Tag: ramanavami

  • ಶಾಸಕ ಯತ್ನಾಳ್‌ ಕೊಲೆಗೆ ಸಂಚು? – ಅನ್ಯಕೋಮಿನ ಯುವಕನ ಸ್ಫೋಟಕ ಆಡಿಯೋ ವೈರಲ್‌

    ಶಾಸಕ ಯತ್ನಾಳ್‌ ಕೊಲೆಗೆ ಸಂಚು? – ಅನ್ಯಕೋಮಿನ ಯುವಕನ ಸ್ಫೋಟಕ ಆಡಿಯೋ ವೈರಲ್‌

    ವಿಜಯಪುರ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಪ್ರವಾದಿ ಮಹಮ್ಮದ್ ಪೈಗಂಬರ್ (Mohammad Paigambar) ಕುರಿತು ಅವಹೇಳನ ಕಾರಿ ಹೇಳಿಕೆ ನೀಡಿದ ಹಿನ್ನೆಲೆ, ಶಾಸಕನ ಹತ್ಯೆಗೆ ಸಂಚು ನಡೆದಿತ್ತು ಎನ್ನುವ ಆರೋಪ ಕೇಳಿಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಮುಸ್ಲಿಂ ಯುವಕನ ಆಡಿಯೋದಲ್ಲಿ ನಡೆದ ಸಂಭಾಷಣೆ ಪುಷ್ಟಿ ನೀಡಿದೆ.

    ಹೌದು. ಏ.7 ರಂದು ಹುಬ್ಬಳ್ಳಿಯ (Hubballi) ಬಾಣಿ ಓಣಿಯಲ್ಲಿ ನಡೆದ ರಾಮನವಮಿ ಕಾರ್ಯಕ್ರಮದಲ್ಲಿ ಯತ್ನಾಳ್ ಮಾತನಾಡುತ್ತಾ ಪ್ರವಾದಿ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದರು. ಈ ಹಿನ್ನೆಲೆ ಯತ್ನಾಳ್‌ ವಿರುದ್ಧ ಪ್ರತಿಭಟನೆ ನಡೆಸಲು ಒಟ್ಟಾಗಿ ಎಂದು ಕರೆ ನೀಡಿರುವ ಮುಸ್ಲಿಂ ಯುವಕನ (Muslim Boy) ಸ್ಫೋಟಕ ಆಡಿಯೋ ವೈರಲ್‌ ಆಗಿದೆ. ಇದು ವಿಜಯಪುರದಲ್ಲಿ ಭಾರೀ ಆತಂಕ ಸೃಷ್ಟಿಸಿದೆ. ಇದನ್ನೂ ಓದಿ: ಮಹಮ್ಮದ್ ಪೈಗಂಬರ್ ಬಗ್ಗೆ ಅವಹೇಳನಕಾರಿ ಹೇಳಿಕೆ – ಯತ್ನಾಳ್ ವಿರುದ್ಧ ಎಫ್‍ಐಆರ್

    ಆಡಿಯೋ ಸಂಭಾಷಣೆಯಲ್ಲಿ ಏನಿದೆ?
    ಗೆಳೆಯರೇ.. ನಮಸ್ಕಾರ ಎಲ್ಲ ಸಹೋದರ, ಸಹೋದರಿಯರಿಗೆ ನಮಸ್ಕಾರ. ವಿಜಯಪುರದಲ್ಲಿಂದ ದೊಡ್ಡ ಮೀಟಿಂಗ್‌ ಕರೆಯಲಾಗಿತ್ತು. ನಗರದ ಆಲಂಗೀರ್ ಹಾಲ್‌ನಲ್ಲಿ ಎಂಎಂಸಿ ಮೀಟಿಂಗ್‌ನಲ್ಲಿ ವಿಜಯಪುರದ ಎಲ್ಲ ದಿಗ್ಗಜ ಸದಸ್ಯರು, ಉಲ್ಮಾಗಳು ಅಲ್ಲಿ ಇದ್ರೂ. ಅಲ್ಲಿ ಇದೇ ತಿಂಗಳ ಏ.15 ರಂದು ವಿಜಯಪುರ ಬಂದ್ ಮಾಡಲು ನಿರ್ಧಾರ ಆಗಿದೆ. ಇನ್ನು ಯತ್ನಾಳ್‌ಗೆ ಅದು ಫೈನಲ್ ದಿನ. ಮಹಮ್ಮದ್ ಪೈಗಂಬರ್ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದಾನೆ ಯತ್ನಾಳ್. ಇದನ್ನ ವಿರೋಧಿಸಿ 1 ಲಕ್ಷ ಜನರು ರ‍್ಯಾಲಿಯಲ್ಲಿ ಸೇರುತ್ತಿದ್ದಾರೆ. ಈ ಬಾರಿ ಎಲ್ಲರು ನಿರ್ಧರಿಸಿದ್ದಾರೆ ಅವನದ್ದು ಕೊನೆಯ ದಿನ ಅಂತಾ. ಅವನು ಅರೆಸ್ಟ್ ಆಗಬೇಕು ಇಲ್ಲ, ರ‍್ಯಾಲಿ ಅವನ ಮನೆಗೆ ತೆರಳಬೇಕು, ರ‍್ಯಾಲಿ ಅಲ್ಲಿಂದ ಅವನ ಮನೆಗೆ ನೇರವಾಗಿ ಹೋಗುತ್ತೆ. ಆದ್ದರಿಂದ ಎಲ್ಲ ಸಹೋದರ, ಸಹೋದರಿಯರು ಹೆಚ್ಚಿನ ಸಂಖ್ಯೆಯಲ್ಲಿ ರ‍್ಯಾಲಿಯಲ್ಲಿ ಪಾಲ್ಗೊಳ್ಳಬೇಕು. ಏ.15ರಂದು ಬೆಳಗ್ಗೆ 10 ಗಂಟೆಗೆ ಅಂಬೇಡ್ಕರ್ ವೃತ್ತದಲ್ಲಿ ಸೇರಬೇಕು, ನಿಮ್ಮ ಅಕ್ಕ-ಪಕ್ಕದ ಊರುಗಳಲ್ಲಿರುವ ಎಲ್ಲ ಸ್ನೇಹಿತರು, ಅಣ್ಣ-ತಮ್ಮಂದಿರಿಗೆ ವಿಷಯ ಹೇಳಿ.

    ಈ ಬಾರಿ ಅವನದ್ದು ಫೈನಲ್ ದಿನ ಇದೆ. ಇಲ್ಲಿವರೆಗೂ ಅವನ ವಿರುದ್ಧ ದೂರು ಕೊಡುತ್ತಿದ್ದೆವು. ಆದ್ರೆ ಏನಾಗುತ್ತಿತ್ತು ಅವನು ಬೇಲ್ ಮೇಲೆ ಹೊರಗಡೆ ಬರ್ತಾ ಇದ್ದ. ಈ ಬಾರಿ ಆ ರೀತಿ ಆಗಲ್ಲ. ಈ ಬಾರಿ ಅವನು ಅರೆಸ್ಟ್ ಆಗಬೇಕು, ಇಲ್ಲ ಅವನ ರುಂಡ ದೇಹದಿಂದ ಇಬ್ಭಾಗ ಆಗಬೇಕು. ಮುಸ್ಲಿಂ ಸದಸ್ಯರು ಎಲ್ಲರೂ ಸಿದ್ಧರಾಗಿ ಕುಳಿತಿದ್ದಾರೆ. ಏ.15ರಂದು ಯಾವುದೇ ಕೆಲಸ ಇದ್ದರೂ ರಜೆ ಮಾಡಿ, ಅಂಬೇಡ್ಕರ್ ವೃತ್ತದಲ್ಲಿ ಜಮಾವಣೆ ಆಗಿ. ಇನ್ ಷಾ ಅಲ್ಲಾ.. ಎಲ್ಲರು ಅಲ್ಲೇ ಸಿಗೋಣ ಎಂದು ಆಡಿಯೋನಲ್ಲಿ ಹೇಳಿದ್ದಾನೆ. ಇದನ್ನೂ ಓದಿ: ಹುಬ್ಬಳ್ಳಿ, ಬೆಳಗಾವಿ ಏರ್‌ಪೋರ್ಟ್‌ನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಾಗಿ ಘೋಷಿಸಲು ಕೇಂದ್ರಕ್ಕೆ ಪತ್ರ

    ಸದ್ಯ ಶಾಸಕನ ಹತ್ಯೆಗೆ ಸಂಚು ರೂಪಿಸಿದ್ದಾರೆ ಎನ್ನುವುದಕ್ಕೆ ಪುಷ್ಟಿ ನೀಡುವಂತಿರುವ ಈ ಆಡಿಯೋ ತೀವ್ರ ಸದ್ದು ಮಾಡುತ್ತಿದೆ.

  • ರಾಮನವಮಿ ವಿಶೇಷ; ಸುಲಭವಾಗಿ ಮಾಡಿ ಬೆಲ್ಲದ ಪಾನಕ!

    ರಾಮನವಮಿ ವಿಶೇಷ; ಸುಲಭವಾಗಿ ಮಾಡಿ ಬೆಲ್ಲದ ಪಾನಕ!

    ರಾಮನವಮಿ ಹಬ್ಬದಂದು ನೈವೇದ್ಯವಾಗಿ ಹಾಗೂ ಭಕ್ತರಿಗೆ ಪ್ರಸಾದವಾಗಿ ಪಾನಕವನ್ನು ವಿತರಿಸಲಾಗುತ್ತದೆ. ಸಾಮಾನ್ಯವಾಗಿ ಚೈತ್ರ ಮಾಸದ ಸಮಯದಲ್ಲಿ ವಿಪರೀತ ಬಿಸಿಲಿರುವ ಕಾರಣ ದೇಹಕ್ಕೆ ತಂಪು ಎಂಬ ಕಾರಣಕ್ಕೆ ಪಾನಕವನ್ನು ಹಂಚಲಾಗುತ್ತದೆ. ಜೊತೆಗೆ ಇದು ವಿಷ್ಣುವಿಗೆ ಪ್ರಿಯವಾದ ಪಾನೀಯವಾಗಿರುವುದರಿಂದ ರಾಮನವಮಿ ದಿನ ದೇವರಿಗೆ ಪಾನಕವನ್ನೇ ನೈವೇದ್ಯವಾಗಿ ಅರ್ಪಿಸಲಾಗುತ್ತದೆ. ಹಾಗಿದ್ರೆ ಸುಲಭವಾಗಿ ಪಾನಕ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ.

    ಬೇಕಾಗುವ ಸಾಮಾಗ್ರಿಗಳು:
    ನೀರು – ಅಗತ್ಯಕ್ಕೆ ತಕ್ಕಷ್ಟು
    ಬೆಲ್ಲ – ರುಚಿಗೆ ತಕ್ಕಷ್ಟು
    ಕಾಳು ಮೆಣಸಿನ ಪುಡಿ- ಸ್ವಲ್ಪ
    ಶುಂಠಿ ಪುಡಿ – ಅಗತ್ಯಕ್ಕೆ ತಕ್ಕಷ್ಟು
    ನಿಂಬೆ ರಸ – ಸ್ವಲ್ಪ
    ಏಲಕ್ಕಿ ಪುಡಿ – 1 ಚಿಟಿಕೆ

    ತಯಾರಿಸುವ ವಿಧಾನ:
    * ಮೊದಲಿಗೆ ಒಂದು ಪಾತ್ರೆಯನ್ನು ತೆಗೆದುಕೊಂಡು ನಿಮ್ಮ ಅಳತೆಗೆ ತಕ್ಕಷ್ಟು ಅದಕ್ಕೆ ನೀರನ್ನು ಹಾಕಿ.
    * ನಂತರ ಆ ನೀರಿಗೆ ತುರಿದ ಅಥವಾ ಪುಡಿ ಮಾಡಿದ ಬೆಲ್ಲವನ್ನು ಸೇರಿಸಿ, ಅದು ಕರಗುವರೆಗೂ ಬೆರೆಸಿ.
    * ಈಗ ಅದಕ್ಕೆ ನಿಂಬೆ ರಸ, ಕಾಳು ಮೆಣಸಿನ ಪುಡಿ, ಶುಂಠಿ ಪುಡಿ, ನಿಂಬೆ ರಸವನ್ನು ಸೇರಿಸಿ ಮಿಶ್ರಣ ಮಾಡಿದರೆ ಪಾನಕ ರೆಡಿ.
    * ನೀವು ನಿಂಬೆ ರಸದ ಬದಲಿಗೆ ಇದಕ್ಕೆ ಹುಣಸೆ ರಸವನ್ನು ಕೂಡಾ ಸೇರಿಸಬಹುದು.

  • ಇದೊಂದು ಭಾವನಾತ್ಮಕ ಕ್ಷಣ- ಚುನಾವಣಾ ಪ್ರಚಾರದ ಬ್ಯುಸಿನಲ್ಲೂ ಸೂರ್ಯ ತಿಲಕ ವೀಕ್ಷಿಸಿದ PM

    ಇದೊಂದು ಭಾವನಾತ್ಮಕ ಕ್ಷಣ- ಚುನಾವಣಾ ಪ್ರಚಾರದ ಬ್ಯುಸಿನಲ್ಲೂ ಸೂರ್ಯ ತಿಲಕ ವೀಕ್ಷಿಸಿದ PM

    ಗುವಾಹಟಿ: ಅಯೋಧ್ಯೆ ರಾಮ ಮಂದಿರದಲ್ಲಿ (Ayodhya Ram Mandir) ಇಂದು ರಾಮನವಮಿ ಹಬ್ಬವನ್ನು ವಿಶೇಷ ಹಾಗೂ ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. ಸೂರ್ಯ ರಶ್ಮಿಯು ರಾಮ ಲಲ್ಲಾನ ವಿಗ್ರಹದ ಹಣೆಯನ್ನು ಸ್ಪರ್ಶಿಸುವ ಕ್ಷಣವನ್ನು ಪ್ರಧಾನಿ ನರೇಂದ್ರ ಮೋದಿಯವರು (Narendra Modi) ವೀಕ್ಷಣೆ ಮಾಡಿದ್ದಾರೆ.

    ಬಳಿಕ ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿರುವ ಅವರು, ನಲ್ಬರಿ ರ‍್ಯಾಲಿಯ ನಂತರ ನಾನು ಸೂರ್ಯ ತಿಲಕವನ್ನು (Surya Tilak) ವೀಕ್ಷಿಸಿದೆ. ಕೋಟಿಗಟ್ಟಲೆ ಭಾರತೀಯರಂತೆ ನನಗೂ ಇದು ಅತ್ಯಂತ ಭಾವನಾತ್ಮಕ ಹಾಗೂ ಐತಿಹಾಸಿಕ ಕ್ಷಣವಾಗಿದೆ. ಈ ಸೂರ್ಯ ತಿಲಕ ನಮ್ಮ ಜೀವನಕ್ಕೆ ಶಕ್ತಿಯನ್ನು ತರಲಿ ಮತ್ತು ನಮ್ಮ ರಾಷ್ಟ್ರವು ವೈಭವದ ಹೊಸ ಎತ್ತರಗಳನ್ನು ಏರಲು ಪ್ರೇರೇಪಿಸಲಿ ಎಂದು ಶುಭಹಾರೈಸಿದ್ದಾರೆ. ಇದನ್ನೂ ಓದಿ: ಸೂರ್ಯ ತಿಲಕವನ್ನು ಸಾಧ್ಯವಾಗಿಸಿದ ವಿಜ್ಞಾನಿಗಳಿಗೆ ತಲೆಬಾಗುತ್ತೇನೆ: ಅರುಣ್‌ ಯೋಗಿರಾಜ್‌

    ಪ್ರಧಾನಿಯವರು ಇಂದು ಅಸ್ಸಾಂನ ನಲ್ಬರಿ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದರು. ಈ ನಡುವೆಯೇ ತಮ್ಮ ಟ್ಯಾಬ್ಲೆಟ್‌ನಲ್ಲಿ ಸೂರ್ಯ ತಿಲಕ ಕ್ಷಣವನ್ನು ಕಣ್ತುಂಬಿಕೊಂಡಿದ್ದಾರೆ. ಶೂ ಕಳಚಿಟ್ಟು ವೀಕ್ಷಿಸುತ್ತಿದ್ದ ಮೋದಿ ಸೂರ್ಯ ತಿಲಕ ವೀಕ್ಷಿಸುತ್ತಿರುವ ವೀಡಿಯೋ ಹಾಗೂ ಫೋಟೋಗಳು ವೈರಲ್‌ ಆಗುತ್ತಿವೆ.

  • ಕುಟುಂಬದೊಂದಿಗೆ ಅಯೋಧ್ಯೆಯಲ್ಲಿ ರಾಮನವಮಿ ಆಚರಣೆಗೆ ಅರುಣ್‌ ಯೋಗಿರಾಜ್‌ ಪ್ಲಾನ್‌

    ಕುಟುಂಬದೊಂದಿಗೆ ಅಯೋಧ್ಯೆಯಲ್ಲಿ ರಾಮನವಮಿ ಆಚರಣೆಗೆ ಅರುಣ್‌ ಯೋಗಿರಾಜ್‌ ಪ್ಲಾನ್‌

    ಬೆಂಗಳೂರು: ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ (Sculptor Arun Yogiraj) ಅವರು ಏಪ್ರಿಲ್ 17 ರಂದು ರಾಮನವಮಿ (Rama Navami) ಹಬ್ಬವನ್ನು ಅಯೋಧ್ಯೆಯಲ್ಲಿ ತಮ್ಮ ಕುಟುಂಬದೊಂದಿಗೆ ಆಚರಿಸಲು ಪ್ಲಾನ್‌ ಮಾಡಿಕೊಂಡಿದ್ದಾರೆ.

    ಈ ಸಂಬಂಧ ಮಾಧ್ಯಮಗಳ ಜೊತೆ ಮಾತನಾಡಿರುವ ಅವರು, ಜನವರಿ 22 ರ ಬಳಿಕ ಅಯೋಧ್ಯೆಗೆ ಭೇಟಿ ನೀಡಿಲ್ಲ. ಇದೀಗ ರಾಮಲಲ್ಲಾ ವಿಗ್ರಹವನ್ನು ವೀಕ್ಷಿಸಲು ತಮ್ಮ ಕುಟುಂಬವನ್ನು ಅಲ್ಲಿಗೆ ಕರೆದೊಯ್ಯಲು ಉತ್ಸುಕನಾಗಿರುವುದಾಗಿ ತಿಳಿಸಿದ್ದಾರೆ.

    ಹೊಸ ಬಟ್ಟೆ ಖರೀದಿಸುವುದು ಸೇರಿದಂತೆ ತಮ್ಮ ಸಿದ್ಧತೆಗಳ ಜೊತೆಗೆ ತಮ್ಮ ಕುಟುಂಬ ಪ್ರವಾಸದ ಉತ್ಸಾಹವನ್ನು ಹಂಚಿಕೊಂಡರು. ವಿಶೇಷವಾಗಿ ವಿಗ್ರಹದ ನೋಟದಲ್ಲಿನ ಬದಲಾವಣೆಗಳ ಬಗ್ಗೆ ಸ್ನೇಹಿತರಿಂದ ಕೇಳಿದ ನಂತರ ರಾಮಲಲ್ಲಾನನ್ನು (Rama Lalla) ಮತ್ತೆ ನೋಡಲು ತುಂಬಾ ಉತ್ಸುಕನಾಗಿದ್ದೇನೆ. ಇಂತಹ ಐತಿಹಾಸಿಕ ಸ್ಥಳಕ್ಕಾಗಿ ವಿಗ್ರಹವನ್ನು ಕೆತ್ತಲು ಆಯ್ಕೆ ಮಾಡಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಿದರು. ಇದನ್ನೂ ಓದಿ: ಈ ಬಾರಿ ಅಯೋಧ್ಯೆಯಲ್ಲಿ ರಾಮನವಮಿ ಅದ್ಧೂರಿ ಆಚರಣೆ- ಸೂರ್ಯ ತಿಲಕಕ್ಕೆ ಸಿದ್ಧತೆ

    ನನ್ನ ಕುಟುಂಬದವರು ರಾಮಲಲ್ಲಾನನ್ನು ನೋಡಬೇಕೆಂದು ಪಟ್ಟು ಹಿಡಿದಿದ್ದಾರೆ. ದಿನನಿತ್ಯ ಹೇಳುತ್ತಾ ಇರುತ್ತಾರೆ. ಆದರೆ ನಾನು ಮುಂದೂಡುತ್ತಲೇ ಇದ್ದೆ. ಹಾಗಾಗಿ ಈ ಬಾರಿ ನಾನು ಅವರನ್ನು ಕರೆದುಕೊಂಡು ಹೋಗುತ್ತೇನೆ. ಅವರನ್ನು ಬಿಟ್ಟು ನಾನು ಅಯೋಧ್ಯೆಗೆ (Ayodhya) ಹೋದರೆ ಅವರು ನನ್ನನ್ನು ಶಿಕ್ಷಿಸುತ್ತಾರೆ ಎಂದು ನಗುತ್ತಲೇ ಅರುಣ್‌ ಅವರು ಹೇಳಿದರು.

    ಇದೇ ವೇಳೆ ಜನವರಿ 22 ರಂದು ಅಯೋಧ್ಯೆಯಲ್ಲಿ ನಡೆದ ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಭಾಗವಹಿಸಿದ್ದನ್ನು ನೆನಪಿಸಿಕೊಂಡರು. ಪ್ರಧಾನಿ ನರೇಂದ್ರ ಮೋದಿಯವರ ಕೃಪಾಶೀರ್ವಾದದಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದ ಈ ಕಾರ್ಯಕ್ರಮದಲ್ಲಿ ವಿಧಿವಿಧಾನಗಳ ನಡುವೆ ವಿಗ್ರಹ ಅನಾವರಣಗೊಳಿಸಲಾಯಿತು ಎಂದರು.

  • ರಾಮಪಾದ ಊರಿದ ಏರಿಯಾ ಪಾದರಾಯನಪುರದಲ್ಲಿ ರಾಮ ನವಮಿ ಸಂಭ್ರಮ

    ರಾಮಪಾದ ಊರಿದ ಏರಿಯಾ ಪಾದರಾಯನಪುರದಲ್ಲಿ ರಾಮ ನವಮಿ ಸಂಭ್ರಮ

    – ಚಾಮರಾಜಪೇಟೆ ರಾಮೇಶ್ವರ ಮಂದಿರಕ್ಕೆ ರಾಮನ ಶೋಭಾಯಾತ್ರೆ

    ಬೆಂಗಳೂರು: ಅದು ಶ್ರೀರಾಮ ಪಾದ ಊರಿದ ಪವಿತ್ರ ಜಾಗ. ಏರಿಯಾದ ಹೆಸ್ರಲ್ಲಿ ರಾಮನ ಪಾದವಿದೆ. ರಾಮನೇ ರಾಯನಾಗಿರೋ ಆ ಏರಿಯಾದಲ್ಲಿ ರಾಮನ ವೈಭವವನ್ನ ಸಂಭ್ರಮಿಸೋಕೆ ಆ ಏರಿಯಾ ಸಜ್ಜಾಗಿದೆ. ರಾಮನ ನಾಮ ಜೊತೆಗೆ ವೈಭವದ ತೇರು ಸಾಗೋಕೆ ತಯಾರಿ ನಡೆದಿದೆ.

    ವರ್ಷಗಳ ಹಿಂದೆ ಅಕ್ಷರಶಃ ಹೊತ್ತಿ ಉರಿದಿದ್ದ ಬೆಂಗಳೂರು ಏರಿಯಾ ಅಂದ್ರೆ ಪಾದರಾಯನಪುರ (Padarayanapura). ಸದಾ ಒಂದಲ್ಲ ಒಂದು ಸುದ್ದಿಯಾಗಿ ಚಾಲ್ತಿಯಲ್ಲಿರೋ ಪಾದರಾಯನಪುರಕ್ಕೆ ತನ್ನದೇ ಆದ ಇತಿಹಾಸವಿದೆ. ಶ್ರೀರಾಮ ಚಂದ್ರನು ವಿಶ್ರಮಿಸಿ ತನ್ನ ಪಾದವನ್ನ ಊರಿದ್ದ ಜಾಗದಲ್ಲಿ ಶ್ರೀರಾಮ (Srirama) ಪಾದದ ಶಿಲೆಯಿದೆ. ಈ ಹಿನ್ನೆಲೆ ಏರಿಯಾಗೆ ಪಾದರಾಯನಪುರ ಅನ್ನೋ ಹೆಸ್ರು ಬಂದಿದೆ ಅನ್ನೋ ಪ್ರತೀತಿ ಇದೆ. ಇದನ್ನೂ ಓದಿ: 600 ಕೋಟಿ ವೆಚ್ಚದ ರಾಜೀವ್ ಗಾಂಧಿ ಆರೋಗ್ಯ ವಿವಿ ನಿರ್ಮಾಣಕ್ಕೆ ಸಿಎಂ ಶಂಕುಸ್ಥಾಪನೆ

    ಸಾಕಷ್ಟು ಧರ್ಮ ದಂಗಲ್‍ಗೆ ಕಾರಣವಾಗಿದ್ದ ಪಾದರಾಯನಪುರದಲ್ಲಿ ಈ ಬಾರಿ ಶ್ರೀರಾಮನವಮಿ ಹಬ್ಬದ ಪ್ರಯುಕ್ತ ಶ್ರೀರಾಮನ ವೈಭವದ ಶೋಭಾಯಾತ್ರೆ ಮಾಡೋಕೆ ಚಾಮರಾಜಪೇಟೆ ರಾಮೋತ್ಸವ ಸಮಿತಿಯಿಂದ ನಿರ್ಧಾರ ಮಾಡಲಾಗಿದೆ. ಗೋರಿಪಾಳ್ಯ (Goripalya) ಪಾದಾರಾಯನಪುರದ ಪುರಾತನ ರಾಮಪಾದ ದೇವಸ್ಥಾನದಿಂದ ಚಾಮರಾಜಪೇಟೆಯ ರಾಮೇಶ್ವರ ದೇವಸ್ಥಾನದವರೆಗೆ ಶೋಭಾಯಾತ್ರೆ ಮಾಡಲು ಭರ್ಜರಿ ಸಿದ್ಧತೆ ಮಾಡಲಾಗಿದೆ.

    ಪಾದರಾಯನಪುರದಿಂದ ಶೋಭಾಯಾತ್ರೆಗೆ ಪರ್ಮಿಷನ್ ಸಿಗುತ್ತಾ ಅನ್ನೋದು ಸದ್ಯದ ಪ್ರಶ್ನೆ. ಈಗಾಗಲೇ ಸ್ಥಳೀಯ ಪೊಲೀಸರಿಗೆ ರಾಮೋತ್ಸವ ಸಮಿತಿ ಮನವಿ ಸಲ್ಲಿಸಿದೆ. ಮಾರ್ಚ್ 30ರಂದು ಇದೇ ಮೊದಲ ಬಾರಿಗೆ ನಡೆಯುತ್ತಿರುವ ರಾಮನವಮಿ ಶೋಭಾಯಾತ್ರೆಗೆ ಕಳೆದ ಬಾರಿ ಕೂಡ ಮನವಿ ಮಾಡಲಾಗಿತ್ತು. ಕರಗ ಕಾರಣ ನೀಡಿ ಅನುಮತಿ ನಿರಾಕರಣೆ ಮಾಡಲಾಗಿತ್ತು.

    ಸದ್ಯಕ್ಕೆ ಪೋಲಿಸ್ರು ಮೌನವಹಿಸಿದ್ದು, ರಾಮೋತ್ಸವ ಸಮಿತಿಯ ಮನವಿಗೆ ಸ್ಪಂದಿಸಿದೇ ತಟಸ್ಥ ನಿಲುವನ್ನ ತೋರಿದೆ. ಸರ್ಕಾರ ಹಾಗೂ ಪೋಲಿಸ್ ಇಲಾಖೆಯಿಂದ ಗ್ರೀನ್ ಸಿಗ್ನಲ್ ಸಿಕ್ರೆ ರಾಮನ ಥೇರು ಪಾದರಾಯನಪುರದಲ್ಲಿ ಸಾಗಲಿದೆ.

  • ಹುಬ್ಬಳ್ಳಿ ಗಲಭೆ – ಮಸೀದಿ ಮೇಲೆ `ಜೈಶ್ರೀರಾಮ್’ ಲೇಸರ್ ಲೈಟ್ ಹಾಕಿದ್ದ ಕಿಡಿಗೇಡಿಗಳು

    ಹುಬ್ಬಳ್ಳಿ ಗಲಭೆ – ಮಸೀದಿ ಮೇಲೆ `ಜೈಶ್ರೀರಾಮ್’ ಲೇಸರ್ ಲೈಟ್ ಹಾಕಿದ್ದ ಕಿಡಿಗೇಡಿಗಳು

    ಹುಬ್ಬಳ್ಳಿ: ವಿವಾದಿತ ಪೋಸ್ಟ್ನಿಂದ ಹುಬ್ಬಳ್ಳಿಯಲ್ಲಿ ಗಲಭೆ ನಡೆದ ಬಳಿಕ ದಿನಕ್ಕೊಂದು ರಹಸ್ಯಗಳು ಬಯಲಾಗುತ್ತಿವೆ. ನೆನ್ನೆಯಷ್ಟೇ ಮುಸ್ಲಿಂ ಮೌಲ್ವಿಯಂತೆ ವೇಷ ಧರಿಸಿ ಬಂದಿದ್ದ ಲಾರಿಚಾಲಕನ ಅಸಲಿ ರೂಪ ಬಯಲಾಗಿತ್ತು. ಈ ಬೆನ್ನಲ್ಲೇ ಗಲಭೆಗೆ ಮತ್ತೊಂದು ಪ್ರಮುಖ ಕಾರಣ ಏನೆಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    HUBBALLI INCIDENT

    ಕಳೆದ ಮೂರು ತಿಂಗಳಿನಿಂದಲೂ ಮುಸ್ಲಿಮರ ವಿರುದ್ಧ ನಡೆದ ಸಾಲು ಸಾಲು ಅಭಿಯಾನಗಳೇ ಗಲಾಟೆಗೆ ಕಾರಣ ಎಂದು ಹೇಳಲಾಗುತ್ತಿದೆ. ರಾಮನವಮಿ ದಿನದಂದೇ ಗಲಾಟೆ ನಡೆಯುವ ಸಾಧ್ಯತೆಗಳಿತ್ತು. ಏಕೆಂದರೆ ಹುಬ್ಬಳ್ಳಿಯ ಪೆಂಡಾರ್ ಗಲ್ಲಿಯ ಮಸೀದಿಯ ಮೇಲೆ ಕಿಡಿಗೇಡಿಗಳು `ಜೈಶ್ರೀರಾಮ್’ ಘೋಷಣೆಯನ್ನು ಲೇಸರ್ ಲೈಟ್ ಮೂಲಕ ಹಾಕಿದ್ದರು. ಇದನ್ನು ಮುಸ್ಲಿಂ ಮುಖಂಡರು ತಡೆದಿದ್ದರು. ಈ ಬೆನ್ನಲ್ಲೇ ವಿವಾದಿತ ಪೋಸ್ಟ್ ಹಾಕುತ್ತಿದ್ದಂತೆ ಮುಸ್ಲಿಂ ಸಮುದಾಯದವರು ರೊಚ್ಚಿಗೆದ್ದು, ಗಲಾಟೆ ಹಿಂಸಾತ್ಮಕ ರೂಪ ಪಡೆದಿದೆ. ಇದನ್ನೂ ಓದಿ: ಹುಬ್ಬಳ್ಳಿ ಗಲಭೆಯಲ್ಲಿ ಪೊಲೀಸರ ಹತ್ಯೆಗೆ ಸಂಚು- ಅಟ್ಟಾಡಿಸಿ ಕೊಲ್ಲಲು ಮುಂದಾಗಿದ್ದ ಗಲಭೆಕೋರರು

    HUBBALLI INCIDENT

    ವಿವಾದಿತ ಪೋಸ್ಟ್ ಹಾಕಿದ್ದ ಅಭಿಷೇಕ್‌ನನ್ನು ಮುಗಿಸಲು ಸ್ಕೆಚ್ ಹಾಕಿದ್ದರು. ಗಲ್ಲಿ-ಗಲ್ಲಿಗಳಲ್ಲೂ ಗಲಾಟೆಗೆ ಪ್ಲಾನ್ ನಡೆದಿತ್ತು. ಆದರೆ, ಅಭಿಷೇಕ್‌ನನ್ನೂ ಪೊಲೀಸರೇ ಬಚಾವ್ ಮಾಡಿದ್ದರು. ಇದರಿಂದ ಪೊಲೀಸರನ್ನೇ ಟಾರ್ಗೆಟ್ ಮಾಡಿದ್ದ ಕಿಡಿಗೇಡಿಗಳು ಇಬ್ಬರು ಪೊಲೀಸರನ್ನು ಕೊಲೆ ಮಾಡುವುಕ್ಕೂ ಯತ್ನಿಸಿದ್ದರು ಎಂಬ ಆರೋಪ ಬಂದಿದೆ. ಇದನ್ನೂ ಓದಿ: ಮಸೀದಿ ಮೈಕ್ ವಿರುದ್ಧ ಕ್ರಮಕ್ಕೆ ಡೆಡ್‍ಲೈನ್- ರಂಜಾನ್ ಒಳಗೆ ತೆರವಾಗದಿದ್ರೆ ಮಹಾ ಆರತಿ ಎಚ್ಚರಿಕೆ

    HUBBALLI INCIDENT

    ಅದಕ್ಕಾಗಿ ಹುಬ್ಬಳ್ಳಿ ಕಿಂಗ್ಸ್ ಎಂಬ ವಾಟ್ಸಪ್ ಗ್ರೂಪ್ ನಲ್ಲಿ ವಸೀಂ ಪಠಾಣ್, ಇರ್ಫಾನ್, ಮೊಹ್ಮದ್ ಆರಿಫ್ ನೀಡಿದ ಕರೆಯ ಮೇರೆಗೆ ಜನ ಜಮಾವಣೆಗೊಂಡಿದ್ದರು. ಇತ್ತ ಎಐಎಂಐಎಂ ಮುಖಂಡ ಇರ್ಫಾನ್ ತನ್ನ ವಾರ್ಡ್ ಜನರನ್ನು ಕರೆತಂದಿದ್ದರು. ಸದ್ಯ ಹುಬ್ಬಳ್ಳಿ ಗಲಭೆಗೆ ಪ್ರಚೋದನೆ ನೀಡಿದ್ದ ಮೊಹ್ಮದ್ ಆರಿಫ್‌ನನ್ನು ಪೊಲೀಸರು ಬಂಧಿಸಿದ್ದಾರೆ.

  • ಹನುಮಜಯಂತಿ ವೇಳೆ ಹಿಂಸಾಚಾರ – 4 ರಾಜ್ಯಗಳ 140 ಪುಂಡರು ಅರೆಸ್ಟ್

    ಹನುಮಜಯಂತಿ ವೇಳೆ ಹಿಂಸಾಚಾರ – 4 ರಾಜ್ಯಗಳ 140 ಪುಂಡರು ಅರೆಸ್ಟ್

    ನವದೆಹಲಿ: ರಾಮ ನವಮಿಯಂದು ಭುಗಿಲೆದ್ದ ಹಿಂಸಾಚಾರದ ಬಳಿಕ ಹನುಮಜಯಂತಿಯ ಸಂದರ್ಭದಲ್ಲಿಯೂ ಮತ್ತೊಮ್ಮೆ ದೇಶದ ಅನೇಕ ರಾಜ್ಯಗಳಲ್ಲಿ ಘರ್ಷಣೆಗಳು ವರದಿಯಾದವು.

    ಹನುಮಜಯಂತಿಯ ಪ್ರಯುಕ್ತ ದೇಶದ ಹಲವೆಡೆ ಶೋಭಾಯಾತ್ರೆಗಳನ್ನು ಮಾಡಲಾಗಿದ್ದು, ಈ ವೇಳೆ ಕಲ್ಲುತೂರಾಟದಂತಹ ಘಟನೆಗಳು ನಡೆದಿದೆ. ಇದರಲ್ಲಿ ಕರ್ನಾಟಕದ ಹುಬ್ಬಳಿಯಲ್ಲಿ ನಡೆದ ಘಟನೆಯೂ ಒಂದು. ದೆಹಲಿಯ ಜಹಾಂಗೀರ್‌ಪುರಿ ಪ್ರಾರಂಭವಾದ ಘರ್ಷಣೆ ಬಳಿಕ ಉತ್ತರಾಖಂಡ, ಆಂಧ್ರಪ್ರದೇಶ ಹಾಗೂ ಕರ್ನಾಟಕದಲ್ಲೂ ನಡೆಯಿತು. ಇದನ್ನೂ ಓದಿ: ದೆಹಲಿ ಹನುಮ ಜಯಂತಿ ಮೆರವಣಿಗೆಯಲ್ಲಿ ಹಿಂಸಾಚಾರ ಪ್ರಕರಣ – ಇಬ್ಬರು ಅಪ್ರಾಪ್ತರು ಸೇರಿ 21 ಜನರ ಬಂಧನ

    HBL_ POLICE 5

    ಪರಿಸ್ಥಿತಿಯನ್ನು ನಿಯಂತ್ರಿಸಲು ಈ ಎಲ್ಲಾ ರಾಜ್ಯಗಳಲ್ಲೂ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಯಿತು. ಈ ಘಟನೆಗೆ ಸಂಬಂಧಿಸಿದಂತೆ ಇದೀಗ ಸುಮಾರು 140 ಜನರನ್ನು ಬಂಧಿಸಲಾಗಿದೆ. ಕರ್ನಾಟಕದಲ್ಲೇ ಸುಮಾರು 90 ಜನರನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಹುಬ್ಬಳ್ಳಿ ಹಿಂಸಾಚಾರ ಪೂರ್ವನಿಯೋಜಿತ ಸಂಚು: ಬಿರುಗಾಳಿ ಎಬ್ಬಿಸಿದ ವಾಟ್ಸಪ್‌ ಆಡಿಯೋ

    hbl (2)

    ಈ ತಿಂಗಳು ದೇಶದಲ್ಲಿ ಹಿಂಸಾಚಾರಗಳು ನಡೆದು ಜನತೆಯನ್ನು ಬೆಚ್ಚಿ ಬೀಳಿಸಿರುವುದು ಮೊದಲೇನಲ್ಲ. ಇದೇ ತಿಂಗಳು ನಡೆದ ರಾಮನವಮಿ ಆಚರಣೆಯಂದು ಕೂಡಾ ಗುಜರಾತ್, ಪಶ್ಚಿಮ ಬಂಗಾಳ, ಮಧ್ಯಪ್ರದೇಶ ಹೀಗೆ ಹಲವಾರು ರಾಜ್ಯಗಳಲ್ಲಿ ಕಲ್ಲು ತೂರಾಟ ಹಾಗೂ ಬೆಂಕಿ ಹಚ್ಚಿದ ಘಟನೆಗಳನ್ನು ವರದಿಯಾಗಿದೆ.

    ದೇಶದ ಕೆಲವು ಭಾಗಗಳಲ್ಲಿ ನಡೆಯುತ್ತಿರುವ ಹಿಂಸಾಚಾರಗಳನ್ನು ಪೂರ್ವನಿಯೋಜಿತ ಪಿತೂರಿ ಎಂದು ಬಿಜೆಪಿ ಹೇಳಿದೆ. ಈ ಘಟನೆಗಳ ಬಗ್ಗೆ ರಾಜ್ಯ ಸರ್ಕಾರಗಳು ಗಂಭೀರವಾಗಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದೆ.

  • ಹುಬ್ಬಳ್ಳಿ ಗಲಭೆ- ಹಲಾಲ್ ಪ್ರಚೋದಿತ ಘಟನೆಯೇ? – ಸಿ.ಟಿ.ರವಿ

    ಹುಬ್ಬಳ್ಳಿ ಗಲಭೆ- ಹಲಾಲ್ ಪ್ರಚೋದಿತ ಘಟನೆಯೇ? – ಸಿ.ಟಿ.ರವಿ

    ಬಳ್ಳಾರಿ: ಹುಬ್ಬಳ್ಳಿಯಲ್ಲಿನ ಗಲಭೆ ಹಲಾಲ್ ಪ್ರಚೋದಿತ ಘಟನೆಯೇ? ವೋಟಿಗಾಗಿ ಜೊಲ್ಲು ಸುರಿಸುವವರು ಇದಕ್ಕೂ ಹಲಾಲ್ ಸರ್ಟಿಫಿಕೇಟ್ ಕೊಡ್ತಾರಾ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರಶ್ನಿಸಿದ್ದಾರೆ.

    ವಿಜನಯನಗರದಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆಗೆ ಆಗಮಿಸಿದ್ದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿ, ಕೆಲವು ಮತಗಳು ತಮ್ಮ ಮತಾಂಧತೆಯನ್ನು ತೋರಿಸುವುದಕ್ಕೇ ಭಯ ಹುಟ್ಟಿಸುತ್ತಾರೆ. ಇದು ಅವರ ತಂತ್ರಗಾರಿಕೆಯ ಭಾಗ. ಶೇ.15 ರಷ್ಟಿದ್ದ ಕಲ್ಲು 40ರಷ್ಟು ಹೆಚ್ಚಾಗಿದೆ ಅಂದರೆ, ಅರ್ಥ ಮಾಡಿಕೊಳ್ಳಬೇಕು ಎಂದು ಸಂಶಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸಿನಿಮೀಯ ರೀತಿ ದರೋಡೆಕೋರನನ್ನೇ ಹಿಡಿದ ಮನೆಯವರು

    CT RAVI

    ಇತ್ತೀಚೆಗೆ ರಾಮನವಮಿ ಮೆರವಣಿಗೆ ವೇಳೆ ಜಾರ್ಖಂಡ್, ಗುಜರಾತ್, ರಾಜಾಸ್ಥಾನ ಹಾಗೂ ಮಧ್ಯಪ್ರದೇಶ ರಾಜ್ಯಗಳಲ್ಲಿ ಗಲಭೆ ಎಬ್ಬಿಸಿ, ಕಲ್ಲು ತೂರಾಟ ನಡೆಸಿದ್ದವರೇ, ಪೂರ್ವ ನಿಯೋಜಿತವಾಗಿ ಇಲ್ಲಿ ಗಲಭೆ ನಡೆಸಿದ್ದಾರೆ ಎಂದು ಪೊಲೀಸರು ವರದಿ ನೀಡಿದ್ದಾರೆ ಎಂದಿದ್ದಾರೆ.

    ಇವರು ಸಣ್ಣ-ಸಣ್ಣ ಸಂಗತಿಗಳಿಗೆ ಯಾಕೆ ಕೆರಳುತ್ತಾರೆ? ವಿವಾದಾತ್ಮಕ ಸ್ಟೇಟಸ್ ಹಾಕಿದ್ದರೆ, ಅವನ ವಿರುದ್ಧ ದೂರು ಕೊಡಲಿ. ಕಾನೂನು ಇದೆ, ಕ್ರಮ ಕೈಗೊಳ್ಳುತ್ತದೆ. ಇವರೇಕೆ ಕಾನೂನು ಕೈಗೆತ್ತಿಕೊಳ್ಳುತ್ತಾರೆ? ಜಾತ್ಯಾತೀಯ ಎನ್ನುವವರು ಈಗ್ಯಾಕೆ ಬಾಯಿ ಮುಚ್ಚಿಕೊಂಡಿದ್ದಾರೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಗೃಹಸಚಿವರು ಚತ್ರಿ ಆಗಬೇಕು – ಯತ್ನಾಳ್ ಕುಟುಕಿದ್ದೇಕೆ?

    hbl (2)

    7ನೇ ಶತಮಾನದಿಂದಲೂ ಇಂತಹ ಘಟನೆ ನಡೆಯುತ್ತಲೇ ಬಂದಿದೆ. ಒಂದು ಕೋಮು ವ್ಯವಸ್ಥಿತ ರೀತಿಯಲ್ಲಿ ಸಂಚು ಮಾಡುತ್ತಿದ್ದು, ದೇಶದಲ್ಲಿ ಹರಾಜಕತೆ ಹುಟ್ಟುಹಾಕುತ್ತಿದೆ. ದಂಗೆ ಎಬ್ಬಿಸಿ ಜನರನ್ನು ಭಯಡಿಸುತ್ತಾರೆ, ಕೊನೆಗೆ ರಕ್ಷಣೆಗೆ ಸಂವಿಧಾನವೇ ಬೇಕೆಂದು ಓಡಿ ಬರ್ತಾರೆ? ಅವರಿಗೆ ಏನು ಮಾಡಬೇಕು? ಎಂದು ಪ್ರಶ್ನಿಸಿದ ಅವರು, ಸಮುದಾಯದ ಮುಖಂಡರೇ ಈ ಬಗ್ಗೆ ತಿಳುವಳಿಕೆ ನೀಡಬೇಕು ಎಂದು ಸಲಹೆ ನೀಡಿದರು.

  • ರಾಮನವಮಿಯಂದು ಮಾಂಸಾಹಾರ ಪೂರೈಸಿದ್ದಕ್ಕೆ ವಿದ್ಯಾರ್ಥಿಗಳ ಗಲಾಟೆ: JNUನಿಂದ ವರದಿ ಕೇಳಿದ ಕೇಂದ್ರ

    ರಾಮನವಮಿಯಂದು ಮಾಂಸಾಹಾರ ಪೂರೈಸಿದ್ದಕ್ಕೆ ವಿದ್ಯಾರ್ಥಿಗಳ ಗಲಾಟೆ: JNUನಿಂದ ವರದಿ ಕೇಳಿದ ಕೇಂದ್ರ

    ನವದೆಹಲಿ: ರಾಮನವಮಿ ಕಾರ್ಯಕ್ರಮ ಸಂದರ್ಭದಲ್ಲಿ ವಿದ್ಯಾರ್ಥಿ ಗುಂಪುಗಳ ನಡುವೆ ನಡೆದ ಗಲಾಟೆಗೆ ಸಂಬಂಧಿಸಿದಂತೆ ವರದಿ ನೀಡುವಂತೆ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯ (JNU)ಕ್ಕೆ ಕೇಂದ್ರ ಶಿಕ್ಷಣ ಸಚಿವಾಲಯ ಸೂಚನೆ ನೀಡಿದೆ.

    ರಾಮನವಮಿ ಸಂದರ್ಭದಲ್ಲಿ ವಿದ್ಯಾರ್ಥಿ ಗುಂಪುಗಳ ನಡುವಿನ ಘರ್ಷಣೆ ಮತ್ತು ಕ್ಯಾಂಪಸ್‌ನಲ್ಲಿನ ಅಶಾಂತಿಯ ಬಗ್ಗೆ ಔಪಚಾರಿಕ ವರದಿಯನ್ನು ಕೇಳಲಾಗಿದೆ ಎಂದು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ದೆಹಲಿ ಜೆಎನ್‍ಯುನಲ್ಲಿ ಮತ್ತೆ ರಣಾಂಗಣ – ಮಾಂಸಾಹಾರ ವಿಚಾರಕ್ಕೆ ವಿದ್ಯಾರ್ಥಿಗಳ ಮಾರಾಮಾರಿ

    ರಾಮನವಮಿಯಂದು ವಿಶ್ವವಿದ್ಯಾಲಯದ ಹಾಸ್ಟೆಲ್‌ನಲ್ಲಿ ಮಾಂಸಾಹಾರ ಪೂರೈಕೆಗೆ ಸಂಬಂಧಿಸಿದಂತೆ ಎರಡು ಗುಂಪುಗಳ ವಿದ್ಯಾರ್ಥಿಗಳ ನಡುವೆ ಭಾನುವಾರ ವಿಶ್ವವಿದ್ಯಾಲಯದ ಕಾವೇರಿ ಹಾಸ್ಟೆಲ್‌ನಲ್ಲಿ ಘರ್ಷಣೆ ನಡೆದಿತ್ತು. ಹಿಂಸಾಚಾರದಲ್ಲಿ 20 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ (ಜೆಎನ್‌ಯು) ಆಡಳಿತವು, ವಿದ್ಯಾರ್ಥಿಗಳು ಕ್ಯಾಂಪಸ್‌ನಲ್ಲಿ ಯಾವುದೇ ರೀತಿಯ ಹಿಂಸಾಚಾರದಲ್ಲಿ ತೊಡಗಿರುವುದು ಕಂಡುಬಂದರೆ ಶಿಸ್ತು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ರಾಮನವಮಿ ವೇಳೆ ಹಿಂಸಾಚಾರ ತಡೆಗಟ್ಟುವಲ್ಲಿ ಕರ್ನಾಟಕ ಸರ್ಕಾರ ಸೋತಿದೆ: ಓವೈಸಿ

    ಎಬಿವಿಪಿಯ ಸದಸ್ಯರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಟೂಡೆಂಟ್‌ ಫೆಡರೇಷನ್‌ ಆಫ್‌ ಇಂಡಿಯಾ (ಎಸ್‌ಎಫ್‌ಐ), ಡೆಮಾಕ್ರಟಿಕ್‌ ಸ್ಟೂಡೆಂಟ್ಸ್‌ ಫೆಡರೇಷನ್‌ (ಡಿಎಸ್‌ಎಫ್‌) ಮತ್ತು ಆಲ್‌ ಇಂಡಿಯಾ ಸ್ಟೂಡೆಂಟ್ಸ್‌ ಅಸೋಸಿಯೇಷನ್‌ (ಎಐಎಸ್‌ಎ) ಸದಸ್ಯರು ಎಬಿವಿಪಿ ವಿರುದ್ಧ ದೂರು ನೀಡಿದ್ದಾರೆ ಎಂದು ಪೊಲೀಸ್‌ ಉಪ ಆಯುಕ್ತ ಮನೋಜ್‌ ಸಿ. ತಿಳಿಸಿದ್ದಾರೆ. ದೂರು ನೀಡುವುದಾಗಿ ಎಬಿವಿಪಿ ಸದಸ್ಯರೂ ಹೇಳಿದ್ದಾರೆ. ಆ ದೂರಿನ ಬಳಿಕ ಅಗತ್ಯ ಕಾನೂನು ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದ್ದಾರೆ.

  • ರಾಮನವಮಿ ವೇಳೆ ಹಿಂಸಾಚಾರ ತಡೆಗಟ್ಟುವಲ್ಲಿ ಕರ್ನಾಟಕ ಸರ್ಕಾರ ಸೋತಿದೆ: ಓವೈಸಿ

    ರಾಮನವಮಿ ವೇಳೆ ಹಿಂಸಾಚಾರ ತಡೆಗಟ್ಟುವಲ್ಲಿ ಕರ್ನಾಟಕ ಸರ್ಕಾರ ಸೋತಿದೆ: ಓವೈಸಿ

    ಹೈದರಾಬಾದ್‌: ರಾಮನವಮಿ ಸಂದರ್ಭದಲ್ಲಿ ಹಿಂಸಾಚಾರವನ್ನು ತಡೆಗಟ್ಟುವಲ್ಲಿ ಕರ್ನಾಟಕ ಸೇರಿದಂತೆ ಅನೇಕ ರಾಜ್ಯ ಸರ್ಕಾರಗಳು ಸೋತಿವೆ ಎಂದು ಸಂಸದ ಹಾಗೂ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ ಕಿಡಿಕಾರಿದ್ದಾರೆ.

    RAMANAVAMI

    ರಾಮನವಮಿ ಆಚರಣೆ ಸಂದರ್ಭದಲ್ಲಿ ಹಲವು ರಾಜ್ಯಗಳಲ್ಲಿ ಹಿಂಸಾಚಾರಗಳಾಗಿವೆ. ರಾಜಸ್ಥಾನ, ಮಧ್ಯಪ್ರದೇಶ, ಜಾರ್ಖಂಡ್‌, ಕರ್ನಾಟಕ, ಗೋವಾ ರಾಜ್ಯಗಳಲ್ಲಿ ಹಿಂಸಾಚಾರ ನಡೆದಿದ್ದು, ಅದನ್ನು ತಡೆಗಟ್ಟುವಲ್ಲಿ ಸರ್ಕಾರಗಳು ವಿಫಲವಾಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮಮತಾ ಬ್ಯಾನರ್ಜಿ ಸಿಎಂ ಸ್ಥಾನಕ್ಕೆ ಅರ್ಹರಲ್ಲ: ನಿರ್ಭಯಾ ತಾಯಿ

    ಇದು ಸ್ಪಷ್ಟವಾಗಿ ರಾಜ್ಯಗಳ ಸಹಭಾಗಿತ್ವದ ಹಿಂಸಾಚಾರವಾಗಿದೆ. ಜಿನೆವಾ ಒಪ್ಪಂದದ ಗಂಭೀರ ಉಲ್ಲಂಘನೆಯಾಗಿದೆ ಎಂದು ಓವೈಸಿ ಗಂಭೀರ ಆರೋಪ ಮಾಡಿದ್ದಾರೆ.

    ಮಧ್ಯಪ್ರದೇಶ ಸರ್ಕಾರ ಯಾವ ಕಾನೂನಿನ ಅಡಿಯಲ್ಲಿ ಮುಸ್ಲಿಂ ಸಮುದಾಯದ ಮನೆಗಳನ್ನು ನೆಲಸಮ ಮಾಡಿದೆ? ಇದು ಮುಸ್ಲಿಂ ಅಲ್ಪಸಂಖ್ಯಾತರ ಬಗ್ಗೆ ಸಿಎಂ ಅವರ ಪಕ್ಷಪಾತ ಧೋರಣೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: SSLC ಪರೀಕ್ಷೆಯಲ್ಲಿ ಹೆಚ್ಚಿಗೆ ಅಂಕ ಬರುವಂತೆ ಮಾಡುತ್ತೇನೆಂದು ವಿದ್ಯಾರ್ಥಿನಿ ಕೆನ್ನೆಗೆ ಮುತ್ತು ಕೊಟ್ಟ ಶಿಕ್ಷಕ