Tag: ramalingareddy

  • ಸಜ್ಜನ ರಾಜಕಾರಣಿ ರಾಮಲಿಂಗಾರೆಡ್ಡಿಗೆ ದೇವ್ರು ಒಳ್ಳೆ ಬುದ್ಧಿ ಕೊಟ್ಟು ವಾಪಸ್ ಬರುವಂತೆ ಮಾಡ್ಲಿ- ಉಗ್ರಪ್ಪ

    ಸಜ್ಜನ ರಾಜಕಾರಣಿ ರಾಮಲಿಂಗಾರೆಡ್ಡಿಗೆ ದೇವ್ರು ಒಳ್ಳೆ ಬುದ್ಧಿ ಕೊಟ್ಟು ವಾಪಸ್ ಬರುವಂತೆ ಮಾಡ್ಲಿ- ಉಗ್ರಪ್ಪ

    ಬೆಂಗಳೂರು: ಅತೃಪ್ತ ಶಾಸಕರಲ್ಲೊಬ್ಬರು ಒಬ್ಬರಾದ ರಾಮಲಿಂಗಾ ರೆಡ್ಡಿಯವರು ಒಳ್ಳೆಯ ರಾಜಕಾರಣಿಯಾಗಿದ್ದಾರೆ. ಹೀಗಾಗಿ ಅವರಿಗೆ ದೇವರು ಒಳ್ಳೆಯ ಬುದ್ಧಿ ಕೊಟ್ಟು ವಾಪಸ್ ಬರುವಂತೆ ಮಾಡಲಿ ಎಂದು ಮಾಜಿ ಸಂಸದ ವಿ.ಎಸ್ ಉಗ್ರಪ್ಪ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅತೃಪ್ತರು ರಾಜೀನಾಮೆ ವಾಪಸ್ ಪಡೆದುಕೊಳ್ತಾರೆ. ಈ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯುವಂತಾಗಲಿ ಎಂದು ಆಶೀಸುವುದಾಗಿ ಅವರು ತಿಳಿಸಿದರು.

    ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮುಗಿಸಲು ಏನೆಲ್ಲ ಸಂಚು ಮಾಡಬೇಕೋ ಅದನ್ನೆಲ್ಲ ಬಿಜೆಪಿ ಮಾಡುತ್ತಿದೆ. ಬಿಜೆಪಿಯವರು ಪ್ರಜಾಪ್ರಭುತ್ವದ ಮೌಲ್ಯಗಳು, ಜನಾದೇಶಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ ಅನ್ನೋದು ಇದೆ. ಹಾಗೆ ಎಲ್ಲರಿಗೂ ಒಂದು ಕಾಲ ಬರುತ್ತದೆ ಎಂದು ಗರಂ ಆದರು.

    ಬಿಜೆಪಿಗೆ ಯಾವುದೇ ಪಕ್ಷ ಬೆಂಬಲ ನೀಡಲು ಬಂದಿರಲಿಲ್ಲ. ಹಾಗಾಗಿ ನಾವು ಸರ್ಕಾರ ರಚನೆ ಮಾಡಿದೆವು. ಹೀಗಾಗಿ ಬಿಜೆಪಿಯವರು ಅನ್ಯ, ವಾಮಮಾರ್ಗಗಳನ್ನು ಹಿಡಿದಿದ್ದಾರೆ ಎಂದು ಅವರು ಕಿಡಿಕಾರಿದರು.

    ಕೇಂದ್ರ ಬಜೆಟ್ ನ ಮರುದಿನ ಅಂದರೆ ಶನಿವಾರ ಸಮ್ಮಿಶ್ರ ಸರ್ಕಾರದ 13 ಮಂದಿ ಶಾಸಕರು ರಾಜೀನಾಮೆ ನೀಡಿದ್ದಾರೆ. ಆ ಬಳಿಕ ರಾಮಲಿಂಗಾ ರೆಡ್ಡಿ, ಮುನಿರತ್ನ ಹಾಗೂ ಆನಂದ್ ಸಿಂಗ್ ಹೊರತು ಪಡಿಸಿ ಉಳಿದೆಲ್ಲ ಶಾಸಕರು ಅಂದೇ ಮುಂಬೈಗೆ ಹಾರಿದ್ದಾರೆ. ಅಲ್ಲದೆ ಸ್ಪೀಕರ್ ಅವರು ನಮ್ಮ ರಾಜೀನಾಮೆ ಅಂಗೀಕರಿಸದೇ ನಾವು ಬೆಂಗಳೂರಿಗೆ ವಾಪಸ್ ಆಗುವ ಮಾತೇ ಇಲ್ಲ ಎಂದು ಎಚ್ಚರಿಸಿದ್ದಾರೆ. ಇತ್ತ ಅಸಮಾಧಾನಿತರನ್ನು ಮನವೊಲಿಸುವ ಪ್ರಯತ್ನ ಕೈ-ತೆನೆಯಿಂದ ಭರದಿಂದ ಸಾಗುತ್ತಿದ್ದು, ಕಾಂಗ್ರೆಸ್ಸಿನ ಎಲ್ಲರು ತಮ್ಮ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಅತೃಪ್ತರಿಗೆ ಸಚಿವ ಸ್ಥಾನ ನೀಡುವ ಭರವಸೆಯನ್ನು ನೀಡಲಾಗಿದೆ.

  • ಡೆವಲಪರ್ಸ್, ಗುತ್ತಿಗೆದಾರರಿಂದ ಹಣ ವಸೂಲಿ ಮಾಡಿ ಶಾಸಕರಿಗೆ ಆಫರ್: ಡಿಕೆಶಿ ಬಾಂಬ್

    ಡೆವಲಪರ್ಸ್, ಗುತ್ತಿಗೆದಾರರಿಂದ ಹಣ ವಸೂಲಿ ಮಾಡಿ ಶಾಸಕರಿಗೆ ಆಫರ್: ಡಿಕೆಶಿ ಬಾಂಬ್

    ಬೆಂಗಳೂರು: ಮೈತ್ರಿ ಸರ್ಕಾರ ಶಾಸಕರು ರಾಜೀನಾಮೆ ನೀಡಿದ್ದು, ಅವರ ಮನವೊಲಿಕೆ ಮಾಡುವ ಕಾರ್ಯವನ್ನು ಮಾಡುತ್ತವೆ. ನಾವು ಎಲ್ಲಾ ತ್ಯಾಗಕ್ಕೂ ಸಿದ್ಧವಾಗಿರುತ್ತೇವೆ ಎಂದು ಜಲ ಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.

    ಶಾಸಕರ ರಾಜೀನಾಮೆ ಅಂಗೀಕಾರಕ್ಕೆ ನಿಯಮಗಳಿವೆ. ಅದರಂತೆ ಮುಂದಿನ ಕ್ರಿಯೆ ನಡೆಯುತ್ತದೆ. ಆದರೆ ಶಾಸಕರ ರಾಜೀನಾಮೆ ವಿಚಾರದಲ್ಲಿ ಬಿಜೆಪಿಯವರು ಮೌನವಹಿಸಿದ್ದಾರೆ. ಆದರೆ ಅವರು ಎಷ್ಟು ಹಣವನ್ನು ಡೆವಲಪರ್ಸ್ ಹಾಗೂ ಗುತ್ತಿಗೆದಾರರಿಂದ ವಸೂಲಿ ಮಾಡಿದ್ದಾರೆ ಎಂಬ ಮಾಹಿತಿ ಇದೆ ಎಂದು ಬಾಂಬ್ ಸಿಡಿಸಿದರು.

    ರಾಜೀನಾಮೆ ನೀಡಿರುವ ಶಾಸಕರಲ್ಲಿ ಕೆಲ ಆತ್ಮೀಯರು ಇದ್ದಾರೆ. ಅವರೊಂದಿಗೆ ಮಾತನಾಡಿದ್ದೆನೆ. ಅವರು ಮಾಧ್ಯಮಗಳ ಮುಂದೆ ಯಾವುದೇ ಹೇಳಿಕೆ ನೀಡಿದ್ದರೂ ಕೂಡ ನನ್ನ ಬಳಿ ಮಾತನಾಡಿದ್ದಾರೆ. ಎಷ್ಟೋ ಶಾಸಕರು ಹೋಗಿದ್ದಾರೆ ಬಂದಿದ್ದಾರೆ ಎಂದು ಶಾಸಕರ ಮನವೊಲಿಸುವ ವಿಶ್ವಾಸ ವ್ಯಕ್ತಪಡಿಸಿದರು. ಅಲ್ಲದೇ ಹೋಗುವವರು ಹೋಗುತ್ತಾರೆ ಅವರ್ನು ಹಿಡಿದುಕೊಳ್ಳಲು ಆಗುವುದಿಲ್ಲ. ನನ್ನ ಬಂಡಾಯ ಶಮನ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಕಾದು ನೋಡಿ ಎಂದರು.

  • ಪಕ್ಷ ಬಿಡೋದಕ್ಕೆ ನಮಗೂ ದುಃಖವಾಗಿದೆ: ರಾಮಲಿಂಗಾ ರೆಡ್ಡಿ

    ಪಕ್ಷ ಬಿಡೋದಕ್ಕೆ ನಮಗೂ ದುಃಖವಾಗಿದೆ: ರಾಮಲಿಂಗಾ ರೆಡ್ಡಿ

    ಬೆಂಗಳೂರು: ಪಕ್ಷ ಬಿಟ್ಟು ಹೋಗಲು ನಮಗೂ ತುಂಬಾ ದು:ಖವಾಗುತ್ತಿದೆ. ಆದರೆ ನನಗೆ ಯಾವುದೇ ಕಾಂಗ್ರೆಸ್ ಮುಖಂಡರ ಮೇಲೆ ಬೇಸರವಿಲ್ಲ ಎಂದು ಬಿಟಿಎಂ ಲೇಔಟ್ ಶಾಸಕ ರಾಮಲಿಂಗಾ ರೆಡ್ಡಿ ರಾಜೀನಾಮೆ ಬಗ್ಗೆ ಮಾತನಾಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ರಾಮಲಿಂಗ ರೆಡ್ಡಿ, ನಾನು ಮೊದಲಿನಿಂದ ನಮ್ಮ ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆಯಲ್ಲಿ ತೊಡಗಿಸಿಕೊಳ್ಳುತ್ತಿರಲಿಲ್ಲ. ನಾನು ಈಗ ಬಂದು ರಾಜೀನಾಮೆ ಕೊಡುತ್ತಿದ್ದೇನೆ. ಒಳಗಡೆ ಯಾರೆಲ್ಲ ಇದ್ದಾರೆ ನನಗೆ ಗೊತ್ತಿಲ್ಲ ಎಂದು ಹೇಳಿದರು.

    ಈಶ್ವರ ಖಂಡ್ರೆ ಅವರು, ನೀವೇ ಪಕ್ಷ ಕಟ್ಟಿ ಬೆಳೆಸಿದ್ದೀರಿ, ಪಕ್ಷ ಬಿಡುವುದು ಬೇಡ ಎಂದು ಹೇಳಿದರು. ಆದರೆ ನಾವು ಅವರಿಗೆ ಈ ಹಿಂದೆಯೇ ರಾಜೀನಾಮೆ ಕೊಡಲು ಕಾರಣ ಹೇಳಿದ್ದೇನೆ. ಪಕ್ಷ ಬಿಟ್ಟು ಹೋಗಲು ನಮಗೂ ತುಂಬಾ ದು:ಖವಾಗುತ್ತಿದೆ. ಆದರೆ ನನಗೆ ಯಾವುದೇ ಕಾಂಗ್ರೆಸ್ ಮುಖಂಡರ ಮೇಲೆ ಬೇಸರವಿಲ್ಲ. ಹೀಗಾಗಿ ಈ ಹಿಂದೆಯೇ ರಾಜೀನಾಮೆಯ ಬಗ್ಗೆ ಕಾರಣಗಳನ್ನು ಹೇಳಿದ್ದೇನೆ. ತಕ್ಷಣಕ್ಕೆ ಬೇರೆ ಪಕ್ಷಕ್ಕೆ ಸೇರುವ ಯೋಚನೆ ಮಾಡಿಲ್ಲ ಎಂದು ರಾಮಲಿಂಗಾ ರೆಡ್ಡಿ ಅವರು ರಾಜೀನಾಮೆ ನೀಡಿರುವ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.

    ಈ ವೇಳೆ ರಾಜೀನಾಮೆ ನೀಡಲು ಕಾರಣ ಏನು ಎನ್ನುವುದನ್ನು ಕೇಳಿದ್ದಕ್ಕೆ ಈ ಹಿಂದೆಯೇ ನಾನು ಹಲವಾರು ಸಂದರ್ಭದಲ್ಲಿ ಹೇಳಿದ್ದೇವೆ. ಅದೇ ವಿಡಿಯೋವನ್ನು ಪ್ರಸಾರ ಮಾಡಿ ಎಂದು ತಿಳಿಸಿದರು.

    ಪುತ್ರಿ ಸೌಮ್ಯಾ ರೆಡ್ಡಿ ರಾಜೀನಾಮೆ ನೀಡುತ್ತಾರಾ ಎಂದು ಕೇಳಿದ್ದಕ್ಕೆ, ಈ ವಿಚಾರ ನನಗೆ ಗೊತ್ತಿಲ್ಲ. ನೀವು ಅವರನ್ನೇ ಕೇಳಿ ನೋಡಿ ಎಂದು ತಿಳಿಸಿದರು.

  • ಕಾಂಗ್ರೆಸ್‍ನ ಈ ಸ್ಥಿತಿಗೆ ಹೊಸಬರು, ವಲಸಿಗರೇ ಕಾರಣ- ರಾಮಲಿಂಗಾ ರೆಡ್ಡಿ

    ಕಾಂಗ್ರೆಸ್‍ನ ಈ ಸ್ಥಿತಿಗೆ ಹೊಸಬರು, ವಲಸಿಗರೇ ಕಾರಣ- ರಾಮಲಿಂಗಾ ರೆಡ್ಡಿ

    ಬೆಂಗಳೂರು: ಕಾಂಗ್ರೆಸ್‍ನ ಈ ಸ್ಥಿತಿಗೆ ಹೊಸಬರು, ವಲಸಿಗರೇ ಕಾರಣ ಎಂದು ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ.

    ಸಿದ್ದರಾಮಯ್ಯ ಮತ್ತು ಟೀಂನ್ನೇ ಟಾರ್ಗೆಟ್ ಮಾಡಿ ಟ್ವೀಟ್ ಮಾಡಿರುವ ರಾಮಲಿಂಗಾ ರೆಡ್ಡಿ, ಕಾಂಗ್ರೆಸ್ ಪಕ್ಷದ ಬಗ್ಗೆ ಅರಿವಿಲ್ಲದ ಹೊಸಬರು, ವಲಸಿಗರಿಗೆ ಮಣೆ ಹಾಕಿದ್ದೇ ಕಾರಣವಾಗಿದೆ. ಪಕ್ಷದ ಆಂತರಿಕ ಸಮಸ್ಯೆಗಳನ್ನು ಬಗೆಹರಿಸಲು ಮುಂಚೂಣಿ ನಾಯಕರೇ ಕಾರಣರಾಗಿದ್ದಾರೆ. ಅಲ್ಲದೆ ಹಿರಿಯರ ಕಡೆಗಣನೆ, ಕಾಂಗ್ರೆಸ್ ಸಚಿವರ ಸಂಘಟನಾ ಕೊರೆತೆ ಸೋಲಿಗೆ ಕಾರಣವಾಗಿದೆ. ಕಾಂಗ್ರೆಸ್ ಸಚಿವರು, ಕಾರ್ಯಕರ್ತರ ನಡುವೆ ಸಮನ್ವಯತೆಯೇ ಇಲ್ಲವಾಗಿದೆ ಎಂದು ಆರೋಪಿಸಿದ್ದಾರೆ.

    ಟ್ವೀಟ್ ನಲ್ಲೇನಿದೆ?
    ರಾಜ್ಯ ಸರ್ಕಾರದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯರ ಕಡೆಗಣನೆ ಹಾಗೂ ಕೆಲವು ಕಾಂಗ್ರೆಸ್ ಸಚಿವರ ಸಂಘಟನಾ ದೂರದೃಷ್ಟಿತ್ವ ಕೊರತೆಯಿಂದಾಗಿ ಪಕ್ಷವು ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಬೇಕಾಯಿತು. ಹಿರಿಯರು ನೀಡಿದ ಸಲಹೆಗಳನ್ನು ಪರಿಗಣಿಸದೇ ಇರುವುದು, ಕೆಲವು ಸಚಿವರ ಕಾರ್ಯಕ್ಷಮತೆಯೂ ಸಹ ಪಕ್ಷಕ್ಕೆ ಹಿನ್ನಡೆಯಾಗಲು ಪ್ರಮುಖ ಕಾರಣವಾಯಿತು.

    ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರದಲ್ಲಿ ಪಕ್ಷದ ಕುರಿತು ಏನೂ ಅರಿವಿಲ್ಲದೆ ಬಂದ ಹೊಸಬರಿಗೆ, ವಲಸಿಗರಿಗೆ ಮಣೆ ಹಾಕಿದ್ದೇ ಇಂದಿನ ಈ ಪರಿಸ್ಥಿತಿಗೆ ಕಾರಣ. ರಾಜ್ಯದ ಮುಂಚೂಣಿ ನಾಯಕರು ಹಾಗೂ ಉಸ್ತುವಾರಿಗಳು ಪಕ್ಷದ ಆಂತರಿಕ ಸಮಸ್ಯೆಗಳನ್ನು ನಿರ್ವಹಿಸುವಲ್ಲಿ ಎಡವಿದ್ದಾರೆ.

    ನಮ್ಮ ಸರ್ಕಾರವಿದ್ದೂ ಕಾಂಗ್ರೆಸ್ ಕಾರ್ಯಕರ್ತರು ಚುನಾವಣಾ ಉತ್ಸಾಹ ಕಳೆದುಕೊಂಡಿದ್ದರು. ಇದಕ್ಕೆ ಪ್ರಮುಖ ಸ್ಥಾನದಲ್ಲಿರುವ ಕೆಲವು ಕಾಂಗ್ರೆಸ್ ಸಚಿವರು ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಯಾವುದೇ ಉತ್ತಮ ಭಾಂಧವ್ಯ, ಸಂವಹನ ಇಲ್ಲದಿರುವುದು, ಹಿರಿಯ ನಾಯಕರು ಹಾಗೂ ಕಾರ್ಯಕರ್ತರ ನಿರ್ಲಕ್ಷ್ಯಕ್ಕೆ ಕಾರಣವಾಗಿದೆ.

    ಈ ಕುರಿತು ಹಲವು ಕಾರ್ಯಕರ್ತರು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಮುಂಬರುವ ಸವಾಲಿನ ದಿನಗಳನ್ನು ಎದುರಿಸಲು, ಪಕ್ಷ ಹಾಗೂ ಸರ್ಕಾರದಲ್ಲಿ ಹಿರಿಯರ ಕಡೆಗಣನೆ ಸರಿದೂಗಿಸಬೇಕಾಗಿದೆ.

    ಸರ್ಕಾರದಲ್ಲಿ ಹಿರಿಯರಿಗೆ ಪ್ರಾತಿನಿಧ್ಯ ನೀಡುವಂತಾಗಲು ಕಾಂಗ್ರೆಸ್ ಪಕ್ಷದ ಹಿರಿಯರೆಲ್ಲರೂ ಒಂದೆಡೆ ಸೇರಿ ಪಕ್ಷದ ಹಿತ ಸಮಾಲೋಚಿಸಬೇಕಾಗಿದೆ. ಜೊತೆಗೆ ಹಿರಿಯರು ಯಾರೂ ಪಕ್ಷ ಬಿಡದಂತೆ ಎಚ್ಚರಿಕೆವಹಿಸಬೇಕಾಗಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಹಿರಿಯ ನಾಯಕರು ಪಕ್ಷದಲ್ಲಿ ಮುಂದುವರಿಯುವುದು ಕಷ್ಟ ಸಾಧ್ಯವಾದೀತು.

    ಪಕ್ಷದ ಪರ ಚುನಾವಣಾ ಫಲಿತಾಂಶದಲ್ಲಿ ಎಡವಿದ ಸಚಿವರಿಗೆ ಪಕ್ಷ ಸಂಘಟನಾ ಜವಾಬ್ದಾರಿ ನೀಡುವುದರ ಜೊತೆಗೆ ಹಿರಿಯರಿಗೆ ಸರ್ಕಾರದಲ್ಲಿ ಸ್ಥಾನಮಾನ ನೀಡಿ ಪಕ್ಷದ ಆಂತರಿಕ ಅಸಮತೋಲನವನ್ನು ಸರಿಪಡಿಸುವ ಕಾರ್ಯವನ್ನು, ಜವಾಬ್ದಾರಿ ಹೊತ್ತಿರುವ ಕಾಂಗ್ರೆಸ್ ನಾಯಕರು ಗಮನ ಹರಿಸಬೇಕಾಗಿದೆ.

  • ಉತ್ತರನ ಪೌರುಷ ಒಲೆ ಮುಂದೆ, ಬಿಜೆಪಿ ಪೌರುಷ ಮಾಧ್ಯಮಗಳ ಮುಂದೆ : ಸಚಿವ ರಾಮಲಿಂಗಾರೆಡ್ಡಿ

    ಉತ್ತರನ ಪೌರುಷ ಒಲೆ ಮುಂದೆ, ಬಿಜೆಪಿ ಪೌರುಷ ಮಾಧ್ಯಮಗಳ ಮುಂದೆ : ಸಚಿವ ರಾಮಲಿಂಗಾರೆಡ್ಡಿ

    ಬೆಂಗಳೂರು: ನರೇಂದ್ರ ಮೋದಿಯವರೇ ಎರಡೆರಡು ಕಡೆ ಸ್ಪರ್ಧಿಸಿದ್ರು. ಆ ಸಂದರ್ಭದಲ್ಲಿ ಮೋದಿಯವರಿಗೆ ಭಯ ಇತ್ತಾ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಪ್ರಶ್ನಿಸಿದ್ದಾರೆ.

    ಮುಖ್ಯಮಂತ್ರಿ ನಿವಾಸಕ್ಕೆ ಗೃಹ ಸಚಿವ ರಾಮಲಿಂಗಾರೆಡ್ಡಿ ಭೇಟಿ ನೀಡಿದರು. ಈ ವೇಳೆ ಪ್ರಕಾಶ್ ಜಾವ್ಡೇಕರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಉತ್ತರ ಕರ್ನಾಟಕದ ಜನ ಸಿಎಂ ಸ್ಪರ್ಧೆ ಮಾಡಿ ಅಂತಾ ಕೇಳಿಕೊಂಡ್ರು. ಹೀಗಾಗಿ ಸಿಎಂ ಬಾದಾಮಿಯಲ್ಲೂ ಸ್ಪರ್ಧಿಸುತ್ತಿದ್ದಾರೆ. ಮಾತಾಡುವಾಗ ನೋಡಿಕೊಂಡು ಮಾತಾಡಬೇಕು ಎಂದು ತಿರುಗೇಟು ನೀಡಿದ್ರು.

    ಬಿಜೆಪಿಯಲ್ಲೇ ಭಿನ್ನಮತ ಇದೆ. ಯಡಿಯೂರಪ್ಪ, ಈಶ್ವರಪ್ಪ ಬಡಿದಾಡಿಕೊಂಡಿದ್ರು. ಬಿಜೆಪಿಯಲ್ಲಿರುವಷ್ಟು ಒಳ ಜಗಳ ಬೇರೆಲ್ಲೂ ಇಲ್ಲ. ಬಿಜೆಪಿಯಲ್ಲಿ ಜೈಲಿಗೆ ಹೋಗಿ ಬಂದವರೇ ಹೆಚ್ಚು ಮಂದಿ. ಉತ್ತರನ ಪೌರುಷ ಒಲೆ ಮುಂದೆ ಅನ್ನೋ ಹಾಗೇ ಬಿಜೆಪಿಯವರು ಮಾಧ್ಯಮಗಳ ಮುಂದೆ ಮಾತ್ರ ಮಾತಾಡುತ್ತಾರೆ. ಕರ್ನಾಟಕದಲ್ಲಿ ಮೋದಿ ಹವಾ ಇಲ್ಲ. ಬದಲಾಗಿ ಸಿದ್ದರಾಮಯ್ಯನವರ ಹವಾ ಇದೆ ಎಂದರು.

    ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಅವರು ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳುತ್ತಿದ್ದಾರೆ. ಆದ್ರೆ ಕಾಂಗ್ರೆಸ್ 50 ಸ್ಥಾನಗಳನ್ನು ಗೆಲ್ಲಲು ಸಾಧ್ಯವಿಲ್ಲ. ಬಿಜೆಪಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರುವುದರಲ್ಲಿ ಸಂಶಯವಿಲ್ಲ ಅಂತ ಬೆಂಗಳೂರಿನಲ್ಲಿ ಬಿಜೆಪಿ ಚುನಾವಣಾ ಉಸ್ತುವಾರಿ, ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಹೇಳಿದ್ದರು.

  • ಇಸ್ಪೀಟ್ ಅಡ್ಡೆ ಮೇಲೆ ದಾಳಿ ಮಾಡಿದ್ದಕ್ಕೆ ಪೊಲೀಸರ ಮೇಲೆಯೇ ಹಲ್ಲೆ- ಪುಡಿರೌಡಿಗಳ ಅಟ್ಟಹಾಸಕ್ಕೆ ಓಡಿಹೋದ ಪೇದೆಗಳು

    ಇಸ್ಪೀಟ್ ಅಡ್ಡೆ ಮೇಲೆ ದಾಳಿ ಮಾಡಿದ್ದಕ್ಕೆ ಪೊಲೀಸರ ಮೇಲೆಯೇ ಹಲ್ಲೆ- ಪುಡಿರೌಡಿಗಳ ಅಟ್ಟಹಾಸಕ್ಕೆ ಓಡಿಹೋದ ಪೇದೆಗಳು

    ಬೆಂಗಳೂರು: ಇಸ್ಪೀಟ್ ಅಡ್ಡೆ ಮೇಲೆ ದಾಳಿ ಮಾಡಿದಕ್ಕೆ ಇಬ್ಬರು ಪೊಲೀಸ್ ಪೇದೆಗಳ ಮೇಲೆ ಹಾಡಹಗಲೇ ಆರೋಪಿಗಳು ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನ ವರ್ತೂರು ಮುಖ್ಯರಸ್ತೆಯ ಸಿದ್ದಾಪುರ ಬಳಿ ಭಾನುವಾರ ಮಧ್ಯಾಹ್ನ ನಡೆದಿದೆ.

    ಘಟನೆಗೆ ಸಂಬಂಧಿಸಿದಂತೆ ಕುಮಾರ್, ಸುದೀಪ್, ಮೂರ್ತಿ, ಮುರಳಿ ಮೋಹನ್ ಎಂಬ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ವರ್ತೂರು ಬಸಪ್ಪ ಗಾಣೆಗಾರ, ಶರಣಬಸಪ್ಪ ಎಂಬಿಬ್ಬರು ಪೊಲೀಸರನ್ನು ಅಟ್ಟಾಡಿಸಿ ಹಲ್ಲೆ ಮಾಡಿದ್ದಾರೆ. ತಮ್ಮ ಮೇಲೆ ಹಲ್ಲೆ ನಡೆಯುತ್ತಿದ್ದಂತೆಯೇ ಪೊಲೀಸರು ಸ್ಥಳದಿಂದ ಕಾಲ್ಕಿತ್ತು ದುಷ್ಕರ್ಮಿಗಳ ಕೈಯಿಂದ ತಪ್ಪಿಸಿಕೊಂಡಿದ್ದಾರೆ. ಈ ಸಂಬಂಧ ವರ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


    ಪೊಲೀಸ್ ಪೇದೆಗಳ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವೈಟ್ ಫೀಲ್ಡ್ ಡಿಸಿಪಿ ಅಬ್ದುಲ್ ಅಹದ್ ಮಾತನಾಡಿ, ಭಾನುವಾರ ಮಧ್ಯಾಹ್ನ ವೈಟ್ ಫೀಲ್ಡ್ ಪೊಲೀಸ್ ಸಿಬ್ಬಂದಗಳಾದ ಬಸಪ್ಪ ಗಾಣಿಗೇರ ಮತ್ತು ಶರಣಬಸಪ್ಪ ಬೀಟ್ ನಲ್ಲಿದ್ದರು. ಈ ವೇಳೆ ಅವರು ಜೂಜಾಟದ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿದ್ದಾರೆ. ಇಸ್ಪಿಟ್ ಅಡ್ಡೆಯಲ್ಲಿ ಎಷ್ಟು ಜನ ಇದ್ದಾರೆಂಬ ಮಾಹಿತಿ ಪೇದೆಗಳಿಗೆ ಇರಲಿಲ್ಲ. ಹೀಗಾಗಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ ತಕ್ಷಣವೇ ಕುಡಿದ ಮತ್ತಿನಲ್ಲಿದ್ದ ಆರೋಪಿಗಳು ಪೊಲೀಸರನ್ನು ತಳ್ಳಾಡಿ, ಹಲ್ಲೆ ಮಾಡಿದ್ದಾರೆ. ಈ ಸುದ್ದಿ ತಿಳಿದ ತಕ್ಷಣ ಮತ್ತೆ ಕೆಲ ಪೊಲೀಸರು ತೆರಳಿದ್ರು. ಆದ್ರೆ ಅರೋಪಿಗಳು ಅದಾಗಲೇ ಅಲ್ಲಿಂದ ಓಡಿ ಹೋಗಿದ್ರು. ಈ ಸಂಬಂಧ ನಾಲ್ವರನ್ನು ಈಗಾಗಲೇ ಅರೆಸ್ಟ್ ಮಾಡಲಾಗಿದೆ. ಉಳಿದ ಎಂಟು ಮುಂದಿಗಾಗಿ ಹುಡುಕಾಟ ನಡೆಯುತ್ತಿದೆ. ಹಲ್ಲೆಗೊಳಗಾದವರು ವೈಟ್ ಫೀಲ್ಡ್ ಪೊಲೀಸ್ ಠಾಣೆ ಪೇದೆಗಳಾಗಿದ್ದು, ವರ್ತೂರು ವ್ಯಾಪ್ತಿಗೆ ಏಕೆ ಹೋದರು ಅನ್ನೋದು ತಿಳಿಯಬೇಕಿದೆ ಅಂತ ಅವರು ಹೇಳಿದ್ದಾರೆ.

    ಘಟನೆ ಸಂಬಂಧ ಗೃಹಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ನಿನ್ನೆ ಯುಗಾದಿ ಹಬ್ಬ. ಹೀಗಾಗಿ ಮಹದೇವಪುರದಲ್ಲಿ ಕೆಲವರು ಇಸ್ಪೀಟ್ ಆಡ್ತಾ ಇದ್ದರು. ಆಗ ಇಬ್ಬರು ಪೊಲೀಸ್ ಪೇದೆಗಳು ತಡೆಯಲು ಹೋಗಿದ್ದಾರೆ. ಈ ವೇಳೆ ಅವರ ಮೇಲೆ ಹಲ್ಲೆ ನಡೆದಿದೆ. ಹಲ್ಲೆ ಮಾಡಿದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಅದರಲ್ಲಿ ಸಂದೀಪ್ ಎಂಬಾತ ಬಿಜೆಪಿ ಕಾರ್ಯಕರ್ತನಾಗಿದ್ದಾನೆ. ಆದ್ರೆ ಬಿಜೆಪಿ ಇರಲಿ, ಕಾಂಗ್ರೆಸ್, ಜೆಡಿಎಸ್ ಯಾವುದೇ ಪಕ್ಷದವರಾಗಿರಲಿ ಹಲ್ಲೆ ಮಾಡಿರುವುದು ತಪ್ಪು. ಹೀಗಾಗಿ ಅವರನ್ನು ಈಗಾಗಲೇ ಬಂಧಿಸಲಾಗಿದೆ. ಪೇದೆಗಳ ಬಳಿ ಬಂದೂಕು ಇರಲ್ಲ, ಲಾಠಿ ಇರುತ್ತೆ. ಈ ಹಿನ್ನೆಲೆಯಲ್ಲಿ ಆರೋಪಿಗಳಿಂದಾದ ಹಲ್ಲೆ ತಡೆಯಲು ಆಗಿಲ್ಲ. ಕುಡಿದ ಮತ್ತಿನಲ್ಲಿ ಈ ಘಟನೆ ನಡೆದಿದೆ. ಈ ಪ್ರಕರಣದ ತನಿಖೆ ಪ್ರಗತಿಯಲ್ಲಿದೆ ಅಂತ ತಿಳಿಸಿದ್ದಾರೆ.

    https://www.youtube.com/watch?v=A9j3A6F59T0

    https://www.youtube.com/watch?v=oVDXC1QwNMc

  • ಕರಾವಳಿಯಲ್ಲಿ 2 ಭಯೋತ್ಪಾದಕ ಫ್ಯಾಕ್ಟರಿ ಇವೆ, ಸ್ವಲ್ಪ ಸಮಯ ಸಿಕ್ಕಿದ್ರೂ ಮಟ್ಟ ಹಾಕ್ತಿದ್ದೆ- ರಾಮಲಿಂಗಾರೆಡ್ಡಿ

    ಕರಾವಳಿಯಲ್ಲಿ 2 ಭಯೋತ್ಪಾದಕ ಫ್ಯಾಕ್ಟರಿ ಇವೆ, ಸ್ವಲ್ಪ ಸಮಯ ಸಿಕ್ಕಿದ್ರೂ ಮಟ್ಟ ಹಾಕ್ತಿದ್ದೆ- ರಾಮಲಿಂಗಾರೆಡ್ಡಿ

    ಕಲಬುರಗಿ: ಕರಾವಳಿಯಲ್ಲಿ ಎರಡು ಭಯೋತ್ಪಾದಕ ಫ್ಯಾಕ್ಟರಿಗಳಿವೆ. ಸಮಯ ಸಿಕ್ಕಿದ್ರೆ ಅವುಗಳನ್ನು ಮಟ್ಟ ಹಾಕುತ್ತಿದ್ದೆ ಅಂತ ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

    ಕಲಬುರಗಿಯಲ್ಲಿ ಮಾತಾಡಿದ ಅವರು, ಸತ್ತ ಮೇಲೆ ಸತ್ತವರ ಮನೆಗೆ ಹೋಗಿ ಮರಣೋತ್ತರ ಸದಸ್ಯತ್ವ ಕೊಡೋದೇ ಬಿಜೆಪಿಯ ಕೆಲಸ. ರಾಜ್ಯದಲ್ಲಿ 23 ಹಿಂದೂಗಳ ಕೊಲೆ ಆಗಿದೆ ಅಂತ ಬಿಜೆಪಿ ಹೇಳ್ತಿದೆ. ಆದ್ರೆ 9 ಮಂದಿ ಹಿಂದೂಗಳು ಮಾತ್ರ ಕೋಮು ಜಗಳದಲ್ಲಿ ಕೊಲೆ ಆಗಿದ್ದಾರೆ. ಬಿಜೆಪಿವರು ಯಾರಾದ್ರೂ ಸಾಯೋದನ್ನೇ ಕಾಯ್ತಾ ಇರ್ತಾರೆ. ಸತ್ತರೆ ಅವರ ಮನೆಗೆ ಹೋಗಿ ಮರಣೋತ್ತರ ಸದಸ್ಯತ್ವ ನೋಂದಣಿ ಮಾಡಿಕೊಳ್ತಾರೆ ಅಂತ ಲೇವಡಿ ಮಾಡಿದ್ರು.

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡು ಭಯೋತ್ಪಾದಕರ ಫ್ಯಾಕ್ಟರಿಗಳಿದ್ದು, ಇನ್ನು ಸ್ವಲ್ಪ ಸಮಯ ಸಿಕ್ಕಿದ್ರೆ ಅವರ ಮೇಲೆ ಸಂಪೂರ್ಣ ಕ್ರಮ ಕೈಗೊಳ್ಳುತ್ತಿದೆ ಅಂತಾ ಹೇಳಿದ್ರು.

  • ಅಲ್ಪಸಂಖ್ಯಾತರಿಗೆ ಕ್ಲೀನ್ ಚಿಟ್ ಭಾಗ್ಯ- ಸಚಿವ ರಾಮಲಿಂಗಾರೆಡ್ಡಿ ಸಮರ್ಥನೆ ಕೊಟ್ಟಿದ್ದು ಹೀಗೆ

    ಅಲ್ಪಸಂಖ್ಯಾತರಿಗೆ ಕ್ಲೀನ್ ಚಿಟ್ ಭಾಗ್ಯ- ಸಚಿವ ರಾಮಲಿಂಗಾರೆಡ್ಡಿ ಸಮರ್ಥನೆ ಕೊಟ್ಟಿದ್ದು ಹೀಗೆ

    ಚಿಕ್ಕಬಳ್ಳಾಪುರ: ಕೋಮುಗಲಭೆ ಪ್ರಕರಣಗಳಲ್ಲಿ ಅಲ್ಪಸಂಖ್ಯಾತರಿಗೆ ಕ್ಲೀನ್ ಚಿಟ್ ನೀಡಿರುವ ಸರ್ಕಾರದ ಕ್ರಮವನ್ನು ಗೃಹಸಚಿವ ರಾಮಲಿಂಗಾರೆಡ್ಡಿ ಸಮರ್ಥಿಸಿಕೊಂಡಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹದಾಯಿ, ಕಾವೇರಿ, ವಿಚಾರದಲ್ಲಿ ರೈತರ ಮೇಲಿನ ಕೇಸ್ ಗಳನ್ನ ಹಿಂಪಡೆದಿದ್ದೀವಿ. ಟಿಪ್ಪು-ಜಯಂತಿ ವೇಳೆ ಹಲವಡೆ ಪರ ವಿರೋಧದ ಪ್ರತಿಭಟನೆಗಳು ನಡೆದಿವೆ. ಆಸ್ತಿ-ಪಾಸ್ತಿ ಹಾನಿ, ಕೊಲೆ ಯತ್ನ ಪ್ರಕರಣಗಳನ್ನು ನಾವು ಹಿಂಪಡೆಯುವುದಿಲ್ಲ. ಆಸ್ತಿ-ಪಾಸ್ತಿ ಹಾನಿ, ಕೊಲೆ ಯತ್ನ ಪ್ರಕರಣಗಳು ಇಲ್ಲದೆ ಇರುವವರ ಕೆಲ ಪ್ರಕರಣಗಳನ್ನ ನಾವು ಕೈಬಿಟ್ಟಿದ್ದೇವೆ ಅಂತ ಹೇಳಿದ್ರು. ಇದನ್ನೂ ಓದಿ: ಅಲ್ಪಸಂಖ್ಯಾತರಿಗೆ ಸಿಕ್ತು ಕ್ಲೀನ್‍ಚಿಟ್ ಭಾಗ್ಯ- ಸರ್ಕಾರದಿಂದಲೇ ಹಿಂದೂ-ಮುಸ್ಲಿಂ ಇಬ್ಭಾಗ ಕೆಲಸ

    ಯಡಿಯೂರಪ್ಪ ಈ ತರ ಎಷ್ಟು ಕೇಸ್ ಮಾಡಿದ್ದಾರೆ ಪಟ್ಟಿ ಕೊಡ್ತೀನಿ. ಉತ್ತರ ಪ್ರದೇಶದಲ್ಲಿ 20 ಸಾವಿರ ಕೇಸ್ ವಿತ್ ಡ್ರಾ ಮಾಡಿದ್ದಾರೆ. ಪಿಎಫ್‍ಐ, ಎಸ್ ಡಿಪಿಐ ಜೊತೆ ಕಾಂಗ್ರೆಸ್ ಹೊಂದಾಣಿಕೆ ಅಂತ ಆರೋಪ ವ್ಯಕ್ತವಾಗುತ್ತಿದೆ. ನಾವು ಯಾಕೆ ಹೊಂದಾಣಿಕೆ ಮಾಡಿಕೊಳ್ಳಬೇಕು. ಬಿಜೆಪಿಯವರೇ ದಕ್ಷಿಣ ಕನ್ನಡದಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದವರು ಅಂತ ಅವರು ತಿಳಿಸಿದ್ರು.

    ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ರಾಜ್ಯಕ್ಕೆ ಬಂದಾಗ ಬಂದ್ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಬಿಜೆಪಿಯವರು ಈ ಮಾತುಗಳನ್ನ ಬಿಟ್ಟು ಕೆಲಸ ಮಾಡೋದು ಕಲೀಬೇಕು. ಲೆಕ್ಕ ಕೇಳೋಕೆ ಅಮಿತ್ ಷಾ ಯಾರು? ಯಡಿಯೂರಪ್ಪ ಯಾರು? ಅಮಿತ್ ಶಾ ಸಂವಿಧಾನಾತ್ಮಕ ಹುದ್ದೆಯಲ್ಲಿ ಇದ್ದಾರಾ..? ಅವರಿಗೂ ಇದಕ್ಕೂ ಲೆಕ್ಕ ಕೇಳೋದಕ್ಕೂ ಸಂಬಂಧ ಇಲ್ಲ ಅಂದ್ರು.

    ಮೋದಿಯವರು ರಾಜ್ಯಕ್ಕೆ ಬಂದಾಗ ಬಂದ್ ಮಾಡುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಸರ್ಕಾರ ರೈತರ ಪರ ಸರ್ಕಾರವಾಗಿದೆ. ನಿನ್ನೆಯ ಬಂದ್ ಗೂ ನಮಗೂ ಯಾವುದೇ ಸಂಬಂಧವಿಲ್ಲ. ನಾನು ಮೋದಿ ಬಂದಾಗ ಬಂದ್ ಬೇಡ ಅಂತ ಹೇಳ್ತಿನಿ. ಸಂಘಟನೆಯವರು ನನ್ನ ಮಾತು ಕೇಳ್ತಾರಾ..? ಮಹದಾಯಿ ವಿಚಾರದಲ್ಲಿ ಅಮಿತ್ ಶಾ, ಮೋದಿ ಗಮನ ಸೆಳೆಯಲು ಬಂದ್ ಮಾಡಲಾಗುತ್ತಿದೆ. ಮಹದಾಯಿ ಬಗ್ಗೆ ಅಮಿತ್ ಶಾ ತುಟಿಕ್ ಪಿಟಿಕ್ ಅನ್ನಲಿಲ್ಲ. ಮೋದಿ ಮಹದಾಯಿ ವಿಚಾರದಲ್ಲಿ ಏನೂ ಮಾತೋಡೋದೆ ಇಲ್ಲ ಅಂತ ಕಿಡಿಕಾರಿದ್ರು.

  • ಸಿಎಂ ಕೂಡ ಒಬ್ಬ ಭಯೋತ್ಪಾದಕ- ಶಾಸಕ ಸಿಟಿ ರವಿಯಿಂದ ಗಂಭೀರ ಆರೋಪ

    ಸಿಎಂ ಕೂಡ ಒಬ್ಬ ಭಯೋತ್ಪಾದಕ- ಶಾಸಕ ಸಿಟಿ ರವಿಯಿಂದ ಗಂಭೀರ ಆರೋಪ

    ಚಿಕ್ಕಮಗಳೂರು: ಭಯೋತ್ಪಾದನೆ ರೀತಿ ಮಾತಾನಾಡುವುದೇ ಭಯೋತ್ಪಾದನೆ ಅಂದ್ರೆ ಸಿದ್ದರಾಮಯ್ಯ ಕೂಡ ಒಬ್ಬ ಭಯೋತ್ಪಾದಕರಾಗುತ್ತಾರೆ ಅಂತ ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿಕೆಗೆ ಶಾಸಕ ಸಿ.ಟಿ.ರವಿ ತಿರುಗೇಟು ನೀಡಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಾಜದಲ್ಲಿ ಭಯ ಸೃಷ್ಟಿಸುವುದೇ ಭಯೋತ್ಪಾನೆ ಅಂತ ಗೃಹ ಸಚಿವರ ಹೇಳಿಕೆಗೆ ಪ್ರತಿಕ್ರಿಯಿಸಿ, ಭಯೋತ್ಪಾದನೆ ರೀತಿಯಲ್ಲಿ ಮಾತಾನಾಡುವುದೇ ಭಯೋತ್ಪಾದನೆ ಅಂದ್ರೆ ಸಿದ್ದರಾಮಯ್ಯ ಕೂಡ ಒಬ್ಬ ಭಯೋತ್ಪಾದಕರಾಗುತ್ತಾರೆ. ಯಾಕಂದ್ರೆ ಅವರ ಮಾತಿನಲ್ಲಿ ಬೆದರಿಕೆ ಇದೆ. ದಾಸ್ಯ ಇದೆ. ದುರಹಾಂಕಾರ ಇದೆ. ನಾವು ಯಾವತ್ತು ದುರಹಾಂಕಾರ ಮಾತು ಆಗಲಿ, ಬೆದರಿಕೆ ರೀತಿ ಮಾತಾನಾಡಿಲ್ಲ ಅಂದ್ರು.

    ಸತ್ಯದ ಪರ ಹೋರಾಟ ಮಾಡೋದನ್ನು ಭಯೋತ್ಪಾದನೆ ಅಂದ್ರೆ ಹೇಗೆ? ಸತ್ಯದ ಪರ ಹೋರಾಟ ಮಾಡೋದನ್ನು ಭಯೋತ್ಪಾದನೆ ಅಂತಾ ಕರೆಯೋದಕ್ಕೆ ಯಾವ ಡಿಕ್ಷನರಿ ಓದಿಕೊಂಡಿದ್ದಾರೆ ನನಗೆ ಗೊತ್ತಿಲ್ಲ. ಭಯೋತ್ಪಾದನೆ ಅನ್ನೋದಕ್ಕೆ ಡಿಕ್ಷನರಿ ಬೇರೆ ಅರ್ಥ ಅದನ್ನ ರಾಮಲಿಂಗಾರೆಡ್ಡಿ ಹಾಗೂ ಸಂಧಿ ಸಮಾಸ ಬಗ್ಗೆ ಮಾತಾಡೋ ಸಿಎಂ ಕೂಡ ಓದಿಕೊಳ್ಳಲಿ ಅಂತ ಟಾಂಗ್ ನೀಡಿದ್ದಾರೆ.

    ಸಿಎಂ ಸಿದ್ದರಾಮಯ್ಯ ತಾಲಿಬಾಲ್ ಹಾಗೂ ನಕ್ಸಲ್ ಜೊತೆ ನಂಟು ಇಟ್ಟುಕೊಂಡು ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ. ಹಿಂದೂ ಯಾವತ್ತು ಉಗ್ರ ಆಗೋಕೆ ಸಾಧ್ಯವಿಲ್ಲ. ಹಿಂದೂ ಹಾಗೊಮ್ಮೆ ಹೀಗೊಮ್ಮೆ ವ್ಯಾಘ್ರವಾಗಬಹುದು ಆದ್ರೆ ಉಗ್ರ ಆಗೋಕೆ ಸಾಧ್ಯವಿಲ್ಲ ಅಂತ ಅವರು ಹೇಳಿದ್ದಾರೆ.

  • ಬಲಪಂಥೀಯರು, ಪಿಎಫ್‍ಐನವರ ಓವರ್ ಆ್ಯಕ್ಟಿಂಗೇ ಕೋಮು ವೈಷಮ್ಯಕ್ಕೆ ಕಾರಣ : ರಾಮಲಿಂಗಾರೆಡ್ಡಿ

    ಬಲಪಂಥೀಯರು, ಪಿಎಫ್‍ಐನವರ ಓವರ್ ಆ್ಯಕ್ಟಿಂಗೇ ಕೋಮು ವೈಷಮ್ಯಕ್ಕೆ ಕಾರಣ : ರಾಮಲಿಂಗಾರೆಡ್ಡಿ

    ಮಂಗಳೂರು: ಸಂಘಟನೆಗಳ, ರಾಜಕೀಯ ನಾಯಕರ ಕುಮ್ಮಕ್ಕಿನಿಂದ ಕರಾವಳಿಯಲ್ಲಿ ಕೋಮು ವೈಷಮ್ಯದ ಗಲಾಟೆ ಆಗುತ್ತಿದೆ. ಇದಕ್ಕೆಲ್ಲ ಬಲಪಂಥೀಯರು, ಪಿಎಫ್‍ಐನವರ ಓವರ್ ಆ್ಯಕ್ಟಿಂಗ್ ಕಾರಣ ಅಂತ ಗೃಹ ಸಚಿವ ರಾಮಲಿಂಗಾರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ.

    ಮಂಗಳೂರಿನ ಶಕ್ತಿನಗರದಲ್ಲಿ ಪೊಲೀಸ್ ವಸತಿಗೃಹಕ್ಕೆ ಶಿಲಾನ್ಯಾಸಗೈದು ಮಾತನಾಡಿದ ಅವರು, ಇವರೆಲ್ಲ ಸ್ವಲ್ವ ಸುಮ್ಮನಿದ್ದರೆ ಎಲ್ಲವೂ ಸರಿಯಾಗುತ್ತೆ. ಜನರಿಗೆ ಈ ಗಲಾಟೆ ಯಾವುದೂ ಬೇಕಾಗಿಲ್ಲ ಅಂತ ಅವರು ಹೆಳಿದ್ರು.

    ಇನ್ನು ಸಂಘಟನೆಗಳ ನಿಷೇಧ ತಕ್ಷಣಕ್ಕೆ ಯಾವುದೇ ಪ್ರಸ್ತಾಪ ಇಲ್ಲ. ನಿಷೇಧ ಮಾಡಿದ್ರೆ ಎರಡೂ ಕಡೆಯ ಸಂಘಟನೆಗಳನ್ನು ನಿಷೇಧ ಮಾಡಬೇಕು. ಮುಖ್ಯಮಂತ್ರಿ ಪ್ರವಾಸದಲ್ಲಿದ್ದಾರೆ, ಆ ನಂತ್ರ ಈ ಬಗ್ಗೆ ನೋಡ್ತೀವಿ ಅಂದ್ರು.

    ಮೂಡಿಗೆರೆಯಲ್ಲಿ ಧನ್ಯಶ್ರೀ ಪ್ರಾಣ ಹೋಗಿದ್ದಕ್ಕೆ ಬೆಲೆ ಇಲ್ಲವೇ? ಇವರು ಯಾಕೆ ಅಲ್ಲಿ ಹೋಗಿ ಖಂಡಿಸುತ್ತಿಲ್ಲ? ದ್ವಂದ್ವ ನೀತಿ ಯಾಕೆ? ಆ ಗಲಾಟೆಯಲ್ಲಿರೋದು ಎಲ್ಲರು ಯುವಮೋರ್ಚಾದವರು. ಪೊಲೀಸರು ಎಲ್ಲ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಈ ಥರದ ಸಂಘಟನೆಗಳಿಗೆ ಜನವೇ ಉತ್ತರ ನೀಡಲಿದ್ದಾರೆ ಅಂತ ಅವರು ತಿಳಿಸಿದ್ರು.