Tag: Ramgopal Verma

  • ‘ಕೊರೊನಾ ವೈರಸ್’ ಸಿನಿಮಾ ಟ್ರೇಲರ್‌ನೊಂದಿಗೆ ಭಯ ಹುಟ್ಟಿಸುತ್ತಿರೋ ಆರ್‌ಜಿವಿ!

    ‘ಕೊರೊನಾ ವೈರಸ್’ ಸಿನಿಮಾ ಟ್ರೇಲರ್‌ನೊಂದಿಗೆ ಭಯ ಹುಟ್ಟಿಸುತ್ತಿರೋ ಆರ್‌ಜಿವಿ!

    ಹೈದರಾಬಾದ್: ಸದಾ ಒಂದಿಲ್ಲೊಂದು ವಿವಾದದ ಮೂಲಕ ಸುದ್ದಿಯಲ್ಲಿರುವ ನಿರ್ದೇಶಕ ರಾಮ್‍ಗೋಪಾಲ್ ವರ್ಮಾ (ಆರ್‌ಜಿವಿ) ಸಮಾಜದಲ್ಲಿ ಟ್ರೆಂಡಿಂಗ್‍ನಲ್ಲಿರುವ ವಿಚಾರಗಳೊಂದಿಗೆ ಸಿನಿಮಾ ಮಾಡಿ ಹಲವು ಬಾರಿ ಗೆಲುವು ಪಡೆದಿದ್ದಾರೆ. ಸದ್ಯ ವಿಶ್ವವನ್ನೇ ಕಾಡುತ್ತಿರುವ ಕೊರೊನಾ ವೈರಸ್ ಕುರಿತು ರಾಮ್‍ಗೋಪಾಲ್ ವರ್ಮಾ ಫೀಚರ್ ಫಿಲ್ಮ್ ಮಾಡಿರುವುದಾಗಿ ತಿಳಿಸಿದ್ದಾರೆ.

    ಇಂದು ಆರ್‌ಜಿವಿ ತಮ್ಮ ಹೊಸ ಸಿನಿಮಾ ‘ಕೊರೊನಾ ವೈರಸ್’ ಟ್ರೇಲರನ್ನು ಯೂಟ್ಯೂಬ್‍ನಲ್ಲಿ ಬಿಟುಗಡೆ ಮಾಡಿದ್ದು, 4 ನಿಮಿಷ ಅವಧಿಯ ಟ್ರೇಲರ್ ನೋಡುತ್ತಿದ್ದಂತೆ ಪ್ರೇಕ್ಷಕರಲ್ಲಿ ಭಯ ಹುಟ್ಟಿಸುವಂತಿದೆ.

    ಟ್ರೇಲರ್ ಬಿಡುಗಡೆ ಕುರಿತು ಮಾಹಿತಿ ನೀಡಿರುವ ಆರ್‌ಜಿವಿ, ಕೊರೊನಾ ವೈರಸ್ ಚಿತ್ರ ನಿಮ್ಮೆಲ್ಲರೊಳಗಿರುವ ಭಯದ ಕುರಿತಾದ ಚಿತ್ರವಾಗಿದೆ. ಇದು ರೋಗ ಮತ್ತು ಸಾವಿನ ಭಯದ ವಿರುದ್ಧವಾಗಿ ಪ್ರೀತಿಯ ಶಕ್ತಿಯನ್ನು ಪರೀಕ್ಷಿಸುತ್ತದೆ. ನಮ್ಮ ಕೆಲಸವನ್ನು ಆ ದೇವರೊಂದಿಗೆ ಕೊರೊನಾ ಕೂಡ ನಿಲ್ಲಿಸಲು ಸಾಧ್ಯವಾಗಿಲ್ಲ ಎಂಬುವುದನ್ನು ನಿರೂಪಿಸಿಕೊಳ್ಳೋಣ ಎಂದುಕೊಂಡೆವು. ವಿಶ್ವದಲ್ಲೇ ಕೊರೊನಾ ವೈರಸ್ ಕುರಿತು ತೆಗೆದ ಮೊದಲ ಸಿನಿಮಾ ಇದಾಗಿದೆ. ನಮ್ಮ ನಟರು, ತಂತ್ರಜ್ಞಾನರು ತಮ್ಮ ಕ್ರಿಯೇಟಿವಿಟಿಯನ್ನು ತೆರೆದಿಟ್ಟಿದ್ದಾರೆ. ಲಾಕ್‍ಡೌನ್ ಸಂದರ್ಭದಲ್ಲಿ ನಮ್ಮವರು ಲಾಕ್‍ಡೌನ್ ಆಗಿಲ್ಲ ಎಂದು ತಿಳಿಸಿದ್ದಾರೆ.

  • ನಮ್ಮ ಸಾವು ‘ಮೇಡ್ ಇನ್ ಚೀನಾ’ ಆಗುತ್ತೆಂದು ಊಹಿಸಿರಲಿಲ್ಲ: ಆರ್​ಜಿವಿ

    ನಮ್ಮ ಸಾವು ‘ಮೇಡ್ ಇನ್ ಚೀನಾ’ ಆಗುತ್ತೆಂದು ಊಹಿಸಿರಲಿಲ್ಲ: ಆರ್​ಜಿವಿ

    ಮುಂಬೈ: ನಮ್ಮ ಸಾವು ಸಹ ಮೇಡ್ ಇನ್ ಚೀನಾ ಆಗುತ್ತೆಂದು ಊಹಿಸಿರಲಿಲ್ಲ ಎಂದು ಬಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಟ್ವೀಟ್ ಮಾಡಿದ್ದಾರೆ.

    ಕೊರೊನಾ ವೈರಸ್‍ಗೆ ದೇಶವೇ ಆತಂಕದಲ್ಲಿದೆ. ಇತ್ತ ಬೆಂಗಳೂರು ಮೂಲದ ಟೆಕ್ಕಿಗೆ ಕೊರೊನಾ ಸೋಂಕು ತಗುಲಿರೋದು ಸಹ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದೆಲ್ಲಡೆ ಕಟ್ಟೆಚ್ಚರ ವಹಿಸಲಾಗಿದೆ. ಚೀನಾದಿಂದ ಈ ವೈರಸ್ ಬಂದಿದ್ದರಿಂದ ಬಾಲಿವುಡ್ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಟ್ವೀಟ್ ಮಾಡಿ, ನಮ್ಮ ಸಾವು ಮೇಡ್ ಇನ್ ಚೀನಾ ಆಗುತ್ತೆ ಎಂದೂ ಊಹಿಸಿರಲಿಲ್ಲ ಎಂದು ಬರೆದುಕೊಂಡಿದ್ದಾರೆ.

    ಮಾರುಕಟ್ಟೆಯಲ್ಲಿ ಮೇಡ್ ಇನ್ ಚೀನಾ ಉತ್ಪನ್ನಗಳೇ ಹೆಚ್ಚು ಲಭ್ಯವಿರುತ್ತವೆ. ಚೀನಾ ಉತ್ಪನ್ನಗಳಿಗೆ ಭಾರತದ ಮಾರುಕಟ್ಟೆಯಲ್ಲಿಯೂ ಬೇಡಿಕೆ ಇದೆ. ಇದೀಗ ಚೀನಾದಲ್ಲಿ ಹುಟ್ಟಿಕೊಂಡಿರುವ ಕೊರೊನಾ ಭಾರತಕ್ಕೆ ಎಂಟ್ರಿ ನೀಡಿದ್ದಕ್ಕೆ ಆರ್‍ಜಿವಿ ತಮ್ಮದೇ ಶೈಲಿಯಲ್ಲಿ ಟ್ವೀಟ್ ಮಾಡಿದ್ದಾರೆ. ಸೋಮವಾರ ಬಾಲಿವುಡ್ ನಟಿ, ನಿರ್ಮಾಪಕಿ ಚಾರ್ಮಿ ಕೌರ್, ಕೊರೊನಾ ವೈರಸ್ ಸ್ವಾಗತಿಸಿ ಟಿಕ್‍ಟಾಕ್ ವಿಡಿಯೋ ಮಾಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆ ವ್ಯಕ್ತವಾದ ಬೆನ್ನಲ್ಲೇ ಕ್ಷಮೆ ಕೇಳಿದ್ದರು.