Tag: Rameshwaram Cafe Bomb Blast

  • ಭಾರತದ ರೈಲು, ಪೆಟ್ರೋಲ್ ಪೈಪ್‌ಲೈನ್‌ಗಳ ಮೇಲೆ ದಾಳಿ ಮಾಡಿ -ರಾಮೇಶ್ವರಂ ಕೆಫೆ ಸ್ಫೋಟ ಸಂಚುಕೋರನಿಂದ ಕರೆ

    ಭಾರತದ ರೈಲು, ಪೆಟ್ರೋಲ್ ಪೈಪ್‌ಲೈನ್‌ಗಳ ಮೇಲೆ ದಾಳಿ ಮಾಡಿ -ರಾಮೇಶ್ವರಂ ಕೆಫೆ ಸ್ಫೋಟ ಸಂಚುಕೋರನಿಂದ ಕರೆ

    – ವಿಡಿಯೋ ಮೂಲಕ ಸ್ಲೀಪರ್ ಸೆಲ್‌ಗಳಿಗೆ ಕರೆ ನೀಡಿದ ಘೋರಿ
    – ಭಾರತ ಸರ್ಕಾರವನ್ನು ಅಲುಗಾಡಿಸಲು ದಾಳಿ ನಡೆಸಿ

    ನವದೆಹಲಿ: ಭಾರತಾದ್ಯಂತ ರೈಲುಗಳ ಮೇಲೆ ದಾಳಿ ನಡೆಸುವಂತೆ ಸ್ಲೀಪರ್ ಸೆಲ್‌ಗಳಿಗೆ ರಾಮೇಶ್ವರಂ ಕೆಫೆ ಸ್ಫೋಟ (Rameshwaram Cafe Blast Case) ಪ್ರಕರಣದ ಸೂತ್ರಧಾರ ಪಾಕಿಸ್ತಾನದಲ್ಲಿರುವ ಉಗ್ರ ಫರ್ಹಾತುಲ್ಲಾ ಘೋರಿ (Farhatullah Ghori) ಕರೆ ನೀಡಿದ್ದಾನೆ.

    ಪ್ರಸ್ತುತ ಪಾಕಿಸ್ತಾನದಲ್ಲಿ ನೆಲೆಸಿರುವ ಜಿಹಾದಿ ಘೋರಿ ಭಾರತದಲ್ಲಿನ ರೈಲ್ವೆ ಸಂಪರ್ಕವನ್ನು ಹಳಿತಪ್ಪಿಸಲು ಸ್ಲೀಪರ್ ಸೆಲ್‌ಗಳಿಗೆ ವಿಡಿಯೋ ಮೂಲಕ ಕರೆ ಕೊಟ್ಟಿದ್ದಾನೆ. ಪ್ರೆಶರ್ ಕುಕ್ಕರ್ ಬಳಸಿ ಬಾಂಬ್ ಸ್ಫೋಟಿಸುವ ವಿವಿಧ ವಿಧಾನಗಳನ್ನು ಈ ವೀಡಿಯೊದಲ್ಲಿ ವಿವರಿಸಿದ್ದಾನೆ ಎಂದು ಗುಪ್ತಚರ ಮೂಲಗಳನ್ನು ಆಧಾರಿಸಿ ಮಾಧ್ಯಮವೊಂದು ವರದಿ ಮಾಡಿದೆ.ಇದನ್ನೂ ಓದಿ: ರಣ್‌ವೀರ್ ಸಿಂಗ್ ಜೊತೆ ಹೆಜ್ಜೆ ಹಾಕಲಿದ್ದಾರೆ ನಾಗಚೈತನ್ಯ ಭಾವಿ ಪತ್ನಿ

    ಭಾರತ ಸರ್ಕಾರವು ಜಾರಿ ನಿರ್ದೇಶನಾಲಯ ಹಾಗೂ ರಾಷ್ಟ್ರೀಯ ಗುಪ್ತಚರ ಸಂಸ್ಥೆ (National Intelligence Agency) ಮೂಲಕ ಸ್ಲೀಪರ್ ಸೆಲ್‌ಗಳ ಆಸ್ತಿಯನ್ನು ದುರ್ಬಲಗೊಳಿಸುತ್ತಿದೆ. ಹೀಗಾಗಿ ರೈಲುಗಳು ಅಲ್ಲದೇ ಭಾರತದ ಪೆಟ್ರೋಲಿಯಂ ಪೈಪ್‌ಲೈನ್‌ಗಳನ್ನು ನಾಶ ಮಾಡಬೇಕು. ಈ ಮೂಲಕ ಭಾರತ ಸರ್ಕಾರವನ್ನು ಅಲುಗಾಡಿಸಬೇಕು ಎಂದು ಹೇಳಿದ್ದಾನೆ.

    ಮೂರು ವಾರಗಳ ಹಿಂದೆ ಟೆಲಿಗ್ರಾಮ್‌ನಲ್ಲಿ ಈ ವೀಡಿಯೊವನ್ನು ಬಿಡುಗಡೆ ಮಾಡಲಾಗಿದೆ ಎಂದು ಗುಪ್ತಚರ ಸಂಸ್ಥೆಗಳ ಮೂಲಗಳು ತಿಳಿಸಿವೆ.

    ಪಾಕಿಸ್ತಾನದ ಗುಪ್ತಚರ ಸಂಸ್ಥೆ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (INS) ಬೆಂಬಲದೊಂದಿಗೆ ಸ್ಲೀಪರ್ ಸೆಲ್ ಮೂಲಕ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟಿಸಿದ್ದ ವಿಚಾರ ತನಿಖೆಯಿಂದ ಬೆಳಕಿಗೆ ಬಂದಿತ್ತು.ಇದನ್ನೂ ಓದಿ: ಸಮಂತಾ ನನ್ನ ಫ್ರೆಂಡ್ ಎಂದ ಉರ್ಫಿ ಜಾವೇದ್

    ಫರ್ಹತುಲ್ಲಾ ಘೋರಿ ಯಾರು?
    ಅಬು ಸೂಫಿಯಾನ್, ಸರ್ದಾರ್ ಸಾಹಬ್ ಮತ್ತು ಫಾರೂ ಎಂದೂ ಕರೆಯಲ್ಪಡುವ ಫರ್ಹತುಲ್ಲಾ ಘೋರಿ, 2002 ರಲ್ಲಿ ಗುಜರಾತ್‌ನ ಅಕ್ಷರಧಾಮ ದೇವಾಲಯದ ಮೇಲೆ ದಾಳಿ ನಡೆಸಿದ್ದ. ಆ ದಾಳಿಯಲ್ಲಿ 30 ಕ್ಕೂ ಹೆಚ್ಚು ಜನರು ಸಾವನ್ನಪ್ಪಿ, 80 ಜನರು ಗಾಯಗೊಂಡಿದ್ದರು. ಜೊತೆಗೆ 2005 ರಲ್ಲಿ ಹೈದರಾಬಾದ್‌ನ ಟಾಸ್ಕ್ ಫೋರ್ಸ್ ಕಚೇರಿ ಮೇಲೆ ನಡೆದ ದಾಳಿಯಲ್ಲಿಯೂ ಈತನ ಕೈವಾಡ ಇರುವುದು ದೃಢಪಟ್ಟಿತ್ತು.

    ಮಾ.1 ರಂದು ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದಲ್ಲಿ 10 ಜನರು ಗಾಯಗೊಂಡಿದ್ದರು. ಮಾರ್ಚ್ 3 ರಂದು ಪ್ರಕರಣವನ್ನು ಕೈಗೆತ್ತಿಕೊಂಡ ರಾಷ್ಟ್ರೀಯ ತನಿಖಾ ದಳ (NIA) ಒಂದು ತಿಂಗಳ ನಂತರ ಎಪ್ರಿಲ್ 12 ರಂದು ಇಬ್ಬರು ಪ್ರಮುಖ ಆರೋಪಿಗಳಾದ ಅಬ್ದುಲ್ ಮಥೀನ್ ಅಹ್ಮದ್ ತಾಹಾ ಮತ್ತು ಮುಸ್ಸಾವಿರ್ ಹುಸೇನ್ ಶಾಜಿಬ್‌ಅನ್ನು ಪಶ್ಚಿಮ ಬಂಗಾಳದಲ್ಲಿ ಬಂಧಿಸಿತ್ತು. ಫರ್ಹತುಲ್ಲಾ ಘೋರಿ ಮತ್ತು ಅವರ ಅಳಿಯ ಶಾಹಿದ್ ಫೈಸಲ್ ದಕ್ಷಿಣ ಭಾರತದಲ್ಲಿ ಸ್ಲೀಪರ್ ಸೆಲ್‌ಗಳ ಪ್ರಬಲ ಸಂಪರ್ಕ ಹೊಂದಿದ್ದಾರೆ.ಇದನ್ನೂ ಓದಿ: ಕೊಯ್ನಾ ಜಲಾಶಯ ಸಂಪೂರ್ಣ ಭರ್ತಿ – ಕೃಷ್ಣಾ ನದಿ ತೀರದಲ್ಲಿ ಪ್ರವಾಹ ಭೀತಿ

    ಕಳೆದ ವರ್ಷ ದೆಹಲಿ ಮತ್ತು ಉತ್ತರ ಪ್ರದೇಶದಿಂದ ಮೂವರು ಮೋಸ್ಟ್ ವಾಂಟೆಡ್ ಭಯೋತ್ಪಾದಕರನ್ನು ದೆಹಲಿ ಪೊಲೀಸರು (Delhi Police) ಬಂಧಿಸಿದ್ದರು. ತನಿಖೆಯ ವೇಳೆ ಘೋರಿ ಭಯೋತ್ಪಾದಕರ ಹ್ಯಾಂಡ್ಲರ್ ಆಗಿರುವ ವಿಚಾರ ಬೆಳಕಿಗೆ ಬಂದಿತ್ತು.

  • ರಾಮೇಶ್ವರಂ ಕೆಫೆ ಸ್ಫೋಟ – ಎನ್‌ಐಎಯಿಂದ ಸ್ಪಾಟ್‌ ಮಹಜರು

    ರಾಮೇಶ್ವರಂ ಕೆಫೆ ಸ್ಫೋಟ – ಎನ್‌ಐಎಯಿಂದ ಸ್ಪಾಟ್‌ ಮಹಜರು

    ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ (The Rameshwaram Cafe Bomb Blast Case) ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (NIA) ಇಂದು ಆರೋಪಿಗಳನ್ನು ಕರೆ ತಂದು ಸ್ಪಾಟ್‌ ಮಹಜರು ನಡೆಸುತ್ತಿದೆ.

    ಮುಂಜಾನೆ 5:30ಕ್ಕೆ ಕುಂದಲಹಳ್ಳಿಯಲ್ಲಿರುವ ರಾಮೇಶ್ವರಂ ಕೆಫೆಗೆ ಆರೋಪಿಗಳಾದ ಮಸ್ಸಾವೀರ್, ಅಬ್ಧುಲ್ ಮತೀನ್ ತಹಾ ಅವರನ್ನು ಕರೆದುಕೊಂಡ ಬಂದ ಎನ್‌ಐಎ ಸ್ಥಳ ಮಹಜರು ಪ್ರಕ್ರಿಯೆ ನಡೆಸುತ್ತಿದೆ. ಇದನ್ನೂ ಓದಿ: ತಮಿಳುನಾಡಿಗೂ ಕಾವೇರಿ ಹರಿದರೂ ರೈತರಿಗೆ ತಪ್ಪದ ಕಂಟಕ!

     

    ಮಾರ್ಚ್‌ 1 ರಂದು ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಫೋಟ ನಡೆದಿತ್ತು. ಹಲವು ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಿದ ಬಳಿಕ ಎನ್‌ಐಎ ಕೋಲ್ಕತ್ತಾದಲ್ಲಿ ಏಪ್ರಿಲ್‌ 12 ರಂದು ಮಸ್ಸಾವೀರ್, ಅಬ್ಧುಲ್ ಮತೀನ್ ತಹಾ ಅವರನ್ನು ಬಂಧಿಸಿತ್ತು.

    ಸ್ಥಳೀಯ ಪೊಲೀಸರ ಭದ್ರತೆಯ ನಡುವೆ ಈಗ ಎನ್‌ಐಎ ಮಹಜರು ಪ್ರಕ್ರಿಯೆ ನಡೆಸುತ್ತಿದೆ.

     

  • ರಾಮೇಶ್ವರಂ ಕೆಫೆ ಬಾಂಬ್‌ ಕೆಫೆ ಸ್ಫೋಟ – ಬೆಂಗಳೂರು ಟೆಕ್ಕಿಯ ಖಾತೆಗೆ ದಿಢೀರ್‌ ಭಾರೀ ಹಣ ಜಮೆ

    ರಾಮೇಶ್ವರಂ ಕೆಫೆ ಬಾಂಬ್‌ ಕೆಫೆ ಸ್ಫೋಟ – ಬೆಂಗಳೂರು ಟೆಕ್ಕಿಯ ಖಾತೆಗೆ ದಿಢೀರ್‌ ಭಾರೀ ಹಣ ಜಮೆ

    – ಬೆಂಗಳೂರು ಸೇರಿದಂತೆ 11 ಕಡೆ ಎನ್‌ಐಎ ದಾಳಿ
    – ಕರ್ನಾಟಕದ ಇಬ್ಬರು ವೈದ್ಯರು ವಶ

    ನವದೆಹಲಿ: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ (Rameshwaram Cafe Bomb Blast) ಪ್ರಕರಣದ ತನಿಖೆ ತೀವ್ರಗೊಳಿಸಿರುವ ರಾಷ್ಟ್ರೀಯ ತನಿಖಾ ದಳ (NIA) 4 ರಾಜ್ಯಗಳ 11 ಕಡೆ ರೇಡ್ ಮಾಡಿದೆ.

    ಬೆಂಗಳೂರಿನ (Bengaluru) ಕುಮಾರಸ್ವಾಮಿ ಲೇಔಟ್, ಬನಶಂಕರಿ ಸೇರಿ ಐದಕ್ಕೂ ಹೆಚ್ಚು ಕಡೆ ದಾಳಿ ನಡೆಸಿದೆ. ಮತೀನ್, ಶಾಝೀಬ್ ನಾಲ್ಕು ವರ್ಷ ತಲೆಮರೆಸಿಕೊಂಡಿದ್ದ ಅವಧಿಯಲ್ಲಿ ನೆರವು ನೀಡಿದವರಿಗಾಗಿ ಎನ್‌ಐಎ ಈ ಕಾರ್ಯಾಚರಣೆ ಮಾಡಿದೆ.

     

    ತಮಿಳುನಾಡಿನ ಕೊಯಮತ್ತೂರಿನ (Tamilnadu Coimbatore) ಖಾಸಗಿ ಆಸ್ಪತ್ರೆಯೊಂದರ ಮೇಲೆ ರೇಡ್ ಮಾಡಿದ ಎನ್‌ಐಎ, ಕೆಫೆ ಸ್ಫೋಟ ಪ್ರಕರಣದಲ್ಲಿ ಭಾಗಿಯಾದ ಶಂಕೆ ಮೇರೆಗೆ ಕರ್ನಾಟಕ ಮೂಲದ ಇಬ್ಬರು ವೈದ್ಯರನ್ನು ವಶಕ್ಕೆ ಪಡೆದಿದೆ. ಈ ಇಬ್ಬರು ಪಾತಕಿಗಳಿಗೆ ಹಣಕಾಸು ನೆರವು ನೀಡಿರುವ ಶಂಕೆ ವ್ಯಕ್ತವಾಗಿದೆ.

    ಮತ್ತೊಂದು ಕಡೆ ಆಂಧ್ರದ ರಾಯದುರ್ಗದಲ್ಲಿ ನಿವೃತ್ತ ಶಿಕ್ಷಕ ಅಬ್ದುಲ್ ಮನೆ ಮೇಲೆಯೂ ಎನ್‌ಐಎ ದಾಳಿ ನಡೆಸಿ, ಅವರ ಪುತ್ರ ಸೊಹೇಲ್‌ನನ್ನು ವಶಕ್ಕೆ ಪಡೆದಿದೆ. ಈತ ಬೆಂಗಳೂರಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದ. ಸೊಹೇಲ್ ಬ್ಯಾಂಕ್ ಖಾತೆಗೆ ದಿಢೀರ್ ಎಂದು ಭಾರೀ ಮೊತ್ತದ ಹಣ ಜಮೆಯಾಗಿದ್ದ ಬಗ್ಗೆ ಅವರ ಕುಟುಂಬಸ್ಥರನ್ನು ಎನ್‌ಐಎ ಪ್ರಶ್ನಿಸಿದೆ. ತೆಲಂಗಾಣದಲ್ಲಿಯೂ ಎನ್‌ಐಎ ರೇಡ್ ಮಾಡಿದೆ. ಹಲವು ಮಹತ್ವದ ದಾಖಲೆಗಳನ್ನು ಸೀಜ್ ಮಾಡಿದೆ. ಇದನ್ನೂ ಓದಿ: ಕಿಲ್ಲರ್ ಬಾಯ್‌ಗೆ ಪುಣೆ ಠಾಣೆಯಲ್ಲಿ ರಾಜಾತಿಥ್ಯ – ಪಿಜ್ಜಾ, ಬಿರಿಯಾನಿ ತಿನ್ನಿಸಿದ್ದ ಪೊಲೀಸರ ವಿರುದ್ಧ ಆಕ್ರೋಶ

     

  • ಫುಟ್‌ಪಾತ್‌ನಲ್ಲಿ ಬಟ್ಟೆ ವ್ಯಾಪಾರ ಮಾಡಿದ್ದ ಮತೀನ್‌ ಬಾಂಬ್‌ ಸ್ಫೋಟದ ಸೂತ್ರಧಾರ!

    ಫುಟ್‌ಪಾತ್‌ನಲ್ಲಿ ಬಟ್ಟೆ ವ್ಯಾಪಾರ ಮಾಡಿದ್ದ ಮತೀನ್‌ ಬಾಂಬ್‌ ಸ್ಫೋಟದ ಸೂತ್ರಧಾರ!

    ನವದೆಹಲಿ: ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟದ (Rameshwaram Cafe Bomb Blast) ನಡೆದ ಬರೋಬ್ಬರಿ 42 ದಿನಗಳ ಬಳಿಕ ಬಾಂಬರ್ ಮುಸಾವೀರ್ ಹುಸೇನ್ (Mussavir Hussain Shazeb) ಮತ್ತು ಸೂತ್ರಧಾರ ಅಬ್ದುಲ್ ಮತೀನ್ ತಾಹಾನನ್ನು (Abdul Matheen Taha) ರಾಷ್ಟ್ರೀಯ ತನಿಖಾ ದಳ (NIA) ಹೆಡೆಮುರಿ ಕಟ್ಟಿದೆ.

    ಖಚಿತ ಸುಳಿವಿನ ಆಧಾರದ ಮೇಲೆ ಪೂರ್ವ ಮಿಡ್ನಾಪುರದ ಕಾಂತಿ ಪಟ್ಟಣದಲ್ಲಿ ನಸುಕಿನ ಜಾವ ಮನೆಯೊಂದರ ಮೇಲೆ ಎನ್‌ಐಎ ದಾಳಿ ನಡೆಸಿದೆ. ಗಾಢ ನಿದ್ದೆಯಲ್ಲಿದ್ದ ಇಬ್ಬರು ಶಂಕಿತ ಉಗ್ರರನ್ನು ಬಂಧಿಸಿದೆ.

    ಅಸ್ಸಾಂನಲ್ಲಿ ಕೆಲ ದಿನ ತಲೆ ಮರೆಸಿಕೊಂಡಿದ್ದ ಆರೋಪಿಗಳು ಇತ್ತೀಚಿಗೆ ಬಂಗಾಳಕ್ಕೆ ಶಿಫ್ಟ್ ಆಗಿದ್ದರು. ಮಾರ್ಚ್ 1ರಂದು ಸ್ಫೋಟ ನಡೆದ ದಿನವೇ ಬೆಂಗಳೂರಿನಿಂದ ಬಳ್ಳಾರಿ ಮಾರ್ಗವಾಗಿ ಬಾಂಬರ್ ಮುಸಾವೀರ್  ಪರಾರಿಯಾಗಿದ್ದ. ಆದರೆ ಮುಸಾವೀರ್ ಸಂಪೂರ್ಣ ಚಲನವಲನ ಹಲವು ಸಿಸಿಟಿವಿಗಳಲ್ಲಿ ಸೆರೆಯಾಗಿತ್ತು. ಮುಸಾವೀರ್ ಧರಿಸಿದ್ದ ಟೋಪಿ ಆಧಾರದ ಮೇಲೆ ಆರೋಪಿಯನ್ನು ಪೊಲೀಸರು ಗುರುತಿಸಿದ್ದರು.

     

    ವಿದೇಶಕ್ಕೆ ಪರಾರಿಯಾಗಿದ್ದಾನೆ ಎನ್ನಲಾಗಿದ್ದ ಸೂತ್ರಧಾರ ಮತೀನ್ ವಿಘ್ನೇಶ್ ಹೆಸರಿನಲ್ಲಿ ದೇಶದ ಒಳಗಡೆಯೇ ತಲೆಮರೆಸಿಕೊಂಡಿದ್ದ. ಮುಸಾವಿರ್ ಪದೇ ಪದೇ ಸಿಮ್ ಬದಲಿಸುತ್ತಾ, ಸ್ಥಳ ಬದಲಿಸುತ್ತಾ ತನಿಖೆಯ ಹಾದಿ ತಪ್ಪಿಸಲು ನೋಡಿದ್ದ. ಇಬ್ಬರು ಜೊತೆಗೂಡಿ ನಕಲಿ ದಾಖಲೆ ನೀಡಿ ಕಡಿಮೆ ದರ್ಜೆಯ ಹೋಟೆಲ್‌ನಲ್ಲಿ ತಂಗಿದ್ದರು. ಕೊನೆಗೆ ಕಾಂತಿ ಪಟ್ಟಣದ ಹೊರವಲಯದಲ್ಲಿ ಬಾಡಿಗೆಗೆ ಮನೆ ಪಡೆದಿದ್ದರು.

    ಆರೋಪಿಗಳು ಬೇರೆ ಹೆಸರಲ್ಲಿ ಕೋಲ್ಕತ್ತಾದಲ್ಲಿ ಮಾರ್ಚ್ 13, 14ರಂದು ಹೋಟೆಲ್ ರೂಮ್ ಬುಕ್ ಮಾಡಿದ್ದರು. ಯುಶಾ ಶಾಹನವಾಜ್, ಅನ್ಮೋಲ್ ಕುಲಕರ್ಣಿ ಹೆಸರಲ್ಲಿ ಬುಕ್ ಮಾಡಿದ್ದ ಆರೋಪಿಗಳು ಎರಡು ದಿನ ಹೋಟೆಲ್‌ನಲ್ಲಿ ತಂಗಿದ್ದರು. ಇದನ್ನೂ ಓದಿ : 370 ವಿಧಿಯನ್ನು ರದ್ದುಪಡಿಸಿದ್ದಕ್ಕೆ ಅಂಬೇಡ್ಕರ್ ಆತ್ಮ ನನ್ನನ್ನು ಆಶೀರ್ವದಿಸುತ್ತಿರಬಹುದು: ಮೋದಿ

     

    ಇಂದು ಪೂರ್ವ ಮಿಡ್ನಾಪುರ ಕೋರ್ಟ್ ಮುಂದೆ ಪಾತಕಿಗಳನ್ನು ಹಾಜರುಪಡಿಸಿದ ಬಳಿಕ ಬೆಂಗಳೂರಿಗೆ ಎನ್‌ಐಎ ಕರೆತರಲಿದೆ. ಅಂದ ಹಾಗೇ ಇದೇ ಏ.6 ರಂದು ಪೂರ್ವ ಮಿಡ್ನಾಪುರದಲ್ಲಿ ಎನ್‌ಐಎ ಮಿಡ್‌ನೈಟ್ ಆಪರೇಷನ್‌ಗೆ ಮುಂದಾಗಿತ್ತು. 2 ವರ್ಷದ ಹಿಂದಿನ ಸ್ಪೋಟ ಪ್ರಕರಣದ ಆರೋಪಿಗಳನ್ನು ಬಂಧಿಸಲು ಮುಂದಾದಾಗ ಸ್ಥಳೀಯರು ತಿರುಗಿಬಿದ್ದಿದ್ದರು.

    ವಿವಿಧ ಕೇಂದ್ರ ತನಿಖಾ ಸಂಸ್ಥೆಗಳು ಮತ್ತು ಕರ್ನಾಟಕ, ಪಶ್ಚಿಮ ಬಂಗಾಳ, ತಮಿಳುನಾಡು, ಯುಪಿ, ದೆಹಲಿ, ಎಪಿ ಮತ್ತು ತೆಲಂಗಾಣ ರಾಜ್ಯ ಪೊಲೀಸ್ ಇಲಾಖೆಗಳ ಸಹಕಾರದಿಂದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಇದನ್ನೂ ಓದಿ : ಕೇವಲ 2 ವೋಟಿಗಾಗಿ ಕಾಡು ಹಾದಿಯಲ್ಲಿ 107 ಕಿಮೀ ಸಾಗಿದ ಅಧಿಕಾರಿಗಳು

     

    ಯಾರು ಮುಸಾವೀರ್?
    ಶಿವಮೊಗ್ಗದ ತೀರ್ಥಹಳ್ಳಿ ಮೂಲದ ಐಸಿಸ್‌ ತೀರ್ಥಹಳ್ಳಿ ಮಾಡ್ಯೂಲ್‌ನ ಪ್ರಮುಖ ವ್ಯಕ್ತಿ. ರಾಮೇಶ್ವರಂ ಕೆಫೆಯಲ್ಲಿ ಇಡ್ಲಿ ತಿಂದು ಬಾಂಬಿಟ್ಟು ಮುಸಾವೀರ್ ಹುಸೇನ್ ಪರಾರಿಯಾಗಿದ್ದ.

    ಯಾರು ಅಬ್ದುಲ್ ಮತೀನ್?
    ಕೆಫೆ ಸ್ಫೋಟ ಕೇಸ್‌ನ ಮಾಸ್ಟರ್‌ಮೈಂಡ್ ಆಗಿರುವ ಈತ ಅಲ್ ಹಿಂದ್ ಸಂಘಟನೆಯ ಪ್ರಮುಖ ಸದಸ್ಯನಾಗಿದ್ದಾನೆ. ತೀರ್ಥಹಳ್ಳಿಯ ಸೊಪ್ಪುಗುಡ್ಡೆ ನಿವಾಸಿಯಾಗಿದ್ದ ಈತ ಬ್ರಾಡ್‌ಬ್ಯಾಂಡ್ ಕಂಪನಿಯಲ್ಲಿ ಕೆಲಸ ಮಾಡಿದ್ದ ಈತ ಫುಟ್‌ಪಾತ್‌ನಲ್ಲಿ ಬಟ್ಟೆ ವ್ಯಾಪಾರ ಮಾಡಿದ್ದ. ಡಾರ್ಕ್‌ ವೆಬ್‌ ಬಳಕೆಯಲ್ಲಿ ಪರಿಣಿತನಾಗಿರುವ ಈತ 2020 ರಿಂದ ನಾಪತ್ತೆಯಾಗಿದ್ದಾನೆ. ಮಂಗಳೂರು ಕುಕ್ಕರ್ ಬಾಂಬ್ ಪ್ರಕರಣದ ಕಿಂಗ್‌ಪಿನ್ ಆಗಿದ್ದು ಈಗ ಜೈಲಿನಲ್ಲಿ ಇರುವ ಶಾಕೀರ್‌ಗೆ ಬಾಂಬ್‌ ತಯಾರಿಸಲು ತರಬೇತಿ ನೀಡಿದ್ದ.

  • ಕೋಡ್‌ವರ್ಡ್‌ ಸಹಾಯದಿಂದ ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಆರೋಪಿಗಳು ಅರೆಸ್ಟ್‌!

    ಕೋಡ್‌ವರ್ಡ್‌ ಸಹಾಯದಿಂದ ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಆರೋಪಿಗಳು ಅರೆಸ್ಟ್‌!

    ಬೆಂಗಳೂರು: ಕೋಡ್‌ವರ್ಡ್‌ (Code Word) ಸಹಾಯದಿಂದ ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ (Rameshwaram Cafe Bomb Blast) ಆರೋಪಿಗಳ ಬಂಧನ ಮಾಡಲಾಗಿದೆ.

    ಹೌದು.ಬೆಂಗಳೂರಿನಲ್ಲಿ ಕೃತ್ಯ ಎಸಗಿದ್ದ ಮುಸಾವೀರ್ ಹುಸೇನ್ (Mussavir Hussain) ಕೋಲ್ಕತ್ತಾದ ಪೂರ್ವ ಮಿಡ್ನಾಪುರ ದಿಘಾ ಮನೆಯಲ್ಲಿ ಅಡಗಿದ್ದ. ರಾಷ್ಟ್ರೀಯ ತನಿಖಾ ದಳ (NIA) ಅಧಿಕಾರಿಗಳು ಖಚಿತ ಮಾಹಿತಿಯ ಮೇರೆಗೆ ಮುಸಾವೀರ್ ಹುಸೇನ್ ಮತ್ತು ಕೃತ್ಯಕ್ಕೆ ಸಹಕಾರ ನೀಡಿದ್ದ ಅಬ್ದುಲ್ ಮತೀನ್‌ನನ್ನು (Abdul Matin) ಅರೆಸ್ಟ್‌ ಮಾಡಿದ್ದಾರೆ.

    ಮಾಝ್‌ ಮುನೀರ್‌
    ಮಾಝ್‌ ಮುನೀರ್‌

    ಸೆರೆಯಾಗಿದ್ದು ಹೇಗೆ?
    ಶಿವಮೊಗ್ಗ ತುಂಗಾ ನದಿ ತೀರದಲ್ಲಿ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಈಗಾಗಲೇ ಬಂಧನಕ್ಕೆ ಒಳಗಾಗಿ ಜೈಲು ಸೇರಿದ್ದ ಮಾಝ್‌ ಮುನೀರ್‌ನನ್ನು (Maaz Muneer) ಎನ್‌ಐಎ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಿತ್ತು. ಮುನೀರ್ ಸೆಲ್ ಮೇಲೆ ದಾಳಿ ಮಾಡಿದಾಗ ಮೆಮೋರಿ ಕಾರ್ಡ್ ಪತ್ತೆಯಾಗಿತ್ತು. ಈ ಮೆಮೋರಿ ಕಾರ್ಡ್‌ ಪರಿಶೀಲಿಸಿದಾಗ ಹಲವು ಕೋಡ್‌ ವರ್ಡ್‌ ಸಿಕ್ಕಿದ್ದವು. ಈ ಕೋಡ್‌ ವರ್ಡ್‌ ಡಿಕೋಡ್‌ ಮಾಡಿದಾಗ ಆರೋಪಿಗಳ ಮಾಹಿತಿ ಸಿಗತೊಡಗಿತು ಎಂದು ಎನ್‌ಐಎ ಮೂಲಗಳು ತಿಳಿಸಿವೆ.  ಇದನ್ನೂ ಓದಿ: ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಟ್ವಿಸ್ಟ್‌ – ಈಗಾಗಲೇ A1 ಆರೋಪಿ ಅರೆಸ್ಟ್‌!

    ಈ ಖಚಿತ ಮಾಹಿತಿಯನ್ನು ಆಧಾರಿಸಿ ತನಿಖೆಗೆ ಇಳಿದಾಗ ಆರೋಪಿಗಳು ಪಶ್ಚಿಮ ಬಂಗಾಳದಲ್ಲೇ ತಲೆ ಮರೆಸಿಕೊಂಡಿದ್ದ ವಿಚಾರ ತಿಳಿದು ಬಂದಿತ್ತು. ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿದ ಎನ್‌ಐಎ ಇಂದು ಪಶ್ಚಿಮ ಬಂಗಾಳದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದೆ. ಅಚ್ಚರಿಯ ವಿಷಯ ಏನೆಂದರೆ ಮುನೀರ್‌ ಜೈಲಿನಲ್ಲಿ ಕುಳಿತೇ ಕೋಡ್‌ ವರ್ಡ್‌ ಬರೆದಿದ್ದ.

     

    ಮಾಝ್‌ ಮುನೀರ್‌ ಮೊದಲ ಆರೋಪಿ:
    ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಜೈಲ್ಲಿನಲ್ಲಿದ್ದ ಮಾಝ್‌ ಮುನೀರ್‌ನನ್ನು ಎನ್‌ಐಎ ಅಧಿಕಾರಿಗಳು 7 ದಿನಗಳ ಕಾಲ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಜೈಲಿನಲ್ಲಿ ರೇಡ್ ಮಾಡಿದ ಬಳಿಕ ಮಾಝ್ ಬ್ಯಾರಕ್‌ನಲ್ಲಿ ಕೆಲವೊಂದು ಪತ್ರಗಳು ಸಿಕ್ಕಿದ್ದವು. ಅವುಗಳು ಪ್ರಕರಣಕ್ಕೆ ಮಹತ್ವದ ತಿರುವು ನೀಡಿದ ಹಿನ್ನೆಲೆಯಲ್ಲಿ  ಕೆಫೆ ಸ್ಫೋಟ ಪ್ರಕರಣದಲ್ಲಿ ಮಾಝ್‌ ಮುನೀರ್‌ ಸೂತ್ರಧಾರನಾಗಿದ್ದು ಆತನನ್ನೇ ಮೊದಲ ಆರೋಪಿಯನ್ನಾಗಿ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

    ಎರಡು ಮತ್ತು ಮೂರನೇ ಆರೋಪಿಗಳನ್ನಾಗಿ ಮತೀನ್ ಮತ್ತು ಮುಸಾವೀರ್ ಹೆಸರನ್ನು ಉಲ್ಲೇಖಿಸಲಾಗಿದ್ದು, ಈಗ ಬಂಧನ ಆಗಿರುವ ಮುಜಾಮಿಲ್ ಷರೀಫ್ ನಾಲ್ಕನೇ ಆರೋಪಿಯನ್ನಾಗಿ ಮಾಡಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

    ಮಾಝ್‌ ಮುನೀರ್‌ ಮಂಗಳೂರಿನ ಮುಡಿಪು ಸಮಿಪದ ಕಾಲೇಜಿನಲ್ಲಿ ಅಂತಿಮ ವರ್ಷದ ಎಂಟೆಕ್‌ ಓದುತ್ತಿದ್ದಾಗ ಬಂಧನ ಮಾಡಲಾಗಿದೆ.

    ಮುಸ್ಸಾವಿರ್ ಹುಸೇನ್‌ ಶಜೀಬ್ ಮೊಹಮ್ಮದ್‌ ಜುನೈದ್ ಸಯ್ಯದ್‌ ಹೆಸರಿನಲ್ಲಿ ಡ್ರೈವಿಂಗ್‌ ಲೈಸೆನ್ಸ್‌ ಹೊಂದಿದ್ದಾನೆ. ಅಬ್ದುಲ್‌ 5.5 ಅಡಿ ಹೊಂದಿದ್ದು ಮುಂದುಗಡೆ ತಲೆ ಬೋಳಾಗಿದ್ದು, ಹೆಚ್ಚಾಗಿ ಕ್ಯಾಪ್‌ ಧರಿಸುತ್ತಾನೆ. 30 ವರ್ಷದ ಈತ ವಿಘ್ನೇಶ್‌‌, ಸುಮಿತ್‌ ಅಥವಾ ಬೇರೆ ಹಿಂದೂ ವ್ಯಕ್ತಿಯ ಹೆಸರಿನಲ್ಲಿ ನಕಲಿ ಐಡಿ ದಾಖಲೆಯನ್ನು ಹೊಂದಿದ್ದಾನೆ ಎಂದು ಈ ಹಿಂದೆ ಎನ್‌ಐಎ ತಿಳಿಸಿತ್ತು.

  • ವಿಘ್ನೇಶ್‌, ಸುಮೀತ್‌ ಹೆಸರಿನಲ್ಲಿ ನಕಲಿ ಐಡಿ ಕಾರ್ಡ್‌ – ರಾಮೇಶ್ವರಂ ಕೆಫೆ ಆರೋಪಿಗಳ ಮಾಹಿತಿ ನೀಡಿದ್ರೆ 10 ಲಕ್ಷ ಬಹುಮಾನ

    ವಿಘ್ನೇಶ್‌, ಸುಮೀತ್‌ ಹೆಸರಿನಲ್ಲಿ ನಕಲಿ ಐಡಿ ಕಾರ್ಡ್‌ – ರಾಮೇಶ್ವರಂ ಕೆಫೆ ಆರೋಪಿಗಳ ಮಾಹಿತಿ ನೀಡಿದ್ರೆ 10 ಲಕ್ಷ ಬಹುಮಾನ

    ಬೆಂಗಳೂರು: ರಾಮೇಶ್ವರಂ ಕೆಫೆ ಸ್ಫೋಟದ (Rameshwaram Cafe Bomb Blast) ಆರೋಪಿಗಳ ಫೋಟೋವನ್ನು ರಾಷ್ಟ್ರೀಯ ತನಿಖಾ ದಳ (NIA)ಬಿಡುಗಡೆ ಮಾಡಿ ಮಾಹಿತಿ ನೀಡಿದ ವ್ಯಕ್ತಿಗಳಿಗೆ 10 ಲಕ್ಷ ರೂ. ಬಹುಮಾನ ನೀಡುವುದಾಗಿ ಪ್ರಕಟಿಸಿದೆ.

    ಬಾಂಬ್‌ ಇರಿಸಿದ ವ್ಯಕ್ತಿ ಸ್ಫೋಟ ನಡೆಸಿದ ಪ್ರಮುಖ ಆರೋಪಿ ಮುಸ್ಸಾವಿರ್ ಹುಸೇನ್‌ ಶಜೀಬ್ (Mussavir Hussain Shazib) ಮೂರು ಫೋಟೋ ಬಿಡುಗಡೆ ಮಾಡಿದೆ. 30 ವರ್ಷ ವಯಸ್ಸಿನ ಈತ ಜಿಮ್‌ ಬಾಡಿ ಹೊಂದಿದ್ದು ಅಂದಾಜು 6.2 ಅಡಿ ಹೊಂದಿದ್ದಾನೆ. ಮೊಹಮ್ಮದ್‌ ಜುನೈದ್ ಸಯ್ಯದ್‌ ಹೆಸರಿನಲ್ಲಿ ಡ್ರೈವಿಂಗ್‌ ಲೈಸೆನ್ಸ್‌ ಹೊಂದಿದ್ದಾನೆ ಎಂದು ತಿಳಿಸಿದೆ.  ಇದನ್ನೂ ಓದಿ: ರಾಮೇಶ್ವರಂ ಕೆಫೆ ಸ್ಫೋಟ – ದಾಳಿಯ ಸಂಚುಕೋರ ಅರೆಸ್ಟ್‌

    ಮತ್ತೊಬ್ಬ ಸಂಚುಕೋರ ಅಬ್ದುಲ್‌ ಮತೀನ್‌ ಅಹ್ಮದ್‌ (Abdul Matheen Ahmed) 5.5 ಅಡಿ ಹೊಂದಿದ್ದು ಮುಂದುಗಡೆ ತಲೆ ಬೋಳಾಗಿದ್ದು, ಹೆಚ್ಚಾಗಿ ಕ್ಯಾಪ್‌ ಧರಿಸುತ್ತಾನೆ. 30 ವರ್ಷದ ಈತ ವಿಘ್ನೇಶ್‌‌, ಸುಮಿತ್‌ ಅಥವಾ ಬೇರೆ ಹಿಂದೂ ವ್ಯಕ್ತಿಯ ಹೆಸರಿನಲ್ಲಿ ನಕಲಿ ಐಡಿ ದಾಖಲೆಯನ್ನು ಹೊಂದಿದ್ದಾನೆ.

    ಇವರಿಬ್ಬರು ಪುರುಷರ/ ಹುಡುಗರ ಹಾಸ್ಟೆಲ್‌, ಪಿಜಿಯಲ್ಲಿ ನೆಲೆಸುತ್ತಾರೆ. ಕಡಿಮೆ ಬಜೆಟ್‌ ಹೋಟೆಲ್‌, ಲಾಡ್ಜ್‌ನಲ್ಲಿ ತಂಗುತ್ತಾರೆ ಎಂದು ತಿಳಿಸಿದೆ. ಇವರಿಬ್ಬರ ಬಗ್ಗೆ ಮಾಹಿತಿ ನೀಡಿದ ವ್ಯಕ್ತಿಗಳ ವಿವರವನ್ನು ಗೌಪ್ಯವಾಗಿ ಇಡಲಾಗುವುದು ಎಂದು ತಿಳಿಸಿದೆ.