Tag: rama mandir

  • ರಾಮಮಂದಿರ ಕಾಂಪ್ಲೆಕ್ಸ್‌ನಲ್ಲಿ ಆಕಸ್ಮಿಕವಾಗಿ ಗುಂಡು ಹಾರಿಸಿಕೊಂಡು ಭದ್ರತಾ ಸಿಬ್ಬಂದಿ ದುರ್ಮರಣ

    ರಾಮಮಂದಿರ ಕಾಂಪ್ಲೆಕ್ಸ್‌ನಲ್ಲಿ ಆಕಸ್ಮಿಕವಾಗಿ ಗುಂಡು ಹಾರಿಸಿಕೊಂಡು ಭದ್ರತಾ ಸಿಬ್ಬಂದಿ ದುರ್ಮರಣ

    ಅಯೋಧ್ಯೆ: ರಾಮಜನ್ಮಭೂಮಿ (Ayodhya Ram Mandir) ಕಾಂಪ್ಲೆಕ್ಸ್ ನಲ್ಲಿ ಎಸ್‍ಎಸ್‍ಎಫ್ ಯೋಧರೊಬ್ಬರು (ಭದ್ರತಾ ಸಿಬ್ಬಂದಿ) ಆಕಸ್ಮಿಕವಾಗಿ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದಾರೆ.

    ಮೃತರನ್ನು ಶತ್ರುಘ್ನ ವಿಶ್ವಕರ್ಮ ಎಂದು ಗುರುತಿಸಲಾಗಿದೆ. ಶತ್ರುಘ್ನ ವಿಶ್ವಕರ್ಮ ಅವರು 2019 ರ ಬ್ಯಾಚ್‍ನವರಾಗಿದ್ದು, ಅಂಬೇಡ್ಕರ್ ನಗರದ ಸಮ್ಮನಪುರ ಪೊಲೀಸ್ ಠಾಣೆಯ ಕಾಜಪುರ ಗ್ರಾಮದ ನಿವಾಸಿ. ಈ ಘಟನೆಗೆ ಕಾರಣ ಏನು ಎಂಬುದು ತಿಳಿದುಬಂದಿಲ್ಲ.

    ಮಾಹಿತಿ ಪ್ರಕಾರ, ಬೆಳಗ್ಗೆ 5 ಗಂಟೆ ಸುಮಾರಿಗೆ ರಾಮಮಂದಿರದಿಂದ ಕೇವಲ 150 ಮೀಟರ್ ದೂರದಲ್ಲಿ ಈ ಘಟನೆ ನಡೆದಿದೆ. ರಾಮಜನ್ಮಭೂಮಿಯ ಭದ್ರತೆಗೆ ಎಸ್‍ಎಸ್‍ಎಫ್ ಯೋಧರನ್ನು ನಿಯೋಜಿಸಲಾಗಿತ್ತು. ಇದನ್ನೂ ಓದಿ: ಧರ್ಮಶಾಲಾದಲ್ಲಿ ದಲೈಲಾಮ ಭೇಟಿಯಾದ ನ್ಯಾನ್ಸಿ ಪೆಲೋಸಿ- ಕಣ್ಣು ಕೆಂಪಗಾಗಿಸಿದ ಚೀನಾ

    ಘಟನೆ ನಡೆಯುತ್ತಿದ್ದಂತೆಯೇ ಶತ್ರುಘ್ನ ವಿಶ್ವಕರ್ಮ ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಟ್ರಾಮಾ ಸೆಂಟರ್‍ಗೆ ಕಳುಹಿಸಲಾಯಿತು. ಆದರೆ ಅಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಬಗ್ಗೆ ಪೊಲೀಸರು ಮೃತ ಯೋಧನ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದು ಕುಟುಂಬಸ್ಥರು ಕೂಡ ಸ್ಥಳಕ್ಕೆ ಆಗಮಿಸಿದ್ದಾರೆ.

    ಘಟನಾ ಸ್ಥಳಕ್ಕೆ ಭೇಟಿ ನೀಡಿದ ಹಿರಿಯ ಪೊಲೀಸ್ ಅಧಿಕಾರಿಗಳು, ಇದು ಆಕಸ್ಮಿಕವಾಗಿ ಗುಂಡಿನ ದಾಳಿಯೇ ಅಥವಾ ಆತ್ಮಹತ್ಯೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ. ಅಲ್ಲದೇ ಯೋಧನ ತಲೆಗೆ ಮುಂಭಾಗದಿಂದ ಗುಂಡು ಹಾರಿಸಿದ್ದು ಹೇಗೆ ಎಂದು ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಒಟ್ಟಿನಲ್ಲಿ ಮರಣೋತ್ತರ ಪರೀಕ್ಷೆಯ ವರದಿಯ ನಂತರವೇ ಎಲ್ಲವೂ ಸ್ಪಷ್ಟವಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಇತ್ತ ಘಟನೆಗೂ ಮುನ್ನ ಶತ್ರುಘ್ನ ಅವರು ಮೊಬೈಲ್ ನೋಡುತ್ತಿದ್ದರು ಎಂದು ಸ್ನೇಹಿತರು ತಿಳಿಸಿದ್ದಾರೆ.

  • ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆಗೂ ಮುನ್ನ ಕೈಗೊಂಡಿದ್ದ 11 ದಿನಗಳ ವ್ರತದ ಟೀಕೆಗೆ ಮೋದಿ ಉತ್ತರ

    ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆಗೂ ಮುನ್ನ ಕೈಗೊಂಡಿದ್ದ 11 ದಿನಗಳ ವ್ರತದ ಟೀಕೆಗೆ ಮೋದಿ ಉತ್ತರ

    – ತಮ್ಮ ವಿವಿಧ ಧಿರಿಸಿನ ಬಗ್ಗೆ ವ್ಯಂಗ್ಯವಾಡಿದವರಿಗೆ ತಿರುಗೇಟು

    ನವದೆಹಲಿ: ಅಯೋಧ್ಯೆ ರಾಮಮಂದಿರದಲ್ಲಿ (Ayodhya Ram Mandir) ಬಾಲರಾಮನ ಪ್ರಾಣ ಪ್ರತಿಷ್ಠಾಪನೆಗೂ ಮುನ್ನ 11 ದಿನಗಳ ಕಾಲ ನರೇಂದ್ರ ಮೋದಿಯವರು ವ್ರತದಲ್ಲಿದ್ದರು. ಪ್ರಧಾನಿಗಳ ಈ ಕ್ರಮಕ್ಕೆ ವಿಪಕ್ಷಗಳು ಟೀಕೆ ವ್ಯಕ್ತಪಡಿಸಿದ್ದವು. ಈ ಟೀಕೆಗಳಿಗೆ ಮೋದಿಯವರು ಇಂದು ತಕ್ಕ ಉತ್ತರ ಕೊಟ್ಟಿದ್ದಾರೆ.

    ಖಾಸಗಿ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದ ವೇಳೆ ರಾಮಮಂದಿರಕ್ಕೆ ರಾಜಕೀಯ ತಿರುವು ಕೊಟ್ಟ ವಿಚಾರದ ಬಗ್ಗೆ ಪ್ರಸ್ತಾಪ ಮಾಡಲಾಯಿತು. ಈ ವೇಳೆ ಪ್ರತಿಕ್ರಿಯಿಸಿದ ಪ್ರಧಾನಿಯವರು, ಈ ಪ್ರಕರಣದ ಇತ್ಯರ್ಥಕ್ಕೆ ಸಾಕಷ್ಟು ಅವಕಾಶಗಳಿದ್ದವು. ಇದು 500 ವರ್ಷಗಳ ನಿರಂತರ ಹೋರಾಟ, ಬಲಿದಾನ, ಕಾನೂನು ಹೋರಾಟವಾಗಿತ್ತು. ಕೆಲವರಿಗೆ ಮತಬ್ಯಾಂಕ್ ಗಾಗಿ ಇದೊಂದು ಅಸ್ತ್ರವಾಗಿತ್ತು. ಮಂದಿರ ನಿರ್ಮಾಣ ಮಾಡಿದ್ರೆ ಸಮಸ್ಯೆ ಎಂದು ಹೆಸರಿಸಲಾಯಿತು. ಇಂದು ನಾವು ಮಂದಿರ ನಿರ್ಮಾಣ ಮಾಡಿದೆವು, ಏನಾಯಿತು ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಎಳನೀರು ಸೇವನೆ, ನೆಲದಲ್ಲೇ ನಿದ್ದೆ, ಸಾತ್ವಿಕ ಆಹಾರ- ರಾಮನ ಪ್ರತಿಷ್ಠಾಪನೆಗೆ ಪ್ರಧಾನಿ ಮೋದಿ ಕಠಿಣ ವ್ರತ

    ಇದು ನನಗೆ ಇವೆಂಟ್‌ ಆಗಿರ್ಲಿಲ್ಲ: ರಾಮ ಮಂದಿರ ಉದ್ಫಾಟನೆಗೂ ಮುನ್ನ ವೃತ ಆರಂಭಿಸಿದೆ. ರಾಮ ಎಲ್ಲೆಲ್ಲಿ ಹೋಗಿದ್ದರು ನಾನು ಅಲ್ಲಿಗೆ ಹೋಗಲು ಪ್ರಯತ್ನಿಸಿದೆ. ದಕ್ಷಿಣ ಭಾರತದಲ್ಲೂ ಶ್ರೀರಾಮನ ಬಗ್ಗೆ ಅಪಾರ ಪ್ರೀತಿ ಇದೆ. ಅವರ ಭಾವನೆಯಲ್ಲಿ ನನಗೆ ಅರಿವಾಗುತ್ತಿತ್ತು. ಈ 11 ದಿನಗಳ ಬಹಳಷ್ಟು ಗಂಭೀರವಾಗಿ ಪರಿಗಣಿಸಿದ್ದೆ. ಇದು ನನಗೆ ಇವೆಂಟ್ ಆಗಿರಲಿಲ್ಲ ಎಂದು ಟೀಕೆಗಳಿಗೆ ಮೋದಿ ತಕ್ಕ ಉತ್ತರ ಕೊಟ್ಟರು. ಇದನ್ನೂ ಓದಿ: ಪ್ರಧಾನಿ ಮೋದಿ 11 ದಿನಗಳ ವ್ರತದ ಮಹತ್ವ ಏನು?

    ರಾಮ ಮಂದಿರದ ಆಹ್ವಾನವನ್ನು ತಿರಸ್ಕರಿಸಲಾಯಿತು. ಇದನ್ನು ಹೆಮ್ಮೆ ಪಡೆಬೇಕಿತ್ತು. ಆದರೆ ಮತಬ್ಯಾಂಕ್ ಅವರಿಗೆ ಅನಿವಾರ್ಯವಾಗಿತ್ತು. ರಾಮ ಮಂದಿರ ಮುಂದಿನ ಪೀಳಿಗೆಗೆ ಪ್ರೇರಣೆ ಎಂದು ಪ್ರಧಾನಿ ಮೋದಿ (Narendra Modi) ಹೇಳಿದರು. ಇದನ್ನೂ ಓದಿ: ಮೋದಿ ನಾಸಿಕ್‌ನಿಂದಲೇ ವ್ರತ ಆರಂಭಿಸಿದ್ದು ಯಾಕೆ? ರಾಮಾಯಣಕ್ಕೂ ನಾಸಿಕ್‌ಗೂ ಏನು ಸಂಬಂಧ?

    ಧಿರಿಸಿನ ವ್ಯಂಗ್ಯಕ್ಕೆ ತಿರುಗೇಟು: ನಾನು ಯಾವ ರಾಜ್ಯಕ್ಕೆ ಹೊಗ್ತೀನೋ ಅಲ್ಲಿಯ ಜನರು ಪ್ರೀತಿಯಿಂದ ಅಲ್ಲಿನ ಧಿರಸು ಧರಿಸಲು ನೀಡುತ್ತಾರೆ. ಆದರೆ ಇದನ್ನೂ ವ್ಯಂಗ್ಯ ಮಾಡುತ್ತಾರೆ. ಇಷ್ಟು ದ್ವೇಷ ಹರಡುವುದು ಒಳಿತಲ್ಲ ಎಂದು ವಿರೋಧಿಗಳ ವಿರುದ್ಧ ಪ್ರಧಾನಿ ವಾಗ್ದಾಳಿ ನಡೆಸಿದರು.

  • ರಾಮಮಂದಿರ ನಿರ್ಮಾಣಕ್ಕೆ ಶ್ರಮಿಸಿದ ಪ್ರಧಾನಿ ಮೋದಿಗೆ HDD ಧನ್ಯವಾದ

    ರಾಮಮಂದಿರ ನಿರ್ಮಾಣಕ್ಕೆ ಶ್ರಮಿಸಿದ ಪ್ರಧಾನಿ ಮೋದಿಗೆ HDD ಧನ್ಯವಾದ

    ನವದೆಹಲಿ: ರಾಮ ಮಂದಿರದ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡ ಹಾಡಿ ಹೊಗಳಿದ್ದಾರೆ. ಜೊತೆಗೆ ರಾಮಮಂದಿರ ನಿರ್ಮಾಣ ಮಾಡಲು ಶ್ರಮಿಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

    ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ಮಂದಿರ ನಿರ್ಮಾಣಕ್ಕೆ ನರೇಂದ್ರ ಮೋದಿ (Narendra Modi) ತುಂಬಾ ಶ್ರಮಿಸಿದ್ದಾರೆ. ಅವರ ಪ್ರಾಮಾಣಿಕ ಪ್ರಯತ್ನ ಮಂದಿರ ವಿಚಾರದಲ್ಲಿ ಆಗಿದೆ ಎಂದ ಅವರು ರಾಮ ಮಂದಿರ ನಿರ್ಮಾಣ ಮಾಡಿದ್ದ ಮೋದಿಗೆ ಧನ್ಯವಾದಗಳನ್ನು ತಿಳಿಸಿದರು.

    ರಾಮ ಮಂದಿರ ನಿರ್ಮಾಣ ಆಗಿರುವುದು ದೇಶಕ್ಕೆ ಹೆಮ್ಮೆಯ ವಿಚಾರವಾಗಿದೆ. ರಾಮ ಮಂದಿರ (Ram Mandir) ಉದ್ಘಾಟನೆ ದಿನ ನಾನು ಮತ್ತು ನನ್ನ ಹೆಂಡತಿ ಅಯೋಧ್ಯೆಗೆ (Ayodhya) ಹೋಗಿದ್ವಿ. ಆ ಒಂದು ಅಭೂತಪೂರ್ವವಾದ ಕ್ಷಣಕ್ಕೆ ನಾನು ಸಾಕ್ಷಿಯಾಗಿದ್ದೇನೆ. ಭವ್ಯ ಮಂದಿರ ಮುಂದಿನ ಪೀಳಿಗೆಗೂ ಸಾಕ್ಷಿಯಾಗಲಿದೆ ಎಂದರು. ಇದನ್ನೂ ಓದಿ: ಈಶ್ವರಪ್ಪನವ್ರೇ.. ನಾನೇ ಬರ್ತೀನಿ, ನೀವೇ ಗುಂಡು ಹೊಡೆಯಿರಿ: ಡಿ.ಕೆ ಸುರೇಶ್

    ರಾಮ ಧರ್ಮವನ್ನ ಪಾಲಿಸಿದ ವ್ಯಕ್ತಿ. ರಾಮ ಅಂದರೆ ಭಕ್ತಿ, ಪ್ರೀತಿ. ಗಾಂಧೀಜಿ ಸಮೇತ ರಾಮನ ಬಗ್ಗೆ ಮಾತನಾಡುತ್ತಿದ್ದರು. ರಾಮನ ಮಂದಿರ ಅಯೋಧ್ಯೆಯಲ್ಲಿ ನಿರ್ಮಾಣ ಆಗಿರುವುದು ಹೆಮ್ಮೆಯ ಸಂಗತಿ. ಮಂದಿರ ನಿರ್ಮಾಣ ಆಗಿ ರಾಮನ ಮೂರ್ತಿ ಸಹ ಪ್ರತಿಷ್ಠಾಪನೆ ಮಾಡಲಾಗಿದೆ. ರಾಮ ಮಂದಿರದ ಬಗ್ಗೆ ನನಗೆ ಬಹಳ ಸಂತಸ ಇದೆ ಎಂದರು.

    ಇದೇ ವೇಳೆ ಪಿ.ವಿ ನರಸಿಂಹ ರಾವ್, ಸ್ವಾಮೀನಾಥನ್ ಅಂತವರಿಗೆ ಭಾರತ ರತ್ನ ನೀಡಿರುವುದು ಸ್ವಾಗತಾರ್ಹ ಎಂದು ಮಾಜಿ ಪ್ರಧಾನಿಗಳು ತಿಳಿಸಿದರು.

  • ರಾಮ ಮಂದಿರ ಉದ್ಘಾಟನೆ ದಿನವೇ ನಟ ಧ್ರುವ ಪುತ್ರಿಗೆ ನಾಮಕರಣ

    ರಾಮ ಮಂದಿರ ಉದ್ಘಾಟನೆ ದಿನವೇ ನಟ ಧ್ರುವ ಪುತ್ರಿಗೆ ನಾಮಕರಣ

    ಜನವರಿ 22ರ ದಿನಕ್ಕಾಗಿ ಇಡೀ ದೇಶಕ್ಕೆ ದೇಶವೇ ಕಾಯುತ್ತಿದೆ. ಅಂದು ಅಯೋಧ್ಯಯಲ್ಲಿ ರಾಮ ಮಂದಿರ (Rama Mandir) ಉದ್ಘಾಟನೆ ನಡೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ಭಾಗಿ ಆಗುವುದಕ್ಕಾಗಿ ಹಲವರು ತುದಿಗಾಲಲ್ಲಿ ನಿಂತಿದ್ದಾರೆ. ಕನ್ನಡ ಸಿನಿಮಾ ರಂಗದಿಂದಲೂ ಹಲವಾರು ಸಿಲೆಬ್ರಿಟಿಗಳು ಭಾಗಿ ಆಗುತ್ತಿದ್ದಾರೆ. ಈ ದಿನವೇ ನಟ ಧ್ರುವ ಸರ್ಜಾ (Dhruva Sarja) ತಮ್ಮ ಪುತ್ರಿಗೆ ನಾಮಕರಣ ಮಾಡಲಿದ್ದಾರೆ.

    ಧ್ರುವ ಸರ್ಜಾ ಅಂಡ್ ಫ್ಯಾಮಿಲಿ ಆಂಜನೇಯನ ಭಕ್ತರು. ಆಂಜನೇಯ ಗುಡಿಯನ್ನೇ ಈ ಕುಟುಂಬ ನಿರ್ಮಾಣ ಮಾಡಿದೆ. ಧ್ರುವ ಸಿನಿಮಾದಲ್ಲಿ ಹನುಮನ ಕುರಿತಾಗಿ ಸನ್ನಿವೇಶವೋ, ಹಾಡೋ ಇದ್ದೇ ಇರುತ್ತದೆ. ಹನುಮನ ಉಸಿರಾಗಿರುವ ರಾಮನ ಮಂದಿರ ಉದ್ಘಾಟನೆ ದಿನದಂದು ತಮ್ಮ ಪುತ್ರಿಗೆ ನಾಮಕರಣ ಮಾಡಲಿದ್ದಾರಂತೆ ಧ್ರುವ.

    ಧ್ರುವ ಸರ್ಜಾ ಮಗಳಿಗೆ ನಾಮಕರಣ ಮಾಡುತ್ತಿದ್ದರೆ, ಅನೇಕ ಮಹಿಳೆಯರು ಅಂದೇ ಹೆರಿಗೆ ಮಾಡಿಸುವಂತೆ ವೈದ್ಯರ ದುಂಬಾಲು ಬಿದ್ದಿರುವ ಘಟನೆಗಳು ನಡೆದಿವೆ. ರಾಮ ಮಂದಿರ ಉದ್ಘಾಟನೆ ದಿನವೇ ಹೆರಿಗೆ ಮಾಡಿಸಿಕೊಳ್ಳಲು ಹಲವರು ತಯಾರಿ ಕೂಡ ಮಾಡಿಕೊಂಡಿದ್ದಾರೆ. ಅಷ್ಟರ ಮಟ್ಟಿಗೆ ರಾಮ ಜನರ ಮನಸ್ಸಲ್ಲಿ ಬೇರೂರಿದ್ದಾನೆ.

  • Ayodhya Ram Mandir- ರಾಮಲಲ್ಲಾ ಪ್ರತಿಷ್ಠಾಪನೆಗೆ ಕೋಲಾರ ಅರ್ಚಕನಿಗೆ ಆಹ್ವಾನ

    Ayodhya Ram Mandir- ರಾಮಲಲ್ಲಾ ಪ್ರತಿಷ್ಠಾಪನೆಗೆ ಕೋಲಾರ ಅರ್ಚಕನಿಗೆ ಆಹ್ವಾನ

    ಕೋಲಾರ: ಜನವರಿ 22ರಂದು ಅಯೋಧ್ಯೆ ರಾಮಮಂದಿರ (Ayodhya Ram Mandir) ಉದ್ಘಾಟನೆಗೊಳ್ಳಲಿದ್ದು, ಸಕಲ ಸಿದ್ಧತೆಗಳು ನಡೆಯುತ್ತಿದೆ. ಈ ನಡುವೆ ಪ್ರಮುಖರಿಗೆ ಆಹ್ವಾನ ಪತ್ರಿಕೆಗಳನ್ನು (Invitation) ಕೂಡ ಕಳುಹಿಸಲಾಗುತ್ತಿದೆ. ಅಂತೆಯೇ ಈ ಆಮಂತ್ರಣ ಪತ್ರಿಕೆಯು ಇದೀಗ ಕೋಲಾರದ ಅರ್ಚಕರೊಬ್ಬರ ಕೈ ಸೇರಿದೆ.

    ಹೌದು. ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಯಲ್ಲಿ ಭಾಗಿಯಾಗಲು ಕೋಲಾರ ಮೂಲದ ಅರ್ಚಕ ರಮೇಶ್ ಭಟ್ (Ramesh Bhat) ಅವರನ್ನು ಆಹ್ವಾನಿಸಲಾಗಿದೆ. ರಮೇಶ್ ಭಟ್ ಅವರು ಕೋಲಾರ (Kolar) ಜಿಲ್ಲೆಯ ಕಲ್ಲೂರು ಗ್ರಾಮದ ನಿವಾಸಿ. ಇದೀಗ ಇವರನ್ನು ರಾಮಮಂದಿರ ಉದ್ಘಾಟನೆಯ ವೇಳೆ ಪರಿಚಾರಕ ಋತ್ವಿಕ್ ರಾಗಿ ಭಾಗವಹಿಸಲು ರಾಮಮಂದಿರ ದೇವಾಲಯ ಪ್ರತಿಷ್ಠಾಪನಾ ಸಮಿತಿಯು ಆಹ್ವಾನಿಸಿದೆ.

    ರಮೇಶ್ ಭಟ್ ಅವರು ಕೋಲಾರ ನಗರದ ಆರ್.ಎಲ್ ಜಾಲಪ್ಪ ಆಸ್ಪತ್ರೆ ಆವರಣದಲ್ಲಿನ ಗಣಪತಿ ದೇಗುಲದಲ್ಲಿ ಅರ್ಚಕರಾಗಿ 25 ವರ್ಷ ಸೇವೆ ಸಲ್ಲಿಸಿದ್ದಾರೆ. ಸದ್ಯ ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ಶಿವ-ವಿಷ್ಣು ದೇಗುಲದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇದನ್ನೂ ಓದಿ: ಅಯೋಧ್ಯೆಯ ರಾಮಮಂದಿರದ ಒಳಗಿನ ಚಿತ್ರಣ ಹೇಗಿದೆ? ಇಲ್ಲಿದೆ ಕೆಲವು ಫೋಟೋಸ್

  • Ayodhya Ram Mandir: 1,200 ಕೆ.ಜಿಯ 42 ಘಂಟೆಗಳು ತಮಿಳುನಾಡಿನಿಂದ ಅಯೋಧ್ಯೆಗೆ ರವಾನೆ

    Ayodhya Ram Mandir: 1,200 ಕೆ.ಜಿಯ 42 ಘಂಟೆಗಳು ತಮಿಳುನಾಡಿನಿಂದ ಅಯೋಧ್ಯೆಗೆ ರವಾನೆ

    ಚೆನ್ನೈ: ಅಯೋಧ್ಯೆಯಲ್ಲಿ (Ayodhya) ರಾಮಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿದ್ದು, ಈಗಾಗಲೇ ಸಕಲ ಸಿದ್ಧತೆಗಳು ನಡೆಯುವ ಮೂಲಕ ಒಂದು ರೀತಿಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಅಂತೆಯೇ ಈ ಹಬ್ಬಕ್ಕೆ ಸಾಕ್ಷಿಯಾಗಲು ಹಲವಾರು ಕಡೆಗಳಿಂದ ಭಕ್ತಿಪೂರ್ವಕ ಕಾಣಿಕೆಗಳನ್ನು ಕಳುಹಿಸಲಾಗುತ್ತಿದೆ. ಅಂತೆಯೇ ತಮಿಳುನಾಡಿನಿಂದ ಕೂಡ ಭಕ್ತಿಯ ಸಂಕೇತವಾಗಿ ಘಂಟೆಗಳನ್ನು ರವಾನಿಸಲಾಗಿದೆ.

    ಹೌದು. ಜನವರಿ 22ರಂದು ಅಯೋಧ್ಯೆಯಲ್ಲಿ ರಾಮಮಂದಿರ (Ramamandir) ಉದ್ಘಾಟನೆಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಇದೀಗ ತಮಿಳುನಾಡಿನಿಂದ ಅಯೋಧ್ಯೆಗೆ 1,200 ಕೆಜಿ ತೂಕದ ಒಟ್ಟು 42 ಘಂಟೆಗಳನ್ನು ರವಾನಿಸಲಾಗಿದೆ. ನಾಮಕ್ಕಲ್ ಜಿಲ್ಲೆಯಲ್ಲಿ ಘಂಟೆಗಳನ್ನು ತಯಾರಿಸಲಾಗಿದೆ. ಬಳಿಕ ಅವುಗಳಿಗೆ ವಿಶೇಷ ಪೂಜೆ ಸಲ್ಲಿಸಿ ಬಳಿಕ ರಾಮಜನ್ಮಭೂಮಿಗೆ ಕಳುಹಿಸಿಕೊಡಲಾಗಿದೆ.‌

    ಈ ಸಂಬಂಧ ಆಂಡಾಲ್ ಮೋಲ್ಡಿಂಗ್ ವರ್ಕ್ಸ್ ಮಾಲೀಕ ಆರ್.ರಾಜೇಂದ್ರನ್ ಮಾತನಾಡಿ, ಒಂದು ಘಂಟೆ ಮಾಡಲು 1,200 ರೂ. ಆಗುತ್ತದೆ. ಆದರೆ ರಾಮಮಂದಿರಕ್ಕೆ ಕೇವಲ 600 ರೂ.ಗಳನ್ನು ಕಾರ್ಮಿಕ ಶುಲ್ಕವಾಗಿ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: Ayodhya Ram Mandir: ರಾಮಮಂದಿರ ಉದ್ಘಾಟನೆಗೆ ನೇಪಾಳದಿಂದ ಬರ್ತಿದೆ ಚಿನ್ನಾಭರಣ, ವಸ್ತ್ರ, ಸಿಹಿತಿನಿಸು

    ಘಂಟೆಗಳ ತೂಕವು ಬದಲಾಗುತ್ತದೆ. ಐದು ಘಂಟೆಗಳು ತಲಾ 120 ಕೆ.ಜಿ ತೂಗಿದರೆ, ಆರು ಘಂಟೆಗಳು ತಲಾ 70 ಕೆ.ಜಿ ತೂಗುತ್ತವೆ. ಆದರೆ ಒಂದು ಘಂಟೆ ಮಾತ್ರ 25 ಕೆ.ಜಿ ತೂಗುತ್ತದೆ ಎಂದು ಅವರು ವಿವರಿಸಿದ್ದಾರೆ.

  • ಅಡ್ವಾಣಿ ಭೇಟಿಯಾದ ಪೇಜಾವರಶ್ರೀ- ರಾಮಮಂದಿರ ಹೋರಾಟ ದಿನಗಳ ಮೆಲುಕು

    ಅಡ್ವಾಣಿ ಭೇಟಿಯಾದ ಪೇಜಾವರಶ್ರೀ- ರಾಮಮಂದಿರ ಹೋರಾಟ ದಿನಗಳ ಮೆಲುಕು

    ಉಡುಪಿ/ನವದೆಹಲಿ: ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ (Vishwaprasanna Teertha) ಶ್ರೀಪಾದರು ದೆಹಲಿಯಲ್ಲಿ ಮಾಜಿ ಉಪಪ್ರಧಾನಿ ಬಿಜೆಪಿ (BJP) ಹಿರಿಯ ನಾಯಕ ಎಲ್.ಕೆ ಅಡ್ವಾಣಿ (LK Adwani) ಯವರನ್ನು ಅವರ ನಿವಾಸದಲ್ಲಿ ಸೌಹಾರ್ದ ಭೇಟಿ ಮಾಡಿದರು. ಈ ವೇಳೆ ರಾಮಮಂದಿರ (Ramamandir) ಹೋರಾಟ ಮತ್ತು ಮಂದಿರ ನಿರ್ಮಾಣ ಕಾರ್ಯದ ಪ್ರಗತಿ ಬಗ್ಗೆ ಮಾತನಾಡಿದರು.

    ಅಡ್ವಾಣಿಯವರೊಂದಿಗೆ ಉಭಯಕುಶಲೋಪರಿ ನಡೆಸಿ ಅವರಿಗೆ ದೀರ್ಘಾಯುರಾರೋಗ್ಯವನ್ನು ಶ್ರೀಕೃಷ್ಣನಲ್ಲಿ ಪ್ರಾರ್ಥಿಸುವುದಾಗಿ ಪೇಜಾವರಶ್ರೀ (Pejawara Sri) ತಿಳಿಸಿದರು. ಅಯೋಧ್ಯಾ (Ayodhya) ರಾಮಜನ್ಮಭೂಮಿ ಆಂದೋಲನದಲ್ಲಿ ಅಡ್ವಾಣಿಯವರ ಪಾತ್ರವನ್ನು ಶ್ರೀಗಳು ಬಣ್ಣಿಸಿ ಆ ಹೋರಾಟದ ಫಲವಾಗಿ ಇಂದು ಭವ್ಯ ರಾಮಮಂದಿರ ನಿರ್ಮಾಣಗೊಳ್ಳುವಂತಾಗಿದೆ. ದೇವರು ನಿರ್ಮಾಣ ಪ್ರಗತಿಯಲ್ಲಿದ್ದು, ಇನ್ನೊಂದು ವರ್ಷದಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳುವುದಾಗಿ ಹೇಳಿದರು. ಇದನ್ನೂ ಓದಿ: ಸರ್ಕಾರದಿಂದಲೇ ಆ್ಯಪ್ ಮಾಡಿ ಆಟೋ ಸೇವೆಗೆ ಅವಕಾಶ: ಶ್ರೀರಾಮುಲು

    ವಿಶ್ವೇಶತೀರ್ಥ ಶ್ರೀಪಾದರು ತಮಗೆ ನೀಡಿದ ಸ್ಫೂರ್ತಿಯನ್ನು ಎಲ್.ಕೆ. ಅಡ್ವಾಣಿ ಸ್ಮರಿಸಿದರು. ಆ ಕಾಲದ ದಿನಗಳನ್ನು ನೆನೆದರು. ಅಡ್ವಾಣಿಯವರಿಗೆ ಶ್ರೀಕೃಷ್ಣನ ಗಂಧ ಪ್ರಸಾದ, ಶಾಲು ಸ್ಮರಣಿಕೆ ಫಲ ಮಂತ್ರಾಕ್ಷತೆಯಿತ್ತು ಸ್ವಾಮೀಜಿ ಆಶೀರ್ವದಿಸಿದರು. ಅಡ್ವಾಣಿಯವರ ಪುತ್ರಿ ಪ್ರತಿಭಾ ಅಡ್ವಾಣಿ ಮತ್ತು ಮನೆ ಮಂದಿ ಶ್ರೀಗಳವರನ್ನು ಬರಮಾಡಿಕೊಂಡು ಸ್ವಾಗತಿಸಿದರು. ಅಡ್ವಾಣಿಯವರಿಗೆ ಅನಾರೋಗ್ಯವಿದ್ದರೂ ಮನೆ ಬಾಗಿಲಿನವರೆಗೆ ಬಂದು ಶ್ರೀಗಳವರನ್ನು ಬೀಳ್ಕೊಟ್ಟರು. ವಿದ್ವಾನ್ ದೇವಿಪ್ರಸಾದ್ ಭಟ್ವ, ವಿಷ್ಣುಮೂರ್ತಿ ಆಚಾರ್ಯ, ಕೃಷ್ಣ ಭಟ್ ಉಪಸ್ಥಿತರಿದ್ದರು.

    Live Tv
    [brid partner=56869869 player=32851 video=960834 autoplay=true]

  • ರಾಮಮಂದಿರ ಹೋರಾಟದ ಪ್ರಮುಖ, ಗೋವುಗಳ ರಕ್ಷಣೆಗೆ 52 ದಿನ ಉಪವಾಸವಿದ್ದ ಆಚಾರ್ಯ ಧರ್ಮೇಂದ್ರ ಇನ್ನಿಲ್ಲ

    ರಾಮಮಂದಿರ ಹೋರಾಟದ ಪ್ರಮುಖ, ಗೋವುಗಳ ರಕ್ಷಣೆಗೆ 52 ದಿನ ಉಪವಾಸವಿದ್ದ ಆಚಾರ್ಯ ಧರ್ಮೇಂದ್ರ ಇನ್ನಿಲ್ಲ

    ಜೈಪುರ: ರಾಮಂದಿರ (Rama Mandir) ಹೋರಾಟದ ಸಕ್ರಿಯರಾಗಿದ್ದ ಹಾಗೂ ಗೋವುಗಳ ರಕ್ಷಣೆಗಾಗಿ ಬರೋಬ್ಬರಿ 52 ದಿನಗಳ ಕಾಲ ಉಪವಾಸವಿದ್ದ ಆಚಾರ್ಯ ಧರ್ಮೇಂದ್ರ (Acharya Shri Dharmendra)  ಇಂದು ನಿಧನರಾಗಿದ್ದಾರೆ.

    80 ವರ್ಷದ ಆಚಾರ್ಯ ಧರ್ಮೇಂದ್ರ ಅವರು ಕರುಳಿನ ಕಾಯಿಲೆಯಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಜೈಪುರದ ಸವಾಯಿ ಮಾನ್ ಸಿಂಗ್ (Sawai Mansingh Hospital) ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇದೀಗ ಅವರು ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ.

    ತಮ್ಮ ಆವೇಶಭರಿತ ಭಾಷಣಗಳಿಗೆ ಹೆಸರಾದ ಧರ್ಮೇಂದ್ರ ಅವರು, ಗೋವುಗಳ ಕಲ್ಯಾಣಕ್ಕಾಗಿ ಧರ್ಮೇಂದ್ರ ಆಚಾರ್ಯ ಅವರು ಒಮ್ಮೆ 52 ದಿನಗಳ ಕಾಲ ಉಪವಾಸ ಮಾಡಿದ್ದರು. ದೇಶದಲ್ಲಿ ಈ ಹಿಂದೆ ನಡೆದಿದ್ದ ಬಾಬ್ರಿ (Babri Masjid) ಧ್ವಂಸ ಪ್ರಕರಣದಲ್ಲಿ ಆಚಾರ್ಯ ಧರ್ಮೇಂದ್ರ, ಲಾಲ್ ಕೃಷ್ಣ ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಕಲ್ಯಾಣ್ ಸಿಂಗ್ ಮತ್ತು ಉಮಾಭಾರತಿ ಅವರನ್ನು ಆರೋಪಿಗಳೆಂದು ಪರಿಗಣಿಸಲಾಗಿತ್ತು.

    ರಾಮ ಜನ್ಮಭೂಮಿ ಮಂದಿರ ಚಳವಳಿಯಲ್ಲಿ ಸಕ್ರಿಯ ಅಲ್ಲದೇ ಆಚಾರ್ಯ ಧರ್ಮೇಂದ್ರ ಅವರು ಮಹಾತ್ಮ ರಾಮಚಂದ್ರ ವೀರ ಮಹಾರಾಜರ ಪುತ್ರ ಆಚಾರ್ಯ ಧರ್ಮೇಂದ್ರ ಅವರು ರಾಮ ಜನ್ಮಭೂಮಿ ಮಂದಿರ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಅವರು ತಮ್ಮ ಇಡೀ ಜೀವನವನ್ನು ಹಿಂದೂ, ಹಿಂದುತ್ವ ಮತ್ತು ಹಿಂದೂಸ್ತಾನದ ಪ್ರಗತಿಗೆ ಮುಡಿಪಾಗಿಟ್ಟಿದ್ದರು.

    ಸದ್ಯ ಹಿಂದೂ ಮುಖಂಡ ಆಚಾರ್ಯ ಧರ್ಮೇಂದ್ರ ಅವರ ನಿಧನಕ್ಕೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅವರು ಸಂತಾಪ ಸೂಚಿಸಿದ್ದಾರೆ. ಶ್ರೀಮದ್ ಪಂಚಖಂಡ ಪೀಠಾಧೀಶ್ವರ ಆಚಾರ್ಯ ಧರ್ಮೇಂದ್ರ ಜಿ ಅವರ ನಿಧನ ಸನಾತನ ಧರ್ಮಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಅದಲ್ಲದೇ ಆರ್‍ಎಸ್‍ಎಸ್ ಮುಂಡರು ಕೂಡ ಸಂತಾಪ ಸೂಚಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕರ್ನಾಟಕದ ಭಕ್ತರಿಂದ ರಾಮಮಂದಿರಕ್ಕೆ ಚಿನ್ನದ ಶಿಖರ: ಪೇಜಾವರ ಶ್ರೀ

    ಕರ್ನಾಟಕದ ಭಕ್ತರಿಂದ ರಾಮಮಂದಿರಕ್ಕೆ ಚಿನ್ನದ ಶಿಖರ: ಪೇಜಾವರ ಶ್ರೀ

    ಉಡುಪಿ: ರಾಮಂದಿರಕ್ಕೆ ಕರ್ನಾಟಕದ ಭಕ್ತರಿಂದ ಚಿನ್ನದ ಶಿಖರವನ್ನು ಅರ್ಪಿಸುವುದಾಗಿ ಪೇಜಾವರ ಶ್ರೀ (Pejawara Sri) ಹೇಳಿದ್ದಾರೆ.

    ಇಂದು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ರಾಮ ಮಂದಿರ (Rama Mandir) ದ ಗರ್ಭಗುಡಿಯ ಮೇಲೆ ಬಂಗಾರದ ಶಿಖರ ಸ್ಥಾಪಿಸಲಾಗುವುದು. ಕರ್ನಾಟಕದ ಭಕ್ತರು ಹೊಸದಾಗಿ ಬೇಡಿಕೆ ಇಟ್ಟಿದ್ದಾರೆ. ಹೀಗಾಗಿ ಭಕ್ತರಿಂದ ದೇಣಿಗೆ ಸಂಗ್ರಹಿಸಿ ಸ್ವರ್ಣ ಶಿಖರ ಮಾಡಲಾಗುವುದು ಎಂದರು.

    ಮಂದಿರ ಪ್ರತಿಷ್ಠಾಪನೆಯ ನಾಲ್ಕು ತಿಂಗಳ ಮೊದಲು ರಥಯಾತ್ರೆ ನಡೆಯುತ್ತದೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗಿನ ಭಕ್ತರನ್ನು ಒಗ್ಗೂಡಿಸಬೇಕು. ಇಡೀ ದೇಶದ ಜನ ದೇಗುಲದ ಜೊತೆ ಭಾವನಾತ್ಮಕ ಸಂಬಂಧ ಬೆಳೆಸಬೇಕು. ರಾಜ್ಯಕ್ಕೆ ರಥಯಾತ್ರೆ ಬಂದಾಗ ಚಿನ್ನದ ಶಿಖರದ ಯಾತ್ರೆ ನಡೆಯಲಿದೆ ಎಂದು ಮಾಹಿತಿ ನೀಡಿದರು.  ಇದನ್ನೂ ಓದಿ: ಜ್ಞಾನವಾಪಿ ಕೇಸ್‌ – ಹಿಂದೂ ಮಹಿಳೆಯರಿಗೆ ಗೆಲುವು, ಅರ್ಜಿ ವಿಚಾರಣೆಗೆ ಯೋಗ್ಯ

    ಅಯೋಧ್ಯೆ (Ayodhya) ಯ ಮಂದಿರ ನಿರ್ಮಾಣ ಕಾರ್ಯ ವೇಗದಲ್ಲಿ ನಡೆಯುತ್ತಿದೆ. ರಾಮದೇವರ ಗರ್ಭಗುಡಿಯ ತಳದಲ್ಲಿ ಪೀಠದ ನಿರ್ಮಾಣ ಆಗಿದೆ. ರಾಮದೇವರ ಮೈಬಣ್ಣದ ಅಮೃತ ಶಿಲೆಯಲ್ಲೇ ಮೂರ್ತಿ ನಿರ್ಮಾಣ ಆಗಲಿದೆ. ಹೆಬ್ಬಾಗಿಲು ಸಾಗುವಾನಿ ಮರದಲ್ಲಿ ಆಗಲಿದೆ. ತೇಗದ ಮರ ಖರೀದಿ ಬಗ್ಗೆ ಮಹಾರಾಷ್ಟ್ರ ಸರ್ಕಾರದ ಜೊತೆ ಮಾತುಕತೆಯಾಗಿದೆ ಎಂದರು.

    ರಾಮಮಂದಿರ 1,300 ಕೋಟಿ ರೂ. ವೆಚ್ಚದಲ್ಲಿ ಮಂದಿರ ನಿರ್ಮಾಣ ಆಗಲಿದೆ. ಪ್ರತಿ ವರ್ಷ ನೂರು ಕೋಟಿಯಷ್ಟು ದೇಣಿಗೆ ಬರುತ್ತಿದೆ. ಮಂದಿರ ನಿರ್ಮಾಣದ ಪೂರ್ಣವಾಗಿ ಸುತ್ತಲ ಪರಿಸರದ ನಿರ್ಮಾಣ ಆಗಲಿದೆ. ರಾಮಮಂದಿರ ನಿರ್ಮಾಣ ನಂತರ ಅಯೋಧ್ಯೆಯ ಸಂಪೂರ್ಣ ಅಭಿವೃದ್ಧಿ ನಡೆಯುತ್ತದೆ ಎಂದು ಪೇಜಾವರ ಶ್ರೀ ಹೇಳಿದರು.

    Live Tv
    [brid partner=56869869 player=32851 video=960834 autoplay=true]

  • ಕಾಂಗ್ರೆಸ್ ನಾಯಕಿಯಿಂದ ರಾಮಮಂದಿರ ನಿರ್ಮಾಣಕ್ಕೆ 51 ಲಕ್ಷ ದೇಣಿಗೆ!

    ಕಾಂಗ್ರೆಸ್ ನಾಯಕಿಯಿಂದ ರಾಮಮಂದಿರ ನಿರ್ಮಾಣಕ್ಕೆ 51 ಲಕ್ಷ ದೇಣಿಗೆ!

    ಲಕ್ನೋ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಜನ ದೇಣಿಗೆ ನೀಡುತ್ತಿದ್ದಾರೆ. ಅಂತೆಯೇ ಇದೀಗ ಕಾಂಗ್ರೆಸ್ ನಾಯಕಿಯೊಬ್ಬರು ಭಾರೀ ಮೊತ್ತದ ದೇಣಿಗೆ ನೀಡಿ ಸುದ್ದಿಯಾಗಿದ್ದಾರೆ.

    ಹೌದು. ಉತ್ತರ ಪ್ರದೇಶದ ರಾಯ್ ಬರೇಲಿ ಕಾಂಗ್ರೆಸ್ ಶಾಸಕಿ ಆದಿತಿ ಸಿಂಗ್ ಅವರು ರಾಮ ಮಂದಿರ ನಿರ್ಮಾಣಕ್ಕೆ 51 ಲಕ್ಷ ಹಣವನ್ನು ದೇಣಿಗೆಯಾಗಿ ನೀಡಿದ್ದಾರೆ. ಈ ಹಣವನ್ನು ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್ ರಾಜ್ ಅವರಿಗೆ ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ದೇಣಿಗೆಯಾಗಿ ನೀಡುವುದಾಗಿ ಅವರು ತಿಳಿಸಿದ್ದಾರೆ.

    ಶಾಸಕಿ ಆದಿತಿ ಸಿಂಗ್ ಅವರು ಹಲವು ಸನ್ನಿವೇಶಗಳಲ್ಲಿ ಕಾಂಗ್ರೆಸ್ ವಿರುದ್ಧವೇ ಗುಡುಗಿದ್ದರು. ಈ ಹಿಂದೆ ಸೋನಿಯಾ ಗಾಂಧಿಯವರನ್ನೇ ಅದಿತಿ ಅವರು ತರಾಟೆಗೆ ತೆಗೆದುಕೊಂಡಿದ್ದರು. ರಾಯ್ ಬರೇಲಿಗೆಯಿಂದ ಈ ಹಿಂದೆ ಗೆದ್ದಿದ್ದ ಸೋನಿಯಾ ಗಾಂಧಿ ಐದು ವರ್ಷಗಳ ಅವಧಿಯಲ್ಲಿ ಕೇವಲ ಎರಡು ಬಾರಿ ಮಾತ್ರ ರಾಯಬರೇಲಿಗೆ ಆಗಮಿಸಿದ್ದರು ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

    ಗೋರಕ್ಷ್ ಪೀಠದ ಪೀಠಾಧೀಶ್ವರಾಗಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಮ ದೇವಾಲಯ ನಿರ್ಮಾಣಕ್ಕಾಗಿ 1.01 ಕೋಟಿ ರೂ. ಚೆಕ್ ಅನ್ನು ಚಂಪತ್ ರಾಯ್ ಅವರಿಗೆ ಹಸ್ತಾಂತರಿಸಿದ್ದರು. ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ದೇಣಿಗೆ ಅಭಿಯಾನ ಆರಂಭಿಸಿದ ಬೆನ್ನಲ್ಲೇ ಕೋವಿಂದ್ ಅವರು 5 ಲಕ್ಷ ರೂ. ನೀಡುವುದಾಗಿ ಘೋಷಿಸಿದ್ದರು. ಅವರು ದೇಶದ ಮೊದಲ ಪ್ರಜೆ. ಹೀಗಾಗಿ ನಾವು ಈ ಅಭಿಯಾನವನ್ನು ಆರಂಭಿಸುವ ಮೊದಲು ಅವರ ಬಳಿಯೇ ತೆರಳಿದ್ದೆವು. ಈ ವೇಳೆ ಅವರು 5,01,000 ರೂ.ಗಳನ್ನು ನೀಡಿದ್ದಾರೆ ಎಂದು ವಿಎಚ್‍ಪಿಯ ಅಲೋಕ್ ಕುಮಾರ್ ತಿಳಿಸಿದ್ದರು. ಈ ಬೃಹತ್ ಅಭಿಯಾನ ಫೆಬ್ರವರಿ 27ರ ವರೆಗೆ ನಡೆಯಲಿದೆ.