Tag: Ramgopal Varma

  • ನಿಮ್ಮ ಕೆಲಸಕ್ಕೆ 39 ದಿನ ನಾನ್‍ಸ್ಟಾಪ್ ಆಗಿ ಕಿಸ್ ಮಾಡಬೇಕು: ರಾಮ್‍ಗೋಪಾಲ್ ವರ್ಮಾ

    ನಿಮ್ಮ ಕೆಲಸಕ್ಕೆ 39 ದಿನ ನಾನ್‍ಸ್ಟಾಪ್ ಆಗಿ ಕಿಸ್ ಮಾಡಬೇಕು: ರಾಮ್‍ಗೋಪಾಲ್ ವರ್ಮಾ

    ಹೈದರಾಬಾದ್: ಬಾಲಿವುಡ್ ನಿರ್ದೇಶಕ ರಾಮ್‍ಗೋಪಾಲ್ ವರ್ಮಾ ಅವರು ನಿಮ್ಮ ಕೆಲಸಕ್ಕೆ 39 ದಿನ ನಾನ್‍ಸ್ಟಾಪ್ ಆಗಿ ಕಿಸ್ ಮಾಡಬೇಕು ಎಂದು ಪೊಲೀಸರಿಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ.

    ಇತ್ತೀಚೆಗೆ ರಾಮ್‍ಗೋಪಾಲ್ ತಾವು ನಿರ್ದೇಶಿಸಿದ ‘ಇಸ್ಮಾರ್ಟ್ ಶಂಕರ್’ ಚಿತ್ರ ವೀಕ್ಷಿಸಲು ಹೆಲ್ಮೆಟ್ ಧರಿಸದೇ ಇಬ್ಬರು ತೆಲುಗು ನಟರ ಜೊತೆ ತ್ರಿಬ್ಬಲ್ ರೈಡಿಂಗ್ ಹೋಗಿದ್ದರು. ಬಳಿಕ ತ್ರಿಬ್ಬಲ್ ರೈಡಿಂಗ್ ಹೋಗುವ ವಿಡಿಯೋವನ್ನು ತಮ್ಮ ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋ ನೋಡಿ ಹಲವರು ಅವರನ್ನು ಟೀಕಿಸಲು ಶುರು ಮಾಡಿದ್ದರು.

    ರಾಮ್‍ಗೋಪಾಲ್ ವರ್ಮಾ ವಿಡಿಯೋ ಹಾಕಿ ಅದಕ್ಕೆ, ಪೊಲೀಸರು ಎಲ್ಲಿದ್ದಾರೆ? ನನಗೆ ಅನಿಸುತ್ತದೆ ಅವರು ಚಿತ್ರಮಂದಿರದಲ್ಲಿ ಸಿನಿಮಾವನ್ನು ವೀಕ್ಷಿಸುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್ ನೋಡಿದ ಸೈಬರಾಬಾದ್ ಪೊಲೀಸ್ ರಾಮ್‍ಗೋಪಾಲ್ ವರ್ಮಾ ಅವರಿಗೆ ದಂಡ ವಿಧಿಸಿ ಟ್ರಾಫಿಕ್ ನಿಯಮ ಪಾಲಿಸುವಂತೆ ಟ್ವೀಟ್ ಮಾಡಿದೆ.

    ಬಳಿಕ ರಾಮ್‍ಗೋಪಾಲ್ ವರ್ಮಾ ಅವರು ಮತ್ತೊಂದು ಟ್ವೀಟ್‍ನಲ್ಲಿ, “ಐ ಲವ್ ಯೂ ಸೈಬರಾಬಾದ್ ಪೊಲೀಸ್. ನಿಮ್ಮ ಈ ಅದ್ಭುತ ಕೆಲಸಕ್ಕೆ ನಾನು 39 ದಿನ ನಾನ್‍ಸ್ಟಾಪ್ ಆಗಿ ಕಿಸ್ ಮಾಡಬೇಕು. ನನಗೆ ಎರಡನೇ ಮಗಳು ಇದ್ದರೆ ನಿಮಗೆ ಮದುವೆ ಮಾಡಿಸಿ ನನ್ನ ಅಳಿಯರಾಗಿ ಎಂದು ಮನವಿ ಮಾಡಿಕೊಳ್ಳುತ್ತಿದೆ” ಎಂದು ಬರೆದುಕೊಂಡಿದ್ದಾರೆ.

  • ಡಾಲಿಯ ಭೈರವ ಗೀತಾ ಟ್ರೇಲರ್ ಮೆಚ್ಚಿಕೊಂಡ ಐರಾವತ!

    ಡಾಲಿಯ ಭೈರವ ಗೀತಾ ಟ್ರೇಲರ್ ಮೆಚ್ಚಿಕೊಂಡ ಐರಾವತ!

    ಬೆಂಗಳೂರು: ತಾವು ಅದೆಷ್ಟೇ ಬ್ಯುಸಿಯಾಗಿದ್ದರೂ ಬೇರೆಯವರ ಕೆಲಸ ಕಾರ್ಯಗಳನ್ನು ಗಮನಿಸುತ್ತಾ ಮೆಚ್ಚಿಕೊಳ್ಳುವ, ಪ್ರೋತ್ಸಾಹಿಸುವ ಮನೋಭಾವ ಹೊಂದಿರುವವರು ಚಾಲೆಂಜಿಂಗ್ ಸ್ಟಾರ್ ದರ್ಶನ್. ಇದೀಗ ಅವರು ಡಾಲಿ ಧನಂಜಯ್ ಅಭಿನಯದ ಭೈರವ ಗೀತಾ ಚಿತ್ರದ ಟ್ರೈಲರ್ ಬಿಡುಗಡೆಯಾದಾಕ್ಷಣವೇ ಅದನ್ನು ವೀಕ್ಷಿಸಿ ಈ ಬಗ್ಗೆ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿದ್ದಾರೆ.

    ರಾಮ್‍ಗೋಪಾಲ್ ವರ್ಮಾ ನಿರ್ಮಾಣದ ಈ ಚಿತ್ರದ ಟ್ರೈಲರ್ ಬಿಡುಗಡೆಯಾದಾಕ್ಷಣದಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಒಳ್ಳೆ ಅಭಿಪ್ರಾಯಗಳು ಹರಿದಾಡಲಾರಂಭಿಸಿದ್ದವು. ತಕ್ಷಣವೇ ಇದನ್ನು ವೀಕ್ಷಿಸಿ ಮೆಚ್ಚಿಕೊಂಡಿರೋ ದರ್ಶನ್ ಅವರು ಭೈರವಗೀತಾ ಟ್ರೈಲರ್ ಸೂಪರ್ ಅಂತ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಡಾಲಿ ಧನಂಜಯ ಕೂಡಾ ಧನ್ಯವಾದ ಹೇಳಿದ್ದಾರೆ.

    ಭೈರವ ಗೀತಾ ಟ್ರೈಲರ್ ಬಿಡುಗಡೆಯಾಗಿ ಗಂಟೆ ಕಳೆಯೋ ಮುನ್ನವೇ ವ್ಯಾಪಕ ವೀಕ್ಷಣೆ ಪಡೆದುಕೊಂಡು ಕಡಿಮೆ ಅವಧಿಯಲ್ಲಿ ಮೂರು ಲಕ್ಷ ಕ್ರಾಸ್ ಮಾಡಿದೆ. ಇದರಲ್ಲಿಯೂ ಧನಂಜಯ್ ಟಗರು ಚಿತ್ರದ ಡಾಲಿ ಪಾತ್ರದಂಥಾದ್ದೇ ಖದರ್ ಹೊಂದಿರೋ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ಪ್ರೇಮಕಥೆ ಮತ್ತು ಗ್ಯಾಂಗುಗಳ ಬಡಿದಾಟದ ಸುತ್ತ ನಡೆಯೋ ಕಥೆಯ ಹೊಳಹು ಬಿಟ್ಟುಕೊಟ್ಟಿರೋ ಈ ಟ್ರೈಲರ್ ಅನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಆರ್‌ಜಿವಿಯಿಂದ ನಾನು ಪ್ರೇರಣೆ ಪಡೆದಿದ್ದೇನೆ-ಯುಪಿಎಸ್‍ಸಿ ರ‍್ಯಾಂಕ್ ವಿಜೇತ

    ಆರ್‌ಜಿವಿಯಿಂದ ನಾನು ಪ್ರೇರಣೆ ಪಡೆದಿದ್ದೇನೆ-ಯುಪಿಎಸ್‍ಸಿ ರ‍್ಯಾಂಕ್ ವಿಜೇತ

    ಹೈದರಾಬಾದ್: ಈ ಬಾರಿಯ ಯುಪಿಎಸ್‍ಸಿ ಪರೀಕ್ಷೆಯಲ್ಲಿ 624 ರ‍್ಯಾಂಕ್ ಪಡೆದಿರುವ ಆಂಧ್ರಪ್ರದೇಶ ಅಕ್ಷಯ್ ಕುಮಾರ್ ನಾನು ಸಿನಿಮಾ ನಿರ್ದೇಶಕ ರಾಮ್ ಗೋಪಾಲ್ ವರ್ಮಾರಿಂದ ಪ್ರೇರಣೆ ಪಡೆದಿರುವುದಾಗಿ ತಿಳಿಸಿದ್ದಾರೆ.

    ಸ್ಥಳಿಯ ಮಾಧ್ಯಮವೊಂದರ ಸಂದರ್ಶನದಲ್ಲಿ ಭಾಗವಹಿಸಿ ಮಾತಾನಾಡಿರುವ ಅವರು, ರಾಮ್ ಗೋಪಾಲ್ ವರ್ಮಾ ಅವರ ಸತ್ಯ ಹಾಗೂ ಸರ್ಕಾರ್ ಸಿನಿಮಾಗಳು ನನಗೆ ಪ್ರೇರಣೆ ನೀಡಿದೆ ಎಂದು ಹೇಳಿದ್ದಾರೆ.

    ಈ ವೇಳೆ ತಾನು ರಾಮ್ ಗೋಪಾಲ್ ಅವರ ಹಲವು ವಿಡಿಯೋ ಹಾಗೂ ಸಿನಿಮಾಗಳನ್ನು ನೋಡುತ್ತಿದೆ. ತಮ್ಮ ತಂದೆ ಸಾಧಾರಣ ಪೊಲೀಸ್ ಪೇದೆಯಾಗಿದ್ದು, ಅವರು ಇತರೇ ಅಧಿಕಾರಿಗಳಿಗೆ ನೀಡಿದ ಗೌರವವನ್ನು ಕಂಡು ಸಿವಿಲ್ ಪರೀಕ್ಷೆ ಬರೆಯಲು ನಿರ್ಧರಿಸಿದ್ದೆ ಎಂದು ಹೇಳಿದ್ದಾರೆ.

    ಸದ್ಯ ವಿಡಿಯೋವನ್ನು ತಮ್ಮ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿರುವ ರಾಮ್ ಗೋಪಾಲ್ ವರ್ಮಾ ಅಕ್ಷಯ್ ಕುಮಾರ್ ರನ್ನು ಭೇಟಿ ಮಾಡಲು ಆಸೆ ವ್ಯಕ್ತಪಡಿಸಿದ್ದಾರೆ. ತಮ್ಮನ್ನು ಟೀಕೆ ಮಾಡುತ್ತಿದ್ದ ಹಲವರಿಗೂ ಟಾಂಗ್ ನೀಡಿದ್ದಾರೆ. ಅಲ್ಲದೇ ತಾವು ಎರಡು ಬಾರಿ ಸಿವಿಲ್ ಇಂಜಿನಿಯರಿಂಗ್ ಪರೀಕ್ಷೆ ಬರೆದಿದ್ದು ಅನುತ್ತೀರ್ಣಗೊಂಡಿದ್ದೆ ಎಂದು ತಿಳಿಸಿದ್ದಾರೆ.

      

  • ಟಗರು ಸಿನಿಮಾ ವೀಕ್ಷಿಸಿ ಮಾನ್ವಿತಾರನ್ನು ಬುಕ್ ಮಾಡಿದ ರಾಮ್ ಗೋಪಾಲ್‍ವರ್ಮ!

    ಟಗರು ಸಿನಿಮಾ ವೀಕ್ಷಿಸಿ ಮಾನ್ವಿತಾರನ್ನು ಬುಕ್ ಮಾಡಿದ ರಾಮ್ ಗೋಪಾಲ್‍ವರ್ಮ!

    ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಅಭಿನಯದ ಟಗರು ಚಿತ್ರವನ್ನು ಖ್ಯಾತ ನಿರ್ದೇಶಕ ರಾಮ್‍ಗೋಪಾಲ್ ವರ್ಮಾ ವೀಕ್ಷಿಸಿದ್ದಾರೆ.

    ಖಾಸಗಿ ಮಾಲ್‍ವೊಂದರಲ್ಲಿ ನಿರ್ದೇಶಕ ಸೂರಿ, ನಟ ಧನಂಜಯ್, ನಟಿ ಮಾನ್ವಿತಾ ಜೊತೆ ಚಿತ್ರ ನೋಡಿದ್ದರು. ಬಹುಭಾಷಾ ನಿರ್ದೇಶಕ ಆರ್‍ಜಿವಿ `ಟಗರು’ ಚಿತ್ರ ನೋಡೋದಕ್ಕಾಗಿಯೇ ಬೆಂಗಳೂರಿಗೆ ಆಗಮಿಸಿದ್ದರು.

    ಟಗರು ಸಿನಿಮಾ ನೋಡಿದ ನಂತರ ಆರ್‍ಜಿವಿ ಇದೀಗ ಸುಕ್ಕಾ ಸ್ಕ್ರೀನ್‍ಪ್ಲೇ ಖ್ಯಾತಿಯ ಸೂರಿ ನಿರ್ದೇಶನವನ್ನು ಕೊಂಡಾಡಿದ್ದಾರೆ. ಈ ರೀತಿ ಸ್ಕ್ರೀನ್‍ಪ್ಲೇ ಇರೋ ಚಿತ್ರವನ್ನು ಇದುವರೆಗೂ ನನ್ನ ಜೀವನದಲ್ಲಿ ನೋಡೇ ಇಲ್ಲ ಎಂದು ತಿಳಿಸಿದ್ದಾರೆ.

    ಸಿನಿಮಾ ವೀಕ್ಷಿಸಿದ ನಂತರ “ಈಗ ತಾನೇ ನಿರ್ದೇಶಕ ಸೂರಿ ನಿರ್ದೇಶನದ ಶಿವರಾಜ್ ಕುಮಾರ್ ಅಭಿನಯದ ಬ್ಲಾಕ್ ಬಸ್ಟರ್ ಕನ್ನಡ ಚಿತ್ರ ಟಗರು ಸಿನಿಮಾವನ್ನು ವೀಕ್ಷಿಸಿದೆ. ಮಾನ್ವಿತಾ ಹರೀಶ್ ಒಬ್ಬ ನಟಿಯಲ್ಲ. ಆಕೆ ಎಲೆಕ್ಟ್ರಿಸಿಟಿ ಇದ್ದಂತೆ. ತನ್ನ ಸಾಮಥ್ರ್ಯದಿಂದಲೇ ಎಲ್ಲರಿಗೂ ಶಾಕ್ ನೀಡುತ್ತಾರೆ. ಇನ್ನೂ ಧನಂನಜಯ್ ನಟನೆ ಎಲ್ಲರನ್ನೂ ಬೆದರಿಸುವಂತಿದೆ ಎಂದು ಟ್ವೀಟ್ ಮಾಡಿದ್ದಾರೆ.

    ಟಗರು ಸಿನಿಮಾ ವೀಕ್ಷಿಸಿದ ನಂತರ ನಾನು ಮಾನ್ವಿತಾ ಹರೀಶ್ ಅವರಿಗೆ ಮೊದಲೇ ಟೋಕನ್ ಅಡ್ವಾನ್ಸ್ ನೀಡಿ ಸಿನಿಮಾಗೆ ಸೈನ್ ಮಾಡಿಸಿಕೊಂಡಿದ್ದೇನೆ. ಆ ಕಮಿಂಟ್‍ಮೆಂಟ್‍ಯಿಂದ ನಾನು ಅವರಿಗೆ 10 ಲಕ್ಷ ರೂ. ನೀಡುತ್ತೇನೆ. ಇಲ್ಲವೆಂದರೆ ಅವರು ಕೇಳಿದಷ್ಟು ಕೊಡುತ್ತೇನೆ. ಅಷ್ಟೇ ಅಲ್ಲದೇ ನಿರ್ದೇಶಕ ಸೂರಿ ಅವರನ್ನು ನಾನು ನಿರ್ಮಿಸುವ ಚಿತ್ರವನ್ನು ನಿರ್ದೇಶನ ಮಾಡಬೇಕಾಗಿ ಕೇಳಿಕೊಂಡಿದ್ದೇನೆ ಎಂದು ರಾಮ್‍ಗೋಪಾಲ್ ವರ್ಮಾ ಟ್ವೀಟ್ ಮಾಡಿದ್ದಾರೆ.