Tag: Ramdas Athawale

  • ರಾಷ್ಟ್ರಮಟ್ಟದಲ್ಲಿ ತೃತೀಯ ರಂಗ ರಚಿಸಿದರೂ ಮೋದಿ ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲ: ರಾಮದಾಸ್ ಅಠವಳೆ

    ರಾಷ್ಟ್ರಮಟ್ಟದಲ್ಲಿ ತೃತೀಯ ರಂಗ ರಚಿಸಿದರೂ ಮೋದಿ ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲ: ರಾಮದಾಸ್ ಅಠವಳೆ

    ನವದೆಹಲಿ: ಶಿವಸೇನೆ, ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್‌ಎಸ್) ಮತ್ತು ಇತರ ಪಕ್ಷಗಳು ಸೇರಿ ರಾಷ್ಟ್ರಮಟ್ಟದಲ್ಲಿ ತೃತೀಯ ರಂಗ ರಚಿಸಿದರೂ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲ ಎಂದು ಕೇಂದ್ರ ಸಚಿವ ರಾಮದಾಸ್ ಅಠವಳೆ ತಿಳಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎನ್‌ಡಿಎ ಸರ್ಕಾರದಿಂದ ಜನರು ಸಂತೋಷವಾಗಿದ್ದಾರೆ. ರಾಷ್ಟ್ರಮಟ್ಟದಲ್ಲಿ ತೃತೀಯ ರಂಗ ರಚಿಸಿದರೂ ಯಾವುದೇ ಅಪಾಯವಿಲ್ಲ ಎಂದ ಅವರು, 2024ರ ರಾಷ್ಟ್ರೀಯ ಚುನಾವಣೆ ಮತ್ತು ಐದು ರಾಜ್ಯಗಳಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಟಿಆರ್‌ಎಸ್ ಮುಖ್ಯಸ್ಥರಾಗಿರುವ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರು ಭಾನುವಾರ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ಭೇಟಿಯಾಗಿದ್ದರು.

    ಶಿವಸೇನಾ ಸಂಸದ ಮತ್ತು ಪಕ್ಷದ ಮುಖ್ಯ ವಕ್ತಾರ ಸಂಜಯ್ ರಾವತ್ ಕೂಡ ಈ ಸಭೆಯಲ್ಲಿ ಭಾಗವಹಿಸಲಿದ್ದು, ನಂತರದ ದಿನದಲ್ಲಿ ಚಂದ್ರಶೇಖರ್ ರಾವ್ ಅವರು ಮಹಾರಾಷ್ಟ್ರದಲ್ಲಿ ಶಿವಸೇನೆ ಮತ್ತು ಕಾಂಗ್ರೆಸ್‌ನೊಂದಿಗೆ ಅಧಿಕಾರವನ್ನು ಹಂಚಿಕೊಂಡಿರುವ ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಅವರನ್ನು ಭೇಟಿಯಾಗಲಿದ್ದಾರೆ. ಇದನ್ನೂ ಓದಿ: ಉದ್ಧವ್ ಠಾಕ್ರೆಯನ್ನು ಭೇಟಿಯಾದ ತೆಲಂಗಾಣ CM ಕೆಸಿಆರ್

    ಬಿಜೆಪಿ ನೀತಿಗಳ ವಿರುದ್ಧ ಹೋರಾಟ ಮತ್ತು ಒಕ್ಕೂಟ ವ್ಯವಸ್ಥೆಯನ್ನು ಎತ್ತಿಹಿಡಿಯುವ ರಾವ್ ಅವರ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಠಾಕ್ರೆ ಇತ್ತೀಚಿಗೆ ಘೋಷಿಸಿದ್ದರು. ಇದನ್ನೂ ಓದಿ: ಅರವಿಂದ್ ಕೇಜ್ರಿವಾಲ್ ದೊಡ್ಡ ಸುಳ್ಳುಗಾರ: ಚರಣ್‍ಜಿತ್ ಸಿಂಗ್ ಚನ್ನಿ

    ಹಲವು ವಿಷಯಗಳಿಂದ ಬಿಜೆಪಿ ಮತ್ತು ಕೇಂದ್ರವನ್ನು ಟೀಕಿಸುತ್ತಾ ಬಂದಿರುವ ತೆಲಂಗಾಣ ಸಿಎಂ, ಬಿಜೆಪಿ ಮತ್ತು ಎನ್‌ಡಿಎ ಸರ್ಕಾರದ ವಿರುದ್ಧ ವಿವಿಧ ರಾಜಕೀಯ ಪಕ್ಷಗಳನ್ನು ಒಗ್ಗೂಡಿಲು ಪ್ರಯತ್ನಗಳನ್ನು ನಡೆಸುತ್ತಿದ್ದು, ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳದ ಸಹವರ್ತಿಗಳೊಂದಿಗೆ ಸಭೆ ನಡೆಸುವುದಾಗಿ ಹೇಳಿದ್ದರು.

  • ಮದ್ವೆಯಾದ್ರೆ ರಾಹುಲ್ ಗಾಂಧಿ ಬಲಿಷ್ಠರಾಗ್ತಾರೆ: ರಾಮ್‍ದಾಸ್ ಅಥಾವಳೆ

    ಮದ್ವೆಯಾದ್ರೆ ರಾಹುಲ್ ಗಾಂಧಿ ಬಲಿಷ್ಠರಾಗ್ತಾರೆ: ರಾಮ್‍ದಾಸ್ ಅಥಾವಳೆ

    ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಕೇಂದ್ರ ಸಚಿವ ರಾಮದಾಸ್ ಅಥಾವಳೆ ಮದುವೆಯಾಗುವಂತೆ ಸಲಹೆ ನೀಡಿದ್ದಾರೆ.

    ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಕಾಂಗ್ರೆಸ್ ಸೋಲು ಕಂಡಿದ್ದು, ಹೀಗಾಗಿ ಪಕ್ಷ ಬಲಿಷ್ಠಗೊಳಿಸಬೇಕಾದರೆ ಪಕ್ಷದ ಅಧ್ಯಕ್ಷರು ಏನು ಮಾಡಬೇಕು ಎಂದು ಕೇಳಿದ್ದಕ್ಕೆ 48 ವರ್ಷದ ರಾಹುಲ್ ಗಾಂಧಿಯವರು ಮದುವೆಯಾದರೆ ಮತ್ತಷ್ಟು ಬಲಿಷ್ಠವಾಗಲಿದ್ದಾರೆ ಎಂದು ಸಚಿವರು ಹೇಳಿದ್ದಾರೆ.

    ರಾಹುಲ್ ಗಾಂಧಿಯವರು ನನ್ನ ಗೆಳೆಯರಾಗಿದ್ದಾರೆ. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಅವರು ಪಕ್ಷದ ಗೆಲುವಿಗಾಗಿ ಸಾಕಷ್ಟು ಶ್ರಮವಹಿಸಿದ್ದಾರೆ. ಹೀಗಾಗಿ ಅವರು ಇನಷ್ಟು ಶಕ್ತಿಯುತವಾಗಿರಲು ಮದುವೆಯಾಗಬೇಕು. ಮದುವೆಯಾದರೆ ಜವಾಬ್ದಾರಿ ಹೆಚ್ಚಾಗುತ್ತದೆ. ಆವಾಗ ಅವರು ಬಲಿಷ್ಠರಾಗುತ್ತಾರೆ ಎಂದು ತಿಳಿಸಿದ್ದಾರೆ.

    ಈ ಹಿಂದೆ ಹಲವು ಬಾರಿ ಮದುವೆಯ ಬಗ್ಗೆ ರಾಹುಲ್ ಗಾಂಧಿಯವರನ್ನು ಕೇಳಿದಾಗ ನಾನು ಕಾಂಗ್ರೆಸ್ ಪಕ್ಷವನ್ನೇ ಮದುವೆಯಾಗಿದ್ದೇನೆ ಎಂದು ಹೇಳುವ ಮೂಲಕ ಉತ್ತರಿಸಲು ತಪ್ಪಿಸಿಕೊಳ್ಳುತ್ತಿದ್ದರು.

  • ರಾಹುಲ್ ಗಾಂಧಿ ಪಪ್ಪು ಅಲ್ಲ ಪಪ್ಪಾ: ಕೇಂದ್ರ ಸಚಿವ

    ರಾಹುಲ್ ಗಾಂಧಿ ಪಪ್ಪು ಅಲ್ಲ ಪಪ್ಪಾ: ಕೇಂದ್ರ ಸಚಿವ

    ಮುಂಬೈ: ಮೂರು ರಾಜ್ಯಗಳಲ್ಲಿ ಗೆಲುವು ಸಾಧಿಸಿದ ಬಳಿಕ ರಾಹುಲ್ ಗಾಂಧಿ ಪಪ್ಪು ಆಗಿ ಉಳಿದಿಲ್ಲ, ಅವರು ಕಾಂಗ್ರೆಸ್ ಪಪ್ಪ ಆಗಿದ್ದಾರೆ ಎಂದು ಕೇಂದ್ರ ಸಚಿವ ರಾಮದಾಸ್ ಅಠಾವಳೆ ಹೇಳಿದ್ದಾರೆ.

    ರಾಹುಲ್ ಗಾಂಧಿ ಅವರು ಮೂರು ರಾಜ್ಯಗಳಲ್ಲಿ ಅಭೂತಪೂರ್ವ ಗೆಲುವನ್ನು ಸಾಧಿಸಿದ್ದಾರೆ. ರಾಹುಲ್ ಅವರಲ್ಲಿ ಓರ್ವ ಪ್ರಬುದ್ಧ ನಾಯಕ ಕಾಣುತ್ತಿದ್ದಾರೆ. ರಾಜಸ್ಥಾನ, ಮಧ್ಯ ಪ್ರದೇಶ ಮತ್ತು ಛತ್ತೀಸ್‍ಗಢ ರಾಜ್ಯಗಳಲ್ಲಿ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಸೋತಿದೆ. ಇದು ಪ್ರಧಾನಿ ಮೋದಿ ಅವರ ಸೋಲಲ್ಲ. ಪಕ್ಷದ ಸೋಲು ಎಂದು ಕೇಂದ್ರ ಸಚಿವರು ಸ್ಪಷ್ಟನೆ ನೀಡಿದರು.

    ರಾಜಸ್ಥಾನದ ಚುನಾವಣೆ ಪ್ರಚಾರದ ವೇಳೆ ಬಿಜೆಪಿ ಸಂಸದ ದೇವಜಿ ಭಾಯಿ, ಕಾಂಗ್ರೆಸ್ ಅಧ್ಯಕ್ಷರನ್ನು ಪಪ್ಪು ಎಂದು ಕರೆಯುವ ಮೂಲಕ ಮುಜುಗರಕ್ಕೀಡಾಗಿದ್ದರು. ಬಿಜೆಪಿ ಬೈಠಕ್ ನಲ್ಲಿ ಸಂಸದರು ಭಾಗಿಯಾಗಿದ್ದ ವೇಳೆ ಕಾಂಗ್ರೆಸ್ ಕೌನ್ಸಿಲರ್ ಸೀತಾ ಎಂಬವರು ಮೊದಲು ರಸ್ತೆ ಗುಂಡಿಗಳನ್ನು ಮುಚ್ಚಿ ಅಂತ ಮನವಿ ಮಾಡಿಕೊಂಡಿದ್ದರು. ಈ ವೇಳೆ ಕೋಪಗೊಂಡ ದೇವಜಿ ಭಾಯಿ “ನಿಮ್ಮ ಪಪ್ಪು ಹೇಳಿ” ಎಂದು ವ್ಯಂಗ್ಯ ಮಾಡಿದ್ದರು.

    ಸಂಸದರ ಮಾತುಗಳಿಂದ ಆಕ್ರೋಶಗೊಂಡ ಮಹಿಳೆ, ಜವಾಬ್ದಾರಿಯುತ ಸ್ಥಾನದಲ್ಲಿದ್ದು, ಹೀಗೆ ಮಾತನಾಡಬಾರದು ಎಂದು ಫುಲ್ ಕ್ಲಾಸ್ ತೆಗೆದುಕೊಂಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು.

    ಗುಜರಾತ್ ವಿಧಾನಸಭಾ ಚುನವಾಣೆ ವೇಳೆ ಬಿಜೆಪಿ ತನ್ನ ಜಾಹೀರಾತಿನಲ್ಲಿ ಪಪ್ಪು ಎಂಬ ಪದ ಬಳಕೆ ಮಾಡಿತ್ತು. ಈ ಸಂಬಂಧ ಕಾಂಗ್ರೆಸ್ ಪಪ್ಪು ಎಂಬ ಪದ ಬಳಸದಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿಕೊಂಡಿತ್ತು. ಪಪ್ಪು ಎಂಬ ಪದ ಅಗೌರವ ಸೂಚಿಸುತ್ತದೆ. ಹಾಗಾಗಿ ಬಿಜೆಪಿ ತನ್ನ ಎಲ್ಲ ಜಾಹೀರಾತುಗಳಲ್ಲಿ ಸ್ಕ್ರಿಪ್ಟ್ ನಲ್ಲಿ ಪಪ್ಪು ಪದ ತೆಗೆಯುವಂತೆ ಸೂಚಿಸಿತ್ತು. ಚುನಾವಣಾ ಅಯೋಗದ ಸೂಚನೆಯಂತೆ ಬಿಜೆಪಿ ‘ಪಪ್ಪು’ ಬದಲಾಗಿ ರಾಜ್‍ಕುಮಾರ್ ಎಂದು ಬಳಸಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಾರ್ವಜನಿಕ ಸ್ಥಳದಲ್ಲಿಯೇ ಕೇಂದ್ರ ಸಚಿವರನ್ನ ಥಳಿಸಿದ ಯುವಕ!

    ಸಾರ್ವಜನಿಕ ಸ್ಥಳದಲ್ಲಿಯೇ ಕೇಂದ್ರ ಸಚಿವರನ್ನ ಥಳಿಸಿದ ಯುವಕ!

    ಮುಂಬೈ: ಸಾರ್ವಜನಿಕ ಪ್ರದೇಶದಲ್ಲಿಯೇ ಕೇಂದ್ರ ಸಚಿವ ರಾಮ್‍ದಾಸ್ ಅಠಾವಳೆ ಅವರನ್ನು ಯುವಕನೊಬ್ಬ ಥಳಿಸಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

    ಅಂಬರ್‍ನಾಥ್ ನಗರದಲ್ಲಿ ಕಾರ್ಯಕ್ರಮ ಮುಗಿಸಿ ಮರಳುತ್ತಿದ್ದಾಗ ಪ್ರವೀಣ್ ಗೋಸಾವಿ ಎಂಬ ಯುವಕ ಹಲ್ಲೆ ಮಾಡಿದ್ದಾರೆ. ತಕ್ಷಣವೇ ಅಲ್ಲಿ ಸೇರಿದ್ದ ಜನರು ಯುವಕನನ್ನು ಹಿಂದಕ್ಕೆ ಎಳೆದು ಆತನ ಮೇಲೆ ಹಲ್ಲೆ ಮಾಡಿದ್ದಾರೆ. ಪರಿಣಾಮ ಅಸ್ವಸ್ಥಗೊಂಡು ಬಿದ್ದಿದ್ದ ಯುವಕನನ್ನು ಪೊಲೀಸರು ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಘಟನೆಯ ವಿವರ:
    ಸಚಿವರು ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. ಹೀಗಾಗಿ ಸಂವಿಧಾನ ಸಮರ್ಪಣಾ ದಿನದ ನಿಮಿತ್ತ ಶನಿವಾರ ರಾತ್ರಿ ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಸಚಿವರು ಆಗಮಿಸಿ ಮರಳುತ್ತಿದ್ದರು. ಅಲ್ಲಿಯೇ ಇದ್ದ ಪಕ್ಷದ ಯುವ ವಿಂಗ್ ಕಾರ್ಯಕರ್ತ ಗೋಸಾವಿ ಸಚಿವರ ಮೇಲೆ ಎಗರಿದ್ದಾನೆ. ಬಳಿಕ ಅವರನ್ನು ದೂಡಿ, ಮುಖದ ಮೇಲೆ ಬಾರಿಸಿದ್ದಾನೆ ಎಂದು ವರದಿಯಾಗಿದೆ.

    ಸಚಿವರ ಬೆಂಬಲಿಗರು ತಕ್ಷಣವೇ ಯುವಕನನ್ನು ಎಳೆದು ಗುಂಪುಗೂಡಿ ಹಿಗ್ಗಾಮುಗ್ಗಾ ಮನಬಂದಂತೆ ಥಳಿಸಿದ್ದಾರೆ. ಪರಿಣಾಮ ಯುವಕ ಅಸ್ವಸ್ಥಗೊಂಡು ಬಿದ್ದಿದ್ದಾನೆ. ಈ ಕುರಿತು ಮಾಹಿತಿ ಪಡೆದ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದದಾರೆ.

    ಸಚಿವರ ಮೇಲೆ ಹಲ್ಲೆ ಖಂಡಿಸಿ ಬಂದ್‍ಗೆ ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ ಮುಖಂಡರು ಕರೆ ನೀಡಿದ್ದಾರೆ. ಉದ್ದೇಶ ಪೂರ್ವಕವಾಗಿ ಸಚಿವರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದಲಿತರೆಲ್ಲಾ ಹಿಂದೂ ಧರ್ಮ ತೊರೆದು ಬೌದ್ಧ ಧರ್ಮಕ್ಕೆ ಮತಾಂತರಗೊಳ್ಳಿ: ಕೇಂದ್ರ ಸಚಿವ ಅಠಾವಳೆ

    ದಲಿತರೆಲ್ಲಾ ಹಿಂದೂ ಧರ್ಮ ತೊರೆದು ಬೌದ್ಧ ಧರ್ಮಕ್ಕೆ ಮತಾಂತರಗೊಳ್ಳಿ: ಕೇಂದ್ರ ಸಚಿವ ಅಠಾವಳೆ

    ಮುಂಬೈ: ಹಿಂದೂ ಧರ್ಮದಲ್ಲಿ ದಲಿತರಿಗೆ ನ್ಯಾಯ ಸಿಗುವ ಸಾಧ್ಯತೆ ಇಲ್ಲ, ಹಾಗಾಗಿ ಬೌದ್ಧ ಧರ್ಮಕ್ಕೆ ಮತಾಂತರಗೊಳ್ಳಿ ಎಂದು ಕೇಂದ್ರ ಸಮಾಜ ಕಲ್ಯಾಣ ಸಚಿವ ರಾಮದಾಸ್ ಅಠಾವಳೆ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸುದ್ದಿಯಲ್ಲಿದ್ದಾರೆ.

    ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಹಿಂದೂ ಧರ್ಮದಲ್ಲಿ ನ್ಯಾಯ ಸಿಗಲ್ಲ ಎಂಬ ಮನವರಿಕೆಯಾದ ನಂತರ ಬೌದ್ಧ ಧರ್ಮವನ್ನು ಸ್ವೀಕರಿಸಿದ್ದರು. ಅಂಬೇಡ್ಕರ್ ಅವರ ಮಾರ್ಗದಲ್ಲಿ ಲಕ್ಷಾಂತರ ದಲಿತರು ಬೌದ್ಧ ಧರ್ಮಕ್ಕೆ ಮತಾಂತರಗೊಂಡರು ಅಂತಾ ಅಂದಿದ್ದಾರೆ.

    ಎಲ್ಲಾ ದಲಿತರು ತಮ್ಮ ಮೇಲಾಗುವ ದೌರ್ಜನ್ಯಗಳು ನಿಲ್ಲಬೇಕಾದರೆ ಹಿಂದೂ ಧರ್ಮ ಬಿಟ್ಟು, ಬೌದ್ಧ ಧರ್ಮ ಸ್ವೀಕರಿಸಿ ಎಂದು ಅಠಾವಳೆ ಸಲಹೆ ನೀಡಿದ್ದಾರೆ.

    ಈ ಹಿಂದೆ ಮಂಗಳಮುಖಿಯರು ಪುರುಷನೂ ಅಲ್ಲ, ಮಹಿಳೆಯೂ ಅಲ್ಲ. ಆದರೆ ಅವರು ಸಹ ನಮ್ಮ ಹಾಗೆ ಮನುಷ್ಯರು. ಹೀಗಾಗಿ ಅವರು ಸೀರೆ ಉಡುವುದನ್ನು ನಾನು ಒಪ್ಪುವುದಿಲ್ಲ ಅಂತಾ ಅಠಾವಳೆ ಅಂದಿದ್ದರು. ಯಾರಾದ್ರೂ ವಂದೇ ಮಾತರಂ ಹಾಡಿಲ್ಲ ಎಂದರೆ ಅದು ತಪ್ಪಲ್ಲ ಎಂಬ ವಿವಾದಾತ್ಮಕ ಹೇಳಿಕೆಯನ್ನೂ ನೀಡಿದ್ದರು. ಅಷ್ಟೇ ಅಲ್ಲದೇ 2017ರಲ್ಲಿ ಇಂಗ್ಲೆಂಡಿನಲ್ಲಿ ನಡೆದ ಭಾರತ-ಪಾಕಿಸ್ತಾನ ನಡುವಿನ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯ ಫಿಕ್ಸ್ ಆಗಿದೆ ಎಂದು ಗಂಭೀರ ಆರೋಪ ಮಾಡಿದ್ದರು. ಈಗ ಮತ್ತೊಮ್ಮೆ ತಮ್ಮ ವಿವಾದಾತ್ಮಕ ಹೇಳಿಕೆಯನ್ನು ನೀಡುವ ಮೂಲಕ ಸುದ್ದಿಯಾಗಿದ್ದಾರೆ.

    ಇತ್ತೀಚೆಗೆ ನಾಗ್ಪುರದಲ್ಲಿ ನಡೆದ ರ‍್ಯಾಲಿಯಲ್ಲಿ ಬಿಎಸ್‍ಪಿ ಅಧಿನಾಯಕಿ ಮಾಯಾವತಿ ಬಿಜೆಪಿ ಮತ್ತು ಆರ್‍ಎಸ್‍ಎಸ್ ವಿರುದ್ಧ ಹರಿಹಾಯುತ್ತಾ, ದೇಶದಲ್ಲಿ ಹಿಂದೂ ಧರ್ಮ ಸಂರಕ್ಷಕರು ಎಂದು ಹೇಳಿಕೊಳ್ಳವರಿಂದ ದಲಿತರು, ಬುಡಕಟ್ಟು ಜನಾಂಗದವರು ಮತ್ತು ಅಲ್ಪಸಂಖ್ಯಾತರು ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ ಎಂದು ಆರೋಪಿಸಿದ್ದರು.

  • ಮಂಗಳಮುಖಿಯರು ಸೀರೆ ಧರಿಸೋ ಹಾಗಿಲ್ಲ: ಕೇಂದ್ರ ಸಚಿವ ರಾಮದಾಸ್ ಅಠಾವಳೆ

    ಮಂಗಳಮುಖಿಯರು ಸೀರೆ ಧರಿಸೋ ಹಾಗಿಲ್ಲ: ಕೇಂದ್ರ ಸಚಿವ ರಾಮದಾಸ್ ಅಠಾವಳೆ

    ಹೈದರಾಬಾದ್: ಮಂಗಳಮುಖಿಯರು ಸೀರೆಯನ್ನು ಧರಿಸಬಾರದು ಎಂದು ಕೇಂದ್ರ ಸಮಾಜ ಕಲ್ಯಾಣ ಸಚಿವ ರಾಮದಾಸ್ ಅಠಾವಳೆ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.

    ಮಂಗಳಮುಖಿಯರು ಪುರುಷನೂ ಅಲ್ಲ, ಮಹಿಳೆಯೂ ಅಲ್ಲ. ಆದರೆ ಅವರು ಸಹ ನಮ್ಮ ಹಾಗೆ ಮನಷ್ಯರು. ಹೀಗಾಗಿ ಅವರು ಸೀರೆ ಉಡುವುದನ್ನು ನಾನು ಒಪ್ಪುವುದಿಲ್ಲ ಎಂದು ಹೇಳಿದರು.

    ಈ ಅಭಿಪ್ರಾಯಕ್ಕೆ ಮಾಧ್ಯಮಗಳು ಹಾಗಾದ್ರೆ ಅವರು ಯಾವ ರೀತಿಯ ಡ್ರೆಸ್ ಧರಿಸಬೇಕು ಎಂದು ಪ್ರಶ್ನಿಸಿದ್ದಕ್ಕೆ ಸಚಿವರು, ಅವರು ಎಲ್ಲರಂತೆ ಪ್ಯಾಂಟ್ ಶರ್ಟ್ ಧರಿಸಬಹುದು. ಪುರುಷರ ಹಾಗೆ ಡ್ರೆಸ್‍ಗಳನ್ನು ಹಾಕಿಕೊಳ್ಳಬಹುದು ಎಂದು ಉತ್ತರಿಸಿದರು.

    ದೇಶದಲ್ಲಿ ಸುಮಾರು 6 ಲಕ್ಷ ಜನ ಮಂಗಳಮುಖಿಯರಿದ್ದಾರೆ. ಕೇಂದ್ರ ಸರ್ಕಾರ ಮುಂದಿನ ಅಧಿವೇಶನದಲ್ಲಿ ತೃತೀಯ ಲಿಂಗಿಗಳ ಸಮುದಾಯಕ್ಕೆ ಸಂಬಂಧಪಟ್ಟಂತೆ ಹಕ್ಕು ಮತ್ತು ರಕ್ಷಣೆಗೆ ಸಂಬಂಧಿಸಿದ ಮಸೂದೆಯನ್ನು ಜಾರಿಗೆ ತರಲಿದೆ. ಅವರಿಗೆ ವಿಶೇಷ ಶಾಲೆಯನ್ನು ಪ್ರಾರಂಭಿಸಲಿದ್ದು, ಇದರಿಂದ ಅವರಿಂದ ಉಂಟಾಗುವ ತೊಂದರೆಗಳನ್ನು ತಪ್ಪಿಸಬಹುದು ಎಂದು ಅವರು ಮಾಹಿತಿ ನೀಡಿದರು.

    ಈ ಹಿಂದೆ ರಾಮದಾಸ್ ಅಠಾವಳೆ ಯಾರಾದ್ರೂ ವಂದೇ ಮಾತರಂ ಹಾಡಿಲ್ಲ ಎಂದರೆ ಅದು ತಪ್ಪಲ್ಲ ಎಂಬ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದರು. ಅಷ್ಟೇ ಅಲ್ಲದೇ ಭಾರತ ಪಾಕಿಸ್ತಾನ ನಡುವಿನ ಚಾಂಪಿಯನ್ಸ್ ಟ್ರೋಫಿ ಪಂದ್ಯ ಫಿಕ್ಸ್ ಆಗಿದೆ ಎಂದು ಗಂಭೀರ ಆರೋಪ ಮಾಡಿದ್ದರು. ಈಗ ಮತ್ತೊಮ್ಮೆ ತಮ್ಮ ವಿವಾದಾತ್ಮಕ ಹೇಳಿಕೆಯನ್ನು ನೀಡುವ ಮೂಲಕ ಸುದ್ದಿಯಾಗಿದ್ದಾರೆ.

    ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ನಾಯಕರಾಗಿರುವ ಇವರು ಮಹಾರಾಷ್ಟ್ರದಿಂದ 2014ರಲ್ಲಿ ರಾಜ್ಯಸಭೆಗೆ ಆಯ್ಕೆ ಆಗಿದ್ದಾರೆ. 1999ರಿಂದ 2009ರ ವರಗೆ ಪಂಢರಪುರದ ಸಂಸದರಾಗಿದ್ದರು.