Tag: Ramamurthy

  • ರಾಜ್ಯದಲ್ಲಿರುವ ಫ್ಲೈಓವರ್‌ಗಳ ಸುರಕ್ಷತೆ ಬಗ್ಗೆ ತಪಾಸಣೆ ನಡೆಸಿ – ರಾಜ್ಯಸಭೆಯಲ್ಲಿ ಕೆ.ಸಿ ರಾಮಮೂರ್ತಿ ಒತ್ತಾಯ

    ರಾಜ್ಯದಲ್ಲಿರುವ ಫ್ಲೈಓವರ್‌ಗಳ ಸುರಕ್ಷತೆ ಬಗ್ಗೆ ತಪಾಸಣೆ ನಡೆಸಿ – ರಾಜ್ಯಸಭೆಯಲ್ಲಿ ಕೆ.ಸಿ ರಾಮಮೂರ್ತಿ ಒತ್ತಾಯ

    ನವದೆಹಲಿ: ರಾಜ್ಯದ ಫ್ಲೈಓವರ್‌ಗಳ ಸುರಕ್ಷತೆ ಬಗ್ಗೆ ಸೂಕ್ತ ಪರಿಶೀಲನೆ ನಡೆಸಿ ಕ್ರಮ ತೆಗೆದುಕೊಳ್ಳುವ ಅಗತ್ಯವಿದೆ. ಈ ಹಿನ್ನಲೆ ಕೂಡಲೇ ಕೇಂದ್ರ ಸರ್ಕಾರ ತಜ್ಞರ ತಂಡವೊಂದನ್ನು ರಾಜ್ಯ ಕಳುಹಿಸಬೇಕು ಎಂದು ಸಂಸದ ಕೆ.ಸಿ. ರಾಮಮೂರ್ತಿ ರಾಜ್ಯಸಭೆಯಲ್ಲಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

    ರಾಜ್ಯಸಭೆಯ ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿದ ಕೆ.ಸಿ ರಾಮಮೂರ್ತಿ ರಾಜ್ಯದ ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ಫ್ಲೈಓವರ್‌ಗಳ ಸುರಕ್ಷತೆ ಬಗ್ಗೆ ಆತಂಕ ಶುರುವಾಗಿದೆ. ಅದರಲ್ಲೂ ಬೆಂಗಳೂರಿನ ದೊಡ್ಡ ಫೈಓವರ್ ಆಗಿರುವ ಗೊರಗುಂಟೆಪಾಳ್ಯ – ನಾಗಸಂದ್ರ ಫ್ಲೈಓವರ್ ಸುರಕ್ಷಿತವಾಗಿಲ್ಲ. ಬಿರುಕು ಕಂಡು ಬಂದಿದ್ದು ಭಾರೀ ವಾಹನಗಳ ಸಂಚಾರಕ್ಕೆ ಸೂಕ್ತವಾಗಿಲ್ಲ ಎಂದು ತಜ್ಞರು ಹೇಳಿದ್ದಾರೆ. ಇದನ್ನೂ ಓದಿ : ಅಭಿಮಾನಿಗಳ ಒತ್ತಡಕ್ಕೆ ಕೊನೆಗೂ ಮಣಿದ ‘ವಿಕ್ರಾಂತ್ ರೋಣ’ :ಏಪ್ರಿಲ್ ಮೊದಲ ವಾರದಲ್ಲಿ ಟೀಸರ್

    ಈ ಫ್ಲೈಓವರ್ ಕಳೆದ 12 ವರ್ಷದ ಹಿಂದೆ ನಿರ್ಮಿಸಲಾಗಿತ್ತು. ಜನರ ತೆರಿಗೆ ಹಣದಿಂದ ಹೆಚ್ಚು ಹಣ ಖರ್ಚು ಮಾಡಿ ನಿರ್ಮಿಸಲಾಗಿತ್ತು. ಈಗ ಫ್ಲೈಓವರ್ ಸುರಕ್ಷಿತವಾಗಿಲ್ಲ, ಸುರಕ್ಷಿತವಾಗಿಲ್ಲದಿರುವುದು ಆಘಾತಕಾರಿ ವಿಚಾರವಾಗಿದೆ. ಫ್ಲೈಓವರ್ ನಿರ್ಮಾಣದ ವೇಳೆ ಏಜೆನ್ಸಿ ಮತ್ತು ಗುತ್ತಿಗೆದಾರರು ಗುಣಮಟ್ಟ ಒತ್ತು ನೀಡಿಲ್ಲ. ದೇಶಾದ್ಯಂತ ಫ್ಲೈಓವರ್ ದುರಂತಗಳು ಸಂಭವಿಸುತ್ತಿವೆ ಆಗಾಗ್ಗೆ ಕಾಮಗಾರಿಗಾಗಿ ಫ್ಲೈಓವರ್ ಬಂದ್ ಮಾಡಲಾಗುತ್ತಿದೆ. ಇದನ್ನೂ ಓದಿ : ಕೆಜಿಎಫ್ 2 ಟ್ರೈಲರ್ ಬಿಡುಗಡೆಗೆ ಹೋಸ್ಟ್ ಮಾಡಲಿದ್ದಾರೆ ಕರಣ್ ಜೋಹಾರ್

    ಇದರಿಂದ ಜನರಿಗೆ ಸಮಸ್ಯೆ ಆಗುವುದರ ಜೊತೆಗೆ ಆರ್ಥಿಕ ಚಟುವಟಿಕೆಗಳಿಗೂ ಹೊಡೆತ ಬೀಳುತ್ತೆ. ಹಿಂದೆ ಕಟ್ಟುತ್ತಿದ್ದಂತಹ ಫ್ಲೈಓವರ್ ಗಳು ಹೆಚ್ಚು ಗುಣಮಟ್ಟದಿಂದ ಇರುತ್ತಿದ್ದವು. ದೀರ್ಘಕಾಲ ಬಳಕೆ ಮಾಡಿರುವ ಉದಾಹರಣೆಗಳು ಇವೆ. ಆದರೆ ಇತ್ತೀಚಿಗೆ ನಿರ್ಮಾಣ ಮಾಡಿರುವ ಫ್ಲೈಓವರ್‌ಗಳ ಗುಣಮಟ್ಟ ಕಾಪಾಡಿಕೊಂಡಿಲ್ಲ, ದೀರ್ಘ ಬಾಳಿಕೆ ಬರುತ್ತಿಲ್ಲ. ಹೀಗಾಗಿ ಕೇಂದ್ರ ಸರ್ಕಾರ ಈ ಬಗ್ಗೆ ಗಮನಹರಿಸಬೇಕು. ಶೀಘ್ರದಲ್ಲೇ ರಾಜ್ಯಕ್ಕೆ ಕೇಂದ್ರ ಸರ್ಕಾರ ತಜ್ಞರ ತಂಡ ಕಳುಹಿಸಿ ಎಲ್ಲಾ ಫ್ಲೈಓವರ್‌ಗಳ ಪರಿಶೀಲನೆ ಮಾಡಿ ಎಂದು ಒತ್ತಾಯಿಸಿದ್ದಾರೆ.

  • ಕರ್ನಾಟಕದ ರಾಮಮೂರ್ತಿ ರಾಜೀನಾಮೆ – ಮೇಲ್ಮನೆಯಲ್ಲಿ ಬಹುಮತದ ಸನಿಹ ಎನ್‍ಡಿಎ

    ಕರ್ನಾಟಕದ ರಾಮಮೂರ್ತಿ ರಾಜೀನಾಮೆ – ಮೇಲ್ಮನೆಯಲ್ಲಿ ಬಹುಮತದ ಸನಿಹ ಎನ್‍ಡಿಎ

    ನವದೆಹಲಿ: ಲೋಕಸಭೆಯಲ್ಲಿ ಭರ್ಜರಿ ಬಹುಮತ ಹೊಂದಿದ್ದರೂ ರಾಜ್ಯಸಭೆಯಲ್ಲಿ ಕಡಿಮೆ ಸಂಖ್ಯಾಬಲ ಹೊಂದಿದ್ದ ಎನ್‍ಡಿಎ ಈಗ ಮೇಲ್ಮನೆಯಲ್ಲೂ ಬಹುಮತದ ಹತ್ತಿರ ಬಂದಿದೆ.

    ಕರ್ನಾಟಕದ ಸಂಸದ ಕೆ.ಸಿ. ರಾಮ­ಮೂರ್ತಿ ಅವರು ಕಾಂಗ್ರೆಸ್‍ಗೆ ರಾಜೀ­ನಾಮೆ ಘೋಷಿಸಿದ್ದರಿಂದ ರಾಜ್ಯಸಭೆಯಲ್ಲಿ ಕೈ ಪಾಳ­ಯದ ಬಲಾಬಲ 45ಕ್ಕೆ ಕುಸಿದಿದೆ. ಈ ಸ್ಥಾನಕ್ಕಾಗಿ ನಡೆಯುವ ಉಪಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿಯೇ ಅತಿ ದೊಡ್ಡ ಪಕ್ಷವಾಗಿರುವ ಕಾರಣ ಈ ಸ್ಥಾನವನ್ನು ಗೆಲ್ಲುವ ಮೂಲಕ ಬಿಜೆಪಿ ತನ್ನ ರಾಜ್ಯ­ಸಭಾ ಸಂಖ್ಯಾ­ಬಲ 84ಕ್ಕೆ ಹೆಚ್ಚಿಸಿಕೊಳ್ಳಲು ಸಿದ್ಧತೆ ನಡೆಸಿದೆ.

    ಒಟ್ಟು 245 ಸ್ಥಾನಗಳಿರುವ ರಾಜ್ಯಸಭೆಯಲ್ಲಿ ಬಹುಮತಕ್ಕೆ 123 ಸದಸ್ಯರ ಬೆಂಬಲ ಬೇಕು. ಸದ್ಯ ಈಗ ಒಟ್ಟು ಐದು ಸ್ಥಾನಗಳು ಖಾಲಿಯಿದ್ದು, ಎನ್‍ಡಿಎ ಮೈತ್ರಿ­ಕೂಟದ ಒಟ್ಟು ಬಲಾಬಲ 106 ಇದೆ. ಮಹತ್ವದ ಮಸೂದೆ ಚರ್ಚೆಯ ವೇಳೆ ಎಐಎಡಿಎಂಕೆ 11, ಬಿಜೆಡಿ 7, ಟಿಆರ್‍ಎಸ್ 6, ವೈಎಸ್‍ಆರ್ ಕಾಂಗ್ರೆಸ್ 2 ಸೇರಿದಂತೆ ಇನ್ನೂ ಮೂರು ಪ್ರಾದೇ­ಶಿಕ ಪಕ್ಷಗಳ ಸದಸ್ಯರು ಮೋದಿ ಸರ್ಕಾರವನ್ನು ಬೆಂಬಲಿಸಿದ್ದಾರೆ.

    ಬಿಜೆಪಿಯ ಮುಖಂಡರು ಈಗಾಗಲೇ ಪ್ರತಿಪಕ್ಷಗಳಿಂದ ಇನ್ನೂ ಹೆಚ್ಚು ಸಂಸದರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ಭವಿಷ್ಯ ನುಡಿದಿರುವ ಹಿನ್ನೆಲೆಯಲ್ಲಿ ಮತ್ತೆ ಯಾವ ಪಕ್ಷದಿಂದ ಯಾರು ರಾಜೀನಾಮೆ ನೀಡಲಿದ್ದಾರೆ ಎನ್ನುವ ಕುತೂಹಲ ಹೆಚ್ಚಾಗಿದೆ.

    ರಾಜೀನಾಮೆ ನೀಡಿದ ಬಳಿಕ ಪಬ್ಲಿಕ್ ಟಿವಿಗೆ ರಾಮಮೂರ್ತಿ ಪ್ರತಿಕ್ರಿಯಿಸಿ, ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಕಾಂಗ್ರೆಸ್ ಪ್ರಾಥಮಿಕ ಸದಸ್ಯ ಸ್ಥಾನಕ್ಕೂ ರಾಜೀನಾಮೆ ನೀಡಿದ್ದೇನೆ. ರಾಜೀನಾಮೆ ಬಗ್ಗೆ ಸೋನಿಯಗಾಂಧಿ ಅವರ ಗಮನಕ್ಕೆ ತಂದಿದ್ದೇನೆ ಎಂದು ತಿಳಿಸಿದರು.

    ತಕ್ಷಣಕ್ಕೆ ತೆಗೆದುಕೊಂಡಿರುವ ನಿರ್ಧಾರ ಅಲ್ಲ. ಒಂದು ವರ್ಷಕ್ಕೂ ಹೆಚ್ಚು ಸಮಯ ಯೋಚನೆ ಮಾಡಿ ನಿರ್ಧಾರ ತೆಗೆದುಕೊಂಡಿದ್ದೇನೆ. ಈ ಬಗ್ಗೆ ಹಿಂದೆ ಕಾಂಗ್ರೆಸ್ ನಾಯಕರಿಗೆ ತಿಳಿಸಿದ್ದರೂ ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ದೇಶದ ಅಭಿವೃದ್ಧಿಯಲ್ಲಿ ಭಾಗಿಯಾಗುವ ದೃಷ್ಟಿಯಿಂದ ರಾಜೀನಾಮೆ ನೀಡಿದ್ದೇನೆ. ನನ್ನ ಅನುಭವವನ್ನು ಸಮರ್ಪಕವಾಗಿ ಬಳಸಿಕೊಂಡಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಆರೋಪಿಸಿದರು.

    ಬಿಜೆಪಿ ಸೇರುವ ಬಗ್ಗೆ ಒಲವು ಇದೆ. ನನ್ನನ್ನು ಅವರು ಸಮರ್ಪಕವಾಗಿ ಬಳಸಿಕೊಳ್ಳುವುದಾದರೆ ನಾನು ಬಿಜೆಪಿ ಸೇರಲು ಸಿದ್ಧವಾಗಿದ್ದೇನೆ. ಅಮಿತ್ ಶಾ ಅವರನ್ನು ಬೇರೆ ಬೇರೆ ಕಾರಣಗಳಿಗೆ ಭೇಟಿ ಮಾಡಿದ್ದೇನೆ. ಬಿಜೆಪಿ ಕೆಲ ನಾಯಕರನ್ನು ಭೇಟಿ ಮಾಡಿದ್ದೆ. ಬಿಜೆಪಿ ಸೇರುವ ಬಗ್ಗೆ ಇನ್ನು ಮಾತುಕತೆ ಮಾಡಿಲ್ಲ ಮತ್ತು ಈಗಲೇ ಈಗಲೇ ಏನು ಹೇಳಲು ಸಾಧ್ಯವಿಲ್ಲ. ಯಾವುದೇ ಆಮಿಷಗಳಿಗೆ ನಾನು ಬಲಿಯಾಗಿಲ್ಲ ಮತ್ತು ರಾಜೀನಾಮೆ ನೀಡಲು ಯಾವುದೇ ಬೆದರಿಕೆಗಳು ಇಲ್ಲ. ಒಂದೆರಡು ದಿನದಲ್ಲಿ ನನ್ನ ಮುಂದಿನ ನಿರ್ಧಾರ ತಿಳಿಸುತ್ತೇನೆ ಎಂದರು.