Tag: Ramdan

  • ಮೇ 9ಕ್ಕೆ ದೇವಸ್ಥಾನಗಳಲ್ಲಿ ಹನುಮಾನ್ ಚಾಲೀಸಾ

    ಮೇ 9ಕ್ಕೆ ದೇವಸ್ಥಾನಗಳಲ್ಲಿ ಹನುಮಾನ್ ಚಾಲೀಸಾ

    ಬೆಂಗಳೂರು: ರಾಜ್ಯದಲ್ಲಿ ಮತ್ತೆ ಆಜಾನ್ ದಂಗಲ್ ಮತ್ತಷ್ಟು ತೀವ್ರಗೊಳ್ಳುವ ಲಕ್ಷಣ ಕಾಣ್ತಿದೆ. ಮಸೀದಿಗಳಲ್ಲಿ ಮೈಕ್ ತೆರವಿಗೆ ಶ್ರೀರಾಮಸೇನೆ ನೀಡಿದ್ದ ಗಡುವು ನಿನ್ನೆಗೆ ಮುಕ್ತಾಯವಾಗಿದೆ.

    ಮೇ 9ರಂದು ಸಾವಿರ ದೇಗುಲಗಳಲ್ಲಿ ಬೆಳಗ್ಗೆ ಐದಕ್ಕೆ ಹನುಮಾನ್ ಚಾಲೀಸಾ ಹಾಕ್ತೀವಿ. ತಾಕತ್ ಇದ್ರೆ ತಡೆಯಿರಿ ಎಂದು ಸರ್ಕಾರಕ್ಕೆ ಶ್ರೀರಾಮಸೇನೆ ಸವಾಲು ಹಾಕಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಸುನೀಲ್ ಕುಮಾರ್, ಒಂದು ಧ್ವನಿವರ್ಧಕದಿಂದ ನೂರಾರು ಜನಕ್ಕೆ ತೊಂದರೆ ಆಗಬಾರದು. ಮುಸಲ್ಮಾನ ಸಮುದಾಯ ಈ ಬಗ್ಗೆ ಮರು ಆಲೋಚನೆ ಮಾಡಬೇಕು. ಪರಿಸ್ಥಿತಿ ನೋಡಿಕೊಂಡು ಸರ್ಕಾರ ನಿರ್ಧಾರ ತೆಗೆದುಕೊಳ್ಳುತ್ತೆ ಎಂದಿದ್ದಾರೆ. ಇದನ್ನೂ ಓದಿ: ಈದ್ ಹಬ್ಬದಂದು ಆರತಿ ಮಾಡಬೇಡಿ: ರಾಜ್ ಠಾಕ್ರೆ ಮನವಿ

    ಮಾಜಿ ಮಂತ್ರಿ ಹೆಚ್ ವಿಶ್ವನಾಥ್ ಮಾತನಾಡಿ, ಮುಖ್ಯಮಂತ್ರಿಗಳೇ ನಿಮ್ಮ ಹಾರ್ಡ್‍ವೆಪನ್ ಶಾಂತಿ ಕದಡ್ತಿರೋ ಆರ್‍ಎಸ್‍ಎಸ್, ಭಜರಂಗದಳದವರ ಮೇಲೆ ಬಳಸಿ.. ಸರ್ಕಾರಕ್ಕೆ ನಿತ್ಯವೂ ಕೆಟ್ಟ ಹೆಸರು ತರ್ತಾ ಇದ್ದಾರೆ ಎಂದು ಗರಂ ಆಗಿದ್ದಾರೆ. ಅತ್ತ ರಂಜಾನ್ ಹಬ್ಬಕ್ಕೆ ಅಡ್ಡಿಯಾಗಬಾರದು ಎಂಬ ಕಾರಣಕ್ಕೆ ಅಕ್ಷಯ ತೃತೀಯವಾದ ನಾಳೆ ಮಹಾರಾಷ್ಟ್ರದಲ್ಲಿ ಮಹಾ ಆರತಿ ನಡೆಸಬಾರದು ಎಂದು ಎಂಎನ್‍ಎಸ್‍ನ ರಾಜ್ ಠಾಕ್ರೆ ಸೂಚಿಸಿದ್ದಾರೆ. ಇದ್ರ ಬದಲು ಜೂನ್ 5ರಂದು ರಂದು ಚಲೋ ಅಯೋಧ್ಯೆಗೆ ರಾಜ್ ಠಾಕ್ರೇ ಕರೆ ನೀಡಿದ್ದಾರೆ.

  • ಬೆಂಗಳೂರು ಕರಗ, ರಂಜಾನ್ ಹಬ್ಬಕ್ಕೆ ಬ್ರೇಕ್

    ಬೆಂಗಳೂರು ಕರಗ, ರಂಜಾನ್ ಹಬ್ಬಕ್ಕೆ ಬ್ರೇಕ್

    ಬೆಂಗಳೂರು: ಕೊರೊನಾ 2ನೇ ಅಲೆ ಸ್ಫೋಟ ಹಿನ್ನೆಲೆಯಲ್ಲಿ ಈ ಬಾರಿಯೂ ಬೆಂಗಳೂರು ಕರಗ ಉತ್ಸವಕ್ಕೆ ಬ್ರೇಕ್ ಹಾಕಲಾಗ್ತಿದೆ.

    ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಸುಧಾಕರ್, ರಂಜಾನ್ ಹಾಗೂ ಬೆಂಗಳೂರು ಕರಗ ಆಚರಣೆ ಯಾವುದಕ್ಕೂ ಬಿಡಲ್ಲ. ಕೊರೊನಾಗೆ ಇದ್ಯಾವುದೂ ಗೊತ್ತಾಗಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಇದೇ ವೇಳೆ ಹೋಲಿ ನಿರ್ಬಂಧ ವಿಚಾರಕ್ಕೆ ಪ್ರತಿಕ್ರಿಯಿಸಿ, ಹೋಟೆಲ್ ಗಳಲ್ಲಿ, ಪೂಲ್ ಪಾರ್ಟಿಗಳಲ್ಲಿ ನಿಯಮ ಪಾಲನೆ ಆಗಲೇಬೇಕು. ಆರೋಗ್ಯ ಇಲಾಖೆ ಮೂಲಕ ಸಿಎಂಗೆ ಕಡತ ಹೋಗಿದೆ. ಹೋಲಿ ನಿರ್ಬಂಧನಾ ಅಥವಾ ಆಚರಣೆನಾ ಅಂತ ಸಿಎಂ ತೀರ್ಮಾನ ಮಾಡ್ತಾರೆ ಎಂದರು.

    ತಜ್ಞರ ಸಲಹೆಗಳಿಗೆ ಸರ್ಕಾರ ಮನ್ನಣೆ ನೀಡದ ವಿಚಾರದ ಕುರಿತು ಮಾತನಾಡಿ, ಮಾ. 19 ರಂದು ನೀಡಿದ್ದ ಸಲಹೆಗಳು ಮೂಲೆ ಗುಂಪಾಗಿವೆ. ಜನರ, ಸಮುದಾಯಗಳ ಮಾತು ಕೇಳಬೇಕಿದೆ. ಹೀಗಾಗಿ ಹಂತ ಹಂತವಾಗಿ ಎಲ್ಲ ಜಾರಿ ಆಗಬೇಕಿದೆ ಎಂದು ತಿಳಿಸಿದರು.

    ಕಾಂಗ್ರೆಸ್ ಧರಣಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಸದ್ಯಕ್ಕಂತೂ ಜನರ ಆರೋಗ್ಯ ಮುಖ್ಯ. ನನ್ನ ವಿರುದ್ಧದ ಪ್ರತಿಭಟನೆಗೆ ನಾನೇನು ಮಾತನಾಡಲ್ಲ ಎಂದು ಹೇಳಿದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರಿಗೆ ಸೀಲ್ ಕಡ್ಡಾಯ: ಸುಧಾಕರ್

  • ದಕ್ಷಿಣ ಕನ್ನಡ, ಉಡುಪಿಯಲ್ಲಿ ರವಿವಾರ ರಂಜಾನ್ ಹಬ್ಬ

    ದಕ್ಷಿಣ ಕನ್ನಡ, ಉಡುಪಿಯಲ್ಲಿ ರವಿವಾರ ರಂಜಾನ್ ಹಬ್ಬ

    ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಭಾನುವಾರ ರಂಜಾನ್ ಆಚರಿಸುವಂತೆ ಖಾಝಿಗಳು ಕರೆ ನೀಡಿದ್ದಾರೆ.

    ಮಂಗಳೂರಿನ ಖಾಝಿ ತ್ವಾಕ ಅಹ್ಮದ್ ಮುಸ್ಲಿಯಾರ್ ಮತ್ತು ಉಡುಪಿಯ ಖಾಝಿ ಬೇಕಲ್ ಇಬ್ರಾಹಿಂ ಮುಸ್ಲಿಯಾರ್ ತಮ್ಮ ಜಿಲ್ಲೆಯ ಜನತೆಗೆ ಭಾನುವಾರ ಆಚರಿಸುವಂತೆ ಹೇಳಿದ್ದಾರೆ. ಇಂದು ರಾತ್ರಿ ಪ್ರಥಮ ಚಂದ್ರ ದರ್ಶನ ಎಲ್ಲೂ ಆಗಿಲ್ಲ.

    ಸಾಂದರ್ಭಿಕ ಚಿತ್ರ

    ಭಾನುವಾರವೇ ಈದುಲ್ ಫಿತ್ರ ಆಚರಿಸುವ ಸಾಧ್ಯತೆಗಳು ಹೆಚ್ಚಿದ್ದು, ಆದ್ರೆ ಸರ್ಕಾರ ಪ್ರತಿ ರವಿವಾರ ಸಂಪೂರ್ಣ ಲಾಕ್‍ಡೌನ್ ಅಂತ ಈಗಾಗಲೇ ಘೋಷಿಸಿದೆ. ಒಂದು ವೇಳೆ ಭಾನುವಾರ ಹಬ್ಬದ ಆಚರಣೆ ಅಂತಾದ್ರೆ ಉಳಿದ ಸಡಿಲಿಕೆಯನ್ನು ಜಿಲ್ಲೆಗೆ ನೀಡಬೇಕೆಂದು ನಗರದ ಬಂದರ್ ನ ಮಸೀದಿ ಝೀನತ್ ಬಕ್ಷ್ ಮತ್ತು ಈದ್ಗಾ ಮಸೀದಿಯ ವತಿಯಂದ ಇಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಳಿಗೆ ಮನವಿ ಮಾಡಲಾಗಿತ್ತು.