Tag: Ramanagaram

  • ಬಿಜೆಪಿಯನ್ನ ಬಿಡಿ, ನಿಮ್ಮ ಮನೆಯಲ್ಲಿ ಎಷ್ಟು ಮಕ್ಕಳು ಸರ್ಕಾರಿ ಶಾಲೆಯಲ್ಲಿ ಓದಿದ್ದಾರೆ: HDKಗೆ ಅಶ್ವಥ್ ಟಾಂಗ್

    ಬಿಜೆಪಿಯನ್ನ ಬಿಡಿ, ನಿಮ್ಮ ಮನೆಯಲ್ಲಿ ಎಷ್ಟು ಮಕ್ಕಳು ಸರ್ಕಾರಿ ಶಾಲೆಯಲ್ಲಿ ಓದಿದ್ದಾರೆ: HDKಗೆ ಅಶ್ವಥ್ ಟಾಂಗ್

    – ಹಿಂದೂ, ಮುಸ್ಲಿಂ, ಕ್ರೈಸ್ತರಾಗಲಿ ಎಲ್ಲರಿಗೂ ಕಾನೂನು ಅನ್ವಯ

    ರಾಮನಗರ: ಬಿಜೆಪಿಯನ್ನು ಬಿಡಿ, ನಿಮ್ಮ ಮನೆಯಲ್ಲಿ ಎಷ್ಟು ಮಕ್ಕಳು ಸರ್ಕಾರಿ ಶಾಲೆಯಲ್ಲಿ ಓದಿದ್ದಾರೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಸಚಿವ ಅಶ್ವಥ್ ನಾರಾಯಣ್ ಟಾಂಗ್ ಕೊಟ್ಟರು.

    ಬಿಜೆಪಿ ಪಕ್ಷದ ಯಾರ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದಾರೆ ಎಂದಿದ್ದ ಹೆಚ್‍ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಪಕ್ಷದ ಹಲವು ನಾಯಕರ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಓದಿದ್ದಾರೆ. ಅವರ ಮನೆಮಕ್ಕಳು ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದಾರಾ? ಎಂದು ಪ್ರಶ್ನೆಯನ್ನು ಕೇಳಿದರು. ಇದನ್ನೂ ಓದಿ: ಸಣ್ಣ ಸುಳಿವು ಸಿಗದಂತೆ ಹತ್ಯೆ ಮಾಡಿದ್ದ ಹಂತಕ ಕೊನೆಗೂ ಖಾಕಿ ಬಲೆಗೆ!

    ಕಾಲೇಜುಗಳಲ್ಲಿ ಶಾಂತಿ ಕಾಪಾಡಲು ಸ್ಪಷ್ಟ ನಿಲುವು ತೆಗೆದುಕೊಂಡಿದ್ದೇವೆ. 1995ರಲ್ಲಿ ಕಾನೂನು ತಂದಿರುವವರು ಯಾರು? ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವಿದೆ. ಇಲ್ಲಿ ಏನು ನಿಲುವು ತೆಗೆದುಕೊಂಡಿದ್ದಾರೆ. ಯಾವ ಶಾಲೆಯಾದರೂ ಧಾರ್ಮಿಕ ಸಮವಸ್ತ್ರಕ್ಕೆ ಅವಕಾಶವಿಲ್ಲ. ಸರ್ಕಾರಿ ಆಗಲಿ, ಖಾಸಗಿ ಆಗಲಿ ಅವಕಾಶ ಇಲ್ಲ. ಹಿಂದೂ, ಮುಸ್ಲಿಂ, ಕ್ರೈಸ್ತರಾಗಲಿ ಎಲ್ಲರಿಗೂ ಈ ಕಾನೂನು ಅನ್ವಯವಾಗುತ್ತೆ. ಎಲ್ಲದರಲ್ಲಿಯೂ ರಾಜಕೀಯ ಮಾಡೋದನ್ನ ಬಿಟ್ಟು ಸ್ಪಷ್ಟ ನಿಲುವು ತೆಗೆದುಕೊಳ್ಳಲಿ. ಇವತ್ತು ನ್ಯಾಯಾಲಯ ಸಹ ಸ್ಪಷ್ಟ ನಿಲುವು ಕೊಟ್ಟಿದೆ ಎಂದು ತಿರುಗೇಟು ಕೊಟ್ಟರು.

    ಡಿ.ಕೆ.ಶಿವಕುಮಾರ್ ಅವರ ಆರೋಪಕ್ಕೆ ಉತ್ತರಿಸಿದ ಅವರು, ಸುಮ್ಮನ್ನೆ ಗಾಳಿಯಲ್ಲಿ ಗುಂಡು ಎಂಬುದು ಬೇಡ. ರಾಜಕೀಯವಾಗಿ ಮಾತನಾಡೋದು ಬೇಡ. ಸಾಕ್ಷಿ ಇದ್ದರೆ ಅದನ್ನ ಸಾಬೀತು ಮಾಡಲಿ ಎಂದು ಸವಾಲು ಹಾಕಿದರು. ಇದನ್ನೂ ಓದಿ: ಮರ್ಸಿಡಿಸ್ ಬೆಂಜ್ ಗಿಫ್ಟ್ ಕೊಟ್ಟ ಬಾಸ್ – ಕಾರ್ ನೋಡಿ ಸಿಬ್ಬಂದಿ ಖುಷ್

    ಯುವತಿಗೆ ಕೆಲ ಸಂಘಟನೆ 5 ಲಕ್ಷ ರೂ. ಬಹುಮಾನ ಕೊಟ್ಟ ವಿಚಾರವಾಗಿ ಮಾತನಾಡಿದ ಅವರು, ಆ ಸಂದರ್ಭದಲ್ಲಿ ಯುವತಿ ಮಾತನಾಡಿದ್ದಾಳೆ. ಆದರೆ ಅದನ್ನೇ ದೊಡ್ಡ ಸಾಧನೆ ಎಂದು ಬಿಂಬಿಸುವುದು ಬೇಡಿ. ಈ ರೀತಿಯ ವಿಚಾರಕ್ಕೆ ಪ್ರಚೋದನೆ ಬೇಡ ಎಂದು ಮನವಿ ಮಾಡಿದರು.

  • ಸಂತಾನಹರಣ ಶಸ್ತ್ರಚಿಕಿತ್ಸೆ ವೇಳೆ ಪ್ರಜ್ಞಾಹೀನರಾಗಿ ಗೃಹಿಣಿ ಸಾವು

    ಸಂತಾನಹರಣ ಶಸ್ತ್ರಚಿಕಿತ್ಸೆ ವೇಳೆ ಪ್ರಜ್ಞಾಹೀನರಾಗಿ ಗೃಹಿಣಿ ಸಾವು

    ರಾಮನಗರ: ವೈದ್ಯರ ನಿರ್ಲಕ್ಷ್ಯದಿಂದ ಗೃಹಿಣಿಯೊಬ್ಬರು ಮೃತಪಟ್ಟಿರುವ ಘಟನೆ ರಾಮನಗರ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದೆ.

    ಚನ್ನಪಟ್ಟಣ ತಾಲೂಕಿನ ಹಾರೋಕೊಪ್ಪ ಗ್ರಾಮದ ನಿವಾಸಿ ರಂಜಿತಾ (26) ಮೃತ ದುರ್ದೈವಿ. ಮೃತಳ ಕುಟುಂಬಸ್ಥರು ಮತ್ತು ಗ್ರಾಮಸ್ಥರು ರಂಜಿತಾಳ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆಸ್ಪತ್ರೆ ಮುಂಭಾಗ ಮೃತ ಶವವಿಟ್ಟು ಪ್ರತಿಭಟನೆ ಮಾಡಿದ್ದಾರೆ.

    ಶುಕ್ರವಾರ ಮೃತ ರಂಜಿತಾ ಸಂತಾನಹರಣ ಶಸ್ತ್ರ ಚಿಕಿತ್ಸೆಗೆಂದು ರಾಮನಗರ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ರಂಜಿತಾ ಅವರಿಗೆ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಆದರೆ ಈ ವೇಳೆ ರಂಜಿತಾ ಪ್ರಜ್ಞಾಹೀನರಾಗಿದ್ದಾರೆ. ತಕ್ಷಣ ರಂಜಿತಾಳನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿತ್ತು.

    ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ತಲುಪುವ ಮೊದಲೇ ರಂಜಿತಾ ಮೃತಪಟ್ಟಿದ್ದಾರೆ. ಇದರಿಂದ ಕುಟುಂಬದವರು ಆಕ್ರೋಶಗೊಂಡು ವಾಪಸ್ ರಾಮನಗರಕ್ಕೆ ಬಂದು ಜಿಲ್ಲಾಸ್ಪತ್ರೆಯ ಬಾಗಿಲಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬಾಮೈದನ ಹತ್ಯೆಗೆ ಯತ್ನಿಸಿದ ಕೆಎಂಎಫ್ ಅಧ್ಯಕ್ಷ!

    ಬಾಮೈದನ ಹತ್ಯೆಗೆ ಯತ್ನಿಸಿದ ಕೆಎಂಎಫ್ ಅಧ್ಯಕ್ಷ!

    ರಾಮನಗರ: ಜಮೀನು ವ್ಯಾಜ್ಯ ವಿಚಾರವಾಗಿ ಕೆಎಂಎಫ್ ಅದ್ಯಕ್ಷ ಪಿ.ನಾಗರಾಜ್ ತನ್ನ ಬಾಮೈದನ ಮೇಲೆ ಕಾರು ಹತ್ತಿಸಿ ಕೊಲ್ಲಲು ಮುಂದಾದ ಘಟನೆ ರಾಮನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಮಾಯಗಾನಹಳ್ಳಿ ಸರ್ವೆ ನಂ 91, ಮಾದಾಪುರ ಸರ್ವೆ ನಂ 36ರ ಜಮೀನು ವಿಚಾರವಾಗಿ ಗಲಾಟೆ ಬಾವ ಬಾಮೈದನ ನಡುವೆ ವೈಮನಸ್ಸಿತ್ತು. ಇದು ತಾಕ್ಕಕೇರಿ ಮೊನ್ನೆ ಬಾಮೈದ ಲೋಕೇಶ್ ಮೇಲೆ ನಾಗರಾಜ್ ಕಾರು ಹತ್ತಿಸಿ ಕೊಲ್ಲಲು ಮುಂದಾಗಿದ್ದಾರೆ.

    ಈ ಸಂಬಂಧ ಕೆಎಂಎಫ್ ಅಧ್ಯಕ್ಷ ಪಿ.ನಾಗರಾಜು ವಿರುದ್ಧ ಅವರ ಬಾಮೈದ ಲೋಕೇಶ್ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

  • ಮಾತೃ ಪೂರ್ಣ ಯೋಜನೆಯ ಅವ್ಯವಸ್ಥೆ- ಗರ್ಭಿಣಿ, ಮಕ್ಕಳಿಂದ ಬಯಲಲ್ಲೇ ಊಟ!

    ಮಾತೃ ಪೂರ್ಣ ಯೋಜನೆಯ ಅವ್ಯವಸ್ಥೆ- ಗರ್ಭಿಣಿ, ಮಕ್ಕಳಿಂದ ಬಯಲಲ್ಲೇ ಊಟ!

    ಬೆಂಗಳೂರು: ಮಾತೃ ಪೂರ್ಣ ಯೋಜನೆಯ ಅವ್ಯವಸ್ಥೆಯಿಂದಾಗಿ ಗರ್ಭಿಣಿ ಮತ್ತು ಮಕ್ಕಳು ಬಯಲಲ್ಲೇ ಊಟ ಮಾಡುತ್ತಿರುವ ಶೋಚನಿಯ ಘಟನೆ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಪುಟ್ಟೇಗೌಡನಪಾಳ್ಯದಲ್ಲಿ ವರದಿಯಾಗಿದೆ.

    ನೆಲಮಂಗಲ ವಿಧಾನ ಸಭಾ ಕ್ಷೇತ್ರದ ಪುಟ್ಟೇಗೌಡನಪಾಳ್ಯದಲ್ಲಿ ಮನಕಲುಕುವ ಘಟನೆ ನಡೆದಿದ್ದು, ಮಾತೃ ಪೂರ್ಣ ಯೋಜನೆ ಊಟ ವಿತರಣೆಯು ಅವ್ಯವಸ್ಥೆಯ ಆಗರವಾಗಿದೆ. ಅಂಗನವಾಡಿ ಕೇಂದ್ರದಲ್ಲಿ ನೀಡುವ ಮಾತೃಪೂರ್ಣ ಯೋಜನೆಯ ಊಟಕ್ಕಾಗಿ ಗರ್ಭಿಣಿ ಮತ್ತು ಮಕ್ಕಳು ಪರಿಪಾಟಲು ನಡೆಸುತ್ತಿದ್ದಾರೆ.

    ಗ್ರಾಮದಲ್ಲಿ ಸಾಕಷ್ಟು ವರ್ಷದಿಂದ ಸೂಕ್ತ ಸೂರಿಲ್ಲದೆ ಗರ್ಭಿಣಿ ಮತ್ತು ಮಕ್ಕಳು ನರಕಯಾತನೆ ಅನುಭವಿಸುತ್ತಿದ್ದಾರೆ. ಈ ಸಂಬಂಧ ಗ್ರಾಮಸ್ಥರು ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಮೊದಲು ಗರ್ಭಿಣಿಯರಿಗೆ ಹಾಗೂ ಪುಟಾಣಿ ಮಕ್ಕಳಿಗೆ ನೇರವಾಗಿ ಮನೆಗೆ ಧವಸ-ಧಾನ್ಯ ನೀಡುತಿದ್ದರು. ಆದರೆ ಈಗ ಮಾತೃ ಪೂರ್ಣ ಯೋಜನೆಯ ಮೂಲಕ ಅಂಗನವಾಡಿ ಕೇಂದ್ರದಲ್ಲಿ ಊಟ ನೀಡುವ ವ್ಯವಸ್ಥೆಯಿಂದಾಗಿ ಅವ್ಯವಸ್ಥೆಗೆ ಕಾರಣವಾಗಿದೆ.

    ಜೆಡಿಎಸ್ ಶಾಸಕ ಆಯ್ಕೆಯಾಗಿರುವ ಕ್ಷೇತ್ರದಲ್ಲಿ ಬಯಲಲ್ಲಿ ಊಟ ಮಾಡುವ ಪರಿಸ್ಥಿತಿ ಎದುರಾಗಿದ್ದು, ಮುಖ್ಯಮಂತ್ರಿ ಕುಮಾರಸ್ವಾಮಿಯವರೇ ನಿಮಗೆ ಮತ ನೀಡಿರುವ ಕ್ಷೇತ್ರದ ದುಸ್ಥಿತಿ ಹಾಗೂ ನೆಲಮಂಗಲ ಜೆಡಿಎಸ್ ಶಾಸಕ ಶ್ರೀನಿವಾಸ ಮೂರ್ತಿಯವರು ಇತ್ತ ಕಡೆ ಗಮನ ಹರಿಸಬೇಕೆಂದು ಗ್ರಾಮಸ್ಥರು ಮನವಿಮಾಡಿಕೊಂಡಿದ್ದಾರೆ.

  • ಸಿಎಂ 15 ದಿನದಲ್ಲಿ ಉಡುಪಿಗೆ ಬರದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ

    ಸಿಎಂ 15 ದಿನದಲ್ಲಿ ಉಡುಪಿಗೆ ಬರದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ

    ಉಡುಪಿ: ಮುಖ್ಯಮಂತ್ರಿ ಕುಮಾರಸ್ವಾಮಿಯವರು ಸದ್ಯ ರಾಮನಗರ ಪ್ರವಾಸ ಕೈಗೊಂಡಿರುವುದರ ವಿರುದ್ಧ ಕರಾವಳಿಯಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಸಿಎಂ ಎಚ್‍ಡಿಕೆ ರಾಮನಗರಕ್ಕೆ ಮಾತ್ರ ಸೀಮಿತವಾಗಬಾರದು ಎಂದು ಮೀನುಗಾರಿಕಾ ಮಹಾಮಂಡಲ ಅಧ್ಯಕ್ಷ ಯಶ್ ಪಾಲ್ ಸುವರ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ನಗರದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಾಸನ, ಮಂಡ್ಯವನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಕುಮಾರಸ್ವಾಮಿ ರಾಜ್ಯಭಾರ ಮಾಡಬಾರದು. ಎಚ್.ಡಿ ಕುಮಾರಸ್ವಾಮಿ ತನ್ನ ರಾಜಧರ್ಮವನ್ನು ಅನುಸರಿಸಲಿ ಎಂದು ಹೇಳಿದ್ದಾರೆ.

    ಕರಾವಳಿ ಜಿಲ್ಲೆಗಳಲ್ಲೂ ತೆಂಗು, ಅಡಿಕೆ ಬೆಳೆಯುತ್ತಾರೆ. ಕರಾವಳಿಯ ಮೀನುಗಾರರಿಗೆ ಕುಮಾರಸ್ವಾಮಿ ಸಿಎಂ ಎಂದು ಅನ್ನಿಸುತ್ತಿಲ್ಲ. ನಮ್ಮ ಯಾವ ಬೇಡಿಕೆಯನ್ನೂ ಸಿಎಂ ಈಡೇರಿಸಿಲ್ಲ. ಬಜೆಟ್ ನಲ್ಲಿ ಉಡುಪಿ ಜಿಲ್ಲೆಯ ಹೆಸರೇ ಪ್ರಸ್ತಾಪ ಮಾಡಿಲ್ಲ. ಇದೆಲ್ಲ ನಮಗೆ ನೋವು ತಂದಿದೆ. ಕಳೆದ ಎರಡು ತಿಂಗಳಿಂದ ಉಡುಪಿಯಲ್ಲಿ ಭಾರೀ ಮಳೆಯಾಗುತ್ತಿದೆ. ಸಮುದ್ರ ಕೊರೆತ ಶುರುವಾಗಿದೆ. ತಗ್ಗು ಪ್ರದೇಶದ ಮನೆಗಳು ಬಿದ್ದಿದೆ. ಮರಗಳು ಬಿದ್ದು ಲಕ್ಷಾಂತರ ರುಪಾಯಿ ಹಾನಿಯಾಗಿದೆ. ಇಷ್ಟೆಲ್ಲ ಆದ್ರೂ ಜಿಲ್ಲೆಗೊಂದು ಉಸ್ತುವಾರಿ ಸಚಿವರ ನೇಮಕವಾಗಿಲ್ಲ ಎಂದು ದೂರಿದರು.

    ಇದೇ ವೇಳೆ ಸಿಎಂ ಕುಮಾರಸ್ವಾಮಿ ಅವರು 15 ದಿನಗಳಲ್ಲಿ ಸಿಎಂ ಉಡುಪಿಗೆ ಬರದಿದ್ದರೆ ಬೆಂಗಳೂರಿನಲ್ಲಿ ಎಲ್ಲಾ ಶಾಸಕರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.

  • ಗಂಡನ ಸ್ನೇಹಿತರಿಂದಲೇ ಗೃಹಿಣಿಯ ಮೇಲೆ ಸಾಮೂಹಿಕ ಅತ್ಯಾಚಾರ!

    ಗಂಡನ ಸ್ನೇಹಿತರಿಂದಲೇ ಗೃಹಿಣಿಯ ಮೇಲೆ ಸಾಮೂಹಿಕ ಅತ್ಯಾಚಾರ!

    ರಾಮನಗರ: ಗೃಹಿಣಿಯೋರ್ವರ ಮೇಲೆ ಮೂರು ಜನ ಕಾಮುಕರು ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಜಿಲ್ಲೆಯ ಮಾಗಡಿ ತಾಲೂಕಿನ ಕುದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಜಿಲ್ಲೆಯ ಮಾಗಡಿ ತಾಲೂಕಿನ ಮಣ್ಣಿಗನಹಳ್ಳಿ ಗ್ರಾಮದಲ್ಲಿ ನನ್ನ ಪತಿಯ ಸ್ನೇಹಿತರೇ ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಿ ಸಂತ್ರಸ್ತೆ ದೂರು ನೀಡಿದ್ದಾರೆ. ಕರಡಿ, ಪುರುಷೋತ್ತಮ್, ಮಂಜ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿಗಳು ಪರಾರಿಯಾಗಿದ್ದಾರೆ.

    ಗಂಡನ  ಫೋನ್ ನಂಬರ್ ಕೇಳುವ ನೆಪದಲ್ಲಿ ಮನೆಗೆ ಬಂದ ಮೂವರು ಗೃಹಿಣಿಯ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾರೆ. ನಂತರ ಸಾಮೂಹಿಕವಾಗಿ ಆತ್ಯಾಚಾರ ನಡೆಸಿ ಅಲ್ಲಿಂದ ಪರಾರಿಯಾಗಿದ್ದಾರೆ. ಸಂತ್ರಸ್ತೆಯನ್ನು ಮಾಗಡಿ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

  • ಮನೆಬಿಟ್ಟು ಹೋಗಿದ್ದಕ್ಕೆ ಪತ್ನಿಯನ್ನು ಕೊಂದು ತಾನು ಆತ್ಮಹತ್ಯೆಗೆ ಶರಣಾದ ಪತಿ

    ಮನೆಬಿಟ್ಟು ಹೋಗಿದ್ದಕ್ಕೆ ಪತ್ನಿಯನ್ನು ಕೊಂದು ತಾನು ಆತ್ಮಹತ್ಯೆಗೆ ಶರಣಾದ ಪತಿ

    ರಾಮನಗರ: ಒಂದು ತಿಂಗಳು ಮನೆಬಿಟ್ಟು ಹೋಗಿದ್ದ ಪತ್ನಿಯನ್ನು ಕೊಂದು, ಬಳಿಕ ಹೆದರಿ ಮಕ್ಕಳಿಗೆ ವಿಷ ನೀಡಿ ತಾನು ಆತ್ಮಹತ್ಯೆ ಮಾಡಿಕೊಂಡ ಘಟನೆ ಕನಕಪುರದ ವಿನಾಯಕ ನಗರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ವಿನಾಯಕ ನಗರದ ನಿವಾಸಿಗಳಾದ ಪತಿ ಶಿವು (40) ಹಾಗೂ ಪತ್ನಿ ರೇಖಾ (22) ಮೃತ ದುರ್ದೈವಿಗಳು. ಶುಕ್ರವಾರ ಘಟನೆ ನಡೆದಿದ್ದು, ಶನಿವಾರ ಸಂಜೆ ಸ್ಥಳೀಯರ ಗಮನಕ್ಕೆ ಬಂದಿದ್ದು, ಅದೃಷ್ಟವಶಾತ್ ಇಬ್ಬರು ಮಕ್ಕಳು ವಿಷ ಆಹಾರ ಸೇವಿಸಿದ್ದರೂ ಬದುಕುಳಿದಿದ್ದಾರೆ.

    ಒಂದು ತಿಂಗಳ ಹಿಂದೆ ರೇಖಾ ಮನೆ ಬಿಟ್ಟು ಹೋಗಿದ್ದು, ಶುಕ್ರವಾರ ಪತಿಯ ಮನೆಗೆ ಮರಳಿದ್ದರು. ಮನೆಯಲ್ಲಿ ಯಾರು ಇಲ್ಲದಿದ್ದ ವೇಳೆ ರಾತ್ರಿ ಶಿವು ಹಾಗೂ ರೇಖಾ ಮಧ್ಯ ಮಾತಿನ ಚಕಮಕಿ ಪ್ರಾರಂಭವಾಗಿದ್ದು, ಕೋಪಗೊಂಡ ಶಿವು ರೇಖಾ ತಲೆಗೆ ದೊಣ್ಣೆಯಿಂದ ಬಲವಾಗಿ ಹೊಡೆದಿದ್ದಾರೆ. ಪರಿಣಾಮ ರೇಖಾ ಅವರು ಅತಿಯಾದ ರಕ್ತಸ್ರಾವದಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಪತ್ನಿಯ ಸಾವಿನಿಂದ ಗಾಭರಿಗೊಂಡ ಶಿವು ತನ್ನ ಮಕ್ಕಳಿಗೆ ವಿಷ ಮಿಶ್ರಿತ ಊಟ ನೀಡಿದ್ದು, ತಾನು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಶನಿವಾರ ಸಂಜೆಯಾದರೂ ಮನೆಯಿಂದ ಯಾರೂ ಹೊರ ಬರದಿದ್ದರಿಂದ ನೆರೆಹೊರೆಯವರಿಗೆ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಮನೆ ಕಿಟಕಿಯಲ್ಲಿ ನೋಡಿದ್ದಾಗ ಪ್ರಕರಣ ಬೆಳಕಿಗೆ ಬಂದಿದೆ. ತಕ್ಷಣವೇ ಇಬ್ಬರು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಮಕ್ಕಳು ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಈ ಕುರಿತು ಕನಕಪುರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಸಿನಿಮಾ ನಟ-ನಟಿಯರಿಂದ ಕೈ ಅಭ್ಯರ್ಥಿಯ ಪರ ಪ್ರಚಾರ

    ಸಿನಿಮಾ ನಟ-ನಟಿಯರಿಂದ ಕೈ ಅಭ್ಯರ್ಥಿಯ ಪರ ಪ್ರಚಾರ

    ರಾಮನಗರ: ಕರ್ನಾಟಕ ವಿಧಾನ ಸಭಾ ಚುನಾವಣೆ ದಿನೆದಿನೇ ರಂಗೇರುತ್ತಿದ್ದು, ಬೊಂಬೆನಗರಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಬುಧವಾರ  ಸ್ಯಾಂಡಲ್‍ ವುಡ್‍ನ ನಟ-ನಟಿಯರು ಕಾಂಗ್ರೇಸ್ ಅಭ್ಯರ್ಥಿ ಎಚ್.ಎಂ ರೇವಣ್ಣ ಪರ ರೋಡ್ ಶೋ ನಡೆಸಿ ಮತಯಾಚನೆ ನಡೆಸಿದ್ದಾರೆ.

    ನಟರಾದ ಅನೂಪ್ ರೇವಣ್ಣ, ಬಿಗ್ ಬಾಸ್ ವಿನ್ನರ್ ಪ್ರಥಮ್, ಕೋಟೆ ಪ್ರಭಾಕರ್, ನಟಿಯರಾದ ಮಯೂರಿ, ರೂಪಿಕಾ ಹಾಗೂ ನಿರ್ದೇಶಕ ಆರ್. ಚಂದ್ರ ಚನ್ನಪಟ್ಟಣದಲ್ಲಿ ರೋಡ್ ಶೋ ನಡೆಸಿ ರೇವಣ್ಣ ಪರ ಮತಯಾಚನೆ ನಡೆಸಿದ್ದಾರೆ.

    ನಗರದ ಮಂಗಳವಾರ ಪೇಟೆಯಿಂದ ಭೈರಾಪಟ್ಟಣದವರೆಗೆ ರೋಡ್ ಶೋ ನಡೆಸಿದ್ದು, ಇದೇ ವೇಳೆ ಮಾತನಾಡಿದ ಪ್ರಥಮ್, ಚನ್ನಪಟ್ಟಣದಲ್ಲಿ ಸತತವಾಗಿ 20 ವರ್ಷಗಳಿಂದ ಯೋಗೇಶ್ವರ್ ಆಯ್ಕೆಯಾಗುತ್ತಲೇ ಬಂದಿದ್ದಾರೆ. ಈ ಬಾರಿ ಅವರು ರಾಜಕೀಯದಿಂದ ವಿಶ್ರಾಂತಿ ಪಡೆಯಲಿ, ಇನ್ನೂ ಎಚ್.ಡಿ ಕುಮಾರಸ್ವಾಮಿಯವರು ಎರಡೂ ಕಡೆ ಸ್ಪರ್ಧಿಸಿರುವುದರಿಂದ ಹಣ ಪೋಲಾಗಲಿದೆ. ಈ ಬಾರಿ ಎಚ್.ಎಂ ರೇವಣ್ಣಗೆ ಒಂದು ಅವಕಾಶ ಕಲ್ಪಿಸುವಂತೆ ಮನವಿ ಮಾಡಿದ್ದಾರೆ.

    ಇನ್ನು ಈ ಬಗ್ಗೆ ಮಾತನಾಡಿದ ನಟಿ ಮಯೂರಿ ಕೂಡಾ ರೇವಣ್ಣರನ್ನ ಬೆಂಬಲಿಸುವಂತೆ ಮನವಿ ಮಾಡಿದ್ದಾರೆ.

  • ಮರಿಗೆ ಜನ್ಮ ನೀಡಿ ಕೆರೆಯಲ್ಲೇ ಸಾವನ್ನಪ್ಪಿದ್ದ ತಾಯಿ ಆನೆ

    ಮರಿಗೆ ಜನ್ಮ ನೀಡಿ ಕೆರೆಯಲ್ಲೇ ಸಾವನ್ನಪ್ಪಿದ್ದ ತಾಯಿ ಆನೆ

    ರಾಮನಗರ: ಮರಿಗೆ ಜನ್ಮ ನೀಡಿ ತಾಯಿ ಆನೆ ಕೆರೆಯಲ್ಲಿಯೇ ಸಾವನ್ನಪ್ಪಿರುವ ಘಟನೆ ಕನಕಪುರ ತಾಲೂಕಿನ ಚಿಲಂದವಾಡಿ ಕೆರೆಯಲ್ಲಿ ನಡೆದಿದೆ.

    ಭಾನುವಾರ ರಾತ್ರಿ ಬನ್ನೇರುಘಟ್ಟ ಅರಣ್ಯ ಪ್ರದೇಶದಿಂದ ಬಂದಿರುವ ಆನೆಗಳ ಹಿಂಡಿನಲ್ಲಿ ಒಂದು ಗರ್ಭಿಣಿ ಆನೆಯೂ ಬಂದಿದ್ದು, ಆನೆಗೆ ಹೆರಿಗೆ ಬೇನೆ ಕಾಣಿಸಿಕೊಂಡಿದೆ. ಈ ವೇಳೆ ಕೆರೆಗೆ ಇಳಿದಿರುವ ಆನೆ ಮರಿಗೆ ಜನ್ಮ ನೀಡಿದೆ. ನಂತರ ಕೆರೆಯಲ್ಲಿಯೇ ಸಾವನ್ನಪ್ಪಿದೆ.

    ಖಾಯಿಲೆಯಿಂದ ಆನೆ ಸಾವನ್ನಪ್ಪಿರುವ ಶಂಕೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಸದ್ಯ ಕೆರೆಯಲ್ಲಿದ್ದ ಆನೆಯ ಮೃತ ದೇಹವನ್ನ ಅರಣ್ಯ ಇಲಾಖೆ ಅಧಿಕಾರಿಗಳು ಜೆಸಿಬಿ ಯಂತ್ರ ಬಳಸಿ ಕೆರೆಯಿಂದ ಹೊರಗೆ ಎಳೆದಿದ್ದಾರೆ.

    ಜನ್ಮ ಪಡೆದ ಮರಿಯಾನೆ ಹಿಂಡಾನೆಗಳ ಜೊತೆ ಬನ್ನೇರುಘಟ್ಟ ಅರಣ್ಯಪ್ರದೇಶಕ್ಕೆ ತೆರಳಿದೆ ಎನ್ನಲಾಗಿದೆ. ಆನೆ ಯಾವ ಕಾರಣದಿಂದ ಸಾವನ್ನಪ್ಪಿದೆ ಎಂಬುದಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಮರಣೋತ್ತರ ಪರೀಕ್ಷೆ ನಡೆಸಲು ಮುಂದಾಗಿದ್ದು, ಬನ್ನೇರುಘಟ್ಟ ವೈದ್ಯರ ತಂಡ ಚಿಲಂದವಾಡಿ ಮೀಸಲು ಅರಣ್ಯಕ್ಕೆ ಭೇಟಿ ನೀಡಿದೆ.

  • ಮಗಳು ಓಡಿಹೋದಳೆಂದು ತಾಯಿ ಆತ್ಮಹತ್ಯೆ- ಸುದ್ದಿ ತಿಳಿದು ಪ್ರೇಮಿಗಳೂ ನೇಣಿಗೆ ಶರಣು

    ಮಗಳು ಓಡಿಹೋದಳೆಂದು ತಾಯಿ ಆತ್ಮಹತ್ಯೆ- ಸುದ್ದಿ ತಿಳಿದು ಪ್ರೇಮಿಗಳೂ ನೇಣಿಗೆ ಶರಣು

    ರಾಮನಗರ: ನೇಣು ಬಿಗಿದುಕೊಂಡು ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ಕೆ. ಗೊಲ್ಲಳ್ಳಿ ಗ್ರಾಮದಲ್ಲಿ ನಡೆದಿದೆ.

    ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಹಳೆಊರು ಗ್ರಾಮದವರಾದ ವೇಣು(25) ಹಾಗೂ ದಿವ್ಯಾ(22) ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು. ಇವರಿಬ್ಬರು 4 ವರ್ಷಗಳಿಂದ ಪ್ರೀತಿಸುತ್ತಿದ್ದು, ಈ ಬಗ್ಗೆ ಮನೆಯವರಿಗೆ ವಿಚಾರ ಗೊತ್ತಾಗಿತ್ತು. ಆದರೆ ಎರಡು ಮನೆಯವರು ಇವರ ಪ್ರೀತಿಗೆ ನಿರಾಕರಿಸಿದ್ದಾರೆ. ಅಲ್ಲದೇ ಜಗಳ, ಗಲಾಟೆಗಳು ಕೂಡ ನಡೆದಿವೆ.

    ಗಲಾಟೆ ನಡೆದಿದ್ದರಿಂದ ಭಯಗೊಂಡು ವೇಣು ಮತ್ತು ದಿವ್ಯಾ ಮದುವೆಯಾಗಲು ಶುಕ್ರವಾರ ಕಗ್ಗಲಿಪುರದ ಶಶಿ ಎಂಬ ಸ್ನೇಹಿತನ ಮನೆಗೆ ಹೋಗಿದ್ದು, ಅಲ್ಲೇ ತಂಗಿದ್ದಾರೆ. ಮಗಳು ಓಡಿ ಹೋದ ವಿಚಾರ ತಿಳಿದ ದಿವ್ಯ ತಾಯಿ ಶಾಂತಮ್ಮ ಶನಿವಾರ ಗ್ರಾಮದಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ಇತ್ತ ತಾಯಿಯ ಸಾವಿನ ಸುದ್ದಿ ಕೇಳಿ ಭಯಗೊಂಡ ಪ್ರೇಮಿಗಳು ಭಾನುವಾರ ಸಂಜೆ ಒಟ್ಟಿಗೆ ನೇಣಿಗೆ ಶರಣಾಗಿದ್ದಾರೆ.

    ಈ ಘಟನೆ ಸಂಬಂಧ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.