Tag: ramanavami

  • ರಾಮನವಮಿಗೂ ಕೊರೊನಾ ಬಿಸಿ- ಭಣಗುಡುತ್ತಿವೆ ದೇವಸ್ಥಾನಗಳು

    ರಾಮನವಮಿಗೂ ಕೊರೊನಾ ಬಿಸಿ- ಭಣಗುಡುತ್ತಿವೆ ದೇವಸ್ಥಾನಗಳು

    – ಮಜ್ಜಿಗೆ, ಪಾನಕ, ಕೋಸಂಬರಿ ಘಮವಿಲ್ಲ
    – ಸರಳ ಪೂಜೆ ಮೂಲಕ ಆಚರಣೆ

    ಬೆಂಗಳೂರು: ದೇವಸ್ಥಾನಗಳಲ್ಲಿ ರಾಮನವಮಿ ಸಂಭ್ರಮ, ಮಜ್ಜಿಗೆ, ಪಾನಕ, ಕೋಸಂಬರಿ ಘಮ ಘಮಿಸುತ್ತಿತ್ತು. ಆದರೆ ಕೊರೊನಾ ಭೀತಿಯಿಂದಾಗಿ ಎಲ್ಲ ದೇವಸ್ಥಾನಗಳಲ್ಲಿ ಸರಳವಾಗಿ ಪೂಜೆ ಮಾಡುವ ಮೂಲಕ ರಾಮನವಮಿ ಆಚರಿಸಲಾಗುತ್ತಿದೆ.

    ಬೆಂಗಳೂರು, ಮೈಸೂರು, ದಾವಣಗೆರೆ ಸೇರಿದಂತೆ ವಿವಿಧೆಡೆಗಳಲ್ಲಿ ರಾಮನವಮಿಯನ್ನು ಸರಳವಾಗಿ ಆಚರಿಸಲಾಗುತ್ತಿದೆ. ಮೈಸೂರಿನಲ್ಲಿ ಪೂಜೆಗೆ ಮಾತ್ರ ರಾಮನವಮಿ ಸೀಮಿತವಾಗಿದ್ದು, ಎಲ್ಲ ರಾಮ ಮಂದಿರಗಳಲ್ಲೂ ಸರಳವಾಗಿ ರಾಮನವಮಿ ಆಚರಿಸಲಾಗುತ್ತಿದೆ. ಮಂದಿರ ಸ್ವಚ್ಛಗೊಳಿಸಿ ಪೂಜೆ ಮಾಡಲಾಗುತ್ತಿದೆ. ಆದರೆ ಮಜ್ಜಿಗೆ, ಪಾನಕ, ಕೋಸಂಬರಿಗೆ ಬ್ರೇಕ್ ಹಾಕಲಾಗಿದೆ. ಕೇವಲ ದೇವಸ್ಥಾನದವರು ಮಾತ್ರ ಪೂಜೆಯಲ್ಲಿ ಭಾಗಿಯಾಗುತ್ತಿದ್ದಾರೆ. ಪೂಜೆಯಲ್ಲಿ ಭಾಗವಹಿಸದಂತೆ ಸಾರ್ವಜನಿಕರಿಗೂ ನಿರ್ಬಂಧ ಹೇರಲಾಗಿದೆ.

    ಸಿಲಿಕಾನ್ ಸಿಟಿಯಲ್ಲಿ ಪ್ರತಿ ವರ್ಷ ಹಲವು ದೇವಸ್ಥಾನಗಳಲ್ಲಿ ರಾಮನವಮಿಯನ್ನು ಭರ್ಜರಿಯಾಗಿ ಆಚರಿಸಲಾಗುತ್ತಿತ್ತು. ಆದರೆ ಕೊರೊನಾ ಭಿತಿ ಹಿನ್ನೆಲೆ ಎಲ್ಲವೂ ಸ್ತಬ್ಧವಾಗಿದ್ದು, ಶ್ರೀರಾಮನವಮಿ ಹಿನ್ನೆಲೆಯಲ್ಲಿ ಸದಾ ಕಳೆಕಟ್ಟುತ್ತಿದ್ದ ವೀರಾಂಜನೇಯ ದೇವಾಲಯ ಕೊರೋನಾ ವೈರೆಸ್ ಎಫೆಕ್ಟ್ ನಿಂದಾಗಿ ಬಂದ್ ಆಗಿದೆ. ಪೂಜೆ, ಪ್ರಸಾದ, ಮಜ್ಜಿಗೆ, ಪಾನಕ ಹಂಚಿಕೆಗೆ ಬ್ರೇಕ್ ಬಿದ್ದಿದೆ. ನಗರದ ಹಲವು ದೇವಾಲಯಗಳಲ್ಲಿ ಸರಳವಾಗಿ ರಾಮನವಮಿ ಆಚರಿಸಲಾಗುತ್ತಿದ್ದು, ಸರಳವಾಗಿ ಪೂಜೆ ಮಾತ್ರ ಮಾಡಲಾಗುತ್ತಿದೆ.

    ಇತ್ತ ದಾವಣಗೆರೆಯಲ್ಲೂ ರಾಮನವಮಿ ಸ್ತಬ್ಧವಾಗಿದೆ. ಆದರೆ ದಾವಣಗೆರೆಯ ಹೂವಿನ ಮಾರುಕಟ್ಟೆಯಲ್ಲಿ ಖರೀದಿ ಜೋರಾಗಿದ್ದು, ಹೂವು ಹಾಗೂ ಹಣ್ಣುಗಳ ವ್ಯಾಪಾರ ಜೋರಾಗಿ ಸಾಗಿದೆ. ಮನೆ ಬಳಿಯೇ ಅಗತ್ಯ ವಸ್ತುಗಳು ಬರುತ್ತವೆ ಎಂದು ಹೇಳಿದರೂ ಜನ ಮಾರುಕಟ್ಟೆಗೆ ಬಂದು ಖರೀದಿಸುತ್ತಿದ್ದಾರೆ. ರಾಮನವಮಿ ಇದ್ದರೂ ಹೂವಿನ ಬೆಲೆ ಕುಸಿದಿದ್ದು, ಸೇವಂತಿಗೆ 20ರೂ., ಕನಕಾಂಬರ 30 ರೂ., ಸೇರಿದಂತೆ ಹಲವು ಹೂವುಗಳ ಬೆಲೆ ಕುಸಿತವಾಗಿದೆ.

  • ರಾಮರಸ ಕುಡಿದ 8 ಮಂದಿ ಅಸ್ವಸ್ಥ!

    ರಾಮರಸ ಕುಡಿದ 8 ಮಂದಿ ಅಸ್ವಸ್ಥ!

    ಹಾಸನ: ರಾಮರಸ ಕುಡಿದು ಎಂಟು ಮಂದಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಹಾಸನದ ಬೈಲಾಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಶನಿವಾರ ರಾಜ್ಯದ ಎಲ್ಲಾ ಕಡೆ ರಾಮನವಮಿಯನ್ನು ಆಚರಿಸಲಾಗಿತ್ತು. ಹಾಸನದ ಬೈಲಾಹಳ್ಳಯಲ್ಲೂ ರಾಮನವಮಿಯನ್ನು ಅದ್ಧೂರಿಯಾಗಿಯೇ ಆಚರಿಸಲಾಗಿತ್ತು. ಈ ವೇಳೆ ಅಲ್ಲಿ ರಾಮರಸ ತಯಾರಿಸಲಾಗಿದ್ದು. ಇದನ್ನು ಕುಡಿದ 8 ಮಂದಿ ಅಸ್ವಸ್ಥಗೊಂಡಿದ್ದಾರೆ.

    ಅಸ್ವಸ್ಥಗೊಂಡವರನ್ನು ಕೂಡಲೇ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಆದ್ರೆ ಅಸ್ವಸ್ಥಗೊಂಡವರಿಗೆ ಯಾವುದೇ ತೊಂದರೆ ಇಲ್ಲ ಎಂದು ಜಿಲ್ಲಾಸ್ಪತ್ರೆ ವೈದ್ಯರು ಸ್ಪಷ್ಟನೆ ನೀಡಿದ್ದಾರೆ.

  • ಹಿಂದೂ-ಮುಸ್ಲಿಮರು ಜೊತೆಗೂಡಿ ರಾಮನವಮಿ ಆಚರಣೆ

    ಹಿಂದೂ-ಮುಸ್ಲಿಮರು ಜೊತೆಗೂಡಿ ರಾಮನವಮಿ ಆಚರಣೆ

    ಚಿಕ್ಕಬಳ್ಳಾಪುರ: ರಾಮಮಂದಿರ ವಿವಾದ ಹಿಂದೂ ಮುಸ್ಲಿಮರ ಮಧ್ಯೆ ಒಂದಷ್ಟು ಬಿರುಕು ಮೂಡಿಸಿರೋದು ನಿಜ. ಆದ್ರೆ ಇಂತಹ ಸಂದರ್ಭದಲ್ಲೂ ಹಿಂದೂ-ಮುಸ್ಲಿಂ ಬಾಂಧವರು ಕೂಡಿ ವಿಶೇಷವಾಗಿ ಶ್ರೀರಾಮನವಮಿ ಆಚರಣೆ ಮಾಡಿದ್ದಾರೆ.

    ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಗರದ ಅಜಾದ್ ಚೌಕ್ ನಲ್ಲಿ ಇಂದು ಹಿಂದೂ ಹಾಗೂ ಮುಸ್ಲಿಂ ಬಾಂಧವರು ಜೊತೆಗೂಡಿ ಭಾವೈಕ್ಯತೆಯ ಶ್ರೀರಾಮನವಮಿ ಹಬ್ಬ ಆಚರಣೆ ಮಾಡಿದ್ದಾರೆ. ಅಜಾದ್ ಚೌಕ್ ನಲ್ಲಿ ಶ್ರೀರಾಮನ ಭಾವಚಿತ್ರಕ್ಕೆ ವಿಶೇಷ ಪೂಜೆ ಪುನಸ್ಕಾರ ಸಲ್ಲಸಿ ಹಬ್ಬ ಆಚರಣೆ ಮಾಡಲಾಗಿದೆ.

    ಹಬ್ಬದ ಪ್ರಯುಕ್ತ ಬಂದ ಭಕ್ತಾಧಿಗಳಿಗೆ ಪಾನಕ, ಮಜ್ಜಿಗೆ, ಹೆಸರು ಬೇಳೆ, ಕೆಡಲೆ ಕಾಳು ಪ್ರಸಾದ ವಿತರಣೆ ಮಾಡಲಾಗಿದೆ. ಹಿಂದೂ-ಮುಸ್ಲಿಂ ಬಾಂಧವರು ಕೂಡಿ ಮಾಡಿದ ಶ್ರೀರಾಮನವಮಿಗೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.