Tag: Rambhapuri Veerasimhasana Mahasamasthna

  • ಸಿದ್ದರಾಮಯ್ಯ ನಾಟಕ ಆಡ್ತಿದ್ದಾರೆ – ಪ್ರಮೋದ್ ಮುತಾಲಿಕ್ ಕಿಡಿ

    ಸಿದ್ದರಾಮಯ್ಯ ನಾಟಕ ಆಡ್ತಿದ್ದಾರೆ – ಪ್ರಮೋದ್ ಮುತಾಲಿಕ್ ಕಿಡಿ

    ಧಾರವಾಡ: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಈಗ ಎಲ್ಲ ಮಠಕ್ಕೆ ಹೋಗ್ತಾರೆ. ಉದ್ದುದ್ದ, ಅಡಡ್ಡ ನಮಸ್ಕಾರ ಮಾಡ್ತಾ ನಾಟಕ ಮಾಡ್ತಿದ್ದಾರೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆರೋಪಿಸಿದ್ದಾರೆ.

    ಸಿದ್ದರಾಮಯ್ಯ ಅವರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಮಠಕ್ಕೆ ಭೇಟಿ ನೀಡಿದ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ನಾಟಕ ಮಾಡ್ತಿದ್ದಾರೆ. ಇದು ರಂಭಾಪುರಿ ಶ್ರೀ, ಶೃಂಗೇರಿ ಶ್ರೀಗಳಿಗೂ ಗೊತ್ತು. ಎಲ್ಲ ಮಠಾಧೀಶರಿಗೂ ಈ ರಾಜಕಾರಣಿಗಳ ನಾಟಕ ಗೊತ್ತು ಎಂದಿದ್ದಾರೆ.

    ಸಿದ್ದರಾಮಯ್ಯ ನಾಸ್ತಿಕರು, ದೇವರನ್ನು ನಂಬಲಾರದವರು. ಕುಂಕುಮ ಹಚ್ಚಿದವರನ್ನು ಕಂಡರೆ ಹೊಟ್ಟೆ ಉರಿಯುತ್ತದೆ. ಕೇಸರಿ ಬಟ್ಟೆ ಕಂಡರೆ ಬೆಂಕಿ ಬಿದ್ದಂತೆ ಆಗುತ್ತೆ. ಅಂಥವರು ಯಾಕೆ ಮಠಕ್ಕೆ ಹೋಗ್ತಾರೆ? ಅನ್ನೋದು ಎಲ್ಲರಿಗೂ ಗೊತ್ತು. ಮತದ ದಾಹಕ್ಕಾಗಿ ನೀವು ಹೋಗುತ್ತಿದ್ದೀರಿ, ಭಕ್ತಿಯಿಂದ ಅಲ್ಲ. ನಿಮ್ಮ ನಾಟಕ ಬೇಡ. ನಿಮ್ಮ 60 ವರ್ಷದ ನಿಮ್ಮ ಬಣ್ಣ ಬಯಲಾಗಿದೆ. ದುರಾಡಳಿತ, ಭ್ರಷ್ಟಾಚಾರದ ಬಣ್ಣ ಬಯಲಾಗಿದೆ. ಮತದಾರರೇ ನಿಮಗೆ ಮಣ್ಣು ಮುಕ್ಕಿಸುತ್ತಾರೆ ಎಂದು ಟೀಕಿಸಿದ್ದಾರೆ.ಇದನ್ನೂ ಓದಿ: 8 ಅಂಗಡಿಗಳಲ್ಲಿ ಸರಣಿ ಕಳ್ಳತನ – ಬಟ್ಟೆ ಅಳತೆ ನೋಡಿ ಕದ್ದೊಯ್ದ ಖದೀಮರು

    ಇನ್ನೂ ಧಾರವಾಡದಲ್ಲಿ ಸಾವರ್ಕರ್ ಫೋಟೋ ಸುಟ್ಟ ಘಟನೆ ಸಂಬಂಧ ಮಾತನಾಡಿದ ಮುತಾಲಿಕ್, ಸಾವರ್ಕರ್ ಭಾವಚಿತ್ರ ಸುಟ್ಟು ಹಾಕಿದ್ದು ಹೇಯ ಹಾಗೂ ದೇಶದ್ರೋಹಿ ಕೃತ್ಯ. ನೀವು ಸುಟ್ಟಿರೋದು ಭಾವಚಿತ್ರವಲ್ಲ, ಭಾರತ ಮಾತೆಯನ್ನ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಬ್ಯಾನ್ ನಿರ್ಧಾರ ತಗೆದುಕೊಳ್ಳುವಷ್ಟು ನಟ ಅನಿರುದ್ಧ ಕಿರಿಕ್ ಮಾಡಿದ್ರಾ?: ಪಿನ್ ಟು ಪಿನ್ ಮಾಹಿತಿ

    ಸಾವರ್ಕರ್ ಅರ್ಧ ಜೀವನ ಜೈಲಿನಲ್ಲಿ ಕಳೆದವರು. ಕಾಂಗ್ರೆಸ್‌ನವರಿಗೆ ದೇಶಭಕ್ತಿ ಇಲ್ಲ. ನಿಮಗೆ ಸಿದ್ದರಾಮಯ್ಯ ಬೇಕು ಅಷ್ಟೇ. ನಿಮ್ಮ ಉದ್ದೇಶ ಏನು? ಎಂದು ಪ್ರಶ್ನಿಸಿದ್ದಾರೆ.

    ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆದ ವಿಚಾರ ತಪ್ಪು ಎಂದು ಎಲ್ಲರೂ ಹೇಳುತ್ತಿದ್ದಾರೆ. ಅದರೆ ಸಾವರ್ಕರ್‌ಗೆ ಅಪಮಾನ ಮಾಡಿದ್ದು ಸರಿಯಲ್ಲ. ಇಂದಿರಾ ಗಾಂಧಿಯವರೇ ಸಾರ್ವಕರ್ ದೇಶಭಕ್ತ ಎಂದು ಭಾವಚಿತ್ರದ ಅಂಚೆ ಚೀಟಿ ಬಿಡುಗಡೆ ಮಾಡಿದ್ದಾರೆ. ಆದ್ರೆ ನೀವು ಅಯೋಗ್ಯರು. ಈ ಕೂಡಲೇ ಭಾರತ ಮಾತೆಗೆ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಧರ್ಮ ಒಡೆಯುವುದು ನನ್ನ ಉದ್ದೇಶವಲ್ಲ, ಕೆಲವರು ನನ್ನನ್ನ ದಾರಿ ತಪ್ಪಿಸಿದ್ರು: ಸಿದ್ದರಾಮಯ್ಯ

    ಧರ್ಮ ಒಡೆಯುವುದು ನನ್ನ ಉದ್ದೇಶವಲ್ಲ, ಕೆಲವರು ನನ್ನನ್ನ ದಾರಿ ತಪ್ಪಿಸಿದ್ರು: ಸಿದ್ದರಾಮಯ್ಯ

    – ಕಾಶಿಯ ಹಾರ ಮುಂದಿನ ಚುನಾವಣೆವರೆಗೂ ನಿಮ್ಮ ಕೊರಳಲ್ಲೇ ಇರಲೆಂದ ಶ್ರೀಗಳು

    ಚಿಕ್ಕಮಗಳೂರು: ನಿನ್ನೆ ಕೊಡಗು ಜಿಲ್ಲೆಯಲ್ಲಿ ಮಳೆಹಾನಿ ಪ್ರದೇಶಕ್ಕೆ ಪ್ರವಾಸ ಕೈಗೊಂಡು ಸರಣಿ ಪ್ರತಿಭಟನೆ ಎದುರಿಸಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇದೀಗ ರಂಭಾಪುರಿ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದಿದ್ದಾರೆ.

    ಇದೇ ಮೊದಲ ಬಾರಿಗೆ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನಲ್ಲಿರುವ ರಂಭಾಪುರಿ ಮಠಕ್ಕೆ ಭೇಟಿ ನೀಡಿದ ಸಿದ್ದರಾಮಯ್ಯ ಅವರನ್ನು ರಂಭಾಪುರಿ ಶ್ರೀಗಳು ಮಂತ್ರ-ಘೋಷಗಳ ಮೂಲಕ ಸ್ವಾಗತಿಸಿದ್ದಾರೆ. ಅಲ್ಲದೇ ಕಾಶಿಯ ಹಾರ ನೀಡಿ ಮುಂದಿನ ಚುನಾವಣೆವರೆಗೂ ನಿಮ್ಮ ಕೊರಳಲ್ಲೇ ಇರಲಿ ಎಂದು ಆಶೀರ್ವಾದ ಮಾಡಿದ್ದಾರೆ. ಬಳಿಕ ಬರ್ತೀನಿ… ಬರ್ತೀನಿ… ಅಂದು ಈಗ ಬಂದಿದ್ದೀರಾ.. ಎಂದೂ ಪ್ರಶ್ನಿಸಿದ್ದಾರೆ.

    ರಂಭಾಪುರಿ ಪೀಠದ ಶ್ರೀ ಪ್ರಸನ್ನ ವೀರ ಸೋಮೇಶ್ವರ ಸ್ವಾಮೀಜಿಗಳ ಆಶೀರ್ವಾದ ಪಡೆದ ಸಿದ್ದರಾಮಯ್ಯ ಅವರು ವೀರಭದ್ರನಾಥ ಸ್ವಾಮಿ, ರೇಣುಕಾಚಾರ್ಯರ ಗದ್ದುಗೆಯ ದರ್ಶನ ಸಹ ಪಡೆದಿದ್ದಾರೆ. ಅಲ್ಲದೇ ಇಲ್ಲಿಗೆ ಬಂದದ್ದು ನನ್ನ ಪುಣ್ಯ ಎಂಬ ಮಾತುಗಳನ್ನೂ ಆಡಿದ್ದಾರೆ. ಇದನ್ನೂ ಓದಿ: ಚಂಬಲ್ ಕಣಿವೆ ದರೋಡೆಕೋರರು ವಿಧಾನಸೌಧದಲ್ಲಿದ್ದಾರೆ: ಹೆಚ್‍ಡಿಕೆ

    ಇದೇ ವೇಳೆ ಶ್ರೀಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, ಧರ್ಮ ಒಡೆಯುವುದು ನನ್ನ ಉದ್ದೇಶ ಆಗಿರಲಿಲ್ಲ. ಕೆಲವರು ನನ್ನನ್ನ ದಾರಿ ತಪ್ಪಿಸಿದರು. ಇನ್ಯಾವತ್ತೂ ಧರ್ಮದ ವಿಷಯಕ್ಕೆ ಹೋಗುವುದಿಲ್ಲ. ರಾಜ್ಯ ಜನರ ಅಭಿವೃದ್ದಿಗೆ ಆದ್ಯತೆ ನೀಡುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ದೋಬಾರಾ ಸಿನಿಮಾ ಆಸ್ಕರ್‌ಗೆ ಕಳುಹಿಸಿ: ಅನುರಾಗ್ ಕಶ್ಯಪ್‌ಗೆ ವ್ಯಂಗ್ಯ ಮಾಡಿದ ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕ

    ಅದಕ್ಕೂ ಮುನ್ನ ಮಾಜಿ ಸಿಎಂ ಸಿದ್ದರಾಮಯ್ಯ ಶೃಂಗೇರಿ ಶಾರದಾಂಬೆಯ ದರ್ಶನವನ್ನೂ ಪಡೆದಿದ್ದಾರೆ.

    Live Tv
    [brid partner=56869869 player=32851 video=960834 autoplay=true]