Tag: Rambo-2

  • ಚಂದನ್ ಶೆಟ್ಟಿ ನಂತ್ರ ಅರ್ಜುನ್ ಜನ್ಯ, ಅಧಿತಿ ಸಾಗರ್ ಗೆ ಬಂಧನದ ಭೀತಿ!

    ಚಂದನ್ ಶೆಟ್ಟಿ ನಂತ್ರ ಅರ್ಜುನ್ ಜನ್ಯ, ಅಧಿತಿ ಸಾಗರ್ ಗೆ ಬಂಧನದ ಭೀತಿ!

    ಬೆಂಗಳೂರು: ಸ್ಯಾಂಡಲ್ ವುಡ್ ಮೇಲೆ ಸಿಸಿಬಿ ಕಣ್ಣು ಬಿದ್ದಿದ್ದು, ಚಂದನ್ ಶೆಟ್ಟಿ ನಂತರ ಈಗ ‘ರ‍್ಯಾಂಬೋ -2’ ಚಿತ್ರದ ತಂಡಕ್ಕೆ ಸಂಕಷ್ಟ ಎದುರಾಗಿದೆ.

    ರ‍್ಯಾಂಬೋ -2 ಚಿತ್ರದ ಧಮ್ ಮಾರೋ ಧಮ್ ಹಾಡಿನ ಮೇಲೆ ಸಿಸಿಬಿ ಕಣ್ಣು ಬಿದ್ದಿದ್ದು, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮತ್ತು ಅಧಿತಿ ಸಾಗರ್ ಗೆ ಸಮನ್ಸ್ ನೀಡಲು ಸಿಸಿಬಿ ತಂಡ ಸಿದ್ಧತೆ ನಡೆಸುತ್ತಿದೆ. ಚಂದನ್ ಶೆಟ್ಟಿ ಅವರ ವಿಚಾರಣೆಯ ಬಳಿಕ ಅರ್ಜುನ್ ಜನ್ಯ ಮತ್ತು ಮುತ್ತುಗೆ ಸಂಕಷ್ಟ ಎದುರಾಗಲಿದೆ. ಚಿತ್ರದ ಈ ಹಾಡಿನಲ್ಲಿ ಗಾಂಜಾ ಹೊಡಿ ಎಂಬ ಪ್ರಚೋದನೆ ಹಿನ್ನೆಲೆಯಲ್ಲಿ ಸಿಸಿಬಿ ತಂಡ ಇಬ್ಬರಿಗೂ ಸಮನ್ಸ್ ಜಾರಿಗೊಳಿಸಲಿದೆ ಎಂಬುದಾಗಿ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.

    ಇತ್ತೀಚೆಗೆ ಬಿಡುಗಡೆಯಾದ ರ‍್ಯಾಪರ್ ಚಂದನ್ ಶೆಟ್ಟಿ ಸಂಗೀತ ಸಂಯೋಜನೆಯ ‘ಅಂತ್ಯ’ ಸಿನಿಮಾದ “ಗಾಂಜಾ ಕಿಕ್” ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಆದರೆ ಗಾಂಜಾ ಕಿಕ್ ಹಾಡಿನಲ್ಲಿ ಮಾದಕ ವಸ್ತುಗಳನ್ನು ಸೇವಿಸುವ ಕುರಿತು ವೈಭವೀಕರಿಸಿ ತೋರಿಸಲಾಗಿದೆ. ಹೀಗಾಗಿ ಖುದ್ದು ಸ್ವಯಂ ದೂರು ದಾಖಲಿಸಿಕೊಂಡಿರುವ ಸಿಸಿಬಿ ಪೊಲೀಸರು, ವಿಚಾರಣೆಗೆ ಹಾಜರಾಗುವಂತೆ ಚಂದನ್ ಶೆಟ್ಟಿಗೆ ಸಮನ್ಸ್ ಜಾರಿ ಮಾಡಿದರು. ಇಂದು ಚಂದನ್ ವಿಚಾರಣೆಗೆ ಹಾಜರಾಗಿದ್ದಾರೆ. ಇದನ್ನೂ ಓದಿ: ರ‍್ಯಾಪರ್ ಚಂದನ್ ಶೆಟ್ಟಿಗೆ ಬಂಧನ ಭೀತಿ?

    ಚಂದನ್ ಶೆಟ್ಟಿ ವಿಚಾರಣೆ ಆದ ಬಳಿಕ ರ‍್ಯಾಂಬೋ-2 ಚಿತ್ರದ ‘ಧಮ್ ಮಾರೋ ಧಮ್’ ಹಾಡಿನ ಸಾಹಿತ್ಯ ಬರೆದ ಮುತ್ತು ಸೇರಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹಾಗೂ ಗಾಯಕಿ ಅಧಿತಿ ಸಾಗರ್ ಅವರಿಗೆ ನೋಟಿಸ್ ನೀಡುವ ಸಾಧ್ಯತೆಗಳಿವೆ. ಈ ಹಾಡು ಯುವಜನತೆಗೆ ಗಾಂಜಾ ಸೇವನೆ ಮಾಡಲು ಪ್ರಚೋದನೆ ನೀಡುವ ರೀತಿಯಲ್ಲಿದೆ. ಯುವ ಜನತೆ ಪಾರ್ಟಿ ಹಾಗೂ ಪಬ್‍ಗೆ ಹೋದಾಗ ಈ ಹಾಡು ಕೇಳಿ ಗಾಂಜಾಗೆ ಆಕರ್ಷಕರಾಗಿ ಅದನ್ನು ಸೇವಿಸಲು ಮುಂದಾಗುತ್ತಾರೆ.

    ಸಿಸಿಬಿ ಪೊಲೀಸರು ಚಂದನ್ ಶೆಟ್ಟಿ ಅವರಿಗೆ ನೋಟಿಸ್ ನೀಡುವ ಮೊದಲು ಫಿಲಂ ಚೇಂಬರ್ ಗೆ ಮನವಿ ಮಾಡಿಕೊಂಡಿದ್ದರು. ಮನವಿಯಲ್ಲಿ `ಈ ರೀತಿಯ ಹಾಡುಗಳು ಸಮಾಜದಲ್ಲಿ ಸಾಕಷ್ಟು ಕೆಡುಕು ಉಂಟು ಮಾಡುತ್ತಿದೆ. ಅಲ್ಲದೇ ಯುವಜನತೆಗೆ ಗಾಂಜಾ ಸೇವನೆ ಮಾಡಲು ಆಕರ್ಷಿಸುತ್ತದೆ. ಹಾಗಾಗಿ ನೀವು ಈ ರೀತಿಯ ಹಾಡುಗಳ ಬಗ್ಗೆ ನಿಗಾವಹಿಸಿ ಎಂದು ತಿಳಿಸಿದ್ದರು. ಅಲ್ಲದೇ ಈ ರೀತಿಯ ಹಾಡುಗಳ ಲಿಂಕ್‍ಗಳನ್ನು ಸಾಮಾಜಿಕ ಜಾಲತಾಣ ಹಾಗೂ ಯೂಟ್ಯೂಬ್‍ನಲ್ಲಿ ಡಿಲೀಟ್ ಮಾಡಬೇಕೆಂದು ಸಿಸಿಬಿ ಪೊಲೀಸರು ಹೇಳಿದ್ದರು ಎನ್ನಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಚುಟು ಚುಟು ಅಂತಾ ಚುಮು ಚುಮು ಕಥೆ ಹೇಳಲು ಬರ್ತಿದ್ದಾನೆ ರ‍್ಯಾಂಬೋ

    ಚುಟು ಚುಟು ಅಂತಾ ಚುಮು ಚುಮು ಕಥೆ ಹೇಳಲು ಬರ್ತಿದ್ದಾನೆ ರ‍್ಯಾಂಬೋ

    ಬೆಂಗಳೂರು: ಚಂದನವನದಲ್ಲಿ ಚಿಕ್ಕ ಚಿಕ್ಕ ಪಾತ್ರಗಳಿಂದ ಮೇಲೆ ಬಂದವರು ಹಾಸ್ಯ ನಟ ಶರಣ್. ಇಂದು ಅದೇ ಹಾಸ್ಯ ನಟ ಪೂರ್ಣ ಪ್ರಮಾಣದ ನಾಯಕರಾಗಿ ಈಗಾಗಲೇ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಹಿಂದೆ ರ‍್ಯಾಂಬೋ ಎಂಬ ಸೂಪರ್ ಹಿಟ್ ಸಿನಿಮಾ ನೋಡಿದ್ದ ತಂಡ ಮತ್ತೊಮ್ಮೆ ಒಂದಾಗಿ ರ‍್ಯಾಂಬೋ-2 ಚಿತ್ರವನ್ನು ನಿರ್ಮಾಣ ಮಾಡಿದೆ.

    ಇದೇ ಶುಕ್ರವಾರ ರ‍್ಯಾಂಬೋ-2 ಚಂದನವನದಲ್ಲಿ ಬಿಡುಗಡೆ ಮುನ್ನವೇ ಹವಾ ಕ್ರಿಯೇಟ್ ಮಾಡಿದೆ. ರ‍್ಯಾಂಬೋ ಚಿತ್ರದ ಮುಂದುವರಿದ ಭಾಗವೇ ರ‍್ಯಾಂಬೋ -2 ಅಂತಾ ಹೇಳಲಾಗುತ್ತಿದೆ. ಆದ್ರೆ ಚಿತ್ರತಂಡ ಮುಂದುವರೆದ ಭಾಗ ಹೇಳುವಕ್ಕಿಂತ ರ್ಯಾಂಬೋ ಚಿತ್ರದ ಮತ್ತೊಂದು ಅಧ್ಯಾಯ ಅಂತಾ ಹೇಳಬಹುದು ಅಂತಾ ಹೇಳಿಕೊಂಡಿದೆ. ಇದೂವರೆಗೂ ಶರಣ್ ಮತ್ತು ಚಿಕ್ಕಣ್ಣ ಜೋಡಿಯಾಗಿ ನಟಿಸಿರುವ ಚಿತ್ರಗಳಲ್ಲಿ ಹಾಸ್ಯವೇ ಪ್ರಧಾನವಾಗಿತ್ತು. ಆದ್ರೆ ಚಿತ್ರತಂಡದ ಪ್ರಕಾರ ಈ ಬಾರಿ ಶರಣ್ ಮತ್ತು ಚಿಕ್ಕಣ್ಣ ತುಂಬಾ ವಿಭಿನ್ನವಾಗಿ ರ‍್ಯಾಂಬೋ ದಲ್ಲಿ ಕಾಣಿಸಿಕೊಂಡಿದ್ದಾರೆ ಅಂತಾ ತಿಳಿಸಿದೆ.

    ಮುದ್ದು ಹುಡುಗಿ ಆಶಿಕಾ ರಂಗನಾಥ್ ರ‍್ಯಾಂಬೋ-2 ಚಿತ್ರದಲ್ಲಿ ಶರಣ್‍ಗೆ ಜೊತೆಯಾಗಿದ್ದಾರೆ. ಮ್ಯಾಜಿಕಲ್ ಕಂಪೋಸರ್ ಅರ್ಜುನ್ಯ ಜನ್ಯ ಸಂಯೋಜನೆಯಲ್ಲಿ ಐದು ಹಾಡುಗಳು ಮೂಡಿಬಂದಿವೆ. ಚಿತ್ರದ ಉತ್ತರ ಕರ್ನಾಟಕ ಶೈಲಿಯ ‘ಚುಟು ಚುಟು’ ಹಾಡು ಸೂಪರ್ ಹಿಟ್ ಆಗಿದೆ.

    ರ‍್ಯಾಂಬೋ ಚಿತ್ರ ಎಲ್ಲ ತಂತ್ರಜ್ಞರು ಒಂದಾಗಿ ಬಂಡವಾಳ ಹಾಕಿದ್ದಾರೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ, ನಟ ಚಿಕ್ಕಣ್ಣ, ನಿರ್ದೇಶಕರಾದ ತರುಣ್ ಸುಧೀರ್, ಮೋಹನ್ ಬಿ.ಕೆರೆ, ಛಾಯಾಗ್ರಾಹಕ ಎಸ್.ರಾಜ್, ಸಂಕಲನಕಾರ ಕೆ.ಎಂ.ಪ್ರಕಾಶ್, ಅಟ್ಲಾಂಟ್ ನಾಗೇಂದ್ರ ಮತ್ತು ಪ್ರೊಡೆಕ್ಷನ್ ಮ್ಯಾನೇಜರ್ ನರಸಿಂಹ ಜಾಲಹಳ್ಳಿ ಒಂದಾಗಿ ಹಣ ಹೂಡಿದ್ದಾರೆ. ಸಿನಿಮಾ ಶುಕ್ರವಾರ ರಾಜ್ಯಾದ್ಯಂತ ತೆರೆಕಾಣಲಿದೆ.