Tag: Ramesh Aravind

  • ಆಪ್ತಮಿತ್ರ ದುರ್ಘಟನೆ ನೆನಪಿಸಿಕೊಂಡ ರಮೇಶ್ ಅರವಿಂದ್

    ಆಪ್ತಮಿತ್ರ ದುರ್ಘಟನೆ ನೆನಪಿಸಿಕೊಂಡ ರಮೇಶ್ ಅರವಿಂದ್

    ಟ, ನಿರ್ದೇಶಕ ಹಾಗೂ ನಿರೂಪಕ ರಮೇಶ ಅರವಿಂದ್ (Ramesh Aravind) 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ತಮ್ಮ ಹುಟ್ಟುಹಬ್ಬದ ಪ್ರಯುಕ್ತ ದೈಜಿ ಸಿನಿಮಾದ (Daiji Cinema) ಟೀಸರ್ ಕೂಡಾ ರಿಲೀಸ್ ಆಗಿದೆ. ಈ ವೇಳೆ ಸಾಕಷ್ಟು ವಿಚಾರಗಳನ್ನ ಹಂಚಿಕೊಂಡಿದ್ದಾರೆ. ನಟ ವಿಷ್ಣುವರ್ಧನ್ (Vishnuvardhan) ಅವರ ಜೊತೆಗಿನ ದಿನಗಳು ಹಾಗೂ ಅವರಿಗೆ ಸಲ್ಲಬೇಕಾದ ಗೌರವಗಳ ಬಗ್ಗೆಯೂ ಅವರು ಮಾತನಾಡಿದ್ದಾರೆ. ಜೊತೆಗೆ ಆಪ್ತಮಿತ್ರ-3 ಸಿನಿಮಾ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ.

    ಆಪ್ತಮಿತ್ರ (Apthamitra) ಸಿನಿಮಾವನ್ನ ಮಾಡಿಯಾದ್ಮೇಲೆ ಒಂದು ದುರ್ಘಟನೆ ನಡೆಯಿತು. ಇದಾದ ಬಳಿಕ ಆಪ್ತರಕ್ಷಕ ಅಂದ್ರೆ ಆಪ್ತಮಿತ್ರ ಸಿನಿಮಾದ ಭಾಗ-2 ಸಿನಿಮಾ ರಿಲೀಸ್ ನಂತರ ಮತ್ತೊಂದು ಆಘಾತವೇ ನಡೆದುಹೋಯ್ತು. ಕಾಕತಾಳಿಯವೋ ಅಥವಾ ಆಕಸ್ಮಿಕವೋ ಇವೆರಡು ಘಟನೆ ನಡೆದ ಬಳಿಕ ಸ್ಯಾಂಡಲ್‌ವುಡ್‌ನಲ್ಲಿ ಆಪ್ತಮಿತ್ರ ಸಿರೀಸ್ ಅಂದ್ರೆ ಕೊಂಚ ಹಿಂಜರಿಕೆ ಉಂಟಾಗಿದೆ. ಇದು ಕಲಾವಿದರಿಗೂ ಸಹ ಆಘಾತ, ಆತಂಕವನ್ನ ಸೃಷ್ಟಿಸಿದೆ. ಹೀಗಾಗಿ ಆಪ್ತಮಿತ್ರ ಪಾರ್ಟ್-3 ಬರುತ್ತಾ ಎನ್ನುವ ಹಲವಾರು ಪ್ರಶ್ನೆಗಳು ಆಗಾಗ ಕೇಳಿ ಬರುತ್ತಿವೆ. ಇದನ್ನೂ ಓದಿ: ಉಪೇಂದ್ರ ದಂಪತಿ ಫೋನ್ ಹ್ಯಾಕ್ ಸೈಬರ್ ವಂಚಕರು ದೋಚಿದ್ದೆಷ್ಟು ಹಣ?

    ಆಪ್ತಮಿತ್ರ ಸಿನಿಮಾದ ಪಾರ್ಟ್-3 ಸ್ಕಿಪ್ಟ್‌ ಬಂದಿದೆಯಾ..? ಬಂದರೆ ಸಿನಿಮಾ ಮಾಡುತ್ತಿರಾ ಎನ್ನುವ ಪ್ರಶ್ನೆಗೆ ನಟ ರಮೇಶ್ ಅರವಿಂದ್ ಪ್ರತಿಕ್ರಿಯೆ ನೀಡಿದ್ದಾರೆ. `ನನ್ನ ಪ್ರಕಾರ ಅದೊಂದು ಸಬ್ಜೆಕ್ಟ್, ಅದೊಂದು ಸ್ಕಿçÃನ್, ಅದೊಂದು ಪಿಕ್ಸಿಯಸ್ ಕ್ಯಾರೆಕ್ಟರ್ ನಾಗವಲ್ಲಿ ಅನ್ನೋದು. ಆದರೆ ಆಪ್ತರಕ್ಷಕ ಮಾಡುವ ವೇಳೆ ಅಂತಹದೊಂದು ಕಥೆ ಬಂದಿತ್ತು. ಆಪ್ತಮಿತ್ರ, ಆಪ್ತರಕ್ಷಕ ಆದ್ಮೇಲೆ ನಾನು ಮಾಡ್ತಿರುವ ಹಾರರ್ ಸಿನಿಮಾ ದೈಜಿನೇ’ ಎಂದು ಹೇಳಿದ್ದಾರೆ.

  • ರಮೇಶ್ ಅರವಿಂದ್ ಹುಟ್ಟುಹಬ್ಬಕ್ಕೆ ದೈಜಿ ಟೀಸರ್

    ರಮೇಶ್ ಅರವಿಂದ್ ಹುಟ್ಟುಹಬ್ಬಕ್ಕೆ ದೈಜಿ ಟೀಸರ್

    ಮ್ಮ ಅಮೋಘ ಅಭಿನಯದಿಂದ ಜನಮನಗೆದ್ದಿರುವ ನಟ ರಮೇಶ್ ಅರವಿಂದ್ (Ramesh Aravind) ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಈ ಸಂದರ್ಭದಲ್ಲಿ ರಮೇಶ್ ಅರವಿಂದ್ ಅವರು ಪ್ರಮುಖಪಾತ್ರದಲ್ಲಿ ನಟಿಸಿರುವ ದೈಜಿ (Daiji) ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಟೀಸರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ತಮ್ಮ ನಾಯಕನಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದೆ. ಟೀಸರ್ ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದ್ದು, ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. ಟೀಸರ್ (Teaser) ಬಿಡುಗಡೆ ನಂತರ ದೈಜಿ ಚಿತ್ರತಂಡದವರು ಮಾಧ್ಯಮದವರ ಜೊತೆಗೆ ಮಾತನಾಡಿದರು.

    ರಮೇಶ್ ಅರವಿಂದ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿ ಮಾತನಾಡಿದ ನಿರ್ಮಾಪಕ ರವಿ ಕಶ್ಯಪ್, ಹತ್ತು ವರ್ಷಗಳ ಹಿಂದೆ ನಾನು, ನಿರ್ದೇಶಕ ಆಕಾಶ್ ಶ್ರೀವತ್ಸ ಅವರಿಗೆ ಈ ಚಿತ್ರದ ಬಗ್ಗೆ ಹೇಳಿದ್ದೆ. ಈಗ ಕಾಲ ಕೂಡಿ ಬಂದಿದೆ. ಇದು ವಿದೇಶದಲ್ಲಿ ನಾನು ಕಂಡಿರುವ ನೈಜ ಘಟನೆ ಆಧರಿತ ಚಿತ್ರ. ಇದನ್ನು ನಾನು ಅಂದುಕೊಂಡಂತೆ ತೆರೆಗೆ ತಂದಿರುವ ತಂತ್ರಜ್ಞರಿಗೆ ಹಾಗೂ ಕಲಾವಿದರಿಗೆ ಧನ್ಯವಾದ. ಇನ್ನೂ ಯಾವುದೇ ಹಾಲಿವುಡ್ ಚಿತ್ರಕ್ಕೂ ಕಡಿಮೆ ಇಲ್ಲದಂತೆ ಮೂಡಿಬಂದಿರುವ ನಮ್ಮ ದೈಜಿ ಚಿತ್ರವನ್ನು ಕೆಲವೇ ದಿನಗಳಲ್ಲಿ ನಿಮ್ಮ ಮುಂದೆ ತರುತ್ತೇವೆ ಎಂದರು.

    ಸಂಖ್ಯಾಶಾಸ್ತ್ರದ ಪ್ರಕಾರ ಮೂರು ಅಂಕಿಗೂ, ನನಗೂ ಹಾಗೂ ಈ ಚಿತ್ರಕ್ಕೂ ನಂಟಿದೆ. ಹೇಗೆಂದರೆ, ಇದು ನನ್ನ ನಿರ್ದೇಶನದಲ್ಲಿ ರಮೇಶ್ ಅರವಿಂದ್ ಅವರು ನಾಯಕರಾಗಿ ನಟಿಸಿರುವ ಮೂರನೇ ಸಿನಿಮಾ. ನಟಿ ರಾಧಿಕಾ ನಾರಾಯಣ್ ಅವರ ಜೊತೆಗೂ ಮೂರನೇ ಸಿನಿಮಾ. ನನ್ನ ಹಾಗೂ ನಿರ್ಮಾಪಕರ ಮೂರನೇ ಕಾಂಬಿನೇಶನ್ ನ ಚಿತ್ರವೂ ಹೌದು.(ಒಂದು ಕಿರುಚಿತ್ರ). ಹೇಗೆ ಮೂರರ ನಂಟನ್ನು ಸಾಕಷ್ಟು ಉದಾಹರಿಸಬಲ್ಲೆ. ನಿರ್ಮಾಪಕರು ವಿದೇಶದಲ್ಲಿ ತಾವು ಕಂಡ ನೈಜ ಘಟನೆಯನ್ನು ನನಗೆ ಹೇಳಿದರು. ಅವರು ಹೇಳಿದ ಈ ಕಥೆಯೇ ಈ ಚಿತ್ರಕ್ಕೆ ಸ್ಪೂರ್ತಿ. ನಂತರ ಈ ಕಥೆಗೆ ರಮೇಶ್ ಅರವಿಂದ್ ಅವರೆ ಸೂಕ್ತ ಎನಿಸಿ, ಅವರಿಗೆ ಕಥೆ ಹೇಳಿದಾಗ, ಅವರು ನಟಿಸಲು ಒಪ್ಪಿಕೊಂಡಿದ್ದು ಬಹಳ ಖುಷಿಯಾಯಿತು. ಸೂರ್ಯ ಎಂಬ ಪಾತ್ರದಲ್ಲಿ ರಮೇಶ್ ಅವರು ಕಾಣಿಸಿಕೊಂಡಿದ್ದಾರೆ. ರಾಧಿಕಾ ನಾರಾಯಣ್ ಅವರು ಭೂಮಿ ಪಾತ್ರದಲ್ಲಿ ಹಾಗೂ ರಮೇಶ್ ಅವರ ತಮ್ಮನಾಗಿ ನಟ ದಿಗಂತ್ ಗಗನ್ ಎನ್ನುವ ಪಾತ್ರದಲ್ಲಿ ನಟಿಸಿದ್ದಾರೆ. ದೈಜಿ ಎಂದರೆ ಪ್ರೇತಾತ್ಮಗಳ ದೈವ ಎಂದರ್ಥ. ಇಂದು ಟೀಸರ್ ಬಿಡುಗಡೆಯಾಗಿದೆ. ಸದ್ಯದಲ್ಲೇ ಟ್ರೇಲರ್ ಸಹ ಬರಲಿದ್ದು, ವರ್ಷದ ಕೊನೆ ಅಥವಾ ನೂತನ ವರ್ಷದ ಆರಂಭಕ್ಕೆ ದೈಜಿ ನಿಮ್ಮ ಮುಂದೆ ಬರಲಿದೆ ಎಂದು ನಿರ್ದೇಶಕ ಆಕಾಶ್ ಶ್ರೀವತ್ಸ ತಿಳಿಸಿದರು. ಇದನ್ನೂ ಓದಿ:  ಅಮೆರಿಕದಲ್ಲಿ ವಿನಯ್ & ವಂದಿತಾ ಜೊತೆ ರಮ್ಯಾ ಸುತ್ತಾಟ

     

    ಹುಟ್ಟು – ಸಾವು ಬಾಳಿನಲ್ಲಿ ಎರಡು ಕೊನೆಗಳು ಎಂಬ ಸಾಲಿದೆ. ಆದರೆ ಇವೆರಡರ ಮಧ್ಯೆ ಏನಿದೆ? ಇವೆರಡರ ಮಧ್ಯೆ ಪ್ರೀತಿ ಇದೆ. ಒಂದು ವೇಳೆ ಸಾವೇ ಕೊನೆಯಾಗದಿದ್ದರೆ ಏನಿರುತ್ತದೆ? ಅದರ ಆಚೆಗೆ ಒಂದು ದುಷ್ಟ ಶಕ್ತಿ ಇರುತ್ತದೆ. ಆ ಶಕ್ತಿ ಈ ಪ್ರೀತಿಯನ್ನು ಹೊತ್ತುಕೊಂಡು ಹೊಗುತ್ತದೆ. ಇದೇ ನಾವು ಸಾಮಾನ್ಯ ಹಾರರ್ ಚಿತ್ರಗಳಲ್ಲಿ ಕಾಣುವುದು. ಆದರೆ ನಿರ್ದೇಶಕ ಆಕಾಶ್ ಶ್ರೀವತ್ಸ ಈ ರೀತಿಯ ಹಾರಾರ್ ಸಿನಿಮಾ ಮಾಡಿಲ್ಲ. ಈವರೆಗೂ ನಾನು ಸಾಕಷ್ಟು ಹಾರರ್ ಸಿನಿಮಾ ನೋಡಿದ್ದೇನೆ. ಆದರೆ ಈ ರೀತಿ ಕಥೆ ನಾನು ನೋಡಿಲ್ಲ. ಅಂತಹ ಚಿತ್ರ ಮಾಡಿದ್ದಾರೆ ನಿರ್ದೇಶಕ ವತ್ಸ ಅವರು. ನಾನು ಬಾಲಚಂದರ್ ಅವರಂತಹ ಹೆಸರಾಂತ ನಿರ್ದೇಶಕರ ಜೊತೆಗೆ ಹತ್ತು ಸಿನಿಮಾ ಮಾಡಿದ್ದೇನೆ. ಮುಂದೆ ವತ್ಸ ಅವರ ಜೊತೆಗೂ ಇದೇ ರೀತಿ ಮಾಡುತ್ತೇನೆ. ಇನ್ನೂ, ನಿರ್ಮಾಪಕ ರವಿ ಕಶ್ಯಪ್ ಅವರ ಸಿನಿಮಾ ಪ್ರೀತಿ ಬಗ್ಗೆ ಎಷ್ಟು ಹೇಳಿದರು ಕಡಿಮೆ. ರಾಧಿಕಾ ನಾರಾಯಣ್ ಅವರಂತೂ ಮಹಾನಟಿ. ದಿಗಂತ್ ಅವರ ಲವಲವಿಕೆ ನನಗೆ ಬಹಳ ಇಷ್ಟ. ಈ ಚಿತ್ರದಲ್ಲಿ ವಿದೇಶದ ಪ್ರಸಿದ್ದ ಕಲಾವಿದರೊಂದಿಗೂ ನಟಿಸಿದ್ದೇನೆ. ಆದಷ್ಟು ಬೇಗ ದೈಜಿ ಚಿತ್ರವನ್ನು ತೆರೆಯ ಮೇಲೆ ನೋಡಲು ಕಾತುರನಾಗಿದ್ದೇನೆ ಎಂದು ರಮೇಶ್ ಅರವಿಂದ್ ಹೇಳಿದರು.

    ಭೂಮಿ ಪಾತ್ರದಲ್ಲಿ ನಟಿಸಿರುವುದಾಗಿ ನಟಿ ರಾಧಿಕಾ ನಾರಾಯಣ್ ಹಾಗೂ ಗಗನ್ ಪಾತ್ರದಲ್ಲಿ ಅಭಿನಯಿಸಿರುವಿದಾಗಿ ದಿಗಂತ್ ತಿಳಿಸಿದರು. ಚಿತ್ರದಲ್ಲಿ ನಟಿಸಿರುವ ಬಿ.ಎಂ.ಗಿರಿರಾಜ್, ಬರಹಗಾರ ಅಭಿಜಿತ್ ಹಾಗೂ ಕಾಸ್ಟಿಂಗ್ ಡೈರೆಕ್ಟರ್ ಸುನಯನ ಸುರೇಶ್ ಮುಂತಾದರ ದೈಜಿ ಬಗ್ಗೆ ಮಾತನಾಡಿದರು. ಶ್ರೀಶ ಕುದುವಳ್ಳಿ ಛಾಯಾಗ್ರಹಣ, ಜ್ಯೂಡಾ ಸ್ಯಾಂಡಿ ಸಂಕಲನವಿರುವ ಈ ಚಿತ್ರಕ್ಕೆ ಆಕಾಶ್ ಶ್ರೀವತ್ಸ ಅವರೆ ಸಂಕಲನ ಕಾರ್ಯ ಮಾಡಿದ್ದಾರೆ.

  • ವಿಷ್ಣು ಸಮಾಧಿ, ಕರ್ನಾಟಕ ರತ್ನ ಬಗ್ಗೆ ರಮೇಶ್ ಅರವಿಂದ್ ರಿಯಾಕ್ಷನ್

    ವಿಷ್ಣು ಸಮಾಧಿ, ಕರ್ನಾಟಕ ರತ್ನ ಬಗ್ಗೆ ರಮೇಶ್ ಅರವಿಂದ್ ರಿಯಾಕ್ಷನ್

    ಹಿರಿಯ ನಟ ರಮೇಶ್ ಅರವಿಂದ್ (Ramesh Aravind) ಅಭಿನಯದ 106ನೇ ಸಿನಿಮಾ ದೈಜಿ (Daiji) ಚಿತ್ರದ ಟೀಸರ್ ರಿಲೀಸ್ ಆಗಿದೆ. ಟೀಸರ್ ರಿಲೀಸ್ ಇವೆಂಟ್ ಬಳಿಕ ನಟ ರಮೇಶ್ ಅರವಿಂದ್ ಹಲವಾರು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಮುಖ್ಯವಾಗಿ ಹಿರಿಯ ನಟ ಸಾಹಸಸಿಂಹ ವಿಷ್ಣುವರ್ಧನ್ (Actor Vishnuvardhan) ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಕೊಡುವ ಬಗ್ಗೆ ಹಾಗೂ ಸಮಾಧಿ ನೆಲಸಮ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

    ನಾನು ವಿಷ್ಣು ಸರ್ ಅವರನ್ನು ಬಹಳ ಹತ್ತಿರದಿಂದ ನೋಡಿದ್ದೀನಿ. ಅವರಿಗೆ ಡಾಕ್ಟರೇಟ್ ಬಂದಾಗ ನಾನು ಹೇಳಿದ್ದು ಒಂದೇ. ಅವರಿಗೆ ಡಾಕ್ಟರೇಟ್ ಕೊಡೋಕೆ ಒಂದು ಕಾರಣವಲ್ಲ, ನೂರು ಕಾರಣಗಳಿವೆ ಎಂದಿದ್ದೆ. ನೂರು ಸಿನಿಮಾ ಮಾಡಿದ ಅವರಿಗೆ ನೂರು ಕಾರಣ ಇವೆ. ಅವರ ಕೆಲಸಗಳು, ಅವರು ಮಾಡಿದ ಯೋಚನೆಗಳು ನಮಗೆ ಮುಖ್ಯ. ಅವರ ಸ್ಮಾರಕ ಅನ್ನೋದು ಅಭಿಮಾನಿಗಳಿಗೆ ಸಾಮೂಹಿಕ ನೆನಪು. ಅಲ್ಲಿ ಆಗಲ್ಲ ಅಂದಾಗ ಸರ್ಕಾರ ಮೈಸೂರಿನಲ್ಲಿ ಪರ್ಫೆಕ್ಟ್ ಆಗಿ ಮಾಡಿಕೊಟ್ಟಿದೆ. ಮತ್ತೆ ಸ್ಮಾರಕ ಸಿಗುತ್ತೆ ಅಂತಾ ಕೇಳಿಪಟ್ಟೆ. ಏನಾದರೂ ಆಗಲಿ ಗಂಭೀರವಾಗಿ ಆಗಲಿ. ವಿಷ್ಣು ಸರ್ ಅಂದ್ರೆ ಗಾಂಭೀರ್ಯ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: ಜೈಲಿನಲ್ಲಿ ವಿಷ ಕೊಡಿ ಎಂದ ದರ್ಶನ್: ರಮೇಶ್ ಅರವಿಂದ್ ಹೇಳಿದ್ದೇನು?

    ವಿಷ್ಣುವರ್ಧನ್ ಅವರೊಟ್ಟಿಗೆ ಸಿನಿಮಾ ಮಾಡಿರುವ ನಟ ರಮೇಶ್ ಅರವಿಂದ್, ಸಾಹಸ ಸಿಂಹ ಅವರ ಬಗ್ಗೆ ಹಲವಾರು ವಿಚಾರಗಳನ್ನ ಹಂಚಿಕೊಂಡಿದ್ದಾರೆ. ರಮೇಶ್ ಅರವಿಂದ್ ಅವರ ಹುಟ್ಟುಹಬ್ಬದ ದಿನವೇ ತಮ್ಮ ನಟನೆಯ `ದೈಜಿ’ ಸಿನಿಮಾದ ಟೀಸರ್ ರಿಲೀಸ್ ಆಗಿದೆ.

  • ಜೈಲಿನಲ್ಲಿ ವಿಷ ಕೊಡಿ ಎಂದ ದರ್ಶನ್: ರಮೇಶ್ ಅರವಿಂದ್ ಹೇಳಿದ್ದೇನು?

    ಜೈಲಿನಲ್ಲಿ ವಿಷ ಕೊಡಿ ಎಂದ ದರ್ಶನ್: ರಮೇಶ್ ಅರವಿಂದ್ ಹೇಳಿದ್ದೇನು?

    ಟ ರಮೇಶ್‌ ಅರವಿಂದ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 61ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಹುಟ್ಟುಹಬ್ಬದ ವಿಶೇಷವಾಗಿ ದೈಜಿ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಸಿನಿಮಾದ ಟೀಸರ್ ರಿಲೀಸ್ ಕಾರ್ಯಕ್ರಮದ ನಟ ರಮೇಶ್ ಅರವಿಂದ್, ದರ್ಶನ್ ಅವರ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದಾರೆ.

    ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದಾರೆ. ಜೈಲಿನಲ್ಲಿ ಕಷ್ಟದ ದಿನಗಳನ್ನ ದೂಡುತ್ತಿದ್ದಾರೆ. ಇದೇ ಸೆ.9ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್‌ಗೆ ದರ್ಶನ್ ಹಾಜರಾಗಿದ್ದಾರೆ. ಜೈಲಿನಲ್ಲಿ ಇರಲು ಕಷ್ಟವಾಗುವ ಬಗ್ಗೆ ಮಾತ್ನಾಡುತ್ತಾ ವಿಷ ಕೊಡುವಂತೆ ಆದೇಶ ಮಾಡಿ ಎಂದು ಜಡ್ಜ್ ಮುಂದೆ ಹೇಳಿದ್ದಾರೆ. ಜಡ್ಜ್ ಆ ರೀತಿ ಮಾಡಲು ಆಗುವುದಿಲ್ಲ ಎಂದು ಹೇಳಿದ್ದರು. ಈ ವಿಚಾರದ ಬಗ್ಗೆ ನಟ ರಮೇಶ್ ಅರವಿಂದ್ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

    ‘ದರ್ಶನ್ ಪ್ರಕರಣದಲ್ಲಿ ಈಗ ಏನಾಗಿದೆ ಅಂತಾ ಡಿಟೇಲ್ ಆಗಿ ನನಗೆ ಗೊತ್ತಿಲ್ಲ. ನೀವು ಹೇಳಿದ್ದನ್ನು ಕೇಳಿದಾಗ, ನಮ್ಮ ಸಹೋದ್ಯೋಗಿಗೆ ಈಥರ ಆಗಿದೆ ಅಂತಾ ಹೇಳ್ತೀದ್ದೀರಾ. ಆದರೆ ಕಾನೂನು ಅಂತಾ ಒಂದಿದೆ. ಅದರ ಪ್ರಕಾರ ಎಲ್ಲವೂ ನಡಿಬೇಕು’ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

  • ರಮೇಶ್ ಅರವಿಂದ್ ನಟನೆಯ ‘ದೈಜಿ’ ಚಿತ್ರದಲ್ಲಿ ದಿಗಂತ್

    ರಮೇಶ್ ಅರವಿಂದ್ ನಟನೆಯ ‘ದೈಜಿ’ ಚಿತ್ರದಲ್ಲಿ ದಿಗಂತ್

    ಮೇಶ್ ಅರವಿಂದ್ (Ramesh Aravind) ನಟನೆಯ ‘ದೈಜಿ’ (Daiji) ಸಿನಿಮಾಗೆ ದೂದ್‌ಪೇಡ ದಿಗಂತ್ ಸಾಥ್ ನೀಡಿದ್ದಾರೆ. ಈ ಚಿತ್ರದಲ್ಲಿ ಪವರ್‌ಫುಲ್ ಪಾತ್ರಕ್ಕೆ ಅವರು ಬಣ್ಣ ಹಚ್ಚಿದ್ದಾರೆ. ಇದೀಗ ದಿಗಂತ್ ‘ದೈಜಿ’ ಸೆಟ್‌ನಲ್ಲಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ. ಇದನ್ನೂ ಓದಿ:ಅಭಿಮಾನಿ ಕಡೆ ಗನ್ ಇಟ್ಟ ದಳಪತಿ ವಿಜಯ್ ಬಾಡಿಗಾರ್ಡ್!

    ರಮೇಶ್ ನಟನೆಯ 106ನೇ ಚಿತ್ರ ‘ದೈಜಿ’ ಟೀಮ್‌ಗೆ ದಿಗಂತ್ (Diganth Manchale) ಸೇರಿಕೊಂಡಿದ್ದಾರೆ. ರಮೇಶ್ ಅರವಿಂದ್ ತಮ್ಮನ ಪಾತ್ರದಲ್ಲಿ ನಟಿಸಲಿದ್ದಾರೆ. ಚಿತ್ರದಲ್ಲಿ ತಿರುವು ಕೊಡುವ ಪವರ್‌ಫುಲ್ ಪಾತ್ರ ಇದಾಗಿದೆ. ಗಗನ್ ಪಾತ್ರಕ್ಕೆ ಅವರು ಜೀವ ತುಂಬಲಿದ್ದಾರೆ. ಇದನ್ನೂ ಓದಿ: ವೇದಿಕೆಯಲ್ಲಿ ಸಮಂತಾ ಕಣ್ಣೀರಿಟ್ಟಿದ್ಯಾಕೆ?- ಪ್ರಚಾರದ ಗಿಮಿಕ್ ಎಂದವರಿಗೆ ನಟಿ ಸ್ಪಷ್ಟನೆ

    ‘ದೈಜಿ’ ಸಿನಿಮಾದಲ್ಲಿ (Daiji) ರಮೇಶ್ ಅವರು ಸೂರ್ಯ ಪಾತ್ರದಲ್ಲಿ ನಟಿಸಿದ್ರೆ, ನಾಯಕಿ ರಾಧಿಕಾ ನಾರಾಯಣ್ (Radhika Narayan) ಭೂಮಿ ಪಾತ್ರದಲ್ಲಿ ನಟಿಸಿದ್ದಾರೆ. ಈ ಹಿಂದೆ ತೆರೆಕಂಡ ‘ಅಮೆರಿಕ ಅಮೆರಿಕ’ ಚಿತ್ರದ ಪ್ರಮುಖ ಪಾತ್ರಗಳ ಹೆಸರನ್ನೇ ಈ ಚಿತ್ರಕ್ಕೂ ಇಡಲಾಗಿದೆ.

     

    View this post on Instagram

     

    A post shared by akash srivatsa (@akashsrivatsa)

    ಈಗಾಗಲೇ ‘ದೈಜಿ’ ಸಿನಿಮಾ 50% ರಷ್ಟು ಚಿತ್ರೀಕರಣ ನಡೆದಿದೆ. ಮುಂದಿನ ಶೆಡ್ಯೂಲ್‌ನಲ್ಲಿ ದಿಗಂತ್ ಕೂಡ ಭಾಗಿಯಾಗಲಿದ್ದಾರೆ. ಹೊಸ ಶೇಡ್‌ನಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರಕ್ಕೆ ‘ಶಿವಾಜಿ ಸುರತ್ಕಲ್’ ನಿರ್ದೇಶನ ಮಾಡಿದ್ದ ಆಕಾಶ್ ಶ್ರೀವತ್ಸ ನಿರ್ದೇಶನ ಮಾಡಿದ್ದಾರೆ.

  • ‘ರಾಮ್’ಗಾಗಿ ಒಂದಾದ ರಮೇಶ್ ಅರವಿಂದ್ ಮತ್ತು ಗಣೇಶ್

    ‘ರಾಮ್’ಗಾಗಿ ಒಂದಾದ ರಮೇಶ್ ಅರವಿಂದ್ ಮತ್ತು ಗಣೇಶ್

    ನ್ನಡ ಚಿತ್ರರಂಗದ ತ್ಯಾಗರಾಜರು ಅಂತಾನೇ ಖ್ಯಾತಿ ಪಡೆದಿರುವ ಮಿಸ್ಟರ್ ಫರ್ಪೆಕ್ಟ್ ರಮೇಶ್ ಅರವಿಂದ್ (Ramesh Aravind)  ಹಾಗೂ ಗೋಲ್ಡನ್‌ ಸ್ಟಾರ್ ಗಣೇಶ್ (Ganesh) ಹೊಸ ಸಿನಿಮಾ ಸೆಟ್ಟೇರಿದೆ. ಗೌರಿ ಹಬ್ಬದ ಶುಭ ದಿನವಾದ ಇಂದು ಬೆಂಗಳೂರಿನ ಗೌಡನಪಾಳ್ಯದ ಶ್ರೀನಿವಾಸ ಚಿತ್ರಮಂದಿರದಲ್ಲಿಂದು ಮುಹೂರ್ತ ನೆರವೇರಿದೆ. ನಟಿ ಕಂ ನಿರೂಪಕಿ ಜಾನ್ವಿ ರಾಯಲ ಚಿತ್ರಕ್ಕೆ ಕ್ಲ್ಯಾಪ್ ಮಾಡಿದರೆ, ನಿರ್ದೇಶಕ ವಿಖ್ಯಾತ್ ಪತ್ನಿ ಸ್ವಾತಿ ವಿಖ್ಯಾತ್ ಕ್ಯಾಮೆರಾಗೆ ಚಾಲನೆ ಕೊಟ್ಟಿದ್ದಾರೆ. ರಮೇಶ್ ಅರವಿಂದ್ ಹಾಗೂ ಗಣೇಶ್ ಸಂಗಮದ ಹೊಸ ಸಿನಿಮಾಗೆ Your’s sincerely ರಾಮ್ (Ram)  ಎಂಬ ಕ್ಲಾಸ್ ಟೈಟಲ್ ಇಡಲಾಗಿದೆ. ಫಸ್ಟ್ ಲುಕ್ ಕೂಡ ಬಿಡುಗಡೆ ಮಾಡಲಾಗಿದ್ದು, ಬಹಳ ಇಂಪ್ರೆಸಿವ್ ಆಗಿ ಮೂಡಿಬಂದಿದೆ.

    ನಟ ರಮೇಶ್ ಅರವಿಂದ್ ಮಾತನಾಡಿ, ವಿಖ್ಯಾತ್ ಪರಿಚಯ ಆಗಿದ್ದು 9 ವರ್ಷಗಳ ಹಿಂದೆ. ಪುಷ್ಪಕ ವಿಮಾನ ಕಥೆಯನ್ನು ಮೊದಲು ಹೇಳಲು ಬಂದರು. ಅಂದಿನಿಂದ ಇಂದಿನವರೆಗೂ ನೋಡಿಕೊಂಡು ಬರುತ್ತಿದ್ದೇನೆ ಇವನಿಗೆ ಇರುವ ಸೌಂದರ್ಯ ಪ್ರಜ್ಞೆ ತುಂಬ ಚೆನ್ನಾಗಿದೆ. ಅವರು ನಿರ್ಮಾಣ ಮಾಡಿದ ಚಿತ್ರಗಳ ಪೋಸ್ಟರ್, ಟೀಸರ್ ಗಳಲ್ಲಿ ಸೂಕ್ಷ್ಮ ಮನೋಭಾವವಿದೆ. ಅವರು ನಿರ್ದೇಶನ ಮಾಡುತ್ತಿರುವುದು ಖುಷಿ. ಇದು ನಿಮ್ಮ ಮೊದಲ ಪಯಣ. ಸತ್ಯ ವಿಖ್ಯಾತ್.ಇಬ್ಬರಲ್ಲಿ ಬಹಳ ಉತ್ಸವವಿದೆ. ಗಣೇಶ್ ನನ್ನ ಕಾಂಬೋ ನಿಮಗೆ ಎಷ್ಟು ಖುಷಿ ಕೊಡುತ್ತದೆಯೋ. ನಮಗೂ ಅಷ್ಟೇ ಖುಷಿ ಕೊಡುತ್ತದೆ.

    ಗೋಲ್ಡನ್ ಸ್ಟಾರ್ ಗಣೇಶ್ ಮಾತನಾಡಿ, ಗೌರಿ ಹಬ್ಬದ ದಿನ your’s sincerely ರಾಮ್. ಗಣೇಶ್ ಹಬ್ಬದ ದಿನ ರಾಮ್ ನೆನಪು ಮಾಡಿಕೊಂಡಿದ್ದೇವೆ. ಚಿಕ್ಕ ಗ್ಲಿಂಪ್ಸ್ ನೋಡಿದಿರಿ. ಇಬ್ಬರ ನಡುವಿನ ಸಂಬಂಧ. ಬೇರೆ ರೀತಿ ಫೀಲ್, ಬೇರೆ ಪ್ರಪಂಚಕ್ಕೆ ಕರೆದುಕೊಂಡು ಹೋಗುವಂತಹ ಕಥೆ. ಇದರ ನೂರಷ್ಟು ಸಿನಿಮಾದಲ್ಲಿ ಇರುತ್ತದೆ. ಪ್ರತಿ ಸೀನ್, ಸ್ಕ್ರೀನ್ ಪ್ಲೇ ಎಕ್ಸ್ ಪಿರಿಯನ್ಸ್ ಆಗಿರುತ್ತದೆ. ಬಹಳ ಖುಷಿ ಇದೆ. ರಮೇಶ್ ಸರ್ ಜೊತೆ ಚಿತ್ರ ಮಾಡುತ್ತಿರುವುದು ಖುಷಿ ಕೊಟ್ಟಿದೆ. ಅದ್ಭುತ ನಟ, ಟೆಕ್ನಿಷಿಯನ್ ರಮೇಶ್ ಸರ್. ವಿಖ್ಯಾತ್ ಫ್ಯಾಷನೇಟೆಡ್ ಡೈರೆಕ್ಟರ್. ಸತ್ಯ ಅವರಿಗೆ ಒಳ್ಳೆದಾಗಲಿ ಎಂದರು.

    ಪುಷ್ಪಕ ವಿಮಾನ, ಇನ್ಸ್‌ಪೆಕ್ಟರ್ ವಿಕ್ರಮ್, ಮಾನ್ಸೂನ್ ರಾಗದಂತಹ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ವಿಖ್ಯಾತ್ ಎ ಆರ್ ಈ ಚಿತ್ರದ ಮೂಲಕ ಡೈರೆಕ್ಟರ್ ಕುರ್ಚಿ ಅಲಂಕರಿಸಿದ್ದಾರೆ. ದಿ ರಾಯಲ ಸ್ಟುಡಿಯೋಸ್ ಬ್ಯಾನರ್ ನಡಿ ಸತ್ಯ ರಾಯಲ Your’s sincerely ರಾಮ್ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ನವೀನ್ ಕುಮಾರ್ ಛಾಯಾಗ್ರಹಣ, ಹರೀಶ್ ಕೊಮ್ಮೆ ಸಂಕಲನ, ಜೆ ಅನೂಪ್ ಸೀಳಿನ್ ಸಂಗೀತ, ಗುಣ ಕಲಾ ನಿರ್ದೇಶನ , ಪ್ರಶಾಂತ್ ರಾಜಪ್ಪ‌ , ಯದುನಂದನ್ ಹಾಗೂ ಸಚಿನ್ ಸಂಭಾಷಣೆ ಚಿತ್ರಕ್ಕಿದೆ. ಆಡಿಯೊ ಹಕ್ಕುಗಳು ಆನಂದ್ ಆಡಿಯೊಗೆ ದಾಖಲೆ ಬೆಲೆಗೆ ಮಾರಾಟವಾಗಿದೆ. ನಾಯಕಿ ಸೇರಿದಂತೆ ಉಳಿದ ಪಾತ್ರವರ್ಗವನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು.

  • ‘ದೈಜಿ’ ಸಿನಿಮಾ ಚಿತ್ರೀಕರಣಕ್ಕೂ ಮುನ್ನ ‘ಶಿವಾಜಿ ಸುರತ್ಕಲ್’ ಡೈರೆಕ್ಟರ್ ಟೆಂಪಲ್ ರನ್

    ‘ದೈಜಿ’ ಸಿನಿಮಾ ಚಿತ್ರೀಕರಣಕ್ಕೂ ಮುನ್ನ ‘ಶಿವಾಜಿ ಸುರತ್ಕಲ್’ ಡೈರೆಕ್ಟರ್ ಟೆಂಪಲ್ ರನ್

    ‘ಶಿವಾಜಿ ಸುರತ್ಕಲ್ 2′ (Shivaji Surathkal -2)  ಸಿನಿಮಾ ಸಕ್ಸಸ್ ಬಳಿಕ ‘ದೈಜಿ’ ಚಿತ್ರವನ್ನು ನಿರ್ದೇಶಕ ಆಕಾಶ್ ಶ್ರೀವತ್ಸ (Akash Srivasta) ಕೈಗೆತ್ತಿಕೊಂಡಿದ್ದಾರೆ. ಈ ಸಿನಿಮಾದ ಚಿತ್ರೀಕರಣಕ್ಕೂ ಮುನ್ನ ಮೈಸೂರಿನ ಚಾಮುಂಡೇಶ್ವರಿ ದೇವಿಗೆ ನಿರ್ದೇಶಕ ಆಕಾಶ್ ವಿಶೇಷ ಪೂಜೆ ಸಲ್ಲಿಸಿದ್ದಾರೆ.

    ‌ರಮೇಶ್‌ ಅರವಿಂದ್‌ ನಟನೆಯ ‘ದೈಜಿ’ ಸಿನಿಮಾ ಸ್ಕ್ರಿಪ್ಟ್‌ ಪೂಜೆ ಇದೀಗ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಜರುಗಿದೆ. ಸಿನಿಮಾ ಶೂಟಿಂಗ್‌ಗೂ ಮುನ್ನ ಚಾಮುಂಡೇಶ್ವರಿ ದೇವಿಗೆ ನಿರ್ದೇಶಕ ಆಕಾಶ್ ಶ್ರೀವತ್ಸ ಪೂಜೆ ಸಲ್ಲಿಸಿದ್ದಾರೆ. ಇದನ್ನೂ ಓದಿ:ಪರಿಸರ ಸ್ನೇಹಿ ಇನ್ವಿಟೇಷನ್ ಮೂಲಕ ಮಾದರಿಯಾದ ನಟಿ ಸೋನಲ್, ತರುಣ್ ಸುಧೀರ್

     

    View this post on Instagram

     

    A post shared by akash srivatsa (@akashsrivatsa)

    ಇತ್ತೀಚೆಗೆ ರಮೇಶ್ ಅರವಿಂದ್ (Ramesh Aravind) ಅವರ ‘ದೈಜಿ’ (Daiji Film) ಸಿನಿಮಾದ ಕಲರ್‌ಫುಲ್ ಪೋಸ್ಟರ್ ಅನ್ನು ರಿಲೀಸ್ ಮಾಡಿತ್ತು ಚಿತ್ರತಂಡ. ಡಿಫರೆಂಟ್ ಲುಕ್‌ನಲ್ಲಿ ನಟ ಕಾಣಿಸಿಕೊಂಡಿದ್ದರು. ಇದೀಗ ಸಿನಿಮಾ ಶೂಟಿಂಗ್ ಶುರು ಮಾಡಲು ತೆರೆಮರೆಯಲ್ಲಿ ಸಿದ್ಧತೆ ನಡೆಯುತ್ತಿದೆ. ಸದ್ಯದಲ್ಲೇ ಚಿತ್ರೀಕರಣಕ್ಕೆ ಚಾಲನೆ ಸಿಗಲಿದೆ.

    ಅಂದಹಾಗೆ, ಶಿವಾಜಿ ಸುರತ್ಕಲ್, ಶಿವಾಜಿ ಸುರತ್ಕಲ್-2 ಸಿನಿಮಾ ನಂತರ ಮತ್ತೆ ‘ದೈಜಿ’ ಸಿನಿಮಾಗಾಗಿ ರಮೇಶ್ ಅರವಿಂದ್ ಜೊತೆ ಆಕಾಶ್ ಶ್ರೀವತ್ಸ ಕೈಜೋಡಿಸಿದ್ದಾರೆ. 3ನೇ ಬಾರಿ ಈ ಕಾಂಬಿನೇಷನ್ ಜೊತೆಯಾಗಿ ಕೆಲಸ ಮಾಡುತ್ತಿದ್ದಾರೆ. ಈ ಸುದ್ದಿ ಕೇಳಿ ಫ್ಯಾನ್ಸ್ ಕೂಡ ಸಖತ್‌ ಥ್ರಿಲ್ ಆಗಿದ್ದಾರೆ.

  • ಅಪರ್ಣಾ ಎಂದಾಕ್ಷಣ ನೆನಪಾಗೋದು ಕನ್ನಡ: ರಮೇಶ್ ಅರವಿಂದ್

    ಅಪರ್ಣಾ ಎಂದಾಕ್ಷಣ ನೆನಪಾಗೋದು ಕನ್ನಡ: ರಮೇಶ್ ಅರವಿಂದ್

    ನ್ನಡದ ಹೆಸರಾಂತ ನಿರೂಪಕಿ ಅಪರ್ಣಾ (Aparna) ಜು.11ರಂದು ಕ್ಯಾನ್ಸರ್‌ನಿಂದ ವಿಧಿವಶರಾಗಿದ್ದಾರೆ. ಸ್ಯಾಂಡಲ್‌ವುಡ್ ಅನೇಕ ನಟ, ನಟಿಯರು ಅಪರ್ಣಾ ಅಂತಿಮ ದರ್ಶನ ಪಡೆದಿದ್ದಾರೆ. ಇದೀಗ ಅವರ ಅಂತಿಮ ದರ್ಶನ ಪಡೆದ ಬಳಿಕ ಮಾಧ್ಯಮಕ್ಕೆ ನಟ ರಮೇಶ್ ಅರವಿಂದ್ (Ramesh Aravind) ಪ್ರತಿಕ್ರಿಯೆ ನೀಡಿದ್ದಾರೆ.

    ನನಗೆ ಅಪರ್ಣಾ ನಿರೂಪಣೆ ಮಾಡುವಾಗ ಆಶ್ಚರ್ಯ ಆಗುತ್ತಿತ್ತು. ಅಷ್ಟು ಸ್ಪಷ್ಟವಾಗಿ ಕನ್ನಡ ಮಾತನಾಡುತ್ತಿದ್ದರು. ನಿರೂಪಣೆ ಬಗ್ಗೆ ಅವರದಲ್ಲಿದ್ದ ಆತ್ಮವಿಶ್ವಾಸ ಅದ್ಭುತ ಅನಿಸುತ್ತಿತ್ತು. ಅಪರ್ಣಾರನ್ನು ನೋಡಿದ್ರೆ ಗೌರವ ಬರುತ್ತದೆ. ಎಂದಿಗೂ ಅವರು ಕನ್ನಡದ ಆಸ್ತಿ ಎಂದು ನಟ ರಮೇಶ್ ಅರವಿಂದ್ ಮಾತನಾಡಿದ್ದಾರೆ. ಇದನ್ನೂ ಓದಿ:ಹೂವು, ಹಾರ ತರದಂತೆ ಮನವಿ ಮಾಡಿದ ಅಪರ್ಣಾ ಪತಿ ನಾಗರಾಜ್ ವಸ್ತಾರೆ

    ನಮ್ಮ ಮನೆಗೂ ಅವರ ಮನೆಗೂ ಒಂದು ಬೀದಿ ಅಷ್ಟೇ ಅಂತರವಿದೆ. ಸದಾ ಟಿವಿಯಲ್ಲಿ ನೋಡ್ತಿದ್ದೆ. ನಿರೂಪಣೆ ಮಾಡುವ ವೇಳೆ, ಸ್ಕ್ರಿಪ್ಟ್‌ನಲ್ಲಿ ಏನೇ ಬದಲಾವಣೆಯಾದರು ಕೂಲ್ ಆಗಿ ರೆಸ್ಪಾನ್ಸ್ ಮಾಡುತ್ತಿದ್ದರು. ನಮಗೆ ಅಪರ್ಣಾ ಅಂದಾಕ್ಷಣ ನೆನಪಾಗೋದು ಅವರ ಕನ್ನಡ ಎಂದು ನಟಿಯ ಬಗ್ಗೆ ರಮೇಶ್‌ ಅರವಿಂದ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಅವರಿಗಿರುವ ಆರೋಗ್ಯ ಸಮಸ್ಯೆ ಬಗ್ಗೆ ಮೊದಲೇ ಗೊತ್ತಿತ್ತು. ಕ್ಯಾನ್ಸರ್ ಕೊನೆಯ ಸ್ಟೇಜ್ ಆಗಿತ್ತು ಅಂದರು ಅವರ ಮನೆಯವರು. ಆದರೆ ಅವರು ಎಲ್ಲೂ ಹೇಳಿಕೊಂಡಿರಲಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ನಾವು ನೋಡಿದಂತಹ ನಿರೂಪಕರಲ್ಲಿ ಅತೀ ಶ್ರೇಷ್ಠ ನಿರೂಪಕಿಯಾಗಿದ್ದರು ಎಂದು ರಮೇಶ್ ಅರವಿಂದ್ ಮಾತನಾಡಿದ್ದಾರೆ.

    ಅಂದಹಾಗೆ, ಇಂದು (ಜು.12) ಸ್ಮಾರ್ತ ಬ್ರಾಹ್ಮಣ ಸಂಪ್ರದಾಯದಂತೆ ಅಪರ್ಣಾ ಅಂತ್ಯಕ್ರಿಯೆ ಬನಶಂಕರಿಯ ವಿದ್ಯುತ್ ಚಿತಾಗಾರದಲ್ಲಿ ನಡೆಯಲಿದೆ.

  • ಒಂದೇ ಸಿನಿಮಾದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್, ರಮೇಶ್ ಅರವಿಂದ್

    ಒಂದೇ ಸಿನಿಮಾದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್, ರಮೇಶ್ ಅರವಿಂದ್

    ಸ್ಯಾಂಡಲ್‌ವುಡ್ ನಟ ಗಣೇಶ್ ಇಂದು (ಜು.2) ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಇದೇ ಖುಷಿಯಲ್ಲಿ ಹೊಸ ಸಿನಿಮಾ ಘೋಷಿಸಿದ್ದಾರೆ. ಈ ಮೂಲಕ ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟಿದ್ದಾರೆ. ಇದನ್ನೂ ಓದಿ:ಸಿಹಿಸುದ್ದಿ ಕೊಟ್ಟ ನಟಿ- ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿ ಹರ್ಷಿಕಾ ದಂಪತಿ

    ಯಂಗ್ ಎನರ್ಜಿಟಿಕ್ ನಟ ಕಮ್ ನಿರ್ಮಾಪಕ ರಮೇಶ್ ಅರವಿಂದ್ (Ramesh Aravind) ಜೊತೆ ಹೊಸ ಚಿತ್ರಕ್ಕಾಗಿ ಗಣೇಶ್ ಕೈಜೋಡಿಸಿದ್ದಾರೆ. ಇದೀಗ ನಟ ರಮೇಶ್ ಮತ್ತು ಗಣೇಶ್ ಅವರ ಟಿನೇಜ್ ದಿನಗಳ ಫೋಟೋ ಪೋಸ್ಟರ್‌ನಲ್ಲಿದ್ದು, ರೆಟ್ರೋ ಲುಕ್‌ನಲ್ಲಿ ತೋರಿಸಲಾಗಿದೆ. ಸಿನಿಮಾದ ಮೊದಲ ಲುಕ್ ಆ.16ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.

    ಅಂದಹಾಗೆ, ಇದೇ ಮೊದಲ ಬಾರಿಗೆ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ರಮೇಶ್ ಅರವಿಂದ್ ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇವರಿಗೆ ವಿಖ್ಯಾತ್ ಎ.ಆರ್ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಚಿತ್ರವನ್ನು ಸತ್ಯ ಎಂಬುವವರು ನಿರ್ಮಾಣ ಮಾಡಿದ್ದಾರೆ.

    ಗಣೇಶ್ ಜೊತೆ ಈ ವರ್ಷ ಬರ್ತ್‌ಡೇ ಆಚರಿಸುವ ಭಾಗ್ಯ ಇಲ್ಲ ಎಂದು ಬೇಸರದಲ್ಲಿದ್ದ ಫ್ಯಾನ್ಸ್‌ಗೆ ಈ ಸಿನಿಮಾದ ಅಪ್‌ಡೇಟ್ ಮೂಲಕ ಗುಡ್ ನ್ಯೂಸ್ ಕೊಟ್ಟಿದ್ದಾರೆ.

  • ವೋಟ್ ಮಾಡಿದ ಸ್ಯಾಂಡಲ್‌ವುಡ್ ನಟರು

    ವೋಟ್ ಮಾಡಿದ ಸ್ಯಾಂಡಲ್‌ವುಡ್ ನಟರು

    ಲೋಕಸಭಾ ಚುನಾವಣೆಯ ಮತದಾನ (Lok Sabha Election 2024) ಪ್ರಕ್ರಿಯೆಯಲ್ಲಿ ಭಾಗಿಯಾಗಿ ಸ್ಯಾಂಡಲ್‌ವುಡ್ ನಟರು (Sandalwood Actors) ವೋಟ್ ಮಾಡಿದ್ದಾರೆ. ಒಂದೊಂದು ಮತ ಕೂಡ ಅದೆಷ್ಟು ಮುಖ್ಯ ಎಂಬುದನ್ನು ಕಲಾವಿದರು ತಿಳಿಸಿದ್ದಾರೆ. ಹಾಗಾದ್ರೆ ಯಾರು ಎಲ್ಲಿ ವೋಟ್ ಮಾಡಿದ್ದಾರೆ ಇಲ್ಲಿದೆ ಮಾಹಿತಿ.

    ರಿಯಲ್ ಸ್ಟಾರ್ ಉಪೇಂದ್ರ ಕತ್ರಿಗುಪ್ಪೆ ಬಿಟಿಎಲ್ ವಿದ್ಯಾವಾಹಿನಿ ಶಾಲೆಯಲ್ಲಿ ವೋಟ್ ಮಾಡಿದ್ದಾರೆ. ಮತ ಹಾಕಿದರೆ ತುಂಬಾ ಒಳ್ಳೆಯದು. ಯಾಕೆಂದರೆ ನಾವು ರಾಜರ ರೀತಿ ಫೀಲ್ ಮಾಡುವ ದಿನವಿದು. ಈ ಒಂದು ದಿನ ಆಲಸ್ಯ ಬೇಡ ಎಂದು ಉಪೇಂದ್ರ ಯೂತ್ಸ್‌ಗೆ ಮನವಿ ಮಾಡಿದ್ದಾರೆ.

    ನವರಸ ನಾಯಕ ಜಗ್ಗೇಶ್ ತಮ್ಮ ಕುಟುಂಬದ ಜೊತೆ ಮಲ್ಲೇಶ್ವರಂನಲ್ಲಿ ಮತದಾನ ಮಾಡಿದ್ದಾರೆ. ಜಗ್ಗೇಶ್ ವೋಟ್ ಮಾಡಿದ ಬಳಿಕ ಮತದಾನ ಶ್ರೇಷ್ಠದಾನ ಎಂದು ಮಾತನಾಡಿದ್ದಾರೆ.

     

    View this post on Instagram

     

    A post shared by Hariprriya Simha (@iamhariprriya)

    ನಟ ವಸಿಷ್ಠ ಸಿಂಹ ಕನ್ನಡ ಮತ್ತು ಪರಭಾಷಾ ಸಿನಿಮಾಗಳ ಶೂಟಿಂಗ್ ಬಿಡುವು ಮಾಡಿಕೊಂಡು ಚಿಕ್ಕಲಸಂದ್ರ ಬೆನಕ ಸ್ಕೂಲ್‌ನಲ್ಲಿ ಮತದಾನ ಮಾಡಿದ್ದಾರೆ.

    ಕಿಚ್ಚ ಸುದೀಪ್ ತಮ್ಮ ಮಗಳು ಸಾನ್ವಿ ಜೊತೆ ಜೆಪಿ ನಗರದಲ್ಲಿ ಮತದಾನ ಮಾಡಿದ ಬಳಿಕ ತಪ್ಪದೇ ವೋಟ್ ಮಾಡಬೇಕು ಎಂದಿದ್ದಾರೆ.

    ಧ್ರುವ ಸರ್ಜಾ ಪತ್ನಿ ಪ್ರೇರಣಾ ಜೊತೆಗೆ ಆಗಮಿಸಿ ತ್ಯಾಗರಾಜನಗರದಲ್ಲಿ ಮತದಾನ ಮಾಡಿದ್ದಾರೆ. ಮುಂದೆ ಯಾರ ಸರ್ಕಾರ ಬರುತ್ತದೆ ಎಂದು ನೋಡೋಣ. ನನ್ನ ಕನಸಿನ ಭಾರತ ಹೇಗಿರಬೇಕು ಎಂದು ಹೇಳಿದರೆ ಕಾಂಟ್ರವರ್ಸಿ ಆಗುತ್ತದೆ. ಹಾಗಾಗಿ ಅದರ ಬಗ್ಗೆ ಮಾತನಾಡೋದು ಬೇಡ. ಜೈ ಶ್ರೀರಾಮ್, ಜೈ ಆಂಜನೇಯ ಎಂದು ಧ್ರುವ ಸರ್ಜಾ ಮಾತನಾಡಿದ್ದಾರೆ.

    ರಮೇಶ್ ಅರವಿಂದ್ ಪದ್ಮನಾಭನಗರದಲ್ಲಿ ಮತದಾನ ಮಾಡಿದ ಬಳಿಕ ಗೆಲುವು- ಸೋಲು ಸೆಕೆಂಡರಿ, ಇದು ಸಾಮಾಜಿಕ ಜವಾಬ್ದಾರಿ. ಒಂದು ಕುಟುಂಬ ವೋಟ್ ಮಾಡದಿದ್ರೆ ತುಂಬಾ ವ್ಯತ್ಯಾಸವಾಗುತ್ತದೆ ಎಂದಿದ್ದಾರೆ.

    ‘ಬಿಗ್ ಬಾಸ್ ಕನ್ನಡ 10’ರ ವಿನ್ನರ್ (Bigg Boss Kannada 10) ಕಾರ್ತಿಕ್ ಮಹೇಶ್ (Karthik Mahesh) ಮೈಸೂರಿನ ಶಾರದದೇವಿ ನಗರದ ಶಾಲೆಯೊಂದರಲ್ಲಿ ಮತದಾನ ಮಾಡಿದ್ದಾರೆ.

    ಸ್ಯಾಂಡಲ್‌ವುಡ್ ನಟ ಶರಣ್ ತಮ್ಮ ಪತ್ನಿ ಜೊತೆ ಹೊಸಕೆರೆಹಳ್ಳಿಯಲ್ಲಿ ಮತದಾನ ಮಾಡಿದ್ದಾರೆ.