Tag: Ramesh Kumar

  • ರಾಜ್ಯದ ಸರ್ಕಾರಿ ಶಾಲೆಗಳು ಸುಧಾರಿಸಿವೆ, ದೆಹಲಿ ಮಾದರಿ ಅಳವಡಿಸಿಕೊಳ್ಳಬೇಕಿದೆ: ರಮೇಶ್ ಕುಮಾರ್

    ರಾಜ್ಯದ ಸರ್ಕಾರಿ ಶಾಲೆಗಳು ಸುಧಾರಿಸಿವೆ, ದೆಹಲಿ ಮಾದರಿ ಅಳವಡಿಸಿಕೊಳ್ಳಬೇಕಿದೆ: ರಮೇಶ್ ಕುಮಾರ್

    ಕೋಲಾರ: ರಾಜ್ಯದ ಸರ್ಕಾರಿ ಶಾಲೆಗಳು ಸುಧಾರಿಸಿವೆ, ದೆಹಲಿ ಮಾದರಿಯನ್ನ ಅಳವಡಿಸಿಕೊಳ್ಳಬೇಕಿದೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.

    ಕೋಲಾರದ ಶ್ರೀನಿವಾಸಪುರ ಪಟ್ಟಣದಲ್ಲಿ ಮಾರುತಿ ಸಮುದಾಯ ಭವನದಲ್ಲಿ ಎಸ್‍ಎಸ್‍ಎಲ್ ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳ ಬಗ್ಗೆ ಕೀಳರಿಮೆ ಪಡುವುದು ಬೇಡ, ರಾಜ್ಯದಲ್ಲಿಯೂ ಸಹ ದೆಹಲಿ ಶಿಕ್ಷಣ ಮಾದರಿಯಲ್ಲಿ ಅಭಿವೃದ್ಧಿ ಹೊಂದಬೇಕು. ರಾಜ್ಯದಲ್ಲಿ ಸರ್ಕಾರಿ ಶಾಲೆಗಳು ಉನ್ನತಮಟ್ಟದ ಶಿಕ್ಷಣ ನೀಡುವಲ್ಲಿ ಮುಂಚೂಣಿಯಲ್ಲಿವೆ. ಸರ್ಕಾರಿ ಶಾಲೆಗಳು ಯಾವುದೆ ಖಾಸಗಿ ಶಾಲೆಗಳಿಗೆ ಕಡಿಮೆ ಇಲ್ಲವೆಂಬುದನ್ನ ಪೋಷಕರು ಅರಿಯಬೇಕು ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ರಾಹುಲ್ ಗಾಂಧಿಯ ಪೋಸ್ಟ್ ತೆಗೆದು ಹಾಕಿದ ಫೇಸ್‍ಬುಕ್

    ಈ ವೇಳೆ ಸರ್ಕಾರಿ ಶಾಲೆಗಳ ಕಟ್ಟಡಗಳನ್ನ ದುರುಪಯೋಗ ಮಾಡಿಕೊಳ್ಳುತ್ತಿದ್ದು, ಅವು ದೇವಾಲಯಗಳು ಇಂತಹ ಪವಿತ್ರವಾದ ಸ್ಥಳದಲ್ಲಿ ಆಕ್ಷೇಪಾರ್ಹ ಚಟುವಟಿಕೆಗಳು ನಡೆಸಲು ಅವಕಾಶ ನೀಡಬಾರದು. ಅಲ್ಲದೆ ಸರ್ಕಾರಿ ಶಾಲೆಗಳಿಗೆ ಕಾಂಪೌಂಡ್ ನಿರ್ಮಾಣ ಮಾಡಿ, ಸಿಸಿ ಟಿವಿಗಳನ್ನ ಅಳವಡಿಸುವಂತೆ ಶಿಕ್ಷಣ ಇಲಾಖೆಗೆ ಸಲಹೆ ನೀಡಿದ್ದಾರೆ. ಇದೆ ವೇಳೆ ರಾಜ್ಯಕ್ಕೆ ಹಾಗೂ ಜಿಲ್ಲೆಗೆ ಅತಿ ಹೆಚ್ಚು ಅಂಕ ಪಡೆದು ವಿದ್ಯಾರ್ಥಿಗಳನ್ನ ಆತ್ಮೀಯವಾಗಿ ರಮೇಶ್ ಕುಮಾರ್ ಅಭಿನಂದಿಸಿದ್ದಾರೆ. ಇದೆ ವೇಳೆ ತಾಲೂಕಿನ ಅಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

  • ಯಡಿಯೂರಪ್ಪ ರಾಜೀನಾಮೆಯಿಂದ ಕಾಂಗ್ರೆಸ್​ಗೆ ಲಾಭವಿಲ್ಲ: ರಮೇಶ್ ಕುಮಾರ್

    ಯಡಿಯೂರಪ್ಪ ರಾಜೀನಾಮೆಯಿಂದ ಕಾಂಗ್ರೆಸ್​ಗೆ ಲಾಭವಿಲ್ಲ: ರಮೇಶ್ ಕುಮಾರ್

    ಕೋಲಾರ: ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡಿದ್ದು ಕಾಂಗ್ರೆಸ್​ಗೆ ಪ್ಲಸ್ಸೂ ಆಗಲ್ಲ ಮೈನಸ್ಸೂ ಆಗಲ್ಲ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.

    ಜಿಲ್ಲಾ ಕಾಂಗ್ರೆಸ್​ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರ ಹೋದಾಗ ಬೇಸರ ಸಹಜ, ನಮಗೂ ನೋವಾಗುತ್ತೆ, ಅವರಿಗೂ ನೋವಾಗುತ್ತೆ. ಕಳೆದ 40 ವರ್ಷಗಳ ಕಾಲ ಸಾರ್ವಜನಿಕ ಜೀವನದಲ್ಲಿ ಸೇವೆ ಸಲ್ಲಿಸಿದ್ದಾರೆ, ಒಳ್ಳೆಯ ಅರೋಗ್ಯ ಅವರ ಎಲ್ಲಾ ಚಟುವಟಿಕೆಗಳು ಹೀಗೆ ಮುಂದುವರೆಯಲಿ ಎಂದು ಶುಭ ಹಾರೈಸುವೆ ಎಂದರು.

    ಯಡಿಯೂರಪ್ಪ ಅವರಿಗೆ 78 ವರ್ಷ ವಯಸ್ಸಾಗಿದೆ ಹಾಗಾಗಿ ಈಗ ಸಿಎಂ ಆಗಿದ್ದರೆ ಒತ್ತಡ ಇರುತ್ತೆ. ವಿಶ್ರಾಂತಿ ಅವಶ್ಯಕವಾಗಿದೆ, ರಾಜೀನಾಮೆ ನಂತರ ಬೇಸರ ಸಹಜ, ಒಂದೆರೆಡು ದಿನಗಳ ನಂತರ ಎಲ್ಲವೂ ಸರಿಯಾಗುತ್ತದೆ ಎಂದರು.

    ಸಿಎಂ ರಾಜಿನಾಮೆಗೆ ಮಠಾಧೀಶರ ವಿರೋಧ ಪ್ರಶ್ನೆಗೆ ಪ್ರತಿಕ್ರಿಯೆ ನೀಡದ ರಮೇಶ್ ಕುಮಾರ್, ಪಕ್ಷ ಅವರಿಗೆ ಅವಕಾಶ ಕೊಟ್ಟಿತ್ತು, ಪಕ್ಷ ಹೇಳಿದಂತೆ ಅವರು ನಡೆದುಕೊಂಡಿದ್ದಾರೆ ಎಂದರು.

    ರಾಜೀನಾಮೆಯಿಂದ ವಲಸಿಗ ಸಚಿವರು ಕಂಗಾಲಾಗಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ವಲಸಿಗ ಸಚಿವರು ಬಿಜೆಪಿ ಸಿದ್ಧಾಂತ ನಂಬಿ ಹೋಗಿದ್ದಾರೋ, ಯಡಿಯೂರಪ್ಪ ಸಿದ್ಧಾಂತ ನಂಬಿ ಹೋದ್ರೋ ಗೊತ್ತಿಲ್ಲ, ಕಂಗಾಲಾಗಿದ್ದಾರೆಯೋ, ದಿಕ್ಕಾಪಾಲಾಗಿದ್ದಾರೆಯೋ ನನಗೆ ಗೊತ್ತಿಲ್ಲ. ನನಗೆ ಯಾರೂ, ಏನೂ ಹೇಳಿಲ್ಲ ಎಂದು ವಲಸಿಗ ಸಚಿವರು ಸೇರಿದಂತೆ ಆರೋಗ್ಯ ಸಚಿವ ಸುಧಾಕರ್ ಕುರಿತು ವ್ಯಂಗ್ಯವಾಗಿಯೇ ಉತ್ತರಿಸಿದರು.

    ಕಾಂಗ್ರೇಸ್ ವಕ್ತಾರ ವಿ.ಆರ್.ಸುದರ್ಶನ್ ಮಾತನಾಡಿ, ಬಿಎಸ್‍ವೈ ಹೋರಾಟದ ಮೂಲಕ ಸಿಎಂ ಆದವರು, ನಾಲ್ಕು ಬಾರಿ ಸಿಎಂ ಆಗಿ ಸಾಕಷ್ಟು ಉತ್ತಮ ಕೆಲಸಗಳನ್ನ ಮಾಡಿದ್ದಾರೆ. ಅವರಿಗೆ ಬಂದಂತಹ ಅವಕಾಶಗಳಲ್ಲಿ ಬಹಳ ದೊಡ್ಡ ಕ್ರಾಂತಿ ಮಾಡಬಹುದಾಗಿತ್ತು. ಆದ್ರೆ ಅವರು ಮಾಡಿಲ್ಲ ಅವರಿಗೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.

  • ಸರ್ಕಾರಕ್ಕೆ ಪಂಚೇಂದ್ರಿಯಗಳು ಇದ್ರೆ ನೌಕರರ ಬೇಡಿಕೆ ಈಡೇರಿಸಲಿ: ರಮೇಶ್ ಕುಮಾರ್

    ಸರ್ಕಾರಕ್ಕೆ ಪಂಚೇಂದ್ರಿಯಗಳು ಇದ್ರೆ ನೌಕರರ ಬೇಡಿಕೆ ಈಡೇರಿಸಲಿ: ರಮೇಶ್ ಕುಮಾರ್

    ಕೋಲಾರ: ಸಾರಿಗೆ ನೌಕರರು ಹಾಗೂ ಸಾರಿಗೆಯನ್ನು ಅವಲಂಬಿಸಿರುವವರೆಲ್ಲರೂ ಮಧ್ಯಮ ವರ್ಗದವರು, ಸರ್ಕಾರಕ್ಕೆ ಪಂಚೇಂದ್ರಿಯಗಳು ಕೆಲಸ ಮಾಡುತ್ತಿದ್ದರೆ ಮುಷ್ಕರವನ್ನು ಹತ್ತಿಕ್ಕುವ ಬದಲು ನೌಕರರ ಬೇಡಿಕೆ ಈಡೇರಿಸಿ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸರ್ಕಾರವನ್ನು ಆಗ್ರಹಿಸಿದರು.

    ಕೋಲಾರದ ಶ್ರೀನಿವಾಸಪುರದ ಕಾಂಗ್ರೆಸ್ ಕಚೇರಿಯಲ್ಲಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರಕ್ಕೆ ಸಂಬಂಧಿಸಿದಂತೆ ಮಾತನಾಡಿದ ರಮೇಶ್ ಕುಮಾರ್, ಜನರನ್ನು ಅತಂತ್ರ ಸ್ಥಿತಿಗೆ ತಲುಪಿಸಿ ಸಾರಿಗೆ ನೌಕರರಿಗೆ ನೋಟಿಸ್ ಜಾರಿ ಮಾಡುವುದು ಸರಿಯಲ್ಲ, ಮುಷ್ಕರವನ್ನು ಹತ್ತಿಕ್ಕಲು ಸರ್ಕಾರ ಮುಂದಾಗಿದೆ ಹೊರತು, ಅವರ ಬೇಡಿಕೆಗಳನ್ನು ಕೇಳುವ ಗೋಜಿಗೆ ಹೋಗಿಲ್ಲ. ಸಾರಿಗೆ ನೌಕರರ ವಿಚಾರದಲ್ಲಿ ರಾಜ್ಯ ಸರ್ಕಾರ ಅವೈಜ್ಞಾನಿಕವಾಗಿ ನಡೆದುಕೊಳ್ಳುತ್ತಿದೆ. ನೌಕರರಿಗೆ ಎಸ್ಮಾ ಅಸ್ತ್ರ ಪ್ರಯೋಗ, ಕಾನೂನು ತೋರಿಸಿ ಬೆದರಿಸುವುದು ಸರಿಯಲ್ಲ ಎಂದು ಅವರು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

    ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆಯಾಗಿದೆ ಆ ವಿಚಾರ ನಮಗು ಅದಕ್ಕೂ ಸಂಬಂಧವಿಲ್ಲವೆನ್ನುವಂತ್ತಿರುವ ಸರ್ಕಾರ, ಖಾಸಗಿಯವರಿಗೆ ಅನುಮತಿ ಕೊಟ್ಟು ಸಾರಿಗೆ ನೌಕರರ ಮೇಲೆ ಅರೋಪ ಮಾಡುತ್ತಿದೆ. ನನ್ನ ಅಂತಃಕರಣ ಕಾಳಜಿಯಿಂದ ಹೇಳುವೆ ಸರ್ಕಾರ ಕೂಡಲೆ ನೌಕರರಿಗೆ ಸ್ಪಂದಿಸಬೇಕು, ನೌಕರರನ್ನು ಶತ್ರುಗಳ ರೀತಿ ನೋಡುವುದು ಸರಿಯಲ್ಲ. ಪ್ರಯಾಣಿಕರಿಗೆ, ಸಾರ್ವಜನಿಕರಿಗೆ ತೊಂದರೆ ಕೊಡುವುದು ಸರಿಯಲ್ಲ. ನಮ್ಮ ಒಲವು ದುಡಿಯುವ ವರ್ಗದವರ ಪರವಾಗಿರುತ್ತೆ. ರಾಜ್ಯ ಸರ್ಕಾರದ ಸಿಎಂ ಸೇರಿ ಎಲ್ಲರೂ ಉಪ ಚುನಾವಣೆಯಲ್ಲಿ ಬ್ಯುಸಿಯಾಗಿದ್ದಾರೆ ಎಂದು ಸರ್ಕಾರಕ್ಕೆ ಛಾಟಿ ಬೀಸಿದರು.

    ಯುಗಾದಿ ಹಬ್ಬ ಸಮೀಪಿಸುತ್ತಿದ್ದು ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ನೌಕರರ ಸಮಸ್ಯೆ ಇತ್ಯರ್ಥ ಮಾಡಬೇಕು. ಅಲ್ಲದೆ ಸರ್ಕಾರ ನೌಕರರನ್ನು ಪರೋಕ್ಷವಾಗಿ ಹೆದರಿಸಲು ಮುಂದಾದರೆ ದಬ್ಬಾಳಿಕೆ, ದೌರ್ಜನ್ಯ ಮಾಡಿದರೆ ಖಂಡಿಸುತ್ತೇವೆ ಎಂದು ತಿಳಿಸಿದರು.

  • ಸಿಡಿ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ, ಏನೂ ಕೇಳಬೇಡಿ: ರಮೇಶ್ ಕುಮಾರ್

    ಸಿಡಿ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ, ಏನೂ ಕೇಳಬೇಡಿ: ರಮೇಶ್ ಕುಮಾರ್

    – ನನ್ನ ಗೌರವ ಯೋಗ್ಯತೆಗೆ ಒಳ್ಳೆಯದಲ್ಲ

    ಕೋಲಾರ: ಸಿಡಿ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ, ನನ್ನೇನೂ ಕೇಳಬೇಡಿ. ಈ ವಿಚಾರದಲ್ಲಿ ಹೆಚ್ಚು ಆಸಕ್ತಿ ನನಗಿಲ್ಲ, ಕಾನೂನು ರೀತಿ ನಡೆಯುತ್ತೆ. ಹೆಚ್ಚು ಆಸಕ್ತಿಯಿಂದ ವ್ಯಾಖ್ಯಾನ ಮಾಡೋದು ನನ್ನ ಯೋಗ್ಯತೆ, ಗೌರವಕ್ಕೆ ಒಳ್ಳೆಯದಲ್ಲ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದರು.

    ನಗರದ ನಿರ್ಮಿತಿ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಆದರೂ ಆಗ್ರಹ ಮಾಡಬಹುದು, ಯಾರಾದರು ಮಾಡಬಹುದು. ಅಧಿವೇಶನ ಸಮಯದಲ್ಲಿ ನ್ಯಾಯವಾಗಿ ಮಾತನಾಡಿದ್ದೇನೆ ಎಂದರು.

    ಸಂತ್ರಸ್ತೆ ಕೋರ್ಟ್ ಮುಂದೆ ಬಂದ ಮೇಲೆ ಎಲ್ಲಾ ಮುಗೀತು, ಇನ್ನು ಕೋರ್ಟ್ ಆಯ್ತು ಅವರಾಯ್ತು ಅಷ್ಟೆ. ನ್ಯಾಯಾಂಗವೇ ಸಂತ್ರಸ್ತೆಗೆ ಅವಕಾಶ ನೀಡಿದೆ. ವ್ಯವಸ್ಥೆಯ ಮೇಲೆ ನಂಬಿಕೆ ಇಡಬೇಕು. ಕೊಚ್ಚೆ ನೀರಲ್ಲಿ ಸಂಪಿಗೆ ವಾಸನೆ ಬರಲ್ಲ, ಮನುಷ್ಯ ಅಂದಮೇಲೆ ಚಪಲ ಇರುತ್ತೆ. ಪಂಚೇದ್ರಿಯಗಳು ಕೆಲಸ ಮಾಡುತ್ತವೆ, ಇದೆಲ್ಲಾ ಕಾಮನ್ ರೀ, ದೊಡ್ಡ ವಿಚಾರವೇ ಅಲ್ಲ, ಜನರ ಕಷ್ಟ ಯಾರೂ ಮಾತಾಡಲ್ಲ. ಅಸಹ್ಯವಾಗಿ ನಡೆದುಕೊಂಡಾಗ ಸಂವಿಧಾನವೇ ಶಿಕ್ಷೆ ಕೊಡುತ್ತೆ ಎಂದು ಹೇಳಿದರು.

    ಡಿಕೆ ಶಿವಕುಮಾರ್ ಕಾರಿನ ಮೇಲೆ ಚಪ್ಪಲಿ ಎಸೆದ ಕುರಿತು ಮಾತನಾಡಿದ ಅವರು, ಚಪ್ಪಲಿ ಹಳೆಯದಾಗಿತ್ತೇನೋ ಇರಲಿ ಬಿಡಿ, ಕಾರ್ಪೊರೇಷನ್‍ನವರು ಕ್ಲೀನ್ ಮಾಡ್ತಾರೆ ಎಂದು ವ್ಯಂಗ್ಯವಾಗಿ ಉತ್ತರ ನೀಡಿದರು.

  • ಸಿಡಿ ಲೇಡಿ ಪರ ನಾವಿದ್ದೇವೆ, ಧೈರ್ಯದಿಂದ ಬಂದು ಹಾಜರಾಗ್ಲಿ: ರಮೇಶ್ ಕುಮಾರ್

    ಸಿಡಿ ಲೇಡಿ ಪರ ನಾವಿದ್ದೇವೆ, ಧೈರ್ಯದಿಂದ ಬಂದು ಹಾಜರಾಗ್ಲಿ: ರಮೇಶ್ ಕುಮಾರ್

    ಕೋಲಾರ: ಸಿಡಿ ಸಂತ್ರಸ್ತೆ ಅಜ್ಞಾತ ಸ್ಥಳದಿಂದ ರಕ್ಷಣೆ ಕೋರಿದ್ದು, ಸಂತ್ರಸ್ತೆ ನೆರವಿಗೆ ನಾವಿದ್ದೇವೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದರು.

    ಕೋಲಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀನಿವಾಸಪುರ ತಾಲೂಕಿನ ಅಧಿಕಾರಿಗಳ ಜೊತೆ ಕರೆದಿದ್ದ ಸಭೆಗೂ ಮುನ್ನ ರಮೇಶ್ ಕುಮಾರ್ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ಅಜ್ಞಾತ ಸ್ಥಳದಿಂದ ರಕ್ಷಣೆ ಕೋರಿ ಪಾಪ ಆಕೆ ಮನವಿ ಮಾಡಿದ್ದಾಳೆ. ಸಾರ್ವಜನಿಕ ಜೀವನದಲ್ಲಿರುವ ನಾವು, ಆಕೆ ಹಾಗೂ ಆಕೆಯ ಕುಟುಂಬಕ್ಕೆ ರಕ್ಷಣೆ ನೀಡುವುದು ಕರ್ತವ್ಯ ಎಂದರು.

    ಈಗಾಗಲೇ ಅಸೆಂಬ್ಲಿಯಲ್ಲಿ ಸಂತ್ರಸ್ತೆಯ ರಕ್ಷಣೆ ಕುರಿತು ಮಾತನಾಡಿದ್ದು, ಖಂಡಿತಾ ಆಕೆಗೆ ರಕ್ಷಣೆ ಒದಗಿಸುತ್ತೇವೆ. ಆಕೆ ಹೆದರಬೇಕಾಗಿಲ್ಲ, ನಮ್ಮದೇನು ಅನಾಗರಿಕ ಸಮಾಜವೇನಲ್ಲ. ಒಂದು ಹೆಣ್ಣು ಮಗಳು ಸಂಕಷ್ಟದಲ್ಲಿದ್ದು ಸಹಾಯ ಕೇಳಿದ್ದಾಳೆ ಅಂದರೆ ಆಕೆಯ ನೆರವಿಗೆ ನಾವು ನಿಲ್ಲುತ್ತೇವೆ. ಸದಾ ಸಾರ್ವಜನಿಕ ಜೀವನದಲ್ಲಿರುವ ನಾವು ಯಾರೇ ಸಹಾಯ ಕೇಳಿದರೂ ಅವರ ಸಹಾಯಕ್ಕೆ ನಿಲ್ಲುತ್ತೇವೆ. ಎಸ್‍ಐಟಿ ಮುಂದೆ ಹೇಳಿಕೆ ನೀಡಲು ಒತ್ತಡ ಇದ್ದರೆ, ನ್ಯಾಯಾಧೀಶರ ಎದುರು ಹೇಳಿಕೆ ನೀಡಲಿ. ಆಗ ಅದು ಅಧಿಕೃತವಾಗುತ್ತದೆ ಎಂದು ಸಲಹೆ ನೀಡಿದರು.

    ಸದ್ಯ ಆಕೆ ಅಜ್ಞಾತ ಸ್ಥಳದಲ್ಲಿದ್ದಾಳೆ. ಧೈರ್ಯವಾಗಿ ಬಂದು ಹೇಳಿಕೆ ನೀಡಲಿ ಎಂದ ಅವರು, ನನಗೂ ಒಂದು ಹೆಣ್ಣು ಮಗಳಿದ್ದಾಳೆ. ಆಕೆಗೆ ಸಂಕಷ್ಟ ಎದುರಾದಾಗ ನೆರವಿಗೆ ನಿಲ್ಲಬೇಕಲ್ಲವೇ. ಸಿಡಿ ಯುವತಿಗೆ ವಿಶೇಷ ರಕ್ಷಣೆ ನೀಡುವುದಕ್ಕೆ ನಾನು ಗೃಹಮಂತ್ರಿ ಅಲ್ಲ. ನಮ್ಮ ಕೆಲಸವನ್ನ ಶ್ರದ್ಧೆ ಹಾಗೂ ನಿಷ್ಠೆಯಿಂದ ಮಾಡುತ್ತೇವೆ. ಗೌರವಯುತವಾಗಿ ನಡೆದುಕೊಳ್ಳುತ್ತೇವೆ ಎಂದು ತಿಳಿಸಿದರು.

    ಇದೇ ವೇಳೆ ಕಾಂಗ್ರೆಸ್ಸಿನಲ್ಲಿ ನಿಮ್ಮ ಪ್ರಭಾವ ಹೆಚ್ಚಾಗುತ್ತಿದೆಯಲ್ಲಾ ಅನ್ನೋ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ 71 ವರ್ಷ ವಯಸ್ಸಾಗಿದೆ. ಡಿಕೆಶಿ ನನ್ನ ತಮ್ಮ ಇದ್ದ ಹಾಗೆ, ಸಿದ್ದರಾಮಯ್ಯ ನನ್ನ ನಾಯಕರು ಪಕ್ಷ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ನಾವೆಲ್ಲರೂ ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದ್ರು.

  • ಸಿಡಿ ಸಂತ್ರಸ್ತೆಯ ಜೀವ, ಮಾನ ರಕ್ಷಣೆಗೆ ಬದ್ಧನಾಗಿದ್ದೇನೆ -ರಮೇಶ್ ಕುಮಾರ್

    ಸಿಡಿ ಸಂತ್ರಸ್ತೆಯ ಜೀವ, ಮಾನ ರಕ್ಷಣೆಗೆ ಬದ್ಧನಾಗಿದ್ದೇನೆ -ರಮೇಶ್ ಕುಮಾರ್

    ಬೆಂಗಳೂರು: ಸಿಡಿ ಸಂತ್ರಸ್ತೆಯ ಮನವಿಯ ಬೆನ್ನಲ್ಲೇ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಯುವತಿಯ ಜೀವ ಹಾಗೂ ಮಾನ ರಕ್ಷಣೆಗೆ ಬದ್ಧನಾಗಿರುವುದಾಗಿ ಹೇಳಿಕೆ ನೀಡಿದ್ದಾರೆ.

    ಯುವತಿ ಎರಡನೇ ವೀಡಿಯೋ ಮೂಲಕ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ರಮೇಶ್ ಕುಮಾರ್ ಮತ್ತು ಮಹಿಳಾ ಸಂಘಟನೆಗಳು ನಮ್ಮ ತಂದೆ ತಾಯಿಗೆ ರಕ್ಷಣೆ ಕೊಡಬೇಕೆಂದು ಮನವಿ ಮಾಡಿಕೊಂಡಿದ್ದರು.

    ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ರಮೇಶ್ ಕುಮಾರ್, ಸದನದಲ್ಲಿ ನಾನು ಸರ್ಕಾರಕ್ಕೆ, ಸಂತ್ರಸ್ತೆಯನ್ನು ಹುಡುಕಾಟ ನಡೆಸಿದ್ದೀರ, ಆಕೆ ಎಲ್ಲಿದ್ದಾಳೆಂದು ಪ್ರಶ್ನೆ ಮಾಡಿದ್ದೆ. ಆಕೆ ಮನವಿ ಕೇಳಿದ ತಕ್ಷಣ ಆಕೆ ಸಂತ್ರಸ್ತೆ ಆಗುತ್ತಾಳೆ ಆಕೆಯ ಜೀವ ಮತ್ತು ಆಕೆಯ ಕುಟುಂಬದ ರಕ್ಷಣೆ ಸರ್ಕಾರದ ಕರ್ತವ್ಯ. ಆದರೆ ಆಕೆ ನಮಗೆ ಮನವಿ ಮಾಡಿಕೊಂಡಿದ್ದಾಳೆ. ನಾನು ಒಬ್ಬ ಹೆಣ್ಣು ಮಗಳ ತಂದೆಯಾಗಿ ಆಕೆ ಮತ್ತು ಆಕೆಯ ಕುಟುಂಬದ ರಕ್ಷಣೆಗೆ ಎಲ್ಲಾ ಪ್ರಯತ್ನಗಳನ್ನು ಮಾಡುತ್ತೇವೆ. ಇದೊಂದು ಮಾನವೀಯ ಸಂಬಂಧ ವಿಚಾರವಾಗಿರುವುದರಿಂದ ನಮ್ಮ ಶಕ್ತಿಮೀರಿ ಆಕೆಗೆ ರಕ್ಷಣೆ ಕೊಡುತ್ತೇವೆ ಎಂದರು.

    ಆಕೆಯ ಜೀವ ಮತ್ತು ಪ್ರಾಣದ ರಕ್ಷಣೆಗಾಗಿ ನಾನು ನಮ್ಮ ನಾಯಕರಲ್ಲೂ ಮನವಿ ಮಾಡಿಕೊಳ್ಳುತ್ತೇನೆ. ನಾನು ಈ ವಿಷಯವಾಗಿ ಅಸಹಾಯಕನಲ್ಲ, ನಮ್ಮ ನಾಯಕರು ಮತ್ತು ಪಕ್ಷದ ಹಿರಿಯರನ್ನು ಭೇಟಿಯಾಗಿ ಈ ಕುರಿತು ಚರ್ಚಿಸಿ ಕ್ರಮ ಕೈಗೊಳ್ಳುತ್ತೇವೆ. ಸಂತ್ರಸ್ತೆಯ ರಕ್ಷಣೆಗೆ ಮಾತ್ರ ನಾವು ಸದಾ ಸಿದ್ಧರಾಗಿರುವುದಾಗಿ ಭರವಸೆ ನೀಡಿದರು.

  • ನೀನು ಶರ್ಟ್ ಬಿಚ್ಚಿ ಪ್ರತಿಭಟಿಸಿದ್ರೆ ಪವರ್‌ಫುಲ್ ಆಗಿರುತ್ತೆ- ಸಂಗಮೇಶ್‍ಗೆ ಐಡಿಯಾ ಕೊಟ್ಟಿದ್ದೇ ಜಮೀರ್..!

    ನೀನು ಶರ್ಟ್ ಬಿಚ್ಚಿ ಪ್ರತಿಭಟಿಸಿದ್ರೆ ಪವರ್‌ಫುಲ್ ಆಗಿರುತ್ತೆ- ಸಂಗಮೇಶ್‍ಗೆ ಐಡಿಯಾ ಕೊಟ್ಟಿದ್ದೇ ಜಮೀರ್..!

    ಬೆಂಗಳೂರು: ಶಾಸಕ ಸಂಗಮೇಶ್ ಶರ್ಟ್ ಕಹಾನಿಯ ಸತ್ಯ ಬಹಿರಂಗವಾಗಿದ್ದು, ಅವರಿಗೆ ಶರ್ಟ್ ಬಿಚ್ಚೋ ಐಡಿಯಾ ಕೊಟ್ಟಿದ್ದೇ ಜಮೀರ್ ಎಂಬುದು ಇದೀಗ ತಿಳಿದಿದೆ.

    ಈ ಬಗ್ಗೆ ಇಂದು ಸಿಎಲ್‍ಪಿ ಸಭೆಯಲ್ಲಿ ಚರ್ಚೆಯಾಗಿದ್ದು, ನೀನು ಶರ್ಟ್ ಬಿಚ್ಚಿ ಪ್ರತಿಭಟಿಸಿದರೆ ಹೆಚ್ಚು ಪವರ್‍ಫುಲ್ ಆಗಿರುತ್ತೆ ಎಂದು ಶಾಸಕ ಜಮೀರ್ ಅಹ್ಮದ್ ಹೇಳಿದರು ಅದಕೆ ಬಿಚ್ಚಿದೆ ಎಂದು ಸಂಗಮೇಶ್ ಹೇಳಿದ್ದಾರೆ. ಈ ವೇಳೆ ರಮೇಶ್ ಕುಮಾರ್ ಅವರು ಬುದ್ಧಿವಾದ ಹೇಳಿದ್ದು, ಜಮೀರ್ ಹೇಳ್ತಾನೆ ಅಂತಾ ನಾಳೆ ಪ್ಯಾಂಟ್ ಕಳಚಿಬಿಟ್ಟಿಯಾ? ಮರ್ಯಾದೆ ತೆಗೆಯೋಕೆ ಎಂದು ಹೇಳಿದ್ದಾರೆ. ಆಗ ಸಂಗಮೇಶ್ ಮತ್ತೆ ಪ್ರತಿಕ್ರಿಯಿಸಿ, ಅವರು ಹೇಳಿದರು ನಾನು ಬಿಚ್ಚಿದೆ ಎಂದಿದ್ದಾರೆ.

    ರಮೇಶ್ ಕುಮಾರ್ ಮತ್ತೆ ಮಧ್ಯೆ ಪ್ರವೇಶಿಸಿ ಅದೇ ಅವನು ಹೇಳ್ತಾನೆ ನೀನು ಬಿಚ್ತೀಯಾ, ಎಲ್ಲಿ ಅವನು ಎಂದು ಪ್ರಶ್ನಿಸಿದ್ದಾರೆ. ಒಟ್ನಲ್ಲಿ ಸಿಎಲ್‍ಪಿ ಸಭೆಯಲ್ಲಿ ಶರ್ಟ್ ಬಿಚ್ಚಿದ್ದರ ಕುರಿತು ಫುಲ್ ರಮೇಶ್ ಕುಮಾರ್ ಹಾಗೂ ಸಂಗಮೇಶ್ ಮಧ್ಯ ಭಾರೀ ಚರ್ಚೆಯಾಗಿದೆ.

    ಸದನದಲ್ಲಿ ಶರ್ಟ್ ಬಿಚ್ಚಿ ಹೆಗಲ ಮೇಲೆ ಹಾಕಿಕೊಂಡು ಸಂಗಮೇಶ್ ಅಶಿಸ್ತು ಪ್ರದರ್ಶಿಸಿದ್ದರು. ಈ ಹಿನ್ನೆಲೆ ಮಾರ್ಚ್ 12ರ ವರೆಗೆ ಸಂಗಮೇಶ್‍ರನ್ನು ಕಲಾಪದಿಂದ ಅಮಾನತು ಮಾಡಿ ಸ್ಪೀಕರ್ ಆದೇಶಿಸಿದ್ದಾರೆ. ನಿಯಮ 348ರ ಅಡಿ ಅಮಾನತು ಮಾಡಿದ್ದಾರೆ.

    ವಿಧಾನ ಮಂಡಲ ಅಧಿವೇಶನದಲ್ಲಿ ಒಂದು ರಾಷ್ಟ್ರ, ಒಂದು ಚುನಾವಣೆ ಕುರಿತು ಚರ್ಚೆ ನಡೆಸುವ ಬಗ್ಗೆ ಸ್ಪೀಕರ್ ಪ್ರಸ್ತಾಪಿಸಿದ್ದರು. ಇದಕ್ಕೆ ಕಾಂಗ್ರೆಸ್ ವಿರೋಧ ವ್ಯಕ್ತಡಿಸಿತ್ತು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಯಾವ ನಿಯಮಾವಳಿಗಳಲ್ಲಿ ಚರ್ಚೆ ಮಾಡುತ್ತೀರಿ ಎಂದು ಪ್ರಶ್ನಿಸಿದ್ದರು. ತಕ್ಷಣವೇ ಕಾಂಗ್ರೆಸ್ ನಾಯಕರು ಆಕ್ರೋಶಗೊಂಡು ಗದ್ದಲ ಎಬ್ಬಿಸಿದ್ದರು. ಅಲ್ಲದೆ ಸದನದ ಬಾವಿಗಿಳಿದು ಧರಣಿ ನಡೆಸಿದರು. ಈ ವೇಳೆ ಸಂಗಮೇಶ್ ಬಾವಿಗಿಳಿದಾಗ ಶರ್ಟ್ ಬಿಚ್ಚಿ ದುರ್ವರ್ತನೆ ತೋರಿದ್ದರು.

  • ಅಸೆಂಬ್ಲಿ ನಡೆಸೋದು ಬೇಡ ನಡೀರಿ, ಎಲ್ಲರೂ ಪಿಕ್‍ನಿಕ್‍ಗೆ ಹೋಗೋಣ: ಸಿದ್ದರಾಮಯ್ಯ

    ಅಸೆಂಬ್ಲಿ ನಡೆಸೋದು ಬೇಡ ನಡೀರಿ, ಎಲ್ಲರೂ ಪಿಕ್‍ನಿಕ್‍ಗೆ ಹೋಗೋಣ: ಸಿದ್ದರಾಮಯ್ಯ

    ಬೆಂಗಳೂರು: ಕಲಾಪ ನಡೆಸೋದು ಬೇಡ ನಡೀರಿ, ಎಲ್ಲರೂ ಪಿಕ್‍ನಿಕ್‍ಗೆ ಹೋಗೋಣ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

    ವಿಧಾನಸಭಾ ಕಲಾಪದ ಸಂದರ್ಭದಲ್ಲಿ ಸಚಿವರು ಹಾಗೂ ಅಧಿಕಾರಿಗಳು ಗೈರಾಗಿದ್ದರು. ಇದರಿಂದ ಗರಂ ಆದ ಸಿದ್ದರಾಮಯ್ಯ, ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೀತಿದೆ. ಇಂತಹ ಸಂದರ್ಭದಲ್ಲಿ ಸಚಿವರು, ಅಧಿಕಾರಿಗಳು ಇರಬೇಕು. ಇವರು ಇಲ್ಲದೆ ಚರ್ಚೆ ಮಾಡಿ ಏನು ಪ್ರಯೋಜನ ಎಂದು ಪ್ರಶ್ನಿಸಿದರು.

    ಸಿದ್ದರಾಮಯ್ಯ ಹೀಗಂದ ಕೂಡಲೇ ಡಿಸಿಎಂ ಗೋವಿಂದ ಕಾರಜೋಳ ಎದ್ದು ನಿಂತು ನಾನಿದ್ದೀನಿ ಅಂದ್ರು. ಆಗ ಸಿದ್ದರಾಮಯ್ಯ ಅವರು, ಕಾರಜೋಳ ನೀವು ಒಬ್ಬರೇ ಇದ್ದೀರಲ್ಲ, ಏನು ಎಲ್ಲದಕ್ಕೂ ನಿಮ್ಮಿಂದ ಉತ್ತರ ಕೊಡೋಕೆ ಆಗುತ್ತಾ..?, ಏನು ಸಚಿವರಾಗೋ ತನಕ ಲಾಬಿ ಏನೂ..? ಓಡಾಡೋದು ಏನು..? ಏನ್ರೀ ಯತ್ನಾಳ್ರೇ ಎಂದು ಮಾಜಿ ಸಿಎಂ ಪ್ರಶ್ನಿಸಿದರು.

    ಈ ವೇಳೆ ಮಧ್ಯಪ್ರವೇಶ ಮಾಡಿದ ಸ್ಪೀಕರ್ ಕಾಗೇರಿ, ಸಿದ್ದರಾಮಯ್ಯನವರೇ, ನೀವು ಹೇಳೋದಲ್ಲದೇ ಯತ್ನಾಳ್ ರನ್ನು ಕರೀತೀರಾ ಎಂದರು. ಈ ವೇಳೆ ಹೌದು ಸರಿಯಾಗಿ ಮಾತಾಡೋರು ಯತ್ನಾಳ್ ಒಬ್ಬರೇ ಎಂದು ಸಿದ್ದರಾಮಯ್ಯ ಹೇಳಿದರು. ಅಲ್ಲದೇ ಸಚಿವರು, ಅಧಿಕಾರಿಗಳು ಇಲ್ಲದೇ ನಾವು ನೀವು ಏನ್ ಮಾಡೋದು? ನಡೀರಿ ಎಲ್ಲರೂ ಪಿಕ್ ನಿಕ್ ಗೆ ಹೋಗೋಣ ಎಂದು ಸಿದ್ದರಾಮಯ್ಯ ಅವರು ಸ್ಪೀಕರ್ ಗೆ ಹೇಳಿದರು. ನಂತರ ಸಿದ್ದರಾಮಯ್ಯ ಮಾತಿನಂತೆ ಹೌದು ಸಚಿವರು ಇರಬೇಕು. ನಾನು ಎಲ್ಲ ಸಚಿವರು ಇರುವಂತೆ ನೋಡಿಕೊಳ್ಳುತ್ತೇನೆ ಎಂದು ಡಿಸಿಎಂ ಗೋವಿಂದ ಕಾರಜೋಳ ಅವರು ಸಿದ್ದರಾಮಯ್ಯಗೆ ಉತ್ತರಿಸಿದರು.

    ಇನ್ನು ಸಚಿವರ ಗೈರು ವಿಚಾರ ಸಂಬಂಧ ಸ್ಪೀಕರ್ ಪರಿಸ್ಥಿತಿಗೆ ಕಾಂಗ್ರೆಸ್ ಸದಸ್ಯ ರಮೇಶ್ ಕುಮಾರ್ ಅವರು ಮರುಕ ವ್ಯಕ್ತಪಡಿಸಿದರು. ನೀವು ಬಂದ ಆರಂಭದಲ್ಲಿ ಪೂರ್ಣ ಚಂದ್ರನಂತಿದ್ರಿ. ಈಗ ಅಮಾವಾಸ್ಯೆ ಹತ್ತಿರ ಬಂದ ಚಂದ್ರನಂತೆ ಆಗಿದ್ದೀರಿ ಎಂದರು. ಸಂಪುಟ ದರ್ಜೆಯ ಸಚಿವರಿಗೆ ಅನುಭವ ಇರಬೇಕು. ಆದರೆ ನಮ್ಮಲ್ಲಿ ಎಲ್ರೂ ಸಂಪುಟ ಸಚಿವರೇ. ಈ ಸಂಪುಟ ದರ್ಜೆ ಸಚಿವರು ಲೈಬ್ರರಿಗೂ ಹೋಗಲ್ಲ, ಇಲಾಖಾ ಮಾಹಿತಿಯೂ ಹೊಂದಿಲ್ಲ. ಸಂವಿಧಾನ, ನಿಯಮಾವಳಿಗಳ ಅರಿವೂ ಇಲ್ಲ ಎಂದು ರಮೇಶ್ ಕುಮಾರ್ ಕೂಡ ಗರಂ ಸಿಡಿಮಿಡಿಗೊಂಡರು.

  • ಅರಣ್ಯಕ್ಕೆ ಪತ್ನಿ ಜೊತೆಗೆ ಹೋಗ್ತೀರಾ – ಲಿಂಬಾವಳಿಗೆ ರಮೇಶ್ ಕುಮಾರ್ ಪ್ರಶ್ನೆ

    ಅರಣ್ಯಕ್ಕೆ ಪತ್ನಿ ಜೊತೆಗೆ ಹೋಗ್ತೀರಾ – ಲಿಂಬಾವಳಿಗೆ ರಮೇಶ್ ಕುಮಾರ್ ಪ್ರಶ್ನೆ

    ಬೆಂಗಳೂರು: ಅರಣ್ಯಕ್ಕೆ ಹೋಗುವಾಗ ಪತ್ನಿ ಜೊತೆಗೆ ಹೋಗುತ್ತೀರಾ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಸಚಿವ ಅರವಿಂದ ಲಿಂಬಾವಳಿಯನ್ನು ಪ್ರಶ್ನಿಸಿದ್ದಾರೆ.

    ವಿಧಾನಸಭಾ ಕಲಾಪದ ಶೂನ್ಯವೇಳೆಯಲ್ಲಿ ಮಲೆನಾಡು ಭಾಗದಲ್ಲಿ ಕಾಡುಪ್ರಾಣಿಗಳ ಹಾವಳಿ ಬಗ್ಗೆ ಚರ್ಚೆ ನಡೆಯುತ್ತಿತ್ತು. ಈ ವೇಳೆ ಅರಣ್ಯ ಸಚಿವ ಅರವಿಂದ ಲಿಂಬಾವಳಿ ಅವರು ಉತ್ತರ ಕೊಡಲು ಮುಂದಾದಾಗ ರಮೇಶ್ ಕುಮಾರ್ ಮಧ್ಯಪ್ರವೇಶ ಮಾಡಿದರು.

    ಅರಣ್ಯಕ್ಕೆ ಪತ್ನಿ ಜೊತೆಗೆ ಹೋಗ್ತೀರಾ ಅಥವಾ ಒಬ್ಬನೇ ಹೋಗುತ್ತೀರಾ ಎಂದು ಪ್ರಶ್ನಿಸುವ ಮೂಲಕ ರಮೇಶ್ ಕುಮಾರ್, ಲಿಂಬಾವಳಿ ಕಾಳೆಲೆದಿದ್ದಾರೆ. ಇದಕ್ಕೆ ಉತ್ತರಿಸಿದ ಲಿಂಬಾವಳಿ, ಪತ್ನಿ ಸಮೇತ ಹೋಗಲ್ಲ, ನಾನೊಬ್ಬನೇ ಹೋಗುತ್ತೇನೆ. ಅರಣ್ಯ ಜೊತೆಗೆ ಕನ್ನಡ ಸಂಸ್ಕೃತಿ ಇಲಾಖೆ ನೀಡಿದ್ದಾರೆ. ಇದರಿಂದ ಕಾಡಿನ ಜೊತೆಗೆ ನಾಡಿಗೂ ಬರಬೇಕಾಗುತ್ತೆ ಎಂದು ಹಾಸ್ಯ ಚಟಾಕಿ ಹಾರಿಸಿದರು.

  • ಮಾನವಂತರ‌್ಯಾರು ರಾಜಕಾರಣ ಮಾಡಬಾರದಾ?- ನಿವೃತ್ತಿ ಸುದ್ದಿಗೆ ರಮೇಶ್‍ ಕುಮಾರ್ ಸ್ಪಷ್ಟನೆ

    ಮಾನವಂತರ‌್ಯಾರು ರಾಜಕಾರಣ ಮಾಡಬಾರದಾ?- ನಿವೃತ್ತಿ ಸುದ್ದಿಗೆ ರಮೇಶ್‍ ಕುಮಾರ್ ಸ್ಪಷ್ಟನೆ

    ಕೋಲಾರ: ಮಾನವಂತರು ಯಾರು ರಾಜಕಾರಣ ಮಾಡಬಾರದಾ ಎಂದು ಪ್ರಶ್ನಿಸುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದ ನಿವೃತ್ತಿ ಸುದ್ದಿಗೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.

    ಕೋಲಾರ ತಾಲೂಕಿನ ಜನ್ನಘಟ್ಟ ಗ್ರಾಮದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ರಮೇಶ್ ಕುಮಾರ್, ಸಾಮಾಜಿಕ ಜಾಲತಾಣದಲ್ಲಿ ರಾಜಕೀಯ ನಿವೃತ್ತಿ ಬಗ್ಗೆ ವಿಷಯ ಹರಿದಾಡುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು. ನನ್ನ ರಾಜಕೀಯ ನಿವೃತ್ತಿ ಬಗ್ಗೆ ಎಲ್ಲೂ ಹೇಳಿಕೆ ಕೊಟ್ಟಿಲ್ಲ. ಸಭೆ ಸಮಾರಂಭ ಮಾಡಿ ಹೇಳಿಲ್ಲ. ಹೀಗಿರುವಾಗ ದಾಖಲೆಗಳಿಲ್ಲದೆ ಈ ರೀತಿ ವದ್ದಂತಿ ಹಬ್ಬಿಸುವುದು ಸರಿಯೇ ಎಂದು ಪ್ರಶ್ನಿಸಿದರು.

    ಜನರು ಎಲ್ಲಾ ನನ್ನ ಕಷ್ಟ-ಸುಖಗಳಲ್ಲಿ ಭಾಗಿಯಾಗಿದ್ದಾರೆ. ಅವರಿಗೆ ಜವಾಬ್ದಾರಿ ಕೊಟ್ಟು ಅಮೇಲೆ ನಿವೃತ್ತಿಯಾಗುವೆ. ಏಕಾಏಕಿ ನಿವೃತ್ತಿಯಾಗಲು ನಾನು ಸರ್ವಾಧಿಕಾರಿ ಅಲ್ಲ. ನಿವೃತ್ತಿಯಾಗಲು ಫ್ರೀಯಾಗಿರುವ ಮನುಷ್ಯ ನಾನಲ್ಲ. ಜನರ ಪ್ರೀತಿಯ ಬಂಧನದಲ್ಲಿದ್ದೇನೆ. ಮಾನವಂತರು ಯಾರೂ ರಾಜಕಾರಣ ಮಾಡಬಾರದಾ?. ಹೀಗೆ ಮಾಡಿದ್ರೆ ಮನಸ್ಸಿಗೆ ನೋವಾಗುತ್ತೆ ಎಂದರು.

    ನಾನು ದೇವರಾಜ ಅರಸು ಕಾಲದಿಂದ ರಾಜಕೀಯದಲ್ಲಿ ಸಕ್ರಿಯನಾಗುದ್ದು, ಗೌರವವಾಗಿ ಬದುಕುತ್ತಿದ್ದೇನೆ. ನಾನು ಸರ್ಕಾರಿ ಸೇವೆಯಲ್ಲಿದ್ರೆ ವಿಅರ್ ಎಸ್ ಕೊಡಬಹುದು. ಆದ್ರೆ ಸಾರ್ವಜನಿಕ ಜೀವನದಲ್ಲಿ ಇರುವುದರಿಂದ ನಾನು ಸ್ವತಂತ್ರವಾಗಿ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿ ನಿವೃತ್ತಿ ಸುದ್ದಿಯನ್ನ ಅಲ್ಲಗಳೆದರು.