Tag: ramajanmabhoomi

  • ಅಯೋಧ್ಯೆಯಲ್ಲಿ ಅದ್ಧೂರಿಯಾಗಿ ದೀಪಾವಳಿ ಆಚರಣೆ- ವಿಶೇಷ ಸಂಭ್ರಮ ಯಾಕೆ..?

    ಅಯೋಧ್ಯೆಯಲ್ಲಿ ಅದ್ಧೂರಿಯಾಗಿ ದೀಪಾವಳಿ ಆಚರಣೆ- ವಿಶೇಷ ಸಂಭ್ರಮ ಯಾಕೆ..?

    ಲಕ್ನೋ: ದೇಶಾದ್ಯಂತ ಮನೆ ಮನೆಗಳಲ್ಲೂ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಮನೆ ಮಾಡಿದೆ. ಅದ್ರಲ್ಲೂ ಶ್ರೀರಾಮಜನ್ಮಭೂಮಿ ಅಯೋಧ್ಯೆಯಲ್ಲಿ ದೀಪಾವಳಿ ಸ್ವಲ್ಪ ಸ್ಪೆಷಲ್ ಹಬ್ಬವಾಗಿದೆ. ಅಯೋಧ್ಯೆಯಲ್ಲಿ ಅದ್ಧೂರಿಯಾಗಿ ದೀಪಾವಳಿ ಹಬ್ಬ ಆಚರಿಸಲಾಯ್ತು.

    ಇದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ದೀಪಾವಳಿ ದೀಪೋತ್ಸವದ ಸಂಭ್ರಮ ಮನೆಮಾಡಿತ್ತು. ವೇದಿಕೆ ಮೇಲೆ ರಂಗುರಂಗಿನ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು. ಹಾಗೆಯೇ ಕತ್ತಲಾದ ಮೇಲೆ ಎಲ್ಲೆಲ್ಲೂ ದೀಪಗಳ ಚಿತ್ತಾರ ಆಕರ್ಷಣೀಯವಾಗಿತ್ತು.

    ವಿಶೇಷ ಸಂಭ್ರಮ ಯಾಕೆ..?: ದೀಪಾವಳಿ ಅಯೋಧ್ಯೆ ಜನರಿಗೆ ವಿಶೇಷವಾದ ಹಬ್ಬವಾಗಿದೆ. ಯಾಕಂದ್ರೆ 14 ವರ್ಷಗಳ ವನವಾಸ ಮುಗಿಸಿ ಶ್ರೀರಾಮು ಅಯೋಧ್ಯೆಗೆ ವಾಪಸ್ ಆಗಿದ್ದ ದಿನವಾಗಿದೆ. ಅಯೋಧ್ಯೆಯ ರಾಮಮಂದಿರ ವಿವಾದದ ಬಿಸಿಯ ನಡುವೆಯೇ ಬುಧವಾರ ದೀಪಾವಳಿ ಹಬ್ಬವನ್ನು ವೈಭವೋಪಿತವಾಗಿ ಆಚರಿಸಲಾಯ್ತು. ಇದೇ ವೇಳೆ ಫೈಜಾಬಾದ್ ನಗರಕ್ಕೆ ಶ್ರೀ ಅಯೋಧ್ಯೆ ಅಂತ ಮರುನಾಮಕರಣ ಮಾಡಲಾಯ್ತು. ಇತ್ತೀಚೆಗಷ್ಟೇ ಅಲಹಬಾದ್ ಹೆಸರನ್ನು ಪ್ರಯೋಗ್‍ರಾಜ್ ಅಂತ ಹೆಸರು ಬದಲಿಸಲಾಗಿತ್ತು ಅಂತ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.

    ಈ ಬಾರಿಯ ದೀಪೋತ್ಸವದಲ್ಲಿ ಕೊರಿಯಾ ಅಧ್ಯಕ್ಷೆ ಕಿಮ್ ಜುಂಗ್ ಸೂಕ್, ಕೊರಿಯಾದ ಪ್ರಥಮ ಪ್ರಜೆ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ನನ್ನ ಅದೃಷ್ಟ ಅಂದ್ರು. ಅಲ್ಲದೇ ಪ್ರಧಾನಿ ಮೋದಿ, ಯುಪಿ ಸಿಎಂ ಯೋಗಿ ಆದಿತ್ಯನಾಥ್‍ಗೆ ಕೃತಜ್ಞತೆ ಸಲ್ಲಿಸಿದ್ರು.

    ದೀಪೋತ್ಸವದಲ್ಲಿ ಕಿಮ್ ಜುಂಗ್ ಸೂಕ್ ಭಾಗಿಯಾಗಲು ಕಾರಣವಿದೆ. ಅಯೋಧ್ಯೆಗೂ, ಕೊರಿಯಾಗೂ ಪ್ರಾಚೀನ ಕಾಲದಿಂದಲೂ ಸಂಬಂಧ ಇದೆ. ಕ್ರಿ.ಶ 48 ರ ಸುಮಾರಿಗೆ ಅಯೋಧ್ಯೆ ರಾಜಮನೆತನದ ಸುರೋ ಎಂಬವರನ್ನು ಕೊರಿಯಾದ ರಾಜ ಮದ್ವೆಯಾಗಿದ್ದರಂತೆ. ರಾಮಜನ್ಮಭೂಮಿಯಿಂದ ಬಂದವರು ಅಂತ ಅಲ್ಲಿನ ಜನ ತಾಯಿಯಂತೆ ನೋಡಿಕೊಂಡ್ರಂತೆ. ಅಂದಿನಿಂದ ಇಂದಿನವರೆಗೂ ಅಯೋಧ್ಯೆ ಜೊತೆ ಬಾಂಧವ್ಯ ಇಟ್ಟುಕೊಂಡಿದ್ದಾರೆ ಅನ್ನೋ ಪ್ರತೀತಿ ಇದೆ. ಒಟ್ಟಿನಲ್ಲಿ ರಾಮಜನ್ಮಭೂಮಿ ವಿವಾದ ದೇಶದ ಗಮನ ಸೆಳೆಯುತ್ತಿರುವ ಹೊತ್ತಲ್ಲೇ ಅಯೋಧ್ಯೆಯ ಅದ್ಧೂರಿ ದೀಪಾವಳಿ ವಿಶೇಷವಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv