Tag: Rambhapuri Sri

  • ಜಾತಿಗಣತಿ ವರದಿ ತಯಾರಿಕೆಯ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ: ರಂಭಾಪುರಿ ಶ್ರೀ

    ಜಾತಿಗಣತಿ ವರದಿ ತಯಾರಿಕೆಯ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ: ರಂಭಾಪುರಿ ಶ್ರೀ

    – ಜಾತಿಗಣತಿ ವರದಿ ಪುನರ್‌ವಿಮರ್ಶೆ ಆಗ್ಬೇಕು, ಅಧಿಕಾರಿಗಳು ಮನೆಮನೆಗೆ ಭೇಟಿ ಕೊಡಬೇಕು

    ಚಿಕ್ಕಮಗಳೂರು: ಜಾತಿಗಣತಿ ವರದಿ (Caste Census Report) ತಯಾರು ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ. ಕೇಂದ್ರ ಸರ್ಕಾರಕ್ಕೆ ಮಾತ್ರ ಈ ಅಧಿಕಾರ ಇರುವುದು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ಸರಿಯಾದ ಮಾಹಿತಿ ಕೆಲವೊಂದು ಸೂಚನೆಗಳನ್ನು ನೀಡಬೇಕು ಎಂದು ಬಾಳೆಹೊನ್ನೂರಿನ (Balehonnur) ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯ ಜಗದ್ಗುರುಗಳು ಹೇಳಿದರು.

    ತರಾತುರಿ ಜಾತಿಗಣತಿ, ವರದಿ ಮಂಡನೆಯ ಕುರಿತು ಚಿಕ್ಕಮಗಳೂರು (Chikkamagaluru) ಜಿಲ್ಲೆಯ ರಂಭಾಪುರೀ ಪೀಠದಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಸರ್ಕಾರ ಯಾವುದೋ ಒಂದು ಜಾತಿಯನ್ನು ತುಷ್ಟೀಕರಣ ಮಾಡಲು ಜಾತಿಗಣತಿಗೆ ಮುಂದಾಗಿದೆ. ಹತ್ತಾರು ವರ್ಷಗಳಿಂದ ಜಾತಿಗಣತಿ ವರದಿ ನೆನೆಗುದಿಗೆ ಬಿದ್ದಿತ್ತು. ಜಾತಿಗಣತಿಗೆ ಅಖಿಲ ಭಾರತ ವೀರಶೈವ ಮಹಾಸಭಾ ಸಂಘ ವಿರೋಧಿಸಿದೆ. ಸರ್ಕಾರ ಜಾತಿಗಣತಿ ವರದಿಯನ್ನು ಪಾರದರ್ಶಕವಾಗಿ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ನನ್ನ ಪ್ರಾರ್ಥನೆಗೆ ಫಲ ಸಿಕ್ಕಿದ್ದಕ್ಕೆ ಘಾಟಿ ಸುಬ್ರಮಣ್ಯ ಸ್ವಾಮಿ ದರ್ಶನ: ಡಿ.ಕೆ ಶಿವಕುಮಾರ್

    ಸರ್ಕಾರದ ಮೂಗಿನ ನೇರಕ್ಕೆ ಜಾತಿಗಣತಿ ವರದಿ ತಯಾರಾಗಿದೆ. ಜಾತಿಗಣತಿ ವರದಿ ಪುನರ್‌ವಿಮರ್ಶೆ ಆಗಬೇಕು. ಅಧಿಕಾರಿಗಳು ಮನೆಮನೆಗೆ ಭೇಟಿ ಕೊಡಬೇಕು. ಜಾತಿಗಣತಿ ವರದಿ ಬಗ್ಗೆ ಈಗಾಗಲೇ ಹಲವರು ಆತಂಕ ಹೊರಹಾಕಿದ್ದಾರೆ. ಜನರ ಭಾವನೆಯನ್ನು ಅರಿತು ಪಾರದರ್ಶಕತೆಯಿಂದ, ಮನೆಮನೆಗೆ ಭೇಟಿ ಕೊಟ್ಟು ಅಧಿಕಾರಿಗಳು ವರದಿ ತಯಾರಿಸಬೇಕು ಎಂದರು. ಇದನ್ನೂ ಓದಿ: ವಕ್ಫ್‌ ಕಾಯ್ದೆಗೆ ವಿರೋಧ, ಬಂಗಾಳ ಧಗಧಗ – 150ಕ್ಕೂ ಹೆಚ್ಚು ಮಂದಿ ಬಂಧನ

    ಆಡಳಿತ ಪಕ್ಷದ ಅನೇಕ ಶಾಸಕರು ಈ ಜಾತಿಗಣತಿ ವರದಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ವಿರೋಧ ಪಕ್ಷದವರು ಜಾತಿಗಣತಿ ವರದಿಯನ್ನು ಬಹಿಷ್ಕಾರ ಮಾಡಿದ್ದಾರೆ. ಮುಖ್ಯಮಂತ್ರಿಗಳು ಪುನರ್ ಪರಿಶೀಲನೆ ನಡೆಸಿ, ಜಾತಿಗಣತಿ ವರದಿಗೆ ಮುಂದಾದರೆ ಜನರಿಗೆ ಒಳಿತಾಗಲಿದೆ. ಇಲ್ಲವಾದರೆ ಜಾತಿ ಸಂಕಷ್ಟಕ್ಕೆ ಕಾರಣವಾಗಲಿದೆ ಎಂದು ಹೇಳಿದರು. ಇದನ್ನೂ ಓದಿ: ಇತ್ಯರ್ಥ ಆಗಿರೋ ಅತ್ಯಾಚಾರ ಪ್ರಕರಣದ ಲಿಸ್ಟ್ ಕೇಳಿದ ವಿದ್ಯಾರ್ಥಿನಿ – ತಡಬಡಾಯಿಸಿದ ಮಹಿಳಾ ಆಯೋಗದ ಅಧ್ಯಕ್ಷೆ

    ಈ ಜಾತಿಗಣತಿ ವರದಿಯನ್ನು ಸಾರಾಸಗಟಾಗಿ ಬಹಿಷ್ಕರಿಸಿ, ತಿರಸ್ಕಾರ ಮಾಡುತ್ತಿದ್ದೇವೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಕೆಲವೊಂದು ಜಾತಿಗೆ ಮೀಸಲು ನೀಡಬೇಕೆನ್ನುವುದು ಸರ್ಕಾರಕ್ಕೆ ಇದೆ. ಆದರೆ ಸಂವಿಧಾನದ ಆಶಯದಂತೆ ಜಾತಿಗಣತಿ ವರದಿ ವಿಚಾರದಲ್ಲಿ ಹೆಜ್ಜೆ ಇಡಬೇಕು. ಸಂವಿಧಾನದಲ್ಲಿ ಯಾವ ಜಾತಿಗೆ ಎಷ್ಟು ಮೀಸಲಾತಿ ನೀಡಬೇಕೆನ್ನುವುದನ್ನು ಉಲ್ಲೇಖವಿದೆ ಎನ್ನುವುದರ ಮೂಲಕ ರಾಜ್ಯ ಸರ್ಕಾರದ ಜಾತಿಗಣತಿ ವರದಿಗೆ ವಿರೋಧ ವ್ಯಕ್ತಪಡಿಸಿದರು.

  • ರಂಭಾಪುರಿ ಶ್ರೀ ಬಳಿ ನೋವು ತೋಡಿಕೊಂಡಿಲ್ಲ, ಆಗಿದ್ದು ಹೇಳಿದ್ದೇನೆ ಅಷ್ಟೇ: ಸಿದ್ದರಾಮಯ್ಯ ಸ್ಪಷ್ಟನೆ

    ರಂಭಾಪುರಿ ಶ್ರೀ ಬಳಿ ನೋವು ತೋಡಿಕೊಂಡಿಲ್ಲ, ಆಗಿದ್ದು ಹೇಳಿದ್ದೇನೆ ಅಷ್ಟೇ: ಸಿದ್ದರಾಮಯ್ಯ ಸ್ಪಷ್ಟನೆ

    ಹಾಸನ: ನಾನು ರಂಭಾಪುರಿ ಶ್ರೀಗಳ ಬಳಿ ಯಾವುದೇ ನೋವು ತೋಡಿಕೊಂಡಿಲ್ಲ, ಪಶ್ಚಾತ್ತಾಪ ಪಟ್ಟಿಲ್ಲ, ಏನಾಯ್ತು ಅಂತ ವಿವರಿಸಿದ್ದೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

    ನಿನ್ನೆ ರಂಭಾಪುರಿ ಶ್ರೀ ಭೇಟಿಯಾಗಿದ್ದ ಸಿದ್ದರಾಮಯ್ಯ ಅವರು, ಧರ್ಮ ಒಡೆಯುವುದು ಉದ್ದೇಶವಾಗಿರಲಿಲ್ಲ. ನನ್ನನ್ನು ಕೆಲವರು ದಾರಿ ತಪ್ಪಿಸಿದ್ದಾರೆ. ಮುಂದೆ ಧರ್ಮ ಒಡೆಯುವ ಕೆಲಸ ಮಾಡಲ್ಲ ಎಂದು ಪಶ್ಚಾತಾಪ ಪಟ್ಟಿದ್ದಾರೆ ಎಂದು ಹೇಳಲಾಗಿತ್ತು. ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿದ ಸಿದ್ದರಾಮಯ್ಯ, ನಾನು ಯಾವುದೇ ಪಶ್ಚಾತಾಪದ ಮಾತುಗಳನ್ನು ಆಡಿಲ್ಲ. ನಾವು ಲಿಂಗಾಯಿತ ಧರ್ಮ ಮಾಡುವಾಗ ಏನೇನು ಮಾಡಿದ್ದೇನೆ ಅಂತ ಹೇಳಿದ್ದೀನಿ ಅಷ್ಟೇ. ಇದು ಅಪಪ್ರಚಾರ ಆಗಿದೆ. ಧರ್ಮದ ಬಗ್ಗೆ ನಾನೇನು ತಲೆ ಕೆಡಿಸಿಕೊಳ್ಳಲು ಹೋಗಿರಲಿಲ್ಲ. ಶ್ಯಾಮನೂರು ಶಿವಶಂಕರಪ್ಪ ಅವರು ವೀರಶೈವ ಧರ್ಮ ಮಾಡಿ ಅಂತ ಅರ್ಜಿ ಕೊಟ್ಟರು ಆಗಿನಿಂದ ಇದು ಶುರುವಾಯ್ತು ಅಷ್ಟೇ ಎಂದು ಹೇಳಿದರು.

    ಬಿಜೆಪಿಯವರು ಹಿಂದುತ್ವದಲ್ಲಿ ನಂಬಿಕೆ ಇಟ್ಟುಕೊಂಡಿದ್ದಾರೆ. ಕೋಮುವಾದ ಅಜೆಂಡಾ ಇಟ್ಟುಕೊಂಡು ಎಲ್ಲವನ್ನೂ ಮಾಡ್ತಾ ಇದ್ದಾರೆ. ಹಿಂದೂ ರಾಷ್ಟ್ರ ಮಾಡಬೇಕೆಂಬುದು ಅವರ ಅಜೆಂಡಾ, ಅದನ್ನು ಮಾಡಲು ಹೋಗ್ತಾ ಇದ್ದಾರೆ. ಆದರೆ ಸಂವಿಧಾನದಲ್ಲಿ ಎಲ್ಲ ಧರ್ಮವನ್ನು ಸಮಾನಾಗಿ ಕಾಣಬೇಕು, ಸಮಾನಾಗಿ ಗೌರವಿಸಬೇಕು. ಎಲ್ಲರಿಗೂ ಕೂಡ ಕಾನೂನು ರಕ್ಷಣೆ ಕೊಡಬೇಕು. ತಾರತಮ್ಯ ಮಾಡಬಾರದು ಅಂಥ ಹೇಳ್ತಾರೆ. ಆದರೆ ಬಿಜೆಪಿಯವರು ತಾರತಮ್ಯ ಮಾಡ್ತಾ ಇದ್ದಾರೆ ಎಂದು ಕಿಡಿಕಾರಿದರು.

    ಮುಖ್ಯಮಂತ್ರಿಯವರು ಮಂಗಳೂರಿಗೆ ಪ್ರವೀಣ್ ನೆಟ್ಟಾರು ಮನೆಗೆ ಹೋಗಿದ್ದರು. ಹೋಗಬೇಕು ಪರಿಹಾರವನ್ನು ಕೊಡಬೇಕು. ಆದರೆ ಇನ್ನಿಬ್ಬರು ಮುಸಲ್ಮಾನರು ಸತ್ತಿದ್ದಾರಲ್ಲ ಅವರ ಮನೆಗು ಹೋಗಬೇಕು, ಪರಿಹಾರವನ್ನು ಕೊಡಬೇಕಲ್ವಾ. ತೆರಿಗೆ ಹಣದಲ್ಲಿ ಸರ್ಕಾರದಿಂದ ಪರಿಹಾರ ಕೊಡ್ತಾ ಇದ್ದಾರೆ, ಎಲ್ಲರಿಗೂ ಕೊಡಬೇಕು. ಮುಸ್ಲಿಂ, ಕ್ರಿಶ್ಚಿಯನ್, ಹಿಂದೂ ಇನ್ಯಾರೆ ಇರಲಿ ಎಲ್ಲರಿಗೂ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಧರ್ಮ ಒಡೆಯುವುದು ನನ್ನ ಉದ್ದೇಶವಲ್ಲ, ಕೆಲವರು ನನ್ನನ್ನ ದಾರಿ ತಪ್ಪಿಸಿದ್ರು: ಸಿದ್ದರಾಮಯ್ಯ

    ನಾನು ಹೋದಲೆಲ್ಲ ಕುಪ್ಪು ಬಾವುಟ ಪ್ರದರ್ಶನ ಮಾಡುತ್ತಿದ್ದಾರೆ. ಇಟ್ ಈಸ್ ಎ ಸ್ಟೇಟ್ ಸ್ಪಾನ್ಸ್‍ರ್ಡ್ ಪ್ರೊಟೆಸ್ಟ್. ಹಿಂದೂ ಮಹಾಸಭಾದ ಸಾವರ್ಕರ್ ಅಂತ ಇದ್ದಾರಲ್ಲ ಅವರ ಬಗ್ಗೆ ಮಾತಾಡಿದೆ ಅಂತ ಕಪ್ಪು ಬಾವುಟ ತೋರಿಸುತ್ತಿದ್ದಾರೆ. ದೇರ್ ಈಸ್ ನೋ ಇಂಟಲಿಜೆನ್ಸ್, ದೇರ್ ಈಸ್ ನೋ ಗವರ್ನಮೆಂಟ್, ದೇರ್ ಈಸ್ ಗೌರ್ನೆನ್ಸ್ ಅಟ್ ಆಲ್. ಇದನ್ನು ನಾನು ಹೇಳಿಲ್ಲ ಮಾಧುಸ್ವಾಮಿ ಹೇಳಿದ್ದಾರೆ. ನಾವು ಸರ್ಕಾರ ನಡೆಸುತ್ತಿಲ್ಲ ಹೇಗೋ ಮ್ಯಾನೇಜ್ ಮಾಡ್ತಿದ್ದೀವಿ ಅಂತ ಇದರ ಅರ್ಥ ಏನು ಎಂದು ಪಶ್ನಿಸಿದರು.

    ಬಿಜೆಪಿಯವರು ಯಾವ ನೀಚ ಕೆಲಸ ಮಾಡಲು ತಯಾರಾಗಿದ್ದಾರೆ, ಅವರು ನೀಚರು. ನಮ್ಮದು ದಾವಣಗೆರೆ ಸಮಾವೇಶ ಆಯ್ತಲ್ಲಾ ಆದಾದ ಮೇಲೆ ಭಯಗೊಂಡಿದ್ದಾರೆ. ಸೋಲುವ ಭಯ ಕಾಡಿದೆ. ಅವರಿಗೆ ಅದಕ್ಕೆ ಇವೆಲ್ಲಾ ಮಾಡ್ತಾ ಇದ್ದಾರೆ. ನಾನು ಆ.26 ರಂದು ಕೊಡಗಿಗೆ ಹೋಗಿ ಎಸ್ಪಿ ವಿರುದ್ಧವಾಗಿ ದೊಡ್ಡ ಪ್ರತಿಭಟನೆ ಮಾಡ್ತಾ ಇದ್ದೀನಿ. ತಿತಿಮತಿಯಲ್ಲಿ 10-15 ಹುಡುಗರು ಸೇರ್ಕಂಡು ಗೋ ಬ್ಯಾಕ್ ಸಿದ್ದರಾಮಯ್ಯ ಅಂಥ ಘೋಷಣೆ ಕೂಗುತ್ತಿದ್ದರು. ಅದಾದ ಮೇಲೆ ಮಡಿಕೇರಿಯಲ್ಲಿ ಇದ್ದರು. ಪೊಲೀಸರು ರೌಂಡ್ ಅಪ್ ಮಾಡಿ ಕರ್ಕಂಡು ಹೋಗಲು ಆಗ್ತಿರ್ಲಿಲ್ವಾ, ಆದೇನ್ ದೊಡ್ಡ ಕೆಲಸನಾ. ಅವರೇ ಬಿಟ್ಟು ಸುಮ್ಮನೆ ನಿಂತಿದ್ದಾರೆ ಎಂದು ಕಿಡಿಕಾರಿದರು.

    Live Tv
    [brid partner=56869869 player=32851 video=960834 autoplay=true]

  • ರಂಭಾಪುರಿ ಶ್ರೀಗಳು ನನಗೂ, ನಮ್ಮ ಪಕ್ಷಕ್ಕೂ ಆಶೀರ್ವಾದ ಮಾಡಿದ್ದಾರೆ: ಸಿದ್ದರಾಮಯ್ಯ

    ರಂಭಾಪುರಿ ಶ್ರೀಗಳು ನನಗೂ, ನಮ್ಮ ಪಕ್ಷಕ್ಕೂ ಆಶೀರ್ವಾದ ಮಾಡಿದ್ದಾರೆ: ಸಿದ್ದರಾಮಯ್ಯ

    ರಾಯಚೂರು: ಇಲ್ಲಿಯವರೆಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ರಂಭಾಪುರಿ ಮಠಕ್ಕೆ ಯಾವತ್ತೂ ಕೂಡ ಬಂದಿಲ್ಲ. ಒಮ್ಮೆ ಭೇಟಿ ನೀಡಬೇಕೆಂದು ರಂಭಾಪುರಿ ಶ್ರೀ ವೀರಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ವೇದಿಕೆ ಕಾರ್ಯಕ್ರಮದಲ್ಲಿ ಆಹ್ವಾನ ನೀಡಿದರು.

    ಜಿಲ್ಲೆಯ ದೇವದುರ್ಗದ ಗಬ್ಬೂರನಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದ ವೇದಿಕೆಯಲ್ಲಿ ಮಾತನಾಡಿದ ಅವರು, ರಂಭಾಪುರಿ ಶ್ರೀಗಳು ನನಗೂ ನಮ್ಮ ಪಕ್ಷಕ್ಕೂ ಆಶೀರ್ವಾದ ಮಾಡಿದ್ದಾರೆ. ಅವರಿಗೆ ಅನಂತ ಅನಂತ ಧನ್ಯವಾದಗಳು ಅಂತ ಸಿದ್ದರಾಮಯ್ಯ ಭಾಷಣದಲ್ಲಿ ಮಾತನಾಡಿದ ಹಿನ್ನೆಲೆ ಅದಕ್ಕೆ ಪ್ರತಿಯಾಗಿ ಮಠಕ್ಕೆ ಬರುವಂತೆ ಶ್ರೀಗಳು ಆಹ್ವಾನ ನೀಡಿದರು.  ಇದನ್ನೂ ಓದಿ: ನವಜೋತ್‌ ಸಿಂಗ್‌ ಸಿಧುಗೆ 1 ವರ್ಷ ಜೈಲು ಶಿಕ್ಷೆ

    ಮದುವೆ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಮತ್ತು ನಾನು ಬಂದಿದ್ದು ಯೋಗ ಯೋಗ ಅಂತ ಶ್ರೀಗಳು ಹೇಳಿದರು. ವೇದಿಕೆ ಮೇಲೆ ಇದ್ದ ರಂಭಾಪುರಿ ಶ್ರೀಗಳ ಬಗ್ಗೆ ಸಿದ್ದರಾಮಯ್ಯ ಮಾತನಾಡಿ, ಶ್ರೀಗಳ ಆಶೀರ್ವಾದ ನಮಗೆ ಇದೆ ಎಂದರು. ಇದನ್ನೂ ಓದಿ: ಜ್ಞಾನವಾಪಿ ಕೇಸ್ ವಾರಣಾಸಿ ಕೋರ್ಟ್‍ಗೆ ವರ್ಗಾವಣೆ – ವಾದ, ಪ್ರತಿವಾದ ಹೇಗಿತ್ತು?

    ಇನ್ನೂ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಗಳು, ಸಮಾಜದಲ್ಲಿ ನಡೆಯುತ್ತಿರುವ ಧರ್ಮ ಮತ್ತು ರಾಜಕೀಯ ಸಂಘರ್ಷಗಳು ಒಳ್ಳೆಯದಲ್ಲ. ಇದನ್ನ ಪ್ರತಿಯೊಬ್ಬ ಮನುಷ್ಯ ಅರ್ಥ ಮಾಡಿಕೊಳ್ಳಬೇಕು. ಪ್ರತಿಯೊಂದು ಧರ್ಮದವರು ಪ್ರೀತಿ ವಿಶ್ವಾಸದಿಂದ ಬಾಳಬೇಕು. ಸೌಹಾರ್ದತೆಯಿಂದ ಬಾಳಿ ಬದುಕಬೇಕು ಅನ್ನೋದು ರಂಭಾಪುರಿ ಪೀಠದ ಧ್ಯೇಯವಾಗಿದೆ ಅಂತ ರಂಭಾಪುರಿ ಶ್ರೀಗಳು ತಿಳಿಸಿದರು.

  • ಪ್ರಶ್ನೆ ಕೇಳುತ್ತಿರುವ ಬಂಡಾಯ ಸಾಹಿತಿಗಳಿಂದ ಸಂಬಂಧ ಛಿದ್ರ: ರಂಭಾಪುರಿ ಶ್ರೀ

    ಪ್ರಶ್ನೆ ಕೇಳುತ್ತಿರುವ ಬಂಡಾಯ ಸಾಹಿತಿಗಳಿಂದ ಸಂಬಂಧ ಛಿದ್ರ: ರಂಭಾಪುರಿ ಶ್ರೀ

    ಧಾರವಾಡ: ಹಿಂದೂ ಸಮಾಜದ ಪ್ರತಿ ಆಚರಣೆಗಳನ್ನು ಪ್ರಶ್ನಿಸುವ ಬಂಡಾಯ ಸಾಹಿತಿಗಳಿಂದ ಸಂಬಂಧ ಛಿದ್ರಗೊಳ್ಳುತ್ತಿದೆ ಎಂದು ರಂಭಾಪುರಿ ಶ್ರೀ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವದಲ್ಲಿ ಮಾತನಾಡಿದ ಅವರು, ಕೆಲ ಮಠಾಧೀಶರು ಮತ್ತು ನಾಸ್ತಿಕ ಬಂಡಾಯ ಸಾಹಿತಿಗಳು ತಪ್ಪು‌ ಮಾರ್ಗದರ್ಶನ ನೀಡುತ್ತಿದ್ದಾರೆ ಎಂದರು.

    ಹಣೆಗೆ ಕುಂಕುಮ ಯಾಕೆ? ತಲೆಗೆ ಹೂವು ಯಾಕೆ?, ದೇವರಿಗೆ ಹಾಲಿನ ಅಭಿಷೇಕ ಯಾಕೆ? ಎಂದು ಪ್ರಶ್ನೆ ಕೇಳುತ್ತಾರೆ. ಮದುವೆಯಲ್ಲಿ ಮಂಗಳಾತಕ್ಷತೆ ಪ್ರಶ್ನಿಸುತ್ತಾರೆ. ಅವರು ಇದನ್ನೆಲ್ಲ ಮಾಡಬೇಡಿ ಎನ್ನುತ್ತಾರೆ. ಕೊನೆಗೆ ನಮ್ಮ ಮತ್ತು ನಿಮ್ಮ ಸಂಬಂಧ ಛಿದ್ರ ಮಾಡುತ್ತಿದ್ದಾರೆ ಎಂದು ಹೇಳಿದರು.  ಇದನ್ನೂ ಓದಿ: ಪ್ರಾಣಿ ವಧೆ ಮಾಡಿ ತಿನ್ನುವುದರಲ್ಲಿ ಮಾನವೀಯತೆ ಎಲ್ಲಿಂದ ಬಂತು: ದೇವನೂರು

    ಯಾರೇ ಏನೇ ಪ್ರಯತ್ನ ಮಾಡಿದರೂ ಮೂಲ ಧರ್ಮದ ಸ್ವರೂಪ ಬದಲಾಯಿಸಲು ಆಗದು. ಅದು ಎಂದೂ ಸಾಧ್ಯವಾಗದ ಭದ್ರ ಬುನಾದಿ ಜಗದ್ಗುರು ಪಂಚಾಚಾರ್ಯರು ಹಾಕಿದ್ದಾರೆ. ಇದನ್ನು ಅನೇಕರು ನಮ್ಮವರು ಹೇಳುತ್ತಲೇ ಇದ್ದಾರೆ. ಆದರೆ ಅಂಥವರಿಗೆ ಧ್ವನಿ ಇಲ್ಲದಂತಾಗಿದೆ. ಅಂಥವರಿಗೆ ನಾವು ಈಗ ಧ್ವನಿ ಕೊಡಬೇಕಿದೆ ಎಂದರು.

    ರಷ್ಯಾ-ಯಕ್ರೇನ್ ಯುದ್ಧ ವಿಚಾರವಾಗಿ ರಂಭಾಪುರಿ ಜಗದ್ಗುರುಗಳು ಮಾತನಾಡಿ, ವಿಜ್ಞಾನದಲ್ಲಿ ಬಹಳ ಬೆಳೆದಿದ್ದೇವೆ, ಬೆಳೆದಷ್ಟು ನಮ್ಮ ಸಂಸ್ಕೃತಿ ನಿರ್ಲಕ್ಷ್ಯ ಮಾಡುತ್ತಿದ್ದೇವೆ. ವಿಜ್ಞಾನ ಮನುಷ್ಯನ ಜೀವನ ವಿಕಾಸಕ್ಕೆ ಕಾರಣ ಆಗಬೇಕು. ಮನುಕುಲದ ವಿನಾಶಕ್ಕೆ ಕಾರಣ ಆಗಬಾರದು ಎಂದು ಹೇಳಿದರು. ಇದನ್ನೂ ಓದಿ: ಅಚ್ಚೇ ದಿನ್ ಕೊಡ್ತೀವಿ ಎಂದ ಕೇಂದ್ರ ನರಕ ದಿನ ತೋರಿಸುತ್ತಿದೆ: ಡಿಕೆಶಿ

    ರಷ್ಯಾ-ಉಕ್ರೇನ್ ದೇಶದ ಯುದ್ಧ ನಡೆಯುತ್ತಿದೆ. ಎಷ್ಟೋ ಜನ ಸಾವನ್ನಪ್ಪಿದ್ದಾರೆ. ಎಷ್ಟೋ ಜನ ನೋವು ಅನುಭವಿಸುತ್ತಿದ್ದಾರೆ. ದೇಶದ ಮುಖ್ಯಸ್ಥರುಗಳು ಜನ ಕಲ್ಯಾಣಕ್ಕೆ ವಿಜ್ಞಾನ ಬಳಸಬೇಕು ಎಂದು ಶ್ರೀಗಳು ಹೇಳಿದರು.

  • ಸಿಎಂ ಧರ್ಮ ಒಡೆಯುವ ಕೆಲಸ ಮಾಡಿದ್ದಾರೆ: ರಂಭಾಪುರಿ ಶ್ರೀ

    ಸಿಎಂ ಧರ್ಮ ಒಡೆಯುವ ಕೆಲಸ ಮಾಡಿದ್ದಾರೆ: ರಂಭಾಪುರಿ ಶ್ರೀ

    ಹುಬ್ಬಳ್ಳಿ: ಪ್ರತ್ಯೇಕ ಲಿಂಗಾಯತ ಧರ್ಮ ಕುರಿತ ನಾಗಮೋಹನ ದಾಸ್ ಸಮಿತಿ ವರದಿಯನ್ನು ಒಪ್ಪಿದ ಕೇಂದ್ರಕ್ಕೆ ಶಿಫಾರಸ್ಸು ಮಾಡುವ ನಿರ್ಧಾರವನ್ನು ಕೈಗೊಂಡ ಹಿನ್ನೆಲೆಯಲ್ಲಿ ರಂಭಾಪುರಿ ಶ್ರೀ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ರಂಭಾಪುರಿ ಶ್ರೀಗಳು, ಮುಖ್ಯಮಂತ್ರಿಗಳು ಧರ್ಮ ಒಡೆಯುವ ಕೆಲಸ ಮಾಡಿದ್ದಾರೆ. ಲಿಂಗಾಯತ ವೀರಶೈವ ಧರ್ಮವನ್ನ ಛಿದ್ರ ಮಾಡಿದ್ದಾರೆ. ಇವರಿಗೆ ಜನರು ತಕ್ಕಪಾಠ ಕಲಿಸುತ್ತಾರೆ. ಅತ್ಯಂತ ಅವೈಜ್ಞಾನಿಕ ಹಾಗೂ ರಾಜಕೀಯ ಪ್ರೇರಿತರಾಗಿ ನಿರ್ಧಾರ ಕೈಗೊಂಡಿದ್ದಾರೆ ಎಂದು ಕಿಡಿಕಾರಿದರು.

    ಸಿಎಂ ಸಿದ್ದರಾಮಯ್ಯ ಅವರು ಪ್ರತ್ಯೇಕ ಧರ್ಮ ಸ್ಥಾಪನೆ ಮಾಡುವ ವಿಚಾರದಲ್ಲಿ ಅತುರದ ನಿರ್ಧಾರ ಮಾಡಿದ್ದಾರೆ. ಕ್ಯಾಬಿನೆಟ್ ನಿರ್ಧಾರವನ್ನು ವೀರಶೈವ ಲಿಂಗಾಯತ ಧರ್ಮ ರಾಷ್ಟ್ರೀಯ ಮಠ ಪರಿಷತ್ ಖಂಡಿಸುತ್ತದೆ. ಅಲ್ಲದೇ ವೀರಶೈವ ಮಠಾಧೀಶರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ವೀರಶೈವದಿಂದ ಲಿಂಗಾಯತವನ್ನು ಯಾರು ಬೇರ್ಪಡಿಸಲು ಸಾಧ್ಯವಿಲ್ಲ. ಧರ್ಮವನ್ನು ಒಡೆಯುವ ಕೆಲಸ ಮಾಡಿದ ರಾಜಕಾರಣಿಗಳಿಗೆ ಜನರೇ ತಕ್ಕ ಪಾಠ ಕಲಿಸುತ್ತಾರೆ. ರಾಜ್ಯದ ಶಿಫಾರಸಿಗೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸುವುದಿಲ್ಲ ಎಂದು ಹೇಳಿದರು.

    ಸಮಿತಿಯ ಮುಂದೆ ಈಗಾಗಲೇ ನಾವು ಸಾವಿರಾರು ಪುಟಗಳ ಮಾಹಿತಿ ನೀಡಿದ್ದೆವು. ಅಲ್ಲದೇ ಸಿಎಂ ಸಿದ್ದರಾಮಯ್ಯ ಅವರು ಸಹ ವೀರಶೈವ ಹಾಗೂ ಲಿಂಗಾಯತ ಧರ್ಮದ ಎಲ್ಲರು ಒಟ್ಟಿಗೆ ಬಂದರೆ ಮಾತ್ರ ಶಿಫಾರಸು ಮಾಡುವ ಕುರಿತು ಹೇಳಿದ್ದರು. ಆದರೆ ಇಂದು ಅವರು ತಮ್ಮ ಮಾತನ್ನು ತಪ್ಪಿದ್ದಾರೆ. ಅವರ ಮಾತಿನ ಮೇಲೆ ಅವರಿಗೆ ನಂಬಿಕೆ ಇಲ್ಲ ಎಂದು ಆರೋಪಿಸಿದರು.

    ಸಮಿತಿಗೆ ಸಾವಿರಾರು ಪುಟ ವೀರಶೈವ ಇತಿಹಾಸದ ಕುರಿತು ಮಾಹಿತಿ ನೀಡಲಾಗಿದೆ. ಆದರೆ ಇಲ್ಲಿ ಏಕಪಕ್ಷೀಯ ನಿರ್ಧಾರ ಮಾಡಿ. ಸ್ವಾತಂತ್ರ್ಯ ಲಿಂಗಾಯತರು ನೀಡಿದ ಮಾಹಿತಿಯನ್ನೇ ಸಮಿತಿ ನೀಡಿದೆ ಎಂದರು.

    ಮುಂದಿನ ದಿನಗಳಲ್ಲಿ ನಮ್ಮ ಹೋರಾಟ ಮುಂದುವರೆಯುತ್ತದೆ. ವೀರಶೈವ ಮಠದ ರಾಷ್ಟ್ರೀಯ ಪರಿಷತ್ ಹಾಗೂ ವೀರಶೈವ ಮುಂಖಡರ ಸಮಾವೇಶ ಕರೆದು ಚರ್ಚೆ ನಡೆಸಲಾಗುತ್ತದೆ. ಅಲ್ಲದೇ ಈ ಕುರಿತು ಕೇಂದ್ರ ಸರ್ಕಾರಕ್ಕೂ ಮಾಹಿತಿ ಸಲ್ಲಿಸಲಾಗುತ್ತದೆ. ಕಾನೂನು ಹೋರಾಟಕ್ಕೂ ನಾವು ಸಿದ್ಧರಾಗಿದ್ದೇವೆ ಎಂದು ತಿಳಿಸಿದರು.   ಇದನ್ನು ಓದಿ: ಲಿಂಗಾಯತ, ವೀರಶೈವ ಪ್ರತ್ಯೇಕ ಧರ್ಮಕ್ಕೆ ಒಪ್ಪಿಗೆ – ಕೇಂದ್ರಕ್ಕೆ ಶೀಘ್ರವೇ ಸಿದ್ದು ಸರ್ಕಾರದಿಂದ ಶಿಫಾರಸ್ಸು