Tag: Ramesh Reddy

  • ಮೈಸೂರಿನಿಂದ ಆರಂಭವಾಯ್ತು ಶಿವಣ್ಣ, ಉಪೇಂದ್ರ, ರಾಜ್ ಬಿ ಶೆಟ್ಟಿ ಅಭಿನಯದ  ಚಿತ್ರ

    ಮೈಸೂರಿನಿಂದ ಆರಂಭವಾಯ್ತು ಶಿವಣ್ಣ, ಉಪೇಂದ್ರ, ರಾಜ್ ಬಿ ಶೆಟ್ಟಿ ಅಭಿನಯದ ಚಿತ್ರ

    ಶಿವರಾಜಕುಮಾರ್ (Shivaraj Kumar) , ಉಪೇಂದ್ರ (Upendra), ರಾಜ್ ಬಿ. ಶೆಟ್ಟಿ (Raj B Shetty) ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ‘45’ ಚಿತ್ರದ ಮುಹೂರ್ತ ಇತ್ತೀಚೆಗೆ  ಮೈಸೂರಿನಲ್ಲಿ ನೆರವೇರಿತು. ದೇವರ ಮೇಲೆ ಚಿತ್ರೀಕರಿಸಲಾದ ಮೊದಲ ದೃಶ್ಯಕ್ಕೆ ಗೀತಾ ಶಿವರಾಜಕುಮಾರ್ ಕ್ಲಾಪ್ ಮಾಡುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಚಿತ್ರರಂಗದ ಅನೇಕ ಕಲಾವಿದರು, ತಂತ್ರಜ್ಞರು, ಗಣ್ಯರು ಹಾಜರಿದ್ದು ಚಿತ್ರತಂಡಕ್ಕೆ ಶುಭ ಕೋರಿದರು.  ಈ ಚಿತ್ರವನ್ನು ಸೂರಜ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಎಂ. ರಮೇಶ್ ರೆಡ್ಡಿ (Ramesh Reddy) ನಿರ್ಮಿಸುತ್ತಿದ್ದು, ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ (Arjun Janya), ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಈ ಚಿತ್ರಕ್ಕೆ ಅವರೇ ಕಥೆ-ಚಿತ್ರಕಥೆ ಬರೆದು ಸಂಗೀತ ಸಂಯೋಜಿಸಿದ್ದು, ಸತ್ಯ ಹೆಗಡೆ ಛಾಯಾಗ್ರಹಣ ಮಾಡುತ್ತಿದ್ದಾರೆ. ಅನಿಲ್ ಕುಮಾರ್ ಸಂಭಾಷಣೆ ಬರೆದಿದ್ದು, ಕೆ. ಎಂ ಪ್ರಕಾಶ್ ಅವರ ಸಂಕಲನ ಈ ಚಿತ್ರಕ್ಕಿದೆ.

    ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಿವರಾಜಕುಮಾರ್, ‘ಇದೊಂದು ಫಿಲಾಸಫಿಕಲ್ ಎಂಟರ್ ಟೈನರ್ ಎಂದು ಚಿತ್ರವನ್ನು ಬಣ್ಣಿಸುತ್ತಾರೆ. ಕಳೆದ ಒಂದು ವರ್ಷದಿಂದ ಈ ಚಿತ್ರದ  ಪ್ರೀ-ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದೆ. ಅರ್ಜುನ್ ಜನ್ಯ ಕಥೆ ಹೇಳಿದಾಗ ತುಂಬಾ ಇಷ್ಟವಾಗಿತ್ತು. ಆ ನಂತರ ಅನಿಮೇಶನ್ ರೂಪದಲ್ಲಿ ಚಿತ್ರವನ್ನು ತೋರಿಸಿದ್ದಾರೆ. ಅವರೊಬ್ಬ ಪ್ರತಿಭಾವಂತ. ಈ ಸಿನಿಮಾದ ನಂತರ ಭಾರತದ ಟಾಪ್ ನಿರ್ದೇಶಕರ ಸಾಲಿನಲ್ಲಿ ಅರ್ಜುನ್ ಜನ್ಯ ಕೂಡ ಒಬ್ಬರಾಗುತ್ತಾರೆ ಎಂಬ ನಂಬಿಕೆಯಿದೆ. ತುಂಬಾ ಪ್ರಬುದ್ಧವಾಗಿರುವ ಪಾತ್ರ ಈ ಚಿತ್ರದಲ್ಲಿದೆ’ ಎಂದರು.

    ‘ಸಾಮಾನ್ಯವಾಗಿ ನಟರಿಗೆ ನಿರ್ದೇಶಕರು ಚಿತ್ರದ ಕಥೆ ಹೇಳಿದರೆ, ಅರ್ಜುನ್ ಜನ್ಯ ನನಗೆ ಚಿತ್ರವನ್ನೇ ತೋರಿಸಿದರು. ಒಂದು ಚಿತ್ರಕ್ಕೆ ನಾವು ಸಹ ಸಾಕಷ್ಟು ತಯಾರಿ ಮಾಡಿಕೊಳ್ಳುವುದರಿಂದ, ಮೊದಲು ನನ್ನ ತಂಡದ ಬಗ್ಗೆ ನನಗೆ ಹೆಮ್ಮೆ ಇತ್ತು. ಆದರೆ ಅರ್ಜುನ್ ಜನ್ಯ ಮತ್ತು ಅವರ ತಂಡದ ಕೆಲಸ ನೋಡಿ ಆಶ್ಚರ್ಯವಾಯಿತು. ಅವರು ಈ ಚಿತ್ರಕ್ಕೆ ಮಾಡಿಕೊಂಡ ತಯಾರಿ ಅದ್ಭುತ. ಒಬ್ಬ ನಟನಾಗಿ, ಪ್ರೇಕ್ಷಕನಾಗಿ ಸಿನಿಮಾದ ಬಗ್ಗೆ ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆಯಿದೆ’ ಎಂದು ರಾಜ್ ಬಿ ಶೆಟ್ಟಿ ಹೇಳಿದರು. ಇದನ್ನೂ ಓದಿ:ಸಂಪತ್ ಪತ್ನಿ 5 ತಿಂಗಳ ಗರ್ಭಿಣಿ- ಸಹನಟನ ನೆನೆದು ಕಣ್ಣೀರಿಟ್ಟ ವೈಷ್ಣವಿ

    ‘ಮೊದಲ ಬಾರಿಗೆ ಹೆಸರಾಂತ ಕಲಾವಿದರು ಮತ್ತು ತಂತ್ರಜ್ಞರ ಜೊತೆ ಈ ಸಿನಿಮಾದಲ್ಲಿ ಅಭಿನಯಿಸುತ್ತಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ.  ಬೋಲ್ಡ್ ಆಗಿರುವಂತ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ’ ಎಂದರು ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿರುವ ಕೌಸ್ತುಭ ಮಣಿ. ನಿರ್ಮಾಪಕ ರಮೇಶ್ ರೆಡ್ಡಿ ಅವರಿಗೆ ಅರ್ಜುನ್ ಜನ್ಯ ಹೇಳಿದ ಕಥೆ ಬಹಳ ಇಷ್ಟವಾಯಿತಂತೆ. ‘ಚಿತ್ರದ ಘೋಷಣೆಯಾಗಿ ಹಲವು ತಿಂಗಳಾದರೂ ನಿಧಾನಕ್ಕೆ ಸಾಗುತ್ತಿತ್ತು. ಈ ಬಗ್ಗೆ ಅರ್ಜುನ್ ಜನ್ಯ ಅವರನ್ನು ಕೇಳಿದಾಗ, ಅವರು ಅನಿಮೇಶನ್ ಮೂಲಕ ಸಿನಿಮಾ ತೋರಿಸಿದರು. ಚಿತ್ರೀಕರಣ ಶುರುವಾಗುವುದಕ್ಕಿಂತ ಮೊದಲೇ, ಚಿತ್ರ ತೋರಿಸಿದರು. ನಾವು ಅಂದುಕೊಂಡಿರುವುದಕ್ಕಿಂತ ಸಿನಿಮಾ ಚೆನ್ನಾಗಿ ಬರುತ್ತದೆ ಎಂಬ ನಂಬಿಕೆಯಿದೆ’ ಎಂದರು ರಮೇಶ್ ರೆಡ್ಡಿ.

    ಕೊನೆಗೆ ಮಾತನಾಡಿದ ಅರ್ಜುನ್ ಜನ್ಯ, ‘ಚಿತ್ರೀಕರಣ ಈಗ ಶುರುವಾಗುತ್ತಿದ್ದರೂ, ಸುಮಾರು 9 ತಿಂಗಳ ಕಾಲ ಪ್ರೀ-ಪ್ರೊಡಕ್ಷನ್ ಕೆಲಸಗಳನ್ನು ಮಾಡಿ ಈಗ ಚಿತ್ರೀಕರಣಕ್ಕೆ ಹೊರಡುತ್ತಿದ್ದೇವೆ. ಮೊದಲು ಶಿವಣ್ಣ ಅವರಿಗೆ ಕಥೆ ಹೇಳಿದಾಗ, ನೀವೇ ಈ ಸಿನಿಮಾ ಮಾಡಿ ಎಂದು ಹುರುದಿಂಬಿಸಿದರು. ಈ ಚಿತ್ರದ ಮೂಲಕ ಒಂದು ದೊಡ್ಡ ಫಿಲಾಸಫಿಯನ್ನು ಸರಳ ರೀತಿಯಲ್ಲಿ, ಕ್ಲಾಸ್ ಮತ್ತು ಮಾಸ್ ಆಗಿ ಹೇಳುವ ಪ್ರಯತ್ನ ಮಾಡುತ್ತಿದ್ದೇನೆ ಎಂದರು.   ‘45’ ಚಿತ್ರಕ್ಕೆ 80 ದಿನಗಳ ಕಾಲ ಬೆಂಗಳೂರು, ಮೈಸೂರು ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ. ಕನ್ನಡವಲ್ಲದೆ ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲೂ ಮೂಡಿಬರುತ್ತಿರುವ ಈ ಚಿತ್ರವನ್ನು 2024ರಲ್ಲಿ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

  • ನಿರ್ಮಾಪಕ ರಮೇಶ್ ರೆಡ್ಡಿ ನೇತೃತ್ವದಲ್ಲಿ ಸುಧಾಮೂರ್ತಿಗೆ ಸನ್ಮಾನ

    ನಿರ್ಮಾಪಕ ರಮೇಶ್ ರೆಡ್ಡಿ ನೇತೃತ್ವದಲ್ಲಿ ಸುಧಾಮೂರ್ತಿಗೆ ಸನ್ಮಾನ

    ನ್ಫೋಸಿಸ್ (Infosys) ಎಂಬ ಐ.ಟಿ ದಿಗ್ಗಜ ಸಂಸ್ಥೆಯ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಕನ್ನಡಿಗರ ಹೆಮ್ಮೆ ಹೆಚ್ಚಿಸಿದ ಕನ್ನಡತಿ. ಲಕ್ಷಾಂತರ ಮಂದಿಗೆ ಕೆಲಸ ಕೊಟ್ಟ ಉದ್ಯಮಿ, ಸಮಾಜಸೇವಕಿ, ಲೇಖಕಿ ಸುಧಾಮೂರ್ತಿ (Sudhamurthy) ಅವರ ಸಾಮಾಜಿಕ ಸೇವೆಗಾಗಿ ಇತ್ತೀಚೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪದ್ಮಭೂಷಣ (Padma Bhushan) ಪ್ರಶಸ್ತಿ ಪ್ರದಾನ ಮಾಡಿದ್ದರು. ಈ ನಿಟ್ಟಿನಲ್ಲಿ, ಇತ್ತೀಚಿಗೆ ಖ್ಯಾತ ನಿರ್ಮಾಪಕರಾದ ರಮೇಶ್ ರೆಡ್ಡಿ (Ramesh Reddy) ನೇತೃತ್ವದಲ್ಲಿ, `ಸುಧಾಮೂರ್ತಿ ಅವರ ಆತ್ಮೀಯ ಗೆಳೆಯರ ಬಳಗ’ ಮೂಲಕ ಸನ್ಮಾನ ಕಾರ್ಯಕ್ರವನ್ನು ಏರ್ಪಡಿಸಲಾಗಿತ್ತು.

    ಸನ್ಮಾನ ಸ್ವೀಕರಿಸಿ ಮಾತನಾಡಿದ ಸುಧಾಮೂರ್ತಿ ಅವರು.’ನನಗೆ ಸನ್ಮಾನ ಹೊಗಳಿಕೆಗಳು ತುಂಬಾ ಮುಜುಗರ ಮಾಡುತ್ತದೆ. ಆದರೆ, ರಮೇಶ್ ರೆಡ್ಡಿ ಹಲವು ವರ್ಷಗಳಿಂದ ನಮ್ಮ ಸಂಸ್ಥೆಗಾಗಿ ದುಡಿದಿದ್ದಾರೆ. ಅವರ ಕೆಲಸದ ಬಗ್ಗೆ ಇರುವ ಶ್ರದ್ಧೆಯನ್ನು ನಾನು ಮೆಚ್ಚಿದ್ದೇನೆ. ನಾನು ಸನ್ಮಾನ ಸ್ವೀಕರಿಸುವುದರಿಂದ ಹಲವರಿಗೆ ಸಂತೋಷವಾಗುವುದರಿಂದ ಅವರ ಸಂತೋಷದಲ್ಲಿ ನಾನು ಸಂತೋಷ ಕಾಣುತ್ತೇನೆ. ನನ್ನ ಕೆಲಸ ನಾನು ಮಾಡಿದ್ದೀನಿ, ಯಾವತ್ತೂ ಪ್ರಶಸ್ತಿಗಾಗಿ ಕೆಲಸ ಮಾಡಿದವಳು ನಾನಲ್ಲ. ಈಗ ಪ್ರಶಸ್ತಿ ಬಂದಿದ್ದಕ್ಕೆ ಸಂತೋಷ. ಇನ್ನು ಹೆಣ್ಣು ಮಕ್ಕಳಿಗೆ ಒಂದು ಕಿವಿಮಾತು ಹೇಳಲು ಇಚ್ಚಿಸುತ್ತೇನೆ.  ಹೆಣ್ಣು ಮಕ್ಕಳು ನಾಲ್ಕು ಗೋಡೆಯ ಮಧ್ಯೆ ಬಂಧಿಯಾಗದೆ, ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳಬೇಕು. ನಾನು ನನ್ನ ಸಂಪೂರ್ಣ ಶಕ್ತಿಯನ್ನು ಬಳಸಿಕೊಂಡೆ ಅಷ್ಟೇ. ಎಲ್ಲರಿಂದಲೂ ಇದು ಸಾಧ್ಯವಿದೆ’ ಎಂದರು. ಇದನ್ನೂ ಓದಿ:ಜುಲೈನಲ್ಲಿ ಹೆರಿಗೆ : ಗುಟ್ಟು ಬಿಟ್ಟುಕೊಟ್ಟ ರಾಮ್ ಚರಣ್ ಪತ್ನಿ ಉಪಾಸನಾ

    ‘ಇನ್ನೊಂದು ಬಹಳ ಮುಖ್ಯವಾದ ಬಿನ್ನಹವೆಂದರೆ, ದಯವಿಟ್ಟು ಎಲ್ಲರೂ ದಿನಕ್ಕೆ ಹತ್ತು ರುಪಾಯಿಯಾದರೂ ಮೂಕಪ್ರಾಣಿಗಳ ಕಲ್ಯಾಣಕ್ಕೆ ಕೂಡಿಡಿ. ಆ ದುಡ್ಡನ್ನು ಪ್ರಾಣಿ ದಯಾ ಸಂಘಗಳಿಗೆ ಕೊಡಿ. ಇದರಿಂದ ಸರಿಯಾದ ಆಹಾರವಿಲ್ಲದೆ ಬಳಲುತ್ತಿರುವ ಪ್ರಾಣಿಗಳಿಗೆ ಆಹಾರ, ಆರೋಗ್ಯ ಸಿಗುತ್ತದೆ’ ಎಂದು ತಮ್ಮ ಮನದಾಳದ ಮಾತುಗಳನ್ನು ತರೆದಿಟ್ಟರು. ಕಾರ್ಯಕ್ರಮದಲ್ಲಿ ಸಾಕಷ್ಟು ಮಂದಿ ಸುಧಾಮೂರ್ತಿ ಅವರ ಆತ್ಮೀಯರು ಮತ್ತು ಅಭಿಮಾನಿಗಳು ಭಾಗವಹಿಸಿದ್ದು, ಕಾರ್ಯಕ್ರಮ ಅರ್ಥಪೂರ್ಣವಾಗಿ ನೆರವೇರಿತು.

  • ಲೂಸ್ ಮಾದ ಯೋಗಿ 50ನೇ ಚಿತ್ರಕ್ಕೆ ಸಿಗಲಿಲ್ಲ ‘ರೋಸಿ’ ಟೈಟಲ್?

    ಲೂಸ್ ಮಾದ ಯೋಗಿ 50ನೇ ಚಿತ್ರಕ್ಕೆ ಸಿಗಲಿಲ್ಲ ‘ರೋಸಿ’ ಟೈಟಲ್?

    ದುನಿಯಾ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಲೂಸ್ ಮಾದ ಯೋಗಿ (Loose Mada Yogeesh) ಇದೀಗ ಐವತ್ತನೇ ಸಿನಿಮಾ ಪೂರೈಸಿದ್ದಾರೆ. ಮೊನ್ನೆಯಷ್ಟೇ ಅವರ 50ನೇ ಸಿನಿಮಾದ ಮುಹೂರ್ತ ಕೂಡ ಆಗಿದೆ. ಈ ಚಿತ್ರಕ್ಕೆ ರೋಸಿ ಎಂದು ಹೆಸರಿಡಲಾಗಿತ್ತು. ಆದರೆ, ಈ ಟೈಟಲ್ ಸಿಗುವುದು ಬಹುತೇಕ ಕಷ್ಟ ಎನ್ನಲಾಗುತ್ತಿದೆ. ಇದೇ ಹೆಸರಿನಲ್ಲಿ ಮತ್ತೊಂದು ಸಿನಿಮಾ ಘೋಷಣೆಯಾಗಿದ್ದು, ಅವರು ಚಿತ್ರದ ಟೈಟಲ್ ಅನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೋಂದಾಯಿಸಿದ್ದಾರೆ.

    ಅರ್ಜುನ್ ಜನ್ಯ (Arjun Janya) ಚೊಚ್ಚಲ  ನಿರ್ದೇಶನದ, ಸೂರಜ್ ಪ್ರೊಡಕ್ಷನ್ಸ್ ಲಾಂಛನದ ಮೂಲಕ ‘ರೋಸಿ 45’ (Rosy 45) ಶೀರ್ಷಿಕೆಯನ್ನು  ನೋಂದಾಯಿಸಲಾಗಿತ್ತು. ಈಗ ಯೋಗಿ ನಟನೆಯ ಡಿ.ವೈ.ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಚಿತ್ರಕ್ಕೂ ‘ರೋಸಿ’ ಎಂದು ಶೀರ್ಷಿಕೆ ಇಡಲಾಗಿತ್ತು. ಈ ವಿಷಯವನ್ನು ಕರ್ನಾಟಕ ವಾಣಿಜ್ಯ ಮಂಡಳಿ ಗಮನಕ್ಕೆ ತರಲಾಗಿತ್ತು. ಇದನ್ನೂ ಓದಿ: ನಟ ಚೇತನ್‌ ಭಾರತದ ವೀಸಾ ರದ್ದು

    ಕರ್ನಾಟಕ ಚಲನಚಿತ್ರ ವಾಣಿಜ್ಯ ‌ಮಂಡಳಿಯಲ್ಲಿ ಮೊದಲು ಶೀರ್ಷಿಕೆ ನೋಂದಾಯಿಸಿದವರು ಮಾತ್ರ ಶೀರ್ಷಿಕೆ ಬಳಸಿಕೊಳ್ಳಬಹುದು ಎಂದು ವಾಣಿಜ್ಯ ಮಂಡಳಿ ಹೇಳಿದೆ. ಹಾಗಾಗಿ ಸೂರಜ್ ಪ್ರೊಡಕ್ಷನ್ಸ್ ಗೆ ರೋಸಿ 45(Rosy 45) ಶೀರ್ಷಿಕೆ ಸೇರಿದೆ.

    ಇನ್ನು‌ ಮುಂದೆ ಯಾರು ಕೂಡ ‘ರೋಸಿ’ ಶೀರ್ಷಿಕೆ ಬಳಸುವ ಹಾಗಿಲ್ಲ ಹಾಗೂ ಶೀರ್ಷಿಕೆ ಪಕ್ಕದಲ್ಲಿ ಬೇರೆ ಪದ ಹಾಗೂ ನಂಬರ್ ಗಳನ್ನಾಗಲಿ ಸೇರಿಸಿಕೊಂಡು ಸಹ ಬಳಸುವ ಹಾಗಿಲ್ಲ ಎಂದು ರೋಸಿ 45 ಚಿತ್ರದ ನಿರ್ಮಾಪಕ ರಮೇಶ್ ರೆಡ್ಡಿ (Ramesh Reddy) ಹಾಗೂ ನಿರ್ದೇಶಕ ಅರ್ಜುನ್ ಜನ್ಯ ತಿಳಿಸಿದ್ದಾರೆ.

  • ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನದ ಚಿತ್ರದ ಟೈಟಲ್ ಯಾರ ಪಾಲಾಯ್ತು?

    ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನದ ಚಿತ್ರದ ಟೈಟಲ್ ಯಾರ ಪಾಲಾಯ್ತು?

    ಸಂಗೀತ ನಿರ್ದೇಶಕ ಅರ್ಜುನ್ ಜನ್ಯ (Arjun Janya) ಚೊಚ್ಚಲ ನಿರ್ದೇಶನದ ಸಿನಿಮಾದ ಟೈಟಲ್ (Title) ಬಗ್ಗೆ ಗೊಂದಲ ಮೂಡಿತ್ತು. ಇದೀಗ ಗೊಂದಲಕ್ಕೆ ತೆರೆ ಎಳೆದಿದೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ. ಈ ಕುರಿತು ನಿರ್ಮಾಣ ಸಂಸ್ಥೆಗೆ ಅಧಿಕೃತ ಪತ್ರವೊಂದನ್ನು ನೀಡಿದೆ.

    ಸೂರಜ್ ಪ್ರೊಡಕ್ಷನ್ಸ್ ಲಾಂಛನದ ಮೂಲಕ ‘ರೋಸಿ 45’ (Rosy 45) ಶೀರ್ಷಿಕೆಯನ್ನು  ನೊಂದಾಯಿಸಲಾಗಿತ್ತು. ಈಗ ಡಿ.ವೈ.ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಚಿತ್ರಕ್ಕೂ ‘ರೋಸಿ’ ಎಂದು ಶೀರ್ಷಿಕೆ ಇಡಲಾಗಿತ್ತು. ಈ ವಿಷಯವನ್ನು ಕರ್ನಾಟಕ ವಾಣಿಜ್ಯ ಮಂಡಳಿ ಗಮನಕ್ಕೆ ತರಲಾಗಿತ್ತು.  ಇದನ್ನೂ ಓದಿ:ಸಲ್ಮಾನ್ ಖಾನ್ ನಂಬರ್ ಬ್ಲಾಕ್ ಮಾಡಿದ್ದರಂತೆ ಸಿದ್ಧಾರ್ಥ್ ಶುಕ್ಲಾ ಪ್ರೇಯಸಿ!

    ಕರ್ನಾಟಕ ಚಲನಚಿತ್ರ ವಾಣಿಜ್ಯ ‌ಮಂಡಳಿಯಲ್ಲಿ ಮೊದಲು ಶೀರ್ಷಿಕೆ ನೊಂದಾಯಿಸಿದವರು ಮಾತ್ರ ಶೀರ್ಷಿಕೆ ಬಳಸಿಕೊಳ್ಳಬಹುದು ಎಂದು ವಾಣಿಜ್ಯ ಮಂಡಳಿ ಹೇಳಿದೆ. ಹಾಗಾಗಿ ಸೂರಜ್ ಪ್ರೊಡಕ್ಷನ್ಸ್ ಗೆ ರೋಸಿ 45(Rosy 45) ಶೀರ್ಷಿಕೆ ಸೇರಿದೆ.

    ಇನ್ನು‌ ಮುಂದೆ ಯಾರು ಕೂಡ ‘ರೋಸಿ’ ಶೀರ್ಷಿಕೆ ಬಳಸುವ ಹಾಗಿಲ್ಲ ಹಾಗೂ ಶೀರ್ಷಿಕೆ ಪಕ್ಕದಲ್ಲಿ ಬೇರೆ ಪದ ಹಾಗೂ ನಂಬರ್ ಗಳನ್ನಾಗಲಿ ಸೇರಿಸಿಕೊಂಡು ಸಹ ಬಳಸುವ ಹಾಗಿಲ್ಲ ಎಂದು ರೋಸಿ 45 ಚಿತ್ರದ ನಿರ್ಮಾಪಕ ರಮೇಶ್ ರೆಡ್ಡಿ (Ramesh Reddy) ಹಾಗೂ ನಿರ್ದೇಶಕ ಅರ್ಜುನ್ ಜನ್ಯ ತಿಳಿಸಿದ್ದಾರೆ.

  • ಅರ್ಜುನ್ ಜನ್ಯ ನಿರ್ದೇಶನದ ಚಿತ್ರದಲ್ಲಿ ಶಿವಣ್ಣ, ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ಕಾಂಬಿನೇಷನ್

    ಅರ್ಜುನ್ ಜನ್ಯ ನಿರ್ದೇಶನದ ಚಿತ್ರದಲ್ಲಿ ಶಿವಣ್ಣ, ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ಕಾಂಬಿನೇಷನ್

    ರ್ಜುನ್ಯ ಜನ್ಯ (Arjun Janya) ಇದೇ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿರುವ ಸಿನಿಮಾದಲ್ಲಿ ಈಗಾಗಲೇ ಶಿವರಾಜ್ ಕುಮಾರ್ ಹಾಗೂ ಉಪೇಂದ್ರ ನಟಿಸುತ್ತಿದ್ದಾರೆ ಎಂದು ಸುದ್ದಿ ಓದಿದ್ದೀರಿ. ಈ ಜೋಡಿಯ ಜೊತೆ ಮತ್ತೋರ್ವ ಪ್ರತಿಭಾವಂತ ನಟ ಸೇರ್ಪಡೆಯಾಗಿದ್ದಾರೆ. ನಿರ್ದೇಶಕ ನಟ ರಾಜ್ ಬಿ. ಶೆಟ್ಟಿ (Raj B. Shetty) ಮತ್ತೊಂದು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹಾಗಾಗಿ ಮೊದಲ ಸಿನಿಮಾದಲ್ಲಿ ಮೂವರು ನಾಯಕರಿಗೆ ಜನ್ಯ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.

    ಗಾಳಿಪಟ 2 ಚಿತ್ರದ ಯಶಸ್ಸಿನ  ನಂತರ ರಮೇಶ್ ರೆಡ್ಡಿ (Ramesh Reddy)ಅವರು ಈ ಸಿನಿಮಾವನ್ನು ನಿರ್ಮಿಸುತ್ತಿದ್ದು, ಚಿತ್ರಕ್ಕೆ ‘45’ ಎಂದು ಹೆಸರಿಡಲಾಗಿದೆ. ಮಾಸ್ ನ ಅಧಿಪತಿ, ಕರುನಾಡ ಚಕ್ರವರ್ತಿ ಶಿವರಾಜಕುಮಾರ್ (Shivraj Kumar) ಅವರೊಂದಿಗೆ, ಮಾಸ್ ಗೆ “ಓಂ” ಕಾರ ಹಾಕಿದ ರಿಯಲ್ ಸ್ಟಾರ್ ಉಪೇಂದ್ರ (Upendra) ಅವರು ಜೊತೆಯಾಗಿರುವುದು ಅಭಿಮಾನಿಗಳಲ್ಲಿ ಸಹಜವಾಗಿಯೇ ಕುತೂಹಲ ಕೆರಳಿಸಿದೆ. ಇದನ್ನೂ ಓದಿ:BREAKING:`ಕಾಂತಾರ’ ಪಾರ್ಟ್ 2 ಬಗ್ಗೆ ಬಿಗ್ ಅಪ್‌ಡೇಟ್ ಕೊಟ್ರು ನಟ ಪ್ರಮೋದ್ ಶೆಟ್ಟಿ

    ಸ್ಟಾರ್ ಜೋಡಿಯ ಜೊತೆ ಇದೀಗ ಮಾಸ್ ಐಕಾನ್ ರಾಜ್ ಬಿ ಶೆಟ್ಟಿ ಅವರು ಜೊತೆಯಾಗಿರುವುದು ಸಿನಿಮಾ ಬಗ್ಗೆ ನಿರೀಕ್ಷೆ ಮೂಡಿಸಿದೆ.   ಶಿವರಾಜಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಅವರಂತಹ ಅದ್ಭುತ ಕಲಾವಿದರ ಅಭಿನಯ ಹಾಗೂ ಅರ್ಜುನ್ ಜನ್ಯ ಅವರ ಮೊದಲ ನಿರ್ದೇಶನದಲ್ಲಿ ಮೂಡಿ ಬರಲಿರುವ ಈ ಚಿತ್ರ ಆರಂಭದಲ್ಲಿ ಸಾಕಷ್ಟು ಕುತೂಹಲ ಹುಟ್ಟಿಸಿದೆ. ಬಹು ನಿರೀಕ್ಷಿತ ಈ ಚಿತ್ರ  ಕಲಾರಸಿಕರಿಗೆ ಮನೋರಂಜನೆಯ ರಸದೌತಣ ನೀಡುವುದಂತೂ ಖಚಿತ.

    Live Tv
    [brid partner=56869869 player=32851 video=960834 autoplay=true]

  • ನಾಲ್ಕನೇ ಬಾರಿ ಜೊತೆಯಾದ ಉಪ್ಪಿ ಮತ್ತು ಶಿವಣ್ಣ: ಈ ಸಿನಿಮಾದಲ್ಲಿವೆ ಹಲವು ವಿಶೇಷ

    ನಾಲ್ಕನೇ ಬಾರಿ ಜೊತೆಯಾದ ಉಪ್ಪಿ ಮತ್ತು ಶಿವಣ್ಣ: ಈ ಸಿನಿಮಾದಲ್ಲಿವೆ ಹಲವು ವಿಶೇಷ

    ತ್ತೀಚೆಗಷ್ಟೇ ‘ಗಾಳಿಪಟ 2’ ಎಂಬ ಬ್ಲಾಕ್‌ಬಸ್ಟರ್‌ ಚಿತ್ರವನ್ನು ತಮ್ಮ ಸೂರಜ್ ಪ್ರೊಡಕ್ಷನ್‌ನಡಿ ನಿರ್ಮಿಸಿದ್ದ ರಮೇಶ್ ರೆಡ್ಡಿ (Ramesh Reddy), ಇದೀಗ ಇನ್ನೊಂದು ದೊಡ್ಡ ಸಾಹಸಕ್ಕೆ ಕೈ ಹಾಕಿದ್ದಾರೆ. ಅರ್ಜುನ್ ಜನ್ಯ (Arjun Janya) ನಿರ್ದೇಶನದಲ್ಲಿ, ಶಿವರಾಜ್‌ಕುಮಾರ್ (Shivraj Kumar) ಅಭಿನಯದಲ್ಲಿ ಅವರು ‘45’ ಎಂಬ ಪ್ಯಾನ್ ಇಂಡಿಯಾ ಚಿತ್ರವನ್ನು ನಿರ್ಮಿಸುತ್ತಿರುವುದು ಗೊತ್ತೇ ಇದೆ. ಈಗ ಈ ಚಿತ್ರಕ್ಕೆ ಉಪೇಂದ್ರ ಸೇರ್ಪಡೆಯಾಗಿದ್ದು, ಅವರೂ ಇನ್ನೊಬ್ಬ ನಾಯಕನಾಗಿ ಅಭಿನಯಿಸುತ್ತಿದ್ದಾರೆ.

    ಶಿವಣ್ಣ ಮತ್ತು ಉಪೇಂದ್ರ (Upendra) ಜೊತೆಯಾಗಿ ಕೆಲಸ ಮಾಡುತ್ತಿರುವುದು ಇದು ನಾಲ್ಕನೇ ಬಾರಿ. ಈ ಹಿಂದೆ ‘ಓಂ’ ಚಿತ್ರದಲ್ಲಿ ಶಿವಣ್ಣ ಅವರನ್ನು ನಿರ್ದೇಶಿಸಿದ್ದರು ಉಪೇಂದ್ರ. ಆ ನಂತರ ಇಬ್ಬರೂ ‘ಪ್ರೀತ್ಸೆ‘ ಮತ್ತು ‘ಲವ-ಕುಶ’ ಚಿತ್ರದಲ್ಲಿ ಜೊತೆಯಾಗಿ ನಟಿಸಿದ್ದರು. ಈಗ ದೊಡ್ಡ ಗ್ಯಾಪ್‌ನ ನಂತರ ಅವರಿಬ್ಬರೂ ‘45’ ಚಿತ್ರದಲ್ಲಿ ಮತ್ತೆ ಒಟ್ಟಾಗಿ ನಟಿಸಲಿದ್ದಾರೆ. ಇದನ್ನೂ ಓದಿ:ಆರು ವರ್ಷಗಳ ಬಳಿಕ ಜೀ ಪಿಕ್ಚರ್ಸ್ ನಲ್ಲಿ ಸೂಪರ್ ಹಿಟ್ ‘ರಾಮಾ ರಾಮಾ ರೇ’ ಸಿನಿಮಾ

    ಶಿವರಾಜ್‌ಕುಮಾರ್ ಅವರ ಹುಟ್ಟುಹಬ್ಬದಂದು ಅಧಿಕೃತವಾಗಿ ಘೋಷಣೆಯಾದ ‘45’, ಈಗ ಪ್ರೀ-ಪ್ರೊಡಕ್ಷನ್ ಹಂತದಲ್ಲಿದೆ. ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದ ಚಿತ್ರೀಕರಣವು ಡಿಸೆಂಬರ್‌ನಿಂದ ಅಧಿಕೃತವಾಗಿ ಪ್ರಾರಂಭವಾಗಲಿದೆ.

    ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಅವರೇ ಕಥೆ-ಚಿತ್ರಕಥೆ ಬರೆದಿದ್ದು, ನಿರ್ದೇಶನದ ಜೊತೆಗೆ ಸಂಗೀತ ನಿರ್ದೇಶನದ ಜವಾಬ್ದಾರಿಯನ್ನು ಸಹ ಅವರೇ ಹೊತ್ತಿದ್ದಾರೆ. ಈಗಾಗಲೇ ಚಿತ್ರ ಪ್ರಾರಂಭವಾಗುವುದಕ್ಕೆ ಮುನ್ನವೇ ಚಿತ್ರದ ಆಡಿಯೋ ಹಕ್ಕುಗಳಿಗೆ ಭಾರೀ ಡಿಮ್ಯಾಂಡ್ ಉಂಟಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಅರ್ಜುನ್ ಜನ್ಯ ನಿರ್ದೇಶನದ ಸಿನಿಮಾದಲ್ಲಿ ಶಿವಣ್ಣ- ಉಪೇಂದ್ರ

    ಅರ್ಜುನ್ ಜನ್ಯ ನಿರ್ದೇಶನದ ಸಿನಿಮಾದಲ್ಲಿ ಶಿವಣ್ಣ- ಉಪೇಂದ್ರ

    ಸ್ಯಾಂಡಲ್‌ವುಡ್‌ನಲ್ಲಿ(Sandalwood) ಓಂ, ಲವ ಕುಶ, ಪ್ರೀತ್ಸೇ ಸಿನಿಮಾಗಳ ಮೋಡಿ ಮಾಡಿದ್ದ ಶಿವಣ್ಣ(Shivanna) ಮತ್ತು ಉಪೇಂದ್ರ (Upendra) ಜೋಡಿ ಮತ್ತೆ ತೆರೆಯ ಮೇಲೆ ಕಮಾಲ್ ಮಾಡಲು ಬರುತ್ತಿದ್ದಾರೆ. ಒಂದು ಲಾಂಗ್ ಗ್ಯಾಪ್ ನಂತರ ಅಭಿಮಾನಿಗಳ ಆಸೆಯಂತೆಯೇ ಪವರ್‌ಫುಲ್ ಸಬ್ಜೆಕ್ಟ್‌ನಲ್ಲಿ ಉಪ್ಪಿ ಮತ್ತು ಶಿವಣ್ಣ ಕಾಣಿಸಿಕೊಳ್ಳುತ್ತಿದ್ದಾರೆ.

    ರಮೇಶ್ ರೆಡ್ಡಿ (Ramesh Reddy) ನಿರ್ಮಾಣದಲ್ಲಿ ಮೂಡಿ ಬರಲಿರುವ ಹೊಸ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವಣ್ಣ ಮತ್ತು ರಿಯಲ್ ಸ್ಟಾರ್ ಉಪೇಂದ್ರ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಅರ್ಜುನ್ ಜನ್ಯ ಅವರ ಚೊಚ್ಚಲ ನಿರ್ದೇಶನದ `45′ ಚಿತ್ರದಲ್ಲಿ ಶಿವಣ್ಣ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಈಗ ಇದೇ ಚಿತ್ರಕ್ಕೆ ರಿಯಲ್ ಸ್ಟಾರ್ ಉಪ್ಪಿ ಎಂಟ್ರಿ ಆಗಿದೆ.

     

    View this post on Instagram

     

    A post shared by Arjun Janya (@arjun_janya_musician)

    ಅರ್ಜುನ್ ಜನ್ಯ (Arjun Janya) ಅವರ ಬಹುನಿರೀಕ್ಷಿತ ಸಿನಿಮಾ `45′ ಇದೇ ಡಿಸೆಂಬರ್‌ನಿಂದ ಚಿತ್ರೀಕರಣ ಶುರುವಾಗಲಿದೆ. ಬಹುಕೋಟಿ ವೆಚ್ಚದಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ.

    ಶಿವಣ್ಣ ಮತ್ತು ಉಪೇಂದ್ರ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಇನ್ನೂ ಭಿನ್ನ ಕಥೆಯಲ್ಲಿ ಮೂಡಿ ಬರುತ್ತಿರುವ ಶಿವಣ್ಣ ಮತ್ತು ಉಪೇಂದ್ರ ಕಾಂಬಿನೇಷನ್ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅರ್ಜುನ್ ಜನ್ಯ ನಿರ್ದೇಶನದ ಚಿತ್ರಕ್ಕೆ ಶಿವರಾಜ್ ಕುಮಾರ್ ಮತ್ತು ಉಪೇಂದ್ರ ಹೀರೋ

    ಅರ್ಜುನ್ ಜನ್ಯ ನಿರ್ದೇಶನದ ಚಿತ್ರಕ್ಕೆ ಶಿವರಾಜ್ ಕುಮಾರ್ ಮತ್ತು ಉಪೇಂದ್ರ ಹೀರೋ

    ಸಂಗೀತ ನಿರ್ದೇಶಕ ಅರ್ಜುನ್ ಜನ್ಯ (Arjun Janya) ಇದೇ ಮೊದಲ ಬಾರಿಗೆ ಸಿನಿಮಾವೊಂದನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾಗೆ ಶಿವರಾಜ್ ಕುಮಾರ್ ನಾಯಕ ಎಂದು ಈ ಹಿಂದೆಯೇ ಹೇಳಲಾಗಿತ್ತು. ಈಗ ಮತ್ತೊಂದು ಹೆಸರು ಸೇರ್ಪಡೆ ಆಗಿದ್ದು, ಶಿವರಾಜ್ ಕುಮಾರ್ (Shivraj Kumar) ಜೊತೆ ಉಪೇಂದ್ರ ಕೂಡ ನಾಯಕರಾಗಿ ನಟಿಸುತ್ತಿದ್ದಾರೆ. ಹಾಗಾಗಿ ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಮಲ್ಟಿಸ್ಟಾರ್ ಸಿನಿಮಾ ಸೆಟ್ಟೇರಲಿದೆ.

    ಹರಿಕೃಷ್ಣ ನಂತರ ಮತ್ತೋರ್ವ ಸಂಗೀತ ನಿರ್ದೇಶಕ ಸಿನಿಮಾ ಡೈರೆಕ್ಟರ್ ಆಗಿ ಬದಲಾಗಿದ್ದು, ಅರ್ಜುನ್ ಜನ್ಯ ಈ ಸಿನಿಮಾಗಾಗಿ ವಿಶೇಷ ಕಥೆಯೊಂದನ್ನು ಹೆಣೆದುಕೊಂಡಿದ್ದಾರಂತೆ. ತಮ್ಮ ಮೊದಲ ಸಿನಿಮಾದಲ್ಲಿ ಇಬ್ಬರು ಸ್ಟಾರ್ ನಟರಿಗೆ ಆ್ಯಕ್ಷನ್ ಕಟ್ ಹೇಳುತ್ತಿರುವುದು ವಿಶೇಷ. ಈಗಾಗಲೇ ಈ ಇಬ್ಬರೂ ಸ್ಟಾರ್ ನಟರು ಅರ್ಜುನ್ ಜನ್ಯ ಹೇಳಿದ ಕಥೆಗೆ ಥ್ರಿಲ್ ಆಗಿದ್ದಾರಂತೆ. ಇದೊಂದು ಅಪರೂಪದ ಕಥೆ ಎಂದು ಬಣ್ಣಿಸಿದ್ದಾರಂತೆ. ಇದನ್ನೂ ಓದಿ:‘ಸಂಸ್ಕಾರ ಭಾರತ’ದಲ್ಲಿ ಅನಾಮಿಕನ ರೋಚಕ ಸ್ಟೋರಿ

    ಗಾಳಿಪಟ 2 (Galipata 2) ಸೇರಿದಂತೆ ಹಲವು ಸಿನಿಮಾಗಳಿಗೆ ಬಂಡವಾಳ ಹೂಡಿರುವ ರಮೇಶ್ ರೆಡ್ಡಿ (Ramesh Reddy) ಅವರೇ ಈ ಸಿನಿಮಾವನ್ನು ನಿರ್ಮಾಣ ಮಾಡಲಿದ್ದು, ಅತೀ ಶೀಘ್ರದಲ್ಲೇ ಮುಹೂರ್ತ ಕೂಡ ನಡೆಯಲಿದೆ. ಶಿವರಾಜ್ ಕುಮಾರ್ ವೇದ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಉಪ್ಪಿ (Upendra) ತಮ್ಮದೇ ನಿರ್ದೇಶನದ ಚಿತ್ರದಲ್ಲಿ ತೊಡಗಿಕೊಂಡಿದ್ದಾರೆ. ಇಬ್ಬರ ಡೇಟ್ ಹೊಂದಾಣಿಕೆ ಮಾಡಿಕೊಂಡು ಶೂಟಿಂಗ್ ಗೆ ಸಿದ್ಧತೆ ನಡೆಸಲಿದ್ದಾರಂತೆ ಜನ್ಯ.

    Live Tv
    [brid partner=56869869 player=32851 video=960834 autoplay=true]

  • ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟುಹಬ್ಬಕ್ಕೆ ‘ಗಾಳಿಪಟ 2’ ತಂಡದಿಂದ ಹಾಡಿನ ಉಡುಗೊರೆ

    ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟುಹಬ್ಬಕ್ಕೆ ‘ಗಾಳಿಪಟ 2’ ತಂಡದಿಂದ ಹಾಡಿನ ಉಡುಗೊರೆ

    ಜುಲೈ 2 ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟುಹಬ್ಬ. ಇದರ ಸವಿನೆನಪಿಗಾಗಿ “ಗಾಳಿಪಟ ೨” ಚಿತ್ರತಂಡ ಹಾಡೊಂದನ್ನು ಬಿಡುಗಡೆ ಮಾಡುವ ಮೂಲಕ ಹುಟ್ಟುಹಬ್ಬದ ಉಡುಗೊರೆ ನೀಡಿದೆ. ಜಯಂತ ಕಾಯ್ಕಿಣಿ ಅವರು ಬರೆದಿರುವ “ನಾನಾಡದ ಮಾತೆಲ್ಲವ ಕದ್ದಾಲಿಸು” ಎಂಬ ಹಾಡನ್ನು ಸೋನು ನಿಗಮ್ ಸುಶ್ರಾವ್ಯವಾಗಿ ಹಾಡಿದ್ದಾರೆ . “ಗಾಳಿಪಟ” ಮೊದಲ ಭಾಗದ “ಮಿಂಚಾಗಿ ನೀನು ಬರಲು” ಹಾಡು ಕೂಡ ಜಯಂತ ಕಾಯ್ಕಿಣಿ, ಸೋನು ನಿಗಮ್, ಗಣೇಶ್ ಹಾಗೂ ಯೋಗರಾಜ್ ಭಟ್ ಅವರ ಕಾಂಬಿನೇಶನ್ ನಲ್ಲಿ ಬಂದು ಭರ್ಜರಿ ಯಶಸ್ಸು ಕಂಡಿತ್ತು. ಈಗ “ಗಾಳಿಪಟ ೨” ಚಿತ್ರದ ಈ ಹಾಡು ಕೂಡ ಅದೇ‌ ರೀತಿ ಯಶಸ್ಸು ಕಾಣಲಿದೆ.

    ನಮ್ಮ ಚಿತ್ರದ ನಾಯಕ ಗಣೇಶ್ ಅವರ ಹುಟ್ಟುಹಬ್ಬದ ಸಂದರ್ಭ. ಈ ಸುಂದರ ಕ್ಷಣಕ್ಕೆ ನಮ್ಮ ಹಾಡಿನ ಉಡುಗೊರೆ. ಜುಲೈ 2 ಗಣೇಶ್  ಹುಟ್ಟುಹಬ್ಬ. ಅಂದು ಅವರು ಊರಿನಲ್ಲಿರದ ಕಾರಣ ಈಗ ಮಾಧ್ಯಮ ಮಿತ್ರರ ಮುಂದೆ ಈ ಹಾಡು ಬಿಡುಗಡೆ ಮಾಡಿದ್ದೇವೆ. ಜುಲೈ 2 ರಂದು ಆನಂದ್ ಆಡಿಯೋ ಮೂಲಕ ಈ ಹಾಡು ಎಲ್ಲರಿಗೂ ತಲುಪಲಿದೆ ಎಂದು ನಿರ್ದೇಶಕ ಯೋಗರಾಜ್ ಭಟ್ ತಿಳಿಸಿದರು ಹಾಗೂ ಹಾಡಿನ  ಪದಪದದ ಅರ್ಥ ವಿವರಿಸಿ, ಹಾಡು ಬರೆದಿರುವ  ಜಯಂತ ಕಾಯ್ಕಿಣಿ ಕಾಯ್ಕಿಣಿ, ಹಾಡಿರುವ ಸೋನು ನಿಗಂ ಹಾಗೂ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರಿಗೆ ಧನ್ಯವಾದ ಹೇಳಿದರು. ಇದನ್ನೂ ಓದಿ:ಮದುವೆಯ ವದಂತಿಗೆ ಸ್ಪಷ್ಟನೆ ನೀಡಿದ ರಾಮ್ ಪೋತಿನೇನಿ

    ಮತ್ತೆ ಕೋವಿಡ್ ಹೆಚ್ಚುತ್ತಿರುವ ಕಾರಣ, ನಾನು ಈ ಬಾರಿ ನನ್ನ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸುತ್ತಿಲ್ಲ. ನಾನು ಅಂದು ಬೆಂಗಳೂರಿನಲ್ಲಿ ಇರುವುದಿಲ್ಲ. ಈ ಹಾಡನ್ನು ಕೇಳಿ ಮತ್ತೆ ಹದಿನೈದು ವರ್ಷಗಳ ಹಿಂದೆ ಹೋದೆ. ಅದೇ ಕಾಂಬಿನೇಷನ್ ನಲ್ಲಿ ಮತ್ತೆ ಇಂಪಾದ ಹಾಡು ಬಂದಿದೆ. ಅಷ್ಟೇ ಜನಪ್ರಿಯವಾಗಲಿದೆ ಎಂಬ ಭರವಸೆಯಿದೆ. ನನ್ನ ಹುಟ್ಟುಹಬ್ಬಕ್ಕೆ ಇದೊಂದು ವಿಶೇಷ ಉಡುಗೊರೆ. ನಿರ್ಮಾಪಕ ರಮೇಶ್ ರೆಡ್ಡಿ ಅವರು ಯಾವುದಕ್ಕೂ ಕೊರತೆ ಇಲ್ಲದೆ ಚಿತ್ರ ನಿರ್ಮಾಣ ಮಾಡಿದ್ದಾರೆ. ಕುದುರೆಮುಖದಲ್ಲಿ ಸುಮಾರು 200 ಜನರ ತಂಡ ಇದ್ದೆವು. ಕಲಾ ನಿರ್ದೇಶಕ‌ ಪಂಡಿತ್ ಅವರಂತೂ ಅದ್ಭುತ ಸೆಟ್ ಹಾಕಿದ್ದರು. ಯೋಗರಾಜ್ ಸರ್ ಬಗ್ಗೆ ಎಷ್ಟು ಹೇಳಿದರು ಕಡಿಮೆ. ನೀರಿನಲ್ಲಿ ಐರನ್ ಬಾಕ್ಸ್ ಇಟ್ಟು ಹೊಗೆ ಬರೆಸಿದ್ದಾರೆ ಅವರು.  ಇದರ ಬಗ್ಗೆ ಕೇಳಿದಾಗ ಹುಡುಗ ಹೀಟ್ ಆಗಿರುತ್ತಾನೆ. ಇದು ಅದರ ಸಂಕೇತವೆಂದರು. ಧನು ಮಾಸ್ಟರ್ ಸುಂದರವಾಗಿ ನೃತ್ಯ ಸಂಯೋಜನೆ ಮಾಡಿದ್ದಾರೆ ಎಂದರು ನಾಯಕ ಗಣೇಶ್.

    ಹಾಡು ಚೆನ್ನಾಗಿದೆ. ಈ ಹಾಡಿಗೆ ಬಳಿಸಿದ ವಸ್ತುಗಳನ್ನು ನೆನಪಿಗಾಗಿ ನಮ್ಮ ಮನೆಯ ಬಳಿ ತರಿಸಿಟ್ಟುಕೊಂಡಿದ್ದೀನಿ. ಈ ಹಾಡನ್ನು ನನ್ನ ಮಗಳು ದಿನ ಕೇಳುತ್ತಿರುತ್ತಾಳೆ. ಬಿಡುಗಡೆ ಮುಂಚೆಯೇ ಈ ಹಾಡು ಗೆದ್ದಿದೆ ಎನ್ನಬಹುದು. ನಮ್ಮ ಚಿತ್ರಕ್ಕೆ ನಿಮ್ಮ ಬೆಂಬಲವಿರಲಿ ಎಂದರು ನಿರ್ಮಾಪಕ ರಮೇಶ್ ರೆಡ್ಡಿ.

    Live Tv

  • ಇನ್ನೆರಡು ತಿಂಗಳಲ್ಲಿ ಶಿವರಾಜ್ ಕುಮಾರ್ ಮತ್ತು ಅರ್ಜುನ್ ಜನ್ಯ ಕಾಂಬಿನೇಷನ್ ಸಿನಿಮಾ: ರಮೇಶ್ ರೆಡ್ಡಿ

    ಇನ್ನೆರಡು ತಿಂಗಳಲ್ಲಿ ಶಿವರಾಜ್ ಕುಮಾರ್ ಮತ್ತು ಅರ್ಜುನ್ ಜನ್ಯ ಕಾಂಬಿನೇಷನ್ ಸಿನಿಮಾ: ರಮೇಶ್ ರೆಡ್ಡಿ

    ರ್ಜುನ್ ಜನ್ಯ ನಿರ್ದೇಶನದ ಚೊಚ್ಚಲು ಸಿನಿಮಾ ಇನ್ನೆರಡು ತಿಂಗಳಲ್ಲಿ ಸೆಟ್ಟೇರಲಿದೆ ಎಂದು ಪಬ್ಲಿಕ್ ಟಿವಿ ಡಿಜಿಟಲ್ ಗೆ ತಿಳಿಸಿದ್ದಾರೆ ನಿರ್ಮಾಪಕ ರಮೇಶ್ ರೆಡ್ಡಿ. ಇಂದು ಬೆಳಗ್ಗೆ ಅರ್ಜುನ್ ಜನ್ಯ ಅವರ ಜೊತೆ ಶಿವರಾಜ್ ಕುಮಾರ್ ಮನೆಗೆ ಆಗಮಿಸಿದ್ದ ಅವರು, ಒಂದೊಳ್ಳೆ ಕಥೆಯೊಂದಿಗೆ ನಮ್ಮ ಬ್ಯಾನರ್ ನಲ್ಲಿ ಶಿವರಾಜ್ ಕುಮಾರ್ ಅವರಿಗಾಗಿ ಸಿನಿಮಾ ಮಾಡುತ್ತಿದ್ದೇನೆ ಎಂದಿದ್ದಾರೆ.  ಅಲ್ಲದೇ, ಇದೊಂದು ಒಳ್ಳೆಯ ಸಿನಿಮಾ ಆಗಲಿದೆ ಎಂಬ ವಿಶ್ವಾಸವನ್ನೂ ಅವರು ವ್ಯಕ್ತ ಪಡಿಸಿದ್ದಾರೆ.

    ಪಡ್ಡೆಹುಲಿ, ನಾತಿಚರಾಮಿ, 100, ಗಾಳಿಪಟ 2 ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿರುವ ರಮೇಶ್ ರೆಡ್ಡಿ ಅವರು ನಾತಿಚರಾಮಿ ಸಿನಿಮಾಗಾಗಿ ರಾಷ್ಟ್ರ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಗಾಳಿಪಟ 2  ಇನ್ನಷ್ಟೇ ರಿಲೀಸ್ ಆಗಬೇಕು. ಈ ನಡುವೆ ಶ್ರೀಮುರುಳಿಗಾಗಿ ಒಂದು ಸಿನಿಮಾವನ್ನು ನಿರ್ಮಾಣ ಮಾಡುವುದಾಗಿಯೂ ರಮೇಶ್ ರೆಡ್ಡಿ ಅವರು ಘೋಷಿಸಿದ್ದರು. ಇದೀಗ ಅರ್ಜುನ್ ಜನ್ಯ ಅವರನ್ನು ನಿರ್ಮಾಪಕರನ್ನಾಗಿ ಲಾಂಚ್ ಮಾಡುತ್ತಿದ್ದಾರೆ. ಈ ಹಿಂದೆಯೂ ಇವರು ಖ್ಯಾತ ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ ಅವರನ್ನು ಲಾಂಚ್ ಮಾಡಿದ್ದರು. ಇದನ್ನೂ ಓದಿ: ರಣ್‌ವೀರ್ ಅವರನ್ನು ದೀಪಿಕಾ ಪಡುಕೋಣೆ ಮದುವೆಯಾಗಿದ್ದು ಏಕೆ? ರಿವೀಲ್ ಆಯ್ತು ಸೀಕ್ರೆಟ್

    ಅರ್ಜುನ್ ಜನ್ಯ ಅವರು ಕಥೆ ಹೇಳಿದಾಗ ತುಂಬಾ ಖುಷಿ ಆಯಿತು. ಶಿವರಾಜ್ ಕುಮಾರ್ ಅವರಿಗೆ ಸಿನಿಮಾ ಮಾಡಬೇಕು ಎಂದು ನಾನೂ ಅಂದುಕೊಂಡಿದ್ದೆ. ಅದು ಈಗ ಕೂಡಿ ಬಂದಿದೆ. ಅತ್ಯುತ್ತಮ ನಾಯಕಿ ಮತ್ತು ವಿಲನ್ ಪಾತ್ರಧಾರಿಯನ್ನು ಹುಡುಕುತ್ತಿದ್ದೇವೆ. ಸದ್ಯದಲ್ಲೇ ಎಲ್ಲ ಮಾಹಿತಿಯನ್ನೂ ಕೊಡಲಿದ್ದೇವೆ. ಅಂದುಕೊಂಡಂತೆ ಆದರೆ, ಇನ್ನೆರಡು ತಿಂಗಳು ಬಳಿಕೆ ಈ ಸಿನಿಮಾ ಸೆಟ್ಟೇರಲಿದೆ ಎನ್ನುತ್ತಾರೆ ನಿರ್ಮಾಪಕ ರಮೇಶ್ ರೆಡ್ಡಿ.

    Live Tv