Tag: Ramesh Kumar

  • ಸದನದಲ್ಲಿಂದು ಆಡಿಯೋ, ವಿಡಿಯೋ ವಾರ್- ತನಿಖೆಗೆ ಸೂಚಿಸ್ತಾರಾ ಸ್ಪೀಕರ್ ರಮೇಶ್ ಕುಮಾರ್..?

    ಸದನದಲ್ಲಿಂದು ಆಡಿಯೋ, ವಿಡಿಯೋ ವಾರ್- ತನಿಖೆಗೆ ಸೂಚಿಸ್ತಾರಾ ಸ್ಪೀಕರ್ ರಮೇಶ್ ಕುಮಾರ್..?

    ಬೆಂಗಳೂರು: ಹುಬ್ಬಳ್ಳಿ ಸಮಾವೇಶದ ವೇಳೆ ಆಡಿಯೋ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಹೀಗಾಗಿ ಇಂದು ಈ ಬಗ್ಗೆ ಸದನದಲ್ಲಿ ಚರ್ಚೆ ನಡೆಯಲಿದ್ದು, ಸ್ಪೀಕರ್ ರಮೇಶ್ ಕುಮಾರ್ ಅವರ ಮುಂದಿನ ನಡೆಯ ಬಗ್ಗೆ ಭಾರೀ ಕುತೂಹಲ ಮೂಡಿದೆ.

    ಆಡಿಯೋದಲ್ಲಿ ಮಾತನಾಡಿದ್ದು ತಾನೇ ಎಂದು ಒಪ್ಪಿದ ಬಿಎಸ್‍ವೈ ಹೇಳಿದ್ದು ಹೀಗಾಗಿ ಬಿಎಸ್‍ವೈ ವಿರುದ್ಧ ದೋಸ್ತಿಗಳು ಎಸಿಬಿಗೆ ದೂರು ಕೊಡ್ತಾರಾ ಅಥವಾ ಬಿಎಸ್‍ವೈ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಪೀಕರ್‍ಗೆ ಸೂಚಿಸ್ತಾರಾ, ಸ್ಪೀಕರ್ ರಮೇಶ್ ಕುಮಾರ್ ಅವರು ಪ್ರಕರಣದ ತನಿಖೆಗೆ ಆದೇಶಿಸುತ್ತಾರಾ ಎಂಬುದು ಸದ್ಯದ ಕುತೂಹಲವಾಗಿದೆ. ಯಾಕಂದ್ರೆ ಆಡಿಯೋ ವಿಚಾರ ಕುರಿತಂತೆ ಭಾನುವಾರ ಸ್ಪೀಕರ್ ಅವರು ನ್ಯಾಯಸಮ್ಮತ ನಿರ್ಣಯ ಕೈಗೊಳ್ಳೋದಾಗಿ ತಿಳಿಸಿದ್ದರು. ಹೀಗಾಗಿ ಸ್ಪೀಕರ್ ನಿರ್ಧಾರದತ್ತ ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದಾರೆ.


    ಹಾಗಾದ್ರೆ ದೋಸ್ತಿಗಳು ಏನ್ ಮಾಡ್ಬೋದು..?:
    ವಿಧಾನಸಭೆಯಲ್ಲಿಂದು ದೋಸ್ತಿ ಸರ್ಕಾರ ಆಪರೇಷನ್ ಕಮಲ ಆಡಿಯೋ ಪ್ರಕರಣದ ಬಗ್ಗೆ ಗದ್ದಲ ಮಾಡಬಹುದು. ರಮೇಶ್ ಕುಮಾರ್ ಪ್ರಸ್ತಾಪಿಸಿದಾಗ ತನಿಖೆಯ ಆದೇಶ ಸ್ಪೀಕರ್ ವಿವೇಚನೆಗೆ ಬಿಡುವುದು. ಸ್ಪೀಕರ್ ಪ್ರಕರಣವನ್ನು ಎಸಿಬಿ ಸೇರಿದಂತೆ ಸೂಕ್ತ ಸಂಸ್ಥೆಗಳ ತನಿಖೆಗೆ ಒಪ್ಪಿಸಬಹುದು. ಹಕ್ಕು ಬಾದ್ಯತಾ ಸಮಿತಿ ಅಥವಾ ತನಿಖೆಗೆ ಸದನ ಸಮಿತಿ ರಚಿಸುವ ಅವಕಾಶವಿದೆ. ಒಂದು ವೇಳೆ ಸ್ಪೀಕರ್ ತನಿಖೆಗೆ ವಹಿಸದಿದ್ದರೆ ಸರ್ಕಾರವೇ ತನಿಖೆಗೆ ಸೂಚಿಸುವುದು. ಎಸಿಬಿ ತನಿಖೆಗೆ ಆದೇಶ ಮಾಡುವ ಮೂಲಕ ಬಿಎಸ್‍ವೈರನ್ನ ಇಕ್ಕಟ್ಟಿಗೆ ಸಿಲುಕಿಸೋದು. ಆಪರೇಷನ್ ಕಮಲದ ಆಡಿಯೋವನ್ನು ಎಫ್‍ಎಸ್‍ಎಲ್ ತನಿಖೆಗೆ ಒಪ್ಪಿಸುವುದು. ಬಿಜೆಪಿ ವಿಡಿಯೋ ಬಿಡುಗಡೆ ಮಾಡಿದ್ರೆ ಆಡಳಿತ ಪಕ್ಷವೂ ಕೂಡ ಗದ್ದಲಕ್ಕೆ ಇಳಿಯುವುದು.


    ಆಡಿಯೋ ವರ್ಸಸ್ ವಿಡಿಯೋ ಸಮರ:
    ಸದನದಲ್ಲಿಂದು ಬಿಎಸ್‍ವೈ ಆಡಿಯೋ ವರ್ಸಸ್ ಸಿಎಂ ವಿಡಿಯೋ ಸಮರ ನಡೆಯುತ್ತದೆ. ಆಪರೇಷನ್ ಕಮಲದ ಆಡಿಯೋಗೆ ವಿರುದ್ಧವಾಗಿ ಬಿಜೆಪಿ ವಿಡಿಯೋ ರಿಲೀಸ್ ಮಾಡಲಿದೆ. ಸಿಎಂ ಎಚ್‍ಡಿಕೆ ವಿಜುಗೌಡ ಬಳಿಕ 25 ಕೋಟಿ ಕೇಳಿದ ವಿಡಿಯೋ ಬಿಡುಗಡೆಯಾಗಲಿದೆ. ಈ ಮೂಲಕ ಸದನದಲ್ಲಿ ವಿಡಿಯೋ ಹಾಜರುಪಡಿಸಿ ಬಿಜೆಪಿ ತನಿಖೆಗೆ ಒತ್ತಾಯಿಸುವ ಸಾಧ್ಯತೆಗಳಿವೆ. ಒಟ್ಟಿನಲ್ಲಿ ವಿಧಾನಸಭೆ ಇಂದು ಆಡಿಯೋ, ವಿಡಿಯೋ ಫೈಟ್‍ಗೆ ಸಾಕ್ಷಿಯಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಾನು ಹಿಟ್ಲರ್ ಅಲ್ಲ, ಆಪರೇಷನ್ ಕಮಲದ ಬಗ್ಗೆ ಗೊತ್ತಿಲ್ಲ: ರಮೇಶ್‍ಕುಮಾರ್

    ನಾನು ಹಿಟ್ಲರ್ ಅಲ್ಲ, ಆಪರೇಷನ್ ಕಮಲದ ಬಗ್ಗೆ ಗೊತ್ತಿಲ್ಲ: ರಮೇಶ್‍ಕುಮಾರ್

    – ಆಡಿಯೋ ಕುರಿತು ನಾಳೆ ಸದನದಲ್ಲಿ ಚರ್ಚೆ
    – ನಮ್ಮನ್ನ ನೋಡಿ ಜನ ಪಕ್ಕಕ್ಕೆ ಉಗಿದು ಹೋಗಬಾರದು

    ರಾಯಚೂರು: ಆಪರೇಷನ್ ಕಮಲದ ಬಗ್ಗೆ ನನಗೆ ಗೊತ್ತಿಲ್ಲ. ನಾನು ಹಿಟ್ಲರ್ ಅಲ್ಲ. ಕಾನೂನು ಚೌಕಟ್ಟಿನಲ್ಲೇ ಕೆಲಸ ಮಾಡ್ತೀನಿ ಎಂದು ವಿಧಾನಸಭಾ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಪರೇಷನ್ ಕಮಲ ಆಡಿಯೋ ಕುರಿತಂತೆ ನಾಳೆ ಸದನದಲ್ಲಿ ಚರ್ಚೆ ಮಾಡುತ್ತೇನೆ. ಯಾರು ಮಾರಾಟ ಆಗುತ್ತಾರೋ, ಯಾರು ದುಡ್ಡು ಕೊಡುತ್ತಾರೋ ಗೊತ್ತಿಲ್ಲ. ಆಪರೇಷನ್ ಕಮಲದ ಬಗ್ಗೆ ನನಗೆ ಗೊತ್ತಿಲ್ಲ ಎಂದರು.

    ಪ್ರಸಕ್ತ ರಾಜಕೀಯ ಬೆಳವಣಿಗೆಗೆ ನೊಂದಿದ್ದೇನೆ. ಇನ್ನೊಬ್ಬರಿಗೆ ನೋವು ಕೊಟ್ಟು ಬದುಕಲು ನಾನು ಇಷ್ಟ ಪಡಲ್ಲ. ನಾವು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ನಮ್ಮನ್ನ ನೋಡಿ ಜನ ಪಕ್ಕಕ್ಕೆ ಉಗಿದು ಹೋಗಬಾರದು ಅಂತ ಬೇಸರ ವ್ಯಕ್ತಪಡಿಸಿದ ಅವರು, ಶಾಸಕರು ಸದನಕ್ಕೆ ಬರಲು ಆಗದಿದ್ರೆ ತಿಳಿಸಬೇಕು. ಗೌರವದಿಂದ ಸದನಕ್ಕೆ ಬರಬೇಕು ಎಂದು ಅವರಿಗೆ ತಿಳಿಯಬೇಕು. ಬರಲು ಆಗದಿದ್ದರೆ ಚುನಾವಣೆಗೆ ಯಾಕೆ ನಿಲ್ಲಬೇಕು ಎಂದು ಪ್ರಶ್ನಿಸಿದರು.

    ರಾಜ್ಯದ್ದು ಮಾತ್ರವಲ್ಲ ದೇಶದ ರಾಜಕೀಯವೇ ಹಾಳಾಗಿದೆ. ಎಲ್ಲ ಭ್ರಷ್ಟಾಚಾರಕ್ಕೆ ಚುನಾವಣೆಯೇ ಗಂಗೋತ್ರಿ. ಕಾಯ್ದೆಗಳಲ್ಲಿ ಸುಧಾರಣೆಗಳನ್ನು ತರಬೇಕು. ಆದ್ರೆ ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಜನ್ಮತಾಳಿದ ಮನುಷ್ಯನೇ ಕ್ರಮ ತೆಗೆದುಕೊಳ್ಳಲಿಲ್ಲ ಅಂತ ಪರೋಕ್ಷವಾಗಿ ಪ್ರಧಾನಿ ಮೋದಿಗೆ ರಮೇಶ್ ಕುಮಾರ್ ಇದೇ ವೇಳೆ ಟಾಂಗ್ ಕೊಟ್ಟರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶಾಸಕನ ಮಗನನ್ನು ಕಳಿಸಿಕೊಟ್ಟು ಕುತಂತ್ರ- ತಪ್ಪೊಪ್ಪಿಕೊಂಡ್ರು ಬಿಎಸ್‍ವೈ

    ಶಾಸಕನ ಮಗನನ್ನು ಕಳಿಸಿಕೊಟ್ಟು ಕುತಂತ್ರ- ತಪ್ಪೊಪ್ಪಿಕೊಂಡ್ರು ಬಿಎಸ್‍ವೈ

    – ಸೋಮವಾರ ಸಿಎಂ ಬಂಡವಾಳ ಬಿಚ್ಚಿಡ್ತೀನಿ ಅಂದ್ರು ಬಿಎಸ್‍ವೈ

    ಹುಬ್ಬಳ್ಳಿ: ಆಪರೇಷನ್ ಆಡಿಯೋ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಯೂಟರ್ನ್ ಹೊಡೆದಿದ್ದು, ಕುತಂತ್ರ ಮಾಡಿ ನನ್ನ ಬಳಿ ಶಾಸಕ ನಾಗನಗೌಡ ಪುತ್ರ ಶರಣಗೌಡರನ್ನು ಕಳಿಸಿಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್‍ವೈ, ನಾನು ಅವರ ಜೊತೆ ಮಾತನಾಡಿದ್ದು ನಿಜ. ಆದರೆ ಕೆಲ ಸತ್ಯಗಳನ್ನು ಮರೆ ಮಾಚಿದ್ದಾರೆ. ಕುಮಾರಸ್ವಾಮಿ ಥರ್ಡ್ ಗ್ರೇಡ್ ಪಾಲಿಟಿಕ್ಸ್ ಮಾಡ್ತಿದ್ದಾರೆ ಎಂದು ಹೇಳುವ ಮೂಲಕ ಬಿಎಸ್ ವೈ ಆಪರೇಷನ್ ಕಮಲ ನಡೆಸುತ್ತಿರುವ ಸತ್ಯವನ್ನು ಒಪ್ಪಿಕೊಂಡಿದ್ದಾರೆ. ಅಲ್ಲದೆ ಸೋಮವಾರ ಸಿಎಂ ಬಂಡವಾಳ ಬಿಚ್ಚಿಡ್ತೀನಿ ಎಂದು ಬಿಎಸ್‍ವೈ ಹೇಳಿದ್ದಾರೆ.  ಇದನ್ನೂ ಓದಿ: ಬಿಎಸ್‍ವೈ ಆಪರೇಷನ್ ಆಡಿಯೋ ನಿಜ- ಸಾಬೀತಾಗದಿದ್ರೆ ರಾಜಕೀಯದಿಂದ ನಿವೃತ್ತಿ

    ಆಡಿಯೋದಲ್ಲಿ ಸ್ಪೀಕರ್ ಸೇರಿದಂತೆ ನ್ಯಾಯಾಧೀಶರ ಹೆಸರು ಉಲ್ಲೇಖಿಸಿರುವ ಹಿನ್ನೆಲೆಯಲ್ಲಿ ಸ್ಪೀಕರ್ ರಮೇಶ್ ಕುಮಾರ್ ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಈಗಾಗಲೇ ದೂರು ನೀಡಿದ್ದಾರೆ. ದೂರು ಸ್ವೀಕರಿಸಿದ ಬಳಿಕ ಅಡ್ವೊಕೇಟ್ ಜನರಲ್ ಜೊತೆ ಹಾಗೂ ಹಿರಿಯ ಪೋಲಿಸ್ ಅಧಿಕಾರಿಗಳ ಜೊತೆ ಸ್ಪೀಕರ್ ಚರ್ಚೆ ನಡೆಸಿ ಸೋಮವಾರದ ಒಳಗಡೆ ಅಂತಿಮ ತೀರ್ಮಾನಕ್ಕೆ ಬರಲಿದ್ದಾರೆ ಎನ್ನಲಾಗಿತ್ತು. ಆದ್ರೆ ಇದೀಗ ಆಡಿಯೋ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸ್ಪೀಕರ್ ಈ ಸಂಬಂಧ ದೂರು ದಾಖಲಿಸುವ ಸಾಧ್ಯತೆ ಇದೆ. ಸದನ ಸಮಿತಿ ರಚಿಸಿ ಆಡಿಯೋ ಪ್ರಕರಣದ ಕುರಿತು ತನಿಖೆಗೆ ಆದೇಶ ಸಾಧ್ಯತೆಗಳಿವೆ. ಇದನ್ನೂ ಓದಿ: ಆಡಿಯೋದಲ್ಲಿರೋದು ಬಿಎಸ್‍ವೈ ಧ್ವನಿಯೆಂದು ನಾನು ಹೇಳಿಲ್ಲ- ಎಚ್‍ಡಿಕೆ

    ಶನಿವಾರವಷ್ಟೇ ಧರ್ಮಸ್ಥಳದಲ್ಲಿ ನಡೆದ ಮಹಾಮಸ್ತಾಕಾಭಿಷೇಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಎಚ್‍ಡಿ ಕುಮಾರಸ್ವಾಮಿಯವರು, ಬಜೆಟ್ ಗೂ ಮುನ್ನ ತಾವು ಬಿಡುಗಡೆ ಮಾಡಿದ್ದ ಆಡಿಯೋ ಬಗ್ಗೆ ಮಾತನಾಡಿದ್ದರು. ಈ ವೇಳೆ ಆಡಿಯೋದಲ್ಲಿರುವುದು ಯಡಿಯೂರಪ್ಪ ಅವರದ್ದೇ ಧ್ವನಿಯಾಗಿದೆ. ಒಂದು ವೇಳೆ ಇದು ಸಾಬೀತಾಗದಿದ್ದರೆ ನಾನು ರಾಜಕೀಯ ನಿವೃತ್ತಿ ಪಡೆಯುವುದಾಗಿ ಹೇಳಿದ್ದರು. ಇದೀಗ ಮಂಜುನಾಥನ ಮುಂದೆ ನಿಂತು ಎಚ್‍ಡಿಕೆ ಮಾತನಾಡಿದ್ದಕ್ಕೆ ಬಿಎಸ್‍ವೈ ಬೆದರಿದ್ರಾ ಅನ್ನೋ ಪ್ರಶ್ನೆ ಮೂಡಿದ್ದು, ಪ್ರಕರಣದ ತನಿಖೆಗೆ ಬೆದರಿ ಯಡಿಯೂರಪ್ಪ ನಿಜ ಒಪ್ಪಿಕೊಂಡ್ರಾ ಅನ್ನೋ ಚರ್ಚೆ ರಾಜಕೀಯ ವಲಯದಲ್ಲಿ ಎದ್ದಿದೆ.  ಇದನ್ನೂ ಓದಿ: ನನ್ನಿಂದ ಅಪಚಾರವಾಗಿದೆ – ಧರ್ಮಸ್ಥಳದಲ್ಲಿ ಸಿಎಂ ಎಚ್‍ಡಿಕೆ

    ಬೆಂಗಳೂರಿನಲ್ಲಿ ಬಿಜೆಪಿ ಶಾಸಕರ ಸಭೆ ನಡೆಸಿ ರಾಯಚೂರಿಗೆ ತೆರಳಿದ್ದ ಬಿಎಸ್‍ವೈ ಮಧ್ಯರಾತ್ರಿ ದೇವದುರ್ಗದ ಐಬಿಯಲ್ಲಿ ಕುಳಿತು ಯಾದಗಿರಿಯ ಗುರುಮಿಠಕಲ್ ಶಾಸಕ ನಾಗನಗೌಡ ಅವರ ಮಗ ಶರಣಗೌಡ ಅವರಿಗೆ ಕರೆ ಮಾಡಿ ಐಬಿಗೆ ಬರಲು ಹೇಳಿ ಡೀಲ್ ನಡೆಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಇದನ್ನೂ ಓದಿ: ಅದು ನಕಲಿ ಆಡಿಯೋ, ಸಾಬೀತಾದರೆ ರಾಜಕೀಯ ನಿವೃತ್ತಿ – ಬಿಎಸ್‍ವೈ ಸವಾಲು

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 50 ಕೋಟಿಗೆ ಸ್ಪೀಕರ್ ಬುಕ್ – ಸದನ ಸಮಿತಿಯೋ? ಪೊಲೀಸ್ ತನಿಖೆಯೋ?

    50 ಕೋಟಿಗೆ ಸ್ಪೀಕರ್ ಬುಕ್ – ಸದನ ಸಮಿತಿಯೋ? ಪೊಲೀಸ್ ತನಿಖೆಯೋ?

    ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪನವರು ಮಾತನಾಡಿದ್ದಾರೆ ಎನ್ನಲಾದ ಆಡಿಯೋವೊಂದನ್ನು ಬಿಡುಗಡೆ ಮಾಡಿದ್ದ ಸಿಎಂ ಕುಮಾರಸ್ವಾಮಿ ಈಗ ಸ್ಪೀಕರ್ ರಮೇಶ್ ಕುಮಾರ್ ಅವರಲ್ಲಿ ದೂರು ನೀಡಿದ್ದಾರೆ.

    ಆಡಿಯೋದಲ್ಲಿ ಸ್ಪೀಕರ್ ಸೇರಿದಂತೆ ನ್ಯಾಯಾಧೀಶರ ಹೆಸರು ಉಲ್ಲೇಖಿಸಿರುವ ಹಿನ್ನೆಲೆಯಲ್ಲಿ ಸ್ಪೀಕರ್ ರಮೇಶ್ ಕುಮಾರ್‍ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ದೂರು ನೀಡಿದ್ದಾರೆ. ಈ ದೂರು ಸ್ವೀಕರಿಸಿದ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಈಗ ಏನು ಮಾಡಬೇಕು ಅನ್ನೋ ಚಿಂತೆ ಆರಂಭವಾಗಿದೆ. ದೂರಿನ ಮೇಲೆ ಸದನ ಸಮತಿ ರಚನೆ ಮಾಡಬೇಕೇ ಅಥವಾ ಪೋಲೀಸರಿಗೆ ತನಿಖೆ ನಡೆಸುವಂತೆ ಸೂಚನೆ ನೀಡಬೇಕೇ ಎನ್ನುವ ಗೊಂದಲದಲ್ಲಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ದೂರು ಸ್ವೀಕರಿಸಿದ ಬಳಿಕ ಅಡ್ವೊಕೇಟ್ ಜನರಲ್ ಜೊತೆ ಹಾಗೂ ಹಿರಿಯ ಪೋಲಿಸ್ ಅಧಿಕಾರಿಗಳ ಜೊತೆ ಸ್ಪೀಕರ್ ಚರ್ಚೆ ನಡೆಸಿ ಸೋಮವಾರದ ಒಳಗಡೆ ಅಂತಿಮ ತೀರ್ಮಾನಕ್ಕೆ ಬರಲಿದ್ದಾರೆ. ದೂರಿನ ಮೇಲೆ ಯಾವ ಕ್ರಮ ಕೈಗೊಳ್ಳಬೇಕು ಎನ್ನುವುದರ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಂಡು ಸದನಕ್ಕೆ ಮಾಹಿತಿ ನೀಡುವ ಸಾಧ್ಯತೆಯಿದೆ.

    ಬೆಂಗಳೂರಿನಲ್ಲಿ ಬಿಜೆಪಿ ಶಾಸಕರ ಸಭೆ ನಡೆಸಿ ರಾಯಚೂರಿಗೆ ತೆರಳಿದ್ದ ಬಿಎಸ್‍ವೈ ಮಧ್ಯರಾತ್ರಿ ದೇವದುರ್ಗದ ಐಬಿಯಲ್ಲಿ ಕುಳಿತು ಯಾದಗಿರಿಯ ಗುರುಮಠಕಲ್ ಶಾಸಕ ನಾಗನಗೌಡ ಅವರ ಮಗ ಶರಣಗೌಡ ಅವರಿಕೆ ಕರೆ ಮಾಡಿ ಐಬಿಗೆ ಬರಲು ಹೇಳಿ ಡೀಲ್ ನಡೆಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

    ನಿನ್ನ ತಂದೆಗೆ ವಯಸ್ಸಾಗಿದೆ. ಹೀಗಾಗಿ ನೀನು ಬಿಜೆಪಿಗೆ ಬಾ. ಬಳಿಕ ನಿನ್ನನ್ನು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವನನ್ನಾಗಿ ಮಾಡುತ್ತೇವೆ. ನೀನು ಸೀದಾ ಇಂದೇ ಮುಂಬೈಗೆ ಹೋಗು ಎಂದು ಶಾಸಕರ ಪುತ್ರ ಶರಣಗೌಡಗೆ ಆಫರ್ ನೀಡಿದ್ದಾರೆ. ಪೇಮೆಂಟ್ ಬಗ್ಗೆ ಯೋಚನೆ ಮಾಡಬೇಡ. ಸ್ಪೀಕರ್ ಅವರಿಗೂ 50 ಕೋಟಿ ರೂ. ಕೊಟ್ಟು ಬುಕ್ ಮಾಡಲಾಗಿದೆ. ಮೋದಿ ಹಾಗೂ ಅಮಿತ್ ಶಾಗೆ ಹೇಳಿ ಈಗಾಗಲೇ ಎಲ್ಲಾ ವ್ಯವಸ್ಥೆ ಆಗಿದೆ. ಹೀಗಾಗಿ ನಿನಗೆ ಖಾತೆ ಕೊಡ್ತೀವಿ ಎಷ್ಟು ಬೇಕಾದ್ರೂ ದುಡ್ಡು ಮಾಡ್ಕೋ. ನಮ್ಮ ಜೊತೆ ಈಗಾಗಲೇ 16 ಮಂದಿ ಶಾಸಕರಿದ್ದಾರೆ. ನೀನು ಬಂದ್ರೆ 17 ಆಗುತ್ತದೆ ಎಂದು ಬಿಜೆಪಿಯವರು ಆಫರ್ ನೀಡಿರುವುದಾಗಿ ಶರಣಗೌಡ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು.

    ಆಡಿಯೋದಲ್ಲೇನಿದೆ..?
    ಬಿಎಸ್‍ವೈ : ಫಾದರ್ ಏಜ್ ಏನು
    ಶಿರಣಗೌಡ : 78
    ಬಿಎಸ್‍ವೈ : ಮುಂದೆ ಏನಾದ್ರು ಬಂದ್ರೆ ನೀನೇ ನಿಲುತ್ತಿಯಾ
    ಶರಣಗೌಡ : ಏನೋ ನೀವು ಹೇಳಿದ ಹಾಗೆ ಸರ್ ಮುಂದಿನ ಪರಿಸ್ಥಿತಿ ನೋಡಬೇಕಲ್ವ ಸರ್
    ಬಿಎಸ್‍ವೈ : ಇನ್ನೇನು 4 ದಿನದಲ್ಲಿ ಎಲ್ಲಾ ಮುಗಿದು ಹೋಗುತ್ತೆ. ನಮ್ಮ ಸರ್ಕಾರ ಬರುತ್ತೆ ಮಂತ್ರಿಯಾಗ್ತಿರಾ. ಅಪ್ಪ ಬೇಡಾ ಅಂದ್ರೆ ನೀನೇ ಮಂತ್ರಿ ಆಗ್ತೀಯಾ
    ಶರಣಗೌಡ : ನಾನೊಬ್ಬನೆ ಬಂದ್ರೆ ಏನಾಗುತ್ತೆ ಅನ್ನೊ ಭಯ
    ಬಿಎಸ್‍ವೈ : ಒಂದು ವಿಷಯ ತಿಳ್ಕೋ ಹೇಗೂ ಎಲ್ಲ ನೀನೇ ನೋಡ್ಕೋಳೋದು ಬಾಂಬೆಗೆ ಬಾ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 4 ಅಲ್ಲ 40 ಶಾಸಕರು ರಾಜೀನಾಮೆ ಕೊಟ್ಟರೂ ತೆಗೆದುಕೊಳ್ಳುತ್ತೇನೆ: ರಮೇಶ್ ಕುಮಾರ್

    4 ಅಲ್ಲ 40 ಶಾಸಕರು ರಾಜೀನಾಮೆ ಕೊಟ್ಟರೂ ತೆಗೆದುಕೊಳ್ಳುತ್ತೇನೆ: ರಮೇಶ್ ಕುಮಾರ್

    ಕೋಲಾರ: ಬರೀ ನಾಲ್ಕು ಮಂದಿ ಅಲ್ಲ 40 ಮಂದಿ ಮೈತ್ರಿ ಸರ್ಕಾರದ ಶಾಸಕರು ರಾಜೀನಾಮೆ ಕೊಟ್ಟರೂ ತೆಗೆದುಕೊಳ್ಳುತ್ತೇನೆ ಮತ್ತು ಬುಧವಾರ ನಡೆದ ವಿಧಾನಸಭಾ ಬಜೆಟ್ ಅಧಿವೇಶನದಲ್ಲಿ ಗೈರಾದ ಶಾಸಕರು ಯಾರೂ ನನ್ನನ್ನು ಸಂಪರ್ಕಿಸಿಲ್ಲ ಎಂದು ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಎಂದಿನಂತೆ ತಮ್ಮದೇ ದಾಟಿಯಲ್ಲಿ ಹೇಳಿಕೆ ನೀಡಿದ್ದಾರೆ.

    ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಜನ್ನಪ್ಪನಹಳ್ಳಿ ಗ್ರಾಮದಲ್ಲಿ ಗಣೇಶನ ಮೂರ್ತಿ ಹಾಗೂ ಪುಷ್ಕರಣಿಯನ್ನು ರಮೇಶ್ ಕುಮಾರ್ ಅವರು ಉದ್ಘಾಟಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಶಾಸಕರು ರಾಜೀನಾಮೆ ನೀಡುವ ವಿಚಾರ ನನಗೇನು ಗೊತ್ತಿಲ್ಲ. ಅಧಿವೇಶನದಲ್ಲಿ ಗೈರಾದ ಶಾಸಕರ ಮೇಲೆ ಕ್ರಮಕೈಗೊಳ್ಳಲು ನಾನು ಯಾರು? ನಾಲ್ಕು ಅಲ್ಲ ನಲವತ್ತು ಮಂದಿ ಶಾಸಕರು ರಾಜೀನಾಮೆ ನೀಡಿದರೂ ನಾನು ತೆಗೆದುಕೊಳ್ಳಲು ಸಿದ್ಧವೆಂದು ಪರೋಕ್ಷವಾಗಿ ವಿರೋಧ ಪಕ್ಷಗಳಿಗೆ ಟಾಂಗ್ ನೀಡಿದ್ದಾರೆ.

    ಕಾಂಗ್ರೆಸ್ಸಿನ ಶಾಸಕ ಕಂಪ್ಲಿ ಗಣೇಶ್ ಬಗ್ಗೆ ಪ್ರತಿಕ್ರಿಯಿಸಿ, ಗಣೇಶ್ ಅವರನ್ನು ಬಂಧಿಸುವಂತೆ ಸೂಚನೆ ನೀಡಲು ನಾನು ಪೊಲೀಸ್ ಇಲಾಖೆಯ ಅಧಿಕಾರಿಯೇ? ನನಗೆ ಹೇಗೆ ಗೊತ್ತಿರುತ್ತದೆ ಅವರ ಬಗ್ಗೆ ಎಂದು ಹೇಳಿದ್ದಾರೆ.

    ಅಷ್ಟೇ ಅಲ್ಲದೆ ರಾಜ್ಯದಲ್ಲಿ ಆಗುತ್ತಿರುವ ರಾಜಕೀಯ ಬೆಳವಣಿಗೆಗಳ ಬಗ್ಗೆ ಕೇಳಿದಾಗ, ಊರಿನ ಜನರೆಲ್ಲ ಚೆನ್ನಾಗಿದ್ದಾರೆ. ಸರಿಯಾಗಿ ಮಳೆ, ಬೆಳೆ ಆದರೆ ಇನ್ನೂ ಚೆನ್ನಾಗಿರುತ್ತದೆ ಎನ್ನುತ್ತ ಪರೋಕ್ಷವಾಗಿ ರಾಜಕೀಯ ಬೆಳವಣಿಗೆ ಕುರಿತು ವ್ಯಂಗ್ಯವಾಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅತ್ತ ರೆಸಾರ್ಟ್​​ನಲ್ಲಿ ಕೈ ಶಾಸಕರು, ಇತ್ತ ಪತ್ನಿ ಜೊತೆ ಫುಲ್ ರಿಲ್ಯಾಕ್ಸ್ ಮೂಡ್‍ನಲ್ಲಿ ಸ್ಪೀಕರ್

    ಅತ್ತ ರೆಸಾರ್ಟ್​​ನಲ್ಲಿ ಕೈ ಶಾಸಕರು, ಇತ್ತ ಪತ್ನಿ ಜೊತೆ ಫುಲ್ ರಿಲ್ಯಾಕ್ಸ್ ಮೂಡ್‍ನಲ್ಲಿ ಸ್ಪೀಕರ್

    ಕೋಲಾರ: ರಾಜ್ಯದಲ್ಲಿ ಹಲವು ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ, ಸರ್ಕಾರ ಇನ್ನೇನು ಪತನವಾಗುತ್ತೆ ಅಂತ ಕಳೆದ ಹಲವು ದಿನಗಳಿಂದ ಸುದ್ದಿಗಳು ಹರಿದಾಡುತ್ತಿವೆ. ಆದರೆ ಹಲವು ಒತ್ತಡಗಳು ನಡುವೆಯೂ ಕೂಲ್ ಆಗಿ ಸ್ಪೀಕರ್ ರಮೇಶ್ ಕುಮಾರ್ ಮಡದಿಯೊಂದಿಗೆ ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡಿದ್ದಾರೆ.

    ರಾಜ್ಯದ ರಾಜಕೀಯ ಬೆಳವಣಿಗೆ ಮಧ್ಯದಲ್ಲಿ ಕೂಲ್ ಆಗಿರುವ ಸ್ಪೀಕರ್ ರಮೇಶ್ ಕುಮಾರ್, ರಾಜ್ಯ ರಾಜಕಾರಣಕ್ಕೂ ತನಗೂ ಸಂಬಂಧವೇ ಇಲ್ಲ ಎಂಬಂತೆ ಹೊಲದಲ್ಲಿ ಕುರಿ-ಕೋಳಿ ಮೇಯಿಸಿಕೊಂಡು ಸಮಯ ಕಳೆಯುತ್ತಿದ್ದಾರೆ.

    ರಮೇಶ್ ಕುಮಾರ್ ಶುಕ್ರವಾರ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಅಡ್ಡಗಲ್ ಗ್ರಾಮದಲ್ಲಿನ ತಮ್ಮ ತೋಟದಲ್ಲಿ ಸಮಯ ಕಳೆದಿದ್ದು, ತಮ್ಮ ಪತ್ನಿ ವಿಜಯಮ್ಮ ಜೊತೆಗೆ ಕುರಿ, ಕೋಳಿ ಹಾಗೂ ಪಾಲೀಹೌಸ್ ವೀಕ್ಷಣೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಜಾಗಿಂಗ್ ಡ್ರಸ್ ನಲ್ಲಿ ಇಡೀ ದಿನ ತಮ್ಮ ತೋಟದ ಮನೆಯಲ್ಲಿ ಬೀಡುಬಿಟ್ಟಿದ್ದರು.

    ಎರಡು ದಿನದ ಹಿಂದೆ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರ ಜೊತೆಗೆ ಮಾತುಕತೆ ನಡೆಸಿ ವಾಪಸ್ಸಾದ ಸ್ಪೀಕರ್ ಮತ್ತೆ ಬೆಂಗಳೂರಿನತ್ತ ತೆರಳಲಿಲ್ಲ. ತೋಟದ ಮನೆಯಲ್ಲಿ ಸೇರಿಕೊಂಡು ಕಳೆದ ಮೂರು ದಿನಗಳಿಂದ ಫುಲ್ ರಿಲ್ಯಾಕ್ಸ್ ಮೂಡ್‍ನಲ್ಲಿ ಹಳ್ಳಿ ಜೀವನ ಎಂಜಾಯ್ ಮಾಡುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆಪರೇಷನ್ ಕಮಲನೋ, ಸಂಪಿಗೆಯೋ ಗೊತ್ತಿಲ್ಲ: ಸ್ಪೀಕರ್ ರಮೇಶ್ ಕುಮಾರ್ ವ್ಯಂಗ್ಯ

    ಆಪರೇಷನ್ ಕಮಲನೋ, ಸಂಪಿಗೆಯೋ ಗೊತ್ತಿಲ್ಲ: ಸ್ಪೀಕರ್ ರಮೇಶ್ ಕುಮಾರ್ ವ್ಯಂಗ್ಯ

    – ಆಪರೇಷನ್ ಎಲ್ಲಿ ಮಾಡಿದ್ದರೆ ಅನ್ನೋದು ನನಗೆ ಗೊತ್ತಿಲ್ಲ

    ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಆಪರೇಷನ್ ಕಮಲನೋ ಅಥವಾ ಸಂಪಿಗೆಯೋ ಗೊತ್ತಿಲ್ಲ. ಆಪರೇಷನ್ ಮೇಲೆ ಮಾಡಿದ್ರೋ ಅಥವಾ ಕೆಳಗೆ ಮಾಡಿದ್ರೋ ಎಂಬ ವಿಚಾರವೇ ನನಗೆ ತಿಳಿದಿಲ್ಲ ಎಂದು ಸ್ಪೀಕರ್ ರಮೇಶ್ ಕುಮಾರ್ ವ್ಯಂಗ್ಯವಾಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ರಮೇಶ್ ಕುಮಾರ್, ಇಷ್ಟು ಪ್ರಶಾಂತವಾಗಿ, ರಕ್ತ ಹರಿಯದೆ ಮತ್ತು ಹಿಂಸೆ ಇಲ್ಲದೇ ಇಡೀ ಏಷ್ಯಾಖಂಡದಲ್ಲಿ ಪ್ರಜಾಪ್ರಭುತ್ವ ಉಳಿದಿಲ್ಲ. ಈ ಒಂದು ದೇಶದಲ್ಲಿ ಉಳಿದಿದೆ. ಅದಕ್ಕೆ ಕಾರಣ ಈ ದೇಶದ ಜನತೆ ಮತ್ತು ಸಂವಿಧಾನವಾಗಿದೆ. ಜನರು ಇದೆಲ್ಲವನ್ನು ಗಮನಿಸಿರುತ್ತಾರೆ. ಆದ್ದರಿಂದ ಇದಕ್ಕೆಲ್ಲ ಅವರು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದರು.

    ಇನ್ನೂ ಮೂರು ತಿಂಗಳಿಗೊಮ್ಮೆ ಆಪರೇಷನ್ ಕಮಲ ಮಾಡುತ್ತಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ನನಗೆ ಆಪರೇಷನ್ ಕಮಲ ಆಗಿದೆಯೋ, ಇಲ್ಲವೂ ಗೊತ್ತಿಲ್ಲ. ಆಪರೇಷನ್ ಕಮಲನೋ ಅಥವಾ ಸಂಪಿಗೆಯೋ ಗೊತ್ತಿಲ್ಲ. ಅಷ್ಟೇ ಅಲ್ಲದೇ ಆಪರೇಷನ್ ಕೆಳಗಾ, ಮೇಲಾ ಮತ್ತು ಮುಂದೆ ಮಾಡಿದಾರ ಅಥವಾ ಹಿಂದೆ ಮಾಡಿದಾರ ಅದು ನನಗೆ ಗೊತ್ತಿಲ್ಲ. ಒಟ್ಟಿನಲ್ಲಿ ಆಪರೇಷನ್ ಎಲ್ಲಿ ಮಾಡಿದ್ದಾರೆ ಎನ್ನುವುದು ಗೊತ್ತಿಲ್ಲ ಎಂದು ಸ್ಪೀಕರ್ ರಮೇಶ್ ಅವರು ವ್ಯಂಗ್ಯವಾಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದೋಸ್ತಿ ಸರ್ಕಾರವನ್ನ ಉಳಿಸ್ತಾರಾ ಸ್ಪೀಕರ್? ಸ್ಪೀಕರ್ ಮುಂದಿರುವ ಆಯ್ಕೆಗಳೇನು?

    ದೋಸ್ತಿ ಸರ್ಕಾರವನ್ನ ಉಳಿಸ್ತಾರಾ ಸ್ಪೀಕರ್? ಸ್ಪೀಕರ್ ಮುಂದಿರುವ ಆಯ್ಕೆಗಳೇನು?

    ಬೆಂಗಳೂರು: ಮಕರ ಸಂಕ್ರಾಂತಿಗೆ ರಾಜ್ಯ ರಾಜಕಾರಣದಲ್ಲಿ ಬದಲಾವಣೆ ಆಗುತ್ತಾ ಎಂಬ ಬಿಸಿ ಬಿಸಿ ಚರ್ಚೆಗಳು ರಾಜಕೀಯ ಪಡಸಾಲೆಯಲ್ಲಿ ನಡೆದಿವೆ. ಕಾಂಗ್ರೆಸ್ ಸೆಳೆಯಲು ಪ್ರಯತ್ನಿಸುತ್ತಿರುವ ಬಿಜೆಪಿ ತನ್ನ ಎಲ್ಲ ನಾಯಕರನ್ನು ಹರಿಯಾಣದ ಗುರುಗ್ರಾಮದ ರೆಸಾರ್ಟ್ ನಲ್ಲಿ ಇರಿಸಿದೆ. ಕಾಂಗ್ರೆಸ್‍ನ ಕೆಲ ಅತೃಪ್ತ ಶಾಸಕರು ಮುಂಬೈ ತಲುಪಿದ್ದು, ಬಿಜೆಪಿಗೆ ಬೆಂಬಲ ಘೋಷಿಸಲು ಸಿದ್ಧರಾಗಿದ್ದಾರಂತೆ. ಪಕ್ಷೇತರರು ಇಬ್ಬರು ಸೇರಿದಂತೆ ನಾಲ್ವರು ಕಾಂಗ್ರೆಸ್ ಶಾಸಕರು ಈಗಾಗಲೇ ಕಮಲ ಹಿಡಿಯಲು ತುದಿಗಾಲಲ್ಲಿ ನಿಂತಿದ್ದಾರಂತೆ.

    ಒಂದು ವೇಳೆ ಬಿಜೆಪಿ ಸರ್ಕಾರ ರಚಿಸುವ ಮ್ಯಾಜಿಕ್ ನಂಬರ್ ಪಡೆಯುವಲ್ಲಿ ಯಶಸ್ವಿಯಾದ್ರೆ, ಸ್ಪೀಕರ್ ದೋಸ್ತಿ ಸರ್ಕಾರವನ್ನು ಕೆಲ ದಿನಗಳವರೆಗೆ ಉಳಿಸುವ ಸಾಧ್ಯತೆಗಳಿವೆ.

    ಸ್ಪೀಕರ್ ಮುಂದಿರುವ ಆಯ್ಕೆ ಏನು?
    ಖಾಸಗಿ ಕೆಲಸದಲ್ಲಿ ಸ್ಪೀಕರ್ ಬ್ಯುಸಿ ಆದರೆ ಶಾಸಕರಿಗೆ ತಕ್ಷಣಕ್ಕೆ ಸ್ಪೀಕರ್ ಸಂಪರ್ಕ ಕಷ್ಟವಾಗಬಹುದು. ಶಾಸಕರು ರಾಜೀನಾಮೆ ಸಲ್ಲಿಸಿದ್ರೆ ಕೆಲವು ದಿನಗಳ ಕಾಲ ರಾಜೀನಾಮೆ ಅಂಗೀಕರಿಸದೆ ಸುಮ್ಮನೆ ಇರಬಹುದು. ರಾಜೀನಾಮೆಗೆ ಶಾಸಕರು ಸಮರ್ಪಕ ಕಾರಣ ನೀಡದಿದ್ದರೆ, ರಾಜೀನಾಮೆಯನ್ನ ಪುನರ್ ಪರಿಶೀಲಿಸುವಂತೆ ಶಾಸಕರಿಗೆ ಸೂಚನೆ ನೀಡಬಹುದು. ಇದೇ ವೇಳೆ ಯಾವುದೇ ಒತ್ತಡಕ್ಕೆ ಒಳಗಾಗಿ ರಾಜೀನಾಮೆ ಸಲ್ಲಿಕೆ ಮಾಡಬೇಡಿ ಎಂದು ಶಾಸಕರುಗಳಿಗೆ ತಿಳಿ ಹೇಳಬಹುದು.

    ಸ್ವಲ್ಪ ದಿನಗಳ ನಂತರ ಸ್ಪೀಕರ್ ಅನಿವಾರ್ಯವಾಗಿ ರಾಜೀನಾಮೆಯನ್ನ ಅಂಗೀಕರಿಸಬಹುದು. ಇಲ್ಲವೆ ಶಾಸಕರುಗಳು ರಾಜೀನಾಮೆ ಸಲ್ಲಿಸುತ್ತಿದ್ದಂತೆ, ಯಾವುದೇ ವಿವಾದಕ್ಕೆ ಸಿಲುಕುವುದು ಬೇಡ ಎಂದ ತಕ್ಷಣವೇ ರಾಜೀನಾಮೆ ಅಂಗೀಕರಿಸಬಹುದು. ಕಾದು ನೋಡುವ ತಂತ್ರಕ್ಕೆ ಮುಂದಾಗಿ ತಮ್ಮ ವಿವೇಚನೆ ಎಂಬ ಅಸ್ತ್ರ ಬಳಸಿ ರಾಜೀನಾಮೆಯನ್ನ ಅಂಗೀಕರಿಸದೇ ಸತಾಯಿಸಬಹುದು.

    ಬಂಡಾಯ ಶಾಸಕರ ಭೇಟಿ ಮುಂದೂಡಲು ಅನಾರೋಗ್ಯದ ನೆಪವೊಡ್ಡಬಹುದು ಅಥವಾ ವಿದೇಶ ಪ್ರವಾಸಕ್ಕೆ ತೆರಳಬಹುದು. ರಮೇಶ್ ಕುಮಾರ್ ಈ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಕಡಿಮೆ.

    ಬಿಜೆಪಿಯವರು ಶಾಸಕರನ್ನು ಸೆಳೆದು ರಾಜೀನಾಮೆ ಕೊಡಿಸಿದ್ರೆ ಕೂಡಲೇ ಸರ್ಕಾರ ಬೀಳಲ್ಲ. ಸ್ಪೀಕರ್ ನಿರ್ಣಯವೇ ಅಂತಿಮವಾಗಲಿದೆ. ಆದರೆ ಸ್ಪೀಕರ್ ರಮೇಶ್ ಕುಮಾರ್ ಸಂವಿಧಾನಿಕ ನಡಾವಳಿಗಳಿಗೆ ಹೆಚ್ಚು ಗೌರವ ಕೊಡುತ್ತಾರೆ. ಹಾಗಾಗಿ ಅವರಿಂದ ದೋಸ್ತಿ ಸರ್ಕಾರ ಸಾಂವಿಧಾನಿಕ ನಡೆಗಳಿಂದ ಹೊರತಾದ ಯಾವ ನಿರೀಕ್ಷೆಯನ್ನು ಇಟ್ಟುಕೊಳ್ಳುವುದು ಕಷ್ಟ ಎಂಬ ಮಾತುಗಳು ಕೇಳಿ ಬರುತ್ತಿವೆ.

  • ನನ್ನ ತಿಥಿಗೆ ನಾನ್ ವೆಜ್ ಊಟ ಹಾಕ್ಸರಪ್ಪ: ಸ್ಪೀಕರ್ ರಮೇಶ್ ಕುಮಾರ್

    ನನ್ನ ತಿಥಿಗೆ ನಾನ್ ವೆಜ್ ಊಟ ಹಾಕ್ಸರಪ್ಪ: ಸ್ಪೀಕರ್ ರಮೇಶ್ ಕುಮಾರ್

    ಚಿಕ್ಕಬಳ್ಳಾಪುರ: ನನ್ನ ತಿಥಿಗೆ ನಾನ್ ವೆಜ್ ಊಟ ಹಾಕಸರಪ್ಪ ಎಂದು ಸ್ಪೀಕರ್ ರಮೇಶ್ ಕುಮಾರ್ ಹಾಸ್ಯ ಚಟಾಕಿ ಹಾರಿಸಿದ್ದಾರೆ.

    ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಅವಿಭಜಿತ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಹಿರಿಯ ಧುರೀಣ ಹಾಗೂ ಕ್ಷೀರ ಕ್ರಾಂತಿಯ ಹರಿಕಾರರಾಗಿದ್ದ ದಿವಂಗತ ಎಂ.ವಿ.ಕೃಷ್ಣಪ್ಪ ನವರ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ರಮೇಶ್ ಕುಮಾರ್ ಭಾಗಿಯಾಗಿದ್ದರು. ಈ ವೇಳೆ ಮಾತನಾಡಿ, ನನಗೀಗ 70 ವರ್ಷ ವಯಸ್ಸಾಗಿದೆ, 10 ಎಲೆಕ್ಷನ್ ಮಾಡಿದ್ದೇನೆ. ನನ್ನ ಸಾವು ಯಾವಾಗ ಹೇಗೆ ಅಂತ ಗೊತ್ತಿಲ್ಲ, ನಾನು ಸಾವಿನ ವೈಟಿಂಗ್ ಲಿಸ್ಟ್ ನಲ್ಲಿದ್ದೇನೆ. ನಮ್ಮ ಮನೆಯಲ್ಲಿ ತಿಥಿ ಮಾಡಿದರೆ ನಮ್ಮವರು 14-15 ಜನ ಸೇರುತ್ತಾರೆ. ಪಾಯಸ ವಡೆ ಹಾಕಿ ತಿಥಿ ಹೊಟ್ಟೆ ತುಂಬ ತಿಂದು ಕಾರ್ಯ ಮುಗಿಸಿಬಿಡುತ್ತಾರೆ. ಆದರೆ ನಾನು ಎರಡು ಊಟ ಮಾಡುವವನು. ಹಾಗಾಗಿ ನನಗೆ ಆ ಊಟನೂ ಹಾಕಬೇಕಲ್ಲಪ್ಪ, ನಮ್ಮ ಮನೆಯಲ್ಲಿ ಆ ಊಟ ಹಾಕಲಿಲ್ಲ ಆಂದರೆ ನೀವಾದ್ರೂ ಹಾಕಿಸಿ ಎಂದು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಕ್ಷೇತ್ರದ ಶಾಸಕ ಹಾಗೂ ವಿಧಾನಸಭೆ ಸಭಾಧ್ಯಕ್ಷ ರಮೇಶ್ ಕುಮಾರ್ ಹಾಸ್ಯ ಚಟಾಕಿ ಹಾರಿಸಿದ್ದಾರೆ.

    ಅವಿಭಜಿತ ಕೋಲಾರ – ಚಿಕ್ಕಬಳ್ಳಾಪುರ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಹಿರಿಯ ಧುರೀಣ ಹಾಗೂ ಕ್ಷೀರ ಕ್ರಾಂತಿಯ ಹರಿಕಾರರಾಗಿದ್ದ ದಿವಂಗತ ಎಂ ವಿ ಕೃಷ್ಣಪ್ಪ ನವರ ಜನ್ಮ ಶತಮಾನೋತ್ಸವ ಕಾರ್ಯಕ್ರಮ ಆಚರಿಸಿಲು ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ರಮೇಶ್ ಕುಮಾರ್ ಮಾತನಾಡಿದರು. ಈ ವೇಳೆ ಎಂ ವಿ ಕೃಷ್ಣಪ್ಪ ನವರ ಜೀವನ ಯಶೋಗಾಥೆ, ಸಾಧನೆಗಳನ್ನ ಬಿಚ್ಚಿಟ್ಟು, ವಾಸ್ತವ ರಾಜಕೀಯ ಜೀವನ ನೆನೆದು ಭಾವುಕರಾದರು.

    ಎಂ ವಿ ಕೃಷ್ಣಪ್ಪ ನವರು ಹಾಕಿದ ಅಡಿಪಾಯದಲ್ಲಿ ನಮ್ಮ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯ ನಾಯಕರು ಸಾಗಲಿಕ್ಕೆ ಆಗಲಿಲ್ಲವಲ್ಲ? ನಾವು ಅವರಿಗೆ ಅಪಚಾರ ಮಾಡಿಬಿಟ್ಟಿದ್ದೇವೆ ಎಂದು ಸ್ವತಃ ತಮ್ಮನ್ನ ಹಾಗೂ ಪ್ರಸಕ್ತ ರಾಜಕಾರಣಿಗಳ ಬಗ್ಗೆ ಬೇಸರ ಮಾಡಿಕೊಂಡರು. ಅಖಂಡ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗೆ ಮೊಟ್ಟ ಮೊದಲು ಡೆನ್ಮಾರ್ಕ್ ನಿಂದ ಸೀಮೆ ಹಸುಗಳನ್ನ ವಿಮಾನದ ಮೂಲಕ ತರಿಸಿ ಕ್ಷೀರಕ್ರಾಂತಿ ಮಾಡಿದ ಮಹಾನ್ ವ್ಯಕ್ತಿ ಎಂ ವಿ ಕೃಷ್ಣಪ್ಪ. ಆದರೆ ಅವರು ಮನೆ ಹಾಗೂ ಮಕ್ಕಳಿಗಾಗಿ ಏನೂ ಆಸ್ತಿ ಮಾಡಲಿಲ್ಲ. ಇವತ್ತು ಅವರ ಮಗ ಆಶೋಕ್ ಇಲ್ಲಿದ್ದಾರೆ. ಆದರೆ ಅವರು ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ ಎಂದು ಮರುಕ ಪಟ್ಟರು.

    ಇಂದಿನ ನಾಯಕರು ತಮ್ಮ ಮಕ್ಕಳು ಮೊಮ್ಮಕ್ಕಳಿಗೆ, ಆಸ್ತಿ ಅಂತಸ್ತು, ಬಂಗಲೆ, ಫ್ಯಾಕ್ಟರಿ ಮಾಡುವ ಯೋಜನೆಗಳನ್ನು ಹಾಕುತ್ತಾರೆ. ಸ್ವಾರ್ಥ ರಾಜಕಾರಣ ಮಾಡುತ್ತಾರೆ ಎಂದು ಅಸಮಾಧಾನ ತೋಡಿಕೊಂಡರು. ಅಲ್ಲದೇ ಎಂ ವಿ ಕೃಷ್ಣಪ್ಪ ನವರಂತಹ ಮಹಾನ್ ವ್ಯಕ್ತಿಗಳನ್ನ ನೆನೆಯುವ ಯೋಗ್ಯತೆ ಕೂಡ ನಮಗೆ ಇಲ್ಲವೇ…? ಅಂತವರನ್ನ ನೆನೆದು ನಾಡಿಗೆ ಅವರ ಹೆಸರನ್ನ ಪರಿಚಯುವ ಮಾಡುವ ಸಲುವಾಗಿ ದಿವಂಗತ ಜನ್ಮಶತಮಾನೋತ್ಸವ ಕಾರ್ಯ ಮಾಡುವ ಉದ್ದೇಶದಿಂದ ಪೂರ್ವಭಾವಿ ಸಭೆ ನಡೆಸಲಾಗುತ್ತಿದೆ. ಹೀಗಾಗಿ ನಾನು ಇವತ್ತು ದಿವಂಗತ ಕೃಷ್ಣಪ್ಪನವರಿಗೆ ಈ ಕಾರ್ಯ ಮಾಡಿದರೆ ಮುಂದೊಂದು ದಿನ ನೀವು ನನಗೆ ತಿಥಿ ಕಾರ್ಯ ಮಾಡಿ ನಾನ್ ವೆಜ್ ಊಟ ಹಾಕಿಸಿ ಎಂದು ಹಾಸ್ಯ ಮಾಡಿಯೇ ತಮ್ಮೊಳಗಿನ ನೋವು ತೋಡಿಕೊಂಡರು. ಸಭೆಯಲ್ಲಿ ಅಖಂಡ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಯ ಜನಪ್ರತಿನಿಧಿಗಳು ಹಾಜರಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸದನದಲ್ಲಿ ಕನಕಪುರ ಬಂಡೆಯನ್ನು ಹೊಗಳಿದ ಬಿಜೆಪಿ ಶಾಸಕ ಸಿಸಿ ಪಾಟೀಲ್

    ಸದನದಲ್ಲಿ ಕನಕಪುರ ಬಂಡೆಯನ್ನು ಹೊಗಳಿದ ಬಿಜೆಪಿ ಶಾಸಕ ಸಿಸಿ ಪಾಟೀಲ್

    ಬೆಳಗಾವಿ: ಕನ್ನಡ ಸೌಧದಲ್ಲಿ ನಡೆಯುತ್ತಿರುವ ವಿಧಾನಸಭಾ ಕಲಾಪದಲ್ಲಿ ಬಿಜೆಪಿ ಶಾಸಕ ಸಿಸಿ ಪಾಟೀಲ್ ಅವರು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರನ್ನು ಹೊಗಳಿದಿದ್ದಾರೆ.

    ನವಲಗುಂದ, ನರಗುಂದ ಭಾಗದ ನೀರಾವರಿ ಯೋಜನೆಯ ಬಗ್ಗೆ ಶಾಸಕ ಶಂಕರಪಾಟೀಲ್ ಮುನೇನಕೊಪ್ಪ ಪ್ರಶ್ನೆ ಕೇಳುವ ಸಮಯದಲ್ಲಿ ಸಿಸಿ ಪಾಟೀಲ್ ಮಧ್ಯಪ್ರವೇಶ ಮಾಡಿ ಶಿವಕುಮಾರ್ ಡೈನಾಮಿಕ್ ಇದ್ದಾರೆ. ಕನಕಪುರದ ಬಂಡೆಯಂತಹ ಸಾಮಥ್ರ್ಯ ಹೊಂದಿರುವ ಶಿವಕುಮಾರ್ ಉತ್ತರ ಕರ್ನಾಟಕ ಭಾಗದ ನೀರಾವರಿ ಯೋಜನೆಗಳಿಗೂ ತಮ್ಮ ಸಾಮಥ್ರ್ಯ ಬಳಸಿ ಅಭಿವೃದ್ಧಿ ಪಡಿಸಬೇಕು ಎಂದು ಹೇಳಿದರು.

    ಈ ಸಮಯದಲ್ಲಿ ಸ್ಪೀಕರ್ ರಮೇಶಕುಮಾರ್ ಮಧ್ಯಪ್ರವೇಶ ಮಾಡಿ, ಏನ್ರೀ ಶಿವಕುಮಾರ್ ಎಲ್ಲೆಲ್ಲೂ ನಿಮ್ಮದೇ ಮಾತು. ಏನ್ರಿ ಯಡಿಯೂರಪ್ಪನವರೇ ಎಂದು ಹೇಳಿ ಶಿವಕುಮಾರ್ ದೀರ್ಘ ಆಯುಶ್ಮಾನ್ ಭವ ಎಂದಾಗ ಸದನ ನಗೆಗಡಲಲ್ಲಿ ತೇಲಾಡಿತು.

    ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಹಾನಗಲ್ ಶಾಸಕ ಉದಾಸಿ ಇಂದು ಕಾಣಿಸಿಕೊಂಡಿದ್ದರು. ಸದನದಲ್ಲಿ ಪ್ರಶ್ನೆ ಕೇಳಲು ಎದ್ದು ನಿಂತಾಗ, ಎಲ್ಲಿ ಹೋಗಿದ್ರಿ ಇಷ್ಟು ದಿನ? ಅಸೆಂಬ್ಲಿಯಲ್ಲಿ ಕಾಣಿಸುತ್ತಿರಲಿಲ್ಲ ಎಂದು ಸ್ಪೀಕರ್ ಪ್ರಶ್ನೆ ಮಾಡಿದರು. ಇದಕ್ಕೆ ಆರೋಗ್ಯ ಸರಿ ಇರಲಿಲ್ಲ, ಹಾಗಾಗಿ ಬಂದಿರಲಿಲ್ಲ ಎಂದು ಉದಾಸಿ ಉತ್ತರಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv