Tag: ramamurthynagar

  • ಜ್ವರವೆಂದು ಆಸ್ಪತ್ರೆಗೆ ಅಡ್ಮಿಟ್ ಆದ ಯುವಕ ಸಾವು- ವೈದ್ಯರ ನಿರ್ಲಕ್ಷ್ಯ ಆರೋಪ

    ಜ್ವರವೆಂದು ಆಸ್ಪತ್ರೆಗೆ ಅಡ್ಮಿಟ್ ಆದ ಯುವಕ ಸಾವು- ವೈದ್ಯರ ನಿರ್ಲಕ್ಷ್ಯ ಆರೋಪ

    ಬೆಂಗಳೂರು: ಕಣ್ತುಂಬ ಕನಸು, ಜೀವನದ ಬಗ್ಗೆ ನೂರೆಂಟು ಆಸೆ. ಬದುಕಿ ಬಾಳಬೇಕಿದ್ದ ಜೀವ, ಕುಟುಂಬಕ್ಕೆ ಆಸರೆಯಾಗಬೇಕಿದ್ದವ ಇಂದು ಮಸಣ ಸೇರಿದ್ದಾನೆ.

    ಹೌದು, ಬೆಂಗಳೂರಿನ ರಾಮಮೂರ್ತಿ ನಗರ (Ramamurthynagar) ದ ನಿವಾಸಿ ವಿಜೇತ್ (24) ಓದು ಮುಗಿಸಿ ಕೆಲಸಕ್ಕೆ ಸೇರಿ ಒಂದು ತಿಂಗಳಾಗಿದೆ ಅಷ್ಟೇ. ಆದರೆ ವೈದ್ಯರ ನಿರ್ಲಕ್ಷ್ಯದಿಂದ ಇಂದು ಪ್ರಾಣಬಿಟ್ಟಿದ್ದಾನೆ ಅಂತ ವಿಜೇತ್ ಕುಟುಂಬ ಆರೋಪಿಸಿದೆ. ಇದನ್ನೂ ಓದಿ: ಹೆಂಡತಿ ಮಕ್ಕಳನ್ನು ಕೊಂದು ತಾನೂ ಕೈ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನ

    ಮೊನ್ನೆ ಜ್ವರ ಬಂದಿದೆ ಅಂತಾ ವಿಜೇತ್ ಕ್ಲಿನಿಕ್‍ಗೆ ತೆರಳಿ ಇಂಜೆಕ್ಷನ್ ಹಾಕಿಸಿಕೊಂಡಿದ್ದ. ಅದು ಸೆಪ್ಟಿಕ್ ಆಗಿದೆ. ತಕ್ಷಣ ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಆಸ್ಪತ್ರೆಯವರು ಸರ್ಜರಿ ಮಾಡಬೇಕು ಅಂತಾ ಹೇಳಿ ಸರ್ಜರಿ ಮಾಡಿದ್ದಾರೆ. ಆದರೆ ಕುಟುಂಬಸ್ಥರ ಆರೋಪದ ಪ್ರಕಾರ ಸರ್ಜರಿ ವೇಳೆಯಲ್ಲಿ ತೀವ್ರ ರಕ್ತಸ್ರಾವವಾಗಿದೆ. ಆಮೇಲೆ ತರಾತುರಿಯಲ್ಲಿ ರಕ್ತ ತರುವಂತೆ ಕುಟುಂಬಸ್ಥರಿಗೆ ವೈದ್ಯರು ಹೇಳಿದ್ರಂತೆ. ಆದರೆ ಬ್ಲಡ್ ತರುವಷ್ಟರಲ್ಲಿ ವಿಜೇತ್ ಸಾವನ್ನಪ್ಪಿದ್ದಾನೆ ಅಂತ ಕುಟುಂಬಸ್ಥರು ಆರೋಪಿಸಿದ್ದಾರೆ.

    ವಿಜೇತ್ ಸಾವಿಗೆ ವೈದ್ಯರ ನಿರ್ಲಕ್ಷ್ಯ ಅಂತಾ ಆರೋಪಿಸಿ ಕುಟುಂಬಸ್ಥರು ಆಸ್ಪತ್ರೆಯಲ್ಲಿ ಗಲಾಟೆ ಮಾಡಿದ್ರು. ಆಸ್ಪತ್ರೆಯ ಗಾಜನ್ನು ಪುಡಿ ಮಾಡಿದ್ದಾರೆ. ಮನೆ ಮಗನ ಸಾವಿಗೆ ಇಡೀ ಕುಟುಂಬಸ್ಥರು ಕಣ್ಣೀರು ಹಾಕಿ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು. ಆದರೆ ವಿಜೇತ್ ಸಾವಿನ ಬಗ್ಗೆ ಆಸ್ಪತ್ರೆಯವರು ಕಾರಣ ಬೇರೆ ನೀಡುತ್ತಿದ್ದಾರೆ. ಹೀಗಾಗಿ ಸಿಟ್ಟಿಗೆದ್ದ ಕುಟುಂಬಸ್ಥರು ರಾಮಮೂರ್ತಿ ನಗರ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ. ಆಸ್ಪತ್ರೆಯ ನಿರ್ಲಕ್ಷ್ಯದ ಬಗ್ಗೆ ಸರಿಯಾದ ತನಿಖೆ ಯಾಗಬೇಕು ಅಂತಾ ಕುಟುಂಬಸ್ಥರು ಆಗ್ರಹಿಸಿದ್ದಾರೆ.

    ಜ್ವರ ಬಂತು ಹೋದ ಯುವಕ ಸಾವಿನ ಮನೆ ಸೇರಿದ್ದಾನೆ. ಇಡೀ ಮನೆಗೆ ಆಧಾರವಾಗಿದ್ದ ಮನೆ ಮಗನನ್ನು ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿತ್ತು.

  • ಪತಿಯ ಅನೈತಿಕ ಸಂಬಂಧಕ್ಕೆ ಬೇಸತ್ತು ಪತ್ನಿ ಆತ್ಮಹತ್ಯೆ- ಅಮ್ಮನ ಶವದ ಮುಂದೆ ಪುಟ್ಟ ಮಕ್ಕಳ ಗೋಳಾಟ

    ಪತಿಯ ಅನೈತಿಕ ಸಂಬಂಧಕ್ಕೆ ಬೇಸತ್ತು ಪತ್ನಿ ಆತ್ಮಹತ್ಯೆ- ಅಮ್ಮನ ಶವದ ಮುಂದೆ ಪುಟ್ಟ ಮಕ್ಕಳ ಗೋಳಾಟ

    ಬೆಂಗಳೂರು: ಅದು ರಾಜಸ್ಥಾನ (Rajasthan) ಮೂಲದ ಪುಟ್ಟ ಕುಟುಂಬ. ಬೆಂಗಳೂರಿನಲ್ಲಿ ನೆಲೆಸಿದ್ದ ಆ ಕುಟುಂಬದಲ್ಲಿ ಪತಿ, ಪತ್ನಿ, ಇಬ್ಬರು ಮುದ್ದಾದ ಮಕ್ಕಳು. ಖುಷಿಗೇನು ಕಡಿಮೆಯಿಲ್ಲದ ಟೈಂನಲ್ಲಿ ಪತಿ ಮಾಡಿದ ಅದೊಂದು ನಂಬಿಕೆ ದ್ರೋಹದಿಂದ ಪತ್ನಿ ನೇಣಿಗೆ ಶರಣಾಗಿದ್ರೆ, ಇಬ್ಬರು ಮಕ್ಕಳು ಅನಾಥವಾಗಿವೆ.

    ರಾಜಸ್ಥಾನ ಮೂಲದ ನರೇಂದ್ರಸಿಂಗ್ ಮತ್ತು ಚಂದಾ ಪುರೋಹಿತ್ 10 ವರ್ಷಗಳ ಹಿಂದೆ ಮದುವೆಯಾಗಿ ಬೆಂಗಳೂರಿಗೆ ಬಂದಿದ್ದರು. ಸ್ಟೀಟ್ ಅಂಗಡಿ ತೆರೆದು ರಾಮಮೂರ್ತಿನಗರದಲ್ಲಿ ಜೀವನ ಕಟ್ಟಿಕೊಂಡಿದ್ರು. ದಂಪತಿಗೆ ಮುದ್ದಾದ ಇಬ್ಬರು ಗಂಡುಮಕ್ಕಳು ಕೂಡ ಇದ್ದಾರೆ. ಪ್ರೀತಿಯಿಂದ ನೋಡ್ಕೊಳ್ಳೋ ಗಂಡ, ಸದಾ ಖುಷಿ ಹಂಚುವ ಮಕ್ಕಳು. ಹೀಗೆ ಖುಷಿಯಾಗಿದ್ದ ವೇಳೆ ಪತಿ ನರೇಂದ್ರಸಿಂಗ್‍ಗೆ ಅವಳೊಬ್ಬಳ ಪರಿಚಯವಾಗಿ, ಆ ಪರಿಚಯ ಅನೈತಿಕ ಸಂಬಂಧವಾಗಿ ಬದಲಾಗಿತ್ತು. ಗಂಡನ ಅಕ್ರಮ ಸಂಬಂಧ ಹೆಂಡತಿ ಚಂದಾಗೆ ಗೊತ್ತಾಗೋಕೆ ಹೆಚ್ಚು ದಿನ ಹಿಡಿಯಲಿಲ್ಲ. ಇದೇ ವಿಚಾರಕ್ಕೆ ಆಗಾಗ ಮನೆಯಲ್ಲಿ ಗಲಾಟೆಯಾಗ್ತಿತ್ತು. ಇದನ್ನೂ ಓದಿ: ಕೇರಳ ನರಬಲಿ ಪ್ರಕರಣ – ನರಭಕ್ಷಕರ ಜಾಡು ಹಿಡಿದಿದ್ದು ಹೀಗೆ

    ಮೊದ ಮೊದಲು, ಆ ಯುವತಿಯ ಜೊತೆಗೆ ಓಡಾಡುತ್ತಿದ್ದ ಗಂಡ ನರೇಂದ್ರಸಿಂಗ್, ನಂತರದ ದಿನಗಳಲ್ಲಿ ಹೆಂಡತಿ ಮಕ್ಕಳನ್ನು ಬಿಟ್ಟು ದೂರದ ಊರುಗಳಿಗೆ ಟ್ರಿಪ್ (Trip) ಹೋಗೋ ಮಟ್ಟಕ್ಕೆ ಬಂದಿದ್ದ. ಈ ಸಂಬಂಧ ಸಾಕಷ್ಟು ಬಾರಿ ರಾಜಿ ಪಂಚಾಯ್ತಿ ಮಾಡಿದ್ರು. ಗಂಡ ಮಾತ್ರ ನಾನು ಇರೋದೇ ಹೀಗೆ ಅನ್ನೋ ರೀತಿ ವರ್ತಿಸಿದ್ದ. ಇದರಿಂದ ಬೇಸತ್ತ ಪತ್ನಿ ಚಂದಾಪುರೋಹಿತ್, ಕಳೆದ ಶನಿವಾರ ಮನೆಯಲ್ಲೇ ನೇಣಿಗೆ ಶರಣಾಗಿದ್ಳು. ಎಂದಿನಂತೆ ಬೆಳಗ್ಗೆ ಎದ್ದ ಮಕ್ಕಳು ಅಮ್ಮನ ಹುಡುಕಾಟ ನಡೆಸಿದರು. ಆದರೆ ಸತ್ತು ಮಲಗಿದ್ದ ಅಮ್ಮನನ್ನು ನೋಡಿದ ಮಕ್ಕಳು, ಸಾವನ್ನಪ್ಪಿದ್ದಾಳೆ ಅನ್ನೋ ಸಣ್ಣ ಅರಿವಿಲ್ಲದಂತೆ ಅಮ್ಮನ ಎದ್ದೇಳಿಸುವ ಪ್ರಯತ್ನದಲ್ಲಿ ಗೋಳಾಡುತ್ತಿದ್ದು, ಅಲ್ಲಿದ್ದವರ ಕಣ್ಣನ್ನು ಒದ್ದೆ ಮಾಡುವಂತೆ ಮಾಡಿದವು.

    ವಿಷಯ ತಿಳಿದು ಸ್ಥಳಕ್ಕೆ ಬಂದ ರಾಮಮೂರ್ತಿನಗರ ಪೊಲೀಸರು, ಪತಿ ನರೇಂದ್ರಸಿಂಗ್‍ನನ್ನು ಬಂಧಿಸಿದ್ದಾರೆ. ಮೃತ ಚಂದಾಪೋರೋಹಿತ್ ಪೋಷಕರು (Parents) ಇದು ಆತ್ಮಹತ್ಯೆ ಅಲ್ಲ, ಕೊಲೆ ಅಂತಾ ಆರೋಪಿಸಿದ್ದಾರೆ. ಅಪ್ಪ ಜೈಲು ಸೇರಿದ್ರೆ, ಅಮ್ಮ ಬಾರದ ಲೋಕಕ್ಕೆ ಪಯಣ ಬೆಳಸಿದ್ದಾಳೆ. ಈ ಮಧ್ಯೆ ಪುಟ್ಟ ಮಕ್ಕಳು ಅನಾಥವಾಗಿದ್ದು ಮಾತ್ರ ದುರಂತ. ಇದನ್ನೂ ಓದಿ: ಪಾಕ್ ಪ್ರವಾಹ ಸಂತ್ರಸ್ತರನ್ನು ಹೊತ್ತೊಯ್ಯುತ್ತಿದ್ದ ಬಸ್‌ಗೆ ಬೆಂಕಿ- 18 ಮಂದಿ ದುರ್ಮರಣ

    Live Tv
    [brid partner=56869869 player=32851 video=960834 autoplay=true]

  • ಪತ್ನಿಯ ಅಣ್ಣನ ಹೆಂಡತಿಯ ಕತ್ತು ಸೀಳಿ ತಾನೂ ಆತ್ಮಹತ್ಯೆಗೆ ಯತ್ನಿಸಿದ!

    ಪತ್ನಿಯ ಅಣ್ಣನ ಹೆಂಡತಿಯ ಕತ್ತು ಸೀಳಿ ತಾನೂ ಆತ್ಮಹತ್ಯೆಗೆ ಯತ್ನಿಸಿದ!

    ಬೆಂಗಳೂರು: ವ್ಯಕ್ತಿಯೊಬ್ಬ ತನ್ನ ಪತ್ನಿಯ ಅಣ್ಣನ ಹೆಂಡತಿಯನ್ನು ಬರ್ಬರವಾಗಿ ಕೊಲೆಗೈದು ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ಮೃತ ದುರ್ದೈವಿ ಮಹಿಳೆಯನ್ನು ಲಾವಣ್ಯ(37) ಎಂದು ಗುರುತಿಸಲಾಗಿದೆ. ಈಕೆಯನ್ನು ವಿಜಯ್ ಕುಮಾರ್ ಕೊಲೆ ಮಾಡಿದ್ದಾನೆ. ಈ ಘಟನೆ ಟಿನ್ ಫ್ಯಾಕ್ಟರಿ ಬಳಿಯ ಅಪಾರ್ಟ್ ಮೆಂಟ್ ನಲ್ಲಿ ನಡೆದಿದೆ.

    ಮೃತ ಲಾವಣ್ಯ ಪತಿಯ ತಂಗಿಯನ್ನ ವಿಜಯಕುಮಾರ್ ಮದುವೆಯಾಗಿದ್ದ. ಬಳಿಕ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ. ಈ ವಿಚಾರವಾಗಿ ಇಂದು ಆರೋಪಿ ವಿಜಯಕುಮಾರ್ ನನ್ನು ಮಾತುಕತೆಗೆ ಕರೆಯಲಾಗಿತ್ತು. ಈ ವೇಳೆ ಮಾತಿನ ಚಕಮಕಿಯಾಗಿ ಗಲಾಟೆ ನಡೆದಿದೆ.

    ಗಲಾಟೆಯ ವೇಳೆ ಸಿಟ್ಟಿಗೆದ್ದ ವಿಜಯಕುಮಾರ್ ಅಲ್ಲೇ ಇದ್ದ ಲಾವಣ್ಯ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾರೆ. ಪರಿಣಾಮ ಲಾವಣ್ಯ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ವಿಚಾರ ಗೊತ್ತಾಗುತ್ತಿದ್ದಂತೆಯೇ ಆರೋಪಿ ಕೂಡ ಅದೇ ಚಾಕುವಿನಿಂದ ಕುಯ್ದುಕೊಂಡು ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಆರೋಪಿ ವಿಜಯ್ ಕುಮಾರ್ ನನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿ, ಚಿಕಿತ್ಸೆ ನೀಡಲಾಗುತ್ತಿದೆ.

    ಸ್ಥಳಕ್ಕೆ ರಾಮಮೂರ್ತಿ ನಗರ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.