Tag: Ramayana

  • ಬಾರ್‌ನಲ್ಲಿ ರಾಮಾಯಣ ವೀಡಿಯೋ – ಓರ್ವ ಅರೆಸ್ಟ್

    ಬಾರ್‌ನಲ್ಲಿ ರಾಮಾಯಣ ವೀಡಿಯೋ – ಓರ್ವ ಅರೆಸ್ಟ್

    ಲಕ್ನೋ: ಟಿವಿ ಧಾರವಾಹಿ ರಾಮಾಯಣದ (Ramayana) ಡಬ್ಬಿಂಗ್ ವೀಡಿಯೋವನ್ನು ಬಾರ್‌ನ (Bar) ದೊಡ್ಡ ಪರದೆಯಲ್ಲಿ ಪ್ಲೇ ಮಾಡಿದ ವ್ಯಕ್ತಿಯನ್ನು ಬಂಧಿಸಿದ ಘಟನೆ ನೋಯ್ಡಾದಲ್ಲಿ ನಡೆದಿದೆ.

    ಉತ್ತರ ಪ್ರದೇಶದ ನೋಯ್ಡಾದ (Noida) ಗಾರ್ಡನ್ಸ್ ಗ್ಯಾಲೇರಿಯಾ ಮಾಲ್‍ನಲ್ಲಿರುವ ಲಾರ್ಡ್ ಆಫ್ ದಿ ಡ್ರಿಂಕ್ಸ್ ರೆಸ್ಟೊ-ಬಾರ್‍ನಲ್ಲಿ ಈ ಘಟನೆ ನಡೆದಿದೆ. ಶ್ರೀರಾಮ ಹಾಗೂ ರಾವಣನ ಪಾತ್ರಗಳಿಗೆ ಆಧುನಿಕ ಸಂಗೀತವನ್ನು ನೀಡುವ ಮೂಲಕ ಪ್ಲೇ ಮಾಡಿದ್ದರು. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಂಡ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಮೀನು ಹಿಡಿಯಲು ಹೋಗಿ ಬಾಲಕರಿಬ್ಬರ ದಾರುಣ ಸಾವು

    ಈ ಬಗ್ಗೆ ಪೊಲೀಸ್ (Police) ಅಧಿಕಾರಿಯೊಬ್ಬರು ಮಾತನಾಡಿ, ವಿಷಯ ತಿಳಿದ ತಕ್ಷಣ ಸೆಕ್ಟರ್ 39 ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಘಟನೆಗೆ ಸಂಬಂಧಿಸಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಓರ್ವನನ್ನು ಬಂಧಿಸಲಾಗಿದೆ. ಬಂಧಿತ ವ್ಯಕ್ತಿಯನ್ನು ರೆಸ್ಟೋರೆಂಟ್‍ನ ಮ್ಯಾನೇಜರ್ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಆಗುವುದಿಲ್ಲ: ಹೆಚ್‌.ಡಿ.ಕುಮಾರಸ್ವಾಮಿ

  • ರಾಮನಾಗಿ ನಿತೀಶ್ ಕುಮಾರ್, ರಾವಣನಾಗಿ ಮೋದಿ – ವಿವಾದ ಹುಟ್ಟು ಹಾಕಿದ ಆರ್‌ಜೆಡಿ ಪೋಸ್ಟರ್

    ರಾಮನಾಗಿ ನಿತೀಶ್ ಕುಮಾರ್, ರಾವಣನಾಗಿ ಮೋದಿ – ವಿವಾದ ಹುಟ್ಟು ಹಾಕಿದ ಆರ್‌ಜೆಡಿ ಪೋಸ್ಟರ್

    ಪಾಟ್ನಾ: ಬಿಹಾರದಲ್ಲಿ 2024ರ ಲೋಕಸಭೆ ಚುನಾವಣೆ, ವರ್ಷಕ್ಕೂ ಮುನ್ನವೇ ಕಾವು ಪಡೆದುಕೊಳ್ಳುತ್ತಿದೆ. ಮುಂಬರುವ ಲೋಕಸಭೆ ಚುನಾವಣೆಯನ್ನು ರಾಮಯಣ (Ramayana) ಮತ್ತು ಮಹಾಭಾರತಕ್ಕೆ (Mahabharata) ಹೋಲಿಸಿದ್ದು ನಿತೀಶ್ ಕುಮಾರ್ (Nitish Kumar) ಅವರನ್ನು ರಾಮನಿಗೆ (Rama) ಹೋಲಿಸಿದರೆ, ಪ್ರಧಾನಿ ನರೇಂದ್ರ ಮೋದಿ (Narendra Modi)  ಅವರನ್ನು ರಾವಣನಿಗೆ (Ravana)  ಹೋಲಿಸಿ ಪೋಸ್ಟರ್ ಹಾಕಿದ್ದು ಹೊಸ ವಿವಾದಕ್ಕೆ ಕಾರಣವಾಗಿದೆ.

    ಪಾಟ್ನಾದ ಆರ್‌ಜೆಡಿ (RJD) ಕಚೇರಿ ಮುಂಭಾಗ ಮತ್ತು ಆರ್‌ಜೆಡಿ ನಾಯಕಿ ರಾಬ್ರಿ ದೇವಿ ನಿವಾಸದ ಮುಂದೆ ಈ ಪೋಸ್ಟರ್ ಹಾಕಲಾಗಿದೆ. 2024ರ ಚುನಾವಣೆಯಲ್ಲಿ ಬಿಜೆಪಿಯ ಸೋಲು ಮತ್ತು ಮಹಾಮೈತ್ರಿಕೂಟದ ಗೆಲುವನ್ನು ವಿವರಿಸಲು ಎರಡು ಹಿಂದೂ ಪುರಾಣಗಳಾದ ರಾಮಾಯಣ ಮತ್ತು ಮಹಾಭಾರತದ ಪ್ರಸಂಗಗಳನ್ನು ಬಳಸಿಕೊಳ್ಳಲಾಗಿದೆ. ಪೋಸ್ಟರ್‌ನಲ್ಲಿ ನಿತೀಶ್ ಕುಮಾರ್ (ಮಹಾಘಟಬಂಧನ ನಾಯಕ) ಅವರನ್ನು ಭಗವಾನ್ ರಾಮ/ಕೃಷ್ಣ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾವಣ/ಕಂಸ ಎಂದು ಉಲ್ಲೇಖಿಸಲಾಗಿದೆ. ರಾಮಾಯಣದಲ್ಲಿ ರಾಮ ರಾವಣನನ್ನು ಹೇಗೆ ಸೋಲಿಸಿದನೊ ಮತ್ತು ಮಹಾಭಾರತದಲ್ಲಿ ಕೃಷ್ಣನು ಕಂಸನನ್ನು ಹೇಗೆ ಸೋಲಿಸಿದನೊ ಅದೇ ರೀತಿ ನಿತೀಶ್ ಕುಮಾರ್ ನೇತೃತ್ವದ ಮಹಾಮೈತ್ರಿಕೂಟವು 2024ರ ಲೋಕಸಭೆ ಚುನಾವಣೆಯಲ್ಲಿ ಪಿಎಂ ಮೋದಿಯನ್ನು ಸೋಲಿಸುತ್ತದೆ ಎಂದು ಪೋಸ್ಟರ್‌ನಲ್ಲಿ ಚಿತ್ರಿಸಲಾಗಿದೆ. ಇದನ್ನೂ ಓದಿ: ಮುಂದಿನ ಸಂಕ್ರಾಂತಿಗೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಪೂರ್ಣ

    ಪೋಸ್ಟರ್ ಬಗ್ಗೆ ಪ್ರತಿಕ್ರಿಯಿಸಿರುವ ಆರ್‌ಜೆಡಿ ರಾಷ್ಟ್ರೀಯ ವಕ್ತಾರ ಮೃತುಂಜಯ್ ತಿವಾರಿ, ಈ ಪೋಸ್ಟರ್‌ಗಳನ್ನು ಯಾರು ಹಾಕಿದ್ದಾರೆಂದು ನಮಗೆ ತಿಳಿದಿಲ್ಲ. ಇವುಗಳನ್ನು ಆರ್‌ಜೆಡಿ ಅಧಿಕೃತಗೊಳಿಸಿಲ್ಲ. 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯುವ ತಯಾರಿ ಬಿಹಾರದಿಂದ ಪ್ರಾರಂಭವಾಗಿದ್ದು, ಎಲ್ಲಾ ವಿರೋಧ ಪಕ್ಷಗಳು ಒಂದಾಗಿವೆ. ಬಿಜೆಪಿ, ಬಡವರು, ಯುವಕರು ಮತ್ತು ರೈತರ ವಿರುದ್ಧದ ಪಕ್ಷ, ನಮ್ಮದು ಅದರ ವಿರುದ್ಧದ ಹೋರಾಟವಾಗಿದೆ ಎಂದರು. ಈ ಪೋಸ್ಟರ್‌ಗೆ ಬಿಜೆಪಿ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮೋದಿ, ಶಾ ಸಭೆ – ಜನವರಿ ಅಂತ್ಯಕ್ಕೆ ಕೇಂದ್ರ ಸಚಿವ ಸಂಪುಟ ವಿಸ್ತರಣೆ?

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರಾಮಾಯಣ ರಸಪ್ರಶ್ನೆಯಲ್ಲಿ ಗೆದ್ದ ಮುಸ್ಲಿಂ ಯುವಕರು

    ರಾಮಾಯಣ ರಸಪ್ರಶ್ನೆಯಲ್ಲಿ ಗೆದ್ದ ಮುಸ್ಲಿಂ ಯುವಕರು

    ತಿರುವನಂತಪುರಂ: ಕೇರಳದ ಡಿಸಿ ಬುಕ್ಸ್ ರಾಜ್ಯಾದ್ಯಂತ ಆಯೋಜಿಸಿದ್ದ ಆನ್‌ಲೈನ್ ರಾಮಾಯಣ ರಸಪ್ರಶ್ನೆಯಲ್ಲಿ ಇಬ್ಬರು ಮುಸ್ಲಿಂ ಯುವಕರು ಗೆದ್ದು ಅಚ್ಚರಿ ಮೂಡಿಸಿದ್ದಾರೆ.

    ಹೌದು, ಕೇರಳದ ಮಲಪ್ಪುರಂ ಮೂಲದ ವಲಾಂಚೇರಿಯ ಕೆಕೆಹೆಚ್‌ಎಂ ಇಸ್ಲಾಮಿಕ್ ಮತ್ತು ಕಲಾ ಕಾಲೇಜಿನಲ್ಲಿ ವಾಫಿ ಕೋರ್ಸ್(ಇಸ್ಲಾಮಿಕ್ ಅಧ್ಯಯನ)ನ ವಿದ್ಯಾರ್ಥಿಗಳಾದ ಮೊಹಮ್ಮದ್ ಜಬೀರ್ ಪಿ.ಕೆ ಹಾಗೂ ಮೊಹಮ್ಮದ್ ಬಸಿತ್ ಎಂ 1,000ಕ್ಕೂ ಹೆಚ್ಚು ಜನರು ಭಾಗವಹಿಸಿದ್ದ ರಾಮಾಯಣ ರಸಪ್ರಶ್ನೆಯಲ್ಲಿ ಅಗ್ರಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

    ಮುಸ್ಲಿಂ ಯುವಕರು ಹಿಂದೂ ಧರ್ಮದ ರಾಮಾಯಣ ಕಲಿತು ಇಂತಹ ಸಾಧನೆ ಮಾಡಿದ್ದಾದರೂ ಹೇಗೆ ಎಂದು ಕೇಳಿದರೆ, ಅವರು ಓದುತ್ತಿರುವ ವಾಫಿ ಕೋರ್ಸ್ ಇದಕ್ಕೆಲ್ಲಾ ಕಾರಣ ಎನ್ನುತ್ತಾರೆ.

    ವಾಫಿ ಕೋರ್ಸ್ ಎಂಬುದು 8 ವರ್ಷಗಳ ಇಸ್ಲಾಮಿಕ್ ಅಧ್ಯಯನವಾಗಿದೆ. ಇದು ಸ್ನಾತಕೋತ್ತರ ಮಟ್ಟಕ್ಕೂ ಹೋಗುತ್ತದೆ. ಇದು 3 ವರ್ಷಗಳ ವಿಶ್ವವಿದ್ಯಾಲಯದ ಪದವಿ ಕೋರ್ಸ್ ಅನ್ನೂ ಒಳಗೊಂಡಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಜಾಗತಿಕ ಹೂಡಿಕೆದಾರರ ಸಮಾವೇಶ: ಟೋಕಿಯೋ ಕನ್ನಡ ಬಳಗಕ್ಕೆ ನಿರಾಣಿ ಆಹ್ವಾನ

    ರಸಪ್ರಶ್ನೆಯಲ್ಲಿ ಗೆದ್ದಿರುವ ಮೊಹಮ್ಮದ್ ಜಬೀರ್ ಈ ಬಗ್ಗೆ ವಿವರಿಸಿ, ತಾನು ವಾಫಿ ಪಠ್ಯಕ್ರಮದಲ್ಲಿ ಭಾರತೀಯ ಧರ್ಮಗಳಾದ ಹಿಂದೂ, ಬೌದ್ಧ, ಜೈನ ಹಾಗೂ ಸಿಖ್ ಧರ್ಮದ ಕುರಿತಾದ ವಿಷಯಗಳನ್ನು ಅಧ್ಯಯನಕ್ಕೆ ಆಯ್ದುಕೊಂಡಿದ್ದೆ. ಈ ಕೋರ್ಸ್‌ನ ಇತರ ಭಾಗಗಳಲ್ಲಿ ಕ್ರಿಶ್ಚಿಯನ್ ಧರ್ಮ, ಜುದಾಯಿಸಂ ಹಾಗೂ ಟಾವೊ ಧರ್ಮದ ಕುರಿತಾದ ವಿಷಯಗಳೂ ಇವೆ ಎಂದಿದ್ದಾರೆ.

    ಡಿಸಿ ಬುಕ್ಸ್‌ನ ಟೆಲಿಗ್ರಾಮ್ ಗ್ರೂಪ್‌ನಲ್ಲಿ ರಸಪ್ರಶ್ನೆ ಸ್ಪರ್ಧೆಯ ಬಗ್ಗೆ ತಿಳಿದುಕೊಂಡೆ. ಬಳಿಕ ಸ್ವತಃ ನೋಂದಾಯಿಸಿಕೊಂಡೆ. ರಸಪ್ರಶ್ನೆಗೆ ಸಂಬಂಧಿಸಿದಂತೆ ಯಾವುದೇ ದೊಡ್ಡ ಮಟ್ಟದ ಸಿದ್ಧತೆಗಳನ್ನು ನಾನು ಮಾಡಿಕೊಂಡಿರಲಿಲ್ಲ ಎಂದು ಜಬೀರ್ ತಿಳಿಸಿದ್ದಾರೆ. ಇದನ್ನೂ ಓದಿ: ಟಿಕ್‍ಟಾಕ್ ಪ್ರಿಯರಿಗೆ ಶುಭ ಸುದ್ದಿ – ಭಾರತದಲ್ಲಿ ಮತ್ತೆ ಆ್ಯಪ್ ಆರಂಭ?

    ರಾಮಾಯಣ ರಸಪ್ರಶ್ನೆ ಸ್ಪರ್ಧೆ ಜುಲೈ 23 ರಿಂದ 25 ರ ವರೆಗೆ ನಡೆದಿತ್ತು. ಸಮಾಜಶಾಸ್ತ್ರದಲ್ಲಿ ಬಿಎ ಮುಗಿಸಿರುವ ಜಬೀರ್ ಅಂತಿಮ ವರ್ಷದ ವಾಫಿ ಸ್ನಾತ್ತಕೋತ್ತರ ವಿದ್ಯಾರ್ಥಿಯಾಗಿದ್ದಾರೆ. ಎರಡನೇ ವಿಜೇತ ಬಸಿತ್ 5ನೇ ವರ್ಷದ ವಾಫಿ ವಿದ್ಯಾರ್ಥಿಯಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಶ್ರೀಲಂಕಾದಲ್ಲಿ ಸಂಕಷ್ಟಕ್ಕೆ ಸಿಲುಕಿದ ರಾಮಾಯಣ ಖ್ಯಾತಿಯ ಹಿಂದೂ ದೇವಾಲಯ!

    ಶ್ರೀಲಂಕಾದಲ್ಲಿ ಸಂಕಷ್ಟಕ್ಕೆ ಸಿಲುಕಿದ ರಾಮಾಯಣ ಖ್ಯಾತಿಯ ಹಿಂದೂ ದೇವಾಲಯ!

    ಕೊಲಂಬೊ: ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾಗಿದ್ದು, ಅದರ ಪರಿಣಾಮ ಅಲ್ಲಿನ ಹಿಂದೂ ದೇವಾಲಯದ ಮೇಲೂ ಬೀರಿದೆ. ದ್ವೀಪ ರಾಷ್ಟ್ರದ ನುವಾರಾ ಎಲಿಯಾದಲ್ಲಿರುವ ರಾಮಾಯಣ ಖ್ಯಾತಿಯ ಅಶೋಕ್ ವಾಟಿಯಾ ದೇವಾಲಯ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ.

    ಇದನ್ನು ಸೇತಾ ಅಮ್ಮನ್ ದೇವಸ್ಥಾನ ಎಂದೂ ಸಹ ಕರೆಯುತ್ತಾರೆ. ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ತಲೆದೋರಿದ್ದು, ದೇವಾಲಯದ ಆಡಳಿತವು ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದೆ. ಈ ಕುರಿತು ದೇವಾಲಯದ ಅಧ್ಯಕ್ಷ ಮತ್ತು ನುವಾರಾ ಎಲಿಯಾ ಕ್ಷೇತ್ರದ ಸಂಸದ ವಿ.ರಾಧಾಕೃಷ್ಣನ್ ಮಾತನಾಡಿದ್ದು, ಸೀತಾ ಮಾತಾ ದೇವಾಲಯವನ್ನು ನಡೆಸಲು ದೇವಾಲಯ ಮತ್ತು ಅದರ ಸಿಬ್ಬಂದಿಗೆ ಕಷ್ಟಕರವಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನಮ್ಮಲ್ಲಿ ಪೆಟ್ರೋಲ್ ಮುಗಿದಿದೆ: ಶ್ರೀಲಂಕಾ

    ರಾಮಾಯಣದಲ್ಲಿ ಅಶೋಕ್ ವಾಟಿಕಾ (ಅಶೋಕ ವನ) ಪ್ರಮುಖ ಪಾತ್ರ ವಹಿಸುತ್ತದೆ. ಭಾರತದಿಂದ ಅದರಲ್ಲೂ ಮುಖ್ಯವಾಗಿ ಉತ್ತರ ಭಾರತದಿಂದ ಅನೇಕ ಭಕ್ತರು ಇಲ್ಲಿಗೆ ಬರುತ್ತಾರೆ. ಆದರೆ ಈಗ ಯಾರೂ ಬರುತ್ತಿಲ್ಲ. ದೇವಾಲಯದ ಅಭಿವೃದ್ಧಿ ಭಕ್ತರು ಮತ್ತು ಪ್ರವಾಸಿಗರ ಮೇಲೆ ಅವಲಂಬಿತವಾಗಿರುವಾಗ, ದೇವಸ್ಥಾನವನ್ನು ನಡೆಸುವುದು ಕಷ್ಟಕರವಾಗಿದೆ. ಸಿಬ್ಬಂದಿ ಸಹ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಭಾರತೀಯರು ಈಗಿನ ಪರಿಸ್ಥಿತಿಯಲ್ಲಿ ಶ್ರೀಲಂಕಾಕ್ಕೆ ಭೇಟಿ ನೀಡಲು ಭಯಪಡುತ್ತಾರೆ ಎಂದು ರಾಧಾಕೃಷ್ಣನ್ ತಿಳಿಸಿದ್ದಾರೆ.

    ನಾನು ಈ ಹಿಂದೆ ಸೀತಾ ದೇವಸ್ಥಾನವನ್ನು ಖಾಲಿಯಾಗಿ ನೋಡಿಲ್ಲ. ಜನರು ಸದಾ ಕಾಲ ಇಲ್ಲಿಗೆ ಬಂದು ಪ್ರಾರ್ಥನೆ ಸಲ್ಲಿಸುತ್ತಿದ್ದರು. ಆದರೆ ಈಗ ಭಕ್ತರು ಯಾರೂ ಬರುವುದಿಲ್ಲ. ಶ್ರೀಲಂಕಾದಲ್ಲಿ ವಿದ್ಯುತ್ ಕಡಿತದಿಂದ ಜನರು ಬರಲು ಹೆದರುತ್ತಾರೆ. ಡೀಸೆಲ್, ಪೆಟ್ರೋಲ್ ಮತ್ತು ಗ್ಯಾಸ್ ಅಭಾವ ಕೂಡ ಎದುರಾಗಿದೆ ಎಂದು ಸಮಸ್ಯೆ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ರಫ್ತಿಗೆ ನಿಷೇಧ ಹೇರಿದ ಭಾರತ- ಗೋಧಿ ಬೆಲೆ ದಾಖಲೆ ಮಟ್ಟದಲ್ಲಿ ಏರಿಕೆ

    ರಾಮಾಯಣದಲ್ಲಿ ಭಾರತ ಮತ್ತು ಶ್ರೀಲಂಕಾ ದೇಶಗಳ ಸಂಸ್ಕೃತಿ, ಜನಜೀವನದ ಬಗ್ಗೆ ತಿಳಿಸಲಾಗಿದೆ. ರಾಮಾಯಣದಲ್ಲಿ ರಾವಣನು ಸೀತೆಯನ್ನು ಹೇಗೆ ತಂದು ಅಶೋಕ ವಾಟಿಕಾದಲ್ಲಿ ಇರಿಸಿದನು ಎಂದು ಉಲ್ಲೇಖಿಸಲಾಗಿದೆ.

    ಶ್ರೀಲಂಕಾದಲ್ಲಿ ಔಷಧಿಗಳು, ಅಡುಗೆ ಅನಿಲ, ಇಂಧನ ಮತ್ತು ಆಹಾರ ಸೇರಿದಂತೆ ಮೂಲಭೂತ ಅವಶ್ಯಕತೆಗಳ ಕೊರತೆಯೊಂದಿಗೆ ಆರ್ಥಿಕ ಸ್ಥಿತಿಯು ಹದಗೆಟ್ಟಿದೆ. ಅಗತ್ಯ ವಸ್ತುಗಳ ಆಮದಿಗೆ ಬೇಕಾದ ವಿದೇಶಿ ಕರೆನ್ಸಿ ಕೊರತೆಯೂ ಈ ಬಿಕ್ಕಟ್ಟಿಗೆ ಕಾರಣವಾಗಿದೆ.

  • ರಾಮ ದೇವರಲ್ಲ, ನನಗೆ ನಂಬಿಕೆಯೂ ಇಲ್ಲ: ಬಿಹಾರ್‌ ಮಾಜಿ ಸಿಎಂ

    ರಾಮ ದೇವರಲ್ಲ, ನನಗೆ ನಂಬಿಕೆಯೂ ಇಲ್ಲ: ಬಿಹಾರ್‌ ಮಾಜಿ ಸಿಎಂ

    ಪಟ್ನಾ: ರಾಮ ದೇವರಲ್ಲ, ರಾಮನ ಮೇಲೆ ನನಗೆ ನಂಬಿಕೆಯೂ ಇಲ್ಲ ಎಂದು ಬಿಹಾರ್‌ ಮಾಜಿ ಮುಖ್ಯಮಂತ್ರಿ ಜಿತನ್‌ ರಾಮ್‌ ಮಾನ್ಜಿ ಹೇಳಿದ್ದಾರೆ.

    ಹಿಂದೂಸ್ತಾನ್ ಅವಾಮ್ ಮೋರ್ಚಾ (ಹೆಚ್‌ಎಎಂ) ಮುಖ್ಯಸ್ಥ ಮಾನ್ಜಿ ಅವರು ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ಅಂಗವಾಗಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಇದನ್ನೂ ಓದಿ: ಜೆ‌ಎನ್‌ಯು ಕ್ಯಾಂಪಸ್ ಬಳಿ ಕೇಸರಿ ಧ್ವಜ ಹಾರಿಸಿದ ಹಿಂದೂ ಸೇನೆ

    RAMANAVAMI

    ತುಳಸೀದಾಸ್‌ ಮತ್ತು ವಾಲ್ಮೀಕಿ ಅವರು ತಮ್ಮ ಸಂದೇಶಗಳನ್ನು ಹೇಳಲು ರಾಮ ಎನ್ನುವ ಪಾತ್ರವನ್ನು ಸೃಷ್ಟಿಸಿದ್ದಾರೆ. ಅವರು ಬರೆದಿರುವ ರಾಮಾಯಣ ಮಹಾಕಾವ್ಯದಲ್ಲಿ ಉತ್ತಮ ಅಂಶಗಳು ಇವೆ. ಅದರ ಮೇಲೆ ನನಗೆ ನಂಬಿಕೆ ಇದೆ. ನನಗೆ ತುಳಸೀದಾಸ್‌ ಮತ್ತು ವಾಲ್ಮೀಕಿ ಮೇಲೆ ನಂಬಿಕೆ ಇದೆಯೇ ಹೊರತು ರಾಮನಲ್ಲಲ್ಲ ಎಂದು ಮಾನ್ಜಿ ತಿಳಿಸಿದ್ದಾರೆ.

    ಈ ವಿಶ್ವದಲ್ಲಿರುವುದು ಎರಡೇ ಜಾತಿ. ಶ್ರೀಮಂತ ಮತ್ತು ಬಡವ ಜಾತಿ. ಆದರೆ ನಮ್ಮಲ್ಲಿ ದಲಿತರ ವಿಚಾರವಾಗಿ ಬ್ರಾಹ್ಮಣರು ತಾರತಮ್ಯ ಮಾಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ‘ದಿ ಕಾಶ್ಮೀರ್ ಫೈಲ್ಸ್’ ನಂತರ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಕೈಯಲ್ಲಿ ‘ಡೆಲ್ಲಿ ಫೈಲ್ಸ್’

    ಶಬರಿ ಕೊಟ್ಟ ರುಚಿಯ ಹಣ್ಣನ್ನು ರಾಮ ತಿಂದನು ಎಂಬುದು ನಾವು ನಿತ್ಯ ಕೇಳುವ ಕಥೆ. ನಾವು ಕಚ್ಚಿದ ಹಣ್ಣನ್ನು ನೀವು ತಿನ್ನುವುದಿಲ್ಲ. ಆದರೆ ನಾವು ಮುಟ್ಟಿದ್ದನ್ನು ತಿನ್ನುತ್ತೀರಿ ಎಂದು ಚಾಟಿ ಬೀಸಿದ್ದಾರೆ.

    ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಭಾಗವಾಗಿ ಬಿಹಾರ್‌ನಲ್ಲಿ ಬಿಜೆಪಿ, ಜೆಡಿ(ಯು), ಹೆಚ್‌ಎಎಂ, ವಿಐಪಿ ಪಕ್ಷಗಳು ಮೈತ್ರಿ ಸರ್ಕಾರ ಆಡಳಿತ ನಡೆಸುತ್ತಿದೆ. ಮಾನ್ಜಿ ಅವರ ಪುತ್ರ ಸಂತೋಷ್‌ ಮಾನ್ಜಿ ಅವರು ನಿತೀಶ್‌ ಕುಮಾರ್‌ ನೇತೃತ್ವದ ಬಿಹಾರ್‌ ಸಂಪುಟದ ಸಚಿವರಾಗಿದ್ದಾರೆ. ಇದನ್ನೂ ಓದಿ: ಮುಸ್ಲಿಮರ ಮನೆ, ಬದುಕು ಕಸಿಯಲು ಬಿಜೆಪಿ ನಾಯಕರಲ್ಲೇ ಪೈಪೋಟಿ: ಮುಫ್ತಿ

  • ಯಾವನೋ ವೆಲ್ಲೆಸ್ಲಿ, ಕರ್ಜನ್‌ರೇ ಲಾರ್ಡ್ ಎನ್ನುವಂತಿರುವ ಪಾಠ ಸರಿಯಿಲ್ಲ: ಸಿಎಂ ರಾಜಕೀಯ ಕಾರ್ಯದರ್ಶಿ

    ಯಾವನೋ ವೆಲ್ಲೆಸ್ಲಿ, ಕರ್ಜನ್‌ರೇ ಲಾರ್ಡ್ ಎನ್ನುವಂತಿರುವ ಪಾಠ ಸರಿಯಿಲ್ಲ: ಸಿಎಂ ರಾಜಕೀಯ ಕಾರ್ಯದರ್ಶಿ

    ಚಿಕ್ಕಮಗಳೂರು: ಮಕ್ಕಳಿಗೆ ಗೊತ್ತಾಗಬೇಕಿರುವುದು ಹೇಗೆ ಬದುಕಬೇಕು, ಈ ದೇಶ ಯಾವ ರೀತಿ ಧರ್ಮದ ಆಧಾರದ ಮೇಲಿತ್ತು ಎನ್ನುವುದು. ಹೀಗಾಗಿ ಭಗವದ್ಗೀತೆಯನ್ನು ಪಠ್ಯಪುಸ್ತಕಕ್ಕೆ ತರಬೇಕು ಎನ್ನುವ ಬಗ್ಗೆ ಸರ್ಕಾರ ಆಲೋಚನೆ ಮಾಡುತ್ತಿರುವಲ್ಲಿ ವಾಸ್ತವಿಕತೆ ಇದೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್ ಹೇಳಿದರು.

    1947ರಲ್ಲಿ ಸ್ವಾತಂತ್ರ‍್ಯದ ಬಳಿಕ ಬಂದ ಮೊದಲ ಸರ್ಕಾರ ಭಾರತಕ್ಕೆ ಆಕ್ರಮಣಾಕಾರರಾಗಿ ಬ್ರಿಟಿಷರು, ಮೊಘಲರು, ಡಚ್ಚರು ಬಂದಿದ್ದರು ಎಂದು ತೋರಿಸಬೇಕಿತ್ತು. ನಾನು-ನೀವು ಓದಿರೋ ಪಾಠದಲ್ಲಿ ಯಾವನೋ ಲಾರ್ಡ್ ವೆಲ್ಲೆಸ್ಲಿ, ಲಾರ್ಡ್ ಕರ್ಜನ್‌ನನ್ನು ತಂದು ಅವರನ್ನೇ ಲಾರ್ಡ್ ಎಂದು ಹೇಳಿಕೊಟ್ಟಿರುವುದು ದುರಂತ. ಅಲೆಕ್ಸಾಂಡರ್‌ನನ್ನು ಮಕ್ಕಳಿಗೆ ಗ್ರೇಟ್ ಎಂದು ಹೇಳಿಕೊಟ್ಟಿದ್ದಾರೆ. ನಮ್ಮ ಮಕ್ಕಳಿಗೆ ಹೇಳುತ್ತಿರುವ ಪಾಠವೇ ಸರಿಯಿಲ್ಲ ಎಂದರು. ಇದನ್ನೂ ಓದಿ: ಭಾರತದಲ್ಲಿ ಮುಂದಿನ ಐದು ವರ್ಷಗಳಲ್ಲಿ ಜಪಾನ್ 3.2 ಲಕ್ಷ ಕೋಟಿ ರೂ. ಹೂಡಿಕೆ ಮಾಡಲಿದೆ: ಮೋದಿ

    ಇದೀಗ ತಡವಾಗಿಯಾದರೂ ಈ ದೇಶದ ಒಳಗಡೆ ಈ ರೀತಿ ಆಲೋಚನೆ ಮಾಡುವಂತಹ ಒಂದು ನಾಯಕತ್ವ ಬಂದಿದೆ. ಆ ನಾಯಕತ್ವಕ್ಕೆ ಧನ್ಯವಾದ. ಕರ್ನಾಟಕ ಮಾತ್ರವಲ್ಲ, ದೇಶದ ತುಂಬಾ ಇದೇ ರೀತಿಯ ನಾಯಕತ್ವ ಬರಬೇಕು. ದೇಶದ ಧರ್ಮಗ್ರಂಥಗಳಾದ ರಾಮಾಯಣ, ಮಹಾಭಾರತವೇ ನಮಗೆ ಆಧಾರಸ್ತಂಭ. ಅವು ಒಂದೇ ನದಿಯ ಎರಡು ದಂಡೆಗಳು. ಕೇವಲ ಭಗವದ್ಗೀತೆ ಅಲ್ಲ. ರಾಮಾಯಣ-ಮಹಾಭಾರತದ ಎಲ್ಲಾ ಅಂಶಗಳೂ ಪಠ್ಯದಲ್ಲಿ ಬರಬೇಕು. ಆಗ ಧರ್ಮದ ಆಧಾರದ ಮೇಲೆ ದೇಶ ಉಳಿಯುತ್ತದೆ ಎಂದು ಆಶಯ ವ್ಯಕ್ತಪಡಿಸಿದರು. ಇದನ್ನೂ ಓದಿ: ಸ್ಟೇಜ್‌ನತ್ತ ನುಗ್ಗಿದ ಫ್ಯಾನ್ಸ್‌ ನಿಯಂತ್ರಣಕ್ಕೆ ಪೊಲೀಸರ ಹರಸಾಹಸ- RRR ಪ್ರೀ-ರಿಲೀಸ್‌ ಇವೆಂಟ್‌ ತಡವಾಗಿ ಆರಂಭ

    ಮಹಾಭಾರತ-ರಾಮಾಯಣ ಒಂದು ನದಿಯ ಎರಡು ದಂಡೆಗಳಿದ್ದಂತೆ. ಭಾರತ ಎರಡು ದಂಡೆಗಳ ಮಧ್ಯೆ ಹರಿಯುವ ನದಿ. ರಾಮಾಯಣ ಹಾಗೂ ಮಹಾಭಾರತ ನಿಜವಾಗಿ ನಡೆದಿರುವಂತಹ ಎರಡು ಘಟನೆಗಳು ಎನ್ನುವುದು ನಮ್ಮ ನಂಬಿಕೆ. ಶ್ರೀಕೃಷ್ಣ ಭಗವದ್ಗೀತೆಯನ್ನು ಜನ ಧರ್ಮದ ಆಧಾರದಲ್ಲಿ ಬದುಕಬೇಕೆಂದು ಹೇಳಿದ್ದಾರೆಯೇ ವಿನಃ ಬೇರೇನಕ್ಕೂ ಅಲ್ಲ ಎಂದರು.

  • ರಾಮಾಯಣ ಸೀರಿಯಲ್ ಖ್ಯಾತಿಯ ಬಾಲಿವುಡ್ ನಟ ಚಂದ್ರಶೇಖರ್ ಇನ್ನಿಲ್ಲ

    ರಾಮಾಯಣ ಸೀರಿಯಲ್ ಖ್ಯಾತಿಯ ಬಾಲಿವುಡ್ ನಟ ಚಂದ್ರಶೇಖರ್ ಇನ್ನಿಲ್ಲ

    ಮುಂಬೈ: ಬಾಲಿವುಡ್ ಹಿರಿಯ ನಟ ಹಾಗೂ ಸಾಮಾಜಿಕ ಹೋರಾಟಗಾರ ಚಂದ್ರಶೇಖರ್(98)ರವರು ಇಂದು ನಿಧನರಾಗಿದ್ದಾರೆ.

    ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಚಂದ್ರಶೇಖರ್‌ರವರು  ತಮ್ಮ ನಿವಾಸದಲ್ಲಿ ಇಂದು ಬೆಳಗ್ಗೆ 7ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ ಎಂದು ಅವರ ಪುತ್ರ ಅಶೋಕ್ ಶೇಖರ್ ತಿಳಿಸಿದ್ದಾರೆ. ಚಂದ್ರಶೇಖರ್‌ರವರು 1987ರಲ್ಲಿ ಪ್ರಸಾರವಾಗುತ್ತಿದ್ದ ರಾಮಾಯಣ ಧಾರಾವಾಹಿಯಲ್ಲಿ ದಶರಥ ಮಹಾರಾಜನ ಮಂತ್ರಿ ಸುಮಂತನ ಪಾತ್ರದಲ್ಲಿ ಅಭಿನಯಿಸಿದ್ದರು.

    1954ರಲ್ಲಿ ವಿ ಶಾಂತಾರಾಮ್ ನಿರ್ದೇಶಿಸಿದ್ದ ಔರತ್ ಥೇರಿ ಯೆಹಿ ಕಹಾನಿ ಸಿನಿಮಾದ ಮೂಲಕ ಚಿತ್ರರಂಗ ಪ್ರವೇಶಿಸಿದ ಅವರು, ಈವರೆಗೂ ಸುಮಾರು 250 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. 1950 ದಶಕದ ಖ್ಯಾತ ನಟರಾಗಿದ್ದ ಚಂದ್ರ ಶೇಖರ್‌ರವರು ಕಾಳಿ ಟೋಪಿ ಲಾಲ್ ರುಮಾಲ್, ಬಾರದಾರಿ, ಸ್ಟ್ರೀಟ್ ಸಿಂಗರ್, ರುಸ್ತೋಮ್ ಇ ಬಾಗ್ದಾದ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

    1964ರಲ್ಲಿ ಚಾ ಚಾ ಚಾ ಎಂಬ ಮ್ಯೂಸಿಕಲ್ ಸಿನಿಮಾವನ್ನು ನಿರ್ದೇಶಿಸಿದ್ದರು. ಅಲ್ಲದೇ 1985ರಿಂದ 1996ರವರೆಗೆ ಸಿನಿ ಮತ್ತು ಕಲಾವಿದರ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಇದನ್ನೂ ಓದಿ:  ಆರೋಗ್ಯ ತಪಾಸಣೆಗಾಗಿ ಅಮೆರಿಕಾಗೆ ತೆರಳಿದ ತಲೈವಾ

  • ರಾಮಾಯಾಣ ಧಾರಾವಾಹಿಯ ರಾಮ ಪಾತ್ರಧಾರಿ ಅರುಣ್ ಬಿಜೆಪಿ ಸೇರ್ಪಡೆ

    ರಾಮಾಯಾಣ ಧಾರಾವಾಹಿಯ ರಾಮ ಪಾತ್ರಧಾರಿ ಅರುಣ್ ಬಿಜೆಪಿ ಸೇರ್ಪಡೆ

    ನವದೆಹಲಿ: ಪ್ರಸಿದ್ಧ ರಾಮಾಯಾಣ ಧಾರಾವಾಹಿ ಖ್ಯಾತಿಯ ಶ್ರೀರಾಮನ ಪಾತ್ರ ನಿರ್ವಹಿಸಿದ್ದ ಹಿರಿಯ ನಟ ಅರುಣ್ ಗೋವಿಲ್ ಬಿಜೆಪಿ ಸೇರ್ಪಡೆಯಾದರು. ದೆಹಲಿಯ ಬಿಜೆಪಿ ಕಾರ್ಯಾಲಯದಲ್ಲಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ನೇತೃತ್ವದಲ್ಲಿ ಅರುಣ್ ಗೋವಿಲ್ ಕಮಲ ಧ್ವಜ ಹಿಡಿದರು.

    ಬಿಜೆಪಿ ಸೇರ್ಪಡೆ ಬಳಿಕ ಮಾತನಾಡಿದ ಅರುಣ್ ಗೋವಿಲ್, ದೇಶಕ್ಕಾಗಿ ಸೇವೆ ಸಲ್ಲಿಸುವ ಉದ್ದೇಶದಿಂದ ಬಿಜೆಪಿ ಸೇರಿದ್ದೇನೆ. ದೇಶ ಸೇವೆ ಸಲ್ಲಿಸಲು ಬಿಜೆಪಿ ಉತ್ತಮ ವೇದಿಕೆಯಾಗಿದೆ. ಜೈ ಶ್ರೀರಾಮ ಘೋಷಣೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ಅಲರ್ಜಿ ಇರೋದನ್ನ ನಾನು ಗಮನಿಸಿದ್ದೇನೆ. ಜೈಶ್ರೀರಾಮ ಕೇವಲ ಘೋಷಣೆಯಲ್ಲ ಅದೊಂದು ಶಕ್ತಿ ಎಂದು ದೀದಿ ವಿರುದ್ಧ ವಾಗ್ದಾಳಿ ನಡೆಸಿದರು.

    ಸದ್ಯ ಪಂಚ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯುತ್ತಿದ್ದು, ಅರುಣ್ ಗೋವಿಲ್ ಅವರನ್ನ ಬಿಜೆಪಿ ಪ್ರಚಾರದ ಅಖಾಡಕ್ಕೆ ಇಳಿಸಲಿದೆ ಎಂದು ಹೇಳಲಾಗುತ್ತಿದೆ. ಶ್ರೀರಾಮನ ಪಾತ್ರ ನಿರ್ವಹಿಸಿದ್ದ ಅರುಣ್ ಗೋವಿಲ್ ದೇಶಾದ್ಯಂತ ಚಿರಪರಿಚಿತರು. ಲಾಕ್‍ಡೌನ್ ವೇಳೆ ಸರ್ಕಾರ ರಾಮಾಯಾಣ ಧಾರಾವಾಹಿಯನ್ನ ಪುನರ್ ಪ್ರಸಾರ ಮಾಡಿತ್ತು.

  • ಸೀರಿಯಲ್ ನೋಡಿ ರಾಮಾಯಣ ಬರೆದ ಬಾಲಕ

    ಸೀರಿಯಲ್ ನೋಡಿ ರಾಮಾಯಣ ಬರೆದ ಬಾಲಕ

    ಭುವನೇಶ್ವರ: ಲಾಕ್‍ಡೌನ್ ವೇಳೆ ಸೀರಿಯಲ್ ನೋಡಿ ಒಡಿಶಾದ 10 ವರ್ಷದ ಬಾಲಕ ರಾಮಾಯಣ ಪುಸ್ತಕ ಬರೆದಿದ್ದಾರೆ.

    ಆಯುಷ್ ಕುಮಾರ್(10) ರಾಮಾಯಣ ಪುಸ್ತಕವನ್ನು ಬರೆದಿದ್ದಾನೆ. ಈತ ರಾಮಾಯಣದ ಸೀರಿಯಲ್‍ಗಳನ್ನು ನೋಡಿ ಒಡಿಯಾ ಭಾಷೆಯಲ್ಲಿ 104 ಪುಟ ಇರುವ ರಾಮಾಯಣವನ್ನು ಬರೆದಿದ್ದಾನೆ.

    ಲಾಕ್‍ಡೌನ್ ಸಮಯದಲ್ಲಿ ಮರುಪ್ರಸಾರವಾಗುವ ರಾಮಾಯಣವನ್ನು ನೋಡಲು ನನ್ನ ಅಂಕಲ್ ಹೇಳಿದ್ದರು. ನೋಡುವುದು ಮಾತ್ರವಲ್ಲ ಅದನ್ನು ಬರೆಯಲು ಪ್ರಯತ್ನಿಸು ಎಂದು ಹೇಳಿದ್ದರು. ಪ್ರತಿದಿನ ನೋಡುತ್ತಿದ್ದೆ. ಪ್ರತಿನಿತ್ಯ ನಾನು ನೋಡಿದ ಎಪಿಸೋಡ್‍ಗಳನ್ನು ಬರೆಯತೊಡಗಿದ್ದೆ. ರಾಮಾಯಣವನ್ನು ಬರೆದು ಮುಗಿಸಲು ಸರಿ ಸುಮಾರು 2 ತಿಂಗಳ ಸಮಯವನ್ನು ತೆಗೆದುಕೊಂಡಿತ್ತು ಎಂದು ಆಯುಷ್ ಹೇಳಿದ್ದಾನೆ.

     

    ರಾಮನ 14 ವರ್ಷಗಳ ಕಾಲ ವನವಾಸ, ಸೀತೆಯ ಅಪಹರಣ ಹೀಗೆ ಅನೇಕ ಪ್ರಮುಖ ಘಟನೆಯನ್ನು ರಾಮಾಯಣದ ಪುಸ್ತಕದಲ್ಲಿ ಬರೆದಿದ್ದೇನೆ. ರಾಮ ಅಯೋಧ್ಯೆಗೆ ಹಿಂದಿರುಗುವಾಗ ಆತನಿಗೆ ಸಿಕ್ಕಿರುವ ಸ್ವಾಗತವನ್ನು ತುಂಬಾ ಸರಳವಾಗಿ ಚೆನ್ನಾಗಿ ವಿವರಿಸಿ ಬರೆದಿದ್ದೇನೆ ಎಂದು ಹೇಳಿದ್ದಾನೆ.

  • ಎಲ್ಲರನ್ನ ನೋಡಿದಾಗ ರಾಮಾಯಣ ನೆನಪಾಗುತ್ತೆ – ಸಂಸದ ಅನಂತಕುಮಾರ್ ಮತ್ತೆ ವಿವಾದ

    ಎಲ್ಲರನ್ನ ನೋಡಿದಾಗ ರಾಮಾಯಣ ನೆನಪಾಗುತ್ತೆ – ಸಂಸದ ಅನಂತಕುಮಾರ್ ಮತ್ತೆ ವಿವಾದ

    ಬೆಳಗಾವಿ: ಮಾಸ್ಕ್ ಹಾಕಿಕೊಂಡವರನ್ನು ನೋಡಿದರೆ ರಾಮಾಯಣ ನೆನಪಾಗುತ್ತದೆ ಎಂದು ಹೇಳುವ ಮೂಲಕ ಕೇಂದ್ರದ ಮಾಜಿ ಸಚಿವ ಮತ್ತು ಸಂಸದ ಅನಂತಕುಮಾರ್ ಹೆಗಡೆ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: BSNL ಸಂಸ್ಥೆಯಲ್ಲಿರುವವರು ದೇಶದ್ರೋಹಿಗಳು: ಸಂಸದ ಅನಂತಕುಮಾರ್ ಹೆಗಡೆ

    ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿ ಗ್ರಾಮದಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಸಂಸದ ಅನಂತಕುಮಾರ್ ಹೆಗಡೆ ವಿವಾದಿತ ಹೇಳಿಕೆಯನ್ನು ನೀಡಿದ್ದಾರೆ. ಇದೀಗ ಕೊರೊನಾ ಕುರಿತು ಭಾಷಣ ಮಾಡುವಾಗ ಮಾತನಾಡಿದ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ನಮಗೆ ಸುಮ್ಮನೆ ಹೆದರಿಸಿದ್ದಾರೆ. ಈ ಕೊರೊನಾ, ಕಿರೊನಾ ಏನೋ ಇಲ್ಲ. ತಪ್ಪು ತಿಳಿದುಕೊಳ್ಳಬೇಡಿ ತಮಾಷೆಗೆ ಹೇಳುವುದು ನಾನು, ಎಲ್ಲರನ್ನು ನೋಡಿದಾಗ ನನಗೆ ತುಂಬಾ ರಾಮಾಯಣ ನೆನಪಾಗುತ್ತೆ. ಎಷ್ಟು ಪ್ರೀತಿ ಅಂತ ಎಂದು ಹೇಳುವ ಮೂಲಕ ಮಾಸ್ಕ್ ಹಾಕಿಕೊಂಡವರನ್ನು ಸಂಸದ ಅನಂತಕುಮಾರ್ ಹೆಗಡೆ ಕಪಿಗಳಿಗೆ ಹೋಲಿಸಿದ್ದಾರೆ.

    ಅಷ್ಟೇ ಅಲ್ಲದೇ ಇರಲಿ, ಈ ಭ್ರಮೆಯಲ್ಲಿ ನಾವು ಬಹಳ ದಿವಸ ಬದುಕುವುದು ಬೇಡ. ಅದನ್ನು ನಾವು ನಮ್ಮ ಮನೆಯಲ್ಲೇ ಎದುರಿಸಬೇಕಾಗುತ್ತದೆ. ಹೇಗೆ ನೆಗಡಿ ಬಂದಿದೆ. ಜ್ವರ ಬಂದಿದೆ. ಹಾಗೆ ಕೊರೊನಾ ಕೂಡ. ಇದನ್ನು ನಾವು ಮನೆಯಲ್ಲಿ ಎದುರಿಸಬೇಕಾಗುತ್ತದೆ. ಇದರ ಬಗ್ಗೆ ತೆಲೆಕೆಡಿಸಿಕೊಂಡರೆ ಆರ್ಥಿಕತೆ ದಿವಾಳಿತನ ಆಗುತ್ತೆ ಎಂದು ಅನಂತಕುಮಾರ್ ಹೆಗಡೆ ವಿವಾದಿತ ಹೇಳಿಕೆಯನ್ನು ನೀಡಿದ್ದಾರೆ.

    ಕೆಲವು ದಿನಗಳ ಹಿಂದೆ ಕಾರವಾರದ ಕುಮಟಾದಲ್ಲಿ ಸಂಸದರ ಹಾಗೂ ಕೇಂದ್ರ ಸರ್ಕಾರದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡುತ್ತ, ಬಿಎಸ್‍ಎನ್‍ಎಲ್ ಸಂಸ್ಥೆಯಲ್ಲಿರುವವರು ದೇಶದ್ರೋಹಿಗಳು, ದೇಶದ್ರೋಹಿಗಳೇ ಆ ಸಂಸ್ಥೆಯಲ್ಲಿ ತುಂಬಿಕೊಂಡಿದ್ದಾರೆ ಎಂದು ಕಿಡಿ ಕಾರುವ ಮೂಲಕ ವಿವಾದಿತ ಹೇಳಿಕೆ ನೀಡಿದ್ದರು.