Tag: Ramesh Babu Bandisidde Gowda

  • ಕೊಲೆ ಆರೋಪಿ ತಾಲೂಕು ಕಸಾಪ ಅಧ್ಯಕ್ಷ ಸ್ಥಾನದಿಂದ ತೆರವು – ರಾಜ್ಯಾಧ್ಯಕ್ಷ ಆದೇಶ

    ಕೊಲೆ ಆರೋಪಿ ತಾಲೂಕು ಕಸಾಪ ಅಧ್ಯಕ್ಷ ಸ್ಥಾನದಿಂದ ತೆರವು – ರಾಜ್ಯಾಧ್ಯಕ್ಷ ಆದೇಶ

    ಮಂಡ್ಯ: ಕೊಲೆ ಆರೋಪಿಯಾಗಿದ್ದ ಕುಮಾರ್ ಎಂಬ ವ್ಯಕ್ತಿಯನ್ನು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕಸಾಪ ಅಧ್ಯಕ್ಷನನ್ನಾಗಿ ಮಾಡಿದ್ದ ಕನ್ನಡ ಸಾಹಿತ್ಯ ಪರಿಷತ್ (Kannada Sahitya Parishat) ಇದೀಗ ಅಧ್ಯಕ್ಷ ಸ್ಥಾನದಿಂದ ತೆರವು ಮಾಡಿ ಆದೇಶ ಹೊರಡಿಸಿದೆ. ಕಸಾಪ ರಾಜ್ಯಾಧ್ಯಕ್ಷ ಮಹೇಶ್ ಜೋಶಿ (Mahesh Joshi) ಆದೇಶ ಹೊರಡಿಸಿದ್ದಾರೆ.

    ಈ ಬಾರಿ ಸಕ್ಕರೆ ನಾಡು ಮಂಡ್ಯದಲ್ಲಿ (Mandya) ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವ ಹಿನ್ನೆಲೆ ಸಿದ್ಧತೆಗೆ ಜಿಲ್ಲೆಯ ತಾಲೂಕು ಅಧ್ಯಕ್ಷರನ್ನು ನೇಮಕ ಮಾಡಲಾಗಿತ್ತು. ಶ್ರೀರಂಗಪಟ್ಟಣ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ತಮ್ಮ ಆಪ್ತನಾದ ಎಂ.ಬಿ ಕುಮಾರ್‌ ಅವರನ್ನು ಆಯ್ಕೆ ಮಾಡುವಂತೆ ಶಿಪಾರಸ್ಸು ಮಾಡಿದ್ದರು. ಇದನ್ನೂ ಓದಿ: ಶಿರೂರು ಗುಡ್ದ ಕುಸಿತ ದುರಂತ: ನಾಪತ್ತೆಯಾಗಿದ್ದ ಲಾರಿ ಚಾಲಕ ಅರ್ಜುನ್ ಶವ, ಲಾರಿ ಪತ್ತೆ

    ಅದರಂತೆ ಕುಮಾರ್‌ನನ್ನು ಶ್ರೀರಂಗಪಟ್ಟಣದ ಅಧ್ಯಕ್ಷನನ್ನಾಗಿಯೂ‌ ಕಸಾಪ ನೇಮಕ ಮಾಡಿತ್ತು. ಕುಮಾರ್ 2015ರಲ್ಲಿ ನಡೆದ ಕೊಲೆ‌ ಪ್ರಕರಣವೊಂದರಲ್ಲಿ 30ನೇ ಆರೋಪಿಯಾಗಿದ್ದು, ಜಾಮೀನಿನ ಮೇಲೆ ಹೊರಗೆ ಇದ್ದಾನೆ. ಈ ಬಗ್ಗೆ ʻಪಬ್ಲಿಕ್ ಟಿವಿʼ ಸೆ.19ರಂದು ವಿಸ್ತೃತ ವರದಿ ಪ್ರಸಾರ ಮಾಡಿತ್ತು. ಇದನ್ನೂ ಓದಿ: ಕೊಲೆ‌ ಆರೋಪಿಯನ್ನು ಕಸಾಪ ತಾಲೂಕು ಅಧ್ಯಕ್ಷನನ್ನಾಗಿ ಮಾಡಲು ಶಾಸಕ ಶಿಫಾರಸು

    ಯಾವುದೇ ಕ್ರಿಮಿನಲ್ ಹಿನ್ನೆಲೆ ಉಳ್ಳ ವ್ಯಕ್ತಿಗೆ ಕಸಾಪದಲ್ಲಿ ಯಾವ ಹುದ್ದೆಗಳನ್ನು ನೀಡಬಾರದು ಎಂದು ಬೈಲಾದಲ್ಲಿ ಇದೆ. ಹೀಗಿದ್ದರೂ ಕೊಲೆ ಆರೋಪಿಯಾಗಿರುವ ಕುಮಾರ್‌ಗೆ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ಶಿಫಾರಸ್ಸಿಗೆ ಮಣಿದು ಅಧ್ಯಕ್ಷ ಸ್ಥಾನ ಕೊಡಲಾಗಿದೆ ಎಂದು ಪಬ್ಲಿಕ್ ಟಿವಿಯಲ್ಲಿ ವರದಿ ಪ್ರಸಾರವಾಗಿತ್ತು. ಇದನ್ನೂ ಓದಿ: ಗಂಭೀರ ಆರೋಪಗಳಿರುವಾಗ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು: ಸಂತೋಷ್‌ ಹೆಗ್ಡೆ

    ವರದಿಯ ಬೆನ್ನಲ್ಲೇ ಕಸಾಪ ರಾಜ್ಯಾಧ್ಯಕ್ಷ ಮಹೇಶ್ ಜೋಶಿ ಈ ಬಗ್ಗೆ ಪೂರ್ವಪರ ವಿಚಾರ ಮಾಡಿ ಎಂ.ಬಿ ಕುಮಾರ್‌ನನ್ನು ಶ್ರೀರಂಗಪಟ್ಟಣ ತಾಲೂಕು ಅಧ್ಯಕ್ಷ ಸ್ಥಾನದಿಂದ ತೆರವುಗೊಳಿಸಿ ಆದೇಶ ಹೊರಡಿಸಿದ್ದಾರೆ. ಸದ್ಯ ಶ್ರೀರಂಗಪಟ್ಟಣ ಕಸಾಪ ತಾಲೂಕು ಅಧ್ಯಕ್ಷರಾಗಿ ಸಿದ್ದಲಿಂಗಯ್ಯ ಎಂಬುವವರನ್ನು ಆಯ್ಕೆ ಮಾಡಲಾಗಿದೆ.

  • ಕೊಲೆ‌ ಆರೋಪಿಯನ್ನು ಕಸಾಪ ತಾಲೂಕು ಅಧ್ಯಕ್ಷನನ್ನಾಗಿ ಮಾಡಲು ಶಾಸಕ ಶಿಫಾರಸು

    ಕೊಲೆ‌ ಆರೋಪಿಯನ್ನು ಕಸಾಪ ತಾಲೂಕು ಅಧ್ಯಕ್ಷನನ್ನಾಗಿ ಮಾಡಲು ಶಾಸಕ ಶಿಫಾರಸು

    ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ರಾಜ್ಯದಲ್ಲಿ‌ ಅತೀ ಹೆಚ್ಚು ಕನ್ನಡ ಮಾತನಾಡುವವರ ಜಿಲ್ಲೆ ಸಕ್ಕರೆ ನಾಡು ಮಂಡ್ಯದಲ್ಲಿ ನಿಗದಿ ಮಾಡಲಾಗಿದೆ. ಹೀಗಿರುವಾಗ ಶಾಸಕರೊಬ್ಬರು ತನ್ನ ಆಪ್ತರೂ ಆದ ಕೊಲೆ ಆರೋಪಿಯನ್ನು ಕಸಾಪ ತಾಲೂಕು ಅಧ್ಯಕ್ಷರನ್ನಾಗಿ ಮಾಡಲು ಶಿಫಾರಸು ಹೊರಡಿಸಿದ್ದಾರೆ.

    ಶ್ರೀರಂಗಪಟ್ಟಣ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ತನ್ನ ಆಪ್ತ, ಕೊಲೆ ಆರೋಪಿಯಾಗಿ ಜಾಮೀನಿನ ಮೇಲೆ ಹೊರಗೆ ಇರುವ ಒಬ್ಬ ವ್ಯಕ್ತಿಗೆ ತನ್ನ ಶಿಫಾರಸಿನಿಂದ ತಾಲೂಕಿನ ಕನ್ನಡ ಸಾಹಿತ್ಯ ಅಧ್ಯಕ್ಷ ಸ್ಥಾನದ ಜವಾಬ್ದಾರಿ ವಹಿಸಿದ್ದಾರೆ.

    ಡಿಸೆಂಬರ್ ತಿಂಗಳಿನಲ್ಲಿ‌ ಜರುಗುವ ಈ ಕನ್ನಡ ಹಬ್ಬಕ್ಕೆ ಮಂಡ್ಯ ಒಂದು ಕಡೆ ಪೂರ್ವಭಾವಿ ಸಿದ್ಧತೆಯಲ್ಲಿ ಇದೆ. ಮಂಡ್ಯದಲ್ಲಿ ಈ‌ ಬಾರಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರೋದು ಸಮ್ಮೇಳನಕ್ಕೆ ಮತ್ತಷ್ಟು ಮೆರಗು ತಂದಿದೆ. ಇನ್ನೊಂದೆಡೆ ಶ್ರೀರಂಗಪಟ್ಟಣ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ತಮ್ಮ ಆಪ್ತನಾದ ಕೊಲೆ ಆರೋಪಿ ಜೊತೆ ಜಾಮೀನು ಮೇಲೆ‌ ಹೊರಗೆ ಇರುವ ಎಂ.ಬಿ.ಕುಮಾರ್ ಎಂಬ ವ್ಯಕ್ತಿಗೆ ತಮ್ಮ ಶಿಫಾರಸಿನ ಮೂಲಕ ಕಸಾಪ ಶ್ರೀರಂಗಪಟ್ಟಣ ತಾಲೂಕು ಅಧ್ಯಕ್ಷನನ್ನಾಗಿ ಮಾಡಿದ್ದಾರೆ. ಈ ಮೂಲಕ ಜಾಮೀನಿನ ಮೇಲೆ ಹೊರಗೆ ಇರುವ ಕೋಲೆ‌ ಆರೋಪಿಯನ್ನು ಕನ್ನಡದ ತೇರನ್ನು‌ ಎಳೆಯಲು ಮುಂಬದಿಗೆ ನಿಲ್ಲಿಸಿರೋದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

    ಕಸಾಪ ಶ್ರೀರಂಗಪಟ್ಟಣ ತಾಲೂಕು ಅಧ್ಯಕ್ಷರಾಗಿರುವ ಎಂ.ಬಿ.ಕುಮಾರ್, ಶಾಸಕ‌ ರಮೇಶ್ ಬಾಬು ಬಂಡಿಸಿದ್ದೇಗೌಡ ಆಪ್ತ. ಈತ 2015 ಜನವರಿ 3 ರಂದು ನಡೆದ ರೌಡಿಶೀಟರ್ ಕೊಲೆ ಕೇಸ್‌ನಲ್ಲಿ 30ನೇ ಆರೋಪಿಯಾಗಿದ್ದಾನೆ.‌ ಸದ್ಯ ಈ ಕುಮಾರ್ ಬೇಲ್ ಮೇಲೆ ಹೊರಗೆ ಇದ್ದಾನೆ. ಕಸಾಪ ಬೈಲಾ ಪ್ರಕಾರ ಕ್ರಿಮಿನಲ್ ಕೇಸ್ ಹಿನ್ನೆಲೆ ಉಳ್ಳ ಯಾವ ವ್ಯಕ್ತಿಗೂ ಕಸಾಪ ಜವಾಬ್ದಾರಿಯನ್ನು ನೀಡಬಾರದು ಎಂದಿದೆ. ಹೀಗಿದ್ದರೂ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡನ ಒತ್ತಡಕ್ಕೆ ಮಣಿದು ಎಂ.ಬಿ.ಕುಮಾರ್‌ನನ್ನು‌ ಶ್ರೀರಂಗಪಟ್ಟಣ ತಾಲೂಕು ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಕಸಾಪ ರಾಜ್ಯಾಧ್ಯಕ್ಷ ನಾಡೋಜ ಮಹೇಶ್ ಜೋಶಿ, ಈ ಬಗ್ಗೆ ನನ್ನ ಗಮನಕ್ಕೆ ಈಗಷ್ಟೇ ಬಂದಿದೆ. ಈ ಸಂಬಂಧ ವಿಚಾರಣೆ ನಡೆಸಿ ಒಂದು ವೇಳೆ ತಪ್ಪಿದ್ಧರೆ ಶಿಸ್ತು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

  • ನಮ್ಮೂರಿಗೆ ರಸ್ತೆಯಿಲ್ಲ, ನೀರು ಕೊಟ್ಟಿಲ್ಲ, ಈಗ್ಯಾಕೆ ಬಂದ್ರಿ-ಗ್ರಾಮಸ್ಥರಿಂದ ಶಾಸಕರಿಗೆ ಫುಲ್ ಕ್ಲಾಸ್

    ನಮ್ಮೂರಿಗೆ ರಸ್ತೆಯಿಲ್ಲ, ನೀರು ಕೊಟ್ಟಿಲ್ಲ, ಈಗ್ಯಾಕೆ ಬಂದ್ರಿ-ಗ್ರಾಮಸ್ಥರಿಂದ ಶಾಸಕರಿಗೆ ಫುಲ್ ಕ್ಲಾಸ್

    ನಮ್ಮೂರಿಗೆ ರಸ್ತೆಯಿಲ್ಲ, ನೀರು ಕೊಟ್ಟಿಲ್ಲ, ಈಗ್ಯಾಕೆ ಬಂದ್ರಿ-ಗ್ರಾಮಸ್ಥರಿಂದ ಶಾಸಕರಿಗೆ ಫುಲ್ ಕ್ಲಾಸ್

    ಮಂಡ್ಯ: ಜೆಡಿಎಸ್‍ನ ಬಂಡಾಯ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ಅವರಿಗೆ ಮೇಳಾಪುರ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ.

    ಮಂಡ್ಯ ಹಾಗೂ ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕರಾಗಿರುವ ಬಂಡಿಸಿದ್ದೇಗೌಡ ಅವರು ಕಳೆದ ಸೆಪ್ಟಂಬರ್ 9ರಂದು ಮೇಳಾಪುರ ಗ್ರಾಮಕ್ಕೆ ಬಂದಿದ್ದಾರೆ. ಈ ಸಂದರ್ಭದಲ್ಲಿ ಶಾಸಕರ ಕಾರನ್ನು ತಡೆದು ಊರಿನಲ್ಲಿ ರಸ್ತೆ ಹಾಗೂ ಶುದ್ಧ ಕುಡಿಯುವ ನೀರಿಗೆ ತೊಂದರೆಯಿದೆ. ಇದನ್ನು ಸರಿಪಡಿಸಲಾಗದೆ ನೀವು ಯಾಕೆ ನಮ್ಮ ಯೂರಿಗೆ ಬಂದಿದ್ದೀರಿ ಎಂದು ಗ್ರಾಮಸ್ಥರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

    ನಮ್ಮೂರಿನ ರಸ್ತೆಯಲ್ಲಿ ವಯಸ್ಸಾದವರನ್ನು ಕೆರದುಕೊಂಡು ಹೋಗಲು ಆಗುತ್ತಿಲ್ಲ. ಇತ್ತೀಚೆಗೆ ಮೂವರು ಬಿದ್ದು ಗಾಯ ಮಾಡಿಕೊಂಡಿದ್ದಾರೆ. ಹಬ್ಬಕ್ಕಾಗಿ ಬೇರೆ ಊರಿನಿಂದ ನಮ್ಮೂರಿಗೆ ಬರುವವರು ನಮ್ಮ ಊರನ್ನು ಬೈದುಕೊಂಡು ಹೋಗುತ್ತಾರೆ. ಇದನ್ನು ಸರಿಪಡಿಸದ ನೀವು ಈಗ ಯಾಕೆ ಬಂದಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಶಾಸಕರು ಸರಿಪಡಿಸಿಕೊಡುವುದಾಗಿ ಕ್ಷಮೆ ಕೇಳಿದ್ದಾರೆ. ಆದರೆ ಗ್ರಾಮಸ್ಥರು ಬಂದಾಗೆಲ್ಲಾ ಕ್ಷಮೆ ಕೇಳಿಕೊಂಡು ಹೋಗ್ತೀರಿ ಎಂದು ಮತ್ತೆ ಅವರ ಮೇಲೆ ಹರಿಯಾಯ್ದಿದ್ದಾರೆ.

    ಕೊನೆಗೆ ಅಲ್ಲಿದ್ದ ಸ್ಥಳೀಯರೇ ಆಕ್ರೋಶಗೊಂಡ ಜನರನ್ನು ಸಮಾಧಾನ ಮಾಡಿ, ಶಾಸಕರನ್ನು ಕಳುಹಿಸಿ ಕೊಟ್ಟಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸರಿಯಾಗಿ ಕೆಲಸ ಮಾಡದೆ ಇರುವ ಎಲ್ಲಾ ರಾಜಕಾರಣಿಗಳಿಗೂ ಇದೇ ಪರಿಸ್ಥಿತಿ ಬರುತ್ತದೆ ಎಂದು ಮತದಾರರು ಮಾತನಾಡಿಕೊಳ್ಳುತ್ತಿದ್ದಾರೆ.

    https://www.youtube.com/watch?v=KYhkBK4-I1E