Tag: Ramcharan

  • ಯಶ್ ಕೆಜಿಎಫ್‍ಗೆ ರಾಮ್‍ಚರಣ್ ಅಭಿಮಾನಿಗಳ ಬೆಂಬಲ!

    ಯಶ್ ಕೆಜಿಎಫ್‍ಗೆ ರಾಮ್‍ಚರಣ್ ಅಭಿಮಾನಿಗಳ ಬೆಂಬಲ!

    ಯಶ್ ಅಭಿನಯದ ಬಹುನಿರೀಕ್ಷಿತ ಕೆಜಿಎಫ್ ಚಿತ್ರದ ಬಗ್ಗೆ ಕುತೂಹಲ ಕುದಿಯಲಾರಂಭಿಸಿದೆ. ಆದರಿದು ಕನ್ನಡಕ್ಕೆ ಮಾತ್ರವೇ ಸೀಮಿತವಾಗದೆ ಬೇರೆ ಭಾಷೆಗಳಿಗೂ ಹಬ್ಬಿಕೊಂಡಿದೆ. ತಮಿಳುನಾಡಿನಲ್ಲಿಯೂ ಈ ಚಿತ್ರಕ್ಕಾಗಿ ಯಶ್ ಅಭಿಮಾನಿಗಳು ಕಾತರರಾಗಿರೋ ವಿಚಾರ ಈ ಹಿಂದೆ ಜಾಹೀರಾಗಿತ್ತು. ಈಗ ಹೊರ ಬಿದ್ದಿರೋದು ಕನ್ನಡದ ಅಣ್ತಮ್ಮನ ಚಿತ್ರದ ಬಗ್ಗೆ ತೆಲುಗು ನಾಡಲ್ಲಿ ಎದ್ದಿರೋ ಸಂಚಲನದ ಸುದ್ದಿ!

    ತೆಲುಗಿನಲ್ಲಿಯೂ ಯಶ್ ಅಭಿನಯದ ಕೆಜಿಎಫ್ ಬಗ್ಗೆ ವಿಪರೀತ ಕ್ರೇಜ್ ಆರಂಭವಾಗಿದೆ. ಇದಕ್ಕೆ ಕಾರಣವಾಗಿರೋದು ರಾಮ್‍ಚರಣ್ ಅಭಿಮಾನಿಗಳು. ರಾಮ್ ಚರಣ್ ಅಭಿಮಾನಿಗಳು ಚಿತ್ರಕ್ಕೆ ಭರ್ಜರಿ ಪ್ರಚಾರ ಕೊಡಲಾರಂಭಿಸಿದ್ದಾರೆ. ಇದಲ್ಲದೇ ರಾಮ್ ಚರಣ್ ಅವರು ರಂಗಸ್ಥಳಂ ಚಿತ್ರದಲ್ಲಿ ಗೆದ್ದಂತೆಯೇ, ಯಶ್ ಕೂಡಾ ಕೆಜಿಎಫ್ ಮೂಲಕ ಗೆಲ್ಲಲಿದ್ದಾರೆಂಬ ಭವಿಷ್ಯವನ್ನೂ ಹೇಳಿದ್ದಾರೆ.

    ರಾಮ್ ಚರಣ್ ರಂಗಸ್ಥಳಂ ಚಿತ್ರದ ಮೂಲಕ ಹಳೇ ಕಥೆಯ ಪಾತ್ರವೊಂದಕ್ಕೆ ಜೀವ ತುಂಬಿದ್ದದರು. ಯಶ್ ಅಭಿನಯದ ಕೆಜಿಎಫ್ ಕೂಡಾ ಅಂಥಾದ್ದೇ ಕಥಾನಕ ಹೊಂದಿದೆ. ರಾಮ್ ಚರಣ್ ಅವರಂತೆಯೇ ಯಶ್ ಭಿನ್ನ ಗೆಟಪ್ಪುಗಳು ಮಿಂಚುತ್ತಿವೆ. ಆದ್ದರಿಂದ ಈ ಚಿತ್ರಕ್ಕೆ ರಂಗಸ್ಥಳಂನಂಥಾದ್ದೇ ಗೆಲುವು ಸಿಗಲಿದೆ ಎಂಬುದು ರಾಮ್ ಚರಣ್ ಅಭಿಮಾನಿಗಳ ಅಭಿಪ್ರಾಯ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಾಮ್ ಚರಣ್ ತಂದೆ ಅಂತಾ ಹೇಳಿಕೊಳ್ಳಲು ನನಗೆ ಹೆಮ್ಮೆ ಆಗುತ್ತೆ: ಮೆಗಾಸ್ಟಾರ್

    ರಾಮ್ ಚರಣ್ ತಂದೆ ಅಂತಾ ಹೇಳಿಕೊಳ್ಳಲು ನನಗೆ ಹೆಮ್ಮೆ ಆಗುತ್ತೆ: ಮೆಗಾಸ್ಟಾರ್

    ಹೈದರಾಬಾದ್: ಟಾಲಿವುಡ್ ನ ಬಹುನಿರೀಕ್ಷತ ರಾಮ್‍ಚರಣ್ ಅಭಿನಯದ ‘ರಂಗಸ್ಥಳಂ’ ಮಾರ್ಚ್ 30ರಂದು ದೇಶಾದ್ಯಂತ ಬಿಡುಗಡೆ ಆಗಲಿದೆ. ಸಿನಿಮಾ ಬಿಡುಗಡೆಗೆ ಈಗಾಗಲೇ ಅಭಿಮಾನಿಗಳು ಸೇರಿದಂತೆ ಟಾಲಿವುಡ್ ಗಣ್ಯರೆಲ್ಲಾ ಶುಭಕೋರುತ್ತಿದ್ದಾರೆ. ಈ ಸಂದರ್ಭದಲ್ಲಿ ರಾಮ್‍ಚರಣ್ ತಂದೆ ಮೆಗಾಸ್ಟಾರ್ ಚಿರಂಜೀವಿ ಸಹ ಭಾವನಾತ್ಮಕವಾಗಿ ಪುತ್ರನ ಸಿನಿಮಾಗೆ ವಿಶ್ ಮಾಡಿದ್ದಾರೆ.

    ಖೈದಿ ಸಿನಿಮಾ ಹೇಗೆ ನನ್ನ ಜೀವನದಲ್ಲಿ ಪ್ರಮುಖ ಪಾತ್ರವನ್ನ ಪಡೆದುಕೊಂಡಿದೆಯೋ, ಅದೇ ರೀತಿಯಲ್ಲಿ ರಂಗಸ್ಥಳಂ ಚಿತ್ರ ರಾಮ್ ಜೀವನದ ಮಹತ್ವದ ಮೈಲಿಗಲ್ಲು ಆಗಲಿದೆ. ಈಗಾಗಲೇ ನಾನು ಸಿನಿಮಾ ವೀಕ್ಷಣೆ ಮಾಡಿದ್ದು, ಚಿತ್ರ ಅದ್ಭುತವಾಗಿ ಮೂಡಿ ಬಂದಿದೆ. ನನಗೆ ರಾಮ್ ಚರಣ್ ತಂದೆ ಹೇಳಿಕೊಳ್ಳಲು ಹೆಮ್ಮೆ ಆಗುತ್ತದೆ ಅಂತಾ ಮೆಗಾಸ್ಟರ್ ಹೇಳಿಕೊಂಡಿದ್ದಾರೆ.

    ಸಿನಿಮಾ ಪ್ರಮೋಶನ್ ನಲ್ಲಿ ಬ್ಯೂಸಿಯಾಗಿರುವ ರಾಮ್ ಚರಣ್ ಮಂಗಳವಾರ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡ್ರು. ರಾಮ್ ಬ್ಯೂಸಿ ಆಗಿದ್ದರಿಂದ ತಂದೆ ರವಿವಾರದಂದು ಮಗನ ಹುಟ್ಟುಹಬ್ಬ ಆಚರಿಸಿದ್ದಾರೆ. ಪುತ್ರ ರಾಮ್‍ಚರಣ್ ಪೋಷಕರು ಸುಂದರವಾದ ವಾಚ್ ಗಿಫ್ಟ್ ನೀಡಿದ್ದಾರೆ. ಬರ್ತ್ ಡೇ ಫೋಟೋಗಳನ್ನು ರಾಮ್‍ಚರಣ್ ತಮ್ಮ ಫೇಸ್‍ಬುಕ್ ನಲ್ಲಿ ಅಪ್ಲೋಡ್ ಮಾಡಿಕೊಂಡು, ತಂದೆ-ತಾಯಿಗೆ ಧನ್ಯವಾದ ಹೇಳಿದ್ದಾರೆ.

    ಸುಕುಮಾರ್ ನಿರ್ದೇಶನದಲ್ಲಿ ರಂಗಸ್ಥಳಂ ಸಿನಿಮಾ ಮೂಡಿಬಂದಿದೆ. ಚಿತ್ರದಲ್ಲಿ ರಾಮ್‍ಚರಣ್ ಗೆ ನಾಯಕಿಯಾಗಿ ಸಮಂತಾ ಅಕ್ಕಿನೇನಿ ಜೊತೆಯಾಗಿದ್ದಾರೆ. ಚಿತ್ರಕ್ಕೆ ದೇವಿ ಶ್ರೀ ಪ್ರಸಾದ್ ಸಂಗೀತವಿದ್ದು, ನವೀನ್ ಯೆರ್ಮಿನಿ, ರವಿ ಶಂಕರ್ ಮತ್ತು ಮೋಹನ್ ಚೆರುಕುರಿ ಜಂಟಿಯಾಗಿ ಬಂಡವಾಳ ಹೂಡಿದ್ದಾರೆ.

  • ಕೊನೆಗೂ ತಮ್ಮ ಮುಂದಿನ ಸಿನಿಮಾ ಬಗ್ಗೆ ರಿವಿಲ್ ಮಾಡಿದ ರಾಜಮೌಳಿ

    ಕೊನೆಗೂ ತಮ್ಮ ಮುಂದಿನ ಸಿನಿಮಾ ಬಗ್ಗೆ ರಿವಿಲ್ ಮಾಡಿದ ರಾಜಮೌಳಿ

    ಹೈದರಾಬಾದ್: ಭಾರತೀಯ ಚಿತ್ರರಂಗದಲ್ಲೇ ಹೊಸ ಇತಿಹಾಸ ಸೃಷ್ಟಿಸಿದ `ಬಾಹುಬಲಿ’ ಚಿತ್ರದ ನಿರ್ದೇಶಕ ಎಸ್.ಎಸ್ ರಾಜಮೌಳಿಯವರ ಮುಂದಿನ ಚಿತ್ರ ಯಾವುದು ಎಂಬ ನಿರೀಕ್ಷೆಯಲ್ಲಿದ್ದ ಸಿನಿಪ್ರಿಯರ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ.

    ಗುರುವಾರದಂದು ರಾಜಮೌಳಿ ತಮ್ಮ ಮುಂದಿನ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಈ ಚಿತ್ರದಲ್ಲಿ ರಾಮ್ ಚರಣ್ ತೇಜಾ ಹಾಗೂ ಜ್ಯೂನಿಯರ್ ಎನ್‍ಟಿಆರ್ ಅಭಿನಯಿಸುತ್ತಿರುವುದು ಖಚಿತವಾಗಿದೆ.

    ಗುರುವಾರ ಸಂಜೆ ಟ್ವೀಟ್ ಮಾಡಿರುವ ರಾಜಮೌಳಿ, ತಮ್ಮ ಹೊಸ ಪ್ರಾಜೆಕ್ಟ್ ಕುರಿತು ಹೇಳಿದ್ದಾರೆ. ಮೋಷನ್ ಫಿಕ್ಚರ್ ನಲ್ಲಿ ‘RRR’ ಎನ್ನುವ ಅಕ್ಷರಗಳು ಮಾತ್ರ ಇವೆ. ಈ ‘RRR’ ಅಕ್ಷರಗಳು ಅವರ ಚಿತ್ರದ ಹೆಸರಲ್ಲ. ಬದಲಾಗಿ ರಾಜಮೌಳಿ, ರಾಮ್ ಚರಣ್ ಹಾಗೂ ಜ್ಯೂ. ಎನ್.ಟಿ.ರಾಮ್ ರಾವ್ ಅವರ ಹೆಸರುಗಳ ಅಕ್ಷರಗಳಾಗಿವೆ.

    ರಾಜಮೌಳಿಯವರ ಹೊಸ ಚಿತ್ರ ಕುತೂಹಲ ಹುಟ್ಟಿಸಿದ್ದು, ಹಲವು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ಈ ಹಿಂದೆಯೇ ರಾಮ್ ಚರಣ್ ತೇಜಾ ಹಾಗೂ ಜ್ಯೂನಿಯರ್ ಎನ್‍ಟಿಆರ್ ಜೊತೆ ರಾಜಮೌಳಿಯವರು ಕೆಲಸ ಮಾಡಿದ್ದು, ರಾಮ್ ಚರಣ್ ತೇಜಾರ `ಮಗಧೀರ’ ಹಾಗೂ ಜ್ಯೂನಿಯರ್ ಎನ್‍ಟಿಆರ್ ಅವರ `ಸ್ಟೂಡೆಂಟ್ ನಂಬರ್ 1′ ಚಿತ್ರವನ್ನು ನಿರ್ದೇಶಿಸಿದ್ದರು. ರಾಜಮೌಳಿಯವರ ಹೊಸ ಚಿತ್ರ #RRR ಕುರಿತು ಹೆಚ್ಚಿನ ಮಾಹಿತಿ ಹೊರಬಿದ್ದಿಲ್ಲವಾದರೂ ಮೂವರ ಕಾಂಬಿನೇಷನ್ ನಲ್ಲಿ ಚಿತ್ರ ಅದ್ಭುತವಾಗಿ ಮೂಡಿ ಬರಲಿದೆ ಎಂಬ ಮಾತುಗಳು ಕೇಳಿಬಂದಿವೆ.

    ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಈ ಸಿನಿಮಾಗೆ ಕಥೆ ಬರೆದಿದ್ದಾರಂತೆ. ಕೀರವಾಣಿ ಸಂಗೀತ, ಕೆಲ ತಿಂಗಳುಗಳ ಹಿಂದೆ ರಾಮ್ ಚರಣ್ ತೇಜಾ ಹಾಗೂ ಎನ್‍ಟಿಆರ್ ಜೊತೆ ಫೋಟೋ ತೆಗೆದುಕೊಂಡಿದ್ದರು. ಈಗಾಗಲೇ ಈ ಸ್ಟಾರ್ ನಟರು ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಈ ವರ್ಷದ ಅಕ್ಟೋಬರ್ ನಸಿನಿಮಾ ಸೆಟ್ಟೇರಲಿದೆ.

  • ಕುತೂಹಲಕ್ಕೆ ಕಾರಣವಾಯ್ತು ರಾಜಮೌಳಿಯ ಟ್ವಿಟ್ಟರ್ ಫೋಟೋ

    ಕುತೂಹಲಕ್ಕೆ ಕಾರಣವಾಯ್ತು ರಾಜಮೌಳಿಯ ಟ್ವಿಟ್ಟರ್ ಫೋಟೋ

    ಮುಂಬೈ: ಬಾಹುಬಲಿಯನ್ನು ಕಟ್ಟಪ್ಪ ಕೊಂದಿದ್ದು ಯಾಕೆ ಈ ಪ್ರಶ್ನೆಯನ್ನು ಹುಟ್ಟುಹಾಕಿ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದ ರಾಜಮೌಳಿ ಈಗ ಒಂದು ಫೋಟೋವನ್ನು ಪ್ರಕಟಿಸುವ ಮೂಲಕ ಮತ್ತೊಮ್ಮೆ ಅಭಿಮಾನಿಗಳಿಗೆ ಕುತೂಹಲವನ್ನು ಹುಟ್ಟಿಸಿದ್ದಾರೆ.

    ಬಾಹುಬಲಿ ಮುಗಿದ ಬಳಿಕ ಮುಂದೆ ಯಾವ ಸಿನಿಮಾ ಮಾಡುತ್ತಾರೆ ಎನ್ನುವ ಪ್ರಶ್ನೆಗೆ ಉತ್ತರ ಎನ್ನುವಂತೆ ರಾಜಮೌಳಿ ಅವರು ಟ್ವಿಟ್ಟರ್ ನಲ್ಲಿ ಟಾಲಿವುಡ್ ಸ್ಟಾರ್‍ಗಳಾದ ರಾಮ್ ಚರಣ್ ಮತ್ತು ಜ್ಯೂನಿಯರ್ ಎನ್‍ಟಿಆರ್ ಜೊತೆ ಇರುವ ಫೋಟೋವೊಂದನ್ನು ಟ್ವೀಟ್ ಮಾಡಿದ್ದಾರೆ.

    ರಾಜಮೌಳಿ ಟ್ವೀಟ್ ಮಾಡಿರುವ ಫೋಟೋಗೆ ಏನನ್ನೂ ಬರೆಯದೇ ಬರಿ ಚುಕ್ಕಿಗಳನ್ನಿಟ್ಟು ಕೊನೆಗೆ ಸ್ಮೈಲಿಯ ಇಮೋಜಿವೊಂದನ್ನು ಹಾಕಿ ಪೋಸ್ಟ್ ಮಾಡಿದ್ದಾರೆ. ಇದನ್ನು ನೋಡಿದ ಪ್ರೇಕ್ಷಕರು ನಿಮ್ಮ ಮುಂದಿನ ಚಿತ್ರದಲ್ಲಿ ಈ ಸ್ಟಾರ್ ನಟರು ಇರುತ್ತಾರ ಎನ್ನುವ ಪ್ರಶ್ನೆಯನ್ನು ರಾಜಮೌಳಿ ಅವರಲ್ಲಿ ಕೇಳುತ್ತಿದ್ದಾರೆ.

    ಆದರೆ ರಾಜಮೌಳಿ ಇದೂವರೆಗೆ ತಮ್ಮ ಮುಂದಿನ ಚಿತ್ರದಲ್ಲಿ ಯಾರೆಲ್ಲ ಅಭಿನಯಿಸಲಿದ್ದಾರೆ ಎನ್ನುವ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಈ ಹಿಂದೆ ವೆಬ್ ಸೈಟ್ ಒಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ನಾನು ಸೋಶಿಯಲ್ ಡ್ರಾಮಾ ಕುರಿತ ಚಿತ್ರವನ್ನು ನಿರ್ದೇಶನ ಮಾಡಲಿದ್ದು, ಈ ಚಿತ್ರವನ್ನು ದಾನಯ್ಯ ಅವರು ನಿರ್ಮಾಣ ಮಾಡಲಿದ್ದಾರೆ ಎಂದು ತಿಳಿಸಿದ್ದರು.

    ರಾಜಮೌಳಿ ಅವರ ಮಗಧೀರ ಸಿನಿಮಾದಲ್ಲಿ ರಾಮ್‍ಚರಣ್ ತೇಜ ಅಭಿನಯಿಸಿದ್ದರು. ಜ್ಯೂನಿಯರ್ ಎನ್‍ಟಿಆರ್ ನಟಿಸಿರುವ ಸ್ಟುಡೆಂಟ್ ನಂಬರ್ 1, ಸಿಂಹಾದ್ರಿ ಮತ್ತು ಯಮದೊಂಗ ಸಿನಿಮಾಗಳನ್ನು ರಾಜ್‍ಮೌಳಿ ಅವರೇ ನಿರ್ದೇಶಿಸಿದ್ದರು.