Tag: Ramanagra

  • ಶಾಸಕ ಇಕ್ಬಾಲ್ ಹುಸೇನ್ ವಿರುದ್ಧ ಭೂಕಬಳಿಕೆ ಆರೋಪ – ಗ್ರಾಮಸ್ಥರಿಂದ ದಾಖಲೆ ಬಿಡುಗಡೆ

    ಶಾಸಕ ಇಕ್ಬಾಲ್ ಹುಸೇನ್ ವಿರುದ್ಧ ಭೂಕಬಳಿಕೆ ಆರೋಪ – ಗ್ರಾಮಸ್ಥರಿಂದ ದಾಖಲೆ ಬಿಡುಗಡೆ

    – ನ್ಯಾಯ ಒದಗಿಸದಿದ್ದರೆ ದಯಾಮರಣ ನೀಡುವಂತೆ ಮನವಿ

    ರಾಮನಗರ: ಶಾಸಕ ಇಕ್ಬಾಲ್ ಹುಸೇನ್ (Iqbal Hussain) ವಿರುದ್ಧ ಭೂಕಬಳಿಕೆ (Land Grabbing) ಆರೋಪ ವಿಚಾರ ಕುರಿತು ಕನಕಪುರ (Kanakapura) ತಾಲೂಕಿನ ಹೊಂಗಣಿದೊಡ್ಡಿ ಗ್ರಾಮಸ್ಥರು ಇಂದು ದಾಖಲೆ ಬಿಡುಗಡೆ ಮಾಡಿದ್ದಾರೆ.

    1957ರಲ್ಲಿ ಭೂ ಮಾಲೀಕರು ಗ್ರಾಮಸ್ಥರಿಗೆ ಹಿಂದೆ ಕ್ರಯ ಮಾಡಿಕೊಟ್ಟ ದಾಖಲಾತಿ ಹಾಗೂ 19 ಜನ ಗೇಣಿದಾರರ ಗೇಣಿ ಅರ್ಜಿಯನ್ನ ಬಿಡುಗಡೆ ಮಾಡಿ ಸುದ್ದಿಗೋಷ್ಠಿ ನಡೆಸಿ ಗ್ರಾಮಸ್ಥರು ಮಾತನಾಡಿದರು. ಗ್ರಾಮದ 67 ಎಕರೆ ಜಮೀನನ್ನು ರಾಮನಗರ ಶಾಸಕರು ತಮ್ಮ ಹೆಸರಿಗೆ ನೋಂದಣಿ ಮಾಡಿಸಿಕೊಂಡಿದ್ದಾರೆ. ಇಡೀ ಗ್ರಾಮವೇ ಶಾಸಕರ ಹೆಸರಲ್ಲಿ ಇದೆ ಎಂಬುದನ್ನು ಸ್ವತಃ ಶಾಸಕರೇ ಒಪ್ಪಿಕೊಂಡಿದ್ದಾರೆ. ಈಗ ಗ್ರಾಮವನ್ನ ಮಾತ್ರ ಬಿಟ್ಟುಕೊಡುತ್ತೇನೆ ಎನ್ನುತ್ತಾರೆ. ಕೇವಲ ಗ್ರಾಮದ ಜಮೀನು ಮಾತ್ರವಲ್ಲ ನಮ್ಮ ಕೃಷಿ ಭೂಮಿಯನ್ನೂ ನಮಗೆ ಬಿಟ್ಟುಕೊಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ನಾಲ್ವರು ಇಸ್ರೇಲ್‌ ಮಹಿಳಾ ಸೈನಿಕರನ್ನು ಬಿಡುಗಡೆ ಮಾಡಿದ ಹಮಾಸ್‌ ಉಗ್ರರು

    19 ಗೇಣಿದಾರರ ಜಮೀನುಗಳನ್ನು ವಾಪಸ್ ನೀಡಿ. ಸ್ಥಳಕ್ಕೆ ಡಿಸಿ ಭೇಟಿ ನೀಡಿ ನಮ್ಮ ಜಾಗಕ್ಕೆ ಮಂಜೂರಾತಿ ಪತ್ರಗಳ ನೀಡಬೇಕು. ಕಳೆದ 60-70 ವರ್ಷದಿಂದ ನಾವು ಅಲ್ಲಿ ವ್ಯವಸಾಯ ಮಾಡ್ತಿದ್ದೇವೆ. ನಮ್ಮ ಜಮೀನುಗಳನ್ನ ನಮಗೆ ಉಳಿಸಿಕೊಡಿ. ಲೋಕಾಯುಕ್ತ ಅಧಿಕಾರಿಗಳು ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. ನ್ಯಾಯ ಒದಗಿಸಲಿಲ್ಲ ಅಂದರೆ ದಯಾಮರಣ ನೀಡುವಂತೆ ಸುದ್ದಿಗೋಷ್ಠಿಯಲ್ಲಿ ಗ್ರಾಮಸ್ಥರು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಬಡ್ಡಿ ಹಣಕ್ಕೆ ಮನಬಂದಂತೆ ಹಲ್ಲೆ – ಬೆತ್ತಲೆಗೊಳಿಸಿ ಚಿತ್ರಹಿಂಸೆ

  • ಬಂಡೇ ಮಠ ಶ್ರೀ ಆತ್ಮಹತ್ಯೆ ಪ್ರಕರಣ – ಬಂಧಿತ ಮೂವರು ಆರೋಪಿಗಳು ಮತ್ತೆ ಪೊಲೀಸರ ವಶಕ್ಕೆ

    ಬಂಡೇ ಮಠ ಶ್ರೀ ಆತ್ಮಹತ್ಯೆ ಪ್ರಕರಣ – ಬಂಧಿತ ಮೂವರು ಆರೋಪಿಗಳು ಮತ್ತೆ ಪೊಲೀಸರ ವಶಕ್ಕೆ

    ರಾಮನಗರ: ಬಂಡೇಮಠದ (Bande Mutt)  ಬಸವಲಿಂಗ ಸ್ವಾಮೀಜಿ (Basavalinga Swamiji) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಮೂವರು ಆರೋಪಿಗಳನ್ನು ಆರು ದಿನಗಳ ಕಾಲ ಪೊಲೀಸರ (Police) ವಶಕ್ಕೆ ನೀಡಲಾಗಿದೆ.

    ಇಂದು ಮಾಗಡಿ 1ನೇ ಜೆಎಂಎಫ್‍ಸಿ ನ್ಯಾಯಾಲಯದ (JMFC Court) ನ್ಯಾಯಾಧೀಶರಾದ ಧನಲಕ್ಷ್ಮೀ ಎದುರು ಆರೋಪಿಗಳನ್ನು ಹಾಜರುಪಡಿಸಲಾಗಿತ್ತು. ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ಕಸ್ಟಡಿಗೆ ಕೇಳಿದ್ದರು. ಪೊಲೀಸರ ಬೇಡಿಕೆಯನ್ನು ಪುರಸ್ಕರಿಸಿದ ನ್ಯಾಯಾಧೀಶರು ಆರೋಪಿಗಳನ್ನು ಪೊಲೀಸರ ವಶಕ್ಕೆ ಒಪ್ಪಿಸಲು ಸಮ್ಮತಿ ನೀಡಿದ್ದಾರೆ. ನವೆಂಬರ್ 5 ರವರೆಗೂ ಆರೋಪಿಗಳು ಪೊಲೀಸರ ವಶದಲ್ಲಿದ್ದು ನಂತರ ಅವರನ್ನು ಮತ್ತೊಮ್ಮೆ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಕೋರ್ಟ್ ಸೂಚಿಸಿದೆ. ಇದನ್ನೂ ಓದಿ: ಬಂಡೆಮಠ ಶ್ರೀ ಆತ್ಮಹತ್ಯೆ ಪ್ರಕರಣ- ನೀಲಾಂಬಿಕೆ ಮೊಬೈಲ್‍ನಿಂದ ನಿತ್ಯ ಮೆಸೇಜ್!

    ವಿಚಾರಣೆ ಅಗತ್ಯವಿದೆ ಎಂದಾದರೆ ಪೊಲೀಸರು ಅವರನ್ನು ನವೆಂಬರ್ 5 ರ ಬಳಿಕ ಮತ್ತೆ ವಶಕ್ಕೆ ಕೇಳುವ ಸಾಧ್ಯತೆ ಇದೆ. ಸದ್ಯ ಮೃತ ಬಸವಲಿಂಗ ಸ್ವಾಮೀಜಿ ತಮ್ಮ ಡೆತ್‍ನೋಟ್‍ನಲ್ಲಿ ಉಲ್ಲೇಖಿಸಿರುವ ಇತರರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಇದನ್ನೂ ಓದಿ: ಇಸ್ಪೀಟ್ ಆಡುವಾಗ ಕುಸಿದು ಬಿದ್ದು ವ್ಯಕ್ತಿ ಸಾವು

    Live Tv
    [brid partner=56869869 player=32851 video=960834 autoplay=true]