Tag: Ram temple

  • Ram Mandir: ಭಗವಾನ್‌ ರಾಮನ ಅಜ್ಜಿ ಮನೆಯಿಂದ 3,000 ಕ್ವಿಂಟಾಲ್‌ ಅಕ್ಕಿ, ಅತ್ತೆ ಮನೆಯಿಂದ 1,100 ತಟ್ಟೆ ಉಡುಗೊರೆ

    Ram Mandir: ಭಗವಾನ್‌ ರಾಮನ ಅಜ್ಜಿ ಮನೆಯಿಂದ 3,000 ಕ್ವಿಂಟಾಲ್‌ ಅಕ್ಕಿ, ಅತ್ತೆ ಮನೆಯಿಂದ 1,100 ತಟ್ಟೆ ಉಡುಗೊರೆ

    – ರಾಮಮಂದಿರಕ್ಕೆ ಬರುತ್ತೆ ದೇಶದ ಅತಿ ದೊಡ್ಡ ಘಂಟೆ
    – ಇಟಾಹ್‌ನಿಂದ ಬರುತ್ತಿದೆ 108 ಅಡಿ ಉದ್ದದ ಅಗರಬತ್ತಿ
    – ದೇಶ ಸಂಚಾರ ಕೈಗೊಂಡಿದೆ ಭಗವಾನ್‌ ರಾಮನ ಪಾದುಕೆಗಳು
    – ಅತ್ತೆ ಮನೆ ನೇಪಾಳದಿಂದ ಆಭರಣ, ಬೆಣ್ಣೆ, ಮೊಸರು, ಬೆಳ್ಳಿ ಪಾತ್ರೆ ರವಾನೆ

    ಅಯೋಧ್ಯೆ (ಉತ್ತರ ಪ್ರದೇಶ): ಕೋಟ್ಯಂತರ ಹಿಂದೂಗಳ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ. ಅಯೋಧ್ಯೆಯಲ್ಲಿ ರಾಮಮಂದಿರ (Ayodhya Ram Mandir) ಉದ್ಘಾಟನೆಗೆ ದಿನಗಣನೆ ಶುರುವಾಗಿದೆ. ರಾಮಮಂದಿರಕ್ಕೆ ಭಕ್ತಿಪೂರ್ವಕವಾಗಿ ವಿವಿಧೆಡೆಯಿಂದ ಕಾಣಿಕೆ, ಉಡುಗೊರೆಗಳು ಹರಿದುಬರುತ್ತಿವೆ.

    ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ರಾಮಮಂದಿರಕ್ಕೆ ದೇಶಾದ್ಯಂತ ಹಾಗೂ ವಿದೇಶಗಳಿಂದ ಉಡುಗೊರೆಗಳನ್ನು ಕಳುಹಿಸಲಾಗುತ್ತಿದೆ. ಭಗವಾನ್ ಶ್ರೀರಾಮನ ತಾಯಿಯ (ಕೌಸಲ್ಯೆ) ಮನೆ ಛತ್ತೀಸ್‌ಗಢದಿಂದ ಮೂರು ಸಾವಿರ ಕ್ವಿಂಟಾಲ್ ಅಕ್ಕಿ ಬರುತ್ತಿದೆ. ಇದನ್ನೂ ಓದಿ: Ayodhya Ram Mandir: 1,200 ಕೆ.ಜಿಯ 42 ಘಂಟೆಗಳು ತಮಿಳುನಾಡಿನಿಂದ ಅಯೋಧ್ಯೆಗೆ ರವಾನೆ

    ನೇಪಾಳದ ಅವರ ಅತ್ತೆಯ (ಸುನೈನ – ಸೀತಾ ಮಾತೆ ತಾಯಿ) ಮನೆ ಜನಕಪುರದಿಂದ (ನೇಪಾಳ ದೇಶದಲ್ಲಿದೆ) ಬಟ್ಟೆ, ಹಣ್ಣುಗಳು ಮತ್ತು ಒಣ ಹಣ್ಣುಗಳು ಹಾಗೂ ಉಡುಗೊರೆಗಳಿಂದ ಅಲಂಕರಿಸಲ್ಪಟ್ಟ 1,100 ತಟ್ಟೆಗಳು ಬರುತ್ತಿವೆ. ಇದಲ್ಲದೇ ಭಾರತದ ವಿವಿಧ ರಾಜ್ಯಗಳಿಂದ ಅಯೋಧ್ಯೆಗೆ ಸಾಕಷ್ಟು ಸರಕುಗಳು ಬರುತ್ತವೆ. ಎಲ್ಲಿಂದ ಏನು ಬರಲಿದೆ ಎಂಬುದನ್ನು ಇಲ್ಲಿ ನೋಡೋಣ.

    ಎಲ್ಲಿಂದ ಏನೇನು ಬರುತ್ತೆ?
    * ಜನವರಿ 22 ರಂದು ರಾಮಲಲ್ಲಾ ಪಟ್ಟಾಭಿಷೇಕ ನಡೆಯಲಿದೆ. ಇದಾದ ನಂತರ ದೇವರಿಗೆ ವಿಶೇಷ ನೈವೇದ್ಯ ಸಮರ್ಪಿಸಲಾಗುತ್ತದೆ. ಅದಕ್ಕಾಗಿ ಅಜ್ಜಿಯ ಮನೆಯಿಂದ ಅಕ್ಕಿ, ಅತ್ತೆಯ ಮನೆಯಿಂದ ಒಣ ಹಣ್ಣುಗಳನ್ನು ನೀಡಲಾಗುತ್ತದೆ.

    * ನಾನಿಹಾಲ್ ಛತ್ತೀಸ್‌ಗಢದಿಂದ ಅಯೋಧ್ಯೆಗೆ 3 ಸಾವಿರ ಕ್ವಿಂಟಾಲ್ ಅಕ್ಕಿ ಬರಲಿದೆ. ಇದು ಇಲ್ಲಿಯವರೆಗಿನ ಅತಿದೊಡ್ಡ ಅಕ್ಕಿ ರವಾನೆಯಾಗಿದ್ದು, ಇದು ಅಯೋಧ್ಯೆಗೆ ತಲುಪಲಿದೆ. ಇದನ್ನು ಛತ್ತೀಸ್‌ಗಢದ ವಿವಿಧ ಜಿಲ್ಲೆಗಳಿಂದ ಸಂಗ್ರಹಿಸಲಾಗಿದೆ. ಇದನ್ನೂ ಓದಿ: Ayodhya Ram Mandir: ರಾಮಮಂದಿರ ಉದ್ಘಾಟನೆಗೆ ನೇಪಾಳದಿಂದ ಬರ್ತಿದೆ ಚಿನ್ನಾಭರಣ, ವಸ್ತ್ರ, ಸಿಹಿತಿನಿಸು

    * ಜನವರಿ 5 ರಂದು ಭಗವಾನ್ ರಾಮನ ಅತ್ತೆ ಮನೆಯಾದ ನೇಪಾಳದ ಜನಕ್‌ಪುರದಿಂದ ಬಟ್ಟೆ, ಹಣ್ಣುಗಳು ಮತ್ತು ಒಣ ಹಣ್ಣುಗಳು ಅಯೋಧ್ಯೆಗೆ ತಲುಪುತ್ತವೆ. ಇದಲ್ಲದೆ, ಉಡುಗೊರೆಗಳಿಂದ ಅಲಂಕರಿಸಲ್ಪಟ್ಟ 1,100 ಪ್ಲೇಟ್‌ಗಳು ಸಹ ಇರುತ್ತವೆ.

    * ನೇಪಾಳದಿಂದ ಆಭರಣಗಳು, ಪಾತ್ರೆಗಳು, ಬಟ್ಟೆಗಳು ಮತ್ತು ಸಿಹಿತಿಂಡಿಗಳು ಸಹ ಬರಲಿವೆ. ಇದರಲ್ಲಿ 51 ಬಗೆಯ ಸಿಹಿತಿಂಡಿಗಳು ಇರಲಿವೆ. ಜೊತೆಗೆ ಮೊಸರು, ಬೆಣ್ಣೆ ಮತ್ತು ಬೆಳ್ಳಿಯ ಪಾತ್ರೆಗಳು ಸೇರಿವೆ. ಇದನ್ನೂ ಓದಿ: ಪ್ರಾಣಪ್ರತಿಷ್ಠೆಗೂ ಮುನ್ನ ಸಿಂಗಾರಗೊಳ್ಳಲಿದೆ ರಾಮನ ಮೆಟ್ಟಿಲು! – ಏನಿದರ ಮಹತ್ವ? ಈ ಹೆಸರು ಯಾಕೆ ಬಂತು?

    ರಾಮಮಂದಿರಕ್ಕೆ ಬರುತ್ತೆ ದೇಶದ ಅತಿ ದೊಡ್ಡ ಘಂಟೆ
    ಅಷ್ಟಧಾತುವಿನ 21 ಕೆಜಿ ತೂಕದ ಘಂಟೆಯು ಉತ್ತರ ಪ್ರದೇಶದ ಇಟಾಹ್ ಜಿಲ್ಲೆಯಿಂದ ರಾಮಲಲ್ಲಾ ಆಸ್ಥಾನವನ್ನು ತಲುಪಲಿದೆ. ಇದು ದೇಶದ ಅತಿ ದೊಡ್ಡ ಘಂಟೆಯಾಗಲಿದ್ದು, ನಿರ್ಮಾಣಕ್ಕೆ 25 ಲಕ್ಷ ರೂಪಾಯಿ ವೆಚ್ಚವಾಗಿದೆ ಎಂದು ಹೇಳಲಾಗಿದೆ. 400 ಕೆಲಸಗಾರರು ಇದರ ತಯಾರಿಕೆಯಲ್ಲಿ ತೊಡಗಿದ್ದಾರೆ. ಯುಪಿಯ ಇಟಾಹ್‌ನಿಂದ ಅಯೋಧ್ಯೆಗೆ ತಲುಪುವ ಘಂಟೆಯ ಅಗಲ 15 ಅಡಿ ಮತ್ತು ಒಳಭಾಗದ ಅಗಲ 5 ಅಡಿ. ಇದರ ತೂಕ 2‌,100 ಕೆಜಿ ಇದೆ. ಇದನ್ನು ತಯಾರಿಸಲು ಒಂದು ವರ್ಷ ಬೇಕಾಯಿತು.

    108 ಅಡಿ ಉದ್ದದ ಅಗರಬತ್ತಿ
    ಗುಜರಾತಿನ ವಡೋದರಾದಿಂದ ಅಯೋಧ್ಯೆಗೆ 108 ಅಡಿ ಉದ್ದದ ಅಗರಬತ್ತಿಯನ್ನು ಜೀವನಾರ್ಪಣೆಗಾಗಿ ಕಳುಹಿಸಲಾಗುತ್ತಿದ್ದು, ಅದು ಕೂಡ ಸಿದ್ಧವಾಗಿದೆ. ಇದನ್ನು ಹಸುವಿನ ಸಗಣಿಯಿಂದ ಪಂಚಗವ್ಯ ಮತ್ತು ಹವನ ಪದಾರ್ಥಗಳೊಂದಿಗೆ ತಯಾರಿಸಲಾಗಿದೆ. ಇದರ ತೂಕ 3,500 ಕೆಜಿ ಇದೆ. ವಡೋದರಾದಿಂದ ಅಯೋಧ್ಯೆ ತಲುಪುವ ಈ ಅಗರಬತ್ತಿಯ ಬೆಲೆ ಅಂದಾಜು 5 ಲಕ್ಷ ರೂ. ಇದನ್ನು ತಯಾರಿಸಲು 6 ತಿಂಗಳು ಬೇಕಾಯಿತು.

    ಈ ಧೂಪದ್ರವ್ಯವನ್ನು 110 ಅಡಿ ಉದ್ದದ ರಥದಲ್ಲಿ ವಡೋದರಾದಿಂದ ಅಯೋಧ್ಯೆಗೆ ಕಳುಹಿಸಲಾಗುವುದು. ಒಮ್ಮೆ ಹಚ್ಚಿದರೆ ಒಂದೂವರೆ ತಿಂಗಳ ಕಾಲ ನಿರಂತರವಾಗಿ ಉರಿಯುತ್ತಿರುತ್ತದೆ ಎನ್ನುತ್ತಾರೆ ಅಗರಬತ್ತಿ ತಯಾರಿಸುವ ವಿಹಾ ಭಾರವಾಡ. ಇದನ್ನೂ ಓದಿ: Ayodhya Ram Mandir: ಆಧಾರ್ ಕಡ್ಡಾಯ – ಒಂದು ಆಹ್ವಾನ ಪತ್ರಿಕೆಗೆ ಒಬ್ಬರಿಗೆ ಮಾತ್ರ ಪ್ರವೇಶ

    ದೇಶ ಸಂಚಾರ ಕೈಗೊಂಡಿದೆ ಶ್ರೀರಾಮನ ಪಾದುಕೆಗಳು
    ರಾಮಮಂದಿರದ ಪ್ರತಿಷ್ಠಾಪನೆಯ ನಂತರ ಅಲ್ಲಿ ಭಗವಂತನ ಪಾದುಕೆಗಳನ್ನು ಇಡಲಾಗುತ್ತದೆ. ಪ್ರಸ್ತುತ, ಈ ಪಾದುಕೆಗಳನ್ನು ದೇಶದಾದ್ಯಂತ ಯಾತ್ರೆ ಮಾಡಲಾಗುತ್ತಿದೆ. ಪಾದುಕೆಗಳು ಜನವರಿ 19 ರಂದು ಅಯೋಧ್ಯೆಯನ್ನು ತಲುಪುತ್ತವೆ. ಇವುಗಳನ್ನು ಹೈದರಾಬಾದ್‌ನ ಶ್ರೀಚಲ್ಲ ಶ್ರೀನಿವಾಸ ಶಾಸ್ತ್ರಿ ಸಿದ್ಧಪಡಿಸಿದ್ದರು.

    ಶ್ರೀಚಲ್ಲ ಶ್ರೀನಿವಾಸ ಶಾಸ್ತ್ರಿಗಳು ಈ ಶ್ರೀರಾಮ ಪಾದುಕೆಗಳೊಂದಿಗೆ 41 ದಿನಗಳ ಕಾಲ ಅಯೋಧ್ಯೆಯನ್ನು ಪ್ರದಕ್ಷಿಣೆ ಮಾಡಿದ್ದರು. ಇದಾದ ನಂತರ ಈ ಪಾದುಕೆಗಳನ್ನು ರಾಮೇಶ್ವರಂನಿಂದ ಬದರಿನಾಥದ ವರೆಗಿನ ಎಲ್ಲಾ ಪ್ರಸಿದ್ಧ ದೇವಾಲಯಗಳಿಗೆ ಕೊಂಡೊಯ್ದು ವಿಶೇಷ ಪೂಜೆಗಳನ್ನು ಮಾಡಲಾಗುತ್ತಿದೆ.

  • ಅಯೋಧ್ಯೆಗೆ ಜೋಧ್‌ಪುರದಿಂದ 600 ಕೆಜಿ ಪರಿಶುದ್ಧ ತುಪ್ಪ ರವಾನೆ

    ಅಯೋಧ್ಯೆಗೆ ಜೋಧ್‌ಪುರದಿಂದ 600 ಕೆಜಿ ಪರಿಶುದ್ಧ ತುಪ್ಪ ರವಾನೆ

    ಜೈಪುರ: ಜನವರಿಯಲ್ಲಿ ನಡೆಯಲಿರುವ ಅಯೋಧ್ಯೆ ರಾಮಮಂದಿರದ (Ayodhya Ram Mandir) ಲೋಕಾರ್ಪಣೆಗೆ ಭರದ ಸಿದ್ದತೆಗಳು ನಡೆದಿವೆ. ರಾಮನ ವಿಗ್ರಹದ ಪ್ರಾಣಪ್ರತಿಷ್ಠಾಪನೆಗಾಗಿ ರಾಜಸ್ಥಾನದ ಜೋಧ್‌ಪುರದಿಂದ (Jodhpur) 600 ಕೆಜಿಯಷ್ಟು ಪರಿಶುದ್ಧ ತುಪ್ಪವನ್ನು (Ghee) ಅಯೋಧ್ಯೆಗೆ ಕಳಿಸಲಾಗಿದೆ.

    ಈ ತುಪ್ಪವನ್ನು ವಿಶೇಷವಾಗಿ ತಯಾರಿಸಲಾದ 108 ಕಲಶಗಳಲ್ಲಿ 11 ರಥಗಳ ಮೂಲಕ ಅಯೋಧ್ಯೆಗೆ ಮಂತ್ರಘೋಷಗಳ ಮೂಲಕ ಕಳುಹಿಸಿಕೊಡಲಾಗಿದೆ. ಸಾಂದೀಪನಿ ರಾಮಧರ್ಮ ಗೋಶಾಲೆ ಈ ತುಪ್ಪವನ್ನು ಕಳುಹಿಸಿಕೊಟ್ಟಿದೆ.  ಇದನ್ನೂ ಓದಿ: 41 ಕಾರ್ಮಿಕರ ರಕ್ಷಣೆ ಬೆನ್ನಲ್ಲೇ ಭಾವುಕರಾಗಿದ್ದ ಪ್ರಧಾನಿ ಮೋದಿ

    ಪ್ರಾಣ ಪ್ರತಿಷ್ಠೆಯ ಸಮಯದಲ್ಲಿ ನಡೆಸಲಾಗುವ ಮಹಾಯಜ್ಞ ಮತ್ತು ಆರತಿಗಾಗಿ ವಿಶೇಷ ತುಪ್ಪವನ್ನು ಬಳಸಲಾಗುತ್ತದೆ. ಗೋಶಾಲೆಯಲ್ಲಿರುವ ದೇಸಿ ಹಸುವಿನಿಂದ ಈ ತುಪ್ಪವನ್ನು ತಯಾರಿಸಲಾಗಿದೆ.

    ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ 2024ರ ಜನವರಿ 22ರಿಂದ ಮಾರ್ಚ್ 10 ರವರೆಗೆ 48 ದಿನಗಳ ಕಾಲ ನಡೆಯಲಿದ್ದು, ಜನವರಿ 22 ರಂದು ಶ್ರೀರಾಮನ ಪ್ರಾಣ ಪ್ರತಿಷ್ಠೆ ನೆರವೇರಲಿದೆ. ಜ.22 ರಂದು ಶ್ರೀರಾಮನ ಭವ್ಯ ಮಂದಿರವನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ.

     

  • ಜನವರಿ 22ಕ್ಕೆ ರಾಮಮಂದಿರ ಉದ್ಘಾಟನೆ – ಮೋದಿಗೆ ರಾಮ ಜನ್ಮಭೂಮಿ ಟ್ರಸ್ಟ್ ಆಹ್ವಾನ

    ಜನವರಿ 22ಕ್ಕೆ ರಾಮಮಂದಿರ ಉದ್ಘಾಟನೆ – ಮೋದಿಗೆ ರಾಮ ಜನ್ಮಭೂಮಿ ಟ್ರಸ್ಟ್ ಆಹ್ವಾನ

    ನವದೆಹಲಿ: 2024 ಜನವರಿ 22 ರಂದು ಉತ್ತರ ಪ್ರದೇಶದ (Uttar Pradesh) ಅಯೋಧ್ಯೆಯಲ್ಲಿರುವ (Ayodhya) ರಾಮಮಂದಿರ (Sri Ram Mandir) ಉದ್ಘಾಟನೆಗೆ ಶ್ರೀರಾಮ ಜನ್ಮಭೂಮಿ ಟ್ರಸ್ಟ್, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಅಧಿಕೃತ ಆಹ್ವಾನ ನೀಡಿದೆ.

    ಈ ಬಗ್ಗೆ ಎಕ್ಸ್ ಪೋಸ್ಟ್‌ನಲ್ಲಿ ಬರೆದುಕೊಂಡಿರುವ ನರೇಂದ್ರ ಮೋದಿ, ಇಂದು ನನಗೆ ಅತ್ಯಂತ ಭಾವನಾತ್ಮಕ ದಿನವಾಗಿದೆ. ಇಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರದ ಅಧಿಕಾರಿಗಳು ನನ್ನ ನಿವಾಸಕ್ಕೆ ನನ್ನನ್ನು ಭೇಟಿಯಾಗಲು ಬಂದಿದ್ದರು. ಶ್ರೀರಾಮ ಮಂದಿರದ ಪ್ರತಿಷ್ಠಾಪನೆಯ ಸಂದರ್ಭದಲ್ಲಿ ಅಯೋಧ್ಯೆಗೆ ಬರುವಂತೆ ಅವರು ನನ್ನನ್ನು ಆಹ್ವಾನಿಸಿದರು. ನಾನು ತುಂಬಾ ಧನ್ಯನಾಗಿದ್ದೇವೆ. ನನ್ನ ಜೀವನದಲ್ಲಿ ಈ ಐತಿಹಾಸಿಕ ಸಂದರ್ಭಕ್ಕೆ ಸಾಕ್ಷಿಯಾಗುವುದು ನನ್ನ ಅದೃಷ್ಟ ಎಂದು ಮೋದಿ ತಿಳಿಸಿದ್ದಾರೆ.

    ಶ್ರೀರಾಮ ಜನ್ಮಭೂಮಿ ಟ್ರಸ್ಟ್ ಚಂಪತ್ ರಾಯ್ ಅವರು ಜನವರಿ 22 ರಂದು ದೇವಾಲಯದಲ್ಲಿ ಶ್ರೀರಾಮನ ವಿಗ್ರಹವನ್ನು ಸ್ಥಾಪಿಸಲಾಗುವುದು ಎಂದು ಖಚಿತಪಡಿಸಿದ್ದಾರೆ ಮತ್ತು ಪ್ರಧಾನಿ ಮೋದಿ ಅವರ ಆಹ್ವಾನವನ್ನು ಸ್ವೀಕರಿಸಿದ್ದಾರೆ. ಇದನ್ನೂ ಓದಿ: ಮೈಸೂರಿನ ಆಧುನಿಕ ಶ್ರವಣ ಕುಮಾರ – ಹಳೆ ಸ್ಕೂಟರ್‌ನಲ್ಲಿ ತಾಯಿಯೊಂದಿಗೆ 4 ದೇಶ ಸುತ್ತಿದ

    2019ರ ನವೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ರಾಮಮಂದಿರ ನಿರ್ಮಾಣಕ್ಕೆ ದಾರಿ ಮಾಡಿಕೊಟ್ಟಿತು. ನಂತರ ಕೇಂದ್ರವು ದೇವಾಲಯ ನಿರ್ಮಾಣ ಹಂತದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಶ್ರೀರಾಮ ಜನ್ಮಭೂಮಿ ಟ್ರಸ್ಟ್ ಅನ್ನು ಸ್ಥಾಪಿಸಿತು. 2020ರ ಆಗಸ್ಟ್ 5 ರಂದು ಪ್ರಧಾನಿ ಮೋದಿ ದೇವಾಲಯದ ಶಂಕುಸ್ಥಾಪನೆ ನೆರವೇರಿಸಿದರು. ಸದ್ಯ ಟ್ರಸ್ಟ್‌ನ ಮೇಲ್ವಿಚಾರಣೆಯಲ್ಲಿ ದೇವಾಲಯ ನಿರ್ಮಾಣದ ಕೆಲಸ ಸ್ಥಿರವಾದ ವೇಗದಲ್ಲಿ ಸಾಗುತ್ತಿದೆ. ಇದನ್ನೂ ಓದಿ: ಇಸ್ರೇಲ್ ರಾಯಭಾರಿ ನೌರ್ ಗಿಲೋನ್ ಭೇಟಿಯಾದ ನಟಿ ಕಂಗನಾ ರಣಾವತ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಾಮ ಮಂದಿರದ ಹೊರಗೆ ಗಲಾಟೆ- ಉದ್ರಿಕ್ತರಿಂದ ಪೊಲೀಸ್ ವಾಹನಕ್ಕೆ ಬೆಂಕಿ

    ರಾಮ ಮಂದಿರದ ಹೊರಗೆ ಗಲಾಟೆ- ಉದ್ರಿಕ್ತರಿಂದ ಪೊಲೀಸ್ ವಾಹನಕ್ಕೆ ಬೆಂಕಿ

    ಮುಂಬೈ: ಇಬ್ಬರ ನಡುವೆ ಗಲಾಟೆ ನಡೆದು, ನೆರೆದಿದ್ದ ಜನ ಕಲ್ಲು ತೂರಾಟ ನಡೆಸಿ ಖಾಸಗಿ ಹಾಗೂ ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಿದ ಘಟನೆ ಛತ್ರಪತಿ ಸಂಭಾಜಿನಗರದ (Chhatrapati Sambhajinagar) ಕಿರದಪುರದ (Kiradpura) ರಾಮಮಂದಿರದ ಹೊರಗೆ ಬುಧವಾರ ರಾತ್ರಿ ನಡೆದಿದೆ.

    ಪೊಲೀಸರು ಅಶ್ರವಾಯು ಸಿಡಿಸಿ ಉದ್ರಿಕ್ತ ಗುಂಪನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ವಾಹನಗಳಿಗೆ ತಗುಲಿದ್ದ ಬೆಂಕಿಯನ್ನು ಮೂರು ಅಗ್ನಿಶಾಮಕ ವಾಹನಗಳಿಂದ ಕಾರ್ಯಾಚರಣೆ ನಡೆಸಿ ಆರಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಮತದಾರರಿಗೆ ನಕಲಿ ಬಾಂಡ್ ಆಮಿಷ ಪ್ರಕರಣ – ಜೆಡಿಎಸ್ ಶಾಸಕ ಗೌರಿಶಂಕರಗೆ ಅನರ್ಹತೆಯ ಭೀತಿ

     

    ಯಾವುದೇ ಅಹಿತಕರ ಘಟನೆ ನಡೆಯದಂತೆ ಸ್ಥಳದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ನಿಖಿಲ್ ಗುಪ್ತಾ ತಿಳಿಸಿದ್ದಾರೆ.

    ಔರಂಗಾಬಾದ್ (Aurangabad) ಸಂಸದ ಇಮ್ತಿಯಾಜ್ ಜಲೀಲ್ ರಾಮ ಮಂದಿರಕ್ಕೆ (Ram temple) ತೆರಳಿದ್ದ ವೀಡಿಯೋ ಒಂದನ್ನು ಎಐಎಂಐಎಂನ (AIMIM) ರಾಷ್ಟ್ರೀಯ ಕಾರ್ಪೋರೇಟರ್ ಮೊಹಮ್ಮದ್ ನಾಸಿರುದ್ದೀನ್ ಹಂಚಿಕೊಂಡಿದ್ದರು. ಇದನ್ನು ಕೆಲವು ಕಿಡಿಗೇಡಿಗಳು ದೇವಾಲಯದ ಮೇಲೆ ದಾಳಿ ಎಂದು ಬಿಂಬಿಸಿ ಹಂಚಿಕೊಂಡಿದ್ದರು.

    ಸುಳ್ಳು ಸುದ್ದಿಗಳನ್ನು ಪೊಲೀಸರು ಸಾಮಾಜಿಕ ಜಾಲತಾಣಗಳಿಂದ ತೆಗೆಸಿದ್ದು. ಶಾಂತಿಯನ್ನು ಕಾಪಾಡುವಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಕಳ್ಳನೆಂದು ಶಂಕಿಸಿ ಹತ್ಯೆ- ಇಬ್ಬರ ಬಂಧನ

  • ಯೋಗಿಯಿಂದಲೇ ರಾಮ ಮಂದಿರ ನಿರ್ಮಾಣಕ್ಕೆ ಗುದ್ದಲಿ ಪೂಜೆ: ಬಿಜೆಪಿ ಪ್ಲಾನ್‌

    ಯೋಗಿಯಿಂದಲೇ ರಾಮ ಮಂದಿರ ನಿರ್ಮಾಣಕ್ಕೆ ಗುದ್ದಲಿ ಪೂಜೆ: ಬಿಜೆಪಿ ಪ್ಲಾನ್‌

    ಬೆಂಗಳೂರು: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ (Yogi Adityanath) ಅವರ ಮೂಲಕ ರಾಮ ಮಂದಿರ (Ram Temple) ನಿರ್ಮಾಣಕ್ಕೆ ಅಡಿಗಲ್ಲು ಹಾಕಲು ರಾಜ್ಯ ಬಿಜೆಪಿ ಮುಂದಾಗಿದೆ.

    ಹಳೆ ಮೈಸೂರು ಭಾಗದಲ್ಲಿ ಭರ್ಜರಿ ಮತ ಫಸಲು ತೆಗೆಯಲು ರಾಮನಗರದ ರಾಮದೇವರ ಬೆಟ್ಟದಲ್ಲಿ ರಾಮಮಂದಿರ ನಿರ್ಮಾಣ ಘೋಷಣೆಯನ್ನು ಬಜೆಟ್ (Budget) ಮೂಲಕ ಮಾಡಿದೆ. ಇದನ್ನು ಇಷ್ಟಕ್ಕೆ ಸೀಮಿತಗೊಳಿಸದೇ, ಚುನಾವಣಾ ನೀತಿಸಂಹಿತೆ ಘೋಷಣೆಗೆ ಮುನ್ನವೇ ಗುದ್ದಲಿ ಪೂಜೆಗೆ ಬಿಜೆಪಿ ಮುಂದಾಗಿದೆ. ಇದನ್ನೂ ಓದಿ: 42.63 ಕೋಟಿ ಆಸ್ತಿ ತೆರಿಗೆ ಬಾಕಿ – ಮಂತ್ರಿ ಮಾಲ್ ಮೇಲೆ ಬಿಬಿಎಂಪಿ ತಂಡ ದಾಳಿ

    ಮಾರ್ಚ್ ಮೊದಲ ವಾರದಲ್ಲಿ ಹಿಂದೂತ್ವ ಫೈರ್ ಬ್ರ್ಯಾಂಡ್‌, ಯುಪಿ ಸಿಎಂ ಯೋಗಿ ಆದಿತ್ಯನಾಥರನ್ನು ಕರೆಯಿಸಿ ಅವರ ಮೂಲಕವೇ ರಾಮಮಂದಿರಕ್ಕೆ ಅಡಿಗಲ್ಲು ಹಾಕಿಸಲು ಕೇಸರಿ ಪಡೆ ಪ್ಲಾನ್ ಮಾಡಿದ್ದು ಈ ಬೆಳವಣಿಗೆ ವಿಪಕ್ಷಗಳನ್ನು ಚಿಂತೆಗೀಡು ಮಾಡಿದಂತೆ ಕಾಣುತ್ತಿದೆ. ಇದನ್ನೂ ಓದಿ: 42.63 ಕೋಟಿ ಆಸ್ತಿ ತೆರಿಗೆ ಬಾಕಿ – ಮಂತ್ರಿ ಮಾಲ್ ಮೇಲೆ ಬಿಬಿಎಂಪಿ ತಂಡ ದಾಳಿ.

    ರಾಮ ಮಂದಿರ ವಿಚಾರ ಮುಂದಿನ ದಿನಗಳಲ್ಲಿ ರಾಮನಗರ ಹಾಗೂ ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಬೆಳವಣಿಗೆಗೆ ಪೂರಕವಾಗಬಹುದು ಎಂಬ ವಿಶ್ಲೇಷಣೆ ಕೇಳಿ ಬಂದಿದೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರಾಹುಲ್‌ ಬಾಬಾ ಕೇಳಿ, 2024ರ ಜ.1ಕ್ಕೆ ರಾಮ ಮಂದಿರ ಲೋಕಾರ್ಪಣೆ: ಅಮಿತ್‌ ಶಾ

    ರಾಹುಲ್‌ ಬಾಬಾ ಕೇಳಿ, 2024ರ ಜ.1ಕ್ಕೆ ರಾಮ ಮಂದಿರ ಲೋಕಾರ್ಪಣೆ: ಅಮಿತ್‌ ಶಾ

    ನವದೆಹಲಿ: ಅಯೋಧ್ಯೆಯ ರಾಮಮಂದಿರ (Ayodhya Ram temple) ಉದ್ಘಾಟನೆಗೆ ಮುಹೂರ್ತ ನಿಗದಿಯಾಗಿದೆ. 2024ರ ಜನವರಿ 1ರಂದು ರಾಮಮಂದಿರ ಲೋಕಾರ್ಪಣೆ ಆಗಲಿದೆ ಎಂದು ಕೇಂದ್ರ ಗೃಹ ಮಂತ್ರಿ ಅಮಿತ್ ಶಾ (Amit Shah) ಘೋಷಣೆ ಮಾಡಿದ್ದಾರೆ.

    ತ್ರಿಪುರಾದಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಅಮಿತ್‌ ಶಾ, ರಾಹುಲ್‌ ಬಾಬಾ(Rahul Gandhi) ಕೇಳಿ, 2024ರ ಜನವರಿ 1 ರಂದು ಬೃಹತ್‌ ರಾಮ ಮಂದಿರ ಉದ್ಘಾಟನೆಯಾಗಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಯಾರೇ ಬಂದ್ರು ಹಳೆಮೈಸೂರು ಭಾಗದಲ್ಲಿ ಜೆಡಿಎಸ್‍ನ್ನು ಅಲ್ಲಾಡಿಸಲು ಆಗಲ್ಲ: ನಿಖಿಲ್ ಕುಮಾರಸ್ವಾಮಿ

    ಸಾರ್ವಜನಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಮ ಮಂದಿರ ನಿರ್ಮಾಣಕ್ಕೆ ಕಾಂಗ್ರೆಸ್(Congress) ಮತ್ತು ಸಿಪಿಐ(ಎಂ) ಅಡ್ಡಿಪಡಿಸಿ ಸಮಸ್ಯೆಯನ್ನು ದೀರ್ಘಕಾಲದವರೆಗೆ ನ್ಯಾಯಾಲಯದ ವ್ಯಾಪ್ತಿಯಲ್ಲಿ ಇರಿಸಿತ್ತು. ಸುಪ್ರೀಂ ಕೋರ್ಟ್ ತೀರ್ಪು ಬಂದ ನಂತರ ಮೋದಿಯವರು ದೇವಾಲಯದ ನಿರ್ಮಾಣವನ್ನು ಪ್ರಾರಂಭಿಸಿದರು ಎಂದು ಹೇಳುವ ಮೂಲಕ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು.

    2024ರ ಮೇ ತಿಂಗಳಿನಲ್ಲಿ ಲೋಕಸಭೆ ಚುನಾವಣೆ (Lok Sabha Election) ನಡೆಯುವ ಮೊದಲೇ ರಾಮ ಮಂದಿರ ಉದ್ಘಾಟನೆಯಾಗಲಿದೆ. ಪ್ರತಿ ಚುನಾವಣೆ ಸಂದರ್ಭದಲ್ಲಿ ಬಿಡುಗಡೆಯಾಗುವ ಪ್ರಣಾಳಿಕೆಯಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುತ್ತೇವೆ ಎಂದು ಬಿಜೆಪಿ ಭರವಸೆ ನೀಡುತ್ತಿತ್ತು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • 2024 ಸಂಕ್ರಾಂತಿ ವೇಳೆಗೆ ಅಯೋಧ್ಯೆಯಲ್ಲಿ ಬಾಲ ರಾಮನ ಪ್ರತಿಷ್ಠಾಪನೆ: ಗೋಪಾಲ್ ಜೀ

    2024 ಸಂಕ್ರಾಂತಿ ವೇಳೆಗೆ ಅಯೋಧ್ಯೆಯಲ್ಲಿ ಬಾಲ ರಾಮನ ಪ್ರತಿಷ್ಠಾಪನೆ: ಗೋಪಾಲ್ ಜೀ

    ಬೆಂಗಳೂರು: ಭಾರತೀಯರ ಬಹುದಿನದ ಕನಸು ಅಯೋಧ್ಯೆ(Ayodhya) ರಾಮ ಮಂದಿರ(Ram Mandir)  ಮೊದಲ ಹಂತದ ನಿರ್ಮಾಣ ಕಾರ್ಯ 2024ರಲ್ಲಿ ಮುಕ್ತಾಯವಾಗಲಿದೆ. ಜನವರಿ 2024 ಸಂಕ್ರಾಂತಿ(Makar Sankranti) ವೇಳೆಗೆ  ಬಾಲ ರಾಮನ ಪ್ರತಿಷ್ಠಾಪನೆ ಆಗಲಿದೆ ಎಂದು ಕನ್ನಡಿಗ ರಾಮ ಮಂದಿರ ನಿರ್ಮಾಣ ಸಮಿತಿ ಸದಸ್ಯ ಗೋಪಾಲ್ ಜೀ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಭರದಿಂದ ರಾಮ ಮಂದಿರ ನಿರ್ಮಾಣ ಕೆಲಸ ಸಾಗುತ್ತಿದೆ. ಭೂಮಿಯಿಂದ 20 ಅಡಿ ಮೇಲಿನವರೆಗೂ ನಿರ್ಮಾಣದ ಕೆಲಸ ಪೂರ್ಣವಾಗಿದೆ. 2024 ಸಂಕ್ರಾಂತಿಗೆ ರಾಮನ ಪ್ರಾಣ ಪ್ರತಿಷ್ಠಾಪನೆ(Pran Pratishtha) ಕೆಲಸ ಮಾಡಲಾಗುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಅಯೋಧ್ಯೆ ರಾಮ ಮಂದಿರಕ್ಕೆ ಕರ್ನಾಟಕದಿಂದ 200 ಕೋಟಿ ನಿಧಿ ಸಂಗ್ರಹ

    ಗೋಪಾಲ್‌ ಜೀ ತಿಳಿಸಿದ್ದೇನು?
    ಸದ್ಯ ರಾಮ ಮಂದಿರಕ್ಕೆ ಬುನಾದಿ ಹಾಕುವ ಕೆಲಸ ಸಂಪೂರ್ಣವಾಗಿ ಮುಗಿದಿದೆ. ಭೂಮಿಯ 45 ಅಡಿ ಆಡಿ ಆಳದಲ್ಲಿ  ಸಿಮೆಂಟ್ ಕಾಂಕ್ರೀಟ್ ಕೆಲಸ ಆಗಿದೆ. ಈಗ ಅದರ‌‌ ಮೇಲೆ ಬೆಂಗಳೂರಿನ 1700 ಗ್ರಾನೈಟ್ ಕಲ್ಲು  ಇಡುವ ಕಾರ್ಯ ಬಹುತೇಕ ಮುಗಿದಿದೆ.

    ಇನ್ನೊಂದು ವಾರದಲ್ಲಿ ಈ ಕಾರ್ಯ ಸಂಪೂರ್ಣವಾಗಿ ಮುಗಿಯಲಿದೆ. ಮುಂದೆ ಅದರ ಮೇಲೆ ರಾಜಸ್ಥಾನದ ಭರತ್ ಪುರ ಜಿಲ್ಲೆಯ ಗುಲಾಬಿ ಬಣ್ಣದ ಕಲ್ಲು ಕೆತ್ತನೆಯನ್ನು ಇಡಲಾಗುತ್ತದೆ. 1 ಲಕ್ಷ ಕಲ್ಲುಗಳು ಕೆತ್ತನೆಯಾಗಿ ಅಯೋಧ್ಯೆಗೆ ಬಂದಿದೆ. ಈಗಾಗಲೇ ಕೆಲಸ ಪ್ರಾರಂಭ ಆಗಿದ್ದು, 600 ಕಲ್ಲು ಇಡಲಾಗಿದೆ. ಈಗ ನೆಲದಿಂದ 20 ಅಡಿ ಮೇಲಿನ ಮಟ್ಟದವರೆಗೂ ರಾಮಮಂದಿರ ಕೆಲಸ ಪೂರ್ಣವಾಗಿದೆ. ಇದನ್ನೂ ಓದಿ: PFI, SDPI ಬೆಳೆಯಲು ಕಾರಣವೇ ಸಿದ್ದರಾಮಯ್ಯ: ನಳಿನ್ ಕುಮಾರ್ ಕಟೀಲ್

    2024 ಜನವರಿ ಸಂಕ್ರಾಂತಿಯ ಉತ್ತಮ ಮುಹೂರ್ತದಲ್ಲಿ ಬಾಲ ರಾಮನ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಪ್ರಾಣ ಪ್ರತಿಷ್ಠಾಪನೆ‌ ಅ ಸಮಯದಲ್ಲಿ ನಡೆಯಲಿದೆ. ಒಂದು ಮಹಡಿಯ ಕಾರ್ಯ 2024 ಜನವರಿ ವೇಳೆ ಮುಗಿಯಲಿದೆ. ಇನ್ನೊಂದು ಮಹಡಿಗೆ 6-8 ತಿಂಗಳು ಮತ್ತೆ ಸಮಯ ಬೇಕಾಗುತ್ತದೆ. ಇಂದಿನಿಂದ 2 ವರ್ಷಗಳ ಒಳಗೆ ರಾಮಮಂದಿರ ಕೆಲಸ ಸಂಪೂರ್ಣವಾಗಲಿದೆ. ಇದನ್ನೂ ಓದಿ: ದಸರಾ ವೇಳೆ RSS, BJP ನಾಯಕರ ಮೇಲೆ ದಾಳಿಗೆ PFI ಸಂಚು

    ಮಂದಿರ ಹೊರಗೆ ಪ್ರಕಾರದ ನಿರ್ಮಾಣ ಮಾಡಲಾಗುತ್ತದೆ. ಇದು ದೇವಸ್ಥಾನದಷ್ಟು ದೊಡ್ಡದು ಇರಲಿದೆ. ಇದಕ್ಕೆ ಬೇಕಾದ ಕೆಲಸವೂ ರಾಮ ಮಂದಿರದ ಜೊತೆ ಜೊತೆಗೆ ನಡೆಯಲಿದೆ. ರಾಮ ಮಂದಿರದಲ್ಲಿ ದರ್ಶನ ಮಾಡುವವರಿಗೆ ಪೆನ್ನು, ಮೊಬೈಲ್ ಫೋನ್, ಸೇರಿದಂತೆ ಎಲೆಕ್ಟ್ರಿಕ್ ವಸ್ತುಗಳು, ಇನ್ನಿತರ ವಸ್ತುಗಳು ನಿಷೇಧ ಇರಲಿದೆ. ಭಕ್ತರಿಗೆ ಇದೆಲ್ಲವನ್ನೂ ಇಡಲು ಪ್ರಾಥಮಿಕ ಕೆಲಸಗಳಿಗಾಗಿ ಯಾತ್ರಿಗಳ ವ್ಯವಸ್ಥೆ ಮಾಡಲಾಗುತ್ತದೆ. ಇದೆಲ್ಲವನ್ನು ರಾಮ ಮಂದಿರ ನಿರ್ಮಾಣದ ಜೊತೆ ಜೊತೆಗೆ ಮಾಡಲಾಗುತ್ತದೆ. 2024ರ ಅಂತ್ಯದ ವೇಳೆಗೆ  ಈ ಕಾರ್ಯ ಮುಗಿಯಲಿದೆ ಎಂದು ಗೋಪಾಲ್ ಜೀ ಮಾಹಿತಿ ನೀಡಿದರು.

    Live Tv
    [brid partner=56869869 player=32851 video=960834 autoplay=true]

  • 2023ರಿಂದ ಅಯೋಧ್ಯೆ ರಾಮಮಂದಿರದಲ್ಲಿ ದೇವರ ದರ್ಶನ

    2023ರಿಂದ ಅಯೋಧ್ಯೆ ರಾಮಮಂದಿರದಲ್ಲಿ ದೇವರ ದರ್ಶನ

    ಲಕ್ನೋ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರದ ಕಾಮಗಾರಿ ಶೇ.40ಕ್ಕೂ ಹೆಚ್ಚು ಪೂರ್ಣಗೊಂಡಿದ್ದು, 2023ರಿಂದ ದೇವರ ದರ್ಶನ ಪಡೆಯಬಹುದು ಎಂದು ಟ್ರಸ್ಟ್ ಅಧಿಕಾರಿಗಳು ತಿಳಿಸಿದರು.

    ಈ ಬಗ್ಗೆ ಶ್ರೀರಾಮ ಜನ್ಮಭೂಮಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮಾತನಾಡಿ, ದೇವಾಲಯದ ಸುತ್ತಲಿನ ರಸ್ತೆಗಳ ಸುಧಾರಣೆಯ ಕಾರ್ಯ ಹಾಗೂ ನಿರ್ಮಾಣದ ಹಂತ ಚಟುವಟಿಕೆಗಳು ಭರದಿಂದ ಸಾಗಿವೆ. ಪ್ರಪಂಚದಾದ್ಯಂತ ಇರುವ ರಾಮಭಕ್ತರು 2023ರಿಂದ ದೇವರಿಗೆ ನಮನ ಸಲ್ಲಿಸಬಹುದು ಎಂದರು.

    ದೇವಾಲಯವು ಕನಿಷ್ಠ ಒಂದು ಸಾವಿರ ವರ್ಷಗಳ ಕಾಲ ಸ್ಥಿರತೆಯಲ್ಲಿರಲು ಬೃಹತ್ ಅಡಿಪಾಯವನ್ನು ಹಾಕಲಾಗುತ್ತಿದೆ. ದೇವಸ್ಥಾನದ ವಿಸ್ತೀರ್ಣ, ಪ್ರಾಂಗಣ ಸೇರಿದಂತೆ ಒಟ್ಟು 8 ಎಕರೆ ಜಾಗಗಳಿಗೆ ತೆರಳಲು ಆಯತಾಕಾರದಲ್ಲಿ ರಸ್ತೆ ನಿರ್ಮಿಸಲಾಗಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಬಸವರಾಜ ಬೊಮ್ಮಾಯಿ ನಡೆದಾಡುವ ರಾಜದೇವರು: ಸಿದ್ದರಾಮೇಶ್ವರ ಸ್ವಾಮೀಜಿ

    ದೇವಾಲಯದ ಗರ್ಭಗುಡಿಯೊಳಗೆ ರಾಜಸ್ಥಾನದ ಮಕ್ರಾನಾ ಬೆಟ್ಟಗಳಿಂದ ತರಿಸಿರುವ ಬಿಳಿ ಅಮೃತಶಿಲೆಯನ್ನು ಬಳಸಲಾಗುವುದು. ಅಮೃತಶಿಲೆಯ ಕೆತ್ತನೆ ಕಾರ್ಯ ಪ್ರಗತಿಯಲ್ಲಿದ್ದು, ಕೆತ್ತಿದ ಕೆಲವು ಮಾರ್ಬಲ್ ಬ್ಲಾಕ್‍ಗಳನ್ನು ಈಗಾಗಲೇ ಅಯೋಧ್ಯೆಗೆ ತರಲಾಗಿದೆ ಎಂದು ಹೇಳಿದರು.

    ಎರಡು ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯಲ್ಲಿ ರಾಮ ಮಂದಿರ ಸ್ಥಾಪಿಸಲು ಶಿಲಾನ್ಯಾಸ ನೆರವೇರಿಸಿದ್ದರು. 2020ರ ಆಗಸ್ಟ್ 5ರಂದು ಮಂದಿರದ ನಿರ್ಮಾಣಕ್ಕೆ ಮೋದಿ ಭೂಮಿಪೂಜೆ ಮಾಡಿದ್ದರು. ಇದನ್ನೂ ಓದಿ: ಅಕ್ಟೋಬರ್ 17ಕ್ಕೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ

    Live Tv
    [brid partner=56869869 player=32851 video=960834 autoplay=true]

  • ರಾಮಮಂದಿರ ನಿರ್ಮಾಣಕ್ಕೆ ಯತ್ನ – ದಲಿತ ಪರ ಸಂಘಟನೆಗಳ ಒಕ್ಕೂಟದಿಂದ ವಿರೋಧ

    ರಾಮಮಂದಿರ ನಿರ್ಮಾಣಕ್ಕೆ ಯತ್ನ – ದಲಿತ ಪರ ಸಂಘಟನೆಗಳ ಒಕ್ಕೂಟದಿಂದ ವಿರೋಧ

    ಚಿಕ್ಕಬಳ್ಳಾಪುರ: ಹಿಂದೂಪರ ಸಂಘಟನೆಗಳು ಪುರಸಭೆಗೆ ಸೇರಿದ ಜಾಗದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಯತ್ನಿಸಿದ್ದು, ಗೌರಿಬಿದನೂರು ನಗರದಲ್ಲಿ ಈ ವಿಚಾರವಾಗಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ.

    ಗೌರಿಬಿದನೂರು ನಗರದ ಬೆಂಗಳೂರು ವೃತ್ತದ ರಸ್ತೆ ಬದಿಯ ಜಾಗ ಇದಾಗಿದೆ. ರಾಮಮಂದಿರ ನಿರ್ಮಾಣಕ್ಕೆ ಹಿಂದೂಪರ ಸಂಘಟನೆಗಳು ಪ್ರಯತ್ನಿಸುತ್ತಿವೆ. ಸಂಘಟನೆಗಳು ಈಗಾಗಲೇ ಆ ಜಾಗದಲ್ಲಿ ರಾಮನ ವಿಗ್ರಹವನ್ನು ಕೂಡಾ ಪ್ರತಿಷ್ಠಾಪನೆ ಮಾಡಿ ಪೂಜೆ ಮಾಡಿಸುತ್ತಿದ್ದು, ಈ ವೇಳೆ ಮಂದಿರ ನಿರ್ಮಾಣ ಕಾರ್ಯಕ್ಕೆ ದಲಿತ ಸಂಘಟನೆಗಳ ಒಕ್ಕೂಟ ಬೆಂಗಳೂರು ವೃತ್ತದಲ್ಲಿ ಪ್ರತಿರೋಧ ವ್ಯಕ್ತಪಡಿಸಿದ್ದು, ವಾಹನಗಳನ್ನು ತಡೆದು ಬೆಂಗಳೂರು ವೃತ್ತದಲ್ಲಿ ಪ್ರತಿಭಟನೆ ನಡೆಸಿದೆ. ಇದನ್ನೂ ಓದಿ: ರಾಜ್ಯಗಳಲ್ಲಿ ಹಿಜಬ್‌ ವಿವಾದ – ಹೈಕೋರ್ಟ್‌ಗಳ ತೀರ್ಪುಗಳೇನು? ಇಲ್ಲಿದೆ ಮಾಹಿತಿ

    ಪ್ರತಿಭಟನೆ ಕುರಿತು ಪೊಲೀಸರು ದಲಿತ ಪರ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರನ್ನು ಸಮಾಧಾನ ಪಡಿಸುತ್ತಿದ್ದು, ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಜೊತೆ ತಹಶೀಲ್ದಾರ್ ಶಾಂತಿ ಸಭೆ ನಡೆಸಿದ್ದಾರೆ. ಈ ಜಾಗದಲ್ಲಿ ದಲಿತ ಪರ ಸಂಘಟನೆಗಳ ಒಕ್ಕೂಟವು ಬಸವ, ಬುದ್ಧ, ಅಂಬೇಡ್ಕರ್‌ರ ಸಮಾನತೆ ಸ್ಥೂಪ ಸ್ಥಾಪಿಸಲು ಉದ್ದೇಶಿಸಿದ್ದು, ಜಾಗ ಮಂಜೂರಿಗಾಗಿ ಪುರಸಭೆಗೆ ಮನವಿ ಮಾಡಿಕೊಂಡಿದ್ದರು. ಆದರೆ ಈಗ ಏಕಾಏಕಿ ರಾಮಮಂದಿರ ನಿರ್ಮಾಣ ಮಾಡುತ್ತಿರುವುದರಿಂದ ವಿರೋಧ ವ್ಯಕ್ತಪಡಿಸಿದೆ. ಇದನ್ನೂ ಓದಿ: ರಾಜಧಾನಿಗೂ ಕಾಲಿಟ್ಟ ಹಿಜಬ್ ವಿವಾದ – ಹಿಜಬ್ ತೆಗೆಯುವಂತೆ ಮಕ್ಕಳಿಗೆ ಶಿಕ್ಷಕರಿಂದ ಒತ್ತಾಯ

  • ಅಯೋಧ್ಯೆ ರಾಮ ಮಂದಿರಕ್ಕೆ ಕರ್ನಾಟಕದಿಂದ  200 ಕೋಟಿ ನಿಧಿ ಸಂಗ್ರಹ

    ಅಯೋಧ್ಯೆ ರಾಮ ಮಂದಿರಕ್ಕೆ ಕರ್ನಾಟಕದಿಂದ 200 ಕೋಟಿ ನಿಧಿ ಸಂಗ್ರಹ

    – ಕರ್ನಾಟಕದಲ್ಲಿ 95 ಲಕ್ಷ, ದೇಶದಲ್ಲಿ 12 ಕೋಟಿ ಮನೆ ತಲುಪಿದ ರಾಮ ಅಭಿಯಾನ
    – ಶೇ.80 ರಷ್ಟು ಮನೆಗಳನ್ನು ತಲುಪಿದ ಅಭಿಯಾನ

    ಬೆಂಗಳೂರು: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ಮಂದಿರ ನಿರ್ಮಾಣಕ್ಕೆ ನಡೆದ ಅಭಿಯಾನದಲ್ಲಿ ಕರ್ನಾಟಕದ 95 ಲಕ್ಷ ಮನೆಗಳನ್ನು ತಲುಪಲಾಗಿದ್ದು, ಕರ್ನಾಟಕದಲ್ಲಿ ಸುಮಾರು 200 ಕೋಟಿ ರೂ. ಸಂಗ್ರಹವಾಗಿದೆ.

    ಜನವರಿ-ಫೆಬ್ರವರಿಯಲ್ಲಿ 45 ದಿನ ನಡೆದ ಅಭಿಯಾನದಲ್ಲಿ ಗುರಿ ಇರಿಸಿಕೊಂಡಿದ್ದ ಶೇಕಡಾ 80 ಮನೆಗಳನ್ನು ತಲುಪಲಾಗಿದೆ. ಕರ್ನಾಟಕದಲ್ಲಿ ಮನೆಗಳಿಗೆ ತೆರಳಿ ನಿಧಿ ಸಂಗ್ರಹಿಸಲು 1,250 ಸ್ವಾಮೀಜಿಗಳು ಭಾಗವಹಿಸಿದ್ದರು ಎಂದು ಅಭಿಯಾನದ ಕಾರ್ಯದರ್ಶಿ ನಾ. ತಿಪ್ಪೇಸ್ವಾಮಿ ತಿಳಿಸಿದ್ದಾರೆ.

    ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನದ ಕರ್ನಾಟಕ ರಾಜ್ಯ ಸಮಿತಿ ಆಯೋಜಿಸಿದ್ದ ಸಮಾರೋಪ ಸಮಾರಂಭ ಸದಾಶಿವ ನಗರದ ರಾಷ್ಟ್ರೋತ್ಥಾನ ಯೋಗ ಕೇಂದ್ರದಲ್ಲಿ  ಇಂದು ನಡೆಯಿತು. ಈ ಕಾರ್ಯಕ್ರಮಕ್ಕೆ ಪೇಜಾವರ ಶ್ರೀಗಳು, ಶ್ರೀರಾಮ ಮಂದಿರ ನಿರ್ಮಾಣ ರಾಜ್ಯ ಸಮಿತಿಯ ಸದಸ್ಯರು ಒಳಗೊಂಡಂತೆ ನಾಡಿನ ವಿವಿಧ ಮಠಾಧೀಶರು ಹಾಗೂ ಗಣ್ಯ ವ್ಯಕ್ತಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

    ದೇಶದಲ್ಲಿ 5.5 ಲಕ್ಷ ಗ್ರಾಮ, ನಗರ ಪ್ರದೇಶಗಳಲ್ಲಿ 12 ಕೋಟಿ ಮನೆಗಳನ್ನು ತಲುಪಲಾಗಿದೆ. ಶೇಕಡಾ ನೂರು ಕ್ರೈಸ್ತರಿರುವ ಕೇಂದ್ರಾಡಳಿತ ಪ್ರದೇಶಗಳೂ ಸೇರಿ ಎಲ್ಲರೂ ಶ್ರೀರಾಮನ ಕಾರ್ಯಕ್ಕೆ ಸ್ಪಂದನೆ ನೀಡಿದ್ದಾರೆ‌ ಎಂದು ನಾ. ತಿಪ್ಪೇಸ್ವಾಮಿ ಹೇಳಿದರು.

    ಪೇಜಾವರ ಶ್ರೀಗಳು ಮಾತನಾಡಿ, ರಾಮ ಮಂದಿರ ನಿರ್ಮಾಣ ದೊಡ್ಡ ಕೆಲಸವಲ್ಲ ಅದನ್ನು ಉಳಿಸಿಕೊಂಡು ಹೋಗುವುದು ದೊಡ್ಡ ಕೆಲಸ ಎಂದರು. ಮತ್ತು ಮಕ್ಕಳಿಗೆ ಸಂಸ್ಕೃತಿ,ಸಂಸ್ಕಾರ ಕೊಟ್ಟರೆ ಮಾತ್ರ ದೇಶ ಸುಭಿಕ್ಷವಾಗಿರುತ್ತದೆ ಮತ್ತು ಯಾವುದೇ ಮತೀಯ ಶಕ್ತಿಗಳು ತೊಂದರೆ ಕೊಡಲು ಸಾಧ್ಯವಿಲ್ಲ. ರಾಮ ಮಂದಿರ ನಿರ್ಮಾಣಕ್ಕೆ ದೇಶಾದ್ಯಂತ ಬಂದ ಪ್ರತಿಕ್ರಿಯೆಯಿಂದ ರಾಮ ಮಂದಿರದ ಮತ್ತು ರಾಮರಾಜ್ಯದ ಬಗ್ಗೆ ಜನಗಳಿಗಿರುವ ಮನೋಭಿಲಾಷೆ ತಿಳಿಸುತ್ತದೆ ಎಂದರು.

    ದೇಶದ ಜನರಲ್ಲಿ ಗೊಂದಲ ಉಂಟು ಮಾಡುತ್ತಿರುವ ಕಮ್ಯೂನಿಸ್ಟರ ಮಾತು ಕಸ ಎಂದು ಜನರೇ ನಿರೂಪಿಸಿದ್ದಾರೆ ಎಂದು ಕನ್ಹೇರಿಯ ಅದೃಷ ಕಾಡಸಿದ್ದೇಶ್ಚರ ಸ್ವಾಮೀಜಿ ಹೇಳಿದರು.  ತಮಿಳುನಾಡಿನಲ್ಲಿ ರಾಮನ ವಿರೋಧಿಗಳಿದ್ದಾರೆ ಎಂಬ ಭಾವನೆ ಮೂಡಿಸಿದ್ದರು. ಆದರೆ ಅಲ್ಲಿ ನಿರೀಕ್ಷೆಗೂ ಮೀರಿ ಸ್ಪಂದನೆ ನೀಡಿದರು. ಒಂದು ಮನೆಯ ಸಂಗ್ರಹ ಮುಗಿಸುವ ವೇಳೆಗೆ ಇನ್ನೊಂದು ಮನೆಯಲ್ಲಿ ದೇಣಿಗೆ ನೀಡಲು ಸಿದ್ಧರಾಗಿರುತ್ತಿದ್ದರು. ಚಿಲ್ಲರೆ ಭಾಷಣ ಮಾಡಿಕೊಂಡು ಸಮಾಜ ಒಡೆಯುವವರಿಗೆ ಜನರು ಉತ್ತರ ನೀಡಿದ್ದಾರೆ. ಮುಂದೆ ಕಾಶಿ ಹಾಗೂ ಮಥುರಾದಲ್ಲಿ ಮಂದಿರ ಕಟ್ಟುವ ಕಾರ್ಯ ಸದ್ಯದಲ್ಲೇ ಲಭಿಸಲಿದೆ ಎಂದು ಈ ವೇಳೆ ಹೇಳಿದರು.

    ಕಾರ್ಯಕ್ರಮದಲ್ಲಿ ಇಸ್ಕಾನ್ ಅಧ್ಯಕ್ಷರಾದ ಮಧುಪಂಡಿತ್ ದಾಸ್ ಜಿ, ಬೇಲಿಮಠದ ಶ್ರೀ ಶಿವರುದ್ರ ಮಹಾಸ್ವಾಮಿಗಳು, ಆದಿಚುಂಚನಗಿರಿ ವಿಜಯನಗರ ಮಠದ ಸೋಮನಾಥ ಸ್ವಾಮೀಜಿ ,ಕನ್ಹೆರಿಯ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮಿಜಿ, ಕವಲಗುಡ್ಡ ಅಮಾರೇಶ್ವರ ಮಹಾರಾಜರು, ಸೇವಾಲಾಲ್ ಗುರುಪೀಠದ ಶ್ರೀಬಳಿರಾಮ್ ಮಹರಾಜ್ ಪಾಲ್ಗೊಂಡು ಆಶೀರ್ವಚನ ನೀಡಿದರು.

    ಕಾರ್ಯಕ್ರಮದಲ್ಲಿ ರಾಮಮಂದಿರ ಮಾದರಿಯನ್ನು ಪ್ರದರ್ಶಿಸಲಾಯಿತು. ಅಭಿಯಾನಕ್ಕೆ ಸಹಕಾರ ನೀಡಿದ ಎಲ್ಲಾ ಮಾಧ್ಯಮ ಮಿತ್ರರಿಗೆ ತಿಪ್ಪೇಸ್ವಾಮಿ ಅವರು ಅಭಿನಂದನೆಗಳನ್ನು ತಿಳಿಸಿದರು.