Tag: Rama Rama Re

  • ನಿರ್ದೇಶನದ ಜೊತೆಗೆ ನಟನೆಗೂ ಸೈ ಎಂದ ಸತ್ಯಪ್ರಕಾಶ್

    ನಿರ್ದೇಶನದ ಜೊತೆಗೆ ನಟನೆಗೂ ಸೈ ಎಂದ ಸತ್ಯಪ್ರಕಾಶ್

    ತ್ತೀಚಿನ ದಿನಗಳಲ್ಲಿ ಹಲವು ನಿರ್ದೇಶಕರು ತಮ್ಮ ವಿಭಿನ್ನ ರೀತಿಯ ಕಥೆಯನ್ನು ತೆರೆ ಮೇಲೆ ತರಲು ತಾವೇ ನಟನೆಗಿಳಿಯುತ್ತಿದ್ದಾರೆ. ಈಗ ಆ ಸಾಲಿಗೆ ಹೊಸ ಸೇರ್ಪಡೆ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ಡಿ ಸತ್ಯಪ್ರಕಾಶ್‌ (Satya Prakash). ರಾಮಾ ರಾಮಾ ರೇ (Rama Rama Re) ಮತ್ತು ಒಂದಲ್ಲಾಎರಡಲ್ಲಾ ಸಿನಿಮಾಗಳ ಮೂಲಕ ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ನಿರ್ದೇಶಕ ಎಂದು ಹೆಸರು ಮಾಡಿದ್ದ ಇವರು ತಮ್ಮ ಮೊದಲೆರೆಡು ಸಿನಿಮಾಗಳಿಗೆ ಚಿತ್ರಗಳಿಗೆ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿಯನ್ನು ಪಡೆದವರು. ಕೆಲ ದಿನಗಳ ಹಿಂದೆಯಷ್ಟೇ ಇವರ ನಿರ್ದೇಶನಲ್ಲಿ (Director) ‘ಮ್ಯಾನ್‌ ಆಫ್‌ ದಿ ಮ್ಯಾಚ್‌’ ಎಂಬ ಸಿನಿಮಾ ಮೂಡಿ ಬಂದಿತ್ತು. ನಿರ್ದೇಶನದ ಜತೆಗೆ ತಮ್ಮದೇ ಬ್ಯಾನರ್ ನಲ್ಲಿ ನಿರ್ಮಾಣವನ್ನು ಸಹ ಮಾಡುವ ಸತ್ಯ ಸಿನಿಮಾಗಳ ವಿತರಣೆಯನ್ನು ಸಹ ಕಳೆದ ಒಂದೂವರೆ  ವರ್ಷಗಳಿಂದ ಮಾಡುತ್ತಿದ್ದಾರೆ.

    ಈಗಾಗಲೇ 35ಕ್ಕೂ ಹೆಚ್ಚಿನ ಸಿನಿಮಾಗಳನ್ನು ಸತ್ಯ ಸಿನಿ‌ ಡಿಸ್ಟ್ರಿಬ್ಯೂಟರ್ಸ್ ವತಿಯಿಂದ ವಿತರಿಸಿದ್ದಾರೆ.  ಈಗ ಅವರು ತಮ್ಮ ಮುಂದಿನ ಸಿನಿಮಾವನ್ನು ನಿರ್ದೇಶನ ಮಾಡಲು ಸಜ್ಜಾಗಿದ್ದು, ಈ ಚಿತ್ರದಲ್ಲಿ ತಾವು ಸಹ ಒಂದ ಪ್ರಮುಖ ಪಾತ್ರವನ್ನು ನಿರ್ವಹಿಸಲಿದ್ದಾರೆ.

    ಕೊಂಚ ಫ್ಯಾಂಟಸಿ ಮತ್ತು ಕಮರ್ಷಿಯಲ್‌ ಎಲಿಮೆಂಟ್‌ಗಳಿರುವ ಈ ಹೊಸ ಸಿನಿಮಾದಲ್ಲಿ ಫ್ರೆಶ್‌ ಆಗಿರುವ ನಕ್ಕು ನಗಿಸುವಂತಹ ಕಥೆಯನ್ನು ಸಿನಿಮಾದಲ್ಲಿ ಸತ್ಯಪ್ರಕಾಶ್‌ ಹೇಳಲಿದ್ದಾರೆ. ಈ ಚಿತ್ರದಲ್ಲಿ ಸತ್ಯಪ್ರಕಾಶ್‌ ಜತೆಗೆ ಅಥರ್ವ ಪ್ರಕಾಶ್ ಎಂಬ ಯುವಕ ಕೂಡಾ ನಟಿಸುತ್ತಿದ್ದಾರೆ. ಸತ್ಯಪ್ರಕಾಶ್‌ ಅವರೇ ನಿರ್ದೇಶನ ಮಾಡಿದ್ದ ‘ಮ್ಯಾನ್‌ ಆಫ್‌ ದಿ ಮ್ಯಾಚ್‌’ ಸಿನಿಮಾದಲ್ಲಿ ಅಥರ್ವ ಪ್ರಕಾಶ್   ಒಂದು ಪ್ರಮುಖ ಪಾತ್ರವನ್ನು ನಿರ್ವಹಿಸಿ ಗಮನ ಸೆಳೆದಿದ್ದರು.  ವಿಶೇಷ ಎಂದರೆ ಈ ಸಿನಿಮಾದಲ್ಲಿ ಸತ್ಯಪ್ರಕಾಶ್‌ ನಿರ್ದೇಶನ, ಮತ್ತು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವುದರ ಜತಗೆ ನಿರ್ಮಾಣವನ್ನು ಸಹ ತಮ್ಮ ಸತ್ಯಪಿಕ್ಚರ್ಸ್‌ ಬ್ಯಾನರ್‌ನಲ್ಲಿ ಮಾಡುತ್ತಿದ್ದಾರೆ.

    ಸದ್ಯಕ್ಕೆ ಸಿನಿಮಾ ಅನೌನ್ಸ್‌ಮೆಂಟ್‌ ಮಾತ್ರ ಈಗ ಮಾಡಿದ್ದು,   ಸತ್ಯಪ್ರಕಾಶ್‌ ಅವರ ಹಿಂದಿನ ಸಿನಿಮಾಗಳಲ್ಲಿ ಕೆಲಸ ಮಾಡಿದ ತಂತ್ರಜ್ಞರ ತಂಡ ಈ ಚಿತ್ರದಲ್ಲಿಯೂ ಮುಂದುವರೆಯಲಿದೆ. ಸ್ಯಾಂಡಲ್‌ವುಡ್‌ನ ಪ್ರಮುಖ ಕಲಾವಿದರು  ಈ ಸಿನಿಮಾದ ಭಾಗವಾಗಲಿದ್ದಾರೆ. ಸದ್ಯಕ್ಕೆ ಸಿನಿಮಾಗೆ ಇನ್ನೂ ಟೈಟಲ್‌ ಇಟ್ಟಿಲ್ಲ, ಸದ್ಯದಲ್ಲೇ ಸಣ್ಣ ಟೀಸರ್‌ ಮೂಲಕ ಟೈಟಲ್‌ ಅನ್ನುಅನೌನ್ಸ್‌ ಮಾಡಲಿದ್ದಾರಂತೆ. ಇನ್ನೊಂದು ವಿಶೇಷ ಎಂದರೆ ಸತ್ಯಪ್ರಕಾಶ್‌ ಕಥೆ ಬರೆದಿರುವ ‘ಕಾಲಾ ಪತ್ಥರ್‌’ ಮತ್ತು ‘ಅನ್ಲಾಕ್‌ ರಾಘವ’ ಇದೇ ವರ್ಷ ಬಿಡುಗಡೆಯಾಗಲಿದೆ. ಈ ಎರಡೂ ಸಿನಿಮಾ ಮೂಲಕ ಪ್ರೇಕ್ಷಕರಿಗೆ ಒಂದು ನಿರೀಕ್ಷೆ ಇದೆ.

     

    ‘ಈಗ ಮಾಡಲು ಹೊರಟಿರುವ ಕಥೆಯನ್ನು ನಾನೇ ಬರೆದಿದ್ದೇನೆ. ಈ ಚಿತ್ರದಲ್ಲಿಎರಡು ಪ್ರಮುಖ ಪಾತ್ರಗಳು ಬರಲಿದ್ದು, ಒಂದನ್ನು ನಾನು ನಿರ್ವಹಿಸುತ್ತಿದ್ದೇನೆ. ಪಾತ್ರಕ್ಕೆ ನಾನು ಸೂಕ್ತವಾಗಿ ಹೊಂದಿಕೆಯಾಗುತ್ತೇನೆ ಎಂದು ಅನಿಸಿ ಮೇಲೆ ನಟನಾಗಲು ನಿರ್ಧರಿಸಿದೆ. ಈಗಾಗಲೇ ಅದಕ್ಕೆ ಬೇಕಾದ ತಯಾರಿಯನ್ನು ಮಾಡಿಕೊಳ್ಳುತ್ತಿದ್ದೇನೆ. ಪ್ರೇಕ್ಷಕರನ್ನು ನಕ್ಕು ನಗಿಸುತ್ತಾ ಒಂದು ಭಾವನಾತ್ಮಕ ಕಥೆಯನ್ನು ಈ ಚಿತ್ರದಲ್ಲಿ ಹೇಳುವ ಪ್ರಯತ್ನವಾಗಲಿದೆ. ’ಎನ್ನುವುದು ಸತ್ಯಪ್ರಕಾಶ್‌ ಮಾತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಆರು ವರ್ಷಗಳ ಬಳಿಕ ಜೀ ಪಿಕ್ಚರ್ಸ್ ನಲ್ಲಿ ಸೂಪರ್ ಹಿಟ್ ‘ರಾಮಾ ರಾಮಾ ರೇ’ ಸಿನಿಮಾ

    ಆರು ವರ್ಷಗಳ ಬಳಿಕ ಜೀ ಪಿಕ್ಚರ್ಸ್ ನಲ್ಲಿ ಸೂಪರ್ ಹಿಟ್ ‘ರಾಮಾ ರಾಮಾ ರೇ’ ಸಿನಿಮಾ

    ರಾಮಾ ರಾಮಾ ರೇ  (Rama Rama Re) ಕನ್ನಡದ ಸೂಪರ್ ಹಿಟ್ ಸಿನಿಮಾಗಳಲ್ಲೊಂದು. ಥಿಯೇಟರ್ ನಲ್ಲಿ ಬರೋಬ್ಬರಿ‌ 100 ದಿನ ಪೂರೈಸಿದ್ದ ಈ ಚಿತ್ರ ಸಿದ್ಧ ಸೂತ್ರಗಳನ್ನು ಪಕ್ಕಕ್ಕಿಟ್ಟು ತಯಾರಿಸಲಾಗಿತ್ತು. ಹೊಸ ತಾರಾಗಣ, ಹೊಸ ಕಥೆಯನ್ನು ಸತ್ಯಪ್ರಕಾಶ್ ಸಿನಿಮಾಪ್ರೇಮಿಗಳಿಗೆ ಉಣಬಡಿಸಿದ್ದರು. ಇದನ್ನೂ ಓದಿ:ಯುವ ರಾಜ್‌ಕುಮಾರ್ ಸಿನಿಮಾದ ಅಪ್‌ಡೇಟ್‌ಗಾಗಿ ಕಾಯುತ್ತಿದ್ದವರಿಗೆ ಇಲ್ಲಿದೆ ಸಿಹಿ ಸುದ್ದಿ

    ಪೊಲೀಸರನ್ನು ಕೊಂದು ನೇಣು ಶಿಕ್ಷೆಗೆ ಒಳಗಾಗಿರುವ ಖೈದಿಯೊಬ್ಬ ಜೈಲಿನಿಂದ ತಪ್ಪಿಸಿಕೊಳ್ಳುವುದರಿಂದ ಆರಂಭವಾಗುವ ಸಿನಿಮಾ, ಅವನು ತಾನಾಗಿಯೇ ಜೈಲಿಗೆ ಬಂದು ಶರಣಾಗುವ ದೃಶ್ಯದೊಂದಿಗೆ ಮುಗಿಯುತ್ತದೆ. ಇದರ ಮಧ್ಯೆ ಬದುಕಲು ಅವನು ನಡೆಸುವ ಹೋರಾಟ, ಪ್ರೇಮಿಗಳ ಕಷ್ಟ, ಸೈನಿಕನ ಪತ್ನಿಯ ಪ್ರಸವ ವೇದನೆ ಎಲ್ಲವನ್ನೂ ನಿರ್ದೇಶಕ ಸತ್ಯ ಪ್ರಕಾಶ್‌ ಚೆಂದವಾಗಿ ಕಟ್ಟಿಕೊಟ್ಟಿದ್ದರು. ಅಕ್ಟೋಬರ್ 21, 2016ರಂದು ರಿಲೀಸ್ ಆಗಿದ್ದ ಈ ಚಿತ್ರ ಆರು ವರ್ಷದ ಬಳಿಕ ಟಿವಿಯಲ್ಲಿ ಪ್ರದರ್ಶನವಾಗುತ್ತಿದೆ.

    ದಸರಾ ಹಬ್ಬದ ಪ್ರಯುಕ್ತ ರಾಮಾ ರಾಮಾ ರೇ ಚಿತ್ರ ಜೀ ಪಿಕ್ಚರ್ಸ್ ನಲ್ಲಿ (OTT) ಸಂಜೆ 6ಕ್ಕೆ ಪ್ರಸಾರವಾಗಲಿದೆ. ಸತ್ಯಪ್ರಕಾಶ್ (Satya Prakash) ಚಿತ್ರಕಥೆ ಬರೆದು ನಿರ್ದೇಶನದಲ್ಲಿ ನಟರಾಜ್ (Nataraj), ಧರ್ಮಣ್ಣ ಕಡೂರ್ (Dharmanna Kadur), ಎಂ.ಕೆ.ಮಠ, ಶ್ರೀಧರ್, ರಾಧಾ ರಾಮಚಂದ್ರ, ಪ್ರಿಯಾ ಷಟಮರ್ಶನ್‌, ಶ್ರೀಧರ್‌ ಸೇರಿದಂತೆ ಎಲ್ಲ ಕಲಾವಿದರು ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದರು. ತಾಂತ್ರಿಕತೆಯಿಂದಲೂ ಗಮನ ಸೆಳೆದಿದ್ದ ರಾಮಾ ರಾಮಾ ರೇ ಕನ್ನಡದ ಪ್ರಯೋಗಾತ್ಮಕ ಸಿನಿಮಾವಾಗಿದ್ದು, ಇಂತಹ ಚಿತ್ರವನ್ನು ಥಿಯೇಟರ್ ನಲ್ಲಿ ಮಿಸ್ ಮಾಡಿಕೊಂಡವರು ಈಗ ಮನೆಯಲ್ಲಿ ನೋಡಬಹುದು.

    Live Tv
    [brid partner=56869869 player=32851 video=960834 autoplay=true]