Tag: Ramdhan

  • ಸಾರ್ವಜನಿಕ ಸ್ಥಳದಲ್ಲಿ ನಮಾಜ್‌ – 1,700 ಮುಸ್ಲಿಂ ಮುಖಂಡರ ವಿರುದ್ಧ ಕೇಸ್‌

    ಸಾರ್ವಜನಿಕ ಸ್ಥಳದಲ್ಲಿ ನಮಾಜ್‌ – 1,700 ಮುಸ್ಲಿಂ ಮುಖಂಡರ ವಿರುದ್ಧ ಕೇಸ್‌

    ಲಕ್ನೋ: ಉತ್ತರ ಪ್ರದೇಶದ (Uttar Pradesh) ಕಾಸ್ಪುರ ಹಾಗೂ ಅಲೀಗಢ ಜಿಲ್ಲೆಯ ಸಾರ್ವಜನಿಕ ಸ್ಥಳಗಳಲ್ಲಿ ಅಲ್ವಿದಾ ಹಾಗೂ ಈದ್- ಉಲ್-ಫಿತ್ (Eid namaz) ಅಂಗವಾಗಿ ನಮಾಜ್‌ ಮಾಡಿದ 1,700 ಮಂದಿ ಅಪರಿಚಿತರ ವಿರುದ್ಧ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಿಸಲಾಗಿದೆ.

    ನಿಷೇಧಾಜ್ಞೆ ನಡುವೆಯೂ ಏಪ್ರಿಲ್‌ 22ರಂದು ನಗರದ ಬೆನಜಬಾರ್‌ನಲ್ಲಿರುವ ಜಜ್ಮೌ ಈದ್ಗಾ, ಬಾಬುಪುರ್ವಾ ಈದ್ಗಾ ಮತ್ತು ಬದಿ ಈದ್ಗಾದ ಹೊರಭಾಗದ ರಸ್ತೆಯಲ್ಲಿ ನಮಾಜ್ ಮಾಡಲಾಗಿತ್ತು. ಹಾಗಾಗಿ ಜಜ್ಮೌ ಪೊಲೀಸ್ ಠಾಣೆಯಲ್ಲಿ 200, ಬೇಗಂಪುರವಾ ಪೊಲೀಸ್ ಠಾಣೆಯಲ್ಲಿ 40 ರಿಂದ 50 ಹಾಗೂ ಬೆನಜ್‌ಹಬರ್‌ ಪೊಲೀಸ್ ಠಾಣೆಯಲ್ಲಿ ಸುಮಾರು 1,500 ಮಂದಿ ವಿರುದ್ಧ ಎಫ್‌ಐಆರ್‌ (FIR) ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಮೋದಿ ನಾಗರಹಾವು ಆದ್ರೆ ಸೋನಿಯಾ ಗಾಂಧಿ ವಿಷಕನ್ಯೆನಾ – ಯತ್ನಾಳ್ ಪ್ರಶ್ನೆ

    ಇದಕ್ಕೆ ಪ್ರತಿಕ್ರಿಯಿಸಿರುವ ಬೇಗಂಪುರವಾ ಪೊಲೀಸ್‌ ಠಾಣೆ ಉಸ್ತುವಾರಿ ಬ್ರಿಜೇಶ್‌ ಕುಮಾರ್‌, ಈದ್ ಹಬ್ಬಕ್ಕೂ ಮುನ್ನ ಶಾಂತಿ ಸಮಿತಿ ಸಭೆ ನಡೆಸಲಾಗಿತ್ತು. ಸಾರ್ವಜನಿಕ ಸ್ಥಳಗಳು, ಈದ್ಗಾ ಮೈದಾನ ಹಾಗೂ ಮಸೀದಿಗಳಲ್ಲಿ ನಮಾಜ್‌ ಮಾಡದಂತೆ ಸೂಚಿಸಲಾಗಿತ್ತು. ಇದರ ಹೊರತಾಗಿಯೂ ಅಂದು ರಸ್ತೆಯಲ್ಲೇ ಜಮಾಯಿಸಿ ನಮಾಜ್‌ ಮಾಡಿದ್ದರು ಎಂದು ಹೇಳಿದ್ದಾರೆ. ಇದನ್ನೂ ಓದಿ: Breaking -ನಟಿ ಜಿಯಾ ಖಾನ್ ಸಾವಿನ ಪ್ರಕರಣ : ಸ್ನೇಹಿತ ಸೂರಜ್ ಪಾಂಚೋಲಿ ನಿರಪರಾಧಿ

    ಈ ಹಿನ್ನೆಲೆಯಲ್ಲಿ ಈದ್ಗಾ ಸಮಿತಿ ಸದಸ್ಯರೂ ಸೇರಿದಂತೆ 1,700 ಅಪರಿಚಿತರ ವಿರುದ್ಧ ಐಪಿಸಿ ಸೆಕ್ಷನ್ 186 (ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸುವುದು), 188 (ಸೆಕ್ಷನ್ -144 ಉಲ್ಲಂಘಿಸಿ ಗುಂಪುಗೂಡುವುದು), 283 (ಜನಸಂದಣಿ ರಸ್ತೆ ತಡೆಯುವುದು), 341 (ಅಡಚಣೆ ಉಂಟುಮಾಡುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಉಪನಿರೀಕ್ಷಕ ಓಂವೀರ್ ಸಿಂಗ್ ತಿಳಿಸಿದ್ದಾರೆ.

  • ಜಾಗರಣೆ, ಡಿಜೆ ಸದ್ದು ಮಾಡುವಂತಿಲ್ಲ- ರಂಜಾನ್ ಆಚರಣೆಗೆ ಹಲವು ನಿರ್ಬಂಧ

    ಜಾಗರಣೆ, ಡಿಜೆ ಸದ್ದು ಮಾಡುವಂತಿಲ್ಲ- ರಂಜಾನ್ ಆಚರಣೆಗೆ ಹಲವು ನಿರ್ಬಂಧ

    ಲಕ್ನೋ: ಮುಸ್ಲಿಮರ ಪವಿತ್ರ ರಂಜಾನ್ `ಈದ್ ಉಲ್ ಫ್ರಿತ್’ ಅನ್ನು ಶಾಂತಿಯುತವಾಗಿ ಆಚರಿಸಲು ಉತ್ತರ ಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಹಲವು ರಾಜ್ಯಗಳಲ್ಲಿ ನಿರ್ಬಂಧಗಳನ್ನು ವಿಧಿಸಲಾಗಿದೆ.

    ಇತ್ತೀಚೆಗೆ ಹನುಮ ಜಯಂತಿ ಉತ್ಸವದ ಸಂದರ್ಭದಲ್ಲಿ ವರದಿಯಾದ ಯಾವುದೇ ಹಿಂಸಾಚಾರ ಅಥವಾ ಉದ್ವಿಗ್ನ ಘಟನೆಗಳು ಮತ್ತೆ ಮರುಕಳಿಸದಂತೆ ಆಯಾ ರಾಜ್ಯ ಸರ್ಕಾರಗಳು ಮನವಿ ಮಾಡಿವೆ. ಇದಕ್ಕಾಗಿ ಶಾಂತಿಯುತವಾಗಿ ರಂಜಾನ್ ಆಚರಣೆ ಮಾಡಲು ಹಲವು ನಿರ್ಬಂಧಗಳನ್ನು ವಿಧಿಸಲಾಗಿದೆ. ಇದನ್ನೂ ಓದಿ: ಕ್ಷುಲ್ಲಕ ಕಾರಣಕ್ಕೆ ಮಾರಾಮಾರಿ; ಮುಂದಲೆ ಹಿಡಿದು ಎಳೆದಾಡಿದ ವಿದ್ಯಾರ್ಥಿನಿಯರು

    RAMDHAN

    ಖಾರ್ಗೋನ್‌ನಲ್ಲಿ ಕರ್ಫ್ಯೂ: ಮಧ್ಯಪ್ರದೇಶದ ಖಾರ್ಗೋನ್‌ನಲ್ಲಿ ಈದ್-ಉಲ್-ಫ್ರಿತ್ ಮತ್ತು ಅಕ್ಷಯ ತೃತೀಯ ಆಚರಣೆ ಸಂದರ್ಭದಲ್ಲಿ 24 ಗಂಟೆಗಳ ಕರ್ಫ್ಯೂ ವಿಧಿಸಲಾಗಿದೆ. ಕಳೆದ ಏಪ್ರಿಲ್ 10 ರಂದು ರಾಮನವಮಿ ಮೆರವಣಿಗೆಯಲ್ಲಿ ಇದೇ ಪ್ರದೇಶದಲ್ಲಿ ಹಿಂಸಾಚಾರ ವರದಿಯಾಗಿತ್ತು. ಹಾಗಾಗಿ ಖಾರ್ಗೋವ್‌ನಲ್ಲಿ ಮುಂಬರುವ ರಂಜಾನ್, ಅಕ್ಷಯ ತೃತೀಯ ಹಬ್ಬಗಳನ್ನು ಮನೆಗಳಲ್ಲೇ ಆಚರಿಸುವಂತೆ ಮೇ 2, 3ರಂದು ಕರ್ಫ್ಯೂ ವಿಧಿಸಲಾಗಿದೆ. ಇದಕ್ಕಾಗಿ ಇಂದು ಬೆಳಗ್ಗೆ 8 ರಿಂದ ಸಂಜೆ 5ರ ವರೆಗೆ ಕರ್ಫ್ಯೂ ಸಡಿಲಿಸಿ ಅಗತ್ಯ ವಸ್ತುಗಳ ಖರೀದಿಗೆ ಆದ್ಯತೆ ನೀಡಲಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸುಮರ್ ಸಿಂಗ್ ಮುಜಲ್ದಾ ಆದೇಶಿಸಿದ್ದಾರೆ. ಇದನ್ನೂ ಓದಿ: ಪರೀಕ್ಷೆ ವೇಳೆ ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಬಿಜೆಪಿ ವಿಶ್ವ ದಾಖಲೆ ಮಾಡುತ್ತಿದೆ: ಕೇಜ್ರಿವಾಲ್‌ ಟೀಕೆ

    RAMDHAN (2)

    ಜಾಗರಣೆ ಮಾಡುವಂತಿಲ್ಲ: ಉತ್ತರ ಪ್ರದೇಶದಲ್ಲಿ ಅನುಮತಿ ಪಡೆಯದ 46 ಸಾವಿರ ಧ್ವನಿವರ್ಧಕಗಳನ್ನು ಈಗಾಗಲೇ ತೆರವುಗೊಳಿಸಲಾಗಿದೆ. ಉಳಿದ 59 ಸಾವಿರ ಧ್ವನಿ ವರ್ಧಕಗಳು ಶಬ್ಧ ಮಿತಿಯ ಅನುಮತಿ ಪಡೆದು ಆಜಾನ್‌ಗೆ ಬಳಕೆ ಮಾಡಲಾಗುತ್ತಿದೆ. ಆದರೆ ಉತ್ತರ ಪ್ರದೇಶದ ಮೀರತ್‌ನಲ್ಲಿ ಮಾತ್ರ ಈದ್ ಉಲ್ ಫ್ರಿತ್ ವೇಳೆ ಜಾಗರಣೆ ನಡೆಸದಂತೆ ಎಚ್ಚರಿಕೆ ನೀಡಿದೆ. ಕೆಲವು ಹಿಂದೂ ಪರ ಸಂಘಟನೆಗಳು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಜಾಗರಣೆ ಆಚರಿಸುವುದನ್ನು ನಿಷೇಧಿಸಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಏಕರೂಪ ನಾಗರಿಕ ಸಂಹಿತೆ ದೇಶದಲ್ಲಿ ಅಗತ್ಯವಿಲ್ಲ: ಓವೈಸಿ

    RAMDHAN (1)

    ಮಹಾರಾಷ್ಟ್ರದಲ್ಲಿನ 5 ಮಸೀದಿಗಳಿಗೂ ಡಿಜೆ ಸಾಂಗ್‌ಗಳು ಸದ್ದು ಮಾಡದಂತೆ ಸರ್ಕಾರ ಸೂಚನೆ ನೀಡಿದೆ. ಕೆಲ ಹಿರಿಯ ಮುಸ್ಲಿಂ ಮುಖಂಡರು ಡಿಜೆ ಹಾಕಲು ನಿರ್ಧರಿಸಿದ್ದ ಕಾರಣದಿಂದಾಗಿ ಈ ಆದೇಶ ಹೊರಡಿಸಿದ್ದು, ಡಿಜೆಗೆ ವಿನಿಯೋಗಿಸುವ ಹಣವನ್ನು ಬಡವರಿಗೆ, ಅವಶ್ಯಕತೆ ಉಳ್ಳವರಿಗೆ ನೀಡುವಂತೆ ಸರ್ಕಾರ ಸಲಹೆ ನೀಡಿದೆ. ಹಾಗೆಯೇ ಜಮ್ಮು ಮತ್ತು ಕಾಶ್ಮೀರದ ಜಾಮಿಯಾ ಮಸೀದಿಯಲ್ಲಿ ಬೆಳಿಗ್ಗೆ 7 ಗಂಟೆಗೆಲ್ಲಾ ಈದ್ ನಮಾಜ್ ಮುಕ್ತಾಯಗೊಳಿಸುವಂತೆ ಸೂಚನೆ ನೀಡಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.