Tag: Ramesh aravind 101

  • ‘ಶಿವಾಜಿ ಸುರತ್ಕಲ್’ ಟ್ರೈಲರ್ ಔಟ್!- ಫೆಬ್ರವರಿ 21ಕ್ಕೆ ಬಯಲಾಗಲಿದೆ ರಣಗಿರಿ ರಹಸ್ಯ!

    ‘ಶಿವಾಜಿ ಸುರತ್ಕಲ್’ ಟ್ರೈಲರ್ ಔಟ್!- ಫೆಬ್ರವರಿ 21ಕ್ಕೆ ಬಯಲಾಗಲಿದೆ ರಣಗಿರಿ ರಹಸ್ಯ!

    ಸ್ಯಾಂಡಲ್‍ವುಡ್‍ನ ವೆರಿ ಟ್ಯಾಲೆಂಟೆಡ್ ಹಾಗೂ ಸ್ಫುರದ್ರೂಪಿ ನಟ ರಮೇಶ್ ಅರವಿಂದ್ ನಟನೆಯ ‘ಶಿವಾಜಿ ಸುರತ್ಕಲ್’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಡಿಟೆಕ್ಟಿವ್ ಪಾತ್ರದಲ್ಲಿ ಎರಡು ವಿಭಿನ್ನ ಶೇಡ್‍ನಲ್ಲಿ ರಮೇಶ್ ಅರವಿಂದ್ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಕುತೂಹಲಕಾರಿ ಟ್ರೈಲರ್ ಸಾಮಾಜಿಕ ಜಾಲತಾಣದಲ್ಲಿ ಎಲ್ಲರಿಗೂ ಸಖತ್ ಥ್ರಿಲ್ ಕೊಡುತ್ತಿದೆ.

    ‘ಶಿವಾಜಿ ಸುರತ್ಕಲ್’ ಪತ್ತೇದಾರಿ ಕಥಾನಕ ಸಬ್ಜೆಕ್ಟ್ ಇರೋ ಸಿನಿಮಾ. ರಣಗಿರಿಯಲ್ಲಿ ಅನುಮಾನಾಸ್ಪದವಾಗಿ ನಡಿಯೋ ಕೊಲೆ ರಹಸ್ಯವನ್ನು ಭೇದಿಸುವ ಪಾತ್ರದಲ್ಲಿ ರಮೇಶ್ ಮಿಂಚಿದ್ದಾರೆ. ಸಸ್ಪೆನ್ಸ್, ಥ್ರಿಲ್ಲಿಂಗ್ ಮತ್ತು ಹಾರಾರ್ ಸಬ್ಜೆಕ್ಟ್ ಚಿತ್ರದಲ್ಲಿದೆ. ಆಕಾಶ್ ಶ್ರೀವತ್ಸ ನಿರ್ದೇಶನದಲ್ಲಿ ‘ಶಿವಾಜಿ ಸುರತ್ಕಲ್’ ಚಿತ್ರ ಮೂಡಿಬಂದಿದ್ದು, ಆರಂಭದಿಂದ ಕುತೂಹಲ ಮೂಡಿಸಿದ್ದ ಈ ಚಿತ್ರ, ಟ್ರೈಲರ್ ಮೂಲಕ ಆ ಕೌತುಕವನ್ನು ದುಪ್ಪಟ್ಟು ಮಾಡಿದೆ. ಚಿತ್ರದ ಬಿಡುಗಡೆ ಡೇಟ್ ಕೂಡ ಅನೌನ್ಸ್ ಮಾಡಿರೋ ಟೀಂ ‘ಶಿವಾಜಿ ಸುರತ್ಕಲ್’. ಫೆಬ್ರವರಿ 21ಕ್ಕೆ ಚಿತ್ರ ಬಿಡುಗಡೆ ಮಾಡಲು ಪ್ಲ್ಯಾನ್ ಮಾಡಿಕೊಂಡಿದೆ ಚಿತ್ರತಂಡ.

    ಚಿತ್ರದಲ್ಲಿ ನಾಯಕಿಯರಾಗಿ ರಾಧಿಕಾ ನಾರಾಯಣ್, ಆರೋಹಿ ಅಭಿನಯಿಸಿದ್ದಾರೆ. ಅವಿನಾಶ್, ರಮೇಶ್ ಪಂಡಿತ್, ರೋಹಿತ್ ಭಾನುಪ್ರಕಾಶ್, ರಾಘು ರಮಣಕೊಪ್ಪ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಜ್ಯೂಡಾ ಸ್ಯಾಂಡಿ ಸಂಗೀತ, ಗುರುಪ್ರಸಾಧ್ ಎಂ.ಜಿ ಕ್ಯಾಮೆರಾ ವರ್ಕ್ ‘ಶಿವಾಜಿ ಸುರತ್ಕಲ್’ಚಿತ್ರಕ್ಕಿದೆ.

    ಅಂಜನಾದ್ರಿ ಸಿನಿ ಕ್ರಿಯೇಷನ್ಸ್ ಬ್ಯಾನರ್ ನಡಿ ಚಿತ್ರ ನಿರ್ಮಾಣವಾಗಿದ್ದು, ರೇಖಾ.ಕೆ.ಎನ್, ಅನೂಪ್ ಗೌಡ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಸಾಕಷ್ಟು ಕುತೂಹಲ ಮೂಡಿಸಿರುವ  ‘ಶಿವಾಜಿ ಸುರತ್ಕಲ್’ ಚಿತ್ರ ಫೆಬ್ರವರಿ 21ಕ್ಕೆ ಚಿತ್ರಮಂದಿರಕ್ಕೆ ಬರಲಿದೆ.