Tag: rama mandir

  • ಕಲಾವಿದನಿಂದ ಮರಳಿನಲ್ಲಿ ರಾಮಮಂದಿರ ನಿರ್ಮಿಸಿ ಪೂಜೆ

    ಕಲಾವಿದನಿಂದ ಮರಳಿನಲ್ಲಿ ರಾಮಮಂದಿರ ನಿರ್ಮಿಸಿ ಪೂಜೆ

    – ಮೋದಿಯ ಮೂರ್ತಿಯೂ ಇದೆ

    ಧಾರವಾಡ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ನಾಳೆ ಶಂಕು ಸ್ಥಾಪನೆ ನೆರವೇರಲಿದ್ದು, ಈ ಹಿನ್ನೆಲೆಯಲ್ಲಿ ಧಾರವಾಡದಲ್ಲಿ ಕಲಾವಿದ ಮಂಜುನಾಥ ಹಿರೇಮಠ ಅವರು ನಗರದ ದೊಡ್ಡನಾಯಕನಕೊಪ್ಪದಲ್ಲಿ ಮರಳಿನಲ್ಲಿ ಅಯೋಧ್ಯೆಯ ರಾಮಮಂದಿರದ ಕಲಾಕೃತಿ ರಚಿಸಿ ಪೂಜೆ ಸಲ್ಲಿಸಿದರು.

    ರಾಮಮಂದಿರದ ಈ ಕಲಾಕೃತಿ ನಿರ್ಮಾಣಕ್ಕೆ ಒಂದು ಟಿಪ್ಪರ್ ಲೋಡ್ ಮರುಳು ಬಿಡಿಸಲಾಗಿತ್ತು. ಅದರಲ್ಲಿ 6 ಅಡಿ ಎತ್ತರ, 10 ಅಡಿ ಅಗಲದಲ್ಲಿ ಈ ಕಲಾಕೃತಿಯನ್ನು ಹಿರೇಮಠ ನಿರ್ಮಿಸಿದ್ದಾರೆ. ಈ ವೇಳೆ ದೊಡ್ಡನಾಯಕನ ಕೊಪ್ಪದ ನಿವಾಸಿಗಳು ಎಲ್ಲರೂ ಸೇರಿ ಆರತಿ ಬೆಳಗಿ ಕಲಾಕೃತಿಗೆ ಪೂಜೆ ಸಲ್ಲಿಸಿದರು.

    ನಾಳೆ ಅಯೋಧ್ಯೆಯಲ್ಲಿ ಪ್ರಧಾನಿ ಮೋದಿ ಅಡಿಗಲ್ಲು ಸಮಾರಂಭ ನೇರವೆರಿಸಲಿದ್ದಾರೆ. ಈ ಹಿನ್ನೆಲೆ ತಮ್ಮ ಕಲಾಕೃತಿಯಲ್ಲಿ ಕಾಲವಿದ ಮೋದಿಯವರ ಚಿಕ್ಕ ಮೂರ್ತಿ ಕೂಡ ತಯಾರಿಸಿ ಆ ಮಂದಿರದ ಮೇಲೆ ಇಟ್ಟಿದ್ದಾರೆ. ಇದನ್ನೂ ಓದಿ: ಅಯೋಧ್ಯೆಯಲ್ಲಿ ರಾಮ-ಲಕ್ಷ್ಮಣ ವಿಗ್ರಹಕ್ಕೆ ಮೀಸೆ ಬೇಕೇ ಬೇಕು: ಸಂಭಾಜಿ ಭಿಡೆ

  • ಅಯೋಧ್ಯೆಯಲ್ಲಿ ರಾಮ-ಲಕ್ಷ್ಮಣ ವಿಗ್ರಹಕ್ಕೆ ಮೀಸೆ ಬೇಕೇ ಬೇಕು: ಸಂಭಾಜಿ ಭಿಡೆ

    ಅಯೋಧ್ಯೆಯಲ್ಲಿ ರಾಮ-ಲಕ್ಷ್ಮಣ ವಿಗ್ರಹಕ್ಕೆ ಮೀಸೆ ಬೇಕೇ ಬೇಕು: ಸಂಭಾಜಿ ಭಿಡೆ

    ಪುಣೆ: ಅಯೋಧ್ಯೆಯಲ್ಲಿ ನಿರ್ಮಾಣ ಮಾಡುವ ರಾಮ-ಲಕ್ಷ್ಮಣನ ವಿಗ್ರಹಕ್ಕೆ ಮೀಸೆ ಬೇಕು ಎಂದು ಹಿಂದುತ್ವ ಪ್ರತಿಪಾದಕ ಸಂಭಾಜಿ ಭಿಡೆ ಆಗ್ರಹಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

    ಬುಧವಾರ ಉತ್ತರಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಶಿಲಾನ್ಯಾಸ ನಡೆಯಲಿದೆ. ಭೂಮಿ ಪೂಜೆಗೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಮೊದಲು ಹನುಮಂತನ ದೇವಾಲಯಕ್ಕೆ ತೆರಳಿ ಆಂಜನೇಯನಿಗೆ ಪೂಜೆ ಮಾಡಲಿದ್ದಾರೆ.

    ಈ ಸಂಬಂಧ ಈಗಾಗಲೇ ಶ್ರೀರಾಮಂದಿರ ಟ್ರಸ್ಟ್ ನ ಗೋವಿಂದಗಿರಿ ಜೀ ಮಹಾರಾಜ್ ಜೊತೆ ಮಾತನಾಡಿ, ನೀವು ಸ್ಥಾಪಿಸುವ ರಾಮ ಹಾಗೂ ಲಕ್ಷ್ಣಣ ಪ್ರತಿಮೆಗಳಿಗೆ ಮೀಸೆ ಇರಬೇಕು. ಒಂದು ವೇಳೆ ನೀವು ರಾಮ-ಲಕ್ಷ್ಮಣ ವಿಗ್ರಹಗಳಿಗೆ ಮೀಸೆ ಇಟ್ಟಿಲ್ಲವೆಂದರೆ, ನನ್ನಂತಹ ಭಕ್ತರಿಗೆ ದೇವಾಲಯ ನಿರ್ಮಿಸಿದರೂ ಪ್ರಯೋಜನವಿಲ್ಲದಂತಾಗುತ್ತದೆ ಎಂದಿದ್ದಾರೆ.

    ಶ್ರೀರಾಮಮಂದಿರಕ್ಕೆ ಭೂಮಿಪೂಜೆ ಮಾಡುವ ಮೊದಲು ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಬೇಕು. ಆಗಸ್ಟ್ 5ರಂದು ನಡೆಯುವ ಕಾರ್ಯವನ್ನು ದಸರಾ, ದೀಪಾವಳಿ ಹಬ್ಬಗಳಂತೆ ಆಚರಿಸೋಣ ಎಂದು ಇದೇ ವೇಳೆ ಭಿಡೆ ಕರೆ ನೀಡಿದರು. ಇದನ್ನೂ ಓದಿ: ಭೂಮಿ ಪೂಜೆಯಂದು ದಯವಿಟ್ಟು ಅಯೋಧ್ಯೆಗೆ ಬರಬೇಡಿ- ಟ್ರಸ್ಟ್ ಮನವಿ

    ಮಧ್ಯಾಹ್ನ 12.15ಕ್ಕೆ ಭೂಮಿಪೂಜೆ ಕಾರ್ಯಕ್ರಮ ನಡೆಯಲಿದೆ. ಈ ವೇಳೆ 40 ಕೆಜಿ ತೂಕದ ಬೆಳ್ಳಿಯ ಇಟ್ಟಿಗೆಯನ್ನು ಇಡುವ ಮೂಲಕ ದೇವಾಲಯ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಿದ್ದಾರೆ. 25 ನಿಮಿಷಗಳ ಕಾಲ ನಡೆಯಲಿರುವ ಪೂಜೆ ನಡೆಯಲಿದ್ದು, ಭೂಮಿ ಪೂಜೆ ಬಳಿಕ 45 ನಿಮಿಷ ಮೋದಿ ಭಾಷಣ ಮಾಡಲಿದ್ದಾರೆ. ಇದಾದ ಬಳಿಕ ಸರಯೂ ನದಿ ಬಳಿ ಮೋದಿ ತೆರಳಲಿದ್ದಾರೆ. ಒಟ್ಟು 2 ಗಂಟೆ 15 ನಿಮಿಷಕ್ಕೂ ಅಧಿಕ ಕಾಲ ಅಯೋಧ್ಯೆಯಲ್ಲಿ ಮೋದಿ ಇರಲಿದ್ದಾರೆ.

  • ಅಯೋಧ್ಯೆ ಭೂಮಿ ಪೂಜೆಗೆ ತಯಾರಾಗ್ತಿದೆ 1.25 ಲಕ್ಷ ಮಣ್ಣಿನ ಹಣತೆಗಳು!

    ಅಯೋಧ್ಯೆ ಭೂಮಿ ಪೂಜೆಗೆ ತಯಾರಾಗ್ತಿದೆ 1.25 ಲಕ್ಷ ಮಣ್ಣಿನ ಹಣತೆಗಳು!

    ಲಕ್ನೋ: ಅಯೋಧ್ಯೆಯಲ್ಲಿ ರಾಮಮಂದಿರ ಶಿಲಾನ್ಯಾಸಕ್ಕೆ ಕ್ಷಣಗಣನೆ ಶುರುವಾಗಿದ್ದು, ಸಿದ್ಧತೆಗಳು ಕೂಡ ಭರದಿಂದ ಸಾಗಿವೆ. ಆಗಸ್ಟ್ 5ರಂದು ನಡೆಯುವ ಭೂಮಿ ಪೂಜೆಗೆ 1.25 ಲಕ್ಷದ ಮಣ್ಣಿನ ಹಣತೆಗಳು ತಯಾರಾಗುತ್ತಿವೆ.

    ಈ ಸಂಬಂಧ ಮಣ್ಣಿನ ಮಡಿಕೆ ತಯಾರಕರು ಮಾತನಾಡಿ, 1.25 ಲಕ್ಷ ಮಣ್ಣಿನ ಹಣತೆಗಳನ್ನು ಮಾಡಿಕೊಡುವಂತೆ ಆರ್ಡರ್ ಬಂದಿದೆ. ಈ ಗ್ರಾಮದಲ್ಲಿ ಸುಮಾರು 40 ಕುಟುಂಬಗಳಿವೆ. ಸದ್ಯ ನಾವು ಹಣತೆಗಳನ್ನು ಮಾಡುವ ಬ್ಯುಸಿಯಲ್ಲಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: 800 ಕಿ.ಮೀ ನಡ್ಕೊಂಡೇ ಅಯೋಧ್ಯೆ ಭೂಮಿ ಪೂಜೆಗೆ ಹೊರಟ ಫಯಾಜ್ ಖಾನ್!

    ಇತ್ತ ಭಾನುವಾರ ಸಿಎಂ ಆದಿತ್ಯನಾಥ್ ಭೇಟಿ ನೀಡಲಿದ್ದಾರೆ. ಆದರೆ ಅಯೋಧ್ಯೆ ರಥಯಾತ್ರೆ ನಡೆಸಿ ಇಡೀ ದೇಶದಲ್ಲಿ ಸಂಚಲನ ಸೃಷ್ಟಿಸಿದ್ದ ಮಾಜಿ ಉಪ ಪ್ರಧಾನಿ ಎಲ್‍ಕೆ ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಷಿಗೆ ರಾಮಮಂದಿರ ಟ್ರಸ್ಟ್ ಆಹ್ವಾನ ನೀಡಿಲ್ಲ. ವೇದಿಕೆ ಮೇಲೆ ಅಲಂಕರಿಸುವ ಗಣ್ಯರ ಲಿಸ್ಟ್‍ನಲ್ಲಿ ಇವರಿಬ್ಬರ ಹೆಸರಿಲ್ಲ. ಇದು ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಈ ಬೆನ್ನಲ್ಲೇ ಫೋನ್ ಮೂಲಕ ಆಹ್ವಾನ ನೀಡೋದಾಗಿ ಟ್ರಸ್ಟ್ ಸ್ಪಷ್ಟನೆ ನೀಡಿದೆ. ಇದನ್ನೂ ಓದಿ: ಭೂಮಿ ಪೂಜೆಯಂದು ದಯವಿಟ್ಟು ಅಯೋಧ್ಯೆಗೆ ಬರಬೇಡಿ- ಟ್ರಸ್ಟ್ ಮನವಿ

    ಕೇಂದ್ರದ ಮಾಜಿ ಸಚಿವೆ ಉಮಾಭಾರತಿ, ಮಾಜಿ ಸಿಎಂ ಕಲ್ಯಾಣ್ ಸಿಂಗ್‍ಗೆ ಆಹ್ವಾನ ಹೋಗಿದೆ. ರಾಮಮಂದಿರ ನಿರ್ಮಾಣ ಟ್ರಸ್ಟಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಧನ ಸಂಗ್ರಹಕ್ಕೆ ಕೊಂಕು ನುಡಿದವರಿಗೆ ತಿರುಗೇಟು ನೀಡಿದ್ದಾರೆ. ಒಳ್ಳೆಯ ಕೆಲಸಕ್ಕೆ ವಿಘ್ನ ಎದುರಾಗೋ ಸಾಮಾನ್ಯ ಅಂತ ಮಂದಿರ ವಿರೋಧಿಗಳ ಕಿವಿ ಹಿಂಡಿದ್ದಾರೆ. ಇತ್ತ ತುಮಕೂರು ಗ್ರಾಮಾಂತರ ಬಳಿ ಶ್ರೀರಾಮ ಸೃಷ್ಟಿಸಿದ ಎನ್ನಲಾಧ ನಾಮದ ಚಿಲುಮೆಯ ನೀರನ್ನು ಅಯೋಧ್ಯೆಗೆ ಕಳಿಸಿಕೊಡಲಾಗಿದೆ.  ಇದನ್ನೂ ಓದಿ: ಅಯೋಧ್ಯೆಗೆ ದಾಳಿ ಮಾಡಲು ಐಎಸ್‍ಐ ಸಂಚು – ಗುಪ್ತಚರ ಇಲಾಖೆ

  • ತೊಗಾಡಿಯಾಗೆ ರಾಮಮಂದಿರ ಶಿಲಾನ್ಯಾಸಕ್ಕೆ ಆಹ್ವಾನ ಇಲ್ಲ ಯಾಕೆ?: ಮುತಾಲಿಕ್ ಗರಂ

    ತೊಗಾಡಿಯಾಗೆ ರಾಮಮಂದಿರ ಶಿಲಾನ್ಯಾಸಕ್ಕೆ ಆಹ್ವಾನ ಇಲ್ಲ ಯಾಕೆ?: ಮುತಾಲಿಕ್ ಗರಂ

    ಉಡುಪಿ: ಹಿಂದೂ ಮುಖಂಡ ಪ್ರವೀಣ್ ತೊಗಾಡಿಯಾರನ್ನು ರಾಮ ಮಂದಿರ ಶಿಲಾನ್ಯಾಸ ಕಾರ್ಯಕ್ರಮ ಯಾಕೆ ಕರೆದಿಲ್ಲ ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಪ್ರಶ್ನಿಸಿದ್ದಾರೆ.

    ಉಡುಪಿಯಲ್ಲಿ ಮಾತನಾಡಿದ ಅವರು, ತೊಗಾಡಿಯಾರನ್ನು ಆಹ್ವಾನಿಸದಿರುವುದು ನೋವು ತಂದಿದೆ. ಅವರು ಸಂಸಾರ ದೂರವಿಟ್ಟು 32 ವರ್ಷ ತ್ಯಾಗದ ಜೀವನ ನಡೆಸಿದವರು. ತೊಗಾಡಿಯಾ ರಾಮಜನ್ಮಭೂಮಿಗಾಗಿ ನಿರಂತರ ಹೋರಾಟ ಮಾಡಿದ್ದಾರೆ. ಎಲ್ಲಾ ದ್ವೇಷಗಳನ್ನು ಮರೆತು ತೊಗಾಡಿಯಾರನ್ನು ಆಹ್ವಾನಿಸಬೇಕು. ಇದು ಲಕ್ಷಾಂತರ ಹಿಂದೂಗಳ ತುಡಿತ. ಈಗಲೂ ಕಾಲ ಮಿಂಚಿಲ್ಲ ಇನ್ನಾದರೂ ಆಹ್ವಾನಿಸಿ ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಭೂಮಿ ಪೂಜೆಯಂದು ದಯವಿಟ್ಟು ಅಯೋಧ್ಯೆಗೆ ಬರಬೇಡಿ- ಟ್ರಸ್ಟ್ ಮನವಿ

    ಶಿಲಾನ್ಯಾಸ ದಿನವೇ ದೀಪಾವಳಿ, ರಾಮನವಮಿ:
    ನಮ್ಮ ನೆಚ್ಚಿನ ಪ್ರಧಾನಿ ಮೋದಿ ಮೂಲಕ ಶಿಲಾನ್ಯಾಸ ಆಗುತ್ತಿರುವುದು ಖುಷಿಕೊಟ್ಟಿದೆ. ಶಿಲಾನ್ಯಾಸದ ದಿನವೇ ನಮಗೆ ದೀಪಾವಳಿ, ಅಂದೇ ರಾಮನವಮಿ. ರಾಮ ಮಂದಿರ ವಿರೋಧಿಸುವವರು ಸಂವಿಧಾನ ವಿರೋಧಿಗಳು. ನೀವು ಸುಪ್ರೀಂಕೋರ್ಟ್ ತೀರ್ಪಿಗೆ ವಿರೋಧ ಮಾಡುತ್ತಿದ್ದೀರಿ. ಕಾಂಗ್ರೆಸ್, ಕಮ್ಯುನಿಸ್ಟ್ ನವರು ಅಜ್ಮೀರ್ ದರ್ಗಾಗೆ ಹೋಗಲ್ವಾ? ದರ್ಗಾಗೆ ಚಾದರ ಹೊದಿಸಿ ಬರುವುದಕ್ಕೆ ತೊಂದರೆ ಇಲ್ವಾ. ಸಿದ್ದರಾಮಯ್ಯ ಟಿಪ್ಪುವಿನ ವೇಷಹಾಕಿ ಖಡ್ಗ ಹಿಡಿದುಕೊಳ್ಳಬಹುದು. ಪ್ರಧಾನಿ ಶಿಲಾನ್ಯಾಸ ಮಾಡುವುದನ್ನು ವಿರೋಧಿಸುವುದು ಶತ ಮೂರ್ಖತನ ಎಂದು ಮುತಾಲಿಕ್ ಗುಡುಗಿದ್ದಾರೆ. ಇದನ್ನೂ ಓದಿ: 800 ಕಿ.ಮೀ ನಡ್ಕೊಂಡೇ ಅಯೋಧ್ಯೆ ಭೂಮಿ ಪೂಜೆಗೆ ಹೊರಟ ಫಯಾಜ್ ಖಾನ್!

  • ಅಯೋಧ್ಯೆ ರಾಮಮಂದಿರದ ಪ್ರಮುಖ ಅರ್ಚಕ, 16 ಮಂದಿ ಭದ್ರತಾ ಸಿಬ್ಬಂದಿಗೆ ಕೊರೊನಾ

    ಅಯೋಧ್ಯೆ ರಾಮಮಂದಿರದ ಪ್ರಮುಖ ಅರ್ಚಕ, 16 ಮಂದಿ ಭದ್ರತಾ ಸಿಬ್ಬಂದಿಗೆ ಕೊರೊನಾ

    ಲಕ್ನೋ: ಅಯೋಧ್ಯೆ ರಾಮಮಂದಿರದ ಪ್ರಮುಖ ಅರ್ಚಕ ಹಾಗೂ 16 ಮಂದಿ ಭದ್ರತಾ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ.

    ರಾಮಮಂದಿರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಶಿಷ್ಯ ಪ್ರದೀಪ್ ದಾಸ್ ಅವರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಸದ್ಯ ಅವರನ್ನು ಹೋಂಐಸೋಲೇಷನ್‍ಗೆ ಒಳಪಡಿಸಲಾಗಿದೆ. ರಾಮಂದಿರದ ಉಸ್ತುವಾರಿಯನ್ನು ನಾಲ್ಕು ಮಂದಿ ಅರ್ಚಕರಿಗೆ ವಹಿಸಲಾಗಿದೆ. ಅದರಲ್ಲಿ ದಾಸ್ ಪ್ರಮುಖರಾಗಿದ್ದಾರೆ. ಸದ್ಯ ದೇವಾಲಯದಲ್ಲಿ ಕರ್ತವ್ಯದಲ್ಲಿದ್ದ 16 ಮಂದಿ ಭದ್ರತಾ ಸಿಬ್ಬಂದಿಗೆ ಕೂಡ ಮಹಾಮಾರಿ ಕೋವಿಡ್ 19 ಒಕ್ಕರಿಸಿದೆ.

    ಆಗಸ್ಟ್ 5ರಂದು ರಾಮಂದಿರದ ನಿರ್ಮಾಣಕ್ಕೆ ಭೂಮಿ ಪೂಜೆ ಕಾರ್ಯಕ್ರಮ ನೆರವೇರಲಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಆಗಮಿಸುವ ಸಾಧ್ಯತೆ ಇದೆ. ಇತ್ತ ಕೊರೊನಾ ವೈರಸ್ ಭೀತಿಯಿಂದ ಭೂಮಿ ಪೂಜೆ ಕಾರ್ಯಕ್ರಮಕ್ಕೆ ಯಾರೂ ಅಯೋಧ್ಯಗೆ ಬರಬೇಡಿ. ಕಾರ್ಯಕ್ರಮವನ್ನು ಟಿಯಲ್ಲೇ ವೀಕ್ಷಿಸಿ ಎಂದು ರಾಮಮಮದಿರದ ಟ್ರಸ್ಟ್ ಸದಸ್ಯರು ಈಗಾಗಲೇ ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಭೂಮಿ ಪೂಜೆಯಂದು ದಯವಿಟ್ಟು ಅಯೋಧ್ಯೆಗೆ ಬರಬೇಡಿ- ಟ್ರಸ್ಟ್ ಮನವಿ

    ಕೊರೊನಾ ಹಿನ್ನೆಲೆಯಲ್ಲಿ ಕೇವಲ 200 ಜನರಿಗೆ ಮಾತ್ರ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅವಕಾಶ ಕಲ್ಪಿಸಲಾಗುತ್ತಿದೆ. ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧರಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿ ಮಾಡಿಕೊಡುವಂತೆ ಸದಸ್ಯರೊಬ್ಬರು ಭಕ್ತರಲ್ಲಿ ವಿನಂತಿಸಿಕೊಂಡಿದ್ದಾರೆ. ಇದನ್ನೂ ಓದಿ: 800 ಕಿ.ಮೀ ನಡ್ಕೊಂಡೇ ಅಯೋಧ್ಯೆ ಭೂಮಿ ಪೂಜೆಗೆ ಹೊರಟ ಫಯಾಜ್ ಖಾನ್!

    ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಲುವಾಗಿ ತಲಾ 50 ಮಂದಿಗೆ ಪ್ರತ್ಯೇಕ ಬ್ಲಾಕ್ ಗಳನ್ನು ರಚಿಸಲಾಗುವುದು. ಅದರಲ್ಲಿ ಒಂದು ಬ್ಲಾಕ್ ರಾಜಕೀಯ ಮುಖಂಡರಿಗೆ ಮೀಸಲಿಟ್ಟರೆ, ಇನ್ನೊಂದು ಬ್ಲಾಕ್ ನಲ್ಲಿ ದೇವಾಲಯದ ಆಡಳಿತಕ್ಕೆ ಸಂಬಂಧಿಸಿದ್ದಾಗಿರುತ್ತದೆ. ಮತ್ತೊಂದು ಅರ್ಚಕರು ಮತ್ತು ಧಾರ್ಮಿಕ ಮುಖಂಡರಿಗೆ ಮೀಸಲಿಡಲಾಗುತ್ತಿದೆ ಎಂದು ಕೆಲ ವರದಿಗಳು ತಿಳಿಸಿವೆ. ಇದನ್ನೂ ಓದಿ: ಅಯೋಧ್ಯೆಗೆ ದಾಳಿ ಮಾಡಲು ಐಎಸ್‍ಐ ಸಂಚು – ಗುಪ್ತಚರ ಇಲಾಖೆ

    ಭೂಮಿ ಪೂಜೆ ಸಮಾರಂಭದಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಹಿರಿಯ ನಾಯಕ ಎಲ್.ಕೆ ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಉಮಾಭಾರತಿ ಹಾಗೂ ಕಲ್ಯಾಣ್ ಸಿಂಗ್ ಮತ್ತಿರರು ಭಾಗಿಯಾಗಲಿದ್ದಾರೆ. ಓದಿ: ವಿಡಿಯೋ ಕಾನ್ಫರೆನ್ಸ್ ಮೂಲಕ ರಾಮ ಮಂದಿರ ಭೂಮಿ ಪೂಜೆಗೆ ವಿರೋಧ- ಉದ್ಧವ್ ಠಾಕ್ರೆ ಹೇಳಿಕೆಗೆ ವಿಎಚ್‍ಪಿ ಕಿಡಿ

  • ಭೂಮಿ ಪೂಜೆಯಂದು ದಯವಿಟ್ಟು ಅಯೋಧ್ಯೆಗೆ ಬರಬೇಡಿ- ಟ್ರಸ್ಟ್ ಮನವಿ

    ಭೂಮಿ ಪೂಜೆಯಂದು ದಯವಿಟ್ಟು ಅಯೋಧ್ಯೆಗೆ ಬರಬೇಡಿ- ಟ್ರಸ್ಟ್ ಮನವಿ

    ಲಕ್ನೋ: ಭೂಮಿ ಪೂಜೆಯಂದು ದಯವಿಟ್ಟು ಅಯೋಧ್ಯೆಗೆ ಬರಬೇಡಿ. ಕಾರ್ಯಕ್ರಮವನ್ನು ಟಿವಿಯಲ್ಲೇ ವೀಕ್ಷಿಸಿ ಎಂದು ಭಕ್ತರಲ್ಲಿ ರಾಮಜನ್ಮಭೂಮಿ ಟ್ರಸ್ಟ್ ಮನವಿ ಮಾಡಿಕೊಂಡಿದೆ.

    ಆಗಸ್ಟ್ ರಂದು ನಡೆಯುವ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ. ಆದರೆ ಕೋವಿಡ್ 19 ನಿಂದಾಗಿ ಯಾರೂ ಅಯೋಧ್ಯೆಗೆ ಬರಬೇಡಿ. ಕಾರ್ಯಕ್ರಮವನ್ನು ಟಿವಿಯಲ್ಲಿ ವೀಕ್ಷಿಸಿ. ಅಲ್ಲದೆ ಅಂದು ಸಜೆ ಎಲ್ಲರೂ ದೀಪ ಬೆಳಗಿ ಎಂದು ಟ್ರಸ್ಟ್ ತಿಳಿಸಿದೆ.

    ರಾಮಮಂದಿರ ನಿರ್ಮಾಣವನ್ನು ಭೂಮಿ ಪೂಜೆಯ ಮೂಲಕ ಪ್ರಾರಂಭಿಸುವ ಈ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಆಗಸ್ಟ್ 5ರಂದು ಅಯೋಧ್ಯೆಗೆ ಭೇಟಿ ನೀಡುವ ಸಾಧ್ಯತೆ ಇದೆ. 3 ಅಥವಾ 5ರಂದು ಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಹಾಕಲು ಆಗಮಿಸುವಂತೆ ಈಗಾಗಲೇ ಪ್ರಧಾನಿಯವರಿಗೆ ಆಹ್ವಾನ ನೀಡಲಾಗಿದೆ ಎಂದು ಟ್ರಸ್ಟ್ ಸದಸ್ಯರು ಮಾಹಿತಿ ನಿಡಿದ್ದಾರೆ.  ಇದನ್ನೂ ಓದಿ: 800 ಕಿ.ಮೀ ನಡ್ಕೊಂಡೇ ಅಯೋಧ್ಯೆ ಭೂಮಿ ಪೂಜೆಗೆ ಹೊರಟ ಫಯಾಜ್ ಖಾನ್!

    ಮಹಾರಾಷ್ಟ್ರ ಮುಖ್ಯಮಂತ್ರಿ, ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ, ಕೊರೊನಾ ವೈರಸ್ ಭೀತಿಯಿಂದಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ರಾಮಮಂದಿರ ಭೂಮಿ ಪೂಜೆ ನೆರವೇರಿಸಬೇಕು ಎಂದು ಹೇಳಿದ್ದರು. ಇದನ್ನೂ ಓದಿ: ವಿಡಿಯೋ ಕಾನ್ಫರೆನ್ಸ್ ಮೂಲಕ ರಾಮ ಮಂದಿರ ಭೂಮಿ ಪೂಜೆಗೆ ವಿರೋಧ- ಉದ್ಧವ್ ಠಾಕ್ರೆ ಹೇಳಿಕೆಗೆ ವಿಎಚ್‍ಪಿ ಕಿಡಿ

    ಭೂಮಿ ಪೂಜೆ ಕಾರ್ಯಕ್ರಮಕ್ಕೆ ನಾನು ಅಯೋಧ್ಯೆಗೆ ಹೋಗಬಲ್ಲೆ. ಆದರೆ ಲಕ್ಷಾಂತರ ರಾಮನ ಭಕ್ತರ ಕಥೆ ಏನು, ಅವರನ್ನು ನೀವು ತಡೆಯಲು ಸಾಧ್ಯವೆ ಎಂದು ಪ್ರಶ್ನಿಸಿದ್ದಾರೆ. ಹೀಗಾಗಿಯೇ ವಿಡಿಯೋ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮ ಮಾಡಿ ಎಂದು ಉದ್ಧವ್ ಠಾಕ್ರೆ ತಿಳಿಸಿದ್ದರು. ಆದರೆ ಠಾಕ್ರೆ ಸಲಹೆಗೆ ವಿಶ್ವ ಹಿಂದೂ ಪರಿಷತ್ ಆಕ್ರೋಶ ವ್ಯಕ್ತಪಡಿಸಿತ್ತು. ಇದನ್ನೂ ಓದಿ: ಅಯೋಧ್ಯೆಗೆ ದಾಳಿ ಮಾಡಲು ಐಎಸ್‍ಐ ಸಂಚು – ಗುಪ್ತಚರ ಇಲಾಖೆ

  • ರಾಮಮಂದಿರ ನಿರ್ಮಾಣವಾದ್ರೆ ಕೊರೊನಾದಿಂದ ಮುಕ್ತರಾಗ್ತೇವೆಂದು ಕೆಲವರು ಅಂದ್ಕೊಂಡಿದ್ದಾರೆ: ಪವಾರ್

    ರಾಮಮಂದಿರ ನಿರ್ಮಾಣವಾದ್ರೆ ಕೊರೊನಾದಿಂದ ಮುಕ್ತರಾಗ್ತೇವೆಂದು ಕೆಲವರು ಅಂದ್ಕೊಂಡಿದ್ದಾರೆ: ಪವಾರ್

    ಮುಂಬೈ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾದರೆ ನಾವು ಕೋವಿಡ್ 19 ನಿಂದ ಮುಕ್ತರಾಗುತ್ತೇವೆ ಎಂದು ಕೆಲವರು ಅಂದುಕೊಂಡಿದ್ದಾರೆ ಅಂತ ಎನ್‍ಸಿಪಿ ಮುಖ್ಯಸ್ಥ ಶರದ್ ಪವಾರ್ ವ್ಯಂಗ್ಯವಾಡಿದ್ದಾರೆ.

    ಆಗಸ್ಟ್ 5ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ಮಾಡಲಿದ್ದಾರೆ. ಈ ಸಂಬಂಧ ಮಾಧ್ಯಮಗಳು ಶರದ್ ಪವಾರ್ ಅವರ ಅಭಿಪ್ರಾಯ ಕೇಳಿದಾಗ, ಕೊರೊನಾ ವೈರಸ್ ಅನ್ನು ನಿರ್ಮೂಲನೆ ಮಾಡುವುದು ಮಹಾರಾಷ್ಟ್ರ ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಆದರೆ ಈ ಮಧ್ಯೆ ಕೆಲವರು ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಿದರೆ ದೇಶದಲ್ಲಿ ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಬಹುದು ಎಂದು ಭಾವಿಸಿದ್ದಾರೆ ಅಂತ ಲೇವಡಿ ಮಾಡಿದ್ದಾರೆ.

    ನಾವು ಯಾವುದಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಯಾವಾಗಲೂ ಯೋಚಿಸುತ್ತಿರುತ್ತೇವೆ. ಹಾಗೆಯೇ ಸದ್ಯ ನಾವು ಕೊರೊನಾ ಎಂಬ ವೈರಸನ್ನು ಹೇಗೆ ನಿಯಂತ್ರಿಸಬೇಕು ಎಂಬ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ. ಸದ್ಯ ನಮಗೆ ಕೊರೊನಾದೊಂದಿಗೆ ಹೋರಾಡುವುದೇ ಮುಖ್ಯವಾಗಿದೆ. ಯಾಕಂದ್ರೆ ಕೊರೊನಾದಿಂದಾಗಿ ಲಾಕ್‍ಡೌನ್ ಜಾರಿಗೊಳಿಸಬೇಕಾಯಿತು. ಇದು ಸಣ್ಣ ಉದ್ಯಮಗಳ ಮೇಲೆ ಪರಿಣಾಮ ಬೀರಿದೆ. ಈ ಬಗ್ಗೆ ನಮಗೆ ಕಾಳಜಿ ಇದೆ. ಅದಕ್ಕಾಗಿಯೇ ಈ ವಿಚಾರದ ಬಗ್ಗೆ ವಿಶೇಷ ಗಮನಹರಿಸಬೇಕು ಎಂದು ನಾನು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಬಳಿ ವಿನಂತಿ ಮಾಡಿಕೊಳ್ಳುತ್ತಿದ್ದೇನೆ. ಒಟ್ಟಿನಲ್ಲಿ ಆರ್ಥಿಕ ಬಿಕ್ಕಟ್ಟಿನಿಂದ ಜನ ಹೇಗೆ ಹೊರಬರಬೇಕು ಎಂಬುದರ ಬಗ್ಗೆ ದೆಹಲಿಯಲ್ಲಿ ಚರ್ಚೆಯಾಗಬೇಕು ಎಂದು ಪವಾರ್ ಒತ್ತಾಯಿಸಿದರು.

    ಇದೆ ವೇಳೆ ಶಿವಸೇನೆ ಪಕ್ಷದ ದಕ್ಷಿಣ ಮುಂಬೈ ಸಂಸದ ಅರವಿಂದ್ ಸಾವಂತ್, ಶ್ರೀರಾಮ ನಮ್ಮ ನಂಬಿಕೆಯ ವಿಷಯ. ಈ ವಿಚಾರದಲ್ಲಿ ಯಾವುದೇ ರಾಜಕೀಯ ನಡೆಸಲು ನಾವು ಇಚ್ಛಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮುಖ್ಯಮಂತ್ರಿಯಾಗುವ ಮೊದಲು ಹಾಗೂ ಅಧಿಕಾರ ಸ್ವೀಕರಿಸಿದ ಬಳಿಕ ಊದ್ಧವ್ ಠಾಕ್ರೆ ಅವರು ಅಯೋಧ್ಯೆಗೆ ಭೇಟಿ ನೀಡಿದ್ದರು ಎಂದು ಸಾವಂತ್ ತಿಳಿಸಿದ್ದಾರೆ. ಇದನ್ನೂ ಓದಿ: ಆಗಸ್ಟ್ 5ರಂದು ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ – ಪ್ರಧಾನಿ ಮೋದಿ ಉಪಸ್ಥಿತಿ

  • ಶ್ರೀರಾಮ, ಆಂಜನೇಯ ಆರಾಧನೆ-88 ಲಕ್ಷ ರಾಮಕೋಟಿ ಬರೆದಿದ್ದಾರೆ ಬಂಗಾರಪೇಟೆಯ ಪಾಚಾಸಾಬ್

    ಶ್ರೀರಾಮ, ಆಂಜನೇಯ ಆರಾಧನೆ-88 ಲಕ್ಷ ರಾಮಕೋಟಿ ಬರೆದಿದ್ದಾರೆ ಬಂಗಾರಪೇಟೆಯ ಪಾಚಾಸಾಬ್

    ಕೋಲಾರ: ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಹಿಂದೂ-ಮುಸಲ್ಮಾನರ ನಡುವೆ ಕಾನೂನು ಸಮರ ನಡೀತಿದೆ. ಜೊತೆಗೆ ರಾಮನನ್ನು ಮುಸ್ಲೀಮರು ದ್ವೇಷಿಸ್ತಾರೆ ಅನ್ನೋ ಟೀಕೆಯೂ ಇದೆ. ಆದ್ರೆ, ಕೋಲಾರದ ಪಬ್ಲಿಕ್ ಹೀರೋ ಪಾಚಾ ಸಾಬ್ ವಿರೋಧವೇ ಸರಿ. 88 ಲಕ್ಷ ರಾಮಕೋಟಿ ಬರೆದಿದ್ದಾರೆ.

    ಕೋಲಾರದ ಬಂಗಾರಪೇಟೆಯ ಮಾಗೊಂದಿ ಗ್ರಾಮದ 96 ವರ್ಷದ ಪಾಚಾಸಾಬ್ ಶ್ರೀರಾಮನ ಆರಾಧಕರಾಗಿದ್ದು, ಕೋಟಿ ಶ್ರೀರಾಮಕೋಟಿ ಬರೆದು ಭದ್ರಾಚಲಂ ದೇಗುಲಕ್ಕೆ ಅರ್ಪಿಸುವ ಕನಸು ಹೊತ್ತಿದ್ದಾರೆ. ಈಗಾಗಲೇ 88 ಲಕ್ಷ ರಾಮಕೋಟಿ ಬರೆದಿದ್ದು, ಶೀಘ್ರವೇ 12 ಲಕ್ಷ ರಾಮಕೋಟಿ ಬರೆಯುತ್ತೇನೆ ಅಂತಿದ್ದಾರೆ.

    1923ರಲ್ಲಿ ಬಡ ಕುಟುಂಬದಲ್ಲಿ ಜನಿಸಿರುವ ಪಾಚಾಸಾಬ್ ಅಂದಿನ ಕಾಲದಲ್ಲೇ 4ನೇ ತರಗತಿಯನ್ನ ಇಂಗ್ಲೀಷ್‍ನಲ್ಲಿ ಹಾಗೂ ಕನ್ನಡದಲ್ಲಿ 8ನೇ ತರಗತಿವರೆಗೆ ಓದಿ ಶಿಕ್ಷಕರಾಗಿದ್ದರು. 22 ವರ್ಷಗಳ ಹಿಂದೆ ಆಂಧ್ರ ಪ್ರದೇಶದ ಭದ್ರಾಚಲಂಗೆ ಸ್ನೇಹಿತನೊಂದಿಗೆ ಭೇಟಿ ನೀಡಿದ್ದಾಗ ಅಲ್ಲಿನ ಸಾಧು ಒಬ್ಬರ ಸಲಹೆಯಂತೆ ರಾಮಕೋಟಿಯನ್ನು ಪುಸ್ತಕ, ಆಲದ ಎಲೆ, ಎಕ್ಕದ ಎಲೆ, ತಾಮ್ರದ ಎಲೆ ಮೇಲೆ ಬರೆಯುತ್ತಿದ್ದಾರೆ.

    ಗ್ರಾಮದಲ್ಲಿ ಮಕ್ಕಳು, ದೊಡ್ಡವರು, ವೃದ್ಧರಿಗೆ ಗ್ರಹ ಸಂಬಂಧಿ ಕಾಯಿಲೆ ಇದ್ದಲ್ಲಿ ಉಚಿತವಾಗಿ ಮಂತ್ರ-ಚಿಕಿತ್ಸೆಯನ್ನೂ ನೀಡ್ತಿದ್ದಾರೆ ಅಂತ ಸ್ಥಳೀಯರಾದ ಸುಮಿತ್ರ ತಿಳಿಸಿದ್ದಾರೆ.

    ಸರ್ವಧರ್ಮ ಸಮನ್ವಯ ಸಾರುವುದೇ ಗುರಿ ಅನ್ನೋ ಪಾಚಾಸಾಬ್, ಗ್ರಾಮದಲ್ಲಿ ರಾಮಾಂಜನೇಯ ದೇವಾಲಯ ನಿರ್ಮಿಸುವ ಕನಸು ಹೊಂದಿದ್ದಾರೆ. ಈ ಇಳಿವಯಸ್ಸಿನಲ್ಲೂ ಶುಗರ್, ಬಿಪಿ ಸೇರಿದಂತೆ ಯಾವುದೇ ಕಾಯಿಲೆ ಇಲ್ಲ. ಚಟಗಳಿಲ್ಲ ಅಂತ ಖುಷಿಯಿಂದ ಹೇಳ್ತಿದ್ದಾರೆ.

    ಇಷ್ಟು ಮಾತ್ರವಲ್ಲದೇ ಕೆ.ಸಿ.ರೆಡ್ಡಿ ಅವಧಿಯಲ್ಲಿ ಮತ ಹಾಕುವುದು ಹೇಗೆ ಎಂಬುದನ್ನು ಜನತೆಗೆ ಕಲಿಸಿಕೊಟ್ಟಿದ್ದ ಇವರು ಸ್ವಾತಂತ್ರ್ಯ ಸಂಗ್ರಾಮದ ಹೊತ್ತಲ್ಲಿ ಗೋವಾ ಸತ್ಯಾಗ್ರಹದಲ್ಲಿ ಭಾಗಿಯಾಗಿದ್ದನು ಸ್ಮರಿಸಿಕೊಳ್ತಾರೆ. ರಾಮ ಕೋಟಿ ಬರೆಯುವದರಿಂದ ನಾನು ಹೇಳಿದ ಮಾತು ನಡೆಯುತ್ತದೆ ಅನ್ನೋ ಪಾಚಾಸಾಬ್‍ರು ರಾಜಕೀಯವಾಗಿ ಭವಿಷ್ಯವನ್ನೂ ಹೇಳ್ತಾರೆ.

    https://www.youtube.com/watch?v=AZymGId6WcU

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಾಮ ಮಂದಿರ ನಿರ್ಮಾಣ ಕುರಿತು ಬಿಜೆಪಿ ಸುಗ್ರೀವಾಜ್ಞೆ ಹೊರಡಿಸಲಿ – ಓವೈಸಿ ಸವಾಲು

    ರಾಮ ಮಂದಿರ ನಿರ್ಮಾಣ ಕುರಿತು ಬಿಜೆಪಿ ಸುಗ್ರೀವಾಜ್ಞೆ ಹೊರಡಿಸಲಿ – ಓವೈಸಿ ಸವಾಲು

    ನವದೆಹಲಿ: ರಾಮಮಂದಿರ ನಿರ್ಮಾಣದ ಕುರಿತು ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರ ಯಾಕೆ ಸುಗ್ರೀವಾಜ್ಞೆ ಹೊರಡಿಸಬಾರದು ಎಂದು ಆಲ್ ಇಂಡಿಯನ್ ಮಜ್ಲಿಸೆ ಇತ್ತೆಹದುಲ್ ಮುಸ್ಲಿಂ (ಎಐಎಂಐಎಂ) ಪಕ್ಷದ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಪ್ರಶ್ನಿಸಿದ್ದಾರೆ.

    ಆಯೋಧ್ಯೆ ಕುರಿತು ಸುಪ್ರೀಂ ಕೋರ್ಟ್‍ಗೆ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆಯನ್ನು ಜನವರಿಗೆ ಮುಂದೂಡಿದ ಆದೇಶದ ಬಳಿಕ ಓವೈಸಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿ, ಪ್ರತಿ ಬಾರಿಯೂ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೆಸರು ಹೇಳುವ ಮೂಲಕ ಹೆದರಿಸುವ ಕಾರ್ಯ ಮಾಡುತ್ತಿದೆ ಎಂದು ದೂಷಿಸಿದರು.

    ಬಿಜೆಪಿ, ಆರ್‍ಎಸ್‍ಎಸ್ ಮತ್ತು ವಿಶ್ವ ಹಿಂದೂ ಪರಿಷತ್ ಗಳನ್ನು ಕಾರ್ಟೂನ್ ಪಾತ್ರಗಳಾದ ಟಾಮ್, ಡಿಕ್ ಮತ್ತು ಹ್ಯಾರಿಗೆ ಹೋಲಿಕೆ ಮಾಡಿರುವ ಓವೈಸಿ, ಸದ್ಯ ನೀವು ಅಧಿಕಾರದಲ್ಲಿದ್ದು, ಆಯೋಧ್ಯೆ ರಾಮ ಮಂದಿರ ನಿರ್ಮಾಣ ಕುರಿತು ಸುಗ್ರೀವಾಜ್ಞೆ ಹೊರಡಿಸಿ ಎಂದು ಸವಾಲು ಎಸೆದರು.

    ಪ್ರತಿ 5 ವರ್ಷಕ್ಕೆ ಒಮ್ಮೆ ರಾಮಮಂದಿರ ಕುರಿತ ಈ ಪ್ರಕ್ರಿಯೆ ಸಾಮಾನ್ಯವಾಗಿದೆ. ಬಿಜೆಪಿ ರಾಮಮಂದಿರ ನಿರ್ಮಾಣ ಕುರಿತು ಇರುವ ಜನರ ಭಾವನೆಗಳನ್ನು ಕೇಂದ್ರಿಕರಿಸಲು ಪ್ರಯತ್ನಿಸುತ್ತಿದೆ. ಆದರೆ ರಾಮಮಂದಿರ ವಿವಾದ ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ಮುನ್ನವೇ ಕಾಂಗ್ರೆಸ್ ಪಕ್ಷ ವಿವಾದದ ಕುರಿತು ಸ್ಪಷ್ಟ ನಿರ್ಣಯ ಕೈಗೊಂಡಿತ್ತು. ಸದ್ಯ ಎಲ್ಲರೂ ಸುಪ್ರೀಂ ಕೋರ್ಟ್ ತೀರ್ಪಿಗೆ ಕಾಯಬೇಕಿದೆ ಎಂದು ಕಾಂಗ್ರೆಸ್ ಮಾಜಿ ಸಚಿವ ಪಿ ಚಿದಂಬರಂ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸುಗ್ರಿವಾಜ್ಞೆ ಹೊರಡಿಸಿ ರಾಮ ಮಂದಿರ ನಿರ್ಮಿಸಿ: ಕೇಂದ್ರಕ್ಕೆ ಭಾಗವತ್ ಸೂಚನೆ

    ಸುಗ್ರಿವಾಜ್ಞೆ ಹೊರಡಿಸಿ ರಾಮ ಮಂದಿರ ನಿರ್ಮಿಸಿ: ಕೇಂದ್ರಕ್ಕೆ ಭಾಗವತ್ ಸೂಚನೆ

    ಮುಂಬೈ: ಆತ್ಮಗೌರಕ್ಕಾಗಿ ರಾಮ ಮಂದಿರ ನಿರ್ಮಾಣ ಅಗತ್ಯವಾಗಿದ್ದು, ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸುವ ಮೂಲಕ ಮಂದಿರ ನಿರ್ಮಾಣಕ್ಕೆ ಮಾಡಬೇಕೆಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

    ವಿಜಯದಶಮಿ ಆಚರಣೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ನಾಗ್ಪುರದ ವಾರ್ಷಿಕ ಭಾಷಣದಲ್ಲಿ ಅವರು, ಕೇಂದ್ರ ಸರ್ಕಾರ ಮುಂಬರುವ ಲೋಕಸಭಾ ಚುನಾವಣೆಗೂ ಮುನ್ನವೇ ರಾಮಮಂದಿರ ನಿರ್ಮಾಣದ ಕಾರ್ಯಕ್ಕೆ ಮುಂದಾಗಬೇಕು. ಆತ್ಮಗೌರವಕ್ಕಾಗಿ ನಿರ್ಮಾಣ ಮಾಡಬೇಕಾಗಿರುವು ಅನಿವಾರ್ಯವಾಗಿದೆ. ಸೌಹಾರ್ದತೆ ಹಾಗೂ ಏಕತೆಗೆ ರಾಮ ಮಂದಿರ ದಾರಿ ಮಾಡಿಕೊಡಲಿದೆ ಎಂದು ಹೇಳಿದರು.

    ರಾಷ್ಟ್ರದ ಜೀವ ಮತ್ತು ಧರ್ಮವನ್ನು ಪ್ರತಿಬಿಂಬಿಸುವ ಶ್ರೀ ರಾಮನ ಜನ್ಮಸ್ಥಳದಲ್ಲಿ ಭವ್ಯವಾದ ಮಂದಿರವನ್ನು ನಿಮಾರ್ಣ ಮಾಡಲು ಸಂಘ ಸೇರಿದಂತೆ ದೇಶದ ಕೋಟ್ಯಂತರ ಜನ ಕಾತುರದಿಂದ ಕಾಯುತ್ತಿದ್ದಾರೆ. ಆದರೆ ದೇವಸ್ಥಾನದ ನಿರ್ಮಾಣಕ್ಕೆ ಜನ್ಮಭೂಮಿಯಲ್ಲೇ ಸ್ಥಳ ಇನ್ನೂ ನಿಗಧಿಯಾಗಿಲ್ಲ. ಅಲ್ಲದೇ ಆ ಸ್ಥಳದಲ್ಲಿ ರಾಮನ ಮಂದಿರವಿತ್ತು ಎನ್ನುವ ಹಲವು ಪುರಾವೆಗಳು ಸಹ ದೃಢಪಟ್ಟಿದೆ ಎಂದರು. ಇದನ್ನೂ ಓದಿ: ತಾಳ್ಮೆಯಿಂದಿರಿ, ಲೋಕಸಭಾ ಚುನಾವಣೆಯೊಳಗೆ ರಾಮಮಂದಿರ ನಿರ್ಮಾಣಕ್ಕೆ ಬದ್ಧ: ಯೋಗಿ ಆದಿತ್ಯನಾಥ್

    ಕೇಂದ್ರ ಸರ್ಕಾರವು ರಾಮ ಮಂದಿರ ನಿರ್ಮಾಣಕ್ಕೆ ಇರುವ ಅಡೆತಡೆಗಳನ್ನು ನಿವಾರಿಸಬೇಕು. ಅಲ್ಲದೇ ಅದಕ್ಕಾಗಿ ಸೂಕ್ತ ಕಾನೂನುನನ್ನು ರೂಪಿಸಬೇಕು. ನ್ಯಾಯಾಂಗ ಪ್ರಕ್ರಿಯೆಯಲ್ಲಿ ಕೆಲವು ಯೋಜಿತ ವಿಷಯಗಳು ಮಧ್ಯಸ್ಥಿಕೆ ವಹಿಸುವ ಮೂಲಕ ತೀರ್ಪನ್ನು ಸ್ಥಗಿತಗೊಳಿಸಲು ಪ್ರಭಾವ ಬೀರುತ್ತಿವೆ. ಆದರೆ ಯಾವುದೇ ಕಾರಣವಿಲ್ಲದೆಯೇ ಸಮಾಜದ ತಾಳ್ಮೆ ಕೆಡಿಸುವ ಆಸಕ್ತಿ ಯಾರಿಗೂ ಇಲ್ಲವೆಂದು ಹೇಳಿದ್ದಾರೆ.

    ರಾಮ ಜನ್ಮಭೂಮಿ ವಿವಾದದ ಅಂತಿಮ ವಿಚಾರಣೆ ಅಕ್ಟೋಬರ್ 29ರಿಂದ ಸುಪ್ರೀಂ ಕೋರ್ಟ್ ನಲ್ಲಿ ಆರಂಭವಾಗಲಿದ್ದು, ತ್ವರಿತಗತಿಯಲ್ಲಿ ವಿಚಾರಣೆ ನಡೆಯಲಿದೆ. ಇದನ್ನೂ ಓದಿ: ರಾಮ ಮಂದಿರ ಪ್ರಕರಣದಲ್ಲಿ ನನ್ನ ಅರ್ಜಿಯನ್ನು ಮೊದಲು ಪರಿಗಣಿಸಬೇಕು – ಸುಬ್ರಮಣಿಯನ್ ಸ್ವಾಮಿ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv