ ಸಿದ್ದರಾಮಯ್ಯ ಮಾಡ್ತಿದ್ದರು. ಈಗ ನಾನು ಕೂಡಾ ಹಿಂದೂ ಅಂತಾರೆ. ಆದರೆ ಹಿಂದೂ ಆದವರೂ ರಾಮಮಂದಿರ ಕಟ್ಟಲು ವಿರೋಧ ಮಾಡ್ತಾರಾ ಎಂದು ಪ್ರಶ್ನಿಸಿದ್ದಾರೆ.

    ಜೆಡಿಎಸ್ ಭದ್ರಕೋಟೆಯಲ್ಲಿ ಸಿದ್ದರಾಮಯ್ಯ ಹವಾ - ಬೃಹತ್ ಬೈಕ್ ರ್‍ಯಾಲಿ

    ಹಿಂದೂ ಆದವರೂ ಟಿಪ್ಪು ಜಯಂತಿ ಆಚರಿಸಲ್ಲ. ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಆಚರಣೆ ಮಾಡ್ತಾರೆ. ಕುಂಕುಮ ಕಂಡರೆ ಆಗದವರು ಯಾವ ಸೀಮೆ ಹಿಂದೂ? ಕೇಸರಿ ಕಂಡರೆ ಅಲರ್ಜಿ ಇರೋರು ಎಲ್ಲರನ್ನ ಪ್ರೀತ್ಸೋ ಜನರಾ? ನಮ್ಮ ರಾಷ್ಟ್ರಧ್ವಜದಲ್ಲೇ ಕೇಸರಿ ಇದೇ. ಅದನ್ನು ದೂರ ಇಡ್ತಾರಾ? ನಮ್ಮ ಎಲ್ಲಾ ಸ್ವಾಮೀಜಿಗಳು ಧರಿಸುವ ಬಟ್ಟೆಯೂ ಕೇಸರಿ. ಇವರಿಗೆ ಅವರ ಆಶೀರ್ವಾದ ಮಾತ್ರ ಬೇಕು. ಆದ್ರೆ ಕೇಸರಿ ಕಂಡ್ರೆ ಆಗಲ್ಲ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಅಯೋಧ್ಯೆ ಮಾದರಿಯಲ್ಲಿ ರಾಮದೇವರ ಬೆಟ್ಟ ಅಭಿವೃದ್ಧಿ – ಸಿಎಂಗೆ ಅಶ್ವಥ್ ನಾರಾಯಣ ಪತ್ರ

    ಹೆಣಕ್ಕೆ ಮೂರು ಕಾಸಿನ ಬೆಲೆಯಿಲ್ಲ: `ನನ್ನ ಹೆಣ ಸಹ ಬಿಜೆಪಿಗೆ ಹೋಗಲ್ಲ’ ಎಂಬ ಸಿದ್ದರಾಮಯ್ಯ ಹೇಳಿಕೆಗೆ ವ್ಯಂಗ್ಯವಾಡಿದ ಸಿ.ಟಿ.ರವಿ, ಮನುಷ್ಯನ ಹೆಣಕ್ಕೆ ಮೂರು ಕಾಸಿನ ಬೆಲೆಯಿಲ್ಲ ಎಂದು ಅವರಿಗೂ ಗೊತ್ತಿದೆ. ಹೆಣ ತಗೊಂಡು ರಾಜಕಾರಣ ಮಾಡಲು ಆಗಲ್ಲ. ಹೆಣ ಎದ್ದು ಬಂದು ವೋಟ್ ಹಾಕುತ್ತಾ? ಹೆಣವನ್ನ ಅವರ ಮನೆಯಲ್ಲೂ ಮೂರು ದಿನ ಇಟ್ಟುಕೊಳ್ಳಲ್ಲ. ಆದರೆ ಸಿದ್ದರಾಮಯ್ಯ ನೂರು ವರ್ಷ ಬದುಕಿರಲಿ. ನಮ್ಮ ಪಕ್ಷಕ್ಕೆ ಅವರ ಅವಶ್ಯಕತೆ ಇಲ್ಲ ಎಂದು ಕುಟುಕಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮಠಗಳು, ರಾಜಕೀಯ ಪಕ್ಷಗಳು ಭೇದ ಮಾಡೋದನ್ನ ನಿಲ್ಲಿಸಬೇಕು – ಪೇಜಾವರ ಶ್ರೀ

    ಮಠಗಳು, ರಾಜಕೀಯ ಪಕ್ಷಗಳು ಭೇದ ಮಾಡೋದನ್ನ ನಿಲ್ಲಿಸಬೇಕು – ಪೇಜಾವರ ಶ್ರೀ

    ವಿಜಯಪುರ: ಕಾಲಕಾಲಕ್ಕೆ ಸಮಾಜ ಸ್ವಚ್ಛಗೊಳಿಸುವ ಕೆಲಸ ಆಗಬೇಕು. ಹಾಗಾಗಿ, ಮಠಗಳು, ರಾಜಕೀಯ ಪಕ್ಷಗಳು (Political Parties) ಭೇದ-ಭಾವ ಮಾಡೋದನ್ನು ನಿಲ್ಲಿಸಬೇಕು ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ (VishwaPrasanna Tirtha Swamiji) ಕರೆ ನೀಡಿದ್ದಾರೆ.

    ನಗರಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕಾಲಕಾಲಕ್ಕೆ ಸಮಾಜವನ್ನು ಸ್ವಚ್ಛಗೊಳಿಸಬೇಕು. ಮಠ, ರಾಜಕೀಯ ಪಕ್ಷಗಳು ಬೇಧ – ಭಾವ ಮಾಡಬಾರದು. ಸಂಬಂಧಗಳಲ್ಲಿ ದ್ರೋಹ ಬಗೆಯುವ ಕೆಲಸ ಆಗಬಾರದು. ನಾವು ಸರಿಯಾಗಿ ಇದ್ರೇ ಎಲ್ಲವೂ ಸರಿಯಾಗಿ ಇರುತ್ತೆ. ದೈವ ಭಕ್ತಿ, ದೇಶ ಭಕ್ತಿ ಒಂದೇ. ಶ್ರೀರಾಮನ ಹೆಸರಿನಲ್ಲಿ ಸೇವೆ ಮಾಡೋಣ, ಅದಕ್ಕಾಗಿ `ರಾಮನ (Lord Rama) ಸೇವೆಯೇ ದೇಶಸೇವೆ ಅನ್ನೋ ಅಭಿಯಾನ ಹಮ್ಮಿಕೊಳ್ಳೋಣ. ಮುಂದಿನ ರಾಮನವಮಿ ಒಳಗಾಗಿ ಈ ಅಭಿಯಾನ ಹಮ್ಮಿಕೊಳ್ಳಲು ಪ್ರಧಾನಿ ಮೋದಿಗೆ ಪತ್ರ ಬರೆಯುತ್ತೇವೆ ಎಂದು ಹೇಳಿದ್ದಾರೆ.

    ಒಂದು ಕಾಲದಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ (RamMandir) ನಿರ್ಮಾಣ ಮಾಡುವುದು ಒಂದು ಕನಸು ಆಗಿತ್ತು. ಆದರೀಗ ಕೇವಲ ರಾಮಮಂದಿರ ನಿರ್ಮಾಣ ಅಷ್ಟೇ ಆಗಬಾರದು. ಬದಲಿಗೆ ರಾಮರಾಜ್ಯ ಕನಸು ನನಸು ಆಗಬೇಕು. ರಾಮಾಯಣ ಕುರಿತು ಅಧ್ಯಯನ ಮಾಡಬೇಕು ಎಂದು ಕರೆ ನೀಡಿದ್ದಾರೆ. ಇದನ್ನೂ ಓದಿ: ತಂದೆಯ ಹುಟ್ಟುಹಬ್ಬಕ್ಕೆ ವಿಶೇಷ ಫೋಟೋ ಹಂಚಿಕೊಂಡ ನಟಿ ರಾಧಿಕಾ ಪಂಡಿತ್

    ಚರ್ಚಿಸಿ ತೀರ್ಮಾನ ಕೈಗೊಳ್ಳಿ: ಶಾಲಾ ಪಠ್ಯಪುಸ್ತಕದಲ್ಲಿ ಲೈಂಗಿಕ ಶಿಕ್ಷಣ ಅಳವಡಿಸುವ ಬಗ್ಗೆ ಪ್ರತಿಕ್ರಿಯಿಸಿದ ಶ್ರೀಗಳು, ಶಿಕ್ಷಣ ತಜ್ಞರು ಹಾಗೂ ಮನಶಾಸ್ತ್ರಜ್ಞರು ಇದ್ದಾರೆ, ಅವರೊಂದಿಗೂ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಬೇಕು. ಇದನ್ನ ಕೇವಲ ಒಬ್ಬರು ಮಾತ್ರ ತೀರ್ಮಾನ ಮಾಡಬಾರದು. ಇದರಿಂದ ಸಮಾಜದಲ್ಲಿ ಗೊಂದಲ ನಿರ್ಮಾಣ ಆಗುತ್ತದೆ. ಎಲ್ಲರೂ ಚರ್ಚಿಸಿ ತೀರ್ಮಾನ ಮಾಡಬೇಕು ಎಂದು ಸಲಹೆ ನೀಡಿದರು. ಇದನ್ನೂ ಓದಿ: `ಈ ಇಬ್ಬರು ವೀರರನ್ನು ಸ್ಮರಿಸಲೇಬೇಕು’ – ರಿಷಬ್‌ ಪಂತ್ ಮೊದಲ ರಿಯಾಕ್ಷನ್

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರಾಮನಗರದಿಂದ ಅಯೋಧ್ಯೆಗೆ ಬೆಳ್ಳಿ ಇಟ್ಟಿಗೆ ಅರ್ಪಣೆ

    ರಾಮನಗರದಿಂದ ಅಯೋಧ್ಯೆಗೆ ಬೆಳ್ಳಿ ಇಟ್ಟಿಗೆ ಅರ್ಪಣೆ

    ರಾಮನಗರ: ಅಯೋಧ್ಯೆ (Ayodhya) ರಾಮಮಂದಿರ (RamMandir) ನಿರ್ಮಾಣಕ್ಕೆ ರಾಮನಗರದಿಂದ ಬೆಳ್ಳಿ ಇಟ್ಟಿಗೆ ಅರ್ಪಿಸಲಾಗುತ್ತಿದೆ.

    ಬೆಳ್ಳಿ ಇಟ್ಟಿಗೆಗೆ ರಾಮನ ಭಕ್ತರಿಂದ ಇಂದು ವಿಶೇಷ ಪೂಜೆ ಸಲ್ಲಿಸಲಾಯಿತು. ಮಾಜಿ ಸಚಿವ ಸಿ.ಪಿ ಯೋಗೇಶ್ವರ್ (CP Yogeshwara) ಸಮ್ಮುಖದಲ್ಲಿ ರಾಮನಗರ ಕೆಂಗಲ್ ಆಂಜನೇಯ ದೇವಾಲಯ, ರಾಮದೇವರ ಬೆಟ್ಟದಲ್ಲಿ ಪೂಜೆ ಸಲ್ಲಿಸಲಾಯಿತು. ಇದನ್ನೂ ಓದಿ: ಪ್ರೀತಂಗೌಡ ನಮಗೆ ಅಣ್ಣನ ಸಮಾನ – ವೀಡಿಯೋವನ್ನು ತಿರುಚಿ ವೈರಲ್ ಮಾಡಿದ್ದಾರೆ: ಸ್ಥಳೀಯರ ಆಕ್ರೋಶ

    ಬಿಜೆಪಿ (BJP) ಮುಖಂಡ ಗೌತಮ್ ಗೌಡ ನೇತೃತ್ವದಲ್ಲಿ 150 ಮಂದಿ ಶ್ರೀರಾಮನ ಭಕ್ತರು ಅಯೋಧ್ಯೆಗೆ ಬೆಳ್ಳಿ ಇಟ್ಟಿಗೆ ಸಮರ್ಪಿಸಲು ನಿರ್ಧರಿಸಲಾಯಿತು. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಜೊತೆ ಹೆಜ್ಜೆ ಹಾಕಿದ ಪ್ರಿಯಾಂಕಾ ಗಾಂಧಿ ಮಗಳು

    2024ಕ್ಕೆ ರಾಮಮಂದಿರ ಪೂರ್ಣ: ಇತ್ತೀಚೆಗೆ ರಾಮಜನ್ಮಭೂಮಿಯ ಟ್ರಸ್ಟ್ನ ಟ್ರಸ್ಟಿಗಳಾದ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಅವರು, ಅಯೋಧ್ಯೆಯ ರಾಮ ಮಂದಿರ ನಿರ್ಮಾಣದ ಪ್ರತಿಷ್ಠಾಪನಾ ಮಹೋತ್ಸವ 2024ರ ಮಕರ ಸಂಕ್ರಾಂತಿ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಹೇಳಿದ್ದರು.

    ಸಮಿತಿ ಸದಸ್ಯರೂ ಈ ಬಗ್ಗೆ ಮಾಹಿತಿ ನೀಡಿ, ಆಶಿಷ್ ಸೋಂಪುರ ಅವರು ಮಂದಿರದ ವಾಸ್ತುಶಿಲ್ಪಿಯಾಗಿದ್ದು, ನಿರ್ಮಾಣ ಸಮಿತಿಗೆ ನೃಪೇಂದ್ರ ಮಿಶ್ರಾ, ಪ್ರದೀಪ್ ಕುಮಾರ್ ಹಾಗೂ ಪ್ರೊ.ಗೋಪಾಲ ಕೃಷ್ಣನ್ ಇತರರು ಸದಸ್ಯರಿದ್ದಾರೆ. ಈಗಾಗಲೇ ಮಂದಿರದ ಇತರ ಭಾಗಗಳ ನಿರ್ಮಾಣ ಪ್ರಗತಿಯಲ್ಲಿದೆ. ರಾಜಸ್ಥಾನದ ಬನ್ಸಿ ಪಹಾಡ್‌ಪುರ ಜಿಲ್ಲೆಯಿಂದ ಮರಳುಗಲ್ಲುಗಳನ್ನು ತರಿಸಿಕೊಂಡು ಕೆತ್ತನೆ ಮಾಡಲಾಗುತ್ತಿದೆ. ಮಂದಿರದ ಮೇಲುಕಟ್ಟಡ ನಿರ್ಮಾಣಕ್ಕೆ 4.75 ಲಕ್ಷ ಕ್ಯೂಬಿಕ್ ಅಡಿ ಮರಳುಗಲ್ಲು ಬಳಸಲಾಗುತ್ತದೆ. ಗರ್ಭಗುಡಿಯ ಮೊದಲ ಮಹಡಿಯ ನಿರ್ಮಾಣವೂ ಬಹುತೇಕ ಪೂರ್ಣವಾಗಿದೆ ಎಂದು ತಿಳಿಸಿದ್ದರು.

    Live Tv
    [brid partner=56869869 player=32851 video=960834 autoplay=true]