Tag: Rama Navami

  • ಶ್ರೀ ರಾಮನವಮಿ ಇತಿಹಾಸ, ಆಚರಣೆಯ ಮಹತ್ವವೇನು?

    ಶ್ರೀ ರಾಮನವಮಿ ಇತಿಹಾಸ, ಆಚರಣೆಯ ಮಹತ್ವವೇನು?

    ಹಿಂದೂ ಹಬ್ಬಗಳಲ್ಲಿ ರಾಮನವಮಿಯೂ ಕೂಡ ಒಂದು ಪ್ರಮುಖವಾದ ಹಬ್ಬ. ರಾಮನವಮಿಯನ್ನು ಶ್ರೀ ರಾಮನ ಜನ್ಮದಿನವನ್ನಾಗಿ ಆಚರಿಸಲಾಗುತ್ತದೆ. ಚೈತ್ರ ಮಾಸದ ಶುಕ್ಲ ಪಕ್ಷದ ನವಮಿ ತಿಥಿಯಲ್ಲಿ ಅಂದರೆ ಚೈತ್ರ ಮಾಸದ ಒಂಬತ್ತನೇ ದಿನದಂದು ಶ್ರೀ ರಾಮನವಮಿ ಆಚರಿಸಲಾಗುತ್ತದೆ. ಅಥವಾ ಯುಗಾದಿ ಹಬ್ಬದ ಎಂಟು ದಿನಗಳ ನಂತರ ರಾಮನವಮಿ ಆಚರಿಸಲಾಗುತ್ತದೆ.

    ಚೈತ್ರ ಮಾಸದ ಶುಕ್ಲ ಪಕ್ಷದ ಒಂಬತ್ತನೇ ದಿನದಂದು ಶ್ರೀರಾಮ ಜನಿಸಿದ್ದು, ಏ.5 ರಂದು ಸಂಜೆ 7: 26ಕ್ಕೆ ತಿಥಿ ಪ್ರಾರಂಭವಾಗಿ ಏ.6 ರಂದು ಸಂಜೆ 7:22 ಕ್ಕೆ ಕೊನೆಗೊಳ್ಳುತ್ತದೆ. ಕೆಲವು ಕಡೆ ಚೈತ್ರ ಮಾಸದ ಪ್ರತಿಪಾದದಿಂದ 9 ದಿನಗಳವರೆಗೆ ರಾಮನವಮಿ ಉತ್ಸವ ನಡೆಯುತ್ತದೆ. ಈ ಸಮಯದಲ್ಲಿ ಕೆಲವರು 9 ದಿನಗಳ ಕಾಲ ಉಪವಾಸ ಮಾಡುವ ಆಚರಣೆಯನ್ನು ಪಾಲಿಸುತ್ತಾರೆ.

    RAMANAVAMI

    ಇತಿಹಾಸ:
    ರಾಮನವಮಿ ಶ್ರೀ ರಾಮಾಯಣದ ಪ್ರಮುಖ ಪಾತ್ರಧಾರಿ ಭಗವಾನ್ ಶ್ರೀರಾಮನ ಜನ್ಮದಿನ. ಅಯೋಧ್ಯಾಧಿಪತಿ ದಶರಥ ಹಾಗೂ ಕೌಸಲ್ಯ ಪುತ್ರನಾದ ಶ್ರೀರಾಮ ವಿಷ್ಣುವಿನ 7ನೆಯ ಅವತಾರದಲ್ಲಿ ಜನಿಸುತ್ತಾನೆ. ಪ್ರಾರಂಭದಲ್ಲಿ ದಶರಥ ಹಾಗೂ ಆತನ ಮೂವರು ಪತ್ನಿಯರಿಗೂ ಸಂತಾನ ಭಾಗ್ಯ ಇರಲಿಲ್ಲ. ಆಗ ಋಷಿ ವಶಿಷ್ಠರ ಸಲಹೆಯ ಮೇರೆಗೆ ದಶರಥ ಮಹಾರಾಜ ಪುತ್ರ ಕಾಮೇಷ್ಟಿ ಯಜ್ಞವನ್ನು ಮಾಡಿದನು. ಬಳಿಕ ರಾಣಿ ಕೌಸಲ್ಯಗೆ ರಾಮ, ಸುಮಿತ್ರಿಗೆ ಶತ್ರುಘ್ನ ಹಾಗೂ ಲಕ್ಷ್ಮಣ, ಕೈಕೆಯಿಗೆ ಭರತ ಜನಿಸಿದರು. ಹೀಗೆ ರಾಮ ಜನಿಸಿದ ದಿನವನ್ನು ಶ್ರೀರಾಮನವಮಿ ಎಂದು ಆಚರಿಸಲಾಗುತ್ತದೆ. ತ್ರೇತಾಯುಗದಲ್ಲಿ ಜನಿಸಿದ ರಾಮನನ್ನು ಪೂಜಿಸಿದರೆ ಕೆಟ್ಟ ಶಕ್ತಿಗಳು ನಿವಾರಣೆಯಾಗಿ, ದೈವಿಕ ಶಕ್ತಿ ನೆಲೆಸುತ್ತದೆ ಎಂಬುದು ನಂಬಿಕೆಯಾಗಿದೆ.

    ಆಚರಣೆ ಹೇಗೆ?
    ಶ್ರೀರಾಮ ನವಮಿಯಂದು ಭಕ್ತರು ಉಪವಾಸ ಮಾಡಿ ಶ್ರೀರಾಮನಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ರಾಮಾಯಣ ಪಾರಾಯಣ ಮಾಡುವುದು ಈ ಹಬ್ಬದ ಇನ್ನೊಂದು ವಿಶೇಷ. ಜೊತೆಗೆ ಭಜನೆ ರಾಮನ ಕೀರ್ತನೆಗಳನ್ನು 30 ಪಠಿಸುತ್ತಾರೆ. ಅನೇಕ ಕಡೆಗಳಲ್ಲಿ ರಾಮನ ದೇಗುಲಗಳಲ್ಲಿ ಕೀರ್ತನೆ, ರಥೋತ್ಸವ, ಪಲ್ಲಕ್ಕಿ ಉತ್ಸವ ಹಾಗೂ ಜಾತ್ರೆಯನ್ನು ಆಯೋಜಿಸಲಾಗುತ್ತದೆ. ಕೆಲವು ಕಡೆ 9 ದಿನದ ರಾಮನ ಉತ್ಸವವನ್ನು ಆಚರಿಸಲಾಗುತ್ತದೆ. ಸಾಮಾನ್ಯವಾಗಿ ರಾಮ ಪಟ್ಟಾಭಿಷೇಕ ಹಾಗೂ ರಾಮ ಪಂಚಾಯತನದ ಪಟವನ್ನು ಇಟ್ಟು ಪೂಜೆ ಮಾಡುತ್ತಾರೆ. ರಾಮನವಮಿಯಂದು ಪಾನಕ ಕೋಸಂಬರಿ ನೈವೇದ್ಯ ಇಟ್ಟು ಪೂಜೆ ಮಾಡೋದು ವಿಶೇಷ. ಇನ್ನು ಕೆಲವರು ರಾಮನವಮಿಯಂದು ರಾಮ ನಾಮ ಬರೆಯುತ್ತಾರೆ.

    ದೇಶದ ಕೆಲವು ಪ್ರದೇಶಗಳಲ್ಲಿ ವಿಜೃಂಭಗಳಿಂದ ರಾಮನವಮಿ ಆಚರಿಸಲಾಗುತ್ತದೆ.
    ಅಯೋಧ್ಯೆ: ಶ್ರೀ ರಾಮನ ಜನ್ಮಸ್ಥಳವಾದ ಅಯೋಧ್ಯೆಯಲ್ಲಿ ಶ್ರೀರಾಮನವಮಿಯಂದು ವಿಜೃಂಭಣೆಯಿಂದ ಪೂಜೆ, ಪವಿತ್ರ ಸ್ನಾನ, ಭವ್ಯ ಮೆರವಣಿಗೆ, ರಾಮಾಯಣ ಪಾಠ ನಡೆಯುತ್ತದೆ.

    ಸೀತಾಮಡಿ
    ಸೀತಾದೇವಿಯ ಜನ್ಮಸ್ಥಳವಾದ ಸೀತಾಮಡಿಯಲ್ಲಿ ರಾಮನವಮಿಯನ್ನು ಭಕ್ತಿ ಭಾವದಿಂದ ಆಚರಿಸಲಾಗುತ್ತದೆ. ವಿಶೇಷ ಪೂಜೆ, ಜಾತ್ರೆ ಕೂಡ ನಡೆಯುತ್ತದೆ.

    ಭದ್ರಾಚಲಂ:
    ಶ್ರೀರಾಮನವಮಿಯಂದು ಈ ದೇವಾಲಯದಲ್ಲಿ ಶ್ರೀ ಸೀತಾರಾಮ ಕಲ್ಯಾಣೋತ್ಸವ ವಿಜೃಂಭಣೆಯಿಂದ ನಡೆಯುತ್ತದೆ. ದೇಶದೆಲ್ಲಡೆ ಭಕ್ತಾದಿಗಳು ಈ ದಿವ್ಯ ಕ್ಷಣವನ್ನು ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿರುತ್ತಾರೆ.

    ರಾಮೇಶ್ವರಂ:
    ರಾಮನ ತೀರ್ಥಯಾತ್ರೆಯ ಪ್ರಮುಖ ಕೇಂದ್ರಗಳಲ್ಲಿ ಒಂದಾದ ರಾಮೇಶ್ವರಂ ನಲ್ಲಿ ರಾಮನವಮಿ ಎಂದು ವಿಶೇಷ, ಹೋಮ ಮತ್ತು ಮಹಾಪ್ರಸಾದ ವಿತರಣೆಯೊಂದಿಗೆ ಆಚರಿಸಲಾಗುತ್ತದೆ.

  • ಆಧ್ಯಾತ್ಮಿಕ ಶಕ್ತಿ ನೀಡುವ ಶ್ರೀರಾಮ ದೇವಾಲಯಗಳಿವು…!

    ಆಧ್ಯಾತ್ಮಿಕ ಶಕ್ತಿ ನೀಡುವ ಶ್ರೀರಾಮ ದೇವಾಲಯಗಳಿವು…!

    ಭಾರತೀಯ ಸಂಸ್ಕೃತಿಯ ಬುನಾದಿಯೇ ರಾಮಾಯಣ ಮಹಾಕಾವ್ಯ. ಯುಗಯುಗಾಂತರಗಳಿಂದ ಧರ್ಮದ ಬೇರಾಗಿ, ಜನಪದ ಜೀವನ ಸೂತ್ರವಾಗಿ, ಭರತಖಂಡದ ಮಾರ್ಗದರ್ಶಿಯಾಗಿದೆ. ರಾಮನ ಆದರ್ಶ, ಲಕ್ಷ್ಮಣನ ತ್ಯಾಗ, ಸೀತೆಯ ನಿಷ್ಠೆ, ಹನುಮಂತನ ಸ್ವಾಮಿ ಭಕ್ತಿ, ರಾಮರಾಜ್ಯದ ಕನಸುಗಳು ಇಂದಿಗೂ ಭಾರತೀಯ ವಿಚಾರಧಾರೆಯ ಸ್ಪೂರ್ತಿಸೆಲೆಯಾಗಿದೆ.

    ನೀವು ಭಾರತದ ಯಾವುದೇ ಮೂಲೆಗೆ ಹೋದರೂ ರಾಮ ಎನ್ನುವ ಹೆಸರನ್ನು ಕೇಳಬಹುದು. ಯಾಕೆಂದರೆ ಆ ಹೆಸಡರಿನ ದೇವನಿಗೆ ಅಷ್ಟೊಂದು ಮಹತ್ವವಿದೆ ಮತ್ತು ಭಕ್ತರಿದ್ದಾರೆ. ಭಗವಾನ್ ರಾಮನು ವಿಷ್ಣುವಿನ 7ನೇ ಅವತಾರ ಎಂಬುದು ಪುರಾಣಗಳ ಉಲ್ಲೇಖ ಮತ್ತು ಪ್ರಪಂಚದಾದ್ಯಂತದ ಹಿಂದೂಗಳಿಂದ ಪೂಜಿಸಲ್ಪಡುವ ದೇವ. ರಾಮನು ಅತ್ಯಂತ ಶಕ್ತಿಶಾಲಿ ಮತ್ತು ಬುದ್ಧಿವಂತ ರಾಕ್ಷಸನಾದ ರಾವಣನನ್ನು ಸೋಲಿಸಿದನು ಮತ್ತು ಅವನ ದುಷ್ಟತನದಿಂದ ನಮ್ಮನ್ನು ರಕ್ಷಿಸಿದನು. ಆದ್ದರಿಂದಲೇ ರಾಮನು ಭಾರತದ ದಿವ್ಯ ಭೂಮಿಯ ಪ್ರತಿಯೊಬ್ಬರ ಹೃದಯದಲ್ಲೂ, ಪ್ರತಿಯೊಂದು ಮೂಲೆಯಲ್ಲೂ ನೆಲೆಸಿದ್ದಾನೆ. ಆದ್ದರಿಂದಲೇ ಭಾರತದ ಪ್ರತಿಯೊಂದು ಸ್ಥಳದಲ್ಲೂ ಒಂದಿಲ್ಲೊಂದು ರೂಪದಲ್ಲಿ ಶ್ರೀರಾಮನ ದೇವಾಲಯಗಳನ್ನು ಕಾಣುತ್ತೇವೆ. ಆಧ್ಯಾತ್ಮಿಕ ಅನುಭವ ಪಡೆಯಲು ಭಯಸುವವರು ಶ್ರೀರಾಮನವಮಿಯಂದು ರಾಮನ ದೇವಾಲಯಗಳಿಗೆ ಭೇಟಿ ನೀಡಿ ಸಂತೃಪ್ತಿ ಪ್ರಾಪ್ತಿ ಮಾಡಿಕೊಳ್ಳುತ್ತಾರೆ. ಇನ್ನೂ ಕೆಲವರು ಮನೆಯಲ್ಲೇ ಶ್ರೀರಾಮನ ಭಜನೆ, ಭಕ್ತಿ ಗೀತೆಗಳನ್ನು ಹಾಡಿ ತಮ್ಮ ಭಕ್ತಿಯನ್ನ ಸೂಚಿಸುತ್ತಾರೆ. ಹಾಗಾದ್ರೆ ಕರ್ನಾಟಕವೂ ಸೇರಿದಂತೆ ದೇಶದಲ್ಲಿ ಆಧ್ಯಾತ್ಮಿಕ ಶಕ್ತಿಗೆ ಹೆಸರು ವಾಸಿಯಾಗಿರುವ ದೇವಾಲಯಗಳ ಬಗ್ಗೆ ತಿಳಿಯೋಣ..

    ಉತ್ತರ ಪ್ರದೇಶದ ಅಯೋಧ್ಯೆ ರಾಮಮಂದಿರ
    ಅಯೋಧ್ಯೆಯಲ್ಲಿರುವ ರಾಮಮಂದಿರವು ಯಾವಾಗಲೂ ಹಿಂದೂಗಳಿಗೆ ಅತ್ಯಂತ ಶ್ರೇಷ್ಠವಾದ ಸ್ಥಳವಾಗಿದೆ. ಏಕೆಂದರೆ ಇದು ರಾಮನ ಜನ್ಮಸ್ಥಳವಾದ ʻರಾಮ ಜನ್ಮ ಭೂಮಿ’ ಎಂದು ಹೇಳಲಾಗುತ್ತದೆ. ಫೈಜಾಬಾದ್ ಜಿಲ್ಲೆಯ ಸರಯು ನದಿಯ ದಡದಲ್ಲಿರುವ ಈ ರಾಮಮಂದಿರವು ಹಿಂದೂಗಳಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ಪ್ರತಿ ವರ್ಷ ಸಾವಿರಾರು ಭಕ್ತರು ತಮ್ಮ ಆದರ್ಶ ರಾಜ ಶ್ರೀರಾಮ ಜನಿಸಿದ ಸ್ಥಳವನ್ನು ನೋಡಲು ಈ ದೈವಿಕ ಭೂಮಿಗೆ ಬರುತ್ತಾರೆ. ಅದರಲ್ಲೂ ಅಯೋಧ್ಯೆ ರಾಮ ಮಂದಿರ ನಿರ್ಮಾಣದ ಬಳಿಕ ಇಲ್ಲಿಗೆ ಭೇಟಿ ನೀಡುವ ಶ್ರೀರಾಮಭಕ್ತರ ಸಂಖ್ಯೆ ಇನ್ನಷ್ಟು ಹೆಚ್ಚಾಗಿದೆ.

    ​ತ್ರಿಪ್ರಯಾರ್ ಶ್ರೀ ರಾಮ ದೇವಸ್ಥಾನ, ಕೇರಳ​

    ​ತ್ರಿಪ್ರಯಾರ್ ಶ್ರೀ ರಾಮ ದೇವಸ್ಥಾನ, ಕೇರಳ​
    ತ್ರಿಪ್ರಯಾರ್ ಶ್ರೀರಾಮ ದೇವಾಲಯವು ಕೇರಳದ ತ್ರಿಶೂರ್ ಜಿಲ್ಲೆಯಲ್ಲಿದೆ. ಈ ರಾಮ ಮಂದಿರವು ಇಲ್ಲಿ ಸ್ಥಾಪಿಸಲಾದ ವಿಗ್ರಹದ ಹಿಂದೆ ಬಹಳ ಆಕರ್ಷಕವಾದ ಕಥೆಯನ್ನು ಹೊಂದಿದೆ. ತ್ರಿಪ್ರಯಾರ್‌ನಲ್ಲಿ ಇರಿಸಲಾಗಿರುವ ವಿಗ್ರಹವನ್ನು ಭಗವಾನ್ ವಿಷ್ಣುವಿನ ಅವತಾರವೆಂದು ಪರಿಗಣಿಸಲಾದ ಶ್ರೀಕೃಷ್ಣನು ಪೂಜಿಸಲು ಬಳಸುತ್ತಿದ್ದನೆಂದು ನಂಬಲಾಗಿದೆ. ಈ ವಿಗ್ರಹವು ಒಮ್ಮೆ ಸಮುದ್ರದ ಪಾಲಾಗಿತ್ತು. ಆದರೆ, ಕೇರಳದ ಮೀನುಗಾಗರರಿಗೆ ಸಿಕ್ಕಿ ಮತ್ತೆ ಇದನ್ನು ಮರು ಸ್ಥಾಪನೆ ಮಾಡಲಾಗಿದೆ. ಈ ಆಕರ್ಷಕವಾದ ದೇವಾಲಯದಲ್ಲಿ ನೀವು ಆಸಕ್ತಿದಾಯಕ ಶಿಲ್ಪಗಳು ಮತ್ತು ಮರದ ಕೆತ್ತನೆಗಳನ್ನು ಕಾಣಬಹುದು, ಇದು ಭಾರತದ ಅತ್ಯುತ್ತಮ ರಾಮ ದೇವಾಲಯಗಳಲ್ಲಿ ಒಂದಾಗಿದೆ. ತ್ರಿಪ್ರಯಾರ್‌ಗೆ ಭೇಟಿ ನೀಡುವುದರಿಂದ ನಿಮ್ಮ ಸುತ್ತಮುತ್ತಲಿನ ಎಲ್ಲಾ ನಕಾರಾತ್ಮಕ ಶಕ್ತಿಗಳು ದೂರಾಗುತ್ತದೆ ಎನ್ನುವ ನಂಬಿಕೆ ಈಗಲೂ ಜನರಿಗೆ ಇದೆ.

    ನಾಸಿಕ್‌ನ ​ಕಲಾರಾಮ ಮಂದಿರ

    ನಾಸಿಕ್‌ನ ​ಕಲಾರಾಮ ಮಂದಿರ
    ನಾಸಿಕ್‌ನ ಕಲಾರಾಮ ಮಂದಿರವು ಮಹಾರಾಷ್ಟ್ರದ ನಾಸಿಕ್‌ನ ಪಂಚವಟಿ ಪ್ರದೇಶದಲ್ಲಿ ನೆಲೆಗೊಂಡಿರುವ ಭಾರತದ ಒಂದು ಅದ್ಭುತವಾದ ರಾಮಮಂದಿರವಾಗಿದೆ. ಕಲಾರಾಮ ಎಂದರೆ ‘ಕಪ್ಪು ರಾಮ’ ಎಂದರ್ಥ ಮತ್ತು ರಾಮನ 2 ಅಡಿ ಎತ್ತರದ ಕಪ್ಪು ಪ್ರತಿಮೆಯಿಂದಾಗಿ ಈ ದೇವಾಲಯಕ್ಕೆ ಈ ಹೆಸರು ಬಂದಿದೆ. ಸೀತಾದೇವಿ ಮತ್ತು ಲಕ್ಷ್ಮಣನ ವಿಗ್ರಹಗಳನ್ನು ಸಹ ಇಲ್ಲಿ ಸ್ಥಾಪಿಸಲಾಗಿದೆ. ರಾಮನನ್ನು 14 ವರ್ಷಗಳ ಕಾಲ ವನವಾಸಕ್ಕೆ ಕಳುಹಿಸಿದಾಗ, ಹತ್ತನೇ ವರ್ಷದ ನಂತರ, ಅವನು ಸೀತೆ ಮತ್ತು ಲಕ್ಷ್ಮಣನೊಂದಿಗೆ ಪಂಚವಟಿಯಲ್ಲಿ ಗೋದಾವರಿ ನದಿಯ ಪಕ್ಕದಲ್ಲಿ ವಾಸಿಸಲು ಬಂದಿದ್ದನು ಎಂದು ನಂಬಲಾಗಿದೆ. ಒಮ್ಮೆ ಕನಸಿನಲ್ಲಿ ಸರ್ದಾರ್‌ ರಂಗರೂ ಓಧೇಕರ್‌ ಗೋದಾವರಿ ನದಿಯಲ್ಲಿ ಕಪ್ಪು ಕಲ್ಲಿನ ದೃಶ್ಯವನ್ನು ನೋಡುತ್ತಾರೆ. ಮರುದಿನ ನದಿಯಿಂದ ಆ ಕಪ್ಪು ಕಲ್ಲನ್ನು ತೆಗೆದು ಕಲಾರಾಮ ರಾಮ ಮಂದಿರಲ್ಲಿ ನಿರ್ಮಿಸಿದರು.

    ತೆಲಂಗಾಣದ ಸೀತಾ ರಾಮಚಂದ್ರಸ್ವಾಮಿ ದೇವಸ್ಥಾನ

    ತೆಲಂಗಾಣದ ಸೀತಾ ರಾಮಚಂದ್ರಸ್ವಾಮಿ ದೇವಸ್ಥಾನ
    ಸೀತಾ ರಾಮಚಂದ್ರಸ್ವಾಮಿ ದೇವಾಲಯವು ಭಾರತದ ಅತ್ಯಂತ ಪ್ರಸಿದ್ಧವಾದ ರಾಮಮಂದಿರಗಳಲ್ಲಿ ಒಂದಾಗಿದೆ. ಲಂಕೆಯಿಂದ ಸೀತೆಯನ್ನು ಮರಳಿ ಕರೆತರಲು ರಾಮನು ಗೋದಾವರಿ ನದಿಯನ್ನು ದಾಟಿದ ಮಹತ್ವಪೂರ್ಣ ಇತಿಹಾಸವನ್ನು ಹೊಂದಿದೆ. ದೇವಾಲಯದ ಒಳಗೆ ಪ್ರತಿಷ್ಠಾಪಿಸಲಾದ ವಿಗ್ರಹವು ತ್ರಿಭಂಗನ ಭಂಗಿಯಲ್ಲಿದೆ. ಭಗವಾನ್ ರಾಮನು ತನ್ನ ಕೈಯಲ್ಲಿ ಧನಸ್ಸು ಮತ್ತು ಬಾಣವನ್ನು ಹಿಡಿದಿದ್ದಾನೆ ಮತ್ತು ಸೀತಾ ದೇವಿಯು ಕೈಯಲ್ಲಿ ಕಮಲವನ್ನು ಹಿಡಿದು ಅವನ ಪಕ್ಕದಲ್ಲಿ ನಿಂತಿದ್ದಾಳೆ.

    ​ರಾಮರಾಜ ದೇವಾಲಯ, ಮಧ್ಯಪ್ರದೇಶ

    ​ರಾಮರಾಜ ದೇವಾಲಯ, ಮಧ್ಯಪ್ರದೇಶ
    ರಾಮರಾಜ ದೇವಾಲಯವು ಭಾರತದಲ್ಲಿ ರಾಮನನ್ನು ದೇವರಂತೆ ಅಲ್ಲ, ರಾಜನಾಗಿ ಪೂಜಿಸುವ ಏಕೈಕ ದೇವಾಲಯವಾಗಿದೆ. ಈ ರಾಮಮಂದಿರವನ್ನು ಭವ್ಯವಾದ ಕೋಟೆಯಾಗಿ ನಿರ್ಮಿಸಲಾಗಿದ್ದು, ಜೊತೆಗೆ ಪೊಲೀಸರು ದೇವಾಲಯದ ಕಾವಲುಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರತಿ ದಿನ ರಾಜ ರಾಮನಿಗೆ ಆಯುಧ ನಮಸ್ಕಾರವನ್ನು ನೀಡಲಾಗುತ್ತದೆ. ಇದು ಭಾರತದ ಅತ್ಯುತ್ತಮ ರಾಮ ದೇವಾಲಯಗಳಲ್ಲಿ ಒಂದಾಗಿದೆ.

    ಧರ್ಮಸ್ಥಳ ರಾಮ ಮಂದಿರ

    ಧರ್ಮಸ್ಥಳ ರಾಮ ಮಂದಿರ
    ನೇತ್ರಾವತಿ ನದಿಯ ತೀರದಲ್ಲಿರುವ ಧರ್ಮಸ್ಥಳದ ರಾಮ ಮಂದಿರವು ಶ್ರೀ ಮಂಜುನಾಥ ದೇವಾಲಯದಿಂದ 3.5 ಕಿ.ಮೀ ದೂರದಲ್ಲಿದೆ. ಆಧ್ಯಾತ್ಮಿಕ ಕೇಂದ್ರವಾಗಿರುವುದರ ಜೊತೆಗೆ, ದೇವಾಲಯದ ತಾಣವು ಸಾಟಿಯಿಲ್ಲದ ನೈಸರ್ಗಿಕ ಸೌಂದರ್ಯವನ್ನು ಹೊಂದಿದೆ. ಪುರಾಣದ ಪ್ರಕಾರ, ಭಗವಾನ್ ರಾಮನು ‘ಸೀತಾನ್ವೇಷಣೆ ’ ಅಂದರೆ ಸೀತೆಯನ್ನು ಹುಡುಕುತ್ತಿದ್ದ ಸಮಯದಲ್ಲಿ ಸ್ವಲ್ಪ ಕಾಲ ಇಲ್ಲಿಯೇ ಇದ್ದರು. ಶ್ರೀಮಂತ ವಿನ್ಯಾಸ ಕಲಾತ್ಮಕ ಸೌಂದರ್ಯದಿಂದ ಸಮೃದ್ಧವಾಗಿರುವ ಈ ದೇವಾಲಯದಲ್ಲಿ ತಮಿಳುನಾಡಿನ ‘ವಾಸ್ತು’, ರಾಜಸ್ಥಾನದ ಶ್ರೀಮಂತ ಗ್ರಾನೈಟ್ ಕಲ್ಲುಗಳು, ಆಂಧ್ರಪ್ರದೇಶ, ಮಹಾರಾಷ್ಟ್ರ, ಕೇರಳ, ತಮಿಳುನಾಡು ಮತ್ತು ರಾಜಸ್ಥಾನದ ಶಿಲ್ಪಿಗಳು ಕೆತ್ತಿದ ಸುಂದರ ವಿನ್ಯಾಸಗಳಿವೆ.

  • ರಾಮನವಮಿ ಮೆರವಣಿಗೆ ದಿನ ಬಾಂಬ್‌ ಸ್ಫೋಟ – NIA ತನಿಖೆಗೆ ಆದೇಶ

    ರಾಮನವಮಿ ಮೆರವಣಿಗೆ ದಿನ ಬಾಂಬ್‌ ಸ್ಫೋಟ – NIA ತನಿಖೆಗೆ ಆದೇಶ

    ಕೋಲ್ಕತ್ತಾ: ರಾಮನವಮಿ ಮೆರವಣಿಗೆ (RamaNavami) ದಿನ ಬಾಂಬ್‌ ಸ್ಫೋಟಗೊಂಡ ಪ್ರಕರಣದ ತನಿಖೆಯನ್ನು ಕೋಲ್ಕತ್ತಾ ಹೈಕೋರ್ಟ್‌ (Kolkata High Court) ರಾಷ್ಟ್ರೀಯ ತನಿಖಾ ದಳಕ್ಕೆ (NIA) ವಹಿಸಿ ಆದೇಶಿಸಿದೆ.

    ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ನಡೆದ ಘಟನೆಯ ತನಿಖೆಯನ್ನು ಸಿಬಿಐ (CBI) ಮತ್ತು ಎನ್‌ಐಎಯಿಂದ ನಡೆಸಬೇಕೆಂದು ಕೋರಿ ಎರಡು ಸಾರ್ವಜನಿಕ ಅರ್ಜಿ (PIL) ಸಲ್ಲಿಕೆಯಾಗಿತ್ತು. ಇದನ್ನೂ ಓದಿ: ಕರ್ತವ್ಯ ನಿರತ ಚುನಾವಣಾ ಮಹಿಳಾ ಸಿಬ್ಬಂದಿ ನಿಧನ

    ಅರ್ಜಿ ವಿಚಾರಣೆ ನಡೆಸಿದ ಕೋರ್ಟ್‌ ಬಾಂಬ್‌ ಸ್ಫೋಟದ ತನಿಖೆ ಎನ್‌ಐಎ ವ್ಯಾಪ್ತಿಗೆ ಬರುತ್ತದೆ ಎಂದು ಹೇಳಿ ತನಿಖೆ ನಡೆಸುವಂತೆ ಆದೇಶಿಸಿತು.

    ಕೋರ್ಟ್‌ ಮುಂದಿನ ವಿಚಾರಣೆಯನ್ನು ಮೇ 10ಕ್ಕೆ ಮುಂದೂಡಿದ್ದು ಈ ವೇಳೆ ಎನ್‌ಐಎ ತನಿಖೆಯ ವರದಿ ಸಲ್ಲಿಸಬೇಕೆಂದು ಸೂಚಿಸಿದೆ.

  • 500 ವರ್ಷದ ಬಳಿಕ ರಾಮನವಮಿಯಂದು ಅಯೋಧ್ಯೆಯಲ್ಲಿ ಬಾಲ ರಾಮನಿಗೆ ಅಭಿಷೇಕ, ಸೂರ್ಯ ತಿಲಕ!

    500 ವರ್ಷದ ಬಳಿಕ ರಾಮನವಮಿಯಂದು ಅಯೋಧ್ಯೆಯಲ್ಲಿ ಬಾಲ ರಾಮನಿಗೆ ಅಭಿಷೇಕ, ಸೂರ್ಯ ತಿಲಕ!

    ಅಯೋಧ್ಯೆ: 500 ವರ್ಷದ ಬಳಿಕ ಶ್ರೀರಾಮನ ಹುಟ್ಟಿದ ಸ್ಥಳ ಅಯೋಧ್ಯೆಯಲ್ಲಿ(Ayodhya) ರಾಮನವಮಿಯಂದು (Rama Navami) ಬಾಲರಾಮನಿಗೆ ಸೂರ್ಯ ಅಭಿಷೇಕ (Surya Tilak)ನಡೆಯಿತು.

    ಭಗವಾನ್ ಶ್ರೀರಾಮನ ಜನ್ಮ ಮುಹೂರ್ತದ ವೇಳೆಯಲ್ಲೇ ಮಧ್ಯಾಹ್ನ 12 ಗಂಟೆಯ  ನಂತರ ಸೂರ್ಯ ರಶ್ಮಿ ರಾಮ ಲಲ್ಲಾನ ವಿಗ್ರಹದ ಹಣೆಯನ್ನು ಸ್ಪರ್ಶಿಸಿತು.

     

    ರಾಮ ಮಂದಿರದಲ್ಲಿ (Ram Mandir) ಸೂಕ್ತ ಸ್ಥಳಗಳಲ್ಲಿ ಅಳವಡಿಸಿರುವ ಮಸೂರಗಳು ಸೂರ್ಯನ ಕಿರಣವನ್ನು ರಾಮ ಲಲ್ಲಾ ಮೂರ್ತಿಯ ಹಣೆಯನ್ನು ಸ್ಪರ್ಶಿಸಿತು. ಯಾವುದೇ ಬ್ಯಾಟರಿ ಅಥವಾ ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಕೆ ಮಾಡದೇ ಸೂರ್ಯನ ಕಿರಣಗಳು ನೇರವಾಗಿ ಬಾಲ ರಾಮನ ಹಣೆಯನ್ನು ಸ್ಪರ್ಶಿಸುವಂತೆ ಮಾಡಲು ಮಸೂರಗಳನ್ನು ಮಾತ್ರ ಬಳಕೆ ಮಾಡಲಾಗಿತ್ತು.  ಇದನ್ನೂ ಓದಿ: ಅಯೋಧ್ಯೆ ರಾಮಮಂದಿರಕ್ಕೆ ಬೆಂಗಳೂರಿನ ಕಂಪನಿಯಿಂದ ‘ಸೂರ್ಯ ತಿಲಕ ಯಂತ್ರ’ ಕೊಡುಗೆ – ಏನಿದರ ವೈಶಿಷ್ಟ್ಯ?

    ಬಾಲಕ ರಾಮ ಪ್ರಾಣ ಪ್ರತಿಷ್ಠಾಪನೆಯಾದ ನಂತರ ಮೊದಲ ರಾಮನವಮಿ ನಡೆಯುತ್ತಿದ್ದು, ಅಯೋಧ್ಯೆಯಲ್ಲಿ ಸಡಗರ ಕಳೆಗಟ್ಟಿದೆ. ಜಾನೆಯೇ ಬೆಳಗಿನ ಜಾವ 3.30ಕ್ಕೆ ಮಂಗಳಾರತಿ ನೆರವೇರಿಸುವುದರ ಮೂಲಕ ಗರ್ಭಗುಡಿ ಬಾಗಿಲು ತೆರೆಯಲಾಗಿದೆ. ರಾತ್ರಿ 11 ರ ತನಕವೂ ಭಕ್ತರಿಗೆ ರಾಮನ ದರ್ಶನ ಸಿಗಲಿದೆ. ಇಂದು ಬರೋಬ್ಬರಿ 19 ಗಂಟೆಗಳ ಕಾಲ ರಾಮ ಮಂದಿರ ಓಪನ್ ಇರಲಿದೆ.

    ಸಂಭ್ರಮದ ಹಬ್ಬಕ್ಕೆ ಮಂದಿರದ ಆಡಳಿತ ಮಂಡಳಿ ಈಗಾಗಲೇ ಸಕಲ ಸಿದ್ಧತೆ ಮಾಡಿದೆ. ಹಬ್ಬದ ದಿನದಂದು ರಾಮನಿಗೆ ಉಣಬಡಿಸಲು 56 ಬಗೆಯ ಭೋಗ್ ಪ್ರಸಾದಗಳನ್ನು ಸಿದ್ಧಪಡಿಸಲಾಗಿದೆ. ಇದರ ಜೊತೆಗೆ ದೇವ್ರ ಹಂಸ್ ಟ್ರಸ್ಟ್ ನಿಂದ ಈಗಾಗಲೇ 1,11,111 ಕೆ.ಜಿ ಲಡ್ಡು ಪ್ರಸಾದವನ್ನು ಅಯೋಧ್ಯೆಗೆ ನೀಡಲಾಗಿದ್ದು, ದೇಗುಲಕ್ಕೆ ಬರುವ ಭಕ್ತರಿಗೆ ವಿತರಿಸಲಾಗುತ್ತದೆ.

    ಮಂದಿರ ಉದ್ಘಾಟನೆಯಾದ ಬಳಿಕ ಆಚರಿಸುತ್ತಿರುವ ಮೊದಲ ರಾಮನವಮಿ ಆಗಿರುವ ಕಾರಣದಿಂದ ಹೆಚ್ಚಿನ ಸಂಖ್ಯೆ ರಾಮಭಕ್ತರು ಸೇರುವ ನಿರೀಕ್ಷೆಯಿದೆ. ರಾಮನವಮಿ ಸಂಭ್ರಮದಲ್ಲಿ ಅಯೋಧ್ಯೆಗೆ 40 ಲಕ್ಷ ಜನ ಭಕ್ತರು ಬರುವ ನಿರೀಕ್ಷೆಯಿದೆ. ಗಣ್ಯ ಅತಿಥಿಗಳು ಏ.19 ರ ತನಕ ರಾಮದರ್ಶನ ಮುಂದೂಡಿ ಎಂದಿರುವ ರಾಮಜನ್ಮ ಭೂಮಿ ಟ್ರಸ್ಟ್ ಈ 19 ರ ತನಕ ಬುಕ್ಕಿಂಗ್ ರದ್ದು ಮಾಡಿದ್ದು, ಎಲ್ಲರೂ ಸರತಿ ಸಾಲಿನಲ್ಲಿಯೇ ನಿಂತು ದರ್ಶನ ಪಡೆಯುವಂತೆ ಹೇಳಿದೆ. ಬಾಲಕರಾಮನ ಪೂಜೆ ಕೈಂಕರ್ಯಗಳು ನೇರ ಪ್ರಸಾರಗೊಳ್ಳುತ್ತಿದ್ದು, ಅಯೋಧ್ಯೆಯಾದ್ಯಂತ 100 ಎಲ್ಇಡಿ ಪರದೆಯ ವ್ಯವಸ್ಥೆಯನ್ನು ಮಾಡಲಾಗಿದೆ.

  • ಅಯೋಧ್ಯೆಯಲ್ಲಿ ‘ಜೈ ಶ್ರೀರಾಮ್‌’ ಎಂದ ಶಿಲ್ಪಿ ಅರುಣ್‌ ಯೋಗಿರಾಜ್‌ ಕುಟುಂಬ

    ಅಯೋಧ್ಯೆಯಲ್ಲಿ ‘ಜೈ ಶ್ರೀರಾಮ್‌’ ಎಂದ ಶಿಲ್ಪಿ ಅರುಣ್‌ ಯೋಗಿರಾಜ್‌ ಕುಟುಂಬ

    ಅಯೋಧ್ಯೆ: ನಾಳೆ ರಾಮನವಮಿ (Rama Navami) ಹಬ್ಬದ ಹಿನ್ನೆಲೆಯಲ್ಲಿ ಅಯೋಧ್ಯೆ ರಾಮಮಂದಿರದಲ್ಲಿ ವಿಶೇಷ ಆಚರಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ರಾಮಲಲ್ಲಾ ವಿಗ್ರಹ ಶಿಲ್ಪಿ ಅರುಣ್ ಯೋಗಿರಾಜ್ (Sculptor Arun Yogiraj) ಕುಟುಂಬ ಈಗಾಗಲೇ ಅಯೋಧ್ಯೆ ತಲುಪಿದೆ.

    ಹೌದು. ರಾಮಂದಿರದಲ್ಲಿ ರಾಮಲಲ್ಲಾ (Rama Lalla) ಪ್ರಾಣಪ್ರತಿಷ್ಠಾಪನೆಯಾದ ಬಳಿಕ ಮೊದಲ ರಾವನವಮಿ ಹಬ್ಬ ಇದಾಗಿದ್ದು, ಈ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ (Ayodhya Ram Mandir) ಸಂಭ್ರಮ ಮನೆ ಮಾಡಿದೆ. ಈ ಸಂಭ್ರಮದಲ್ಲಿ ಭಾಗಿಯಾಗಲು ಅರುಣ್‌ ಕುಟುಂಬ ಆಗಮಿಸಿದೆ.

    ಈ ವೇಳೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅರುಣ್‌ ಅವರು, ರಾಮಲಲ್ಲಾನ ‘ಪ್ರಾಣ ಪ್ರತಿಷ್ಠಾ’ ಸಮಾರಂಭದ ನಂತರ ಮೊದಲ ಬಾರಿಗೆ ಕುಟುಂಬ ಸಮೇತ ಬಂದಿದ್ದೇನೆ. ನನ್ನ ಕೆಲಸವನ್ನು ನೋಡಿ ಕುಟುಂಬ ಸಂತಸಗೊಂಡಿದೆ. ರಾಮನವಮಿ ಆಚರಣೆಗಾಗಿ ನಾವು ಕಾತರದಿಂದ ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರಕ್ಕೆ ಬೆಂಗಳೂರಿನ ಕಂಪನಿಯಿಂದ ‘ಸೂರ್ಯ ತಿಲಕ ಯಂತ್ರ’ ಕೊಡುಗೆ – ಏನಿದರ ವೈಶಿಷ್ಟ್ಯ?

    ಈ ಹಿಂದೆ ಬೆಂಗಳೂರಿನಲ್ಲಿ ಮಾತನಾಡಿದ್ದ ಶಿಲ್ಪಿ, ಜನವರಿ 22 ರ ಬಳಿಕ ಅಯೋಧ್ಯೆಗೆ ಭೇಟಿ ನೀಡಿಲ್ಲ. ಇದೀಗ ರಾಮಲಲ್ಲಾ ವಿಗ್ರಹವನ್ನು ವೀಕ್ಷಿಸಲು ತಮ್ಮ ಕುಟುಂಬವನ್ನು ಅಲ್ಲಿಗೆ ಕರೆದೊಯ್ಯಲು ಉತ್ಸುಕನಾಗಿದ್ದೇನೆ. ಹೊಸ ಬಟ್ಟೆ ಖರೀದಿಸುವುದು ಸೇರಿದಂತೆ ತಮ್ಮ ಸಿದ್ಧತೆಗಳ ಜೊತೆಗೆ ತಮ್ಮ ಕುಟುಂಬ ಪ್ರವಾಸದ ಉತ್ಸಾಹವನ್ನು ಹಂಚಿಕೊಂಡಿದ್ದರು. ವಿಶೇಷವಾಗಿ ವಿಗ್ರಹದ ನೋಟದಲ್ಲಿನ ಬದಲಾವಣೆಗಳ ಬಗ್ಗೆ ಸ್ನೇಹಿತರಿಂದ ಕೇಳಿದ ನಂತರ ರಾಮಲಲ್ಲಾನನ್ನು (Rama Lalla) ಮತ್ತೆ ನೋಡಲು ತುಂಬಾ ಉತ್ಸುಕನಾಗಿದ್ದೇನೆ ಎಂದಿದ್ದರು.

    ನನ್ನ ಕುಟುಂಬದವರು ರಾಮಲಲ್ಲಾನನ್ನು ನೋಡಬೇಕೆಂದು ಪಟ್ಟು ಹಿಡಿದಿದ್ದಾರೆ. ದಿನನಿತ್ಯ ಹೇಳುತ್ತಾ ಇರುತ್ತಾರೆ. ಆದರೆ ನಾನು ಮುಂದೂಡುತ್ತಲೇ ಇದ್ದೆ. ಹಾಗಾಗಿ ಈ ಬಾರಿ ನಾನು ಅವರನ್ನು ಕರೆದುಕೊಂಡು ಹೋಗುತ್ತೇನೆ. ಅವರನ್ನು ಬಿಟ್ಟು ನಾನು ಅಯೋಧ್ಯೆಗೆ (Ayodhya) ಹೋದರೆ ಅವರು ನನ್ನನ್ನು ಶಿಕ್ಷಿಸುತ್ತಾರೆ ಎಂದು ನಗುತ್ತಲೇ ಅರುಣ್‌ ಅವರು ಹೇಳಿದ್ದರು. ಇದನ್ನೂ ಓದಿ: Ram Navami: ಅಯೋಧ್ಯೆ ರಾಮಮಂದಿರಕ್ಕೆ 1,11,111 ಕೆಜಿ ಲಡ್ಡು

  • ಬೆಳಗಾವಿಯಲ್ಲಿ ಕನ್ನಡ ಧ್ವಜ ಹಾರಿಸಿದ ಯುವಕನ ಮೇಲೆ ಮರಾಠಿಗರಿಂದ ಹಲ್ಲೆ

    ಬೆಳಗಾವಿಯಲ್ಲಿ ಕನ್ನಡ ಧ್ವಜ ಹಾರಿಸಿದ ಯುವಕನ ಮೇಲೆ ಮರಾಠಿಗರಿಂದ ಹಲ್ಲೆ

    ಬೆಳಗಾವಿ: ರಾಮನವಮಿ (Rama Navami) ಮೆರವಣಿಗೆ ವೇಳೆ ಕನ್ನಡ ಧ್ವಜ ಹಾರಿಸಿದ ಯುವಕನ ಮೇಲೆ ಮರಾಠಿ (Marathi) ಭಾಷಿಕ ಪುಂಡರಿಂದ ಹಲ್ಲೆ ನಡೆದಿರುವ ಘಟನೆ ಬೆಳಗಾವಿ (Belagavi) ನಗರದಲ್ಲಿ ನಡೆದಿದೆ.

    ನಗರದ ತಿಲಕ್ ಚೌಕ್ ಬಳಿ ಗುರುವಾರ ರಾತ್ರಿ ರಾಮನವಮಿ ಮೆರವಣಿಗೆ ವೇಳೆ ನೂರಾರು ಯುವಕರು ಭಗವಾಧ್ವಜ ಹಿಡಿದು ಭಾಗಿಯಾಗಿದ್ದರು. ಈ ವೇಳೆ ಕನ್ನಡ ಬಾವುಟ (Kannada flag) ಹಿಡಿದು ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಮಂಜುನಾಥ ಢಂಗ ಜೊತೆಗೆ ಮರಾಠಿ ಭಾಷಿಕ ಪುಂಡರು ವಾಗ್ವಾದ ನಡೆಸಿದ್ದಾರೆ. ಏಕಾಏಕಿ ಗಲಾಟೆ ಶುರುಮಾಡಿ ಮಂಜುನಾಥ ಢಂಗ ಅವರ ಮೇಲೆ ಹಲ್ಲೆ ನಡೆಸಿ, ಕನ್ನಡ ಬಾವುಟಕ್ಕೆ ಅಪಮಾನ ಮಾಡಿದ್ದಾರೆ. ಇದನ್ನೂ ಓದಿ: ಹಿಜಬ್ ತೆಗೆಸಿ ಮಹಿಳೆಗೆ ಕಿರುಕುಳ ನೀಡಿ ವೀಡಿಯೋ ಮಾಡಿದ್ದ ಆರೋಪಿಗಳ ಬಂಧನ

    ಕನ್ನಡಪರ ಸಂಘಟನೆಯ ಹೋರಾಟಗಾರರು ಘಟನೆಯನ್ನು ಖಂಡಿಸಿದ್ದಾರೆ. ಈ ಸಂಬಂಧ ಕಿಡಿಗೇಡಿಗಳ ವಿರುದ್ಧ ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮಂಗಳೂರಿನಲ್ಲಿ ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ

  • ರಾಮನವಮಿ ಮೆರವಣಿಗೆ ವೇಳೆ ಇಬ್ಬರಿಗೆ ಚಾಕು ಇರಿತ

    ರಾಮನವಮಿ ಮೆರವಣಿಗೆ ವೇಳೆ ಇಬ್ಬರಿಗೆ ಚಾಕು ಇರಿತ

    ಹಾಸನ: ಮೆರವಣಿಗೆ ವಿಚಾರಕ್ಕೆ ಎರಡು ಕೋಮಿನ ಯುವಕರ ನಡುವೆ ಗಲಾಟೆ ನಡೆದು ಇಬ್ಬರು ಯುವಕರಿಗೆ ಚಾಕು ಇರಿದ ಪ್ರಕರಣ ಚನ್ನರಾಯಪಟ್ಟಣದಲ್ಲಿ (Channarayapatna) ನಡೆದಿದೆ.

    POLICE JEEP

    ಗುರುವಾರ ರಾತ್ರ್ರಿ ರಾಮನವಮಿ (Rama Navami) ಅಂಗವಾಗಿ ನಗರದ ಜಾಮೀಯಾ ಮಸೀದಿ ರಸ್ತೆಯಲ್ಲಿ (Jamia Masjid Road) ಮೆರವಣಿಗೆ ಹೋಗುತ್ತಿದ್ದ ವೇಳೆ ಎರಡು ಕೋಮಿನ ಯುವಕರ ನಡುವೆ ಜಗಳ ಶುರುವಾಗಿದೆ. ಇದು ತಾರಕಕ್ಕೇರಿ ಮುರುಳಿ ಹಾಗೂ ಹರ್ಷ ಎಂಬ ಯುವಕರ ಹೊಟ್ಟೆ ಹಾಗೂ ಕುತ್ತಿಗೆ ಭಾಗಕ್ಕೆ ಚಾಕುವಿನಿಂದ ಇರಿದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಗಾಯಗೊಂಡ ಯುವಕರನ್ನು ಚನ್ನರಾಯಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಇಂದೋರ್ ದೇವಾಲಯ ದುರಂತ – ಸಾವಿನ ಸಂಖ್ಯೆ 35ಕ್ಕೆ ಏರಿಕೆ

    ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಗರದಲ್ಲಿ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆವಹಿಸಿ ಜಿಲ್ಲೆಯ ವಿವಿಧ ಭಾಗಗಳಿಂದ ಪೊಲೀಸರ ನಿಯೋಜನೆ ಮಾಡಲಾಗಿದೆ. ಈ ಸಂಬಂಧ ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಇದನ್ನೂ ಓದಿ: ಪತ್ನಿ ನೇಣುಬಿಗಿದುಕೊಂಡ ಬೆನ್ನಲ್ಲೇ ಪತಿಯೂ ಸೂಸೈಡ್

  • ಉಡುಪಿಯಲ್ಲಿ ಅದ್ದೂರಿ ರಾಮೋತ್ಸವ ನಡೆದಿಲ್ಲ: ಕಿಡಿಗೇಡಿಗಳ ಅಪಪ್ರಚಾರಕ್ಕೆ ಪಲಿಮಾರು ಮಠ ಖಂಡನೆ

    ಉಡುಪಿಯಲ್ಲಿ ಅದ್ದೂರಿ ರಾಮೋತ್ಸವ ನಡೆದಿಲ್ಲ: ಕಿಡಿಗೇಡಿಗಳ ಅಪಪ್ರಚಾರಕ್ಕೆ ಪಲಿಮಾರು ಮಠ ಖಂಡನೆ

    ಉಡುಪಿ: ನಗರದಲ್ಲಿ ಗುರುವಾರ ಅದ್ದೂರಿ ರಾಮ ನವಮಿ ಉತ್ಸವ ನಡೆದಿಲ್ಲ. ಕೆಲ ಕಿಡಿಗೇಡಿಗಳು ಮಠದ ಹಳೆಯ ಫೋಟೋಗಳನ್ನು ಬಳಸಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಪಲಿಮಾರು ವಿದ್ಯಾಧೀಶ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಕಳೆದ 10 ದಿನಗಳಿಂದ ಉಡುಪಿ ಜಿಲ್ಲೆ ಕಾಪುವಿನ ಕುತ್ಯಾರು ಗ್ರಾಮದಲ್ಲಿ ಸರಳವಾದ ರಾಮೋತ್ಸವ ನಡೆಯುತ್ತಿದೆ. ಪಲಿಮಾರು ಶ್ರೀಗಳ ಶಿಷ್ಯರಾದ ರಾಜಗೋಪಾಲ ಆಚಾರ್ಯ ಎಂಬವರ ಮನೆಯಲ್ಲಿ ಕಾರ್ಯಕ್ರಮ ಆಯೋಜಿಸಿದ್ದಾರೆ. ಭಾರತ ಲಾಕ್‍ಡೌನ್ ಆಗಿರುವುದರಿಂದ ಎಲ್ಲಾ ಧಾರ್ಮಿಕ ಸಭೆ, ಪ್ರವಚನ, ಸಾಂಸ್ಕೃತಿಕ ಕಾರ್ಯಕ್ರಮಗಳು ರದ್ದಾಗಿದ್ದವು. ಕೇವಲ ಐದಾರು ಜನ ಅರ್ಚಕರು ಇಬ್ಬರು ಸ್ವಾಮೀಜಿ ಧಾರ್ಮಿಕ ವಿಧಿವಿಧಾನ ನಡೆಸುತ್ತಿದ್ದರು.

    ರಾಮನವಮಿಯ ದಿನವಾದ ಗುರುವಾರ ಪಲಿಮಾರು ಹಿರಿಯ ಕಿರಿಯ ಶ್ರೀಗಳು ಅಭಿಷೇಕ, ಪೂಜೆ ಮಾಡಿದ್ದರು. ಧಾರ್ಮಿಕವಾಗಿ ಅವಶ್ಯವಿದ್ದ ಅರ್ಚಕರು ಈ ಸಂದರ್ಭ ಜೊತೆಗಿದ್ದರು. ಆದರೆ ಕೆಲ ಕಿಡಿಗೇಡಿಗಳು ತಿಂಗಳ ಹಿಂದಿನ ಪೂರ್ವಭಾವಿ ಸಭೆಯ ಫೋಟೋವನ್ನು ಬಳಸಿ ಇದೆಂಥಾ ನ್ಯಾಯ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸುತ್ತಿದ್ದಾರೆ. ಹಳೆಯ ಫೋಟೋ ಇಟ್ಟು ಫಾರ್ವರ್ಡ್ ಮಾಡುತ್ತಿದ್ದಾರೆ. ಪೊಲೀಸರು ಮತ್ತು ಮಾಧ್ಯಮದ ಮೇಲೆ ಕಿಡಿ ಕಾರುತ್ತಿದ್ದಾರೆ. ಹಿಂದೂಗಳಿಗೆ ಒಂದು ನ್ಯಾಯ, ಮುಸಲ್ಮಾನರಿಗೆ ಇನ್ನೊಂದು ನ್ಯಾಯನಾ ಅಂತ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ.

    ಈ ನಡುವೆ ಪಲಿಮಾರು ಮಠದ ಪರವಾಗಿ ರಾಮೋತ್ಸವ ಸಮಿತಿಯ ಕಾರ್ಯದರ್ಶಿ ಪ್ರಸಾದ್ ಕುತ್ಯಾರು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಇದು ಸುಳ್ಳು ಅಪಪ್ರಚಾರ. ರಾಮನ ವಿಚಾರದಲ್ಲಿ ಈ ರೀತಿ ಅಪಪ್ರಚಾರ ಮಾಡುವುದು ಸರಿಯಲ್ಲ. ರಾಮೋತ್ಸವದಲ್ಲಿ ಐದಾರು ಜನ ಬಿಟ್ಟರೆ ಸಮಿತಿಯ ಸದಸ್ಯರು ಕೂಡ ಪಾಲ್ಗೊಂಡಿಲ್ಲ. 10 ದಿನದ ಕಾರ್ಯಕ್ರಮಕ್ಕೆ ಮೂರ್ನಾಲ್ಕು ತಿಂಗಳಿಂದ ತಯಾರಿ ಮಾಡಿದ್ದೆವು. ಆದರೆ ಕಾನೂನು ಮೀರಬಾರದೆಂದು ದೇವರ ಕಾರ್ಯಕ್ರಮ ಸರಳವಾಗಿ ನಡೆಸಿದ್ದೇವೆ. ಪೂರ್ವಭಾವಿ ಸಭೆಯ ಸಂದರ್ಭದ ಹಳೆಯ ಫೋಟೋಗಳನ್ನು ಬಳಸಿ ವೈರಲ್ ಮಾಡಿರುವುದು ಖಂಡನೀಯ ಎಂದಿದ್ದಾರೆ. ಪಲಿಮಾರು ಶ್ರೀಗಳಿಗೆ ಇದರಿಂದ ಬೇಸರವಾಗಿದೆ ಎಂದು ಹೇಳಿದರು.

  • ರಾಮನವಮಿಗೆ ತಟ್ಟದ ಲಾಕ್‍ಡೌನ್ ಬಿಸಿ- ಮುಗಿಬಿದ್ದು ದರ್ಶನ ಪಡೆದ ರಾಮ ಭಕ್ತರು

    ರಾಮನವಮಿಗೆ ತಟ್ಟದ ಲಾಕ್‍ಡೌನ್ ಬಿಸಿ- ಮುಗಿಬಿದ್ದು ದರ್ಶನ ಪಡೆದ ರಾಮ ಭಕ್ತರು

    ರಾಯಚೂರು: ಕೊರೊನಾ ವೈರಸ್ ಭೀತಿ ಹಿನ್ನೆಲೆ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಎಲ್ಲಾ ದೇವಾಲಯಗಳು ಬಂದ್ ಆಗಿವೆ. ಆದರೆ ರಾಯಚೂರಿನಲ್ಲಿ ರಾಮನವಮಿಗೆ ಮಾತ್ರ ಲಾಕ್‍ಡೌನ್ ಬಿಸಿ ತಟ್ಟಲಿಲ್ಲ. ಬೆಳಗ್ಗೆಯಿಂದ ರಾಮ ಭಕ್ತರು ನಿರಂತರವಾಗಿ ದರ್ಶನ ಪಡೆದಿದ್ದಾರೆ.

    ನಗರದ ಸ್ಟೇಷನ್ ರಸ್ತೆಯಲ್ಲಿರುವ ರಾಮಮಂದಿರಲ್ಲಿ ಭಕ್ತರು ಯಾವ ಸಾಮಾಜಿಕ ಅಂತರವೂ ಕಾಯ್ದುಕೊಳ್ಳದೆ ಮುಗಿಬಿದ್ದು ದರ್ಶನ ಪಡೆದಿದ್ದಾರೆ. ಮಂದಿರದ ಮುಖ್ಯದ್ವಾರಕ್ಕೆ ಬೀಗ ಹಾಕಿದ್ದರೂ ಪಕ್ಕದ ಚಿಕ್ಕ ದ್ವಾರದಿಂದ ಭಕ್ತರ ಪ್ರವೇಶಕ್ಕೆ ಅರ್ಚಕರು ಅನುವು ಮಾಡಿಕೊಟ್ಟಿದ್ದಾರೆ. ಇದನ್ನೂ ಓದಿ: ಆಸ್ಪತ್ರೆಯಲ್ಲಿ ಕ್ವಾರಂಟೈನ್‍ಗಳಿಂದ ನಮಾಜ್

    ಸರ್ಕಾರಿ ಆದೇಶ ಉಲ್ಲಂಘಿಸಿ ರಾಮಭಕ್ತರು ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ದೇವಾಲಯ ಆಡಳಿತ ಮಂಡಳಿ ಸಹ ಲಾಕ್ ಉಲ್ಲಂಘಿಸಿ ಭಕ್ತರ ಪ್ರವೇಶಕ್ಕೆ ಅವಕಾಶ ಕೊಟ್ಟಿದೆ.

  • ಅಂಜನೇಯನ ಭಕ್ತನಾಗಿ ರಾಮನವಮಿಗೆ ಗುಡ್ ನ್ಯೂಸ್ ಕೊಟ್ಟ ಧ್ರುವ

    ಅಂಜನೇಯನ ಭಕ್ತನಾಗಿ ರಾಮನವಮಿಗೆ ಗುಡ್ ನ್ಯೂಸ್ ಕೊಟ್ಟ ಧ್ರುವ

    ಬೆಂಗಳೂರು: ಅಂಜನೇಯನ ಭಕ್ತನಾಗಿರುವ ಧ್ರುವ ಸರ್ಜಾ ರಾಮನವಮಿಯ ಪ್ರಯುಕ್ತ ಅವರ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ.

    ಧ್ರುವ ಸರ್ಜಾ ಅವರು ಕಳೆದ ಮೂರು ವರ್ಷಗಳಿಂದ ಪೊಗರು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಪೊಗರು ಸಿನಿಮಾ ಯಾವಾಗ ಬಿಡುಗಡೆಯಾಗುತ್ತೋ ಎಂದು ಕಾಯುತ್ತಿರುವ ಅವರ ಅಭಿಮಾನಿಗಳಿಗಾಗಿ ನಾಳೆ ರಾಮನವಮಿ ಪ್ರಯುಕ್ತ ಸಿನಿಮಾದ ಖರಾಬು ಎಂಬ ಹಾಡನ್ನು ಬಿಡುಗಡೆಯಾಗಲಿದೆ.

    ಈ ವಿಚಾರವಾಗಿ ಟ್ವೀಟ್ ಮಾಡಿರುವ ಧ್ರುವ ಅವರು, ಹಾಯ್ ರಾಮನವಮಿಯ ಪ್ರಯುಕ್ತ ವಿಶೇಷ ಕಾಣಿಕೆ. ನಮ್ಮ ಬಾಸ್ ಆಂಜನೇಯ, ಅವರ ಬಾಸ್ ಶ್ರೀರಾಮನವರ ಇದೇ ರಾಮನವಮಿಯಂದು ನಿಮ್ಮೆಲ್ಲರ ಒತ್ತಾಯದಂತೆ ಪೊಗರಿನ ಖರಾಬು ಹಾಡು ನಾಳೆ ಅನಂದ್ ಆಡಿಯೋ ಯೂಟ್ಯುಬ್ ಚಾನೆಲ್ ಅಲ್ಲಿ ಸಂಜೆ 5:55ಕ್ಕೆ ಬಿಡುಗಡೆಯಾಗಲಿದೆ. ಮನೆಯಲ್ಲಿರಿ. ಆರೋಗ್ಯದಿಂದಿರಿ. ಹೊರಗೆ ಇದ್ದರೆ ನೀವ್ ಮಾತ್ರ ನೋಡುತ್ತಿದ್ರಿ. ಈಗ ನಿಮ್ಮ ಸಮಸ್ತ ಕುಟುಂಬದ ಆಶೀರ್ವಾದವೂ ಪೊಗರಿಗೆ ಸಿಗಲಿದೆ. ಜೈಆಂಜನೇಯ ಎಂದು ಬರೆದುಕೊಂಡಿದ್ದಾರೆ.

    ಇತ್ತೀಚೆಗೆ ಮದುವೆಯಾಗಿದ್ದ ಧ್ರುವ ಅವರು ಸತತ ಮೂರು ವರ್ಷಗಳಿಂದ ಪೊಗರು ಸಿನಿಮಾ ಮಾಡುತ್ತಿದ್ದಾರೆ. ಇದರಲ್ಲಿ ಮಾಸ್ ಆಗಿ ಕಾಣಿಸಿಕೊಂಡಿರುವ ಧ್ರುವ ಸರ್ಜಾಗೆ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ನಾಯಕಿ ಆಗಿದ್ದಾರೆ. ಈ ಚಿತ್ರಕ್ಕೆ ಬಿಗ್‍ಬಾಸ್ ಖ್ಯಾತಿಯ ಚಂದನ್ ಶೆಟ್ಟಿ ಸಂಗೀತ ನೀಡಿದ್ದಾರೆ. ಈ ಸಿನಿಮಾವನ್ನು ನಂದ ಕಿಶೋರ್ ಅವರು ನಿರ್ದೇಶನ ಮಾಡಿದ್ದಾರೆ.

    ಪೊಗರು ಚಿತ್ರತಂಡದಿಂದ ಈಗಾಗಲೇ ಚಿತ್ರದ ಪೋಸ್ಟರ್, ಡೈಲಾಗ್ ಟ್ರೈಲರ್ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿವೆ. ಈ ಹಿಂದೆ ಚಿತ್ರದ ಡೈಲಾಗ್ ಟೀಸರ್ ಬಿಡುಗಡೆಯಾಗಿದ್ದು, ಸಾಕಷ್ಟು ಜನಮನ್ನಣೆ ಪಡೆದುಕೊಂಡಿತ್ತು. ಚಿತ್ರದಲ್ಲಿ ಮಾಸ್ ಆಗಿ ಕಾಣಿಸಿಕೊಂಡಿರುವ ಧ್ರುವ ಸರ್ಜಾ ಅಷ್ಟೇ ಮಾಸ್ ಆಗಿ ಡೈಲಾಗ್ ಹೇಳಿದ್ದಾರೆ. ಮೊದಲ ಬಾರಿಗೆ ಧ್ರುವ ಹಾಗೂ ರಶ್ಮಿಕಾ ಮಂದಣ್ಣ ಜೋಡಿಯನ್ನು ತೆರೆಮೇಲೆ ನೋಡಲು ಅವರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.