Tag: Rameshwara temple

  • ಲಕ್ಷ್ಮಣನ ಬಾಣದಿಂದ ಸೃಷ್ಟಿಯಾದ ಜಲಧಾರೆ ಯಾವುದು? – ಶ್ರೀರಾಮ ಲಕ್ಷ್ಮಣ ತೀರ್ಥ ಹೆಸರಿಟ್ಟಿದ್ದು ಏಕೆ ಗೊತ್ತಾ?

    ಲಕ್ಷ್ಮಣನ ಬಾಣದಿಂದ ಸೃಷ್ಟಿಯಾದ ಜಲಧಾರೆ ಯಾವುದು? – ಶ್ರೀರಾಮ ಲಕ್ಷ್ಮಣ ತೀರ್ಥ ಹೆಸರಿಟ್ಟಿದ್ದು ಏಕೆ ಗೊತ್ತಾ?

    – ಕರ್ನಾಟಕದ ಕೊಡಗಿನಲ್ಲೂ ಇವೆ ಶ್ರೀರಾಮನ ಹೆಜ್ಜೆ ಗುರುತುಗಳು

    ಮಡಿಕೇರಿ: ಅಯೋಧ್ಯೆಯಲ್ಲಿ (Ayodhya) ಶ್ರೀರಾಮನ (Lord Rama) ಭವ್ಯ ಮಂದಿರ ಉದ್ಘಾಟನೆಗೆ ಕೇವಲ ಎರಡು ದಿನಗಳು ಮಾತ್ರ ಬಾಕಿ ಇದೆ. ಈ ಹೊತ್ತಿನಲ್ಲಿ ದೇಶದಾದ್ಯಂತ ರಾಮನ ವಿಶೇಷತೆ ಮತ್ತು ಆತ ಬಿಟ್ಟು ಹೋದ ಹೆಜ್ಜೆಗುರುತುಗಳನ್ನು ಪರಿಚಯಿಸುವ ಕೆಲಸಗಳು ನಡೆಯುತ್ತಿವೆ. ಈ ಹಿನ್ನೆಲೆ ಕೊಡಗು (Kodagu) ಜಿಲ್ಲೆಗೂ ಶ್ರೀರಾಮನಿಗೂ ಅವಿನಾಭಾವ ಸಂಬಂಧವಿದೆ ಎಂದು ತಿಳಿದುಬಂದಿದೆ.

    ವನವಾಸದ ಕಾಲದಲ್ಲಿ ಸೀತೆಯನ್ನು ಅರಸುತ್ತಾ ಕೊಡಗಿಗೆ ಲಕ್ಷ್ಮಣ ಸಹ ಶ್ರೀರಾಮನ ಜೊತೆಗೆ ಬಂದಿದ್ದ ಎಂಬ ಐತಿಹ್ಯ ಇದೆ. ಅಷ್ಟೇ ಅಲ್ಲದೇ ಲಕ್ಷ್ಮಣನ ಬಾಣದಿಂದ ಸೃಷ್ಟಿಯಾದ ಜಲವೇ ಇವತ್ತು ಕೊಡಗಿನಿಂದ ಹರಿದು ಬಂದು ಕಾವೇರಿಯನ್ನು ಸೇರುವ ಲಕ್ಷ್ಮಣ ತೀರ್ಥ ನದಿ ಎಂದು ಜನ ನಂಬಿದ್ದಾರೆ. ಕೊಡಗಿನ ಮಟ್ಟಿಗೆ ಪ್ರಮುಖ ದೈವ ತಾಣ ಮತ್ತು ಪ್ರವಾಸಿ ತಾಣಗಳಲ್ಲೊಂದಾದ ಇರ್ಪು ಕ್ಷೇತ್ರ ರಾಮ ಭೇಟಿ ನೀಡಿದ ತಾಣವಾಗಿದೆ. ಇದನ್ನೂ ಓದಿ: ತಲೆಗೂದಲಿಗೆ ಹಗ್ಗ ಕಟ್ಟಿಕೊಂಡೇ ರಾಮರಥ ಎಳೆದ ಸ್ವಾಮೀಜಿ; ಅಯೋಧ್ಯೆ ಕಡೆಗೆ 566 ಕಿಮೀ ಯಾತ್ರೆ

    ಇಲ್ಲಿ ರಾಮ ಶಿವಲಿಂಗವನ್ನು ಪ್ರತಿಷ್ಠಾಪಿಸಿ ಪೂಜೆ ನೆರವೇರಿಸಿದ್ದನಂತೆ. ಸೀತೆಯನ್ನು ಅರಸುತ್ತಾ ವಾನರಾದಿಯಾಗಿ ಹೊರಟ ರಾಮ-ಲಕ್ಷ್ಮಣರು ಬ್ರಹ್ಮಗಿರಿಯ ತಪ್ಪಲಿಗೆ ಬರುತ್ತಾರೆ. ಈ ಬೆಟ್ಟ ದಾಟಿದರೆ ಕೇರಳ ಸೀಮೆ ಎದುರಾಗುತ್ತದೆ. ಎಲ್ಲರೂ ಬೆಟ್ಟಗುಡ್ಡಗಳನ್ನು ದಾಟಿ ಮುನ್ನಡೆಯುತ್ತಿದ್ದಾರೆ. ಲಕ್ಷ್ಮಣ ಮಾತ್ರ ಮುಂದಕ್ಕೆ ಹೆಜ್ಜೆಯಿರಿಸದೇ ಅಲ್ಲಿಯೇ ಕುಳಿತುಕೊಂಡನಂತೆ. ಎಂದೂ ಕೂರದ ರಾಮ ಅಂದು ಕುಳಿತ ಸ್ಥಳವನ್ನು ಇರ್ಪು ಎನ್ನಲಾಗಿದೆ. ಇದನ್ನೂ ಓದಿ: ಮಂತ್ರಾಕ್ಷತೆ ಬಳಿಕ ಮನೆ ಮನೆಗೂ ಭಗವಾಧ್ವಜ – ಬೀದರ್‌ನ ಮಹಿಳೆಯರ ಅಳಿಲು ಸೇವೆ!

    ಇದಾದ ಬಳಿಕ ತನ್ನ ವರ್ತನೆಗೆ ಬೇಸರಗೊಂಡ ಆತ, ಅಣ್ಣ ಶ್ರೀರಾಮನಿಗೆ ಬೇಸರ ಮಾಡಿಬಿಟ್ಟೆ ಎಂಬ ನೋವಿನಲ್ಲಿ ಅಗ್ನಿಕುಂಡ ನಿರ್ಮಿಸಿ ಅದರಲ್ಲಿ ಆತ್ಮಾಹುತಿ ಮಾಡಲು ನಿರ್ಧರಿಸಿದನಂತೆ. ಇದನ್ನು ಕಂಡ ರಾಮ ಆತನಿಗೆ ಸಮಾಧಾನ ಹೇಳಿದ. ನಂತರ ಸಂತಸಗೊಂಡ ಲಕ್ಷ್ಮಣ ತಾನು ನಿರ್ಮಿಸಿದ ಅಗ್ನಿಕುಂಡವನ್ನು ನಂದಿಸಲು ಬಾಣಬಿಟ್ಟನಂತೆ. ಹಾಗೆ ಬಿಟ್ಟ ಬಾಣ ಜಲಧಾರೆಯನ್ನು ಸೃಷ್ಟಿಸಿ ಅಗ್ನಿಕುಂಡವನ್ನು ನಂದಿಸಿತು ಎಂಬ ಪ್ರತೀತಿಯಿದೆ. ಅಂದು ಲಕ್ಷ್ಮಣ ಸೃಷ್ಟಿಸಿದ ಜಲಧಾರೆಯೇ ಇಂದಿನ ಇರ್ಪು ಜಲಧಾರೆಯಾಗಿದ್ದು, ಇದಕ್ಕೆ ರಾಮನೇ ಲಕ್ಷ್ಮಣತೀರ್ಥವೆಂದು (Lakshmana Theerta) ಹೆಸರಿಸಿದ ಎಂಬುದು ಎಲ್ಲರ ನಂಬಿಕೆಯಾಗಿದೆ. ಇದನ್ನೂ ಓದಿ: ಹಾವೇರಿಯ ಬ್ಯಾಡಗಿ ಪಟ್ಟಣದಲ್ಲಿ ನೈತಿಕ ಪೊಲೀಸ್‌ ಗಿರಿ – 7 ಮಂದಿ ಮುಸ್ಲಿಂ ಯುವಕರು ಅರೆಸ್ಟ್‌

    ಇರ್ಪುವಿನಲ್ಲಿರುವ ರಾಮೇಶ್ವರ ದೇವಾಲಯ (Rameshwara Temple) ಕೇರಳಿಗರ ವಾಸ್ತುಶಿಲ್ಪದೊಂದಿಗೆ ವೃತ್ತಾಕಾರದ ಗರ್ಭಗುಡಿಯನ್ನು ಹೊಂದಿದೆ. ಇಂದಿಗೂ ಕರ್ನಾಟಕ, ಕೇರಳದ ಜನರು ಬಂದು ಈ ದೇವಾಲಯದಲ್ಲಿ ಪೂಜೆ ಸಲ್ಲಿಸುತ್ತಾರೆ. ಇದನ್ನೂ ಓದಿ: ಗಂಡು ಮಗುವಿಗೆ ಜನ್ಮ ಕೊಟ್ಟ 10ನೇ ತರಗತಿ ವಿದ್ಯಾರ್ಥಿನಿ!

  • ಹಾಸನಕ್ಕುಂಟು ಶ್ರೀರಾಮನ ನಂಟು – ರಾವಣನ ಸಂಹರಿಸಿ ದೋಷ ನಿವಾರಣೆಗೆ ಇಲ್ಲಿಗೆ ಬಂದಿದ್ದನಂತೆ ಶ್ರೀರಾಮ

    ಹಾಸನಕ್ಕುಂಟು ಶ್ರೀರಾಮನ ನಂಟು – ರಾವಣನ ಸಂಹರಿಸಿ ದೋಷ ನಿವಾರಣೆಗೆ ಇಲ್ಲಿಗೆ ಬಂದಿದ್ದನಂತೆ ಶ್ರೀರಾಮ

    – ರಾಮನ ಆಗಮನದಿಂದ್ಲೇ ವನ್ಯೇಶ್ವರ ರಾಮನಾಥಪುರವಾಯ್ತು

    ಹಾಸನ: ಜ.22 ರಂದು ಅಯೋಧ್ಯೆಯಲ್ಲಿ (Ayodhya) ರಾಮಮಂದಿರದಲ್ಲಿ (Ram Mandir) ರಾಮಲಲ್ಲಾ ಪ್ರಾಣಪ್ರತಿಷ್ಠೆ ನೆರವೇರಲಿದೆ. ಈಗಾಗಲೇ ದೇಶದೆಲ್ಲೆಡೆ ಶ್ರೀರಾಮನ ಜಪ ಶುರುವಾಗಿದೆ. ಇದರ ನಡುವೆ ಸಾವಿರಾರು ವರ್ಷಗಳ ಹಿಂದೆ ರಾವಣನ ಸಂಹಾರದ ನಂತರ ಶ್ರೀರಾಮ ಹಾಸನ (Hassan) ಜಿಲ್ಲೆಗೂ ಆಗಮಿಸಿ ದೋಷ ನಿವಾರಣೆಗೆ ಪೂಜೆ ಸಲ್ಲಿಸಿದ್ದಾನೆ ಎಂಬ ಬಗ್ಗೆ ಇತಿಹಾಸದ ಉಲ್ಲೇಖಗಳಿವೆ.

    ರಾಮೇಶ್ವರ ದೇವಾಲಯ (Rameshwara Temple) ಇರುವುದು ಹಾಸನ ಜಿಲ್ಲೆಯ ಅರಕಲಗೂಡು (Arakalgud) ತಾಲೂಕಿನ, ರಾಮನಾಥಪುರದಲ್ಲಿ. ಇಲ್ಲಿ ಪ್ರತಿವರ್ಷ ಬಹಳ ಅದ್ಧೂರಿ ಹಾಗೂ ವಿಜೃಂಭಣೆಯಿಂದ ಜಾತ್ರಾ ಮಹೋತ್ಸವ ಜರುಗುತ್ತದೆ. ಲಿಂಗದ ರೂಪದಲ್ಲಿ ದೇವರ ಮೂರ್ತಿ ಇದ್ದರೂ ಈ ದೇವಾಲಯದಲ್ಲಿ ಶ್ರೀರಾಮನಿಗೆ ಪ್ರಾಮುಖ್ಯತೆ ಇದೆ. ಇದನ್ನು ಚತುರ್‌ಯುಗ ಮೂರ್ತಿ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ರಾವಣನ ಸಂಹಾರದ ನಂತರ ಶ್ರೀರಾಮ, ಸೀತೆ, ಲಕ್ಷ್ಮಣ ಹಾಗೂ ಹನುಮಂತ ಇಲ್ಲಿಗೆ ಬಂದು ಈಶ್ವರನ ಪೂಜೆ ಮಾಡಿರುವ ಪುಣ್ಯ ಸ್ಥಳವಿದು ಎಂಬ ಪ್ರತೀತಿಯೂ ಇದೆ. ಇದನ್ನೂ ಓದಿ: ಮೇಯರ್‌ ಚುನಾವಣೆ : ಮಾಲ್ಡೀವ್ಸ್‌ ಆಡಳಿತ ಪಕ್ಷಕ್ಕೆ ಹೀನಾಯ ಸೋಲು – ಭಾರತದ ಪರ ಪಕ್ಷಕ್ಕೆ ಭರ್ಜರಿ ಜಯ

    ಈ ದೇವಾಲಯದ ಅರ್ಧ ಭಾಗವನ್ನು ಹೊಯ್ಸಳರು ನಿರ್ಮಿಸಿದ್ದರೆ, ಇನ್ನುಳಿದ ಅರ್ಧ ಭಾಗವನ್ನು ವಿಜಯನಗರ ಸಾಮ್ರಾಜ್ಯದ ಅರಸರ ಕಾಲದಲ್ಲಿ ನಿರ್ಮಾಣ ಮಾಡಲಾಗಿದೆ. ಕಾವೇರಿ ನದಿಯ ತಟದಲ್ಲಿರುವ ಈ ದೇವಾಲಯದ ಗರ್ಭಗುಡಿಯಲ್ಲಿ ಶ್ರೀರಾಮ ನೆಲೆಸಿದ್ದು, ಗರ್ಭಗುಡಿಯ ಬಲಭಾಗದ ಗುಡಿಯಲ್ಲಿ ರಾಮನ ಬಂಟ ಹನುಮಂತ ವಿರಾಜಮಾನನಾಗಿದ್ದಾನೆ. ದೇವಾಲಯದ ಮುಂಭಾಗ ಸೀತಾಮಾತೆ ನೆಲೆಸಿದ್ದು, ಅದನ್ನು ಸೀತೇಶ್ವರ ದೇವಾಲಯ ಎಂದು ನಾಮಕರಣ ಮಾಡಲಾಗಿದೆ. ಕಾವೇರಿ ನದಿಯ ಮತ್ತೊಂದು ಬದಿಗೆ ಲಕ್ಷ್ಮಣೇಶ್ವರ ದೇವಾಲಯ ನೆಲೆ ನಿಂತಿದೆ. ಇದನ್ನೂ ಓದಿ: ಅಕ್ರಮ ಕಾಮಗಾರಿ – ಲೋಕಾಯುಕ್ತಕ್ಕೆ ದೂರು ನೀಡಿದ ಗುತ್ತಿಗೆದಾರನಿಗೆ ಕೊಲೆ ಬೆದರಿಕೆ!

    ರಾಮೇಶ್ವರ ದೇವಾಲಯದ ಒಳಭಾಗದ ಸುತ್ತಲೂ ನಂದಿ  ಮುಂದೆ ನಿಂತಿರುವ ಶಿವಲಿಂಗ ವಿಗ್ರಹವಿರುವ 36 ಸಣ್ಣ ಸಣ್ಣ ಗುಡಿಗಳನ್ನು ನಿರ್ಮಿಸಲಾಗಿದೆ. ಈ ಜಾಗಕ್ಕೆ ಶ್ರೀರಾಮರು ಬಂದಿದ್ದಕ್ಕೆ ಒಂದು ಪೌರಾಣಿಕ ಕಥೆಯಿದೆ. ರಾಮನಾಥಪುರಕ್ಕೆ (Ramanathapura) ಮೊದಲು ಈ ಜಾಗಕ್ಕೆ ವನ್ಯೇಶ್ವರ ಎಂಬ ಹೆಸರಿತ್ತು. ರಾವಣ ಮಹಾಬ್ರಾಹ್ಮಣನಾದ್ದರಿಂದ ಆತನ ಸಂಹಾರದ ಬಳಿಕ ರಾಮನಿಗೆ ಬ್ರಹ್ಮ ಹತ್ಯಾದೋಷ ಕಾಡಿದ್ದು, ದಂಡಕಾರಣ್ಯದಲ್ಲಿ ಈಶ್ವರನನ್ನು ಪ್ರತಿಷ್ಠಾಪಿಸಿ ಅಲ್ಲಿ ಪ್ರಾರ್ಥನೆ ಮಾಡಿದರೆ ದೋಷ ನಿವಾರಣೆಯಾಗುತ್ತದೆ ಎಂದು ಅಗಸ್ತ್ಯ ಮುನಿಗಳು ತಿಳಿಸುತ್ತಾರೆ. ಆ ವೇಳೆ ವನ್ಯೇಶ್ವರ ಎಂಬ ಸ್ಥಳಕ್ಕೆ ಶ್ರೀರಾಮ, ಸೀತಾಮಾತೆ, ಲಕ್ಷ್ಮಣ ಹಾಗೂ ಹನುಮಂತ ಇಲ್ಲಿಗೆ ಆಗಮಿಸುತ್ತಾರೆ. ದಂಡಕಾರಣ್ಯದಲ್ಲಿ ಶಿವನನ್ನು ಪ್ರತಿಷ್ಠಾಪನೆ ಮಾಡುವುದಕ್ಕಾಗಿ ಹನುಮಂತನಿಗೆ ವಿಗ್ರಹ ತರಲು ಶ್ರೀರಾಮ ಹೇಳಿ ಕಳುಹಿಸುತ್ತಾನೆ. ಹನುಮಂತ ವಿಗ್ರಹ ತರುವುದರೊಳಗೆ ಅಲ್ಲಿಯೇ ಪ್ರತಿಷ್ಠಾಪನೆಯಾಗಿದ್ದ ಶಿವನ ದೇವಾಲಯ ರಾಮನಿಗೆ ಸಿಕ್ಕಿದ್ದು, ಅದೇ ಮೂರ್ತಿಗೆ ರಾಮ ಪೂಜೆಯನ್ನು ಸಲ್ಲಿಸುತ್ತಾನೆ. ಇದನ್ನೂ ಓದಿ: ಬ್ಲೂ ಫ್ಲ್ಯಾಗ್ ಖ್ಯಾತಿಯ ಶುಭ್ರ, ಸುಂದರ ಉಡುಪಿಯ ಪಡುಬಿದ್ರೆ ಬೀಚ್‌!

    ಆ ಜಾಗವೇ ಇಂದಿನ ರಾಮೇಶ್ವರ ದೇವಾಲಯವಾಗಿದೆ. ಹನುಮಂತ ತಂದ ವಿಗ್ರಹ ಗರ್ಭಗುಡಿಯ ಮುಂದೆ ಪ್ರತಿಷ್ಠಾಪನೆ ಮಾಡಲಾಗಿದೆ. ಅದನ್ನು ಹನುಮಂತೇಶ್ವರ ದೇವಾಲಯ ಅಂತಲೂ, ದೇವಾಲಯದ ಸ್ವಲ್ಪ ದೂರದಲ್ಲಿ ಸೀತಾಮಾತೆ ಪೂಜೆ ಮಾಡಿದ ಜಾಗವನ್ನು ಸೀತೇಶ್ವರ ದೇವಾಲಯ ಹಾಗೂ ಪುಷ್ಕರಣಿಯ ಪಕ್ಕದಲ್ಲಿ ಅಂದರೆ ಕಾವೇರಿ ನದಿಯ ಪಕ್ಕದಲ್ಲಿ ಲಕ್ಷ್ಮಣ ಪೂಜೆ ಮಾಡಿದ್ದ ಜಾಗ ಲಕ್ಷ್ಮಣೇಶ್ವರ ದೇವಾಲಯ ಆಗಿದೆ. ಶ್ರೀರಾಮ ಬಂದು ಪೂಜೆ ಮಾಡಿ ತೆರಳಿರುವ ಪುಣ್ಯ ಜಾಗದಲ್ಲಿ ಇಂದಿಗೂ ಪ್ರತಿನಿತ್ಯ ಪೂಜಾ ಕೈಂಕರ್ಯಗಳು ನಡೆಯುತ್ತಿವೆ. ಇದನ್ನೂ ಓದಿ: ಮಾಲ್ಡೀವ್ಸ್‌ನಿಂದ ಭಾರತೀಯ ಸೇನೆಯನ್ನ ಹಿಂತೆಗೆದುಕೊಳ್ಳಿ: ಭಾರತಕ್ಕೆ ಮಾಲ್ಡೀವ್ಸ್‌ ಅಧ್ಯಕ್ಷ ಕರೆ

    ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ವೇಳೆ, ಈ ದೇವಾಲಯದಲ್ಲಿಯೂ ವಿಶೇಷ ಪೂಜೆ, ಪ್ರಸಾದ ವಿತರಣೆ ಹಾಗೂ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ ರಾಮಜನ್ಮಭೂಮಿಯಂತೆ ಶ್ರೀರಾಮ ಸಂಚಾರ ಮಾಡಿರುವ ಎಲ್ಲಾ ಜಾಗಗಳನ್ನೂ ಅಭಿವೃದ್ಧಿಪಡಿಸಿ ಇತಿಹಾಸ ಉಳಿಸಬೇಕು ಎಂಬುದು ಈ ಭಾಗದ ಜನರ ಒತ್ತಾಯವಾಗಿದೆ. ಒಟ್ಟಾರೆ, ಶ್ರೀರಾಮ ಪರಿವಾರಕ್ಕೂ ಹಾಸನಕ್ಕೂ ಇರುವ ನಂಟಿನ ಕುರುಹುಗಳಿದ್ದು ಇಂದಿಗೂ ಆ ಐತಿಹಾಸಿಕ ದೇವಾಲಯಗಳಿಗೆ ಪ್ರತಿನಿತ್ಯ ನೂರಾರು ಭಕ್ತರು ಆಗಮಿಸಿ ಪೂಜೆ ಸಲ್ಲಿಸುತ್ತಿದ್ದಾರೆ. ಇದನ್ನೂ ಓದಿ: ಬಿಸ್ಕೆಟ್ ಫ್ಯಾಕ್ಟರಿಯಲ್ಲಿ ಬಾಯ್ಲರ್ ಸ್ಫೋಟ – ಓರ್ವ ಸಾವು, ಐವರು ಗಂಭೀರ