Tag: Ramesh Arvind

  • ಕಾರವಾರ | ದೇವಬಾಗ್ ಕಡಲ ತೀರದಲ್ಲಿ ನಟ ರಮೇಶ್ ಅರವಿಂದ್

    ಕಾರವಾರ | ದೇವಬಾಗ್ ಕಡಲ ತೀರದಲ್ಲಿ ನಟ ರಮೇಶ್ ಅರವಿಂದ್

    ಕಾರವಾರ: ಸಿನಿಮಾ ನಿರೂಪಣೆ, ಪ್ರೊಡಕ್ಷನ್ ಎಂದು ಸದಾ ಬ್ಯೂಸಿಯಾಗಿರುವ ನಟ ರಮೇಶ್ ಅರವಿಂದ್ (Ramesh Arvind) ಉತ್ತರ ಕನ್ನಡ ಜಿಲ್ಲೆಯ ಪ್ರವಾಸ ಕೈಗೊಂಡಿದ್ದಾರೆ. ಇದನ್ನೂ ಓದಿ: ಮಾಜಿ ಸಚಿವರಿಗೆ ಕಾಂಗ್ರೆಸ್ ನಾಯಕಿ ಹನಿಟ್ರ್ಯಾಪ್‌; 20 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದ ಮಹಿಳೆ ಪೊಲೀಸರಿಗೆ ಲಾಕ್

    ಕುಟುಂಬದ ಜೊತೆ ಪ್ರವಾಸ ಕೈಗೊಂಡಿರುವ ರಮೇಶ್‌ ಅರವಿಂದ್‌ ದಾಂಡೇಲಿಯ ಟ್ರಿಪ್‌ ಬಳಿಕ ಕಾರವಾರದ ದೇವಬಾಗ್ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ

    ಇಂದು (ಅ.26) ಬೆಳಗ್ಗೆ ಕಾರವಾರಕ್ಕೆ ಬಂದಿಳಿದ ಅವರು ದೇವಬಾಗ್ ಕಡಲತೀರದಲ್ಲಿ ಸುತ್ತಾಡಿದ್ದಾರೆ. ಬಳಿಕ ಬೋಟ್ ಮೂಲಕ ಕೂರ್ಮಗಡ ದ್ವೀಪ ಹಾಗೂ ಸುತ್ತಮುತ್ತಲ ಕಡಲ ಸೌಂದರ್ಯವನ್ನು ಆಸ್ವಾದಿಸಿದರು.ಇದನ್ನೂ ಓದಿ: ಜಾರ್ಖಂಡ್ ವಿಧಾನಸಭಾ ಚುನಾವಣೆ ರಾಯಭಾರಿಯಾಗಿ ಲೆಜೆಂಡ್ ಕ್ರಿಕೆಟಿಗ ಎಂ.ಎಸ್ ಧೋನಿ ನೇಮಕ

  • ಮತದಾರರ ಜಾಗೃತಿಗಾಗಿ ರಮೇಶ್ ಅರವಿಂದ್, ನೀತು ಸೇರಿದಂತೆ ನಾಲ್ವರು ರಾಯಭಾರಿ

    ಮತದಾರರ ಜಾಗೃತಿಗಾಗಿ ರಮೇಶ್ ಅರವಿಂದ್, ನೀತು ಸೇರಿದಂತೆ ನಾಲ್ವರು ರಾಯಭಾರಿ

    ಲೋಕಸಭಾ ಚುನಾವಣೆಗೆ (Election) ಸಂಬಂಧಿಸಿದಂತೆ ಮತದಾರರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ವಿವಿಧ ರಂಗದ 4 ಪ್ರಮುಖ ವ್ಯಕ್ತಿಗಳನ್ನು ರಾಯಭಾರಿಯಾಗಿ (Ambassador) ನಿಯೋಜನೆ ಮಾಡಲಾಗಿದೆ.  ಖ್ಯಾತ ನಟ, ನಿರ್ದೇಶಕ ರಮೇಶ್ ಅರವಿಂದ್, ಬಿಗ್ ಬಾಸ್ ಸ್ಪರ್ಧಿ ನೀತು ವನಜಾಕ್ಷಿ (Neetu Vanajakshi) ಸೇರಿದಂತೆ ನಾಲ್ವರನ್ನು ಜಿಲ್ಲಾ ಚುನಾವಣಾಧಿಕಾರಿ ಮತ್ತು ಮುಖ್ಯ ಆಯುಕ್ತರಾದ  ತುಷಾರ್ ಗಿರಿ ನಾಥ್ ರಾಯಭಾರಿಗಳ ನೇಮಕ ಮಾಡಿದ್ದಾರೆ.

    ಮತದಾನ ಮಾಡುವ ಸಲುವಾಗಿ ನಗರದ ಜನತೆಗೆ ಹುಮ್ಮಸ್ಸು ತುಂಬಿಸುವ ಸಲುವಾಗಿ ಹಾಗೂ ಚುನಾವಣಾ ಹಬ್ಬಕ್ಕಾಗಿ ಈ 4 ಪ್ರಮುಖ ವ್ಯಕ್ತಿಗಳು ರಾಯಭಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

     

    ಬೆಂಗಳೂರು ನಗರದಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ‘ನಮ್ಮ ಬೆಂಗಳೂರು ಐಕಾನ್ಸ್’ ಹೆಸರಿನಲ್ಲಿ ನಟ, ರಮೇಶ್ ಅರವಿಂದ್ (Ramesh Arvind), ನಟಿ ಹಾಗೂ ರೂಪದರ್ಶಿ ನೀತು ವನಜಾಕ್ಷಿ, ಬ್ಯಾಡ್ಮಿಂಟನ್ ಆಟಗಾರ ಅನುಪ್ ಶ್ರೀಧರ್ ಹಾಗೂ ಟೇಬಲ್ ಟೆನ್ನಿಸ್ ಆಟಗಾರ್ತಿ ಅರ್ಚನಾ ಜಿ ಕಾಮತ್ ರಾಯಭಾರಿ ಆಗಿ ಆಯ್ಕೆಯಾಗಿದ್ದಾರೆ.

  • ಶಿವಾಜಿ ಸುರತ್ಕಲ್ ಚಿತ್ರಕ್ಕೆ ಶುಭ ಕೋರಿದ ಮಹಾರಾಜ ಯದುವೀರ್ ಒಡೆಯರ್

    ಶಿವಾಜಿ ಸುರತ್ಕಲ್ ಚಿತ್ರಕ್ಕೆ ಶುಭ ಕೋರಿದ ಮಹಾರಾಜ ಯದುವೀರ್ ಒಡೆಯರ್

    ಮೇಶ್ ಅರವಿಂದ್ (Ramesh Arvind) ಅವರ 103 ನೇ ಚಿತ್ರ ಶಿವಾಜಿ ಸುರತ್ಕಲ್ (Shivaji Suratkal) – ದಿ ಮಿಸ್ಟೀರಿಯಸ್ ಕೇಸ್ ಆಫ಼್ ಮಾಯಾವಿ ನಾಲ್ಕನೇ ವಾರಕ್ಕೆ ಕಾಲಿಡುತ್ತಿದೆ. ಅದರ ಓಟ ಭರ್ಜರಿಯಾಗಿ ಸಾಗುತ್ತಿದೆ. ಇನ್ನಷ್ಟು ಸಿಂಗಲ್ ಸ್ಕ್ರೀನ್ ಗಳು ಚಿತ್ರದ ಪ್ರದರ್ಶನಕ್ಕೆ ಸೇರ್ಪಡೆಯಾಗಿದೆ. ಚಿತ್ರದ ವಿತರಕರಾದ ಕೆ ಆರ್ ಜಿ ಸ್ಟೂಡಿಯೋಸ್ ಸಂಪೂರ್ಣ ಬೆಂಬಲಕ್ಕೆ ನಿಂತಿರುವುದು ವಿಶೇಷ.

    ಚಿತ್ರದ ಈ ಯಶಸ್ಸಿನ ನಡುವೆ ನಿರ್ದೇಶಕರಾದ ಆಕಾಶ್ ಶ್ರೀವತ್ಸ (Akash Srivaths) ಹಾಗೂ ನಿರ್ಮಾಪಕರಾದ ಅನೂಪ್ ಗೌಡ ಮೈಸೂರಿನ ಮಹಾರಾಜರಾದ ಯದುವೀರ್ ಒಡೆಯರ್ (Yaduvir Wodeyar) ಅವರನ್ನು ಭೇಟಿ ಮಾಡಿದ್ದಾರೆ. ಮಹಾರಾಜರು ಚಿತ್ರದ ಯಶಸ್ಸನ್ನು ಬಹಳ ಮೆಚ್ಚಿ, ಚಿತ್ರಕ್ಕೆ ಇನ್ನಷ್ಟು ಯಶಸ್ಸು ಸಿಗಲಿ ಎಂದು ಹಾರೈಸಿದ್ದಾರೆ. ಜೊತೆಗೆ ರಮೇಶ್ ಅರವಿಂದ್ ಅವರಿಗೆ ವಿಶೇಷ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಇದನ್ನೂ ಓದಿ:ಆರ್.ಎಲ್ ಜಾಲಪ್ಪ ವಿರುದ್ಧ ಸ್ಪರ್ಧಿಸಿ ಸೋತಿದ್ದರು ಹಿರಿಯ ನಟ ಶ್ರೀನಿವಾಸ್ ಮೂರ್ತಿ

    ಯದುವೀರರ ಬೆಂಬಲ ಇದು ಚಿತ್ರ ತಂಡಕ್ಕೆ, ತಮ್ಮ ಯಶಸ್ಸಿಗೆ ಮತ್ತೊಂದು ಗರಿ ಸೇರಿದಂತಾಗಿದೆ ಎಂದಿದೆ ಚಿತ್ರತಂಡ. ಚುನಾವಣೆಯ ಹಾಗೂ ಐ ಪಿ ಎಲ್ ನ ಭರದಲ್ಲಿ ಚಿತ್ರಕ್ಕೆ ಈ ಮಟ್ಟದ ಯಶಸ್ಸು ಸಿಕ್ಕಿರುವುದು ಗಮನಾರ್ಹ. ರಮೇಶ್ ಅರವಿಂದ್ ಜೊತೆಗೆ ಮೇಘನಾ ಗಾಂವ್ಕರ್ ಸೇರಿದಂತೆ ಅನೇಕ ಕಲಾವಿದರು ತಾರಾಗಣದಲ್ಲಿದ್ದು, ಅನೂಪ್ ಗೌಡ ಮತ್ತು ಆಕಾಶ್ ಶ್ರೀವತ್ಸ ಜೋಡಿ ಮತ್ತೊಮ್ಮೆ ಪ್ರೇಕ್ಷಕರನ್ನು ಮೋಡಿ ಮಾಡಿದೆ.

    ಶಿವಾಜಿ ಸುರತ್ಕಲ್ ಮೊದಲ ಭಾಗ ಕೂಡ ಯಶಸ್ಸಿ ಪ್ರದರ್ಶನದ ಜೊತೆಗೆ ಭರ್ಜರಿ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿತ್ತು. ಅದರ ಬೆನ್ನಲ್ಲೇ ಶಿವಾಜಿ ಸುರತ್ಕಲ್ ಪಾರ್ಟ್ ಮಾಡಲು ನಿರ್ದೇಶಕರು ಸಿದ್ಧತೆ ಮಾಡಿಕೊಂಡಿದ್ದರು. ಎರಡನೇ ಭಾಗ ಕೂಡ ಯಶಸ್ಸು ಕಂಡಿದೆ. ಹಾಗಾಗಿ ಮುಂದಿನ ಸಿನಿಮಾ ಯಾವುದು ಎನ್ನುವ ಕುರಿತು ಕುತೂಹಲ ಮೂಡಿದೆ.

  • Exclusive- ವೀಕೆಂಡ್ ವಿತ್ ರಮೇಶ್ 5 : ಮೊದಲ ಅತಿಥಿ ರಿಷಬ್ ಶೆಟ್ಟಿ ಅಲ್ಲ,  ಖ್ಯಾತ ಡಾನ್ಸರ್

    Exclusive- ವೀಕೆಂಡ್ ವಿತ್ ರಮೇಶ್ 5 : ಮೊದಲ ಅತಿಥಿ ರಿಷಬ್ ಶೆಟ್ಟಿ ಅಲ್ಲ, ಖ್ಯಾತ ಡಾನ್ಸರ್

    ಜೀ ಕನ್ನಡ ವಾಹಿನಿಯ ಜನಪ್ರಿಯ ಟಾಕ್ ಶೋ ವೀಕೆಂಡ್ ವಿತ್ ರಮೇಶ್ ಸೀಸನ್ 5 (Weekend with Ramesh) ಅತೀ ಶೀಘ್ರದಲ್ಲೇ ಶುರುವಾಗಲಿದೆ. ಮಾರ್ಚ್ 25ರಿಂದ ಪ್ರಸಾರವಾಗಲಿದೆ ಎನ್ನಲಾದ ಈ ಕಾರ್ಯಕ್ರಮದ ಮೊದಲ ಅತಿಥಿಯಾಗಿ ರಿಷಬ್ ಶೆಟ್ಟಿ (Rishabh Shetty) ಬರುತ್ತಾರೆ ಎಂದು ಹೇಳಲಾಗಿತ್ತು. ಈಗಾಗಲೇ ರಿಷಬ್ ಬಗ್ಗೆ ರಮೇಶ್ (Ramesh Arvind) ತಂಡ ಸಂಶೋಧನೆ ನಡೆಸಿದ್ದಾರೆ ಎಂಬ ಮಾಹಿತಿ ಇತ್ತು. ಅಲ್ಲದೇ, ರಿಷಬ್ ಮೊದಲನೇ ಎಪಿಸೋಡ್ ಗಾಗಿ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನುವ ಸುದ್ದಿಯಿತ್ತು. ಆದರೆ, ಮೊದಲ ಎಪಿಸೋಡಿನಲ್ಲಿ ಬರುವ ಅತಿಥಿ ಬದಲಾಗಿದ್ದಾರೆ.

    ನಿನ್ನೆಯಿಂದ ವೀಕೆಂಡ್ ವಿತ್ ರಮೇಶ್ ಸೀಸನ್ 5ರ ಚಿತ್ರೀಕರಣ ಶುರುವಾಗಿದ್ದು, ಮೊದಲನೇ ಅತಿಥಿಯಾಗಿ ಖ್ಯಾತ ನೃತ್ಯ ನಿರ್ದೇಶಕ, ನಿರ್ದೇಶಕ, ನಟ ಪ್ರಭುದೇವ (Prabhudeva) ಆಗಮಿಸಿದ್ದಾರೆ. ಸೀಸನ್ 5ರ ಮೊದಲ ಅತಿಥಿಯಾಗಿ ಪ್ರಭುದೇವ ಕಾಣಿಸಿಕೊಳ್ಳಲಿದ್ದಾರೆ. ನಿನ್ನೆ ಬೆಂಗಳೂರಿನ ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ನಡೆದ ಚಿತ್ರೀಕರಣದಲ್ಲಿ ಪ್ರಭುದೇವ ಪಾಲ್ಗೊಂಡಿದ್ದಾರೆ. ಇದನ್ನೂ ಓದಿ: ಬರ್ತ್‌ಡೇ ಸಂಭ್ರಮದ ಫೋಟೋ ಹಂಚಿಕೊಂಡ ರಾಧಿಕಾ ಪಂಡಿತ್

    ಮೈಸೂರು ಮೂಲದ ಪ್ರಭುದೇವ ಕನ್ನಡ, ತಮಿಳು ಮತ್ತು ಹಿಂದಿ ಸಿನಿಮಾ ರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು. ನಿರ್ದೇಶನ, ನಟನೆ, ನೃತ್ಯ ನಿರ್ದೇಶನ, ನಿರ್ಮಾಣ ಹೀಗೆ ಸಿನಿಮಾ ರಂಗದ ಹಲವಾರು ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು. ಪ್ರಭುದೇವ ಅವರ ತಂದೆ, ಸಹೋದರರು ಸಿನಿಮಾ ರಂಗದಲ್ಲೇ ದುಡಿದವರು. ಅಲ್ಲದೇ, ಪ್ರಭುದೇವ ಅವರ ಬದುಕು ವರ್ಣರಂಜಿತವಾದದ್ದು. ಹಾಗಾಗಿ ಸಹಜವಾಗಿಯೇ ಇವರ ಎಪಿಸೋಡ್ ಕುತೂಹಲದಿಂದ ಕೂಡಿರಲಿದೆ.

    ಸೀಸನ್ 5ರಲ್ಲಿ ಕೇವಲ ಸೆಲೆಬ್ರಿಟಿಗಳಿಗೆ ಮಾತ್ರವಲ್ಲ, ಸಾಮಾನ್ಯ ಸಾಧಕರಿಗೂ ಅವಕಾಶ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಕ್ರಿಕೆಟ್, ರಾಜಕಾರಣಿಗಳು, ಸಿನಿಮಾ, ಕಿರುತೆರೆ, ರಂಗಭೂಮಿ ಹೀಗೆ ಬೇರೆ ಬೇರೆ ಕ್ಷೇತ್ರಗಳ ಸಾಧಕರು ಈ ಬಾರಿ ವೀಕೆಂಡ್ ಕುರ್ಚಿಯ ಮೇಲೆ ಕೂತು, ತಮ್ಮ ಕಥೆಯನ್ನು ಹೇಳಿಕೊಳ್ಳಲಿದ್ದಾರೆ. ಎಂದಿನಂತೆ ರಮೇಶ್ ಅರವಿಂದ್ ಅವರ ಮಾತಿಗೆ ಕಿವಿಯಾಗಲಿದ್ದಾರೆ.

  • ‘ಸಿರಿ ಲಂಬೋದರ ವಿವಾಹ’ ಸಿನಿಮಾಗೆ ರಮೇಶ್ ಅರವಿಂದ್ ಸಾಥ್

    ‘ಸಿರಿ ಲಂಬೋದರ ವಿವಾಹ’ ಸಿನಿಮಾಗೆ ರಮೇಶ್ ಅರವಿಂದ್ ಸಾಥ್

    ಸೌರಭ್ ಕುಲಕರ್ಣಿ ನಿರ್ದೇಶನದ “ಸಿರಿ ಲಂಬೋದರ ವಿವಾಹ” (ಎಸ್ ಎಲ್ ವಿ) ಚಿತ್ರದ ಟೀಸರ್ ಇತ್ತೀಚಿಗೆ ಬಿಡುಗಡೆಯಾಗಿದೆ. ಖ್ಯಾತ ನಟ ರಮೇಶ್ ಅರವಿಂದ್ ಟೀಸರ್ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಈಗ ಚಿತ್ರೀಕರಣ ಪೂರ್ಣವಾಗಿ, ಮೊದಲಪ್ರತಿ ಸಿದ್ದವಾಗಿದೆ. “ಸಿರಿ ಲಂಬೋದರ ವಿವಾಹ” ಕಮರ್ಷಿಯಲ್ ಎಂಟರ್ಟೈನ್ಮೆಂಟ್ ವಿತ್ ಎ ಸಸ್ಪೆನ್ಸ್ ಥ್ರಿಲ್ಲರ್ ಎನ್ನಬಹುದು. ಸಿರಿ ಹಾಗೂ ಲಂಬೋದರ ಈ ಚಿತ್ರದ ನಾಯಕ, ನಾಯಕಿ ಅಲ್ಲ. ಮತ್ತೆ “ಸಿರಿ ಹಾಗೂ ಲಂಬೋದರ” ಯಾರು ಎಂದು ತಿಳಿಯಲು ಚಿತ್ರ ನೋಡಬೇಕು. ರಂಗಭೂಮಿ ಕಲಾವಿದರೇ ಹೆಚ್ಚಾಗಿ ಈತನ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಈಗ ಟೀಸರ್ ಬಿಡುಗಡೆ ಮಾಡಿದ್ದೇವೆ. ಇನ್ನೆರಡು ತಿಂಗಳಲ್ಲಿ ಚಿತ್ರವನ್ನು ನಿಮ್ಮ ಮುಂದೆ ತರುತ್ತೇವೆ.  ಮತ್ತೊಂದು ಖುಷಿಯ ವಿಚಾರವೆಂದರೆ, ಡಿಸೆಂಬರ್ ನಲ್ಲಿ  ಓಮನ್ ಹಾಗೂ ದುಬೈ ದೇಶಗಳಲ್ಲಿ ನಮ್ಮ ಚಿತ್ರದ ಪ್ರೀಮಿಯರ್ ನಡೆಯಲಿದೆ.  ನಾನು ಸೇರಿದಂತೆ ಅನೇಕ ಸಿನಿಮಾಸಕ್ತರು ಸೇರಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದೀವಿ. ಟೀಸರ್ ಬಿಡುಗಡೆ ಮಾಡಿಕೊಟ್ಟ ರಮೇಶ್ ಅರವಿಂದ್ ಅವರಿಗೆ ಧನ್ಯವಾದ ಎಂದರು ಸೌರಭ್ ಕುಲಕರ್ಣಿ.

    “ಸಿರಿ ಲಂಬೋದರ ವಿವಾಹ” ಸರಳ, ಸುಂದರ ಹಾಗೂ ಕುತೂಹಲ ಕಾಯ್ದುಕೊಳ್ಳುವ ಚಿತ್ರವೆಂದರು ನಟ ಸುಂದರ್ ವೀಣಾ. ನಾವು ಇಡೀ ತಂಡ ಮೂಲತಃ ರಂಗಭೂಮಿ ಅವರು.‌ ನಮ್ಮ ಚಿತ್ರ ಈಗ ತೆರೆಗೆ ಬರಲು ಸಿದ್ದವಾಗಿದೆ. ಒಳ್ಳೆಯ ಚಿತ್ರ ಮಾಡಿರುವ ಖುಷಿಯಿದೆ.  ನಾನು ಈ ಚಿತ್ರದಲ್ಲಿ ವೆಡ್ಡಿಂಗ್ ಪ್ಲಾನರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೀನಿ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಾಯಕ ಅಂಜನ್ ಎ ಭಾರದ್ವಾಜ್. ನಾನು ಈ ಹಿಂದೆ ಬಿ.ಸುರೇಶ್ ಅವರ “ದೇವರ ನಾಡಲ್ಲಿ” ಚಿತ್ರದಲ್ಲಿ ಅಭಿನಯಿಸಿದ್ದೆ. ಆನಂತರ ಈ ಚಿತ್ರದಲ್ಲಿ ಅಭಿನಯಿಸಿದ್ದೇನೆ. ಸೌರಭ್ ಹಾಗೂ ತಂಡದವರು ಮಾಡಿರುವ ಕಥೆ ಚೆನ್ನಾಗಿದೆ. ನನ್ನ ಪಾತ್ರ ಕೂಡ ಅಷ್ಟೆ ಚೆನ್ನಾಗಿದೆ ಎನ್ನುತ್ತಾರೆ ನಾಯಕಿ ದಿಶಾ ರಮೇಶ್. ಇದನ್ನೂ ಓದಿ:ನನ್ನ ಮಗನ ಕಾರು ಅಪಘಾತಕ್ಕೆ ‘ಬುಧ ಭಕ್ತಿ’ ಕಾರಣ ಎಂದ ಜಗ್ಗೇಶ್

    ಛಾಯಾಗ್ರಾಹಕ ಕಿಟ್ಟಿ ಕೌಶಿಕ್, ಸಂಗೀತ ನಿರ್ದೇಶಕ ಸಂಘರ್ಷ್ ಕುಮಾರ್ ಹಾಗೂ ಕಾರ್ಯಕಾರಿ ನಿರ್ಮಾಪಕಿ ನಮ್ರತಾ ಚಿತ್ರದ ಕುರಿತು ಮಾತನಾಡಿದರು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಹಿರಿಯ ನಟ ಮಂಡ್ಯ ರಮೇಶ್ ಚಿತ್ರತಂಡಕ್ಕೆ ಶುಭ ಕೋರಿದರು. ಅಂಜನ್ ಎ ಭಾರದ್ವಾಜ್, ದಿಶಾ ರಮೇಶ್, ರಾಜೇಶ್ ನಟರಂಗ, ಸುಂದರ್ ವೀಣಾ, ಪಿ.ಡಿ.ಸತೀಶ್ ಚಂದ್ರ, ಮಜಾಭಾರತದ ಶಿವು ಹಾಗೂ ಸುಶ್ಮಿತ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಸದಾನಂದ ಕಾಳೆ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ದಕ್ಷ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡ ಸಿಂಪಲ್ ಹುಡುಗಿ ಮೇಘನಾ ಗಾಂವ್ಕರ್

    ದಕ್ಷ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡ ಸಿಂಪಲ್ ಹುಡುಗಿ ಮೇಘನಾ ಗಾಂವ್ಕರ್

    ಶಿವಾಜಿ ಸುರತ್ಕಲ್ ಚಿತ್ರದ ಮುಂದಿನ ಸರಣಿ, ಶಿವಾಜಿ ಸುರತ್ಕಲ್-2 ಚಿತ್ರದಲ್ಲಿ ದಕ್ಷ ಪೊಲೀಸ್ ಅಧಿಕಾರಿಯಾಗಿ ಮೇಘನ ಗಾಂವ್ಕರ್ ಕಾಣಿಸಿಕೊಳ್ಳುತ್ತಿದ್ದಾರೆ. ಸಾಕಷ್ಟು ಯುವ ಮಹಿಳಾ ಪೊಲೀಸ್ ಅಧಿಕಾರಿಗಳ ಬಗ್ಗೆ ವಿವರವಾಗಿ ಅಧ್ಯಯನ ನಡೆಸಿ ನಿರ್ದೇಶಕರು ಈ ಪಾತ್ರವನ್ನು ಸೃಷ್ಟಿಸಿದ್ದಾರೆ, ವಿಶೇಷವೇನೆಂದರೆ ನಿಜ ಜೀವನದಲ್ಲಿ ಮೇಘನವರ ತಂದೆ ಕೂಡ ಒಬ್ಬ ಪೊಲೀಸ್ ಅಧಿಕಾರಿಯಾಗಿದ್ದು, ಈ ಪಾತ್ರದ ತಯಾರಿಗೆ ಮತ್ತಷ್ಟು ಸಹಕಾರಿಯಾಯಿತು. ಇನ್ನು ಚಿತ್ರದಲ್ಲಿ ಮೇಘನಾ ಅವರದ್ದು ಶಿವಾಜಿಯ ಮೇಲಧಿಕಾರಿಯ ಪಾತ್ರವಾಗಿದ್ದು, ತನಿಖೆಯ ಪ್ರತಿ ಹಂತದಲ್ಲೂ ಶಿವಾಜಿಯ ಜೊತೆಗಿದ್ದು ಚಿತ್ರಕ್ಕೆ ನಿಜವಾದ ಪೊಲೀಸ್ ಪವರ್ ಸಿಗುವಂತೆ ಮಾಡಿದ್ದಾರೆ.

    ಇನ್ನು ಶಿವಾಜಿ ಸುರತ್ಕಲ್-2 ಚಿತ್ರತಂಡವು ರಮೇಶ್ ಅರವಿಂದ್ ಅವರ ಹುಟ್ಟು ಹಬ್ಬದ ದಿನ ಸೆಪ್ಟೆಂಬರ್ 10 ರಂದು ಟೀಸರ್ ಬಿಡುಗಡೆ ಮಾಡಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಉಳಿದಂತೆ ಚಿತ್ರದ ಚಿತ್ರೀಕರಣ ಕೊನೆಯ ಹಂತದಲ್ಲಿದ್ದು, ಡಬ್ಬಿಂಗ್ ಕೆಲಸಗಳು ಶುರುವಾಗಿದೆ. ಇದನ್ನೂ ಓದಿ: ಜಯಶ್ರೀ, ಚೈತ್ರಾ ಬೆಸ್ಟಿ ಅಂದ ರೂಪೇಶ್- ಸಾನ್ಯಾಗೆ ಶುರುವಾಯ್ತು ಹೊಟ್ಟೆಕಿಚ್ಚು..?

    ಚಿತ್ರಕ್ಕೆ ಜೂಡ ಸ್ಯಾಂಡಿರವರ ಸಂಗೀತ ಮತ್ತು  ದರ್ಶನ್ ಅಂಬಟ್, ಗುರು ಪ್ರಸಾದ್ ಎಂ ಜಿ  ಛಾಯಾಗ್ರಹಣವಿದ್ದು, ಅಂಜನಾದ್ರಿ ಸಿನಿ ಕ್ರಿಯೇಶನ್ಸ್ ನಲ್ಲಿ ರೇಖಾ ಕೆ.ಎನ್ ಮತ್ತು ಅನುಪ್ ಗೌಡ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಆಕಾಶ್ ಶ್ರೀವತ್ಸರವರು ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ‘ವಿಕ್ರಾಂತ್ ರೋಣ’ 3 ಡಿ ಟ್ರೈಲರ್ ಲಾಂಚ್ ಮಾಡಿ, ರಕ್ಕಮ್ಮ ಹಾಡಿಗೆ ಹೆಜ್ಜೆ ಹಾಕಿದ ಶಿವರಾಜ್ ಕುಮಾರ್

    ‘ವಿಕ್ರಾಂತ್ ರೋಣ’ 3 ಡಿ ಟ್ರೈಲರ್ ಲಾಂಚ್ ಮಾಡಿ, ರಕ್ಕಮ್ಮ ಹಾಡಿಗೆ ಹೆಜ್ಜೆ ಹಾಕಿದ ಶಿವರಾಜ್ ಕುಮಾರ್

    ಕಿಚ್ಚ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾದ ಟ್ರೈಲರ್ ಲಾಂಚ್ ನಾಳೆ ಸಂಜೆ 5 ಗಂಟೆಗೆ ನಡೆಯಲಿದೆ. ಅದಕ್ಕೂ ಮುನ್ನ ಇಂದು 3 ಡಿ ಟ್ರೈಲರ್ ಅನ್ನು ಶಿವರಾಜ್ ಕುಮಾರ್ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಸುದೀಪ್ ನನ್ನ ಬ್ರದರ್ ಇದ್ದಹಾಗೆ. ನನ್ನ ಕುಟುಂಬಕ್ಕೂ ಕೂಡ ತೀರಾ ಹತ್ತಿರದವರು. ಅವರ ಶಾಂತಿ ನಿವಾಸ ಸಿನಿಮಾಗೆ ನಾನು ಸಣ್ಣದಾಗಿ ಧ್ವನಿ ನೀಡಿದ್ದೆ. ಅಲ್ಲದೇ, ನಿರ್ದೇಶಕ ಅನೂಪ್ ಭಂಡಾರಿ ಅವರ ರಂಗಿತರಂಗ ಸಿನಿಮಾವನ್ನು ನಾನು ಥಿಯೇಟರ್ ನಲ್ಲಿ ನೋಡಿದ್ದೆ’ ಎಂದು ನೆನಪುಗಳನ್ನು ಹಂಚಿಕೊಂಡರು.

    ಕೊರೊನಾ ವೇಳೆಯಲ್ಲಿ ಸುದೀಪ್ ಅವರು ಧೈರ್ಯ ಮಾಡಿಕೊಂಡು ವಿಕ್ರಾಂತ್ ರೋಣ ಸಿನಿಮಾ ಶೂಟಿಂಗ್ ಮಾಡಿದ್ದನ್ನು ಈ ಸಂದರ್ಭದಲ್ಲಿ ಶಿವರಾಜ್ ಕುಮಾರ್ ನೆನಪಿಸಿಕೊಂಡರು. ಕೊನೆಯಲ್ಲಿ ವಿಕ್ರಾಂತ್ ರೋಣ ಸಿನಿಮಾದ ಹುಕ್ ಸ್ಟೆಪ್ ಮಾಡಿದ ಶಿವಣ್ಣ, ವೇದಿಕೆಯ ಮೇಲೆಯೇ ರಾ ರಾ ರಕ್ಕಮ್ಮ ಸಿನಿಮಾದ ಹಾಡಿಗೆ ಹೆಜ್ಜೆ ಹಾಕಿದರು. ಇದನ್ನೂ ಓದಿ:ಇನ್ನೆರಡು ತಿಂಗಳಲ್ಲಿ ಶಿವರಾಜ್ ಕುಮಾರ್ ಮತ್ತು ಅರ್ಜುನ್ ಜನ್ಯ ಕಾಂಬಿನೇಷನ್ ಸಿನಿಮಾ: ರಮೇಶ್ ರೆಡ್ಡಿ

    ಕಾರ್ಯಕ್ರಮದಲ್ಲಿ ರವಿಚಂದ್ರನ್, ರಮೇಶ್ ಅರವಿಂದ್, ರಕ್ಷಿತ್ ಶೆಟ್ಟಿ, ಡಾಲಿ ಧನಂಜಯ್, ಸೃಜನ್ ಲೋಕೇಶ್, ರಾಜೀವ್ ನಿರ್ದೇಶಕ ನಂದಕಿಶೋರ್, ರಿಷಭ್ ಶೆಟ್ಟಿ, ರಾಜ್ ಬಿ ಶೆಟ್ಟಿ, ನಿರ್ಮಾಪಕ ಕೆ.ಪಿ ಶ್ರೀಕಾಂತ್ ಮತ್ತು ಎನ್. ಕುಮಾರ್ ಹಾಗೂ  ಸುದೀಪ್ ಪತ್ನಿ ಪ್ರಿಯಾ, ಮಗಳು ಸಾನ್ವಿ, ಸಹೋದರಿ ಸುಜಾತ ಸೇರಿದಂತೆ ಹಲವರು ಭಾಗಿಯಾಗಿದ್ದರು.

    Live Tv

  • ನಟ ರಮೇಶ್ ಅರವಿಂದ್ ಬರೆದ ಪುಸ್ತಕವನ್ನು ಬಿಡುಗಡೆ ಮಾಡಿದ ಕಿಚ್ಚ ಸುದೀಪ್ : ರಮೇಶ್ ಸೇರಿ ಹತ್ತು ಲೇಖಕರ ಕೃತಿಗಳು ಬಿಡುಗಡೆ

    ನಟ ರಮೇಶ್ ಅರವಿಂದ್ ಬರೆದ ಪುಸ್ತಕವನ್ನು ಬಿಡುಗಡೆ ಮಾಡಿದ ಕಿಚ್ಚ ಸುದೀಪ್ : ರಮೇಶ್ ಸೇರಿ ಹತ್ತು ಲೇಖಕರ ಕೃತಿಗಳು ಬಿಡುಗಡೆ

    ಸಿನಿಮಾ ಟೀಸರ್, ಟ್ರೈಲರ್ ಮಾತ್ರವಲ್ಲ ಕಿಚ್ಚ ಸುದೀಪ್ ಇದೀಗ ಸಾಹಿತ್ಯ ಕ್ಷೇತ್ರಕ್ಕೂ ಹೆಚ್ಚೆಚ್ಚು ಪ್ರೋತ್ಸಾಹ ನೀಡುತ್ತಿದ್ದಾರೆ. ಮೊನ್ನೆಯಷ್ಟೇ ಸಾವಣ್ಣ ಪ್ರಕಾಶನದ ಪುನೀತ್ ರಾಜ್ ಕುಮಾರ್ ಅವರ ಬಯೋಗ್ರಫಿ ‘ನೀನೇ ರಾಜಕುಮಾರ್’ ರಿಲೀಸ್ ಮಾಡಿದ್ದರು. ಇದೀಗ ರಮೇಶ್ ಅರವಿಂದ್ ಬರೆದ ಆರ್ಟ್ ಆಫ್ ಸಕ್ಸಸ್ ಕೃತಿಯ ಜೊತೆಗೆ ಇತರ ಒಂಬತ್ತು ಜನ ಲೇಖಕರ ಕೃತಿಯನ್ನು ಸುದೀಪ್ ನಿನ್ನೆ ಬಿಡುಗಡೆ ಮಾಡಿದ್ದಾರೆ.

    ಪುಸ್ತಕ ಕ್ಷೇತ್ರದಲ್ಲೊಂದು ವಿಭಿನ್ನ ಬಗೆಯ ಪ್ರಯತ್ನಕ್ಕೆ ವೀರಕಪುತ್ರ ಶ್ರೀನಿವಾಸ್ ಮುನ್ನುಡಿ ಬರೆದಿದ್ದಾರೆ. ಕಾಫಿ ಶಾಪ್‌, ಹೋಟೆಲ್, ರೆಸ್ಟೋರೆಂಟ್, ಔಷಧ ಮಳಿಗೆ, ಆಸ್ಪತ್ರೆ, ಮಾಲ್‌, ಕಾರ್ಪೊರೇಟ್‌ ಕಂಪನಿಗಳ ಕಚೇರಿಗಳು ಸೇರಿದಂತೆ ವಿವಿಧೆಡೆ ಕನ್ನಡ ಪುಸ್ತಕಗಳು ದೊರೆಯುವಂತಹ ಅವಕಾಶವನ್ನು ಶ್ರೀನಿವಾಸ್ ಕಲ್ಪಿಸಿದ್ದಾರೆ. ವೀರಕಪುತ್ರ ಶ್ರೀನಿವಾಸ್ ವೀರಲೋಕ ಪ್ರಕಾಶನ ಸಂಸ್ಥೆ ಆರಂಭಿಸಿದ್ದಾರೆ. ಈ ಮೂಲಕ ಕನ್ನಡ ಪುಸ್ತಕಗಳ ಓದುಗರಿಗೆ ಉತ್ತಮ ವೇದಿಕೆ ಒದಗಿಸಿ, ಓದುಗರ ಸಂಖ್ಯೆ ವೃದ್ಧಿಸಲು ಸಜ್ಜಾದ್ದಾರೆ. ಇದನ್ನೂ ಓದಿ: ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾದ ಮೊದಲ ವಿಮರ್ಶೆ ಮಾಡಿದ ನಟ ರಮೇಶ್ ಅರವಿಂದ್

    ವೀರಲೋಕ ಪ್ರಕಾಶನ ಹೊರತಂದಿರುವ ಹತ್ತು ಪುಸ್ತಕಗಳನ್ನು ಲೋಕಾರ್ಪಣೆ ಮಾಡಲಾಯಿತು. ಪುಸ್ತಕಗಳು ಜ್ಞಾನದ ಕೀಲಿಕೈ ಎಂಬ ಹೆಸರಿನಡಿ ನಡೆದ ಕಾರ್ಯಕ್ರಮಕ್ಕೆ ಕನ್ನಡ ಪುಸ್ತಕಗಳ ರಾಯಭಾರಿಯಾಗಿರುವ ನಟ ರಮೇಶ್ ಅರವಿಂದ್‌ ಕಾರ್ಯಕ್ರಮ ಉದ್ಘಾಟಿಸಿದರು. ನಟ ಕಿಚ್ಚ ಸುದೀಪ್ ಪುಸ್ತಕಗಳನ್ನು ಲೋಕಾರ್ಪಣೆ ಮಾಡಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತಾನಾಡಿದ ರಮೇಶ್ ಅರವಿಂದ್, ಫೌಡ್ರಶಿಕ್ಷಣದಲ್ಲಿ ವಿದ್ಯಾಭ್ಯಾಸ ಮಾಡುವ ಸಮಯದಲ್ಲಿ ಸಿನಿಮಾವೊಂದರಲ್ಲಿ ನಟಿಸುವ ಅವಕಾಶ ಸಿಕ್ಕಿತು.  ಆ ಪಾತ್ರಕ್ಕಾಗಿ ತಲೆ ಕೂದಲು ತೆಗೆದಿದ್ದೆ. ಹೀಗಾಗಿ ಶಾಲೆಗೆ ಹೋಗುವ ಬದಲು ಗ್ರಂಥಾಲಯಕ್ಕೆ ತೆರಳಿ ಪುಸ್ತಕ ಓದಲು ಶುರುಮಾಡಿದೆ. ನಂತ್ರ ಅದು ಹವ್ಯಾಸವಾಯಿತು. ಹಲವು ಪುಸ್ತಕಗಳನ್ನು ಓದಿದ ಪರಿಣಾಮ ನಾನು ಈಗ ಪುಸ್ತಕ ಬರೆಯಲು ಶುರು ಮಾಡಿದ್ದೇನೆ ಎಂದರು.

    ಸುದೀಪ್ ಮಾತಾನಾಡಿ, ನಾನು ಜಾಸ್ತಿ ಓದದೆ ಇರುವುದು ತುಂಬಾ ಒಳ್ಳೆಯದಾಗಿದೆ. ಏಕಂದ್ರೆ ಇದರಿಂದ ಹೆಚ್ಚು ಪುಸ್ತಕ ಓದಲು ಸಾಧ್ಯವಾಗದೇ ಇದೀಗ ಹಲವು ಪುಸ್ತಕಗಳನ್ನು ಒಮ್ಮೆಲೇ ಬಿಡುಗಡೆ ಮಾಡಿ ಜೀವನದಲ್ಲಿ ಒಳ್ಳೆ ಕೆಲಸ ಮಾಡಿದೆ. ಎಲ್ಲಾ ಬರಹ ಹತ್ತಿರವಿಟ್ಟುಕೊಂಡಿದ್ದೇನೆ ಎಂದು ತಿಳಿಸಿದರು. ವೀರ ಲೋಕದ ಮುಖ್ಯಸ್ಥ ವೀರಕಪುತ್ರ ಶ್ರೀನಿವಾಸ್, ‘ಕನ್ನಡ ಪುಸ್ತಕ ಎಲ್ಲಿ ಬೇಕಾದರೂ ಸಿಗುವಂತಾಗಲು ಮೊದಲ ಹಂತದಲ್ಲಿ 1 ಸಾವಿರ ಪುಸ್ತಕಗಳ ಸ್ಟ್ಯಾಂಡ್‌ಗಳನ್ನು ಬೆಂಗಳೂರಿನ ಮಾಲ್, ಅಂಗಡಿ ಮಳಿಗೆಗಳಲ್ಲಿ ಇರಿಸಲಾಗುವುದು. ಸ್ಥಳದಲ್ಲೇ ಖರೀದಿಗೆ ಅವಕಾಶ ಇದೆ’ ಎಂದರು. ‘ಕನ್ನಡ ಪುಸ್ತಕಗಳನ್ನು ಪರಿಚಯಿಸಿ ಮಾರಾಟ ಮಾಡಲು ಕಾಲ್ ಸೆಂಟರ್ ಸ್ಥಾಪಿಸಲಾಗಿದೆ. ನಮ್ಮ ಬಳಿ 11 ಲಕ್ಷ ಓದುಗರ ಮಾಹಿತಿ ಇದೆ. ಅವರನ್ನು ಸಂಪರ್ಕಿಸಿ ಪುಸ್ತಕ ಪರಿಚಯ, ಮಾರಾಟ ಮಾಡುತ್ತೇವೆ’ ಎಂದರು. ಇದನ್ನೂ ಓದಿ: ಶ್ರದ್ಧಾ ಶ್ರೀನಾಥ್ ಗುಡ್ ಬೈ ಹೇಳಿದ್ದು ಯಾಕೆ.?

    ಕೈಹಿಡಿದು ನೀ ನಡೆಸು ತಂದೆ(ವಿಶ್ವೇಶ್ವರ ಭಟ್), ಅವರು ಇವರು ದೇವರು(ಜೋಗಿ), ಲಾಸ್ಟ್ ಡೇಸ್ ಆಫ್ ಲೆಜೆಂಡ್ಸ್(ಗಣೇಶ್ ಕಾಸರಗೋಡು), ವಿಶ್ವ ಸುಂದರಿ(ಕುಂ. ವೀರಭದ್ರಪ್ಪ), ಸೋಲೆಂಬ ಗೆಲುವು(ದೀಪಾ ಹಿರೇಗುತ್ತಿ), ಮನಿ ಮನಿ ಎಕಾನಮಿ(ರಂಗಸ್ವಾಮಿ ಮೂಕನಹಳ್ಳಿ), ಆರ್ಟ್ ಆಫ್ ಸಕ್ಸಸ್( ರಮೇಶ್ ಅರವಿಂದ್), ನಿಮಗೆಷ್ಟು ಹಣ ಬೇಕು?(ಅನಂತ ಹುದೆಂಗಜೆ), ಒಳ್ಳೆಯ ಬದುಕಿನ ಸೂತ್ರಗಳು(ರವಿಕೃಷ್ಣಾ ರೆಡ್ಡಿ) ಕೃತಿಗಳು ಬಿಡುಗಡೆಯಾದವು.

  • ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾದ ಮೊದಲ ವಿಮರ್ಶೆ ಮಾಡಿದ ನಟ ರಮೇಶ್ ಅರವಿಂದ್

    ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾದ ಮೊದಲ ವಿಮರ್ಶೆ ಮಾಡಿದ ನಟ ರಮೇಶ್ ಅರವಿಂದ್

    ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದ ಕುರಿತು ಭಾರತೀಯ ಸಿನಿಮಾ ರಂಗದಲ್ಲಿ ಭಾರೀ ಕುತೂಹಲ ಮೂಡಿಸಿದೆ. ಸಿನಿ ಪ್ರಿಯರ ನಿರೀಕ್ಷೆ ಹೆಚ್ಚು ಮಾಡಿದೆ. ಈ ಸಿನಿಮಾ ಹೇಗಿರಬಹುದು? ಸುದೀಪ್ ಯಾವ ರೀತಿಯ ಪಾತ್ರದಲ್ಲಿ ಕಾಣಿಸಿಕೊಂಡಿರಬಹುದು? ಇದು ಯಾವ ರೀತಿಯ ಸಿನಿಮಾ? ಹೀಗೆ ಅಭಿಮಾನಿಗಳಲ್ಲಿ ನೂರಾರು ಪ್ರಶ್ನೆಗಳು ಹುಟ್ಟಿಕೊಂಡಿವೆ. ಅದಕ್ಕೆ ಕೆಲವು ಉತ್ತರಗಳನ್ನು ನೀಡಿದ್ದಾರೆ ನಟ ರಮೇಶ್ ಅರವಿಂದ್.

    ವಾರದ ಹಿಂದೆಯಷ್ಟೇ ವಿಕ್ರಾಂತ್ ರೋಣ ಸಿನಿಮಾವನ್ನು ವೀಕ್ಷಿಸಿರುವ ರಮೇಶ್ ಅರವಿಂದ್, ಆ ಸಿನಿಮಾದ ಬಗೆಗಿನ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಈ ಸಿನಿಮಾವನ್ನು ನೋಡಿದ ಮೊದಲ ಕನ್ನಡದ ಸೆಲಿಬ್ರಿಟಿ ಕೂಡ ಇವರಾಗಿದ್ದಾರೆ. ಹಾಗಾಗಿ ಸೆಲಿಬ್ರಿಟಿಯೊಬ್ಬರು ಮೊದಲ ಬಾರಿಗೆ ನೀಡಿದ ವಿಮರ್ಶೆ ಕೂಡ ಇದಾಗಿದೆ. ಇದನ್ನೂ ಓದಿ: ಶ್ರದ್ಧಾ ಶ್ರೀನಾಥ್ ಗುಡ್ ಬೈ ಹೇಳಿದ್ದು ಯಾಕೆ.?

    ನಿನ್ನ ಬೆಂಗಳೂರಿನ ವೀರಲೋಕ ಬುಕ್ಸ್ ಆಯೋಜಿಸಿದ್ದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಕಿಚ್ಚ ಸುದೀಪ್ ಮತ್ತು ರಮೇಶ್ ಅರವಿಂದ್ ಕೂಡ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ರಮೇಶ್ ಅರವಿಂದ್, ‘ನಟನೊಬ್ಬ ಸಿನಿಮಾ ರಿಲೀಸ್‌ಗೂ ಮುನ್ನ ತಮ್ಮ ಸಿನಿಮಾ ತೋರಿಸುವುದಕ್ಕೆ ಧೈರ್ಯಬೇಕು. ಅಂತಹ ಧೈರ್ಯವಂತ ಸುದೀಪ್, ತಮ್ಮ ಮನೆಗೆ ಕರೆಯಿಸಿಕೊಂಡು ವಿಕ್ರಾಂತ್ ರೋಣ ಸಿನಿಮಾ ತೋರಿಸಿದರು. ಸಿನಿಮಾ ಅದ್ಭುತವಾಗಿ ಮೂಡಿ ಬಂದಿದೆ. ಫ್ಯಾಂಟಸಿ ಜಗತ್ತನ್ನೇ ಅವರು ಕ್ರಿಯೇಟ್ ಮಾಡಿದ್ದಾರೆ. ಅಲ್ಲದೇ, ಇದೊಂದು ಕುತೂಹಲ ಮೂಡಿಸುವಂತಹ ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಸಿನಿಮಾ ಎಂದು ಹಾಡಿಹೊಗಳಿದರು.

    ಭಾರತೀಯ ಸಿನಿಮಾ ರಂಗದಲ್ಲಿ ವಿಕ್ರಾಂತ್ ರೋಣ ಸಿನಿಮಾ ಮತ್ತೊಂದು ದಾಖಲೆ ಮಾಡುವಂತಹ ಚಿತ್ರವಾಗಲಿದೆ. ಒಂದೊಳ್ಳೆ ಸಿನಿಮಾವನ್ನು ನೋಡಿದ ಖುಷಿ ನನ್ನಲ್ಲಿ ಉಳಿಸಿದೆ. ಅಂತಹ ಅದ್ಧೂರಿ ಚಿತ್ರ ಮಾಡಿದ್ದಾರೆ ಸುದೀಪ್ ಅಂದರು. ಅಂದಹಾಗೆ ಈ ಸಿನಿಮಾವನ್ನು ಅನೂಪ್ ಭಂಡಾರಿ ನಿರ್ದೇಶನ ಮಾಡಿದ್ದು, ಜಾಕ್ ಮಂಜು ಅವರು ನಿರ್ಮಾಪಕರು.

  • ಕೇಂದ್ರ ಸಚಿವ ಅನುರಾಗ್ ಠಾಕೂರ್ ಜತೆ ಸಿನಿರಂಗದ ಸಮಸ್ಯೆ ಚರ್ಚೆ

    ಕೇಂದ್ರ ಸಚಿವ ಅನುರಾಗ್ ಠಾಕೂರ್ ಜತೆ ಸಿನಿರಂಗದ ಸಮಸ್ಯೆ ಚರ್ಚೆ

    ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ 2021ರಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಆಗಮಿಸಿದ್ದ ಕೇಂದ್ರ ವಾರ್ತಾ ಮತ್ತು ಪ್ರಸಾರ ಹಾಗೂ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರನ್ನು ಕನ್ನಡ ಸಿನಿಮಾ ರಂಗದ ಅನೇಕ ಗಣ್ಯರು ನಿನ್ನೆ ಸಂಜೆ ಖಾಸಗಿ ಹೋಟೆಲ್ ನಲ್ಲಿ ಭೇಟಿ ಮಾಡಿದ್ದಾರೆ. ಇದನ್ನೂ ಓದಿ : ಹಿರಿಯ ರಂಗಕರ್ಮಿ, ಏಣಗಿ ಬಾಳಪ್ಪನವರ ಪತ್ನಿ ಲಕ್ಷ್ಮೀಬಾಯಿ ನಿಧನ

    ಈ ಕುರಿತು ಪಬ್ಲಿಕ್ ಟಿವಿ ಡಿಜಿಟಲ್ ಜೊತೆ ಮಾತನಾಡಿದ ಕರ್ನಾಟಕ ಚಲನಚಿತ್ರ ಅಕಾಡಮಿ ಅಧ್ಯಕ್ಷ ಸುನೀಲ್ ಪುರಾಣಿಕ್, ‘ಇದೊಂದು ಅನೌಪಚಾರಿಕ ಭೇಟಿ. ಆದರೆ, ಉಪಯುಕ್ತ ಚರ್ಚೆ ನಡೆಯಿತು. ಕೇಂದ್ರದಿಂದ ಸಿನಿಮಾ ರಂಗಕ್ಕೆ ಸಿಗಬೇಕಾದ ಸವಲತ್ತುಗಳ ಬಗ್ಗೆ ಕೇಂದ್ರ ಸಚಿವರು ಮಾತನಾಡಿದರು. ಕನ್ನಡ ಸಿನಿಮಾ ರಂಗದಲ್ಲಿರುವ ಸೆನ್ಸಾರ್ ಸಮಸ್ಯೆ, ಆನಿಮಲ್ ಬೋರ್ಡ್ ನಿಂದ ಆಗುತ್ತಿರುವ ತೊಂದರೆ, ಫಿಲ್ಮ್ ಸಿಟಿ ಮತ್ತು ಪೈರಸಿಯಿಂದಾಗಿ ಚಿತ್ರೋದ್ಯಮಕ್ಕೆ ಆಗುತ್ತಿರುವ ಹಾನಿಯ ಕುರಿತಾಗಿ ಅವರೊಂದಿಗೆ ಮಾತನಾಡಿದೆವು. ಅವರು ಕೂಡ ನಮ್ಮ ಮನವಿಗೆ ಸ್ಪಂದಿಸಿ, ಸೂಕ್ತ ರೀತಿಯಲ್ಲಿ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ’ ಎಂದರು. ಇದನ್ನೂ ಓದಿ : ಶಿವಣ್ಣನ ಹುಲಿ ಅವತಾರ: ಬೈರಾಗಿ ಹಾಡಿಗೆ ಭೀಮನ ಬಲ

    ಇದೊಂದು ಪೂರ್ವಯೋಜಿತ ಭೇಟಿ ಆಗದೇ ಇದ್ದರೂ, ಕೇಂದ್ರ ಸಚಿವರು ಭೇಟಿಗೆ ಅವಕಾಶ ನೀಡಿ, ಸ್ಯಾಂಡಲ್ ವುಡ್ ನ ಅನೇಕ ಸಮಸ್ಯೆಗಳನ್ನು ಆಲಿಸಿದ್ದಾರಂತೆ. ಚಿತ್ರೋದ್ಯಮದ ಬೆಳವಣಿಗೆಯ ದೃಷ್ಟಿಯಿಂದ ಸಚಿವರು ಕೂಡ ಅನೇಕ ಸಲಹೆಗಳನ್ನೂ ನೀಡಿದ್ದಾರಂತೆ. ಅಲ್ಲದೇ, ಕನ್ನಡ ಚಿತ್ರೋದ್ಯಮದ ಬೆಳವಣಿಗೆಗೆ ಸಂಪೂರ್ಣ ಸಹಕಾರ ನೀಡುವುದಾಗಿಯೂ ಅವರು ತಿಳಿಸಿದ್ದಾರಂತೆ. ಇದನ್ನೂ ಓದಿ : ಗೋವಾ ಸಿಎಂ ಭೇಟಿಯಾದ ಯಶ್, ರಾಧಿಕಾ ಪಂಡಿತ್

    ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್, ನಟ ರಮೇಶ್ ಅರವಿಂದ್, ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್, ನಾಗಣ್ಣ,  ಅನೂಪ್ ಭಂಡಾರಿ, ಇಂದ್ರಜಿತ್ ಲಂಕೇಶ್, ಸತ್ಯಪ್ರಕಾಶ್, ಪವನ್ ಒಡೆಯರ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ಹಿರಿಯ ನಿರ್ದೇಶಕ ನಾಗಭರಣ, ನಿರ್ಮಾಪಕರಾದ ಜಾಕ್ ಮಂಜು, ಎನ್.ಎಸ್.ರಾಜ್ ಕುಮಾರ್,  ನಟಿಯರಾದ ಸುಧಾರಾಣಿ, ಅನು ಪ್ರಭಾಕರ್, ಹರ್ಷಿಕಾ ಪೂಣಚ್ಚ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಭೇಟಿಯ ತಂಡದಲ್ಲಿದ್ದರು.