Tag: rambhapuri shree

  • ರಂಭಾಪುರಿ ಶ್ರೀಗಳಿಗೂ ಕಾಂಗ್ರೆಸ್ ಪಕ್ಷಕ್ಕೂ ಏನ್ ಸಂಬಂಧ? – ಸತೀಶ್ ಜಾರಕಿಹೊಳಿ ಟಾಂಗ್

    ರಂಭಾಪುರಿ ಶ್ರೀಗಳಿಗೂ ಕಾಂಗ್ರೆಸ್ ಪಕ್ಷಕ್ಕೂ ಏನ್ ಸಂಬಂಧ? – ಸತೀಶ್ ಜಾರಕಿಹೊಳಿ ಟಾಂಗ್

    ಬೆಂಗಳೂರು: ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ (DK Shivakumar) ಸಿಎಂ ಆಗಲು ಅವಕಾಶ ಮಾಡಿಕೊಡಬೇಕು ಎಂಬ ರಂಭಾಪುರಿ ಶ್ರೀಗಳ (Rambhapuri Shree) ಹೇಳಿಕೆಗೆ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ತಿರುಗೇಟು ನೀಡಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ಪ್ರತಿಕ್ರಿಯಿಸಿದ ಅವರು, ರಂಭಾಪುರಿ ಶ್ರೀಗಳಿಗೂ ಅದಕ್ಕೂ ಏನು ಸಂಬಂಧ? ಅದು ಪಾರ್ಟಿಗೆ ಸಂಬಂಧಪಟ್ಟ ವಿಚಾರ. ಸ್ವಾಮೀಜಿಗಳಿಗೂ ಮುಖ್ಯಮಂತ್ರಿ ಬದಲಾವಣೆಗೆ ಸಂಬಂಧ ಇರುವುದಿಲ್ಲ. ಅವರ ಕಾರ್ಯವ್ಯಾಪ್ತಿ ಬೇರೆ ನಮ್ಮ ಕಾರ್ಯ ವ್ಯಾಪ್ತಿ ಬೇರೆ ಎಂದು ಟಾಂಗ್ ಕೊಟ್ಟರು.ಇದನ್ನೂ ಓದಿ: ಖಾಸಗಿ ಮೆಡಿಕಲ್ ಲಾಬಿಗೆ ಮಣಿದ ಸರ್ಕಾರ, ಹೈಕೋರ್ಟ್ ಆದೇಶ ಸ್ವಾಗತಾರ್ಹ: ಆರ್ ಅಶೋಕ್

    ಸಿಎಂ ಆಯ್ಕೆ ಮಾಡುವುದು ಶಾಸಕರು ಮತ್ತು ಹೈಕಮಾಂಡ್. ಸ್ವಾಮೀಜಿಗಳು ಅವರ ಪರ ಹೇಳಿದರೆ, ಇವರೇ ಮುಂದುವರಿಯಬೇಕೆಂದು ಈ ಕಡೆ ಹತ್ತು ಜನ ಹೇಳುತ್ತಾರೆ. ಸಮಾಜ ಕಟ್ಟುವುದು, ಆಶೀರ್ವಾದ ಮಾಡುವುದು ಸ್ವಾಮೀಜಿಯವರ ಕೆಲಸ. ಈ ರೀತಿಯಾದ ಹೇಳಿಕೆಗಳನ್ನು ಸ್ವಾಮೀಜಿಗಳು ಕೊಡಬಾರದು. ಅವರಿಗೆ ಸಂಬಂಧಪಟ್ಟಿದ್ದಲ್ಲ ಎಂದರು.

    ಇದೇ ವೇಳೆ ಗ್ಯಾರಂಟಿಗಳಿಂದ ಜನ ಸೋಮಾರಿ ಆಗುತ್ತಿದ್ದಾರೆ ಎಂಬ ರಂಭಾಪುರಿ ಶ್ರೀಗಳ ಹೇಳಿಕೆಗೆ ಪ್ರತಿಕ್ರಿಯಿಸಿ, ಸರಿಯಾದ ಉತ್ತರ ಸಿಗಬೇಕಾದರೆ ಜನರನ್ನು ಕೇಳಬೇಕು. ನಮ್ಮ ಪಕ್ಷದ ಕಾರ್ಯಕ್ರಮವನ್ನು ನಾವು ಸಮರ್ಥನೆ ಮಾಡಿಕೊಳ್ಳುತ್ತೇವೆ. ಪಕ್ಷದವರು ತಮ್ಮ ಕಾರ್ಯಕ್ರಮಗಳನ್ನು ಸಮರ್ಥನೆ ಮಾಡಿಕೊಳ್ಳುತ್ತಾರೆ. ಒಂದು ಸಾವಿರ ಜನರನ್ನು ಸಂದರ್ಶನ ಮಾಡಿದ್ರೆ ಉತ್ತರ ಸಿಗಲಿದೆ. ಪಕ್ಷ ನಿರ್ಧಾರ ನಾವು ಸಮರ್ಥನೆ ಮಾಡುತ್ತೇವೆ. ಆದರೆ ಜನರ ಉತ್ತರವೇ ಫೈನಲ್ ಎಂದು ಹೇಳಿದರು.ಇದನ್ನೂ ಓದಿ:  ಸಿಎಂ ಬದಲಾವಣೆ ವಿಚಾರದಲ್ಲಿ ಗೊಂದಲ ಏಕೆ? ಹೈಕಮಾಂಡ್ ಏನೂ ಇಲ್ಲ ಅಂದಿದೆ: ಸತೀಶ್ ಜಾರಕಿಹೊಳಿ

  • ರಂಭಾಪುರಿ ಶ್ರೀಗಳು ಹೇಳಿದ ಮಾತು ನಿಜ ಆಗುತ್ತೆ, ಭಗವಂತನೇ ಶ್ರೀಗಳ ಬಾಯಲ್ಲಿ ಇದನ್ನು ಹೇಳಿಸಿರಬಹುದು: ಇಕ್ಬಾಲ್ ಹುಸೇನ್

    ರಂಭಾಪುರಿ ಶ್ರೀಗಳು ಹೇಳಿದ ಮಾತು ನಿಜ ಆಗುತ್ತೆ, ಭಗವಂತನೇ ಶ್ರೀಗಳ ಬಾಯಲ್ಲಿ ಇದನ್ನು ಹೇಳಿಸಿರಬಹುದು: ಇಕ್ಬಾಲ್ ಹುಸೇನ್

    ರಾಮನಗರ: ಶ್ರೀಗಳು ಹೇಳಿದ ಮಾತು ನಿಜ ಆಗುತ್ತದೆ. ಪವಿತ್ರವಾದ ನಾಲಿಗೆಯಲ್ಲಿ ಈ ವಿಚಾರವನ್ನು ನುಡಿದಿದ್ದಾರೆ. ಭಕ್ತಿಯಿಂದ ದೇವರ ಧ್ಯಾನ ಮಾಡುವ ಶ್ರೀಗಳು ಇದನ್ನ ಹೇಳಿದ್ದಾರೆ. ಭಗವಂತನೇ ಶ್ರೀಗಳ ಬಾಯಲ್ಲಿ ಇದನ್ನ ಹೇಳಿಸಿರಬಹುದು ಎಂದು ಶಾಸಕ ಇಕ್ಬಾಲ್ ಹುಸೇನ್ (Iqbal Hussain)ಹೇಳಿದ್ದಾರೆ.

    ಡಿಸಿಎಂ ಡಿಕೆಶಿಗೆ (DK Shivakumar) ಉನ್ನತ ಸ್ಥಾನ ಸಿಗಬೇಕು ಎಂಬ ರಂಭಾಪುರಿ ಶ್ರೀ (Rambhapuri Shri) ಹೇಳಿಕೆ ವಿಚಾರ ಕುರಿತು ರಾಮನಗರದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಸಾಕಷ್ಟು ಶ್ರೀಗಳು, ಕಾರ್ಯಕರ್ತರು ಇದನ್ನ ಹೇಳುತ್ತಿದ್ದಾರೆ. ನಾನು ಕೂಡಾ ಹೇಳಿದ್ದೆ, ಅದಕ್ಕೆ ಈಗಲೂ ಬದ್ಧ. ಶರಣರು ಭಕ್ತಿಯಿಂದ ಅವರ ಬಾಯಲ್ಲಿ ನುಡಿದಿರೋದು ಫಲ ಕೊಡುತ್ತದೆ. ಕೋಟಿಜನ ಹೇಳೋದು ಒಂದೇ, ಶ್ರೀಗಳು ಹೇಳೋದು ಒಂದೇ. ಭಗವಂತ ಎಲ್ಲರ ಮಾತನ್ನ ಕೇಳಲು ಸಾಧ್ಯವಿಲ್ಲ, ಅವರಿಗೆ ಹತ್ತಿವಿರುವವರ ಪ್ರಾರ್ಥನೆ ಕೇಳ್ತಾನೆ. ಹಾಗಾಗಿ ಅವರ ನಾಲಿಗೆಯಲ್ಲಿ ಈ ಮಾತು ಬಂದಿದೆ ಎಂದು ತಿಳಿಸಿದರು. ಇದನ್ನೂ ಓದಿ: ಭಾಗಶಃ ಭರ್ತಿಯಾದ ತುಂಗಭದ್ರಾ ಜಲಾಶಯ

    ಇನ್ನೂ ಸಿಎಂ ಸಿದ್ದರಾಮಯ್ಯಗೆ ಎಐಸಿಸಿ ಒಬಿಸಿ ಸದಸ್ಯ ಸ್ಥಾನ ನೀಡಿರೋ ವಿಚಾರ ಕುರಿತು ಮಾತನಾಡಿ, ಸಿದ್ದರಾಮಯ್ಯಗೆ ಹಿಂದುಳಿದ ವರ್ಗದ ಮೇಲೆ ಬಹಳ ಪ್ರೀತಿ. ಅಲ್ಪಸಂಖ್ಯಾತರ ಸಮುದಾಯದ ಸೇರಿ ಸಣ್ಣಪುಟ್ಟ ಸಮುದಾಯಕ್ಕೆ ಸಾಕಷ್ಟು ಅನುಕೂಲ ಮಾಡಿದ್ದಾರೆ. ಆ ಜಾಗದಲ್ಲಿ ಅಂತವರಿದ್ದರೆ ಮಾತ್ರ ಹಿಂದುಳಿದ ವರ್ಗಕ್ಕೆ ಅನುಕೂಲ. ಸಿದ್ದರಾಮಯ್ಯನರಿಗೆ ಬಹಳ ಅನುಭವ ಇದೆ, ದಾಖಲೆ ಪ್ರಮಾಣದ ಬಜೆಟ್ ಮಂಡಿಸಿದ್ದಾರೆ. ಹಾಗಾಗಿ ಆ ಸ್ಥಾನಕ್ಕೆ ಸೂಕ್ತವಾದ ವ್ಯಕ್ತಿಯನ್ನ ಎಐಸಿಸಿ ಆಯ್ಕೆ ಮಾಡಿದೆ. ಇದಕ್ಕೆ ಬಿಜೆಪಿ ನಾಯಕರು ಟೀಕೆ ಮಾಡೋದು ಸಹಜ. ವಿರೋಧ ಪಕ್ಷದ ಕೆಲಸವೇ ಟೀಕೆ ಮಾಡೋದು. ಅಧಿಕಾರ ಇದ್ದಾಗ ಅವರು ಅಭಿವೃದ್ಧಿ ಮಾಡಲಿಲ್ಲ, ಈಗ ಕೇವಲ ಟೀಕೆ, ಟಿಪ್ಪಣಿ ಮಾಡುತ್ತಾರೆ. ಅವರ ಕೆಲಸ ಅವರು ಮಾಡಲಿ. ಸಿದ್ದರಾಮಯ್ಯನವರು ನಮ್ಮ ಮುಖ್ಯಮಂತ್ರಿಗಳು. ಹಿಂದುಳಿದ ವರ್ಗದ ಬಗ್ಗೆ ವಿಶೇಷ ಕಾಳಜಿ ಹೊಂದಿರುವವರು. ಅವರಿಗೆ ಎರಡೂ ಸ್ಥಾನವನ್ನ ನಿಭಾಯಿಸುವ ಸಾಮರ್ಥ್ಯ ಇದೆ ಎಂದರು. ಇದನ್ನೂ ಓದಿ: ಸ್ವಾಮೀಜಿಗಳು ಹೇಳಿಕೆ‌ ನೀಡುವುದು ಅವರ ವೈಯಕ್ತಿಕ ಅಭಿಪ್ರಾಯ – ರಂಭಾಪುರಿ ಶ್ರೀ ಹೇಳಿಕೆಗೆ ಸಚಿವ ಚೆಲುವರಾಯಸ್ವಾಮಿ ಪ್ರತಿಕ್ರಿಯೆ

  • ಲಿಂಗಾಯತರನ್ನು ಸಿಎಂ ಮಾಡಿ, ಆಗದೇ ಇದ್ದರೆ ಡಿಸಿಎಂ ಮಾಡಿ: ರಂಭಾಪುರಿ ಶ್ರೀ

    ಲಿಂಗಾಯತರನ್ನು ಸಿಎಂ ಮಾಡಿ, ಆಗದೇ ಇದ್ದರೆ ಡಿಸಿಎಂ ಮಾಡಿ: ರಂಭಾಪುರಿ ಶ್ರೀ

    ಕಲಬುರಗಿ: ಡಿಕೆ ಶಿವಕುಮಾರ್‌ಗೆ (DK Shivakumar) ಅಧಿಕಾರ ಹಸ್ತಾಂತರಿಸಬೇಕು ಎಂಬ ಚಂದ್ರಶೇಖರನಾಥ ಸ್ವಾಮೀಜಿ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಬೆನ್ನಲ್ಲೇ ನಿನ್ನೆ ಶ್ರೀಶೈಲ ಶ್ರೀಗಳು, ಇಂದು ರಂಭಾಪುರಿ ಶ್ರೀಗಳು (Rambhapuri Shree) ಲಿಂಗಾಯತ ಸಿಎಂ ದಾಳ ಉರುಳಿಸಿದ್ದಾರೆ.

    ರಾಜ್ಯದಲ್ಲಿ ಒಂದು ವೇಳೆ ಸಿಎಂ ಸ್ಥಾನ ಬದಲಾವಣೆ ಸನ್ನಿವೇಶ ಬಂದರೆ ವೀರಶೈವ ಲಿಂಗಾಯತ (Veershaiv Lingayat) ಸಮಾಜಕ್ಕೆ ಕಾಂಗ್ರೆಸ್ ಹೈಕಮಾಂಡ್‌ (Congress High Command) ಆದ್ಯತೆ ನೀಡಬೇಕೆಂದು ಬಾಳೆ ಹೊನ್ನೂರು ರಂಭಾಪುರಿ ಪ್ರಸನ್ನ ರೇಣುಕ ಡಾ.ವೀರ ಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಯೋಗ್ಯತೆ ಇಲ್ಲ ಅಂದ್ರೆ ಜವಾಬ್ದಾರಿ ಬಿಟ್ಟು ಚುನಾವಣೆಗೆ ಹೋಗುವುದು ವಾಸಿ: ಸಚಿವ ರಾಜಣ್ಣಗೆ ಡಿಕೆಸು ತಿರುಗೇಟು

    ಒಂದು ವೇಳೆ ಸಿಎಂ ಸ್ಥಾನ ಲಿಂಗಾಯತರಿಗೆ ನೀಡಲು ಆಗದೇ ಇದ್ದರೆ ಡಿಸಿಎಂ ಸ್ಥಾನವಾದರೂ ನೀಡಬೇಕು. ಸದ್ಯ ಸರ್ಕಾರದಲ್ಲಿ ವೀರಶೈವ ಲಿಂಗಾಯತರಿಗೆ ಒಳ್ಳೆಯ ಸಚಿವ ಸ್ಥಾನಗಳನ್ನು ನೀಡಿಲ್ಲ. ಸಿಎಂ ಅವರು ಕೆಲವೇ ಸಮುದಾಯದ ಜನರಿಗೆ ತುಷ್ಟೀಕರಣ ಮಾಡದೇ ಎಲ್ಲರನ್ನು ಸಮಾನಾಗಿ ಕಾಣಬೇಕಾಗಿದೆ ಎಂದರು. ಇದನ್ನೂ ಓದಿ: ಯಾರಾದರೂ ಆರಾಮಾಗಿ ಇರುತ್ತಾರಾ: ದರ್ಶನ್‌ ಭೇಟಿಯ ನಂತರ ರಕ್ಷಿತಾ ಪ್ರೇಮ್‌ ಭಾವುಕ

    ಕಾಂಗ್ರೆಸ್‌ನಲ್ಲಿನ ಕೆಲವು ಹಗರಣ, ಬೆಲೆ ಏರಿಕೆಯಿಂದ ಜನರಿಂದ ಸರ್ಕಾರ ಸುಲಿಗೆ ಹೆಚ್ಚಾಗಿ ಮಾಡುತ್ತಿದೆ. ಇನ್ನು ಗ್ಯಾರಂಟಿ ಯೋಜನೆಗಳಿಂದ (Congress Guarantee) ಅಭಿವೃದ್ಧಿಗೆ ಹಣ ಇಲ್ಲ ಅಂತಾ ಹೇಳುತ್ತಿದ್ದಾರೆ. ಸರ್ಕಾರ ಜನರನ್ನ ದುಡಿಯುವಂತೆ ಮಾಡಬೇಕು ಸೋಮಾರಿತನ ಬರುವಂತೆ ಮಾಡಬಾರದು, ಪಕ್ಷದ ಜನಪ್ರಿಯರತೆ ಹೆಚ್ವಿಸಿಕೊಳ್ಳಲು ಅಗ್ಗದ ಪ್ರಚಾರ ಮಾಡಿ ಗ್ಯಾರಂಟಿಗಳಿಂದ ಹೊಡೆತ ಬಿದ್ದಿದೆ ಅಂತಾ ಗ್ಯಾರಂಟಿ ಯೋಜನೆ ವಿರುದ್ಧ ಸಹ ರಂಭಾಪುರಿ ಶ್ರೀ ಆಕ್ರೋಶ ವ್ಯಕ್ತಪಡಿಸಿದರು.

     

  • ರಂಭಾಪುರಿ ಶ್ರೀಗಳ ಕಾರಿನತ್ತ ಚಪ್ಪಲಿ ಎಸೆತ ಪ್ರಕರಣ- 59 ಮಂದಿ ವಿರುದ್ಧ ಎಫ್‍ಐಆರ್

    ರಂಭಾಪುರಿ ಶ್ರೀಗಳ ಕಾರಿನತ್ತ ಚಪ್ಪಲಿ ಎಸೆತ ಪ್ರಕರಣ- 59 ಮಂದಿ ವಿರುದ್ಧ ಎಫ್‍ಐಆರ್

    ಬಾಗಲಕೋಟೆ: ರಂಭಾಪುರಿ ಶ್ರೀಗಳ (Rambhapuri Shree) ಕಾರಿನ ಕಡೆ ಚಪ್ಪಲಿ ಎಸೆತ ಹಾಗೂ ಕಾರಿಗೆ ತಡೆ ಒಡ್ಡಿದ ವಿಚಾರಕ್ಕೆ ಸಂಬಂಧಿಸಿದಂತೆ ಶ್ರೀಗಳ ಭಕ್ತರು ಕಲಾದಗಿ ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದೀಗ ಮಹಿಳೆಯರು ಸೇರಿದಂತೆ 59 ಜನರ ವಿರುದ್ಧ ಎಫ್‍ಐಆರ್ (FIR) ದಾಖಲಾಗಿದೆ.

    ತಾಲೂಕಿನ (Bagalkote) ಕಲಾದಗಿ ಗ್ರಾಮದಲ್ಲಿ ಮಹಿಳೆಯೊಬ್ಬಳು ಶನಿವಾರ ಉದಗಟ್ಟಿ ಗ್ರಾಮಕ್ಕೆ ಅಡ್ಡಪಲ್ಲಕ್ಕಿ ಉತ್ಸವಕ್ಕೆ ತೆರಳುತ್ತಿದ್ದ ರಂಭಾಪುರಿ ಶ್ರೀಗಳ ಕಾರಿನತ್ತ ಚಪ್ಪಲಿ ಎಸೆದಿದ್ದಳು. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಇದೀಗ ಶ್ರೀಗಳ ಭಕ್ತರು ಈ ವಿಚಾರಕ್ಕೆ ಆಕ್ರೋಶಗೊಂಡಿದ್ದು, ಮಠದ ವಿವಾದ ಕೋರ್ಟ್ ನಲ್ಲಿರುವಾಗ ಕಾನೂನು ಸುವ್ಯವಸ್ಥೆ ಹಾಳು ಮಾಡಿದ್ದಾರೆ. ಶಾಂತಿ ಕದಡುವ ಉದ್ದೇಶದಿಂದ ಶ್ರೀಗಳಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ರಂಭಾಪುರಿ ಶ್ರೀಗಳ ಕಾರಿಗೆ ಚಪ್ಪಲಿ ಎಸೆತ

    ಈ ಸಂಬಂಧ ಬಾಗಲಕೋಟೆ ಎಸ್‍ಪಿ ಅಮರನಾಥ ರೆಡ್ಡಿ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

    ಏನಿದು ಗಲಾಟೆ?:
    ಕಲಾದಗಿಯ ಗುರುಲಿಂಗೇಶ್ವರ ಪಂಚಗ್ರಹ ಸಂಸ್ಥಾನ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಲಿಂಗೈಕ್ಯರಾದ ಬಳಿಕ ಅವರ ಉತ್ತರಾಧಿಕಾರಿಯನ್ನಾಗಿ ರಂಭಾಪುರಿ ಶ್ರೀಗಳು ಮಧ್ಯಸ್ಥಿಕೆ ವಹಿಸಿ ತಮ್ಮದೇ ಪೀಠದ ಶಿಷ್ಯರಾಗಿರುವ ಕೆ.ಎಮ್ ಗಂಗಾಧರ ಸ್ವಾಮೀಜಿಯನ್ನ ನೇಮಕ ಮಾಡಿದ್ದರು. ಗ್ರಾಮಸ್ಥರ ಸಮ್ಮುಖದಲ್ಲಿ ಉತ್ತರಾಧಿಕಾರಿ ನೇಮಕ ಮಾಡದೇ ಏಕಪಕ್ಷೀಯವಾಗಿ ರಂಭಾಪುರಿ ಶ್ರೀಗಳು ನಿರ್ಧಾರ ತೆಗೆದುಕೊಂಡಿದ್ದಾರೆಂದು ಕೆಲ ಗ್ರಾಮಸ್ಥರು ಆರೋಪಿಸಿದ್ದರು. ನಂತರ ರಂಭಾಪುರಿ ಶ್ರೀಗಳ ವಿರೋಧಿ ಬಣ ನೂತನ ಸ್ವಾಮೀಜಿಯನ್ನಾಗಿ ಮಹಾಂತ ದೇವರು ಸ್ವಾಮೀಜಿಯನ್ನ ಕರೆತಂದು ಅದ್ಧೂರಿ ಮೆರವಣಿಗೆ ಮಾಡಿತ್ತು. ಪರ, ವಿರೋಧ ಬಣಗಳು ಹುಟ್ಟಿಕೊಂಡು ಪ್ರಕರಣ ಈಗ ಜಿಲ್ಲಾ ನ್ಯಾಯಾಲಯದ ಮೆಟ್ಟಿಲೇರಿದೆ.

    ಶನಿವಾರ, ಗಂಗಾಧರ ಸ್ವಾಮೀಜಿ ಮಠದ ಹೊಲದ ಉಳುಮೆಗೆ ಮುಂದಾದಾಗ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದರು. ಮಠದ ಒಟ್ಟು 72 ಎಕರೆ ಭೂಮಿಯನ್ನು ರಂಭಾಪುರಿ ಶ್ರೀ ಮತ್ತು ಗಂಗಾಧರ ಸ್ವಾಮೀಜಿ ಲಪಟಾಯಿಸಲು ಮುಂದಾಗಿದ್ದಾರೆ ಎನ್ನುವುದು ಭಕ್ತರ ಆರೋಪ. ವಿವಾದ ಕೋರ್ಟ್‍ನಲ್ಲಿರುವಾಗ ಕಟ್ಟಡ ದುರಸ್ತಿ ಹಾಗೂ ಜಮೀನು ಉಳುಮೆಗೆ ಜನರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಗಲಾಟೆ ನಡೆಯುತ್ತಿರುವಾಗಲೇ ಬಾಗಲಕೋಟೆಯಿಂದ ಕಲಾದಗಿ ಮಾರ್ಗವಾಗಿ ಉದಗಟ್ಟಿ ಗ್ರಾಮಕ್ಕೆ ಅಡ್ಡಪಲ್ಲಕ್ಕಿ ಕಾರ್ಯಕ್ರಮಕ್ಕೆ ರಂಭಾಪುರಿ ಶ್ರೀಗಳು ತೆರಳುತ್ತಿದ್ದರು. ಈ ವೇಳೆ ರಂಭಾಪುರಿ ಶ್ರೀಗಳ ಕಾರಿನ ಕಡೆ ಚಪ್ಪಲಿ ಎಸೆಯಲಾಗಿತ್ತು. ಇನ್ನೂ ಈ ಸಂಬಂಧ ಪ್ರತಿಕ್ರಿಯೆ ನೀಡಿದ್ದ ರಂಭಾಪುರಿ ಶ್ರೀಗಳು ಕಾರಿಗೆ ಯಾರು ಚಪ್ಪಲಿ ಎಸೆದಿಲ್ಲ ಎಂದಿದ್ದರು. ಇದನ್ನೂ ಓದಿ: ಮಾಜಿ ಪ್ರಧಾನಿ ಹೆಚ್‌ಡಿಡಿ ಆಸ್ಪತ್ರೆಯಿಂದ ಡಿಸ್ಚಾರ್ಜ್‌

  • ರಂಭಾಪುರಿ ಶ್ರೀಗಳ ಕಾರಿಗೆ ಚಪ್ಪಲಿ ಎಸೆತ

    ರಂಭಾಪುರಿ ಶ್ರೀಗಳ ಕಾರಿಗೆ ಚಪ್ಪಲಿ ಎಸೆತ

    ಬಾಗಲಕೋಟೆ: ರಂಭಾಪುರಿ ಶ್ರೀಗಳ (Rambhapuri Shree) ಕಾರಿಗೆ ಮಹಿಳೆಯೊಬ್ಬರು ಚಪ್ಪಲಿ ಎಸೆದ ಘಟನೆ ಬಾಗಲಕೋಟೆ (Bagalkot) ಜಿಲ್ಲೆಯ ಕಲಾದಗಿಯಲ್ಲಿ (Kaladgi) ನಡೆದಿದೆ.

    ಬಾಗಲಕೋಟೆಯಿಂದ ಕಲಾದಗಿ ಮಾರ್ಗವಾಗಿ ಉದಗಟ್ಟಿ ಗ್ರಾಮಕ್ಕೆ ಅಡ್ಡಪಲ್ಲಕ್ಕಿ ಕಾರ್ಯಕ್ರಮಕ್ಕೆ ತೆರಳುತ್ತಿದ್ದಾಗ ರಂಭಾಪುರಿ ಶ್ರೀ ವಿರುದ್ಧ ಜನರು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ರಂಭಾಪುರಿ ಶ್ರೀಗಳು ತೆರಳುವ ವಾಹನವನ್ನು ಅಡ್ಡಗಟ್ಟಲು ಪ್ರಯತ್ನ ನಡೆದಿದೆ. ಚಪ್ಪಲಿ ಎಸೆತದ ಬಳಿಕ ತಳ್ಳಾಟ, ನೂಕಾಟ ನಡೆದ ಪರಿಣಾಮ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣಗೊಂಡಿದೆ.  ಇದನ್ನೂ ಓದಿ: 112 ರನ್‌ಗಳಿಗೆ 8 ವಿಕೆಟ್‌ ಉಡೀಸ್‌; ಸಿರಾಜ್‌ ಮಿಂಚಿನ ದಾಳಿಗೆ ಆಂಗ್ಲ ಪಡೆ ಕಂಗಾಲು, ಭಾರತಕ್ಕೆ ಮುನ್ನಡೆ

    ಏನಿದು ಗಲಾಟೆ?
    ಕಲಾದಗಿಯ ಗುರುಲಿಂಗೇಶ್ವರ ಪಂಚಗ್ರಹ ಸಂಸ್ಥಾನ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಲಿಂಗೈಕ್ಯರಾದ ಬಳಿಕ ಅವರ ಉತ್ತರಾಧಿಕಾರಿಯನ್ನಾಗಿ ರಂಭಾಪುರಿ ಶ್ರೀಗಳು ಮಧ್ಯಸ್ಥಿಕೆ ವಹಿಸಿ ತಮ್ಮದೇ ಪೀಠದ ಶಿಷ್ಯರಾಗಿರುವ ಕೆ.ಎಮ್​.ಗಂಗಾಧರ ಸ್ವಾಮೀಜಿಯನ್ನ ನೇಮಕ ಮಾಡಿದ್ದರು. ಇದನ್ನೂ ಓದಿ: 284 ಕೇಸ್, 1.40 ಲಕ್ಷ ರೂ. ಫೈನ್ – ಪೊಲೀಸರ ಬಲೆಗೆ ಬಿದ್ದ ಯುವಕ

    ಗ್ರಾಮಸ್ಥರ ಸಮ್ಮುಖದಲ್ಲಿ ಉತ್ತರಾಧಿಕಾರಿ ನೇಮಕ ಮಾಡದೇ ಏಕಪಕ್ಷೀಯವಾಗಿ ರಂಭಾಪುರಿ ಶ್ರೀಗಳು ನಿರ್ಧಾರ ತೆಗೆದುಕೊಂಡಿದ್ದಾರೆಂದು ಕೆಲ ಗ್ರಾಮಸ್ಥರು ಆರೋಪಿಸಿದ್ದರು. ನಂತರ ರಂಭಾಪುರಿ ಶ್ರೀಗಳ ವಿರೋಧಿ ಬಣ ನೂತನ ಸ್ವಾಮೀಜಿಯನ್ನಾಗಿ ಮಹಾಂತ ದೇವರು ಸ್ವಾಮೀಜಿಯನ್ನ ಕರೆತಂದು ಅದ್ಧೂರಿ ಮೆರವಣಿಗೆ ಮಾಡಿತ್ತು. ಪರ, ವಿರೋಧ ಬಣಗಳು ಹುಟ್ಟಿಕೊಂಡು ಪ್ರಕರಣ ಈಗ ಜಿಲ್ಲಾ ನ್ಯಾಯಾಲಯದ ಮೆಟ್ಟಿಲೇರಿದೆ.

     

    ಇಂದು ಗಂಗಾಧರ ಸ್ವಾಮೀಜಿ ಮಠದ ಹೊಲದ ಉಳುಮೆಗೆ ಮುಂದಾದಾಗ ಭಕ್ತರ ಆಕ್ರೋಶ ವ್ಯಕ್ತಪಡಿಸಿದ್ದಾರೆ.   ಮಠದ ಒಟ್ಟು 72 ಎಕ್ರೆ ಭೂಮಿಯನ್ನು ರಂಭಾಪುರಿ ಶ್ರೀ ಮತ್ತು ಗಂಗಾಧರ ಸ್ವಾಮೀಜಿ ಲಪಟಾಯಿಸಲು ಮುಂದಾಗಿದ್ದಾರೆ ಎನ್ನುವುದು ಭಕ್ತರ ಆರೋಪ.

    ವಿವಾದ ಕೋರ್ಟ್‌ನಲ್ಲಿರುವಾಗ ಕಟ್ಟಡ ದುರಸ್ತಿ ಹಾಗೂ ಜಮೀನು ಉಳುಮೆಗೆ ಜನರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಗಲಾಟೆ ನಡೆಯುತ್ತಿರುವಾಗಲೇ ಬಾಗಲಕೋಟೆಯಿಂದ ಕಲಾದಗಿ ಮಾರ್ಗವಾಗಿ ಉದಗಟ್ಟಿ ಗ್ರಾಮಕ್ಕೆ ಅಡ್ಡಪಲ್ಲಕ್ಕಿ ಕಾರ್ಯಕ್ರಮಕ್ಕೆ ರಂಭಾಪುರಿ ಶ್ರೀಗಳು ತೆರಳುತ್ತಿದ್ದರು. ಈ ವೇಳೆ ರಂಭಾಪುರಿ ಶ್ರೀಗಳು ಕಾರಿನ ಮೇಲೆ ಚಪ್ಪಲಿ ಎಸೆಯಲಾಗಿದೆ.

     

  • 2006ರಲ್ಲಿ ಎಸ್‍ಪಿಬಿ ಹೇಳಿದ್ದ ಗುಟ್ಟು ನೆನೆದ ರಂಭಾಪುರಿ ಶ್ರೀ

    2006ರಲ್ಲಿ ಎಸ್‍ಪಿಬಿ ಹೇಳಿದ್ದ ಗುಟ್ಟು ನೆನೆದ ರಂಭಾಪುರಿ ಶ್ರೀ

    ಚಿಕ್ಕಮಗಳೂರು: ಗಾನ ಗಾರುಡಿಗ ಎಸ್.ಪಿ.ಬಾಲಸುಬ್ರಹ್ಮಣ್ಯಂ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿ ದೇಶದ ಗಣ್ಯಾತಿಗಣ್ಯರು ಕಂಬನಿ ಮಿಡಿದಿದ್ದು, ತಮ್ಮೊಂದಿಗಿನ ವಡನಾಟವನ್ನೂ ಮೆಲುಕು ಹಾಕುತ್ತಿದ್ದಾರೆ. ಅದೇ ರೀತಿ ಬಾಳೆಹೊನ್ನೂರಿನ ರಂಭಾಪುರಿ ಪೀಠದ ಶ್ರೀ ಡಾ.ವೀರಸೋಮೇಶ್ವರ ಶ್ರೀಗಳು ಸಹ ತಮ್ಮ ಬಳಿ ಎಸ್‍ಪಿಬಿ ಹೇಳಿದ್ದ ಗುಟ್ಟಿನ ಕುರಿತು ಹೇಳಿದ್ದಾರೆ.

    ಕೊರೊನಾ ಚಿಕಿತ್ಸೆಯ ಬಳಿಕ ವಿಶ್ರಾಂತಿಯಲ್ಲಿರುವ ಶ್ರೀಗಳು ಅಲ್ಲಿಂದಲೇ ಗಾನಗಂಧರ್ವನ ಕುರಿತು ಮಾತನಾಡಿದ್ದಾರೆ. ಎಸ್‍ಪಿಬಿ ಮಠಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ನನ್ನ ಹೆಸರು ಶ್ರೀಪತಿ ಪಂಡಿತಾರಾಧ್ಯ ಬಾಲಸುಬ್ರಹ್ಮಣ್ಯಂ ಎಂದು, ನಾನು ಆರಾಧಿಸೋದು ವೀರಭದ್ರಸ್ವಾಮಿಯನ್ನು, ನಮ್ಮದು ವೀರಭದ್ರಸ್ವಾಮಿಯನ್ನು ಆರಾಧಿಸುವ ಮನೆತನ ಎಂದು ಹೇಳಿದ್ದರಂತೆ. 2006ರಲ್ಲಿ ಎಸ್.ಪಿ.ಬಾಲಸುಬ್ರಹ್ಮಣ್ಯಂ ಹೇಳಿದ ಗುಟ್ಟನ್ನು ರಂಭಾಪುರಿ ಶ್ರೀಗಳು ಇದೀಗ ನೆನೆದಿದ್ದಾರೆ.

    ಸೌಜನ್ಯಶೀಲ ಹಿನ್ನೆಲೆಯ ಗಾಯಕ ಬಾಲಸುಬ್ರಹ್ಮಣ್ಯಂ ಅವರ ನಿಧನದ ವಿಷಯ ಕೇಳಿ ಅತ್ಯಂತ ನೋವಾಗಿದೆ. ಎಸ್‍ಪಿಬಿ ಅವರು 15 ಭಾಷೆಗಳಲ್ಲಿ ಸುಮಾರು 40 ಸಾವಿರಕ್ಕೂ ಅಧಿಕ ಹಾಡುಗಳನ್ನು ಸುಮಧುರ ಕಂಠದಿಂದ ಹಾಡಿದ ಶ್ರೇಯಸ್ಸು ಅವರದ್ದು. ಕನ್ನಡದಲ್ಲಿ ಅವರು ಹಾಡಿದ ಭಕ್ತಿಗೀತೆಗಳು ಜನಮನ ಮುಟ್ಟಿದ್ದು, ನಾವು ಅವುಗಳನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅವರು ಹಾಡಿದ ಚಿತ್ರಗೀತೆಗಳು ಕೂಡ ಜನರ ಮನಸ್ಸಲ್ಲಿ ಸದಾ ಹಚ್ಚಹಸಿರಾಗಿವೆ ಎಂದಿದ್ದಾರೆ.

    ಜಗದ್ಗುರು ರೇಣುಕಾಚಾರ್ಯರು ಅಗಸ್ತ್ಯರಿಗೆ ಬೋಧಿಸಿದ ಸಿದ್ಧಾಂತ ಶೀಖಾಮಣಿಯ ಶ್ಲೋಕಗಳನ್ನು ರಾಗ-ಲಯ ಬದ್ಧವಾಗಿ ಹಾಡಿ ಅದಕ್ಕೆ ಕನ್ನಡದಲ್ಲಿ ಸರಳವಾಗಿ ಅರ್ಥವನ್ನೂ ಹೇಳಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಬಾಳೆಹೊನ್ನೂರಿನಲ್ಲಿ ನಡೆದ ರಸಮಂಜರಿ ಕಾರ್ಯಕ್ರಮಕ್ಕೂ ಅವರು ಆಗಮಿಸಿದ್ದರು. ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ದರ್ಶನವನ್ನೂ ಮಾಡಿ ಸಂದರ್ಶನಕ್ಕೆ ಬಂದಾಗ ಗುಟ್ಟಿನ ಮಾತು ಹೇಳಿ ಸಂತೋಷಗೊಳಿಸಿದ್ದರು.

    ವೀರಭದ್ರಸ್ವಾಮಿ ನನ್ನ ಆರಾಧ್ಯ ದೈವ. ನಮ್ಮದು ವೀರಭದ್ರಸ್ವಾಮಿಯನ್ನೇ ಆರಾಧಿಸುವ ಮನೆತನ. ನನ್ನ ಹೆಸರು ಶ್ರೀಪತಿ ಪಂಡಿತರಾಧ್ಯ ಬಾಲಸುಬ್ರಹ್ಮಣ್ಯಂ ಇದು ನನ್ನ ಪೂರ್ಣ ಹೆಸರು ಎಂದು ಹೇಳಿದ್ದರು. ಶಿವ ಭಕ್ತರಾದ ಮತ್ತು ವೀರಶೈವ ಪರಂಪರೆಯಲ್ಲಿ ಹುಟ್ಟಿದ ಅವರು ಎಲ್ಲ ವರ್ಗದ ಎಲ್ಲ ಸಮುದಾಯದ ಜನರ ಪ್ರೀತಿ-ವಿಶ್ವಾಸಕ್ಕೆ ಪಾತ್ರರಾಗಿದ್ದರು. ಅಂತಹ ಶ್ರೇಷ್ಠ ಗಾಯಕರನ್ನು ಈ ನಾಡು ಕಳೆದುಕೊಂಡು ತಬ್ಬಲಿಯಾಗಿದೆ ಕೊರೊನಾ ಸೋಂಕಿನಿಂದ ಬಳಲಿ ಇಂದು ನಮ್ಮನ್ನೆಲ್ಲ ಬಿಟ್ಟು ಹೋಗಿದ್ದು ಅತೀವ ದುಃಖ ತಂದಿದೆ. ಅವರ ಪವಿತ್ರ ಆತ್ಮಕ್ಕೆ ಭಗವಂತ ಚಿರಶಾಂತಿ ಅನುಗ್ರಹಿಸಲಿ. ಭಗವಂತ ಅವರ ಕುಟುಂಬಕ್ಕೆ ನೋವು ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

  • ನಾನು ಆರೋಗ್ಯವಾಗಿದ್ದೇನೆ – ಆಸ್ಪತ್ರೆಯಿಂದ ರಂಭಾಪುರಿ ಶ್ರೀ ಸಂದೇಶ

    ನಾನು ಆರೋಗ್ಯವಾಗಿದ್ದೇನೆ – ಆಸ್ಪತ್ರೆಯಿಂದ ರಂಭಾಪುರಿ ಶ್ರೀ ಸಂದೇಶ

    ಚಿಕ್ಕಮಗಳೂರು: ವೈದ್ಯರ ಸಲಹೆಯಂತೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದೇನೆ. ನಾನು ಆರೋಗ್ಯವಾಗಿದ್ದೇನೆ ಭಕ್ತರು ಆತಂಕ ಪಡುವ ಅಗತ್ಯವಿಲ್ಲ ಎಂದು ರಂಭಾಪುರಿ ಪೀಠದ ಶ್ರೀ ವೀರ ಸೋಮೇಶ್ವರ ಶಿವಾಚಾರ್ಯ ಜಗದ್ಗುರುಗಳು ಪ್ರತಿಕ್ರಿಯೆ ನೀಡಿದ್ದಾರೆ.

    ನನಗೆ ಕೊರೊನಾ ಸೋಂಕು ತಗುಲಿದೆ ಎಂದು ಗೊತ್ತಾಗಿ ನಾಡಿನಾದ್ಯಂತ ಭಕ್ತರು ಪೂಜೆ, ಪ್ರಾರ್ಥನೆ ಮಾಡುತ್ತಿದ್ದಾರೆ. ಕೊರೊನಾ ಜೀವಕ್ಕೆ ತೊಂದರೆ ಕೊಡುವ ಕಾಯಿಲೆಯಲ್ಲ, ನಾನು ಆರೋಗ್ಯವಾಗಿದ್ದೇನೆ ವೈದ್ಯರ ಸಲಹೆಯಂತೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದೇನೆ ಅಷ್ಟೇ ಎಂದು ವಿಡಿಯೋ ಸಂದೇಶದಲ್ಲಿ ಹೇಳಿದ್ದಾರೆ.

    ನಾಡಿನಾದ್ಯಂತ ಭಕ್ತರು ತೋರುತ್ತಿರುವ ಪ್ರೀತಿಗೆ ನಾನು ಆಭಾರಿಯಾಗಿದ್ದೇನೆ. ಇನ್ನು ಎರಡು ದಿನದ ನಂತರ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್ ಪುರ ತಾಲೂಕಿನ ಬಾಳೆಹೊನ್ನೂರಿನ ರಂಭಾಪುರಿ ಮಠಕ್ಕೆ ಹಿಂದಿರುಗಲಿದ್ದೇನೆ. ನನಗೆ ಪೀಠದ ಮೂಲ ಪಂಚಚಾರ್ಯರ ಅನುಗ್ರಹ, ಶಿವನ ಆಶೀರ್ವಾದವಿದೆ. ಅನಾರೋಗ್ಯದಿಂದ ಶೀಘ್ರವೇ ಮುಕ್ತನಾಗಿ ಭಕ್ತರಿಗೆ ದರ್ಶನ ನೀಡಲಿದ್ದೇನೆ ಎಂದು ವಿಡಿಯೋ ಸಂದೇಶದಲ್ಲಿ ರಂಭಾಪುರಿ ಶ್ರೀಗಳು ತಿಳಿಸಿದ್ದಾರೆ.

  • ಡಿಕೆಶಿ ತಪ್ಪೊಪ್ಪಿಗೆ ಹೇಳಿಕೆಯೇ ಕಾಂಗ್ರೆಸ್ ಗೆಲುವಿಗೆ ಕಾರಣ : ರಂಭಾಪುರಿ ಶ್ರೀ

    ಡಿಕೆಶಿ ತಪ್ಪೊಪ್ಪಿಗೆ ಹೇಳಿಕೆಯೇ ಕಾಂಗ್ರೆಸ್ ಗೆಲುವಿಗೆ ಕಾರಣ : ರಂಭಾಪುರಿ ಶ್ರೀ

    ರಾಯಚೂರು: ಶೈವ ಲಿಂಗಾಯತ ಒಂದೇ ಧರ್ಮ, ಪ್ರತ್ಯೇಕ ಧರ್ಮ ಮಾಡಲು ಹೋಗಿದ್ದು ತಪ್ಪಾಗಿದೆ ಎಂದು ಡಿಕೆ ಶಿವಕುಮಾರ್ ಒಪ್ಪಿಕೊಂಡಿದ್ದಕ್ಕೆ ಬಳ್ಳಾರಿಯಲ್ಲಿ ಕಾಂಗ್ರೆಸ್ ಗೆಲ್ಲಲು ಸಾಧ್ಯವಾಗಿದೆ ಎಂದು ರಂಭಾಪುರಿ ಜಗದ್ಗುರು ಶ್ರೀ ಪ್ರಸನ್ನ ವೀರಸೋಮೇಶ್ವರ ಸ್ವಾಮಿಜಿ ಹೇಳಿದ್ದಾರೆ.

    ರಾಯಚೂರಿನಲ್ಲಿ ಮಾತನಾಡಿದ ಶ್ರೀಗಳು, ಲಿಂಗಾಯತ ಪ್ರತ್ಯೇಕ ಧರ್ಮ ಮುಗಿದ ಅಧ್ಯಾಯ. ಈ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಯಲ್ಲಿ ಪ್ರತ್ಯೇಕ ಧರ್ಮ ಮಾಡಲು ಕೆಲವರು ಪ್ರಚೋದಿಸಿದ್ದರು. ಆದರೆ ಈಗಿನ ಸಮ್ಮಿಶ್ರ ಸರ್ಕಾರ ಪ್ರತ್ಯೇಕ ಧರ್ಮದ ಬಗ್ಗೆ ಕೇಂದ್ರಕ್ಕೆ ಮತ್ತೊಮ್ಮೆ ಶಿಫಾರಸ್ಸು ಮಾಡುವ ಸಾಧ್ಯತೆ ಕಡಿಮೆಯಿದೆ. ಕುಮಾರಸ್ವಾಮಿ ಹಾಗೂ ದೇವೇಗೌಡರಿಗೆ ಲಿಂಗಾಯತ ಹಾಗು ವೀರಶೈವ ಪ್ರತ್ಯೇಕ ಧರ್ಮ ಮಾಡುವ ಒಲವು ಇಲ್ಲ ಹೇಳಿದ್ದಾರೆ. ಸದ್ಯ ರಾಜ್ಯದ ಕಾಂಗ್ರೆಸ್ ನಾಯಕರು ಕೂಡ ಈ ಕುರಿತು ಕೇಂದ್ರ ನಾಯಕರಿಗೆ ಮನವರಿಗೆ ಮಾಡಬೇಕು. ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೂಡ ಧರ್ಮ ವಿಭಜನೆ ವಿಚಾರದಲ್ಲಿ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.

    ಇದೇ ವೇಳೆ ರಾಜ್ಯ ಸರ್ಕಾರ ಬೆಳೆ ಸಾಲ ಮನ್ನಾ ಘೋಷಣೆ ಮಾಡಿದೆ. ಆದರೆ ವಿಳಂಬ ಮಾಡುತ್ತಿರುವುದು ಸರಿ ಅಲ್ಲ. ವಿಳಂಬದಿಂದಾಗಿ ರೈತರ ಆತ್ಮಹತ್ಯೆಗಳು ಮುಂದುವರಿದಿವೆ. ಕಬ್ಬು ಬೆಳೆಗಾರ ಸಮಸ್ಯೆಯ ಬಗ್ಗೆಯೂ ಸರಕಾರ ಪರಿಹಾರಕ್ಕೆ ಚಿಂತಿಸಬೇಕು ಎಂದರು.

    ಡಿಕೆ ಶಿವಕುಮಾರ್ ಹೇಳಿದ್ದು ಏನು?
    ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಶರನ್ನವರಾತ್ರಿ ಅಂಗವಾಗಿ ರಂಭಾಪುರಿ ಶ್ರೀಗಳ ನೇತೃತ್ವದಲ್ಲಿ ನಡೆದ ಧರ್ಮಸಮ್ಮೇಳನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಡಿಕೆ ಶಿವಕುಮಾರ್ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದರು. ನಮ್ಮ ಸರ್ಕಾರದಲ್ಲಿ ನಾವು ದೊಡ್ಡ ತಪ್ಪನ್ನು ಮಾಡಿದ್ದೇವೆ. ಸರ್ಕಾರದವರು, ರಾಜಕೀಯದವರು ಧರ್ಮದ ವಿಚಾರದಲ್ಲಿ ಜಾತಿಯ ವಿಚಾರದಲ್ಲಿ ಕೈ ಹಾಕಬಾರದು. ನಮ್ಮ ಸರ್ಕಾರದಿಂದ ದೊಡ್ಡ ಅಪರಾಧವಾಗಿದೆ. ನಾನೂ ಸಹ ಆ ಸರ್ಕಾರದಲ್ಲಿ ಮಂತ್ರಿಯಾಗಿದ್ದೆ. ನಮ್ಮ ಬೇರೆ ಸಚಿವರು ವಿಭಿನ್ನವಾಗಿ ಮಾತನಾಡಿದರು. ಆದ್ರೆ ಸರ್ಕಾರದ ತೀರ್ಮಾನ ಆ ಸಂದರ್ಭದಲ್ಲಿ ಬೇಕಾದಷ್ಟು ಅಲ್ಲೋಲ ಕಲ್ಲೋಲ ಸೃಷ್ಟಿಯಾಯ್ತು. ರಾಜಕೀಯದಲ್ಲಿ ಅನೇಕ ವಿಭಿನ್ನವಾದ ಹೇಳಿಕೆಗಳನ್ನು ನಾವು ನೋಡಿದ್ದೇವೆ. ಯಾವುದೇ ಸರ್ಕಾರ ಧರ್ಮದಲ್ಲಿ ಕೈ ಹಾಕಬಾರದು ಎನ್ನೋದಕ್ಕೆ ಮೊನ್ನೆ ನಡೆದ ಜನಾಭಿಪ್ರಾಯವೇ ಸಾಕ್ಷಿ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews 

  • ವೀರಶೈವ ಸಮಾಜದ ವ್ಯಕ್ತಿ ಸಿಎಂ ಆಗುವುದನ್ನು ತಪ್ಪಿಸಿದ್ದಕ್ಕೆ ರಂಭಾಪುರಿ ಶ್ರೀ ಆಕ್ರೋಶ

    ವೀರಶೈವ ಸಮಾಜದ ವ್ಯಕ್ತಿ ಸಿಎಂ ಆಗುವುದನ್ನು ತಪ್ಪಿಸಿದ್ದಕ್ಕೆ ರಂಭಾಪುರಿ ಶ್ರೀ ಆಕ್ರೋಶ

    ಬಳ್ಳಾರಿ: ಒಬ್ಬ ವೀರಶೈವದ ವ್ಯಕ್ತಿ ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಿರುವುದನ್ನು ರಾಜ್ಯದ ಜನ ಖಂಡಿಸುತ್ತಾರೆ. ಕಾಂಗ್ರೆಸ್ – ಜೆಡಿಎಸ್ ಪಕ್ಷಗಳದ್ದು ಅಪವಿತ್ರ ಮೈತ್ರಿಯಾಗಿದೆ ಎಂದು ರಂಭಾಪುರಿ ಶ್ರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಇಂದು ನಗರದಲ್ಲಿ ನಡೆದ ಪಂಡಿತ ಪುಟ್ಟರಾಜ ಗವಾಯಿಗಳ ಪ್ರಶಸ್ತಿ ಪ್ರಧಾನ ಸಮಾರಂಭದ ನಂತರ ಮಾತನಾಡಿದ ರಂಭಾಪುರಿ ಶ್ರೀಗಳು, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಈ ಮೈತ್ರಿ ನಾಡಿನ ಜನರಿಗೆ ನೋವು ಉಂಟುಮಾಡಿದೆ. ಯಡಿಯೂರಪ್ಪನವರಿಗೆ ಹಲವು ಜೆಡಿಎಸ್, ಕಾಂಗ್ರೆಸ್ ಶಾಸಕರು ಬೆಂಬಲ ನೀಡಲು ಮುಂದಾಗಿದ್ದರು. ಆದರೆ ಅವರನ್ನು ಕಟ್ಟಿ ಹಾಕಲಾಗಿತ್ತು ಎಂದು ಆರೋಪಿಸಿದರು.

    ನಾಡಿನ ಜನರ ಭಾವನಗೆಳನ್ನು ಒಡೆದು ಆಳಿದ ಕಾಂಗ್ರೆಸ್ ಜೊತೆ ಜೆಡಿಎಸ್ ಜೊತೆ ಅಪವಿತ್ರ ಮೈತ್ರಿ ಮಾಡಿಕೊಂಡಿದೆ. ಅತಿ ಹೆಚ್ಚು ಸ್ಥಾನಗಳನ್ನು ಪಡೆದ ಬಿಜೆಪಿಯ ಬಿಎಸ್‍ವೈ ಸಿಎಂ ಆಗಿದ್ದರು. ಆದರೆ ತರಾತುರಿಯಲ್ಲಿ ನಡೆದ ಬಹುಮತ ಸಾಬೀತು ಪ್ರಕರಣದಲ್ಲಿ ಬಿಎಸ್‍ವೈ ಅಸಹಾಯಕರಾದರು ಎಂದರು.

    ಚುನಾವಣೆಗೆ ಮುನ್ನ ಮೈತ್ರಿ ಮಾಡಿಕೊಳ್ಳದ ಕಾಂಗ್ರೆಸ್, ಜೆಡಿಎಸ್ ಚುನಾವಣೆ ನಂತರ ಅಧಿಕಾರದ ಆಸೆಗಾಗಿ ಮೈತ್ರಿ ಮಾಡಿಕೊಂಡಿದೆ. ಬಿಎಸ್‍ವೈ ರಾಜ್ಯದ ಜನರ ಮನಸ್ಸಿನಲ್ಲಿದ್ದಾರೆಂದು ಎಂದು ಹೇಳಿ ಹೊಗಳಿದರು.

  • `ಕುಮಾರಸ್ವಾಮಿ’ ತಂಟೆಗೆ ಬಂದ್ರೆ ಅಧಿಕಾರ ಕಳ್ಕೋತೀರಿ- ಸಿಎಂಗೆ ರಂಭಾಪುರಿ ಶ್ರೀಗಳ ಎಚ್ಚರಿಕೆ

    `ಕುಮಾರಸ್ವಾಮಿ’ ತಂಟೆಗೆ ಬಂದ್ರೆ ಅಧಿಕಾರ ಕಳ್ಕೋತೀರಿ- ಸಿಎಂಗೆ ರಂಭಾಪುರಿ ಶ್ರೀಗಳ ಎಚ್ಚರಿಕೆ

    ಬಳ್ಳಾರಿ: ಸಿಎಂ ಸಿದ್ದರಾಮಯ್ಯನವರೇ ನೀವು ಕುಮಾರಸ್ವಾಮಿ ತಂಟೆಗೆ ಹೋಗಬೇಡಿ. ಕುಮಾರಸ್ವಾಮಿಯನ್ನ ಮುಟ್ಟಿದ್ರೆ ನಿಮಗೆ ಧಕ್ಕೆ ಕಟ್ಟಿಟ್ಟ ಬುತ್ತಿ. ನೀವು ದುಡ್ಡು ಮಾಡೋಕೆ ಬೇರೆ ದಾರಿ ನೋಡಿಕೊಳ್ಳಿ. ಆದ್ರೆ ಕುಮಾರಸ್ವಾಮಿ ತಂಟೆಗೆ ಹೋಗಬೇಡಿ. ಹೀಗಂತ ಸಿಎಂ ಸಿದ್ದರಾಮಯ್ಯನವರಿಗೆ ಪಂಚಪೀಠದ ಜಗದ್ಗುರು ಬಹಿರಂಗವಾಗಿ ಎಚ್ಚರಿಕೆ ನೀಡಿದ್ದಾರೆ.

    ಅಷ್ಟಕ್ಕೂ ಪಂಚಪೀಠದ ಜಗದ್ಗುರುಗಳು ಯಾವ ಕುಮಾರಸ್ವಾಮಿ ವಿಚಾರಕ್ಕೆ ಹೀಗೆ ಸಿಎಂಗೆ ಎಚ್ಚರಿಕೆ ನೀಡಿದ್ರು ಅನ್ನೋ ಆಶ್ಚರ್ಯ ನಿಮಗೆ ಕಾಡುತ್ತಲ್ಲ? ಇದು ರಾಜ್ಯದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿಚಾರವಲ್ಲ. ಲಕ್ಷಾಂತರ ಭಕ್ತರ ಆರಾಧ್ಯ ದೈವವಾಗಿರುವ ಸಂಡೂರಿನ ಕುಮಾರಸ್ವಾಮಿ ದೇವಾಲಯದ ತಂಟೆಗೆ ಬರಬೇಡಿ ಅಂತಾ ರಂಭಾಪುರಿ ಪೀಠದ ಪೀಠಾಧ್ಯಕ್ಷರಾದ ಶ್ರೀಮದ್ದ ವೀರ ಸೋಮೇಶ್ವರ ರಾಜ ದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಎಚ್ಚರಿಕೆ ನೀಡಿದ್ದಾರೆ. ಸಂಡೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿ ಸಿಎಂ ಸಿದ್ದರಾಮಯ್ಯನವರಿಗೆ ಈ ರೀತಿ ಬಹಿರಂಗವಾಗಿ ಎಚ್ಚರಿಕೆ ನೀಡಿದ್ದಾರೆ.

    12 ನೇ ಶತಮಾನದಲ್ಲಿ ನಿರ್ಮಾಣವಾಗಿರುವ ಸಂಡೂರಿನ ಐತಿಹಾಸಿಕ ಕುಮಾರಸ್ವಾಮಿ ದೇವಾಲಯದ ಸುತ್ತ ಸಿಎಂ ಸಿದ್ದರಾಮಯ್ಯ ಗಣಿಗಾರಿಕೆಗೆ ಅವಕಾಶ ಕಲ್ಪಿಸಿದ್ದಾರೆ. ಇದು ಸರಿಯಲ್ಲ, ಹಿಂದೆ ಸುಗ್ಗಲಮ್ಮ ದೇವಾಲಯವನ್ನು ಕೆಡವಿ ಗಣಿಗಾರಿಕೆ ಮಾಡಿದಕ್ಕೆ ಮಾಜಿ ಸಚಿವ ಜನಾರ್ದನರೆಡ್ಡಿ ಅನುಭವಿಸಬಾರದ ಕಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ ಕುಮಾರಸ್ವಾಮಿ ದೇವಾಲಯದ ತಂಟೆಗೆ ಸಿಎಂ ಸಿದ್ದರಾಮಯ್ಯ ಬರಬಾರದು. ಕುಮಾರಸ್ವಾಮಿ ದೇವಾಲಯದ ಉಳಿವಿಗಾಗಿ ನಡೆಯೋ ಹೋರಾಟಕ್ಕೆ ನಮ್ಮ ಬೆಂಬಲವಿದೆ ಅನ್ನೋ ಮೂಲಕ ರಂಭಾಪುರಿ ಶ್ರೀಗಳು ಸಿಎಂ ಸಿದ್ದರಾಮಯ್ಯಗೆ ಎಚ್ಚರಿಕೆ ನೀಡಿದ್ದಾರೆ.