Tag: Rama Japa

  • ದೇವಸ್ಥಾನದ ಮೈಕ್‍ನಲ್ಲಿ ಮೊಳಗಿದ ರಾಮಜಪ, ಶಿವನಜಪ

    ದೇವಸ್ಥಾನದ ಮೈಕ್‍ನಲ್ಲಿ ಮೊಳಗಿದ ರಾಮಜಪ, ಶಿವನಜಪ

    ಹಾಸನ: ಆಜಾನ್ ವಿರುದ್ಧ ಶ್ರೀರಾಮಸೇನೆ ಸಂಘಟನೆ ವತಿಯಿಂದ ಹಾಸನದ ದೇವಸ್ಥಾನಗಳಲ್ಲಿ ರಾಮಜಪ, ಶಿವನಜಪ ಹಮ್ಮಿಕೊಳ್ಳಲಾಗಿದೆ.

    ಹಾಸನದ ಸಂಗಮೇಶ್ವರ ಬಡಾವಣೆಯಲ್ಲಿರುವ, ಸಂಗಮೇಶ್ವರ ದೇವಾಲಯದಲ್ಲಿ ಇಂದಿನಿಂದ ಮೈಕ್ ಮೂಲಕ ದೇವರ ಜಪ ಮಾಡುವುದಕ್ಕೆ ಚಾಲನೆ ನೀಡಲಾಯಿತು. ಶ್ರೀರಾಮಸೇನೆ ಸಂಘಟನೆಯ ಜಿಲ್ಲಾಧ್ಯಕ್ಷ ಜಾನಕೆರೆ ಹೇಮಂತ್ ಮತ್ತು ಪ್ರಧಾನ ಕಾರ್ಯದರ್ಶಿ ಹೇಮಂತ್ ಬೇಲೂರು ಬೆಳಗ್ಗೆ ಐದು ಗಂಟೆಗೆ ಮೈಕ್ ಮೂಲಕ ರಾಮಜಪ, ಶಿವನಜಪ ಆರಂಭಿಸಿದರು. ಇದನ್ನೂ ಓದಿ:  500ಕ್ಕೂ ಹೆಚ್ಚು ಮಸೀದಿಗಳು ಸೇರಿ ಸೂಕ್ಷ್ಮ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್‌

    ಇನ್ನು ಮುಂದೆ ಪ್ರತಿದಿನ ದೇವಾಲಯದಲ್ಲಿ ಸುಪ್ರಭಾತ, ಭಜನೆ, ರಾಮಜಪವನ್ನು ಮೈಕ್‍ನಲ್ಲಿ ಹಾಕಲಾಗುವುದು ಎಂದು ತಿಳಿಸಿದರು. ನಾವು ಮೈಕ್ ಮೂಲಕ ಸುಪ್ರಭಾತ, ಭಜನೆ, ಜಪ ಮಾಡಬಾರದು ಎಂದರೆ ಬೇರೆ ಧರ್ಮದವರಿಗೂ ಅದಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಆಗ್ರಹಿಸಿದರು.

  • ಮುಸ್ಲಿಮರ ಆಜಾನ್ ರೀತಿಯಲ್ಲೇ ರಾಮಜಪ ಮಾಡಿದ ಕಾಳಿಶ್ರೀ

    ಮುಸ್ಲಿಮರ ಆಜಾನ್ ರೀತಿಯಲ್ಲೇ ರಾಮಜಪ ಮಾಡಿದ ಕಾಳಿಶ್ರೀ

    ಬೆಂಗಳೂರು: ರಾಜ್ಯದಲ್ಲಿ ಹಿಜಾಬ್ – ಕೇಸರಿ ಬೆಂಕಿ ಹೊತ್ತು ಉರಿಯುತ್ತಿರೋವಾಗ್ಲೇ ಮತ್ತೊಂದು ಟೆನ್ಶನ್ ಶುರುವಾಗಿದೆ. ಮುಸ್ಲಿಂಮರು ಮಸೀದಿಯಲ್ಲಿ ಆಜಾನ್ ಕೂಗುವ ರೀತಿಯಲ್ಲೇ ಕಾಳಿಮಠದ ಋಷಿಕೇಶ ಸ್ವಾಮೀಜಿ ರಾಮಜಪ ಮಾಡಿದ್ದಾರೆ.

    ಮುಸ್ಲಿಮರು ಮಸೀದಿಯಲ್ಲಿ ಆಜಾನ್ ಕೂಗುವ ರೀತಿಯಲ್ಲೇ ಕಾಳಿಶ್ರೀ ಬೆಂಗಳೂರಿನ ಚುಂಚನ ಘಟ್ಟದಲ್ಲಿರುವ ರಾಮಾಂಜನೇಯ ದೇವಾಲಯಲ್ಲಿ ಧ್ವನಿ ವರ್ಧಕ ಅಳವಡಿಸಿ ರಾಮ ಜಪಕ್ಕೆ ಮುಂದಾಗಿದ್ದಾರೆ. ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಸೋಮವಾರದಿಂದ 10ನೇ ತರಗತಿ ವರೆಗೆ ಶಾಲೆ ಆರಂಭ – ಸದ್ಯಕ್ಕಿಲ್ಲ ಪಿಯುಸಿ, ಡಿಗ್ರಿ ಕಾಲೇಜ್

    ಅಜಾನ್ ಮಾದರಿಯಲ್ಲಿ ಮೈಕ್ ಅಳವಡಿಸಿ ಬೆಳಗ್ಗೆ 5.33ಕ್ಕೆ 3 ಬಾರಿ ರಾಮ ಜಪ ಮಾಡಿದ್ದಾರೆ. ಇದನ್ನು ಗಮನಿಸಿದ ಪೊಲೀಸರು ಕೂಡಲೇ ಸ್ಥಳಕ್ಕೆ ಬಂದು ನೀವು ಮೈಕ್ ತೆಗೆಯಿರಿ ಇಲ್ಲಂದ್ರೆ ನಾವು ತೆಗೆಯುತ್ತೇವೆ ಎಂದರು. ಕೂಡಲೇ ಸ್ವಾಮಿಜೀ ಕಾನೂನಿಗೆ ಗೌರವಿಸಿ ತೆಗೆಯುತ್ತೇವೆ ಇಲ್ಲವಾದ್ರೆ ನಾವು ಮೈಕ್‍ನಲ್ಲಿ ಕೂಗುವುದನ್ನು ನಿಲ್ಲಿಸಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಶಿಕ್ಷಣ ಕೊಡಿ ಅಂದ್ರೆ ಮಂತ್ರಿ ಮಗನೇ ಕೇಸರಿ ಶಾಲು ಹಂಚಲು ಹೋಗಿದ್ದಾರೆ: ರೇವಣ್ಣ ಟೀಕೆ

    ಇದೀಗ ರಾಜ್ಯದಲ್ಲಿ ಹಿಜಬ್-ಕೇಸರಿ ನಡುವೆ ಹೊಸ ಸಂಘರ್ಷವೆಂಬಂತೆ ಆಜಾನ್ ಹುಟ್ಟಿಕೊಳ್ಳುವ ಸಾಧ್ಯತೆ ಇದ್ದು, ಸರ್ಕಾರ ಕೂಡಲೇ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವ ಅನಿವಾರ್ಯತೆ ಇದೆ.