Tag: Ramayana

  • ಶಾಲಾ ಪಠ್ಯದಲ್ಲಿ ರಾಮಾಯಣ ಸೇರಿಸಲು ಕ್ರಮ: ಸಿದ್ದರಾಮಯ್ಯ

    ಶಾಲಾ ಪಠ್ಯದಲ್ಲಿ ರಾಮಾಯಣ ಸೇರಿಸಲು ಕ್ರಮ: ಸಿದ್ದರಾಮಯ್ಯ

    ಬೆಂಗಳೂರು: ಶಾಲಾ (School) ಪಠ್ಯದಲ್ಲಿ ರಾಮಾಯಣ  (Ramayana) ಸೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.

    ವಿಧಾನಸೌಧದ ಬ್ಯಾಂಕ್ವೆಂಟ್ ಹಾಲ್‌ನಲ್ಲಿ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ವಾಲ್ಮೀಕಿ ಪ್ರಶಸ್ತಿಗಳನ್ನು ವಿತರಿಸಿ ಅವರು ಮಾತನಾಡಿದರು. ಈ ವೇಳೆ, ವಾಲ್ಮೀಕಿ ಅವರ ಬಗ್ಗೆ ಮತ್ತು ರಾಮಾಯಣವನ್ನು ಪಠ್ಯದಲ್ಲಿ ಸೇರಿಸಬೇಕು ಎನ್ನುವ ಉಗ್ರಪ್ಪ ಅವರ ಬೇಡಿಕೆ ಬಗ್ಗೆ ಸಕಾರಾತ್ಮಕವಾಗಿ ಪರಿಗಣಿಸಲಾಗುವುದು ಎಂದು ಭರವಸೆ ನೀಡಿದರು. ಇದೇ ವೇಳೆ, ಅಧಿಕಾರದಲ್ಲಿದ್ದಾಗ ನಿಮ್ಮ ಪರವಾಗಿ ಕೆಲಸ ಮಾಡಿ, ನಿಮ್ಮ ಸಮುದಾಯದ ಬದುಕಿನ ಅವಕಾಶಗಳನ್ನು ಹೆಚ್ಚಿಸಿದವರ ಪರವಾಗಿ ನೀವು ಗಟ್ಟಿಯಾಗಿ ನಿಲ್ಲಬೇಕು ಎಂದು ಸಿಎಂ ಸಿದ್ದರಾಮಯ್ಯ ವಾಲ್ಮೀಕಿ ಸಮುದಾಯಕ್ಕೆ ಕರೆ ನೀಡಿದರು.

    SC/ST ಸಮುದಾಯಗಳಿಗೆ ಜನಸಂಖ್ಯೆ ಪ್ರಮಾಣದಷ್ಟೇ ಅಭಿವೃದ್ಧಿ ಬಜೆಟ್‌ನಲ್ಲೂ ಹಣ ಮೀಸಲಿಡಲು ಕಾಯ್ದೆ ಮಾಡಿದ್ದು ಇದೇ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ. SC/ST ಸಮುದಾಯಗಳಿಗೆ ಹೋಬಳಿಗೊಂದರಂತೆ ವಸತಿ ಶಾಲೆ, ಮೊರಾರ್ಜಿ ಶಾಲೆಗಳನ್ನು ಮಾಡಿದ್ದು ಇದೇ ಸಿದ್ದರಾಮಯ್ಯ. ಹೀಗಾಗಿ ಈ ಇತಿಹಾಸವನ್ನೆಲ್ಲಾ ಚೆನ್ನಾಗಿ ತಿಳಿದುಕೊಳ್ಳಿ. ಅಧಿಕಾರದಲ್ಲಿದ್ದಾಗ ಯಾರು ನಿಮ್ಮ ಪರವಾಗಿ ಇದ್ದಾರೋ ಅವರ ಪರವಾಗಿ ವಾಲ್ಮೀಕಿ ಸಮುದಾಯ ನಿಲ್ಲಬೇಕು ಎಂದರು. ಇದನ್ನೂ ಓದಿ: ಕುರುಬರನ್ನು ಎಸ್‌ಟಿಗೆ ಸೇರಿಸಿದರೆ ST ಮೀಸಲಾತಿ ಪ್ರಮಾಣ ಹೆಚ್ಚಾಗಬೇಕು: ಸಿದ್ದರಾಮಯ್ಯ

    ವಾಲ್ಮೀಕಿ ಮತ್ತು ಕುರುಬ ಸಮುದಾಯವನ್ನು ST ಗೆ ಸೇರಿಸಲು ನಾನು ಮತ್ತು ಉಗ್ರಪ್ಪ ಅವರು ರಾಮಕೃಷ್ಣ ಹೆಗಡೆಯವರಿಗೆ ಮನವಿ ಮಾಡಿದ್ದೆವು. ಹೆಗಡೆಯವರು ನಮ್ಮ ಮನವಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡಿದರೂ ಆಗ ಸೇರಿಸಲು ಆಗಲಿಲ್ಲ. ಆದರೆ, ಉಗ್ರಪ್ಪ ಅವರು ಸುಮ್ಮನೆ ಕೂರಲಿಲ್ಲ. ಉಗ್ರಪ್ಪ ಮತ್ತು ದೇವೇಗೌಡರ ನಡುವಿನ‌ ಒಡನಾಟ ಆಗಲೂ ಚೆನ್ನಾಗಿತ್ತು. ಈಗಲೂ ಚನ್ನಾಗಿದೆ, ದೇವೇಗೌಡರು ಮತ್ತು ಚಂದ್ರಶೇಖರ್ ಅವರ ಒಡನಾಡ ಚನ್ನಾಗಿತ್ತು. ಚಂದ್ರಶೇಖರ್ ಅವರು ಪ್ರಧಾನಿಯಾಗಿದ್ದಾಗ ಅವರನ್ನು ದೇವೇಗೌಡರ ಮೂಲಕ ಒಪ್ಪಿಸಿ ವಾಲ್ಮೀಕಿ ಸಮುದಾಯವನ್ನು ST ಗೆ ಸೇರಿಸಿದರು. ವಾಲ್ಮೀಕಿ, ಬೇಡ ಮತ್ತು ನಾಯಕ‌ ಸಮುದಾಯಕ್ಕೆ ಮೀಸಲಾತಿ ದೊರಕಲು ಉಗ್ರಪ್ಪನವರೇ ಕಾರಣ ಎನ್ನುವುದನ್ನು ಮರೆಯಬಾರದು ಎಂದರು.

    ಈಗ ಕುರುಬರನ್ನು ST ಗೆ ಸೇರಿಸಲು ಹೋರಾಟ ಮಾಡಿದವರು ನಾವಲ್ಲ. ಬಿಜೆಪಿಯ ಈಶ್ವರಪ್ಪ ಹೋರಾಟ ಮಾಡಿದರು. ಸಿಎಂ ಆಗಿದ್ದ ಬೊಮ್ಮಾಯಿ ಅವರು ಈಶ್ವರಪ್ಪ ಅವರ ಮನವಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡಿದ್ದಾರೆ. ಆ ಶಿಫಾರಸಿನ ಬಗ್ಗೆ ಕೆಲವು ಸ್ಪಷ್ಟನೆಗಳನ್ನು ಕೇಂದ್ರ ಕೇಳಿದೆ. ಅದಷ್ಟೇ ನಮ್ಮೆದುರಿಗಿದೆ ಎಂದು ಸ್ಪಷ್ಟಪಡಿಸಿದರು.

    ಜೆ.ಹೆಚ್.ಪಟೇಲರು ಸಿಎಂ ಆಗಿದ್ದಾಗ ಬೆಸ್ತರು ಸೇರಿ ಹಲವು ಸಮುದಾಯಗಳನ್ನು ST ಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸು ಹೋಗಿದೆ. ಇವತ್ತಿನವರೆಗೂ ಇದು ಸಾಧ್ಯವಾಗಿಲ್ಲ.‌ ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದ ವಾಲ್ಮೀಕಿ ಸಮುದಾಯದ ವಾಲ್ಮೀಕಿ ಅವರು ವಿಶ್ವ ಮಾನವರಾಗಿ ಶ್ರೇಷ್ಠವಾದ ರಾಮಾಯಣ ಮಹಾ ಕಾವ್ಯವನ್ನು ರಚಿಸಿದರು. ಹೀಗಾಗಿ ಸಮುದಾಯದ ಪ್ರತಿಯೊಬ್ಬರೂ ಶಿಕ್ಷಣವನ್ನು ಆದ್ಯತೆಯಾಗಿ ಪರಿಗಣಿಸಬೇಕು. ಸಮುದಾಯಕ್ಕೆ ಬೇಕಾದ ಹಕ್ಕು, ಅವಕಾಶಗಳನ್ನು ಸಂಘಟನೆ, ಹೋರಾಟದ ಮೂಲಕ ಪಡೆದುಕೊಳ್ಳುವುದು ತಪ್ಪಲ್ಲ. ಹೋರಾಟ ಮಾಡಲೇಬೇಕು.‌ ಇದನ್ನೇ ಅಂಬೇಡ್ಕರ್, ಬುದ್ದ, ಬಸವಣ್ಣ ಕೂಡ ಹೇಳಿದ್ದಾರೆ ಎಂದರು.

    ವಾಲ್ಮೀಕಿ ಸೌಧ ನಿರ್ಮಾಣಕ್ಕೆ ಮುಂದಿನ ವರ್ಷದ ಬಜೆಟ್ ನಲ್ಲಿ ಹಣ ಒದಗಿಸೋದಾಗಿ ಅವರು ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ಸಚಿವ ಸತೀಶ್ ಜಾರಕಿಹೋಳಿ ಸೇರಿ ಹಲವರು ಭಾಗಿಯಾಗಿದ್ದರು. ಇದನ್ನೂ ಓದಿ: ಸಾಮಾಜಿಕ, ಶೈಕ್ಷಣಿಕ ಸರ್ವೆ ವೇಳೆ 3 ಸಿಬ್ಬಂದಿ ಸಾವು – ತಲಾ 20 ಲಕ್ಷ ಪರಿಹಾರ ಘೋಷಣೆ

  • ವಿಜಯದಶಮಿಗೂ ರಾಮಾಯಣಕ್ಕೂ ಇದೆ ನಂಟು- ಪಾಂಡವರಿಗೆ ಏನು ಸಂಬಂಧ?

    ವಿಜಯದಶಮಿಗೂ ರಾಮಾಯಣಕ್ಕೂ ಇದೆ ನಂಟು- ಪಾಂಡವರಿಗೆ ಏನು ಸಂಬಂಧ?

    ಶ್ವಯುಜ ಶುಕ್ಲಪಾಡ್ಯದಂದು ಆರಂಭಗೊಂಡು ನವರಾತ್ರಿ (Navarathri)  ಹಬ್ಬದ ಒಂಭತ್ತು ದಿನಗಳು ಕಳೆದ ನಂತರ ಬರುವ ಹತ್ತನೇ ದಿನವೇ ‘ದಶಮಿ’. ಇದನ್ನೇ ವಿಜಯ ದಶಮಿ (Vijaya Dashmi) ಎಂದು ಕರೆಯುತ್ತಾರೆ. ಈ ದಿನ ಸಂತೋಷದ ಸಾಂಸ್ಕೃತಿಕ, ಧಾರ್ಮಿಕ, ವೈಭವದ ಮೆರವಣಿಗೆ ದೇಶದೆಲ್ಲೆಡೆ ನಡೆಯುತ್ತದೆ.

    ವಿಜಯದಶಮಿಯ ಹಿನ್ನೆಲೆ ಏನು?
    ಕಾಡೆಮ್ಮೆ ರೂಪದ ಮಹಿಷಾಸುರ (Mahishura) ದೀರ್ಘ ತಪಸ್ಸು ಮಾಡಿ, ಯಾವುದೇ ಮನುಷ್ಯನಿಂದ, ದೇವರಿಂದ ಅಥವಾ ವಿಶಿಷ್ಟ ಶಕ್ತಿಯಿಂದ ತನ್ನನ್ನು ಸಂಹರಿಸಲು ಸಾಧ್ಯವಾಗಬಾರದು ಎಂದು ಬ್ರಹ್ಮನಿಂದ ವರವನ್ನು ಪಡೆದಿದ್ದನು. ವರ ಸಿಕ್ಕಿದ ಕೂಡಲೇ ಅಹಂಕಾರದಿಂದ ಜನರಿಗೆ ಮತ್ತು ದೇವತೆಗಳಿಗೆ ತೊಂದರೆ ಕೊಡಲು ಆರಂಭಿಸಿದ. ಈತನ ಉಪಟಳವನ್ನು ತಾಳಲಾರದೇ ದೇವತೆಗಳು ಆದಿಶಕ್ತಿಯನ್ನು ಪೂಜಿಸಿ ಮಹಿಷನನ್ನು ಹತ್ಯೆ ಮಾಡುವಂತೆ ಬೇಡಿಕೊಳ್ಳುತ್ತಾರೆ. ಪ್ರಾರ್ಥನೆ ಕೇಳಿದ ದೇವಿ ದುರ್ಗೆಯಾಗಿ ಸಿಂಹದ ಮೇಲೆ ಕುಳಿತು, ಹತ್ತು ಕೈಗಳಲ್ಲಿ ಹತ್ತು ಬಗೆಯ ಆಯುಧಗಳನ್ನು ಹಿಡಿದು ಧರೆಗಿಳಿದಳು. ರಾಕ್ಷಸನಾದ ಮಹಿಷಾಸುರನನ್ನು ದಶಮಿಯ ದಿನ ಸಂಹಾರ ಮಾಡಿದಳು. ಅಂದಿನಿಂದ ದಶಮಿಯಂದು ಮಹಿಷಾಸುರನ್ನು ಕೊಂದು ವಿಜಯ ಸಿಕ್ಕಿದ್ದಕ್ಕೆ `ವಿಜಯದಶಮಿ’ ಹಬ್ಬವನ್ನು ಎಲ್ಲೆಡೆ ಆಚರಿಸಲಾಗುತ್ತಿದೆ.

    ರಾಮಾಯಣಕ್ಕೆ ಏನು ಸಂಬಂಧ?
    ರಾವಣನನ್ನು ಸಂಹಾರ ಮಾಡುವ ಮೊದಲು ನಾರದರು ರಾಮನಿಗೆ ಶರವನ್ನರಾತ್ರಿ ವ್ರತವನ್ನು ಮಾಡಲು ಹೇಳಿದ್ದರು. ಈ ವ್ರತವನ್ನು ಪೂರ್ಣಗೊಳಿಸಿದ ನಂತರ ರಾಮನು ಲಂಕೆಯ ಮೇಲೆ ಆಕ್ರಮಣ ಮಾಡಿ ಯುದ್ಧದಲ್ಲಿ ರಾವಣನನ್ನು ವಧಿಸಿದನು. ‘ದಶಹರ’ದಂದು ದಶಕಂಠನಾಗಿದ್ದ ರಾವಣನನ್ನು ಶ್ರೀರಾಮನು ಸಂಹರಿಸಿದ ಬಳಿಕ ವಿಜಯೋತ್ಸವ ನಡೆಯಿತು ಎನ್ನುವ ಪ್ರತೀತಿ ಇದೆ. ಹೀಗಾಗಿ ಉತ್ತರಭಾರತ ಕಡೆ ದಸರಾ ಸಮಯದಲ್ಲಿ 10 ದಿನಗಳ ಕಾಲ ರಾಮನ ವಿವಿಧ ಘಟನೆಗಳನ್ನು ವಿವರಿಸುವ ರಾಮಲೀಲಾ ಕಥನ ನಡೆಯುತ್ತದೆ. ದಶಮಿಯಂದು ರಾವಣನ ಆಕೃತಿಯನ್ನು ಸುಡಲಾಗುತ್ತದೆ. ದೆಹಲಿಯಲ್ಲಿ ರಾಷ್ಟ್ರೀಯ ಮಹತ್ವ ಇರುವ ಹಬ್ಬ ಎಂಬಂತೆ ಆಚರಿಸಲಾಗುತ್ತದೆ. ರಾಮಲೀಲಾ ಮೈದಾನದಲ್ಲಿ ಈ ಹಬ್ಬಕ್ಕಾಗಿ ಭಾರೀ ಏರ್ಪಾಡು ನಡೆಯುತ್ತದೆ.

    ಪಾಂಡವರಿಗೂ ಏನು ಸಂಬಂಧ?
    ದ್ವಾಪರ ಯುಗದಲ್ಲಿ ಪಾಂಡವರು ಹದಿಮೂರು ವರ್ಷಗಳ ವನವಾಸ ಮುಗಿಸಿ ಒಂದು ವರ್ಷ ಅಜ್ಞಾತವಾಸ ಮುಗಿಸಿದ ದಿನವೇ ವಿಜಯದಶಮಿ. ಪಾಂಡವರು ಒಂದು ವರ್ಷದ ಅಜ್ಞಾತವಾಸವನ್ನು ಮತ್ಸ್ಯದೇಶದಲ್ಲಿ ಕಳೆಯಲು ಮುಂದಾಗುತ್ತಾರೆ. ಈ ದೇಶದ ರಾಜನಾದ ವಿರಾಟನ ಆಸ್ಥಾನದಲ್ಲಿ ಆಗ ಧರ್ಮರಾಜ ಕಂಕಭಟ್ಟನಾದರೆ, ಭೀಮ ಬಾಣಸಿಗನಾದ ವಲಲನಾಗಿ ವೇಷ ಬದಲಾಯಿಸುತ್ತಾರೆ. ಅರ್ಜುನ ಬೃಹನ್ನಳೆಯಾಗಿ ನೃತ್ಯ ಶಿಕ್ಷಕಿಯಾಗಿ ನಕುಲ ಸಹದೇವರು ಅನುಕ್ರಮವಾಗಿ ಅಶ್ವಪಾಲಕ-ಗೋಪಾಲಕರಾದರು. ದ್ರೌಪದಿ ಸೈರಂಧ್ರಿಯಾಗಿ ವಿರಾಟನ ಪತ್ನಿಯಾದ ಸುದೇಷ್ಣೆಯ ಸೇವೆಯಲ್ಲಿ ನಿಂತಳು. ಅಜ್ಞಾತವಾಸದ ಕೊನೆಯಲ್ಲಿ ಕುರುಸೇನೆ ವಿರಾಟನ ರಾಜ್ಯದಲ್ಲಿರುವ ಗೋವುಗಳನ್ನು ಅಪಹರಿಸಿತ್ತು. ಈ ಸಮಯದಲ್ಲಿ ವಿರಾಟನ ಪುತ್ರನಾದ ಉತ್ತರಕುಮಾರ ನಾನು ಕುರುಸೇನೆಯನ್ನು ಸೆದೆ ಬಡಿಯುತ್ತೇನೆ ಎಂದು ಹೇಳಿ ಜಂಬ ಕೊಚ್ಚಿಕೊಂಡು ಯುದ್ಧಕ್ಕೆ ಹೊರಟಿದ್ದ. ಬೃಹನ್ನಳೆಯನ್ನು ಸಾರಥಿಯನ್ನಾಗಿ ಮಾಡಿ ಯುದ್ಧಕ್ಕೆ ಕರೆದುಕೊಂಡು ಹೋದ. ಯುದ್ಧದಲ್ಲಿ ಸೋಲು ಸಮೀಪವಾಗುತ್ತಿದೆ ಎಂದಾಗ  ಉತ್ತರ ಕುಮಾರ ಯುದ್ಧದಿಂದ ಹಿಂದಕ್ಕೆ ಸರಿಯುತ್ತೇನೆ. ದಯವಿಟ್ಟು ಇಲ್ಲಿಂದ ತೆರಳೋಣ ಎಂದು ಹೇಳುತ್ತಾನೆ.  ಈ ವೇಳೆ ಬೃಹನ್ನಳೆ ರೂಪದಲ್ಲಿದ್ದ ಅರ್ಜುನ ಅಜ್ಞಾತವಾಸದ ಸಮಯದಲ್ಲಿ ಬನ್ನಿ ಮರದಲ್ಲಿ ಬಚ್ಚಿಟ್ಟಿದ್ದ ಶಸ್ತ್ರಾಸ್ತ್ರವನ್ನು ತೆಗೆದು ವಿರಾಟರಾಜನ ಶತ್ರುಗಳನ್ನು ಸೋಲಿಸುತ್ತಾನೆ. ನವರಾತ್ರಿ ಹಬ್ಬ ಮುಗಿಸಿ ದಶಮಿಯಂದು ಕುರುಸೇನೆಯನ್ನು ವಿರಾಟ ಸೇನೆ ಸೋಲಿಸುತ್ತದೆ. ಈ ವಿಜಯದ ಕುರುಹಾಗಿ ಒಂಭತ್ತನೇ ದಿನ ಆಯುಧ ಪೂಜೆಯನ್ನು ಆಚರಿಸಲಾಗುತ್ತದೆ.

    ಕಲಿಯುಗದಲ್ಲೂ ಆಚರಣೆ:
    ನವಮಿಯಂದು ಆಯುಧಗಳಿಗೆ ಪೂಜೆ ಮಾಡಿ ದಶಮಿಯಂದು ದಂಡಯಾತ್ರೆಗೆ ಹೊರಟರೆ ವಿಜಯ ಸಿದ್ಧಿ ಎನ್ನುವ ನಂಬಿಕೆ ಈ ಹಿಂದೆ ರಾಜರಲ್ಲಿತ್ತು. ಹೀಗಾಗಿ ದಶಮಿಯಂದೇ ಪೂಜೆ ಸಲ್ಲಿಸಿ ದಂಡಯಾತ್ರೆಗೆ ಹೊರಡುತ್ತಿದ್ದರು. ಈ ಪದ್ದತಿ ಈಗಲೂ ಉಳಿದುಕೊಂಡಿದ್ದು, ಸಾಂಕೇತಿಕವಾಗಿ ಕೆಲ ರಾಜವಂಶಸ್ಥರು ಸಾಂಕೇತಿಕವಾಗಿ ತಮ್ಮ ರಾಜ್ಯದ ಗಡಿಯನ್ನು ದಾಟಿ ಮತ್ತೆ ಹಿಂದಿರುಗುತ್ತಾರೆ. ವಿಜಯನಗರಸಾಮ್ರಾಜ್ಯದ ಕಾಲದಲ್ಲಿ ಆರಂಭವಾದ ಈ ಸೀಮೋಲ್ಲಂಘನ ಮೈಸೂರಿನ ಒಡೆಯರ ಕಾಲದಲ್ಲಿ ಮುಂದುವರಿದಿದೆ.

  • ರಾಮ-ಲಕ್ಷ್ಮಣರ ಜೊತೆ `ರಾಮಾಯಣ’ ಸೃಷ್ಟಿಕರ್ತ!

    ರಾಮ-ಲಕ್ಷ್ಮಣರ ಜೊತೆ `ರಾಮಾಯಣ’ ಸೃಷ್ಟಿಕರ್ತ!

    ಇತ್ತೀಚೆಗಷ್ಟೇ ಶೂಟಿಂಗ್ ಮುಗಿಸಿರುವ `ರಾಮಾಯಣ ಪಾರ್ಟ್-1′ (Ramayana Part-1) ಚಿತ್ರದ ಫಸ್ಟ್ ಗ್ಲಿಂಪ್ಸ್ ಬಿಡುಗಡೆಯಾಗಿ ಭಾರೀ ಸೌಂಡ್ ಮಾಡಿತ್ತು. ಇದೀಗ ಮುಂದುವರೆದು ಲಕ್ಷ್ಮಣ ಪಾತ್ರಧಾರಿ ಬಾಲಿವುಡ್ ನಟ ರವಿ ದುಬೆ (Ravi Dubey) ಸೆಟ್‌ನಿಂದ ಹೊಸ ಫೋಟೋ ಹಂಚಿಕೊಂಡಿದ್ದಾರೆ.

    ನಿರ್ದೇಶಕ ನಿತೇಶ್ ತಿವಾರಿ (Nitesh Tiwari) ಜೊತೆ ಶ್ರೀರಾಮನ ಪಾತ್ರಧಾರಿ ನಟ ರಣಬೀರ್ ಕಪೂರ್ ಜೊತೆ ರವಿ ದುಬೆ ನಿಂತು ಪೋಸ್ ಕೊಟ್ಟಿದ್ದಾರೆ. ರಾಮಾಯಣ ಸೆಟ್‌ನಿಂದ ಚಿತ್ರತಂಡ (Ramayana Film Team) ರಿಲೀಸ್ ಮಾಡಿರುವ ಮೊದಲ ಫೋಟೋ ಇದಾಗಿದೆ.

    ಇನ್ನು ಸೀತೆ ಪಾತ್ರದಲ್ಲಿ ಸಾಯಿ ಪಲ್ಲವಿ ತೆರೆಹಂಚಿಕೊಂಡಿದ್ದಾರೆ. ಫಸ್ಟ್ ಪಾರ್ಟ್‌ನಲ್ಲಿ ಬರುವ ಲಕ್ಷ್ಮಣನ ಸಿಕ್ವೇನ್ಸ್ ಮುಗಿದಿದೆ ಎನ್ನಲಾಗ್ತಿದೆ. ಹೀಗಾಗಿ ಸೆಟ್‌ನಲ್ಲಿ ನಿರ್ದೇಶಕ ನಿತೇಶ್ ತಿವಾರಿ ಹಾಗೂ ನಟ ರಣಬೀರ್ ಕಪೂರ್ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ ರವಿ ದುಬೆ. ಇದನ್ನೂ ಓದಿ: ಬೀಚ್‌ನಲ್ಲಿ ಡೀಪ್‌ ಕಿಸ್‌ – ಪತಿ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ಪ್ರಿಯಾಂಕಾ

    ಮುಂದಿನ ವರ್ಷದ ದೀಪಾವಳಿಗೆ ರಿಲೀಸ್ ಆಗಲು ಸಜ್ಜಾಗಿರುವ ರಾಮಾಯಣ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ರಾವಣನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಜೊತೆಗೆ ನಿರ್ಮಾಪಕ ನಮಿತ್ ಮಲ್ಹೋತ್ರಾ ಜೊತೆ ಕೈ ಜೋಡಿಸಿ 835 ಕೋಟಿ ಬಜೆಟ್‌ನಲ್ಲಿ ಚಿತ್ರ ನಿರ್ಮಿಸುತ್ತಿದ್ದಾರೆ. ಇದನ್ನೂ ಓದಿ: ಪಾರ್ವತಮ್ಮ ರಾಜ್‌ಕುಮಾರ್ ಕನಸಿನ ಕೂಸಿಗೆ 50 ವರ್ಷ

    ಇದೀಗ ಲಕ್ಷ್ಮಣನ ಪಾತ್ರಧಾರಿ ರವಿ ದುಬೆ ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿರುವ ಫೋಟೋ ಕೊನೆಯ ದಿನದ ಚಿತ್ರೀಕರಣದ ಫೋಟೋವಾಗಿದ್ದು ಕ್ಯಾಶುವಲ್ ವೇರ್‌ನಲ್ಲಿ ಬ್ಲ್ಯೂಮ್ಯಾಟ್ ಮುಂದೆ ಪೋಸ್ ಕೊಟ್ಟಿದ್ದಾರೆ. ಇಡೀ ದೇಶ ಕಾದು ಕುಳಿತಿರುವ ಬಹುನಿರೀಕ್ಷಿತ ಚಿತ್ರ ʻರಾಮಾಯಣʼ ಆಗಿದ್ದು ಇದುವರೆಗೂ ಚಿತ್ರತಂಡದ ಸದಸ್ಯರು ಯಾವೊಂದು ಫೋಟೋ ಕೂಡ ಲೀಕ್ ಆಗದಂತೆ ಗೌಪ್ಯತೆ ಕಾಪಾಡಿಸಿಕೊಂಡಿದ್ದಾರೆ.

  • ರಾಮಾಯಣದಲ್ಲಿ ಯಶ್ ಪಾತ್ರ ಬರೀ 15 ನಿಮಿಷ?

    ರಾಮಾಯಣದಲ್ಲಿ ಯಶ್ ಪಾತ್ರ ಬರೀ 15 ನಿಮಿಷ?

    ಶ್ ನಟಿಸಿ ನಿರ್ಮಿಸುತ್ತಿರುವ `ರಾಮಾಯಣ’ ಚಿತ್ರದ (Ramayana Movie) ಮೊದಲ ಭಾಗದ ಚಿತ್ರೀಕರಣ ಮುಕ್ತಾಯವಾಗಿದ್ದು, ಮೊದಲ ಗ್ಲಿಂಪ್ಸ್ ಕೂಡ ರಿಲೀಸ್ ಆಗಿದೆ. ಈ ಹೊತ್ತಲ್ಲಿ ಸ್ಫೋಟಕ ವಿಚಾರವೊಂದು ವೈರಲ್ ಆಗುತ್ತಿದ್ದು, ರಾಮಾಯಣ ಮೊದಲ ಭಾಗದಲ್ಲಿ ಯಶ್ (Yash) 15 ನಿಮಿಷ ಮಾತ್ರವೇ ಸ್ಕ್ರೀನ್‌ನಲ್ಲಿ ಇರ್ತಾರಂತೆ.

    ರಾಮಾಯಣದಲ್ಲಿ ರಾವಣನ ಪಾತ್ರದ ಹೊರತು ಬೇರೆ ಪಾತ್ರವನ್ನ ತಾವು ಆಯ್ಕೆ ಮಾಡ್ತಿರಲಿಲ್ಲ ಎಂದು ಯಶ್ ಹಿಂದೊಮ್ಮೆ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ರಾವಣನ ಪಾತ್ರಕ್ಕಿರುವ ಬಹುಮುಖತೆಗೆ ಯಶ್ ಉತ್ಸುಕರಾಗಿದ್ದರು. ಅದರಂತೆ ಯಶ್ ಕೂಡ ನಟಿಸಿದ್ದಾರೆ. ಬಿಡುಗಡೆಯಾದ ಸಣ್ಣದೊಂದು ಗ್ಲಿಮ್ಸ್‌ ಅಲ್ಲೇ ಯಶ್ ಅಬ್ಬರಿಸಿದ್ದಾರೆ. ಈ ಮೂಲಕ ಸಿನಿಮಾ ಇತಿಹಾಸದಲ್ಲಿ ಮೊದಲ ಬಾರಿಗೆ ನಾಯಕನ ವಿರುದ್ಧ ಬರುವ ಖಳನಾಯಕನ ಪಾತ್ರವೇ ಚಿತ್ರದ ಹೈಲೈಟ್ ಆಗೋಕೆ ಯಶ್ ಕಾರಣ. ಈ ಹೊತ್ತಲ್ಲೇ ರೋಚಕ ವಿಷಯವೊಂದು ಸುದ್ದಿಯಾಗುತ್ತಿದೆ. ಯಶ್ ಇಡೀ ಚಿತ್ರದಲ್ಲಿ ಹದಿನೈದು ನಿಮಿಷ ಮಾತ್ರ ಕಾಣಿಸ್ಕೊಳ್ಳಲಿದ್ದಾರಂತೆ. ಹೀಗೆಂದು ಟೆಲ್ಲಿಚಕ್ಕರ್ ವರದಿ ಮಾಡಿದೆ. ರಾಮನ ಪಟ್ಟಾಭಿಷೇಕ, ಸೀತಾ ರಾಮ ಕಲ್ಯಾಣ, ಅಯೋಧ್ಯೆಯ ಚಿತ್ರಣಗಳೇ ಮೊದಲ ಭಾಗದಲ್ಲಿ ಹೆಚ್ಚಿರುವುದರಿಂದ ಬಹುಶಃ ರಾವಣನ ಪಾತ್ರ ಹೆಚ್ಚು ಕಾಲ ಸ್ಕ್ರೀನ್‌ನಲ್ಲಿ ಕಾಣಿಸಿಕೊಳ್ಳುವ ಪ್ರಮೇಯ ಬರುವುದಿಲ್ಲ.

    ರಾಮಾಯಣ ಚಿತ್ರಕ್ಕೆ ಯಶ್ ಕೂಡ ಓರ್ವ ನಿರ್ಮಾಪಕರು. ಹೀಗಾಗಿ ಅವರಿಗೆ ಬೇಕಾದಂತೆ ಜಾಗ ಪಡೆದುಕೊಳ್ಳಬಹುದಿತ್ತು. ಆದರೆ ಪಾತ್ರ ಹಾಗೂ ಚಿತ್ರಕ್ಕೆ ಏನು ಬೇಕೋ ಅಷ್ಟಕ್ಕೆ ಮಾತ್ರ ಯಶ್ ಆದ್ಯತೆ ನೀಡಿ ತಮ್ಮ ಭಾಗದ ಚಿತ್ರೀಕರಣ ಮುಗಿಸಿಕೊಟ್ಟಿದ್ದಾರಂತೆ. ಆದರೆ ಆ ಹದಿನೈದು ನಿಮಿಷವೂ ಯಶ್ ಆವರಿಸಿಕೊಳ್ಳಲಿದ್ದಾರೆ ಅನ್ನೋದಂತೂ ನಿಶ್ಚಿತ. ಆದರೆ ರಾಮಾಯಣ ಎರಡನೇ ಭಾಗದಲ್ಲಿ ಯಶ್ ಅಭಿನಯಿಸಿರುವ ರಾವಣ ಪಾತ್ರ ಚಿತ್ರದುದ್ದಕ್ಕೂ ಇರಲಿದೆ ಅನ್ನೋದು ರಾಮಾಯಣ ಚಿತ್ರದ ಇನ್‌ಸೈಡ್ ಸ್ಕೂಪ್.

  • ರಾಮಾಯಣ ಫಸ್ಟ್ ಟೈಟಲ್ ಟೀಸರ್ ರಿಲೀಸ್: ರಾಮ-ರಾವಣನ ಆರ್ಭಟ ಶುರು

    ರಾಮಾಯಣ ಫಸ್ಟ್ ಟೈಟಲ್ ಟೀಸರ್ ರಿಲೀಸ್: ರಾಮ-ರಾವಣನ ಆರ್ಭಟ ಶುರು

    ಶ್ (Yash) ನಟಿಸಿ ನಿರ್ಮಿಸುತ್ತಿರುವ ಮಹಾತ್ವಾಕಾಂಕ್ಷೆಯ ಪ್ರಾಜೆಕ್ಟ್ ರಾಮಾಯಣ (Ramayana) ಚಿತ್ರದ ಅಫಿಷಿಯಲ್ ಫಸ್ಟ್‌ ಟೈಟಲ್‌ ಟೀಸರ್‌ ರಿಲೀಸ್‌ ಆಗಿದೆ. ರಾಮಾಯಣ ಫಸ್ಟ್‌ ಟೈಟಲ್‌ ಟೀಸರ್‌ ಕೊನೆಗೂ ರಿಲೀಸ್‌ ಆಗಿದೆ. ಟೀಸರ್‌ನಲ್ಲಿ ರಾಮ-ರಾವಣ ಆರ್ಭಟ ಶುರುವಾಗಿದೆ.

    ರಾಮಾಯಣ ಫಸ್ಟ್‌ ಟೈಟಲ್‌ ಟೀಸರ್‌ ಅನ್ನು ರಾಕಿಂಗ್‌ ಸ್ಟಾರ್‌ ಯಶ್‌ ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹತ್ತು ವರ್ಷಗಳ ಆಕಾಂಕ್ಷೆ. ಸಾರ್ವಕಾಲಿಕ ಶ್ರೇಷ್ಠ ಮಹಾಕಾವ್ಯವನ್ನು ಜಗತ್ತಿಗೆ ತರುವ ನಿರಂತರ ದೃಢನಿಶ್ಚಯ. ರಾಮಾಯಣವನ್ನು ಅತ್ಯಂತ ಗೌರವದಿಂದ ಪ್ರಸ್ತುತಪಡಿಸಲು ವಿಶ್ವದ ಕೆಲವು ಅತ್ಯುತ್ತಮ ವ್ಯಕ್ತಿಗಳು ಒಟ್ಟಾಗಿ ಶ್ರಮಿಸಿದ್ದಾರೆ. ಅದರ ಫಲಿತಾಂಶ ಇದು ಎಂದು ಯಶ್‌ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: 5 ದಿನಕ್ಕೆ 10 ಕೋಟಿ – ಇದು ಅಕ್ಷಯ್‌ ಕುಮಾರ್‌ ಕಾಲ್‌ ಶೀಟ್!

    ಆರಂಭಕ್ಕೆ ಸ್ವಾಗತ. ರಾಮ v/s ರಾವಣನ ಅಮರ ಕಥೆಯನ್ನು ಆಚರಿಸೋಣ. ನಮ್ಮ ಸತ್ಯ. ನಮ್ಮ ಇತಿಹಾಸ ಎಂದು ಯಶ್‌ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

    ಟಾಕ್ಸಿಕ್ ಹಾಗೂ ರಾಮಾಯಣ, ಎರಡೂ ಚಿತ್ರಗಳ ನಿರ್ಮಾಣ ಹಾಗೂ ನಟನೆಯಲ್ಲಿ ಯಶ್ ಬ್ಯುಸಿ ಇದ್ದಾರೆ. ಹೀಗಾಗಿ ಟೈಟ್ ಶೆಡ್ಯೂಲ್ ಶೂಟಿಂಗ್ ಮುಗಿಸಿ ಇದೀಗ ಅಲ್ಪ ಸಮಯದಲ್ಲಿ ಪ್ರವಾಸಕ್ಕೆಂದು ಯಶ್‌ ಹೋಗಿದ್ದಾರೆ. ಇದನ್ನೂ ಓದಿ: ರಾಮಾಯಣ ಫಸ್ಟ್ ಗ್ಲಿಮ್ಸ್ ನೋಡಲು ತಯಾರಾಗಿ ಎಂದ ಯಶ್

    ರಾಮಾಯಣ ಸಿನಿಮಾದಲ್ಲಿ ರಾಮನ ಪಾತ್ರದಲ್ಲಿ ರಣಬೀರ್‌ ಕಪೂರ್‌, ಸೀತೆ ಪಾತ್ರದಲ್ಲಿ ಸಾಯಿಪಲ್ಲವಿ ಹಾಗೂ ರಾವಣನ ಪಾತ್ರದಲ್ಲಿ ಕೆಜಿಎಫ್‌ ಸ್ಟಾರ್‌ ಯಶ್‌ ಕಾಣಿಸಿಕೊಂಡಿದ್ದಾರೆ.

  • ಯಶ್‌ಗೆ ಹಾಲಿವುಡ್‌ನ ಆಸ್ಕರ್ ವಿಜೇತ ಪ್ರೊಡ್ಯೂಸರ್ ಬಲ!

    ಯಶ್‌ಗೆ ಹಾಲಿವುಡ್‌ನ ಆಸ್ಕರ್ ವಿಜೇತ ಪ್ರೊಡ್ಯೂಸರ್ ಬಲ!

    ರಾಮಾಯಣ (Ramayana) ಚಿತ್ರವನ್ನು ಯಶ್ (Yash) ನಟಿಸಿ, ನಿರ್ಮಿಸುತ್ತಿದ್ದಾರೆ. ಭಾರತದ ಧಾರ್ಮಿಕ ನಂಬಿಕೆಯ ಈ ಚಿತ್ರವನ್ನು ಯಶ್ ಜಾಗತಿಕ ಮಟ್ಟಕ್ಕೆ ತೆಗೆದುಕೊಂಡು ಹೋಗುವ ಭರವಸೆಯನ್ನು ಈ ಹಿಂದೆಯೇ ಕೊಟ್ಟಿದ್ದರು. ಅದರಂತೆ ಯಶ್ ಈಗ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ.

    ರಾಮಾಯಣ ಚಿತ್ರವನ್ನ ಜಾಗತಿಕ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಕಾರಣ ಈ ಚಿತ್ರಕ್ಕೆ ಓರ್ವ ನಿರ್ಮಾಪಕರಾಗಿ ಹಾಲಿವುಡ್‌ನ ಆಸ್ಕರ್ ಪ್ರಶಸ್ತಿ ಪುರಸ್ಕೃತ ನಿರ್ಮಾಪಕ ಚಾರ್ಲಿ ರೋವನ್ ಸೇರ್ಪಡೆಯಾಗಿದ್ದಾರೆ. ಆದರೆ ಈ ಕುರಿತು ಸದ್ಯ ಚಿತ್ರತಂಡ ಅಧಿಕೃತ ಮಾಹಿತಿಯನ್ನು ಹಂಚಿಕೊಳ್ಳಬೇಕಿದೆ.ಇದನ್ನೂ ಓದಿ: ನೀನು ಚಪ್ಪಲಿ ಹೊಲಿಯಲು ಯೋಗ್ಯನಲ್ಲ – ನಿಂದಿಸಿದ್ದ ಮೂವರು ಇಂಡಿಗೋ ಅಧಿಕಾರಿಗಳ ವಿರುದ್ಧ ಅಟ್ರಾಸಿಟಿ ಕೇಸ್‌

    ರಾಮಾಯಣ ಚಿತ್ರದ ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿದ್ದು, ಚಿತ್ರವನ್ನ ಯಶ್ ನಟಿಸಿ, ನಿರ್ಮಿಸುತ್ತಿದ್ದಾರೆ. ರಾವಣನ ಪಾತ್ರದಲ್ಲಿ ಯಶ್ ಕಾಣಿಸಿಕೊಳ್ಳಲಿದ್ದು, ರಾಮನಾಗಿ ರಣಬೀರ್ ಕಪೂರ್ ಹಾಗೂ ಸೀತೆಯ ಪಾತ್ರದಲ್ಲಿ ಸಾಯಿ ಪಲ್ಲವಿ ನಟಿಸಿದ್ದಾರೆ. ಎರಡು ಸರಣಿಯಲ್ಲಿ ಚಿತ್ರ ತೆರೆಕಾಣಲಿದ್ದು, ಮೊದಲ ಭಾಗ 2026ರ ದೀಪಾವಳಿ ಹಬ್ಬಕ್ಕೆ ರಿಲೀಸ್ ಆಗಲಿದೆ.

    ಬಿಗ್ ಬಜೆಟ್‌ನಲ್ಲಿ ತಯಾರಾಗ್ತಿರುವ ರಾಮಾಯಣ ಚಿತ್ರವನ್ನ ಯಶ್ ತಮ್ಮ ನಿರ್ಮಾಣ ಸಂಸ್ಥೆ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಮೂಲಕ ನಿರ್ಮಿಸುತ್ತಿದ್ದಾರೆ. ಇನ್ನೋರ್ವ ನಿರ್ಮಾಪಕರಾಗಿ ಪ್ರೈಮ್‌ ಫೋಕಸ್ ಸ್ಟುಡಿಯೋ ನಮಿತ್ ಮಲ್ಹೋತ್ರಾ ಕೂಡ ಚಿತ್ರದ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಇದೀಗ ವಿಶ್ವ ಮಟ್ಟದಲ್ಲಿ ರಾಮಾಯಣ ಚಿತ್ರವನ್ನ ತಲುಪಿಸುವ ಸಲುವಾಗಿ ಯಶ್ ಜೊತೆ ಹಾಲಿವುಡ್‌ನ ಖ್ಯಾತ ನಿರ್ಮಾಪಕ ಚಾರ್ಲಿ ರೋವನ್ (Charles Roven) ಕೈಜೋಡಿಸಿದ್ದು, ರಾಮಾಯಣಕ್ಕೆ ಇನ್ನಷ್ಟು ಬಲ ಬಂದಂತಾಗಿದೆ. ಈಗಾಗ್ಲೇ ಯಶ್ ಕೂಡ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.ಇದನ್ನೂ ಓದಿ: 7 ವರ್ಷದ ಬಾಲಕಿ ಮೇಲೆ ಅಪ್ರಾಪ್ತರಿಂದಲೇ ಅತ್ಯಾಚಾರ – ಇಬ್ಬರು ಬಾಲಕರು ಅರೆಸ್ಟ್‌

  • ರಾಮಾಯಣ ಸಿನಿಮಾದ ಯಶ್ ಪಾತ್ರದ ಮೊದಲ ಆಕ್ಷನ್ ಸೀಕ್ವೆನ್ಸ್ ಲುಕ್ ರಿವಿಲ್

    ರಾಮಾಯಣ ಸಿನಿಮಾದ ಯಶ್ ಪಾತ್ರದ ಮೊದಲ ಆಕ್ಷನ್ ಸೀಕ್ವೆನ್ಸ್ ಲುಕ್ ರಿವಿಲ್

    ಹುನಿರೀಕ್ಷಿತ ರಾಮಾಯಣ (Ramayana) ಸಿನಿಮಾದಲ್ಲಿ ರಾವಣ ಪಾತ್ರದ ಮೂಲಕ ಕಾಣಿಸಿಕೊಳ್ಳುತ್ತಿರುವ ರಾಕಿಂಗ್ ಸ್ಟಾರ್ ಯಶ್ (Yash) ಅವರ ಮೊದಲ ಆಕ್ಷನ್ ಸೀಕ್ವೆನ್ಸ್ ಲುಕ್ ರಿವಿಲ್ ಆಗಿದೆ.

    ನಿತೇಶ್ ತಿವಾರಿ ನಿರ್ದೇಶನ ಹಾಗೂ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ರಾಮಾಯಣ ಸಿನಿಮಾದಲ್ಲಿ ಯಶ್ ನಟನಾಗಿಯೂ ಹಾಗೂ ನಿರ್ಮಾಪಕನಾಗಿಯೂ ಕಾಣಿಸಿಕೊಳ್ಳುತ್ತಿರುವುದು ಬಹು ವಿಶೇಷ. ರಾಮನ ಪಾತ್ರದಲ್ಲಿ ರಣಬೀರ್ ಕಪೂರ್, ಸೀತಾ ಪಾತ್ರದಲ್ಲಿ ಸಾಯಿ ಪಲ್ಲವಿ ಹಾಗೂ ರಾವಣನ ಪಾತ್ರದಲ್ಲಿ ಯಶ್ ಕಾಣಿಸಿಕೊಳ್ಳುತ್ತಿದ್ದಾರೆ.ಇದನ್ನೂ ಓದಿ: ಯಶ್ ನಟನೆಯ ‘ರಾಮಾಯಣ’ ಚಿತ್ರದ ಮೊದಲ ಪೋಸ್ಟರ್ ರಿಲೀಸ್

    ಯಶ್ ರಾವಣನಾಗಿ ಅಬ್ಬರಿಸುವುದನ್ನು ಕಣ್ತುಂಬಿಕೊಳ್ಳಲು ಕನ್ನಡಿಗರು ಮಾತ್ರವಲ್ಲದೇ ಭಾರತೀಯ ಸಿನಿಮಾರಂಗ ಕಾತುರದಿಂದ ಕಾಯುತ್ತಿದ್ದು, ಇದೀಗ ಆಕ್ಷನ್ ಸೀಕ್ವೆನ್ಸ್ನ ಮೊದಲ ಲುಕ್ ರಿವಿಲ್ ಆಗಿದೆ. ಸಿನಿಮಾ ಶೂಟಿಂಗ್‌ನಲ್ಲಿ ಬೃಹತ್ ಸೆಟ್‌ಗಳು ತಲೆಯೆತ್ತಿ ನಿಂತಿದ್ದು, ಆಕ್ಷನ್ ಸೀಕ್ವೆನ್ಸ್‌ಗಳನ್ನು ಹಾಲಿವುಡ್‌ನ ಖ್ಯಾತ ಮ್ಯಾಡ್ ಮ್ಯಾಕ್ಸ್ ಸ್ಟಂಟ್ ನಿರ್ದೇಶಕ ಗೈ ನೋರಿಸ್ ನಿರ್ದೇಶನ ಮಾಡುತ್ತಿದ್ದಾರೆ.

    ರಾಮಾಯಣ ಭಾಗ 1ಕ್ಕಾಗಿ ಯಶ್ 60-70 ದಿನಗಳ ಕಾಲ ಚಿತ್ರೀಕರಣ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ರಾಮಾಯಣ ಸಿನಿಮಾ 2 ಭಾಗಗಳಲ್ಲಿ ಮೂಡಿ ಬರಲಿದ್ದು, ಮೊದಲ ಭಾಗ 2026ರಲ್ಲಿ ರಿಲೀಸ್ ಆಗಲಿದೆ. ಎರಡನೇ ಭಾಗ 2027ರಲ್ಲಿ ರಿಲೀಸ್ ಆಗಲಿದೆ ಎಂದು ಚಿತ್ರತಂಡ ಅಧಿಕೃತವಾಗಿ ತಿಳಿಸಿದೆ. ಟಾಕ್ಸಿಕ್ ಸಿನಿಮಾ ಜೊತೆಗೆ ರಾವಣನ ಪಾತ್ರದಲ್ಲಿ ಯಶ್‌ರನ್ನು ನೋಡಲು ಅಭಿಮಾನಿಗಳು ಬಹುಉತ್ಸುಕರಾಗಿದ್ದಾರೆ.ಇದನ್ನೂ ಓದಿ: ಯಶ್ ‘ರಾಮಾಯಣ’ ಪ್ರಾಜೆಕ್ಟ್‌ನಲ್ಲಿ ವಿವೇಕ್ ಒಬೆರಾಯ್?

  • ಯಶ್ ‘ರಾಮಾಯಣ’ ಪ್ರಾಜೆಕ್ಟ್‌ನಲ್ಲಿ ವಿವೇಕ್ ಒಬೆರಾಯ್?

    ಯಶ್ ‘ರಾಮಾಯಣ’ ಪ್ರಾಜೆಕ್ಟ್‌ನಲ್ಲಿ ವಿವೇಕ್ ಒಬೆರಾಯ್?

    ರಾಕಿಂಗ್ ಸ್ಟಾರ್ ಯಶ್ (Yash) ಸಹ ನಿರ್ಮಾಣದ ‘ರಾಮಾಯಣ’ ಪ್ರಾಜೆಕ್ಟ್‌ನಲ್ಲಿ ಬಾಲಿವುಡ್ ನಟ ವಿವೇಕ್ ಒಬೆರಾಯ್ (Vivek Oberoi) ನಟಿಸಲಿದ್ದಾರೆ ಎನ್ನಲಾದ ಸುದ್ದಿಯೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ:ಕಾಮಾಕ್ಯ ದೇಗುಲಕ್ಕೆ ನಟಿ ಕಾರುಣ್ಯ ರಾಮ್ ಭೇಟಿ

    ‘ರಾಮಾಯಣ’ (Ramayana) ಚಿತ್ರದಲ್ಲಿ ನಟಿಸುವ ತಾರಾಗಣ ದಿನದಿಂದ ದಿನಕ್ಕೆ ಹಿರಿದಾಗುತ್ತಲೇ ಇದೆ. ಚಿತ್ರದಲ್ಲಿ ‘ರಾವಣ’ ಯಶ್‌ಗೆ ಮಡದಿಯಾಗಿ ಮಗಧೀರ ನಟಿ ಕಾಜಲ್ ಅಗರ್ವಾಲ್ ‘ಮಂಡೋರಿ’ ರೋಲ್‌ನಲ್ಲಿ ನಟಿಸುತ್ತಾರೆ ಎಂಬ ಸುದ್ದಿ ಹಬ್ಬಿತ್ತು. ಈ ಬೆನ್ನಲ್ಲೇ ವಿವೇಕ್ ಒಬೆರಾಯ್ ಕೂಡ ಯಶ್ ಜೊತೆ ತೆರೆಹಂಚಿಕೊಳ್ಳಲಿದ್ದಾರಂತೆ. ಹಾಗಂತ ಸೋಷಿಯಲ್ ಮೀಡಿಯಾದಲ್ಲಿ ಗುಸು ಗುಸು ಚರ್ಚೆ ಶುರುವಾಗಿದೆ. ಇದನ್ನೂ ಓದಿ:‘ಅನಿಮಲ್’ ನಟಿಗೆ ಬಂಪರ್ ಆಫರ್- ಪ್ರಭಾಸ್‌ಗೆ ನಾಯಕಿಯಾದ ತೃಪ್ತಿ ದಿಮ್ರಿ

    ಈ ಚಿತ್ರದಲ್ಲಿ ಶೂರ್ಪನಖಿಯ ಪತಿ ವಿದ್ಯುತ್ಜಿಹ್ವನ ಪಾತ್ರದಲ್ಲಿ ವಿವೇಕ್ ಒಬೆರಾಯ್ ನಟಿಸುತ್ತಾರೆ ಎನ್ನುವ ಊಹಾಪೋಹ ಶುರುವಾಗಿದೆ. ಈ ಚಿತ್ರದಲ್ಲಿ ಶೂರ್ಪನಖಿ ಪಾತ್ರದಲ್ಲಿ ರಕುಲ್ ಪ್ರೀತ್ ಸಿಂಗ್ ಬಣ್ಣ ಹಚ್ಚಿದ್ದಾರೆ. ಈ ನಟಿಯ ಪತಿಯ ಪಾತ್ರದಲ್ಲಿ ವಿವೇಕ್ ನಟಿಸುವ ಸಾಧ್ಯತೆಯಿದೆ ಎನ್ನಲಾಗ್ತಿದೆ. ಅಷ್ಟಕ್ಕೂ ಈ ಸುದ್ದಿ ನಿಜನಾ? ಈ ಚಿತ್ರತಂಡದಿಂದ ಅಧಿಕೃತ ಮಾಹಿತಿ ಸಿಗುವವರೆಗೂ ಕಾಯಬೇಕಿದೆ.

    ರಾಮನಾಗಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ, ರಾವಣನಾಗಿ ರಾಕಿಂಗ್ ಸ್ಟಾರ್ ಯಶ್ ನಟಿಸುತ್ತಿರೋದು ಅಧಿಕೃತವಾಗಿದೆ. ಉಳಿದ ಪಾತ್ರಗಳ ಆಯ್ಕೆ ಬಗ್ಗೆ ಚಿತ್ರತಂಡದ ಕಡೆಯಿಂದ ಅಧಿಕೃತ ಮಾಹಿತಿ ಸಿಗಬೇಕಿದೆ.

    ರಾಮಾಯಣ ಸಿನಿಮಾವನ್ನು ಎರಡು ಭಾಗಗಳಲ್ಲಿ ತರೋದಾಗಿ ಈಗಾಗಲೇ ಚಿತ್ರತಂಡ ತಿಳಿಸಿದೆ. 2026ರಲ್ಲಿ ಸಿನಿಮಾ ರಿಲೀಸ್ ಆಗಲಿದೆ.

  • Ramayana: ‘ರಾವಣ’ ಯಶ್ ಪತ್ನಿಯಾಗಿ ಕಾಜಲ್ ಅಗರ್ವಾಲ್?

    Ramayana: ‘ರಾವಣ’ ಯಶ್ ಪತ್ನಿಯಾಗಿ ಕಾಜಲ್ ಅಗರ್ವಾಲ್?

    ರಾಕಿಂಗ್ ಸ್ಟಾರ್ ಯಶ್ (Yash) ಅವರು ‘ಟಾಕ್ಸಿಕ್’ ಸಿನಿಮಾ ಕೆಲಸದ ನಡುವೆ ‘ರಾಮಾಯಣ’ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಇದೀಗ ಅವರ ‘ರಾಮಾಯಣ’ (Ramayana) ಸಿನಿಮಾ ಬಗ್ಗೆ ಇಂಟ್ರೆಸ್ಟಿಂಗ್ ಅಪ್‌ಡೇಟ್‌ವೊಂದು ಸಿಕ್ಕಿದೆ. ಯಶ್ ಜೊತೆ ಖ್ಯಾತ ನಟಿ ಕಾಜಲ್ ಅಗರ್ವಾಲ್ ಕೂಡ ನಟಿಸುತ್ತಾರೆ ಎನ್ನಲಾದ ಸುದ್ದಿಯೊಂದು ಹರಿದಾಡುತ್ತಿದೆ. ಇದನ್ನೂ ಓದಿ:ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಯಜಮಾನ’ ಸೀರಿಯಲ್ ಖ್ಯಾತಿಯ ಗಜೇಂದ್ರ

    ‘ರಾಮಾಯಣ’ದಲ್ಲಿ ರಾಮನಾಗಿ ರಣಬೀರ್ ಕಪೂರ್ (Ranbir Kapoor), ಸೀತೆಯ ಪಾತ್ರದಲ್ಲಿ ಸಾಯಿ ಪಲ್ಲವಿ (Sai Pallavi) ನಟಿಸುತ್ತಿದ್ದಾರೆ. ರಾಮನ ಮುಂದೆ ರಾವಣನಾಗಿ ಯಶ್ ಘರ್ಜಿಸಲಿದ್ದಾರೆ. ಸದ್ಯದ ಹಾಟ್ ಟಾಪಿಕ್ ಏನಪ್ಪಾ ಅಂದ್ರೆ, ರಾವಣ ಯಶ್‌ಗೆ ಮಡದಿಯಾಗಿ ಕಾಜಲ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಮಂಡೋದರಿ ಪಾತ್ರದಲ್ಲಿ ‘ಮಗಧೀರ’ ಬೆಡಗಿ ನಟಿಸಲಿದ್ದಾರೆ ಎಂದು ಹೇಳಲಾಗ್ತಿದೆ. ಇದನ್ನೂ ಓದಿ: 10 ಲಕ್ಷದ ಡೈಮಂಡ್ ರಿಂಗ್, 9 ಲಕ್ಷ ಮೌಲ್ಯದ ವಾಚ್- ‘ಭಜರಂಗಿ’ ನಟಿ ಬ್ಯಾಗ್ ಕದ್ದ ಆರೋಪಿ ಅರೆಸ್ಟ್

    ಮೂಲಗಳ ಪ್ರಕಾರ, ಈಗಾಗಲೇ ಕಾಜಲ್ ಮಂಡೋದರಿ ಪಾತ್ರಕ್ಕೆ ಲುಕ್ ಟೆಸ್ಟ್ ಕೊಟ್ಟಿದ್ದು, ಚಿತ್ರೀಕರಣಕ್ಕೂ ಭಾಗಿಯಾಗಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಚಿತ್ರತಂಡವೇ ಖಾತ್ರಿಪಡಿಸಬೇಕಿದೆ. ಅದೇನೇ ಇರಲಿ ಈ ಸುದ್ದಿ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

    ‘ರಾಮಾಯಣ’ (Ramayana) ಸಿನಿಮಾವನ್ನು ಎರಡು ಭಾಗಗಳಲ್ಲಿ ತರೋದಾಗಿ ಈಗಾಗಲೇ ಚಿತ್ರತಂಡ ತಿಳಿಸಿದೆ. 2026ರಲ್ಲಿ ಸಿನಿಮಾ ರಿಲೀಸ್ ಆಗಲಿದೆ.

  • Ramayana ಶೂಟಿಂಗ್ ಆರಂಭಿಸಿದ ರಾಕಿಂಗ್ ಸ್ಟಾರ್ ಯಶ್‌

    Ramayana ಶೂಟಿಂಗ್ ಆರಂಭಿಸಿದ ರಾಕಿಂಗ್ ಸ್ಟಾರ್ ಯಶ್‌

    ರಾಕಿಂಗ್ ಸ್ಟಾರ್ ಯಶ್ (Yash) ಅವರು ‘ಟಾಕ್ಸಿಕ್‌’ ಚಿತ್ರದ ನಡುವೆ ಇದೀಗ ‘ರಾಮಾಯಣ’ ಚಿತ್ರ ಕೈಗೆತ್ತಿಕೊಂಡಿದ್ದಾರೆ. ‘ರಾಮಾಯಣ’ (Ramayana) ಚಿತ್ರತಂಡವನ್ನು ಸೇರಿಕೊಂಡಿದ್ದಾರೆ. ಇದನ್ನೂ ಓದಿ:ಯಶ್‌ ನಟನೆಯ ರಾಮಾಯಣ ಚಿತ್ರದ ಫಸ್ಟ್‌ ಗ್ಲಿಂಪ್ಸ್ WAVES ಶೃಂಗಸಭೆಯಲ್ಲಿ ರಿಲೀಸ್‌

    ರಾವಣ ಪಾತ್ರಧಾರಿಯಾಗಿ ಮೊದಲ ದೃಶ್ಯದಲ್ಲಿ ಯಶ್ ನಟಿಸಿದ್ದಾರೆ. ಏ.30ರಿಂದ ಒಂದು ತಿಂಗಳುಗಳ ಕಾಲ ಯಶ್ ‘ರಾಮಾಯಣ ಪಾರ್ಟ್ 1’ ಶೂಟಿಂಗ್‌ನಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಅದಕ್ಕಾಗಿ ಮುಂಬೈನಲ್ಲಿಯೇ ಯಶ್ ಬೀಡು ಬೀಡಲಿದ್ದಾರೆ. ಸದ್ಯದಲ್ಲೇ ಸಾಯಿ ಪಲ್ಲವಿ (ಸೀತಾ), ರಣಬೀರ್ ಕಪೂರ್ (ರಾಮ), ಸನ್ನಿ ಡಿಯೋಲ್ (ಹನುಮಾನ್) ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ. ಇದನ್ನೂ ಓದಿ:ಅಕ್ಷಯ ತೃತೀಯದಂದು ಬಿಡುಗಡೆಯಾಯ್ತು ‘ಟೈಮ್ ಪಾಸ್’ ಚಿತ್ರದ ಫಸ್ಟ್ ಲುಕ್ ಪೋಸ್ಟರ್!

    ರಾವಣ ಪಾತ್ರಕ್ಕೆ ಜೀವತುಂಬಲು ತೆರೆಮರೆಯಲ್ಲಿ ಭರ್ಜರಿ ತಯಾರಿ ಮಾಡಿಕೊಂಡೇ ಯಶ್ ಅಖಾಡಕ್ಕೆ ಇಳಿದಿದ್ದಾರೆ. ನಟನೆಯ ಜೊತೆ ಸಹ- ನಿರ್ಮಾಪಕನಾಗಿ ಕೂಡ ಅವರು ಕೈಜೋಡಿಸಿದ್ದಾರೆ. ರಾವಣ ಪಾತ್ರಕ್ಕೆ ಬಣ್ಣ ಹಚ್ಚೋದಕ್ಕೂ ಮುನ್ನ ಇತ್ತೀಚೆಗೆ ಉಜ್ಜನಿಯ ಮಹಾಕಾಳೇಶ್ವರ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು.

    ಅಂದಹಾಗೆ, ಯಶ್‌ ನಟನೆಯ ‘ಟಾಕ್ಸಿಕ್‌’ ಸಿನಿಮಾ ಕನ್ನಡ, ಇಂಗ್ಲಿಷ್‌ ಜೊತೆ ಬಹುಭಾಷೆಗಳಲ್ಲಿ ಸಿನಿಮಾ ಮೂಡಿ ಬರಲಿದೆ. ಮುಂದಿನ ವರ್ಷ ಜ.19ರಂದು ಚಿತ್ರ ರಿಲೀಸ್‌ ಆಗ್ತಿದೆ.