Tag: Ramanagara Town Police

  • ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ಲಕ್ಷಾಂತರ ರೂ. ವಂಚನೆ – ನಿವೃತ್ತ ಲೋಕೋಪೈಲೆಟ್ ಅರೆಸ್ಟ್

    ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ಲಕ್ಷಾಂತರ ರೂ. ವಂಚನೆ – ನಿವೃತ್ತ ಲೋಕೋಪೈಲೆಟ್ ಅರೆಸ್ಟ್

    ರಾಮನಗರ: ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ನಿವೃತ್ತ ಲೋಕೋಪೈಲೆಟ್ ಒಬ್ಬರು ಲಕ್ಷಾಂತರ ರೂ. ಹಣ ವಂಚನೆ ಮಾಡಿರುವ ಘಟನೆ ರಾಮನಗರದ (Ramanagara) ಮಂಜುನಾಥ ಬಡಾವಣೆಯಲ್ಲಿ ನಡೆದಿದೆ.

    ನಿವೃತ್ತ ಲೋಕೋಪೈಲೆಟ್ ಶಿವಕುಮಾರ್ (71) ಬಂಧಿತ ಆರೋಪಿ. ರಾಮನಗರದ ಮಂಜುನಾಥ ಬಡಾವಣೆ ನಿವಾಸಿ ಶಿವಕುಮಾರ್, ನನಗೆ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಗೊತ್ತು, ನಿಮ್ಮ ಮಕ್ಕಳಿಗೆ ಕೆಲಸ ಕೊಡಿಸುತ್ತೇನೆ ಎಂದು ಹೇಳಿ ಸಾವಿತ್ರಮ್ಮ ಹಾಗೂ ಶಿವಣ್ಣ ಎಂಬುವವರಿಂದ 15 ಲಕ್ಷ ರೂ.ಗೂ ಹೆಚ್ಚು ಹಣ ಪಡೆದಿದ್ದರು. ಇದನ್ನೂ ಓದಿ: ಚಿತ್ರದುರ್ಗ ವರ್ಷಿತಾ ಕೊಲೆ ಪ್ರಕರಣ; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ: ಪರಮೇಶ್ವರ್

    ಬಳಿಕ ನಕಲಿ ಸೀಲು ಹಾಗೂ ಸೈನ್ ಬಳಸಿ ಹಣ ಕೊಟ್ಟವರಿಗೆ ಪತ್ರ ಬರೆದಿದ್ದ ಶಿವಕುಮಾರ್, ಇನ್ನೆರಡು ತಿಂಗಳಲ್ಲಿ ನೇಮಕಾತಿ ಪತ್ರ ಬರುತ್ತೆ ಎಂದು ಸುಳ್ಳು ಹೇಳಿದ್ದರು. ಎರಡು ತಿಂಗಳಾದರೂ ಯಾವುದೇ ನೇಮಕಾತಿ ಪತ್ರ ಬಾರದ ಹಿನ್ನೆಲೆ ಹಣ ಕೊಟ್ಟ ಸಾವಿತ್ರಮ್ಮ ಮತ್ತು ಶಿವಣ್ಣ ಅವರು ಶಿವಕುಮಾರ್‌ರನ್ನ ಸಂಪರ್ಕಿಸಲು ಮುಂದಾದಾಗ ಶಿವಕುಮಾರ್ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಇದನ್ನೂ ಓದಿ: ಯಾವುದೇ ಕ್ಷಣದಲ್ಲಿ ಯೂಟ್ಯೂಬರ್‌ ಸಮೀರ್‌ ಅರೆಸ್ಟ್‌ ಸಾಧ್ಯತೆ

    ಈ ಬಗ್ಗೆ ವಿಚಾರಿಸಿದಾಗ ವಂಚನೆ ಆಗಿರೋದು ಬೆಳಕಿಗೆ ಬಂದಿದ್ದು, ಈ ಸಂಬಂಧ ರಾಮನಗರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣದ ತನಿಖೆ ನಡೆಸಿ ಪೊಲೀಸರು, ಆರೋಪಿ ಶಿವಕುಮಾರ್‌ನನ್ನ ಬಂಧಿಸಿದ್ದಾರೆ.

  • ರಾಮನಗರ| ಆಯುಧಪೂಜೆಯಲ್ಲಿ ರೌಡಿಶೀಟರ್‌ಗಳನ್ನು ಸನ್ಮಾನಿಸಿದ ಪೊಲೀಸರು

    ರಾಮನಗರ| ಆಯುಧಪೂಜೆಯಲ್ಲಿ ರೌಡಿಶೀಟರ್‌ಗಳನ್ನು ಸನ್ಮಾನಿಸಿದ ಪೊಲೀಸರು

    – ದಲಿತ ಸಂಘಟನೆಯಿಂದ ಗೃಹಸಚಿವರಿಗೆ ದೂರು

    ರಾಮನಗರ: ಕಾನೂನು ಸುವ್ಯವಸ್ಥೆ ಕಾಪಾಡುವುದರೊಂದಿಗೆ ರೌಡಿಶೀಟರ್‌ಗಳ (Rowdysheetars) ಹೆಡೆಮುರಿ ಕಟ್ಟಬೇಕಿದ್ದ ಪೊಲೀಸರು ಠಾಣೆಯಲ್ಲೇ ಇಬ್ಬರು ರೌಡಿಶೀಟರ್‌ಗಳಿಗೆ ಹಾರಹಾಕಿ ಸನ್ಮಾನಿಸಿದ ಘಟನೆ ರಾಮನಗರದ (Ramanagara) ಪುರ ಪೊಲೀಸ್ ಠಾಣೆಯಲ್ಲಿ ನಡೆದಿದೆ.

    ಕಳೆದ ಅ.18ರಂದು ಟೌನ್ ಪೊಲೀಸ್ ಠಾಣೆಯಲ್ಲಿ ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಠಾಣೆಯಲ್ಲಿ ಆಯುಧಪೂಜೆ (Ayudha Pooja) ಕಾರ್ಯಕ್ರಮದ ವೇಳೆ ಒಂದಷ್ಟು ಗಣ್ಯರನ್ನು ಸನ್ಮಾನಿಸಿ ಗೌರವಿಸುವುದನ್ನು ವಾಡಿಕೆ ಮಾಡಿಕೊಂಡಿರುವ ಪೊಲೀಸರು, ಗಣ್ಯರ ಹೆಸರಿನಲ್ಲಿ ರೌಡಿಶೀಟರ್‌ಗಳಾದ ಅಜ್ಜದ್ ಹಾಗೂ ಅಂಜದ್ ಎನ್ನುವವರಿಗೆ ಹಾರ, ಶಾಲು ಹಾಕಿ ಸನ್ಮಾನ ಮಾಡಿ ಫೋಟೊಗೆ ಪೋಸ್ ನೀಡಿದ್ದಾರೆ. ಇದನ್ನೂ ಓದಿ: ನಮ್ಮ ದೇಶದಲ್ಲಿ ಸಂವಿಧಾನ ವಿರೋಧಿಗಳೂ ಇದ್ದಾರೆ, ನಾವು ಎಚ್ಚರಿಕೆಯಿಂದ ಇರಬೇಕು: ಸಿಎಂ

    ಸದ್ಯ ಈ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಾನೂನು ಸುವ್ಯವಸ್ಥೆ ಕಾಪಾಡಬೇಕಿರುವ ಪೊಲೀಸರೇ ರೌಡಿಶೀಟರ್‌ಗಳಿಗೆ ಸನ್ಮಾನಿಸಿರುವುದು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಟೀಕೆಗೆ ಗುರಿಯಾಗಿದೆ. ರೌಡಿಶೀಟರ್‌ಗಳಿಗೆ ಸತ್ಕರಿಸುವ ಪೊಲೀಸರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ದಲಿತ ಸಂಘಟನೆಗಳು ಗೃಹಸಚಿವರಿಗೆ ಹಾಗೂ ರಾಜ್ಯಪಾಲರಿಗೆ ಪತ್ರ ಬರೆದಿದ್ದು, ಕ್ರಮಕ್ಕಾಗಿ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಕಲಬೆರಕೆ ಸೇಂದಿ ಮಾರಾಟ ಮಾಡುತ್ತಿದ್ದ ದಂಪತಿ ಬಂಧನ – 400 ಲೀಟರ್ ಸೇಂದಿ ಜಪ್ತಿ