Tag: Ramanath Rai

  • ಬಿಜೆಪಿಯ ‘ಸ್ಟಾರ್’ಗಳು ಇವರಂತೆ: ದರ್ಶನ್ ಕೈ ಸೇರ್ಪಡೆಗೆ ಸಿಟಿ ರವಿ ಹೇಳಿದ್ದು ಹೀಗೆ

    ಬಿಜೆಪಿಯ ‘ಸ್ಟಾರ್’ಗಳು ಇವರಂತೆ: ದರ್ಶನ್ ಕೈ ಸೇರ್ಪಡೆಗೆ ಸಿಟಿ ರವಿ ಹೇಳಿದ್ದು ಹೀಗೆ

    ಬಾಗಲಕೋಟೆ: ದರ್ಶನ್ ಬುದ್ಧಿವಂತರಾಗಿದ್ದು ಮುಳುಗುವ ಹಡಗನ್ನು ಏರುವ ಮೂರ್ಖತನ ಮಾಡಲಿಕ್ಕಿಲ್ಲ ಎನ್ನುವ ವಿಶ್ವಾಸವಿದೆ ಎಂದು ಬಿಜೆಪಿ ಶಾಸಕ ಸಿಟಿ ರವಿ ಹೇಳಿದ್ದಾರೆ.

    ದರ್ಶನ್ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಆದರೆ ಮುಳುಗುವ ಹಡಗನ್ನು ಏರುವ ಮೂರ್ಖತನದ ದರ್ಶನನವನ್ನು ಅವರು ಮಾಡಲಿಕ್ಕಿಲ್ಲ ಎಂಬ ವಿಸ್ವಾಸವಿದೆ. ಬಿಜೆಪಿ ಪಕ್ಷಕ್ಕೆ ಕಾರ್ಯಕರ್ತರೇ ಸ್ಟಾರ್ ಗಳು ಎಂದು ಹೇಳಿದರು.

    ರಾಹುಲ್ ಗಾಂಧಿ ಅವರಿಗೆ ಮದುವೆ ವಯಸ್ಸು ಆಗ್ತಿದೆ. ಗೋವಿಂದ್ ಕಾರಜೋಳರ ಆಫರ್ ಬಿಟ್ರೆ ಜೀವನದಲ್ಲಿ ಮತ್ತೆ ಇಂತಹ ಅವಕಾಶ ಅವರಿಗೆ ಸಿಗಲ್ಲ. ಆದರೆ ಸಿಎಂ ಸಿದ್ದರಾಮಯ್ಯ ಅವರು ಇದರ ಮಧ್ಯಸ್ಥಿಕೆ ವಹಿಸಲಿ ಎಂದು ಅವರು ಹೇಳಿದರು.

    ಲಿಂಗಾಯತ ಹಾಗೂ ವೀರಶೈವ ಕಿತ್ತಾಟ ಇದು ಸಿಎಂ ಸಿದ್ದರಾಮಯ್ಯ ಅವರ ಕ್ರಿಮಿನಲ್ ಕ್ಯಾಬಿನೆಟ್ ಹೆಣೆದ ರಾಜಕೀಯ ಅಸ್ತ್ರ. ಲಿಂಗಾಯತ ವ್ಯಕ್ತಿ ಮುಖ್ಯಮಂತ್ರಿಯಾಗೋದನ್ನ ತಪ್ಪಿಸಲು ಈ ರೀತಿಯಾಗಿ ಮಾಡಲಾಗುತ್ತಿದೆ. ಇದರಲ್ಲಿ ಕೆಟ್ಟ ಹುಳುಗಳು ಇವೆ. ಅವು ಬೇಗನೇ ತೀರಿಹೋಗ್ತವೆ ಎಂದು ಟಾಂಗ್ ನೀಡಿದರು.

    ರಮಾನಾಥ ರೈ ಅವರಿಗೆ ಗೃಹ ಇಲಾಖೆ ಕೊಟ್ಟರೆ ಅದು ರಾಜ್ಯದ ಗ್ರಹಚಾರ. ನಾಲಿಗೆ ತಲೆ ಮೇಲೆ ಹಿಡಿತವಿಲ್ಲದವರಿಗೆ ಈ ಖಾತೆ ನೀಡುವುದು ಸರಿಯಲ್ಲ. ಐಟಿ ರೇಡ್ ಬಗ್ಗೆ ಕಾಂಗ್ರೆಸ್ ನಾಯಕರು ಭಯಗೊಳ್ತಿರೋದನ್ನ ನೋಡಿದ್ರೆ ಇವರ ಬಳಿ ಅಕ್ರಮ ಸಂಪತ್ತು ಸಾಕಷ್ಟಿದೆ ಎಂಬ ಸಂಶಯ ಹುಟ್ಟಿಕೊಳ್ಳುತ್ತೆ. ಹಾಗಾಗಿ ಇನ್ನಷ್ಟು ಐಟಿ ದಾಳಿಗಳಾಗಲಿ ಎಂದರು.

  • ಮತೀಯವಾದ ಸೃಷ್ಟಿಸುವ ಕಾರ್ಖಾನೆಗಳಾಗಿವೆ ಶಾಲೆಗಳು: ಕಲ್ಲಡ್ಕ ಭಟ್ ವಿರುದ್ಧ ರೈ ಹೊಸ ಬಾಂಬ್!

    ಮತೀಯವಾದ ಸೃಷ್ಟಿಸುವ ಕಾರ್ಖಾನೆಗಳಾಗಿವೆ ಶಾಲೆಗಳು: ಕಲ್ಲಡ್ಕ ಭಟ್ ವಿರುದ್ಧ ರೈ ಹೊಸ ಬಾಂಬ್!

    ಮಂಗಳೂರು: ಕೊಲ್ಲೂರು ದೇಗುಲದಿಂದ ಪಡೆದ ಹಣ ಅವ್ಯವಹಾರವಾಗಿದೆ. ದೇಣಿಗೆ ಹಣದಲ್ಲಿ ಪ್ರಭಾಕರ್ ಭಟ್ಟರು ರಿಯಲ್ ಎಸ್ಟೇಟ್ ಮಾಡುತ್ತಾರೆ ಅಂತ ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ರಮಾನಾಥ ರೈ ಅವರು ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಹೊಸ ಬಾಂಬ್ ಸಿಡಿಸಿದ್ದಾರೆ.

    ಕಲ್ಲಡ್ಕ ವಿದ್ಯಾಕೇಂದ್ರಗಳ ಅನುದಾನ ಕಡಿತ ವಿಚಾರಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಕಲ್ಲಡ್ಕದ ಎರಡೂ ಶಾಲೆಗಳು ಆರ್ಥಿಕ ಸದೃಢವಾಗಿವೆ. ದೇಗುಲದ ಹಣವನ್ನು ಖಾಸಗಿ ಶಾಲೆಗೆ ನೀಡಲು ಅವಕಾಶ ಇಲ್ಲ. ಉಭಯ ಜಿಲ್ಲೆಗಳಲ್ಲಿ ಆರ್ಥಿಕ ಸಂಕಷ್ಟದಲ್ಲಿರುವ ಹಲವಾರು ಶಾಲೆಗಳಿವೆ ಅಂತ ಹೇಳಿದ್ದಾರೆ.

    ಹಾಲಿವುಡ್, ಬಾಲಿವುಡ್ ನಟರು, ಉದ್ಯಮಿಗಳಿಂದ ದೇಗುಲಕ್ಕೆ ದೇಣಿಗೆ ಬರುತ್ತೆ. ಈ ಹಣವನ್ನು ಪ್ರಭಾಕರ್ ಭಟ್ ನಗದು ರೂಪದಲ್ಲಿ ಪಡೆದು ದುರುಪಯೋಗ ಮಾಡುತ್ತಿದ್ದಾರೆ. ಹೀಗಾಗಿ ಭಟ್ಟರ ಅವ್ಯವಹಾರದ ಬಗ್ಗೆ ಕೂಡಲೇ ತನಿಖೆ ಆಗಬೇಕು ಅಂತ ಅವರು ಒತ್ತಾಯಿಸಿದ್ದಾರೆ.

    ಇದನ್ನೂ ಓದಿ: ಕಲ್ಲಡ್ಕ ಪ್ರಭಾಕರ್ ಶಾಲೆಗೆ ಬರುತ್ತಿದ್ದ ಅನುದಾನ ಕಡಿತಗೊಳಿಸಿದ ಸರ್ಕಾರ

    ಕಲ್ಲಡ್ಕ ಶಾಲೆಯ ನೂರು ಮೀಟರ್ ದೂರದಲ್ಲಿ ಸರ್ಕಾರಿ ಶಾಲೆ ಇದೆ. ಪೋಷಕರು ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲಿ. ಈ ಎರಡೂ ಶಾಲೆಗಳು ಮತೀಯವಾದ ಸೃಷ್ಟಿಸುವ ಕಾರ್ಖಾನೆಗಳಾಗಿವೆ. ಮಕ್ಕಳ ಕೈಯಲ್ಲಿ ತಟ್ಟೆ ಕೊಟ್ಟು ರಾಜಕೀಯ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹಣ ಸಂಗ್ರಹಕ್ಕೆ ಅಭಿಯಾನ ಮಾಡುತ್ತಿದ್ದು, ಇದೊಂದು ದುಡ್ಡು ಮಾಡುವ ದಂಧೆಯಾಗಿದೆ ಅಂತ ಅವರು ತಿರುಗೇಟು ನೀಡಿದ್ದಾರೆ.

    ಇದನ್ನೂ ಓದಿ: ಕಲ್ಲಡ್ಕ ಪ್ರಭಾಕರ್ ಶಾಲೆಗೆ ಅನುದಾನ ಕಟ್- ತಟ್ಟೆ ಹಿಡಿದು ಸರ್ಕಾರದ ವಿರುದ್ಧ ಮಕ್ಕಳ ಧಿಕ್ಕಾರ

    ಇದನ್ನೂ ಓದಿ: ಕಲ್ಲಡ್ಕ ಪ್ರಭಾಕರ ಭಟ್ಟರ ಹಿಂದೂ ಧರ್ಮಕ್ಕೆ ಧಿಕ್ಕಾರ, ಮೋದಿ ದೊಡ್ಡ ಜಾದೂಗಾರ: ಅಮೀನ್ ಮಟ್ಟು

    ಇದನ್ನೂ ಓದಿ: ಸರ್ಕಾರದಿಂದ ಕಲ್ಲಡ್ಕ ಪ್ರಭಾಕರ್ ಭಟ್ ಶಾಲೆಗೆ ಬರುತ್ತಿದ್ದ ಅನುದಾನ ಕಟ್: ರಮಾನಾಥ ರೈ ಹೀಗಂದ್ರು!

  • ರಮಾನಾಥ್ ರೈ ಗೆ ಗೃಹ ಖಾತೆ ನೀಡಲು ಸಿಎಂ ಚಿಂತನೆ

    ರಮಾನಾಥ್ ರೈ ಗೆ ಗೃಹ ಖಾತೆ ನೀಡಲು ಸಿಎಂ ಚಿಂತನೆ

    ಬೆಂಗಳೂರು: ಗೃಹ ಖಾತೆ ವಹಿಸಿಕೊಳ್ಳಲು ಹಿರಿಯ ಸಚಿವರು ನಿರಾಕರಿಸಿದ ಬೆನ್ನಲ್ಲೆ ಅರಣ್ಯ ಸಚಿವ ರಮಾನಾಥ್ ರೈ ಅವರಿಗೆ ಗೃಹ ಖಾತೆ ನೀಡುವ ಬಗ್ಗೆ ಸಿಎಂ ಸಿದ್ದರಾಮಯ್ಯ ಚರ್ಚೆ ನಡೆಸಿದ್ದಾರೆ.

    ಮಂಗಳವಾರದಂದು ರಮಾನಾಥ್ ರೈ ಅವರೊಂದಿಗೆ ಈ ಬಗ್ಗೆ ಚರ್ಚೆ ನಡೆಸಿರುವ ಸಿಎಂ, ಗೃಹ ಖಾತೆ ನೀಡಿದ್ರೆ ಅದನ್ನ ನಿರ್ವಹಿಸಲು ಸಿದ್ಧರಾಗಿರಿ ಅಂತಾ ಸೂಚನೆ ನೀಡಿದ್ದಾರೆ. ಕರಾವಳಿಯಲ್ಲಿ ಆರ್‍ಎಸ್‍ಎಸ್ ಮತ್ತು ಬಿಜೆಪಿಗೆ ತಿರುಗೇಟು ನೀಡಿ ಕಾಂಗ್ರೆಸ್ ಬಲ ಪಡಿಸಲು ಸಿಎಂ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.

    ದಕ್ಷಿಣ ಕನ್ನಡದಲ್ಲಿ ರಮಾನಾಥ್ ರೈ ಅವರ ಕೈ ಬಲಪಡಿಸುವುದರೊಂದಿಗೆ ಕೋಮು ಗಲಭೆಗಳನ್ನ ಹತ್ತಿಕ್ಕಲು ರಮಾನಾಥ್ ರೈ ಅವರಿಗೇ ಗೃಹ ಖಾತೆ ನೀಡಿದ್ರೆ ಒಳ್ಳೆಯದು ಎಂಬ ಆಲೋಚನೆ ಸಿಎಂ ಸಿದ್ದರಾಮಯ್ಯ ಅವರದ್ದಂತೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಜಕೀಯವಾಗಿ ಬಿಜೆಪಿಯನ್ನ ರಮಾನಾಥ್ ರೈ ಸಮರ್ಥವಾಗಿ ಎದುರಿಸಬಲ್ಲರು. ಗೃಹ ಖಾತೆ ನೀಡಿದ್ರೆ ಕೋಮು ಗಲಭೆಗಳನ್ನ ಹತ್ತಿಕ್ಕುವಲ್ಲಿ ರಮಾನಾಥ್ ರೈ ಅವರಿಗೆ ಸಹಕಾರಿ ಆಗಲಿದೆ ಎಂಬುದು ಸಿಎಂ ಲೆಕ್ಕಾಚಾರ.

    ಈ ಬಗ್ಗೆ ಹೈಕಮಾಂಡ್ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲು ಸಿಎಂ ಸಿದ್ದರಾಮಯ್ಯ ಮುಂದಾಗಿದ್ದಾರೆ.

  • ಕಾಂಗ್ರೆಸ್ ನಾಯಕರ ಜೊತೆಗೆ ನಾನು ಕುಳಿತದ್ದು ಯಾಕೆ: ನಳಿನ್ ಕುಮಾರ್ ಹೇಳಿದ್ದು ಇಷ್ಟು

    ಕಾಂಗ್ರೆಸ್ ನಾಯಕರ ಜೊತೆಗೆ ನಾನು ಕುಳಿತದ್ದು ಯಾಕೆ: ನಳಿನ್ ಕುಮಾರ್ ಹೇಳಿದ್ದು ಇಷ್ಟು

    ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಶಾಸಕ ಜೆ.ಆರ್.ಲೋಬೋ, ಐವನ್ ಡಿಸೋಜಾ ಅವರು ಒಂದೇ ಕಾರಿನಲ್ಲಿ ಪ್ರಯಾಣಿಸಿದ ಫೋಟೋ ಮತ್ತು ಸಚಿವ ಬಿ.ರಮಾನಾಥ ರೈಯವರೊಂದಿಗೆ ಸರ್ಕೂಟ್ ಹೌಸಿನಲ್ಲಿ ಕುಳಿತು ಮಾತನಾಡುತ್ತಿರುವ ಫೋಟೋ ಹರಿದಾಡುತ್ತಿರುವ ಬಗ್ಗೆ ಸಂಸದ ನಳಿನ್ ಕುಮಾರ್ ಕಟೀಲು ಸ್ಪಷ್ಟನೆ ನೀಡಿದ್ದಾರೆ.

    ಫೇಸ್ ಬುಕ್ ನಲ್ಲಿ ಸ್ಪಷ್ಟನೆ ನೀಡಿದ ಅವರು, ಈ ಫೋಟೋಗಳು ಈಗ ತೆಗೆದಿರುವುದು ಅಲ್ಲ. ನನ್ನ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಅವರ ಜೊತೆ ಮಾತುಕತೆ ನಡೆಸಿದಾಗ ತೆಗೆದಿರುವ ಫೋಟೋಗಳು ಎಂದು ತಿಳಿಸಿದ್ದಾರೆ.

    ಫೇಸ್ ಬುಕ್ ನಲ್ಲಿ ನಳಿನ್ ಕುಮಾರ್ ಕಟೀಲು ಬರೆದಿದ್ದು ಹೀಗೆ:
    ಇತ್ತೀಚೆಗೆ ಸಾಮಾಜಿಕ ತಾಣಗಳಲ್ಲಿ ನಾನು, ಶಾಸಕರಾದ ಜೆ.ಆರ್.ಲೋಬೋ, ಐವನ್ ಡಿಸೋಜಾ ಅವರು ಒಂದೇ ಕಾರಿನಲ್ಲಿ ಪ್ರಯಾಣಿಸಿದ ಫೋಟೋ ಮತ್ತು ನಾನು ಸಚಿವ ಬಿ ರಮಾನಾಥ ರೈಯವರೊಂದಿಗೆ ಸರ್ಕೂಟ್ ಹೌಸಿನಲ್ಲಿ ಕುಳಿತು ಮಾತನಾಡುತ್ತಿರುವ ಫೋಟೋ ಹರಿದಾಡುತ್ತಿದೆ. ಅದಕ್ಕೆ ಕೆಲವರು ವಿವಿಧ ಅರ್ಥದ ಅಭಿಪ್ರಾಯವನ್ನು ಬರೆದು ಹಾಕುತ್ತಿದ್ದಾರೆ. ಇದರಿಂದ ನನ್ನ ಮನಸ್ಸಿಗೆ ಒಂದಿಷ್ಟು ಬೇಸರವಾಗಿದೆ. ಆ ಫೋಟೋಗಳ ಬಗ್ಗೆ, ಅದು ತೆಗೆದ ಸಂದರ್ಭದ ಬಗ್ಗೆ ವಿಶ್ಲೇಷಣೆ ಮಾಡದೆ ಮನಸ್ಸಿಗೆ ತೋಚಿದಂತೆ ಗೀಚಿದರೆ ಅದರಿಂದ ವಸ್ತು ಸ್ಥಿತಿಯ ಬಗ್ಗೆ ಅಪಾರ್ಥ ಮೂಡುತ್ತದೆ ವಿನಾ: ಬೇರೆ ಏನೂ ಸಾಧಿಸದಂತೆ ಆಗುವುದಿಲ್ಲ.

    ನಾನು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ. ನನ್ನ ವ್ಯಾಪ್ತಿಯಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ನಾನು ಅಷ್ಟೂ ಪ್ರದೇಶಗಳಿಗೆ ಭೇಟಿ ಕೊಟ್ಟು ವಿಭಿನ್ನ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಂದರ್ಭಗಳು ಇರುತ್ತವೆ. ನಿಮಗೆ ಗೊತ್ತಿರುವಂತೆ ಈ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಏಳರಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಜಿಲ್ಲೆಯ ಅಭಿವೃದ್ಧಿಯ ವಿಷಯ ಬಂದಾಗ ನಾನು ಮತ್ತು ಅವರುಗಳು ಒಂದೇ ವೇದಿಕೆಯಲ್ಲಿ ಸೇರಬೇಕಾಗುತ್ತದೆ. ಏಕೆಂದರೆ ಒಂದು ಅಭಿವೃದ್ಧಿ ಯೋಜನೆ ಎಂದರೆ ಅದರಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರದ ಸಮಪ್ರಮಾಣದ ಪಾಲುಗಳು ಕೂಡ ಇದ್ದೇ ಇರುತ್ತದೆ. ಅನೇಕ ಬಾರಿ ಕೇವಲ ಕೇಂದ್ರದ ಯೋಜನೆಗಳಾಗಿದ್ದರೂ ಅದಕ್ಕೆ ಬೇಕಾಗುವ ಜಾಗ, ಇತರೆ ಸೌಲಭ್ಯಗಳನ್ನು ರಾಜ್ಯ ಪೂರೈಸಿದ್ದರೆ ಮಾತ್ರ ಅಭಿವೃದ್ಧಿ ಸಾಧ್ಯ. ಹಾಗಿರುವಾಗ ಪರಸ್ಪರ ಭೇಟಿ ಅಗತ್ಯ ಮತ್ತು ಅನಿವಾರ್ಯ.

    ಬೇಕಾದರೆ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೆ ತೆಗೆದುಕೊಂಡು ಹೋಗುವ ಕಾರ್ಯ ಇರಬಹುದು. ಇದಕ್ಕೆ ಇಲ್ಲಿನ ಸ್ಥಳೀಯ ಶಾಸಕರ ಸಲಹೆ, ಅಭಿಪ್ರಾಯ ಕೂಡ ಬೇಕಾಗುತ್ತದೆ. ಅದೇ ರೀತಿಯಲ್ಲಿ ನೇತ್ರಾವತಿ ನದಿ ತಿರುವು ಯೋಜನೆ ಇರಬಹುದು, ಆಗ ಸಚಿವರೊಂದಿಗೆ ಮಾತನಾಡಿ ರಾಜ್ಯ ಸರಕಾರದ ಮೇಲೆ ಒತ್ತಡ ತರುವಂತಹ ಕೆಲಸ ಮಾಡುವುದು ಒಬ್ಬ ಜನಪ್ರತಿನಿಧಿಯಾಗಿ ನನ್ನ ಜವಾಬ್ದಾರಿ. ಅವರು ನಮ್ಮ ಯೋಜನೆಗಳಿಗೆ ಎಷ್ಟು ಸಹಕಾರ ಕೊಡುತ್ತಾರೆ ಎನ್ನುವುದು ಅವರವರ ಆತ್ಮಸಾಕ್ಷಿಗೆ ಬಿಟ್ಟಿದ್ದು. ಆದರೆ ಭೇಟಿಯೇ ಆಗದೇ ಹೋದರೆ ಕೆಲಸ ಮುಂದುವರಿಯುವುದೇ ಇಲ್ಲ.

    ಇನ್ನು ಸೈದ್ಧಾಂತಿಕವಾಗಿ ನಾನು ಅವರ ನಿಲುವಿಗೆ ಬದ್ಧ ವಿರೋಧಿ. ಕಾಂಗ್ರೆಸ್ ಸಚಿವ, ಶಾಸಕರು ಮಾಡುವ ಸ್ವಜಾತಿ ಪ್ರೇಮ, ಅಲ್ಪಸಂಖ್ಯಾತರ ವಿಪರೀತ ಒಲೈಕೆ, ಧರ್ಮ ಬಿಟ್ಟು ನಡೆಯುವ ನಡೆಗಳಿಗೆ ನಾನು ಯಾವತ್ತೂ ವಿರೋಧ ವ್ಯಕ್ತಪಡಿಸಿದ್ದೇನೆ. ಅದನ್ನು ನನ್ನ ರಾಜಕೀಯ ಜೀವನದುದ್ದಕ್ಕೂ ಪಾಲಿಸಿಕೊಂಡು ಬಂದಿದ್ದೇನೆ. ಅದನ್ನು ಮುಂದೆಯೂ ಪಾಲಿಸಿಕೊಂಡು ಬರುವುದಕ್ಕೆ ಯಾವತ್ತೂ ಬದ್ಧ. ಹಾಗೆಂದು ನಾನು ಅವರೊಂದಿಗೆ ಕುಳಿತ, ನಿಂತ ಫೋಟೋಗಳನ್ನು ಹಾಕಿ ನಾನು ಅವರೊಂದಿಗೆ ಶಾಮೀಲಾಗಿ ನಾನು ಕೂಡ ಕಾಂಗ್ರೆಸ್ಸಿನವರೊಂದಿಗೆ ಚೆನ್ನಾಗಿದ್ದೇನೆ ಎಂದು ಅಪಾರ್ಥ ಸುದ್ದಿ ಹರಡಿಸುವ ಕೆಲಸವನ್ನು ಯಾರೂ ಕೂಡ ಮಾಡುವುದು ಸರಿಯಲ್ಲ ಎನ್ನುವುದು ನನ್ನ ಭಾವನೆ.

     

    ರಾಜಕೀಯ ಎಂದರೆ ಅಭಿವೃದ್ಧಿ ಕೆಲಸಗಳಿಗೆ ಸಿಕ್ಕ ಅವಕಾಶ ಎಂದು ಭಾವಿಸಿದವ ನಾನು. ಅಭಿವೃದ್ಧಿ ಯೋಜನೆಗಳಿಗೆ ಯಾವ ಪಕ್ಷದ ಮುಖಂಡರ ಸಲಹೆ, ಅಭಿಪ್ರಾಯಗಳಿಗೆ ನನ್ನ ಸ್ವಾಗತವಿದೆ. ಹಾಗಂತ ಅವರು ಮಾಡುವ ಸಮಾಜ ವಿರೋಧಿ ಚಟುವಟಿಕೆಗಳಿಗೆ ನನ್ನ ಉಸಿರು ಇರುವ ತನಕ ನಾನು ಬಾಗುವುದಿಲ್ಲ.

     

  • ಕೋಮು ಗಲಭೆ: ದಕ್ಷಿಣಕನ್ನಡ ಜಿಲ್ಲೆಯಲ್ಲಿಂದು ರಮಾನಾಥ್ ರೈ ನೇತೃತ್ವದಲ್ಲಿ ಶಾಂತಿ ಸಭೆ

    ಕೋಮು ಗಲಭೆ: ದಕ್ಷಿಣಕನ್ನಡ ಜಿಲ್ಲೆಯಲ್ಲಿಂದು ರಮಾನಾಥ್ ರೈ ನೇತೃತ್ವದಲ್ಲಿ ಶಾಂತಿ ಸಭೆ

    – ನಿಷೇಧಾಜ್ಞೆ ಉಲ್ಲಂಘಿಸಿ ಬಿಜೆಪಿ ಪ್ರತಿಭಟನೆಗೆ ನಿರ್ಧಾರ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಕೋಮು ಗಲಭೆ ಹಿನ್ನೆಲೆಯಲ್ಲಿ ಇಂದು ರಾಜ್ಯ ಸರ್ಕಾರ ಶಾಂತಿ ಸಭೆ ಕರೆದಿದೆ. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ್ ರೈ ನೇತೃತ್ವದಲ್ಲಿ ಸಭೆ ನಡೆಯಲಿದ್ದು ಜಿಲ್ಲೆಯ ಸಂಸದರು, ಶಾಸಕರು, ವಿವಿಧ ಧರ್ಮಗಳ ಮುಖಂಡರನ್ನು ಸಭೆಗೆ ಆಹ್ವಾನಿಸಲಾಗಿದೆ.

    ಆದ್ರೆ ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಆರೋಪಿಗಳನ್ನ ಬಂಧಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿರುವ ಬಿಜೆಪಿ ಶಾಂತಿ ಸಭೆಯನ್ನು ಬಹಿಷ್ಕರಿಸಿದೆ. ಇತ್ತ ಜಿಲ್ಲೆಯಲ್ಲಿ ಆರ್‍ಎಸ್‍ಎಸ್ ಸೇರಿದಂತೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಹತ್ಯೆಯನ್ನು ಖಂಡಿಸಿ ಬಿಜೆಪಿ ಇವತ್ತು ಪ್ರತಿಭಟನೆ ನಡೆಸಲು ನಿರ್ಧರಿಸಿದೆ. ಇವತ್ತು ಬೆಳಗ್ಗೆ ಮಂಗಳೂರಲ್ಲಿ ಪ್ರತಿಭಟನೆ ನಡೆಯಲಿದೆ.

    ಆದ್ರೆ ಕೋಮುಗಲಭೆ ಹಿನ್ನೆಲೆಯಲ್ಲಿ ಮಂಗಳೂರು, ಬಂಟ್ವಾಳ, ಸುಳ್ಯ, ಪುತ್ತೂರು, ಬೆಳ್ತಂಗಡಿಯಲ್ಲಿ ನಿಷೇಧಾಜ್ಞೆ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ನಗರದ ಟೌನ್‍ಹಾಲ್ ಮುಂಭಾಗದಲ್ಲಿ ನಡೆಸಲು ಉದ್ದೇಶಿಸಿರುವ ಬಿಜೆಪಿ ಪ್ರತಿಭಟನೆಗೆ ಪೊಲೀಸರು ಅನುಮತಿ ನೀಡಿಲ್ಲ. ಇವತ್ತಿನ ಹೋರಾಟದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಭಾಗವಹಿಸಲಿದ್ದಾರೆ. ಶರತ್ ಮಡಿವಾಳ ಸಾವಿನ ಹಿಂದಿನ ದಿನ ಸಂಸದರಾದ ಶೋಭಾ ಕರಂದ್ಲಾಜೆ, ನಳೀನ್‍ಕುಮಾರ್ ಕಟೀಲ್ ನೇತೃತ್ವದಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿತ್ತು. ನಿಷೇಧಾಜ್ಞೆಯಿದ್ದರೂ ಪ್ರತಿಭಟನೆಗೆ ಅವಕಾಶ ಮಾಡಿಕೊಟ್ಟಿದ್ದರ ಬಗ್ಗೆ ಸ್ವತಃ ಸಿಎಂ ಸಿದ್ದರಾಮಯ್ಯನವರೇ ಪೊಲೀಸರ ವಿರುದ್ಧ ಗರಂ ಆಗಿದ್ದರು.

  • ಡಿವಿಎಸ್, ಕರಂದ್ಲಾಜೆಯಿಂದ ಕೋಮು ಗಲಭೆ: ರಮಾನಾಥ ರೈ

    ಡಿವಿಎಸ್, ಕರಂದ್ಲಾಜೆಯಿಂದ ಕೋಮು ಗಲಭೆ: ರಮಾನಾಥ ರೈ

    ಮಂಗಳೂರು: ಕರಾವಳಿ ಭಾಗದಲ್ಲಿ ಕೋಮುಗಲಭೆ ಸೃಷ್ಟಿಯಾಗುವುದಕ್ಕೆ ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಕೇಂದ್ರ ಸಚಿವ ಸದಾನಂದಗೌಡ ಕಾರಣ ಅಂತ ಅರಣ್ಯ ಸಚಿವ ರಮಾನಾಥ ರೈ ಆರೋಪಿಸಿದ್ದಾರೆ.

    ಕರಾವಳಿಯಲ್ಲಿ ಕೋಮು ಗಲಭೆ ವಿಚಾರವಾಗಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕರಾವಳಿ ಭಾಗದಲ್ಲಿ ಕೋಮುಗಲಭೆ ಸೃಷ್ಟಿಯಾಗೋದಕ್ಕೆ ಶೋಭಾ ಕರಂದ್ಲಾಜೆ, ಸದಾನಂದಗೌಡ ಕಾರಣ. ಶೋಭಾ ಕರಂದ್ಲಾಜೆ ಚಿಕ್ಕಮಗಳೂರು ಹಾಗೂ ಉಡುಪಿ ಸಂಸದರು. ಸದಾನಂದಗೌಡರು ಬೆಂಗಳೂರು ಸಂಸದರು. ಅವರು ಅಲ್ಲಿಗೆ ಯಾಕೆ ಹೋಗಬೇಕು ಎಂದು ಪ್ರಶ್ನಿಸಿದರು.

    ಸೂತಕದ ಮನೆಯಲ್ಲಿ ವಿಜಯೋತ್ಸವ ಮಾಡೋದು ಎಷ್ಟು ಸರಿ? ಕರಾವಳಿ ಭಾಗದಲ್ಲಿ ಕೋಮುಗಲಭೆ ನಿವಾರಣೆಗೆ ಶಾಂತಿ ಸಭೆ ಕರೆದಿದ್ದೇವೆ. ಇನ್ನೊಂದು ವಾರದಲ್ಲಿ ಶಾಂತಿ ಸಭೆ ನಡೆಸಲಾಗುವುದು. ಶಾಂತಿ ಸಭೆಗೆ ಬಿಜೆಪಿ, ಆರ್‍ಎಸ್‍ಎಸ್ ಮುಖಂಡರನ್ನೂ ಆಹ್ವಾನಿಸಿದ್ದೇವೆ. ಮಂಗಳೂರಿನಲ್ಲಿ ಶಾಂತಿ ಸಭೆ ಕರೆದಿದ್ದೇವೆ. ಎಲ್ಲರ ಜೊತೆಗೂ ಚರ್ಚೆ ನಡೆಸಿ ಸೌಹಾರ್ದ ವಾತಾವರಣ ರೂಪಿಸಲು ಮನವಿ ಮಾಡಿಕೊಳ್ತೇವೆ ಅಂದರು.

    ಇದನ್ನೂ ಓದಿ: ಕೇಂದ್ರಕ್ಕೆ ಅವಕಾಶ ಕೊಟ್ರೇ ಬರೀ 24 ಗಂಟೆಯಲ್ಲಿ ಕರಾವಳಿ ಶಾಂತವಾಗಿರಿಸ್ತೀವಿ- ಸಿಎಂಗೆ ಡಿವಿಎಸ್ ಬಹಿರಂಗ ಸವಾಲು

  • ಕಲ್ಲಡ್ಕ ಗಲಾಟೆ, ರೈ ವಿಡಿಯೋ ವಿವಾದ: ದಕ್ಷಿಣ ಕನ್ನಡ ಎಸ್‍ಪಿ ತಲೆದಂಡ!

    ಕಲ್ಲಡ್ಕ ಗಲಾಟೆ, ರೈ ವಿಡಿಯೋ ವಿವಾದ: ದಕ್ಷಿಣ ಕನ್ನಡ ಎಸ್‍ಪಿ ತಲೆದಂಡ!

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕದಲ್ಲಿ ಉಂಟಾದ ಗಲಭೆ ಹಾಗೂ ಸಚಿವ ರಮಾನಾಥ ರೈ ವೀಡಿಯೋ ವಿವಾದ ದಕ್ಷಿಣ ಕನ್ನಡ ಜಿಲ್ಲೆಯ ಎಸ್‍ಪಿ ಭೂಷಣ್ ಜಿ ಬೊರಸೆ ಅವರ ತಲೆದಂಡ ಪಡೆದಿದೆ.

    ಬೆಂಗಳೂರು ಆಡಳಿತ ಡಿಸಿಪಿಯಾಗಿ ಭೂಷಣ್ ಬೊರಸೆ ವರ್ಗಾವಣೆಯಾಗಿದ್ದಾರೆ. ದಕ್ಷಿಣ ಕನ್ನಡದ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಮಂಡ್ಯದ ಎಸ್‍ಪಿಯಾಗಿರೋ ಸುಧೀರ್ ಕುಮಾರ್ ರೆಡ್ಡಿಯನ್ನ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

    ಇನ್ನು ಮಂಡ್ಯದ ಎಸ್‍ಪಿಯಾಗಿ ಜಿ.ರಾಧಿಕಾ, ರಾಯಚೂರು ಎಸ್‍ಪಿಯಾಗಿ ನಿಶಾ ಜೇಮ್ಸ್, ಬೆಳಗಾವಿ ಡಿಸಿಪಿಯಾಗಿ ಸೀಮಾ ಅನಿಲ್ ಲಾಟ್ಕರ್‍ರನ್ನ ಸರ್ಕಾರ ನೇಮಕ ಮಾಡಿದೆ. ಇನ್ನು ಡಿಸಿಪಿ ಲಾಬೂರಾಮ್ ಕೇಂದ್ರ ಸೇವೆಗೆ ನಿಯೋಜನೆಯಾದ ಹಿನ್ನೆಲೆಯಲ್ಲಿ ಬೆಂಗಳೂರು ಉತ್ತರ ವಿಭಾಗದ ಡಿಸಿಪಿಯಾಗಿ ಚೇತನ್‍ಸಿಂಗ್ ರಾಥೋಡ್‍ರನ್ನ ಸರ್ಕಾರ ನೇಮಿಸಿದೆ.

    ಇದನ್ನೂ ಓದಿ: Exclusive: ದಕ್ಷಿಣ ಕನ್ನಡ ಜಿಲ್ಲಾ ಎಸ್‍ಪಿಗೆ ಸಚಿವ ರಮಾನಾಥ ರೈ ಕ್ಲಾಸ್- ವಿಡಿಯೋ ನೋಡಿ

    ಇದನ್ನೂ ಓದಿ: ಜೀವನದಲ್ಲಿ ಯಾರಿಗೂ ಭಯ ಪಡಲ್ಲ, ನಾನು ಹುಲಿ ವಂಶದಲ್ಲಿ ಹುಟ್ಟಿದವನು: ರಮಾನಾಥ ರೈ

     

  • ಶೋಭಾ ಕರಂದ್ಲಾಜೆಯವರು ಪ್ರಭಾಕರ್ ಭಟ್ ಭಾಷಣ ಕೇಳಲಿ: ಸಂಸದೆಗೆ ಖಾದರ್ ತಿರುಗೇಟು

    ಶೋಭಾ ಕರಂದ್ಲಾಜೆಯವರು ಪ್ರಭಾಕರ್ ಭಟ್ ಭಾಷಣ ಕೇಳಲಿ: ಸಂಸದೆಗೆ ಖಾದರ್ ತಿರುಗೇಟು

    ಕೋಲಾರ: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ನಮ್ಮಿಂದ ಯಾವುದೇ ಭಯಭೀತಿಯ ವಾತಾವರಣ ನಿರ್ಮಾಣವಾಗಿಲ್ಲ. ಪ್ರಭಾಕರ್ ಭಟ್ ಅವ್ರ ಭಾಷಣಗಳು ಪ್ರಚೋದನಾಕಾರಿಯಾಗಿದೆ. ಹೀಗಾಗಿ ಸಂಸದೆ ಶೋಭಾ ಕರಂದ್ಲಾಜೆ ಅವರು ಒಮ್ಮೆ ಅವರ ಭಾಷಣ ಕೇಳಲಿ ಎಂದು ಆಹಾರ ಸಚಿವ ಯು ಟಿ ಖಾದರ್ ಸಂಸದೆ ಹೇಳಿಕೆಗೆ ತಿರುಗೇಟು ನೀಡಿದ್ರು.

    ರಂಜಾನ್ ಪ್ರಯುಕ್ತ ಕೋಲಾರ ಜಿಲ್ಲೆಯ ಮಾಲೂರು ತಾಲೂಕು ಕಾಂಗ್ರೆಸ್ ಮುಖಂಡ ಕೆ ವೈ ನಂಜೇಗೌಡ ಹಮ್ಮಿಕೊಂಡಿದ್ದ ಇಫ್ತಿಯಾರ್ ಕೂಟದಲ್ಲಿ ಭಾಗಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ರಮಾನಾಥ ರೈ ರಾಜೀನಾಮೆ ನೀಡುವ ಪ್ರಸ್ತಾಪವಿಲ್ಲ. ಬಿಜೆಪಿ ಜನರ ಭಾವನೆಗಳೊಂದಿಗೆ ಚೆಲ್ಲಾಟ ಆಡುತ್ತಿದೆ ಎಂದು ಅವರು ಬಿಜೆಪಿ ಮುಖಂಡರ ಆರೋಪವನ್ನ ತಳ್ಳಿ ಹಾಕಿದ್ರು.

    ಖಾಸಗಿ ಆಸ್ಪತ್ರೆಗಳ ವಿಧೇಯಕ ಮಂಡನೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವರು, ಖಾಸಗಿ ಆಸ್ಪತ್ರೆಗಳು ಮಾನವೀಯತೆಯಿಂದ ಚಿಂತಿಸಬೇಕು. ಸರ್ಕಾರದ ವಿಧೇಯಕಕ್ಕೆ ಎಲ್ಲರೂ ಬೆಂಬಲಿಸಬೇಕು ಎಂದು ಹೇಳಿದ ಅವರು, ಸಚಿವ ರಮೇಶ್ ಕುಮಾರ್ ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿದ್ದಾರೆ ಎಂದು ಪರೋಕ್ಷ ಬೆಂಬಲ ನೀಡಿದ್ರು.

    ವಿಧೇಯಕಕ್ಕೆ ಬಿಜೆಪಿ ಶಾಸಕರು ವಿರೋಧ ವ್ಯಕ್ತಪಡಿಸಿದ್ದಾರೆ, ಬಡವರ ಹಿತ ದೃಷ್ಟಿಯಿಂದ ಸರ್ಕಾರ ವಿಧೇಯಕ ಮಂಡನೆ ಮಾಡಿದೆ ಎಂದು ಸರ್ಕಾರದ ನಿರ್ಧಾರವನ್ನ ಸಮರ್ಥಿಸಿಕೊಂಡ್ರು.

     

  • ಕಲ್ಲಡ್ಕ ಪ್ರಭಾಕರ್ ಭಟ್ ಪುಕ್ಕಲ: ರಮಾನಾಥ ರೈ

    ಕಲ್ಲಡ್ಕ ಪ್ರಭಾಕರ್ ಭಟ್ ಪುಕ್ಕಲ: ರಮಾನಾಥ ರೈ

    ಮಂಗಳೂರು: ಆರ್‍ಎಸ್‍ಎಸ್ ಮುಖಂಡ ಕಲ್ಲಡ್ಕ ಭಟ್ ಒಬ್ಬ ಪುಕ್ಕಲ. ಅವನನು ಅರೆಸ್ಟ್ ಮಾಡಿದ್ರೂ ಏನೂ ಆಗಲ್ಲ ಅಂತಾ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹೇಳಿದ್ದಾರೆ.

    ರಮಾನಾಥ ರೈ ಜಿಲ್ಲಾ ಎಸ್‍ಪಿ ಭೂಷಣ್ ರಾವ್ ಬೋರಸೆಯವರನ್ನು ಕ್ಲಾಸ್ ತೆಗೆದುಕೊಂಡಿರುವ ವಿಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಈ ವಿಡಿಯೋದಲ್ಲಿ, “ಗಲಾಟೆ ಮಾಡೋದಿಲ್ಲ, ವಯಸ್ಸಾದವರು. ನನಗೆ ಎಲ್ಲಾ ಹಂಡ್ರೆಡ್ ಪರ್ಸೆಂಟ್ ಗೊತ್ತು, ನೀವು ಮನೆಯವರನ್ನು ಕರೆದುಕೊಂಡು ಹೋದ್ರೆ, ಕಾಂಗ್ರೆಸ್‍ನವರನ್ನೂ ಕೂಡ ಕರೆದುಕೊಂಡು ಹೋಗುವುದು. ಇದು ಮಂಡ್ಯ ಅಲ್ಲ ಇಂಡಿಯಾ ಅಂತ. ನೀವು ಮಂಡ್ಯದಿಂದ ಬಂದಿದ್ದೀರಿ, ಇಲ್ಲಿ ವಿಷ್ಯ ಬೇರೇನೇ ಇದೆ” ಅಂತಾ ಹೇಳಿರುವ ದೃಶ್ಯವಿದೆ.

    ನೇತ್ರಾವತಿ ಹೋರಾಟಗಾರರು ಅದು ಮಾಡ್ತಾರೆ, ಇದು ಮಾಡ್ತಾರೆ ಅಂತೀರಿ. ಆದ್ರೆ ಏನೂ ಮಾಡಲ್ಲ, ಪ್ರಭಾಕರ್ ಅರೆಸ್ಟ್ ಮಾಡಿದ್ರೂ ಕೂಡ ಏನೂ ಮಾಡಲ್ಲ, ಇದನ್ನು ನಾನು ಪ್ರಮಾಣಮಾಡಿ ಹೇಳ್ತೀನಿ. ಅವನು ಭಾಷಣ ಮಾಡಿದ್ರೆ ನೀವು ಆತನ ವಿರುದ್ಧ 307 ಕ್ರಿಮಿನಲ್ ಕೇಸ್ ಹಾಕಿ. ಆತ ಹೊರಗೆ ಬಂದ್ರೆ ಹೇಳಿದಾಗೆ ಕೇಳ್ತೀನಿ. ಅವನು ಅಷ್ಟು ದೊಡ್ಡ ವ್ಯಕ್ತಿಯಲ್ಲ, ಎಲೆಕ್ಷನ್ ಟೈಂನಲ್ಲಿ ನಾನು ಅವನನ್ನು ಇಲ್ಲಿಂದ ಓಡಿಸ್ತೀನಿ. ನಾನಲ್ಲ ನಾನಲ್ಲ ಅಂತ ಅವನ ಜೊತೆ ಇದ್ದ ಹುಡುಗ್ರು ಈ ಬಗ್ಗೆ ಜೋಕ್ ಮಾಡಿದ್ರು ಅಂತಾ ಸಚಿವರು ಹೇಳಿದ್ದಾರೆ.

    https://www.youtube.com/watch?v=0TjehsPe2VA

  • ಮಂಗಳೂರಿನ ಜನ ಶುದ್ಧ ನೀರಿನ ಬದಲು ಕುಡಿಯುತ್ತಿದ್ದಾರೆ ಡ್ರೈನೇಜ್ ನೀರು!

    ಮಂಗಳೂರಿನ ಜನ ಶುದ್ಧ ನೀರಿನ ಬದಲು ಕುಡಿಯುತ್ತಿದ್ದಾರೆ ಡ್ರೈನೇಜ್ ನೀರು!

    ಮಂಗಳೂರು: ನಗರದ ಜನರು ನೀರು ಕುಡಿಯೋ ಮೊದ್ಲು ಇನ್ಮುಂದೆ ಸ್ವಲ್ಪ ಯೋಚಿಸಬೇಕು. ಯಾಕಂದ್ರೆ ಮಂಗಳೂರು ನಗರವಾಸಿಗಳಿಗೆ ಶುದ್ದ ಕುಡಿಯುವ ನೀರಿಗೆ ಬದಲಾಗಿ ಡ್ರೈನೇಜ್ ನೀರನ್ನು ಕುಡಿಯುತ್ತಿದ್ದಾರೆ. ಪಾಲಿಕೆ ಡ್ರೈನೇಜ್ ನೀರು ಕುಡಿಸೋದರ ಜಾಡು ಹಿಡಿದು ಹೋದ ಪಬ್ಲಿಕ್ ಟಿವಿಗೆ ನಿಜ ಸಂಗತಿ ಗೊತ್ತಾಗಿದೆ.

    ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ನೇತ್ರಾವತಿ ನದಿಗೆ ಅಡ್ಡಲಾಗಿ ಕಟ್ಟಿರುವ ತುಂಬೆ ಡ್ಯಾಂನಿಂದ ಮಂಗಳೂರು ನಗರಕ್ಕೆ ಶುದ್ಧ ಕುಡಿಯೋ ನೀರು ಪೂರೈಕೆಯಾಗುತ್ತೆ. ಆದ್ರೆ ಇತ್ತೀಚೆಗೆ ನಗರದ ಜನರಿಗೆ ಹಲವು ರೋಗಗಳು ಕಾಣಿಸಿಕೊಂಡ ಪರಿಣಾಮ ನೀರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಆಗ ಕೊಲಿಫಾರಂ ಬ್ಯಾಕ್ಟೀರಿಯಾ ಇರೋದು ಪತ್ತೆಯಾಗಿದೆ. ಇದಕ್ಕೆಲ್ಲಾ ಕೊಳಚೆ ನೀರು ಡ್ಯಾಂಗೆ ಸೇರುತ್ತಿರೋದೇ ಕಾರಣ ಎಂಬ ವಿಷಯ ಗೊತ್ತಾಗಿದೆ.

    ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಕ್ಷೇತ್ರವಾಗಿರುವ ಬಂಟ್ವಾಳದಲ್ಲಿ ಕೊಳಚೆ ನೀರಿನ ಶುದ್ಧೀಕರಣ ಘಟಕ ಇಲ್ಲ. ಅಲ್ಲದೇ 38 ಕೋಟಿ ರೂಪಾಯಿ ವೆಚ್ಚದಲ್ಲಿ 2003ರಲ್ಲಿ ಆರಂಭವಾದ ಒಳಚರಂಡಿ ಕಾಮಗಾರಿ ಇನ್ನೂ ಪೂರ್ತಿಯಾಗದೇ ಇರೋದು ಸಮಸ್ಯೆಗೆ ಕಾರಣ. ಈ ಬಗ್ಗೆ ಪಾಲಿಕೆಗೆ ಗೊತ್ತಿದ್ರೂ ಬಾಯಿ ಮುಚ್ಚಿ ಕುಳಿತಿದೆ. ಸಮಸ್ಯೆ ಬಗ್ಗೆ ಕೇಳಿದ್ರೆ ಇದೇನು ಹೊಸತಲ್ಲ ಅಂತ ಮೇಯರ್ ಹರಿನಾಥ್ ಬೇಜವಾಬ್ದಾರಿಯ ಉತ್ತರ ಕೊಡ್ತಿದ್ದಾರೆ.

    ಒಟ್ಟಿನಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಗಳ ಜಾಣ ಕುರುಡುತನದಿಂದಾಗಿ ಮಂಗಳೂರಿನ ಜನ ಡ್ರೈನೇಜ್ ನೀರನ್ನ ಕುಡಿಯುವಂತಾಗಿದೆ. ಇನ್ನಾದ್ರು ಸಮಸ್ಯೆ ಬಗೆಹರಿಸದಿದ್ರೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ.