Tag: Ramesh Kumar

  • ನಾನು ನಿಮ್ಮ ಮುಂದೆ ಕಸ, ನೀವು ದೊಡ್ಡವರು – ಎಚ್‌ಡಿಕೆ ವಿರುದ್ಧ ರಮೇಶ್‌ ಕುಮಾರ್‌ ಕಿಡಿ

    ನಾನು ನಿಮ್ಮ ಮುಂದೆ ಕಸ, ನೀವು ದೊಡ್ಡವರು – ಎಚ್‌ಡಿಕೆ ವಿರುದ್ಧ ರಮೇಶ್‌ ಕುಮಾರ್‌ ಕಿಡಿ

    ಕೋಲಾರ: ನಾನು ನಿಮ್ಮ ಮುಂದೆ ಕಸ, ನೀವು ದೊಡ್ಡವರು, ಆದ್ರೆ ನೀವು‌ ಮಾತನಾಡಿರುವ ಮಾತೇನು ಎಂದು ಪ್ರಶ್ನಿಸಿ ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಎಚ್‌ಡಿ ಕುಮಾರಸ್ವಾಮಿ ವಿರುದ್ಧ ಕಿಡಿ ಕಾರಿದ್ದಾರೆ.

    ನಿಮ್ಮ ಮುಂದೆ ನಾನು ಮಹಾನಾಯಕ‌ ಆಗಲು ಸಾಧ್ಯವೇ? ನಿಮ್ಮ ಅಣ್ಣ ತಮ್ಮಂದಿರು, ದೇವೇಗೌಡರು‌ ಇರುವಾಗ‌ ನಾನು ಮಹಾನಾಯಕ ಯಾವ ಜನ್ಮಕ್ಕೆ ಆಗಬೇಕು ಎಂದು ಪ್ರಶ್ನಿಸಿ ಟಾಂಗ್‌ ನೀಡಿದರು.

    ಶ್ರೀನಿವಾಸಪುರ‌ ತಾಲೂಕಿನ ಗಾಂಡ್ಲಹಳ್ಳಿ ಕೆರೆಗೆ ಬಾಗಿನ ಅರ್ಪಿಸಿದ ಬಳಿಕ ಮಾತನಾಡಿದ ರಮೇಶ್ ಕುಮಾರ್, ನಾನು ನಿಮ್ಮ ಮುಂದೆ ಕಸ. ನೀವು ದೊಡ್ಡವರು ಆದ್ರೆ ನೀವು‌ ಮಾತನಾಡಿರುವ ಮಾತೇನು? ಸಾವಿರಾರು‌ ಕೋಟಿ ಲೂಟಿನಾ ಎಂದು ಪ್ರಶ್ನೆ ಮಾಡಿದ ಅವರು ನಿಮ್ಮ ಬಾಯಲ್ಲಿ‌ ಇಂತಹ ಮಾತುಗಳು‌ ಬರಬಾರದು ಕುಮಾರಸ್ವಾಮಿಯವರೇ ಎಂದರು. ಇದನ್ನೂ ಓದಿ: ಮತ್ತೆ ಸರ್ಜಿಕಲ್‌ ಸ್ಟ್ರೈಕ್‌? – ಪಾಕಿಸ್ತಾನಕ್ಕೆ ಅಮಿತ್‌ ಶಾ ಎಚ್ಚರಿಕೆ

    ರೈತರ ಪಕ್ಷ ಅಂತೀರಿ. ಕೊಚ್ಚೆ ನೀರು ಅಂತೀರಿ. ಈ‌ ನೀರಿನ ಬಗ್ಗೆ ಜನರನ್ನು ಎತ್ತಿ ಕಟ್ಟುತ್ತೀರಿ. ಮತ್ತೆ ಎತ್ತಿನ ಹೊಳೆ ಯೋಜನೆ‌ ಏನಾಯಿತು ಅಂತಿರಾ. ಇದೆಲ್ಲವನ್ನು ಜನ ನೋಡುತ್ತಿದ್ದಾರೆ. ಮಗು ಚಿವುಟಿ ತೊಟ್ಟಿಲು ತೂಗುವ ಕೆಲಸ‌ ಮಾಡುತ್ತಿದ್ದೀರಿ ಎಂದು ಎಂದು ಟಾಂಗ್ ನೀಡಿದರು.

    ಕೋಲಾರ ಚಿಕ್ಕಬಳ್ಳಾಪುರ ಜನಬರು ಎಷ್ಟು ‌ದಿನ‌ ಕೊಚ್ಚೆ ನೀರು ಕುಡಿಯುಬೇಕು ಅಂತೀರಿ‌. ನೀವೇ ಮುಖ್ಯಮಂತ್ರಿಯಾಗಿದ್ದಾಗ ಯಾಕೆ ಹಣ ಬಿಡುಗಡೆ ಮಾಡಿಲ್ಲ ಎಂದು ಪ್ರಶ್ನಿಸಿ ರಮೇಶ್‌ ಕುಮಾರ್‌ ಕುಮಾರಸ್ವಾಮಿ ವಿರುದ್ದ ಕಿಡಿಕಾರಿದರು. ಇದನ್ನೂ ಓದಿ: ಉದ್ಯೋಗಿಗಳ ಬೆಸ್ಟ್‌ ಕಂಪನಿ ಔಟ್‌ – ಭಾರತದ ಯಾವ ಕಂಪನಿಗೆ ಎಷ್ಟನೇ ಸ್ಥಾನ?

     

  • ಸರ್ಕಾರಿ ನೌಕರರ ವಿರುದ್ಧ ಅವಾಚ್ಯ ಪದ ಬಳಕೆ – ರಮೇಶ್ ಕುಮಾರ್ ವಿಷಾದ ವ್ಯಕ್ತಪಡಿಸಲಿ

    ಸರ್ಕಾರಿ ನೌಕರರ ವಿರುದ್ಧ ಅವಾಚ್ಯ ಪದ ಬಳಕೆ – ರಮೇಶ್ ಕುಮಾರ್ ವಿಷಾದ ವ್ಯಕ್ತಪಡಿಸಲಿ

    – ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಆಗ್ರಹ

    ಶಿವಮೊಗ್ಗ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹಿರಿಯ, ಸಜ್ಜನ ರಾಜಕಾರಣಿಯಾಗಿದ್ದು ಸರ್ಕಾರಿ ನೌಕರರ ಬಗ್ಗೆ ಅವಾಚ್ಯ ಪದ ಬಳಕೆ ಮಾಡಿರುವುದು ಅವರಿಗೆ ಶೋಭೆ ತರುವುದಿಲ್ಲ. ರಮೇಶ್ ಕುಮಾರ್ ಅವರು ಈ ಕೂಡಲೇ ವಿಷಾದ ವ್ಯಕ್ತಪಡಿಸಬೇಕು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ಆಗ್ರಹಿಸಿದ್ದಾರೆ.

    ಶಿವಮೊಗ್ಗದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ರಮೇಶ್ ಕುಮಾರ್ ಅವರು ಈ ಹಿಂದೆ ಪೊಲೀಸರ ಕರ್ತವ್ಯದ ಬಗ್ಗೆ ಸಾರ್ವಜನಿಕವಾಗಿ ತಮ್ಮ ನಾಲಿಗೆ ಹರಿಬಿಟ್ಟಿದ್ದರು. ಇದೀಗ ಕಂದಾಯ ಇಲಾಖೆಯ ನೌಕರನ ವಿರುದ್ಧ ಅವಾಚ್ಯ ಪದ ಬಳಕೆ ಮಾಡುವ ಮೂಲಕ ಅವರ ಘನತೆ, ಗೌರವವನ್ನು ಅವರೇ ಕಡಿಮೆ ಮಾಡಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಜಪಾನ್ ನೂತನ ಪ್ರಧಾನಿಗೆ ಮೋದಿ ಅಭಿನಂದನೆ

    ಸರ್ಕಾರಿ ನೌಕರರು ಸದಾ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಕೋವಿಡ್ ಸಮಯದಲ್ಲಿ, ಪ್ರವಾಹದ ಸಂದರ್ಭದಲ್ಲಿ ಕುಟುಂಬದವರಿಂದ ದೂರ ಉಳಿದು ಕೆಲಸ ಮಾಡಿದ್ದಾರೆ. ಕೋವಿಡ್ ನಿಯಂತ್ರಣಕ್ಕೆ ಬರಲು ಶ್ರಮ ಹಾಕಿದ್ದಾರೆ. ಎಲ್ಲ ಕ್ಷೇತ್ರದಲ್ಲೂ ಸಮಸ್ಯೆ ಇದೆ. ಆದರೆ ಸಮಸ್ಯೆ ಇದೆ ಎಂದು ಸಾರ್ವಜನಿಕವಾಗಿ ಸರ್ಕಾರಿ ನೌಕರರ ಬಗ್ಗೆ ಅವಾಚ್ಯ ಪದ ಬಳಕೆ ಸರಿಯಲ್ಲ. ಇಂತಹ ಪದ ಬಳಕೆಯಿಂದ ತಮ್ಮ ಗೌರವ ಘನತೆಯನ್ನು ಕಡಿಮೆ ಮಾಡಿಕೊಳ್ಳುತ್ತಿದ್ದಾರೆ ಎಂದರು.

    ರಾಜ್ಯದಲ್ಲಿ ಲಕ್ಷಾಂತರ ಸರ್ಕಾರಿ ಹುದ್ದೆಗಳು ಖಾಲಿ ಇವೆ. ಅದರ ನಡುವೆಯೂ ಸಾರ್ವಜನಿಕರಿಗೆ ಅನುಕೂಲ ಆಗಲಿ ಎಂಬ ಕಾರಣದಿಂದಾಗಿ ಇರುವ ಸಿಬ್ಬಂದಿಯೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹೀಗಿರುವಾಗ ಏನೇ ಸಮಸ್ಯೆ ಇದ್ದರೂ ಅದನ್ನು ನಾಲ್ಕು ಗೋಡೆ ಮಧ್ಯೆ ಕುಳಿತು ಚರ್ಚಿಸಬಹುದಿತ್ತು. ನೌಕರರ ಸಂಘದವರು ಬಂದರೆ ಸೀಮೆ ಎಣ್ಣೆ ಹಾಕಿ ಸುಟ್ಟು ಹಾಕುತ್ತೀವಿ ಎಂದು ಕೂಡ ಮಾತನಾಡಿದ್ದಾರೆ. ಅವರು ನೌಕರರು ಉದ್ವೇಗಗೊಳ್ಳುವ ರೀತಿ ಮಾತನಾಡಿದ್ದಾರೆ. ನಿಮ್ಮ ವಿರುದ್ಧ ಪ್ರತಿಭಟನೆ ಮಾಡುವುದು ದೊಡ್ಡ ವಿಷಯವಲ್ಲ. ಆದರೆ ಆ ರೀತಿ ಮಾಡಲು ನಾವು ಹೋಗುವುದಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ದಿಢೀರ್ ಎರಡು ಹೋಳಾಗಿ ಧರೆಗುರುಳಿದ ನೂರಾರು ವರ್ಷದ ಅರಳಿಮರ

    ಬಹಳಷ್ಟು ಮಂದಿ ಶಾಸಕರು ನೌಕರರ ಜೊತೆ ಈ ರೀತಿ ನಡೆದುಕೊಳ್ಳುತ್ತಿದ್ದಾರೆ. ದಯಮಾಡಿ ಸರ್ಕಾರಿ ನೌಕರರನ್ನು ಬೈಯುವ ಮೊದಲು ಮತ್ತೊಮ್ಮೆ ಯೋಚನೆ ಮಾಡಿ. ನೌಕರ ಸರಿ ಇಲ್ಲ ಅಂದರೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರುವ ಪ್ರಯತ್ನ ಮಾಡಿ. ವರ್ಗಾವಣೆ ಮಾಡಿಸಿ, ಇಲ್ಲದಿದ್ದರೆ ಕಾನೂನು ಚೌಕಟ್ಟಿನಲ್ಲಿ ಕ್ರಮಕೈಗೊಳ್ಳಲು ಅವಕಾಶ ಇದೆ. ಆ ರೀತಿಯ ಕೆಲಸ ಮಾಡಿ. ಅದನ್ನು ಬಿಟ್ಟು ಅವಾಚ್ಯ ಪದ ಬಳಕೆ ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

  • ಅನುಭವಿ, ಹಿರಿಯ ನಾಯಕ ಶ್ರೀನಿವಾಸಗೌಡ ಕಾಂಗ್ರೆಸ್ಸಿಗೆ ಬಂದ್ರೆ ಒಳ್ಳೆಯದು: ರಮೇಶ್ ಕುಮಾರ್

    ಅನುಭವಿ, ಹಿರಿಯ ನಾಯಕ ಶ್ರೀನಿವಾಸಗೌಡ ಕಾಂಗ್ರೆಸ್ಸಿಗೆ ಬಂದ್ರೆ ಒಳ್ಳೆಯದು: ರಮೇಶ್ ಕುಮಾರ್

    ಕೋಲಾರ: ಕಾಂಗ್ರೆಸ್ ಏನ್ ನಮ್ಮಪ್ಪಂದಾ, ಅವರು ಸೆಕ್ಯೂಲರ್ ಆಗಿ ಕೆಲಸ ಮಾಡಬೇಕು ಎಂದುಕೊಂಡಿದ್ದಾರೆ. ಕಾಂಗ್ರೆಸ್ ಒಂದು ದೊಡ್ಡ ಸಂಸ್ಥೆ, ಅದನ್ನ ಸೇರಬೇಕು ಎಂದು ತೀರ್ಮಾನ ಮಾಡಿದ್ರೆ ಸೇರ್ತಾರೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.

    ಕೋಲಾರದ ಅಮ್ಮಾನಿ ಕೆರೆ ತುಂಬಿ ಕೋಡಿ ಹರಿದ ಹಿನ್ನೆಲೆ ಇಂದು ಕಾಂಗ್ರೆಸ್ ಮುಖಂಡರೊಂದಿಗೆ ಬಾಗಿನ ಅರ್ಪಿಸುವ ಮುನ್ನ ಕೋಲಾರ ಶಾಸಕ ಶ್ರೀನಿವಾಸಗೌಡ ಅವರ ಮನೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಶ್ರೀನಿವಾಸಗೌಡ ಅವರು ಗ್ರಾಮ ಪಂಚಾಯ್ತಿಯಿಂದ ಬಂದವರು, ಜನರ ಮಧ್ಯೆ ಆಯ್ಕೆಯಾಗಿ ಬಂದವರು. ಅವರೇನು ಆಕಾಶದಿಂದ ಉದುರಿ ಬಂದವರಲ್ಲ, ಗಾಳಿಯಲ್ಲಿ ತೇಲಿ ಬಂದವರಲ್ಲ ಎಂದು ತಿಳಿಸಿದರು.

    ಶ್ರೀನಿವಾಸಗೌಡರಿಗೆ ಅವರದ್ದೇ ಆದ ಶಕ್ತಿ ಸಾಮರ್ಥ್ಯ ಇದೆ. ಅವರದ್ದೇ ಆದ ವರ್ಚಸ್ಸು ಇದೆ. ರಾಷ್ಟ್ರೀಯ-ಅಂತರಾಷ್ಟ್ರೀಯ ಮಟ್ಟದಲ್ಲಿ ಸಹಕಾರ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಕಾಂಗ್ರೆಸ್ಸಿನಲ್ಲಿ ಸಚಿವರಾಗಿ ಕೆಲಸ ಮಾಡಿದ್ದಾರೆ. ಇಷ್ಟು ಹಳೆ ಮನುಷ್ಯ, ಅನುಭವ ಇರುವವರು ಕಾಂಗ್ರೆಸ್ಸಿಗೆ ಬಂದ್ರೆ ಶಕ್ತಿ ಬರಲಿದೆ. ಸಂವಿಧಾನದಲ್ಲಿ ಅವಕಾಶವಿದೆ ಎಂದರು.  ಇದನ್ನೂ ಓದಿ: ರೈತರಿಗೆ ದಾಖಲೆ ನೀಡಲು ಸತಾಯಿಸುತ್ತಿದ್ದ ಅಧಿಕಾರಿಗಳಿಗೆ ತರಾಟೆ- ಸೂ….ಮಕ್ಕಳು ಎಂದ ರಮೇಶ್ ಕುಮಾರ್

    ಇದೇ ವೇಳೆ ನಿಮ್ಮ ಕೃಪಕಟಾಕ್ಷೆ ಇದೆಯಲ್ಲಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಅವರು ಸ್ವತಂತ್ರ ನಾಯಕರು, ಅವರಿಗೆ ಯಾರ ಕೃಪಕಟಾಕ್ಷ ಬೇಕಾಗಿಲ್ಲ, ದಯಮಾಡಿ ಇಂತಹ ಮಾತಾಡಬೇಡಿ ಎಂದು ರಮೇಶ್ ಕುಮಾರ್ ಹೇಳಿದರು. ಇದನ್ನೂ ಓದಿ: ಡಿಕೆಶಿ ಜೊತೆ ಮಾತುಕತೆ, ಕಾಂಗ್ರೆಸ್ ಸೇರುವುದು ಖಚಿತ: ಶಾಸಕ ಶ್ರೀನಿವಾಸಗೌಡ

  • ರೈತರಿಗೆ ದಾಖಲೆ ನೀಡಲು ಸತಾಯಿಸುತ್ತಿದ್ದ ಅಧಿಕಾರಿಗಳಿಗೆ ತರಾಟೆ- ಸೂ….ಮಕ್ಕಳು ಎಂದ ರಮೇಶ್ ಕುಮಾರ್

    ರೈತರಿಗೆ ದಾಖಲೆ ನೀಡಲು ಸತಾಯಿಸುತ್ತಿದ್ದ ಅಧಿಕಾರಿಗಳಿಗೆ ತರಾಟೆ- ಸೂ….ಮಕ್ಕಳು ಎಂದ ರಮೇಶ್ ಕುಮಾರ್

    – ತರಾಟೆ ತೆಗೆದುಕೊಳ್ಳುವ ಭರದಲ್ಲಿ ಅವಾಚ್ಯ ಶಬ್ದ ಬಳಕೆ

    ಕೋಲಾರ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಇತ್ತೀಚೆಗೆ ಪೊಲೀಸ್ ಇಲಾಖೆ ವಿರುದ್ಧ ಹರಿಹಾಯ್ದ ಘಟನೆ ಮಾಸುವ ಮುನ್ನವೇ ಇದೀಗ ಕಂದಾಯ ಇಲಾಖೆ ಅಧಿಕಾರಿಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಹೀಗೆ ಮಾತನಾಡುವ ಭರದಲ್ಲಿ ಅವಾಚ್ಯ ಶಬ್ದಗಳ ಬಳಕೆಯಾಗಿದ್ದು, ಸೂ…ಮಕ್ಕಳು ಎಂದು ಹೇಳಿದ್ದಾರೆ. ಈ ವೀಡಿಯೋ ಇದೀಗ ಸಾಮಾಜಿ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಶ್ರೀನಿವಾಸಪುರ ಪಟ್ಟಣದಲ್ಲಿ ತಹಶೀಲ್ದಾರ್ ಶ್ರೀನಿವಾಸ್ ಸಮ್ಮುಖದಲ್ಲಿ ಡಿಸಿಸಿ ಬ್ಯಾಂಕ್ ಸಾಲ ವಿತರಣೆ ಸಲುವಾಗಿ ಚರ್ಚಿಸಲು ನಡೆದ ಸಹಕಾರ ಸಂಘಗಳ ಕಾರ್ಯದರ್ಶಿಗಳ ಸಭೆಯಲ್ಲಿ ರಮೇಶ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈತರಿಗೆ ಡಿಸಿಸಿ ಬ್ಯಾಂಕ್ ವಿತರಿಸುವ ಸಾಲಕ್ಕೆ ದಾಖಲೆ ಕೊಡಲು ಕಂದಾಯ ಇಲಾಖೆ ವಿಳಂಬ ಮಾಡುತ್ತಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಇದನ್ನೂ ಓದಿ: ಟೀಕೆಗಳು ಆರೋಪಗಳಿಗೆ ಮಾತ್ರ ಸೀಮಿತವಾಗಿವೆ: ಪ್ರಧಾನಿ ಮೋದಿ

    ಕಂದಾಯ ಇಲಾಖೆ ನೌಕರರ ನಡವಳಿಕೆಯಿಂದ ರೈತರ ಪರದಾಟಕ್ಕೆ ಕೋಪ ವ್ಯಕ್ತಪಡಿಸಿರುವ ಅವರು, ಸರ್ಕಾರಿ ನೌಕರರು ಮನುಷ್ಯತ್ವ ಕಳೆದುಕೊಂಡಿದ್ದಾರೆ, ಕೆಲಸ ಮಾಡದ ನೌಕಕರನ್ನು ಬಾರಿಸಲು ಶುರು ಮಾಡ್ತೀನಿ ಎಂದು ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ನೌಕರರ ಸಂಘ ಬಂದು ಪ್ರತಿಭಟನೆ ಮಾಡಲಿ ನೋಡ್ತೀನಿ, ರೈತರನ್ನು ಕರೆದುಕೊಂಡು ಸೂ….ಮಕ್ಕಳನ್ನು ಸುಡಿಸಿಬಿಡುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಸಂಘರ್ಷವೇ ನಡೆದುಹೋಗಲಿ, ಜನರು ಒಳ್ಳೆಯದನ್ನು ತೀರ್ಮಾನಿಸುತ್ತಾರೆ. ಸಂಬಳ ಬೇಕು, ಬಂದೋಬಸ್ತ್ ಬೇಕು, ಅನುಕೂಲ ಬೇಕು. ಆದರೆ ರೈತರ ಕಷ್ಟ ಬೇಕಾಗಿಲ್ಲ ಎಂದು ಕೆಂಡಾಮಂಡಲರಾಗಿದ್ದಾರೆ. ಇದನ್ನೂ ಓದಿ: ನಾನು ಭಾರತದ ಕೋವಿಶೀಲ್ಡ್ ವ್ಯಾಕ್ಸಿನ್ ಪಡೆದಿದ್ದೇನೆ: ವಿಶ್ವಸಂಸ್ಥೆ ಸಾಮಾನ್ಯ ಸಭೆಯ ಅಧ್ಯಕ್ಷ ಅಬ್ದುಲ್ಲಾ ಶಾಹಿದ್

    ಎಲ್ಲ ಕಚೇರಿಗಳಲ್ಲಿ ರೈತನನ್ನು ಸತಾಯಿಸಿದ ನಂತರ ಕೆಲಸ ಆಗುತ್ತೆ, ವಾಣಿಜ್ಯ ಬ್ಯಾಂಕ್ ಗಳಲ್ಲಿ ಸತಾಯಿಸಿದ ಬಳಿಕ ಸಾಲ ನೀಡುತ್ತಾರೆ. ಅದು ಕೆಲವೇ ಸಾವಿರ ಉಳಿಯುವುದು, ವಾಣಿಜ್ಯ ಬ್ಯಾಂಕುಗಳವರು ರೈತರ ರಕ್ತ ಕುಡಿದುಬಿಡ್ತಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ. ವೀಡಿಯೋ ನೋಡಿ, ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ, ವಿರೋಧ ಚರ್ಚೆ ಆರಂಭವಾಗಿದೆ.

  • ಸರ್ಕಾರಿ ಶಾಲೆಗಳನ್ನು ನಿರ್ಲಕ್ಷಿಸಿ, ಉದ್ದೇಶಪೂರ್ವಕವಾಗಿ ಖಾಸಗಿ ಶಾಲೆಗಳನ್ನು ಬೆಳೆಸಲಾಗುತ್ತಿದೆ: ರಮೇಶ್ ಕುಮಾರ್

    ಸರ್ಕಾರಿ ಶಾಲೆಗಳನ್ನು ನಿರ್ಲಕ್ಷಿಸಿ, ಉದ್ದೇಶಪೂರ್ವಕವಾಗಿ ಖಾಸಗಿ ಶಾಲೆಗಳನ್ನು ಬೆಳೆಸಲಾಗುತ್ತಿದೆ: ರಮೇಶ್ ಕುಮಾರ್

    ಬೆಂಗಳೂರು: ರಾಜ್ಯದಲ್ಲಿ ಸರ್ಕಾರಿ ಶಾಲೆಗಳನ್ನು ನಿರ್ಲಕ್ಷಿಸಲಾಗಿದೆ. ಉದ್ದೇಶ ಪೂರ್ವಕವಾಗಿ ಖಾಸಗಿ ಶಾಲೆಗಳನ್ನು ಬೆಳೆಸಲಾಗಿದೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕಡಿಕಾರಿದರು.

    ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೋಷಕರ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ಅವರಿಗೆ ತಮ್ಮಂತೆ ತಮ್ಮ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಆಶಾವಾದ ಇರುತ್ತದೆ. ಈ ಕನಸಿನೊಂದಿಗೆ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುತ್ತಾರೆ. ಹೀಗೆ ಫೀಸ್ ಹೆಚ್ಚಾದಾಗ ಈ ರೀತಿ ಕೆಲವರು ಸಂಘಟಿತರಾಗುತ್ತಾರೆ ಎಂದರು.

    ದೆಹಲಿಯ ಶಾಲೆಗಳು ಈ ಮಟ್ಟಕ್ಕೆ ಬೆಳೆಯಲು ಮನುಷ್ಯನ ಇಚ್ಛಾಶಕ್ತಿ ಕಾರಣ. ಅಲ್ಲಿನ ಸರ್ಕಾರ ಖಾಸಗಿ ಸಂಸ್ಥೆಗಳನ್ನು ಹೊಂದಿರುವವರನ್ನು ತಮ್ಮೊಂದಿಗೆ ಸೇರಿಸಿಕೊಂಡಿಲ್ಲ. ಆ ಶಕ್ತಿ ಕರ್ನಾಟಕದ ರಾಜಕಾರಣಕ್ಕೆ ಇಲ್ಲ. ನಮಗೆ ಸರ್ಕಾರಿ, ಖಾಸಗಿ ಎಲ್ಲಾ ಸಂಸ್ಥೆಗಳು ಬೇಕು ಎನ್ನುತ್ತಿದ್ದೇವೆ. ದೆಹಲಿಯಲ್ಲಿ ಖಾಸಗಿ ಶಾಲೆಗಳಿಂದ ತಮ್ಮ ಮಕ್ಕಳನ್ನು ತೆಗೆದು ಸರ್ಕಾರಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಇದನ್ನು ನಮ್ಮ ರಾಜ್ಯದಲ್ಲಿ ಜಾರಿಗೊಳಿಸಲು ನಮ್ಮ ರಾಜ್ಯದಲ್ಲಿ ಹಣವಿಲ್ಲವೆಂದಲ್ಲ, ಇಚ್ಛಾಶಕ್ತಿ ಬೇಕು ಎಂದರು. ಇದನ್ನೂ ಓದಿ:  ಡಿಕೆಶಿ, ಸಿದ್ದರಾಮಯ್ಯ ಇನ್ನು 20 ವರ್ಷ ನಿರುದ್ಯೋಗಿಗಳು: ಕಟೀಲ್

    ದೇಶ, ಜನರನ್ನು ಪ್ರೀತಿಸುವ ನಾವು ಒಳ್ಳೆಯ ಬೆಳವಣಿಗೆಗಳನ್ನು ಬೆಂಬಲಿಸಬೇಕು. ಆಗ ಒಳ್ಳೆಯ ಜನ ಪ್ರತಿನಿಧಿಗಳಾಗಲು ಸಾಧ್ಯ. ನಾನು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದನ್ನು ಹುಚ್ಚು ಎಂದು ಮೂದಲಿಸುವವರು ಇದ್ದಾರೆ. ಇಳ್ಳೆಯ ಉದ್ದೇಶ ಇರುವ ಈ ಹುಚ್ಚಿನಲ್ಲಿಯೇ ಇರಲು ನಾನು ಇಷ್ಟಪಡುತ್ತೇನೆ. ಈ ಸಂದರ್ಭದಲ್ಲಿ ನಾನು ನಿಮ್ಮೊಂದಿಗೆ ಇದ್ದೇನೆ ಎನ್ನುವ ಭರವಸೆ ನೀಡಲು ಬಂದಿದ್ದೇನೆ. ಈ ಹೋರಾಟವನ್ನು ಬೆಳೆಸಿ ಒಂದು ಹೊಸ ರೂಪ ನೀಡೋಣ. ನಮ್ಮ ನಾಯಕರ ಅಲಕ್ಷ್ಯ ಮನೋಭಾವದಿಂದ ನಮ್ಮ ನೋವುಗಳನ್ನು ಕೇಳಲು ಅವರು ತಯಾರಿಲ್ಲ. ನಾವು ಅವರನ್ನು ಮನುಷ್ಯರನ್ನಾಗಿ ಮಾಡಬೇಕಿದೆ ಎಂದರು.

    ನಿಷ್ಕ್ರಿಯಗೊಂಡಿದ್ದ ಖಾಸಗಿ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಿಗೆ ಸಂಬಂಧಪಟ್ಟ ಶಾಸನಕ್ಕೆ ಮರುಜೀವ ನೀಡಲು ನಾನು ಹೊರಟಾಗ ಎಲ್ಲ ಪಕ್ಷಗಳೂ ವಿರೋಧಮಾಡಿದವು. ನನ್ನ ಸ್ಥಿತಿ ಚಕ್ರವ್ಯೂಹದಲ್ಲಿ ಸಿಕ್ಕಿಹಾಕಿಕೊಂಡ ಅಭಿಮನ್ಯುವಿನಂತಾಗಿತ್ತು. ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಸಲ್ಲಿಸಲಾಯಿತು. ನಮ್ಮ ಅಹವಾಲು ಇದ್ದದ್ದು ಆ ಶಾಸನದಲ್ಲಿ ಇದ್ದಂತೆ ಸಾವನ್ನಪ್ಪಿದ ರೋಗಿಯ ಮನೆಯವರಿಗೆ ಹಣದ ಅಗತ್ಯ ಇದ್ದಲ್ಲಿ ಹಣ ನೀಡಬೇಕು ಎಂಬುದು. ಮುಖ್ಯ ನ್ಯಾಯಾಧೀಶರು ತಕ್ಷಣ ಆದೇಶ ನೀಡಿದರು. ನಮಗೆ ಇನ್ನೊಬ್ಬರ ಸಾವಿನ ಬಗ್ಗೆ ಕರುಣೆಯೇ ಇಲ್ಲದಂತಾಗಿದೆ ಎಂದರು. ಇದನ್ನೂ ಓದಿ: ಒಳ್ಳೆಯ ಕೆಲಸ ಮಾಡಿದ್ದರೆ ಯಡಿಯೂರಪ್ಪರನ್ನ ಸಿಎಂ ಸ್ಥಾನದಿಂದ ಇಳಿಸುತ್ತಿರಲಿಲ್ಲ: ಡಿಕೆಶಿ

    ಇದೇ ರೀತಿ ಎಲ್ಲ ಪಕ್ಷಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ನಾಯಕರು ಇದ್ದಾರೆ. ಹೀಗಾಗಿ ಇವರು ಪೋಷಕರ ಸಮಸ್ಯೆಗಳನ್ನು ಆಲಿಸುತ್ತಿಲ್ಲ. ಇದಕ್ಕೆ ವ್ಯಾಪಕ ಚಳುವಳಿಯ ಅಗತ್ಯವಿದೆ. ನಾವು ಕೇಳಬೇಕಾಗಿರುವುದು ಇಷ್ಟೇ, ದೆಹಲಿಯ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಆಗಿದ್ದು ನಮ್ಮಲ್ಲಿ ಯಾಕೆ ಸಾಧ್ಯವಿಲ್ಲ? ನಮ್ಮ ನಾಯಕರಲ್ಲಿ ಇಷ್ಟನ್ನೇ ಕೇಳಬೇಕಿದೆ. ನನಗೆ ದೇಶ, ಜನ ಮುಖ್ಯ, ಹಾಗಾಗಿ ಒಳ್ಳೆಯದನ್ನು ಬೆಂಬಲಿಸುತ್ತಿದ್ದೇನೆ ಎಂದು ತಿಳಿಸಿದರು.

    ನಮ್ಮ ರಾಜ್ಯದಲ್ಲಿ ಕಟ್ಟುನಿಟ್ಟಾದ ಕ್ರಮಗಳನ್ನು ಜಾರಿಗೊಳಿಸಬೇಕು. ಫೀಸ್ ಹೆಚ್ಚಳವನ್ನು ಪ್ರಶ್ನಿಸಬೇಕು. ಇದಕ್ಕಾಗಿ ನಿರಾಶರಾಗದೆ ಹೋರಾಡಬೇಕು. ಆಮ್ ಆದ್ಮಿ ಪಾರ್ಟಿಯ ಸಂಗಾತಿಗಳ ಬಗ್ಗೆ ನನಗೆ ಹೆಮ್ಮೆ ಇದೆ. ಕಮಿಷನ್ ಗಾಗಿ ಟೊಪಿ ಹಾಕಿಕೊಂಡು ಪಾರ್ಟಿಯನ್ನು ಸೇರಿಲ್ಲ. ನೀವು ಭಾರತೀಯ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆಯಲು ಹೊರಟಿದ್ದೀರಿ. ನಾನು ಇಲ್ಲಿಗೆ ಬಂದಿರುವುದು ಆಮ್ ಆದ್ಮಿಯ ಜೊತೆಗೆ ಇರುಲು. ಪಾರ್ಟಿ ಯಾವುದೇ ಆದರೂ ಆಮ್ ಆದ್ಮಿಯ ಸೇವೆ ಮಾಡಬೇಕು ಎಂದರು.

  • ಶಾಲಾ ಶುಲ್ಕ ಪಾವತಿ- ಸರ್ಕಾರದ ನೆರವಿಗೆ ಪೋಷಕರ ಆಗ್ರಹ

    ಶಾಲಾ ಶುಲ್ಕ ಪಾವತಿ- ಸರ್ಕಾರದ ನೆರವಿಗೆ ಪೋಷಕರ ಆಗ್ರಹ

    ಬೆಂಗಳೂರು: ಮಕ್ಕಳ ಶಾಲಾ ಶುಲ್ಕ ಪಾವತಿಸಲು ಸರ್ಕಾರ ಸಹಾಯ ಮಾಡಬೇಕೆಂದು ಆಮ್ ಆದ್ಮಿ ಪಾರ್ಟಿ ಆಯೋಜಿಸಿದ್ದ ಚಿಂತನ-ಮಂಥನ ಕಾರ್ಯಕ್ರಮದಲ್ಲಿ ನೂರಾರು ಪೋಷಕರು ಆಗ್ರಹಿಸಿದ್ದಾರೆ.

    ಕಳೆದ ಒಂದೂವರೆ ವರ್ಷಗಳಲ್ಲಿ ಲಾಕ್‍ಡೌನ್‍ನಿಂದಾಗಿ ಆದಾಯ ಹಾಗೂ ಉಳಿತಾಯವನ್ನು ಕಳೆದುಕೊಂಡು ಪೋಷಕರು ಸಂಕಷ್ಟದಲ್ಲಿದ್ದಾರೆ. ಈಗ ಸರ್ಕಾರವು ಅವರಿಗೆ ಸಹಾಯ ಮಾಡದಿದ್ದರೆ ಅನೇಕರಿಗೆ ತಮ್ಮ ಮಕ್ಕಳನ್ನು ಮರಳಿ ಶಾಲೆಗೆ ಕಳುಹಿಸಲು ಸಾಧ್ಯವಾಗುವುದಿಲ್ಲ ಎಂದು ಪೋಷಕರು ಅಳಲು ತೋಡಿಕೊಂಡರು. ಪತಿ ಹಾಗೂ ತಂದೆಯನ್ನು ಕಳೆದುಕೊಂಡಿರುವ ನಾನು ಇಬ್ಬರು ಮಕ್ಕಳನ್ನು ಓದಿಸಲು ಹಲವು ಮನೆಗಳಲ್ಲಿ ಕೆಲಸ ಮಾಡುತ್ತಿದ್ದೇನೆ. ಲಾಕ್‍ಡೌನ್‍ನಿಂದಾಗಿ ನನಗೆ ಒಂದೂವರೆ ವರ್ಷ ಉದ್ಯೋಗವಿರಲಿಲ್ಲ. ನಾನು ಮಕ್ಕಳ ಶಾಲಾ ಶುಲ್ಕ ಪಾವತಿಸಲು ಹೇಗೆ ಸಾಧ್ಯ? ಎಂದು ಪೋಷಕರಾದ ಪವಿತ್ರ ಚಿಂತನ-ಮಂಥನ ಕಾರ್ಯಕ್ರಮದಲ್ಲಿ ಪ್ರಶ್ನಿಸಿದರು.

    ಕಾರ್ಯಕ್ರಮದಲ್ಲಿ ಮಾತನಾಡಿದ ವಿಧಾನಸಭೆಯ ಮಾಜಿ ಸಭಾಧ್ಯಕ್ಷರಾದ ಕೆ.ಆರ್.ರಮೇಶ್ ಕುಮಾರ್, ಪೋಷಕರಿಗೆ ನೆರವಾಗಲು ಸರ್ಕಾರ ಏನನ್ನಾದರೂ ಮಾಡಲೇ ಬೇಕು. ದೀರ್ಘಾವಧಿಯಲ್ಲಿ, ಸರ್ಕಾರಿ ಶಾಲೆಗಳನ್ನು ಸರ್ಕಾರ ಅಭಿವೃದ್ಧಿ ಪಡಿಸಬೇಕು ಎಂದು ಅಭಿಪ್ರಾಯವ್ಯಕ್ತಪಡಿಸಿದರು. ಇದನ್ನೂ ಓದಿ: ಬಸ್‍ನಲ್ಲಿ ನಿದ್ದೆ ಮಾಡುವ ಅಭ್ಯಾಸ ಇದೆಯೇ?- ಈ ಸುದ್ದಿ ಓದಿ

    ಆಮ್ ಆದ್ಮಿ ಪಾರ್ಟಿಯ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಮಾತನಾಡಿ, ಕಾನೂನಿನ ಪ್ರಕಾರ ಗುಣಮಟ್ಟದ ಹಾಗೂ ಉಚಿತ ಶಿಕ್ಷಣ ಪಡೆಯುವ ಹಕ್ಕನ್ನು ಮಕ್ಕಳು ಹೊಂದಿದ್ದಾರೆ. ಆದರೆ ಬಿಜೆಪಿ ಸರ್ಕಾರವು ಈ ಸಂಕಷ್ಟದ ಸಮಯದಲ್ಲಿ ಪೋಷಕರಿಗೆ ನೆರವಾಗಲು ನಿರ್ಲಕ್ಷ್ಯ ತೋರುತ್ತಿದೆ. ಅವರ ಬೇಡಿಕೆಗಳನ್ನು ಕೇಳಿ ನೆರವಾಗಲು ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ:  ಮಳೆಗಾಗಿ ಭಕ್ತನಿಂದ ಆಂಜನೇಯನಿಗೆ ಪ್ರಾರ್ಥನೆ – ಹೂ ಪ್ರಸಾದ ನೀಡಿದ ಹನುಮಂತ

    ಬೆಂಗಳೂರು ನಗರದ ಎಎಪಿ ಅಧ್ಯಕ್ಷರಾದ ಮೋಹನ್ ದಾಸರಿ ಮಾತನಾಡಿ, ಇಲ್ಲಿ ಕೇಳಿಬಂದ ಪೋಷಕರ ಬೇಡಿಕೆಗಳನ್ನು ನಾವು ಶಿಕ್ಷಣ ಸಚಿವ ಬಿ.ಸಿ.ನಾಗೇಶ್‍ರವರಿಗೆ ತಲುಪಿಸುತ್ತೇವೆ. ಹಾಗೂ ಶಾಲಾ ಶುಲ್ಕಕ್ಕೆ ಸಂಬಂಧಿಸಿ ಪೋಷಕರಿಗೆ ನೆರವಾಗುವಂತಹ ವಿಸ್ತೃತ ಯೋಜನೆಯನ್ನು ಶೀಘ್ರದಲ್ಲೇ ರೂಪಿಸಬೇಕು ಹಾಗೂ ಪರಿಣಾಮಕಾರಿಯಾದ ಶಾಲಾ ನಿರ್ವಹಣಾ ಸಮಿತಿಗಳನ್ನು ರಚಿಸಬೇಕೆಂದು ಆಗ್ರಹಿಸುತ್ತೇವೆ. ದೆಹಲಿಯ ಎಎಪಿ ಸರ್ಕಾರವು ಅಲ್ಲಿನ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಿದ ಮಾದರಿಯಲ್ಲೇ ಇಲ್ಲೂ ಕೂಡ ಶಾಲೆಗಳನ್ನು ಅಭಿವೃದ್ಧಿ ಪಡಿಸಬೇಕೆಂದು ಒತ್ತಾಯಿಸುತ್ತೇವೆ ಎಂದು ತಿಳಿಸಿದರು.

    ಪೋಷಕರ ಸಂಘಟನೆಗಳು, ಸಮನ್ವಯ ಸಮಿತಿ ಹಾಗೂ ವಾಯ್ಸ್ ಆಫ್ ಪೇರೆಂಟ್ಸ್ ಸಂಘಟನೆಗಳು ಸರ್ಕಾರವು ನೆರವು ನೀಡದಿರುವುದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದವು. ತಮಗೆ ಬೆಂಬಲವಾಗಿರುವ ಎಎಪಿಯನ್ನು ಪೋಷಕರು ಶ್ಲಾಘಿಸಿದರು.

  • ಖಾಸಗಿ ಶಾಲೆಗಳ ದುಬಾರಿ ಶುಲ್ಕ- ರಮೇಶ್ ಕುಮಾರ್ ಉಪಸ್ಥಿತಿಯಲ್ಲಿ ಚಿಂತನ ಮಂಥನ

    ಖಾಸಗಿ ಶಾಲೆಗಳ ದುಬಾರಿ ಶುಲ್ಕ- ರಮೇಶ್ ಕುಮಾರ್ ಉಪಸ್ಥಿತಿಯಲ್ಲಿ ಚಿಂತನ ಮಂಥನ

    ಬೆಂಗಳೂರು: ಖಾಸಗಿ ಶಾಲೆಗಳ ದುಬಾರಿ ಶುಲ್ಕ ಹಾಗೂ ಸಂಕಷ್ಟದಲ್ಲಿರುವ ಪೋಷಕರಿಗೆ ನೆರವಾಗುವುದರಲ್ಲಿ ಸರ್ಕಾರದ ಪಾತ್ರದ ಕುರಿತು ಆಮ್ ಆದ್ಮಿ ಪಾರ್ಟಿಯು ವಿಧಾನಸಭೆಯ ಮಾಜಿ ಸ್ಪೀಕರ್ ಕೆ.ಆರ್ ರಮೇಶ್ ಕುಮಾರ್ ಅವರ ಉಪಸ್ಥಿತಿಯಲ್ಲಿ ಚಿಂತನ-ಮಂಥನ ಕಾರ್ಯಕ್ರಮವನ್ನು ಆಯೋಜಿಸಿದೆ.

    ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಬೆಂಗಳೂರು ನಗರದ ಎಎಪಿ ಉಪಾಧ್ಯಕ್ಷ ಸುರೇಶ್ ರಾಥೋಡ್, ಸೆ. 26ರ ಭಾನುವಾರದಂದು ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಬೆಳಗ್ಗೆ 10:30ರಿಂದ ಮಧ್ಯಾಹ್ನ 2 ಗಂಟೆಯ ತನಕ ಚಿಂತನ-ಮಂಥನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆಮ್ ಆದ್ಮಿ ಪಾರ್ಟಿಯ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಹಾಗೂ ಮಾಜಿ ಸಭಾಧ್ಯಕ್ಷ ರಮೇಶ್ ಕುಮಾರ್ ಮಾತನಾಡಲಿದ್ದಾರೆ. ಪೋಷಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

    ಕೊರೊನಾ ಹಾಗೂ ಲಾಕ್‍ಡೌನ್‍ನಿಂದಾಗಿ ತತ್ತರಿಸಿರುವ ರಾಜ್ಯದ ವಿದ್ಯಾರ್ಥಿಗಳ ಪೋಷಕರು ತಮ್ಮ ಮಕ್ಕಳ ಶಾಲಾ ಶುಲ್ಕವನ್ನು ಪಾವತಿಸಲು ಹೆಣಗಾಡುತ್ತಿದ್ದಾರೆ. ಸರ್ಕಾರವು ಈ ಬಗ್ಗೆ ಜಾಣಕುರುಡು ಪ್ರದರ್ಶಿಸಿ ಜವಾಬ್ದಾರಿಯಿಂದ ನುಣುಚಿಕೊಂಡಿದೆ. ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ಅವೈಜ್ಞಾನಿಕ ನಿರ್ಧಾರಗಳಿಂದ ಸಮಸ್ಯೆಗಳು ಮತ್ತಷ್ಟು ಬಿಗಡಾಯಿಸಿದೆ. ಅವರು ಎಲ್ಲಾ ಖಾಸಗಿ ಶಾಲೆಗಳಿಗೆ 30% ಶುಲ್ಕ ಇಳಿಸಬೇಕೆಂದು ಆದೇಶಿಸಿದ್ದರು. ಆದರೆ ಹೇಗೆ ಇಳಿಸಬೇಕು, ಖಾಸಗಿ ಶಾಲೆಗಳನ್ನು ಆ ನಷ್ಟವನ್ನು ಹೇಗೆ ಭರಿಸಿಕೊಳ್ಳಬೇಕೆಂದು ಸ್ಪಷ್ಟತೆ ನೀಡಿರಲಿಲ್ಲ. ಇದರಿಂದಾಗಿ ಸಚಿವರ ಆದೇಶಕ್ಕೆ ನ್ಯಾಯಾಲಯದಲ್ಲಿ ಹಿನ್ನಡೆಯಾಯಿತು. ಪರಿಣಾಮವಾಗಿ ಬಡ ಹಾಗೂ ಮಧ್ಯಮ ವರ್ಗದ ಪೋಷಕರು ದಿಕ್ಕು ತೋಚದಂತಾಗಿದ್ದಾರೆ ಎಂದು ಸುರೇಶ್ ರಾಥೋಡ್ ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಸುಪ್ರೀಂಕೋರ್ಟ್ ಇಮೇಲ್‍ಗಳಲ್ಲಿ ಪ್ರಧಾನಿ ಮೋದಿ ಭಾವಚಿತ್ರ ಬಳಕೆಗೆ ಬ್ರೇಕ್

    ಆಮ್ ಆದ್ಮಿ ಪಾರ್ಟಿಯ ಮಹಿಳಾ ಮುಖಂಡೆ ಉಷಾ ಮೋಹನ್ ಮಾತನಾಡಿ, ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶೌಚಾಲಯ, ಶುದ್ಧ ಕುಡಿಯುವ ನೀರು, ಕಂಪ್ಯೂಟರ್, ಸುಸಜ್ಜಿತ ಕೊಠಡಿ ಮುಂತಾದ ಮೂಲಸೌಕರ್ಯಗಳಿಲ್ಲ. ಆದ್ದರಿಂದ ಪೋಷಕರು ತಮ್ಮ ಮಕ್ಕಳನ್ನು ಅನಿವಾರ್ಯವಾಗಿ ಖಾಸಗಿ ಶಾಲೆಗಳಿಗೆ ಸೇರಿಸಬೇಕಾಗಿದೆ. ಕೋವಿಡ್‍ನಿಂದ ತತ್ತರಿಸಿರುವ ವೇಳೆ ಅಲ್ಲಿನ ದುಬಾರಿ ಶುಲ್ಕವನ್ನು ಬಡ ಪೋಷಕರು ಹೇಗೆ ತಾನೇ ಕಟ್ಟಬಹುದು? ದೆಹಲಿಯ ಕೇಜ್ರಿವಾಲ್ ಸರ್ಕಾರವು ಸರ್ಕಾರಿ ಶಾಲೆಗಳನ್ನು ಎಲ್ಲ ರೀತಿಯಲ್ಲೂ ಅಭಿವೃದ್ಧಿಪಡಿಸಿದೆ. ಇಲ್ಲಿನ ಸರ್ಕಾರಿ ಶಾಲೆಗಳೂ ಅಭಿವೃದ್ಧಿಯಾಗಿದ್ದರೆ ಖಾಸಗಿ ಶಾಲೆಗಳ ಶುಲ್ಕದಲ್ಲಿ ವಿನಾಯಿತಿ ನೀಡಬೇಕೆಂದು ನಾವು ಇಷ್ಟೊಂದು ಆಗ್ರಹಿಸುವ ಸಂದರ್ಭವೇ ಬರುತ್ತಿರಲಿಲ್ಲ. ಆದರೆ ನಮ್ಮ ಬಿಜೆಪಿ ಸರ್ಕಾರಕ್ಕೆ ಶಿಕ್ಷಣ ಹಾಗೂ ಶಾಲಾ ಅಭಿವೃದ್ಧಿಯು ಆದ್ಯತೆಯ ವಿಷಯವಾಗಿಲ್ಲ. ಇದನ್ನೂ ಓದಿ: ಅ.7ಕ್ಕೆ ಚಾಮರಾಜನಗರಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಆಗಮನ

  • ‘ಚಿಂತಾಮಣಿ ಅಪಘಾತ – 8 ಮಂದಿಯ ಸಾವಿಗೆ ರಮೇಶ್‍ಕುಮಾರ್ ನೇರ ಹೊಣೆ’

    ‘ಚಿಂತಾಮಣಿ ಅಪಘಾತ – 8 ಮಂದಿಯ ಸಾವಿಗೆ ರಮೇಶ್‍ಕುಮಾರ್ ನೇರ ಹೊಣೆ’

    – ಸಾಮಾಜಿಕ ಜಾಲತಾಣದಲ್ಲಿ ಪೊಲೀಸರ ಆಕ್ರೋಶ
    – ರಮೇಶ್ ಕುಮಾರ್ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು

    ಬೆಂಗಳೂರು: “ಚಿಂತಾಮಣಿ ತಾಲೂಕಿನಲ್ಲಿ ನಡೆದ ಅಪಘಾತಕ್ಕೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ನೇರ ಹೊಣೆ” ಎಂದು ಸಾಮಾಜಿಕ ಜಾಲತಾಣದಲ್ಲಿ ಪೊಲೀಸರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಮರಿನಾಯಕನಹಳ್ಳಿ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ರಮೇಶ್ ಕುಮಾರ್ ಅವರನ್ನು ಟೀಕಿಸಿ ಬರೆದ ಪೋಸ್ಟ್ ಈಗ ಫೇಸ್‍ಬುಕ್, ವಾಟ್ಸಪ್‍ನಲ್ಲಿ ವೈರಲ್ ಆಗಿದೆ.

    ಪೋಸ್ಟ್ ನಲ್ಲಿ ಏನಿದೆ?
    ಭಾನುವಾರ ಚಿಂತಾಮಣಿ ತಾಲ್ಲೂಕು ಮರಿನಾಯಕನಹಳ್ಳಿ ಗ್ರಾಮದ ಬಳಿ ನಡೆದಂತಹ 8 ಜನರ ಮರಣದ ಘೋರ ಅಪಘಾತ ಪ್ರಕರಣಕ್ಕೆ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ರಮೇಶ್ ಕುಮಾರ್ ರವರೆ ನೇರಹೊಣೆಗಾರರಾಗಿರುತ್ತಾರೆ.

    ಒಂದು ತಿಂಗಳ ಹಿಂದೆ ಈ ಅಪಘಾತ ನಡೆದಂತಹ ಸ್ಥಳದಿಂದ ಕೆಲವೇ ಕೆಲವು ಕಿಲೋಮೀಟರ್ ಗಳ ಅಂತರದಲ್ಲಿ ವಾಹನ ತಪಾಸಣೆ ಮಾಡುತ್ತಿದ್ದಂತಹ ಚಿಂತಾಮಣಿ ಪೊಲೀಸರ ಕರ್ತವ್ಯವನ್ನು ರಮೇಶ್ ಕುಮಾರ್ ರವರು ತಡೆಯದೆ ಇದ್ದಿದ್ದರೆ, ಪೊಲೀಸರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸದೆ ಇದ್ದಿದ್ದರೆ, ಪೊಲೀಸರ ಮಕ್ಕಳ ಬಗ್ಗೆ ಕೀಳು ಮಟ್ಟದಲ್ಲಿ ಮಾತನಾಡಿ ಅವರ ಮನೋಸ್ಥೈರ್ಯವನ್ನು ಕುಗ್ಗುವಂತೆ ಮಾಡದೆ ಇದ್ದಿದ್ದರೆ ಮರಿನಾಯಕನಹಳ್ಳಿ ಗ್ರಾಮದ ಬಳಿ ಈ ಒಂದು ಅಪಘಾತ ಸಂಭವಿಸುತ್ತಿರಲಿಲ್ಲ.

    ರಮೇಶ್ ಕುಮಾರ್ ರವರು ಪೊಲೀಸರ ಬಗ್ಗೆ ಕೆಟ್ಟದಾಗಿ ಮಾತನಾಡಿದ ನಂತರ ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಪೊಲೀಸರನ್ನು ಕೆಟ್ಟ ರೀತಿಯಲ್ಲಿ ಬಿಂಭಿಸಿದ್ದರಿಂದ ಇನ್ನು ಮುಂದೆ ಪೊಲೀಸರು ರಸ್ತೆಗಳಲ್ಲಿ ದಂಡ ವಿಧಿಸುವುದಿಲ್ಲ ಎಂಬ ಕೆಟ್ಟ ಸಂದೇಶ ಸಾರ್ವಜನಿಕ ವಲಯದಲ್ಲಿ ರವಾನೆಯಾಗಿ ಮೇಲಿನ ಅಪಘಾತ ಪ್ರಕರಣದ ವಾಹನಗಳ ಚಾಲಕರು ಸಾಮರ್ಥ್ಯಕ್ಕಿಂತ ಹೆಚ್ಚಿನ ಜನರನ್ನು ತುಂಬಿಕೊಂಡು, ಅಜಾಗರೂಕತೆಯಿಂದ ಚಾಲನೆ ಮಾಡಿ, ಅಪಘಾತವನ್ನುಂಟು ಮಾಡಿ 8 ಜನ ಅಮಾಯಕ ಮರಣಕ್ಕೆ ಕಾರಣರಾಗಿರುತ್ತಾರೆ.

    ಒಂದು ವೇಳೆ ರಮೇಶ್ ಕುಮಾರ್ ರವರು ಪೊಲೀಸರ ಕರ್ತವ್ಯವನ್ನು ಆ ದಿನ ತಡೆಯದೆ ಇದ್ದಿದ್ದರೆ, ಪೊಲೀಸರು ದಂಡವನ್ನು ಹಾಕುತ್ತಾರೆಂಬ ಭಯದಲ್ಲಿ ವಾಹನಗಳ ಚಾಲಕರು ಸಾಮರ್ಥ್ಯಕ್ಕಿಂತ ಹೆಚ್ಚಿನ ಜನರನ್ನು ವಾಹನಕ್ಕೆ ತುಂಬುತ್ತಿರಲ್ಲಿಲ್ಲ. ಅತಿವೇಗವಾಗಿ, ಅಜಾಗರೂಕತೆಯಿಂದ ವಾಹನಗಳು ಚಾಲನೆ ಮಾಡುತ್ತಿರಲಿಲ್ಲ. ವೈಟ್ ಬೋರ್ಡ್ ವಾಹನದಲ್ಲಿ ಪ್ರಯಾಣಿಕರು ಸಾಗಿಸಿದರೆ ಪೊಲೀಸರು ಕೇಳುತ್ತಾರೆಂದು ಅಷ್ಟು ಜನ ಪ್ರಯಾಣಿಕರನ್ನು ಸಹ ಕರೆದುಕೊಂಡು ಹೋಗುತ್ತಿರಲಿಲ್ಲ. ಆಗ ಈ ಒಂದು ಅಪಘಾತ ಸಂಭವಿಸುತ್ತಲೂ ಇರಲಿಲ್ಲ. 8 ಜನ ಅಮಾಯಕ ಪ್ರಜೆಗಳು ಸಾಯುತ್ತಿರಲಿಲ್ಲ. ಆದ್ದರಿಂದ ಈ ಒಂದು ಅಪಘಾತದ 8 ಜನರ ಸಾವಿಗೆ ರಮೇಶ್ ಕುಮಾರ್ ರವರೆ ನೇರ ಹೊಣೆಗಾರರಾಗಿರುತ್ತಾರೆ. ಇದನ್ನೂ ಓದಿ: ಇನ್ನೂ ಸಮಯ ಇದೆ, ಅರ್ಜೆಂಟ್ ಏನೂ ಇಲ್ಲ: ಹೆಚ್‍ಡಿಕೆ 

    ಸಾರ್ವಜನಿಕರಿಗೆ ಕೆಟ್ಟ ಸಂದೇಶವನ್ನು ರವಾನೆ ಮಾಡಿ ಮೇಲ್ಕಂಡ ಅಪಘಾತಕ್ಕೆ ನೇರ ಹೊಣೆಗಾರರಾಗಿರುವ ಹಾಗೂ ಪೊಲೀಸರ ಬಗ್ಗೆ ಕೆಟ್ಟದಾಗಿ ಮಾತನಾಡಿ, ಅವರ ಮನೋಸ್ಥೈರ್ಯ ಕಳೆದುಕೊಳ್ಳುವಂತೆ ಮಾಡಿರುವ ರಮೇಶ್ ಕುಮಾರ್ ರವರು ಈ ಕೂಡಲೇ ಸಾಮಾಜಿಕ ಮಾಧ್ಯಮಗಳ ಮೂಲಕ ಪೊಲೀಸರಿಗೆ ಬಹಿರಂಗ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ಮರಣ ಹೊಂದಿರುವ 8 ಜನರ ಆತ್ಮ ಹಾಗೂ ಅವರ ಕುಟುಂಬಗಳ ಶಾಪ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ. ಇದನ್ನೂ ಓದಿ: ಮುಂಬೈ ಅತ್ಯಾಚಾರ ಪ್ರಕರಣ- ಚಿಕಿತ್ಸೆ ಫಲಿಸದೆ ಮೃತಪಟ್ಟ ಸಂತ್ರಸ್ತೆ

    ಪೆÇಲೀಸರು ಅವರ ಸ್ವಾರ್ಥಕ್ಕೆ ಅಥವಾ ಅವರ ಸಂಪಾದನೆಗೆ ದಂಡವನ್ನು ವಿಧಿಸುವುದಿಲ್ಲ. ಸಮಾಜದಲ್ಲಿ ಇಂತಹ ಅಪಘಾತ ಪ್ರಕರಣಗಳು ನಡೆಯಭಾರದೆಂಬ ಉದ್ದೇಶದಿಂದ ದಂಡವನ್ನು ಹಾಕುತ್ತಾರೆ.ವಾಹನ ಸವಾರರು ಅವರ ವಾಹನದ ಎಲ್ಲಾ ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ಇಟ್ಟುಕೊಂಡಿದ್ದರೆ ಪೊಲೀಸರಿಗೆ ಏಕೆ ಹೆದರಬೇಕು? ಪೊಲೀಸರ ಜೊತೆ ಏಕೆ ವಾದ ವಿವಾದ ಆಗುತ್ತೆ? ಏಕೆ ದಂಡವನ್ನು ಕಟ್ಟ ಬೇಕಾಗತ್ತೆ? ದಯವಿಟ್ಟು ಸಾರ್ವಜನಿಕರು ಇದನ್ನು ಅರ್ಥ ಮಾಡಿಕೊಳ್ಳಬೇಕು.

  • ಸರ್ಕಾರದಿಂದ ಆದೇಶ ಹೊರಡಿಸಿ ಪುಣ್ಯ ಕಟ್ಟಿಕೊಳ್ಳಿ- ಮಾಜಿ ಸ್ಪೀಕರ್ ವಿರುದ್ಧ ಪೊಲೀಸರ ಆಕ್ರೋಶ

    ಸರ್ಕಾರದಿಂದ ಆದೇಶ ಹೊರಡಿಸಿ ಪುಣ್ಯ ಕಟ್ಟಿಕೊಳ್ಳಿ- ಮಾಜಿ ಸ್ಪೀಕರ್ ವಿರುದ್ಧ ಪೊಲೀಸರ ಆಕ್ರೋಶ

    ಕೋಲಾರ: ಸರ್ಕಾರದಿಂದ ಆದೇಶ ಹೊರಡಿಸಿ ಪುಣ್ಯಕಟ್ಟಿಕೊಳ್ಳಿ ರಮೇಶ್ ಸರ್ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಕೋಲಾರದ ಪೊಲೀಸ್ ಇಲಾಖೆ ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದ ವೀಕ್ಷಕರು ಮಿಶ್ರ ಪ್ರತಿಕ್ರಿಯೆ ನೀಡುತ್ತಿದ್ದಾರೆ.

    ಪೊಲೀಸರು ವಾಹನಗಳನ್ನು ತಪಾಸಣೆ ನಡೆಸುತ್ತಿದ್ದ ವೇಳೆ ಅವರ ಕಾರ್ಯವೈಖರಿಯ ಬಗ್ಗೆ ರಮೇಶ್ ಕುಮಾರ್ ಅವರು ತರಾಟೆಗೆ ತೆಗೆದುಕೊಂಡಿದ್ದರು. ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಈ ವಿಚಾರವಾಗಿ ಮಾಜಿ ಸ್ವೀಕರ್ ವಿರುದ್ಧ ಪೊಲೀಸ್ ಇಲಾಖೆಯಲ್ಲಿ ಆಕ್ರೋಶ ಭುಗಿಲೆದಿದೆ.ಇದನ್ನೂ ಓದಿ: ಮಂಗಳೂರು ಏರ್ ಪೋರ್ಟ್ ರ್‍ಯಾಪಿಡ್ ಪಿಸಿಆರ್ ಟೆಸ್ಟ್ – ಅನಿವಾಸಿಗಳ ಬೇಡಿಕೆಗೆ ಸ್ಪಂದಿಸಿದ ದ.ಕ. ಡಿಸಿ

    ಪೊಲೀಸರು ಯಾವುದೇ ವಾಹನಗಳನ್ನು ತಪಾಸಣೆ ಮಾಡುವಂತಿಲ್ಲ, ದಂಡ ಹಾಕುವಂತಿಲ್ಲ ಎಂದು ಸರ್ಕಾರದಿಂದ ಆದೇಶ ಹೊರಡಿಸಿ ಪುಣ್ಯಕಟ್ಟಿಕೊಳ್ಳಿ ರಮೇಶ್ ಕುಮಾರ್ ಸರ್. ಈ ನಿಮ್ಮ ಒಳ್ಳೆಯತನಕ್ಕಾದರು ಪೊಲೀಸರಿಗೆ ಬಿಪಿ, ಶುಗರ್ ಮಾಯವಾಗಲಿ. ಸಾರ್ವಜನಿಕರಿಗೆ ತಪ್ಪು ಸಂದೇಶವನ್ನು ನೀಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ವೀಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ರಮೇಶ್ ಅವರಿಗೆ ಟಕ್ಕರ್ ಕೊಡುತ್ತಿದ್ದಾರೆ. ಸ್ಟೇಟಸ್ ಹಾಗೂ ಫೇಸ್ಬುಕ್‍ನಲ್ಲಿ ರಮೇಶ್ ಅವರ ವಿರುದ್ಧ ಇಲಾಖೆಯ ಸಿಬ್ಬಂದಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ನಮಗೆ ಅಧಿಕಾರ ಕೊಟ್ಟವರು ನೀವೇ ಅದನ್ನು ಪ್ರಶ್ನೆ ಮಾಡುವವರು ನೀವೇ ಎಂದು ಟಾಂಗ್ ಕೊಟ್ಟಿದ್ದಾರೆ.ಇದನ್ನೂ ಓದಿ:ಲಾಲ್‍ಬಾಗ್, ಕಬ್ಬನ್ ಪಾರ್ಕ್ ಮಾದರಿಯಲ್ಲಿ ಮತ್ತೊಂದು ಉದ್ಯಾನವನ: ತೋಟಗಾರಿಕೆ ಸಚಿವ ಮುನಿರತ್ನ

    ಈ ವಿಷಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಇದರ ಪರ ವಿರೋಧದ ಚರ್ಚೆ ನಡೆಯುತ್ತಿದೆ.ಇದನ್ನೂ ಓದಿ:ರಮೇಶ್ ಕುಮಾರ್ ವಿರುದ್ಧ ಜೆ.ಪಿ ನಗರ ಎಎಸ್‍ಐ ಗರಂ

  • ರಮೇಶ್ ಕುಮಾರ್ ವಿರುದ್ಧ ಜೆ.ಪಿ ನಗರ ಎಎಸ್‍ಐ ಗರಂ

    ರಮೇಶ್ ಕುಮಾರ್ ವಿರುದ್ಧ ಜೆ.ಪಿ ನಗರ ಎಎಸ್‍ಐ ಗರಂ

    ಬೆಂಗಳೂರು: ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಜೆ.ಪಿ ನಗರ ಪೊಲೀಸ್ ಠಾಣೆಯ ಎಎಸ್‍ಐ ಗೋಪಿ ಗರಂ ಆಗಿದ್ದಾರೆ.

    ಗೋಪಿ ಅವರು ಮಾತನಾಡಿರುವ ಆಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಮಾಜಿ ಸಭಾಧ್ಯಕ್ಷರಿಗೆ ನಾವು ಮೊದಲಿಂದಲು ನಾವು ಗೌರವ ಕೊಡುತ್ತಿದ್ದೇವು. ಇವರು ಎಲ್ಲ ರಾಜಕಾರಣಿಗಳಿಗಿಂತ ವಿಭಿನ್ನವಾಗಿದ್ದರು. ಆದರೆ ಇವರು ನಡೆದುಕೊಂಡ ರೀತಿ ಅವರ ಗೌರವಕ್ಕೆ ದಕ್ಕೆ ಬರುವಂತದ್ದಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಇವರು ಹೆದ್ದಾರಿಯಲ್ಲಿ ಹೋಗುತ್ತಿದ್ದಾಗ ಏನದ್ರೂ ಅವಘಡವಾಗಿದ್ದರೆ, ಇವರು ಏನು ಹೇಳುತ್ತಿದ್ದರು? ಹೆದ್ದಾರಿಗಳಲ್ಲಿ ಸರಿಯಾದ ವಾಹನ ತಪಾಸಣೆ ಆಗಿತ್ತಿಲ್ಲ ಎನ್ನುತ್ತಿದ್ದರು. ಸರಿಯಾದ ತಪಾಸಣೆ ಮಾಡುತ್ತಿದ್ದರೆ ಇವರು ನಮ್ಮ ಕುಟುಂಬದ ಕುರಿತಾಗಿ ಮಾತನಾಡುತ್ತಾರೆ. ನಾವು ಇವರ ಕುಟುಂಬದ ಕುರಿತಾಗಿ ಮಾತನಾಡುತ್ತೀವಾ? ನನ್ನ ಕೆಲಸದ ಕುರಿತಾಗಿ ಮಾತನಾಡಲಿ. ಈ ಪ್ರಕರಣದಿಂದ ಅವರ ಮೇಲೆ ಇಟ್ಟಿರುವ ಗೌರವವನ್ನು ಕಳೆದುಕೊಳ್ಳುವಂತಾಗಿದೆ. ತಪಾಸಣೆ ಮಾಡುತ್ತಿರುವಾಗ ನಿಮ್ಮ ಕುಟುಂಬಕ್ಕೆ ಒಳ್ಳೆಯದಾಗಲ್ಲ, ಹೆಂಡತಿ ಮಕ್ಕಳಿಗೆ ಒಳ್ಳೆಯದು ಆಗಲ್ಲ ಎಂದು ಹೇಳಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿ ಗರಂ ಆಗಿದ್ದಾರೆ. ಇದನ್ನೂ ಓದಿ:  ಜನಪ್ರಿಯ ಹಾಡುಗಾರನನ್ನ ಹತ್ಯೆಗೈದ ತಾಲಿಬಾನಿಗಳು

    ಈ ವಿಚಾರವಾಗಿ ಪ್ರತಿಕ್ರಿಯಿಸಿದ ರಮೇಶ್ ಕುಮಾರ್ ಅವರು ನಾನು ಬರುತ್ತಿದ್ದೆ. ಆಗ ಟೋಲ್ ಬಳಿ ಪೊಲೀಸರು ನಡೆಯಿಂದ ನನಗೆ ಬೇಸವಾಯಿತ್ತು. ಅದಕ್ಕೆ ಮಾತನಾಡಿದೆ. ನಿಮಗೇನು ಮಕ್ಕಳು ಮರಿ ಇಲ್ಲವಾ ಹೋಗಿ ಎಂಬುದಾಗಿ ಹೇಳಿದೆ ಎಂದು ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

    ಹಿನ್ನಲೆ ಏನು?
    ನಡುರಸ್ತೆಯಲ್ಲಿ ನಿಂತು ವಾಹನಗಳನ್ನು ತಡೆದು ದಂಡ ವಿಧಿಸುತ್ತಿದ್ದ ಚಿಂತಾಮಣಿ ನಗರ ಠಾಣಾ ಪೊಲೀಸರಿಗೆ ಮಾಜಿ ಸ್ಪೀಕರ್ ಶ್ರೀನಿವಾಸಪುರ ವಿಧಾನಸಭೆ ಕ್ಷೇತ್ರದ ಶಾಸಕ ರಮೇಶ್ ಕುಮಾರ್ ಆಕ್ರೋಶಗೊಂಡಿದ್ದರು. ಶುಕ್ರವಾರ ನಗರ ಠಾಣಾ ಎಸ್‍ಐ ಮುಕ್ತಿಯಾರ್ ತಮ್ಮ ಸಿಬ್ಬಂದಿಯೊಂದಿಗೆ ತಾಲೂಕಿನ ಮಾಡಿಕೇರಿ ಕ್ರಾಸ್‍ನಲ್ಲಿ ವಾಹನಗಳನ್ನು ತಡೆದು ದಂಡ ವಿಧಿಸುತ್ತಿದ್ದರು. ಈ ವೇಳೆ ಶ್ರೀನಿವಾಸ್‍ಪುರದಿಂದ ಬೆಂಗಳೂರಿನ ಕಡೆ ಬರುತ್ತಿದ್ದ ರಮೇಶ್ ಕುಮಾರ್ ತಮ್ಮ ವಾಹನ ನಿಲ್ಲಿಸಿ ಪೊಲೀಸ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.

    ಮೊನ್ನೆಯಲ್ಲಾ ಗೃಹ ಮಂತ್ರಿಗಳು ಆದೇಶ ಮಾಡಿದ್ದಾರೆ ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸಿ ದಂಡ ಹಾಕಬೇಡಿ ಎಂದು ನೀವೇಕೆ ಹಾಕುತ್ತೀರ ನಿಮ್ಮ ಮಕ್ಕಳಿಗೆ ಹೇಗೆ ಒಳ್ಳೆಯದು ಆಗೋದು. ಏನು ಡಾಕ್ಯುಮೆಂಟ್ಟ್ ಚೆಕ್ ಮಾಡ್ತೀರ ನೀವು? ನಾಚಿಕೆಯಾಗಬೇಕು ನಿಮಗೆ. ಮಿನಿಸ್ಟರ್ ಮೊನ್ನೆತಾನೆ ಬಾಯಿಬಡ್ಕೊಂಡು ಹೇಳ್ತಾನೆ ನೀವು ಏನು ಮಾಡುವುದು ನಿಮ್ಮ ಮಕ್ಕಳಿಗೆ ಹೇಗೆ ಒಳ್ಳೆಯದು ಆಗುತ್ತೆ? ಏನ್ ಡಾಕ್ಯುಮೆಂಟ್ಸ್ ಪರಿಶಿಲನೆ ಮಾಡುತ್ತಿದ್ದೀರಿ? ಇದೇ ಉದ್ಯೋಗನಾ ನಿಮಗೆ ಎಂದು ಪ್ರಶ್ನಿಸಿ ಪೊಲೀಸರ ವಿರುದ್ಧ ಗರಂ ಆಗಿದ್ದರು.