Tag: Ramesh Kumar

  • ರಮೇಶ್ ಕುಮಾರ್ ಅರಣ್ಯ ಭೂಮಿ ವಿವಾದ| ಜಂಟಿ ಸರ್ವೆ ಮುಕ್ತಾಯ – ಒಮ್ಮತಕ್ಕೆ ಬಾರದ ಅರಣ್ಯ, ಕಂದಾಯ ಇಲಾಖೆ

    ರಮೇಶ್ ಕುಮಾರ್ ಅರಣ್ಯ ಭೂಮಿ ವಿವಾದ| ಜಂಟಿ ಸರ್ವೆ ಮುಕ್ತಾಯ – ಒಮ್ಮತಕ್ಕೆ ಬಾರದ ಅರಣ್ಯ, ಕಂದಾಯ ಇಲಾಖೆ

    – ಪ್ರತ್ಯೇಕ ವಾದ ಮಂಡನೆ ಮಾಡಿದ ಅಧಿಕಾರಿಗಳು

    ಕೋಲಾರ: ಮಾಜಿ ಸ್ಪೀಕರ್ ರಮೇಶ್ ಕುಮಾರ್ (Ramesh Kumar) ಅರಣ್ಯ ಭೂಮಿ ವಿವಾದ ಸದ್ಯಕ್ಕೆ ಮುಕ್ತಾಯವಾಗಿದೆ. ಆದರೆ ಜಂಟಿ ಸರ್ವೆ ಕಾರ್ಯ ಕಂದಾಯ ಹಾಗೂ ಅರಣ್ಯ ಇಲಾಖೆಗಳ ಮಧ್ಯೆ ಒಮ್ಮತ ಮೂಡಿಲ್ಲ.

    ಕಂದಾಯ ಇಲಾಖೆ (Revenue Department) ಮೇಲ್ನೋಟಕ್ಕೆ ಎಲ್ಲವೂ ಸರಿ ಇದೆ. ಗಡಿ ಗುರುತಿಸಿ, ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಲಿದ್ದೇವೆ. ಬಳಿಕ ಅಲ್ಲಿಂದ ನ್ಯಾಯಾಲಯಕ್ಕೆ ಸಲ್ಲಿಕೆಯಾಗಲಿದೆ ಎಂದು ವಾದ ಮಂಡನೆ ಮಾಡಿದ್ದಾರೆ. ಆದರೆ ಅರಣ್ಯ ಇಲಾಖೆ (Forest Department) ಒತ್ತುವರಿ ಆಗಿದೆ ಎಂಬ ವಾದ ಮಂಡನೆ ಮಾಡುವ ಮೂಲಕ ಹೊಸಹೂಡ್ಯ ಸರ್ವೆ ನಂ.1 ಮತ್ತು 2 ಸಂಪೂರ್ಣ ಅರಣ್ಯ ಭೂಮಿ. ಇದರಲ್ಲಿ ಯಾವುದೇ ರೀತಿಯ ಅನುಮಾನ ಬೇಡ. ಡಿಡಿಎಲ್‌ಆರ್ ನೀಡುವ ನಕ್ಷೆಯಲ್ಲಿ ಅರಣ್ಯ ಭೂಮಿ ತೋರಿಸದಿದ್ದರೆ ನಾನು ಸಹಿ ಹಾಕುವುದಿಲ್ಲ ಎಂದು ಡಿಸಿಎಫ್ ಸರೀನಾ ವಾದ ಮಂಡನೆ ಮಾಡಿದರು. ಇದನ್ನೂ ಓದಿ: ಶ್ರೀಹರಿಕೋಟಾದಲ್ಲಿ 3ನೇ ಉಡಾವಣಾ ಕೇಂದ್ರ ಸ್ಥಾಪನೆಗೆ ಸಂಪುಟ ಅಸ್ತು

     

    ಹೈಕೋರ್ಟ್ ನಿರ್ದೇಶನದ ಮೇರೆಗೆ ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆಯಿಂದ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಹೊಸಹೂಡ್ಯ ಸರ್ವೆ ನಂ 1 ಮತ್ತು 2 ಜಮೀನನ್ನು ಎರಡು ದಿನಗಳ ಕಾಲ ನಡೆಸಿದ ಸರ್ವೆ ಕಾರ್ಯ ಮುಕ್ತಾಯವಾಯಿತು. ಇದೇ ವೇಳೆ ಮಾತನಾಡಿದ ಕೋಲಾರ ಜಿಲ್ಲಾಧಿಕಾರಿ ಡಾ.ರವಿ, ಹೈಕೋರ್ಟ್ ಸೂಚನೆ ಪ್ರಕಾರ ಜಂಟಿ ಸರ್ವೆ ಮಾಡಲಾಗಿದೆ. ಹೊರ ಭಾಗದ ಕಂದಾಯ ಗ್ರಾಮದ ಗುರುತು ಮಾಡಲಾಗಿದೆ. ರೋವರ್ ಜೊತೆ ಚೈನ್ ಬಳಸಿ ಏಕಕಾಲದಲ್ಲಿ ಸರ್ವೆ ಮಾಡಲಾಗಿದೆ. ಅರಣ್ಯ ಇಲಾಖೆಯ ಗಡಿ ಗುರುತಿಸುವ ಕೆಲಸ ಜಂಟಿಯಾಗಿ ಮಾಡಿ ನಾಲ್ಕು ತಂಡಗಳಿಂದ ಸರ್ವೆ ಮಾಡಿ, ಸರ್ವೆ ನಂಬರ್‌ನ ಜಮೀನನ್ನು ಸೆರೆ ಹಿಡಿಯಲಾಗಿದೆ ಎಂದರು. ಇದನ್ನೂ ಓದಿ: Chhattisgarh| ಭದ್ರತಾ ಪಡೆಗಳೊಂದಿಗೆ ಗುಂಡಿನ ಚಕಮಕಿ- 12 ಮಾವೋವಾದಿಗಳು ಬಲಿ

    ಅರಣ್ಯ ಇಲಾಖೆಯ ಗಂಟರ್ಸ್ ಚೈನ್ ಮಾಪನ 100 ಲಿಂಕ್ 66 ಅಡಿ, ಕಂದಾಯ ಇಲಾಖೆಯ ಚೈನ್‌ನಲ್ಲಿ 50 ಲಿಂಕ್ಸ್ 30 ಅಡಿಯಾಗಿದೆ. ಸರ್ವೆ ನಂಬರ್ 1 ರಲ್ಲಿ 315 ಎಕರೆ ಹಾಗೂ ಸರ್ವೆ ನಂಬರ್ 2ರಲ್ಲಿ 113 ಎಕರೆ ಗುರುತಿಸಲು ನೋಟಿಫಿಕೇಶನ್ ಇದೆ. ಡಿಡಿಎಲ್‌ಆರ್ ನಮಗೆ ತಾಂತ್ರಿಕ ವರದಿ ನೀಡಬೇಕಿದೆ. ಪಿರ್ಯಾದುದಾರರು ಸಹ ಕೆಲವು ಮಾಹಿತಿ ಕೇಳಿದ್ದಾರೆ. ಅದರ ಮಾಹಿತಿ ಪಡೆಯಬೇಕಿದೆ. ಜ.30ರ ಒಳಗೆ ಹೈಕೋರ್ಟ್‌ಗೆ ವರದಿ ಸಲ್ಲಿಸುತ್ತೇವೆ. 1934ರ ಸರ್ಕಾರಿ ನೋಟಿಫಿಕೇಶನ್ ಹಾಗೂ 1944ರ ಗೆಜೆಟ್ ಬಿಟ್ಟು ಅರಣ್ಯ ಇಲಾಖೆಯವರು ಯಾವುದೇ ದಾಖಲೆ ಕೊಟ್ಟಿಲ್ಲ. ಮೇಲ್ನೋಟಕ್ಕೆ ನಮಗೆ ಏನೂ ಕಂಡು ಬಂದಿಲ್ಲ ಅನಿಸುತ್ತೆ ಎಂದು ಹೇಳಿದರು. ಇದನ್ನೂ ಓದಿ: ನ್ಯೂಕ್ಲಿಯರ್ ಶಕ್ತಿಗಿಂತ ಆಧ್ಯಾತ್ಮಿಕ ಶಕ್ತಿ ದೊಡ್ಡದು- ಉಪರಾಷ್ಟ್ರಪತಿ ಜಗದೀಪ್ ಧನಕರ್

     

    ಇನ್ನೂ ಅರಣ್ಯ ಇಲಾಖೆಗೆ ಸೇರಿದ ಜಾಗ ಒತ್ತುವರಿ ಆಗಿದೆ ಎಂದು ಮತ್ತೆ ವಾದ ಮಾಡಿದ ಅರಣ್ಯ ಇಲಾಖೆ ಡಿಸಿಎಫ್, ಗುಂಟರ್ಸ್ ಚೈನ್ ಬ್ರಿಟಿಷ್ ಕಾಲದಿಂದ ಬಳಕೆ ಆಗುತ್ತಿದೆ. ಇದರಲ್ಲಿ ಅಳತೆ ಸರಿಯಾಗಿ ಇರುತ್ತೆ ಎಂದು ಅಧೀನ ಕಾರ್ಯದರ್ಶಿ ಅವರೇ ಹೇಳಿದ್ದಾರೆ. ಹಾಗಾಗಿ ಅದರಲ್ಲಿ ಅಳತೆ ಮಾಡಿದ್ದೇವೆ, ಸರಿ ಇದೆ. ಹೊಸಹೂಡ್ಯಾ ಗ್ರಾಮದ ಸರ್ವೆ ನಂಬರ್ 1 ಹಾಗೂ 2 ರಲ್ಲಿ ನಮ್ಮ ಭೂಮಿ ಒತ್ತುವರಿ ಆಗಿದೆ ಎಂದು ತಿಳಿಸಿದರು. ಇದನ್ನೂ ಓದಿ: 500 ರೂ.ಗೆ ಗ್ಯಾಸ್ ಸಿಲಿಂಡರ್, 300 ಯೂನಿಟ್ ವಿದ್ಯುತ್ ಉಚಿತ – ದೆಹಲಿ ಚುನಾವಣೆಗೆ `ಕೈ’ ಗ್ಯಾರಂಟಿ

    ಅರಣ್ಯ ಸೆಟಲ್ಮೆಂಟ್ ಮ್ಯಾಪ್ ನಮ್ಮ ಬಳಿ ಇದೆ. ಈಗ ಬೇಕಾದರೂ ನಾವು ಮ್ಯಾಪ್ ಸಿದ್ಧಪಡಿಸಬಹುದು. ಇಲ್ಲಿ ಒತ್ತುವರಿ ಆಗಿರೋದು ನಿಜ. ಸರ್ವೆ ನಂಬರ್ 1ರಲ್ಲಿ 315.32 ಎಕರೆ, ಸರ್ವೆ ನಂಬರ್ 2ರಲ್ಲಿ 113 ಎಕರೆ ಇದೆ. 1944ರಲ್ಲೇ ಗಡಿ ಗುರುತು ಆಗಿದೆ. ನಮಗೆ ಸರ್ವೆ ನಂಬರ್ 1 ಹಾಗೂ 2ರಲ್ಲಿರುವ ನಮ್ಮ ಅರಣ್ಯ ಇಲಾಖೆಯ ಜಾಗ ಸೇರಿಸಿದರೇ ಮಾತ್ರ ಸಹಿ ಹಾಕುತ್ತೇನೆ. ಇಲ್ಲವಾದರೆ ನಾನು ಡಿಡಿಎಲ್‌ಆರ್ ವರದಿಗೆ ಸಹಿ ಹಾಕೋದಿಲ್ಲ, ಮತ್ತೆ ಸರ್ವೆ ಆಗಲಿ ಬಿಡಿ ಎಂದರು. ಇದನ್ನೂ ಓದಿ: ಯಕ್ಷಗಾನದ ಟೆಂಟ್‌ಗೆ ನುಗ್ಗಿದ ಪೊಲೀಸರು – ಈಗ ಕಾಂಗ್ರೆಸ್ Vs ಬಿಜೆಪಿ ಜಟಾಪಟಿ

  • ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಅರಣ್ಯ ಭೂಮಿ ಒತ್ತುವರಿ ವಿವಾದ – ಇಂದು ಜಂಟಿ ಸರ್ವೆ

    ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಅರಣ್ಯ ಭೂಮಿ ಒತ್ತುವರಿ ವಿವಾದ – ಇಂದು ಜಂಟಿ ಸರ್ವೆ

    ಕೋಲಾರ: ಕಳೆದ 2 ದಶಕಗಳಿಂದ ವಿವಾದದ ಕೇಂದ್ರವಾಗಿರುವ ಮಾಜಿ ಸ್ಪೀಕರ್ ರಮೇಶ್ ಕುಮಾರ್ (Ramesh Kumar) ಅರಣ್ಯ ಭೂಮಿ ಒತ್ತುವರಿ ಪ್ರಕರಣಕ್ಕೂ ಸಂಕ್ರಮಣ ಸಮೀಪವಾದಂತಿದೆ. ಸಂಕ್ರಾಂತಿ ಮಾರನೇ ದಿನವಾದ ಇಂದು ರಮೇಶ್ ಕುಮಾರ್ ಅರಣ್ಯ ಭೂಮಿ ಒತ್ತುವರಿ (Forest Land Encroachment) ಪ್ರಕರಣದ ಜಂಟಿ ಸರ್ವೆಗೆ (Survey) ದಿನಾಂಕ ನಿಗದಿ ಮಾಡಲಾಗಿದ್ದು, ಜಂಟಿ ಸರ್ವೆಗೆ ಜಿಲ್ಲಾಡಳಿತ ಸಿದ್ಧವಾಗಿದೆ.

    ಕಳೆದ ಎರಡು ತಿಂಗಳಲ್ಲಿ ಮೂರು ಬಾರಿ ಜಂಟಿ ಸರ್ವೆ ಕಾರ್ಯವನ್ನು ಮುಂದೂಡಲಾಗಿತ್ತು. ಆದರೆ ಅಂತಿಮವಾಗಿ ಇಂದು ಜಂಟಿ ಸರ್ವೆ ಕಾರ್ಯಕ್ಕೆ ದಿನ ನಿಗದಿ ಮಾಡಲಾಗಿದೆ. ಅದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಕೋಲಾರ ಜಿಲ್ಲಾಡಳಿತ ಮಾಡಿಕೊಂಡಿದೆ. ಕಳೆದೆರಡು ದಶಕಗಳಿಂದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮೇಲೆ ಕೇಳಿ ಬರುತ್ತಿರುವ ಅರಣ್ಯ ಭೂಮಿ ಒತ್ತುವರಿ ಆರೋಪಕ್ಕೆ ಹೈಕೋರ್ಟ್ ಅಂತಿಮ ಗಡುವು ನೀಡಿ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಇಂದು ಜಂಟಿ ಸರ್ವೆ ಕಾರ್ಯ ನಿಗದಿ ಮಾಡಲಾಗಿದೆ. ಇದನ್ನೂ ಓದಿ: ಅಯ್ಯಪ್ಪ ಸ್ವಾಮಿ ಜಾತ್ರೆಯಲ್ಲಿ ಭಕ್ತರ ಮೇಲೆ ಹರಿದ ಕಾರು – ಯುವತಿ ಸಾವು, 8 ಮಂದಿಗೆ ಗಾಯ

    ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕು ಜಿನಕಲಕುಂಟೆ ಅರಣ್ಯ ಪ್ರದೇಶದಲ್ಲಿನ ಹೊಸಹುಡ್ಯ ಗ್ರಾಮದ ಸರ್ವೆ ನಂ1 ಮತ್ತು 2ರಲ್ಲಿ 61.39 ಗುಂಟೆ ಅರಣ್ಯ ಭೂಮಿಯನ್ನು ರಮೇಶ್ ಕುಮಾರ್ ಒತ್ತುವರಿ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಸದ್ಯ ಪ್ರಕರಣದ ಕುರಿತು ನ್ಯಾಯಾಲಯದಲ್ಲಿ ಪರ-ವಿರೋಧ ಹೋರಾಟಗಳು ಕಳೆದ ಎರಡು ದಶಕಗಳಿಂದ ನಡೆಯುತ್ತಲೇ ಇದೆ. ಈ ನಡುವೆ ಹೈಕೋರ್ಟ್ ಸರ್ವೆ ಮಾಡಿ ಮುಗಿಸಿ ಜನವರಿ 30ರ ಒಳಗಾಗಿ ವರದಿ ಸಲ್ಲಿಸುವಂತೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಇಂದು ಜಂಟಿ ಸರ್ವೆ ಮಾಡಲಾಗುತ್ತಿದೆ. ಇದನ್ನೂ ಓದಿ: ವಿವಿಧ ಖಾದ್ಯಗಳನ್ನು ತಂದು ವೃಕ್ಷಗಳ ಮಧ್ಯೆ ಕುಳಿತು ಊಟ ಮಾಡಿ ಸಂಭ್ರಮಿಸಿದ ಜನತೆ

    ಈ ವಿವಾದದಲ್ಲಿ ರಮೇಶ್ ಕುಮಾರ್ ಬೆನ್ನಿಗೆ ಇಡೀ ಸರ್ಕಾರ ನಿಂತಿದೆ. ಇದೆಲ್ಲದರ ನಡುವೆಯೂ ಹೈಕೋರ್ಟ್ನ ಆದೇಶದ ಪ್ರಕಾರ ಜಂಟಿ ಸರ್ವೆ ಮಾಡಿ ಮುಗಿಸಬೇಕಿದೆ. ಸರ್ಕಾರ ಈ ಹಿಂದೆ ಇದ್ದ ಜಿಲ್ಲಾಧಿಕಾರಿ ಅಕ್ರಂ ಪಾಷಾ ಹಾಗೂ ಕೋಲಾರ ಉಪ ಅರಣ್ಯ ಸಂರಕ್ಷಣಾಧಿಕಾರಿ ಏಡುಕುಂಡಲುರನ್ನು ವರ್ಗಾವಣೆ ಮಾಡಿದೆ. ಇದೀಗ ನೂತನ ಡಿಸಿ ಎಂ.ಆರ್.ರವಿ&ಡಿಎಫ್‌ಓ ಸರಿನಾ ನೇತೃತ್ವದಲ್ಲಿ ಸರ್ವೆ ನಡೆಯಲಿದೆ. ಸರ್ವೆ ವೇಳೆ ರಮೇಶ್ ಕುಮಾರ್ ಉಪಸ್ಥಿತರಿರುವ ಸಾಧ್ಯತೆ ಇದೆ. ಹಾಗಾಗಿ ಇಷ್ಟು ವರ್ಷಗಳಲ್ಲಿ ಇಂದು ನಡೆಯಲಿರುವ ಜಂಟಿ ಸರ್ವೆ ಬಹಳ ಮಹತ್ವ ಪಡೆದುಕೊಂಡಿದೆ. ಇದನ್ನೂ ಓದಿ: ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರ – ಪೋಕ್ಸೋ ಪ್ರಕರಣ ದಾಖಲು

    ಒಟ್ಟಿನಲ್ಲಿ 2 ದಶಕಗಳ ಒತ್ತುವರಿ ಆರೋಪ ಎದುರಿಸುತ್ತಿರುವ ರಮೇಶ್ ಕುಮಾರ್ ಆರೋಪದಿಂದ ಮುಕ್ತರಾಗುತ್ತಾರಾ? ಇಲ್ಲ ಒತ್ತುವರಿ ಸಾಬೀತಾಗಿ ಭೂಮಿಯನ್ನು ಬಿಟ್ಟು ಕೊಡುತ್ತಾರಾ ಅನ್ನೋದು ಇಂದಿನ ಸರ್ವೆ ನಿರ್ಧಾರ ಮಾಡಲಿದೆ. ಇದನ್ನೂ ಓದಿ: ಎಐಸಿಸಿ ನಾಯಕರ ಮುಂದೆ ಸಿಎಂ, ಡಿಸಿಎಂ ಕದನ – ತ್ರಿಮೂರ್ತಿ ಸಭೆಯ ಇನ್‌ಸೈಡ್ ಸ್ಟೋರಿ ಓದಿ

  • ಕೋಲಾರದಲ್ಲಿ `ಕೈ’ ನಾಯಕರ ಪ್ರತಿಷ್ಠೆಗೆ ಮಕಾಡೆ ಮಲಗಿದ ಕಾಂಗ್ರೆಸ್

    ಕೋಲಾರದಲ್ಲಿ `ಕೈ’ ನಾಯಕರ ಪ್ರತಿಷ್ಠೆಗೆ ಮಕಾಡೆ ಮಲಗಿದ ಕಾಂಗ್ರೆಸ್

    ಕೋಲಾರ: ಕಾಂಗ್ರೆಸ್‌ನ ಭದ್ರಕೋಟೆ ಕೋಲಾರ (Kolar) ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ (Congress) ಸತತ ಎರಡನೇ ಸೋಲಾಗುವ ಮೂಲಕ ರಾಜ್ಯ ಸರ್ಕಾರಕ್ಕೆ ತೀವ್ರ ಮುಖಭಂಗವಾಗಿದೆ. ನಿರೀಕ್ಷೆಯಂತೆ ಕಾಂಗ್ರೆಸ್‌ಗೆ ಒಳ ಏಟು ಬಿದ್ದಿದ್ದು, ರಾಜೀನಾಮೆ ಪ್ರಹಸನ ಮಾಡಿದ ರೆಬಲ್ ಶಾಸಕ, ಸಚಿವರಿಗೆ ತೀವ್ರ ಹಿನ್ನಡೆಯಾಗಿದೆ.

    ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆದ್ದು ಬೀಗಿದ್ದ ಕಾಂಗ್ರೆಸ್‌ಗೆ ವರ್ಷ ಕಳೆಯುವ ಮುನ್ನವೇ ಮತದಾರರು ಪಾಠ ಕಲಿಸಿದ್ದಾರೆ. ಈ ಬಾರಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಕೋಲಾರ ಕ್ಷೇತ್ರವನ್ನು ಸತತ ಎರಡನೇ ಬಾರಿಗೆ ಕಾಂಗ್ರೆಸ್ ಕಳೆದುಕೊಂಡಿದೆ. ಕ್ಷೇತ್ರದಲ್ಲಿ ಐವರು ಕಾಂಗ್ರೆಸ್, ಇಬ್ಬರು ಮೇಲ್ಮನೆ ಸದಸ್ಯರು, ಒಬ್ಬರು ಸಚಿವರು, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಹಾಗೂ ಜಿಲ್ಲೆಯವರೇ ಆದ ಸಚಿವ ಕೆ.ಹೆಚ್.ಮುನಿಯಪ್ಪ ಇದ್ದರೂ ಮೈತ್ರಿ ಅಭ್ಯರ್ಥಿ ಎಂ.ಮಲ್ಲೇಶ್‌ಬಾಬು ಗೆಲ್ಲುವ ಮೂಲಕ ಕಾಂಗ್ರೆಸ್‌ಗೆ ಮೈತ್ರಿ ಟಕ್ಕರ್ ಕೊಟ್ಟಿದೆ. ಆದರೆ ಕೊನೆಯಲ್ಲಿ ಕಾಂಗ್ರೆಸ್ ಟಿಕೆಟ್ ಪಡೆದು ಸ್ಪರ್ಧಿಸಿದ್ದ ಕೆ.ವಿ.ಗೌತಮ್ ಹರಕೆಯ ಕುರಿಯಾದರು ಎಂದರೆ ತಪ್ಪಾಗಲಾರದು. ಇದನ್ನೂ ಓದಿ: ವಾಲ್ಮೀಕಿ ನಿಗಮದಲ್ಲಿ ಕೋಟ್ಯಂತರ ಹಗರಣ – ಇಂದೇ ನಾಗೇಂದ್ರ ರಾಜೀನಾಮೆ ಸಾಧ್ಯತೆ!

    ಕೋಲಾರ ಕ್ಷೇತ್ರದಲ್ಲಿ ರಮೇಶ್ ಕುಮಾರ್ ಬಣ ಹಾಗೂ ಕೆ.ಹೆಚ್.ಮುನಿಯಪ್ಪ ಮಧ್ಯೆ ಇರುವ ಕಿತ್ತಾಟ, ಎಡ-ಬಲ ಸಮುದಾಯದ ಗೊಂದಲ, ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದ ಶಾಸಕರು ಹಾಗೂ ಸಚಿವರ ರಾಜೀನಾಮೆ ಪ್ರಹಸನ ಈಗ ಪಕ್ಷಕ್ಕೆ ಮುಳುವಾಗಿದೆ. ಇನ್ನು ಕೆಲ ಕಾಂಗ್ರೆಸ್ ನಾಯಕರು ನಾನು ಎಂದು ಮೆರೆಯುತ್ತಿದ್ದರು. ಅವರಿಗೆ ತಕ್ಕ ಪಾಠ ಸಿಕ್ಕಿದೆ ಅನ್ನೋದು ಜೆಡಿಎಸ್ ಶಾಸಕ ಸಮೃದ್ದಿ ಮಂಜುನಾಥ್ ಮಾತು. ಮುನಿಯಪ್ಪ ಕೂಡ ಪ್ರಚಾರದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳದ್ದು, ಸೋಲಿನಲ್ಲಿ ಅಂತ್ಯ ಕಂಡಿದೆ. ಹಾಗಾಗಿ ಕೋಲಾರ ಸೋಲಿಗೆ ಟಿಕೆಟ್ ಕೊಡಿಸಿದವರನ್ನೆ ಕೇಳಿ ಎನ್ನುವ ಮೂಲಕ ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಕೂಡ ಜಾರಿಕೊಂಡಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಿಂದ ಹೊರಟ ಚಾರಣಿಗರಿಗೆ ನಿಜಕ್ಕೂ ಆಗಿದ್ದೇನು..?

    ಕಾಂಗ್ರೆಸ್‌ನ ಕಿತ್ತಾಟಕ್ಕಿಂತ ಮೈತ್ರಿಯೇ ಉತ್ತಮ ಅನ್ನೋ ನಂಬಿಕೆಯಿಂದ ಕೋಲಾರ ಮತದಾರರು ಮೈತ್ರಿ ಅಭ್ಯರ್ಥಿಗೆ ಜೈ ಎಂದು ಕಾಂಗ್ರೆಸ್ ಅಭ್ಯರ್ಥಿಯನ್ನು ಮಕಾಡೆ ಮಲಗಿಸಿದ್ದಾರೆ. ಕಾಂಗ್ರೆಸ್ ಸೋಲಿಗೆ ರಮೇಶ್ ಕುಮಾರ್ ಟೀಂ ಕಾರಣ ಎನ್ನುತ್ತಿದ್ದಾರೆ. ಕಾಂಗ್ರೆಸ್ ಕೋಲಾರಕ್ಕೆ ಯಾವುದೇ ಯೋಜನೆ ತಂದಿಲ್ಲ. ಬಜೆಟ್‌ನಲ್ಲೂ ಕೋಲಾರವನ್ನು ಕಡೆಗಣಿಸಲಾಗಿದೆ. ಸಚಿವ ಸ್ಥಾನವೂ ಸಿಕ್ಕಿಲ್ಲ ಎಂಬ ಅಂಶಗಳು ಕಾಂಗ್ರೆಸ್ ಅಭ್ಯರ್ಥಿ ಸೋಲಿಗೆ ಕಾರಣ ಎನ್ನಲಾಗುತ್ತಿದೆ. ಇದನ್ನೂ ಓದಿ: ಸಾಲ ವಾಪಸ್ ಕೊಡುತ್ತೇನೆಂದು ಕರೆಸಿ ಮಹಿಳೆ ಕೊಲೆ – ರೇಷ್ಮೆ ತೋಟದಲ್ಲಿ ಶವ ಹೂತಿಟ್ಟು ಆರೋಪಿ ಎಸ್ಕೇಪ್!

    ರಾಜ್ಯ ರಾಜಕೀಯದಲ್ಲಿ ಕೋಲಾರ ಜಿಲ್ಲಾ ಕಾಂಗ್ರೆಸ್‌ನ ಗುಂಪುಗಾರಿಗೆ ಸಖತ್ ಸೌಂಡ್ ಮಾಡಿತ್ತು. ರಾಜೀನಾಮೆ ಪ್ರಹಸನವೂ ಕೂಡ ಪಕ್ಷಕ್ಕೆ ಮುಳುವಾದಂತೆ ಕಾಣಿಸುತ್ತಿದೆ. ಕೋಲಾರ ಕಾಂಗ್ರೆಸ್‌ನ 2 ಬಣಗಳನ್ನು ಒಂದುಗೂಡಿಸುವುದರಲ್ಲಿ ಹೈಕಮಾಂಡ್ ಕೂಡ ವಿಫಲವಾಗಿದ್ದು, ಇದು ಕೂಡ ಗೌತಮ್ ಸೋಲಿಗೆ ಕಾರಣ ಎನ್ನಲಾಗಿದೆ. ಇದನ್ನೂ ಓದಿ: ಸರ್ಕಾರ ರಚನೆ ಮಾಡುವ ಚಿಂತನೆ ಕೈಬಿಟ್ಟ ‘ಇಂಡಿಯಾ’ ಮೈತ್ರಿಕೂಟ

  • ಈ ದೇಶಕ್ಕೆ ಹಿಡಿದಿರುವ ಶನಿ ಅಂದ್ರೆ ಅದು ಮೋದಿ: ರಮೇಶ್ ಕುಮಾರ್ ಆಕ್ಷೇಪಾರ್ಹ ಹೇಳಿಕೆ

    ಈ ದೇಶಕ್ಕೆ ಹಿಡಿದಿರುವ ಶನಿ ಅಂದ್ರೆ ಅದು ಮೋದಿ: ರಮೇಶ್ ಕುಮಾರ್ ಆಕ್ಷೇಪಾರ್ಹ ಹೇಳಿಕೆ

    – ದೇವೇಗೌಡರ ನೆರಳಿಗೆ ಹೋಗಿ ಬದುಕಿ ಚೆನ್ನಾಗಾದವ್ರು ಯಾರೂ ಇಲ್ಲ ಎಂದ ಮಾಜಿ ಸ್ಪೀಕರ್

    ಕೋಲಾರ: ಈ ದೇಶಕ್ಕೆ ಹಿಡಿದಿರುವ ಶನಿ ಎಂದರೆ ಅದು ಮೋದಿ (Narendra Modi) ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ (Ramesh Kumar) ನಾಲಿಗೆ ಹರಿಬಿಟ್ಟಿದ್ದಾರೆ.

    ಕೋಲಾರದಲ್ಲಿ (Kolar) ಮಾತನಾಡಿರುವ ಅವರು, ಈ ದೇಶಕ್ಕೆ ಹಿಡಿದಿರುವ ಶನಿ ಅಂದರೆ ಅದು ಮೋದಿ. ಜೂ.4 ಕ್ಕೆ ನಾವು ಕಾಯುತ್ತಿದ್ದೇವೆ. ಈ ದೇಶಕ್ಕೆ ಹಿಡಿದಿರುವ ಶನಿ ಬಿಟ್ಟು ಹೋಗಲಿ ಎಂದು. ದೇವರಲ್ಲಿ ಕೈ ಮುಗಿದು ಬೇಡಿಕೊಂಡಿದ್ದೇವೆ. ಇಂದಿರಾ ಗಾಂಧಿ ಕೂತಿದ್ದ ಸೀಟಲ್ಲಿ ಬಂದು ಕೂತುಬಿಟ್ಟೆ. ಎಲ್ಲಾ ಜಾತಿ ಜನಾಂಗದವರಿಗೆ ಆತ್ಮಸ್ಥೈರ್ಯ ತುಂಬಿದ್ದರು ಇಂದಿರಾ ಗಾಂಧಿ. ಎಂತಹವರ ಜಾಗಕ್ಕೆ ಎಂತಹವರು ಬಂದು ಕೂತಿದ್ದಾನೆ. ಸಂತೆಯಲ್ಲಿ ಹಾವಾಡಿಗ ಸುಳ್ಳು ಹೇಳೋದು ಕೇಳಿದ್ದೇವೆ. ಪ್ರಧಾನಿ ಸುಳ್ಳು ಹೇಳೋದು ಈ ಪ್ರಪಂಚದಲ್ಲಿಯೇ ಕೇಳಿರಲಿಲ್ಲ ಎಂದು ಪ್ರಧಾನಿ ವಿರುದ್ಧ ಏಕವಚನದಲ್ಲಿಯೇ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಇಂದು ಹುಬ್ಬಳ್ಳಿಗೆ ಜೆಪಿ ನಡ್ಡಾ – ನೇಹಾ ಕುಟುಂಬಸ್ಥರ ಭೇಟಿ ಸಾಧ್ಯತೆ

    ದೇವೇಗೌಡರ ನೆರಳಿಗೆ ಹೋಗಿ ಬದುಕಿ ಚೆನ್ನಾಗಿ ಆದವರು ಯಾರೂ ಇಲ್ಲ. ಚೆನ್ನಾಗಿ ಬದುಕಿದವರಿಗೇನು ಈ ಗತಿ ಬಂತು ಎಂದು ನನಗೆ ದುಃಖ. ಇರಲಿ, ರೈತನ ಮಗ ಎಂದು ಪ್ರಧಾನಿ ಮಾಡಿದ್ದೆವು. ಆತನ ಮಗ ಮುಖ್ಯಮಂತ್ರಿಯಾಗಿದ್ದರು. ಇವರು ಸೇರಿದ್ದು ಬಿಜೆಪಿ ಜೊತೆಗೆ. ಒಬ್ಬ ಪ್ರಧಾನ ಮಂತ್ರಿ, ಒಬ್ಬ ಮುಖ್ಯಮಂತ್ರಿ ಮೂರು ಸೀಟುಗಳನ್ನ ತೆಗೆದುಕೊಂಡಿದ್ದಾರೆ ಈ ಬಾರಿ. ಅದರಲ್ಲೂ ಒಂದು ಮಗನಿಗೆ ಇನ್ನೊಂದು ಮೊಮ್ಮಗನಿಗೆ ಎಂದು ವ್ಯಂಗ್ಯವಾಡಿದ್ದಾರೆ. ಅಳಿಯನನ್ನು ನಿಮ್ಮ ಲೆಕ್ಕದಲ್ಲಿ ಕೊಡಿ ಎಂದು ಅಲ್ಲಿಗೆ ಕಳಿಸಿದ್ರು. ಇವರ ಹಣೆಬರಹಕ್ಕೆ ಅವರತ್ರ ಹೋಗಿ ಸಲಾಂ ಹೊಡೆಯುತ್ತಿದ್ದಾರೆ ಎಂದು ದೊಡ್ಡಗೌಡರ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.

    ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ವಿರುದ್ಧ ವಾಗ್ದಾಳಿ ನಡೆಸಿದ ರಮೇಶ್ ಕುಮಾರ್, ಅವನ್ಯಾರೋ ಒಬ್ಬ ದೊಡ್ಡಮನುಷ್ಯ ಆಗಿದ್ದ. ಅವನು ಬಿಟ್ಟರೆ ಬೆಳಕು ಆಗೋದಿಲ್ಲ. ಬ್ಯಾಂಕು ಇರೋದಿಲ್ಲ, ಸಾಲನೂ ಸಿಗೋದಿಲ್ಲ. ಎಲ್ಲಪ್ಪಲೇ ಎಲ್ಲಿದ್ದಿಯೋ, ಬದುಕಿದ್ದಿಯೇನಪ್ಪ. ನೀನು ಬಹಳ ಶ್ರೀಕೃಷ್ಣನ ತರಹ, ನೂರಾರು ಕಡೆ ಜೀವನ ಮಾಡೋನು. ಎಲ್ಲಿದ್ಯಪ್ಪ, ಇವತ್ತು ಹಾಲ್ಟ್ ಎಲ್ಲಪ್ಪ. ಪರಿಶಿಷ್ಟ ಜಾತಿ ಅವರಿಗೆ ಒಂದು ರೂಪಾಯಿ ಸಾಲ ಕೊಡ್ತಿರ್ಲಿಲ್ಲ. ಬಡವರಿಗೆ ಮಹಿಳೆಯರಿಗೆ ಸಾಲ ಕೊಡುತ್ತಿರಲಿಲ್ಲ. ಸಾಲ ಕೊಟ್ಟದ್ದು ರಮೇಶ್ ಕುಮಾರ್ ಕಣ್ಣು ಬಿಟ್ಟ ಮೇಲೆ. ರಮೇಶ್ ಕುಮಾರ್‌ನ ಕೆಳಗೆ ಇಳಿಸಿದ್ದೀರ ಈಗ ಒಂದು ರೂಪಾಯಿ ಕೊಟ್ಟಿದ್ದೀರ? ಏನು ಹೇಳ್ತಿರಾ ನನ್ನ ಮೇಲೆ, ಕಳ್ಳತನ ಮಾಡಿದ್ದಾರೆ ಅಂತ ಹೇಳ್ತಿರಾ? ಅಸೆಂಬ್ಲಿಯಲ್ಲಿ ಮಾತನಾಡಿಲ್ಲ ಅಂತ ಹೇಳ್ತಿರ? ಲಂಚ ತೆಗೆದುಕೊಂಡಿದ್ದಾನೆ ಅಂತ ಹೇಳ್ತಿರಾ? ಏನಿದೆ ನನ್ನ ಮೇಲೆ ನೀವು ಹೇಳುವುದಕ್ಕೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಮಂಡ್ಯದಿಂದ ಸುಮಲತಾ ದೂರ; ಹೆಚ್‌ಡಿಕೆ ಪರ ಪ್ರಚಾರಕ್ಕಿಳಿಯದ ಸಂಸದೆ – ಬರ್ತಾರೆ ನೋಡೋಣ ಎಂದ ಮಾಜಿ ಸಿಎಂ

  • ಶ್ರೀನಿವಾಸ್ ಹತ್ಯೆ ಪ್ರಕರಣ- ಇಬ್ಬರು ಆರೋಪಿಗಳಿಗೆ ಗುಂಡೇಟು

    ಶ್ರೀನಿವಾಸ್ ಹತ್ಯೆ ಪ್ರಕರಣ- ಇಬ್ಬರು ಆರೋಪಿಗಳಿಗೆ ಗುಂಡೇಟು

    ಕೋಲಾರ: ಕಾಂಗ್ರೆಸ್ (Congress) ಮುಖಂಡ ಕೌನ್ಸಿಲರ್ ಶ್ರೀನಿವಾಸ್ (shrinivas) ಕೊಲೆ ಪ್ರಕರಣದ ಮೂವರು ಆರೋಪಿಗಳನ್ನು ಬಂಧಿಸಿದ್ದು, ಕರೆತರುವ ವೇಳೆ ಪೊಲೀಸರ (Police) ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ವೇಮಗಲ್ ಪೊಲೀಸ್ ಠಾಣಾ ಇನ್ಸ್‌ಪೆಕ್ಟರ್ ವೆಂಕಟೇಶ್ ಗುಂಡು ಹಾರಿಸಿದ್ದಾರೆ.

    ಆರೋಪಿಗಳನ್ನು ಬಂಧಿಸಿ ಕರೆತರುವ ವೇಳೆ ಲಕ್ಷ್ಮೀಸಾಗರ ಅರಣ್ಯ ಪ್ರದೇಶದ ಬಳಿ ಪ್ರಮುಖ ಆರೋಪಿ ವೇಣುಗೋಪಾಲ್ ಹಾಗೂ ಮನೀಂದ್ರ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ. ಈ ವೇಳೆ ಇಬ್ಬರ ಕಾಲಿಗೆ ಗುಂಡು ಹಾರಿಸಲಾಗಿದೆ. ಈ ವೇಳೆ ಮತ್ತೊಬ್ಬ ಆರೋಪಿ ಸಂತೋಷ್‍ಗೂ ಗಾಯವಾಗಿದೆ. ಇದನ್ನೂ ಓದಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬಲಗೈ ಬಂಟ ಬರ್ಬರ ಹತ್ಯೆ

    ಆರೋಪಿಗಳು ನಡೆಸಿದ ಹಲ್ಲೆಯಿಂದ ಇನ್ಸ್‌ಪೆಕ್ಟರ್ ವೆಂಕಟೇಶ್, ಸಿಬ್ಬಂದಿ ಮಂಜುನಾಥ್ ಮತ್ತು ನಾಗೇಶ್ ಅವರು ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಶ್ರೀನಿವಾಸಪುರ ಹೊರವಲಯದ ಹೊಗಳಗೆರೆ ರಸ್ತೆಯಲ್ಲಿ ನೂತನವಾಗಿ ನಿರ್ಮಾಣ ಮಾಡುತ್ತಿದ್ದ ಬಾರ್ ಕಾಮಗಾರಿ ವೀಕ್ಷಣೆ ಹೋಗಿದ್ದಾಗ ಆರು ಜನ ದುಷ್ಕರ್ಮಿಗಳು ಪರಿಚಯಸ್ಥರಂತೆ ಮಾತಾಡಿಸಿ ಚಾಕು ಇರಿದು ಹತ್ಯೆ ಮಾಡಿದ್ದರು. ಪ್ರಕರಣ ಸಂಬಂಧ ಆರು ಜನರ ಪೈಕಿ ಮೂವರು ಜನ ಪ್ರಮುಖ ಆರೋಪಿಗಳ ಬಂಧನವಾಗಿದೆ. ಇದನ್ನೂ ಓದಿ: ಮಹಿಳೆಯ ಹಸ್ತಕ್ಷೇಪದಿಂದ ಇಕ್ಕಟ್ಟಿಗೆ ಸರ್ಕಾರ – ದೇವರಗುಡ್ಡದ ಐತಿಹಾಸಿಕ ಕಾರ್ಣಿಕ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬಲಗೈ ಬಂಟ ಬರ್ಬರ ಹತ್ಯೆ

    ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬಲಗೈ ಬಂಟ ಬರ್ಬರ ಹತ್ಯೆ

    ಕೋಲಾರ: ಮಾಜಿ ಸ್ಪೀಕರ್ ರಮೇಶ್ ಕುಮಾರ್ (Ramesh Kumar) ಬಲಗೈ ಬಂಟ, ದಲಿತ ಮುಖಂಡ ಕೌನ್ಸಿಲರ್ ಶ್ರೀನಿವಾಸ್ (Shrinivas) ಅವರನ್ನು ಕೊಲೆ ಮಾಡಿ ಹತ್ಯೆ ಮಾಡಲಾಗಿದೆ.

    ಶ್ರೀನಿವಾಸಪುರ ಹೊರವಲಯದ ಹೊಗಳಗೆರೆ ರಸ್ತೆಯಲ್ಲಿ ನೂತನವಾಗಿ ನಿರ್ಮಾಣ ಮಾಡುತ್ತಿದ್ದ ಬಾರ್ (Bar) ಕಾಮಗಾರಿ ವೀಕ್ಷಣೆ ಹೋಗಿದ್ದಾಗ ಆರು ಜನ ಅಪರಿಚಿತ ದುಷ್ಕರ್ಮಿಗಳು ದಾಳಿ ಮಾಡಿದ್ದಾರೆ.  ಇದನ್ನೂ ಓದಿ: Bigg Boss Kannada: ವರ್ತೂರ್ ಸಂತೋಷ್ ಗೆ ಹುಲಿ ಉಗುರು ಕೊಟ್ಟಿದ್ದಾರು?

     

    ಎದೆ, ತಲೆ, ದೇಹದ ಮೈಮೇಲೆ ಗಂಭೀರ ಗಾಯಗೊಂಡಿದ್ದ ಅವರನ್ನು ಕೋಲಾರದ ಜಾಲಪ್ಪ ಆಸ್ಪತ್ರೆಗೆ (Jalappa Hospital) ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

    ಶ್ರೀನಿವಾಸ್‌ ಕಾರು ಚಾಲಕ ಪ್ರತಿಕ್ರಿಯಿಸಿ, 6 ಮಂದಿ ವ್ಯಕ್ತಿಗಳು ಮಾತನಾಡಲು ಆಗಮಿಸಿದ್ದರು. ಈ ವೇಳೆ ವ್ಯಕ್ತಿಯೊಬ್ಬ ಮುಖದ ಮೇಲೆ ಸ್ಪ್ರೇ ಸಿಂಪಡಿಸಿದ್ದಾನೆ. ನಂತರ ಅವರ ಮೇಲೆ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾರೆ. ಕೃತ್ಯ ಎಸಗಿದವರು ನಮ್ಮ ಏರಿಯಾದ ಹುಡುಗರೇಎಂದು ತಿಳಿಸಿದ್ದಾರೆ.

     
    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಾಂಗ್ರೆಸ್ ಸರ್ಕಾರವನ್ನು ಬೀಳಿಸುವಷ್ಟು ಶಕ್ತಿ ಯಾರಿಗೂ ಇಲ್ಲ: ಕೊತ್ತೂರು ಮಂಜುನಾಥ್

    ಕಾಂಗ್ರೆಸ್ ಸರ್ಕಾರವನ್ನು ಬೀಳಿಸುವಷ್ಟು ಶಕ್ತಿ ಯಾರಿಗೂ ಇಲ್ಲ: ಕೊತ್ತೂರು ಮಂಜುನಾಥ್

    ಕೋಲಾರ: ಕಾಂಗ್ರೆಸ್ (Congress) ಸರ್ಕಾರವನ್ನು ಬೀಳಿಸುವಷ್ಟು ಶಕ್ತಿ ಯಾರಿಗೂ ಇಲ್ಲ. ನಾವು 136 ಜನ ಶಾಸಕರು ಇದ್ದೇವೆ. ಸರ್ಕಾರವನ್ನು ಬೀಳಿಸಲು ಯಾರ ಕೈಯಲ್ಲೂ ಆಗುವುದಿಲ್ಲ ಎಂದು ಶಾಸಕ ಕೊತ್ತೂರು ಮಂಜುನಾಥ್ (Kottur Manjunath)  ಹೇಳಿದ್ದಾರೆ.

    ಕೋಲಾರದಲ್ಲಿ (Kolar) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆ ಶಿವಕುಮಾರ್ (DK Shivakumar) ಹಾಗೂ ಸಿದ್ದರಾಮಯ್ಯ (Siddaramaiah) ಇರುವವರೆಗೂ ಯಾರಿಗೂ ಕದಲಿಸಲು ಆಗುವುದಿಲ್ಲ. ಅವಿರಿಬ್ಬರು ನಮಗೆ ಅಂತರಗಂಗೆ ಬೆಟ್ಟ ಇದ್ದಂತೆ. ಆ ಬೆಟ್ಟವನ್ನು ಕದಲಿಸಲು ಸಾಧ್ಯವಿಲ್ಲ. ಮಾತನಾಡಿಕೊಳ್ಳುವವರು ಮಾತನಾಡಿಕೊಳ್ಳಲಿ. ಸರ್ಕಾರ ಸುಭಿಕ್ಷವಾಗಿದೆ, ಚೆನ್ನಾಗಿದೆ, ಖುಷಿಯಾಗಿದೆ ಎಂದರು. ಇದನ್ನೂ ಓದಿ: ಸಿಂಗಾಪುರದಲ್ಲಿ ತಂತ್ರಗಾರಿಕೆ – ಕಾಂಗ್ರೆಸ್ ಸರ್ಕಾರಕ್ಕೆ ಆಪರೇಷನ್ ಭೀತಿ?

    ಬಿಕೆ ಹರಿಪ್ರಸಾದ್ (BK Hariprasad) ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಮಳೆ, ಗಾಳಿ ಹೇಳಿ ಬರುವುದಿಲ್ಲ. ಬಿಕೆ ಹರಿಪ್ರಸಾದ್ ಮಾತು ಈ ಮಾತಿಗೆ ಸಮ ಎಂದು ಲೇವಡಿ ಮಾಡಿದರು. ಇನ್ನು ರಮೇಶ್ ಕುಮಾರ್ (Ramesh Kumar) ಅವರಿಗೆ ರಾಜ್ಯಸಭಾ ಸದಸ್ಯ ಸ್ಥಾನ ವಿಚಾರದ ಕುರಿತು ಮಾತನಾಡಿದ ಅವರು, ರಮೇಶ್ ಕುಮಾರ್ ಅವರು ಕೋಲಾರದ ಹುಲಿ. ನಮ್ಮ ಜಿಲ್ಲೆಯ ಶಾಸಕರು ಯಾರೂ ಈ ರೀತಿ ಕೇಳಿಲ್ಲ. ಅವರಿಗೆ ಅಂತಹ ದರಿದ್ರ ಏನೂ ಇಲ್ಲ ಎಂದು ಹೇಳಿದರು. ಇದನ್ನೂ ಓದಿ: ವೇಲು ನಾಯ್ಕರ್ ಡಿಕೆಶಿ ಬಗ್ಗೆಯೂ ಹೇಳಿದ್ದ – ಹನಿಟ್ರ್ಯಾಪ್‌ ಆರೋಪಕ್ಕೆ ಮುನಿರತ್ನ ತಿರುಗೇಟು

    ಅಧಿಕಾರಕ್ಕಾಗಿ ಕೈಚಾಚುವ ಪರಿಸ್ಥಿತಿ ಇಲ್ಲ. ಅವರ ಮನೆ ಬಾಗಿಲಿಗೆ ಬಂದಿದ್ದನ್ನ ಬೇಡ ಎಂದು ಹೇಳುವ ವ್ಯಕ್ತಿ ಅವರು. ವಿಸಿಲ್ ಹೊಡೆಯುವ ಟೈಮಲ್ಲಿ ಅವರಿಗೆ ಬೇಕಾದ ಪೋಸ್ಟ್ ಸಿಗುತ್ತೆ. ಅವರು ನ್ಯಾಯ, ನೀತಿ, ಧರ್ಮ ಎಂದು ಪಾಲನೆ ಮಾಡುವವರು. ಜನರ ತೀರ್ಮಾನಕ್ಕೆ ಬದ್ಧನಾಗಿದ್ದೇನೆ ಎಂದು ಹೇಳುತ್ತಾರೆ. ಅವರಿಗೆ ಶಕ್ತಿಯಾಗಿ ನಾವು ಇರುತ್ತೇವೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಉಚಿತವಾಗಿ ಕೊತ್ತಂಬರಿ ಸೊಪ್ಪು ವಿತರಿಸಿದ ಸಿದ್ದರಾಮಯ್ಯ ಅಭಿಮಾನಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪ್ರಧಾನಿಯಾಗಿರುವವರು ಪಂಚಾಯ್ತಿ ಚುನಾವಣೆಗಳಲ್ಲಿ ತಿರುಗುವ ಹಾಗೆ ತಿರುಗ್ತಿದ್ದಾರೆ: ರಮೇಶ್ ಕುಮಾರ್

    ಪ್ರಧಾನಿಯಾಗಿರುವವರು ಪಂಚಾಯ್ತಿ ಚುನಾವಣೆಗಳಲ್ಲಿ ತಿರುಗುವ ಹಾಗೆ ತಿರುಗ್ತಿದ್ದಾರೆ: ರಮೇಶ್ ಕುಮಾರ್

    ಕೋಲಾರ: ಪ್ರಧಾನಿಯಾಗಿರುವವರು ಪಂಚಾಯ್ತಿ ಚುನಾವಣೆಗಳಲ್ಲಿ ತಿರುಗುವ ಹಾಗೆ ತಿರುಗ್ತಿದ್ದಾರೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ (Ramesh Kumar) ವ್ಯಂಗ್ಯವಾಡಿದ್ದಾರೆ.

    ಕೋಲಾರ ಜಿಲ್ಲೆಯ ಶ್ರೀನಿವಾಸಪುರದ ರಾಯಲಪಾಡುನಲ್ಲಿ ಮಾತನಾಡುತ್ತಾ ರಾಜ್ಯದಲ್ಲಿ ಪ್ರದಾನಿ ನರೇಂದ್ರ ಮೋದಿ (Narendra Modi) ಪ್ರವಾಸ ಕುರಿತು ಪ್ರತಿಕ್ರಿಯಿಸಿ, ಮದನಪಲ್ಲಿಯಲ್ಲಿ ಬೀಡಿ ಮಾರಾಟ ಮಾಡಲು ತಿರುಗುವ ಹಾಗೆ ಇವರು ತಿರುಗುತ್ತಿದ್ದಾರೆ. ಲಾಲ್ ಬಹಾದ್ದೂರ್ ಶಾಸ್ತ್ರಿ, ಇಂದಿರಾಗಾಂಧಿಯಂತಹವರೆಲ್ಲ ಪ್ರಧಾನಿ ಆಗಿದ್ದರು, ಈ ರೀತಿ ಆಡಲಿಲ್ಲ. ನಿಮ್ಮ ಸಚಿವರು ಲಂಚ ತೆಗೆದುಕೊಂಡಿದ್ದಾರೆ ಎಂದು ಗುತ್ತಿಗೆದಾರರು ಬರೆದ ಪತ್ರಕ್ಕೆ ಈ ದಿನದವರೆಗೂ ಉತ್ತರ ನೀಡಲಿಲ್ಲ ಎಂದು ಕಿಡಿಕಾರಿದರು.

    7 ಕೆ.ಜಿ ಕೊಡುತ್ತಿದ್ದ ಅಕ್ಕಿಯನ್ನು 4 ಕೆ.ಜಿಗೆ ಇಳಿಸಿದರು. ಕಾಂಗ್ರೆಸ್‍ನ ಗುರುತಿನಿಂದ ಗೆದ್ದ ಶಾಸಕರನ್ನು ಕೋಟ್ಯಂತರ ಹಣ ಕೊಟ್ಟು ಖರೀದಿಸಿದರು. ಹೀಗೆ ಸರ್ಕಾರ ರಚಿಸಿ ಈ ರೀತಿಯಾಗಿ ಸರ್ಕಾರ ನಡೆಸುತ್ತಿದ್ದಾರೆ. ಕರ್ನಾಟಕದ ಬಿಜೆಪಿ ಸರ್ಕಾರ ಪ್ರಜಾಪ್ರಭುತ್ವವನ್ನು ಸರ್ವನಾಶ ಮಾಡಿದೆ. ಈ ಸರ್ಕಾರಕ್ಕೆ ಮಾನವೀಯತೆ ಇಲ್ಲ, ಅರ್ಥವೂ ಇಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಬಿಎಸ್‌ವೈ, ಬೊಮ್ಮಾಯಿಗೆ ಕೇವಲ ಮೂರೂವರೆ ವರ್ಷ ಮಾತ್ರ ಅವಕಾಶ ಸಿಕ್ಕಿದೆ – ಮೋದಿ

    84 ವರ್ಷದ ಮಹಾತ್ಮ ಗಾಂಧಿಯವರನ್ನು ಗುಂಡಿಟ್ಟು ಕೊಂದಿದ್ದು ಆರ್‍ಎಸ್‍ಎಸ್. ಆರ್‍ಎಸ್‍ಎಸ್ ಅಂದ್ರೆ ಅದು ಬಿಜೆಪಿ, ಬಿಜೆಪಿ ಅಂದ್ರೆ ಅದು ಬಜರಂಗದಳ ಎಂದು ಹೇಳುವ ಮೂಲಕ ಬಜರಂಗದಳ ನಿಷೇಧವನ್ನು ರಮೇಶ್ ಕುಮಾರ್ ಸಮರ್ಥಿಸಿಕೊಂಡರು.

  • ದರ್ಗಾದಲ್ಲಿ ಗಳಗಳನೆ ಅತ್ತ ರಮೇಶ್ ಕುಮಾರ್

    ದರ್ಗಾದಲ್ಲಿ ಗಳಗಳನೆ ಅತ್ತ ರಮೇಶ್ ಕುಮಾರ್

    ಕೋಲಾರ: ಮಾಜಿ ಸ್ಪೀಕರ್ ರಮೇಶ್ ಕುಮಾರ್ (Ramesh Kumar) ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮುಸ್ಲಿಂ ಮುಖಂಡನ ಆರೋಗ್ಯ ವಿಚಾರಿಸುವ ವೇಳೆ ಗಳಗಳನೇ ಕಣ್ಣೀರು ಹಾಕಿರುವ ವೀಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

    ಇದೇ ತಿಂಗಳ 18ರಂದು ಕೋಲಾರ (Kolar) ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಅಡ್ಡಗಲ್‌ನಲ್ಲಿ ಈ ಘಟನೆ ನಡೆದಿದೆ. ನಾಮಪತ್ರ ಸಲ್ಲಿಕೆಗೂ ಮುನ್ನ ಕಾಂಗ್ರೆಸ್‌ ಮುಖಂಡ ರಮೇಶ್ ಕುಮಾರ್ ಸ್ವಗ್ರಾಮ ಅಡ್ಡಗಲ್‌ನಲ್ಲಿರುವ ಮಸೀದಿಗೆ (Mosque) ಭೇಟಿ ನೀಡಿದ್ದರು. ಈ ವೇಳೆ ಮುಸ್ಲಿಂ ಮುಖಂಡ ಎದುರಾಗಿದ್ದಾನೆ. ಆತ ಸ್ಟ್ರೋಕ್‌ನಿಂದಾಗಿ ಅಂಗವಿಕಲನಾಗಿರುವುದನ್ನು ರಮೇಶ್‌ ಕುಮಾರ್‌ ಗಮನಿಸಿದ್ದಾರೆ. ಈ ವೇಳೆ ಆತನ ಪರಿಸ್ಥಿತಿಯನ್ನು ನೋಡಿ ಕಣ್ಣೀರು ಹಾಕಿದ್ದಾರೆ. ಇದನ್ನೂ ಓದಿ: ಅವರದ್ದು ಬರೀ ಕುಟುಂಬ ರಾಜಕಾರಣ, ಯಾರು ಪ್ರಶ್ನೆ ಮಾಡಬಾರದು ಅಂದರೆ ಹೇಗೆ: ಎಚ್‌ಡಿಕೆ ವಿರುದ್ಧ ಸುಮಲತಾ ಕಿಡಿ

    ರಮೇಶ್ ಕುಮಾರ್ ಕಣ್ಣೀರಿನ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಚುನಾವಣೆ ಹೊತ್ತಿನಲ್ಲಿ ಕಣ್ಣೀರು ಹಾಕಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಅನೇಕ ರೀತಿಯಲ್ಲಿ ಟೀಕೆ ಕೇಳಿಬರುತ್ತಿದೆ. ಮೊಸಳೆ ಕಣ್ಣೀರು, ಕಪ್ಪೆ ರಾಯನ ಕಣ್ಣೀರು ಎಂದು ಕಾಮೆಂಟ್‌ ಮಾಡಿರುವ ನೆಟ್ಟಿಗರು ರಮೇಶ್ ಕುಮಾರ್ ಕುರಿತು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯಗೆ ಪುಕ್ಕಲುತನ ಕಾಡ್ತಿರೋದ್ರಿಂದ 18 ವರ್ಷ ತುಂಬದ ಮೊಮ್ಮಗ ಜೊತೆ ಪ್ರಚಾರಕ್ಕೆ ಬರ್ತಿದ್ದಾರೆ – ಸಿಂಹ ಕಿಡಿ

  • ಮಾಡೋದು ಹರಿಕಥೆ, ತಿನ್ನೋದು ಬದನೇಕಾಯಿ – ಅಂಥವರಿಗೆ ಕೋಲಾರದ ಜನ ಮರುಳಾಗ್ಬೇಡಿ: HDK

    ಮಾಡೋದು ಹರಿಕಥೆ, ತಿನ್ನೋದು ಬದನೇಕಾಯಿ – ಅಂಥವರಿಗೆ ಕೋಲಾರದ ಜನ ಮರುಳಾಗ್ಬೇಡಿ: HDK

    – ಮುಸ್ಲಿಮರೂ ನನ್ನ ಪಕ್ಷವನ್ನ ನಂಬಿ ಬನ್ನಿ ಎಂದ ಮಾಜಿ ಸಿಎಂ

    ಕೋಲಾರ: ಈಗಿನ ರಾಜಕಾರಣಿಗಳು ಕೋಲಾರ (Kolar) ಜಿಲ್ಲೆಯ ಜನತೆಯೊಂದಿಗೆ ಚೆಲ್ಲಾಟ ಆಡಿದ್ದಾರೆ. ಬಹಳ ಹರಿಶ್ಚಂದ್ರರಂತೆ ಮಾತನಾಡ್ತಾರೆ. ನೀರಿನ ಹೆಸರು ಹೇಳಿಕೊಂಡು ಚುನಾವಣೆಗೆ ಜೇಬು ತುಂಬಿಸಿಕೊಂಡಿದ್ದಾರೆ. ಮಾಡೋದು ಹರಿಕಥೆ, ತಿನ್ನೋದು ಬದನೇಕಾಯಿ. ಅಂಥವರ ಮಾತಿಗೆ ಕೋಲಾರದ ಜನ ಮರುಳಾಗಬೇಡಿ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumaraswamy), ಮಾಜಿ ಸ್ಪೀಕರ್ ರಮೇಶ್ ಕುಮಾರ್  (Ramesh Kumar) ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

    ಕೋಲಾರ ಜಿಲ್ಲೆಯ ಮುಳಬಾಗಲು ತಾಲ್ಲೂಕಿನ ಶಿನಿಗೇನಹಳ್ಳಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯರಗೋಳ್ ಜಲಾಶಯದಲ್ಲಿ ನೀರು ಬರಲು ದಿವಂಗತ ಆಲಂಗೂರು ಶ್ರೀನಿವಾಸ್ ಅವರೇ ಕಾರಣ. ನನ್ನ ಹೋರಾಟವೂ ಕೋಲಾರ ಜಿಲ್ಲೆಗೆ ಉಪಯುಕ್ತ ಕುಡಿಯುವ ನೀರು ಕೊಡಬೇಕೆಂಬುದೇ ಆಗಿದೆ. ಆದ್ರೆ ಕೆಲವರಿಂದ ಹಂತ-ಹಂತವಾಗಿ ಈ ಜಿಲ್ಲೆಯ ಜನತೆಗೆ ವಿಷ ಕೊಡುವ ಕೆಲಸ ಆಗ್ತಿದೆ. ಕೆ.ಸಿ.ವ್ಯಾಲಿ ನೀರು ಕೊಟ್ಟು ವಿಷ ನೀಡುತ್ತಿದ್ದಾರೆ. ಈ ಬಾರಿ 6ಕ್ಕೆ 6 ಕ್ಷೇತ್ರಗಳಲ್ಲಿ ಕೋಲಾರದ ಜನತೆ ಜೆಡಿಎಸ್ ಪಕ್ಷವನ್ನ ಗೆಲ್ಲಿಸಿದ್ರೆ, ಮುಂದಿನ 5 ವರ್ಷದೊಳಗೆ ಪರಿಶುದ್ಧ ಕುಡಿಯುವ ನೀರು ಸಿಗುವಂತೆ ಮಾಡುತ್ತೇನೆ ಎಂದು ಶಪಥ ಮಾಡಿದ್ದಾರೆ.

    ಈಗಿನ ರಾಜಕಾರಣಿಗಳು ಕೋಲಾರ ಜಿಲ್ಲೆಯ ಜನತೆಯೊಂದಿಗೆ ಚೆಲ್ಲಾಟ ಆಡಿದ್ದಾರೆ. ಬಹಳ ಹರಿಶ್ಚಂದ್ರರಂತೆ ಮಾತನಾಡ್ತಾರೆ. ನೀರಿನ ಹೆಸರು ಹೇಳಿಕೊಂಡು ಚುನಾವಣೆಗೆ ಜೇಬು ತುಂಬಿಸಿಕೊಂಡಿದ್ದಾರೆ. ಮಾಡೋದು ಹರಿಕಥೆ, ತಿನ್ನೋದು ಬದನೇಕಾಯಿ. ಅಂಥವರ ಮಾತಿಗೆ ಕೋಲಾರ ಜನ ಮರುಳಾಗಬೇಡಿ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಹೆರಿಟೇಜ್, ಡೂಡ್ಲ, ಆರೋಕ್ಯ ಹಾಲಿನ ಬ್ರಾಂಡ್‍ಗಳು ನಂದಿನಿಯ ಅಕ್ಕತಂಗಿಯರಾ?: ಪ್ರತಾಪ್ ಸಿಂಹ

    ಜೆಡಿಎಸ್ (JDS) ಪಕ್ಷಕ್ಕೆ ಒಳ್ಳೆಯ ದಿನ ಬರುವ ನಂಬಿಕೆಯಿದೆ. ಕಾಂಗ್ರೆಸ್ (Congress) ತೊರೆದು ಪ್ರಮುಖ ಮುಖಂಡರು ನಮ್ಮ ಪಕ್ಷ ಸೇರಿದ್ದಾರೆ. ಪಕ್ಷಕ್ಕೆ ಸೇರುವವರಿಗೆ ನಾನು ಅಬಾರಿಯಾಗಿದ್ದೇನೆ. 2(0) ಯಿಂದ 3(0)ಗೆ ಹಾಕಿರುವ ಬಣಜಿಗ ಸಮುದಾಯದ ಪರವಾಗಿ ನಾನಿದ್ದೇನೆ. ಅವರ ಸಮಸ್ಯೆ ಸರಿಪಡಿಸುವ ಕೆಲಸ ಮಾಡ್ತೇವೆ. ಮುಸ್ಲಿಮರೂ ಸಹ ನನ್ನ ಪಕ್ಷವನ್ನ ನಂಬಿ ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಮೂಲಭೂತ ಸೌಕರ್ಯ ಕೊಡದೇ ಪ್ರಚಾರಕ್ಕೆ ಬಂದ್ರೆ ವೋಟ್ ಕೊಡಲ್ಲ: ನಿಖಿಲ್‌ಗೆ ಮಹಿಳೆಯರಿಂದ ತರಾಟೆ