Tag: Ramcharan Teja

  • `ಆಚಾರ್ಯ’ ಸಿನಿಮಾಗೆ ಮಹೇಶ್ ಬಾಬು ಧ್ವನಿ

    `ಆಚಾರ್ಯ’ ಸಿನಿಮಾಗೆ ಮಹೇಶ್ ಬಾಬು ಧ್ವನಿ

    ಟಾಲಿವುಡ್‌ನಲ್ಲಿ ಸದ್ಯ ಹೈಪ್ ಕ್ರಿಯೇಟ್ ಮಾಡಿರೋ ಚಿತ್ರ ಮೆಗಾಸ್ಟಾರ್ ಚಿರಂಜೀವಿ ನಟನೆಯ `ಆಚಾರ್ಯ’ ಸಿನಿಮಾಗೆ ಪ್ರಿನ್ಸ್ ಮಹೇಶ್ ಬಾಬು ಸಾಥ್ ನೀಡಿದ್ದಾರೆ. `ಆಚಾರ್ಯ’ ಚಿತ್ರಕ್ಕೆ ಸ್ಟಾರ್ ನಟ ಮಹೇಶ್ ಬಾಬು ಧ್ವನಿ ನೀಡಿದ್ದಾರೆ.

    ಮೆಗಾಸ್ಟಾರ್ ಚಿರಂಜೀವಿ ಮತ್ತು ರಾಮ್ ಚರಣ್ ನಟನೆಯ ಬಹುನಿರೀಕ್ಷಿತ ಆಚಾರ್ಯ ಚಿತ್ರಕ್ಕೆ ಮಹೇಶ್ ಬಾಬು ವಾಯ್ಸ್ ನೀಡಿದ್ದಾರೆ. ಚಿತ್ರದ ಭಾಗವಾಗಿರೋ `ಪದಘಟ್ಟಂ’ಗೆ ತಮ್ಮ ಧ್ವನಿ ನೀಡುವುದರ ಮೂಲಕ ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ. ಮಹೇಶ್ ಬಾಬು ಪವರ್‌ಫುಲ್ ವಾಯ್ಸ್ಗೆ ಮತ್ತು ಚಿತ್ರತಂಡಕ್ಕೆ ಜೊತೆಯಾಗಿರೋದಕ್ಕೆ ಚಿರಂಜೀವಿ ಮತ್ತು ರಾಮ್ ಚರಣ್ ಖುಷಿಪಟ್ಟಿದ್ದಾರೆ.

    `ಆಚಾರ್ಯ’ ತಂಡ ಸೇರಿ ಈ ಚಿತ್ರ ಮತ್ತಷ್ಟು ವಿಶೇಷವನ್ನಾಗಿ ಮಾಡಿದ್ದೀರಾ ಎಂದು ಈ ಕುರಿತು ಟ್ವಿಟರ್ ಮೂಲಕ `ಸರ್ಕಾರಿ ವಾರಿ ಪಾಟ’ ಸ್ಟಾರ್‌ಗೆ ಚಿರಂಜೀವಿ ಮತ್ತು ರಾಮ್ ಚರಣ್ ಧನ್ಯವಾದ ತಿಳಿಸಿದ್ದಾರೆ. ಇದನ್ನೂ ಓದಿ: ‘ಸದ್ದು ವಿಚಾರಣೆ ನಡೆಯುತ್ತಿದೆ’ ಚಿತ್ರದ ಮೊದಲ ಸಾಂಗ್ ಇಂದು ರಿಲೀಸ್

    ಚಿತ್ರದ ಟ್ರೇಲರ್ ಮತ್ತು ಹಾಡುಗಳಿಂದ ಮೋಡಿ ಮಾಡಿರೋ `ಆಚಾರ್ಯ’ ಚಿತ್ರ ಇದೇ ಏಪ್ರಿಲ್ 29ಕ್ಕೆ ತೆರೆಗೆ ಅಪ್ಪಳಿಸುತ್ತಿದೆ. ಚಿರಂಜೀವಿ ಮತ್ತು ರಾಮ್ ಚರಣ್ ಜತೆಗೆ ಕಾಜಲ್ ಮತ್ತು ಪೂಜಾ ಹೆಗ್ಡೆ ಕೂಡ ನಟಿಸಿದ್ದಾರೆ.

  • ಚಿರಂಜೀವಿ, ರಾಮ್ ಚರಣ್ ಭೇಟಿಯಾದ ಪ್ರಶಾಂತ್ ನೀಲ್ – ಕಾರಣವೇನು ಗೊತ್ತಾ?

    ಚಿರಂಜೀವಿ, ರಾಮ್ ಚರಣ್ ಭೇಟಿಯಾದ ಪ್ರಶಾಂತ್ ನೀಲ್ – ಕಾರಣವೇನು ಗೊತ್ತಾ?

    ಹೈದರಾಬಾದ್: ಟಾಲಿವುಡ್ ಮೆಗಾ ಸ್ಟಾರ್ ನಟ ಚಿರಂಜೀವಿ ಹಾಗೂ ನಟ ರಾಮ್ ಚರಣ್ ತೇಜ ಅವರನ್ನು ಸ್ಯಾಂಡಲ್‍ವುಡ್ ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಭೇಟಿ ಮಾಡಿದ್ದಾರೆ. ಸದ್ಯ ಈ ವಿಚಾರ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಕೆರಳಿಸಿದೆ.

    ನಟ ಶ್ರೀಮುರಳಿ ಅಭಿನಯದ ಉಗ್ರಂ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳುವ ಮೂಲಕ ಪ್ರಶಾಂತ್ ನೀಲ್ ಮೊದಲ ಸಿನಿಮಾದಲ್ಲಿಯೇ ಸಕ್ಸಸ್ ಕಂಡರು. ನಂತರ ರಾಕಿಂಗ್ ಸ್ಟಾರ್ ಯಶ್‍ಗೆ ಕೆಜಿಎಫ್ ಸಿನಿಮಾವನ್ನು ನಿರ್ದೇಶಿಸಿ, ಬಿಗ್ ಹಿಟ್ ಪಡೆಯುವುದರ ಜೊತೆಗೆ ಈ ಸಿನಿಮಾ ಬಾಕ್ಸ್ ಆಫೀಸ್‍ನಲ್ಲಿ ದಾಖಲೆ ಸೃಷ್ಟಿಸಿತು. ಈ ಸಿನಿಮಾ ಯಶ್‍ಗೆ ನ್ಯಾಷನಲ್ ಸ್ಟಾರ್ ಪಟ್ಟ ಗಿಟ್ಟಿಸಿಕೊಟ್ಟಿದ್ದಲ್ಲದೇ ಪ್ರಶಾಂತ್‍ಗೂ ಕೂಡ ದೊಡ್ಡ ನೇಮ್, ಫ್ರೇಮ್ ತಂದು ಕೊಟ್ಟಿತು.  ಇದನ್ನೂ ಓದಿ: ನನ್ನ ನಂಬಿ ಸಿನಿಮಾ ಮಂದಿರಕ್ಕೆ ಬಂದವ್ರಲ್ಲಿ ಕ್ಷಮೆ ಕೇಳುತ್ತೇನೆ: ಸುದೀಪ್

    ಕೆಜಿಎಫ್ ಸಕ್ಸಸ್ ನಂತರ ಟಾಲಿವುಡ್ ನಟ ಪ್ರಭಾಸ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ಸಲಾರ್‌ಗೆ ಆ್ಯಕ್ಷನ್ ಕಟ್ ಹೇಳುತ್ತಿರುವ ಪ್ರಶಾಂತ್‍ಗೆ ಪರಭಾಷಾ ಬಿಗ್ ಸ್ಟಾರ್‌ಗಳ ಸಿನಿಮಾ ನಿರ್ದೇಶಿಸಲು ಅವಕಾಶಗಳ ಮಳೆಯೇ ಹರಿದುಬರುತ್ತಿದೆ. ಈ ಮಧ್ಯೆ ಪ್ರಶಾಂತ್ ವಿಜಯದಶಮಿ ಹಬ್ಬದ ದಿನದಂದು ಚಿರಂಜೀವಿ ಅವರ ಮನೆಗೆ ಭೇಟಿ ನೀಡಿದ್ದಾರೆ. ಈ ವೇಳೆ ರಾಮ್ ಚರಣ್ ಹಾಗೂ ಚಿರಂಜೀವಿ ಜೊತೆ ಪ್ರಶಾಂತ್ ಫೋಟೋ ಕ್ಲಿಕ್ಕಿಸಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ನಾನು ತಡ ಮಾಡಿದ್ದೇನೆ ಎಂಬುದು ಗೊತ್ತು: ರಶ್ಮಿಕಾ ಮಂದಣ್ಣ

    ಚಿರಂಜೀವಿ ಹಾಗೂ ರಾಮ್ ಚರಣ್ ಜೊತೆ ಬಹಳ ಕ್ಲೋಸ್ ಆಗಿ ಫೋಟೋ ಕ್ಲಿಕ್ಕಿಸಿಕೊಂಡಿರುವ ಪ್ರಶಾಂತ್ ನೀಲ್ ಇನ್‍ಸ್ಟಾಗ್ರಾಮ್‍ನಲ್ಲಿ ಫೋಟೋವನ್ನು ಶೇರ್ ಮಾಡಿಕೊಳ್ಳುವುದರ ಜೊತೆಗೆ, ನಾನು ಇಂದು ಲೆಜೆಂಡ್ ರನ್ನು ಭೇಟಿಯಾದೆ. ಅದ್ಭುತ ಆತಿಥ್ಯ ನೀಡಿದ ರಾಮ್‍ಚರಣ್ ಅವರಿಗೆ ಧನ್ಯವಾದ. ಚಿಕ್ಕವಯಸ್ಸಿನಲ್ಲಿ ಚಿರಂಜೀವಿ ಅವರನ್ನು ಭೇಟಿಯಾಗುವ ನನ್ನ ಬಾಲ್ಯದ ಕನಸು ಈಗ ನನಸಾಯಿತು ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.

     

    View this post on Instagram

     

    A post shared by Prashanth Neel (@prashanthneel)

    ವಿಶೇಷವೆಂದರೆ ಪ್ರಶಾಂತ್ ಜೊತೆ ನಿರ್ಮಾಪಕ ಡಿವಿವಿ ದಾನಯ್ಯ ಕೂಡ ಚಿರಂಜೀವಿ ಮನೆಗೆ ಭೇಟಿ ನೀಡಿದ್ದು, ಈ ಮೂವರ ಕಾಂಬಿನೇಷನ್‍ನಲ್ಲಿ ಸಿನಿಮಾ ಬರಲಿದ್ಯಾ ಎಂಬ ಪ್ರಶ್ನೆ ಎದ್ದಿದ್ದು, ಅಭಿಮಾನಿಗಳಲ್ಲಿ ಕುತೂಹಲ ಮೂಡಿದೆ. ಸದ್ಯ ಪ್ರಶಾಂತ್ ನೀಲ್ ಸಲಾರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ರಾಮ್ ಚರಣ್ ಕಾಲಿವುಡ್ ನಿರ್ದೇಶಕ ಶಂಕರ್ ನಿದೇಶಿಸುತ್ತಿರುವ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಇದನ್ನೂ ಓದಿ: ನನ್ನ ಹಾಗೂ ಸೂರಪ್ಪ ಬಾಬು ಮಧ್ಯೆ ಮನಸ್ತಾಪ ಇರೋದು ನಿಜ: ಸುದೀಪ್

  • ಕಾಂಡೋಮ್ ವಿನ್ಯಾಸಿತ ಬಟ್ಟೆ ಧರಿಸಿದ ಚಿರಂಜೀವಿ ಸೊಸೆ- ಸುಸ್ಥಿರತೆ ಪಾಠ

    ಕಾಂಡೋಮ್ ವಿನ್ಯಾಸಿತ ಬಟ್ಟೆ ಧರಿಸಿದ ಚಿರಂಜೀವಿ ಸೊಸೆ- ಸುಸ್ಥಿರತೆ ಪಾಠ

    ಹೈದರಾಬಾದ್: ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ಜನಪ್ರಿಯ ಸ್ಟಾರ್ ಪತ್ನಿಯರಲ್ಲಿ ಉಪಾಸನಾ ಕಮಿನೇನಿ ಕೋನಿಡೇಲಾ ಸಹ ಒಬ್ಬರು. ತೆಲುಗು ಸೂಪರ್ ಸ್ಟಾರ್ ರಾಮ್‍ಚರಣ್ ತೇಜಾ ಅವರ ಅವರ ಪತ್ನಿ ಅವರು ಹಲವು ಉದ್ಯಮಗಳಲ್ಲಿ ತೊಡಗಿಕೊಂಡಿದ್ದು, 30 ವರ್ಷದವರಾದ ಉಪಾಸನಾ ಪ್ರಸಿದ್ಧ ಆಸ್ಪತ್ರೆ ಸಿಎಸ್‍ಆರ್‍ನ ಉಪಾಧ್ಯಕ್ಷೆಯಾಗಿದ್ದಾರೆ. ಅಲ್ಲದೆ ಪ್ರಸಿದ್ಧ ಆರೋಗ್ಯ ಮ್ಯಾಗಜಿನ್‍ನ ಪ್ರಧಾನ ಸಂಪಾದಕಿ ಕೂಡ ಆಗಿದ್ದಾರೆ. ತಮ್ಮದೇಯಾದ ಕೆಲಸಗಳಲ್ಲಿ ಬ್ಯುಸಿಯಾಗಿರುತ್ತಾರೆ ಸಹ. ಆದರೂ ಆರೋಗ್ಯ ಸಂಬಂಧಿ ಹಾಗೂ ಸುಸ್ಥಿರತೆ ಕುರಿತು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿರುತ್ತಾರೆ.

    ತಮ್ಮ ಅಭಿಮಾನಿಗಳಿಗಾಗಿ ಉಪಾಸನಾ ಅವರು ಇನ್‍ಸ್ಟಾಗ್ರಾಮ್‍ನಲ್ಲಿ ವೈಯಕ್ತಿಕ ಹಾಗೂ ತಮ್ಮ ವೃತ್ತಿ ಬದುಕಿನ ಕುರಿತು ಹಲವು ಅಪ್‍ಡೇಟ್‍ಗಳನ್ನು ನೀಡುತ್ತಿರುತ್ತಾರೆ. ಇದೀಗ ಕ್ವಾರಂಟೈನ್ ದಿನಗಳನ್ನು ಈ ದಂಪತಿ ಸಖತ್ ಆಗಿ ಎಂಜಾಯ್ ಮಾಡುತ್ತಿದ್ದು, ವಿವಿಧ ಚಟುವಟಿಕೆಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ಓದುವುದು, ಅಡುಗೆ ಮಾಡುವುದು, ವರ್ಕೌಟ್ ಸೇರಿದಂತೆ ವಿವಿಧ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಇದೇ ಸಂದರ್ಭದಲ್ಲಿ ಇದೀಗ ಫೋಟೋ ಒಂದನ್ನು ಹಂಚಿಕೊಂಡಿದ್ದು, ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

    ಹೌದು ಸುಸ್ಥಿರತೆಯ ಕುರಿತು ಅರಿವು ಮೂಡಿಸಲು ಉಪಾಸನಾ ಕೋನಿಡೇಲಾ ಅವರು ಡಿಫೆಕ್ಟೆಡ್ ಕಾಂಡೋಮ್‍ನಿಂದ ತಯಾರಿಸಿದ ಬಟ್ಟೆಯನ್ನು ಧರಿಸಿದ ಫೋಟೋವನ್ನು ಟ್ವೀಟ್ ಮಾಡಿದ್ದು, ಈ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದೆ. ಫೋಟೋ ಟ್ವೀಟ್ ಮಾಡಿ ಸಾಲುಗಳನ್ನು ಬರೆದಿರುವ ಅವರು, ಸಸ್ಟೇನೆಬಲ್ ಫ್ಯಾಷನ್ ನಮ್ಮ ಮುಂದಿನ ಭವಿಷ್ಯವಾಗಿದೆ. ಕೊರೊನಾ ತುರ್ತು ಪರಿಸ್ಥಿತಿಯ ಈ ಸಂದರ್ಭದಲ್ಲಿ ಸ್ಕ್ರ್ಯಾಪ್‍ಗಳನ್ನು ಧರಿಸುವ ಧೈರ್ಯ ನಿಮಗಿದೆಯೇ ಎಂದು ಪ್ರಶ್ನಿಸಿದ್ದಾರೆ.

    ಆರ್ಗಾಂಝಾ ಟಾಪ್‍ನ್ನು ಸ್ಥಳೀಯ ವಿನ್ಯಾಸಕಾರರು ತಿರಸ್ಕರಿಸಿದ ಹಾಗೂ ಹಳೆ ಬಟ್ಟೆಗಳಿಂದ ತಯಾರಿಸಲಾಗಿದೆ. ಲ್ಯಾಟೆಕ್ಸ್ ಸ್ಕರ್ಟ್‍ನ್ನು ಡ್ಯಾಮೇಜ್ ಆಗಿದ್ದ ಕಾಂಡೋಮ್‍ಗಳಿಂದ ತಯಾರಿಸಲಾಗಿದೆ. ಈ ಕ್ರಿಯೇಟಿವಿಟಿಯನ್ನು ಕ್ಯಾನ್ಸಲ್ಡ್ ಪ್ಲ್ಯಾನ್ಸ್ ಕ್ಲಬ್ ಹಾಗೂ ಮಲ್ಲಿಕಾ ರೆಡ್ಡಿಯವರಿಂದ ತಯಾರಿಸಲಾಗಿದೆ. ಅಲ್ಲದೆ ಮೇಡ್ ಫ್ರಮ್ ವೇಸ್ಟ್ ಎಂದು ಹ್ಯಾಶ್ ಟ್ಯಾಗ್‍ನೊಂದಿಗೆ ಬರೆದುಕೊಂಡಿದ್ದಾರೆ.

    ಉಪಾಸನಾ ಅವರ ಟ್ವೀಟ್‍ಗೆ ಅಭಿಮಾನಿಗಳು ಕಮೆಂಟ್ ಮಾಡಿದ್ದು, ನಿಜವಾದ ಪಾತ್ ಬ್ರೇಕರ್, ಅತ್ಯದ್ಭುತ ಶಕ್ತಿ ನಿಮ್ಮಲ್ಲಿದೆ. ಅನೇಕರ ಜೀವನದಲ್ಲಿ ವಿಚಾರಗಳಿಗೆ ನೀವು ಪ್ರಭಾವ ಬೀರಿದ್ದೀರಿ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಕಮೆಂಟ್ ಮಾಡಿ, ದಿನದಿಂದ ದಿನಕ್ಕೆ ನಿಮ್ಮ ಬಗ್ಗೆ ನಾನು ಇಂಪ್ರೆಸ್ ಆಗುತ್ತಿದ್ದೇನೆ ಎಂದಿದ್ದಾರೆ.

    ಅಂದಹಾಗೆ ತೆಲುಗು ಸೂಪರ್ ಸ್ಟಾರ್ ರಾಮ್‍ಚರಣ್ ಹಾಗೂ ಉಪಾಸನಾ ಅವರು ಕಾಲೇಜು ದಿನಗಳಿಂದಲೂ ಸ್ನೇಹಿತರು. ತುಂಬಾ ದಿನಗಳ ಕಾಲ ಸ್ನೇಹಿತರಾಗಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು, ತುಂಬಾ ಕ್ಲೋಸ್ ಫ್ರೆಂಡ್ಸ್ ಆಗಿ ನಂತರ ಡೇಟಿಂಗ್ ತೆರಳಿದ್ದರು. ಇವರ ಸ್ನೇಹವನ್ನು ಅರಿತ ಮನೆಯವರು, ಇವರಿಬ್ಬರ ವಿವಾಹ ಮಾಡಲು ನಿರ್ಧರಿಸಿದರು. ನಂತರ 2012ರಲ್ಲಿ ವಿವಾಹವಾದರು.

  • ತಂದೆ ಚಿರಂಜೀವಿಗೆ ಗುರುವಾಗಲಿದ್ದಾರೆ ರಾಮ್‍ಚರಣ್

    ತಂದೆ ಚಿರಂಜೀವಿಗೆ ಗುರುವಾಗಲಿದ್ದಾರೆ ರಾಮ್‍ಚರಣ್

    ಹೈದರಾಬಾದ್: ರಾಮ್ ಚರಣ್‍ತೇಜಾ ಹಾಗೂ ಮೆಗಾ ಸ್ಟಾರ್ ಚಿರಂಜೀವಿ ತಂದೆ ಮಕ್ಕಳು ಎನ್ನುವುದಕ್ಕಿಂತ ಪರಸ್ಪರ ಸ್ನೇಹಿತರಂತೆ ಇದ್ದಾರೆ. ಏಕೆಂದರೆ ಚಿರು ಅವರ ಹಲವು ಸಿನಿಮಾಗಳಲ್ಲಿ ರಾಮ್ ಚರಣ್ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಈ ಮೂಲಕ ತಂದೆಯ ಸಿನಿಮಾಗಳಿಗೆ ಬೂಸ್ಟ್ ನೀಡುತ್ತಿದ್ದಾರೆ. ಅಲ್ಲದೆ ತಂದೆಗಾಗಿ ಎರಡು ಸಿನಿಮಾಗಳನ್ನು ಸಹ ನಿರ್ಮಿಸಿದ್ದಾರೆ. ಹೀಗೆ ತಂದೆಗೆ ಬೆನ್ನುಲುಬಾಗಿ ನಿಂತಿರುವ ರಾಮ್‍ಚರಣ್ ಇದೀಗ ಚಿರಂಜೀವಿಯರಿಗೆ ಗುರುವಾಗುತ್ತಿದ್ದಾರಂತೆ.

    ಮೆಗಾ ಸ್ಟಾರ್ ಕಮ್ ಬ್ಯಾಕ್ ಮಾಡಿದ್ದ ‘ಕೈದಿ ನಂ.150’ಯಲ್ಲಿ ರಾಮ್ ಚರಣ್ ಕಾಣಿಸಿಕೊಂಡು, ಅಪ್ಪನ ಜೊತೆಗೆ ಡಾನ್ಸ್ ಮಾಡಿದ್ದರು. ನಂತರ ಅಪ್ಪನಿಗಾಗಿ ಎರಡು ಸಿನಿಮಾ ನಿರ್ಮಿಸಿದ್ದಾರೆ ಸಹ. ಮಾತ್ರವಲ್ಲದೆ ಇತ್ತೀಚೆಗೆ ತಂದೆ ಟ್ವಿಟ್ಟರ್ ಖಾತೆ ತೆರೆದಿದ್ದಕ್ಕೆ ರಾಮ್‍ಚರಣ್ ಸಹ ಟ್ವಿಟ್ಟರ್ ಗೆ ಎಂಟ್ರಿ ಕೊಟ್ಟಿದ್ದರು. ಹೀಗೆ ಅಪ್ಪನಿಗೆ ಸಪೋರ್ಟ್ ಮಾಡುತ್ತ ಬಂದಿದ್ದಾರೆ. ಆದರೆ ಇದೀಗ ಗುರುವಾಗಲು ಹೊರಟಿದ್ದಾರೆ.

    ಹೌದು ಚಿರು ನಟನೆಯ ‘ಆಚಾರ್ಯ’ ಸಿನಿಮಾದಲ್ಲಿ ಇನ್ನೊಂದು ಮಹತ್ವದ ಪಾತ್ರವಿದ್ದು, ಈ ಪಾತ್ರವನ್ನು ಯಾರು ನಿರ್ವಹಿಸುತ್ತಾರೆ ಎಂಬ ಕುರಿತು ಬಹಳ ದಿನಗಳಿಂದ ಚರ್ಚೆ ನಡೆಯುತ್ತಿತ್ತು. ಅದೀಗ ರಾಮ್ ಚರಣ್ ನಟಿಸುವುದು ಕನ್ಫರ್ಮ್ ಆಗಿದೆಯಂತೆ. ಇನ್ನೂ ಅಚ್ಚರಿ ಎಂದರೆ ಈ ಪಾತ್ರ ಚಿರಂಜೀವಿಯವರ ಗುರುವಿನ ಪಾತ್ರವಂತೆ. ಸಿನಿಮಾದಲ್ಲಿ 30 ನಿಮಿಷ ಕಾಣಿಸಿಕೊಳ್ಳುವ ಈ ಪಾತ್ರವನ್ನು ರಾಮ್‍ಚರಣ್ ನಿರ್ವಹಿಸಲಿದ್ದಾರಂತೆ. ಈ ಮೂಲಕ ತಂದೆಗೆ ಬೂಸ್ಟ್ ನೀಡಲು ತಯಾರಾಗುತ್ತಿದ್ದಾರೆ.

    ರಾಮ್ ಚರಣ್ ಈಗಾಗಲೇ ಆರ್‍ಆರ್‍ಆರ್ ಚಿತ್ರದಲ್ಲಿ ಬ್ಯೂಸಿಯಾಗಿದ್ದು, ಹೀಗಾಗಿ ‘ಆಚಾರ್ಯ’ ಚಿತ್ರಕ್ಕೆ ಡೇಟ್ ಹೊಂದಿಸುವುದು ಸಾಧ್ಯವಿಲ್ಲ ಎನ್ನಲಾಗಿತ್ತು. ಅಲ್ಲದೆ ಈ ಪಾತ್ರವನ್ನು ಮಹೇಶ್ ಬಾಬು ನಿರ್ವಹಿಸಲಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬಂದಿದ್ದವು. ಇದೀಗ ಆರ್‍ಆರ್‍ಆರ್ ನಿರ್ದೇಶಕ ರಾಜಮೌಳಿ ಅವರು ರಾಮ್‍ಚರಣ್ ‘ಆಚಾರ್ಯ’ ಚಿತ್ರದಲ್ಲಿ ನಟಿಸಲು ಒಂದು ತಿಂಗಳು ಅವಕಾಶ ನೀಡಿದ್ದಾರೆ. ಹೀಗಾಗಿ ಅವರೇ ತಮ್ಮ ತಂದೆಯ ಗುರುವಿನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಕೊರೊನಾ ಹಿನ್ನೆಲೆ ದೇಶವೇ ಲಾಕ್‍ಡೌನ್ ಆಗಿದ್ದು, ಸಿನಿಮಾ ಕ್ಷೇತ್ರ ಸಹ ಸ್ತಬ್ಧವಾಗಿದೆ. ಹೀಗಾಗಿ ಪರಿಸ್ಥಿತಿ ತಿಳಿಯಾದ ಬಳಿಕ ಶೂಟಿಂಗ್ ಪ್ರಾರಂಭವಾಗಲಿದೆ. ಕೊರೊನಾ ಅವಾಂತರದ ಬಳಿಕ ರಾಮ್ ಚರಣ್ ಎರಡೂ ಚಿತ್ರಗಳಲ್ಲಿ ಬ್ಯುಸಿಯಾಗಲಿದ್ದಾರೆ.