Tag: Ramadan Festival

  • ರಂಜಾನ್ ಹಬ್ಬಕ್ಕೆ ಸ್ವಾದಿಷ್ಟವಾದ `ಸುರಕುಂಭ’ ಮಾಡಿ!

    ರಂಜಾನ್ ಹಬ್ಬಕ್ಕೆ ಸ್ವಾದಿಷ್ಟವಾದ `ಸುರಕುಂಭ’ ಮಾಡಿ!

    ಸಾಮಾನ್ಯವಾಗಿ ಯಾವುದೇ ಹಬ್ಬಬಂತೆಂದರೂ ಸಿಹಿ ಇರಲೇಬೇಕು. ಹಿಂದೂ ಹಬ್ಬಗಳಲ್ಲಿ ಯಾವುದೇ ಹಬ್ಬವಿದ್ದರೂ ಸಿಹಿ ತಿನಿಸುಗಳು ಇದ್ದೇ ಇರುತ್ತವೆ. ಹಾಗೆಯೇ ರಂಜಾನ್ ಹಬ್ಬದ (Ramadan Festival) ಸಂದರ್ಭದಲ್ಲಿ ಸುರಕುಂಭ (Surkumbha) ಅಥವಾ ಶೀರ್ ಕೂರ್ಮ (Sheer Kurma) ಎಂದು ಕರೆಯಲಾಗುವ ಪಾಯಸದ ರೀತಿಯಲ್ಲಿ ಮಾಡಲಾಗುತ್ತದೆ. ಮನೆಯಲ್ಲಿ ನೀವು ಸುಲಭವಾಗಿ ಸುರಕುಂಭ ಮಾಡುವ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಗ್ರಿಗಳು:

    • ಹಾಲು
    • ಶ್ಯಾವಿಗೆ
    • ಸಕ್ಕರೆ
    • ಬಾದಾಮಿ
    • ಪಿಸ್ತಾ
    • ಏಲಕ್ಕಿ ಪುಡಿ
    • ತುಪ್ಪ
    • ಗೋಡಂಬಿ
    • ವಾಲ್ ನಟ್ಸ್
    • ಕಲ್ಲಂಗಡಿ ಬೀಜ, ಇನ್ನಿತರೆ ಡ್ರೈ ಫ್ರೂಟ್ಸ್ ಗಳನ್ನು ಬಳಸಬಹುದು.

    ಮಾಡುವ ವಿಧಾನ
    ನೀವು ಬಳಸುವ ಎಲ್ಲಾ ಡ್ರೈ ಫ್ರುಟ್ಸ್ ಗಳನ್ನು ಮೊದಲು ನೀರಿನಲ್ಲಿ ಹಾಕಿ, 4 ಗಂಟೆಗಳ ಕಾಲ ಇಡಬೇಕು. ಬಳಿಕ ಅವುಗಳ ಸಿಪ್ಪೆ ಸುಲಿದು ಚಿಕ್ಕದಾಗಿ ಕತ್ತರಿಸಿಕೊಳ್ಳಬೇಕು. ಅಥವಾ ತಕ್ಷಣವಾಗಿ ಮಾಡಬೇಕು ಅಂತಿದ್ದರೆ ಬಳಸುವ ಎಲ್ಲಾ ಡ್ರೈ ಫ್ರುಟ್ಸ್ ಗಳನ್ನು ಕುಡಿಯುವ ನೀರಿನಲ್ಲಿ ಹಾಕಿ ೨ ನಿಮಿಷಗಳ ಕಾಲ ಕುದಿಸಬೇಕು, ಬಳಿಕ ಅವುಗಳ ಸಿಪ್ಪೆ ಸುಲಿದು ಚಿಕ್ಕದಾಗಿ ಕತ್ತರಿಸಿಕೊಳ್ಳಬಹುದು

    ಮೊದಲು ಒಂದು ಪಾತ್ರೆಗೆ ಹಾಲು ಹಾಕಿ ಕಾಯಿಸಲು ಇಡಬೇಕು. ಬಳಿಕ ಸಂಪೂರ್ಣ ಕಾಯ್ದ ನಂತರ 10 ನಿಮಿಷ ಹಾಲನ್ನು ಆರಲು ಬಿಡಬೇಕು. ಬಳಿಕ ಒಂದು ಪಾತ್ರೆಗೆ ತುಪ್ಪವನ್ನು ಬಿಸಿ ಮಾಡಲು ಇಟ್ಟು, ಒಂದೊಂದಾಗಿ ಡ್ರೈ ಫ್ರೂಟ್ಸ್ ಹಾಗೂ ಶ್ಯಾವಿಗೆಯನ್ನು ಹುರಿದುಕೊಳ್ಳಬೇಕು.

    ಬಳಿಕ ಇನ್ನೊಂದು ಪಾತ್ರೆಗೆ ತುಪ್ಪ ಹಾಕಬೇಕು. ತುಪ್ಪ ಕಾಯ್ದ ನಂತರ ಅದಕ್ಕೆ ಸ್ವಲ್ಪ ನೀರು ಹಾಕಿಕೊಳ್ಳಬೇಕು. ಅದಕ್ಕೆ ರುಚಿಗೆ ತಕ್ಕಷ್ಟು ಸಕ್ಕರೆಯನ್ನು ಹಾಕಿ, ಕರಗುವ ತನಕ ಬಿಡಬೇಕು. ಸಕ್ಕರೆ ಕುದಿಯಲು ಶುರು ಮಾಡಿದಾಗ ಹುರಿದಿಟ್ಟುಕೊಂಡಂತಹ ಡ್ರೈ ಫ್ರೂಟ್ಸ್ ಗಳನ್ನು ನೀರಿಗೆ ಹಾಕಬೇಕು. ಬಳಿಕ ಇದಕ್ಕೆ ಶ್ಯಾವಿಗೆ ಹಾಕಬೇಕು. ಎಲ್ಲವೂ ಸಂಪೂರ್ಣವಾಗಿ ಮಿಶ್ರಣಗೊಂಡ ನಂತರ ಅದಕ್ಕೆ ಹಾಲನ್ನು ಹಾಕಿ ಚೆನ್ನಾಗಿ ಕುದಿಯಲು ಬಿಡಬೇಕು. ಈಗ ಬಿಸಿ ಬಿಸಿಯಾದ ಸುರಕುಂಭ ತಯಾರಾಗುತ್ತದೆ.

  • ಜೈಲು ಸೇರಿರುವ ಮಕ್ಕಳನ್ನ ಬಿಡುಗಡೆ ಮಾಡಿಸುವಂತೆ ಮುಖಂಡರ ಮುಂದೆ ಮುಸ್ಲಿಂ ಮಹಿಳೆಯರ ಕಣ್ಣೀರು

    ಜೈಲು ಸೇರಿರುವ ಮಕ್ಕಳನ್ನ ಬಿಡುಗಡೆ ಮಾಡಿಸುವಂತೆ ಮುಖಂಡರ ಮುಂದೆ ಮುಸ್ಲಿಂ ಮಹಿಳೆಯರ ಕಣ್ಣೀರು

    ಹುಬ್ಬಳ್ಳಿ: ರಂಜಾನ್ (Ramadan Festival) ಪ್ರಾರ್ಥನೆ ನಡೆಯುತ್ತಿದ್ದ ಚೆನ್ನಮ್ಮ ವೃತ್ತದ ಈದ್ಗಾ ಮೈದಾನದಲ್ಲಿ (Eidgah Maidan), ಹಳೇ ಹುಬ್ಬಳ್ಳಿ (Hubballi) ಗಲಭೆಯಲ್ಲಿ ಜೈಲು ಸೇರಿರುವ ತಮ್ಮ ಮಕ್ಕಳನ್ನ ಬಿಡುಗಡೆ ಮಾಡಿಸುವಂತೆ ಮುಸ್ಲಿಂ ಮುಖಂಡರ (Muslim Leaders) ಮುಂದೆ ಮಹಿಳೆಯರು ಕಣ್ಣೀರು ಹಾಕಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

    ನೀವೆಲ್ಲರೂ ಸಂತೋಷದಿಂದ ರಂಜಾನ್ ಮಾಡುತ್ತಿದ್ದೀರಿ. ನಮ್ಮ ಕುಟುಂಬಗಳು ಕಷ್ಟದಲ್ಲಿವೆ ಎಂದು ಅಳಲು ತೋಡಿಕೊಂಡಿದ್ದಾರೆ. ಜೊತೆಗೆ ಮುಸ್ಲಿಂ ಮುಖಂಡರು ನಮ್ಮ ಮಕ್ಕಳಿಗೆ ಜಾಮೀನು ಕೊಡಿಸುವಲ್ಲಿ, ಕಾನೂನು ಹೋರಾಟದಲ್ಲಿ ವಿಫಲರಾಗಿದ್ದಾರೆಂದು ಮಹಿಳೆಯರು ಆಕ್ರೋಶ ಹೊರಹಾಕಿದ್ದಾರೆ. ಮಹಿಳೆಯರ ಆಕ್ರೋಶ ಕಂಡ ಮುಸ್ಲಿಂ ಮುಖಂಡರು ಈದ್ಗಾ ಮೈದಾನದಿಂದ ಕಾಲ್ಕಿತ್ತಿದ್ದಾರೆ.

    ಹಳೇ ಹುಬ್ಬಳ್ಳಿ ಗಲಭೆಯಲ್ಲಿ 149 ಮುಸ್ಲಿಂ ಯುವಕರು ಕಳೆದ ಒಂದು ವರ್ಷದಿಂದ ಸೆರೆವಾಸ ಅನುಭವಿಸುತ್ತಿದ್ದಾರೆ. 149 ಮಂದಿ ಯುವಕರು ಬಳ್ಳಾರಿ, ಕಲಬುರ್ಗಿ ಹಾಗೂ ಮೈಸೂರು ಜೈಲುಗಳಲ್ಲಿ ಇದ್ದಾರೆ. ಇದನ್ನೂ ಓದಿ: ಬಿಜೆಪಿ, ಪಕ್ಷೇತರ ಅಭ್ಯರ್ಥಿ ಬೆಂಬಲಿಗರ ನಡುವೆ ಮಾರಾಮಾರಿ – ಹಲ್ಲೆಯಿಂದ ತಪ್ಪಿಸಿಕೊಳ್ಳ

    ಏಪ್ರಿಲ್ 16 ರಂದು ತಡರಾತ್ರಿ ಹಳೇ ಹುಬ್ಬಳ್ಳಿಯಲ್ಲಿ ನಡೆದಿದ್ದ ಕೋಮುಗಲಭೆಯಲ್ಲಿ ಈ ಯುವಕರನ್ನ ಬಂಧಿಸಲಾಗಿತ್ತು. ಇದನ್ನೂ ಓದಿ: ಪಾಂಡ್ಯ ಪರಾಕ್ರಮದ ಮುಂದೆ ಮಂಡಿಯೂರಿದ ರಾಹುಲ್‌ ಪಡೆ – ಗುಜರಾತ್‌ಗೆ 7 ರನ್‌ಗಳ ರೋಚಕ ಜಯ

  • ಮೈಸೂರು ಆಯ್ತು ಈಗ ಮಂಡ್ಯದ ಬೆಳ್ಳೂರಿನಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ

    ಮೈಸೂರು ಆಯ್ತು ಈಗ ಮಂಡ್ಯದ ಬೆಳ್ಳೂರಿನಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ

    ಮಂಡ್ಯ: ರಂಜಾನ್ ಆಚರಣೆ ವೇಳೆ ಇಸ್ಲಾಂ ಜಿಂದಾಬಾದ್ ಜೊತೆಗೆ ಪಾಕಿಸ್ತಾನ ಜಿಂದಬಾದ್ ಘೋಷಣೆ ಕೂಗಿರುವ ಘಟನೆ ಜಿಲ್ಲೆಯ ನಾಗಮಂಗಲ ತಾಲೂಕಿನ ಬೆಳ್ಳೂರು ಕ್ರಾಸ್ ಬಳಿ ನಡದಿದೆ.

    ಕಳೆದ ವಾರ ನಡೆದ ರಂಜಾನ್ ಹಬ್ಬದ ಆಚರಣೆ ವೇಳೆ ಸಾವಿರಾರು ಮುಸ್ಲಿಂ ಭಾಂದವರು ಬೆಳ್ಳೂರಿನ ಮಸೀದಿವೊಂದಕ್ಕೆ ಪ್ರಾರ್ಥನೆಗೆ ತೆರಳುತ್ತಿದ್ದ ವೇಳೆ ಘೋಷಣೆ ಕೂಗಲಾಗಿದೆ. ಗುಂಪಿನಲ್ಲಿ ಇಸ್ಲಾಂ ಜಿಂದಾಬಾದ್ ಘೋಷಣೆ ಕೂಗುವ ವೇಳೆ ಓರ್ವ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗುವ ಮೂಲಕ ಕಿಡಿಗೇಡಿತನ ಮೆರೆದಿದ್ದಾನೆ.

    ಮೈಸೂರಿನ ಕೌಲಂದೆ ಗ್ರಾಮದಲ್ಲಿ ಈ ರೀತಿಯ ಘೋಷಣೆ ಮೂಲಕ ಸಾಕಷ್ಟು ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಇದೀಗ ಮಂಡ್ಯದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿರುವುದು ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ.

  • ಈದ್ ಹಬ್ಬವನ್ನು ಆಚರಿಸಿದ ಧೋನಿ ಬಳಗ ವೀಡಿಯೋ ವೈರಲ್

    ಈದ್ ಹಬ್ಬವನ್ನು ಆಚರಿಸಿದ ಧೋನಿ ಬಳಗ ವೀಡಿಯೋ ವೈರಲ್

    ಮುಂಬೈ: ಸಿಎಸ್‍ಕೆ ತಂಡದ ನಾಯಕ ಎಂಎಸ್ ಧೋನಿ ಮತ್ತು ಚೆನ್ನೈ ತಂಡದ ಆಟಗಾರರು ಇಂದು ರಂಜಾನ್ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಿದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ತೆಲಂಗಾಣ ರಾಜ್ಯದ ಅಧಿಕೃತ ಚಂದ್ರ-ವೀಕ್ಷಕ ಸಮಿತಿಯು ಮೇ 2, ಸೋಮವಾರ, ಈದ್-ಉಲ್-ಫಿತರ್ ಎಂದು ಘೋಷಿಸಿತ್ತು. ಇಸ್ಲಾಮಿಕ್ ಕ್ಯಾಲೆಂಡರ್‍ನ 10 ನೇ ತಿಂಗಳಾಗಿರುವ ಶವ್ವಾಲ್‍ನ ಅರ್ಧಚಂದ್ರಾಕೃತಿಯು ಹೈದರಾಬಾದ್‍ನಲ್ಲಿ ಮತ್ತು ದೇಶದ ಇತರ ಭಾಗಗಳಲ್ಲಿ ಗೋಚರಿಸದ ಕಾರಣ ಮಂಗಳವಾರ ಆಚರಿಸಲಾಗುತ್ತಿದೆ. ಇದನ್ನೂ ಓದಿ: ರಾಜಸ್ಥಾನಕ್ಕೆ ಮುಳುವಾದ ರಿಂಕು, ರಾಣಾ ಜೊತೆಯಾಟ – ಕೋಲ್ಕತ್ತಾಗೆ 7 ವಿಕೆಟ್‍ಗಳ ಜಯ

     

    View this post on Instagram

     

    A post shared by Chennai Super Kings (@chennaiipl)

    ಚೆನ್ನೈ ತಂಡದ ಆಟಗಾರರಾದ ಧೋನಿ, ರಾಬಿನ್ ಉತ್ತಪ್ಪ, ಶಿವಂ ದುಬೆ, ರುತುರಾಜ್ ಗಾಯಕ್‍ವಾಡ್, ಮೊಯಿನ್ ಅಲಿ ಸೇರಿದಂತೆ ಅನೇಕ ಆಟಗಾರರು ಕೆಲವು ಬಗೆ ಬಗೆಯ ಖಾದ್ಯಗಳನ್ನು ಸೇವಿಸಿ ಸಂಭ್ರಮಿಸಿದ್ದಾರೆ.

    ಐಪಿಎಲ್ 2022ರ ಆವೃತ್ತಿಯಲ್ಲಿ ಸಿಎಸ್‍ಕೆ ತಂಡವು ಅತ್ಯಂತ ಕಳಪೆ ಆಟವನ್ನು ಪ್ರದರ್ಶಿಸುತ್ತಿದೆ. ತಂಡದ ಪ್ಲೇ-ಆಫ್ ಕನಸು ಬಹುತೇಕ ಕಠಿಣವಾಗಿದ್ದರೂ ತಂಡದ ಆಟಗಾರರ ಮನಸ್ಥಿತಿಯು ಸಾಕಷ್ಟು ಲವಲವಿಕೆಯಿಂದ ಕೂಡಿದೆ. ಇದನ್ನೂ ಓದಿ: ಮುಂದಿನ ಬಾರಿ ಹಳದಿ ಜೆರ್ಸಿಯಲ್ಲಿ ಕಾಣಿಸ್ತೀನಿ ಆದರೆ…! – ಧೋನಿ ದ್ವಂದ್ವ ಹೇಳಿಕೆ

    ಈಗಾಗಲೇ ತಂಡವು ಒಟ್ಟು 9 ಪಂದ್ಯಗಳನ್ನಾಡಿ 2 ಜಯ, 6 ಸೋಲುಗಳನ್ನೊಳಗೊಂಡಿದ್ದು, ಪಾಯಿಂಟ್ಸ್ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಈ ಮಧ್ಯೆ, ರವೀಂದ್ರ ಜಡೇಜಾ ಅವರು ನಾಯಕತ್ವ ಸ್ಥಾನದಿಂದ ಕೆಳಗಿಳಿದಿದ್ದು, ಧೋನಿಗೆ ನಾಯಕ ಪಟ್ಟ ನೀಡಿದ್ದರು.

    ಭಾನುವಾರ ಮೇ 1 ರಂದು ಸನ್‍ರೈಸರ್ಸ್ ಹೈದರಾಬಾದ್ (ಎಸ್‍ಆರ್‌ಎಚ್ಈದ್ ಹಬ್ಬವನ್ನು ಆಚರಿಸಿದ ಧೋನಿ ಬಳಗ ವೀಡಿಯೋ ವೈರಲ್ ) ಅನ್ನು ಸೋಲಿಸಿದ ನಂತರ ಧೋನಿ ಬಳಗವು ಆತ್ಮವಿಶ್ವಾಸದಲ್ಲಿದೆ. ಸಿಎಸ್‍ಕೆ ಮುಂದಿನ ಪಂದ್ಯದಲ್ಲಿ ಫಾಫ್ ಡು ಪ್ಲೆಸಿಸ್ ಅವರ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧ ಬುಧವಾರ ಸೆಣಸಲಿದೆ.

  • ರಂಜಾನ್ ಹಬ್ಬದ ಶುಭ ಕೋರುವ ನೆಪದಲ್ಲಿ ತಂದೆಯ ಕೊಲೆ- ಅಪ್ರಾಪ್ತ ಮಗ ಅರೆಸ್ಟ್

    ರಂಜಾನ್ ಹಬ್ಬದ ಶುಭ ಕೋರುವ ನೆಪದಲ್ಲಿ ತಂದೆಯ ಕೊಲೆ- ಅಪ್ರಾಪ್ತ ಮಗ ಅರೆಸ್ಟ್

    ಬೆಂಗಳೂರು: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ರಂಜಾನ್ ಹಬ್ಬದ ಶುಭ ಕೋರುವ ನೆಪದಲ್ಲಿ ತಂದೆಯನ್ನೇ ಕೊಂದಿದ್ದ ಮಗನನ್ನು ಇಂದು ಪೊಲೀಸರು ಬಂಧಿಸಿದ್ದಾರೆ.

    ವಿಲ್ಸನ್ ಗಾರ್ಡನ್ ನಿವಾಸಿ ಸಯ್ಯದ್ ಮುಸ್ತಾಫ್ (47) ಮೃತ ತಂದೆ. ಮೇ 25 ರಂದು ಕಲಾಸಿಪಾಳ್ಯದ ಪಟ್ನೂಲ್ ಪೇಟೆ ರಸ್ತೆ ಬದಿ ಚಾಕುವಿನಿಂದ ಇರಿದು ಆರೋಪಿ ಮಗ ಪರಾರಿಯಾಗಿದ್ದನು. ಇದೀಗ ಆರೋಪಿ 17 ವರ್ಷದ ಅಪ್ರಾಪ್ತ ಪುತ್ರನನ್ನ ಕಲಾಸಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.

    ಮೃತ ಮುಸ್ತಾಫ್ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ವೈಯಕ್ತಿಕ ಕಾರಣದಿಂದ ಮೊದಲ ಪತ್ನಿಗೆ ವಿಚ್ಛೇದನ ನೀಡಿ ಬೇರೆ ಮಹಿಳೆ ಜೊತೆ ಮದುವೆಯಾಗಿದ್ದರು. ಆದರೆ ಮೊದಲ ಪತ್ನಿಯ ಅಪ್ರಾಪ್ತ ಪುತ್ರ ಎರಡನೇ ಮದುವೆಯನ್ನು ವಿರೋಧಿಸಿದ್ದನು. ಮೇ 25ರಂದು ಮುಸ್ತಾಫ್ ರಂಜಾನ್ ಹಬ್ಬದ ಸಲುವಾಗಿ ಕಲಾಸಿಪಾಳ್ಯದಲ್ಲಿರುವ ತನ್ನ ತಾಯಿ ಮನೆಗೆ ಬಂದಿದ್ದರು. ಇದೇ ವೇಳೆ ಆರೋಪಿ ಕೂಡ ಅಜ್ಜಿ ಮನೆಗೆ ಬಂದಿದ್ದನು.

    ಈ ವೇಳೆ ಆರೋಪಿ ತಂದೆಯನ್ನು ನೋಡಿ ಹಬ್ಬದ ಶುಭಾಶಯವನ್ನು ತಿಳಿಸಲು ಮನೆಯಿಂದ ಹೊರ ಕರೆದುಕೊಂಡು ಬಂದಿದ್ದನು. ನಂತರ ಸುಮಾರು 20 ನಿಮಿಷಗಳ ಕಾಲ ಇಬ್ಬರೂ ಮಾತನಾಡಿದ್ದಾರೆ. ಮಾತುಕತೆ ಬಳಿಕ ಆರೋಪಿ ಚಾಕುವಿನಿಂದ ತಂದೆಯ ಕುತ್ತಿಗೆಗೆ ತಿವಿದು ಪರಾರಿಯಾಗಿದ್ದನು. ಮುಸ್ತಾಫ್ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದರು.

    ಈ ಸಂಬಂಧ ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯಕ್ಕೆ ಆರೋಪಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.