Tag: Ramesh Zarakiholi

  • ಇನ್ನೆರಡು ದಿನಗಳಲ್ಲಿ ಸಿಡಿ ಲೇಡಿ ಬರ್ತಾರೆ: ವಕೀಲ ಜಗದೀಶ್

    ಇನ್ನೆರಡು ದಿನಗಳಲ್ಲಿ ಸಿಡಿ ಲೇಡಿ ಬರ್ತಾರೆ: ವಕೀಲ ಜಗದೀಶ್

    ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಿದ್ದು, ಇಂದು ಸಿಡಿ ಲೇಡಿ ಮತ್ತೊಂದು ವೀಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಅಲ್ಲದೆ ವಕೀಲರ ಮೂಲಕ ದೂರನ್ನೂ ಸಹ ಸಲ್ಲಿಸಿದ್ದಾರೆ. ಈ ಬಗ್ಗೆ ಸಿಡಿ ಲೇಡಿ ಪರ ವಕೀಲ ಜಗದೀಶ್ ಮಹಾದೇವನ್ ಮಾತನಾಡಿದ್ದು, ಇನ್ನೆರಡು ದಿನಗಳಲ್ಲಿ ಸಿಡಿ ಲೇಡಿ ಬರುತ್ತಾರೆ ಎಂದು ತಿಳಿಸಿದ್ದಾರೆ.

    ಈ ಕರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿರುವ ಅವರು, ಆಕೆಯ ಕುಟುಂಬಕ್ಕೆ ರಕ್ಷಣೆ ನೀಡುವ ಭರವಸೆ ನೀಡಿದರೆ ಸಾಕು ಇನ್ನೆರಡು ದಿನಗಳಲ್ಲಿ ಸಿಡಿ ಲೇಡಿ ಹೊರಗೆ ಬರುತ್ತಾರೆ. ಆದರೆ ಇಂದು ಪೊಲೀಸ್ ಆಯುಕ್ತರು ಭರವಸೆ ನೀಡಬೇಕು. ಯುವತಿ ಎರಡ್ಮೂರು ವೀಡಿಯೋಗಳನ್ನು ಬಿಡುಗಡೆ ಮಾಡಿದರೂ ಗೃಹ ಇಲಾಖೆ, ಎಸ್‍ಐಟಿ, ಪೊಲೀಸರು ಅವರ ಕುಟುಂಬಕ್ಕೆ ರಕ್ಷಣೆ ನೀಡಿಲ್ಲ. ಸಿಡಿ ಪ್ರಕರಣದ ಸಂಪೂರ್ಣ ವಿವರಗಳನ್ನು ಯುವತಿ ನೀಡಿದ್ದಾರೆ. ಅಲ್ಲದೆ ಎರಡು ಪುಟದ ದೂರನ್ನು ಸಹ ಕೈಯ್ಯಲ್ಲಿ ಬರೆದು ಕೊಟ್ಟಿದ್ದಾರೆ. ಇಂದು ನಮ್ಮ ವಕೀಲರ ತಂಡ ಅದನ್ನು ಕಬ್ಬನ್ ಪಾರ್ಕ್ ಪೊಲೀಸರಿಗೆ ನೀಡಲಿದೆ ಎಂದು ಅವರು ತಿಳಿಸಿದರು. ಇದನ್ನೂ ಓದಿ: ರೇಪ್ ಕೇಸ್ ಹಾಕಿದರೂ ಎದುರಿಸಲು ಸಿದ್ಧ: ರಮೇಶ್ ಜಾರಕಿಹೊಳಿ

    ಎರಡು ಪುಟಗಳ ದೂರು ನೀಡಿದ್ದು, ಇದರಲ್ಲಿ ಜಾರಕಿಹೊಳಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಅನ್ನಿಸುತ್ತದೆ. ಭದ್ರತೆ ದೃಷ್ಟಿಯಿಂದ ಯುವತಿ ನನ್ನನ್ನು ಸಂಪರ್ಕಿಸಿ ಮಾತನಾಡಿದ್ದಾರೋ ಇಲ್ಲವೋ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಆದರೆ ಆಕೆಯ ದೂರು ಸ್ಟ್ರಾಂಗ್ ಆಗಿದೆ. ಅತ್ಯಾಚಾರ ಕೇಸ್ ದಾಖಲಾಗುತ್ತೋ ಕಾದು ನೋಡಬೇಕಿದೆ. ಅಧಿಕಾರ ದುರ್ಬಳಕೆ ಪ್ರಕರಣವಂತೂ ದಾಖಲಾಗುತ್ತದೆ. ಯಾವ ರೀತಿಯ ಪ್ರಕರಣ ದಾಖಲಾಗುತ್ತೆ ಎಂದು ಈಗ ಹೇಳಲು ಸಾಧ್ಯವಿಲ್ಲ ಎಂದು ಜಗದೀಶ್ ವಿವರಿಸಿದರು.

    ಕಿಂಗ್ ಪಿನ್, ಹನಿಟ್ರ್ಯಾಪ್, ದುಡ್ಡು ಹರಿದಾಟದ ಬಗ್ಗೆ ಪ್ರಸ್ತಾವನೆಯಾದರೆ ರಮೇಶ್ ಜಾರಕಿಹೊಳಿ ಇದಕ್ಕೆಲ್ಲ ಸ್ಪಷ್ಟನೆ ಕೊಡಲಿ. ಅಷ್ಟು ದುಡ್ಡು ಹೇಗೆ ಬಂತು ಎನ್ನುವುದರ ಬಗ್ಗೆ ಕೂಡ ಹೇಳಲಿ. ಸರ್ಕಾರ ಮಾಜಿ ಸಚಿವರ ರಕ್ಷಣೆಗೆ ನಿಂತಿದೆ ಅನ್ನೋದು ಸ್ಪಷ್ಟ ಎಂದು ಅವರು ತಿಳಿಸಿದರು.

  • ಸಿದ್ದರಾಮಯ್ಯ ನಮ್ಮ ನಾಯಕ – ರಮೇಶ್ ಜಾರಕಿಹೊಳಿ

    ಸಿದ್ದರಾಮಯ್ಯ ನಮ್ಮ ನಾಯಕ – ರಮೇಶ್ ಜಾರಕಿಹೊಳಿ

    – ದಿನಕ್ಕೆ 2 ಬಾರಿ ಸಿದ್ದರಾಮಯ್ಯ ಜೊತೆ ಮಾತನಾಡುತ್ತೇನೆ
    – ಮನಸ್ಸು ಮಾಡಿದ್ರೆ 5 ಕೈ ಶಾಸಕರು ರಾಜೀನಾಮೆ ನೀಡ್ತಾರೆ

    ಬೆಳಗಾವಿ: ದಿನಕ್ಕೆ ಎರಡು ಬಾರಿ ಸಿದ್ದರಾಮಯ್ಯ ಜತೆಗೆ ಮಾತಾಡುತ್ತೇನೆ. ಇಂದಿಗೂ ಮಾತನಾಡುತ್ತೇನೆ ಸಿದ್ದರಾಮಯ್ಯ ನಮ್ಮ ನಾಯಕ ಎಂದು ಹೇಳುವ ಮೂಲಕವಾಗಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಶಾಕಿಂಗ್ ಹೇಳಿಕೆಯನ್ನು ನೀಡಿದ್ದಾರೆ.

    ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಗ್ರಾ.ಪಂ ಸದಸ್ಯರಿಗೆ ಸತ್ಕಾರ ಕಾರ್ಯಕ್ರಮದಲ್ಲಿ ಭಾಗವಿಸಿದ ಮಾತನಾಡಿದ ಅವರು ನಾನು ಮನಸ್ಸು ಮಾಡಿದ್ರೇ 24 ಗಂಟೆಯಲ್ಲಿ ಐದು ಜನ ಕಾಂಗ್ರೆಸ್ ಶಾಸಕರನ್ನ ರಾಜೀನಾಮೆ ಕೊಡಿಸುತ್ತೇನೆ. ನೀವು ನಂಬಲು ಆಗಲ್ಲಾ. ಅಂತ ದೊಡ್ಡ ನಾಯಕರು ಬಿಜೆಪಿ ಬರಲು ತಯಾರಿದ್ದಾರೆ. ಟಾಪ್ 1 ರಿಂದ ಐದರ ವರೆಗಿನ ಕಾಂಗ್ರೆಸ್ ನಾಯಕರನ್ನ ಕರೆತರುತ್ತೇನೆ. ಅವರ ಹೆಸರನ್ನ ಕೇಳಿದ್ರೇ ನೀವು ಕೂಡ ಗಾಬರಿಯಾಗುತ್ತೀರಿ. ಕಾಂಗ್ರೆಸ್‍ನ ಮಹಾನ್ ನಾಯಕರನ್ನ ಬಿಜೆಪಿಗೆ ತರುತ್ತೇನೆ ಎಂದು ಹೇಳಿದ್ದಾರೆ

    ನಾವು ಬಿಜೆಪಿಯಲ್ಲಿ ಆನಂದದಿಂದ ಕೆಲಸ ಮಾಡುತ್ತಿದ್ದೇವೆ. ಹದಿನೇಳು ಜನರು ಶಾಸಕರು ಬಿಜೆಪಿಯಲ್ಲಿ ಗಟ್ಟಿಯಾಗಿರುತ್ತೇವೆ. ಕಾಂಗ್ರೆಸ್ ನಲ್ಲಿ ನಮ್ಮನ್ನ ಮೂಲೆಯಲ್ಲಿ ಕುಡಿಸಿದ್ದರು. ನಾವು ಮತ್ತೆ ಕಾಂಗ್ರೆಸ್‍ಗೆ ಹೋಗುವುದಿಲ್ಲ ಎಂದಿದ್ದಾರೆ.

    ಒಬ್ಬ ಹೆಣ್ಣು ಮಗಳಿದ್ದಾಳೆ ಅವರಿಗೆ ದೇವರು ಒಳ್ಳೆಯದು ಮಾಡಲಿ. ತಲೆ ಕೆಡಿಸಿಕೊಂಡು ಮಾತಾಡಿದ್ರೇ ಬಹಳ ಕಷ್ಟ ಆಗುತ್ತೆ. ಅವರ ಬಗ್ಗೆ ನಾವು ಕೆಟ್ಟದು ಮಾತಾಡುವುದಿಲ್ಲ. ನೀವು ಮಾತಾಡಬೇಡಿ ಎಂದು ಹೇಳು ಮೂಲಕವಾಗಿ ಅಧಿಕಾರದ ದುರುಪಯೋಗ ಮಾಡಿಕೊಂಡು ಕೆಲಸ ಮಾಡ್ತಿದ್ದಾರೆ ಎಂಬ ಹೆಬ್ಬಾಳ್ಕರ್ ಹೇಳಿಕೆ ವಿಚಾರವಾಗಿ ಮಾತನಾಡಿದ್ದಾರೆ.

    ಬೆಳಗಾವಿ ಜಿಲ್ಲೆಯಲ್ಲಿ ಎಲ್ಲೆಲ್ಲಿ ಬಿಜೆಪಿ ಅಧಿಕಾರಕ್ಕೆ ಇಲ್ಲ ಅದನ್ನ ತರುವ ಕೆಲಸ ಮಾಡುತ್ತೇವೆ. ಮುಂದಿನ ಭಾರಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಧ್ವಜ ಹಾರಿಸುವ ನಿರ್ಧಾರ ಮಾಡಿ ಸಂಕಲ್ಪ ಮಾಡಿದ್ದೇವೆ. ಇಂದಿನ ಕಾರ್ಯಕ್ರಮದಲ್ಲಿ 23 ಗ್ರಾಮ ಪಂಚಾಯತಿ ಸದಸ್ಯರು ಹಾಜರಿದ್ದಾರೆ. ಚುನಾವಣೆ ಫಲಿತಾಂಶ ಪೂರ್ತಿ ಬರುವ ಮುನ್ನ ರಮೇಶ್ ಜಾರಕಿಹೊಳಿಗೆ ಮುಖಭಂಗ ಅಂತಾ ಬಂತೂ. ಅತೀ ಶೀಘ್ರದಲ್ಲಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಸದಸ್ಯರು ಎಷ್ಟಿದ್ದಾರೆ ಅಂತಾ ತೋರಿಸುತ್ತೇನೆ ಅಂತಾ ಮಾತುಕೊಟ್ಟಿದ್ದೆನೆ ಎಂದರು.

    ಮುಂದಿನ ಚುನಾವಣೆಯಲ್ಲಿ ಅರವತ್ತು ಸಾವಿರ ಅಂತರದಿಂದ ಬಿಜೆಪಿ ಅಭ್ಯರ್ಥಿ ಗೆಲ್ಲಿಸಬೇಕು. ಐವತ್ತು ಸಾವಿರಕ್ಕಿಂತ ಕಡಿಮೆ ಅಂತರದಲ್ಲಿ ಬಿಜೆಪಿ ಗೆದ್ದರೆ ಅದು ಸೋಲು ಅಂದುಕೊಳ್ಳುತ್ತೇನೆ. ನನ್ನನ್ನು ನಂಬಿ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಜನರು ಹೋಗಿದ್ದಾರೆ. ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಜನರು ನನ್ನ ಜನರು. ಗ್ರಾಮೀಣ ಕ್ಷೇತ್ರದಲ್ಲಿನ ಕಾಂಗ್ರೆಸ್ ಕಾರ್ಯಕರ್ತರನ್ನ ಮುಂದಿನ ದಿನಗಳಲ್ಲಿ ಬಿಜೆಪಿಗೆ ಕರೆದುಕೊಂಡು ಬರುವ ಜವಾಬ್ದಾರಿ ನನ್ನದು. ಗ್ರಾಮೀಣ ಕ್ಷೇತ್ರದಲ್ಲಿ ಮತ್ತೆ ಆಪರೇಷನ್ ಕಮಲ ಮಾಡುತ್ತೇವೆ ಎಂದು ಹೇಳಿದ್ದಾರೆ.

    ಇದೇ ವೇಳೆ ಮಾತನಾಡಿದ ಸರ್ಕಾರದ ವಿಧಾನಪರಿಷತ್ ಮುಖ್ಯ ಸಚೇತಕ ಮಹಾಂತೇಶ್ ಕವಟಗಿಮಠ ಉದ್ಯೋಗ ಖಾತ್ರಿ ನಾನೇ ತಂದಿದ್ದೇನೆ ಅಂತಾ ಕೆಲವರು ಹೇಳುತ್ತಿದ್ದಾರೆ. ಉದ್ಯೋಗ ಖಾತ್ರಿ ಯೋಜನೆ ಕೇಂದ್ರ ಸರ್ಕಾರ ತಂದಿರುವುದು ಎಂದು ಹೇಳಿ ಪರೋಕ್ಷವಾಗಿ ಲಕ್ಷ್ಮೀ ಹೆಬ್ಬಾಳ್ಕರ್‍ಗೆ ಟಾಂಗ್ ಕೊಟ್ಟಿದ್ದಾರೆ.

    ಗೋಕಾಕ್ ಗೆ ಕೊಟ್ಟಷ್ಟು ಅನುದಾನ ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ನೀಡಬೇಕು. ಬೆಳಗಾವಿ ಗ್ರಾಮೀಣ ಕ್ಷೇತ್ರ ಹಿಂದುಳಿದ ಕ್ಷೇತ್ರವಾಗಿದೆ. ಗ್ರಾಪಂ ಸದಸ್ಯರು ಒಟ್ಟಾಗಿ ಕೆಲಸ ಮಾಡಿ ಕ್ಷೇತ್ರ ಅಭಿವೃದ್ಧಿ ಪಡಿಸಬೇಕು ಎಂದು ಹೇಳಿದ್ದಾರೆ.

    ರಮೇಶ್ ಜಾರಕಿಹೊಳಿ ಮಾತಾಡಿದರೆ ಆ ಕೆಲಸ ಮಾಡುತ್ತಾರೆ. ನೀವೆಲ್ಲಾ ಹುಲಿ ಜತೆಗೆ ಇರೀ ಕುರಿ ಜತೆಗೆ ಇರಬೇಡಿ ಎಂದು ಹೇಳುವ ಮೂಲಕವಾಗಿ ಮಾಜಿ ಶಾಸಕ ಸಂಜಯ್ ಪಾಟೀಲ್, ಶಾಸಕಿ ಹೆಬ್ಬಾಳ್ಕರ್‍ಗೆ ಪರೋಕ್ಷವಾಗಿ ಟಾಂಗ್ ಕೊಟ್ಟರು.

  • ಖಾತೆ ಬದಲಾವಣೆ, ಹಂಚಿಕೆ ಮುಖ್ಯಮಂತ್ರಿ ಪರಮಾಧಿಕಾರ: ರಮೇಶ್ ಜಾರಕಿಹೊಳಿ

    ಖಾತೆ ಬದಲಾವಣೆ, ಹಂಚಿಕೆ ಮುಖ್ಯಮಂತ್ರಿ ಪರಮಾಧಿಕಾರ: ರಮೇಶ್ ಜಾರಕಿಹೊಳಿ

    – ಖಾತೆ ಬದಲಾವಣೆ ಬಗ್ಗೆ ನನಗೆ ಮಾಹಿತಿಯಿಲ್ಲ
    – ಮುಖ್ಯಮಂತ್ರಿ ಜೊತೆ ನಿಲ್ಲಬೇಕು

    ಹಾಸನ: ಖಾತೆ ಬದಲಾವಣೆ ಬಗ್ಗೆ ನನಗೆ ಮಾಹಿತಿಯಿಲ್ಲ, ಖಾತೆ ಬದಲಾವಣೆ ಅಥವಾ ಹಂಚಿಕೆ ಮಾಡುವುದು ಮುಖ್ಯಮಂತ್ರಿ ಪರಮಾಧಿಕಾರ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

    ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಬೆಟ್ಟದಾಲೂರು ಬಳಿ ನಡೆಯುತ್ತಿರುವ ಎತ್ತಿನಹೊಳೆ ಕಾಮಗಾರಿ ಯೋಜನೆಯನ್ನು ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಸಚಿವರು ಅಸಮಾಧಾನಗೊಂಡಿಲ್ಲ, ಎಲ್ಲವನ್ನೂ ಮುಖ್ಯಮಂತ್ರಿ ಅವರು ಸರಿಪಡಿಸುತ್ತಾರೆ. ಖಾತೆ ಹಂಚಿಕೆ ಕುರಿತಾಗಿ ನಾನು ಯಾರ ಜೊತೆಯಲ್ಲೂ ಚರ್ಚಿಸಿಲ್ಲ, ಅಸಮಾಧಾನವಿದ್ದರೆ ಮಿತ್ರ ಮಂಡಳಿ ಹಾಗೂ ಬಿಜೆಪಿ ಶಾಸಕರನ್ನು ಮನವಿ ಮಾಡುತ್ತೇವೆ ಎಂದು ತಿಳಿಸಿದರು.

    ಕೋವಿಡ್ ನಿಂದ ಸಂಕಷ್ಟ ಅನುಭವಿಸದ್ದೇವೆ, ಇಂತಹ ಸಂದರ್ಭದಲ್ಲಿ ಎಲ್ಲರು ಮುಖ್ಯಮಂತ್ರಿ ಕೈ ಬಲಪಡಿಸಬೇಕು. ಮುಂದಿನ ಎರಡು ವರ್ಷ ಅಭಿವೃದ್ಧಿ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ.

    ಇದೇ ವೇಳೆ ಸಚಿವರೆದುರೇ ರೈತರೊಬ್ಬರು ಎತ್ತಿನಹೊಳೆ ಪರಿಹಾರ ನೀಡದೇ ಇರುವ ಬಗ್ಗೆ ಆಕ್ರೋಶ ಹೊರಹಾಕಿದರು.ಅಷ್ಟೇ ಅಲ್ಲದೇ ಸಮರ್ಪಕ ಪರಿಹಾರ ನೀಡದೇ ಕಾಮಗಾರಿ ನಡೆಯಲು ಅವಕಾಶ ನೀಡಲ್ಲ ಎಂದು ಎಚ್ಚರಿಸಿದ್ದಾರೆ. ಆದರೆ ಸಚಿವರು ಮಾತ್ರ ಕೇಳಿಯೂ ಕೇಳದಂತೆ ಸ್ಥಳದಿಂದ ತೆರಳಿದರು.

  • ಅನರ್ಹಗೊಂಡ್ರೂ ಪರವಾಗಿಲ್ಲ ಸರ್ಕಾರ ಉಳಿಯಬಾರದು – ಜಾರಕಿಹೊಳಿ ಶಪಥ

    ಅನರ್ಹಗೊಂಡ್ರೂ ಪರವಾಗಿಲ್ಲ ಸರ್ಕಾರ ಉಳಿಯಬಾರದು – ಜಾರಕಿಹೊಳಿ ಶಪಥ

    ಮುಂಬೈ: ಶಾಸಕ ಸ್ಥಾನದಿಂದ ಅನರ್ಹಗೊಂಡರೂ ಪರವಾಗಿಲ್ಲ. ಆದರೆ ಸಮ್ಮಿಶ್ರ ಸರ್ಕಾರ ಮಾತ್ರ ಉಳಿಯಬಾರದು. ನಮ್ಮ ರಾಜೀನಾಮೆಯನ್ನು ಯಾವುದೇ ಕಾರಣಕ್ಕೂ ವಾಪಸ್ ಪಡೆಯಲ್ಲ ಎಂಬ ತೀರ್ಮಾನಕ್ಕೆ ಕಾಂಗ್ರೆಸ್ ಅತೃಪ್ತ ಶಾಸಕ ರಮೇಶ್ ಜಾರಕಿಹೊಳಿ ಬಂದಿದ್ದಾರೆ ಎನ್ನಲಾಗಿದೆ.

    ಮುಂಬೈ ಹೋಟೆಲ್‍ನಲ್ಲಿ ತಂಗಿರುವ ರಮೇಶ್ ಜಾರಕಿಹೊಳಿ ಅವರು ತಮ್ಮ ಅಪ್ತರ ಬಳಿ ಈ ಕುರಿತು ಮಾತನಾಡಿದ್ದು, ಶಾಸಕ ಸ್ಥಾನದಿಂದ ಅನರ್ಹವಾದರೂ ಪರವಾಗಿಲ್ಲ. ಸರ್ಕಾರ ಪತನ ಆಗುವುದು ಖಚಿತ. ಒಂದೊಮ್ಮೆ ನಾನು ಅನರ್ಹಗೊಂಡರೆ ನನ್ನ ಕುಟುಂಬದಿಂದ ಒಬ್ಬರನ್ನು ಚುನಾವಣೆಗೆ ಸ್ಪರ್ಧೆ ಮಾಡುವಂತೆ ಮಾಡಿ, ಸಚಿವರನ್ನಾಗಿ ಮಾಡುತ್ತೇನೆ ಎಂದಿದ್ದಾರೆ ಎಂಬ ಮಾಹಿತಿ ಲಭಿಸಿದೆ.

    ಸುಪ್ರೀಂ ಕೋರ್ಟ್ ನಿರ್ಧಾರ ಸ್ವಾಗತ ಮಾಡಿರುವ ಅವರು ರಾಜೀನಾಮೆಯಿಂದ ಹಿಂದೆ ಸರಿಯಲ್ಲ ಎಂದು ದೃಢಪಡಿಸಿದ್ದಾರೆ. ಇತ್ತ ಕಾಂಗ್ರೆಸ್ ಪಕ್ಷ ಶಾಸಕರಿಗೆ ವಿಪ್ ಜಾರಿ ಮಾಡಿದೆ. ಆದರೆ ಅತೃಪ್ತ ಶಾಸಕರು ರಾಜೀನಾಮೆ ಹಿಂಪಡೆಯಿರುವ ತಮ್ಮ ನಿರ್ಧಾರಕ್ಕೆ ಬದ್ಧರಾಗಿದ್ದಾರೆ. ಅಲ್ಲದೇ ಮಂಗಳಾರದವರೆಗೂ ಮುಂಬೈನಲ್ಲೇ ಉಳಿಯಲು ತೀರ್ಮಾನ ಮಾಡಿದ್ದಾರೆ.

    ಶಾಸಕ ಸ್ಥಾನದಿಂದ ಅನರ್ಹಗೊಂಡರೆ ರಮೇಶ್ ಜರಕಿಹೊಳಿ ಪರವಾಗಿ ಪತ್ನಿ ಜಯಶ್ರೀ, ಅಳಿಯ ಅಂಬಿರಾವ್ ಪಾಟೀಲ್ ಅಥವಾ ಆಪ್ತ ಕೊತ್ವಾಲ್ ಅವರನ್ನು ಚುನಾವಣಾ ಕಣಕ್ಕೆ ಇಳಿಯುವ ಸಾಧ್ಯತೆಯಿದೆ. ಇವರನ್ನೇ ಮಂತ್ರಿ ಮಾಡುವ ಕುರಿತು ನಿರೀಕ್ಷೆಯಲ್ಲಿ ಜಾರಕಿಹೊಳಿ ಅವರು ಇದ್ದಾರೆ. ಉಳಿದಂತೆ ಮಹೇಶ್ ಕುಮಟಳ್ಳಿ ಪರವಾಗಿ ಅವರ ಮಗ ಅಥವಾ ಪತ್ನಿ ಚುನಾವಣೆಗೆ ಸ್ಪರ್ಧೆ ನಡೆಸಲು ಮಾನಸಿಕವಾಗಿ ಸಿದ್ಧರಾಗಿದ್ದಾರೆ ಎನ್ನಲಾಗಿದೆ.