Tag: Rambir kapoor

  • ತಡರಾತ್ರಿ ಮಾಜಿ ಗೆಳೆಯನ ಜೊತೆ ಕಾಣಿಸಿಕೊಂಡ ದೀಪಿಕಾ

    ತಡರಾತ್ರಿ ಮಾಜಿ ಗೆಳೆಯನ ಜೊತೆ ಕಾಣಿಸಿಕೊಂಡ ದೀಪಿಕಾ

    ಮುಂಬೈ: ಬಾಲಿವುಡ್ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ಕಳೆದ ರಾತ್ರಿ ತಮ್ಮ ಮಾಜಿ ಗೆಳೆಯ, ನಟ ರಣ್‍ಬೀರ್ ಕಪೂರ್ ಅವರ ಜೊತೆ ನಿರ್ದೇಶಕ ಲವ್ ರಂಜನ್ ಅವರ ಮನೆಯ ಹೊರಗೆ ಕಾಣಿಸಿಕೊಂಡಿದ್ದಾರೆ.

    ರಣ್‍ಬೀರ್ ಕಪೂರ್ ನಿರ್ದೇಶಕ ಲವ್ ರಂಜನ್ ಅವರ ಇನ್ನು ಹೆಸರಿಡದ ಚಿತ್ರದಲ್ಲಿ ನಟಿಸುವುದಾಗಿ ಕಳೆದ ವರ್ಷ ಹೇಳಿದ್ದರು. ಅಲ್ಲದೆ ಈ ಚಿತ್ರದಲ್ಲಿ ನಟ ಅಜಯ್ ದೇವಗನ್ ಅವರು ಕೂಡ ನಟಿಸಲಿದ್ದಾರೆ ಎಂದು ಹೇಳಲಾಗಿತ್ತು.

    ಈಗ ದೀಪಿಕಾ ಪಡುಕೋಣೆ ನಿರ್ದೇಶಕ ಲವ್ ರಂಜನ್ ಮನೆಯಿಂದ ಹೊರ ಬರುವುದನ್ನು ಕಂಡು ಅವರು ರಣ್‍ಬೀರ್ ಜೊತೆ ಸಿನಿಮಾದಲ್ಲಿ ನಟಿಸುತ್ತಿದ್ದಾರಾ ಎಂಬ ಅನುಮಾನ ಮೂಡಿದೆ. ಈ ಬಗ್ಗೆ ದೀಪಿಕಾ ಆಗಲಿ, ರಣ್‍ಬೀರ್ ಆಗಲಿ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ.

    ರಣ್‍ಬೀರ್ ಕಪೂರ್ ಹಾಗೂ ದೀಪಿಕಾ ಪಡುಕೋಣೆ ಇದುವರೆಗೂ ಬಾಲಿವುಡ್‍ನಲ್ಲಿ ಬಚನಾ ಹೇ ಹಸಿನೋ, ಯೇ ಜವಾನಿ ಹೇ ದಿವಾನಿ ಹಾಗೂ ತಮಾಶಾ ಚಿತ್ರದಲ್ಲಿ ನಟಿಸಿದ್ದಾರೆ. ಈಗ ಈ ಚಿತ್ರ ಅಧಿಕೃತವಾದರೆ ಇದು ಅವರ ಕಾಂಬಿನೇಷನ್ ನಲ್ಲಿ ಮೂಡಿಬರುವ ನಾಲ್ಕನೇ ಚಿತ್ರ ಆಗಲಿದೆ.

    ದೀಪಿಕಾ ಈಗ ತಮ್ಮ ಪತಿ, ನಟ ರಣ್‍ವೀರ್ ಸಿಂಗ್ ಅವರ ಜೊತೆ ’83’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತ ರಣ್‍ಬೀರ್ ಕಪೂರ್ ಅವರು ನಟಿ ಅಲಿಯಾ ಭಟ್ ಜೊತೆ ‘ಬ್ರಹ್ಮಸ್ತ್ರಾ’ ಚಿತ್ರದ ಶೂಟಿಂಗ್‍ನಲ್ಲಿ ತೊಡಗಿಕೊಂಡಿದ್ದಾರೆ.