Tag: Ramdev

  • ಸುಳ್ಳು ಜಾಹೀರಾತು ನೀಡಿದರೆ ಪತಂಜಲಿ ಉತ್ಪನ್ನಕ್ಕೆ 1 ಕೋಟಿ ದಂಡ ಹಾಕಬೇಕಾಗುತ್ತೆ: ಸುಪ್ರೀಂ ಎಚ್ಚರಿಕೆ

    ಸುಳ್ಳು ಜಾಹೀರಾತು ನೀಡಿದರೆ ಪತಂಜಲಿ ಉತ್ಪನ್ನಕ್ಕೆ 1 ಕೋಟಿ ದಂಡ ಹಾಕಬೇಕಾಗುತ್ತೆ: ಸುಪ್ರೀಂ ಎಚ್ಚರಿಕೆ

    ನವದೆಹಲಿ: ಪತಂಜಲಿ ಆಯುರ್ವೇದ (Patanjali Ayurved) ಉತ್ಪನ್ನಗಳ ಬಗ್ಗೆ ಸುಳ್ಳು ಮತ್ತು ಜನರ ದಾರಿ ತಪ್ಪಿಸುವ ಜಾಹೀರಾತುಗಳನ್ನು ಪ್ರಸಾರ ಮಾಡುವುದನ್ನು ನಿಲ್ಲಿಸಿ. ಹಾಗೇನಾದರು ಮಾಡಿದರೆ ಪ್ರತಿ ಉತ್ಪನ್ನದ ಮೇಲೆ 1 ಕೋಟಿ ರೂ. ದಂಡ ವಿಧಿಸಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್‌ (Supreme Court) ಎಚ್ಚರಿಸಿದೆ.

    ಯೋಗ ಗುರು ರಾಮ್‌ದೇವ್ (Ramdev) ಸ್ಥಾಪಿಸಿರುವ ಪತಂಜಲಿ ಆಯುರ್ವೇದ್ ಕಂಪನಿಯು ಗಿಡಮೂಲಿಕೆ ಉತ್ಪನ್ನಗಳ ವಿಚಾರದಲ್ಲಿ ವ್ಯವಹರಿಸುತ್ತಿದೆ. ಹಲವಾರು ರೋಗಗಳಿಗೆ ಚಿಕಿತ್ಸೆ ನೀಡುವ ಔಷಧಿಗಳ ಕುರಿತು ಜಾಹೀರಾತುಗಳಲ್ಲಿ ಸುಳ್ಳು ಮತ್ತು ದಾರಿ ತಪ್ಪಿಸುವ ಅಂಶಗಳೇ ಇವೆ ಎಂದು ಕೋರ್ಟ್‌ ತರಾಟೆಗೆ ತೆಗೆದುಕೊಂಡಿದೆ. ಇದನ್ನೂ ಓದಿ: ಷೇರು ಮಾರುಕಟ್ಟೆಯಲ್ಲಿ ಸದ್ದು ಮಾಡಲಿದೆ ಪತಂಜಲಿ – 5 ವರ್ಷದಲ್ಲಿ 4 IPO ಲಿಸ್ಟ್‌

    ಪತಂಜಲಿ ಆಯುರ್ವೇದದ ಇಂತಹ ಸುಳ್ಳು ಮತ್ತು ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ತಕ್ಷಣವೇ ನಿಲ್ಲಿಸಬೇಕು. ಅಂತಹ ಯಾವುದೇ ಉಲ್ಲಂಘನೆಯನ್ನು ನ್ಯಾಯಾಲಯವು ಗಂಭೀರವಾಗಿ ಪರಿಗಣಿಸುತ್ತದೆ ಎಂದು ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಅಹ್ಸಾನುದ್ದೀನ್ ಅಮಾನುಲ್ಲಾ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರನ್ನೊಳಗೊಂಡ ಪೀಠವು ಹೇಳಿದೆ.

    ಕೊರೊನಾ ಲಸಿಕೆ ಮತ್ತು ಆಧುನಿಕ ಔಷಧಿಗಳ ವಿರುದ್ಧ ರಾಮ್‌ದೇವ್ ಅವರ ಅಭಿಯಾನ ನಡೆಸಿದ್ದಾರೆ ಎಂದು ಆರೋಪಿಸಿ ಐಎಂಎ ಸಲ್ಲಿಸಿದ ಮನವಿಯ ಮೇರೆಗೆ ಸುಪ್ರೀಂ ಕೋರ್ಟ್, 2022 ರ ಆಗಸ್ಟ್ 23 ರಂದು ಕೇಂದ್ರ ಆರೋಗ್ಯ ಸಚಿವಾಲಯ, ಆಯುಷ್ ಮತ್ತು ಪತಂಜಲಿ ಆಯುರ್ವೇದ್ ಲಿಮಿಟೆಡ್‌ಗೆ ನೋಟಿಸ್ ಜಾರಿ ಮಾಡಿತ್ತು. ಇದನ್ನೂ ಓದಿ: ರಿಲಯನ್ಸ್‌, ಪತಂಜಲಿ, ಟಾಟಾ, ಇನ್ಫೋಸಿಸ್‌ ಸೇರಿ 11 ಖಾಸಗಿ ಸಂಸ್ಥೆಗಳಿಗೆ ಸಿಐಎಸ್‌ಎಫ್‌ ಭದ್ರತೆ

    ಪತಂಜಲಿ ಆಯುರ್ವೇದ್‌ಗೆ ಆಧುನಿಕ ವೈದ್ಯಕೀಯ ವ್ಯವಸ್ಥೆಗಳ ವಿರುದ್ಧ ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ಪ್ರಕಟಿಸಬಾರದು. ಒಂದು ನಿರ್ದಿಷ್ಟ ಕಾಯಿಲೆಯನ್ನು ಗುಣಪಡಿಸಬಹುದು ಎಂದು ಸುಳ್ಳು ಹೇಳಿಕೆ ನೀಡಿದರೆ ಪ್ರತಿ ಉತ್ಪನ್ನಕ್ಕೆ 1 ಕೋಟಿ ರೂ. ದಂಡ ವಿಧಿಸಬೇಕಾಗುತ್ತದೆ ಎಂದು ಪೀಠವು ಎಚ್ಚರಿಸಿದೆ.

  • ಅದಾನಿ, ಅಂಬಾನಿ, ಬಿರ್ಲಾಗಿಂತ ನನ್ನ ಸಮಯದ ಮೌಲ್ಯ ಹೆಚ್ಚು: ಬಾಬಾ ರಾಮದೇವ್

    ಅದಾನಿ, ಅಂಬಾನಿ, ಬಿರ್ಲಾಗಿಂತ ನನ್ನ ಸಮಯದ ಮೌಲ್ಯ ಹೆಚ್ಚು: ಬಾಬಾ ರಾಮದೇವ್

    ಪಣಜಿ: ಅದಾನಿ, ಅಂಬಾನಿ (Ambani), ಬಿರ್ಲಾಗಿಂತ ನನ್ನ ಸಮಯದ ಮೌಲ್ಯ ಹೆಚ್ಚು ಎಂದು ಬಾಬಾ ರಾಮ್‌ದೇವ್ (Ramdev) ಹೇಳಿದರು.

    ಗೋವಾದ ಪಣಜಿಯಲ್ಲಿ (Panaji) ಮುಖ್ಯಮಂತ್ರಿ ಪ್ರಮೋದ್ ಸಾವಂತ್ (Pramod Sawant) ಮತ್ತು ಕೇಂದ್ರ ಸಚಿವ ಶ್ರೀಪಾದ್ ನಾಯಕ್ ಅವರ ಸಮ್ಮುಖದಲ್ಲಿ ರಾಮ್‌ದೇವ್ ತಮ್ಮ ಸಹಾಯಕ ಆಚಾರ್ಯ ಬಾಲಕೃಷ್ಣ ಅವರನ್ನು ಸನ್ಮಾನಿಸಲು ಆಯೋಜಿಸಿದ್ದ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.

    ಕಾರ್ಪೊರೇಟ್‌ಗಳು ತಮ್ಮ ಶೇ. 99ರಷ್ಟು ಸಮಯವನ್ನು ಸ್ವಹಿತಾಸಕ್ತಿಗಾಗಿ ಬಳಸುತ್ತಾರೆ, ಆದರೆ ನೋಡುವವರಿಗೆ ಸಮಯವು ಎಲ್ಲರ ಒಳಿತಿಗಾಗಿ ಎಂದು ಅನಿಸುತ್ತದೆ. ಆದರೆ ನನಗೆ ಇಲ್ಲಿದ್ದ ಮೂರು ದಿನಗಳು ಅಂಬಾನಿ ಮತ್ತು ಅದಾನಿಗಳಂತಹ ಬಿಲಿಯನೇರ್ ಕೈಗಾರಿಕೋದ್ಯಮಿಗಳ ಸಮಯಕ್ಕಿಂತ ಹೆಚ್ಚು ಮೌಲ್ಯಯುತವಾಗಿದೆ ಎಂದರು. ಇದನ್ನೂ ಓದಿ: ಅಮಿತ್‌ ಶಾ ಕೊಟ್ಟ ಟಾಸ್ಕ್‌ನಲ್ಲಿ ಕರ್ನಾಟಕ ಬಿಜೆಪಿ ಫೇಲ್‌

    ನಾನು ಹರಿದ್ವಾರದಿಂದ 3 ದಿನಗಳ ಕಾಲ ಇಲ್ಲಿಗೆ ಬಂದಿದ್ದೇನೆ. ನನ್ನ ಸಮಯದ ಮೌಲ್ಯವು ಅದಾನಿ, ಅಂಬಾನಿ, ಟಾಟಾ ಮತ್ತು ಬಿರ್ಲಾ ಅವರ ಸಮಯಕ್ಕಿಂತ ಹೆಚ್ಚು. ಕಾರ್ಪೊರೇಟ್‌ಗಳು ತಮ್ಮ ಸಮಯದ 99 ಪ್ರತಿಶತವನ್ನು ಸ್ವಹಿತಾಸಕ್ತಿಯಲ್ಲಿ ಕಳೆಯುತ್ತಾರೆ, ಆದರೆ ನೋಡುವವರ ಸಮಯ ಸಾಮಾನ್ಯವಾಗಿದೆ ಎಂದು ಹೇಳಿದರು.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಲ್ಮಾನ್ ಖಾನ್‍ನೂ ಡ್ರಗ್ಸ್ ಸೇವಿಸ್ತಾರೆ, ಶಾರೂಖ್ ಪುತ್ರ ಜೈಲಿಗೂ ಹೋಗಿದ್ರು: ಬಾಬಾ ರಾಮ್‍ದೇವ್ ಹೇಳಿಕೆ ವೈರಲ್

    ಸಲ್ಮಾನ್ ಖಾನ್‍ನೂ ಡ್ರಗ್ಸ್ ಸೇವಿಸ್ತಾರೆ, ಶಾರೂಖ್ ಪುತ್ರ ಜೈಲಿಗೂ ಹೋಗಿದ್ರು: ಬಾಬಾ ರಾಮ್‍ದೇವ್ ಹೇಳಿಕೆ ವೈರಲ್

    ಲಕ್ನೋ: ಬಾಲಿವುಡ್ (Bollywood) ನಟರು ಮತ್ತು ಡ್ರಗ್ಸ್ (Drugs) ಬಗ್ಗೆ ಯೋಗ ಗುರು ಬಾಬಾ ರಾಮದೇವ್ (Baba Ramdev) ಅವರು ಧ್ವನಿ ಎತ್ತಿದ್ದು, ನಟ ಸಲ್ಮಾನ್ ಖಾನ್ (Salman Khan) ಡ್ರಗ್ಸ್ ಸೇವಿಸುತ್ತಾರೆ. ನಟ ಶಾರೂಖ್ ಖಾನ್ (Shah Rukh Khan) ಪುತ್ರ ಕೂಡ ಡ್ರಗ್ಸ್ ಸೇವಿಸಿ ಸಿಕ್ಕಿ ಹಾಕಿಕೊಂಡಿದ್ದರು ಎಂದು ಹೇಳಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಉತ್ತರ ಪ್ರದೇಶದ (Uttar Pradesh) ಮೊರಾದಾಬಾದ್‍ನಲ್ಲಿ ನಡೆದ ಡ್ರಗ್ಸ್ ವಿರೋಧಿ ಚಳುವಳಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ರಾಮ್‍ದೇವ್ ಅವರು, ಡ್ರಗ್ಸ್ ವಿಚಾರಕ್ಕೆ ಚಿತ್ರರಂಗ ಮತ್ತು ತಾರೆಯರನ್ನು ದೂಷಿಸಿದ್ದಾರೆ. ಇದನ್ನೂ ಓದಿ: ಯತ್ನಾಳಷ್ಟು ದೊಡ್ಡ ವ್ಯಕ್ತಿಯೂ ನಾನಲ್ಲ, ಅವರಷ್ಟು ಬುದ್ಧಿವಂತಿಕೆಯೂ ನನಗಿಲ್ಲ: ಸವದಿ

    ಶಾರುಖ್ ಖಾನ್ ಅವರ ಮಗ ಆರ್ಯನ್ ಖಾನ್ (Aryan Khan) ಡ್ರಗ್ ಪಾರ್ಟಿಯಲ್ಲಿ ಡ್ರಗ್ಸ್ ಸೇವಿಸಿ ಸಿಕ್ಕಿಬಿದ್ದು, ಜೈಲಿಗೆ ಹೋಗಿದ್ದರು. ಸಲ್ಮಾನ್ ಖಾನ್ ಕೂಡ ಡ್ರಗ್ಸ್ ಸೇವಿಸುತ್ತಾರೆ. ಅಮೀರ್ ಖಾನ್ (Aamir Khan) ಡ್ರಗ್ಸ್ ಸೇವಿಸುತ್ತಾರೋ ಇಲ್ಲವೋ ಎಂಬುವುದರ ಬಗ್ಗೆ ನನಗೆ ಗೊತ್ತಿಲ್ಲ. ಈ ನಟರ ಬಗ್ಗೆ ಆ ದೇವರಿಗೆ ಗೊತ್ತು. ಎಷ್ಟು ಸಿನಿಮಾ ಸ್ಟಾರ್ಸ್‍ಗಳು ಡ್ರಗ್ಸ್ ತೆಗೆದುಕೊಳ್ಳುತ್ತಾರೆ ಎಂಬುವುದು ಯಾರಿಗೆ ಗೊತ್ತು? ನಟಿಯರ ಬಗ್ಗೆ ಕೇಳಬೇಕಾಗಿಲ್ಲ. ಚಿತ್ರರಂಗದಲ್ಲೂ ಡ್ರಗ್ಸ್ ಇದೆ, ರಾಜಕೀಯದಲ್ಲೂ ಡ್ರಗ್ಸ್ ಇದೆ. ಚುನಾವಣೆ ಸಂದರ್ಭದಲ್ಲಿ ಮದ್ಯ ಹಂಚಲಾಗುತ್ತದೆ. ಭಾರತವು ಪ್ರತಿಯೊಂದು ಮಾದಕ ವ್ಯಸನದಿಂದ ಮುಕ್ತವಾಗಬೇಕು ಎಂದು ನಾವು ಪ್ರತಿಜ್ಞೆ ಮಾಡಬೇಕು. ಇದಕ್ಕಾಗಿ ಚಳುವಳಿ ನಡೆಸುತ್ತೇವೆ ಎಂದಿದ್ದಾರೆ.

    ಸದ್ಯ ರಾಮ್‍ದೇವ್ ಅವರ ಈ ಹೇಳಿಕೆಯ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಯಾವುದೇ ಆಧಾರವಿಲ್ಲದೆ ಆರೋಪ ಮಾಡಿದ್ದಾರೆ ಎಂದು ಅವರು ನೀಡಿದ ಹೇಳಿಕೆಗೆ ಯಾವುದೇ ಸೆಲೆಬ್ರಿಟಿಗಳು ಇಲ್ಲಿಯವರೆಗೂ ಪ್ರತಿಕ್ರಿಯೆ ನೀಡಿಲ್ಲ. ಇದನ್ನೂ ಓದಿ: ಮಳೆಯಿಂದ ಅವಾಂತರ – ಡಿಸಿ ಕಚೇರಿ ಗೇಟ್ ಮುರಿದು ಒಳನುಗ್ಗಿದ ಬೀಡಿ ಕಾಲೋನಿ ನಿವಾಸಿಗಳು

    Live Tv
    [brid partner=56869869 player=32851 video=960834 autoplay=true]

  • ಅಗ್ನಿಪಥ್ ವಿರೋಧಿಸಿ ಪ್ರತಿಭಟನೆ ಮಾಡೋ ಬದಲು ಯೋಗ ಮಾಡಿ: ರಾಮ್‍ದೇವ್

    ಅಗ್ನಿಪಥ್ ವಿರೋಧಿಸಿ ಪ್ರತಿಭಟನೆ ಮಾಡೋ ಬದಲು ಯೋಗ ಮಾಡಿ: ರಾಮ್‍ದೇವ್

    ನವದೆಹಲಿ: ಅಗ್ನಿಪಥ್ ಯೋಜನೆಯ ವಿರುದ್ಧ ಪ್ರತಿಭಟನೆ ಮಾಡುತ್ತಿರುವುದು ಅರ್ಥಹೀನ ರಾಜಕೀಯವಾಗಿದೆ. ಇದರ ಬದಲು ಪ್ರತಿಭಟನಾಕಾರರು ಯೋಗ ಮಾಡಬೇಕು ಎಂದು ಯೋಗ ಗುರು ಬಾಬಾ ರಾಮ್‍ದೇವ್ ಸಲಹೆ ನೀಡಿದರು.

    ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಗ್ನಿಪಥ್ ಪ್ರತಿಭಟನಕಾರರು ಯೋಗ ಮಾಡಿದ್ದರೆ, ಅವರು ಬೆಂಕಿ ಹಚ್ಚುವ ಪ್ರಯತ್ನ ಮಾಡುತ್ತಿರಲಿಲ್ಲ. ಪ್ರತಿಭಟನೆಯನ್ನು ಬಿಟ್ಟು ಅವರು ಯೋಗವನ್ನು ಮಾಡಬೇಕಾಗಿತ್ತು ಎಂದ ಅವರು, ರಾಜಕೀಯದಲ್ಲಿ ಯೋಗ ಇರಬೇಕು, ಆದರೆ ಯೋಗದಲ್ಲಿ ರಾಜಕೀಯ ಇರಬಾರದು ಎಂದು ಹೇಳಿದರು.

    ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ಅಧಿಕಾರದಿಂದ ತೆಗೆದು ಹಾಕಲು ದೇಶದಲ್ಲಿ ಕೆಲವರು ಈ ರೀತಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಸಾಲುಮರದ ತಿಮ್ಮಕ್ಕಗೆ BDAಯಿಂದ ನಿವೇಶನ ಹಂಚಿಕೆ

    ಯೋಗವು ಸ್ವಯಂ ಶಿಸ್ತು ಮತ್ತು ಸ್ವಯಂ ಪ್ರೇರಣೆಯಾಗಿದೆ. ಇದು ಸ್ವಯಂ ವಿಶ್ಲೇಷಣೆಯೊಂದಿಗೆ ಹಲವು ಆಯಾಮಗಳನ್ನು ಹೊಂದಿದೆ. ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢವಾಗಿರುವುದು ಮತ್ತು ನಿಮ್ಮ ಮನಸ್ಸು, ಆಲೋಚನೆಗಳು ಮತ್ತು ಭಾವನೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಯೋಗವಾಗಿದೆ ಎಂದರು. ಇದನ್ನೂ ಓದಿ: ಪಠ್ಯಪುಸ್ತಕ ಪರಿಷ್ಕರಣೆ ಸಂಬಂಧ ಬೊಮ್ಮಾಯಿಗೆ ನಿರ್ಧಾರ ತೆಗೆದುಕೊಳ್ಳೋ ಧೈರ್ಯವಿಲ್ಲ: ಮುಖ್ಯಮಂತ್ರಿ ಚಂದ್ರು

    ಜೂನ್ 14ರಂದು ಕೇಂದ್ರವು ಅಗ್ನಿಪಥ್ ಯೋಜನೆಯನ್ನು ಜಾರಿಗೆ ತರುವುದಾಗಿ ಹೇಳಿತ್ತು. ಇದಾದ ಬಳಿಕ ಈ ಯೋಜನೆಯನ್ನು ವಿರೋಧಿಸಿ ದೇಶದ ಹಲವಾರು ರಾಜ್ಯಗಳಲ್ಲಿ ಪ್ರತಿಭಟನೆಗಳು ತಾರಕಕ್ಕೆ ಏರಿದೆ. 17.5 ರಿಂದ 21 ವರ್ಷದೊಳಗಿನ ಸೈನಿಕರನ್ನು 4 ವರ್ಷಗಳ ಅವಧಿಗೆ ಶಸ್ತ್ರಾಸ್ತ್ರ ಪಡೆಗಳಲ್ಲಿ ನೇಮಕ ಮಾಡಿಕೊಳ್ಳುವ ಕೇಂದ್ರದ ಯೋಜನೆಗೆ ಕಳೆದ 4 ದಿನಗಳಿಂದ ಬಿಹಾರ, ಉತ್ತರ ಪ್ರದೇಶ, ಮಧ್ಯ ಪ್ರದೇಶ, ಹರಿಯಾಣ, ತೆಲಂಗಾಣ ರಾಜ್ಯಗಳಲ್ಲಿ ಪ್ರತಿಭಟನೆ ಭುಗಿಲೆದ್ದಿತ್ತು.

    Live Tv

  • ಬಾಯಿ ಮುಚ್ಚು, ಇದು ನಿನಗೆ ಒಳ್ಳೆಯದಲ್ಲ: ಪತ್ರಕರ್ತ ವಿರುದ್ಧ ರಾಮದೇವ್ ಕಿಡಿ

    ಬಾಯಿ ಮುಚ್ಚು, ಇದು ನಿನಗೆ ಒಳ್ಳೆಯದಲ್ಲ: ಪತ್ರಕರ್ತ ವಿರುದ್ಧ ರಾಮದೇವ್ ಕಿಡಿ

    ನವದೆಹಲಿ: ಯೋಗ ಗುರು ರಾಮದೇವ್ ಅವರು ಪೆಟ್ರೋಲ್ ಬೆಲೆ ಇಳಿಕೆ ಕುರಿತು ಈ ಹಿಂದೆ ನೀಡಿದ್ದ ಹೇಳಿಕೆ ಕುರಿತಂತೆ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಬಹಿರಂಗವಾಗಿ ಬೆದರಿಕೆಯೊಡ್ಡಿದ್ದಾರೆ.

    ಹರಿಯಾಣದ ಕರ್ನಾಲ್‍ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪತ್ರಕರ್ತರೊಬ್ಬರು ಜನರು ಲೀಟರ್‌ಗೆ ಪೆಟ್ರೋಲ್ 40ರೂ. ಮತ್ತು ಸಿಲಿಂಡರ್ 300 ರೂ. ಬೆಲೆಯನ್ನು ನಿಗದಿಪಡಿಸುವ ಸರ್ಕಾರವನ್ನು ಪರಿಗಣಿಸಬೇಕು ಎಂದು ನೀವು ಈ ಹಿಂದೆ ಹೇಳಿದ್ರಿ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಕೇಜ್ರಿವಾಲ್ ತಪ್ಪಿಸಿಕೊಳ್ಳಲು ಇರುವ ಒಂದೇ ಮಾರ್ಗ ಬಲಿಪಶು: ಗಂಭೀರ್

    ಇದಕ್ಕೆ ಪ್ರತಿಯಾಗಿ ಯೋಗ ಗುರು ರಾಮದೇವ್ ಅವರು, ಹೌದು ನಾನು ಹೇಳಿದ್ದೆ, ಈಗ ನೀವು ಏನು ಮಾಡಬಹುದು? ಇಂತಹ ಪ್ರಶ್ನೆಗಳನ್ನು ಕೇಳುತ್ತಾ ಇರಬೇಡಿ. ನಿಮ್ಮ ಪ್ರಶ್ನಿಗಳಿಗೆಲ್ಲಾ ಉತ್ತರಿಸುತ್ತಾ ಇರಲು ನಾನು ಗುತ್ತಿಗೆದಾರನಲ್ಲ ಎಂದಿದ್ದಾರೆ. ಮತ್ತೊಮ್ಮೆ ಇದೇ ಪ್ರಶ್ನೆಯನ್ನು ಕೇಳಿದಾಗ, ನಾನು ಹೇಳಿಕೆ ನೀಡಿದ್ದೇನೆ, ಅದಕ್ಕೆ ಈಗ ನೀವು ಏನು ಮಾಡುತ್ತೀರಾ? ಬಾಯಿ ಮುಚ್ಚು, ಸುಮ್ಮನೆ ನೀವು ಮತ್ತೆ, ಮತ್ತೆ ಇದೇ ಪ್ರಶ್ನೆ ಕೇಳುತ್ತಿದ್ದರೆ, ಅದು ಸರಿ ಇರುವುದುಲ್ಲ. ನೀನು ಸಭ್ಯ ತಂದೆ, ತಾಯಿಯ ಮಗನಾಗಿದ್ದರೆ, ಈ ರೀತಿ ಮಾತನಾಡುವುದಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

    ಇದೇ ವೇಳೆ ಇಂಧನ ಬೆಲೆ ಕಡಿಮೆಯಾದರೆ, ತೆರಿಗೆ ಪಡೆಯುವುದಿಲ್ಲ ಎಂದು ಸರ್ಕಾರ ಹೇಳುತ್ತದೆ. ತೆರಿಗೆ ಇಲ್ಲದೇ ಅವರು ದೇಶವನ್ನು ಹೇಗೆ ನಡೆಸುತ್ತಾರೆ, ಸಂಬಳವನ್ನು ಹೇಗೆ ಪಾವತಿಸುತ್ತಾರೆ, ರಸ್ತೆಗಳನ್ನು ಹೇಗೆ ನಿರ್ಮಿಸುತ್ತಾರೆ? ಹೌದು, ಹಣದುಬ್ಬರ ಕಡಿಮೆಯಾಗಬೇಕು, ನಾನು ಒಪ್ಪುತ್ತೇನೆ. ಆದರೆ ಜನರು ಕಷ್ಟಪಟ್ಟು ಕೆಲಸ ಮಾಡಬೇಕು. ನಾನು ಕೂಡ ಬೆಳಗ್ಗೆ 4 ಗಂಟೆಗೆ ಎದ್ದು ರಾತ್ರಿ 10 ಗಂಟೆಯವರೆಗೆ ಕೆಲಸ ಮಾಡುತ್ತೇನೆ. ಕಷ್ಟದ ಸಮಯದಲ್ಲಿ ಜನರು ಕಷ್ಟಪಟ್ಟು ಕೆಲಸ ಮಾಡಬೇಕು ಎಂದು ಮನವಿ ಮಾಡಿದರು. ಈ ವೇಳೆ ಸುತ್ತಲೂ ಕುಳಿತಿದ್ದ ಅವರ ಬೆಂಬಲಿಗರು ರಾಮ್‍ದೇವ್ ಅವರ ಮಾತಿಗೆ ಚಪ್ಪಾಳೆ ತಟ್ಟಿದರು. ಇದನ್ನೂ ಓದಿ: ನಿರಾಶ್ರಿತನನ್ನು ಅಪ್ಪಿಕೊಂಡು ಮಡಿಲಲ್ಲಿ ಮಲಗಿದ ಶ್ವಾನ- ನೆಟ್ಟಿಗರ ಮನಗೆದ್ದ ವೀಡಿಯೋ

  • ಕೋವಿಡ್‌ 19ಗೆ ಪತಂಜಲಿಯಿಂದ ಔಷಧಿ – 545 ರೂ.ಗೆ ಕೊರೊನಿಲ್ ಕಿಟ್‌

    ಕೋವಿಡ್‌ 19ಗೆ ಪತಂಜಲಿಯಿಂದ ಔಷಧಿ – 545 ರೂ.ಗೆ ಕೊರೊನಿಲ್ ಕಿಟ್‌

    – 3 ರಿಂದ 7 ದಿನದ ಒಳಗಡೆ ರೋಗಿಗಳು ಗುಣಮುಖ
    – ಪತಂಜಲಿ, ನಿಮ್ಸ್‌ ಜೊತೆಗೂಡಿ ಕ್ಲಿನಿಕಲ್‌ ಟ್ರಯಲ್‌

    ನವದೆಹಲಿ: ಕೋವಿಡ್‌ 19ಗೆ ಪತಂಜಲಿ ಸಂಸ್ಥೆ ಆಯುರ್ವೇದ ಔಷಧಿಯನ್ನು ಕಂಡು ಹಿಡಿದಿದೆ ಎಂದು ಯೋಗಗುರು ಬಾಬಾ ರಾಮ್‌ದೇವ್‌ ಹೇಳಿದ್ದಾರೆ.

    ಕೋವಿಡ್‌ 19ಗೆ ವಿಜ್ಞಾನಿಗಳು ಔಷಧಿ ಕಂಡುಹಿಡಿಯಲು ಶ್ರಮಿಸುತ್ತಿದ್ದರೆ ರಾಮದೇವ್‌ ಪತಂಜಲಿ ಸಂಸ್ಥೆ ಮೊದಲ ಆಯುವೇರ್ದಿಕ್‌ ಔಷಧಿ ಕಂಡುಹಿಡಿದಿದೆ ಎಂದು ರಾಮ್‌ದೇವ್ ತಿಳಿಸಿದ್ದಾರೆ.

    ಹರಿದ್ವಾರದಲ್ಲಿ ಔಷಧಿ ಬಿಡುಗಡೆ ಮಾಡಿ ಮಾತನಾಡಿದದ ಅವರು, ʼಕೊರೊನಿಲ್‌ʼ ಮತ್ತು ʼಸಸ್ವರಿʼ ಹೆಸರಿನ ಎರಡು ಔಷಧಿ ಸೇವಿಸಿದರೆ 7 ದಿನದಲ್ಲಿ ಕೊರೊನಾ ಗುಣವಾಗುತ್ತದೆ. ರೋಗಿಗಳು ಸಂಪೂರ್ಣವಾಗಿ ಗುಣವಾಗುತ್ತಾರೆ ಎಂದು ಶೇ.100 ರಷ್ಟು ಭರವಸೆ ನೀಡುತ್ತೇನೆ ಎಂದು ತಿಳಿಸಿದ್ದಾರೆ.

    ಪತಂಜಲಿ ಸಂಶೋಧನಾ ಕೇಂದ್ರ ಮತ್ತು ಜೈಪುರದಲ್ಲಿರುವ ರಾಷ್ಟ್ರೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ(ನಿಮ್ಸ್‌) ಜೊತೆ ಜಂಟಿಯಾಗಿ ಕ್ಲಿನಿಕಲ್‌ ಟ್ರಯಲ್‌ ಮಾಡಿದೆ. 3 ರಿಂದ 7 ದಿನದ ಒಳಗಡೆ ರೋಗಿಗಳು ಶೇ.100ರಷ್ಟು ಗುಣಮುಖರಾಗುತ್ತಾರೆ ಎಂದು ಸಂಸ್ಥೆ ತಿಳಿಸಿದೆ.

    ಎರಡು ಕ್ಲಿನಿಕಲ್‌ ಟ್ರಯಲ್‌ ಮಾಡಿದ್ದೇವೆ. ದೆಹಲಿ, ಅಹಮದಾಬಾದ್‌ ಸೇರಿದಂತೆ ದೇಶದ ಹಲವು ನಗರಗಳಲ್ಲಿ ಪ್ರಯೋಗ ಮಾಡಿದ್ದೇವೆ. 280 ರೋಗಿಗಳಿಗೆ ನೀಡಿದ್ದು, ಔಷಧಿ ಪಡೆದ ಎಲ್ಲ ರೋಗಿಗಳು ಗುಣಮುಖರಾಗಿದ್ದಾರೆ ಎಂದು ತಿಳಿಸಿದ್ದಾರೆ.

    ಕೊರೊನಾ ಕಿಟ್‌ ಬೆಲೆ 545 ರೂ. ಇದ್ದು, 30 ದಿನಗಳ ಕಾಲ ಬಳಸಬಹುದು. ಸದ್ಯಕ್ಕೆ ಈ ಔಷಧಿ ಎಲ್ಲಿಯೂ ಸಿಗುವುದಿಲ್ಲ. ಒಂದು ವಾರದಲ್ಲಿ ಪತಂಜಲಿ ಅಂಗಡಿಗಳಲ್ಲಿ ಲಭ್ಯವಾಗಲಿದೆ. ಕೊರೊನಾ ಕಿಟ್‌ ವಿತರಣೆ ಸಂಬಂಧ ಒಂದು ಅಪ್ಲಿಕೇಶನ್‌ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

     

    ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸುವುದಿಲ್ಲ. ಬದಲಾಗಿ ಕೊರೊನಾವನ್ನು ಗುಣಪಡಿಸುತ್ತದೆ. ಶೇ.69 ರಷ್ಟು ರೋಗಿಗಳು 6 ದಿನದಲ್ಲಿ ಗುಣವಾಗಿದ್ದಾರೆ. ನಾವು ಸಂಶೋಧನೆ ಮಾಡಿಯೇ ಈ ಔಷಧಿ ಬಿಡುಗಡೆ ಮಾಡಿದ್ದೇವೆ. ಪ್ರತಿ ಪ್ರಶ್ನೆಗಳಿಗೆ ನಮ್ಮ ಬಳಿ ಉತ್ತರವಿದೆ ಎಂದು ಬಾಬಾ ರಾಮ್‌ದೇವ್‌ ತಿಳಿಸಿದ್ದಾರೆ.

    ಕೋವಿಡ್‌ 19 ಸ್ಫೋಟಗೊಂಡಾಗಲೇ ನಾವು ವಿಜ್ಞಾನಿಗಳ ತಂಡವನ್ನು ನೇಮಕ ಮಾಡಿದ್ದೆವು. ದೇಹದ ಯಾವ ಕಾಂಪೌಂಡ್ಸ್‌ ವೈರಸ್‌ ವಿರುದ್ಧ ಹೋರಾಡಿ ದೇಹದಲ್ಲಿ ಹರಡುವಿಕೆಯನ್ನು ನಿಲ್ಲಿಸಬಹುದು ಎಂಬುದನ್ನು ನಾವು ಮೊದಲು ಅಧ್ಯಯನ ನಡೆಸಿ ಈ ಔಷಧಿ ಬಿಡುಗಡೆ ಮಾಡಿದ್ದೇವೆ. ನಾವು ನೀಡಿದ ಔಷಧಿ ಸೇವಿಸಿದ ಪಾಸಿಟಿವ್‌ ರೋಗಿಗಳ ಪರೀಕ್ಷಾ ವರದಿ 3-4 ದಿನದಲ್ಲಿ ನೆಗೆಟಿವ್‌ ಬಂದಿದೆ. ಹೀಗಾಗಿ ಆಯುರ್ವೇದ ಮೂಲಕ ಕೋವಿಡ್‌ 19 ಗುಣಪಡಿಸಬಹುದು. ಮುಂದಿನ 4-5 ದಿನದಲ್ಲಿ ಈ ಅಧ್ಯಯನಕ್ಕೆ ಸಂಬಂಧಿಸಿದ ಡೇಟಾವನ್ನು ರಿಲೀಸ್‌ ಮಾಡುತ್ತೇವೆ ಎಂದು ಪತಂಜಲಿ ಸಂಸ್ಥೆಯ ಆಡಳಿತ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಹೇಳಿದ್ದಾರೆ.

  • ಪತಂಜಲಿ ಕಂಪೆನಿಗೆ ಉತ್ತರಾಧಿಕಾರಿ ಯಾರು ಅನ್ನೋದನ್ನು ತಿಳಿಸಿದ್ರು ಬಾಬಾ ರಾಮ್‍ದೇವ್

    ಪತಂಜಲಿ ಕಂಪೆನಿಗೆ ಉತ್ತರಾಧಿಕಾರಿ ಯಾರು ಅನ್ನೋದನ್ನು ತಿಳಿಸಿದ್ರು ಬಾಬಾ ರಾಮ್‍ದೇವ್

    ನವದೆಹಲಿ: 10 ಸಾವಿರ ಕೋಟಿ ಬೆಲೆಬಾಳುವ ಪತಂಜಲಿ ಸಮೂಹಕ್ಕೆ ಮುಂದಿನ ಉತ್ತರಾಧಿಕಾರಿ ಯಾರು ಎನ್ನುವುದನ್ನು ಬಾಬಾ ರಾಮ್‍ದೇವ್ ಮೊದಲ ಬಾರಿಗೆ ಬಹಿರಂಗವಾಗಿ ತಿಳಿಸಿದ್ದಾರೆ.

    ಖಾಸಗಿ ಕಾರ್ಯಕ್ರಮವೊಂದರಲ್ಲಿ ರಾಮ್‍ದೇವ್ ಮಾತನಾಡುತ್ತಾ, ಪತಂಜಲಿ ಸಂಸ್ಥೆಯಲ್ಲಿ 500 ಜನ ಸಾಧುಗಳು ಸೇವೆ ಸಲ್ಲಿಸುತ್ತಿದ್ದಾರೆ. ಉತ್ತರಾಧಿಕಾರಿಗಳನ್ನಾಗಿ ನೇಮಿಸಲು ಇವರಿಗೆ ತರಬೇತಿ ನೀಡಲಾಗುವುದು ಎಂದು ಅವರು ಹೇಳಿದರು.

    ಮುಂದಿನ 2 ವರ್ಷಗಳಲ್ಲಿ 1 ಲಕ್ಷ ಕೋಟಿಯಷ್ಟು ಸರಕು ಉತ್ಪಾದನಾ ಸಾಮಥ್ರ್ಯವನ್ನು ಹೊಂದಿದೆ. ಸದ್ಯ ಹರಿದ್ವಾರ ಘಟಕದಲ್ಲಿ 15 ಸಾವಿರ ಕೋಟಿ, ತೇಜ್ಪುರ್‍ನಲ್ಲಿ 25 ಸಾವಿರ ಕೋಟಿಯಷ್ಟು ಸರಕು ಉತ್ಪಾದನೆ ಮಾಡಲು ಸಾಮಥ್ರ್ಯ ಹೊಂದಿದ್ದೇವೆ ಎಂದರು.

     

    ಈ ಹಿಂದೆ 1 ಲಕ್ಷ ಕೋಟಿ ಉತ್ಪನ್ನಗಳನ್ನು ಉತ್ಪಾದನೆ ಮಾಡಿ ಜನರಿಗೆ ನೀಡುತ್ತಿದ್ದೇವೆ. ತದನಂತರ ಶೇ.10ರಷ್ಟು ಅಂದರೆ 10 ಲಕ್ಷ ಕೋಟಿ ಉತ್ಪಾದನೆಯ ಗುರಿ ಹೊಂದಲು ಸಾಧ್ಯವಾಯಿತು. ಕಂಪನಿಯ ಬೆಳವಣಿಗೆ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ನೋಯ್ಡಾ, ನಾಗ್ಪುರ, ಇಂದೋರ್ ಮತ್ತು ಆಂಧ್ರಪ್ರದೇಶದಲ್ಲಿ 50 ಚಿಕ್ಕ ತಯಾರಿಕಾ ಘಟನಗಳನ್ನು ಸ್ಥಾಪಿಸಿ ತೈಲ, ಉಪ್ಪು ಸೇರಿದಂತೆ ಹಲವು ವಸ್ತುಗಳನ್ನು ತಯಾರಿಸುವ ಗುರಿ ಹೊಂದಿದ್ದೇವೆ ಎಂದರು.

    ಸದ್ಯ ಪತಂಜಲಿ ಕಂಪನಿಯು ಆಯುರ್ವೇದ ವಸ್ತುಗಳ ತಯಾರಿಕೆಯಲ್ಲಿ ಹೆಸರು ವಾಸಿಯಾಗಿದ್ದು, ಫ್ಯಾಶನ್ ಹಾಗೂ ಯುವ ಸಮೂಹಕ್ಕೇ ಬೇಕಾದ ಜೀನ್ಸ್, ಪ್ಯಾಂಟ್, ಕುರ್ತಾ, ಶಟ್ರ್ಸ್, ಸೂಟಿಂಗ್ಸ್, ಸ್ಪೋಟ್ರ್ಸ್ ವೇರ್ ನ್ನು ತಯಾರಿಸುವ ಮೂಲಕ ಮುಂದಿನ ದಿನಗಳಲ್ಲಿ ಫ್ಯಾಶನ್ ಲೋಕಕ್ಕೆ ಕಾಲಿಡಲಿದ್ದೇವೆ ಎಂದು ಹೇಳಿದರು.

    ಕೇಂದ್ರ ಸರ್ಕಾರ ಹಾಗೂ ಹಣಕಾಸು ಇಲಾಖೆ ವಿಧಿಸಿರುವ ಜಿಎಸ್‍ಟಿ ತೆರಿಗೆಯನ್ನು ಹಸುವಿನ ತುಪ್ಪ ಹಾಗೂ ಬೆಣ್ಣೆಯ ಸರಕುಗಳಿಗೆ ಅನ್ವಯವಾಗಬೇಕು. ಬೆಣ್ಣೆ ಮತ್ತು ತುಪ್ಪದ ವಸ್ತುಗಳಲ್ಲಿ ಶೆ.5ರಷ್ಟು ತೆರಿಗೆ ಇದ್ದು ಶೇ.12ಕ್ಕೆ ಏರಿಸಬೇಕು ಎಂದು ಹಣಕಾಸು ಮಂತ್ರಿ ಅರುಣ್ ಜೆಟ್ಲಿಗೆ ಮನವಿ ಮಾಡಿಕೊಂಡಿದ್ದೇನೆ ಎಂದು ರಾಮ್‍ದೇವ್    ಹೇಳಿದರು.

    ದೇಶದಲ್ಲಿ ಸ್ವದೇಶಿ ವಸ್ತುಗಳಿಗಿಂತ ವಿದೇಶಿ ವಸ್ತುಗಳ ಮಾರಾಟ ಹೆಚ್ಚಾಗಿದ್ದು ಚೀನಾ ಹಾಗೂ ವಿದೇಶಿ ಸರಕುಗಳನ್ನು ನಿಷೇಧಿಸಬೇಕು. ನಮ್ಮ ದೇಶದ ವಸ್ತುಗಳನ್ನು ಬಾಗ್ಲಾದೇಶ, ನೇಪಾಳ, ಪಾಕಿಸ್ತಾನ ಹಾಗೂ ಆಫ್ರಿಕಾ ರಾಷ್ಟ್ರಗಳಲ್ಲಿ ಮಾರಾಟ ಮಾಡಿದರೂ ನಾವು ಗಳಿಸುವ ಯಾವುದೇ ಲಾಭಗಳು ನಮ್ಮ ದೇಶಕ್ಕೆ ವಾಪಾಸ್ಸಾಗುವುದಿಲ್ಲ. ಹೀಗಾಗಿ ವಿದೇಶಿ ಮಾರುಕಟ್ಟೆಗಳಲ್ಲಿ ಭಾರತೀಯ ಉತ್ಪನ್ನಗಳು ರಫ್ತು ಆಗಬೇಕು ಎಂದು ಸಲಹೆ ನೀಡಿದರು.

    ಕಾರ್ಯಕ್ರಮದಲ್ಲಿ ಪತಂಜಲಿ ಕಂಪನಿಯು ರಾಜಕೀಯದ ಅಂಗವಾಗಿ ಇದೆಯೇ ಎಂಬ ಪ್ರಶ್ನೆಯನ್ನು ಅಲ್ಲೆಗೆಳೆದಿದ್ದಾರೆ. ನನ್ನ ಹಾಗೂ ಪತಂಜಲಿ ಯಾವುದೇ ರಾಜಕೀಯ ಸಂಪರ್ಕ ಹೊಂದಿಲ್ಲ. ಪತಂಜಲಿಯನ್ನು ಬೆಳೆಸಲು ನಾನು ಒಂದು ಸಿಂಗಲ್ ಪೈಸಾ ಕೂಡ ಮೋದಿ ಸರ್ಕಾರದಿಂದ ಪಡೆದಿಲ್ಲ. ಕೆಟ್ಟಜನರು ಯಾವುದೇ ರಾಜಕೀಯವಾಗಿ ಆಳ್ವಿಕೆ ಮಾಡಬಾರದು ಎಂಬ ಉದ್ದೇಶದಿಂದ ನಾನು ರಾಜಕೀಯದಲ್ಲಿ ಮಧ್ಯ ಪ್ರವೇಶ ಮಾಡಿದೆ. ನನ್ನ ವೃತ್ತಿ ರಾಜಕೀಯವಲ್ಲ. ನನ್ನ ಕಂಪನಿಗೆ ರಾಜಕೀಯ ಸಂಪರ್ಕಗಳನ್ನು ಎಂದಿಗೂ ಬಳಸುವುದಿಲ್ಲ ಎಂದು ಹೇಳಿದರು.