Tag: Ramesh Kumar

  • 2-3 ತಲೆಮಾರಿಗಾಗುವಷ್ಟು ಮಾಡಿಕೊಂಡಿದ್ದೇವೆ – ವಿವಾದಿತ ಹೇಳಿಕೆಗೆ ರಮೇಶ್ ಕುಮಾರ್ ಸ್ಪಷ್ಟನೆ

    2-3 ತಲೆಮಾರಿಗಾಗುವಷ್ಟು ಮಾಡಿಕೊಂಡಿದ್ದೇವೆ – ವಿವಾದಿತ ಹೇಳಿಕೆಗೆ ರಮೇಶ್ ಕುಮಾರ್ ಸ್ಪಷ್ಟನೆ

    ಕೋಲಾರ: 2-3 ತಲೆಮಾರಿಗಾಗುವಷ್ಟು ಮಾಡಿಕೊಂಡಿದ್ದೇವೆ ಎಂಬ ಹೇಳಿಕೆಯನ್ನು ಮಾಧ್ಯಮಗಳು ಸರಿಯಾಗಿ ಅರ್ಥೈಸಿಕೊಂಡಿಲ್ಲ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ ನೀಡಿದ್ದಾರೆ.

    ಕೋಲಾರದ ಗಾಂಧಿವನದ ಬಳಿ ಸೋನಿಯಾ ಗಾಂಧಿ ಅವರ ಇಡಿ ವಿಚಾರಣೆಯನ್ನು ಖಂಡಿಸಿ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ಫಲಾನುಭವಿಗಳು ಸಾಕಷ್ಟು ಜನರು ಇದ್ದೇವೆ. ಸ್ಥಾನಗಳನ್ನು ಪಡೆದುಕೊಂಡಿದ್ದೇವೆ, ಸಂಪನ್ಮೂಲ ಸಹ ಪಡೆದಿದ್ದೇವೆ. ನಾನು ರಾಜಕೀಯ ಹಿನ್ನೆಲೆಯಿಂದ ಬಂದಿರುವ ಕುಟುಂಬದವನಲ್ಲ. ಆದರೂ ನಾನು 2 ಬಾರಿ ಸ್ಪೀಕರ್ ಆಗಿದ್ದೇನೆ. ಹೀಗಾಗಿ ನಾನು ಇದರ ಋಣ ತೀರಿಸಿಕೊಳ್ಳಲು ಈ ಹೇಳಿಕೆ ನೀಡಿದ್ದೆ ಎಂದು ಸ್ಪಷ್ಟೀಕರಿಸಿದ್ದಾರೆ. ಇದನ್ನೂ ಓದಿ: ಭೂಮಿ ಪೂಜೆ ವೇಳೆ ಶಾಸಕರ ಎದುರೇ JDS, BJP ಮಾರಾಮಾರಿ – ಮುರಿತು ಕಾರ್ಯಕರ್ತನ ಕೈ

    ನನ್ನ ಹೇಳಿಕೆಯನ್ನು ಅರ್ಥೈಸಿಕೊಳ್ಳದೆ ಏನೇನೋ ಪ್ರಶ್ನೆ ಕೇಳುತ್ತಿದ್ದೀರಿ ಎಂದು ಕೆಂಡಾಮಂಡಲರಾದ ರಮೇಶ್ ಕುಮಾರ್, ಕೋಲಾರದಲ್ಲಿ ನಾವೆಲ್ಲಾ ಒಗ್ಗಟ್ಟಾಗಿ ಇದ್ದೀವಿ. 2 ಕಡೆ ಬೇರೆ ಬೇರೆ ಪ್ರತಿಭಟನೆ ಮಾಡಿದ್ದು, ಸೋನಿಯಾ ಗಾಂಧಿಗೆ ಜೈಕಾರ ಹಾಕಿದ್ದೇವೆ. ದೇಶದಲ್ಲಿ ಬಿಜೆಪಿಯವರು ದೇಶಕ್ಕಾಗಿ ರಕ್ತ ಚೆಲ್ಲಿದ್ದಾರೆಯೇ? ಗಾಂಧಿಯನ್ನು ಕೊಂದಿದ್ದು ಯಾರು? ಇಡಿಯನ್ನು ಕೇಂದ್ರ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಕೇಂದ್ರ ಹಾಗೂ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಯಡಿಯೂರಪ್ಪಗೆ ಬಹಳ ವಯಸ್ಸೇನು ಆಗಿಲ್ಲ – ದೈಹಿಕ, ಮಾನಸಿಕವಾಗಿ ಸದೃಢರಾಗಿದ್ದಾರೆ: ಸುಧಾಕರ್

    ನೋಟ್ ಬ್ಯಾನ್ ಮಾಡಿದ ಮೋದಿಯವರು ಮಾಡಿದ್ದೇನು? 1 ಸಾವಿರ ರೂ.ಯ ನೋಟನ್ನು ಬ್ಯಾನ್ ಮಾಡಿ, 2 ಸಾವಿರ ರೂ. ನೋಟ್ ತಂದಿದ್ದಾರೆ. 1 ಸಾವಿರ ದೊಡ್ಡದ ಅಥವಾ 2 ಸಾವಿರ ದೊಡ್ಡದ? ನನಗೆ ನಮ್ಮ ಮೇಷ್ಟ್ರು ಹೊಡೆದು ಲೆಕ್ಕ ಹೇಳಿಕೊಟ್ಟಿದ್ದಾರೆ. ನನಗೆ ಲೆಕ್ಕ ಬರುತ್ತದೆ. ನಿನಗೆ ಬರಲ್ವಾ ಮೂರ್ಖ ಎಂದು ಮೋದಿಗೆ ಛೇಡಿಸಿದರು.

    Live Tv
    [brid partner=56869869 player=32851 video=960834 autoplay=true]

  • ಮೂರು ತಲೆಮಾರಿಗಾಗುವಷ್ಟು ಲೂಟಿ ಮಾಡಿದ್ದೇವೆಂದಿರೋ ರಮೇಶ್ ಕುಮಾರ್ ಸತ್ಯವಂತರು :ಜೋಶಿ ಲೇವಡಿ

    ಮೂರು ತಲೆಮಾರಿಗಾಗುವಷ್ಟು ಲೂಟಿ ಮಾಡಿದ್ದೇವೆಂದಿರೋ ರಮೇಶ್ ಕುಮಾರ್ ಸತ್ಯವಂತರು :ಜೋಶಿ ಲೇವಡಿ

    ನವದೆಹಲಿ: ನೆಹರು, ಇಂದಿರಾ, ಸೋನಿಯಾ ಗಾಂಧಿ ಹೆಸರು ಹೇಳಿಕೊಂಡು ಮೂರ್ನಾಲ್ಕು ತಲೆಮಾರಿಗಾಗುವಷ್ಟು ಸಂಪತ್ತು ಮಾಡಿಕೊಂಡಿದ್ದೇವೆ ಎಂದು ಕಾಂಗ್ರೆಸ್ ರಮೇಶ್ ಕುಮಾರ್ ಸತ್ಯ ಹೇಳಿದ್ದಾರೆ ಅಂತ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಲೇವಡಿ ಮಾಡಿದ್ದಾರೆ.

    ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ರಮೇಶ್ ಕುಮಾರ್ ಸತ್ಯ ಹೇಳಿದ್ದಾರೆ. ನೆಹರು, ಇಂದಿರಾ ಗಾಂಧಿ, ಸೋನಿಯಾ ಗಾಂಧಿಯವರ ಹೆಸರಲ್ಲಿ ಮೂರು ತಲೆಮಾರಿಗಾಗುವಷ್ಟು ಸಂಪತ್ತು ಮಾಡಿಕೊಂಡಿದ್ದೇವೆ ಎನ್ನುವ ಮೂಲಕ ಕಾಂಗ್ರೆಸ್‍ನ ಸತ್ಯವನ್ನ ಸ್ವತಃ ರಮೇಶ್ ಕುಮಾರ್ ಬಹಿರಂಗಪಡಿಸಿದ್ದಾರೆ ಎಂದರು. ಇದನ್ನೂ ಓದಿ: ನಾಲ್ಕು ತಲೆಮಾರಿಗೆ ಬೇಕಾಗುವಷ್ಟು ಸಂಪಾದನೆ ಮಾಡಿದ್ದಾರೆ ಅಂತ ಹೇಳಿರೋದು ಕಾಂಗ್ರೆಸ್ಸಿಗರಿಗೆ ಅಲ್ಲ: ಮೊಯ್ಲಿ

    ರಮೇಶ್ ಕುಮಾರ್ ಅವರು ಮಾಜಿ ಸ್ಪೀಕರ್. ಈ ಹಿಂದೆ ಸರ್ಕಾರದಲ್ಲಿ ಮಂತ್ರಿಯಾಗಿ ಕೆಲಸ ಮಾಡಿದವರು. ಹಲವು ವರ್ಷಗಳಿಂದ ಕಾಂಗ್ರೆಸ್ ನಲ್ಲಿರುವವರು. ದೇಶವನ್ನ, ರಾಜ್ಯವನ್ನ ಕಾಂಗ್ರೆಸ್ ಲೂಟಿ ಮಾಡಿದೆ ಅಂತ ಅವರೇ ಈಗ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಅವರು ಸತ್ಯ ಹೇಳಿದ್ದಾರೆ. ಈಗ ಕೊನೆ ಪಕ್ಷ ಪ್ರಕರಣದಲ್ಲಿ ಸೋನಿಯಾ, ರಾಹುಲ್ ಗಾಂಧಿ ಅವರ ವಿಚಾರಣೆ ಶಾಂತಿಯುತವಾಗಿ ನಡೆಯಲು ಕಾಂಗ್ರೆಸ್ ನವರು ಸಹಕರಿಸಲಿ ಎಂದು ಸಚಿವರು ಚಾಟಿ ಬೀಸಿದ್ದಾರೆ. ಇದನ್ನೂ ಓದಿ: ಸದನದ ಕಲಾಪಕ್ಕೆ ಅಡ್ಡಿಪಡಿಸೋ ಮೂಲಕ ಕಾಂಗ್ರೆಸ್ ಸಂಸದರ ಹಕ್ಕು ಕಸಿಯುತ್ತಿದೆ: ಜೋಶಿ ಟೀಕೆ

    Live Tv
    [brid partner=56869869 player=32851 video=960834 autoplay=true]

  • ನಾಲ್ಕು ತಲೆಮಾರಿಗೆ ಬೇಕಾಗುವಷ್ಟು ಸಂಪಾದನೆ ಮಾಡಿದ್ದಾರೆ ಅಂತ ಹೇಳಿರೋದು ಕಾಂಗ್ರೆಸ್ಸಿಗರಿಗೆ ಅಲ್ಲ: ಮೊಯ್ಲಿ

    ನಾಲ್ಕು ತಲೆಮಾರಿಗೆ ಬೇಕಾಗುವಷ್ಟು ಸಂಪಾದನೆ ಮಾಡಿದ್ದಾರೆ ಅಂತ ಹೇಳಿರೋದು ಕಾಂಗ್ರೆಸ್ಸಿಗರಿಗೆ ಅಲ್ಲ: ಮೊಯ್ಲಿ

    ತುಮಕೂರು: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು, ನಾಲ್ಕು ತಲೆಮಾರಿಗೆ ಬೇಕಾಗುವಷ್ಟು ಸಂಪಾದನೆ ಮಾಡಿದ್ದಾರೆ ಎಂದು ಹೇಳಿರೋದು ಕಾಂಗ್ರೆಸ್ಸಿಗರಿಗೆ ಅಲ್ಲ ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ ಸಮರ್ಥಿಸಿಕೊಂಡಿದ್ದಾರೆ.

    ಕಾಂಗ್ರೆಸ್ ಪ್ರತಿಭಟನೆಯಲ್ಲಿ ಭಾಗಿಯಾಗಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ ರಮೇಶ್ ಕುಮಾರ್ ವಿವಾದಾತ್ಮಕ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರ ಹೇಳಿಕೆಗೆ ಅವರೇ ಸ್ಪಷ್ಟೀಕರಣ ಕೊಟ್ಟಿದ್ದಾರೆ. ನಾಲ್ಕು ತಲೆಮಾರಿಗೆ ಬೇಕಾಗುವಷ್ಟು ಸಂಪಾದನೆ ಮಾಡಿದ್ದಾರೆ ಎಂದು ಹೇಳಿರೋದು ಕಾಂಗ್ರೆಸ್ಸಿಗರಿಗೆ ಅಲ್ಲ. ಬದಲಾಗಿ ಕಾಂಗ್ರೆಸ್ ಆಡಳಿತದಲ್ಲಿ ಅಭಿವೃದ್ಧಿಯ ಫಲವನ್ನ ಅನುಭವಿಸಿದ್ದ ದೇಶದ ಜನರಿಗೆ ಹೇಳಿದ್ದು. ಅವರು ನಮ್ಮ ಶ್ರೇಷ್ಠ ನಾಯಕರು. ಅದರ ಬಗ್ಗೆ ನಾನೇನು ಮಾತನಾಡಲ್ಲ ಎಂದು ತಿಳಿಸಿದರು. ಇದನ್ನೂ ಓದಿ:  3-4 ತಲೆಮಾರಿಗೆ ಆಗುವಷ್ಟು ಮಾಡಿಕೊಂಡಿದ್ದೇವೆ, ಈಗ ಋಣ ತೀರಿಸುವ ಸಮಯ ಬಂದಿದೆ: ರಮೇಶ್ ಕುಮಾರ್

    ನಾನು ಸಿಎಂ ಆಕಾಂಕ್ಷಿ ಅಲ್ಲ. ನಾನು ಮುಖ್ಯಮಂತ್ರಿ ಆಗಿದ್ದೀನಿ,ಕೇಂದ್ರ ಸಚಿವ ಆಗಿದ್ದೀನಿ. ನನಗೆ ತೃಪ್ತಿ ಇದೆ. ಕಾಂಗ್ರೆಸ್ಸನ್ನು ಬಲಪಡಿಸೋ ಕೆಲಸ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಅವರು ಮಾಡಬೇಕು. ಸಿಎಂ ಆಕಾಂಕ್ಷಿಗಳ ಬಗ್ಗೆ ಈಗ ಚರ್ಚೆ ಏನಿಲ್ಲ. 2023ಕ್ಕೆ ಕಾಂಗ್ರೆಸ್ ಖಂಡಿತಾ ಅಧಿಕಾರಕ್ಕೆ ಬರುತ್ತೆ. ಹೈಕಮಾಂಡ್ ಹಾಗೂ ಶಾಸಕರು ಯಾರನ್ನ ಸೂಚಿಸುತ್ತಾರೆ ಅವರು ಸಿಎಂ ಆಗ್ತಾರೆ ಎಂದು ಹೇಳಿದರು.

    Live Tv
    [brid partner=56869869 player=32851 video=960834 autoplay=true]

  • ಸಾರ್ವಜನಿಕವಾಗಿ ಕಾರಿಗೆ ಅಲ್ಲ, ಅವರ ಮನೆಗೆ ಬೆಂಕಿ ಹಾಕಿಕೊಳ್ಳಬೇಕು – ಕಾಂಗ್ರೆಸ್‍ಗೆ ಆರಗ ತಿರುಗೇಟು

    ಸಾರ್ವಜನಿಕವಾಗಿ ಕಾರಿಗೆ ಅಲ್ಲ, ಅವರ ಮನೆಗೆ ಬೆಂಕಿ ಹಾಕಿಕೊಳ್ಳಬೇಕು – ಕಾಂಗ್ರೆಸ್‍ಗೆ ಆರಗ ತಿರುಗೇಟು

    ಬೆಂಗಳೂರು: ಬೆಂಕಿ ಇಡುವುದು ಕಾಂಗ್ರೆಸ್ ಸಂಸ್ಕೃತಿ ತೋರಿಸುತ್ತದೆ ಎಂದು ಕಾಂಗ್ರೆಸ್ ವಿರುದ್ಧ ಗೃಹ ಸಚಿವ ಆರಗ ಜ್ಞಾನೇಂದ್ರ ಆಕ್ರೋಶ ಹೊರ ಹಾಕಿದ್ದಾರೆ.

    ಗುರುವಾರ ಕಾಂಗ್ರೆಸ್ ಪ್ರತಿಭಟನೆ ವೇಳೆ ಕಾರುಗಳಿಗೆ ಬೆಂಕಿ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ಅವರು, ಇದು ಕಾಂಗ್ರೆಸ್ ಸಂಸ್ಕೃತಿ ತೋರಿಸುತ್ತದೆ. ಪೊಲೀಸರು ಈಗಾಗಲೇ ಕೆಲವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಯಾರು ಕಾರಿಗೆ ಬೆಂಕಿ ಹಾಕಿದ್ದಾರೆ ನೋಡಬೇಕು. ಸಾರ್ವಜನಿಕವಾಗಿ ಹೀಗೆ ಬೆಂಕಿ ಇಡುವುದು ಸರಿನಾ? ನಮ್ಮ ಕಾರಿಗೆ ನಾವು ಬೆಂಕಿ ಹಾಕಿದ್ದೇವೆ ಅಂತ ಹೇಳಬಹುದು. ಹಾಗಾದರೆ ಅವರ ಮನೆಗೆ ಬೆಂಕಿ ಹಾಕಿಕೊಳ್ಳಬೇಕು. ಸಾರ್ವಜನಿಕ ಸ್ಥಳದಲ್ಲಿ ಬೆಂಕಿ ಹಾಕುವುದಲ್ಲ ಅಂತ ಕಿಡಿಕಾರಿದರು. ಇದು ಯಾವ ರೀತಿ ಪ್ರತಿಭಟನೆ. ಕಾಂಗ್ರೆಸ್ ಅವರಿಗೆ ನಾಚಿಕೆಯಾಗಬೇಕು. ಇಷ್ಟು ವರ್ಷ ಸರ್ಕಾರ ಮಾಡಿದ್ದಾರೆ. ಹೇಗೆ ಪ್ರತಿಭಟನೆ ಮಾಡಬೇಕು ಅಂತ ಗೊತ್ತಿಲ್ಲವಾ? ಸಾರ್ವಜನಿಕವಾಗಿ ಅಸಹ್ಯ ಆಗುವ ರೀತಿ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

    ಕಾಂಗ್ರೆಸ್ ಪ್ರತಿಭಟನೆ ವೇಳೆ ಮಾಜಿ ಸಚಿವ ರಮೇಶ್ ಕುಮಾರ್ 3-4 ತಲೆಮಾರಿಗೆ ಆಗುವಷ್ಟು ಮಾಡಿದ್ದೇವೆ ಎಂಬ ಹೇಳಿಕೆ ಕುರಿತಂತೆ ಮಾತನಾಡಿದ ಅವರು, ರಮೇಶ್ ಕುಮಾರ್ ಆಗಾಗ ಇಂತಹ ಸತ್ಯ ಹೇಳುತ್ತಾರೆ. ಇಂತಹ ಸತ್ಯ ಹೇಳುವುದಕ್ಕೆ ರಮೇಶ್ ಕುಮಾರ್‌ಗೆ ಮಾತ್ರ ಸಾಧ್ಯ. ನಾನು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಅಂತ ಲೇವಡಿ ಮಾಡಿದರು. ಇದನ್ನೂ ಓದಿ: ನನ್ನ ಬ್ಯಾಗ್‍ನಲ್ಲಿ ಬಾಂಬ್ ಇದೆ ಎಂದು ವಿಮಾನದಲ್ಲಿ ರಂಪಾಟ ಮಾಡಿದ ಪ್ರಯಾಣಿಕ – ಬೆಚ್ಚಿಬಿದ್ದ ಸಹಪ್ರಯಾಣಿಕರು

    ದೇಶದ ಸಂಪತ್ತನ್ನು ಕಾಂಗ್ರೆಸ್ ಅವರು ಲೂಟಿ ಮಾಡಿದ್ದಾರೆ. ಇದಕ್ಕೆ ರಮೇಶ್ ಕುಮಾರ್ ಹೇಳಿಕೆಯೇ ಸಾಕ್ಷಿ. ಕಾಂಗ್ರೆಸ್ ಅವರು ದೇಶದ ಜನರ ಕ್ಷಮೆ ಕೇಳಬೇಕು. ದೇಶದ ಮುಂದೆ ಪಶ್ಚಾತಾಪ ಪಡಬೇಕು. ತಲೆಮಾರುಗಟ್ಟಲೆ ಕೂತು ತಿನ್ನುವುದಕ್ಕೆ ಮಾಡಿದ ಹಣವನ್ನು ಇವರು ಕಕ್ಕಬೇಕು. ಈ ದೇಶ ಲೂಟಿ ಮಾಡಿದ್ದಾರೆ. ಲೂಟಿ ಮಾಡಿದ ಹಣ ದೇಶದ ಖಜಾನೆಗೆ ಮತ್ತೆ ತುಂಬಬೇಕು. ಕಾಂಗ್ರೆಸ್ ಅವರು ವಿಚಿತ್ರವಾಗಿ ಆಟ ಆಡುತ್ತಿದ್ದಾರೆ. ಸೋನಿಯಾ ಗಾಂಧಿ ಕುಟುಂಬ ಸಂವಿಧಾನ, ಕಾನೂನಿನ ಅಡಿ ಇರುವವರು. ಅವರನ್ನು ವಿಚಾರಣೆಗೆ ಕರೆಯುವುದು ತಪ್ಪಾ? ಇವರೇನು ಕಾನೂನಿಗೆ ಅತೀತರಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಕೋವಿಡ್ ಫೈಲ್ಸ್ ಸಿನಿಮಾ ಘೋಷಣೆ ಮಾಡಿದ ರಾಮ್ ಗೋಪಾಲ್ ವರ್ಮಾ

    ಸಾರ್ವಜನಿಕರಿಗೊಂದು ಕಾನೂನು ಈ ಕುಟುಂಬಕ್ಕೆ ಒಂದು ಕಾನೂನು ಇದೆಯಾ? ಕಾನೂನು ಮುಂದೆ ಎಲ್ಲರೂ ಒಂದೆ. ತಪ್ಪು ಮಾಡಿದರೆ ಜೈಲಿಗೆ ಹೋಗುತ್ತಾರೆ. ಇಲ್ಲ ಅಂದರೆ ರಿಲೀಸ್ ಆಗುತ್ತಾರೆ. ವಿಚಾರಣೆ ಮಾಡುವ ಹಕ್ಕು ಪೊಲೀಸರು, ಇಡಿಗೆ ಅಧಿಕಾರ ಇದೆ. ಇವರ ಸರ್ಕಾರ ಇದ್ದಾಗ ಎಷ್ಟು ಜನರ ವಿಚಾರ ಮಾಡಿದ್ದಾರೆ ಎಲ್ಲರಿಗೂ ಗೊತ್ತಿದೆ. ಇಂತಹ ಕೀಳು ಮಟ್ಟದ ಹೋರಾಟ ಸರಿಯಲ್ಲ. ಇಂತಹ ಪ್ರತಿಭಟನೆ ಮಾಡಿ ಜನರ ಮುಂದೆ ಕಾಂಗ್ರೆಸ್ ಬೆತ್ತಲೆ ಆಗುತ್ತಿದ್ದಾರೆ ಅಂತ ಕಿಡಿಕಾರಿದರು.

    Live Tv
    [brid partner=56869869 player=32851 video=960834 autoplay=true]

  • ಭ್ರಷ್ಟಾಚಾರದ ಹೆಮ್ಮರವೊಂದಕ್ಕೆ ಕೊಡಲಿ ಪೆಟ್ಟು ಬಿದ್ದಿದ್ದಕ್ಕೆ ಬೀದಿಗಿಳಿದಿದ್ದಾರೆ: ಬಿಜೆಪಿ

    ಭ್ರಷ್ಟಾಚಾರದ ಹೆಮ್ಮರವೊಂದಕ್ಕೆ ಕೊಡಲಿ ಪೆಟ್ಟು ಬಿದ್ದಿದ್ದಕ್ಕೆ ಬೀದಿಗಿಳಿದಿದ್ದಾರೆ: ಬಿಜೆಪಿ

    ಬೆಂಗಳೂರು: ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಟ್ವೀಟ್ ವಾರ್ ಜೋರಾಗಿ ನಡೆಯುತ್ತಿದೆ. ಇಂದು ಸಹ ಕಾಂಗ್ರೆಸ್ ನಾಯಕ ರಮೇಶ್ ಕುಮಾರ್ ವಿರುದ್ಧ ಬಿಜೆಪಿ ಟ್ವಿಟ್ಟರ್‌ನಲ್ಲಿ ಆಕ್ರೋಶ ಹೊರಹಾಕಿದೆ.

    ಸೋನಿಯಾ ಗಾಂಧಿ ಅವರನ್ನು ಇಡಿ ವಿಚಾರಣೆಗೆ ಸಮನ್ಸ್ ನೀಡಿದ್ದನ್ನು ಖಂಡಿಸಿ ಕಾಂಗ್ರೆಸ್ ನಡೆಸುತ್ತಿರುವ ಬೃಹತ್ ಪ್ರತಿಭಟನೆ ಹಿನ್ನೆಲೆಯಲ್ಲಿ ಮಾತನಾಡಿದ್ದ ರಮೇಶ್ ಕುಮಾರ್, ಈ ದೇಶ ಉಳಿಯಬೇಕು ಎಂದರೆ ಕಾಂಗ್ರೆಸ್ ಉಳಿಯಬೇಕು. ಎಲ್ಲಾ ಸಣ್ಣ ವಿಚಾರವನ್ನು ಬದಿಗೊತ್ತೋಣ. ಸೋನಿಯಾ ಗಾಂಧಿಗೆ ನೈತಿಕವಾಗಿ ಸಮಾಧಾನವಾಗಬೇಕು. ಆಗ ಮಾತ್ರ ನಾವು ತಿನ್ನುವ 2 ಹೊತ್ತಿನ ಊಟ ಸಾರ್ಥಕ ಆಗುತ್ತದೆ. ನೆಹರೂ, ಇಂದಿರಾ, ಸೋನಿಯಾ ಹೆಸರಲ್ಲಿ 3-4 ತಲೆಮಾರಿಗೆ ಆಗುವಷ್ಟು ಮಾಡಿಕೊಂಡಿದ್ದೇವೆ. ಈ ಹಿನ್ನೆಲೆಯಲ್ಲಿ ಈ ಕಿಂಚಿತ್ತು ತ್ಯಾಗಕ್ಕೂ ನಾವು ತಯಾರಾಗದೇ ಹೋದರೆ ನಾವು ತಿನ್ನುವ ಅನ್ನಕ್ಕೆ ಹುಳ ಬೀಳುತ್ತದೆ ಎಂದಿದ್ದರು.

    ರಮೇಶ್ ಕುಮಾರ್ ವೀಡಿಯೋವನ್ನು ಅಪ್ಲೋಡ್ ಮಾಡಿದ ಕರ್ನಾಟಕ ಬಿಜೆಪಿ ಕಾಂಗ್ರೆಸ್ ವಿರುದ್ಧ ಸರಣಿ ಟ್ವೀಟ್ ಮಾಡಿ ಕಿಡಿಕಾರಿದೆ.

    ಟ್ವೀಟ್‍ನಲ್ಲಿ ಏನಿದೆ?
    ಕಾನೂನನ್ನು ಕಾಲಕಸ ಮಾಡಿಕೊಂಡಿರುವ ಕಾಂಗ್ರೆಸ್‍ಗೆ ಬಿಜೆಪಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಕ್ಲೀನ್‍ಚಿಟ್ ಸಿಕ್ಕಿದ್ದು ಕಂಡು ಕೆಂಡದ ಮೇಲೆ ಕೂತಂತಾಗಿದೆ. ಈ ಎಡಬಿಡಂಗಿಗಳು ‘ಮೇಟಿ ಪ್ರಕರಣ’ದಲ್ಲಿ ಎಫ್‍ಐಆರ್ ಕೂಡ ಹಾಕದೆ ಬಿ-ರಿಫೋರ್ಟ್ ಕೊಟ್ಟಿದ್ದರು. ಈ ಜಾಣಮರೆವು ನಾಚಿಕೆಗೇಡಲ್ಲದೇ ಬೇರೇನು? ಬಿಜೆಪಿ ಎಂದಿಗೂ ಕಾನೂನಿಗೆ ಬೆಲೆ ಕೊಡುತ್ತದೆ. ಇದನ್ನೂ ಓದಿ: ಇಡಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ – ಬ್ಯಾರಿಕೇಡ್ ಮೇಲಿಂದ ಹಾರಿದ ಡಿಕೆಶಿ ವಶ 

    3, 4 ತಲೆಮಾರಿಗೆ ಆಗುವಷ್ಟು ಮಾಡಿಕೊಂಡಿದ್ದೇವೆ. ಅವರ ಋಣ ಸಂದಾಯ ಮಾಡಬೇಕಿದೆ! ನಕಲಿ ಗಾಂಧಿ ಕುಟುಂಬಕ್ಕಾಗಿ ಮಾಡಿದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ನಾಯಕ ರಮೇಶ್ ಕುಮಾರ್ ಆಡಿದ ಮಾತುಗಳಿವು.

    60 ವರ್ಷಕ್ಕೂ ಹೆಚ್ಚು ಕಾಲ ದೇಶವಾಳಲು ಅವಕಾಶ ನೀಡಿದ ಜನತೆಯ ಋಣ ಇವರಿಗಿಲ್ಲ, ಇಟೆಲಿಯಿಂದ ಬಂದವರಿಗೆ ಎಂತಹಾ ನಿಷ್ಠೆ? ಬಡತನ ನಿರ್ಮೂಲನೆಗೆ ಮೀಸಲಿಟ್ಟ ಪ್ರತಿ ಒಂದು ರೂಪಾಯಿಯಲ್ಲಿ, 15 ಪೈಸೆ ಮಾತ್ರ ಬಡವರಿಗೆ ತಲುಪುತ್ತದೆ ಎಂದು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹೇಳಿದ್ದ ಮಾತಿನ ಮರ್ಮ ಈಗ ಅರಿವಾಗುತ್ತಿದೆ. ಮಿಕ್ಕ 85 ಪೈಸೆಯನ್ನು ಕಾಂಗ್ರೆಸ್ ನಾಯಕರ ನಾಲ್ಕು ತಲೆಮಾರಿಗೆ ಇಟ್ಟಿದ್ದೇ?

    ಋಣ ಸಂದಾಯ ಎಂದರೆ ಏನು? ಈ ದೇಶದ ಜನತೆಗೆ ನಕಲಿ ಗಾಂಧಿ ಕುಟುಂಬ ತಮ್ಮ ಮನೆಯಿಂದ ಏನನ್ನೂ ಕೊಟ್ಟಿಲ್ಲ. ಅವರಿಗೆ ಎಲ್ಲವೂ ಸಂದಾಯವಾದದ್ದು ಈ ದೇಶದಿಂದಲೇ, ಆದರೆ ಅಂತಿಮವಾಗಿ ನಕಲಿ ಗಾಂಧಿ ಕುಟುಂಬ ದೇಶಕ್ಕೆ ಮಾಡಿದ್ದು ಅನ್ಯಾಯ ಮಾತ್ರ.

    ಸಂವಿಧಾನದ ಬಗ್ಗೆ ಭಾರೀ ಜ್ಞಾನ ಹೊಂದಿರುವ ರಮೇಶ್ ಕುಮಾರ್ ಕೂಡಾ ನಕಲಿ ಗಾಂಧಿ ಕುಟುಂಬವನ್ನು ಸಂವಿಧಾನಕ್ಕೆ ಅತೀತರನ್ನಾಗಿಸಲು ಯತ್ನಿಸುತ್ತಿದ್ದಾರೆ. ದೇಶದ ಆಸ್ತಿ ಕಬಳಿಸಿದ ವ್ಯಕ್ತಿಗಳನ್ನು ಭಾವನಾತ್ಮಕ ವಿಚಾರಗಳ ಮೂಲಕ ರಕ್ಷಿಸಲು ಹೊರಟಿದ್ದೇಕೆ? ನಿಮ್ಮ ಋಣ ಸಂದಾಯ ಮಾಡಿ, ಆದರೆ ಆ ಭಾರವನ್ನು ದೇಶದ ಮೇಲೆ ಹೊರಿಸಬೇಡಿ. ಇದನ್ನೂ ಓದಿ: ಸಿದ್ದರಾಮಯ್ಯ ನನ್ನನ್ನು ಕಾಂಗ್ರೆಸ್‍ಗೆ ಕರೆದಿಲ್ಲ, ಬಿಜೆಪಿಗೆ ಹೋಗಬೇಡ ಅಂದಿದ್ದಾರೆ: ಜಿಟಿಡಿ

    ರಾಜ್ಯ ಸರ್ಕಾರದ ಮೇಲೆ 40% ಆರೋಪ ಮಾಡುವ ಕಾಂಗ್ರೆಸ್ ಪಕ್ಷ, ಭ್ರಷ್ಟಾಚಾರದ ಹೆಮ್ಮರವೊಂದಕ್ಕೆ ಕೊಡಲಿ ಪೆಟ್ಟು ಬಿದ್ದಾಗ ಬೀದಿಗಿಳಿದಿದೆ. ನಾಲ್ಕು ತಲೆಮಾರಿಗಾಗುವಷ್ಟು ಆಸ್ತಿ ಮಾಡಿಕೊಂಡವರು ಈಗ ಭ್ರಷ್ಟಾಚಾರದ ಬಗ್ಗೆ ಪ್ರವಚನ ಮಾಡುತ್ತಿರುವುದು ಹಾಸ್ಯಾಸ್ಪದವಲ್ಲವೇ?

    ಭಾರತ್ ಜೋಡೋ ಎಂಬ ನಾಟಕ ಹೆಣೆದಿರುವ ಕಾಂಗ್ರೆಸ್ಸಿಗರ ನಿಜ ಬಣ್ಣ ಈಗ ಬಯಲಾಗಿದೆ. ನಕಲಿ ಗಾಂಧಿ ಕುಟುಂಬದ ಅಕ್ರಮ ಸಂಪಾದನೆ ಅಳೆಯಲು, ನಾಲ್ಕು ತಲೆಮಾರಿಗೆ ಆಗುವಷ್ಟು ಮಾಡಿಟ್ಟುಕೊಂಡಿದ್ದೇವೆ ಎಂಬ ರಮೇಶ್ ಕುಮಾರ್ ಹೇಳಿಕೆಯೊಂದೇ ಸಾಕು. ನಾಲ್ಕು ತಲೆಮಾರಿನವರಿಗೂ ಬೇಕಾದಷ್ಟು ಮಾಡಿದ್ದು ಹೇಗೆ ಎಂಬುದರ ಲೆಕ್ಕ ಕೊಡುವಿರಾ? ಎಂದು ಕಿಡಿಕಾರಿದೆ.

    Live Tv
    [brid partner=56869869 player=32851 video=960834 autoplay=true]

  • 3-4 ತಲೆಮಾರಿಗೆ ಆಗುವಷ್ಟು ಮಾಡಿಕೊಂಡಿದ್ದೇವೆ, ಈಗ ಋಣ ತೀರಿಸುವ ಸಮಯ ಬಂದಿದೆ: ರಮೇಶ್ ಕುಮಾರ್

    3-4 ತಲೆಮಾರಿಗೆ ಆಗುವಷ್ಟು ಮಾಡಿಕೊಂಡಿದ್ದೇವೆ, ಈಗ ಋಣ ತೀರಿಸುವ ಸಮಯ ಬಂದಿದೆ: ರಮೇಶ್ ಕುಮಾರ್

    ಬೆಂಗಳೂರು: ನೆಹರು, ಇಂದಿರಾ ಗಾಂಧಿ, ಸೋನಿಯಾ ಗಾಂಧಿ ಅವರ ಹೆಸರನ್ನು ಹೇಳಿಕೊಂಡು 3-4 ತಲೆಮಾರಿಗೆ ಆಗುವಷ್ಟು ಮಾಡಿಕೊಂಡಿದ್ದೇವೆ. ಈಗ ನಮಗೆ ಅದರ ಋಣ ತೀರಿಸುವ ಸಮಯ ಬಂದಿದೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

    ಸೋನಿಯಾ ಗಾಂಧಿ ಅವರನ್ನು ಇಡಿ ವಿಚಾರಣೆಗೆ ಸಮನ್ಸ್ ನೀಡಿದ್ದನ್ನು ಖಂಡಿಸಿ ಕಾಂಗ್ರೆಸ್ ನಡೆಸುತ್ತಿರುವ ಬೃಹತ್ ಪ್ರತಿಭಟನೆ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಈ ದೇಶ ಉಳಿಯಬೇಕು ಎಂದರೆ ಕಾಂಗ್ರೆಸ್ ಉಳಿಯಬೇಕು. ಎಲ್ಲಾ ಸಣ್ಣ ವಿಚಾರವನ್ನು ಬದಿಗೊತ್ತೋಣ. ಸೋನಿಯಾ ಗಾಂಧಿಗೆ ನೈತಿಕವಾಗಿ ಸಮಾಧಾನವಾಗಬೇಕು. ಆಗ ಮಾತ್ರ ನಾವು ತಿನ್ನುವ 2 ಹೊತ್ತಿನ ಊಟ ಸಾರ್ಥಕ ಆಗುತ್ತದೆ. ನೆಹರು, ಇಂದಿರಾ, ಸೋನಿಯಾ ಹೆಸರಲ್ಲಿ 3-4 ತಲೆಮಾರಿಗೆ ಆಗುವಷ್ಟು ಮಾಡಿಕೊಂಡಿದ್ದೇವೆ. ಈ ಹಿನ್ನೆಲೆಯಲ್ಲಿ ಈ ಕಿಂಚಿತ್ತು ತ್ಯಾಗಕ್ಕೂ ನಾವು ತಯಾರಾಗದೇ ಹೋದರೆ ನಾವು ತಿನ್ನುವ ಅನ್ನಕ್ಕೆ ಹುಳ ಬೀಳುತ್ತದೆ ಎಂದರು.

    ಸೋನಿಯಾ ಗಾಂಧಿಗೆ ಇಡಿ ಸಮನ್ಸ್‌ ನೀಡಿದೆ. ಕಾಂಗ್ರೆಸ್ ಇಡೀ ದೇಶಾದ್ಯಂತ ಪ್ರತಿಭಟನೆ ಮಾಡುತ್ತಿದೆ. ಆದರೆ ಸೋನಿಯಾ ಗಾಂಧಿ ಕಾನೂನಿಗಿಂತ ದೊಡ್ಡವರಾ ಎಂದು ಕೆಲವರು ಪ್ರಶ್ನೆ ಎತ್ತುತ್ತಿದ್ದಾರೆ. ಇದಕ್ಕೆ ಮೊದಲು ಉತ್ತರಿಸುತ್ತೇನೆ ಎಂದ ಅವರು, ನಿಮ್ಮ ಪೂರ್ವಿಕರು ಆರ್‌ಎಸ್‍ಎಸ್‍ನವರು, ಹಿಂದೂ ಮಹಾಸಭಾದವ್ರು, ಜನಸಂಘದವ್ರು ಸ್ವಾತಂತ್ರ್ಯ ಹೋರಾಟದಲ್ಲಿ ಜೈಲಿಗೆ ಹೋಗಿದ್ದರಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಯುಪಿ ಸರ್ಕಾರಕ್ಕೆ 600 ಕೋಟಿ ಆಸ್ತಿ ದಾನ ಮಾಡಿದ ವೈದ್ಯ

    ಇಂದಿರಾಗಾಂಧಿ ಬಗ್ಗೆ ಮಾತಾಡುತ್ತಿದ್ದಾಗ ಗುಸುಗುಸು ಅನ್ನುತ್ತಿದ್ದ ಮುಖಂಡರನ್ನು ಗಮನಿಸಿ ಭಾಷಣ ಮಾಡುತ್ತಿರುವಾಗಲೇ ರಮೇಶ್ ಕುಮಾರ್ ಹೋಗ್ರಿ ಆ ಕಡೆ ಎಂದು ರೇಗಾಡಿದ್ದಾರೆ. ನೀವು ಮಾತಾಡೋದಾದರೆ ನಮ್ಮನ್ನೆಕೆ ಕರೆಯುತ್ತೀರಿ ಅವಿವೇಕಿಗಳು ಎಂದು ತರಾಟೆಗೆ ತೆಗೆದುಕೊಂಡರು. ಇದನ್ನೂ ಓದಿ: ರಾಜ್ಯಸಭಾ ಸದಸ್ಯರಾಗಿ ಕನ್ನಡದಲ್ಲೇ ಪ್ರಮಾಣವಚನ ಸ್ವೀಕರಿಸಿದ ವೀರೇಂದ್ರ ಹೆಗ್ಗಡೆ

    Live Tv
    [brid partner=56869869 player=32851 video=960834 autoplay=true]

  • ಪಠ್ಯ ಪರಿಷ್ಕರಣೆಯಿಂದಲೇ ಎಳೆ ಮಕ್ಕಳಿಗೆ ವಿಷ ಉಣಿಸುತ್ತಿದ್ದಾರೆ: ರಮೇಶ್ ಕುಮಾರ್

    ಪಠ್ಯ ಪರಿಷ್ಕರಣೆಯಿಂದಲೇ ಎಳೆ ಮಕ್ಕಳಿಗೆ ವಿಷ ಉಣಿಸುತ್ತಿದ್ದಾರೆ: ರಮೇಶ್ ಕುಮಾರ್

    ಚಿತ್ರದುರ್ಗ: ರಾಜ್ಯದಲ್ಲಿ ಪಠ್ಯಪುಸ್ತಕ ಪರಿಷ್ಕರಣೆಯಿಂದಲೇ ಬಿಜೆಪಿಯವರು ಎಳೆ ವಯಸ್ಸಿನ ಮಕ್ಕಳಿಗೆ ವಿಷ ಉಣಿಸುತ್ತಿದ್ದಾರೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದರು.

    ಪಠ್ಯಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ದಾರ್ಶನಿಕರಿಗೆ ಬಿಜೆಪಿ ಅಪಮಾನ ಮಾಡುತ್ತಿದೆ ಎಂಬ ಪ್ರಶ್ನೆಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬುದ್ಧ, ಬಸವಣ್ಣ, ಅಂಬೇಡ್ಕರ್ ಅವರ ವಿಚಾರ ಬೇಡ ಅಂದ್ರೆ ಮಕ್ಕಳಿಗೆ ಇನ್ನೇನು ಹೇಳುವುದು. ಜನರೇ ಮೌನವಾಗಿದ್ದಾಗ ಏನು ಮಾಡಲು ಸಾಧ್ಯವಿಲ್ಲ. ಆದ್ರೆ ಪಠ್ಯಪುಸ್ತಕ ಪರಿಷ್ಕರಣೆ ವಿರುದ್ಧ ಜನರು ಪ್ರತಿಭಟಿಸಿದಾಗ ಸರ್ಕಾರಕ್ಕೆ ಭಯ ಬರುತ್ತದೆ ಎಂದರು. ಇದನ್ನೂ ಓದಿ: ಪ್ರವಾಹ ಪೀಡಿತ ಅಸ್ಸಾಂ, ಮೇಘಾಲಯದ 253 ಜನರನ್ನ ರಕ್ಷಿಸಿದ IAF – ಮುಂದುವರಿದ ಶೋಧ ಕಾರ್ಯ

    TEXTBOOK

    ಇದೇ ವೇಳೆ ಮಹಾರಾಷ್ಟ್ರ ರಾಜಕೀಯ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿದ ಅವರು, ಸಮ್ಮಿಶ್ರ ಸರ್ಕಾರ ಇರುವ ಕಡೆಗಳಲ್ಲಿ ಬಿಜೆಪಿ ವಾಮಮಾರ್ಗದಿಂದ ಅಧಿಕಾರಕ್ಕೆ ಬರಲು ಯತ್ನಿಸುತ್ತಿದೆ. ಕರ್ನಾಟಕ ಆಯ್ತು, ಮಧ್ಯಪ್ರದೇಶ ಆಯ್ತು ಈಗ ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ವಾಮಮಾರ್ಗ ಹಿಡಿದು ಸರ್ಕಾರ ರಚಿಸಲು ಕಾರ್ಯಪ್ರವೃತವಾಗಿದೆ. ಸಮ್ಮಿಶ್ರ ಸರ್ಕಾರ ಇರುವ ಕಡೆಯೆಲ್ಲ ಆಪರೇಷನ್ ಕಮಲ ಮಾಡಿ ಸರ್ಕಾರ ನಡೆಸಲು ಮುಂದಾಗುತ್ತಿದೆ ಎಂದು ಆರೋಪಿಸಿದರು.

    ನಾವೇನು ಹೊಸದಾಗಿ ಹೇಳುವುದು ಬೇಕಾಗಿಲ್ಲ. ಜನರೇ ಸುಮ್ಮನಿರುವಾಗ ನಾವೇನು ಹೇಳುವುದು. ಜನ ಹೇಳಬೇಕು. ಜನರು ಪ್ರತಿಕ್ರಿಯೆ ನೀಡಬೇಕು. ನಾವು ಹೇಳಿದರೆ ಪಕ್ಷದ ಅಭಿಪ್ರಾಯವಾಗುತ್ತದೆ. ಸಹಜವಾಗಿ ನಾವು ಬೇರೆ ಪಕ್ಷದವರು ಸರಿಯಿಲ್ಲ ಎಂದು ಹೇಳಬಹುದು. ಆದರೆ ಜನರೇ ಇದಕ್ಕೆ ಪ್ರತಿಕ್ರಿಯೆ ನೀಡದೆ ಇದ್ದಾಗ ಏನು ಮಾಡುವುದು. ಪ್ರಜಾಪ್ರಭುತ್ವದಲ್ಲಿ ಜನಾಭಿಪ್ರಾಯವೇ ಅಂತಿಮವಾಗಿದ್ದಾಗ ಎಲ್ಲವನ್ನೂ ಜನರೇ ಹೇಳಬೇಕಾಗುತ್ತದೆ ಎಂದು ಕರೆ ನೀಡಿದರು. ಇದನ್ನೂ ಓದಿ: ಎಮರ್ಜೆನ್ಸಿ ವಿರೋಧಿಸಿ ಪ್ರತಿಭಟನೆ ಮಾಡ್ತಿದ್ದಾಗ ಪೊಲೀಸರನ್ನ ನೋಡಿ ಓಡಿ ಹೋಗಿದ್ವಿ: ಬೊಮ್ಮಾಯಿ

    Live Tv

  • ಪಠ್ಯ ಪುಸ್ತಕಗಳ ಮರು ಪರಿಷ್ಕರಣೆ ಮಾಡುವಂತೆ ಸಿಎಂಗೆ ರಮೇಶ್ ಕುಮಾರ್ ಪತ್ರ

    ಪಠ್ಯ ಪುಸ್ತಕಗಳ ಮರು ಪರಿಷ್ಕರಣೆ ಮಾಡುವಂತೆ ಸಿಎಂಗೆ ರಮೇಶ್ ಕುಮಾರ್ ಪತ್ರ

    ಕೋಲಾರ: ಪಠ್ಯ ಪುಸ್ತಕಗಳ ಮರು ಪರಿಷ್ಕರಣೆ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಪತ್ರ ಬರೆದಿದ್ದಾರೆ.

    BASAVARAJ BOMMAI

    ರೋಹಿತ್ ಚಕ್ರತೀರ್ಥರನ್ನು ಮರು ಪರಿಷ್ಕರಣಾ ಸಮಿತಿ ಅಧ್ಯಕ್ಷರನ್ನಾಗಿ ಮಾಡಿರುವುದು ನೋವಿನ ಸಂಗತಿ. ಮಹಾನ್ ಚೇತನ ಕುವೆಂಪು ಬಗ್ಗೆ ಅಗೌರವ ತೋರಿಸಿರುವ ಈ ವಿಕೃತರು ಸಮಿತಿಯ ಅಧ್ಯಕ್ಷರಾಗಿರುವುದು ಬೇಸರದ ವಿಷಯ ಎಂದು ಹೇಳಿದ್ದಾರೆ. ಇದನ್ನೂ ಓದಿ: ಯಾರಿಗೆ ದುಡ್ಡು ಜಾಸ್ತಿ ಇರುತ್ತೋ ರಾಜ್ಯಸಭೆ ಆರಿಸಿ ಬರ್ತಾರೆ: ಬಸವರಾಜ್ ಹೊರಟ್ಟಿ

    ಗಾಂಧೀಜಿಯನ್ನ ಬಲಿ ಪಡೆದ ದೇಶ ಭಕ್ತರಿಗೆ ಸಹಜವಾಗಿಯೇ ಕೇಶವ ಬಲಿರಾಮ್ ಹೆಗ್ಗಡೆರವರು ಸ್ವತಂತ್ರ್ಯ ಹೋರಾಟಗಾರರಾಗಿ ಕಾಣಿಸುವುದು ತಪ್ಪೇನಿಲ್ಲ. ಪ್ರಾಥಮಿಕ ಹಂತದ ಪಠ್ಯಪುಸ್ತಕದಲ್ಲಿ ವಿಷ ಪ್ರಸಾಹನ ಮಾಡಲು ಹೊರಟಿದ್ದಾರೆ. ಚಕ್ರತೀರ್ಥರಿಗೆ, ಚಕ್ರವರ್ತಿಗಳಿಗೆ, ಪ್ರತಾಪ ಸಿಂಹ ಅವರಿಗೆ ಜಗತ್ತಿನ ಇತಿಹಾಸದ ಅರಿವು ಇದಿಯೋ ಇಲ್ಲವೋ ಗೊತ್ತಿಲ್ಲ ಎಂದು ರಮೇಶ್ ಕುಮಾರ್ ತಿಳಿಸಿದ್ದಾರೆ.

    ಸಂವಿಧಾನದ ಆಶಯಗಳನ್ನ ಗೌರವಿಸುವ ದೃಷ್ಠಿಯಿಂದ ಮುಖ್ಯಮಂತ್ರಿಗಳು ಇತಿಶ್ರೀ ಹಾಡಬೇಕಿದೆ. ಹೀಗೆ ಹಲವು ವಿಚಾರಗಳ ಕುರಿತು ಪತ್ರದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

  • ಈಶ್ವರಪ್ಪ ರಾಜೀನಾಮೆ ಕೊಡುವುದು ಬೇಡ, ವಜಾಗೊಳಿಸಿ: ರಮೇಶ್ ಕುಮಾರ್

    ಈಶ್ವರಪ್ಪ ರಾಜೀನಾಮೆ ಕೊಡುವುದು ಬೇಡ, ವಜಾಗೊಳಿಸಿ: ರಮೇಶ್ ಕುಮಾರ್

    ಕೋಲಾರ: ಗ್ರಾಮೀಣಾಭಿವೃದ್ದಿ ಸಚಿವ ಈಶ್ವರಪ್ಪ ರಾಜೀನಾಮೆ ನೀಡುವುದು ಬೇಡ, ವಜಾಗೊಳಿಸಿ ಎಂದು ಕೋಲಾರದಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಆಗ್ರಹಿಸಿದ್ದಾರೆ.

    ಕೋಲಾರ ಜಿಲ್ಲಾಡಳಿತದಿಂದ ಹಮ್ಮಿಕೊಳ್ಳಲಾಗಿದ್ದ ಅಂಬೇಡ್ಕರ್ ಜಯಂತಿಯಲ್ಲಿ ಭಾಗಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜೀನಾಮೆ ಅನ್ನೋದು ಗೌರಯುತವಾದ ಪದ, ಲಾಲ್ ಬಹಾದ್ದೂರ್ ಶಾಸ್ತ್ರಿ ಅವರು ಕೂಡ ಈ ದೇಶದಲ್ಲಿ ರಾಜೀನಾಮೆ ಕೊಟ್ಟಿದ್ದಾರೆ. ರೈಲ್ವೆ ಅಪಘಾತವಾದಾಗ ಅಷ್ಟು ಜನ ಮೃತಪಟ್ಟಿದ್ದರಿಂದ ನೈತಿಕಹೊಣೆ ಹೊತ್ತು ರಾಜೀನಾಮೆ ಕೊಟ್ಟಿದ್ದರು ಎಂದರು. ಇದನ್ನೂ ಓದಿ: ಆಧಾರ್ ಕಾರ್ಡ್ ಇರೋರೆಲ್ಲ ಭಾರತೀಯರು: ವಚನಾನಂದ ಶ್ರೀ

    ಯಶೋದಮ್ಮ ದಾಸಪ್ಪನವರು ಮದ್ಯಪಾನ ನಿಷೇಧಕ್ಕೆ ಒತ್ತಾಯಿಸಿ ರಾಜೀನಾಮೆ ಕೊಟ್ಟಿದ್ದರು. ಅಷ್ಟು ಗೌರವಯುತವಾದ ಪದವನ್ನ ಇವರಿಗೆ ಬಳಸುವುದು ಬೇಡ. ಇವರು ರಾಜೀನಾಮೆ ಅಲ್ಲ, ಡಿಸ್ಮಿಸ್ ಆಗಬೇಕು ಎಂದು ಆಗ್ರಹಿಸಿದರು. ಈಶ್ವರಪ್ಪ ರಾಜೀನಾಮೆ ಕುರಿತು ರಾಜ್ಯಪಾಲರನ್ನು ಭೇಟಿ ಮಾಡಲಾಗಿದೆ. ಅದನ್ನ ಬಿಡಿ ಬಿಡಿಯಾಗಿ ಹೇಳುವ ಅವಶ್ಯಕತೆ ಇಲ್ಲ ಎಂದು ಹೇಳಿದರು.

    ದೇಶದಲ್ಲಿ ಕೋಮು ಗಲಭೆ ಸೃಷ್ಟಿಗೆ ನಾವು ಜೀವಂತವಿರುವ ವರೆಗೂ ಅವಕಾಶವಿಲ್ಲ. ರಾಜ್ಯದಲ್ಲಿ ಕೋಮು ಗಲಭೆ ಸೃಷ್ಟಿಗೆ ನಾವು ಬಿಡುವುದಿಲ್ಲ. ನಾವು ಕಳೆದು ಹೋದ ಮೇಲೆ ಏನಾಗುತ್ತೋ ಗೊತ್ತಿಲ್ಲ. ಮಧ್ಯೆ ಪ್ರದೇಶ, ಬಿಹಾರ, ರಾಜ್ಯಗಳಲ್ಲಿ ಸಾಮರಸ್ಯದಿಂದ ಬದುಕುತ್ತಿದ್ದಾರೆ ಎಂದರು. ಇದನ್ನೂ ಓದಿ: ಕಲಾವಿದನ ನಾಲಿಗೆಯಿಂದ ಅರಳಿತು ಅಂಬೇಡ್ಕರ್ ಚಿತ್ರ

    ಇನ್ನೂ ಯಾರು ಏನೇ ಪ್ರಯತ್ನ ಮಾಡಿದರು ಅಲ್ಪಸಂಖ್ಯಾತರು, ಧೀನ ದಲಿತರು, ಬಡವರನ್ನ ಗೌರವಯುತವಾಗಿ ಕರೆದುಕೊಂಡು ಹೋಗುತ್ತೇವೆ. ಪ್ರಾಣ ತ್ಯಾಗ ಮಾಡಲು ನಾವು ಮೊದಲು ನಿಂತಿರುತ್ತೇವೆ. ನಾವು ಸತ್ತರೆ ಅವರಿಗೇನಾದರು ತೊಂದರೆಯಾಗಬಹುದು. ನಾವು ಜೀವಂತವಿದ್ದರೆ ಅವರಿಗೆ ತೊಂದರೆಯಾಗುವುದಿಲ್ಲ ಎಂದು ಹೇಳಿದರು.

  • ಈಶ್ವರಪ್ಪ ರಾಜೀನಾಮೆ ನೀಡುವುದು ಬೇಡ: ಮಾಜಿ ಸ್ಪೀಕರ್ ರಮೇಶ್ ಕುಮಾರ್

    ಈಶ್ವರಪ್ಪ ರಾಜೀನಾಮೆ ನೀಡುವುದು ಬೇಡ: ಮಾಜಿ ಸ್ಪೀಕರ್ ರಮೇಶ್ ಕುಮಾರ್

    ಕೋಲಾರ: ಗ್ರಾಮೀಣಾಭಿವೃದ್ಧಿ ಸಚಿವ ಸ್ಥಾನಕ್ಕೆ ಈಶ್ವರಪ್ಪ ರಾಜೀನಾಮೆ ನೀಡುವುದು ಬೇಡ. ಅವರನ್ನು ಕೂಡಲೇ ವಜಾಗೊಳಿಸಬೇಕು ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಆಗ್ರಹಿಸಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ರಾಜೀನಾಮೆ ಅನ್ನೋದು ಗೌರವಯುತವಾದ ಪದ. ಲಾಲ್ ಬಹದ್ದೂರ್ ಶಾಸ್ತ್ರಿ ಕೂಡ ಈ ದೇಶದಲ್ಲಿ ರಾಜೀನಾಮೆ ಕೊಟ್ಟಿದ್ದಾರೆ. ರೈಲ್ವೇ ಅಪಘಾತವಾಗಿ ಅಷ್ಟೂ ಜನ ಸತ್ತಾಗ ರಾಜೀನಾಮೆ ಕೊಟ್ಟರು. ಯಶೋದಮ್ಮ ದಾಸಪ್ಪನವರು ಕೂಡ ರಾಜೀನಾಮೆ ಕೊಡ್ತಾರೆ. ಅಷ್ಟು ಗೌರವಯುತವಾದ ಪದವನ್ನು ಇವರಿಗೆ ಬಳಸುವುದು ಬೇಡ. ಇವರು ರಾಜೀನಾಮೆ ಕೊಡುವುದು ಬೇಡ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಬ್ಯಾರಿಕೇಡ್ ಹತ್ತಿ ಪೊಲೀಸರ ಮೇಲೆ ಡಿಕೆಶಿ ಜಂಪ್

    ಇವರನ್ನು ವಜಾಗೊಳಿಸಬೇಕು. ಈಗಾಗಲೆ ಈಶ್ವರಪ್ಪ ರಾಜೀನಾಮೆ ಕುರಿತು ರಾಜ್ಯಪಾಲರನ್ನು ಭೇಟಿ ಮಾಡಲಾಗಿದೆ. ಅದನ್ನು ಬಿಡಿ ಬಿಡಿಯಾಗಿ ಹೇಳುವ ಅವಶ್ಯಕತೆ ಇಲ್ಲ. ದೇಶದಲ್ಲಿ ಕೋಮು ಗಲಭೆ ಸೃಷ್ಟಿಗೆ ನಾವು ಜೀವಂತ ಇರುವವರೆಗೂ ಅವಕಾಶ ನೀಡಲ್ಲ. ರಾಜ್ಯದಲ್ಲಿ ಕೋಮು ಗಲಭೆ ಸೃಷ್ಟಿಗೆ ನಾವು ಬಿಡುವುದಿಲ್ಲ. ನಾವು ಕಳೆದು ಹೋದ ಮೇಲೆ ಏನಾಗುತ್ತೋ ಗೊತ್ತಿಲ್ಲ ಎಂದು ತಿಳಿಸಿದ್ದಾರೆ.

    ಮಧ್ಯೆ ಪ್ರದೇಶ, ಬಿಹಾರ ಬಿಡಿ ರಾಜ್ಯದಲ್ಲಿ ಸಾಮರಸ್ಯದಿಂದ ಬದುಕುತ್ತೇವೆ. ಯಾರು ಏನೇ ಪ್ರಯತ್ನ ಮಾಡಿದರೂ ಅಲ್ಪಸಂಖ್ಯಾತರು, ಧೀನದಲಿತರು, ಬಡವರನ್ನು ಗೌರವಯುತವಾಗಿ ಕರೆದುಕೊಂಡು ಹೋಗುತ್ತೇವೆ. ಪ್ರಾಣ ತ್ಯಾಗ ಮಾಡಲು ನಾವು ಮೊದಲು ನಿಂತಿರುತ್ತೇವೆ. ನಾವು ಸತ್ತರೆ ಅವರಿಗೇನಾದ್ರು ತೊಂದರೆಯಾಗಬಹುದು. ನಾವು ಜೀವಂತವಿದ್ದರೆ ಅವರಿಗೆ ತೊಂದರೆಯಾಗುವುದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಮನ ಭಜನೆ ಮಾಡೋರ ಹೃದಯ ಇಷ್ಟೊಂದು ಕಠೋರವಾಯ್ತಾ: ಲಕ್ಷ್ಮಿ ಹೆಬ್ಬಾಳ್ಕರ್